ಶಾಂತಿಗೆ ಮತ್ತೊಂದು ಹೆಸರೇ ಇಸ್ಲಾಮ್
ಶಾಂತಿಗೆ ಮತ್ತೊಂದು ಹೆಸರೇ ಇಸ್ಲಾಮ್ ಪರಮ ದಯಾಮಯನೂ ಕರುಣಾನಿಧಿಯೂ ಆದ ದೇವ ನಾಮದಿಂದ ಇಸ್ಲಾಮ್ ಎಂದರೆ... ಇಸ್ಲಾಮ್ ಎಂಬ ಪದದ ಅರ್ಥ ಅನುಸರಣೆ ಎಂದಾಗಿದ್ದು ಇದರ ಇನ್ನೊಂದು ಅರ್ಥ ಶಾಂತಿ ಎಂಬುದೇ ಆಗಿದೆ. ದೇವನ ಆಜ್ಞೆಗಳ ಅನುಸಾರವಾಗಿ ಜೀವಿಸಿದರೆ ಇಹಲೋಕದಲ್ಲಿ ಶಾಂತಿ ದೊರಕುವುದು ಎಂಬುದೇ ಇದರ ತತ್ವ. ಮುಸ್ಲಿಮ್ ಎಂದರೆ ಅನುಸರಿಸುವವನು ಎಂಬುದೇ ಅರ್ಥ, ಉದಾಹರಣೆಗೆ; ಅಧ್ಯಾಪಕರಿಗೆ ಅನುಸರಿಸುವವನಿಗೆ ವಿಧ್ಯಾರ್ಥಿ, ಯಜಮಾನನಿಗೆ ವಿಧೇಯನಾಗಿ ನಡೆಯುವವನಿಗೆ ನೌಕರ, ಎಂದು ಹೇಗೆ ಕರೆಯುವರೊ, ಹಾಗೆಯೇ ದೇವನ ಆಜ್ಞೆಗಳನ್ನು ಪರಿಪಾಲಿಸುವವನಿಗೆ ಅರಬಿ ಭಾಷೆಯಲ್ಲಿ ಮುಸ್ಲಿಮ್ ಎಂದು ಕರೆಯುವರು. ಒಂದು ಬಗೆಯ ಪೇಠಾ, ಟೋಪಿ ಹಾಕಿ ಗಡ್ಡ ಬಿಟ್ಟಿರುವುದರಿಂದ ಅರಬಿ ಅಥವ ಉರ್ದು ಹೆಸರಿಡುವುದರಿಂದ, ವ್ಯಕ್ತಿಯೊರ್ವನು ಮುಸ್ಲಿಮ್ ಎನಿಸಿಕೊಳ್ಳಲಾರ, ಅಲ್ಲದೆ ಮುಸ್ಲಿಮ್ ತಂದೆ ತಾಯಿಯರಿಗೆ ಹುಟ್ಟಿದ ಮಾತ್ರಕ್ಕೆ ಮುಸ್ಲಿಮ್ ಎನಿಸಿಕೊಳ್ಳಲಾರ, ಬದಲಾಗಿ ದೇವನ ಆಜ್ಞೆಗಳನ್ನು ಅನುಸರಿಸುವುದರಿಂದ ಮಾತ್ರವೇ ಮಸ್ಲಿಮ್ ಎಂದೆನಿಸಿಕೊಳ್ಳಲು ಸಾಧ್ಯ. ಮುಸ್ಲಿಮ್ ಎಂಬ ಪದವನ್ನು ಈ ರೀತಿಯೂ ಅರ್ಥಮಾಡಿಕೊಳ್ಳಬಹುದು, ಪ್ರಕೃತಿಯನ್ನು ನೋಡಿರಿ, ಮರ, ಗಿಡ,...
Read moreDetails