ಇಸ್ಲಾಮ್ ಕುರಿತ ಸಂಶಯಗಳು ಭಾಗ – 3

ಪರಮ ದಯಾಮಯನೂ ಕರುಣಾಮಯಿಯೂ ಆದ ಅಲ್ಲಾಹನ ನಾಮದಿಂದ
ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು. ಸರ್ವಲೋಕ ರಕ್ಷಕನಾದ ಅಲ್ಲಾಹನ ಅನುಗ್ರಹ, ರಕ್ಷೆಗಳು ಅಂತಿಮ ಪ್ರವಾದಿ ಮುಹಮ್ಮದ್(ಸ)ರವರ ಮೇಲೂ, ಅವರ ಕುಟುಂಬದ ಮೇಲೂ, ಅವರನ್ನು ನಿಷ್ಕಳಂಕವಾಗಿ ಅನುಸರಿಸಿ ಬದುಕಿದ ಅವರ ಅನುವರ್ತಿಗಳ ಮೇಲೂ ಸದಾ ವರ್ಷಿಸುತ್ತಿರಲಿ.

“ಅಲ್ಲಾಹನ ಬಳಿ (ಸ್ವೀಕಾರಾರ್ಹ) ಧರ್ಮ ಇಸ್ಲಾಮ್ ಮಾತ್ರ". (ಖುರ್‌ಆನ್ 3:19)

ಇಸ್ಲಾಮ್ ಎಂಬುದು ‘ಸಿಲ್ಮ್' ಎಂಬ ಮೂಲಧಾತುವಿನಿಂದ ಹೊರಟ ಪದವಾಗಿದ್ದು ಇದರ ಅರ್ಥವು ‘ಶಾಂತಿ' ಎಂದಾಗಿದೆ. ಸಿಲ್ಮ್ ಎಂಬ ಪದದ ಇನ್ನೊಂದು ಅರ್ಥವು ‘ಸಮರ್ಪಣೆ' ಎಂದಾಗಿದೆ. ಅರ್ಥಾತ್ ಭೂಮ್ಯಾಕಾಶಗಳನ್ನು, ಅವುಗಳ ಮಧ್ಯೆಯಿರುವವುಗಳನ್ನು ಸೃಷ್ಟಿಸಿ ಪರಿಪಾಲಿಸಿಕೊಂಡಿರುವ ಆ ಸೃಷ್ಟಿಕರ್ತನ ಆದೇಶಕ್ಕನುಸಾರವಾಗಿ ಒಬ್ಬನು ತನ್ನ ಜೀವನವನ್ನು ಸಮರ್ಪಿಸಿ “ಮುಸ್ಲಿಮ್" (ಸಮರ್ಪಿಸಿಕೊಂಡವನು) ಎನಿಸಿಕೊಳ್ಳುವುದು. ಸಮಕಾಲೀನ ಜಗತ್ತಿನಲ್ಲಿ ಇಸ್ಲಾಮ್ ಅಂದ ಕೂಡಲೇ ದೂರ ಸರಿಯುವ ಜನರೊಂದಿಗೆ ಅದರ ನೈಜ ತಾತ್ಪರ್ಯವನ್ನು ಹೇಳಿ, ಅವರು ಅದರ ಬಗ್ಗೆ ಹೊಂದಿರುವ ತಪ್ಪು ಕಲ್ಪನೆಯನ್ನು ನೀಗಿಸಿದಲ್ಲಿ, ಅವರು ಇಸ್ಲಾಮಿನ ವಿರುದ್ಧ ತಳೆದಿರುವ ತಮ್ಮ ಬಿಗಿ ನಿಲುವನ್ನು ಕೊಂಚ ಸಡಿಲಿಸಿಕೊಳ್ಳಲೂ ಬಹುದು.ಜೀವನ ಮತ್ತು ಜೀವನಾಧಾರ ಸಹಿತ ಎಲ್ಲಾ ಅನುಗ್ರಹಗಳನ್ನು ತನ್ನ ಸೃಷ್ಟಿಕರ್ತನಾದ ಅಲ್ಲಾಹನಿಂದ ಯಾವುದೇ ಸಂಕೋಚವಿಲ್ಲದೆ ಸ್ವೀಕರಿಸುವ ಮಾನವನಿಗೆ ಅವನ ಮಾರ್ಗದರ್ಶನವನ್ನು ಸ್ವೀಕರಿಸುವುದರಲ್ಲಿ ಮಾತ್ರ ವಿರೋಧವಿರುವುದು ಒಂದು ವಿಚಿತ್ರ ಸಂಗತಿಯಾಗಿದೆ. ಜೀವನಾಧಾರಕ್ಕಾಗಿ ಅಲ್ಲಾಹನನ್ನು ಆಶ್ರಯಿಸಬೇಕಾದ ಅನಿವಾರ್ಯತೆಯನ್ನು ಮಾನವನ ಮೇಲೆ ಹೇರಿರುವ ಅಲ್ಲಾಹನು ತಾನಿಚ್ಛಿಸಿದಲ್ಲಿ ಅವನ ಮಾರ್ಗದರ್ಶನ ಸ್ವೀಕರಿಸುವುದನ್ನು ಕೂಡಾ ಒಂದು ಅನಿವಾರ್ಯತೆಯನ್ನಾಗಿ ಮಾಡಿ ಬಿಡಬಹುದಿತ್ತು. ಅಲ್ಲಾಹನ ಆದೇಶವನ್ನು ಧಿಕ್ಕರಿಸದಂತಹ ಪ್ರಕೃತಿಯನ್ನು ಮಾನವನ ಮೇಲೆ ಹೇರಿ ಬಿಡಬಹುದಿತ್ತು. ಆದರೆ ಅಲ್ಲಾಹನು ಹಾಗೆ ಮಾಡಿಲ್ಲ. ಅವನು ಮಾನವನನ್ನು ಒಬ್ಬ ಸ್ವಾತಂತ್ರ್ಯವುಳ್ಳ ಅಸ್ತಿತ್ವವನ್ನಾಗಿಯೇ ಸೃಷ್ಟಿಸಿರುವನು.

“ನಾವು ಅವನಿಗೆ ಮಾರ್ಗದರ್ಶನ ಮಾಡಿದೆವು. ಅವನು ಕೃತಜ್ಞತೆ ಸಲ್ಲಿಸುವವನಾಗಲಿ ಅಥವಾ ಕೃತಘ್ನನಾಗಲಿ......“(ಖುರ್‌ಆನ್ 76:3).

ಅಗಣಿತ ಅನುಗ್ರಹಗಳನ್ನು ಮನುಷ್ಯನಿಗೆ ಒದಗಿಸಿಕೊಟ್ಟ ಬಳಿಕ ಅವನ ಮುಂದೆ ಎರಡು ಸುಸ್ಪಷ್ಟ ದಾರಿಗಳನ್ನು ತೆರೆದಿಟ್ಟನು. ಆ ಎರಡು ದಾರಿಗಳು ಹೋಗಿ ಸೇರುವ ಅಂತಿಮ ತಾಣವನ್ನೂ ಸ್ಪಷ್ಟಗೊಳಿಸಿಬಿಟ್ಟನು."

“ಮತ್ತು (ನಾವು) ಅವನಿಗೆ ಎರಡು ಸುಸ್ಪಷ್ಟ ದಾರಿಗಳನ್ನು ತೋರಿಸಿಕೊಡಲಿಲ್ಲವೇ?"....(ಖುರ್‌ಆನ್ 90:10)

“ಇದು ನಿಮ್ಮ ಪ್ರಭುವಿನ ಕಡೆಯಿಂದ ಬಂದ ಸತ್ಯ. ಇಷ್ಟವಿದ್ದವನು ಸ್ವೀಕರಿಸಲಿ. ಇಷ್ಟವಿದ್ದವನು. ನಿರಾಕರಿಸಲಿ. (ನಿರಾಕರಿಸುವ) ಅಕ್ರಮಿಗಳಿಗೆ ನಾವು ಒಂದು ಅಗ್ನಿಯನ್ನು ಸಿದ್ಧಗೊಳಿಸಿಟ್ಟಿರುತ್ತೇವೆ." (ಖುರ್‌ಆನ್ 18:29)

ಅಲ್ಲಾಹನ ಮಾರ್ಗದರ್ಶನವೆಂಬುದು ‘ಖುರ್‌ಆನ್' ಎಂಬ ಗ್ರಂಥವಾಗಿ ಮಾನವ ರಾಶಿಯ ಮುಂದಿದೆ. ಈ ಗ್ರಂಥವು ಏಕದೇವರಾಧನೆ, ಪ್ರವಾದಿತ್ವ ಮತ್ತು ಪರಲೋಕ ಎಂಬ ಮೂರು ಮುಖ್ಯ ವಿಷಯಗಳ ಮೇಲೆ ಅಧಿಷ್ಠತವಾಗಿದೆ. ಮನುಷ್ಯನಿಗೆ ಇಹಲೋಕದಲ್ಲಿ ಒಂದು ಅವಧಿಯನ್ನು ನಿಶ್ಚಯಿಸಲಾಗಿದ್ದು, ಆ ನಿಗದಿತ ಅವಧಿಯಲ್ಲಿ ಅವನು ಅಲ್ಲಾಹ‌ನ ಮಾರ್ಗದರ್ಶನದಂತೆ ಜೀವಿಸಬೇಕಾಗಿದೆ. ತನಗೆ ನೀಡಲ್ಪಟ್ಟ ಕಾಲಾವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾದವನು ಮಾರಣಾನಂತರ ಒಂದು ಅತ್ಯುತ್ತಮವೂ, ಶಾಶ್ವತವೂ ಆದ ಜೀವನವನ್ನು ಪಡೆಯುವನು. ಅದರಲ್ಲಿ ವಿಫಲನಾದವನು ಮರಣಾನಂತರ ಶಾಶ್ವತ ನರಕವನ್ನು ಪಡೆಯುವನು ಎಂದು ಕುರ್‌ಆನ್ ಹೇಳುತ್ತದೆ.

“ಯಾರಾದರೂ ಇಸ್ಲಾಮಿನ ಹೊರತಾದುದನ್ನು ಧರ್ಮವಾಗಿ ಸ್ವೀಕರಿಸಿದಲ್ಲಿ ಅದನ್ನು ಎಂದಿಗೂ ಅವನಿಂದ ಸ್ವೀಕರಿಸಲಾಗದು. ಮತ್ತು ಅವನು ಪರಲೋಕದಲ್ಲಿ ನಷ್ಟಕ್ಕೀಡಾದವರಲ್ಲಾಗುವನು"(ಖುರ್‌ಆನ್ 3:85)

ಮನುಷ್ಯರ ಮಾರ್ಗದರ್ಶನಕ್ಕಾಗಿ ಆಯಾ ಕಾಲಘಟ್ಟದಲ್ಲಿ ಪ್ರವಾದಿಗಳನ್ನೂ, ವೇದಗ್ರಂಥಗಳನ್ನೂ ಕಳುಹಿಸಿಕೊಡುವುದು ಅಲ್ಲಾಹನ ಕ್ರಮ. ಪ್ರವಾದಿಗಳ ಪೈಕಿ ಮುಹಮ್ಮದ್ (ಸ)ರು ಕೊನೆಯವರಾಗಿದ್ದರೆ, ಗ್ರಂಥಗಳ ಪೈಕಿ ಖುರ್‌ಆನ್ ಅಂತಿಮವಾಗಿದೆ. ಈ ಗ್ರಂಥವು ಇಂದು ಜಗತ್ತಿನಲ್ಲಿರುವ ಏಕೈಕ ದೋಷರಹಿತ ಗ್ರಂಥವಾಗಿದೆ. ಇದರಲ್ಲಿ ಯಾವುದೇ ವೈರುಧ್ಯಗಳಿಲ್ಲ. ವೈಜ್ಞಾನಿಕತೆಗೆ ಈ ಗ್ರಂಥವು ವಿರುದ್ಧವಾಗಿಲ್ಲ. ಮಾನವೀಯತೆ ಅಥವಾ ಮನುಷ್ಯ ಪ್ರಕೃತಿಗೆ ವಿರುದ್ಧವಾದ ಒಂದೇ ಒಂದು ಆದೇಶವೂ ಈ ಗ್ರಂಥದಲ್ಲಿಲ್ಲ. ಸುಮಾರು 1400 ವರ್ಷಗಳಷ್ಟು ಹಿಂದೆ ಅವತೀರ್ಣಗೊಂಡ ಈ ಗ್ರಂಥ ನೀಡಿರುವ ಚಾರಿತ್ರಿಕ, ವೈಜ್ಞಾನಿಕ ಮಾಹಿತಿಗಳು ಅತ್ಯಂತ ನಿಖರವಾದವುಗಳೆಂದು ಆಯಾ ವಿಭಾಗದ ವಿಶೇಷಜ್ಞರೇ ಸಮ್ಮತಿಸಿರುವರು. ಇದರಲ್ಲಿ ನುಡಿಯಲಾದ ಅನೇಕ ಭವಿಷ್ಯವಾಣಿಗಳು ಸತ್ಯವಾಗಿ ಪರಿಣಮಿಸಿದುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಇಂತಹದೊಂದು ಗ್ರಂಥವನ್ನು ಜನರಿಗೆ ಪರಿಚಯಿಸಿಕೊಡುವುದು, ಅವರನ್ನು ಅದರತ್ತ ಆಹ್ವಾನಿಸುವುದು, ಈ ಗ್ರಂಥದ ಬಗ್ಗೆ ಸಾಮಾನ್ಯ ಜನರಿಗಿರುವ ತಪ್ಪುಕಲ್ಪನೆಗಳನ್ನು ನಿವಾರಿಸಿಕೊಡುವುದು ತಮ್ಮನ್ನು ತಾವೇ ಸಮರ್ಪಿಸಿಕೊಂಡವರು (ಮುಸ್ಲಿಮರು) ಎಂದು ಪರಿಚಯಿಸಿಕೊಂಡವರ ಆದ್ಯ ಕರ್ತವ್ಯವಾಗಿದೆ.
ನೀವು ಓದಲು ತೊಡಗುತ್ತಿರುವ ಈ ಪುಟ್ಟ ಕೃತಿಯು ‘ಇಸ್ಲಾಮಿನ ಕುರಿತು ಮುಸ್ಲಿಮೇತರರ 20 ಸಂಶಯಗಳು' ಎಂಬ ಪುಸ್ತಕದ ಮುಂದುವರಿದ ಭಾಗವಾಗಿದೆ. ಈ ಮೊದಲೇ ಬರೆದಂತೆ ಇಸ್ಲಾಮೀ ಸಂದೇಶ ಪ್ರಚಾರ ಕಾರ್ಯವು ಪ್ರತಿಯೊಬ್ಬ ಮುಸ್ಲಿಮನ ಬಾಧ್ಯತೆಯಾಗಿದೆ.
“ಸುಜ್ಞಾನ ಹಾಗೂ ಸದುಪದೇಶದ ಮೂಲಕ ನಿಮ್ಮ ಪ್ರಭುವಿನ ಮಾರ್ಗಕ್ಕೆ ಜನರನ್ನು ಆಹ್ವಾನಿಸಿರಿ ಮತ್ತು ಜನರೊಂದಿಗೆ ಅತ್ಯುತ್ತಮ ರೀತಿಯಿಂದ ವಾದಿಸಿರಿ" ( ಖುರ್‌ಆನ್ 16:125)
ಸಂದೇಶ ಪ್ರಚಾರ ಕಾರ್ಯವು ಮುಸ್ಲಿಮನ ಬಾಧ್ಯತೆ ಎಂಬುದನ್ನು ಆದೇಶಿಸುವ ಖುರ್‌ಆನ್ ಅದರಿಂದ ವಿಮುಖನಾಗುವವನನ್ನು ಈ ರೀತಿ ಎಚ್ಚರಿಸುತ್ತದೆ.
ಅಲ್ಲಾಹನ ಕಡೆಯಿಂದ ದೊರೆತ ಒಂದು ಸಾಕ್ಷ್ಯವು ತನ್ನಲ್ಲಿದ್ದೂ ಅದನ್ನು ಅಡಗಿಸಿದವನಿಗಿಂತ ದೊಡ್ಡ ಅಕ್ರಮಿ ಇನ್ನಾರಿರಬಹುದು. ನಿಮ್ಮ ಚಟುವಟಿಕೆಗಳ ಬಗ್ಗೆ ಅಲ್ಲಾಹನು ಅಶೃದ್ಧನಲ್ಲ (ಖುರ್‌ಆನ್ 2:140)
ಆದುದರಿಂದ ಸಮಯ ಮತ್ತು ಜ್ಞಾನದ ಕೊರತೆಯು ತನ್ನನ್ನು ಸಂದೇಶ ಪ್ರಚಾರ ಕಾರ್ಯದಿಂದ ತಡೆಯಿತು ಎಂಬ ನೆಪವು ಪರಲೋಕದಲ್ಲಿ ನೆರವಿಗೆ ಬರಲಾರದು. ಪ್ರವಾದಿ ಮುಹಮ್ಮದ್(ಸ) “ಬಲ್ಲಿಗೂ ಅನ್ನೀ ವಲವ್ ಆಯ": ಅರ್ಥಾತ್ (ಜನರೇ) ನೀವು ನನ್ನಿಂದ ಒಂದು ಸೂಕ್ತಿಯನ್ನಾದರೂ (ಇತರ ಜನರಿಗೆ) ತಲುಪಿಸಿರಿ ಎಂಬ ಆದೇಶವನ್ನು ತಮ್ಮ ಸಮುದಾಯಕ್ಕೆ ನೀಡಿರುವರು.
ಬಹುಪತ್ನಿತ್ವ, ಮಾಂಸಾಹಾರ ಸೇವನೆ... ಮುಂತಾದ ಇಸ್ಲಾಮಿನ ನಿಯಮಗಳ ಕುರಿತು ಪ್ರಚಲಿತವಿರುವ ತಪ್ಪು ಕಲ್ಪನೆಗಳನ್ನು ಮೊದಲನೇ ಭಾಗವಾದ “ಇಸ್ಲಾಮಿನ ಕುರಿತು ಮುಸ್ಲಿಮೇತರರ 20 ಸಂಶಯಗಳು " ಎಂಬ ಪುಸ್ತಕದಲ್ಲಿ ಉತ್ತರಿಸಲಾಗಿದ್ದರೆ ಪ್ರಸ್ತುತ ಕೃತಿಯಲ್ಲಿ ಇಸ್ಲಾಮನ್ನು ದ್ವೇಷಿಸುವ ಕೆಲವು ವಿಮರ್ಶಕರ ಗ್ರಂಥಗಳನ್ನೇ ಇಸ್ಲಾಮಿನ ಅಧ್ಯಯನಕ್ಕಾಗಿ ಆರಿಸಿಕೊಂಡಿರುವ ಮುಸ್ಲಿಮೇತರರ ಸಂಶಯಗಳಿಗೆ ಉತ್ತರಿಸಲಾಗಿದೆ. ತಿರುಚಿದ, ವಿಕೃತಗೊಳಿಸಲ್ಪಟ್ಟ ಮೂಲಗಳಿಂದ ಇಸ್ಲಾಮನ್ನು ಸಮೀಪಿಸುವ ಈ ಜನರು ಖುರ್‌ಆನ್‌ನಲ್ಲಿ ವೈರುಧ್ಯಗಳಿವೆಯೆಂದೂ, ಖುರ್‌ಆನ್ ಅವೈಜ್ಞಾನಿಕವಾಗಿದೆಯೆಂದೂ ವಾದಿಸುವರು. ಖುರ್‌ಆನಿನ ಸೂಕ್ತಿಗಳನ್ನು ಸಂದರ್ಭ ಸನ್ನಿವೇಶಗಳಿಂದ ಪ್ರತ್ಯೇಕಿಸಿ ಪ್ರಚಾರ ಮಾಡುವುದು ಖುರ್‌ಆನ್ ವಿಮರ್ಶಕರ ತಂತ್ರವಾಗಿದೆ. ಈ ತಂತ್ರದಿಂದಾಗಿ ಮುಗ್ದ ಜನರು ಖುರ್‌ಆನಿನ ಬಗ್ಗೆ ತಪ್ಪು ಕಲ್ಪನೆಗೆ ಒಳಗಾಗುವುದು ಸಹಜ.
ಜಗತ್ತಿನಲ್ಲಿ ಅತ್ಯಂತ ಹೆಚ್ಚು ಬಾರಿ ವಿಮರ್ಶೆಗೊಳಪಟ್ಟ ಮತ್ತು ಎಲ್ಲಾ ವಿಮರ್ಶೆಗಳಿಗೂ ಸೂಕ್ತ ಉತ್ತರ ನೀಡಿ ತನ್ನ ಅಜೇಯತೆ ಮತ್ತು ನಿಷ್ಕಳಂಕತೆಯನ್ನು ಸಾಬೀತು ಪಡಿಸುತ್ತಾ ಬಂದಿರುವ ಒಂದು ಗ್ರಂಥವಿದ್ದರೆ ಅದು ಖುರ್‌ಆನ್ ಮಾತ್ರ. ಏಪ್ರಿಲ್ 16, 1979ರ ಟೈಮ್ ಮ್ಯಾಗಸಿನ್‌ನಲ್ಲಿ ಪ್ರಕಟಗೊಂಡ ಒಂದು ವರದಿಯಂತೆ 1979ಕ್ಕಿಂತ ಹಿಂದಿನ 150 ವರ್ಷಗಳಲ್ಲಿ ಖುರ್‌ಆನನ್ನು ವಿಮರ್ಶಿಸಿ ಬರೆದ ಗ್ರಂಥಗಳ ಸಂಖ್ಯೆ ಅರುವತ್ತು ಸಾವಿರ. ಆದರೆ ಖುರ್‌ಆನ್ ತನ್ನ ವಿಮರ್ಶೆಯನ್ನೆಂದೂ ವಿರೋಧಿಸಿಲ್ಲ. ಬದಲಾಗಿ ಅದು ತನ್ನ ವಿಮರ್ಶೆಯನ್ನು ಸ್ವಾಗತಿಸುತ್ತದೆ. ವೇದ ಗ್ರಂಥಗಳೆಂಬ ಹೆಸರಿನಲ್ಲಿ ಕರೆಯಲ್ಪಡುತ್ತಿರುವ ಇತರ ಎಲ್ಲಾ ಗ್ರಂಥಗಳಿಗಿಂತ ಭಿನ್ನವಾಗಿ ಅದು ಜನರಿಗೆ ತನ್ನನ್ನು ವಿಮರ್ಶಿಸುವಂ ಸ್ವಯಂ ಆಹ್ವಾನವೀಯುತ್ತದೆ.
“ಅವರು ಖುರ್‌ಆನಿನ ಕುರಿತು ಸೂಕ್ಷ್ಮವಾಗಿ ಚಿಂತಿಸುವುದಿಲ್ಲವೇ? ಒಂದು ವೇಳೆ ಅದು ಅಲ್ಲಾಹನ ಹೊರತು ಇತರರಿಂದಾಗಿರುತ್ತಿದ್ದರೆ ಅವರು ಅದರಲ್ಲಿ ಅನೇಕಾನೇಕ ವೈರುಧ್ಯಗಳನ್ನು ದರ್ಶಿಸುತ್ತಿದ್ದರು" (ಖುರ್‌ಆನ್ 4:82)
ಕೇವಲ ಒಂದೇ ಒಂದು ವೈರುಧ್ಯವನ್ನು ಸಾಬೀತು ಪಡಿಸುವ ಮೂಲಕ ಖುರ್‌ಆನ್ ದೈವಿಕ ಗ್ರಂಥವಲ್ಲ. ಎಂಬುದನ್ನು ಸ್ಥಾಪಿಸಿರಿ ಎಂದು ಖುರ್‌ಆನ್ ಜಗತ್ತಿನ ಬುದ್ಧಿವಂತರೆನಿಸಿಕೊಂಡವರಿಗೆ ಸವಾಲು ಒಡ್ಡುತ್ತದೆ. 60000ರಷ್ಟು ಬೃಹತ್ ಸಂಖ್ಯೆಯ ಗ್ರಂಥಗಳಿಗೂ, ಅವುಗಳ ಲೇಖಕರಿಗೂ ಖುರ್‌ಆನಿನ ಸವಾಲನ್ನು ಸೋಲಿಸಲು ಸಾಧ್ಯವಾಗಿಲ್ಲ ಎಂಬುದು ಒಂದು ವಾಸ್ತವವಾಗಿ ನಮ್ಮ ಮುಂದಿದೆ.
ಇನ್ನು ಈ ಕೃತಿಯ ಮೂಲ ಲೇಖಕರ ವಿಷಯ, ಡಾ | ಝಕೀರ್ ಅಬ್ದುಲ್ ಕರೀಮ್ ನ್ಯಾಕ್ ಎಂಬ ಹೆಸರಿನ ಇವರು ಇಸ್ಲಾಮೀ ಸಂದೇಶ ಪ್ರಚಾರಕರಲ್ಲಿ ಓರ್ವ ಪ್ರಮುಖರು. ವೃತ್ತಿಯಲ್ಲಿ ವೈದ್ಯರಾಗಿರುವ ಇವರು ‘ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್' ಮುಂಬಯಿ, ಇದರ ಅಧ್ಯಕ್ಷರಾಗಿರುವರು. ಜಗತ್ತಿನ ಪ್ರಮುಖ ರಾಷ್ಟ್ರಗಳಾದ ಅಮೆರಿಕಾ, ಇಂಗ್ಲೆಂಡ್ , ಆಸ್ಟ್ರೇಲಿಯಾ ಸೇರಿದಂತೆ ವಿಶ್ವದಾದ್ಯಂತ ಇಸ್ಲಾಮಿನ ಕುರಿತಾದ 300ಕ್ಕೂ ಹೆಚ್ಚು ಪ್ರವಚನಗಳನ್ನೂ, ಸಂವಾದಗಳನ್ನೂ ಇವರು ನಡೆಸಿರುವರು. ತಮ್ಮ ಪ್ರವಚನದ ಬಳಿಕ ಸಂಶಯಗಳನ್ನು ನಿವಾರಿಸಿಕೊಳ್ಳುವ ಮುಕ್ತ ಅವಕಾಶವನ್ನು ಸಭಿಕರಿಗೆ ಒದಗಿಸಿಕೊಡುವುದು ಇದರ ವೈಶಿಷ್ಟ್ಯ. Divinity of the Bible and the Quran in the light of science (ಡಾ| ವಿಲಿಯಂ ಕಾಂಪ್‌ಬೆಲ್, ಚಿಕಾಗೊ) , is non-veg food prohibitted for human being (ರಶ್ಮೀಭ್ಯಾ ಝುವೇರಿ, ಅಧ್ಯಕ್ಷರು, ಇಂಡಿಯನ್ ವೆಜಿಟೇರಿಯನ್ ಕಾಂಗ್ರೆಸ್) concept of God in Hinduism and Islam , in the light of sacred scriptures (ಶ್ರೀ ರವಿಶಂಕರ್, ಅಧ್ಯಕ್ಷರು ಆರ್ಟ್ ಆಫ್ ಲಿವಿಂಗ್) was Christ really crucified (ಪಾಸ್ಟರ್ ರುಕ್ನುದ್ದೀನ್ ಹೆನ್ರಿ ಪಿಯೋ) ಮುಂತಾದವುಗಳು ಆಯಾ ವಿಭಾಗದ, ಆಯಾ ಧರ್ಮದ ಪ್ರಮುಖರೊಂದಿಗೆ ನಡೆಸಿದ ಕೆಲವು ಸಾರ್ವಜನಿಕ ಸಂವಾದಗಳಾಗಿದ್ದರೆ, similarities between Hinduism and Islam, similarities between Christianity and Islam, prophet Muhammed (s) in the various world scriptures ಮುಂತಾದವುಗಳು ಇವರು ನೀಡಿದ ಕೆಲವು ಸಾರ್ವಜನಿಕ ಉಪನ್ಯಾಸಗಳಾಗಿವೆ. ಇಸ್ಲಾಮಿನ ಕುರಿತಾದ ವಿಮರ್ಶೆಗಳಿಗೆ ಖುರ್‌ಆನ್, ಹದೀಸ್, ವಿಜ್ಞಾನ ಮತ್ತು ಧರ್ಮಗಳ ಅಧಿಕೃತ ಗ್ರಂಥಗಳಲ್ಲಿರುವ ಉಲ್ಲೇಖಗಳ ಮೂಲಕ ಉತ್ತರಿಸಿ, ಇಸ್ಲಾಮಿನ ಬಗ್ಗೆ ಇರುವ ತಪ್ಪುಕಲ್ಪನೆಗಳನ್ನು ನಿವಾರಿಸಿಕೊಡುವ ಇವರ ಶೈಲಿಯು ಅನನ್ಯವಾಗಿದೆ.
ಇಸ್ಲಾಮ್ ಧರ್ಮವನ್ನು ವಿಮರ್ಶಿಸಿ ರಚಿಸಲಾದ ಗ್ರಂಥಗಳನ್ನು ಓದಿದವರು ಮತ್ತು ಸಾರ್ವಜನಿಕ ಸಭೆ- ಸಂವಾದಗಳಲ್ಲಿ ಭಾಗವಹಿಸಿದವರು ಆಯಾ ಸಂದರ್ಭಗಳಲ್ಲಿ ಮುಂದಿರಿಸಿದ ಸಂಶಯಗಳಿಗೆ ಡಾ| ನ್ಯಾಕ್ ನೀಡಿದ ಉತ್ತರಗಳ ಪೈಕಿ ಕೆಲವನ್ನು ಕನ್ನಡ ಭಾಷೆಗೆ ಅನುವಾದಿಸುವ ಮೂಲಕ ಕನ್ನಡಿಗರ ಸಂಶಯಗಳನ್ನೂ ನಿವಾರಿಸುವ ಯತ್ನ ಮಾಡಲಾಗಿದೆ. ಮೂಲ ಪ್ರವಚನಕಾರರು ವ್ಯಕ್ತ ಪಡಿಸಿರುವ ಆಶಯಗಳನ್ನೇ ಅನುವಾದದಲ್ಲಿ ಬಿಂಬಿಸಬೇಕೆಂಬ ಪ್ರಯತ್ನದಲ್ಲಿ ಪೂರ್ಣ ಯಶಸ್ಸು ಸಾಧಿಸಿರುವೆನೆಂಬ ದೃಢ ವಿಶ್ವಾಸವು ನನಗಿಲ್ಲ. ಜನರನ್ನು ಅವರ ಸೃಷ್ಟಿಕರ್ತನಾದ ಅಲ್ಲಾಹನ ವಾಣಿಯತ್ತ ತಲುಪಿಸಲು ಈ ಕೃತಿಯು ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಇದರ ರಚನೆಯಲ್ಲಿ ಭಾಗಿಯಾದ ನನ್ನ ಮತ್ತು ನಮ್ಮೆಲ್ಲರ ಶ್ರಮವು ಸಾರ್ಥಕವಾಗಲಿ. ನಮ್ಮೆಲ್ಲರ ಶ್ರಮವನ್ನು ಒಂದು ಸತ್ಕರ್ಮವಾಗಿ ಅಲ್ಲಾಹನು ಸ್ವೀಕರಿಸಲಿ.
ಆಮೀನ್
ಅನುವಾದಕರು,
P.B.M. Sadiq

ಉತ್ತರ : ಖುರ್‌ಆನ್‌ನ ಬಗ್ಗೆ ಪ್ರಚಲಿತವಿರುವ ತಪ್ಪು ಕಲ್ಪನೆಯೆಂದರೆ ಇಸ್ಲಾಮಿನ ಮೂರನೇ ಖಲೀಫರಾದ ಉಸ್ಮಾನ್(ರ)ರು ಪರಸ್ಪರ ಹೋಲಿಕೆಯಿಲ್ಲದ ಹತ್ತು ಹಲವು ಖುರ್‌ಆನ್ ಪ್ರತಿಗಳ ಪೈಕಿ ಒಂದನ್ನು ಆಯ್ದುಕೊಂಡು ಅದನ್ನೇ ಅಧಿಕೃತವೆಂದು ಘೋಷಿಸಿದರು ಎಂದಾಗಿದೆ. ಆದರೆ ಇದು ವಾಸ್ತವಿಕತೆಯಿಂದ ಬಲು ದೂರವಾಗಿದೆ. ಇಂದು ಜಗತ್ತಿನಾದ್ಯಂತ ಮುಸ್ಲಿಮರಲ್ಲಿರುವ ಖುರ್‌ಆನ್ ಪ್ರವಾದಿ ಮುಹಮ್ಮದ್ (ಸ)ರಿಗೆ ದಿವ್ಯವಾಣಿಯ ಮುಖಾಂತರ ಅವತೀರ್ಣಗೊಂಡ ಅದೇ ಖುರ್‌ಆನ್ ಆಗಿದೆ. ಪ್ರವಾದಿ(ಸ)ರು ಅದನ್ನು ಸ್ವಯಂ ತಮ್ಮದೇ ಮೇಲ್ವಿಚಾರಣೆಯಲ್ಲಿ ಉತ್ತಮ ಬರಹಗಾರರಿಂದ ಬರೆಸಿದ್ದರು. ಹೀಗೆ ಲಿಖಿತಗೊಂಡ ಅದೇ ದಿವ್ಯವಾಣಿಯು ಶುದ್ಧರೂಪದಲ್ಲಿ ಇಂದು ನಮ್ಮ ಮುಂದಿದೆ. ಇನ್ನು ಖುರ್‌ಆನ್ ಅಲ್ಲಾಹನ ದಿವ್ಯವಾಣಿಯ ಮೂಲಪ್ರತಿಯಲ್ಲ ಎಂಬ ಆರೋಪದ ಸತ್ಯಾಸತ್ಯತೆಯನ್ನು ವಿಶ್ಲೇಷಿಸೋಣ. 1. ಸ್ವಯಂ ತಮ್ಮದೇ ಮೇಲ್ವಿಚಾರಣೆಯಲ್ಲಿ ಪ್ರವಾದಿ(ಸ)ರಿಂದ ಖುರ್‌ಆನ್ ಪರಿಶೀಲನೆ : ಪ್ರವಾದಿ ಮಹಮ್ಮದ್(ಸ)ರಿಗೆ ದಿವ್ಯವಾಣಿಯು ಅವತೀರ್ಣಗೊಂಡಾಗಲೆಲ್ಲಾ ಅದು ಅವರಿಗೆ ಕಂಠಪಾಠವಾಗಿ ಬಿಡುತ್ತಿತ್ತು. ನಂತರ ಅವರು ಅದನ್ನು ತಮ್ಮ ಅನಿಯಾಯಿಗಳಿಗೆ ಓದಿ ಕೇಳಿಸುತ್ತಿದ್ದರು. ಅದನ್ನು ಕಂಠಪಾಠ ಮಾಡಿಕೊಳ್ಳಲು ಆದೇಶಿಸುತ್ತಿದ್ದರು. ಅನುಯಾಯಿಗಳ ಪೈಕಿ ಉತ್ತಮ ಬರಹಗಾರರಿಗೆ ಅದನ್ನು ಲಿಖಿತ ರೂಪಕ್ಕಿಳಿಸಲು ಸೂಚಿಸುತ್ತಿದ್ದರು. ಹೀಗೆ ಲಿಖಿತಗೊಂಡ ಖುರ್‌ಆನ್‌ನ ಭಾಗಗಳನ್ನು ಓದಲು ಹೇಳಿ ತಪ್ಪಿದ್ದಲ್ಲಿ ತಿದ್ದಿಕೊಳ್ಳಲು ನೆರವಾಗುತ್ತಿದಖುರ್‌ಆನಿನ ರೀತಿ ಕಂಠಪಾಠ ಮಾಡಿಕೊಂಡಿರುವ ಅನುಯಾಯಿಗಳಿಗೂ ಅದನ್ನು ಪಠಿಸಲು ಹೇಳಿ ತಪ್ಪಿದ್ದಲ್ಲಿ ಅದನ್ನು ತಿದ್ದಿ ಸರಿಪಡಿಸುತ್ತಿದ್ದರು. ಹೀಗೆ ದಿವ್ಯವಾಣಿಯ ಮೂಲಕ ಅಲ್ಲಾಹನಿಂದ ಅವತೀರ್ಣಗೊಳಿಸಲ್ಪಟ್ಟ ಖುರ್‌ಆನ್ ಸಂಪೂರ್ಣವಾಗಿ ಸ್ವಯಂ ಪ್ರವಾದಿ (ಸ)ರವರ ಮೇಲ್ವಿಚಾರಣೆಯಲ್ಲೇ ಲಿಖಿತಗೊಳಿಸಲ್ಪಟ್ಟಿತ್ತು. 2. ಖುರ್‌ಆನಿನ ಅನುಕ್ರಮಣಿಕೆಯು ಕೂಡಾ ದೇವ ನಿರ್ದೇಶಿತವಾಗಿದೆ. ಸಂಪೂರ್ಣ ಖುರ್‌ಆನ್ ಸುಮಾರು 22 1/2 ವರ್ಷಗಳ ಅವಧಿಯಲ್ಲಿ ದಿವ್ಯವಾಣಿಯ ಮೂಲಕ ಸಂದರ್ಭಕ್ಕನುಸಾರವಾಗಿ ಹಂತಹಂತವಾಗಿ ಅವತೀರ್ಣಗೊಂಡಿತ್ತು. ಖುರ್‌ಆನಿನ ಕ್ರಮಣಿಕೆ ಮತ್ತು ರೀತಿಯು ಕೂಡಾ ದೇವಾದೇಶಿತವೇ ಹೊರತು ಪ್ರವಾದಿ ಮುಹಮ್ಮದ(ಸ)ರು ಅದನ್ನು ನಿಶ್ಚಯಿಸಿದವರಲ್ಲ. ದೇವಚರ ಜಿಬ್ರೀಲ (ಅ)ರು ಖುರ್‌ಆನಿನ ಯಟವ ಯಾವ ಭಾಗಗಳು ಯಾವ ಯಾವ ಅಧ್ಯಾಯಗಳಲ್ಲಿ ಎಲ್ಲೆಲ್ಲಿ ಇರಬೇಕೆಂಬುದನ್ನು ಪ್ರವಾದಿ (ಸ)ರಿಗೆ ಕಲಿಸಿಕೊಟ್ಟಿದ್ದರು. ಹೀಗೆ ಅವತೀರ್ಣಗೊಂಡ ದಿವ್ಯವಾಣಿಯ ಭಾಗಗಳನ್ನು ಯಾವ ಅಧ್ಯಾಯದಲ್ಲಿ ಯಾವ ಸೂಕ್ತಿಯ ನಂತರ ಅಳವಡಿಸಿಕೊಳ್ಳಬೇಕೆಂಬುದನ್ನು ಪ್ರವಾದಿ(ಸ)ರು ತಮ್ಮ ಸಂಗಾತಿಗಳಿಗೆ ಸೂಚಿಸುತ್ತಿದ್ದರು. ಮಾತ್ರವಲ್ಲದೆ ಅವತೀರ್ಣಗೊಂಡ ಖುರ್‌ಆನಿನ ಭಾಗಗಳನ್ನು ಅವುಗಳ ಕ್ರಮಣಿಕೆಯ ಸಹಿತ ದೇವಚರ ಜಿಬ್ರೀಲ(ಅ)ರು ಪ್ರತಿ ರಮಝಾನ್ ತಿಂಗಳಲ್ಲಿ ಪ್ರವಾದಿ(ಸ)ರಿಗೆ ಮರುನೆ‌ನಪಿಸಿ ಅವರಿಗೆ ಕಂಠಪಾಠವಿದ್ದುದರಲ್ಲಿ ದೋಷವಿಲ್ಲವೆಂಬುದನ್ನು ದೃಢೀಕರಿಸಿಕೊಡುತ್ತಿದ್ದರು. ಈ ರೂಪದ ಪರಿಶೀಲನೆಯು ಪ್ರವಾದಿ(ಸ)ರ ವಿದಾಯಪೂರ್ವ ರಮಝಾನ್ ಅರ್ಥಾತ್ ಪ್ರವಾದಿ (ಸ)ರ ಕೊನೆಯ ರಮಝಾನ್‌ನಲ್ಲಿ ಎರಡು ಸಲ ನಡೆದಿತ್ತು. ಹೀಗೆ ಅತ್ಯಂತ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ದಿವ್ಯವಾಣಿಯನ್ನು ಶುದ್ಧ ರೂಪದಲ್ಲೇ ಸಂರಕ್ಷಿಸಿಡಲಾಯಿತು. ಆದುದರಿಂದ ಬರವಣಿಗೆ ಹಾಗೂ ಹಲವು ಅನುಚರರ ಹೃದಯಗಳಲ್ಲಿ ಕಂಠಪಾಠ ರೂಪದಲ್ಲಿ ಸುರಕ್ಷಿತವಾಗಿದ್ದ ಖುರ್‌ಆನಿನ ಕ್ರಮಾನುಗತ ಸಂಕಲನ ಹಾಗು ಶುದ್ಧತೆಯ ದೃಢೀಕರಣವು ಪ್ರವಾದಿರಸ)ದೇ ಮೇಲ್ವಿಚಾರಣೆಯಲ್ಲಿ ನಡೆದಿತ್ತು ಎಂಬುದು ಸ್ಪಷ್ಟ. ವಾಸ್ತವದಲ್ಲಿ ಇದುವೇ ಖುರ್‌ಆನಿನ ಕ್ರೋಢೀಕರಣವಾಗಿದೆ. 3. ಖುರ್‌ಆನಿನ ಕ್ರೋಢೀಕರಣ, ಒಂದೇ ಸಾಮಗ್ರಿಯ ಮೇಲೆ ಪ್ರವಾದಿ(ಸ)ರ ಜೀವಿತಾವಧಿಯಲ್ಲಿಯೇ ಸಂಪೂರ್ಣ ಖುರ್‌ಆನಿನ ಸೂಕ್ತಿಗಳು ಸೂಕ್ತ ಕ್ರಮದಲ್ಲಿ ಬರಹರೂಪದಲ್ಲಿ ದಾಖಲಾಗಿತ್ತು ಎಂಬುದನ್ನು ಈಗಾಗಲೇ ನೋಡಿದೆವು. ಆದರೆ ಈ ಸೂಕ್ತಿಗಳು ಆರಂಭದಲ್ಲಿ ದಾಖಲಿಸಲ್ಪಟ್ಟಿದ್ದು ಒಂದೇ ಸಾಮಗ್ರಿಯ ಮೇಲಲ್ಲ. ಬದಲಾಗಿ ಚರ್ಮದ ತೊಗಲು, ತೆಳು ನೇರ ಶಿಲೆಗಳು, ಖರ್ಜೂರದ ಎಲೆಗಳು, ಎಲುಬಿನ ತುಂಡುಗಳು ಮುಂತಾದವುಗಳ ಮೇಲೆ ಈ ಸೂಕ್ತಿಗಳು ದಾಖಲಿಸಲ್ಪಟ್ಟಿದ್ದವು. ಪ್ರವಾದಿ (ಸ)ರ ಕಾಲಾನಂತರ ಇಸ್ಲಾಮಿನ ಪ್ರಥಮ ಖಲೀಫರಾದ ಹಜರತ್ ಅಬೂಬಕರ್(ರ)ರವರು ಬೇರೆ ಬೇರೆ ಸಾಮಗ್ರಿಯ ಮೇಲೆ ದಪ್ರವಾದಿಪಟ್ಟಿದ್ದ ಖುರ್‌ಆನನ್ನು ಒಂದೇ ಸಾಮಗ್ರಿಯ ಮೇಲೆ ದಾಖಲಿಸುವ ಆಜ್ಞೆಯನ್ನು ಜಾರಿಗೊಳಿಸಿದರು. ಹೀಗೆ ಕುರ್‌ಆನ್ ವಿದ್ವಾಂಸರ ಒಮ್ಮತಾ‌ಭಿಪ್ರಾಯದಲ್ಲಿ ಕ್ರೋಢೀಕರಿಸಲ್ಪಟ್ಟ ಅರ್ಥಾತ್ ಒಂದೇ ಸಾಮಾಗ್ರಿಯ ಮೇಲೆ ಒಂದೇ ಸ್ಥಳದಲ್ಲಿ ಒಂದುಗೂಡಿಸಲ್ಪಟ್ಟ ಖುರ್‌ಆನಿನ ಮೂಲ ಪ್ರತಿಗಳು ಕಳೆದು ಹೋಗದಂತೆ ದಾರಿದಿಂದ ಒಂದುಗೂಡಿಸಿ ಕಟ್ಟಲಾಯಿತು. ( ಹ. ಉಮರ್ (ರ)ರ ಬಳಿಕ ಈ ಮೂಲ ಪ್ರತಿಯನ್ನು ಪ್ರವಾದಿ (ಸ)ರ ಪತ್ನಿ ಹ. ಹಫ್ಸಾ(ರ)ರ ಬಳಿಯಲ್ಲಿರಿಸಲಾಯಿತು.) 4. ಉಸ್ಮಾನ್ (ರ)ರು ಹೆಚ್ಚುವರಿ ಪ್ರತಿಗಳನ್ನು ತಯಾರಿಸಿದುದು ಮೂಲ ಪ್ರತಿಯನ್ನು ಆಧರಿಸಿಕೊಂಡೇ ಆಗಿತ್ತು. ಪ್ರವಾದಿ(ಸ)ರು ತಮ್ಮ ಧಾರ್ಮಿಮ ಪ್ರವಚನ ನೀಡುವ ಮತ್ತು ಇನ್ನಿತರ ಸಂದರ್ಭಗಳಲ್ಲಿ ಓದಿ ಕೇಳಿಸಿದ ಕೆಲವು ಖುರ್‌ಆನ್ ಸೂಕ್ತಿಗಳನ್ನು ಅನುಚರರ ಪೈಕಿ ಕೆಲವರು ತಮ್ಮಷ್ಟಕ್ಕೇ ಬರೆದಿಟ್ಟುಕೊಂಡಿದ್ದರು. ಹೀಗೆ ಬರೆದಿಟ್ಟುಕೊಂಡಿದ್ದ ಖುರ್‌ಆನ್ ಪಠ್ಯಗಳಲ್ಲಿ ತಪ್ಪುಗಳಿರುವ ಸಾಧ್ಯತೆಗಳಿದ್ದವು. ಏಕೆಂದರೆ ಪ್ರತಿಯೊಬ್ಬ ಸಂಗಾತಿಯು ಬರೆದಿಟ್ಟುಕೊಂಡಿದ್ದ ಎಲ್ಲಟ ಖುರ್‌ಆನ್ ಸೂಕ್ತಿಗಳನ್ನು ಪ್ರವಾದಿ(ಸ) ಖುದ್ದಾಗಿ ಪರಿಶೀಲನೆ ಮಾಡುವುದು ಅಸಾಧ್ಯ. ಹೀಗೆ ಪ್ರವಾದಿ(ಸ)ರಿಂದ ಪರಿಶೀಲನೆಗೊಳಪಡದೆ ಸಂಗಾತಿಗಳು ಖಾಸಗಿಯಾಗಿ ಬರೆದಿಟ್ಟುಕೊಂಡಿದ್ದ ಖುರ್‌ಆನ್ ಪಠ್ಯವು, ಪ್ರವಾದಿ(ಸ)ರವರ ಪತ್ನಿಯಾದ ಹ. ಹಫ್ಸಾ(ರ)ರ ವಶದಲ್ಲಿದ್ದ ಅಧಿಕೃತ ಮೂಲ ಪ್ರತಿಯೊಂದಿಗೆ ಸರಿಹೊಂದದಿದ್ದಾಗ ಇಸ್ಲಾಮಿನ ಮೂರನೇ ಖಲೀಫರಾಗಿದ್ದ ಉಸ್ಮಾನ್ (ರ) ರವರ ಕಾಲದಲ್ಲಿ ಮುಸಲ್ಮಾನರ ಮಧ್ಯೆ ಭಿನ್ನಾಭಿಪ್ರಾಯ ತಲೆಎತ್ತಿತ್ತು. ಪರಿಹಾರವಾಗಿ ಹ. ಉಸ್ಮಾನ್(ರ)ರು ಪ್ರವಾದಿ(ಸ)ರಿಂದ ಸ್ವಯಂ ಪರಿಶೀಲನೆಗೊಳಪಟ್ಟಿದ್ದ ಮತ್ತು ಅವರ ಕಾಲಾನಂತರ ಕೋಢೀಕರಿಸಲ್ಪಟ್ಟು ಹ. ಹಫ್ಸಾ(ರ)ರ ವಶದಲ್ಲಿದ್ದ ಖುರ್‌ಆನಿನ ಅಧಿಕೃತ ಮೂಲ ಪ್ರತಿಯನ್ನು ತರಿಸಿದರು. ಪ್ರವಾದಿ(ಸ)ರ ಖಾಸಗಿ ಬರಹಗಾರರಾಗಿದ್ದ ನಾಲ್ವರು ಸಂಗಾತಿಗಳಿಗೆ ಹ. ಝೈದ್ ಬಿನ್*(1). ಸಾಬಿತ್(ರ)ರನ್ನು ಮುಖ್ಯಸ್ಥರಾಗಿ ನೇಮಿಸಿ ಖುರ್‌ಆನಿನ ಹೆಚ್ಚುವರಿ ಪ್ರತಿಗಳನ್ನು ತಯಾರಿಸುವ ಕಾರ್ಯವನ್ನು ಅವರಿಗೆ ವಹಿಸಿಕೊಟ್ಟರು. ಹೀಗೆ ತಯಾರಾದ ಖುರ್‌ಆನಿನ ಅಧಿಕೃತ ಪ್ರತಿಗಳನ್ನು ಸರಕಾರೀ ಮೇಲ್ವಿಚಾರಣೆಯಲ್ಲಿ ಎಲ್ಲಾ ಮುಸ್ಲಿಮ್ ಕೇಂದ್ರಗಳಿಗೆ ಕಳುಹಿಸಿದರು. ಇದು ಮಾತ್ರವಲ್ಲದೆ ಜನರಲ್ಲಿ ತಮಗೆ ತಾವೇ ಬರೆದಿಟ್ಟುಕೊಂಡಿದ್ದ , ಪ್ರವಾದಿ(ಸ)ರಿಂದ ಪರಿಶೀಲನೆಗೆ ಒಳಪಡದ ಖುರ್‌ಆನಿನ ಭಾಗಗಳಿದ್ದವು. ಅಪೂರ್ಣವಾಗಿದ್ದ ಹಾಗೂ ತಪ್ಪುಗಳಿಂದ ಕೂಡಿರಬಹುದಾದ ಇಂತಹ ಭಾಗಗಳನ್ನು ಅಧಿಕೃತ ಪ್ರತಿಯೊಂದಿಗೆ ತಾಳೆ ನೋಡಿ, ಅಧಿಕೃತ ಪ್ರತಿಯೊಂದಿಗೆ ಹೊಂದಿಕೊಳ್ಳದ ಇಂತಹ ಭಾಗಗಳನ್ನು ಸುಟ್ಟುಹಾಕುವಂತೆ ಆದೇಶಿಸಿದರು. ಮೂಲ ಪ್ರತಿಯೊಂದಿಗೆ ಹೊಂದಿಕೊಳ್ಳದ ಇಂತಹ ಅನಧಿಕೃತ ಭಾಗಗಳಿಂದ ಮುಂದಕ್ಕೆ ಭಿನ್ನಾಭಿಪ್ರಾಯಗಳು ತಲೆ ಎತ್ತಬಹುದು ಎಂಬ ಅವರ ಅಂಜಿಕೆಯೇ ಈ ರೀತಿಯ ಆದೇಶಕ್ಕೆ ಕಾರಣ. ಮಾತ್ರವಲ್ಲದೆ ಇಂತಹ ಅನಧಿಕೃತ ಭಾಗಗಳು ಮೂಲ ಪ್ರತಿಯನ್ನು ಸಂರಕ್ಷಿಸಿಡುವ ಕಾರ್ಯದಲ್ಲಿರುವ ಬಹುದೊಡ್ಡ ತೊಡಕಾಗಿತ್ತು. ಹೀಗೆ ತಯಾರಾದ, ಪ್ರವಾದಿ(ಸ)ರಿಂದಲೇ ಅಧಿಕೃತವೆಂದು ದೃಢೀಕರಿಸಲ್ಪಟ್ಟ ಮೂಲಪಠ್ಯದ ನಕಲು ಪ್ರತಿಗಳ ಪೈಕಿ ಒಂದು ರಷ್ಯಾದೇಶದ ತಾಷ್ಕೆಂಟ್‌ನಲ್ಲಿರುವ ಮ್ಯೂಸಿಯಂನಲ್ಲಿದ್ದರೆ, ಇನ್ನೊಂದನ್ನು ಟರ್ಕಿ ದೇಶದ ಇಸ್ತಾಂಬೂಲ್‌ನಲ್ಲಿರುವ ಟಾಪ್‌ಕೆಪಿ (topkapi) ಮ್ಯೂಸಿಯಂನಲ್ಲಿ ಕಾಣಬಹುದು. 5. ಅರಬೇತರರಿಗಾಗಿ ಸೇರಿಸಲಾದ ವಿಶಿಷ್ಟ ಚಿಹ್ನೆಗಳು : ಖುರ್‌ಆನಿನ ಮೂಲಪ್ರತಿಯಲ್ಲಿ ಅರೇಬಿಕ್ ಅಕ್ಷರಗಳಿಂದ ಕೂಡಿದ ವಿಶಿಷ್ಠ ಚಿಹ್ನೆ*(2) ಗಳಿರಲಿಲ್ಲ ಎಂಬುದು ನಿಜ. ಈ ಚಿಹ್ನೆಗಳನ್ನು ಉರ್ದು ಭಾಷೆಯಲ್ಲಿ ತಷ್ಕೀಲ್ , ಝಬರ್ , ಪೈಶ್ ಹಾಗೂ ಅರೇಬಿಕ್ ಭಾಷೆಯಲ್ಲಿ ಫತ್‌ಹ್ , ಲಮ್ಮ್ ,ಕಸ್ರ್ ಎಂದು ಕರೆಯುವರು. ಖುರ್‌ಆನ್ ಅನ್ನು ವ್ಯಾಕರಣಕ್ಕನುಸಾರವಾಗಿ ಸರಿಯಾಗಿ ಉಚ್ಛರಿಸಲು ಅರಬರಿಗೆ ಇಂತಹ ಫತ್‌ಹ್ , ಕಸ್ರ್‌ಗಳ ನೆರವು ಬೇಕೆಂದಿಲ್ಲ. ಏಕೆಂದರೆ ಅರೇಬಿಕ್ ಅವರ ಮಾತೃಭಾಷೆಯಾಗಿದೆ. ಆದರೆ ಅರಬೇತರ ಮುಸ್ಲಿಮರಿಗೆ ಇಂತಹ ಚಿಹ್ನೆಗಳ ವಿನಃ ಖುರ್‌ಆನ್ ಅನ್ನು ಸರಿಯಾಗಿ ಪಠಿಸಲು ಅಸಾಧ್ಯ. ಈ ಚಿಹ್ನೆಗಳನ್ನು ಮೊತ್ತಮೊದಲ ಬಾರಿ ಪರಿಚಯಿಸಿಕೊಟ್ಟದ್ದು ಐದನೇ ಖಲೀಫರಾಗಿದ್ದ (66-86 ಹಿಜರಿ / ಕ್ರಿ. ಶ. 685-705) ಉಮಯ್ಯದ್ ಮಲಿಕ್ ಅಲ್- ಮರ್‌ವಾನ್ ಮತ್ತು ಇರಾಕಿನ ಅಂದಿನ ಗವರ್ನರ್ ಆಗಿದ್ದ ಅಲ್-ಹಜಾಜ್‌ರವರ ಕಾಲದಲ್ಲಾಗಿತ್ತು. ಈ ವಿಶಿಷ್ಟ ಚಿಹ್ನೆಗಳನ್ನೆತ್ತಿಕೊಂಡು ಕೆಲವರು ಇಂತಹ ಚಿಹ್ನೆಗಳಿಂದ ಕೂಡಿದ ಖುರ್‌ಆನ್ ಅನ್ನು ಅದು ಪ್ರವಾದಿ (ಸ)ರ ಕಾಲದಲ್ಲಿದ್ದ ಮೂಲ ಖುರ್‌ಆನ್ ಅಲ್ಲವೆಂದು ವಾದಿಸುವರು. ಆದರೆ ಈ ಜನರು ‘ ಖುರ್‌ಆನ್ ' ಎಂಬ ಪದದ ಅರ್ಥವೇ ‘ಓದಲ್ಪಡುವಂತಹದ್ದು' ಎಂಬುದನ್ನು ಗ್ರಹಿಸಿಕೊಳ್ಳಲು ವಿಫಲರಾಗಿರುವರು. ಆದ್ದರಿಂದ ಖುರ್‌ಆನಿನ ಸಂರಕ್ಷಣೆ ಎಂದರೆ ಪಠನದ ಸಂರಕ್ಷಣೆ. ಇದು ಮುಖ್ಯವೇ ಹೊರತು ಕಾಲಾನಂತರ ಪಠನದ ಅನುಕೂಲತೆಗಳಿಗೋಸ್ಕರ ಸೇರಿಸಲ್ಪಟ್ಟ ಕೆಲವು ವಿಶಿಷ್ಟ ಚಿಹ್ನೆಗಳು ಪ್ರಾಮುಖ್ಯವಲ್ಲ. ಇದು ಖುರ್‌ಆನಿನ ಶುದ್ಧತೆಯನ್ನೋ ಅರ್ಥವನ್ನೋ ಕೆಡಿಸಿ ಬಿಡಲಾರದು. ಉಚ್ಛಾರಣೆಯೂ, ಭಾಷೆಯೂ ಅದೇ ಅರೇಬಿಕ್ ಆಗಿದ್ದಲ್ಲಿ ಅರ್ಥವೂ ಸ್ವಾಭಾವಿಕವಾಗಿ ಅದೇ ಆಗಿರುವುದು. 6. ಅಲ್ಲಾಹನಿಂ ಖುರ್‌ಆನಿನ ಸಂರಕ್ಷಣೆಯ ವಾಗ್ದಾನ: ನಿಶ್ಚಯವಾಗಿಯೋ ಈ ಝಿಕ್‌ರ್ (ಖುರ್‌ಆನ್)ಅನ್ನು ಅವತೀರ್ಣಗೊಳಿಸಿದವರು ನಾವೇ ಆಗಿರುತ್ತೇವೆ. ಮತ್ತು ಇದರ ಸಂರಕ್ಷಕರೂ ನಾವೇ ಆಗಿರುತ್ತೇವೆ. (ಖುರ್‌ಆನ್ 15:9). ____________________________ *(1) ಹಜರತ್ ಅಬೂಬಕರ್ (ರ) ರವರ ಕಾಲದಲ್ಲಿ ಪ್ರಪ್ರಥಮ ಬಾರಿ ಖುರ್‌ಆನಿನ ಕ್ರೋಢೀಕರಣ ಒಂದೇ ಸಾಮಗ್ರಿಯ ಮೇಲೆ ನಡೆದಾಗ ಮುಖ್ಯ ಬರಹಗಾರರು ಹ. ಝೈದ್ ಬಿನ್ ಸಾಬಿತ್ (ರ) ರವರೇ ಆಗಿದ್ದರು *(2) ಅರಬಿಕ್ ಭಾಷೆಗೆ ಸ್ವರಾಕ್ಷರಗಳಿಲ್ಲ. ಉದಾ: “{ಅರೇಬಿಕ್}" ಈ ಪದದ ಸರಿಯಾದ ಉಚ್ಚಾರವು ಅಲ್‌ಹಮ್ದುಲಿಲ್ಲಾಹ್. ಅರಬೇತರನು ಇದನ್ನು ಇಲ್‌ಹಮ್ದುಲಿಲ್ಲಾಹ್ ಅಥವಾ ಉಲ್‌ಹಮ್ದುಲಿಲ್ಲಾಹ್ ಎಂದು ತಪ್ಪಾಗಿಯೂ ಓದಬಲ್ಲ.

ಉತ್ತರ : ಇಸ್ಲಾಂ ಧರ್ಮವು ಹಿಂಸೆಯನ್ನು ಪ್ರಚೋದಿಸುತ್ತದೆ ಎಂಬ ಸುಳ್ಳನ್ನು ಹರಡುವ ಸಲುವಾಗಿ ಒಂದು ವರ್ಗದ ಜನರು ಖುರ್‌ಆನಿನ ಕೆಲವು ಸೂಕ್ತಿಗಳನ್ನು ಆರಿಸಿಕೊಂಡು ಅದು ಮುಸ್ಲಿಮೇತರರನ್ನು ಕೊಲ್ಲುಲು ತನ್ನ ಅನುಯಾಯಿಗಳಿಗೆ ಆದೇಶಿಸುತ್ತದೆ ಎಂಬ ಅಪಪ್ರಚಾರವನ್ನು ಪದೇ ಪದೇ ಮಾಡುತ್ತಿರುವರು. ಇಂಥಹ ಕುಪ್ರಚಾರಕ್ಕೆ ಬಳಸಲ್ಪಡುವ ಸೂಕ್ತಿಗಳ ಪೈಕಿ ಒಂದು ಸೂರ : (ಅಧ್ಯಾಯ) ತೌಬಾದ ಸೂಕ್ತಿಯಾಗಿದೆ.
1) ಸೂರಃ ತೌಬಾದ ಸೂಕ್ತಿಗಳು :
ಇಸ್ಲಾಮಿನ ಟೀಕಾಕಾರರು ತಮ್ಮ ಕಾರ್ಯ ಸಾಧನೆಗಾಗಿ ಅತೀ ಹೆಚ್ಚು ಬಳಸುವ ಸೂಕ್ತಿ 9ನೇ ಅಧ್ಯಾಯದ ಈ ಕೆಳಗಿನ ಸೂಕ್ತಿಯಾಗಿದೆ. ‘ಮುಶ್ರಿಕರನ್ನು ಕಂಡಲ್ಲಿ ವಧಿಸಿರಿ' (ಖುರ್‌ಆನ್ 9:5 )
2) ಸೂಕ್ತಿಯು ಯುದ್ಧದ ಸಂದರ್ಭದಲ್ಲಿ ಅವತೀರ್ಣಗೊಂಡಿತ್ತು :
ಸಾಮಾನ್ಯವಾಗಿ ಇಸ್ಲಾಮಿನ ಟೀಕಾಕಾರರು ಈ ಸೂಕ್ತಿಯನ್ನು ಸಂದರ್ಭ ಸನ್ನಿವೇಶದಿಂದ ಪ್ರತ್ಯೇಕಿಸಿಕೊಂಡು ಜನರ ಮುಂದಿಡುವರು. ಈ ಸೂಕ್ತಿಯು ಅವತೀರ್ಣಗೊಂಡ ಸಂದರ್ಭವನ್ನು ಅರಿಯಬೇಕಿದ್ದರೆ ಪ್ರಸ್ತುತ ಅಧ್ಯಾಯದ ಒಂದನೇ ಸೂಕ್ತಿಯಿಂದಲೇ ಓದಲು ಆರಂಭಿಸಬೇಕಾಗಿದೆ. ಅವುಗಳು ಅಂದಿನ ಮಕ್ಕಾ ಮುಸ್ಲಿಮರು ಮತ್ತು ಮುಶ್ರಿಕರ ಮಧ್ಯೆ ಜಾರಿಯಲ್ಲಿದ್ದ ಒಂದು ಕರಾರಿನ ಕುರಿತು ತಿಳಿಸಿಕೊಡುತ್ತದೆ. ಮಕ್ಕಾ ಮುಶ್ರಿಕರು ಆ ಕರಾರಿನ ಶರ್ತಗಳನ್ನು ಮುರಿದಾಗ ತಮ್ಮ ವರ್ತನೆಗಳನ್ನು ತಿದ್ದಿಕೊಳ್ಳಲು ಯುದ್ಧ ಘೋಷಿಸಲಾಗುವುದು ಎಂದು ಸಾರಲಾಯಿತು.
ಇದೇ ಅಧ್ಯಾಯದ ಐದನೇ ಸೂಕ್ತಿಯು ಹೇಳುತ್ತದೆ :
“ನಿಷೇಧಿತ ಮಾಸಗಳು ಕಳೆದ ಬಳಿಕ ಬಹುದೇವ ವಿಶ್ವಾಸಿಗಳೊಂದಿಗೆ ಯುದ್ಧ ಮಾಡಿರಿ ಮತ್ತು ಅವರನ್ನು ಕಂಡಲ್ಲಿ ವಧಿಸಿರಿ" (ಖುರ್‌ಆನ್ 9:5)
ಈ ಸೂಕ್ತಿಯು ಯುದ್ಧವು ಸನ್ನಿಹಿತವಾಗುವ ಸಂದರ್ಭದಲ್ಲಿ ಆವತೀರ್ಣಗೊಂಡಿತ್ತು.
3) ಅಮೇರಿಕ ಮತ್ತು ವಿಯಟ್ನಾಂ ಯುದ್ಧ ಸಂದರ್ಭದ ಉದಾಹರಣೆ :
ಅಮೇರಿಕವು ವಿಯಟ್ನಾಂ ದೇಶದೊಂದಿಗೆ ಮಾಡಿದ ಯುದ್ಧವನ್ನು ನಾವು ಅರಿತಿರುವೆವು. ಆ ಸಂದರ್ಭದಲ್ಲಿ ಅಮೇರಿಕದ ಅಧ್ಯಕ್ಷರು ಅಥವಾ ಅದರ ಸೇನಾ ಮುಖ್ಯಸ್ಥರು ತನ್ನ ಸೈನಿಕರೊಂದಿಗೆ ವಿಯಟ್ನಾಮಿಗಳನ್ನು ಕಂಡಲ್ಲಿ ಕೊಲ್ಲಿರಿ ಎಂದು ಹೇಳಿದ್ದರು ಎಂದಿಟ್ಟುಕೊಳ್ಳೋಣ. ಅಧ್ಯಕ್ಷರ ಅಥವಾ ಸೇನಾ ಮುಖ್ಯಸ್ಥರ ಅಂದಿನ ಆ ಮಾತುಗಳನ್ನೆತ್ತಿಕೊಂಡು ಯುದ್ಧದ ಸಂದರ್ಭವನ್ನು ಮರೆಮಾಚಿ ಇಂದು ನಾನು ಅಮೇರಿಕದ ಅಧ್ಯಕ್ಷರು ವಿಯಟ್ನಾಮಿಗಳನ್ನು ಕಂಡಲ್ಲಿ ಕೊಲ್ಲಲು ಹೇಳಿರುವರು ಎಂಬ ಪ್ರಚಾರ ಕಾರ್ಯವನ್ನು ಆರಂಭಿಸಿದಲ್ಲಿ ಅದು ಅಮೇರಿಕಾದ ಅಧ್ಯಕ್ಷರನ್ನು ಒಬ್ಬ ಕಟುಕನನ್ನಾಗಿ ಬಿಂಬಿಸೀತು. ಆದರೆ ಅದೇ ವಿಷಯವನ್ನು ನಾನು ಯುದ್ಧದ ಹಿನ್ನೆಲೆಯೊಂದಿಗೆ ಹೇಳಿದ್ದಲ್ಲಿ ಅದು ಅತ್ಯಂತ ಸಮರ್ಪಕವೆಂದು ತೋರಬಹುದು. ಏಕೆಂದರೆ ಯುದ್ಧದ ಸಂದರ್ಭಗಳಲ್ಲಿ ಸೈನಿಕರನ್ನು ಹುರಿದುಂಬಿಸಲು ಇಂತಹ ಮಾತುಗಳು ಅತ್ಯವಶ್ಯಕವಾಗಿದೆ.
4) 9ನೇ ಅಧ್ಯಾಯದ 5ನೇ ಸೂಕ್ತಿಯ ಆವತೀರ್ಣದ ಉದ್ದೇಶವು ಯುದ್ಧದ ಸಂದರ್ಭದಲ್ಲಿ ಸೈನಿಕರನ್ನು ಹುರಿದುಂಬಿಸುವುದಾಗಿದೆ :
ಈವರೆಗೆ ವಿವರಿಸಿದಂತೆ ತೌಬಾ ಅಧ್ಯಾಯದ ಐದನೇ ಸೂಕ್ತಿಯು ‘ಮುಶ್ರಿಕರನ್ನು ಕಂಡಲ್ಲಿ ವಧಿಸಿರಿ' ಎಂದು ಹೇಳುವುದು ಯುದ್ಧದ ಸಂದರ್ಭದಲ್ಲಿ ತನ್ನ ಸೈನಿಕರನ್ನು ಹುರಿದುಂಬಿಸುವ ಸಲುವಾಗಿಯೇ ಆಗಿದೆ. ಖುರ್‌ಆನ್ ಮುಸ್ಲಿಂ ಸೈನಿಕರೊಂದಿಗೆ ಹೇಳುವುದೇನೆಂದರೆ ಯುದ್ಧದ ಸಮಯದಲ್ಲಿ ಭಯಬೇಡ. ಶತ್ರುಗಳನ್ನು ಕಂಡಕಂಡಲ್ಲಿ ವಧಿಸಿ ಬಿಡಿರಿ ಎಂದಾಗಿದೆ.
5) ಸೂಕ್ತಿ ಸಂಖ್ಯೆ 5 ರಿಂದ ನೇರವಾಗಿ 7 ಕ್ಕೆ ಜಿಗಿಯುವ ಅರುಣ್ ಶೌರಿ :
ಇಸ್ಲಾಮ್ ಧರ್ಮದ ಕಟು ವಿಮರ್ಶಕರ ಪೈಕಿ ಭಾರತದ ಅರುಣ್ ಶೌರಿಯೂ ಒಬ್ಬರು. ‘ದಿ ವರ್ಲ್ಡ್ ಆಫ್ ಫತ್ಪಾಸ್' ಎಂಬ ತನ್ನ ಪುಸ್ತಕದ 572 ನೇ ಪುಟದಲ್ಲಿ ಇಸ್ಲಾಮನ್ನು ಟೀಕೀಸಲು ಅವರು ತೌಬಾ ಅಧ್ಯಾಯದ 5ನೇ ಸೂಕ್ತಿಯನ್ನು ಆರಿಸಿಕೊಂಡಿರುವರು. ಆದರೆ ಶೌರಿಯವರ ವಿಶೇಷತೆಯೇನೆಂದರೆ ಅವರು ಸೂಕ್ತಿ ಸಂಖ್ಯೆ 5ನ್ನು ಬಳಸಿದ ಬಳಿಕ 6ನೇ ಸೂಕ್ತಿಯನ್ನು ಬಿಟ್ಟು ನೇರವಾಗಿ 7ನೇ ಸೂಕ್ತಿಗೆ ಜಿಗಿದಿರುವರು. ಅವರು 6ನೇ ಸೂಕ್ತಿಯ ಬಗ್ಗೆ ತಾಳಿರುವ ಜಾಣ ಮೌನದ ಹಿಂದಿನ ಕಾರಣವು ಯಾವುದೇ ಪ್ರಜ್ಞಾವಂತ ವ್ಯಕ್ತಿಯ ಗಮನಕ್ಕೆ ಬಾರದಿರಲಾರದು.
6) ತೌಬಾ ಅಧ್ಯಾಯದ ಆರನೇ ಸೂಕ್ತಿಯೇ ಟೀಕಾಕಾರರ ತುಟಿಗಳನ್ನು ಬಂಧಿಸಿ ಬಿಡುತ್ತದೆ :
ತೌಬಾ ಅಧ್ಯಾಯದ ಆರನೇ ಸೂಕ್ತಿಯು ಇಸ್ಲಾಮ್ ಧರ್ಮವು ಹಿಂಸೆಯನ್ನು ಪ್ರಚೋದಿಸುತ್ತದೆ ಎಂಬ ಮಿಥ್ಯಾರೋಪಕ್ಕೆ ಸೂಕ್ತ ಉತ್ತರವನ್ನು ನೀಡುತ್ತದೆ. ಅದು ಹೇಳುತ್ತದೆ :
“ಮುಶ್ರಿಕರ ಪೈಕಿ ಯಾರಾದರೂ ನಿಮ್ಮೊಡನೆ ಅಭಯ ಯಾಚಿಸಿ ನಿಮ್ಮ ಬಳಿಗೆ ಬರಲಿಚ್ಛಿಸಿದರೆ ಅಲ್ಲಾಹನ ವಚನವನ್ನು ಅವನು ಆಲಿಸಿಕೊಳ್ಳುವವರೆಗೆ ಅವನಿಗೆ ಅಭಯ ನೀಡಿರಿ. ಅನಂತರ ಅವನನ್ನು ಸುರಕ್ಷಿತ ತಾಣಕ್ಕೆ ತಲುಪಿಸಿ ಬಿಡಿರಿ. ಅವರು ತಿಳುವಳಿಕೆಯಿಲ್ಲದವರಾದುದರಿಂದ (ಹೀಗೆ ಮಾಡಬೇಕಾಗಿದೆ) (ಖುರ್‌ಆನ್ 9:6)
ಖುರ್‌ಆನ್ ಯುದ್ಧದ ಸಂದರ್ಭದಲ್ಲಿ ಮುಶ್ರಿಕರ ಪೈಕಿ ಯಾರಾದರೂ ಅಭಯ ಯಾಚಿಸಿದಲ್ಲಿ ಅವನಿಗೆ ರಕ್ಷಣೆಯನ್ನು ಒದಗಿಸಿ ಕೊಡಬೇಕೆಂದು ಅಜ್ಞಾಪಿಸುವುದು ಮಾತ್ರವಲ್ಲದೆ ಅವನನ್ನು ಅತ್ಯಂತ ಸುರಕ್ಷಿತ ತಾಣಕ್ಕೆ ಒಯ್ದು ಅಭಯವನ್ನು ನೀಡಬೇಕು ಎಂದೂ ಹೇಳುತ್ತದೆ. ನಾವು ಪ್ರಸ್ತುತ ವಿದ್ಯಮಾನಗಳನ್ನು ಅವಲೋಕಿಸಿದಲ್ಲಿ ಅತ್ಯಂತ ಸೌಮ್ಯ ಹಾಗೂ ಶಾಂತಿ ಪ್ರಿಯ ಸೇನಾಧಿಕಾರಿ ಕೂಡಾ ಹೆಚ್ಚೆಂದರೆ ಶರಣಾದ ಶತ್ರು ಸೈನಿಕನನ್ನು ಸ್ವತಂತ್ರವಾಗಿ ಹೋಗಲು ಬಿಡಬಲ್ಲ. ಆದರೆ ಯಾವ ಅಧಿಕಾರಿಯೂ ಶರಣಾದ ಶತ್ರು ಸೈನಿಕನನ್ನು ಸ್ವತಂತ್ರಗೊಳಿಸುವುದು ಮಾತ್ರವಲ್ಲದೆ ಅವನನ್ನು ಸುರಕ್ಷಿತ ತಾಣಕ್ಕೆ ತಲುಪಿಸಬೇಕು ಎಂಬ ಆಜ್ಞೆಯನ್ನು ಎಂದೂ ನೀಡಲಾರ, ಅವನೆಷ್ಟು ಶಾಂತಿಪ್ರಿಯನಾಗಿದ್ದರೂ ಸರಿಯೇ!.
ಇದು ಜಗತ್ತಿನಲ್ಲಿ ಶಾಂತಿಯನ್ನು ಸ್ಥಾಪಿಸುವುದು ಹೇಗೆಂದು ಅಲ್ಲಾಹನು ಕಲಿಸಿಕೊಟ್ಟ ಅತ್ಯುತ್ತಮ ವಿಧಾನವಾಗಿದೆ.

____________________________
ಕೆಲವು ಟೀಕಾಕಾರರು ಖುರ್‌ಆನ್ ಸಾರ್ವಕಾಲಿಕವಲ್ಲ ಎಂಬ ತಮ್ಮ ವಾದಕ್ಕೆ ಪುರಾವೆಯಾಗಿ ಇದೇ ಸೂಕ್ತಿಯನ್ನು (ಖುರ್‌ಆನ್ 9:5) ಬಳಸಿಕೊಳ್ಳುವರು. ಯುದ್ಧದ ಸಂದರ್ಭದಲ್ಲಿ ಅಂದಿನ ಮಕ್ಕಾ ಮುಶ್ರಿಕರನ್ನುದ್ದೇಶಿಸಿಕೊಂಡು ಈ ಸೂಕ್ತಿಯು ಅವತೀರ್ಣಗೊಂಡಿತ್ತು, ಇಂದು ಆ ಸೂಕ್ತಿಯು ಪ್ರಸಕ್ತವಲ್ಲವೆಂದಾದಲ್ಲಿ ಖುರ್‌ಆನ್ ಸಾರ್ವಕಾಲಿಕವಾಗುವುದಾದರೂ ಹೇಗೆ ಎಂಬುದು ಇವರ ವಾದ .
ವಾಸ್ತವದಲ್ಲಿ ಈ ಸೂಕ್ತಿಗಳು ಇಂತಿಂತಹ ರೋಗ ಬಂದಲ್ಲಿ ಇಂತಿಂತಹ ಔಷಧಿಯನ್ನು ತೆಗೆದುಕೊಳ್ಳಿರಿ ಎಂದು ವೈದ್ಯರು ಶಿಫಾರಸು ಮಾಡುವ ರೀತಿಯಲ್ಲಿದೆ.


ಆದುದರಿಂದಲೇ ಅಮೆರಿಕವು ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ ತನ್ನ ಶತ್ರುಗಳನ್ನು ವಧಿಸಲು ಆದೇಶಿಸುವ ಮೂಲಕ ಸೈನಿಕರನ್ನು ಹುರಿದುಂಬಿಸಿತು ಮತ್ತು ಭಾರತವು ಪಾಕಿಸ್ತಾನಿಗಳನ್ನು ಹೀಗೆ ಯಾವುದೇ ಒಂದು ರಾಷ್ಟ್ರವು ತನ್ನೊಂದಿಗೆ ಯುದ್ಧ ಹೂಡಿದವರನ್ನು ವಧಿಸಲು ಆದೇಶಿಸುವ ಮೂಲಕ ತಮ್ಮ ತಮ್ಮ ಸೈನಿಕರನ್ನು ಹುರಿದುಂಬಿಸುತ್ತದೆ. ಯುದ್ಧವೆಂಬ ರೋಗವು ತಗಲಿದಾಗಲೆಲ್ಲಾ ಪ್ರತಿಯೊಂದು ರಾಷ್ಟ್ರವೂ ಖುರ್‌ಆನ್ ಸೂಚಿಸಿದ ಔಷಧಿಯನ್ನೇ ಸೇವಿಸಿದೆ.


ಆದುದರಿಂದ ಖುರ್‌ಆನಿನ ಸೂಕ್ತಿಗಳು ಸಾರ್ವಕಾಲಿಕವೂ ಹೌದು.

ಉತ್ತರ : ಇಸ್ಲಾಮ್ ಏಕದೇವಾರಾಧನೆಯನ್ನು ಪ್ರತಿಪಾದಿಸುವ ಮತ್ತು ಬಹುದೇವಾಸ್ತಿತ್ವವನ್ನು ಪ್ರವಲವಾಗಿ ನಿರಾಕರಿಸುವ ಧರ್ಮವಾಗಿದ್ದೆ. ಬಹುದೇವಾರಾಧನೆಯನ್ನು ಅದು ಯಾವುದೇ ಕಾರಣಕ್ಕೂ ವಿರೋಧಿಸದಿರಲಾರದು. ಅದರೊಂದಿಗೆ ಯಾವುದೇ ರೀತಿಯ ಹೊಂದಾಣಿಕೆಗೂ ಸಿದ್ಧವಿಲ್ಲದ ಏಕೈಕ ಧರ್ಮವಾಗಿದೆ ಇಸ್ಲಾಮ್. ಅಲ್ಲಾಹನು ತನ್ನ ನಾಮ ಹಾಗೂ ಗುಣವಿಶೇಷಣಗಳಲ್ಲಿ ಏಕೈಕನು ಎಂದು ಅದು ಹೇಳುತ್ತದೆ. ಪವಿತ್ರ ಖುರ್‌ಆನಿನಲ್ಲಿ ಅಲ್ಲಾಹನು ತನ್ನನ್ನು ತಾನೇ ಸಂಬೋಧಿಸಿಕೊಳ್ಳುವಾಗ ಹಲವು ಕಡೆಗಳಲ್ಲಿ 'ನಾವು' ಎಂಬ ಪದವನ್ನು ಪ್ರಯೋಗಿಸಿರುತ್ತಾನೆ . ಆದರೆ ಇದು ಇಸ್ಲಾಮ್ ಬಹುದೇವಾರಾಧನೆಯನ್ನು ಬೆಂಬಲಿಸುತ್ತದೆ ಎಂಬ ತರ್ಕವನ್ನು ಹೂಡಲು ಸಕಾರಣವಾಗಲಾರದು.
ಎರಡು ವಿಧದ ಬಹುವಚನ ರೂಪಗಳು :
ಎರಡು ವಿಧದ ಬಹುವಚನ ರೂಪಗಳಿರುವ ಭಾಷೆಗಳು ಹಲವು . ಇವುಗಳಲ್ಲಿ ಒಂದನೇಯದು ವಸ್ತುವಿನ ಸಂಖ್ಯೆಯನ್ನು ಸೂಚಿಸುವ ಬಹುವಚನವಾದರೆ, ಇನ್ನೊಂದು ಗೌರವ ಸೂಚಕ ಬಹುವಚನ ರೂಪವಾಗಿದೆ.
ಉದಾಹರಣೆಗಳು ಹೀಗಿವೆ:
a. ಆಂಗ್ಲ ಭಾಷೆಯಲ್ಲಿ ಇಂಗ್ಲೆಂಡಿನ ರಾಣಿಯು ತನ್ನನ್ನು ಸಂಬೋಧಿಸಿಕೊಳ್ಳುವಾಗ ನಾನು(i) ಎಂಬುದರ ಬದಲಿಗೆ ‘ನಾವು' (we) ಎಂದೇ ಪರಿಚಯಿಸಿಕೊಳ್ಳುವಳು. ಇದನ್ನು ‘ಗೌರವ ಸೂಚಕ ಬಹುವಚನ' (Royal plural) ಎನ್ನುವರು.
b. ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರು ತಮ್ಮ ಭಾಷಣಗಳಲ್ಲಿ ‘ಹಮ್ ದೇಖ್‌ನಾ ಚಾಹ್ತೇ ಹೈ' (ನಾವು ನೋಡಲು ಇಚ್ಛಿಸುತ್ತೇವೆ) ಎಂದೇ ಹೇಳುತ್ತಿದ್ದರು. ಹಮ್ ಎಂಬುದು ಮೈ ಎಂಬುದರ ಬಹುವಚನ ರೂಪವಾಗಿದೆ. ಇದು ಹಿಂದೀ ಭಾಷೆಯಲ್ಲಿರುವ ‘ರಾಯಲ್ ಪ್ಲೂರಲ್' ಆಗಿದೆ.
c. ಇದೇ ರೀತಿ ಅರೇಬಿಕ್ ಭಾಷೆಯಲ್ಲಿ ‘ನಹ್‌ನು' (ನಾವು) ಎಂಬುದು ಸಂಖ್ಯಾ ಸೂಚಕ ಬಹುವಚನವಾಗಿರುವಂತೆ ಗೌರವ ಸೂಚಕ ಬಹುವಚನವೂ ಆಗಿದೆ. ಇದನ್ನೇ ಅಲ್ಲಾಹನು ಖುರ್‌ಆನಿನಲ್ಲಿ ತನ್ನನ್ನು ತಾನೇ ಸಂಬೋಧಿಸಿಕೊಳ್ಳುವಾಗ ಹಲವು ಕಡೆಗಳಲ್ಲಿ ಬಳಸಿರುವುದು. ಅಂದರೆ ಅಲ್ಲಾಹನು ಇಲ್ಲಿ ಬಳಸಿರುವುದು ‘ನಹ್‌ನು' ಎಂಬುದರ ಬಹುವಚನ ರೂಪವನ್ನೇ ಹೊರತು ಅದರ ಸಂಖ್ಯಾಸೂಚಕ ಬಹುವಚನ ರೂಪವನ್ನಲ್ಲ.
ತೌಹೀದ್ (ಏಕದೇವಾರಾಧನೆ) ಇಸ್ಲಾಮಿನ ಅತ್ಯಂತ ಪ್ರಮುಖವಾದ ಆಧಾರ ಸ್ತಂಭಗಳಲ್ಲಿ ಒಂದಾಗಿದೆ. ಅಲ್ಲಾಹನು (ದೇವನು) ಎಂಬ ಏಕೈಕನೆಂದು ಸಾರುವ ಪ್ರಸ್ತಾಪವನ್ನು ಖುರ್‌ಆನಿನ ಹಲವು ಕಡೆಗಳಲ್ಲಿ ಕಾಣಬಹುದು. ಉದಾಹರಣೆಗೆ “ಹೇಳಿರಿ. ಅವರು ಅಲ್ಲಾಹನು ಏಕೈಕನು " (ಖುರ್‌ಆನ್ 112:1)
ಉತ್ತರ : ಎರಡು ವಿಧದ ವ್ಯಾಖ್ಯಾನಗಳು :
ನಾವು ಅನೂರ್ಜಿತಗೊಳಿಸಿದ ಅಥವ ವಿಸ್ಮೃತಿಗೊಳಿಸಿದ ಆಯತ್ (ವಚನ)ಗಳಾಸ್ಥಾನದಲ್ಲಿ ಅವುಗಳಿಗಿಂತಲೂ ಉತ್ತಮವಾದುದನ್ನು ಅಥವಾ ಅವುಗಳಂತೆಯೇ ಇರುವುದನ್ನಾದರೂ ತರುತ್ತೇವೆ. (ಖುರ್‌ಆನ್ 2:106)
16ನೇ ಅಧ್ಯಾಯದ 10ನೇ ಸೂಕ್ತಿಯಲ್ಲೂ ಇಂಥಹದೇ ಒಂದು ಸೂಕ್ತಿಯ ಪ್ರಸ್ತಾಪವಿದೆ. ಇಲ್ಲಿ ಬಳಸಿರುವ ಅರೇಬಿಕ್ ಪದವು ಆಯಃ (ತ್) ಎಂಬುದಾಗಿದ್ದು ಅದಕ್ಕೆ ‘ದೃಷ್ಟಾಂತಗಳು' ಅಥವಾ ‘ದಿವ್ಯವಾಣಿಗಳು' ಮಾತ್ರವಲ್ಲದೆ ‘ಸೂಕ್ತಿಗಳು' ಎಂಬರ್ಥವೂ ಇದೆ.
ಈ ಸೂಕ್ತಿಗಳನ್ನು ಎರಡು ವಿಧಗಳಲ್ಲಿ ವ್ಯಾಖ್ಯಾನಿಸಬಹುದು :
a. ಅನುರ್ಜಿತಗೊಳಿಸಲ್ಪಟ್ಟ ದಿವ್ಯವಾಣಿಗಳು ಅಂದರೆ ಖುರ್‌ಆನಿನ ಅವತೀರ್ಣಕ್ಕೆ ಮೊದಲು ಅವತೀರ್ಣಗೊಂಡಿದ್ದ ದಿವ್ಯವಾಣಿಗಳು ಅಥವಾ ದೈವಿಕಗ್ರಂಥಗಳು, ಅರ್ಥಾತ್ ತೌರಾಃ, ಝಬೂರ್, ಇಂಜೀಲ್‌ಗಳು ಖುರ್‌ಆನಿನ ಬಳಿಕ ಅನೂರ್ಜಿತಗೊಂಡ ಗ್ರಂಥಗಳು ಎಂದಾಗುತ್ತದೆ.
ಇಲ್ಲಿ ಅಲ್ಲಾಹನು ಖುರ್‌ಆನಿಗೆ ಮುಂಚೆ ಅವತೀರ್ಣಗೊಂಡ ದಿವ್ಯವಾಣಿ (ಆಯಃ)ಗಳ ಬದಲಿಗೆ ಅದಕ್ಕೆ ಸಾಟಿಯಾದ ಅಥವಾ ಅದಕ್ಕಿಂತಲೂ ಉತ್ತಮವಾದುದನ್ನು ಪರ್ಯಾಯವಾಗಿ ನೀಡುವೆನೆಂದೂ ಹೇಳಿರುವನು. ಅಂದರೆ ತೌರಾ , ಝಬೂರ್ ಮತ್ತು ಇಂಜೀಲ್‌ಗಳ ಸ್ಥಾನದಲ್ಲಿ ಅದಕ್ಕಿಂತಲೂ ಉತ್ತಮವಾದ ಖುರ್‌ಆನ್ ಅನ್ನು ನೀಡಲಾಗಿದೆ ಎಂದಿರುವನು.

b. ಇನ್ನು ಆಯಃ (ತ್) ಎಂಬ ಪದಕ್ಕೆ ಪೂರ್ವಗ್ರಂಥಗಳು ಎಂಬುದರ ಬದಲಿಗೆ ಸೂಕ್ತಿಗಳು ಎಂಬ ಅರ್ಥವನ್ನು ನೀಡಿದರೂ ಅದು ಯಾವುದೇ ಗೊಂದಲಕ್ಕೆ ಆಸ್ಪದ ನೀಡಲಾರದು. ಏಕೆಂದರೆ ಆಗ ಅದು ಖುರ್‌ಆನಿನ ಯಾವುದೇ ಸೂಕ್ತಿಗಳನ್ನು ಅನೂರ್ಜಿತಗೊಳ್ಳಲಾರವು; ಅವುಗಳಿಗಿಂತ ಉತ್ತಮವಾದ ಅಥವಾ ಸಮಾನವಾದ ಸೂಕ್ತಿಗಳನ್ನು ಬದಲಿಯಾಗಿ ನೀಡದ ಹೊರತು ಎಂಬರ್ಥ ನೀಡುತ್ತದೆ.
ಇದರ ಅರ್ಥವು ಆರಂಭದಲ್ಲಿ ಅವತೀರ್ಣಗೊಂಡ ಕೆಲವು ಖುರ್‌ಆನ್ ಸೂಕ್ತಿಗಳಿಗೆ ಬದಲಿಯಾಗಿ ಕೆಲವು ಹೊಸ ಸೂಕ್ತಿಗಳನ್ನು ಅವತೀರ್ಣಗೊಳಿಸಲಾಯಿತು ಎಂದಾಗಿದೆ.
ನಾನು ಎರಡೂ ವ್ಯಾಖ್ಯಾನಗಳನ್ನೂ ಸರಿಯೆನ್ನುತ್ತೇನೆ. ಕೆಲವು ಮುಸ್ಲಿಮರೂ ಸೇರಿದಂತೆ ಅನೇಕ ಅಮುಸ್ಲಿಮರು ಎರಡನೇ ವ್ಯಾಖ್ಯಾನವನ್ನು ಅಪಾರ್ಥ ಮಾಡಿಕೊಂಡಿರುವರು. ಆರಂಭದ ಸೂಕ್ತಿಗಳನ್ನು ತದನಂತರ ಸೂಕ್ತಿಗಳು ಅನೂರ್ಜಿತಗೊಳಿಸಿತೆಂದಾದಲ್ಲಿ ಕಾಲ ಕ್ರಮೇಣ ಅಪ್ರಸ್ತುತಗೊಂಡ ಸೂಕ್ತಿಗಳೂ ಖುರ್‌ಆನಿನಲ್ಲಿ ಇವೆ ಎಂದಾಗುತ್ತದೆ ಎಂಬುದು ಈ ಜನರ ವಾದ. ಮಾತ್ರವಲ್ಲದೆ ಈ ಸೂಕ್ತಿಗಳು ಪರಸ್ಪರ ವಿರುದ್ಧಾರ್ಥ (ವೈರುಧ್ಯ)ಗಳನ್ನು ಸೂಚಿಸುತ್ತವೆ ಎಂದೂ ಈ ಜನರು ವಾದಿಸುವರು.
ಕೆಲವು ಉದಾಹರಣೆಗಳ ಮೂಲಕ ನಾವಿದನ್ನು ವಿಶ್ಲೇಷಿಸೋಣ :
1) ಖುರ್‌ಆನಿನಲ್ಲಿರುವ ಅಧ್ಯಾಯಗಳಂತಹ 10 ಅಧ್ಯಾಯಗಳನ್ನು ಅಥವಾ ಕನಿಷ್ಟಪಕ್ಷ ಒಂದು ಅಧ್ಯಾಯವನ್ನಾದರೂ ರಚಿಸಿ ತರಲು ಒಡ್ಡಿದ ಸವಾಲು :
ಮಕ್ಕಾ ಮುಶ್ರಿಕರ ಪೈಕಿ ಕೆಲವರು ಖುರ್‌ಆನ್ ಮುಹಮ್ಮದ್‌ರ ರಚನೆಯೆಂದು ಆರೋಪಿಸಿದಾಗ ಅಲ್ಲಾಹನು ಕೆಲವು ಸೂಕ್ತಿಗಳನ್ನು ಅವತೀರ್ಣಗೊಳಿಸುವ ಮೂಲಕ ಅವರೊಂದಿಗೆ ಸವಾಲು ಹಾಕಿರುವನು. ಅವುಗಳು ಹೀಗಿವೆ :
“ಹೇಳಿರಿ : ಮನುಷ್ಯರೂ, ಜಿನ್ನ್ (ಯಕ್ಷ)ಗಳೂ ಸೇರಿ ಈ ಖುರ್‌ಆನಿನಂತಹ ಒಂದನ್ನು ತರಲು ಯತ್ನಿಸಿದರೆ ಅವರೆಲ್ಲರೂ ಪರಸ್ಪರ ಸಹಾಯಕರಾದರೂ ಅವರಿಗೆ ಅದನ್ನು ತರಲಿಕ್ಕಾಗದು"
ಬಳಿಕ ಇದೇ ಸವಾಲನ್ನು ಇನ್ನೊಂದು ಸೂಕ್ತಿಯ ಅವತೀರ್ಣದ ಮೂಲಕ ಸರಳಗೊಳಿಸಲಾಯಿತು :
“ ಅಥವಾ ಮುಹಮ್ಮದರು ಈ ಗ್ರಂಥವನ್ನು ತಾವು ಮುಹಮ್ಮದರು ಈ ಗ್ರಂಥವನ್ನು ತಾವೇ ಸೃಷ್ಟಿಸಿದರು ಎಂದು ಇವರು ಹೇಳುತ್ತಾರೆಯೇ? ಹಾಗಾದರೆ ಇದರಂತಹ ಹತ್ತು ಅಧ್ಯಾಯ (ಸೂರಃ)ಗಳನ್ನಾದರೂ ರಚಿಸಿ ತನ್ನಿರಿ ಮತ್ತು ಅಲ್ಲಾಹನ ಹೊರತಾದ ನಿಮ್ಮೆಲ್ಲಾ ಸಹಾಯಿಗಳನ್ನು ಕರೆದುಕೊಳ್ಳಿರಿ" (ಖುರ್‌ಆನ್ 11:13)
ಬಳಿಕ 10ನೇ ಅಧ್ಯಾಯ (ಸೂರಃ) ಯೂನುಸ್‌ನಲ್ಲಿ ಅದನ್ನು ಇನ್ನಷ್ಟು ಸರಳಗೊಳಿಸಲಾಯಿತು. “ಇದನ್ನು ಅವರು (ಮುಹಮ್ಮದರು) ರಚಿಸಿದರೆಂದು ಇವರೆನ್ನುವರೇ? ಹೇಳಿರಿ - ನೀವು (ನಿಮ್ಮ ಆರೋಪದಲ್ಲಿ) ಸತ್ಯವಂತರಾಗಿದ್ದರೆ ಇದರಂತಿರುವ ಒಂದು ಅಧ್ಯಾಯವನ್ನಾದರೂ ರಚಿಸಿ ತನ್ನಿರಿ ಮತ್ತು ಅಲ್ಲಾಹನ ಹೊರತಾದ ನಿಮ್ಮ ಸಹಾಯಿಗಳನ್ನೆಲ್ಲಾ ಕರೆದುಕೊಳ್ಳಿರಿ" (ಖುರ್‌ಆನ್ 10:38)
ಕಟ್ಟಕಡೆಗೆ ಅಧ್ಯಾಯ ಅಲ್‌ಬಕರದಲ್ಲಿ ಅದೇ ಸವಾಲನ್ನು ಇನ್ನಷ್ಟು ಸರಳಗೊಳಿಸಲಾಯಿತು.
“ನಾವು ನಮ್ಮ ದಾಸನಿಗೆ ಅವತೀರ್ಣಗೊಳಿಸಿದವುಗಳ ಬಗ್ಗೆ ನಿಮಗೇನಾದರೂ ಸಂದೇಹವಿದ್ದಲ್ಲಿ ಇದನ್ನು ಅಲ್ಪಮಟ್ಟಿಗಾದರೂ ಹೋಲುವ ಒಂದು ಅಧ್ಯಾಯವನ್ನಾದರೂ ರಚಿಸಿ ತನ್ನಿರಿ ಮತ್ತು ಅಲ್ಲಾಹನ ಹೊರತಾದ ನಿಮ್ಮೆಲ್ಲಾ ಸಾಕ್ಷಿಗಳನ್ನು ಸಹಾಯಕ್ಕಾಗಿ ಕರೆದುಕೊಳ್ಳಿರಿ. ನೀವು ಸತ್ಯವಂತರಾಗಿದ್ದರೆ." (ಖುರ್‌ಆನ್ 2:23-24)
ಆದುದರಿಂದ ಇಲ್ಲಿ ಅಲ್ಲಾಹನು ಮಾನವರಾಶಿಯೊಂದಿಗೆ ತನ್ನ ಸವಾಲನ್ನು ಒಂದೊಂದು ಸೂಕ್ತಿಯ ಬಳಿಕವೂ ಇನ್ನಷ್ಟು ಸರಳೀಕರಿಸಿ ಕೊಟ್ಟಿರುವನು. ಕ್ರಮಾನುಗತವಾಗಿ ಅವತೀರ್ಣಗೊಂಡ ಸೂಕ್ತಿಗಳಲ್ಲಿ ಮೊದಲನೆಯದು ಬಹುದೇವಾರಾಧಕರಿಗೆ ಖುರ್‌ಆನಿನಂತಹ ಒಂದು ಗ್ರಂಥವನ್ನು ರಚಿಸಿ ತರಲು ಹೇಳಿದರೆ, ಆ ಬಳಿಕದ ಸೂಕ್ತಿಯು ಹತ್ತು ಅಧ್ಯಾಯಗಳನ್ನಾದರೂ ರಚಿಸಿ ತರಲು ಹೇಳಿ ಕಟ್ಟಕಡೆಗೆ ಖುರ್‌ಆನಿನಲ್ಲಿರುವ ಅಧ್ಯಾಯವನ್ನು ಅಲ್ಪ ಮಟ್ಟಿಗಾದರೂ ಹೋಲುವ ಒಂದನ್ನು ಅದೆಷ್ಟು ಚಿಕ್ಕದಾಗಿದ್ದರೂ ಸರಿಯೇ ರಚಿಸಿ ತನ್ನಿರಿ ಎಂದು (ಖುರ್‌ಆನ್ 2:23:24) ಹೇಳಿತು.
ಇಲ್ಲಿ ಕೊನೆಯ ಸೂಕ್ತಿ (2:23,24) ಯು ಆರಂಭದ ಮೂರು ಸೂಕ್ತಿಗಳೊಂದಿಗೆ ವೈರುಧ್ಯವನ್ನೆಂದೂ ಸೂಚಿಸಲಾರದು. ವೈರುಧ್ಯವೆಂದರೆ ಸಂಭವಿಸಲು ಅಸಾಧ್ಯವಾದ ಎರಡು ವಿಷಯಗಳನ್ನು ಏಕಕಾಲದಲ್ಲಿ ಪ್ರಸ್ತಾಪಿಸುವುದು ಎಂದಾಗಿದೆ.
ಆರಂಭದ ಸೂಕ್ತಿಗಳು ಅರ್ಥಾತ್ ಅನೂರ್ಜಿತಗೊಂಡಿವೆ ಎನ್ನಲಾದ ಸೂಕ್ತಿಗಳು ಅಲ್ಲಾಹನ ವಾಣಿಯಾಗಿ ಇಂದಿಗೂ ಖುರ್‌ಆನಿನಲ್ಲಿದೆ ಮತ್ತು ಇಂದಿಗೂ ಅದು ಸತ್ಯ ಅಥವಾ ಅಜೇಯ ಸವಾಲಾಗಿಯೇ ಉಳಿದುಕೊಂಡಿದೆ. ಉದಾಹರಣೆಗೆ ಖುರ್‌ಆನಿನಂತಹ ಗ್ರಂಥವನ್ನು ರಚಿಸಿ ತರುವ ಸವಾಲು. ಅದು ಇನ್ನು ಕೂಡಾ ಅಜೇಯವಾಗಿಯೇ ಉಳಿದುಕೊಂಡಿದೆ. ಇದೇ ರೀತಿ ಹತ್ತು ಅಧ್ಯಾಯಗಳನ್ನು , ಒಂದು ಅಧ್ಯಾಯವನ್ನು ಮತ್ತು ಖುರ್‌ಆನಿನ ಯಾವುದಾದರೂ ಅಧ್ಯಾಯವನ್ನು ಹೋಲುವ ಒಂದು ಅಧ್ಯಾಯವನ್ನಾದರೂ ರಚಿಸಿ ತನ್ನಿರಿ ಎನ್ನುವ ಕೊನೆಯ ಸವಾಲು ಕೂಡಾ ಇಂದಿಗೂ ಅಬೇಧ್ಯವಾಗಿಯೇ ಉಳಿದುಕೊಂಡಿದೆ. ಇದು ಮೊದಲ ಮೂರು ಸವಾಲುಗಳಿಗೆ ವಿರುದ್ಧವಾಗಿಲ್ಲ. ಬದಲಾಗಿ ಇದು ಮೊದಲ ಸವಾಲುಗಳಿಗೆ ಹೋಲಿಸಿದಲ್ಲಿ ಅತ್ಯಂತ ಸರಳವಾದುದಾಗಿದೆ. ಅತ್ಯಂತ ಸರಳವಾದ ಸವಾಲನ್ನು ಯಾರಿಗೂ ಉತ್ತರಿಸಲೇ ಸಾಧ್ಯವಾಗಿಲ್ಲ ಎಂದ ಮೇಲೆ ಅದಕ್ಕಿಂತ ಕ್ಲಿಷ್ಟಕರವಾಗಿರುವ ಸವಾಲನ್ನು ಉತ್ತರಿಸುವ ಪ್ರಶ್ನೆಯೇ ಉದಯಿಸಲಾರದು ಎಂಬುದು ಸ್ಪಷ್ಟ.
ಉದಾಹರಣೆಗೆ ನಾವೊಂದು ದಡ್ಡ ವಿದ್ಯಾರ್ಥಿಯ ಉದಾಹರಣೆಯನ್ನು ತೆಗೆದುಕೊಳ್ಳೋಣ. ನಾನು ಹೇಳುತ್ತೇನೆ ಅವನಿಗೆ ಹತ್ತನೇ ತರಗತಿಯನ್ನು ಪಾಸಾಗಲು ಸಾಧ್ಯವಿಲ್ಲ. ಆ ಬಳಿಕ ನಾನನ್ನುತ್ತೇನೆ ಅವನಿಗೆ ಐದನೇ ತರಗತಿ ಮಾತ್ರವಲ್ಲ ಕೆ. ಜಿ. ತರಗತಿಯನ್ನೂ ಪಾಸಾಗಲೂ ನಾಲಾಯಕ್ಕು ಎನ್ನುತ್ತೇನೆ. ನನ್ನ ನಾಲ್ಕು ಹೇಳಿಕೆಗಳು ಖಂಡಿತವಾಗಿಯೂ ಪರಸ್ಪರ ವಿರುದ್ಧವಾಗಿಲ್ಲ. ಮಾತ್ರವಲ್ಲದೆ ನನ್ನ ಕೊನೆಯ ಹೇಳಿಕೆಯೇ ಅವನ ಬಿದ್ಧಿಮತ್ತೆಯನ್ನು ಅಳೆಯುವ ಮಾನದಂಡವಾಗಿ ಧಾರಾಳ ಸಾಕು. ಕೆ.ಜಿ. ಅರ್ಥಾತ್ ಶಿಶುವಿಹಾರ ಕೇಂದ್ರದ ತರಗತಿಯನ್ನು ದಾಟಲಾರದವನು ಒಂದನೇ, ಐದನೇ, ಹಾಗೂ ಹತ್ತನೇ ತರಗತಿಯನ್ನು ಪಾಸಾಗುವ ಪ್ರಶ್ನೆಯೇ ಉದ್ಭವಿಸಲಾರದು.
2) ಹಂತ ಹಂತವಾಗಿ ಜಾರಿಗೆ ಬಂದ ಮದ್ಯಪಾನ ನಿಷೇಧ:
ಅನೂರ್ಜಿತಗೊಂಡ ಸೂಕ್ತಿಗಳಿಗೆ ಇನ್ನೊಂದು ಉದಾಹರಣೆಯಾಗಿ ನಾವು ಮದ್ಯಪಾನ ನಿಷೇಧವನ್ನು ಜಾರಿಗೆ ತಂದ ಸೂಕ್ತಿಗಳನ್ನು ತೆಗೆದುಕೊಳ್ಳಬಹುದು. ಮದ್ಯಪಾನಿಗಳನ್ನು ಸಂಬೋಧಿಸುತ್ತಾ ಅವತೀರ್ಣಗೊಂಡ ಮೊತ್ತ ಮೊದಲ ಸೂಕ್ತಿಯು ಖುರ್‌ಆನಿನ ಎರಡನೇ ಅಧ್ಯಾಯದಲ್ಲಿದೆ.
“ಮದ್ಯಪಾನ ಮತ್ತು ಜೂಜಿನ ಬಗ್ಗೆ ಏನು ಆದೇಶವಿದೆಯೆಂದು ನಿನ್ನೊಂದಿಗೆ ಅವರು ಕೇಳುತ್ತಾರೆ. ಹೇಳು : ಅವೆರಡರಲ್ಲೂ ಅತಿ ಘೋರವಾದ ಕೇಡಿದೆ. ಅವುಗಳಲ್ಲಿ ಜನರಿಗೆ ಕೆಲವು ಪ್ರಯೋಜನಗಳಿದ್ದರೂ ಅದರ ಹಾನಿಯು ಪ್ರಯೋಜನಗಳಿಗಿಂತ ಅಧಿಕವಾಗಿದೆ." (ಖುರ್‌ಆನ್ 2:219)
ಆ ಬಳಿಕ ಅವತೀರ್ಣಗೊಂಡ ಸೂಕ್ತಿಯು ಅನ್ನಿಸಾ ಅಧ್ಯಾಯದಲ್ಲಿದೆ. “ಓ ಸತ್ಯ ವಿಶ್ವಾಸಿಗಳೇ ನೀವು ಅಮಲಿನಲ್ಲಿದ್ದಾಗ ನಮಾಜನ್ನು ಸಮೀಪಿಸಬೇಡಿರಿ" (ಖುರ್‌ಆನ್ 4:43)
ಈ ಬಗ್ಗೆ ಅವತೀರ್ಣವಾದ ಕೊನೆಯ ಆದೇಶವು ಐದನೇ ಅಧ್ಯಾಯದಲ್ಲಿದೆ. “ಓ ಸತ್ಯ ವಿಶ್ವಾಸಿಗಳೇ, ಮದ್ಯ, ಜೂಜು, ಅನ್ಸಾದ್ (ಹಲಿಪೀಠಗಳು) ಮತ್ತು ಅಝ್ಲಾಮ್ (ದಾಳಹಾಕುವುದು) ಇವೆಲ್ಲ ಹೊಲಸು ವೈಶಾಚಿಕ ಕೃತ್ಯಗಳಾಗಿವ ಅವುಗಳನ್ನು ವರ್ಜಿಸಿರಿ ನೀವು ವಿಜಯಿಗಳಾಗಲೂ ಬಹುದು. (ಖುರ್‌ಆನ್ 5:90)
ಖುರ್‌ಆನ್ 22 1/2 ವರ್ಷಗಳ ಅವಧಿಯಲ್ಲಿ ಅವತೀರ್ಣಗೊಂಡ ಗ್ರಂಥವಾಗಿದೆ. ಸಮಾಜದಲ್ಲಿ ತಂದ ಅನೇಕ ಸುಧಾರಣಾ ನಿಯಮಗಳನ್ನು ಹಂತ ಹಂತವಾಗಿಯೇ ಜಾರಿಗೊಳಿಸಲಾಗಿದ್ದು, ಇದು ಹೊಸ ನಿಯಮಗಳಿಗೆ ಜನರು ಸುಲಭವಾಗಿ ಒಗ್ಗಿ ಕೊಳ್ಳಲೆಂದಾಗಿತ್ತು. ಅನ್ಯಥಾಃ ಹಠಾತ್ತನೆ ತಂದ ಹೊಸ ನಿಯಮಗಳಿಗೆ ಜನರು ಸಮಾಜದ ವಿರುದ್ಧ ಅಸಮಾಧಾನಗೊಂಡು ಬಂಡಾಯವೇಳುವಂತಹ ಸ್ಥಿತಿಯನ್ನು ಉಂಟುಮಾಡಬಹುದು.
ಮದ್ಯಪಾನ ನಿಷೇಧವನ್ನು ಮೂರು ಹಂತಗಳಲ್ಲಿ ಪೂರ್ತಿಯಾಗಿ ಜಾರಿಗೊಳಿಸಲಾಯಿತು. ಮೊತ್ತ ಮೊದಲ ಸೂಕ್ತಿಯಲ್ಲಿ ಮದ್ಯಪಾನದಲ್ಲಿ ಅಧಿಕ ಪಾಪವೂ ಅಲ್ಪ ಲಾಭವೂ ಇರುವುದಾದರೂ ಅದರ ಪಾಪವು ಲಾಭಕ್ಕಿಂತ ದೊಡ್ಡದಾಗಿದೆ ಎಂದಿತು. ನಂತರ ಅವತಿಇರ್ಣಗೊಂಡ ಸೂಕ್ತಿಯು ಮದ್ಯಸೇವನೆ ಮಾಡಿ ನಮಾಜು ಮಾಡುವುದನ್ನು ನಿಷೇಧಿಸಿತು. ಇದು ಜನರನ್ನು ಹಗಲಿನ ವೇಳೆ ಮದ್ಯಪಾನ ಮಾಡುವುದರಿಂದ ತಡೆಯಿತು‌. ಏಕೆಂದರೆ ದಿನಂಪ್ರತಿ ಐದು ನಮಾಜುಗಳ ಪೈಕಿ ಹೆಚ್ಚಿನವುಗಳನ್ನು ಹಗಲಿನಲ್ಲಿಯೇ ನಿರ್ವಹಿಸಲಾಗುತ್ತದೆ. ಆದರೆ ಈ ಸೂಕ್ತಿಯು ನಮಾಜು ಮಾಡಲ್ಪಡದ ರಾತ್ರಿಯ ವೇಳೆಯಲ್ಲಿ ಮದ್ಯಪಾನವನ್ನು ಕಡ್ಡಾಯವಾಗಿಸುವುದಿಲ್ಲ ಬದಲಾಗಿ ಒಬ್ಬನು ಮಾಡಲೂ ಬಹುದು, ಮಾಡದಿರಲೂ ಬಹುದು ಎಂಬರ್ಥವನ್ನು ನೀಡುತ್ತದೆ. ನಮಾಜ್ ಮಾಡದ ರಾತ್ರಿಯ ವೇಳೆ ಮದ್ಯಪಾನ ಮಾಡಬಹುದು ಎಂಬ ಹೇಳಿಕೆಯು ಖುರ್‌ಆನಿನಲ್ಲಿಲ್ಲ. ಇಂತಹ ಸೂಕ್ತಿಯೊಂದು ಖುರ್‌ಆನಿನಲ್ಲಿರಿತ್ತಿದ್ದರೆ, ಖಂಡಿತವಾಗಿಯೂ ಅದನ್ನೊಂದು ವೈರುಧ್ಯವೆಂದು ಹೆಸರಿಸಬಹುದಿತ್ತು. ಆದರೆ ಅಲ್ಲಾಹನು ಅತ್ಯಂತ ಸೂಕ್ತಪದಗಳನ್ನೇ ಬಳಸಿರುವನು. ಕೊನೆಯದಾಗಿ ಐದನೇ ಅಧ್ಯಾಯದ 90ನೇ ಸೂಕ್ತಿಯ ಅವತೀರ್ಣದೊಂದಿಗೆ ಸಂಪೂರ್ಣ ಪಾನನಿಷೇಧವು ಸಾರ್ವಕಾಲಿಕ ಆದೇಶವಾಗಿ ಜಾರಿಗೆ ಬಂತು‌.
ಈ ಮೂರು ಸೂಕ್ತಿಗಳು ಪರಸ್ಪರ ವಿರುದ್ಧವಾಗಿಲ್ಲ ಎಂಬುದು ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತದೆ. ಅದು ಪರಸ್ಪರ ವಿರುದ್ಧವಾಗಿದೆಯೆಂದಾದಲ್ಲಿ ಆ ಮೂರು ಸೂಕ್ತಿಗಳಲ್ಲಿರುವ ಆದೇಶಗಳನ್ನು ಏಕಕಾಲದಲ್ಲಿ ಅನುಸರಿಸಲು ಅಸಾಧ್ಯವಿತ್ತು. ಒಬ್ಬ ಮುಸ್ಲಿಮನು ಖುರ್‌ಆನಿನ ಪ್ರತಿಯೊಂದು ಆದೇಶವನ್ನು ಅನುಸರಿಸಲು ಬದ್ಧನು. ಪಾನ ನಿಷೇಧದ ಆಜ್ಞೆಗಳ ಪೈಕಿ ಕೊನೆಯದನ್ನು ಅಂದರೆ ಐದನೇ ಅಧ್ಯಾಯ (ಅಲ್ ಮಾಇದಾ)ದ 90ನೇ ಸೂಕ್ತಿಯ ಆದೇಶವನ್ನು ಅನುಸರಿಸುವ, ಪಾಲಿಸುವ, ಅದೇ ಸಮಯದಲ್ಲಿ ಅವನು ಅದರ ಹಿಂದಿನ ಎರಡು ಸೂಕ್ತಿಗಳಲ್ಲಿರುವ ಆದೇಶವನ್ನೂ ಪಾಲಿಸುತ್ತಿರುವನು.
ಉದಾಹರಣೆಗೆ ನಾನು ಮಂಗಳೂರಿನಲ್ಲಿ ವಾಸಿಸುತ್ತಿಲ್ಲ ಎಂದು ಹೇಳಿದ ಬಳಿಕ ನಾನು ಕರ್ನಾಟಕದಲ್ಲೂ ವಾಸಿಸುತ್ತಿಲ್ಲ ಎನ್ನುವೆನು ಮತ್ತು ಕಟ್ಟಕಡೆಗೆ ನಾನು ಭಾರತದೇಶದಲ್ಲೇ ವಾಸಿಸುತ್ತಿಲ್ಲ ಎಂದು ಹೇಳಿ ಬಿಟ್ಟರೆ ಈ ಮೂರು ಹೇಳಿಕೆಗಳನ್ನು ಪರಸ್ಪರ ವಿರುದ್ಧವಾಗಿದೆಯೆನ್ನಲು ಅಸಾಧ್ಯ. ಪ್ರತಿಯೊಂದು ಹೇಳಿಕೆಯೂ ಅದರ ಪೂರ್ವ ಹೇಳಿಕೆಗಿಂತ ಅತ್ಯಂತ ಹೆಚ್ಚು ಮತ್ತು ಸ್ಪಷ್ಟವಾದ ಮಾಹಿತಿಯನ್ನು ಒದಗಿಸಿಕೊಡುತ್ತದೆ. ಕೊನೆಯ ಹೇಳಿಕೆಯು ಮೊದಲೆರಡು ಹೇಳಿಕೆಗಳಲ್ಲಿರುವ ಎಲ್ಲಾ ಮಾಹಿತಿಗಳನ್ನೂ ಹೊಂದುವ ಮೂಲಕ ಸಂಪೂರ್ಣವೆನಿಸಿಕೊಳ್ಳುತ್ತದೆ.
ನಾನು ಅಮೆರಿಕದಲ್ಲಿ ವಾಸಿಸುತ್ತಿಲ್ಲವೆಂಬ (ಒಂದೇ) ಹೇಳಿಕೆಯು ನಾನು ಕ್ಯಾಲಿಫ಼ೋರ್ನಿಯಾದಲ್ಲಾಗಲೀ, ಲಾಸ್‌ಏಂಜಲೀಸ್‌ನಲ್ಲಾಗಲೀ ವಾಸಿಸುತ್ತಿಲ್ಲವೆಂಬುದನ್ನು ಒಂದೇ ವಾಕ್ಯದಲ್ಲಿ ತಿಳಿಸಿಕೊಡುತ್ತದೆ‌. ಇದೇ ರೀತಿ ಸಂಪೂರ್ಣ ಪಾನ ನಿಷೇಧದ ಸೂಕ್ತಿಯು ನಮಾಜಿನ (ಪ್ರಾರ್ಥನೆಯ) ಸಮಯದಲ್ಲಾಗಲೀ, ಇನ್ನಿತರ ವೇಳೆಯಲ್ಲಾಗಲೀ ಮದ್ಯಪಾನವು ಸಲ್ಲ ಎಂಬ ಅರ್ಥವನ್ನೇ ಕೊಡುತ್ತದೆ ಮತ್ತು ಮದ್ಯಪಾನದಲ್ಲಿ ಕೇಡು ಅಧಿಕ ಮತ್ತು ಪ್ರಯೋಜನವು ಅತ್ಯಲ್ಪ ಆದರೆ ಪ್ರಯೋಜನಕ್ಕಿಂತ ಕೇಡು ಅತ್ಯಧಿಕ ಎಂಬ ಸೂಕ್ತಿಯು ಕೂಡಾ ಅರ್ಥಪೂರ್ಣ ಹೇಳಿಕೆ ಎನಿಸಿಕೊಳ್ಳುತ್ತದೆ.
ಸೂಕ್ತಿಗಳ ಅನೂರ್ಜಿತಗೊಳಿಸುವಿಕೆ ಎಂಬ ನಿಯಮವು ಖುರ್‌ಆನಿಲ್ಲಿ ವೈರುಧ್ಯಗಳಿವೆ. ಎಂದು ವಾದಿಸಲು ಪರ್ಯಾಪ್ತವಾಗಲಾರದು. ಏಕೆಂದರೆ ಖುರ್‌ಆನಿನ ಈ ಆದೇಶಗಳು ಪರಸ್ಪರ ಪೂರಕವಾಗಿದ್ದು ಇವುಗಳನ್ನೆಲ್ಲಾ ಏಕಕಾಲದಲ್ಲಿ ಅನುಸರಿಸಲು ಅಸಾಧ್ಯವೇನಲ್ಲ‌. ಖುರ್‌ಆನಿನಲ್ಲಿ ಕೇವಲ ಒಂದೇ ಒಂದು ವೈರುಧ್ಯವಿದ್ದಿದ್ದರೂ ಅದು ಅಲ್ಲಾಹನ ವಾಣಿ ಎನಿಸಿಕೊಳ್ಳಲು ಅನರ್ಹಗೊಳ್ಳುತ್ತಿತ್ತು.
ಅವರು ಈ ಖುರ್‌ಆನಿನ ಬಗ್ಗೆ ಚಿಂತಿಸುವುದಿಲ್ಲವೇ? ಒಂದು ವೇಳೆ ಅದು ಅಲ್ಲಾಹನ ಹೊರತು ಇತರರಿಂದಾಗಿರುತ್ತಿದ್ದರೆ ಅವರದರಲ್ಲಿ ಅನೇಕಾನೇಕ ವೈರುಧ್ಯಗಳನ್ನು ದರ್ಶಿಸುತ್ತಿದ್ದರು. (ಖುರ್‌ಆನ್ 4:82)


ಉತ್ತರ 1. ಸಂಕ್ಷೇಪಿತ ಅಕ್ಷರಗಳು : ಅಲಿಫ್, ಲಾಮ್ , ಮೀಮ್ , ಯಾಸೀನ್,‌ಹಾಮ್ಮೀಮ್ ಮುಂತಾದವುಗಳನ್ನು ‘ಅಲ್ ಮುಖತ್ತ ಅತ್' ಅರ್ಥಾತ್ ಸಂಕ್ಷೇಪಿತ ಬಿಡಿ ಅಕ್ಷರಗಳು ಎನ್ನುತ್ತಾರೆ. ಅರೇಬಿಕ್ ಅಕ್ಷರಮಾಲೆಯಲ್ಲಿ ಇಪ್ಪತ್ತೊಂಬತ್ತು ಅಕ್ಷರಗಳಿವೆ (ಹಂಝ ಮತ್ತು ಅಲಿಫ್‌ಗಳನ್ನು ವಿಭಿನ ಅಕ್ಷರಗಳೆಂದು ಪರಿಗಣಿಸಿದಲ್ಲಿ ಮಾತ್ರ). ಖುರ್‌ಆನಿನ ಅಧ್ಯಾಯಗಳ ಪೈಕಿ ಇಪ್ಪತ್ತೊಂಬತ್ತು ಅಧ್ಯಾಯಗಳು ಇಂತಹ ಮುಖತ್ತ‌ಅತ್‌ಗಳಿಂದ ಆರಂಭಗೊಳ್ಳುತ್ತವೆ. ಇಂತಹ ಸಂಕ್ಷೇಪಿತ ಅಕ್ಷರಗಳು ಕೆಲವೊಮ್ಮೆ ಬಂದರೆ ಇನ್ನು ಕೆಲವು ಅಧ್ಯಾಯಗಳಲ್ಲಿ ಅವುಗಳು ಎರಡು, ಮೂರು, ಅಥವಾ ಹೆಚ್ಚು ಅಕ್ಷರಗಳ ಸಂಯೋಜನೆಯಾಗಿರುತ್ತವೆ.

a. ಒಂದು ಅಕ್ಷರದಿಂದ ಆರಂಭಗೊಳ್ಳುವ ಅಧ್ಯಾಯಗಳ ಸಂಖ್ಯೆ ಮೂರು
1. 38ನೇ ಅಧ್ಯಾಯ ಸ್ವಾದ್
2. 50ನೇ ಅಧ್ಯಾಯ ಖಾಫ್
3. 68ನೇ ಅಧ್ಯಾಯ ನೂ‌ನ್
b. ಹಾಮ್ಮೀಮ್ ಎಂಬ ಜೋಡಿ ಅಕ್ಷರಗಳಿಂದ ಆರಂಭಗೊಳ್ಳುವ ಅಧ್ಯಾಯಗಳು ಕ್ರಮಾನುಸಾರವಾಗಿ 40ನೇ ಅಧ್ಯಾಯದಿಂದ 46ನೇ ಅಧ್ಯಾಯದ ವರೆಗಿನ ಏಳು ಅಧ್ಯಾಯಗಳು
1. ಅಧ್ಯಾಯ 40 ಘಾಫಿರ್ ಅಥವಾ ಅಲ್ ಮುಅ‌್‌ಮಿನ್
2. ಅಧ್ಯಾಯ 41 ಫುಸ್ಸಿಲತ್ ಅಥವಾ ಹಾಮ್ಮೀಮ್ ಸಜ್ದಾ
3. ಅಧ್ಯಾಯ 42 ಅಶ್ಯೂರಾ
4. ಅಧ್ಯಾಯ 43 ಝುಖ್‌ರುಫ್
5. ಅಧ್ಯಾಯ 44 ದುಖಾನ್
6. ಅಧ್ಯಾಯ 45 ಜಾಸಿಯ
7. ಅಧ್ಯಾಯ 46 ಅಹ್‌ಕಾಫ್

c. ಸಂಯೋಜನೆಗೊಂಡ ಮೂರು ಅಕ್ಷರಗಳಿಂದ ಆರಂಭವಾಗುವ ಅಧ್ಯಾಯಗಳ ಸಂಖ್ಯೆ ಹದಿಮೂರು.
ಅಲಿಫ್ ಲಾಮೀಮ್‌ಗಳಿಂದ ಆರು ಅಧ್ಯಾಯಗಳು ಆರಂಭಗೊಳ್ಳುತ್ತದೆ.
1. ಅಧ್ಯಾಯ 2 ಅಲ್ ಬಕರ್
2. ಅಧ್ಯಾಯ 3 ಆಲಿ ಇಮ್ರಾನ್
3. ಅಧ್ಯಾಯ 29 ಅಲ್ ಅನ್‌ಕಬೂತ್
4. ಅಧ್ಯಾಯ 30 ಅರ್ರೂಮ್
5. ಅಧ್ಯಾಯ 31 ಲುಕ್‌ಮಾನ್
6. ಅಧ್ಯಾಯ 32 ಅಸ್ಸಜದಃ
ಅಲಿಫ್ ಲಾಮ್ ರಾ ಗಳಿಂದ ಐದು ಅಧ್ಯಾಯಗಳು ಕ್ರಮಾನುಗತವಾಗಿ ಆರಂಭಗೊಳ್ಳುತ್ತದೆ.
1. ಅಧ್ಯಾಯ 10 ಯೂನುಸ್
2. ಅಧ್ಯಾಯ 11 ಹೂದ್
3. ಅಧ್ಯಾಯ 12 ಯೂಸುಫ್
4. ಅಧ್ಯಾಯ 14 ಇಬ್ರಾಹಿಂ
5. ಅಧ್ಯಾಯ 15 ಅಲ್ ಹಿಜ‌್‌ರ್
ತಾ ಸೀನ್ ಮೀಮ್‌ಗಳಿಂದ ಎರಡು ಅಧ್ಯಾಯಗಳು ಆರಂಭಗೊಳ್ಳುತ್ತವೆ.
1. ಅಧ್ಯಾಯ 26ಅಶ್ಶುಅರಾ
2. ಅಧ್ಯಾಯ 28 ಅಲ್- ಖಸಸ್

d. ನಾಲ್ಕು ಅಕ್ಷರಗಳ ಸಂಯೋಜನೆಯಿಂದ ಆರಂಭಗೊಳ್ಳುವ ಅಧ್ಯಾಯಗಳ ಸಂಖ್ಯೆ ಎರಡು
1. ಅಧ್ಯಾಯ 7 ಅಅ್‌ರಾಫ್ ಅಲಿಫ್ ಲಾಮ್ ಮೀಮ್ ಸ್ವಾದ್
2. ಅಧ್ಯಾಯ 13 ಅರ್ರ‌ಅದ್ ಅಲಿಫ್ ಲಾಮ್ ಮೀಮ್ ರಾ
e. ಐದು ಅಕ್ಷರಗಳ ಸಂಯೋಜನೆಯಿಂದ ಆರಂಭಗೊಳ್ಳುವ ಅಧ್ಯಾಯಗಳು ಎರಡು
1. ಅಧ್ಯಾಯ 19 ಮರ್ಯಮ್ ಖಾಫ್, ಹಾ, ಯಾ, ಐನ್, ಸಾದ್
2. ಅಧ್ಯಾಯ 42 ಅಶ್ಶರಾ, ಹಾ , ಮೀಮ್, ಐನ್ , ಸೀನ್ , ಖಾಫ್
42ನೇ ಅಧ್ಯಾಯವು ಆರಂಭಗೊಳ್ಳುವುದು ಹಾಮೀಮ್ ಎಂಬ ಜೋಡಿ ಅಕ್ಷರಗಳಿಂದಾದರೂ ಇದರ ಬಳಿಕ ಐನ್ , ಸೀನ್, ಖಾಫ್ ಎಂಬ ಮೂರು ಅಕ್ಷರಗಳ ಸಂಯೋಜನೆಯಿದೆ.

2. ಸಂಯೋಜನೆಗೊಂಡ ಬಿಡಿ ಅಕ್ಷರಗಳ ಅರ್ಥ :
ಹೆಚ್ಚಿನ ವ್ಯಾಖ್ಯಾನಕಾರರೆಲ್ಲರೂ ಈ ಬಿಡಿ ಅಕ್ಷರಗಳನ್ನು ವ್ಯಾಖ್ಯಾನಿಸುವ ಗೋಜಿಗೆ ಹೋಗದೆ ಇದರ ಸರಿಯಾದ ಅರ್ಥವನ್ನು ಅಲ್ಲಾಹನೇ ಬಲ್ಲ ಎಂದಿರುವರು. ಆದರೂ ಕೆಲವು ವ್ಯಾಖ್ಯಾನಕಾರರು ತಮ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಇವುಗಳನ್ನು ವ್ಯಾಖ್ಯಾನಿಸುವ ಯತ್ನವನ್ನು ಮಾಡಿರುವರು. ಉದಾಹರಣೆಗೆ ಅಲಿಫ್ ಲಾಮ್ ಮೀಮ್ ಅಂದರೆ ಅನ ಅಲ್ಲಾಹು ಅಅಲಮ್ ಎಂತಲೂ ಅಥವಾ ನೂನ್ ಎಂದರೆ ನೂರ್ (ಬೆಳಕು) ಎಂತಲೂ ವ್ಯಾಖ್ಯಾನಿಸಿರುವರು. ಇನ್ನು ಕೆಲವರು ಅಂತಹ ಅಕ್ಷರಗಳನ್ನು ಆರಂಭದಲ್ಲಿ ಇರಿಸುವುದು ಅರಬೀ ಸಾಹಿತ್ಯದ ಒಂದು ಶೈಲಿ ಎಂದಿರುವರು. ಪ್ರವಾದಿ (ಸ) ರ ಗಮನವನ್ನು ಸೆಳೆಯುವ ಸಲುವಾಗಿ ಮತ್ತು ಆ ಬಳಿಕ ಶ್ರೋತೃಗಳ ಗಮನವನ್ನು ಸೆಳೆಯುವ ಸಲುವಾಗಿ ಇಂತಹ ಬಿಡಿ ಅಕ್ಷರಗಳ ಸಮೂಹವನ್ನು ಇರಿಸಲಾಗಿದೆ ಎಂಬುದು ಇನ್ನು ಕೆಲವು ವ್ಯಾಖ್ಯಾನಕಾರರ ಅಭಿಪ್ರಾಯ.
ಹೀಗೆ ಈ ಬಗ್ಗೆ ಬರೆಯಲು ಹಲವು ಪುಟಗಳನ್ನೇ ಬಳಸಲಾಗಿದೆ. ಆದರೆ ಇವುಗಳ ಜೊತೆಗೆ ಕೆಲವು ಉತ್ತಮವೆನ್ನಬಹುದಾದ ವ್ಯಾಖ್ಯಾನಗಳೂ ಇವೆ. ಅವುಗಳಲ್ಲಿ ಅಧಿಕೃತವೆನ್ನಬಹುದಾದ ಹಾಗುಹ ಇಬ್‌ನು ಕಸೀರ್, ಝಮಕ್ಷರಿ, ಇಬ್‌ನು ತೈಮಿಯ್ಯ ಮುಂತಾದವರಿಂದ ಅಂಗೀಕರಿಸಲ್ಪಟ್ಟ ಒಂದು ವ್ಯಾಖ್ಯಾನವು ಈ ಕೆಳಗಿನಂತಿದೆ.

3. ಬಿಡಿ ಅಕ್ಷರಗಳ ಬಗ್ಗೆ ಉತ್ತಮವೆನ್ನಬಹುದಾದ ಒಂದು ವ್ಯಾಖ್ಯಾನ :
ಮನುಷ್ಯ ಶರೀರವು ವಿಧದ ಮೂಲ ವಸ್ತುಗಳ ಸಂಯೋಜನೆಯಾಗಿದೆ. ಮಣ್ಣು ಅಥವಾ ಮಣ್ಣಿನ ಗಾರೆಯಲ್ಲಿರುವುದು ಇವೇ ಮೂಲ ವಸ್ತುಗಳಾಗಿವೆ. ಆದರೂ ಮಣ್ಣು ಮತ್ತು ಮಾನವ ಶರೀರದ ಮಧ್ಯೆ ಅಜಗಜಾಂತರ ವ್ಯತ್ಯಾಸವಿದೆ. ಮಾನವನನ್ನು ಮಣ್ಣಿಗೆ ಸಮಾನವಾಗಿಸುವುದು ಅಥವಾ ಮಣ್ಣು ಮತ್ತು ಮಾನವ ಒಂದೇ ಎನ್ನುವುದು ಒಂದು ಅತ್ಯಂತ ಅಸಂಬದ್ಧ ಮಾತಾಗಿದೆ.

ಮನುಷ್ಯ ಶರೀರದಲ್ಲಿರುವ ಪದಾರ್ಥಗಳೆಲ್ಲವೂ ಸುಲಭವಾಗಿ ಲಭ್ಯವಿದ್ದು, ಅವುಗಳಿಗೆ ಮಾನವ ಶರೀರದ ಅಧಿಕ ಭಾಗವನ್ನು ಆಕ್ರಮಿಸಿಕೊಂಡಿರುವ ನೀರು ಎಂಬ ದ್ರವವನ್ನು ಒಂದೋ ಎರಡೋ ಬಕೆಟುಗಳಷ್ಟು ಸುರಿದು ಬಿಡಲೂ ಸಾಧ್ಯವಿದೆ. ವಾಸ್ತವಿಕತೆಯು ಇಷ್ಟು ಸರಳವಾಗಿದ್ದರೂ ಮನುಷ್ಯನ ಬಳಿ ಜೀವೋತ್ಪತ್ತಿಯ ರಹಸ್ಯದ ಬಗ್ಗೆ ಪ್ರಶ್ನಿಸಿದಲ್ಲಿ ಅವನು ಉತ್ತರಿಸಲಾರ. ಈ ಬಗ್ಗೆ ಅವನೇನೂ ಅರಿಯಲಾರ. ಸುಲಭವಾಗಿ ಲಭ್ಯವಿರುವ ಕಚ್ಛಾವಸ್ತುಗಳೆನ್ನೆಲ್ಲಾ ಬಳಸಿ ಮಾನವ ಶರೀರವೊಂದನ್ನು ನಿರ್ಮಿಸುವುದು ಅವನಿಗೆ ಅಸಾಧ್ಯ.

ಇದೇ ರೀತಿ ಖುರ್‌ಆನ್ ತನ್ನ ದೈವಿಕ ಮೂಲವನ್ನು ನಿರಾಕರಿಸುವ ಜನರನ್ನು ಅಭಿಸಂಬೋಧಿಸುತ್ತದೆ‌‌. ಅದು ಅವರೊಂದಿಗೆ ಅವರು ಹೆಮ್ಮೆ ಪಡುತ್ತಿದ್ದ, ಗರ್ವಪಡುತ್ತಿದ್ದ , ತಮ್ಮ ಭಾವನೆಗಳನ್ನು , ಅಭಿವ್ಯಕ್ತಿಯನ್ನು ನಿರರ್ಗಳವಾಗಿ ವ್ಯಕ್ತಪಡಿಸುತ್ತಿದ್ದ ಅವರದೇ ಭಾಷೆಯಲ್ಲಿ ಮಾತನಾಡುತ್ತದೆ. ಅದು ಅವರು ಅತ್ಯಂತ ನಿರರ್ಗಳವಾಗಿ ಮಾತನಾಡಲು ಬಳಸುತ್ತಿದ್ದ ಬಳಸುತ್ತಿದ್ದ ಭಾಷೆಯ ಅದೇ ಅರೇಬಿಕ್ ಬಿಡಿ ಅಕ್ಷರಗಳನ್ನೇ ಬಳಸಿಕೊಂಡಿದೆ.

ಖುರ್‌ಆನ್ ಅವತೀರ್ಣಗೊಂಡಾಗ ಅರಬೀ ಜನರು ತಮ್ಮ ಆಡುಭಾಷೆಯ ಬಗ್ಗೆ ಬಹಳ ಹೆಮ್ಮೆಪಟ್ಟು ಕೊಂಡಿದ್ದರು ಮತ್ತು ಅದು ಅರಬೀ ಸಾಹಿತ್ಯವು ತನ್ನ ಅತ್ಯಂತ ಉತ್ತುಂಗತೆಯ ಸ್ಥಾನವನ್ನು ತಲುಪಿದ ಕಾಲವಾಗಿತ್ತು. ಅಲಿಫ್, ಲಾಮ್, ಮೀಮ್, ಯಾ, ಸೀನ್, ಹಾ, ಸೀನ್ ಮುಂತಾದ (ಆಂಗ್ಲ ಭಾಷೆಯಲ್ಲಿ ಎ. ಬಿ. ಸಿ. ಡಿ ಇರುವಂತೆ ಮತ್ತು ಕನ್ನಡದಲ್ಲಿ ಅ, ಆ, ಇ, ಈ..............ಇರುವಂತೆ) ಬಿಡಿ ಅಕ್ಷರಗಳನ್ನೇ ಬಳಸಿಕೊಂಡು ಖುರ್‌ಆನ್ ಅರಬೀ ಸಮುದಾಯ ಮಾತ್ರವಲ್ಲದೆ ಇಡೀ ಮಾನವ ಸಮುದಾಯದೊಂದಿಗೆ ಒಂದು ಸವಾಲನ್ನೆಸೆಯುತ್ತದೆ. ನೀವು ನಿರರ್ಗಳವಾಗಿ ಮಾತನಾಡುತ್ತಿರುವ, ನೀವು ಹೆಮ್ಮೆಪಟ್ಟುಕೊಳ್ಳುತ್ತಿರುವ ಅದೇ ಭಾಷೆಯ ಅದೇ ಬಿಡಿ ಅಕ್ಷರಗಳನ್ನು ಬಳಸಿಕೊಂಡು ಈ ಖುರ್‌ಆನ್ ರೂಪುಗೊಂಡಿದೆ. ಈ ಖುರ್‌ಆನ್ ದೈವಿಕವಲ್ಲವೆಂಬ ವಾದವು ನಿಮ್ಮದಾದರೆ ಅವೇ ಬಿಡಿ ಅಕ್ಷರಗಳನ್ನು ಬಳಸಿಕೊಂಡು ಸಾಜಿತ್ಯ ಮತ್ತು ಸೌಂದರ್ಯ ಹಾಗೂ ವಾಗಾಡಂಬರದಲ್ಲಿ ಇದನ್ನು ಅಲ್ಪ ಮಟ್ಟಿಗಾದರೂ ಹೋಲುವ ಒಂದು ಅಧ್ಯಾಯವನ್ನಾದರೂ ರಚಿಸಿ ತನ್ನಿರಿ.

ಆರಂಭದಲ್ಲಿ ಖುರ್‌ಆನ್ ಎಲ್ಲಾ ಮನುಷ್ಯ ಹಾಗೂ ಜಿ‌ನ್ನ್‌ಗಳನ್ನು ಅಭಿಸಂಬೋಧಿಸಿಕೊಂಡು ಇದರಂತಿರುವ ಒಂದು ಖುರ್‌ಆನ್ (ಪಠಿಸಲ್ಪಡುವಂತಹದ್ದು) ಅನ್ನು ರಚಿಸಿ ತರಲು ಹೇಳಿತು ಮತ್ತು ನೀವೆಲ್ಲರೂ ಒಬ್ಬರಿಗೊಬ್ಬರು ಸಹಾಯಿಗಳಾದರೂ ನಿಮ್ಮಿಂದ ಆ ಕಾರ್ಯ ಅಸಾಧ್ಯ ಎಂದಿತು. (ಅಧ್ಯಾಯ 17:88, ಅಧ್ಯಾಯ 52:34)

ಅ ಬಳಿಕ 10ನೇ ಅಧ್ಯಾಯದ 38ನೇ ಸೂಕ್ತಿಯಲ್ಲಿ ಕೇವಲ ಒಂದು ಅಧ್ಯಾಯವನ್ನಾದರೂ ತನ್ನಿರಿ ಎಂದು ಹೇಳಿ ಕಟ್ಟಕಡೆಗೆ ಅದೇ ಸವಾಲನ್ನು ಅತ್ಯಂತ ಸರಳವಾಗಿಸಿಕೊಂಡು ಅಂತಿಮ ದಿನದವರೆಗಿನ ಎಲ್ಲಾ ಮಾನವರ, ಜಿನ್ನ್‌ಗಳ ಮುಂದೆ ಇಟ್ಟಿದೆ. ಎರಡನೇ ಅಧ್ಯಾಯದ 23, 24ನೇ ಸೂಕ್ತಿಗಳಾಗಿ ಅದು ಹೀಗಿದೆ : “ಮತ್ತು ನಾವು ನಮ್ಮ ದಾಸನಿಗೆ ಅವತೀರ್ಣಗೊಳಿಸಿದವುಗಳ ಬಗ್ಗೆ ನಿಮಗೇನಾದರೂ ಸಂದೇಹಗಳಿದ್ದಲ್ಲಿ ಇದರಂತಿರುವ ಒಂದು ಅಧ್ಯಾಯವನ್ನಾದರೂ ರಚಿಸಿ ತನ್ನಿರಿ. ಅಲ್ಲಾಹನ ಹೊರತಾದ ನಿಮ್ಮೆಲ್ಲ ಸಹಾಯಿಗಳನ್ನು (ಸಾಕ್ಷಿಗಳಾಗಿ) ಆಹ್ವಾನಿಸಿರಿ. ನಿಮಗದು (ಈಗ) ಸಾಧ್ಯವಿಲ್ಲ (ವೆಂದಾದಲ್ಲಿ) ಮತ್ತು (ಎಂದೆಂದಿಗೂ) ನಿಮಗದು ಸಾಧ್ಯವಿಲ್ಲ. ಹಾಗಾದರೆ ನೀವು ಮಾನವರನ್ನು ಮತ್ತು ಶಿಲೆಗಳನ್ನು ಇಂಧನವನ್ನಾಗಿಸಿ ಉರಿಸಲ್ಪಡುವ ಆ ಘೋರ ಅಗ್ನಿಯನ್ನು ಭಯ ಪಡಿರಿ".

ಇಬ್ಬರು ಶಿಲ್ಪಿಗಳ ನೈಪುಣ್ಯತೆಯನ್ನು ತುಲನೆ ಮಾಡಬೇಕಿದ್ದಲ್ಲಿ, ಅವರಿಬ್ಬರಿಗೂ ಒಂದೇ ದರ್ಜೆಯ ಕಚ್ಚಾವಸ್ತುಗಳನ್ನು ಒದಗಿಸಿ ಕೊಡಲಾಗುತ್ತದೆ. ಅವರಿಬ್ಬರಿಗೂ ಒಂದೇ ರೀತಿಯ ಕಾರ್ಯವನ್ನು ವಹಿಸಿಕೊಟ್ಟು ಅವರ ಕಾರ್ಯನಿರ್ವಾಹಣೆಯ ಮೌಲ್ಯ ಮಾಪನವನ್ನು ಮಾಡಲಾಗುತ್ತದೆ. ಹೀಗೆ ಅವರು ದರ್ಜಿಯಾಗಿದ್ದಲ್ಲಿ ಅವರಿಬ್ಬರಿಗೂ ಒದಗಿಸಿಕೊಡುವ ಬಟ್ಟೆ ಮತ್ತು ನೂಲು ಒಂದೇ ದರ್ಜೆಯದಾಗಿರುತ್ತದೆ. ಅರಬೀ ಭಾಷೆಯ ಮೂಲ ಪದಾರ್ಥಗಳು ಅಲಿಫ್, ಲಾಮ್, ಮೀಮ್......ಮುಂತಾದವುಗಳಾಗಿವೆ. ಖುರ್‌ಆನಿನ ಭಾಷೆಯ ಅದ್ಬುತ ದೃಷ್ಟಾಂತವು ಅದು ಕೇವಲ ಅಲ್ಲಾಹನ ವಾಣಿಯಾಗಿದೆ ಎಂಬ ಅಂಶದಲ್ಲಿ ಮಾತ್ರ ಇರುವುದಲ್ಲ. ಬದಲಾಗಿ ಯಾವ ಭಾಷೆಯನ್ನು , ಅದರ ಅಕ್ಷರಗಳನ್ನು ಅರಬರು ತಮ್ಮದೆಂದು ಎದೆತಟ್ಟಿಕೊಂಡು ಹೆಮ್ಮೆಪಡುತ್ತಿದ್ದರೋ ಅದೇ ಅಕ್ಷರಗಳ ಮೂಲಕ ಖುರ್‌ಆನ್ ರೂಪುಗೊಂಡಿದೆ. ಆದರೂ ಅದಕ್ಕೊಂದು ಪ್ರತಿಸ್ಪರ್ಧಿಯನ್ನು ಉಂಟುಮಾಡಲು ಅರಬ್ ಜನತೆಗೆ ಸಾಧ್ಯವಾಗಿಲ್ಲ ಎಂಬ ವಾಸ್ತವಿಕತೆಯನ್ನು ಅದು ಜನರ ಮುಂದಿಡುತ್ತದೆ.

ಅರಬರು ಭಾಷಾ ನೈಪುಣ್ಯತೆ, ವಾಗ್ವೈಖರಿ ಮತ್ತು ಭಾವನೆಗಳನ್ನು ಅರ್ಥಪೂರ್ಣವಾಗಿ ವ್ಯಕ್ತಿಪಡಿಸುವ ತಮ್ಮ ಶೈಲಿಗೆ ಪ್ರಸಿದ್ಧರಾಗಿದ್ದರು. ಮಾನವ ಶರೀರವು ರೂಪುಗೊಂಡ ಎಲ್ಲಾ ಮೂಲವಸ್ತುಗಳು ಅವನಿಗೆ ಪರಿಚಿತ ಹಾಗೂ ಲಭ್ಯವಿರುವವುಗಳೇ ಆಗಿವೆ. ಆದರೂ ಮಾನವನಿಗೆ ಮಾನವ ಶರೀರವನ್ನೂ, ಜೀವವನ್ನೂ ಸೃಷ್ಟಿಸುವ ಕಾರ್ಯವು ಸಾಧ್ಯವಾಗಿಲ್ಲ. ಇದೇ ರೀತಿ, ಖುರ್‌ಆನ್ ರೂಪುಗೊಳ್ಳಲು ಸಹಾಯಕವಾದ ಅಕ್ಷರಗಳೆಲ್ಲವೂ ಅರಬೀ ಜನರಿಗೆ ಚಿರಪರಿಚಿತವಾದವುಗಳೇ ಆಗಿದ್ದರೂ ಅವರಿಗೆ ಅಂತಹದೊಂದು ಗ್ರಂಥ ಅಥವಾ ಅದನ್ನು ಅಲ್ಪಮಟ್ಟಿಗಾದರೂ ಹೋಲುವಂತಹ ಚಿಕ್ಕದೊಂದು ಅಧ್ಯಾಯವನ್ನು ಸಹಾ ರಚಿಸಿ ತರಲು ಸಾಧ್ಯವಾಗಿಲ್ಲ.

ಹೀಗೆ ಖುರ್‌ಆನ್ ತನ್ನ ದೈವಿಕ ಮೂಲವನ್ನು ಸಾಬೀತುಪಡಿಸುತ್ತದೆ.

ಉತ್ತರ 1. ಭೂಮಿಯನ್ನು ಹಾಸನ್ನಾಗಿ ಮಾಡಿರುವುದು :
“ಮತ್ತು ನಿಮಗಾಗಿ ಅಲ್ಲಾಹನು ಭೂಮಿಯನ್ನು ಹಾಸನ್ನಾಗಿ ಮಾಡಿರುವನು"
ಆದರೆ ಖುರ್‌ಆನಿನ ಈ ಸೂಕ್ತಿಯು ಹೇಳಲಿರುವ ವಿಷಯವಿನ್ನೂ ಪೂರ್ತಿಯಾಗಿಲ್ಲ. ವಿಷಯವನ್ನು ಮುಂದುವರಿಸಿಕೊಂಡು ಖುರ್‌ಆನ್ ತನ್ನ ಮುಂದಿನ ಸೂಕ್ತಿಯಲ್ಲಿ ಹೇಳುತ್ತದೆ. “ನೀವು ಇದರ ವಿಶಾಲ ಮಾರ್ಗಗಳಲ್ಲಿ ನಡೆಯುವಂತಾಗಲೆಂದು" (ಖುರ್‌ಆನ್ 71:20 )
ಇದೇ ಸಂದೇಶವು 20ನೇ ಅಧ್ಯಾಯ (ತಾಹಾ) ದಲ್ಲಿ ಆವರ್ತಿಸಲ್ಪಟ್ಟಿದೆ :
ನಿಮಗಾಗಿ ಭೂಮಿಯನ್ನು ಹಾಸಿದವನೂ, ಅದರಲ್ಲಿ ನಿಮಗೆ ಸಂಚರಿಸಲೆಂದು ದಾರಿಗಳನ್ನು ಮಾಡಿದವನೂ ಅವನೇ ಆಗಿರುವನು" (ಖುರ್‌ಆನ್ 20:53)
“ಭೂಮಿಯ ಮೇಲ್ಪದರ (crust)ವು ಇನ್ನಿತರ ಪದರಗಳಿಗೆ ಹೋಲಿಸಿದರೆ ಅತ್ಯಂತ ತೆಳುವಾಗಿದೆ. ಅರ್ಥಾತ್ ಭೂಮಿಯ ತ್ರಿಜ್ಯವು 3750 ಮೈಲುಗಳಾಗಿದ್ದರೆ ಮೇಲ್ಪದರವು ಕೇವಲ ಮೂವತ್ತು ಮೈಲುಗಳಷ್ಟು ಮಾತ್ರವೇ ಇದೆ. ಭೂಮಿಯ ಆಳ ಪದರಗಳು ಅತ್ಯಂತ ಉಷ್ಣತೆಯಿಂದ ಕೂಡಿದ್ದು ವಾಸಯೋಗ್ಯವಲ್ಲ. ನಾವು ವಾಸಿಸುತ್ತಿರುವ ಮೇಲ್ಪದರವು ಗಟ್ಟಿಯಾದ ಚಿಪ್ಪಾಗಿದೆ. ಖುರ್‌ಆನ್ ಇದನ್ನೇ ಹಾಸು ಎಂದು ಕರೆದಿದೆ ಮತ್ತು ಇದರ ಹಾದಿಗಳ ಮೂಲಕ ನಾವು ಸುಲಭವಾಗಿ ಸಂಚರಿಸಬಹುದಾಗಿದೆ ಎಂದಿದೆ.
2. ಸಂಪೂರ್ಣವಾಗಿ ಚಪ್ಪಟೆಯಲ್ಲದವುಗಳ ಮೇಲೂ ಹಾಸನ್ನು ಹಾಸಬಹುದು :
ಭೂಮಿಯು ಚಪ್ಪಟೆಯಾಗಿದೆ ಎನ್ನುವ ಒಂದೇ ಒಂದು ಸೂಕ್ತಿಯು ಕೂಡಾ ಖುರ್‌ಆನಿನಲ್ಲಿಲ್ಲ. ಅದು ಭೂಮಿಯ ಮೇಲ್ಪದರವನ್ನು ಹಾಸಿನೊಂದಿಗೆ (carpet) ಹೋಲಿಸಿದೆ ಮಾತ್ರ. ಕೆಲವು ಜನರು ಹಾಸನ್ನು ಚಪ್ಪಟೆ ಆಕೃತಿಗಳ ಮೇಲೆ ಮಾತ್ರ ಹೊದಿಸಲು ಸಾಧ್ಯ ಎಂದು ಭಾವಿಸಿಕೊಂಡಿರುವರು‌. ಆದರೆ ವಾಸ್ತವದಲ್ಲಿ ಭೂಮಿಯಂತಹ ಬೃಹತ್‌ಗೋಳಗಳ ಮೇಲೂ ಹಾಸನ್ನು ಹಾಸಲು ಸಾಧ್ಯವಿದೆ. [ಇದು ಅಸಾಧ್ಯವಾಗಿದ್ದರೆ ಈ ಜನರಿಗೆ ತಮ್ಮ ಮನೆಯೊಳಗೆ ಅಂದವಾದ ಕಾರ್ಪೆಟ್‌ಗಳನ್ನು ಹರಡಲು ಸಾಧ್ಯವಾದುದು ಹೇಗೆ ? ಇವರ ಮನೆಗಳು ಸಹಾ ಭೂಮಿಯ ಮೇಲೆ ತಾನೇ ಇರುವುದು? ] ಭೂಮಿಯ ಬೃಹದಾಕಾರದ ಮಾದರಿಯೊಂದನ್ನು ತೆಗೆದುಕೊಂಡು ಇದನ್ನು ಸಾಧಿಸಿ ತೋರಬಹುದಾಗಿದೆ‌.
3. ಭೂಮಿಯನ್ನು ವಿಶಾಲವಾದ ಹಾಸೆಂದು ಕರೆಯಲಾಗಿದೆ :
ಖುರ್‌ಆನಿನ ಹಲವು ಸೂಕ್ತಿಗಳಲ್ಲಿ ಭೂಮಿಯನ್ನು ಹಾಸಿನಂತೆ ವಿಶಾಲವಾಗಿ ಹರಡಲಾಗಿದೆ ಎನ್ನಲಾಗಿದೆ‌.
a. “ ನಾವು ಭೂಮಿಯನ್ನು ವಿಶಾಲವಾಗಿ ಹಾಸಿರುತ್ತೇವೆ" (ಖುರ್‌ಆನ್ 51:48)
b. “ನಾವು ಭೂಮಿಯನ್ನು ಹಾಸನ್ನಾಗಿ (ವಾಸಯೋಗ್ಯವಾಗಿ) ಮಾಡಿಲ್ಲವೇ? ಹಾಗೂ ಪರ್ವತಗಳನ್ನು ಗೂಟಗಳಂತೆಯೂ" (ಖುರ್‌ಆನ್ 78:6-7)
ಭೂಮಿಯು ಚಪ್ಪಟೆಯಾಗಿದೆಯೆನ್ನುವ ಒಂದೇ ಒಂದು ಚಿಕ್ಕ ಸೂಚನೆಯನ್ನು ಕೂಡಾ ಖುರ್‌ಆನ್ ನೀಡುವುದಿಲ್ಲ. ಅದು ಭೂಮಿಯನ್ನು ಅತ್ಯಂತ ವಿಶಾಲವಾಗಿ ಹಾಸಿನಂತೆ ಹರಡಲಾಗಿದೆ ಎಂದು ಹೇಳಿದೆ ಮತ್ತು ಅದನ್ನು ಹಾಗೆ ವಿಶಾಲವಾಗಿ ಹರಡಿ ಬಿಡಲು ಕಾರಣವೇನು ಎಂಬುದನ್ನು ಸಹ ಸ್ಪಷ್ಟವಾಗಿ ತಿಳಿಸಿಕೊಟ್ಟಿದೆ.
‘ಓ ನನ್ನ ಸತ್ಯವಿಶ್ವಾಸಿ ದಾಸರೇ, ನನ್ನ ಭೂಮಿಯು ಅತ್ಯಂತ ವಿಶಾಲವಾಗಿದೆ. ನನ್ನ ಆರಾಧನೆಯನ್ನೇ ಮಾಡಿರಿ (ಖುರ್‌ಆನ್ 29:56)
ಆದುದರಿಂದ ವಿಚಾರಣಾ ದಿನದಂದು ಯಾರಿಗೂ ಕೂಡಾ ತನ್ನ ಸುತ್ತುಮುತ್ತಲಿನ ಪರಿಸ್ಥಿತಿ ಹಾಗೂ ಶಕ್ತಿಗಳು ತನ್ನನ್ನು ಕೆಡುಕು ಮಾಡಲು ಬಲವಂತ ಮಾಡಿದವು, ನನ್ನದೇನು ತಪ್ಪಿಲ ಎಂಬ ನೆಪವನ್ನು ಮುಂದಿಡಲು ಅಸಾಧ್ಯ.
4. ಖುರ್‌ಆನ್ ಭೂಮಿಯ ಆಕೃತಿಯನ್ನು ಅತ್ಯಂತ ನಿಖರವಾಗಿ ತಿಳಿಸಿದೆ :
“ಮತ್ತು ಆ ಬಳಿಕ ಭೂಮಿಯನ್ನು ‘ದಹಾಹ' (ಅಂಡಾಕೃತಿ)ವನ್ನಾಗಿ ಮಾಡಿದೆವು"  (ಖುರ್‌ಆನ್ 70:30 )
ಖುರ್‌ಆನ್ ಭೂಮಿಯ ಆಕೃತಿಯನ್ನು ವಿವರಿಸಲು ಬಳಸಿರುವ ಪದವು ‘ದಹಾಹ' ಆಗಿದೆ. ಇದು ‘ದುಹಿಯಾ' ಎಂಬ ಮೂಲಧಾತುವಿನಿಂದ ಹೊರಟ ಪದವಾಗಿದೆ. ‘ದುಹಿಯಾ' ಎಂಬುದು ಉಷ್ಟ್ರಪಕ್ಷಿಯ ಮೊಟ್ಟೆಯನ್ನು ಸೂಚಿಸುವ ಪದವಾಗಿದೆ. ಇದು ಅಂಡಾಕಾರವಾಗಿದ್ದು ‘ಭೂಮಿಯ ಆಕೃತಿಯೊಂದಿಗೆ ನಿಖರವಾಗಿ ತಾಳೆ ಹೊಂದುತ್ತದೆ‌. [‘ದಹಾಹ' ಎಂಬ ಪದಕ್ಕೆ ವಿಸ್ತರಿಸು ಎಂದು ಅಥವಾ ಅರ್ಥವೂ ಇದೆ].
ಆದುದರಿಂದ ಖುರ್‌ಆನಿನ ಹೇಳಿಕೆ ಮತ್ತು ಆಧುನಿಕವಾಗಿ ಸಂಶೋಧಿಸಲ್ಪಟ್ಟ ವೈಜ್ಞಾನಿಕ ವಿಷಯವು ಪರಸ್ಪರ ಪೂರಕವಾಗಿದೆಯೇ ಹೊರತು ವಿರುದ್ಧವಾಗಿಲ್ಲ.
ಉತ್ತರ : ಅಲ್ಲಾಹನು ಸರ್ವಶಕ್ತ ಹಾಗೂ ಸರ್ವಜ್ಞನು. ತನ್ನ ಜ್ಞಾನ ಭಂಡಾರದಿಂದ ಅಲ್ಪ ಜ್ಞಾನವನ್ನು ಅಲ್ಲಾಹನು ಮಾನವರಿಗೆ ನೀಡಿರುವನು. ಆದರೆ ಪ್ರತ್ಯಕ್ಷ ಹಾಗೂ ಪರೊಕ್ಷ ಜ್ಞಾನವಿರುವುದು ಅಲ್ಲಾಹನಿಗೆ ಮಾತ್ರ.
1. ಸರ್ವಜ್ಞತೆ :
ಖುರ್‌ಆನ್ ತಾಯಿಯ ಗರ್ಭದಲ್ಲಿರುವ ಮಗುವಿನ ಲಿಂಗವನ್ನು ಅಲ್ಲಾಹನು ಮಾತ್ರ ಬಲ್ಲನು ಎಂದು ಹೇಳುತ್ತದೆ ಎಂದು ಕೆಲವು ಜನರು ಹೇಳುವುದಿದೆ. ಆದರೆ ಖುರ್‌ಆನ್ ಹೀಗೆ ಹೇಳುತ್ತದೆ.
“ಆ ಘಳಿಗೆಯ ಜ್ಞಾನ ಅಲ್ಲಾಹನಲ್ಲಿ ಮಾತ್ರವಿದೆ‌. ಅವನೇ ಮಳೆ ಸುರಿಸುತ್ತಾನೆ. ತಾಯಂದಿರ ಗರ್ಭಗಳಲ್ಲಿ ಬೆಳೆಯುತ್ತಿರುವುದೇನು ಎಂಬುದನ್ನು ಅವನೇ ಬಲ್ಲನು. ಯಾವ ಜೀವಿಯೂ ತಾನು ಗಳಿಸುವುದೇನೆಂಬುದನ್ನು ತಿಳಿದಿರುವುದಿಲ್ಲ ಮತ್ತು ತನಗೆ ಭೂಮಿಯ ಯಾವ ಭಾಗದಲ್ಲಿ ಮೃತ್ಯು ಸಂಭವಿಸುವುದು ಎಂಬ ಜ್ಞಾನವು ಯಾರಿಗೂ ಇಲ್ಲ. ನಿಶ್ಚಯವಾಗಿಯೂ ಅಲ್ಲಾಹನೇ ಸರ್ವಜ್ಞನೂ ವಿವರಪೂರ್ಣನೂ ಆಗಿರುವನು" ( ಖುರ್‌ಆನ್ 31:34)
“ಅಲ್ಲಾಹ್ ಪ್ರತಿಯೋರ್ವ ಗರ್ಭಿಣಿಯ ಗರ್ಭವನ್ನು ಅರಿತಿರುತ್ತಾನೆ. ಅದರಲ್ಲಾಗುವ ವೃದ್ಧಿ ಕ್ಷಯಗಳನ್ನೂ ಅರಿತಿರುತ್ತಾನೆ. ಮತ್ತು ಪ್ರತಿಯೊಂದು ವಸ್ತುವಿಗೂ ವಸ್ತುವಿಗೂ ಅವನಲ್ಲೊಂದು ಪ್ರಮಾಣವು ನಿಶ್ಚಿತವಾಗಿರುತ್ತದೆ". (ಖುರ್‌ಆನ್ 13:8)
2. ಶಿಶುವಿನ ಲಿಂಗವನ್ನು ಪತ್ತೆ ಹಚ್ಚಲು ಅಲ್ಟ್ರಾ ಸೋನೋಗ್ರಾಫಿಯಿಂದ ಸಾಧ್ಯ:
ಇಂದು ವಿಜ್ಞಾನವೆಷ್ಟು ಮುಂದುವರಿದಿದೆಯೆಂದರೆ ಅಲ್ಟ್ರಾ ಸೋನೋಗ್ರಾಫಿಯನ್ನು ಬಳಸಿ ಗರ್ಭದೊಳಗಿರುವ ಶಿಶುವಿನ ಲಿಂಗವನ್ನು ಪತ್ತೆ ಹಚ್ಚಬಹುದು.

3. ಶಿಶುವಿನ ಲಿಂಗ ಪತ್ತೆ ಹಚ್ಚುವುದು ಎಂಬ ಪದವನ್ನೇ ಖುರ್‌ಆನ್ ಪ್ರಯೋಗಿಸಿಲ್ಲ :

ಅನೇಕ ವ್ಯಾಖ್ಯಾನಕಾರರು ಖುರ್‌ಆನಿನಲ್ಲಿರುವ ಸೂಕ್ತಿಗಳನ್ನು ಮಾತೆಯ ಉದರದಲ್ಲಿರುವ ಶಿಶುವಿನ ಲಿಂಗವನ್ನು ಅಲ್ಲಾಹನು ಮಾತ್ರ ಬಲ್ಲನು ಎಂಬುದಾಗಿ ವ್ಯಾಖ್ಯಾನಿಸಿರುವುದು ನಿಜ. ಆದರೆ ನಾವು ಖುರ್‌ಆನಿನ ಮೂಲ ಪಠ್ಯವನ್ನು ನೋಡಿದರೆ ‘ಶಿಶುವಿನ ಲಿಂಗ ಎಂಬ ಪದಕ್ಕೆ ಪರ್ಯಾಯಾಗಿರುವ ಯಾವುದೇ ಅರೇಬಿಕ್ ಪದವು ಅಲ್ಲಿ ಕಂಡು ಬರುವುದಿಲ್ಲ. ವಾಸ್ತವದಲ್ಲಿ ಖುರ್‌ಆನ್ ತಾಯಿಯ ಗರ್ಭದೊಳಗೇನಿದೆ ಎಂಬುದರ ಜ್ಞಾನವಿರುವುದು ಅಲ್ಲಾಹನಿಗೆ ಮಾತ್ರ ಎಂದು ಹೇಳಿದೆ. ಹಲವಾರು ವ್ಯಾಖ್ಯಾನಕಾರರು ಅದನ್ನು ಗರ್ಭದಲ್ಲಿರುವ ಶಿಶು ಹೆಣ್ಣೋ ಗಂಡೋ ಎಂಬುದನ್ನು ಅಲ್ಲಾಹನು ಮಾತ್ರ ಬಲ್ಲನು ಎಂಬುದಾಗಿ ತಪ್ಪಾಗಿ ಅರ್ಥೈಸಿಕೊಂಡಿದ್ದರು. ವಾಸ್ತವದಲ್ಲಿ ಅದೊಂದು ತಪ್ಪು ವ್ಯಾಖ್ಯಾನ ಮಾತ್ರವೇ ಆಗಿದೆ.

4. ಗರ್ಭಸ್ಥ ಶಿಶುವಿನ ಪ್ರಕೃತಿಯನ್ನು ಅಲ್ಲಾಹನ ಹೊರತು ಇನ್ನಾರಿಗೂ ಅರಿಯಲು ಅಸಾಧ್ಯ :

ಖುರ್‌ಆನಿನ ಪ್ರಸ್ತುತ ಸೂಕ್ತಿಯು ಗರ್ಭಸ್ಥ ಶಿಶುವು ಮುಂದೇನಾಗುವುದು, ಅದರ ಸ್ವಭಾವ ಹೇಗಿರುವುದು? ಅದು ಅದರ ತಂದೆ ತಾಯಿಗಳಿಗೆ ಅನುಗ್ರಹವಾಗುವುದೋ ಅಥವಾ ಶಾಪವಾಗಿ ಬಿಡುವುದೋ ? ಸಮಾಜಕ್ಕೊಂದು ಅನುಗ್ರವಾಗಿ ಬಿಡುವುದೋ ಅಥವಾ ಕಂಟಕವಾಗಿ ಬಿಡುವುದೋ ? ಅದು ಸ್ವರ್ಗವಾಸಿಯಾಗುವುದೋ ನರಕ ವಾಸಿಯಾಗುವುದೋ ? ಇವೆಲ್ಲವುಗಳ ಸಂಪೂರ್ಣ ಜ್ಞಾನವು ಅಲ್ಲಾಹನಿಗೆ ಮಾತ್ರವಿದೆ ಎಂಬುದೇ ಖುರ್‌ಆನ್ ಈ ಸೂಕ್ತಿಯಲ್ಲಿ ಹೇಳಲು ಉದ್ದೇಶಿಸಿದ ವಿಷಯವಾಗಿದೆ. ವಿಜ್ಞಾನವು ಅದೆಷ್ಟೇ ಮುಂದುವರಿದಿರಲಿ ಎಷ್ಟೇ ಅತ್ಯಾಧುನಿಕ ಉಪಕರಣಗಳನ್ನು ಹೊಂದಿರಲಿ; ಇವೆಲ್ಲಾ ವಿಷಯಗಳನ್ನು ಅದಕ್ಕೆ ಕಂಡು ಹಿಡಿಯಲು ಅಸಾಧ್ಯ.

ಉತ್ತರ 1 : ‘ಹೂರ್' ಎಂಬ ಪದವು ಖುರ್‌ಆನಿನ ನಾಲ್ಕು ಬೇರೆ ಬೇರೆ ಸ್ಥಳಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ.
a. 44 ನೇ ಅಧ್ಯಾಯ ಸೂರಾ : ಅದ್ದುಖಾನ್ 54 ನೇ ಸೂಕ್ತಿ.
“ನಾವು ‘ಹೂರ್' ಗಳೊಂದಿಗೆ ಅವರ ವಿವಾಹ ಮಾಡಿಸುವೆವು"
b. 52ನೇ ಅಧ್ಯಾಯ ‘ಅತ್ತೂರ್' 20ನೇ ಸೂಕ್ತಿ
“ಹೂರ್‌ಗಳನ್ನು ಅವರಿಗೆ ವಿವಾಹ ಮಾಡಿ ಕೊಡುವೆವು"
c. 55ನೇ ಅಧ್ಯಾಯ ‘ಅರ್ರಹ್ಮಾನ್' ನ 72 ನೇ ಸೂಕ್ತಿ
“ಡೇರೆಗಳಲ್ಲಿ ತಂಗಿಸಲಾಗಿರುವ ‘ಹೂರ್'ಗಳಿರುವರು"
d. 56ನೇ ಅಧ್ಯಾಯ ‘ಅಲ್‌ವಾಕಿಅ'ದ 22ನೇ ಸೂಕ್ತಿ
“ಅವರಿಗಾಗಿ ಸುಂದರ ನಯನಗಳ ಹೂರ್‌ಗಳಿರುವರು"
2. ‘ಹೂರ್' ಪದವನ್ನು ಸುಂದರ ಕನ್ಯೆಯರು ಎಂದು ವ್ಯಾಖ್ಯಾನಕಾರರು ವಿಶೇಷವಾಗಿ ಉರ್ದು ವ್ಯಾಖ್ಯಾನಕಾರರು ಹೂರ್ ಎಂಬ ಪದವನ್ನು ‘ಸುಂದರ ಕನ್ಯೆಯರು' ಎಂಬುದಾಗಿ ವ್ಯಾಖ್ಯಾನಿಸಿರುವರು. ‘ಹೂರ್' ಅಂದರೆ ಸ್ವರ್ಗ ಪ್ರವೇಶಿಸುವ ಪುರುಷರಿಗಾಗಿ ಸಿದ್ಧಪಡಿಸಿಟ್ಟಿರುವ ಸುಂದರ ಕನ್ಯೆಯರು ಎಂದಾದಲ್ಲಿ ಸ್ವರ್ಗವನ್ನು ಪ್ರವೇಶಿಸುವ ಸ್ತ್ರೀಯರಿಗೇನಿದೆ ಸ್ವರ್ಗದಲ್ಲಿ ಎಂಬ ಸಂಶಯ ಬರುವುದು ಸಹಜ.
3. ‘ಹೂರ್' ಪದದ ನಿಜವಾದ ಅರ್ಥ :
ವಾಸ್ತವದಲ್ಲಿ ಹೂರ್ ಎಂಬ ಪದವು ‘ಅಹ್‌ವರ್' ಎಂಬ ಪುರುಷವಾಚಕ ಪದದ ಮತ್ತು ಹೌರಾ ಎಂಬ ಸ್ತ್ರೀವಾಚಕ ಪದದ ಬಹುವಚನ ರೂಪವಾಗಿದೆ. ಅಹ್‌ವರ್ ಮತ್ತು ಹೌರಾ ಎಂಬ ಈ ಪದಗಳು ‘ಹೌಅರ್' ಎಂಬ ವಿಶಿಷ್ಟ ನೇತ್ರಗಳನ್ನು ಹೊಂದಿದ ವ್ಯಕ್ತಿ, ಸ್ತ್ರೀ ಯಾ ಪುರುಷನನ್ನು ಸೂಚಿಸುತ್ತವೆ. ‘ಹೌಅರ್' ಎಂಬ ಈ ವಿಶಿಷ್ಟ ಸುಂದರ ನೇತ್ರಗಳನ್ನು ಸ್ವರ್ಗದಲ್ಲಿನ ಆತ್ಮಗಳಿಗೆ ಅನುಗ್ರಹಿಸಲಾಗುವುದು. ‘ಹೌಅರ್' ಎಂಬ ಪದವನ್ನು ಅವರ ಆ ವಿಶಿಷ್ಟ ಕಣ್ಣುಗಳ ತೀಕ್ಷ್ಣವಾದ ಬಿಳುಪನ್ನು ಬಿಂಬಿಸುವ ಬಳಸಲಾಗುತ್ತದೆ.
ಖುರ್‌ಆನ್ ಇನ್ನಿತರ ಹಲವು ಸ್ಥಳಗಳಲ್ಲಿ ‘ನಿಮಗೆ ಸ್ವರ್ಗದಲ್ಲಿ ಅಝ್‌ವಾಜ್‌ಗಳಿರುವರು' ಎಂದಿದೆ. ‘ಅಝ್‌ವಾಜ್' ಅಂದರೆ ಜೋಡಿ, ಅಥವಾ ಜತೆಗಾರ(ತಿ). ಇದು ನಿಮಗೆ ಸ್ವರ್ಗದಲ್ಲಿ ಪರಿಶುದ್ಧರಾದ ಜತೆಗಾರ ಅಥವಾ ಜತೆಗಾರ್ತಿಯರಿರುವರು ಎಂಬರ್ಥವನ್ನು ನೀಡುತ್ತದೆ.
“ಈ ಗ್ರಂಥದ ಮೇಲೆ ವಿಶ್ವಾಸವಿರಿಸಿ (ಅದರಂತೆ) ತಮ್ಮ ಕರ್ಮಗಳನ್ನು ಸರಿಪಡಿಸಿಕೊಳ್ಳುವಂತಹವರಿಗಾಗಿ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿವೆ ಎಂಬ ಸುವಾರ್ತೆಯನ್ನು ನೀಡಿರಿ... ಅವರಿಗೆ ಅಲ್ಲಿ ಪರಿಶುದ್ಧರಾದ ಅಝ್‌ವಾಜ್ (,ಸಂಗಾತಿ) ಗಳಿರುವರು. ಅವರು ಅಲ್ಲಿ ಸದಾಕಾಲವಿರುವರು. (ಖುರ್‌ಆನ್ 2:25)
ಸತ್ಯವಿಶ್ವಾಸವಿಟ್ಟು ಸತ್ಕರ್ಮಗಳನ್ನೆಸಗಿದವರನ್ನು ನಾವು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿಗೆ ಪ್ರವೇಶಗೊಳಿಸುವೆವು... ಅಲ್ಲಿ ಅವರಿಗೆ ಪರಿಶುದ್ಧರಾದ ಅಝ್‌ವಾಜ್‌ಗಳಿರುವರು (ಖುರ್‌ಆನ್ 4:57)
ಅದುದರಿಂದ ಹೂರ್ ಎಂಬ ಪದವು ಒಂದು ನಿರ್ದಿಷ್ಟ ಲಿಂಗವನ್ನು ಮಾತ್ರ ಸೂಚಿಸುವುದಲ್ಲ. ಹೂರ್‌ಗಳು ಸ್ತ್ರೀಯರಾಗಿರಲೂ ಬಹುದು. ಪುರುಷರಾಗಿರಲೂ ಬಹುದು. ಮುಹಮ್ಮದ್ ಆಸದ್ ಎಂಬವರು ಹೂರ್ ಎಂಬ ಪದವನ್ನು ಜೋಡಿ ಎಂದು ಅನುವಾದಿಸಿದ್ದರೆ, ವ್ಯಾಖ್ಯಾನಿಸಿರುವುದನ್ನು ಕಾಣಬಹುದು. ಆದುದರಿಂದ ಸ್ವರ್ಗ ಪ್ರವೇಶ ಪಡೆದ ಪುರುಷರು ಸುಂದರ ನೇತ್ರಗಳಿರುವ ಹೂರ್ ಕನ್ಯೆಯರನ್ನು ಪಡೆದರೆ ಸ್ತ್ರೀಯರು ವಿಶಾಲ ಹಾಗೂ ಹೊಳೆಯುವ ನೇತ್ರಗಳುಳ್ಳ ಹೂರ್ (ಪುರುಷರು)ಗಳನ್ನು ಪಡೆಯುವರು.
4. ಸ್ವರ್ಗದಲ್ಲಿ ವಿಶಿಷ್ಟವಾದುದನ್ನು ಪಡೆಯಲಿರುವ ಸ್ತ್ರೀಯರು :
ಪ್ರಸ್ತುತ ವಿವರಣೆಗಳಿಗೆ ವಿರುದ್ಧವಾಗಿ ಕೆಲವು ಪಂಡಿತರು ಹೂರ್‌ಗಳೆಂದರೆ ಸ್ತ್ರೀಯರು, ಆದುದರಿಂದ ಖುರ್‌ಆನ್ ಸೂಚಿಸಿರುವ ಹೂರ್ ಪುರುಷರಿಗೆ ಮಾತ್ರ ಎಂದಿರುವರು. ಇವರ ವ್ಯಾಖ್ಯಾನವನ್ನು ಸದ್ಯಕ್ಕೆ ಒಪ್ಪಿಕೊಂಡರೂ ಪ್ರಸ್ತುತ ಸಂಶಯವನ್ನು ಪ್ರವಾದಿ (ಸ) ವಚನವೊಂದು ನಿವಾರಿಸಿಕೊಡುತ್ತದೆ. ಪುರುಷನು ಸ್ವರ್ಗದಲ್ಲಿ ಹೂರ್‌ಗಳನ್ನು ಪಡೆದರೆ ಸ್ತ್ರೀಯರೇನು ಪಡೆದಜುಕೊಳ್ಳುವರು ಎಂಬ ಪ್ರಶ್ನೆಯನ್ನು ಪ್ರವಾದಿ (ಸ) ಯ ಬಳಿ ಕೇಳಿದಾಗ ಹೃದಯಗಳು ಬಯಸಿರದ, ಕಿವಿಗಳು ಆಲಿಸಿರದ, ಕಣ್ಣುಗಳು ಕಂಡಿರದ್ದನ್ನು ಅವರು ಪಡೆಯುವರು ಎಂದು ಪ್ರವಾದಿ(ಸ)ರು ಉತ್ತರಿಸಿದ್ದರು.
ಆದುದರಿಂದ ಸ್ವರ್ಗದಲ್ಲಿ ಸ್ತ್ರೀಯರು ಅತ್ಯಂತ ವಿಶಿಷ್ಠವಾದುದನ್ನೇ ಪಡೆಯಲಿರುವರು ಎಂಬುದು ಸ್ಪಷ್ಟ.

ಉತ್ತರ : 1. ಅಲ್ಲಾಹನು ಮುದ್ರೆಯೊತ್ತಿರುವುದು ಸತ್ಯ ನಿಷೇಧದ ಕಡೆಗೆ ವಾಲಿಕೊಂಡಿರುವವರ ಹೃದಯಗಳ ಮೇಲೆ :
ಖುರ್‌ಆನಿನ ಎರಡನೇ ಅಧ್ಯಾಯ ಅಲ್-ಬಕರದ ಆರನೇ ಮತ್ತು ಏಳನೇ ಸೂಕ್ತಿಗಳಲ್ಲಿ ಅಲ್ಲಾಹನು ಹೇಳುತ್ತಾನೆ :
“(ಸತ್ಯವನ್ನು) ನಿಷೇಧಿಸುವವರಿಗೆ ಎಚ್ಚರಿಕೆ ನೀಡುವುದೂ, ನೀಡದೇ ಇರುವುದೂ ಸಮಾನ. ಅವರು ವಿಶ್ವಾಸ ವಿಡಲಾರದು. ಅಲ್ಲಾಹನು ಅವರ ಹೃದಯಗಳ ಮೇಲೆ, ಅವರ ಕಿವಿಗಳ ಮೇಲೆ ಮುದ್ರೆಯೊತ್ತಿರುವನು. ಅವರ ದೃಷ್ಟಿಗಳ ಮೇಲೆ ಪರದೆ ಬಿದ್ದಿದೆ. ಮತ್ತು ಅವರಿಗೆ ಘೋರ ಶಿಕ್ಷೆ ಕಾದಿದೆ. (ಖುರ್‌ಆನ್ 2:6-7)
ಈ ಸೂಕ್ತಿಗಳು ಅಭಿಸಂಬೋಧಿಸಿರುವುದು ಸತ್ಯಸ್ವೀಕರಿಸಿಲ್ಲದ ಸಾಮಾನ್ಯ ಅಮುಸ್ಲಿಮರನ್ನಲ್ಲ. ಇಲ್ಲಿ ಖುರ್‌ಆನ್ ಬಳಸಿದ ಅರೇಬಿಕ್ ಪದವು ‘ಅಲ್ಲಝೀನ ಕಫರೂ' ಆಗಿದ್ದು ಇದರ ಅರ್ಥವು ಸತ್ಯ ನಿಷೇಧದ ಕಡೆಗೆ ವಾಲಿಕೊಂಡಿರುವವರು ಅಥವಾ ಸತ್ಯವನ್ನು ನಿಷೇಧಿಸಿಯೇ ಸಿದ್ಧ ಎಂಬ ಪೂರ್ವಗ್ರಹ ಪೀಡಿತರು ಎಂದಾಗಿದೆ. ಎಚ್ಚರಿಕೆ ನೀಡುವುದು ಮತ್ತು ನೀಡದಿರುವುದು ಅವರಿಗೆ ಸಮಾನ. ಅವರೆಂದೂ ಸತ್ಯವನ್ನು ಸ್ವೀಕರಿಸಲಾರರು. ಅವರ ಹೃದಯಗಳ ಹಾಗೂ ಕಿವಿಗಳ ಮೇಲೆ ಪರದೆ(ತೆರೆ)ಯಿದೆ. ಇಲ್ಲಿ ಅವರ ಹೃದಯಗಳ ಮೇಲೆ ಅಲ್ಲಾಹನು ಮುದ್ರೆಯೊತ್ತಿರುವುದು ಅವರು ಸತ್ಯವನ್ನು ಮನದಟ್ಟು ಮಾಡಿಕೊಳ್ಳಬಾರದೆಂದಲ್ಲ. ಬದಲಾಗಿ ಈ ಜನರು ಸತ್ಯ ನಿಷೇಧದ ಕಡೆಗೆ ವಾಲಿಕೊಂಡಿರುವುದರಿಂದಲೇ ಅಲ್ಲಾಹನು ಅವರ ಹೃದಯಗಳ ಮೇಲೆ ಮುದ್ರೆಯೊತ್ತಿರುವನು. ಆದುದರಿಂದ ಅಲ್ಲಾಹನ ಮೇಲೆ ಮಿಥ್ಯಾರೋಪ ಹೊರಿಸಿ ಫಲವಿಲ್ಲ. ಸತ್ಯ ನಿಷೇಧವನ್ನು ನೆಚ್ಚಿಕೊಂಡಿರುವ ಕಾಫಿರರೇ ತಮ್ಮ ಕರ್ಮಗಳ ಫಲಕ್ಕೆ ಹೊಣೆಗಾರರು.
2 . ನೀನು ಫೇಲಾಗುತ್ತೀ ಎಂದು ವಿದ್ಯಾರ್ಥಿಯನ್ನು ಎಚ್ಚರಿಸುತ್ತಿರುವ ಅಧ್ಯಾಪಕನ ಉದಾಹರಣೆ :
ಒಬ್ಬ ಅನುಭವಿ ಅಧ್ಯಾಪಕನು ಅಂತಿಮ ಪರೀಕ್ಷೆಗೆ ಮುನ್ನ ತರಗತಿಗೆ ಹಾಜರಾಗದ , ಹೋರ್ಮ್‌ವರ್ಕ್ ಅನ್ನು ಸರಿಯಾಗಿ ಮಾಡದ ಒಬ್ಬ ತುಂಟ ಹುಡುಗನೊಂದಿಗೆ ನೀನು ಖಂಡಿತಾ ಫೇಆಗುತ್ತೀ ಎಂದು ಎಚ್ಚರಿಸುತ್ತಿದ್ದಾರೆಂದಿಟ್ಟುಕೋಳೋಣ.
ಅಂತಿಮ ಪರಿಕ್ಷೆಗೆ ಹಾಜರಾದ ಬಳಿಕ ಆ ವಿದ್ಯಾರ್ಥಿಯು ಫೇಲಾದಲ್ಲಿ ಯಾರನ್ನು ದೂರಬೇಕಾಗಿದೆ ; ಅಧ್ಯಾಪಕರನ್ನೋ ಅಥವಾ ವಿದ್ಯಾರ್ಥಿಯನ್ನೋ? ವಿದ್ಯಾರ್ಥಿಯ ಅವಸ್ಥೆಯನ್ನು ಕಂಡು ಫಲಿತಾಂಶ ಮುಂದಾಗಿ ಹೇಳಿಬಿಟ್ಟ ಅಧ್ಯಾಪಕರನ್ನು ದೂರಲು ಸಾಧ್ಯವಿಲ್ಲ. ಬದಲಾಗಿ ತನ್ನ ಹೊಣೆಗೇಡಿತನದ ಫಲವನ್ನು ಉಣ್ಣಲು ಆ ವಿದ್ಯಾರ್ಥಯೇ ಹೊಣೆಗಾರನು.

ಇದೇ ರೀತಿ ಕೆಲವು ಜನರು ಸತ್ಯನಿಷೇಧದತ್ತ ವಾಲಿಕೊಂಡಿರುವರು ಎಂಬುದನ್ನು ಮುಂದಾಗಿ ತಿಳಿದ ಅಲ್ಲಾಹನು ಅವರ ಹೃದಯಗಳ ಮೇಲೆ ಮುದ್ರೆಯೊತ್ತಿ ಬಿಟ್ಟಿರುವನು. ಆದುದರಿಂದ ಸತ್ಯನಿಷೇಧವನ್ನು ನೆಚ್ಚಿಕೊಂಡ ಅಮುಸ್ಲಿಮರು ತಮ್ಮ ಕಾರ್ಯಕ್ಕೆ ಹೊಣೆಗಾರರೇ ಹೊರತು ಅಲ್ಲಾಹನೆಂದೂ ಹೊಣೆಗಾರನಾಗಲಾರ. ಇದನ್ನು ಅತ್ಯಂತ ಸರಳವಾಗಿ ಹೀಗೂ ಹೇಳಬಹುದು: ಸತ್ಯ ನಿಷೇಧಿಗಳು ಸತ್ಯವನ್ನು ನೀಷೆಧಿಸಲು ಕಾರಣ ಅಲ್ಲಾಹ‌ನು ಅವರ ಹೃದಯಗಳ ಮೇಲೆ ಮುದ್ರೆ ಯೊತ್ತಿ ಬಿಟ್ಟಿರುವನು ಎಂಬುದಲ್ಲ. ಬದಲಾಗಿ ಈ ಜನರು ಮರಣಕ್ಕೆ ಮುನ್ನ ಸತ್ಯವನ್ನು ಸ್ವೀಕರಿಸಲಾರರು ಎಂಬುದರ ಜ್ಞಾನ ಅಲ್ಲಾಹನಿಗಿರುವಿದೇ ಮುದ್ರೆಯೊತ್ತಿ ಬಿಡಲು ಕಾರಣ.


ಉತ್ತರ : 1. ಆರು ದಿನಗಳಲ್ಲಿ ಸೃಷ್ಟಿಸಲ್ಪಟ್ಟ ಭೂಮ್ಯಾಕಾಶಗಳು :
ಭೂಮ್ಯಾಕಾಶಗಳನ್ನು ಆರು ಯೌಮ್ (ಅವಧಿ)ಗಳಲ್ಲಿ ಸೃಷ್ಟಿಸಲಾಯಿತೆಂಬ ಖುರ್‌ಆನಿನ ಹೇಳಿಕೆಯ ಬಗ್ಗೆ ಮುಸ್ಲಿಮರಲ್ಲಿ ಯಾರಿಗೂ ಭಿನ್ನಾಭಿಪ್ರಾಯವಿಲ್ಲ. ‘ಅಯ್ಯಾಮ್' ಎಂಬ ಅರೇಬಿಕ್ ಪದವು ವಿವಿಧ ಅವಧಿಗಳನ್ನು ಅಥವಾ ಯುಗಗಳನ್ನು ಸುಹಚಿಸುವುದು ಎಂಬುದನ್ನು ಈ ಮೊದಲೇ ವಿವರಿಸಲಾಗಿದೆ. ಈ ಬಗ್ಗೆ ಏಳನ್ನೇ ಅಧ್ಯಾಯ ಅಲ್ ಅಅರಾಫ್‌ನ 54ನೇ ಸೂಕ್ತಿ, 57ನೇ ಸೂಕ್ತಿ, 25ನೇ ಅಧ್ಯಾಯ ಅಲ್‌ಫುರ್‌ಕಾನ್‌ನ 59ನೇ ಸೂಕ್ತಿ, 32ನೇ ಅಧ್ಯಾಯ ಅಸ್ಸಜದಃದ 4ನೇ ಸೂಕ್ತಿ ಹಾಗೂ 57ನೇ ಅಧ್ಯಾಯ ಅಲ್‌ಹದೀದ್‌ನ 4ನೇ ಸೂಕ್ತಿ ಹಾಗೂ 50ನೇ ಅಧ್ಯಾಯ ಖಾಫ್‌ನ 38ನೇ ಸೂಕ್ತಿಯಲ್ಲೂ ಉಲ್ಲೇಖಗಳಿವೆ. ಇನ್ನು ಭೂಮ್ಯಾಕಾಶಗಳನ್ನು 8 ದಿನಗಳಲ್ಲಿ ಸೃಷ್ಟಿಸಲಾಗಿದೆ ಎಂದು ಖುರ್‌ಆನ್ ಹೇಳಿದೆ ಎನ್ನಲಾದ ವಿಷಯವಿರುವುದು 41ನೇ ಅಧ್ಯಾಯ ಫುಸ್ಸಿಲತ್‌ನ 9ರಿಂದ 12ರ ವರೆಗಿನ ಸೂಕ್ತಿಗಳಲ್ಲಿ.
“ಹೇಳು: ಭೂಮಿಯನ್ನು ಎರಡು ಯೌಮ್(ದಿನ)ಗಳಲ್ಲಿ ಸೃಷ್ಟಿಸಿದಾತನನ್ನು ನೀವು ನಿಷೇಧಿಸುವಿರೋ? ಇತರರನ್ನು ಅವನಿಗೆ ಸರಿಸಮಾನರಾಗಿ ನಿಶ್ಚಯಿಸುವಿರೋ? ಸಕಲ ಲೋಕಗಳ ಪಾಲಕ ಪ್ರಭು ಡವನು ತಾನೇ? (ಖುರ್‌ಆನ್ 41:9)
ಅವನು ಅದರ ಮೇಲೆ ಪರ್ವತಗಳನ್ನು ನಾಟಿದನು. ಅದರಲ್ಲಿ ಸಮೃದ್ಧಿಗಳನ್ನಿರಿಸಿದನು ಮತ್ತು ಅದರಲ್ಲಿ ಜೀವನಾಧಾರವನ್ನು ಪ್ರಮಾಣಾನುಸಾರ ನಿರ್ಣಯಿಸಿದನು. ಇವೆಲ್ಲವೂ ನಾಲ್ಕು ಯೌಮ್(ದಿನ)ಗಳಲ್ಲಿ ಅಪೇಕ್ಷರಿಗೆ (ಅಗತ್ಯಕ್ಕೆ) ತಕ್ಕಂತೆ (ಖುರ್‌ಆನ್ 41:10)
‘ಸುಮ್ಮ' (ಮಾತ್ರವಲ್ಲದೆ) ಅವನು ಆಕಾಶದತ್ತ ಇಸ್ತವಾ (ಆರೂಢ) ಆದನು ಮತ್ತು ಅದೊಂದು ದುಃಖಾನ್ (ಧೂಮ)ಆಗಿತ್ತು. ಅವನು ಅದರೊಂದಿಗೆ ಮತ್ತು ಭೂಮಿಯೊಡನೆ ಹೇಳಿದನು : “ನೀವು ಬಂದು ಬಿಡಿರಿ, ವಿಧೇಯರಾಗಿ ಅಥವಾ ನಿರ್ಬಂಧಿತರಾಗಿ" ಅವುಗಳು ಹೇಳಿದವು : “ನಾವು ವಿಧೇಯರಾಗಿ ಬರುವೆವು" (ಖುರ್‌ಆನ್ 41:11)
ಆದುದರಿಂದ ಅವನು ಅವುಗಳನ್ನು ಸಪ್ತಗಗನಗಳಾಗಿ ಎರಡು ಯೌಮ್(ದಿನ)ಗಳಲ್ಲಿ ಪೂರ್ತಿಗೊಳಿಸಿದನು. ಮತ್ತು ಪ್ರತಿಯೊಂದು ಗಗನಕ್ಕೂ ಅದರ ಅಮ್ರ್ (ಹೊಣೆಗಾರಿಕೆಯ) ವಹ್ಯ್ (ಆದೇಶ) ನೀಡಿದನು ಮತ್ತು ನಾವು ಭೂಮಿಯ (ಸಮೀಪದ) ಗಗನವನ್ನು ದೀಪಗಳಿಂದ ಅಲಂಕರಿಸಿದೆವು: ಸಂರಕ್ಷಣೆ ಸಹಿತವಾಗಿ; ಪ್ರಬಲನೂ ಸರ್ವಜ್ಞನೂ ಆಗಿರುವಾತನ ನಿರ್ಣಯವಿದು (ಖುರ್‌ಆನ್ 41:12)
ಈ ಸೂಕ್ತಿಗಳು ಮೇಲ್ನೋಟಕ್ಕೆ ಭೂಮ್ಯಾಕಾಶಗಳನ್ನು ಎಂಟು ದಿವಸಗಳಲ್ಲಿ ಸೃಷ್ಟಿಸಲಾಯಿತು ಎನ್ನುವ ಭಾವನೆಯನ್ನು ಮೂಡಿಸುವುದು ನಿಜವಾದರೂ ವಾಸ್ತವಿಕತೆಯು ಹಾಗಿಲ್ಲ.
ಪ್ರಸ್ತುತ ಸೂಕ್ತಿಗಳ ಆರಂಭದಲ್ಲೇ ಅಲ್ಲಾಹನು ಹೇಳುವುದೇನೆಂದರೆ ಈ ಸೂಕ್ತಿಗಳಲ್ಲಿರುವ ಸಂದೇಶದ ಲಾಭವನ್ನೆತ್ತಿಕೊಂಡು ಇದರ ಮೂಲದ ಬಗ್ಗೆ ಸಂಶಯವನ್ನುಂಟು ಮಾಡಬಯಸುವವರು ದೇವನಿಂದನೆ ಪ್ರಚಾರ ಹಾಗೂ ದೇವನ ಏಕೈಕತೆಯನ್ನು ತಿರಸ್ಕರಿಸುವ ಕಾರ್ಯದಲ್ಲೂ ಅತ್ಯಂತ ಮುಂಚೂಣಿಯಲ್ಲಿರುವರು. ಅರ್ಥಾತ್ ಕಾಲಾಂತರದಲ್ಲಿ ಹುಟ್ಟಿಕೊಳ್ಳುವ ಕೆಲವು ಸತ್ಯನಿಷೇಧಿಗಳು ಮೇಲ್ನೋಟಕ್ಕೆ ವೈರುಧ್ಯವೋ ಎಂಬಂತೆ ಕಂಡು ಬರುವ ಈ ಸೂಕ್ತಿಗಳ ಲಾಭವನ್ನು ಪಡೆದುಕೊಳ್ಳಲಿಚ್ಛಿಸುವರು ಎಂದು ಅಲ್ಲಾಹನು ಹೇಳಿದ್ದಾನೆ.
2. “ಸುಮ್ಮ" ಎಂಬ ಪದವನ್ನು “ಮಾತ್ರವಲ್ಲದೆ" (more over) ಎಂಬ ಅರ್ಥದಲ್ಲೂ ಬಳಸಲಾಗುತ್ತದೆ :
ಪ್ರಸ್ತುತ ಸೂಕ್ತಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಲ್ಲಿ ಅದರಲ್ಲಿ ಸೃಷ್ಟಿಕಾರ್ಯದ ಕುರಿತು ಎರಡು ವಿಧದ ವಿವರಣೆಗಳಿರುವುದನ್ನು ಕಾಣಬಹುದು.
a. ಪರ್ವತಗಳ ಹೊರತಾದ ಭೂಮಿ ಮತ್ತು ಆಕಾಶಗಳನ್ನು ಎರಡು ದಿನಗಳಲ್ಲಿ ಸೃಷ್ಟಿಸಲಾಯಿತು.
b. ಪರ್ವತಗಳ ಸ್ಥಾಪನೆ, ಸಮೃದ್ಧಿಯನ್ನು ನೀಡುವುದು, ಜೀವನಾಧಾರವನ್ನು ಪ್ರಮಾಣಾನುಸಾರ ನಿರ್ಣಯಿಸುವುದು ಇತ್ಯಾದಿಗಳನ್ನು ನಾಲ್ಕು ಯೌಮ್ (ದಿನ)ಗಳಲ್ಲಿ ಮಾಡಲಾಯಿತು.

ಆದುದರಿಂದ ಪರ್ವತಗಳಿಂದ ಕೂಡಿದ ಸಮೃದ್ಧ ಭೂಮಿಯನ್ನು ಸೃಷ್ಟಿಸಲು ತಗಲಿದ ಸಮಯ ಆರು ಯೌಮ್‌ಗಳು (ಸೂಕ್ತಿ ಸಂಖ್ಯೆ 9 ಮತ್ತು 10ರಲ್ಲಿ ವಿಶದೀಕರಿಸಿದಂತೆ). ಸೂಕ್ತಿ ಸಂಖ್ಯೆ 11ಮತ್ತು 12ರಲ್ಲಿ ಮುಂದುವರಿದು ಹೇಳಿದಂತೆ" ಮಾತ್ರವಲ್ಲದೆ ಸಪ್ತಗಗನಗಳನ್ನು* ಎರಡು ಯೌಮ್ (ದಿನ)ಗಳಲ್ಲಿ ಸೃಷ್ಟಿಸಲಾಯಿತು" 11ನೇ ಸೂಕ್ತಿಯ ಆರಂಭದಲ್ಲಿ ಬಳಸಿದ ಅರೇಬಿಕ್ ಪದವು ‘ಸುಮ್ಮ' ಆಗಿದ್ದು ಇದಕ್ಕೆ ನಂತರ ಎಂಬ ಅರ್ಥದೊಂದಿಗೆ ‘ಮಾತ್ರವಲ್ಲದೆ' ಎಂಬ ಅರ್ಥವೂ ಇದೆ. ಕೆಲವು ವ್ಯಾಖ್ಯಾನಕಾರರು ‘ಸುಮ್ಮ' ಎಂಬ ಪದವನ್ನು ‘ನಂತರ' ಎಂದು ಈ ಸ್ಥಳದಲ್ಲಿ ತಪ್ಪಾಗಿ ಅನುವಾದಿಸಿರುವರು. ‘ನಂತರ' ಎಂಬ ಈ ಪದವು ಘಟನೆಗಳ ಕಾಲಕ್ರಮವೆಂಬುದಾಗಿ ತಪ್ಪಾಗಿ ಅನುವಾದಿಸಿದಲ್ಲಿ ಭೂಮ್ಯಾಕಾಶಗಳ ಸೃಷ್ಟಿಗೆ ತಗಲಿದ ಒಟ್ಟು ಸಮಯ ಎಂಟು ಯೌಮ್** (ದಿನ)ಗಳು ಎಂಬ ತಪ್ಪು ಅರ್ಥ ಬರುತ್ತಿದ್ದು, ಇದು ಭೂಮ್ಯಾಕಾಶಗಳನ್ನು ಆರು ದಿನಗಳಲ್ಲಿ ಸೃಷ್ಟಿಸಲಾಯಿತು ಎಂಬ ಖುರ್‌ಆನಿನ ಇತರೆಲ್ಲಾ ಸೂಕ್ತಿಗಳಿಗೆ ವಿರುದ್ಧವಾಗುತ್ತದೆ. ಮಾತ್ರವಲ್ಲದೆ ಭೂಮ್ಯಾಕಾಶಗಳನ್ನು ಏಕಕಾಲದಲ್ಲಿ ಪ್ರತ್ಯೇಕಿಸಲಾಯಿತು ಎಂಬ ಬಿಗ್ ಬ್ಯಾಂಗ್ ಥಿಯರಿಯನ್ನು ಸಮರ್ಥಿಸಿದ 21ನೇ ಅಧ್ಯಾಯದ 30ನೇ ಸೂಕ್ತಿಗೆ ವಿರುದ್ಧವಾಗುತ್ತದೆ.
ಆದುದರಿಂದ ‘ಸುಮ್ಮ' ಎಂಬ ಪದದ ಅತ್ಯಂತ ಸರಿಯಾದ ಅನುವಾದವು ಈ ಸ್ಥಳದಲ್ಲಿ ‘ಮಾತ್ರವಲ್ಲದೆ' ಎಂಬುದಾಗಿದೆ. ಅಬ್ದುಲ್ಲಾ ಯೂಸುಫ್ ಅಲಿಯವರು ಪ್ರಸ್ತುತ ಪದವನ್ನು ‘ಮಾತ್ರವಲ್ಲದೆ' (moreover) ಎಂಬುದಾಗಿ ಅನುವಾದಿಸಿರುವರು. ಸಪ್ತಗಗನಗಳನ್ನು (ಅಖಿಲ ವಿಶ್ವವನ್ನು) ಎರಡು ದಿನಗಳಲ್ಲಿ ರೂಪಿಸುವ ಅದೇ ಸಮಯದಲ್ಲಿ ಪರ್ವತಗಳಿಲ್ಲದ ಬರಡು ಭೂಮಿಯನ್ನು ಸೃಷ್ಟಿಸಲಾಯಿತು. ಹೀಗೆ ಅಸ್ತಿತ್ವಕ್ಕೆ ಬಂದ ಭೂಮುಯನ್ನು ನಾಲ್ಕು ಯೌಮ್ (ದಿನ)ಗಳಲ್ಲಿ ಸಮೃದ್ಧಗೊಳಿಸಲಾಯಿತು. ಆದುದರಿಂದ ಸೃಷ್ಟಿ ಕಾರ್ಯಕ್ಕೆ ತಗುಳಿದ ಒಟ್ಟು ಅಯ್ಯಾಮ್ (ದಿನ)ಗಳು ಆರು ಮಾತ್ರ.
ಒಬ್ಬ ಕಟ್ಟಡ ನಿರ್ಮಾತೃನು ಹೇಳುತ್ತಾನೆ :
‘ನಾನು ಹತ್ತು ಮಹಡಿಗಳ ಆ ವಸತಿ ಸಂಕೀರ್ಣವನ್ನು ಅದರ ಆವರಣ ಗೋಡೆ ಸಹಿತವಾಗಿ ಆರು ತಿಂಗಳುಗಳಲ್ಲಿ ನಿರ್ಮಿಸಿರುತ್ತೇನೆ'
ತನ್ನ ಕಾರ್ಯವನ್ನು ಪೂರ್ಣಗೊಳಿಸಿದ ಬಳಿಕ ಅವನು ನಿರ್ಮಾಣ ಕಾರ್ಯದ ವಿವರಗಳನ್ನು ಇನ್ನಷ್ಟು ಸ್ಪಷ್ಟವಾಗಿ ನೀಡುತ್ತಾನೆ.
ಅಡಿಪಾಯ ನಿರ್ಮಾಣಕ್ಕೆ ತಗಲಿದ ಸಮಯ ಎರಡು ತಿಂಗಳುಗಳು
ಹತ್ತು ಮಹಡಿಗಳ ನಿರ್ಮಾಣಕ್ಕೆ ತಗಲಿದ ಸಮಯ ನಾಲ್ಕು ತಿಂಗಳುಗಳು
ಮಾತ್ರವಲ್ಲದೆ ಆವರಣ ಗೋಡೆಗೆ ತಗಲಿದ ಸಮಯ ಎರಡು ತಿಂಗಳುಗಳು
ಆದರೆ ಇಲ್ಲಿ ಆ ಕಟ್ಟಡ ನಿರ್ಮಾತೃನು ಅಡಿಪಾಯವನ್ನು ನಿರ್ಮಿಸುವ ಸಮಯದಲ್ಲೇ ಆವರಣ ಗೋಡೆಯನ್ನು ನಿರ್ಮಿಸಿರುತ್ತಾನೆ. ಆದುದರಿಂದ ಅವನು ಬಳಸಿಕೊಂಡ ಒಟ್ಟು ಸಮಯ ಆರು ತಿಂಗಳುಗಳೇ ಹೊರತು ಎಂಟಲ್ಲ.
ಕಟ್ಟಡ ನಿರ್ಮಾತೃನ ಮೊದಲ ಮತ್ತು ಆ ಬಳಿಕದ ಹೇಳಿಕೆಗಳು ಪರಸ್ಪರ ಪೂರಕವಾಗಿದೆಯೇ ಹೊರತು ವಿರುದ್ಧವಾಗಿಲ್ಲ. ಅವನ ಎರಡನೆ ಹೇಳಿಕೆಯು ನಿರ್ಮಾಣ ಕಾರ್ಯದ ಸವಿಸ್ತಾರವಾದ ಲೆಕ್ಕಾಚಾರಗಳನ್ನು ತೋರಿಸಿಕೊಡುತ್ತದೆ.

c. ಭೂಮ್ಯಾಕಾಶಗಳನ್ನು ಏಕಕಾಲದಲ್ಲಿ ಸೃಷ್ಟಿಸಲಾಯಿತು ಎಂಬುದಕ್ಕೆ ಪ್ರಮಾಣಗಳು : ವಿಶ್ವನಿರ್ಮಾಣ ಕಾರ್ಯವನ್ನು ಖುರ್‌ಆನ್ ಹಲವು ಕಡೆಗಳಲ್ಲಿ ವಿಶದೀಕರಿಸಿದೆ. ಕೆಲವು ಕಡೆಗಳಲ್ಲಿ ಅದು ಆಕಾಶಗಳು ಮತ್ತು ಭೂಮಿ (7:54, 11:7, 32:4. 50:38, 57:4) ಎಂದು ಹೇಳಿದ್ದರೆ ಇನ್ನು ಕೆಲವು ಸ್ಥಳಗಳಲ್ಲಿ ಭೂಮಿ ಮತ್ತು ಆಕಾಶ (49 : 9-12, 2:29, 20:4) ಎಂದು ಹೇಳಿದೆ. ಭೂಮಿಯ ಸೃಷ್ಟಿಯ ಬಳಿಕ ಆಕಾಶ ಅಥವಾ ಆಕಾಶ ಸೃಷ್ಟಿಯ ಬಳಿಕ ಭೂಮಿಯನ್ನು ಬೇರೆ ಬೇರೆ ಕಾಲದಲ್ಲಿ ಸೃಷ್ಟಿಸಿದ್ದಲ್ಲಿ ಖುರ್‌ಆನ್ ತನ್ನ ಕ್ರಮಾನುಸರಣಿಕೆಯನ್ನು ಬದಲಿಸುತ್ತಿರಲಿಲ್ಲ. ಉದಾಹರಣೆಗೆ ಭ್ರೂಣದ ಬೆಳವಣಿಗೆಯಲ್ಲಿ ಶಿಶುವಿನ ಶ್ರವಣ, ದೃಷ್ಟಿ ಮತ್ತು ಹೃದಯಗಳ ಬೆಳವಣಿಗೆ ಒಂದರ ಬಳಿಕ ಒಂದರಂತೆ ಕ್ರಮಾನುಗತವಾಗಿದೆಯೆಂದು ವಿಜ್ಞಾನವು ಕಂಡುಕೊಂಡಿದೆ. ಖುರ್‌ಆನ್ ಭ್ರೂಣ ಬೆಳವಣಿಗೆಯ ಈ ಹಂತವನ್ನು ವಿವರಿಸಿಕೊಂಡುವಾಗಲೆಲ್ಲಾ, ಇದೇ ಕ್ರಮಣಿಕೆಯನ್ನು ಕಾಯ್ದುಕೊಂಡಿದೆ. ದೃಷ್ಟಿಯನ್ನೋ, ಹೃದಯವನ್ನೋ, ಶ್ರವಣಕ್ಕಿಂತ ಮೊದಲು ವಿವರಿಸಿದ ಸೂಕ್ತಿಗಳೇ ಇಲ್ಲ. ಉದಾ. (32:9, 67:23)

ಇನ್ನು 21 ನೇ ಅಧ್ಯಾಯ ಅಲ್‌ಅಂಬಿಯಾದ 30ನೇ ಸೂಕ್ತಿಯು ಭೂಮಿ, ಸೂರ್ಯ, ಚಂದ್ರ ಇತ್ಯಾದಿ ಗೋಳಗಳು ಏಕಕಾಲದಲ್ಲಿ ಉದ್ಭವಿಸಿದವು ಎನ್ನುವ ಬಿಗ್‌ಬ್ಯಾಂಗ್ ಥಿಯರಿಯನ್ನು ಸಮರ್ಥಿಸುತ್ತದೆ.
‘ಇದೇ ವಿಷಯವು ಎರಡನೇ ಅಧ್ಯಾಯ ಅಲ್‌ಬಕರದ 29ನೇ ಸೂಕ್ತಿಯಲ್ಲಿ ಹೀಗಿದೆ : ಭೂಮಿಯ ಮೇಲಿನ ಎಲ್ಲಾ ವಸ್ತುಗಳನ್ನು ನಿಮಗಾಗಿ ಸೃಷ್ಟಿಸಿದವನು ಅವನೇ ಆಗಿರುವನು. ‘ಸುಮ್ಮ' ಅವನು ಆಕಾಶದತ್ತ ಇಸ್ತವಾ ಆದನು ಮತ್ತು ಅದನ್ನು ಸಪ್ತ ಗಗನಗಳನ್ನಾಗಿ ಮಾಡಿದನು. ಅವನು‌ ಎಲ್ಲಾ ವಿಷಯಗಳ ಪೂರ್ಣಜ್ಞಾನವುಳ್ಳವನು'.

ಇಲ್ಲಿಯೂ ಕೂಡಾ ‘ಸುಮ್ಮ' ವನ್ನು ‘ನಂತರ'ವೆಂದು ಅನುವಾದಿಸಿದಲ್ಲಿ ಅದು ಖುರ್‌ಆನಿನ ಇತರ ಸೂಕ್ತಿಗಳಿಗೆ ವಿರುದ್ಧವಾಗುವುದು. ಆದುದರಿಂದ ಇಲ್ಲಿ ‘ಸುಮ್ಮ' ಎಂಬ ಪದದ ಸರಿಯಾದ ಅನುವಾದವು ‘ಮಾತ್ರವಲ್ಲದೆ' (moreover) ಎಂಬುದಾಗಿದೆ.

____________________________
* ಸಪ್ತ ಗಗನಗಳೆಂದರೆ ಸಕಲ ವಿಶ್ವ ಎಂದರ್ಥ. ಇದರಲ್ಲಿ ಭೂಮಿಯೂ ಒಳಪಡುತ್ತದೆ.
** ‘ಯೌಮ್' ಎಂಬುದಕ್ಕೆ ‘ಅವಧಿ' ಎಂಬರ್ಥವೂ ಇದೆ. ಉದಾ : ಭೂಮಿಯ ಒಂದು ಯೌಮ್ ಅಂದರೆ 24 ಗಂಟೆಗಳ ಒಂದು ಅವಧಿಯಾಗಿದೆ


ಉತ್ತರ: 1. ಮಾನವನನ್ನು ಮಣ್ಣಿನಿಂದ ಮತ್ತು ವೀರ್ಯಾಣುವಿನಿಂದ ಸೃಷ್ಟಿಸಲಾಗಿದೆ. ಮಾನವನ ಆರಂಭವು ಸ್ರವಿಸಲ್ಪಟ್ಟ ವೀರ್ಯ ಬಿಂದುವಿನಿಂದಾಗಿರುತ್ತದೆ ಎಂಬ ಪ್ರಸ್ತಾಪವು ಖುರ್‌ಆನಿನಲ್ಲಿದೆ. 75ನೇ ಅಧ್ಯಾಯದ 37ನೇ ಸೂಕ್ತಿಯೂ ಸೇರಿದಂತೆ ಪ್ರಸ್ತಾಪವು ಖುರ್‌ಆನಿನ ಹಲವು ಸೂಕ್ತಿಗಳಲ್ಲಿವೆ.

ಅವನೊಂದು ಸ್ರವಿಸಲ್ಪಟ್ಟ ವೀರ್ಯ ಬಿಂದುವಾಗಿರಲಿಲ್ಲವೇ ? (ಖುರ್‌ಆನ್ 75:37)

ಇದೇ ರೀತಿ ಖುರ್‌ಆನ್ ಮಾನವನನ್ನು ಮಣ್ಣಿನಿಂದ ಸೃಷ್ಟಿಸಲಾಗಿದೆ ಎಂದೂ ಹಲವು ಕಡೆಗಳಲ್ಲಿ ಹೇಳಿದೆ. ಆದರೆ ಇದು ಮಾನವನ ಮೂಲ ಅರ್ಥಾತ್ ಪ್ರಪ್ರಥಮ ಮಾನವನ ಸೃಷ್ಟಿಯ ಕುರಿತಾಗಿ ತಿಳಿಸಿಕೊಡುವ ಸೂಕ್ತಿಯಾಗಿದೆ.
ಓ ಜನರೇ, ನಿಮಗೆ ಮರಣಾನಂತರದ ಜೀವನದ ಬಗ್ಗೆ ಸಂಶಯವಿದ್ದರೆ ನಾವು ನಿಮ್ಮನ್ನು ಮಣ್ಣಿನಿಂದಲೂ, ನಂತರ ಮೀರ್ಯಾಣುವಿನಿಂದಲೂ, ನಂತರ ಅಲಕ್ (ಜೀವಾಣು ಅಥವಾ ಹೆಪ್ಪುಗಟ್ಟಿದ ರಕ್ತಬಿಂದು) ನಿಂದಲೂ, ನಂತರ ಪರಿಪೂರ್ಣವೂ, ಅಪರಿಪೂರ್ಣವೂ, ಆದ ಮುದ್‌ಗ (ಮಾಂಸ ಮುದ್ದೆ) ದಿಂದಲೂ ಸೃಷ್ಟಿಸಿದೆವು ಎಂಬುದು ನಿಮಗೆ ತಿಳಿದಿರಲಿ...." (ಖುರ್‌ಆನ್ 22:5...)
ಮಾನವ ಶರೀರದಲ್ಲಿರುವ ಮೂಲ ವಸ್ತುಗಳು ಎಲ್ಲವೂ ಮಣ್ಣಿನಲ್ಲಿರುವವುಗಳೇ ಆಗಿವೆ, ಪ್ರಮಾಣದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಿರಬಹುದಷ್ಟೇ. ಇದು ಮಾನವನನ್ನು ಮಣ್ಣಿನಿಂದ ಸೃಷ್ಟಿಸಲಾಗಿದೆ ಎಂಬ ಖುರ್‌ಆನಿನ ಸೂಕ್ತಿಯನ್ನು ಸಮರ್ಥಿಸುವ ವೈಜ್ಞಾನಿಕ ವಿವರಣೆಯಾಗಿದೆ.
ಇನ್ನು ಕೆಲವು ಸೂಕ್ತಿಗಳಲ್ಲಿ ಖುರ್‌ಆನ್ ಮನುಷ್ಯನನ್ನು ವೀರ್ಯಾಣುವಿನಿಂದ ಸೃಷ್ಟಿಸಲಾಗಿದೆ ಎಂದಿದ್ದರೆ, ಇನ್ನು ಕೆಲವು ಸೂಕ್ತಿಗಳಲ್ಲಿ ಮಣ್ಣಿನಿಂದ ಎಂದಿದೆ. ಆದರೆ ಇದು ವೈರುಧ್ಯವಲ್ಲ. ವೈರುಧ್ಯಗಳೆಂದರೆ ಪರಸ್ಪರ ವಿರುದ್ಧ ಮತ್ತು ಏಕಕಾಲದಲ್ಲಿ ಸಂಭವಿಸಿರಲು ಅಸಾಧ್ಯವಾದ ಎರಡು ಹೇಳಿಕೆಗಳು. ವೈರುಧ್ಯಗಳಿಂದ ಕೂಡಿದೆ ಎರಡು ಹೇಳಿಕೆಗಳು ಏಕಕಾಲದಲ್ಲಿ ಸತ್ಯವಾಗಿರಲು ಅಸಾಧ್ಯ.

2. ಮಾನವನನ್ನು ನೀರಿನಿಂದ ಸೃಷ್ಟಿಸಿರುವುದು :

ಇನ್ನು ಕೆಲವು ಕಡೆಗಳಲ್ಲಿ ಖುರ್‌ಆನ್ ಮಾನವನನ್ನು ನೀರಿನಿಂದ ಸೃಷ್ಟಿಸಲಾಗಿದೆ ಎಂದೂ ಹೇಳಿದೆ.
ಮಾನವನನ್ನು ನೀರಿನಿಂದ ಸೃಷ್ಟಿಸಿದವನು ಅವನೇ ಆಗಿರುವನು " (ಖುರ್‌ಆನ್ 25:54)
ಮಾನವನನ್ನು ವೀರ್ಯಾಣುವಿನಿಂದ, ಮಣ್ಣಿನಿಂದ ಹಾಗೂ ನೀರಿನಿಂದ* ಸೃಷ್ಟಿಸಲಾಗಿದೆ ಎಂಬ ಖುರ್‌ಆನಿನ ಮೂರು ಹೇಳಿಕೆಗಳೂ ಸತ್ಯವಾಗಿವೆ ಎಂದು ವಿಜ್ಞಾನವು ಸಾಬೀತು ಪಡಿಸಿದೆ. ಮಾನವನು ವೀರ್ಯಾಣುವಿನಿಂದ ಸೃಷ್ಟಿಸಲ್ಪಟ್ಟವನು ಎಂಬುದು ಅವನು ನೀರಿನಿಂದ ಸೃಷ್ಟಿಸಲ್ಪಟ್ಟವನು, ಮಣ್ಣಿನಿಂದ ಸೃಷ್ಟಿಸಲ್ಪಟ್ಟವನು ಎಂಬುದರಷ್ಟೇ ಸತ್ಯವಾಗಿದೆ.

3. ಖುರ್‌ಆನಿನಲ್ಲಿರುವುದು ವೈವಿಧ್ಯತೆಗಳೇ ಹೊರತು ವೈರುಧ್ಯವಲ್ಲ :

ಚಹಾವನ್ನು ನೀರಿನಿಂದ ತಯಾರಿಸಲಾಗಿದೆ.
ಚಹಾವನ್ನು ಚಾಹುಡಿಯಿಂದ ತಯಾರಿಸಲಾಗಿದೆ.
ಈ ಮೇಲಿನ ಎರಡು ಹೇಳಿಕೆಗಳಲ್ಲಿ ಯಾವುದೇ ವೈರುಧ್ಯಗಳಿಲ್ಲ. ಏಕೆಂದರೆ ಚಹಾವನ್ನು ತಯಾರಿಸಲು ನೀರಿ‌ನ ಅಗತ್ಯವೂ ಇದೆ, ಚಾ ಹುಡಿಯೂ ಅವಶ್ಯವಾಗಿದೆ. ಇನ್ನು ಸಿಹಿ ಚಹಾವೆಂದಾದರಡ ಸಕ್ಕರೆಯನ್ನೂ ಸೇರಿಸಬಹುದಾಗಿದೆ.
ಇದೇ ರೀತಿ ಮಾನವ ಶರೀರಧಾತುಗಳೆಲ್ಲವೂ ಮಣ್ಣಿನಲ್ಲಿರುವವುಗಳೇ ಆಗಿದೆ. ಮಾನವ ಶರೀರವು ರಚಿತಗೊಂಡ ಪುಟ್ಟ ಪುಟ್ಟ ಜೀವಕೋಶಗಳ ಅಧಿಕ ಭಾಗವೂ ನೀರಿನಿಂದ ತುಂಬಿದೆ. ಇನ್ನು ಮಾನವನ ವಂಶಾಭಿವೃದ್ಧಿಯ ಆರಂಭಗೊಳ್ಳುವುದು ಒಂದು ಸೂಕ್ಷ್ಮವಾದ ವೀರ್ಯಾಣುವಿನಿಂದಾಗಿದೆ. ಆದುದರಿಂದ ಖುರ್‌ಆನಿನ ಮೂರು ಹೇಳಿಕೆಗಳೂ ಸತ್ಯವಾಗಿದೆ. ಇದು ಮಾನವ ಶರೀರದ ಕುರಿತಾದ ಖುರ್‌ಆನಿನಲ್ಲಿರುವ ಒಂದು ವೈವಿಧ್ಯಮಯ ಹೇಳಿಕೆಯಾಗಿದೆ. ವೈವಿಧ್ಯತೆಯೆಂದರೆ ಒಂದು ವಿಷಯದ ಕುರಿತಾದ ಪರಸ್ಪರ ವಿರುದ್ಧವಲ್ಲದ ವಿಭಿನ್ನ ಹೇಳಿಕೆಯಾಗಿದೆ. ವೈವಿಧ್ಯತೆಯೆಂದರೆ ಒಂದು ವಿಷಯದ ಕುರಿತಾದ ಪರಸ್ಪರ ವಿರುದ್ಧವಲ್ಲದ ವಿಭಿನ್ನ ಹೇಳಿಕೆಗಳು . ಉದಾಹರಣೆಗೆ ಒಬ್ಬ ವ್ಯಕ್ತಿಯನ್ನು ಸತ್ಯಸಂಧನೆಂದು ಕರೆಯುವ ಜೊತೆಗೆ ಅವನೊಬ್ಬ ಸುಳ್ಳನು ಎಂದು ಹೇಳುವುದು ವೈರುಧ್ಯವಾಗಿದೆ. ಆದರೆ ಒಬ್ಬ ವ್ಯಕ್ತಿಯನ್ನು ಸತ್ಯಸಂಧನೆಂದು ಹೇಳಿ ಬಳಿಕ ಅವನೊಬ್ಬ ಪ್ರಾಮಾಣಿಕ ವ್ಯಕ್ತಿಯೂ ಹೌದು ಎಂದು ಹೇಳುವುದು ವೈವಿಧ್ಯತೆಯಾಗಿದೆ.
____________________________
*
ಮಾನವ ಶರೀರವು ಜೀವ ಕೋಶಗಳಿಂದ ರಚಿತವಾಗಿದೆ. DNAಗಳ ಆವಿಷ್ಕಾರಕ್ಕೆ (James Watson & Francis, 1953) ಮೊದಲು ಕೋಶದ್ರವ (cytoplasm)ವನ್ನು ಜೀವೋತ್ಪತ್ತಿಯ ಮೂಲಕಣವೆಂದು ನಂಬಲಾಗಿತ್ತು. ಆದರೆ ಜೀವೋತ್ಪತ್ತಿಯ ಮೂಲಕಣವು DNA ಎಂಬುದನ್ನು ವಿಜ್ಞಾನವು ಕಂಡುಕೊಂಡಿದ್ದು ಈ ಕಣವು ತನ್ನ ಅಸ್ತಿತ್ವಕ್ಕಾಗಿ ಅವಶ್ಯವಿರುವ ಜಲಜನಕ (H2)ವನ್ನು ಕೋಶದ್ರವದ ನೀರಿನಿಂದಲೇ ಪಡಕೊಳ್ಳುತ್ತವೆ.


ಉತ್ತರ :

1 “ಅಲ್ಲಾಹನು ಪೂರ್ವಗಳೆರಡರ ಹಾಗೂ ಪಶ್ಚಿಮಗಳೆಡರ ಒಡೆಯನು".

ಪ್ರಸ್ತುತ ವಿಷಯವನ್ನು ಪ್ರಸ್ತಾಪಿಸುವ ಸೂಕ್ತಿಯು ಖುರ್‌ಆನಿನ 55ನೇ ಅಧ್ಯಾಯ ಅರ್ರಹ್ಮಾನ್‌ನಲ್ಲಿದೆ.ಅವನು ಎರಡು ಪೂರ್ವಗಳ ಹಾಗೂ ಎರಡು ಪಶ್ಚಿಮಗಳ ಒಡೆಯನು". (ಖುರ್‌ಆನ್ 55:17)


2. “
ಪೂರ್ವ ಪಶ್ಚಿಮಗಳೆರಡರ ಕಟ್ಟ ಕಡೆಯ ಬಿಂದುಗಳ (Extreme ends) ಒಡೆಯನು ಅಲ್ಲಾಹನು"

ಸೂರ್ಯೋದಯವಾಗುವುದು ಪೂರ್ವ ದಿಕ್ಕಿನಿಂದಾದರೂ, ಅದು ಉದಿಸುವ ಸ್ಥಾನವು ವರ್ಷಾದ್ಯಂತ ಪಲ್ಲಟಗೊಳ್ಳುತ್ತಿರುವ ವಿಷಯವು ವೈಜ್ಞಾನಿಕ ಕ್ಷೇತ್ರಕ್ಕೆ ಮಾತ್ರವಲ್ಲದೆ ಜನ ಸಾಮಾನ್ಯರಿಗೂ ಪರಿಚಿತ. ಇಕ್ವಿನೋಕ್ಸ್' (Equinox) ಎಂದು ಕರೆಯಲ್ಪಡುವ ಎರಡು ಪ್ರತ್ಯೇಕ ದಿನಗಳಂದು ಮಾತ್ರ ಸೂರ್ಯ ಅತ್ಯಂತ ನಿಖರವಾದ ಪೂರ್ವ ಅಥವಾ ಪೂರ್ವದ ಅತ್ಯಂತ ಮಧ್ಯ ಬಿಂದುವಿನಿಂದ ಉದಿಸುವುದು ಒಂದು ವಾಸ್ತವಿಕತೆಯಾಗಿದೆ. ಉಳಿದೆಲ್ಲಾ ದಿನಗಳಲ್ಲಿ ಈ ಮಧ್ಯಮ ಬಿಂದುವಿನಿಂದ ಅಲ್ಪ ಉತ್ತರಕ್ಕೋ ಅಥವಾ ದಕ್ಷಿಣಕ್ಕೋ ಸರಿದುಕೊಂಡೇ ಸೂರ್ಯೋದಯವಾಗುವುದು. ಉತ್ತರಾಯಣ(4) (Summer solstice)ದ ಕೊನೆಯ ದಿನದಂದು ಸೂರ್ಯನು ಮಧ್ಯಮ ಬಿಂದುವಿನ ನಿರ್ದಿಷ್ಟ ಬದಿಗಿರುವ ಅತ್ಯಂತ ದೂರ ಹಾಗೂ ಕಟ್ಟಕಡೆಯ ಬಿಂದುವಿನಿಂದ ಉದಿಸಿದರೆ (ಜೂನ್ 21) ದಕ್ಷಿಣಾಯಣದಲ್ಲಿ ಅದು ಮಧ್ಯಮ ಬಿಂದುವಿನಿಂದ ಇನ್ನೊಂದು ಬದಿಗಿರುವ ಅತ್ಯಂತ ದೂರ ಹಾಗೂ ಕಟ್ಟಕಡೆಯ ಬಿಂದುವಿನಿಂದ (ಡಿಸಂಬರ್ 22) ಉದಿಸುತ್ತದೆ.
ಇದೇ ರೀತಿ ಸೂರ್ಯನು ಉತ್ತರಾಯಣದ ಕೊನೆಯ ದಿನದಂದು ಪಶ್ಚಿಮದ ಮಧ್ಯಮ ಬಿಂದುವಿನಿಂದ ನಿರ್ದಿಷ್ಟ ಬದಿಗಿರುವ ಅತ್ಯಂತ ದೂರ ಹಾಗೂ ಕಟ್ಟಕಡೆಯ ಒಂದು ಬಿಂದುವಿನಿಂದ ಅಸ್ತಮಿಸಿದರೆ ದಕ್ಷಿಣಾಯಣದ ಕೊನೆಯ ದಿನದಂದು ಅದು ಇನ್ನೊಂದು ಬದಿಯ ಅತ್ಯಂತ ದೂರ ಹಾಗೂ ಕಟ್ಟಕಡೆಯ ಬಿಂದುವಿನಿಂದ ಅಸ್ತಮಿಸುತ್ತದೆ.
ಈ ಪ್ರತಿಕ್ರಿಯೆನ್ನು ಮುಂಬಯಿಯಂತಹ ನಗರಗಳಲ್ಲಿ ಸುಲಭವಾಗಿ ವೀಕ್ಷಿಸಬಹುದು. ಅಥವಾ ಸೂರ್ಯೋದಯ, ಸೂರ್ಯಾಸ್ತಮಾನ ದೃಶ್ಯಗಳನ್ನು ಸುಲಭವಾಗಿ ವೀಕ್ಷಿಸಬಹುದಾದಂತಹ ಪ್ರದೇಶದಲ್ಲಿ ವಾಸಿಸುವ ಜನರಿಗೆ ಇದು ಚಿರಪರಿಚಿತ. ಉತ್ತರಾಯಣದಲ್ಲಿ ಪೂರ್ವ ಮಧ್ಯಮ ಬಿಂದುವಿನಿಂದ ಉತ್ತರ ದಿಕ್ಕಿಗಿರುವ ವಿವಿಧ ಸ್ಥಾನಗಳಿಂದ ಸೂರ್ಯೋದಯವಾದರೆ, ದಕ್ಷಿಣಾಯಣದಲ್ಲಿ ಪೂರ್ವ ಮಧ್ಯಮ ಬಿಂದುವಿನಿಂದ ದಕ್ಷಿಣ ದಿಕ್ಕಿಗಿರುವ ವಿವಿಧ ಸ್ಥಾನಗಳಿಂದ ಸೂರ್ಯೋದಯವಾಗುವ ವಿಷಯವು ಈ ಜನರಿಗೆ ಸರ್ವೇ ಸಾಮಾನ್ಯ. ಚುಡುಕಾಗಿ ಹೇಳುವುದಾದರೆ ವರ್ಷಾದ್ಯಂತ ಸೂರ್ಯನು ಪೂರ್ವದ ವಿವಿಧ ಸ್ಥಾನಗಳಿಂದ ಉದಯಿಸುವನು ಮತ್ತು ಪಶ್ಚಿಮದ ಬೇರೆ ಬೇರೆ ಸ್ಥಾನಗಳಿಂದ ಅಸ್ತಮಿಸುವನು.
ಆದುದರಿಂದ ಖುರ್‌ಆನ್ ಪ್ರಸ್ತಾಪಿಸಿದಂತೆ ಅಲ್ಲಾಹನು ಎರಡು ಪೂರ್ವಗಳ ಹಾಗೂ ಎರಡು ಪಶ್ಚಿಮಗಳ ಒಡೆಯನೆಂದರೆ ಅದು ಅವನು ಪೂರ್ವ ಪಶ್ಚಿಮಗಳೆರಡರ ಉದಯಾಸ್ತಮಾನ ಪರಿಧಿಯ ಕಟ್ಟಕಡೆಯ ಬಿಂದುಗಳ ಅರ್ಥಾತ್ ಪೂರ್ವ ಪರಿಧಿಯ ಎರಡು ಬಿಂದುಗಳು ಮತ್ತು ಪಶ್ಚಿಮ ಪರಿಧಿಯ ಎರಡು ಬಿಂದುಗಳ ಒಡೆಯನು ಎಂದರ್ಥ.

3. ಅಲ್ಲಾಹನು ಪೂರ್ವ ಪಶ್ಚಿಮಗಳ ಎಲ್ಲಾ ಬಿಂದುಗಳ ಒಡೆಯನೂ ಹೌದು :

ಅರಬೀ ಭಾಷೆಯಲ್ಲಿ ಎರಡು ವಿಧದ ಸಂಖ್ಯಾ ಸೂಚಕ ಬಹುವಚನಗಳಿವೆ. ಒಂದನೆಯದು ಎರಡರ ಅಥವಾ ಜೋಡಿಯ ಬಹುವಚನ . ಅಧ್ಯಾಯ ಅರ್ರಹ್ಮಾನಿನ 17ನೇ ಸೂಕ್ತಿಯಲ್ಲಿ ಬಳಸಿರುವ ಪದಗಳು ಮಶಿರಿಕೈನಿ" ಮತ್ತು ಮಗ್ರಿಬೈನಿ". ಅರ್ಥಾತ್ ಜೋಡಿಯ ಅಥವಾ ಎರಡರ ಬಹುವಚನ. ಆದುದರಿಂದ ಅದು ಎರಡು ಪೂರ್ವಗಳ ಮತ್ತು ಎರಡು ಪಶ್ಚಿಮಗಳ" ಎಂಬ ಅಥವಾ ಅರ್ಥವನ್ನು ಹೊಮ್ಮಿಸುತ್ತದೆ.
ಇನ್ನು ಖುರ್‌ಆನಿನಲ್ಲಿರುವ ಈ ಕೆಳಗಿನ ವಚನವನ್ನು ಪರಿಶೀಲಿಸೋಣ :
ನಾನು ಎಲ್ಲಾ ಪೂರ್ವಗಳ ಮತ್ತು ಎಲ್ಲಾ ಪಶ್ಚಿಮಗಳ ಒಡೆಯನ ಆಣೆ ಹಾಕುತ್ತೇನೆ" (ಖುರ್‌ಆನ್ : 70:40)
ಪ್ರಸ್ತುತ ಸೂಕ್ತಿಯಲ್ಲಿರುವ ಪೂರ್ವ ಪಶ್ಚಿಮಗಳಿಗೆ ಬಳಸಿರುವ ಅರಬೀ ಪದಗಳು ಮಶಾರಿಕಿ' ಮತ್ತು ಮಗಾರಿಬಿ' ಗಳಾಗಿವೆ. ಇವುಗಳ ಸಂಖ್ಯೆಯಲ್ಲಿ ಎರಡಕ್ಕಿಂತ ಅಧಿಕವಿರುವವುಗಳನ್ನು ಸೂಚಿಸುವ ಬಹುವಚನ ಪದಗಳಾಗಿವೆ.
ಆದುದರಿಂದ ಖುರ್‌ಆನ್ ಅಲ್ಲಾಹನು ಪೂರ್ವ ಪಶ್ಚಿಮಗಳ ಕಟ್ಟಕಡೆಯ ಅಂಚುಗಳೂ ಸೇರಿದಂತೆ ಎಲ್ಲಾ ಸ್ಥಾನಗಳ ಒಡೆಯನು ಎಂದು ಹೇಳಿದೆ.

____________________________
(4)
ಉತ್ತರಾಯಣವೆಂದರೆ ಸೂರ್ಯನು ಉತ್ತರದ ಕಡೆಗೆ ವಾಲುತ್ತಾ ಸಾಗುವ ಕಾಲ. ಡಿಸಂಬರ್ 22 ರಿಂದ ಜೂನ್ 21ರ ವರೆಗಿನ ಕಾಲ


ಉತ್ತರ :
1 ಅಲ್ಲಾಹನ ಸಮಯ ಮತ್ತು ಭೂಮಿಯ ಸಮಯವು ಸರಿಸಮಾನವಲ್ಲ :
ಪವಿತ್ರ ಖುರ್‌ಆನ್ ಎರಡು ಸೂಕ್ತಿಗಳಲ್ಲಿ (22:47 ಮತ್ತು 32:5) ಅಲ್ಲಾಹನ ಒಂದು ದಿನವು ನಮ್ಮ ಗಣನೆಯ ಸಾವಿರ ವರ್ಷಗಳಿಗೆ ಸಮಾನವೆಂದು ಹೇಳಿದೆ. ಇನ್ನೊಂದು ಕಡೆಯಲ್ಲಿ (70:4) ಅದು ಅಲ್ಲಾಹನ ದಿನವು ಗಣನೆಯ 50,000 ವರುಷಗಳಿಗೆ ಸಮಾನವೆಂದಿದೆ.
ಈ ವಚನಗಳು ಅಲ್ಲಾಹನ ಸಮಯ ಮತ್ತು ಭೂಮಿಯ ಸಮಯ ಸಮಾನವಲ್ಲ ಎಂಬ ಸಾಮಾನ್ಯ ಅರ್ಥವನ್ನು ಹೊಮ್ಮಿಸುತ್ತವೆ. ಅಂದರೆ ಭೂಲೋಕದ ಹಲವು ಸಾವಿರ ವರ್ಷಗಳಷ್ಟು ದೀರ್ಘವಾದ ಅವಧಿಯು ಅಲ್ಲಾಹನಿಗೆ ಒಂದು ದಿನಕ್ಕೆ ಸಮಾನ ಎಂಬ ಉದಾಹರಣೆಯ ಮೂಲಕ ಇದನ್ನು ಸ್ಪಷ್ಟಪಡಿಸಲಾಗಿದೆ.
2. ಯೌಮ್ ಅಂದರೆ ‘ಅವಧಿ' ಎಂಬ ಅರ್ಥವೂ ಇದೆ :
ಮೇಲೆ ತಿಳಿಸಿದ ಮೂರು ಸೂಕ್ತಿಗಳಲ್ಲೂ ಬಳಸಿದ ಅರೇಬಿಕ್ ಪದವು ‘ಯೌಮ್' ಎಂಬುದಾಗಿದೆ. ಇದು ‘ದಿನ' ಎಂಬ ಅರ್ಥದೊಂದಿಗೆ ‘ಅವಧಿ' ಅಥವಾ ‘ಯುಗ' ಎಂಬ ಅರ್ಥವನ್ನೂ ಹೊಂದಿದೆ. ಆದುದರಿಂದ ‘ಯೌಮ್' ಎಂಬ ಪದವನ್ನು ‘ಅವಧಿ' ಎಂದು ಸರಿಯಾಗಿ ಅನುವಾದಿಸಿದಲ್ಲಿ ಗೊಂದಲಗಳೆಲ್ಲವೂ ನಿವಾರಣೆಯಾಗಿಬಿಡುತ್ತದೆ.
a. ಅಧ್ಯಾಯ ‘ಹಜ್ಜ್'ನ ಸೂಕ್ತಿಯನ್ನು ಹೀಗೆ ಅನುವಾದಿಸಬಹುದು. “ಅವರು ಯಾತನೆಗಾಗಿ ತವಕ ಪಡುತ್ತಾರೆ. ಆದರೆ ಅಲ್ಲಾಹನು ತನ್ನ ವಾಗ್ದಾನವನ್ನೆಂದೂ ಮುರಿಯಲಾರ. ನಿಶ್ಚಯವಾಗಿಯೂ ನಿನ್ನ ಪ್ರಭುವಿನ ಬಳಿಯ ಒಂದು ಅವಧಿ (ಯೌಮ್) ನಿಮ್ಮ ಗಣನೆಯ ಸಾವಿರ ವರ್ಷಗಳಿಗೆ ಸಮಾನ" (ಖುರ್‌ಆನ್ 22:47)
ಸತ್ಯ ನಿಷೇಧಿಗಳು ಅಲ್ಲಾಹನ ಯಾತನೆ ಏಕೆ ಎರಗುವುದಿಲ್ಲವೆಂದು ಆತುರಪಟ್ಟಾಗ ಈ ರೀತಿ ಉತ್ತರಿಸಲಾಯಿತು.
b. ಅಧ್ಯಾಯ ಅಸ್ಸಜದ : ದ ಸೂಕ್ತಿಯು ಹೀಗೆನ್ನುತ್ತದೆ.
“ಅವನು ಆಕಾಶದಿಂದ ಭೂಮಿಯವರೆಗಿನ ಎಲ್ಲ ಕಾರ್ಯಗಳ ವ್ಯವಸ್ಥೆ ನಡೆಸುತ್ತಾನೆ. ಈ ವ್ಯವಸ್ಥೆಯ ವರದಿಯು ನಿಮ್ಮಗಣನೆಯ ಒಂದು ಸಾವಿರ ವರ್ಷವಾಗಿರುವ ಒಂದು ಅವಧಿ (ಯೌಮ್)ಯಲ್ಲಿ ಮೇಲಕ್ಕೇರಿ ಅವನ ಬಳಿಗೆ ಹೋಗುತ್ತದೆ. " (ಖುರ್‌ಆನ್ 32:5) ಕಾರ್ಯಗಳ ಎಲ್ಲಾ ವರದಿಗಳು ಅವನ ಬಳಿ ತಲುಪಲು ಬೇಕಾದ ಅವಧಿಯು ನಮ್ಮ (ಭೂಮಿಯ) ಗಣನೆಯ ಸಾವಿರ ವರ್ಷಗಳಿಗೆ ಸಮಾನ ಎಂದು ಇಲ್ಲಿ ಹೇಳಲಾಗಿದೆ.
c. ಅಧ್ಯಾಯ ಮಿಅರಾಜ್‌ನ ಒಂದು ಸೂಕ್ತಿಯು ಹೀಗೆನ್ನುತ್ತದೆ.
“ದೇವಚರರು ಮತ್ತು ರೂಹ್ ಅವನ ಸಾನ್ನಿಧ್ಯಕ್ಕೆ ಐವತ್ತು ಸಾವಿರ ವರ್ಷಗಳ ಅವಧಿಯುಳ್ಳ ಒಂದು ಅವಧಿ (ಯೌಮ್)ಯಲ್ಲಿ ಏರಿ ಹೋಗುತ್ತಾರೆ. " (ಖುರ್‌ಆನ್ 70:4)
ದೇವಚರರು ಮತ್ತು ರೂಹ್ ಅಲ್ಲಾಹನ ಬಳಿಗೆ ಏರಿ ಹೋಗಲು ಐವತ್ತು ಸಾವಿರ ವರ್ಷಗಳ ಅವಧಿ ಅವಶ್ಯವಿದೆ ಎಂದು ಇಲ್ಲಿ ಹೇಳಲಾಗಿದೆ.
d. ಎರಡು ಬೇರೆ ಬೇರೆ ಕಾರ್ಯಗಳನ್ನು ಎಸಗಲು ಅಗತ್ಯವಿರುವ ಅವಧಿಯು ಒಂದೇ ಆಗಿರಬೇಕೆಂದಿಲ್ಲ. ಉದಾಹರಣೆಗೆ ಬೆಂಗಳೂರನ್ನು ತಲುಪಲು ತಗಲುವ ಅವಧಿಯು ಆರು ಘಂಟೆಗಳಾದರೆ ಮುಂಬಯಿಯನ್ನು ತಲುಪಲು ಹದಿನೆಂಟು ಘಂಟೆಗಳ ಸಮಯ ಬೇಕಾಗುತ್ತದೆ‌.
ಈ ಎರಡು ಹೇಳಿಕೆಗಳಲ್ಲಿ ಯಾವುದೇ ವೈರುಧ್ಯಗಳಿಲ್ಲ.
ಆದುದರಿಂದ ಖುರ್‌ಆನ್‌ನ ಸೂಚಿಸಿದ ಎರಡು ವಿಭಿನ್ನ ಕಾರ್ಯಗಳಿಗೆ ತಗಲುವ ಬೇರೆ ಬೇರೆ ಸಮಯದ ಕುರಿತಾದ ಹೇಳಿಕೆಗಳಲ್ಲಿ ಯಾವುದೇ ವೈರುಧ್ಯಗಳಿಲ್ಲ. ಬದಲಾಗಿ ಅವುಗಳು ಆಧುನಿಕ ವಿಜ್ಞಾನವು ಕಂಡುಕೊಂಡಿರುವ ವಾಸ್ತವಿಕತೆಯೊಂದಿಗೆ ಸಾಮರಸ್ಯ ಹೊಂದಿವೆ.


 
 

 

 


ಉತ್ತರ :

1. ದೇವಚರರು ಮತ್ತು ಇಬ್ಲೀಸನ ಪ್ರಸ್ತಾಪಗಳು ಬಂದ ಸೂಕ್ತಿಗಳು :

ಅದಮ್(ಅ) ಮತ್ತು ಇಬ್ಲೀಸನ ಪ್ರಸ್ತಾಪಗಳನ್ನು ಖುರ್‌ಆನಿನ ಹಲವು ಕಡೆಗಳಲ್ಲಿ ಕಾಣಬಹುದು. ಅಲ್ಲಾಹನು ದೇವಚರರೊಂದಿಗೆ ಆದಮರ ಮುಂದೆ ಬಾಗಲು ಅಜ್ಞಾಪಿಸಿದಾಗ ಇಬ್ಲೀಸನ ಹೊರತು ಎಲ್ಲರೂ ಬಾಗಿದ ಆ ಸಂದರ್ಭದ ಕುರಿತಾದ ಖುರ್‌ಆನಿನ ಪ್ರಸ್ತಾಪಗಳು ಈ ಕೆಳಗಿನ ಸ್ಥಳಗಳಲ್ಲಿವೆ.

ಅಧ್ಯಾಯ 2 ‘ಅಲ್‌ಬಕರ' ಸೂಕ್ತಿ 33
ಅಧ್ಯಾಯ 7 ಅಲ್-ಅ‘ರಾಫ್ ಸೂಕ್ತಿ 17
ಅಧ್ಯಾಯ 15 ಅಲ್-ಹಿಜ್‌ರ್ ಸೂಕ್ತಿ 28-31
ಅಧ್ಯಾಯ 17 ಅಲ್-ಇಸ್ರಾ ಸೂಕ್ತಿ 61
ಅಧ್ಯಾಯ 20 ತ್ವಾಹಾ ಸೂಕ್ತಿ 116
ಅಧ್ಯಾಯ 38 ಸ್ವಾದ್ ಸೂಕ್ತಿ 71-74

ಆದರೆ 18ನೇ ಅಧ್ಯಾಯ ಅಲ್-ಕಹಫ್‌ನ 50ನೇ ಸೂಕ್ತಿಯು ಹೇಳುತ್ತದೆ.

“ಸ್ಮರಿಸಿರಿ ! ನಾವು ದೇವಚರರೊಡನೆ ಆದಮರಿಗೆ ಸಜ್ದ : (ಸಾಷ್ಠಾಂಗ) ಎರಗಿರಿ ಎಂದು ಹೇಳಿದ (ಆ ಸಂದರ್ಭವನ್ನು) ಇಬ್ಲೀಸನ ಹೊರತು ಅವರೆಲ್ಲರೂ ಸಜ್ದ (ಸಾಷ್ಟಾಂಗ)ವೆರಗಿದರು‌. ಅವನು (ಇಬ್ಲೀಸನು) ಜಿನ್ನ್ (ಯಕ್ಷ)ಗಳಲ್ಲಾಗಿದ್ದನು" (ಖುರ್‌ಆನ್ 18:50)


2. ಅರಬೀ ಭಾಷಾ ವ್ಯಾಕರಣದಲ್ಲಿ ತಗ್‌ಲೀಬ್ ಎಂಬ ನಿಯಮವಿದೆ:

ಪ್ರಸ್ತುತ ಖುರ್‌ಆನ್ ಸೂಕ್ತಿಯ ಮೊದಲ ಭಾಗದಲ್ಲಿ ದೇವಚರರೊಡನೆ ಸಾಷ್ಟಾಂಗವೆರಗಲು ಹೇಳಿದಾಗ ಇಬ್ಲೀಸನು ಸಾಷ್ಟಾಂಗವೆರಗಲಿಲ್ಲ ಎಂಬ ಉಲ್ಲೇಖವಿದೆ. ಇದರಿಂದ ಇಬ್ಲೀಸನು ಸಹ ಒಬ್ಬ ದೇವಚರನು (ಮಲಕ್) ಎಂಬ ತಪ್ಪು ಅರ್ಥವನ್ನು ಹೆಚ್ಚಿನೆಲ್ಲಾ ಜನರು ಕಲ್ಪಿಸಿಕೊಂಡಿರುವರು. ಜನರ ಈ ಕಲ್ಪನೆ ತಪ್ಪೆಂದು ತಿಳಿಸುವ ಸಲುವಾಗಿ ಖುರ್‌ಆನಿನ 18ನೇ ಅಧ್ಯಾಯದಲ್ಲಿ ಇಬ್ಲೀಸನು ಒಬ್ಬ ಜಿನ್ನ್ ಎಂಬುದನ್ನು ಅಲ್ಲಾಹನು ಸ್ಪಷ್ಟಪಡಿಸಿ ಕೊಟ್ಟಿರುವನು. ಖುರ್‌ಆನ್ ಅವತೀರ್ಣಗೊಂಡಿರುವುದು ಅರಬೀ ಭಾಷೆಯಲ್ಲಿ. ಅರಬೀ ಭಾಷಾ ವ್ಯಾಕರಣದಲ್ಲಿ ತಗ್‌ಲೀಬ್ ಎಂಬ ನಿಯಮವಿದೆ. ಈ ನಿಯಮದಂತೆ ಒಂದು ಗುಂಪಿನ ಬಹುಸಂಖ್ಯಾತರನ್ನು ಅಭಿಸಂಬೋಧಿಸಿದಲ್ಲಿ ಅದು ಆ ಗುಂಪಿನ ಅಲ್ಪಸಂಖ್ಯಾತರಿಗೂ ಅನ್ವಯಿಸುವುದು.

ಉದಾಹರಣೆಗೆ 99 ಹುಡುಗರು ಹಾಗೂ ಒಂದು ಹುಡುಗಿಯಿರುವ ತರಗತಿಯೊಂದರ ಅಧ್ಯಾಪಕರು ಹುಡುಗರೆಲ್ಲಾ ಎದ್ದು ನಿಲ್ಲಿ ಎಂದು ಅರಬೀ ಭಾಷೆಯಲ್ಲಿ ಆಜ್ಞಾಪಿಸಿದರೆ ಅದು ಆ ಹುಡುಗಿಗೂ ಅನ್ವಯವಾಗುವುದು. ಅವಳಿಗೆ ಪ್ರತ್ಯೇಕ ಆಜ್ಞೆಯನ್ನು ನೀಡಬೇಕೆಂದಿಲ್ಲ.

ಆದುದರಿಂದ ಇಬ್ಲೀಸನಿದ್ದ ದೇವಚರರ ಸಮೂಹದೊಂದಿಗೆ ಅಲ್ಲಾಹನು ಸಾಷ್ಟಾಂಗವೆರಗಲು ಆಜ್ಞಾಪಿಸಿದಾಗ ಅದು ಇಬ್ಲೀಸನನ್ನೂ ಅಭಿಸಂಬೋಧಿಸಿದಂತಾಗುವುದು. ಅವನಿಗೆ ಪ್ರತ್ಯೇಕ ಆಜ್ಞೆಯನ್ನು ನೀಡಬೇಕೆಂದಿಲ್ಲ. ಆದುದರಿಂದ 18ನೇ ಅಧ್ಯಾಯದ 50ನೇ ಸೂಕ್ತಿಯ ಮೊದಲ ಭಾಗದ ಪ್ರಕಾರ ಇಬ್ಲೀಸನು ಒಬ್ಬ ದೇವಚರನಾಗಿರಲೂ, ದೇವಚರನಾಗದಿರಲೂ ಸಾಧ್ಯವಿದೆ. ಇಬ್ಲೀಸನು ಯಾವ ಗುಂಪಿಗೆ ಸೇರಿದವನು ಎಂಬುದನ್ನು ಅಲ್ಲಾಹನು ಇದೇ ಸೂಕ್ತಿಯ ಮುಂದಿನ ಭಾಗದಲ್ಲಿ ಸ್ಪಷ್ಟಪಡಿಸಿಕೊಡುವನು

“ಅವನು ಜಿನ್ನ್ (ಯಕ್ಷ)ವರ್ಗದವನಾಗಿದ್ದನು" (ಖುರ್‌ಆನ್ 18:50)

ಇಬ್ಲೀಸ್ ಒಬ್ಬ ದೇವಚರನೆಂಬ ಉಲ್ಲೇಖವನ್ನು ಖುರ್‌ಆನಿನಲ್ಲಿ ಕಾಣಲು ಅಸಾಧ್ಯ. ಆದುದರಿಂದ ಇದನ್ನೊಂದು ವೈರುಧ್ಯವೆಂದು ಕರೆಯುವುದು ಸರಿಯಲ್ಲ.


3 . ಅಲ್ಲಾಹನ ಆಜ್ಞೆಯನ್ನು ಉಲ್ಲಂಘಿಸುವ ಸ್ವಾತಂತ್ರ್ಯವಿರುವುದು ಜಿನ್ನ್‌ಗಳಿಗೆ ಮಾತ್ರ :

ಮನುಷ್ಯರಂತೆ ಜಿನ್ನ್‌ಗಳಿಗೆ ಕೂಡಾ ಅಲ್ಲಾಹನ ಆಜ್ಞೆಯನ್ನು ಅನುಸರಿಸುವ ಮತ್ತು ಉಲ್ಲಂಘಿಸುವ ಸ್ವಾತಂತ್ರ್ಯವಿದೆ. ಆದರೆ ಇಂತಹ ಸ್ವಾತಂತ್ರ್ಯವು ದೇವಚರರಿಗಿಲ್ಲ. ಅವರು ಅಲ್ಲಾಹನ ಆಜ್ಞೆಯನ್ನು ಉಲ್ಲಂಘಿಸಲಾರರು. ಇಬ್‌ಲೀಸನು ದೇವಚರನೆಂದಾದಲ್ಲಿ ಅಲ್ಲಿ ಆಜ್ಞೋಲ್ಲಂಘನೆಯ ಪ್ರಶ್ನೆಯೇ ಉದ್ಭವಿಸಲಾರದು. ಇದು ಇಬ್‌ಲೀಸನು ಒಬ್ಬ ಜಿನ್ನ್ ವರ್ಗದವನು ಎಂಬುದಕ್ಕೆ ಇನ್ನೊಂದು ಪುರಾವೆ.


ಉತ್ತರ : ಖುರ್‌ಆನ್ ಉತ್ತರಾಧಿಕಾರದ ವಿಷಯವನ್ನು ಹಲವು ಕಡೆಗಳಲ್ಲಿ ವಿವರಿಸಿದೆ.

2ನೇ ಅಧ್ಯಾಯ ಅಲ್‌ಬಕರ 180ನೇ ಸೂಕ್ತಿ
2
ನೇ ಅಧ್ಯಾಯ ಅಲ್‌ಬಕರ 240ನೇ ಸೂಕ್ತಿ
4
ನೇ ಅಧ್ಯಾಯ ಅನ್ನಿಸಾ 7 ರಿಂದ 9ರವರೆಗಿನ ಸೂಕ್ತಿಗಳು ಮತ್ತು ಸೂಕ್ತಿ ಸಂಖ್ಯೆ 176
4
ನೇ ಅಧ್ಯಾಯ ಅನ್ನಿಸಾ 19 ಮತ್ತು 33ನೇ ಸೂಕ್ತಿ
5
ನೇ ಅಧ್ಯಾಯ ಅಲ್-ಮಾಇದಾ 105 ಮತ್ತು 108ನೇ ಸೂಕ್ತಿ
ಖುರ್‌ಆನ್ ಉತ್ತರಾಧಿಕಾರದ ವಿಂಗಡನೆಯನ್ನು ಸುಸ್ಪಷ್ಟವಾಗಿ 4ನೇ ಅಧ್ಯಾಯದ 11,12 ಮತ್ತು 176ನೇ ವಿವರಿಸಿದೆ.

ಅರುಣ್ ಶೌರಿಯವರು ಉಲ್ಲೇಖಿಸಿದ ಖುರ್‌ಆನಿನ ಸೂಕ್ತಿಯನ್ನು ನಾವಿನ್ನು ಪರಿಶೀಲಿಸೋಣ! ಅದು 4ನೇ ಅಧ್ಯಾಯದ 11 ಮತ್ತು 12ನೇ ಸೂಕ್ತಿಗಳಾಗಿವೆ.

ಅಲ್ಲಾಹನು ನಿಮ್ಮ ಮಕ್ಕಳ ಬಗ್ಗೆ ನಿಮಗೆ ಹೀಗೆ ಆದೇಶವನ್ನೀಯುತ್ತಾನೆ. ಪುರುಷರಿಗೆ ಸ್ತ್ರೀಯ ಇಮ್ಮಡಿ ಪಾಲು. (ಮೃತನ ಉತ್ತರಾಧಿಕಾರಿಗಳಾಗಿ) ಇಬ್ಬರಿಗಿಂತ ಹೆಚ್ಚು ಪುತ್ರಿಯರಿದ್ದರೆ ಅವರಿಗೆ ಉತ್ತರಾಧಿಕಾರ ಸೊತ್ತಿನಿಂದ ಮೂರನೆಯ ಎರಡಂಶ ಕೊಡಲಾಗುವುದು ಮತ್ತು ಒಬ್ಬಳೇ ಮಗಳಿದ್ದರೆ ಅವಳಿಗೆ ಅರ್ಧಾಂಶ. ಮೃತನು ಮಕ್ಕಳಿದ್ದವನಾಗಿದ್ದರೆ ಅವನ ಮಾತಾಪಿತರಲ್ಲಿ ಪ್ರತಿಯೊಬ್ಬರಿಗೂ ಸೊತ್ತಿನ ಆರನೆಯ ಒಂದಂಶ. ಅವನು ಸಂತಾನ ರಹಿತನಾಗಿದ್ದು ಮಾತಾ ಪಿತರೇ ಅವನ ವಾರೀಸುದಾರರಾಗಿರುವಾಗ ತಾಯಿಗೆ ಮೂರನೆಯ ಒಂದಂಶ ಕೊಡಬೇಕು. ಮೃತನಿಗೆ ಸಹೋದರ ಸಹೋದರಿಯರೂ ಇದ್ದರೆ, ತಾಯಿಯು ಆರನೆಯ ಒಂದಂಶಕ್ಕೆ ಹಕ್ಕುದಾರಳು. ಮೃತನು ಮಾಡಿದ ವಸಿಯತ್ (ಉಯಿಲು)ಅನ್ನು ಪೂರ್ತಿಗೊಳಿಸಿದ ಅಥವಾ ಅವನ ಮೇಲಿರುವ ಸಾಲ ಸಂದಾಯವಾದ ನಂತರವೇ (ಈ ಪಾಲುಗಳನ್ನು ಹಂಚಲಾಗುವುದು) ನಿಮ್ಮ ಮಾತಾಪಿತರ ಮತ್ತು ಮಕ್ಕಳ ಪೈಕಿ ನಿಮಗೆ ಪ್ರಯೋಜನದ ದೃಷ್ಟಿಯಿಂದ ಯಾರು ಸಮೀಪದವರೆಂದು ನಿಮಗೆ ತಿಳಿಯದು. ಅಲ್ಲಾಹನು ನಿಶ್ಚಯಿಸಿದ ಪಾಲುಗಳಿವು. ನಿಶ್ಚಯವಾಗಿಯೂ ಅಲ್ಲಾಹನು ಸಕಲವನ್ನು ಬಲ್ಲವನೂ ಮಹಾಯುಕ್ತಿ ಪೂರ್ಣನೂ ಆಗಿರುವನು."

ನಿಮ್ಮ ಪತ್ನಿಯರು ಮಕ್ಕಳಿಲ್ಲದವರಾಗಿದ್ದರೆ ಅವರು ಬಿಟ್ಟು ಹೋದುದರಲ್ಲಿ ಅರ್ಧಾಂಶ ನಿಮಗೆ. ಮಕ್ಕಳಿದ್ದರೆ ಅವರ ವಸ್ಸಿಯತ್ ಅನ್ನು ಈಡೇರಿಸಿದ ಮತ್ತು ಸಾಲಗಳನ್ನು ಪಾವತಿ ಮಾಡಿದ ಬಳಿಕ ಉಳಿಯುವ ಸೊತ್ತಿನ ನಾಲ್ಕನೆಯ ಒಂದಂಶ ನಿಮ್ಮದು. ನೀವು ಮಕ್ಕಳಿಲ್ಲದವರಾಗಿದ್ದರೆ ನೀವು ಬಿಟ್ಟು ಹೋದ ಸೋತ್ತಿನ ಕಾಲಂಶಕ್ಕೆ ಅವರು ಹಕ್ಕುದಾರರು. ಮಕ್ಕಳಿದ್ದರೆ ನೀವು ಮಾಡಿದ್ದ ವಸಿಯ್ಯತ್ ಮತ್ತು ಸಾಲಗಳ ಪಾವತಿಯ ಬಳಿಕ ಉಳಿಯುವ ಸೊತ್ತಿನ ಎಂಟನೆಯ ಒಂದಂಶ ಅವರದಾಗುವುದು.

“ (ವಾರೀಸುದಾರರೊಳಗೆ ಪಾಲಾಗತಕ್ಕ ಸೊತ್ತನು ಬಿಟ್ಟು ಹೋದ )ಸ್ತ್ರೀಯಾಗಲೀ ಮಕ್ಕಳಿಲ್ಲದವರಾಗಿದ್ದು ಅವರ ಮಾತಾಪಿತರೂ ಜೀವಂತರಾಗಿಲ್ಲದಿದ್ದು, ಅವರಿಗೆ ಒಬ್ಬ ಸಹೋದರ ಅಥವಾ ಒಬ್ಬ ಸಹೋದರಿ ಇದ್ದರೆ, ಅವರಲ್ಲಿ ಪ್ರತಿಯೊಬ್ಬರಿಗೆ ಆರನೆಯ ಒಂದಂಶ ಸಿಗುವುದು ಮತ್ತು ಸಹೋದರ ಸಹೋದರಿಯರು ಒಬ್ಬರಿಗಿಂತ ಅಧಿಕ ಸಂಖ್ಯೆಯಲ್ಲಿದ್ದರೆ, ಮೃತರು ಮಾಡಿದ ಹಾನಿಕಾರಕವಲ್ಲದ ವಸಿಯ್ಯತ್ ಅನ್ನು ಈಡೇರಿಸಿದ ಅಥವಾ ಸಾಲಗಳನ್ನು ಪಾವತಿ ಮಾಡಿದ ಬಳಿಕ ಉಳಿಯುವ ಒಟ್ಟು ಸೊತ್ತಿನ ಮೂರನೆಯ ಒಂದಂಶದಲ್ಲಿ ಅವರೆಲ್ಲರೂ ಭಾಗಿಗಳಾಗುವರು. ಇವು ಅಲ್ಲಾಹನ ಆಜ್ಞೆಗಳು ಮತ್ತು ಅಲ್ಲಾಹನು ಸರ್ವಜ್ಞನೂ, ಸಹನಶೀಲನೂ ಆಗಿರುವನು." (ಖುರ್‌ಆನ್ 4:11-12)

ಇಸ್ಲಾಮ್ ಧರ್ಮವು ವಾರೀಸು ನಿಯಮಗಳನ್ನು ಅತ್ಯಂತ ವಿಸ್ತಾರವಾಗಿ ವಿವರಿಸಿಕೊಡುತ್ತದೆ. ಮೂಲ ನಿಯಮದ ಮುಖ್ಯಾಂಶಗಳನ್ನು ಖುರ್‌ಆನ್ ವಿವರಿಸಿಕೊಟ್ಟರೆ, ಸಂಬಂಧಪಟ್ಟ ಚಿಕ್ಕ ಪುಟ್ಟ ವಿಷಯಗಳ ವಿವರಣೆಗಳನ್ನು ಹದೀಸ್ ಗ್ರಂಥಗಳಲ್ಲಿ ಕಾಣಬಹುದು. ಹದೀಸ್‌ಗಳೆಂದರೆ ಪ್ರವಾದಿ ಮುಹಮ್ಮದ್ (ಸ) ರವರ ವಚನಗಳು ಎಂದರ್ಥ.

ಇಸ್ಲಾಮೀ ವಾರೀಸು ನಿಯಮಗಳು ಎಷ್ಟು ವಿಶಾಲವಾಗಿದೆಯೆಂದರೆ ಅದರ ಬಗ್ಗೆ ಪೂರ್ತಿ ಸಂಶೋಧನೆ ನಡೆಸಲು ಒಬ್ಬನು ತನ್ನ ಪೂರ್ವ ಜೀವನಾವಧಿಯನ್ನೇ ಮುಡಿಪಾಗಿಡಬಹುದು. ಅರುಣ್ ಶೌರಿಯವರು ಖುರ್‌ಆನಿನ ಎರಡು ಸೂಕ್ತಿಗಳ ಮೇಲೆ ಕಣ್ಣೋಡಿಸುವ ಮೂಲಕ ಇಸ್ಲಾಮಿನ ವಾರೀಸು ನಿಯಮಗಳನ್ನು ಕರಗತ ಮಾಡಿಕೊಳ್ಳಲು ಹೊರಟಂತಿದೆ.

ಇದು ವ್ಯಕ್ತಿಯೊಬ್ಬನು ಗಣಿತದ ಮೂಲ ನಿಯಮಗಳನ್ನು ಅರಿಯುವ ಗೋಜಿಗೆ ಹೋಗದೆ ಗಣಿತ ಸೂತ್ರವೊಂದನ್ನು ಬಿಡಿಸಲು ಯತ್ನಿಸಿದಂತಿದೆ. ಗಣಿತ ಸೂತ್ರಗಳನ್ನು ಬಿಡಿಸುವ ಮೊದಲು ನಿಯಮವೊಂದನ್ನು ಅವಶ್ಯ ಪಾಲಿಸಬೇಕಾಗುವುದು. ಇದನ್ನು BODMAS ಎನ್ನುವರು. ಯಾವುದೇ ಗಣಿತ ಸೂತ್ರವನ್ನು ಅದರಲ್ಲಿ ಗುಣಾಕಾರ, ಭಾಗಾಕಾರ ಮುಂತಾದ ಯಾವುದೇ ಚಿಹ್ನೆಗಳು ಮೊತ್ತ ಮೊದಲು ಕಂಡು ಬಂದರೂ, ಅದನ್ನು ಬಿಡಿಸುತ್ತಾ ಬರುವ ಕ್ರಮಣಿಕ BODMAS ಆಗಿರುಬೇಕು.ಅರ್ಥಾತ್ ಮೊತ್ತ ಮೊದಲು ಆವರಣಗಳನ್ನು ಬಿಡಿಸುತ್ತಾ ಬರಬೇಕು (Brackets off) ಎರಡನೆಯದಾಗಿ ಭಾಗಾಕಾರಗಳನ್ನು ಮಾಡಬೇಕು. (Division) ಮೂರನೆಯದಾಗಿ ಗುಣಾಕಾರಗಳನ್ನು ಮಾಡಬೇಕು (Multiplication) ನಾಲ್ಕನೆಯದಾಗಿ ಕೂಡಿಸುವಿಕೆಗಳನ್ನು ಮಾಡಬೇಕು (Additon), ಕೊನೆಯದು ಕಳೆಯುವಿಕೆಯಾಗಿರಬೇಕು (Subtraction).
ಗಣಿತದ ಮೂಲ ನಿಯಮಗಳನ್ನು ಅರಿಯುವ ಗೋಜಿಗೆ ಹೋಗದ ಅರುಣ್ ಶೌರಿಯವರು ಮೊದಲು ಗುಣಾಕಾರ, ಬಳಿಕ ವ್ಯವಕಲನ, ಆ ಬಳಿಕ ಆವರಣ ಬಿಡಿಸುವಿಕೆ, ನಂತರ ಭಾಗಾಕಾರ ಮತ್ತು ಕೊನೆಗೆ ಸಂಕಲನವನ್ನು ಮಾಡಿ ತಪ್ಪಾದ ಉತ್ತರವನ್ನು ಕಂಡುಕೊಂಡಿರುವರು.

ಇದೇ ರೀತಿ ಖುರ್‌ಆನ್ ತನ್ನ 4ನೇ ಅಧ್ಯಾಯದ 11 ಮತ್ತು 12ನೇ ಸೂಕ್ತಿಗಳಲ್ಲಿ ವಾರೀಸು ಹಕ್ಕುಗಳನ್ನು ಆದೇಶಿಸುವಾಗ ಮೊತ್ತ ಮೊದಲು ಮಕ್ಕಳ ಪಾಲನ್ನೂ, ಆ ಬಳಿಕ ಮಾತಾ ಪಿತರ ಹಾಗೂ ಪತಿ-ಪತ್ನಿಯರ ಪಾಲನ್ನೂ ಸೂಚಿಸಿದೆಯಾದರೂ, ಇಸ್ಲಾಮೀ ವಾರೀಸು ನಿಯಮದಂತೆ ಇವೆಲ್ಲವೂ ಮೃತನ ಬಾಧ್ಯತೆ ಹಾಗೂ ಸಾಲಗಳ ಪಾವತಿಯ ಬಳಿಕ ಮಾತ್ರವಷ್ಟೇ. ಪತಿ-ಪತ್ನಿಯ ಹಾಗೂ ಮಾತಾಪಿತರ ಪಾಲುಗಳು ಮೃತನು ಮಕ್ಕಳನ್ನು ಹೊಂದಿದ್ದಾನೋ ಇಲ್ಲವೋ ಎಂಬುದರ ಮೇಲೆ ಅವಲಂಬಿತವಾಗಿದೆ. ಮತ್ತು ಸೊತ್ತಿನ ಶೇಷ ಭಾಗವನ್ನು ಪುತ್ರರು ಹಾಗೂ ಪುತ್ರಿಯರ ಮಧ್ಯೆ ಅವರವರಿಗೆ ನಿಶ್ಚಯಿಸಲ್ಪಟ್ಟಂತೆ ಹಂಚಲಾಗುವುದು.

ಇಲ್ಲಿ ಒಟ್ಟು ಪಾಲುಗಳ ಸಂಖ್ಯೆಯು ಒಂದಕ್ಕಿಂತ ಅಧಿಕವಾಗುವ ಪ್ರಶ್ನೆಯೇ ಉದ್ಭವಿಸಲಾರದು. ಆದುದರಿಂದ ಗಣಿತದ ಜ್ಞಾನವಿಲ್ಲದಿರುವುದು ಅಲ್ಲಾಹನಿಗಲ್ಲ. ಬದಲಾಗಿ ಗಣಿತದ ಮೂಲ ನಿಯಮಗಳ ಜ್ಞಾನವೇ ಇಲ್ಲದ ಅರುಣ್ ಶೌರಿಯವರು ಅದನ್ನು ಕಲಿಯಲು ಇನ್ನೊಮ್ಮೆ ಶಾಲಾ ಸಮವಸ್ತ್ರವನ್ನು ಧರಿಸಿ ಶಾಲೆಗೆ ಹೊರಡುವ ಸಿದ್ಧತೆ ನಡೆಸಬೇಕಾಗಿದೆ.

ಉತ್ತರ :

1. ಅಲ್ಲಾಹನು ಪರಮ ದಯಾಮಯನು :

ಅಲ್ಲಾಹನು ಪರಮ ದಯಾಮಯನಾಗಿರುವನೆಂದು ಖುರ್‌ಆನ್ ಆವರ್ತಿಸಿಕೊಂಡು ಹೇಳುತ್ತದೆ. ಖುರ್‌ಆನಿನ 114 ಅಧ್ಯಾಯಗಳಲ್ಲಿ 9ನೆಯ ಅಧ್ಯಾಯವೊಂದನ್ನು ಹೊರತು ಪಡಿಸಿ ಎಲ್ಲವೂ ಆರಂಭಗೊಳ್ಳುವುದು ಬಿಸ್ಮಿಲ್ಲಾಹಿ ರ್ರಹ್ಮಾನಿರ್ರಹೀಂ ಅರ್ಥಾತ್ ಪರಮ ದಯಾಮಯನೂ ಕರುಣಾಮಯಿಯೂ ಆದ ಅಲ್ಲಾಹನ ನಾಮದಿಂದ' ಎಂದಾಗಿದೆ.

2. ಅಲ್ಲಾಹನು ಕ್ಷಮಾಶೀಲನು :

ಇದೇ ರೀತಿ ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ ಆಗಿರುವನು ಎಂದು ಖುರ್‌ಆನ್ ತನ್ನ 4ನೇ ಅಧ್ಯಾಯ, 5ನೇ ಅಧ್ಯಾಯ ಮಾತ್ರವಲ್ಲದೆ ಇನ್ನಿತರ ಹಲವು ಕಡೆಗಳಲ್ಲೂ ಹೇಳಿದೆ.

ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರುಣಾನಿಧಿಯೂ ಆಗಿರುವನು" (ಖುರ್‌ಆನ್ 4:25)


3.
ಅಲ್ಲಾಹನು ಶಿಕ್ಷಾರ್ಹರನ್ನು ಕಠಿಣವಾಗಿ ಶಿಕ್ಷಿಸುವವನು :

ಕ್ಷಮಾಶೀಲನೂ, ಕರುಣಾಮಯನೂ ಆಗಿರುವ ಜೊತೆಗೆ ಅಲ್ಲಾಹನು ದುಷ್ಟರನ್ನು ಅತಿ ಕಠಿಣವಾಗಿ ಶಿಕ್ಷಿಸುವವನೂ ಆಗಿರುವನು. ಅವಿಶ್ವಾಸಿಗಳನ್ನು ಹಾಗೂ ಸತ್ಯ ನಿಷೇಧಿಗಳನ್ನು ಅಲ್ಲಾಹನು ಅತ್ಯುಗ್ರವಾಗಿ ಶಿಕ್ಷಿಸಲಿರುವನು ಎಂದು ಕೂಡ ಖುರ್‌ಆನ್ ಹೇಳಿದೆ. ಅಲ್ಲಾಹನಿಗೆ ವಿಧೇಯನಾಗಿರದ ಎಲ್ಲರನ್ನೂ ಅವನು ಶಿಕ್ಷಿಸಲಿರುವನು. ಹಲವಾರು ಸೂಕ್ತಿಗಳಲ್ಲಿ ಸತ್ಯನಿಷೇಧಿಗಳಿಗಾಗಿ ಸಿದ್ಧಪಡಿಸಿಟ್ಟಿರುವ ವಿವಿಧ ರೀತಿಯ ಯಾತನೆಗಳ ವಿವರಣೆಗಳನ್ನು ಕಾಣಬಹುದು.

ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರನ್ನು ನಿಶ್ಚಯವಾಗಿಯೂ ನಾವು ನರಕಾಗ್ನಿಗೆ ಎಸೆದು ಬಿಡುವೆವು. ಅವರ ಚರ್ಮಗಳು ಕರಟಿ ಹೋದಂತೆಲ್ಲಾ ಅವರು ಯಾತನೆಯನ್ನು ಚೆನ್ನಾಗಿ ಸವಿಯುವಂತಾಗಲು ನಾವು ಅವರಿಗೆ ಚರ್ಮಗಳನ್ನು ಬದಲಾಯಿಸಿಕೊಡುವೆವು. ಅಲ್ಲಾಹನು ಮಹಾ ಪ್ರತಾಪಶಾಲಿಯೂ , ಯುಕ್ತಿವಂತನೂ ಆಗಿರುವನು" (ಖುರ್‌ಆನ್ 4:56)

4. ಅಲ್ಲಾಹನು ಅತ್ಯುತ್ತಮ ನ್ಯಾಯ ಪರಿಪಾಲಕನು :

ಪ್ರಸ್ತುತ ಪ್ರಶ್ನೆಯೇ ಅಲ್ಲಾಹನು ಕರುಣಾಮಯನೋ, ನಿರ್ದಯಿಯೋ ಎಂಬುವುದಾಗಿದೆ. ಇಲ್ಲಿ ಗಮನಿಸಬೇಕಾದ ಅತೀ ಮುಖ್ಯ ಅಂಶವೆಂದರೆ ಕರುಣಾಮಯನೂ, ಕ್ಷಮಾಶೀಲನೂ ಆಗಿರುವ ಜೊತೆಗೆ ಅಲ್ಲಾಹನು ದುಷ್ಟರನ್ನು ಅತ್ಯುಗ್ರವಾಗಿ ಶಿಕ್ಷಿಸುವವನೂ ಆಗಿರುವನು. ಇದು ಏಕೆಂದರೆ ಅವನು ಅತ್ಯಂತ ಹೆಚ್ಚು ನ್ಯಾಯ ಪಾಲಿಸುವ ಶ್ರೇಷ್ಠ ನ್ಯಾಯಾಧಿಪತಿಯಾಗಿರುವನು. ತನ್ನ 4ನೇ ಅಧ್ಯಾಯ ಅನ್ನಿಸಾದ 40ನೇ ಸೂಕ್ತಿಯಲ್ಲಿ ಖುರ್‌ಆನ್ ಹೇಳುತ್ತದೆ. ನಿಶ್ಚಯವಾಗಿಯೂ ಅಲ್ಲಾಹನು ಯಾರ ಮೇಲೂ ಲವಲೇಶವೂ ಅನ್ಯಾಯ ವೆಸಗುವುದಿಲ್ಲ" (ಖುರ್‌ಆನ್ 4:40)

ಖುರ್‌ಆನ್ ಮುಂದುವರಿದು ಹೇಳುತ್ತದೆ. ಪುನರುತ್ಥಾನ ದಿನದಂದು ನಾವು ನಿಖರವಾಗಿ ತೂಗುವ ತಕ್ಕಡಿಯನ್ನು ಸ್ಥಾಪಿಸುವೆವು. ಯಾರ ಮೇಲೂ ಕಿಂಚಿತ್ತೂ ಅನ್ಯಾಯವಾಗಲಾರದು. ಯಾರಾದರೂ ಅಣುಗಾತ್ರದಷ್ಟು ಏನನ್ನಾದರೂ ಮಾಡಿದ್ದರೆ ಅದನ್ನು ನಾವು ಮುಂದೆ ತರುವೆವು ಮತ್ತು ಲೆಕ್ಕ ಪರಿಶೋಧನೆಗೆ ನಾವೇ ಸಾಕು. (ಖುರ್‌ಆನ್ 21:47)

5. ಪರೀಕ್ಷೆಯಲ್ಲಿ ನಕಲು ಹೊಡೆದ ವಿದ್ಯಾರ್ಥಿಯನ್ನು ಕ್ಷಮಿಸುವ ಅಧ್ಯಾಪಕನ ಉದಾಹರಣೆ :

ಒಂದು ಶಾಲೆಯ ಪರೀಕ್ಷಾ ಕೊಠಡಿ ಮತ್ತು ಅದರಲ್ಲಿ ನಕಲು ಹೊಡೆದುಕೊಂಡು ಪರೀಕ್ಷೆ ಬರೆಯುತ್ತಿರುವ ಒಬ್ಬ ವಿದ್ಯಾರ್ಥಿ. ಕೊಠಡಿಯ ಮೇಲ್ವಿಚಾರಕರಾಗಿ ಕಾರ್ಯವೆಸಗುತ್ತಿರುವ ಅಧ್ಯಾಪಕರು ನಕಲು ಹೊಡೆಯುವ ವಿದ್ಯಾರ್ಥಿಯನ್ನು ಮಾಲು ಸಮೇತ ಹಿಡಿಯುವರು ಮತ್ತು ಅವರು ಹೇಳುವರು : ನಾನು ಅತ್ಯಂತ ಕರುಣೆ ತೋರುವವನು ಮತ್ತು ಕ್ಷಮಿಸುವವನು. ಆದುದರಿಂದ ನಾನು ಇವನನ್ನು ಕ್ಷಮಿಸುವೆನು.

ಇದು ನಕಲು ಹೊಡೆಯುವ ವಿದ್ಯಾರ್ಥಿಯನ್ನು ಸಂತುಷ್ಟಗೊಳಿಸಿದರೂ ಉಳಿದ ಪ್ರಾಮಾಣಿಕ ವಿದ್ಯಾರ್ಥಿಗಳೊಂದಿಗೆ ತೋರುವ ಅನ್ಯಾಯವಾಗಿದೆ. ಶ್ರಮ ಪಟ್ಟು ಕಲಿತ ವಿದ್ಯಾರ್ಥಿಗಳು ಖಂಡಿತವಾಗಿಯೂ ಆ ಅಧ್ಯಾಪಕನನ್ನು ಅನ್ಯಾಯವೆಸಗುವವನು ಎಂದು ಕರೆಯದಿರಲಾರರು. ಅಧ್ಯಾಪಕನ ಆ ; ‘ಕರುಣೆ ತೋರುವ' ಕಾರ್ಯವು ಉಳಿದ ಪ್ರಾಮಾಣಿಕ ವಿದ್ಯಾರ್ಥಿಗಳನ್ನು ನಕಲು ಹೊಡೆಯಲು ಪ್ರೇರೇಪಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗೆ ಎಲ್ಲಾ ಅಧ್ಯಾಪಕರೂ ಕರುಣಾಮಯ'ರಾಗಿಬಿಟ್ಟಲ್ಲಿ ಯಾವೊಬ್ಬ ವಿದ್ಯಾರ್ಥಿಯೂ ಅಧ್ಯಯನ ನಡೆಸುವ ಶ್ರಮವನ್ನು ತೆಗೆದುಕೊಳ್ಳಲಾರ. ಎಲ್ಲರೂ ಪ್ರಥಮ ದರ್ಜೆಯಲ್ಲೇ ಉತ್ತೀರ್ಣರಾಗುವರು. ಅಂಕ ಪಟ್ಟಿಯಲ್ಲಿ ಯಶಸ್ಸು ಗಳಿಸಿದರೂ ಏನನ್ನೂ ಕಲಿತುಕೊಳ್ಳದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ವಿಫಲರಾಗುವ ಮೂಲಕ ಪರೀಕ್ಷೆ' ಎಂಬುದರ ಮೂಲ ಉದ್ದೇಶವೇ ನಷ್ಟವಾಗಿ ಬಿಡುವುದು.

6. ಪರಲೋಕದ ಯಶಸ್ವಿಗೆ ಇಹಲೋಕ ಜೀವನವು ಒಂದು ಪರೀಕ್ಷೆ :

ಇಹಲೋಕ ಜೀವನವು ಪರಲೋಕ ವಿಜಯಕ್ಕಿರುವ ಒಂದು ಪರೀಕ್ಷೆಯಾಗಿದೆ. ಅಧ್ಯಾಯ ಅಲ್-ಮುಲ್ಕ್'ನಲ್ಲಿ ಅಲ್ಲಾಹನು ಹೇಳುತ್ತಾನೆ :

ಅವನಾಗಿರುವನು; ಮರಣ ಮತ್ತು ಜನನವನ್ನು ಸೃಷ್ಟಿಸಿದವನು. ನಿಮ್ಮ ಪೈಕಿ ಉತ್ತಮ ಕರ್ಮಗಳನ್ನು ಎಸಗುವವರು ಯಾರು ಎಂದು ಪರೀಕ್ಷಿಸಲು ಮತ್ತು ಅವನು ಮಹಾ ಪ್ರತಾಪಶಾಲಿಯೂ, ಅತ್ಯಂತ ಹೆಚ್ಚು ಕ್ಷಮಿಸುವವನೂ ಆಗಿರುವನು" (ಖುರ್‌ಆನ್ 67:2)

7. ಅಲ್ಲಾಹನು ಎಲ್ಲರನ್ನೂ ಕ್ಷಮಿಸುವವನಾದರೆ, ಅವನಿಗೆ ಯಾರು ತಾನೇ ವಿಧೇಯರಾಗಿರಲು ಇಚ್ಛಿಸುವರು ?

ಅಲ್ಲಾಹನು ಎಲ್ಲರನ್ನೂ ಕ್ಷಮಿಸುವವನು, ಯಾರನ್ನೂ ಶಿಕ್ಷಿಸುವುದಿಲ್ಲವೆಂದಾದಲ್ಲಿ ಮನುಷ್ಯರು ಅಲ್ಲಾಹನಿಗೆ ವಿಧೇಯರಾಗಿ ಯಾಕಿರಬೇಕು? ಯಾರೂ ನರಕವನ್ನು ಸೇರುವುದಿಲ್ಲ ಎಂಬ ವಿಷಯವು ಖುಷಿ ಪಡುವಂಥಾದ್ದೇ ಆದರೂ ಭೂಲೋಕವಂತೂ ಬದುಕಲೇ ಅಸಾಧ್ಯವಾದ ನರಕವಾಗಿ ಬಿಡುವುದರಲ್ಲಿ ಯಾವುದೇ ಸಂಶಯವಿರಲಾರದು. ದುರ್ಬಲರಿಗೆ ಬದುಕು ಇನ್ನಷ್ಟು ಅಸಾಧ್ಯವಾಗಿ ಬಿಡಬಹುದು. ಎಲ್ಲರೂ ಸ್ವರ್ಗ ವಾಸಿಗಳಾಗಲು ಹೋಗುವರು ಎಂದಾದಲ್ಲಿ ಮಾನವನು ಈ ಜಗತ್ತಿಗೆ ಬರುವ ಅವಶ್ಯಕತೆಯೇನಿದೆ ? ಇಹಲೋಕವು ಪರಲೋಕಕ್ಕಿರುವ ಪರೀಕ್ಷೆ ಎಂಬ ಮಾತೇ ಅರ್ಥಶೂನ್ಯವಾಗಿ ಬಿಡುವುದು.

8. ಅಲ್ಲಾಹನು ಕ್ಷಮಿಸುವುದು ಪಶ್ಚಾತ್ತಾಪ ಪಟ್ಟವರನ್ನು ಮಾತ್ರ :

ಒಬ್ಬ ವ್ಯಕ್ತಿಯು ನಿಷ್ಕಳಂಕವಾಗಿ ಪಶ್ಚಾತ್ತಾಪ ಪಟ್ಟಲ್ಲಿ ಮಾತ್ರವೇ ಅಲ್ಲಾಹನು ಅವನನ್ನು ಕ್ಷಮಿಸುವನು. 39ನೇ ಅಧ್ಯಾಯದ 53 ರಿಂದ 55ರ ವರೆಗಿನ ಸೂಕ್ತಿಗಳಲ್ಲಿ ಅಲ್ಲಾಹನು ಹೇಳುತ್ತಾನೆ. ಹೇಳಿರಿ : ತಮ್ಮ ಮೇಲೆಯೇ ಅತಿರೇಕವೆಸಗಿಕೊಂಡಿರುವ ಓ ನನ್ನ ದಾಸರೇ, ಅಲ್ಲಾಹನ ಕರುಣೆಯ ಬಗ್ಗೆ ನಿರಾಶರಾಗಬೇಡಿರಿ. ನಿಶ್ಚಯವಾಗಿಯೂ ಅಲ್ಲಾಹನು ಸಕಲ ಪಾಪಗಳನ್ನು ಕ್ಷಮಿಸಿ ಬಿಡುತ್ತಾನೆ. ಅವನು ಅತ್ಯಂತ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುವನು. (ಖುರ್‌ಆನ್ 39:53)

ನಿಮ್ಮ ಪ್ರಭುವಿನೆಡೆಗೆ (ಪಶ್ಚಾತ್ತಾಪದಿಂದ) ಮರಳಿರಿ ಮತ್ತು ವಿಧೇಯರಾಗಿ ಅವನಿಗೆ (ಬಾಗಿರಿ) ನಿಮ್ಮ ಮೇಲೆ ಯಾತನೆಯು ಎರಗಿ ಬಿಡುವ ಮತ್ತು ಸಹಾಯವೇನೂ ಒದಗಿ ಬಾರದ ಆ ಸ್ಥಿತಿಯು ಬರುವ ಮುನ್ನ ಮತ್ತು ನಿಮಗೆ ನಿಮ್ಮ ಪ್ರಭುವಿನ ಕಡೆಯಿಂದ ಅವತೀರ್ಣಗೊಳಿಸಿರುವುದರ ಅತ್ಯುತ್ತಮ ತಾತ್ಪರ್ಯವನ್ನು ಅನುಸರಿಸಿರಿ ನಿಮಗೆ ಅರಿವೇ ಇಲ್ಲದಂತೆ ನಿಮ್ಮ ಮೇಲೆ ಹಠಾತ್ತನೆ ಯಾತನೆಯು ಬಂದೆರಗುವುದಕ್ಕೆ ಮುಂಚೆ" (ಖುರ್‌ಆನ್ 39:54-55)

ಪಶ್ಚಾತ್ತಾಪಕ್ಕೆ ನಾಲ್ಕು ಮಾನದಂಡಗಳಿವೆ. ಒಂದನೆಯದು ಮಾಡಿದ ಕಾರ್ಯವು ತಪ್ಪೆಂದು ಮನಃ ಪೂರ್ವಕ ಒಪ್ಪಿಕೊಳ್ಳುವುದು, ಎರಡನೆಯದು ತತ್‌ಕ್ಷಣ ಆ ಕಾರ್ಯವನ್ನು ತೊರೆಯುವುದು. ಮೂರನೆಯದು ಭವಿಷ್ಯದಲ್ಲಿ ಅದನ್ನು ಆವರ್ತಿಸದಿರುವುದು ಮತ್ತು ಕೊನೆಯದಾಗಿ ಆ ಕಾರ್ಯದಿಂದಾಗಿ ಅನ್ಯ ವ್ಯಕ್ತಿಗಳಿಗೆ ನಷ್ಟವುಂಟಾಗಿದ್ದಲ್ಲಿ ಅದನ್ನು ಭರಿಸಿ ಕೊಡುವುದು.

ಉತ್ತರ:

1. ಅಲ್ಲಾಹನು ಸತ್ಯ ನಿಷೇಧಿಗಳ ಹೃದಯದ ಮೇಲೆ ಮುದ್ರೆಯೊತ್ತಿರುವುದು :

ಪವಿತ್ರ ಖುರ್‌ಆನ್ ಹೇಳುತ್ತದೆ -

ನಿಶ್ಚಯವಾಗಿಯೂ ಆ ಸತ್ಯ ನಿಷೇಧಿಗಳ (ವಿಷಯ), ಅವರಿಗೆ ಎಚ್ಚರಿಕೆ ನೀಡುವುದೂ ನೀಡದೆ ಇರುವುದೂ ಸಮಾನ; ಅವರು ವಿಶ್ವಾಸವಿಡಲಾರರು. ಅಲ್ಲಾಹನು ಅವರ ಖಲ್ಬ್ (ಹೃದಯ)ಗಳ ಮೇಲೆ ಮುದ್ರೆಯೊತ್ತಿರುವನು ಮತ್ತು ಅವರ ಕಿವಿಗಳ ಹಾಗೂ ದೃಷ್ಟಿಗಳ ಮೇಲೆ ಪರದೆ ಬಿದ್ದಿದೆ ಅವರಿಗಿರುವ ಶಿಕ್ಷೆಯು ಘೋರವಾಗಿದೆ." (ಖುರ್‌ಆನ್ 2:6-7)

2. ‘ಖಲ್ಬ್' ಎಂಬ ಅರಬಿ ಪದಕ್ಮೆ ಹೃದಯ ಎಂಬ ಅರ್ಥ ಮಾತ್ರವಲ್ಲದೇ ಬುದ್ಧಿಮತ್ತೆ'(Intelligence) ಎಂಬ ಅರ್ಥವೂ ಇದೆ :

ಖುರ್‌ಆನಿನ ಈ ಸೂಕ್ತಿಯಲ್ಲಿ ಬಳಸಿದ ಖಲ್ಬ್' ಎಂಬ ಪದಕ್ಕೆ ಹೃದಯ ಎಂಬರ್ಥವಲ್ಲದೇ ಬುದ್ಧಿಮತ್ತೆ' ಎಂಬ ಅರ್ಥವೂ ಇದೆ. ಆದುದರಿಂದ ಈ ಸೂಕ್ತಿಯನ್ನು ಅಲ್ಲಾಹನು ಸತ್ಯ ನಿಷೇಧಿಗಳ ಬುದ್ಧಿಮತ್ತೆಯ ಮೇಲೆ ಮುದ್ರೆಯೊತ್ತಿರುವನು, ಆದುದರಿಂದ ಅವರೆಂದೂ ವಿಶ್ವಾಸವಿಡಲಾರು' ಎಂದು ಕೂಡಾ ಅರ್ಥೈಸಿಕೊಳ್ಳಬಹುದು.

3. ಅರಬೀ ಭಾಷೆಯಲ್ಲಿ ಹೃದಯ' ಎಂಬ ಪದವನ್ನು ತಿಳುವಳಿಕೆಯ ಕೇಂದ್ರವಾಗಿ ಬಳಸುವ ಪರಿಪಾಠ :

ಒಬ್ಬ ವ್ಯಕ್ತಿಯ ತಿಳುವಳಿಕೆಯ ಕೇಂದ್ರವಾಗಿ ಖಲ್ಬ್ (ಹೃದಯ) ಎಂಬ ಪದವನ್ನು ಬಳಸುವ ಪರಿಪಾಠ ಅರಬರಲ್ಲಿದೆ

4. ಭಿನ ಅರ್ಥವಿರುವು ಪದಗಳನ್ನು ವಿಶೇಷ ಉದ್ದೇಶಕ್ಕಾಗಿ ಬಳಸುವ ಪದ್ದತಿ ಆಂಗ್ಲ ಭಾಷೆಯಲ್ಲೂ ಇದೆ :

ಒಂದು ವಿಷಯವನ್ನು ವಿವರಿಸಿಕೊಡುವಾಗ ಶಬ್ದಾರ್ಥವು ಭಿನ್ನವಾಗಿರುವ ಪದಗಳನ್ನು ಬಳಸುವ ರೂಢಿಯು ಆಂಗ್ಲ ಭಾಷೆಯಲ್ಲೂ ಇದೆ. ಈ ಬಗ್ಗೆ ಕೆಲವು ಉದಾಹರಣೆಗಳು.

a. ಲುನಾಟಿಕ್ (Lunatic) : ಲುನಾಟಿಕ್ ಅಂದರೆ ಚಂದ್ರನ ಪ್ರಭಾವಕ್ಕೊಳಗಾದವನು ಎಂದರ್ಥ. ಇಂದು ಮಾನಸಿಕ ಸ್ಥಿರತೆಯನ್ನು ಕಳೆದು ಕೊಂಡವನನ್ನು ಲುನಾಟಿಕ್' ಎನ್ನಲಾಗುತ್ತದೆ. ಹುಚ್ಚನ ಮೇಲೆ ಚಂದ್ರ ಪ್ರಭಾವವೇನೂ ಇಲ್ಲ ಎಂಬುದು ಎಲ್ಲರೂ ಅರಿತಿರುವ ವಿಷಯ. ವೈದ್ಯರಲ್ಲೂ ಸಹ ಹುಚ್ಚನನ್ನು ಲುನಾಟಿಕ್ ಎಂದು ಕರೆಯುವ ರೂಢಿ ಇದೆ.

b. ಡಿಸಾಸ್ಟರ್ (Disaster): ‘ಡಿಸಾಸ್ಟರ್' ಎಂಬುದರ ಶಾಬ್ದಿಕ ಅರ್ಥವು ಕೆಟ್ಟ ನಕ್ಷತ್ರ (Evil star) ಎಂಬುದಾಗಿದೆ. ಆದರೆ ಇಂದು ಈ ಪದವು ಬಳಸಲ್ಪಡುವುದು ಹಠಾತ್ತನೆ ಎರಗಿ ಬಂದ ದುರಂತ ಎಂಬರ್ಥದಲ್ಲಿ . ಈ ದುರಂತಕ್ಕೂ ನಕ್ಷತ್ರಕ್ಕೂ ಸಂಬಂಧವೇನೂ ಇಲ್ಲ ಎಂಬುದು ಎಲ್ಲರೂ ಅರಿತಿರುವ ವಿಷಯ.

c. ಟ್ರಿವಿಯಲ್ (Trivial): ಟ್ರಿವಿಯಲ್ ಎಂಬುದರ ಶಬ್ದಾರ್ಥವು ಮೂರು ರಸ್ತೆಗಳ ಕೂಡು ಸ್ಥಳ ಎಂದಾಗಿದೆ. ಆದರೆ ಇಂದು ಈ ಪದವು ಬಳಸಲ್ಪಡುತ್ತಿರುವುದು ಕ್ಷುಲ್ಲಕ' ಎಂಬ ಅರ್ಥದಲ್ಲಿ. ಮೂರು ರಸ್ತೆಗಳು ಕೂಡುವಲ್ಲಿ ಕ್ಷುಲ್ಲಕ'ಕ್ಕೇನೂ ಕಾರ್ಯವಿಲ್ಲ ಎಂಬುದನ್ನು ಎಲ್ಲರೂ ಬಲ್ಲರು.
d.
ಸನ್‌ರೈಸ್ (Sun rise) ಮತ್ತು ಸನ್‌ಸೆಟ್ (Sunset) : ಸನ್‌ರೈಸ್ ಅಂದರೆ ಸೂರ್ಯನು ಉದಯಿಸುವುದು' ಎಂದಾಗಿದೆ. ಸೂರ್ಯ ಉದಯಿಸುವುದಿಲ್ಲ, ಭೂಮಿಯು ತನ್ನ ಅಕ್ಷದ ಹಾಗೂ ಸೂರ್ಯನ ಸುತ್ತ ತಿರುಗುತ್ತಿರುವುದರಿಂದಲೇ ಹಗಲು ರಾತ್ರಿಗಳಾಗುವುದು, ಋತುಗಳ ಬದಲಾವಣೆಯಾಗುವುದು ಎಂಬುದನ್ನು ಅರಿಯದವರಾರು? ಹೀಗಿರುವಾಗಲೂ ಖಗೋಳ ತಜ್ಞರೂ ಸೇರಿದಂತೆ ನಾವೆಲ್ಲರೂ ಸೂರ್ಯನನ್ನು ಉದಯಿಸುವವನು, ಮುಳುಗುವವನು ಎಂದು ಕರೆಯುವುದಿಲ್ಲವೇ?

5. ಆಂಗ್ಲ ಭಾಷೆಯಲ್ಲಿ ಹೃದಯವು ಪ್ರೇಮ ಮತ್ತು ಭಾವನೆಗಳ ಕೇಂದ್ರ :

ಆಂಗ್ಲ ಭಾಷಾ ಪ್ರಕಾರ ಹೃದಯವೆಂದರೆ ಶರೀರದ ಎಲ್ಲಾ ಭಾಗಗಳಿಗೆ ಶುದ್ಧ ರಕ್ತವನ್ನು ತಳ್ಳಿಕೊಡುವ ಒಂದು ಅಂಗ. ಇದೇ ಪದವನ್ನು ವಿಚಾರ, ಪ್ರೇಮ ಹಾಗೂ ಭಾವನೆಗಳ ಕೇಂದ್ರವಾಗಿ ಬಳಸುವ ಕ್ರಮವೂ ಇದೆ. ಚಿಂತನಾಶಕ್ತಿ, ಪ್ರೇಮ, ಭಾವನೆಗಳು ಉದ್ಭವಿಸುವುದು ಮೆದುಳಿನಲ್ಲಿ ಎಂದು ಹೇಳುವ ವಿಜ್ಞಾನದ ಮಾತೇನೋ ಚೆನ್ನಾಗಿಯೇ ಇದೆ. ಆದರೂ ತನ್ನ ಭಾವನೆಗಳನ್ನು ಹೊರಗೆಡಹುವ ಸಂದರ್ಭದಲ್ಲಿ ಒಬ್ಬನು ಹೇಳುವುದು ನಾನು ನಿನ್ನನ್ನು ಹೃದಯದಾಳದಿಂದ ಪ್ರೀತಿಸುತ್ತೇನೆ' ಎಂದೇ ಆಗಿದೆ. ಹೀಗೆ ಹೇಳುವ ಜ್ಞಾನಿಯೊಬ್ಬನ ಪತ್ನಿಯ ಮರುತ್ತರವು - ಹೇ, ನಿಮಗೆ ವಿಜ್ಞಾನದ ಮೂಲ ವಿಷಯಗಳ ಜ್ಞಾನವೂ ಇಲ್ಲವೇ ? ಭಾವನೆಗಳು ಹುಟ್ಟಿಕೊಳ್ಳುವುದು ಮೆದುಳಿನಲ್ಲೇ ಹೊರತು ಹೃದಯದಲ್ಲಿ ಅಲ್ಲ ಎಂಬುದನ್ನು ನೀವಿನ್ನೂ ತಿಳಿದಿಲ್ಲವೇ! " ಎಂದಾಗಿದ್ದಲ್ಲಿ ಆ ಸನ್ನಿವೇಶವು ಹೇಗಿರಬಹುದು!?

6. ಹೃದಯ (ಖಲ್ಬ್) ಎಂಬ ಪದವು ವಿಚಾರ ಮತ್ತು ತಿಳುವಳಿಕೆಗಳ ಕೇಂದ್ರಾಗಿ ಬಳಸಲ್ಪಡುತ್ತಿದ್ದುದರ ಜ್ಞಾನವು ಅರಬರಿಗಿತ್ತು:

ಅಲ್ಲಾಹನು ಸತ್ಯ ನಿಷೇಧಿಗಳ ಹೃದಯಗಳ ಮೇಲೆ ಮುದ್ರೆಯೊತ್ತಿರುವನು ಎಂಬ ಸೂಕ್ತಿಯು ಆವತೀರ್ಣಗೊಂಡಾಗ ಯಾವುದೇ ಒಬ್ಬ ಅರಬೀ ವ್ಯಕ್ತಿಯು ಆಕ್ಷೇಪ ವ್ಯಕ್ತ‌ ಪಡಿಸಿರಲಿಲ್ಲ. ಏಕೆಂದರೆ ಆ ಸನ್ನಿವೇಶ ಸಂದರ್ಭಗಳಲ್ಲಿ ಪ್ರಸ್ತುತ ಪದವು ತಿಳುವಳಿಕೆಯ ಕೇದ್ರ, ವಿಚಾರಶೀಲತೆ, ಗ್ರಹಣ ಶಕ್ತಿಗಳನ್ನು ಮಾತ್ರ ಉಲ್ಲೇಖಿಸುವುದೆಂದು ಅವರಿಗೆ ಚೆನ್ನಾಗಿ ತಿಳಿದಿತ್ತು.

ಉತ್ತರ :

1 . ಮುಸ್ಲಿಮರು ಪ್ರಬುದ್ಧತೆಯ ಉನ್ನತ ಹಂತವನ್ನು ತಲುಪಿರುವರು :

ಮುಸ್ಲಿಮರು ಪ್ರಬುದ್ಧತೆಯ ಉನ್ನತ ಹಂತವನ್ನು ಈಗಾಗಲೇ ತಲುಪಿರುವರು. ಆರಂಭ ಹಂತದಲ್ಲಿ ಮಾತ್ರ ವಿಗ್ರಹಗಳ ಅಗತ್ಯವಿರುವುದು, ಆ ಬಳಿಕ ಅರ್ಥಾತ್ ಮನಸ್ಸು ಪ್ರಬುದ್ಧತೆಯ ಉನ್ನತ ಹಂತ ಅಥವಾ ಔನ್ನತ್ಯವನ್ನು ತಲುಪಿದ ಬಳಿಕ ಅವುಗಳ ಅಗತ್ಯವಿಲ್ಲವೆಂದಾದಲ್ಲಿ ನನಗೆ ಹೇಳಲಿಕ್ಕಿರುವುದು ಮುಸ್ಲಿಮರು ಈಗಾಗಲೇ ಆ ಹಂತವನ್ನು ತಲುಪಿ ಬಿಟ್ಟಿರುವರು ಎಂದಾಗಿದೆ. ಏಕೆಂದರೆ ನಮಗೆ ಅಲ್ಲಾಹನನ್ನು ಆರಾಧಿಸುವ ಸಮಯದಲ್ಲಿ ಯಾವುದೇ ವಿಗ್ರಹಗಳ ಅಗತ್ಯವಿಲ್ಲ.

2 . ಚಿಕ್ಕ ಮಕ್ಕಳು ಸಿಡಿಲಿನ ಬಗ್ಗೆ ಪ್ರಶ್ನಿಸುವುದು :

ನಾನು IRFನಲ್ಲಿ ಸ್ವಾಮೀಜಿಯೊಬ್ಬರೊಂದಿಗೆ ಚರ್ಚೆ ನಡೆಸುತ್ತಿದ್ದಾಗ ಅವರು ಹೇಳಿದ ಮಾತು ನಮ್ಮ ಮಕ್ಕಳು ಆಕಾಶದಲ್ಲೇಕೆ ಸಿಡಿಲು ಬರುತ್ತವೆ ಎಂದು ನಮ್ಮನ್ನು ಕೇಳಿದಲ್ಲಿ ನಾವು ಆಯೀ ಮಾ ಚಕ್ಕಿ ಪೀಸ್ ರಹೀ ಹೈ' ಅರ್ಥಾತ್ ಅಜ್ಜಿಯು ಆಕಾಶದಲ್ಲಿ ಹಿಟ್ಟು ರುಬ್ಬುತ್ತಿರುವಳು ' ಎಂದು ತಿಳಿಸುತ್ತೇವೆ. ಏಕೆಂದರೆ ಆ ಮಕ್ಕಳು ಸಿಡಿಲನ್ನು ಅರ್ಥ ಮಾಡಿಕೊಳ್ಳುವಷ್ಟು ಬೆಳೆದಿರುವುದಿಲ್ಲ. ಇದೇ ರೀತಿ ಜನರಿಗೆ ಆರಂಭದಲ್ಲಿ ಏಕಾಗ್ರತೆಯನ್ನು ತರುವ ಸಲುವಾಗಿ ವಿಗ್ರಹಗಳ ಅಗತ್ಯವಿದೆ."

ಇಸ್ಲಾಮಿನಲ್ಲಿ ಸುಳ್ಳಿಗೆ ಸ್ಥಾನವಿಲ್ಲ. ಅದೊಂದು ಕ್ಷಣಿಕ ಹಿತವನ್ನು ತರುವ ಸುಳ್ಳಾದರೂ ಸರಿಯೇ. ನಮ್ಮ ಮಕ್ಕಳಿಗೆ ತಪ್ಪು ಉತ್ತರಗಳನ್ನು ತಿಳಿಸಿಕೊಡುವುದು ಸರಿಯಲ್ಲ. ಏಕೆಂದರೆ ಭವಿಷ್ಯದಲ್ಲಿ ಅವರು ಹಠಾತ್ತನೆ ಬಿಸಿಯಾದ ಗಾಳಿಯು ವಿಕಸನ ಹೊಂದುವಾಗ ಸಿಡಿಲಿನ ಶಬ್ದವು ಕೇಳಿ ಬರುತ್ತದೆ ಎಂಬ ವಾಸ್ತವಿಕತೆಯನ್ನು ಶಾಲೆಯಲ್ಲಿ ಕಲಿತಾಗ ಒಂದೋ ಅಧ್ಯಾಪಕರು ಸುಳ್ಳು ಹೇಳುತ್ತಿರುವರು ಅಥವಾ ತನ್ನ ತಂದೆಯು ಒಬ್ಬ ಸುಳ್ಳುಗಾರನಿರಬೇಕು ಎಂಬ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ.

ನಿಮ್ಮ ಮಗು ಕೆಲವು ವಿಷಯಗಳನ್ನು ಅರ್ಥೈಸಿಕೊಳ್ಳಲಾರದು ಎಂಬ ಆಶಂಕೆಯು ನಿಮಗಿದ್ದಲ್ಲಿ ತಪ್ಪು ಉತ್ತರಗಳನ್ನು ಹೇಳಿಕೊಡುವ ಬದಲು ಉತ್ತರವನ್ನು ಸರಳೀಕರಿಸುವ ಬಗ್ಗೆ ಯೋಚಿಸುವುದೊಳಿತು. ಅಥವಾ ಧೈರ್ಯದಿಂದ ನನಗೆ ಗೊತ್ತಿಲ್ಲ' ಎಂದು ಹೇಳಿ ಬಿಡುವುದೇ ಉತ್ತಮ. ಆದರೆ ಇಂದಿನ ಕಾಲದ ಕೆಲವು ಮಕ್ಕಳು ಅಷ್ಟಕ್ಕೇ ಸುಮ್ಮನಿರಲಾರರು. ನನ್ನ ಮಗನಿಗೆ ನಾನು ಗೊತ್ತಿಲ್ಲ' ಎಂದು ಹೇಳಿದಲ್ಲಿ ಅವನು ಅಪ್ಪಾ ನಿಮಗೆ ಯಾಕೆ ಗೊತ್ತಿಲ್ಲ' ಎಂದು ಮರುಪ್ರಶ್ನೆ ಹಾಕುವುದು ಖಂಡಿತ. ಇದು ನಿಮ್ಮನ್ನು ಸಹ ಹೋಮ್‌ವರ್ಕ್ ಮಾಡಲು ಅನಿವಾರ್ಯವಾಗಿಸಿ ಬಿಡಬಹುದು . ವಿದ್ಯಾರ್ಜನೆ; ನಿಮಗೆ ಮತ್ತು ನಿಮ್ಮ ಮಕ್ಕಳಿಗೆ !!

3. ಆರಾಧನೆಯ ಮೊದಲನೆಯ ತರಗತಿಯಲ್ಲಿರುವವರಿಗೆ ಏಕಾಗ್ರತೆಗಾಗಿ ವಿಗ್ರಹಗಳು ಅಗತ್ಯ !?

ಕೆಲವು ವಿದ್ವಾಂಸರು ವಿಗ್ರಹ ಬಳಕೆಯ ಔಚಿತ್ಯವನ್ನು ನನಗೆ ಮನದಟ್ಟು ಮಾಡಲು ಯತ್ನಿಸುವಾಗ ಆರಾಧನಾ ರಂಗದ ಒಂದನೇ ತರಗತಿಯ ವಿದ್ಯಾರ್ಥಿಗೆ ಆರಾಧನೆಯಲ್ಲಿ ಏಕಾಗ್ರತೆಯನ್ನು ಸಾಧಿಸಲು ವಿಗ್ರಹಗಳ(5) ಅಗತ್ಯವಿದೆ. ಹೀಗೆ ಅವನು ಮುಂದಿನ ತರಗತಿಗೆ ಭಡ್ತಿ ಹೊಂದಿದಂತೆಲ್ಲಾ ಅವನಿಗೆ ವಿಗ್ರಹಗಳ ಅವಶ್ಯಕತೆಯು ಕಡಿಮೆಯಾಗುವುದು ಎಂದು ಹೇಳಿದ್ದೂ ಇದೆ.

ಇಲ್ಲಿ ನಾವೆಲ್ಲರೂ ಗಮನಿಸಬೇಕಾದ ಅತ್ಯಂತ ಮುಖ್ಯವಾದ ಅಂಶವೊಂದಿದೆ. ಒಂದು ನಿರ್ದಿಷ್ಟ ವಿಷಯವನ್ನು ಕಲಿಯುವಾಗ ಅದರ ಮೂಲಭೂತ ಅಂಶಗಳನ್ನು ಚೆನ್ನಾಗಿ ಮನದಟ್ಟು ಮಾಡಿ ಕೊಳ್ಳದ ವಿನಃ ಅದರಲ್ಲಿ ಪ್ರಗತಿಯನ್ನು ಸಾಧಿಸಿಕೊಳ್ಳುವುದು ಅಸಾಧ್ಯ. ಉದಾಹರಣೆಗೆ ಗಣಿತದ ಅಧ್ಯಾಪಕರು ಒಂದನೇ ತರಗತಿಯ ವಿದ್ಯಾರ್ಥಿಗೆ ಕಲಿಸುವುದು 2+2=4. 2+2=4 ಎಂಬ ಈ ಉತ್ತರವು ವಿದ್ಯಾರ್ಥಿಯು 10ನೇ ತರಗತಿಗೆ ಹೋದರೂ, ಪಿ.ಹೆಚ್.ಡಿ (Ph.D) ಮಾಡಲು ತೆರಳಿದರೂ ಬದಲಾಗಲು ಅಸಾಧ್ಯ. ಏಕೆಂದರೆ ಇದು ಗಣಿತದ ಮೂಲಭೂತ ಅಂಶವಾಗಿದೆ.

ತನ್ನ ಉನ್ನತ ವ್ಯಾಸಂಗದಲ್ಲಿ ಆ ವಿದ್ಯಾರ್ಥಿಯು ಬೀಜ ಗಣಿತವನ್ನೋ, ರೇಖಾ ಗಣಿತವನ್ನೋ, ಲೊಗಾರಿದಮನ್ನೋ ಕಲಿಯಬಹುದು. ಆದರೆ ಎರಡಕ್ಕೆ ಎರಡನ್ನು ಕೂಡಿಸಿದಾಗ ಉತ್ತರವು ನಾಲ್ಕೇ ಆಗಿರುವುದು. ಐದೋ, ಆರೋ, ಆಗಲು ಅಸಾಧ್ಯ. ಇನ್ನು ಆ ವಿದ್ಯಾರ್ಥಿಗೆ ಒಂದನೇ ತರಗತಿಯಲ್ಲಿ 2+2=5 ಎಂದು ಗಣಿತದ ಮೂಲ ವಿಷಯವನ್ನೇ ತಪ್ಪಾಗಿ ಕಲಿಸಿದಲ್ಲಿ ವಿದ್ಯಾರ್ಥಿಯು ಗಣಿತದಲ್ಲಿ ಪ್ರಗತಿ ಸಾಧಿಸಲು ಸಾಧ್ಯವೇ ?’

ಪ್ರತಿಮಾರ್ಚನೆ ನಿಷಿದ್ಧ' ಎಂಬುದು ವೇದ ಗ್ರಂಥಗಳ ಮೂಲ ಬೋದರನೆಯಾಗಿದೆ. ಇದರ ಜ್ಞಾನವಿರುವ ವಿದ್ವಾಂಸರು ಜನಸಾಮಾನ್ಯರ ಒಂದು ತಪ್ಪು ಆಚರಣೆಯನ್ನು ಕಂಡೂ ಕಾಣದವರಂತಿರುವುದು ಒಂದು ಮಹಾ ಅಪರಾಧವಾಗಿದೆ. ಒಂದನೇ ತರಗತಿಯಲ್ಲಿರುವ ನಿಮ್ಮ ಮಕ್ಕಳಿಗೆ 2+2 ಅದಂರೆ ನಾಲ್ಕಲ್ಲ, ಅದು ಐದೂ ಆಗಿರಬಹುದು. ಆರೂ ಆಗಿರಬಹುದು ಎಂದು ಹೇಳಲು ನೀವು ಸಿದ್ಧರೇ ? ಅಥವಾ ಸರಿಯಾದ ಉತ್ತರವನ್ನು ಹತ್ತನೇ ತರಗತಿಗೆ ತಲುಪಿದ ಬಳಿಕವೇ ತಿಳಿಸಬಹುದು ಎಂಬುದು ನಿಮ್ಮ ವಿಚಾರವೋ? ಖಂಡಿತಾ ಇಲ್ಲ. ಒಂದನೇ ತರಗತಿಯಲ್ಲಿ ಅವನು ತಪ್ಪೆಸಗಿದಲ್ಲಿ ಕೂಡಲೇ ಅವನನ್ನು ತಿದ್ದುವಿರಿ ಮತ್ತು ಉತ್ತರ ನಾಲ್ಕು ಎಂದು ಕೂಡಲೇ ಹೇಳಿ ಬಿಡುವಿರಿ. ಅವನು ಪದವಿ ಪಡೆಯುವವರೆಗೆ ಖಂಡಿತಾ ಕಾಯಲಾರಿರಿ. ಬಾಲ್ಯದಲ್ಲೇ ಅವನನ್ನು ತಿದ್ದಿ ತೀಡಿ ಸರಿಪಡಿಸಲಿಲ್ಲವೆಂದಾದಲ್ಲಿ ನೀವು ಅವನ ಭವಿಷ್ಯವನ್ನು ಹಾಳುಗೆಡವುದು ಖಂಡಿತ.


____________________________
(5)
ವಿಗ್ರಹದಿಂದಾಗಿ ಆರಾಧನೆಯಲ್ಲಿ ಪ್ರಬುದ್ಧತೆ ಸಾಧಿಸಿದ ಯಾವುದೇ ಘಟನೆಯು ಪ್ರಪಂಚದಲ್ಲಿ ಈ ವರೆಗೆ ವರದಿಯಾಗಿಲ್ಲ. ವಿಗ್ರಹ ಬಳಸಿದವರೆಲ್ಲರೂ ಮರಣ ಹೊಂದಿರುವುದು ಅಪ್ರಬುದ್ಧ ಸ್ಥಿತಿಯಲ್ಲಿಯೇ ಆಗಿದೆ ಎಂಬುದು ಅತ್ಯಂತ ಖೇದಕರ ಸಂಗತಿಯಾಗಿದೆ.


ಉತ್ತರ:

1. ಅಲ್ಲಾಹನಿಗೆ ಅತ್ಯುತ್ತಮ ನಾಮಗಳಿವೆ:

ಪವಿತ್ರ ಖುರ್‌ಆನಿನ 17ನೇ ಅಧ್ಯಾಯ 110ನೇ ಸೂಕ್ತಿಯು ಹೇಳುತ್ತದೇ : ಹೇಳಿರಿ : (ಅವನನ್ನು) ಅಲ್ಲಾಹ್ ಎಂದು ಕರೆಯಿರಿ ಅಥವಾ ರಹ್ಮಾನ್ ಎಂದೂ ಕರೆಯಿರಿ ನೀವು ಹೇಗೆ ಕರೆದರೂ ಅವನಿಗಿರುವುದು ಅತ್ಯುತ್ಕ್ರಷ್ಟ ನಾಮಗಳಾಗಿವೆ." (ಖುರ್‌ಆನ್ 17:110)

ಅರ್ಥಾತ್ ನೀವು ಯಾವುದೇ ನಾಮದಿಂದ ಅವನನ್ನು ಕರೆಯಿರಿ, ಆದರೆ ಅವುಗಳು ಅತ್ಯುತ್ತಮ ನಾಮಗಳಲ್ಲಾಗಿರಬೇಕು, ಮನದಲ್ಲಿ ಯಾವುದೇ ಚಿತ್ರವನ್ನು ಮೂಡಿಸುವಂತಿರಬಾರದು ಮತ್ತು ಅಲ್ಲಾಹನಿಗೆ ಮಾತ್ರ ಮೀಸಲಾಗಿರುವ ಗುಣಗಳನ್ನು ಹೊಂದಿರಬೇಕು.

2. ‘ನೀರು' ಅಲ್ಲದ್ದನ್ನು ನೀರೆಂದು ಕರೆಯುವ ಪರಿಪಾಠ ಯಾವುದೇ ಭಾಷೆಯಲ್ಲೂ ಇಲ್ಲ :

ನೀರನ್ನು ವಿವಿಧ ಭಾಷೆಗಳಲ್ಲಿ ವಿವಿಧ ಹೆಸರಿನಿಂದ ಕರೆಯವರು ಎಂಬ ಇವರ ಮಾತೇನೋ ಸರಿ. ಆದರೆ ನೀರಲ್ಲದ್ದನ್ನು ನೀರೆಂದು ಕರೆಯುವ ಪರಿಪಾಠ ಯಾವುದೇ ಭಾಷೆಯಲ್ಲೂ ಇಲ್ಲ.

ನನ್ನ ಮಿತ್ರನೊಬ್ಬನು ಹೇಳುತ್ತಾನೆ , ‘ನನ್ನ ಗೆಳೆಯನು ದಿನಂಪ್ರತಿ ಮುಂಜಾನೆ ನೀರನ್ನು ಕುಡಿಯುವುದು ಉತರತಮವೆಂದು ಹೇಳುತ್ತಾ ಒಂದು ಗ್ಲಾಸು ನೀರನ್ನು ಕೊಡುತ್ತಾನೆ. ಆದರೆ ಅದನ್ನು ಬಾಯಿಯ ಬಳಿ ತಂದ ಕೂಡಲೇ ವಾಕರಿಕೆಯುಂಟಾಗುತ್ತದೆ.

ನನ್ನ ಮಿತ್ರನೊಬ್ಬನು ಹೇಳುತ್ತಾನೆ. ನನ್ನ ಗೆಳೆಯನು ದಿನಂಪ್ರತಿ ಮುಂಜಾನೆ ನೀರನ್ನು ಕುಡಿಯುವುದು ಉತ್ತಮವೆಂದು ಹೇಳುತ್ತಾ ಒಂದು ಗ್ಲಾಸು ನೀರನ್ನು ಕೊಡುತ್ತಾನೆ. ಆದರೆ ಅದನ್ನು ಬಾಯಿಯ ಬಳಿ ತಂದ ಕೂಡಲೇ ವಾಕರಿಕೆಯುಂಟಾಗುತ್ತದೆ.

ಅವನ ಗೆಳೆಯನು ತಂದು ಕೊಟ್ಟ ನೀರನ್ನು ಪರೀಕ್ಷಿಸಿದಾಗ ಅದು ಅಂಟು ಅಂಟಾಗಿಯೂ ಬಣ್ಣದಲ್ಲಿ ತುಸು ಹಳದಿಯಾಗಿಯೂ ಇರುವುದು ಕಂಡು ಬಂತು. ಇನ್ನಷ್ಟು ಪರೀಕ್ಷಣೆಗೊಳಪಡಿಸಿದ ಬಳಿಕ ಅದು ವಾಸ್ತವದಲ್ಲಿ ಕೆಟ್ಟ ತ್ಯಾಜ್ಯ ದ್ರವವಾಗಿತ್ತೆಂದು ತಿಳಿದು ಬಂದಿತು. ಆದುದರಿಂದ ನೀರನ್ನು ಪಾನಿ' ಎಂದೋ, “ತನ್ನಿ" ಎಂದೋ ಕರೆಯುವುದಲ್ಲೇನೂ ತಪ್ಪಿಲ್ಲ. ಆದರೆ ಯಾವುದನ್ನು ನಾವು ಪಾನೀ, ತನ್ನಿ , ನೀರು, ವೆಳ್ಳಂ ಎಂದು ಕರೆಯುತ್ತೇವೋ ಅದು ಅದೇ' ಆಗಿರಬೇಕಾದ್ದು ಕಡ್ಡಾಯ. ಇನ್ನಾವುದನ್ನೋ ಆ ಹೆಸರಿನಿಂದ ಕರೆಯುವುದು ಸೂಕ್ತವಲ್ಲ.

ಇಲ್ಲಿ ಉದಾಹರಿಸಿದ ಘಟನೆಯು ವಾಸ್ತವಿಕತೆಗೆ ಬಲು ದೂರ ಎಂಬ ಸತ್ಯವು ಒಪ್ಪಿಕೊಳ್ಳಬೇಕಾದುದೇ. ಏಕೆಂದರೆ ಕನಿಷ್ಟ ಬುದ್ಧಿಯಿರುವ ವ್ಯಕ್ತಿಯು ಸಹ ನೀರು ಮತ್ತು ಮೂತ್ರದ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಬಲ್ಲ, ದುರ್ವಾಸನೆಯಿಂದ ಕೂಡಿದ ತ್ಯಾಜ್ಯವನ್ನು ನೀರೆಂದು ಕರೆಯುವವನನ್ನು ಹುಚ್ಚನೆನ್ನದೆ ವಿಧಿಯಿಲ್ಲ. ಇದೇ ರೀತಿ ದೇವನ ಕಲ್ಪನೆ ಅಥವಾ ಆ ನೈಜ ದೇವನ ಗುಣಲಕ್ಷಣಗಳನ್ನು ಅತ್ಯಂತ ಸಮರ್ಪಕವಾಗಿ ಬಲ್ಲವನು ಜನರು ಮಿಥ್ಯ ದೇವರುಗಳ ಬೆನ್ನು ಹತ್ತಿಕೊಂಡು ಅವುಗಳನ್ನು ಆರಾಧಿಸುವುದನ್ನು ಕಂಡಾಗ ನೈಜ ದೇವ ಮತ್ತು ಮಿಥ್ಯ ದೇವರುಗಳ ಮಧ್ಯೆಯಿರುವ ವ್ಯತ್ಯಾಸವನ್ನು ಕಂಡುಕೊಳ್ಳಲು ಇವರಿಗೆ ಸಾಧ್ಯವಾಗಿಲ್ಲವಲ್ಲ ಎಂದು ವ್ಯಥೆ ಪಡುವನು.

3. ಚಿನ್ನದ ಶುದ್ಧತೆಯು ಅಳೆಯಲ್ಪಡುವುದು ಅದನ್ನು ವಿವಿಧ ಹೆಸರುಗಳಲ್ಲಿ ಕರೆಯುವ ಮೂಲಕವಲ್ಲ ; ಬದಲಾಗಿ ಒರೆಗಲ್ಲಿನ ಮೇಲೆ ಅದನ್ನು ತೀಡುವ ಮೂಲಕವಾಗಿದೆ :

ಚಿನ್ನವನ್ನು ಹಿಂದಿಯಲ್ಲಿ ಸೋನಾ' ಎಂದೂ, ಇಂಗ್ಲೀಷಿನಲ್ಲಿ ಗೋಲ್ಡ್ ಎಂದೂ, ಅರಬೀ ಭಾಷೆಯಲ್ಲಿ ಝಹಬ' ಎಂದೂ ಕರೆಯಲಾಗುವುದು. ಚಿನ್ನಕ್ಕಿರುವ ಇಷ್ಟೆಲ್ಲಾ ಹೆಸರುಗಳನ್ನು ಅರಿತಿರುವ ನಾವು ನಮ್ಮಲ್ಲಿಗೆ ಇಪ್ಪತ್ತನಾಲ್ಕು ಕ್ಯಾರೆಟಿನ ಚಿನ್ನವೆಂದು ಹೇಳಿಳಿಕೊಂಡು ಚಿನ್ನ ಮಾರಾಟ ಮಾಡಲು ಬಂದಿರುವವನ ಮಾತನ್ನು ಕಣ್ಣು ಮುಚ್ಚಿಕೊಂಡು ನಂಬಿ ಬಿಡುವುದಿಲ್ಲ, ಬದಲಾಗಿ ಅವನನ್ನು ಅಕ್ಕಸಾಲಿಗನ ಬಳಿಗೆ ಕರೆದುಕೊಂಡು ಹೋಗುತ್ತೇವೆ. ಅವನ ಬಳಿ ಒಂದು ಒರೆಗಲ್ಲಿದೆ. ಚಿನ್ನ'ವೆಂದು ಕರೆದ ವಸ್ತುವನ್ನು ಅವನು ಅದರ ಮೇಲೆ ತೀಡುತ್ತಾನೆ. ಮತ್ತು ಅದರ ಶುದ್ಧತೆಯನ್ನು ನಿರ್ಧರಿಸುತ್ತಾನೆ.ಕೆಲವೊಮ್ಮೆ ಅದು 24 ಕ್ಯಾರೆಟ್‌ಗಳಾಗಿದ್ದರೆ, ಇನ್ನು ಕೆಲವು ಸಲ ಅದು 18 ಕ್ಯಾರೆಟ್‌ಗಳಾಗಿರುತ್ತದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಅದು ಚಿನ್ನವೇ ಆಗಿಲ್ಲದ ಸಾಧ್ಯತೆಗಳೂ ಇವೆ. ಆದುದರಿಂದ ಹಳದಿ ಬಣ್ಣವಿರುವ ಆಭರಣವು ಚಿನ್ನವಾಗಿರಬೇಕೆಂದಿಲ್ಲ. ಏಕೆಂದರೆ ಹೊಳೆಯುವ ಹಳದಿ ಲೋಹಗಳೆಲ್ಲವೂ ಚಿನ್ನವಾಗಿರುವುದಿಲ್ಲ.

4. ಖುರ್‌ಆನ್ 112ನೇ ಅಧ್ಯಾಯವು ಆ ನೈಜ ದೇವನಾರೆಂಬುದನ್ನು ತಿಳಿಸಿಕೊಡುವ ಒರೆಗಲ್ಲು :

ದೇವನೆಂದು ಕರೆಸಿಕೊಳ್ಳಲಿಚ್ಛಿಸುವ ಯಾವುದೇ ವ್ಯಕ್ತಿಯನ್ನು , ಅಥವಾ ಅಭ್ಯರ್ಥಿಯನ್ನು ಕುರುಡಾಗಿ ಸ್ವೀಕರಿಸಿಕೊಳ್ಳುವುದು ಉಚಿತವಲ್ಲ, ಅವನನ್ನು ಒರೆಗಲ್ಲಿನ ಮೇಲೆ ತೀಡಿ ಪರೀಕ್ಷಿಸದ ಹೊರತು. ದೇವನ ಬಗ್ಗೆ ನಿಖರ ಮಾಹಿತಿ ಒದಗಿಸಿ ಕೊಡುವ, ದೇವ ಶಾಸ್ತ್ರದ ಒರೆಗಲ್ಲು ಎನ್ನಲಾಗುವ ಅಧ್ಯಾಯವೊಂದು ಪವಿತ್ರ ಖುರ್‌ಆನಿನಲ್ಲಿದೆ. ಇಖ್‌ಲಾಸ್' (ನಿಷ್ಕಳಂಕತೆ, ಏಕನಿಷ್ಠತೆ) ಎಂದು ಕರೆಯಲ್ಪಡುವ ಈ ಅಧ್ಯಾಯವು ಹೀಗೆನ್ನುತ್ತದೆ.

1. “ಹೇಳು ಅವನು ಅಲ್ಲಾಹನು, ಏಕೈಕನು
2.
ಅಲ್ಲಾಹನು (ಸರ್ವರಿಗೂ) ಆಶ್ರಯದಾತನಾದ ನಿರಪೇಕ್ಷ ಪ್ರಭು.
3.
ಅವನಿಗೆ ಯಾವ ಸಂತಾನವೂ ಇಲ್ಲ ಅವನು ಯಾರ ಸಂತಾನವೂ ಅಲ್ಲ .
4.
ಮತ್ತು ಅವನಿಗೆ ಸರಿ ಸಮಾನರಾಗಿ ಯಾರೂ ಇಲ್ಲ. (ಖುರ್‌ಆನ್ 112)

5. ಈ ಚಿಕ್ಕ ಚೊಕ್ಕ ಅಧ್ಯಾಯದಲ್ಲಿರುವ ನಾಲ್ಕು ಘಟ್ಟಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಯಾವುದೇ ವ್ಯಕ್ತಿಯು ದೇವ'ನೆಂದು ಕರೆಯಲ್ಪಡಲು ಅರ್ಹನು :

ಮೇಲೆ ತಿಳಿಸಿದ ನಾಲ್ಕು ಚಿಕ್ಕ ಚೊಕ್ಕ ಸೂತ್ರಗಳಲ್ಲಿ ಸೂಚಿಸಿರುವ ಅರ್ಹತೆಗಳುಳ್ಳ ಯಾವುದೇ ವ್ಯಕ್ತಿಯಾ ಅಭ್ಯರ್ಥಿಯು ದೇವನೆಂದು ಕರೆಸಿಕೊಂಡು ಆರಾಧಿಸಲ್ಪಡಲು ಅರ್ಹನು .

ಯಾರಾದರೊಬ್ಬನು ಪ್ರವಾದಿ ಮುಹಮ್ಮದ್ (ಸ) ರನ್ನು ದೇವರೆನ್ನುತ್ತಾನೆ ಎಂದಾದರೆ ಅವರನ್ನೂ ಸೂರ: ಇಖ್‌ಲಾಸ್‌ನ ನಾಲ್ಕು ಸೂತ್ರಗಳ ಮೂಲಕ ಪರೀಕ್ಷೆಗೊಳಪಡಿಸಬಹುದು.

(1). ಹೇಳು : ಅವನು ಅಲ್ಲಾಹ್ (ದೇವ)ನು ಏಕ್ಐಕನು : ಮುಹಮ್ಮದ್‌ರೆಂಬವರು ಬೇರಾರೂ ಇಲ್ಲವೆ, ಅವರು ಏಕೈಕ ಪ್ರವಾದಿಗಳಾಗಿದ್ದರೆ? ಖಂಡಿತವಾಗಿಯೂ ಇಲ್ಲ. ಪ್ರವಾದಿಗಳಾಗಿ ಬಂದವರು ಲಕ್ಷಕ್ಕಿಂತಲೂ ಅಧಿಕ.
(2).
ಅಲ್ಲಾಹನಜ ಸರ್ವರಿಗೂ ಆಶ್ರಯದಾತನಾದ ನಿರಪೇಕ್ಷ ಪ್ರಭು : ಪ್ರವಾದಿ ಮುಹಮ್ಮದ್ (ಸ)ರು ನಿರಪೇಕ್ಷರಾಗಿದ್ದರೇ? ಇಲ್ಲ. ಅಲ್ಲಾಹನ ಪ್ರವಾದಿಗಳ ಪೈಕಿ ಅತ್ಯಂತ ಶ್ರೇಷ್ಠರಾಗಿದ್ದರು ಎಂಬುದರ ಹೊರತಾಗಿಯೂ ಅವರನ್ನು ಹಲವು ಕಷ್ಟ ಕಾರ್ಪಣ್ಯಗಳು ಬಾಧಿಸಿದ್ದವು. ತಮ್ಮ 63ನೇ ವಯಸ್ಸಿನಲ್ಲಿ ಮರಣ ಹೊಂದಿದರು. ಅವರನ್ನು ಮದೀನಾದಲ್ಲಿ ದಫನ ಮಾಡಲಾಯಿತು.
(3).
ಅವನಿಗೆ ಯಾವ ಸಂತಾನವೂ ಇಲ್ಲ, ಅವನು ಯಾರ ಸಂತಾನವೂ ಅಲ್ಲ : ಪ್ರವಾದಿ ಮುಹಮ್ಮದ್ (ಸ)ರು ಮಕ್ಕಾ ನಗರದಲ್ಲಿ ಅಬ್ದುಲ್ಲಾ ಮತ್ತು ಆಮಿನಾ ಎಂಬ ದಂಪತಿಗಳಿಗೆ ಜನಿಸಿದರು. ಅವರಿ (ಸ)ಗೆ ವಿವಾಹವಾಗಿತ್ತು, ಮಕ್ಕಳು ಮೊಮ್ಮಕ್ಕಳು ಜನಿಸಿದ್ದವು. ಫಾತಿಮಾ ಮತ್ತು ಇಬ್ರಾಹಿಂ ಎಂಬುವರು ಅವರ ಮಕ್ಕಳ ಪೈಕಿ ಇಬ್ಬರಾಗಿದ್ದರು.
(4).
ಅವನಿಗೆ ಸರಿಸಮಾನರಾಗಿ ಯಾರೂ ಇಲ್ಲ : ಪ್ರವಾದಿ ಮುಹಮ್ಮದ್ (ಸ)ರು ಹಲವು ಪ್ರವಾದಿಗಳ ಪೈಕಿ ಒಬ್ಬರಾಗಿದ್ದರು. ವ್ಯತ್ಯಾಸವಿರುವುದು ಶ್ರೇಷ್ಠತೆಯಲ್ಲಿ ಮಾತ್ರ. ಇತರ ಜನರೊಂದಿಗೆ ಹೋಲಿಸಬಹುದಾದವರು ದೇವರಾಗಲು ಅಸಾಧ್ಯ.

ಜಗತ್ತಿನೆಲ್ಲಾ ಮುಸ್ಲಿಮರು ಪ್ರವಾದಿ ಮುಹಮ್ಮದ್ (ಸ)ರನ್ನು ಪ್ರೀತಿಸಬೇಕು, ಅವರನ್ನು ಅತ್ಯಧಿಕವಾಗಿ ಗೌರವಿಸಬೇಕು ಮತ್ತು ಅವರ ಎಲ್ಲಾ ಆದೇಶಗಳನ್ನು ಪಾಲಿಸಬೇಕು ಎಂಬ ನಿಯಮಕ್ಕೆ ಬದ್ಧರಾಗಿರುವರಾದರೂ, ಇವರ ಪೈಕಿ ಯಾವುದೇ ಒಬ್ಬ ಮುಸ್ಲಿಮನಿಗೆ ಪ್ರವಾದಿ ಮುಹಮ್ಮದ್ (ಸ)ರು ದೇವರಾಗಿದ್ದಾರೆ ಎಂಬ ನಂಬಿಕೆ ಇಲ್ಲ. ಇಸ್ಲಾಮಿನ ಕಲಿಮ : (ಸಾಕ್ಷ್ಯ ವಚನ)ವು ಲಾ ಇಲಾಹ್ ಇಲ್ಲಲ್ಲಾಹ್ ಮುಹಮ್ಮದರ್ರಸೂಲುಲ್ಲಾಹ್ ಅರ್ಥಾತ್ ಅಲ್ಲಾಹನ ಹೊರತು ಯಾವುದೇ ಇಲಾಹ್ (ನೈಜ ಆರಾಧ್ಯರು)ಗಳಿಲ್ಲ, ಮುಹಮ್ಮದ್ (ಸ)ರು ಅಲ್ಲಾಹನ ಸಂದೇಶವಾಹಕರು ಎಂಬುದಾಗಿದೆ. ಇದನ್ನು ದಿನಂಪ್ರತಿ ಐದು ಬಾರಿ ಆವರ್ತಿಸುವ ಆದಾನ್ (ನಮಾಜಿನ ಕರೆ)ನಲ್ಲಿ ಹೇಳಲಾಗುತ್ತದೆ. ಪ್ರವಾದಿ (ಸ)ರು ಅತ್ಯಧಿಕವಾಗಿ ಗೌರವಿಸಲ್ಪಡುವ ವ್ಯಕ್ತಿಯಾಗಿದ್ದರು ಸಹ ಅವರು ಅಲ್ಲಾಹನ ನಿಷ್ಟ ದಾಸರಾಗಿದ್ದರೇ ಹೊರತು ಅವರು ಅಲ್ಲಾಹ್ (ದೇವ)ನಾಗಿರಲಿಲ್ಲ ಎಂಬುದನ್ನು ನೆನಪಿಸಿಕೊಡುವುದೇ ಇದರ ಹಿಂದಿನ ಉದ್ದೇಶ.

6. ತಮ್ಮ ತಮ್ಮ ಆರಾಧ್ಯರನ್ನು ಪರೀಕ್ಷಿಸಿಕೊಳ್ಳುವ ಸ್ವಾತಂತ್ರ್ಯ :

ದೇವನನ್ನು ಪರೀಕ್ಷಿಸುವುದು ಹೇಗೆಂಬುದನ್ನು ಈಗಾಗಲೇ ವಿವರಿಸಿರುವೆವು. ಆ ಆರಾಧ್ಯರನ್ನು ಯಾವ ಒರೆಗಲ್ಲಿನ ಮೇಲೆ ಹೇಗೆ ತೀಡಬೇಕೆಂಬುದನ್ನು ಕಲಿಸಿರುವೆವು. ಈಗ ಎಲ್ಲರೂ ತಮ್ಮ ತಮ್ಮ ಆರಾಧ್ಯ ದೇವರನ್ನು ಪರೀಕ್ಷಿಸಿ ನೋಡಲಿ. ಇದು ಪ್ರತಿಯೊಬ್ಬ ವ್ಯಕ್ತಿಯ ಪ್ರಪ್ರಥಮ ಕರ್ತವ್ಯವೂ ಹೌದು. ನಾವು ಅತ್ಯಂತ ಭಯ ಭಕ್ತಿಯಿಂದ ಪೂಜಿಸುತ್ತಿರುವ ದೇವರು ಅದಕ್ಕೆ ಅರ್ಹನೋ ಅನರ್ಹನೋ ಎಂಬುದನ್ನು ಪರೀಕ್ಷಿಸಿ ನೋಡುವುದು ಅತ್ಯಗತ್ಯವಲ್ಲವೇ?


ಉತ್ತರ

1. ಇಸ್ಲಾಮ್ ಧರ್ಮವು ಅತ್ಯಂತ ಸನಾತನವಾಗಿದೆ :

ಹಿಂದೂ ಧರ್ಮವು ಅತ್ಯಂತ ಪುರಾತನ ಧರ್ಮವೆಂಬುದು ಸರಿಯಲ್ಲ. ಧರ್ಮಗಳಲ್ಲೆಲ್ಲಾ ಅತ್ಯಂತ ಪುರಾತನವೂ, ಪ್ರಪ್ರಥಮವೂ ಇಸ್ಲಾಮ್ ಧರ್ಮವಾಗಿದೆ . ಇಸ್ಲಾಮ್ ಧರ್ಮವು ಬಂದುದು 1400 ವರ್ಷಗಳ ಹಿಂದೆ ಮತ್ತು ಅದರ ಸ್ಥಾಪಕರು ಪ್ರವಾದಿ ಮುಹಮ್ಮದ(ಸ) ರೆನ್ನವ ತಪ್ಪು ಕಲ್ಪನೆ ಅನೇಕ ಜನರಲ್ಲಿದೆ. ವಾಸ್ತವದಲ್ಲಿ ಇಸ್ಲಾಮ್ ಧರ್ಮವು ಮಾನವರು ಈ ಭೂಮಿಯ ಮೇಲೆ ಕಾಲೂರಿದಂದೇ ಆರಂಭಗೊಂಡಿತ್ತು. ಪ್ರವಾದಿ ಮುಹಮ್ಮದ್ (ಸ)ರು ಇಸ್ಲಾಮ್ ಧರ್ಮದ ಪುನಃಸ್ಥಾಪಕರು ಹಾಗೂ ಅಲ್ಲಾಹನ ಪ್ರವಾದಿಗಳ ಪೈಕಿ ಕಟ್ಟ ಕಡೆಯವರು.

2. ಒಂದು ಧರ್ಮವು ಅತ್ಯಂತ ಪುರಾತನವಾಗಿದೆ ಎಂಬುದು ಅದರ ಶುದ್ಧತೆ ಮತ್ತು ಅಧಿಕೃತತೆಯನ್ನು ಅಳೆಯುವ ಮಾನದಂಡವಾಗಲಾರದು :

ಒಂದು ಧರ್ಮವು ಅತ್ಯಂತ ಪುರಾತನವಾಗಿದೆ ಎಂಬ ಒಂದೇ ಕಾರಣಕ್ಕಾಗಿ ಅದನ್ನು ಅತ್ಯಂತ ಶುದ್ಧ ಹಾಗೂ ಅಧಿಕೃತ ಧರ್ಮವೆಂದು ಘೋಷಿಸಲಾಗದು. ಇದು ಒಬ್ಬ ವ್ಯಕ್ತಿಯು ತಾನು ಮೂರು ತಿಂಗಳ ಮೊದಲು ಒಂದು ತೆರೆದ ಲೋಟದಲ್ಲಿ ಸಂಗ್ರಹಿಸಿಟ್ಟ ನೀರು , ಅನ್ಯ ವ್ಯಕ್ತಿಯೊಬ್ಬನಿಂದ ಇದೀಗ ತಾನೇ ಸಂಗ್ರಹಿಸಲ್ಪಟ್ಟ ಶುದ್ಧೀಕರಿಸಿದ ನೀರಿಗಿಂತ ಶುದ್ಧವಾಗಿದೆ ಎಂದ ಹಾಗಿದೆ.

3. ಒಂದು ಧರ್ಮವು ಅತ್ಯಂತ ನವೀನವಾಗಿದೆ ಎಂಬುದು ಸಹ ಅದರ ಶುದ್ಧತೆ ಹಾಗೂ ಅಧಿಕೃತತೆಗೆ ಮಾನದಂಡವಲ್ಲ:

ಒಂದು ಧರ್ಮವು ಅದು ಇತ್ತೀಚೆಗಷ್ಟೇ ಬಂದುದು ಎಂಬ ಒಂದೇ ಅಂಶವು ಅದರ ಶುದ್ಧತೆಯನ್ನು ಹಾಗೂ ಅಧಿಕೃತತೆಯನ್ನು ಅಳೆಯುವ ಸಾಧನವಾಗಲಾರದು. ಒಂದು ಬಾಟಲಿನಲ್ಲಿ ಸಂಗ್ರಹಿಸಲ್ಪಟ್ಟು, ಭದ್ರವಾಗಿ ಸೀಲು ಮಾಡಲ್ಪಟ್ಟು, ಶೀತಕ ಯಂತ್ರದೊಳಗಿಟ್ಟ ಭಟ್ಟಿ ಇಳಿಸಿದ ನೀರು ಸಮುದ್ರದಿಂದ ಇದೀಗ ತಾನೇ ಸಂಗ್ರಹಿಸಲ್ಪಟ್ಟ ನೀರಿಗಿಂತ ಅದೆಷ್ಟೋ ಪಾಲು ಶುದ್ಧವಾಗಿರುವುದು.

4. ಒಂದು ಧರ್ಮವು ಅಗತ್ಯ ಶುದ್ಧ ಹಾಗೂ ಅಧಿಕೃತವಾಗಿದೆ ಎನ್ನಬೇಕಾದಲ್ಲಿ ಅದರ ಬೋಧನೆಗಳು ಪ್ರಕ್ಷಿಪ್ತಗೊಂಡಿರಬಾರದು :

ಧರ್ಮವು ಯಾವುದೇ ಇರಲಿ ಅದು ಶುದ್ಧ ಹಾಗೂ ಅಧಿಕೃತವಾಗಿದೆ ಎನ್ನಬೇಕಾದಲ್ಲಿ ಅದರ ಅಧಿಕೃತ ಗ್ರಂಥಗಳು ಪ್ರಕ್ಷಿಪ್ತಗೊಂಡಿರಬಾರದು. ಆ ಗ್ರಂಥದ ಬೋಧನೆಗಳಲ್ಲಿ ಮಾನವ ಹಸ್ತಕ್ಷೇಪಗಳಿರಕೂಡದು. ದೈವಿಕವಾಗಿ ಅವತೀರ್ಣಗೊಂಡ ಅದರ ಗ್ರಂಥಗಳ ಬೋಧನೆಗಳಲ್ಲಿ ಕೆಲವನ್ನು ಕೈ ಬಿಟ್ಟು ಇನ್ನು ಕೆಲವನ್ನು ಸೇರಿಸುವ ಪ್ರಕ್ರಿಯೆ ನಡೆದಿರಬಾರದು. ಸಂಕ್ಷಿಪ್ತವಾಗಿ ಹೇಳುವುದಾದರೆ ಆ ಗ್ರಂಥದ ಬೋಧನೆಗಳು ದೇವ ನಿರ್ದೇಶಿತವಾಗಿರಬೇಕು. ಭೂಮಿಯ ಮೇಲೆ ಅವತೀರ್ಣಗೊಂಡ ದೈವಿಕ ಗ್ರಂಥಗಳ ಪೈಕಿ ತನ್ನ ಮೂಲ ಬೋಧನೆಗಳು ಒಂದಿಷ್ಟು ಲೋಪಗೊಳ್ಳದಂತೆ, ಅವತೀರ್ಣಗೊಂಡ ಮೂಲ ಭಾಷೆಯಲ್ಲೇ ಸುರಕ್ಷಿತವಾಗಿರುವ ಗ್ರಂಥವೊಂದಿದ್ದರೆ ಅದು ಖುರ್‌ಆನ್ ಮಾತ್ರ.

ಇತರ ಎಲ್ಲಾ ಧರ್ಮಗಳ ಎಲ್ಲಾ ಗ್ರಂಥಗಳೂ ಪ್ರಕ್ಷಿಪ್ತಗೊಂಡಿವೆ. ಮಾನವನ ಹಸ್ತಕ್ಷೇಪಕ್ಕೊಳಗಾಗಿ ಹಲವು ವಿಷಯಗಳು ಸೇರಿಸಲ್ಪಟ್ಟಿದೆ. ಹಲವು ವಿಷಯಗಳನ್ನು ತೊರೆಯಲಾಗಿದೆ. ಹಲವು ಬಾರಿ ಪರಿಷ್ಕರಣೆಗಳಿಗೆ ಒಳಪಟ್ಟಿದೆ. ಇದಕ್ಕೆ ವ್ಯತಿರಿಕ್ತವಾಗಿ ಖುರ್‌ಆನ್ ಅವತೀರ್ಣಗೊಂಡ ಕಾಲಘಟ್ಟದಿಂದಲೇ, ಅವತೀರ್ಣಗೊಂಡ ರೂಪದಲ್ಲೇ, ಅವತೀರ್ಣಗೊಂಡ ಒಂದು ಅಕ್ಷರವೂ ಲೋಪಗೊಳ್ಳದಂತೆ, ಸಾವಿರಾರು ಜನರಿಂದ ಕಂಠಪಾಠ ಮಾಡಲ್ಪಟ್ಟು ಇಂದಿಗೂ ತನ್ನ ಮೂಲ ಭಾಷೆಯಲ್ಲೇ ಸುರಕ್ಷತವಾಗಿದೆ. ಇಸ್ಲಾಮಿನ 3ನೇ ಖಲಿಫರಾಗಿದ್ದ ಹಜರತ್ ಉಸ್ಮಾನ್(ರ)ರು ಮೂಲಪ್ರತಿಯಿಂದ ನಕಲು ತೆಗಿಸಿದ್ದ, ತಾಷ್ಕೆಂಟಿನ ಮ್ಯೂಸಿಯಂ‌ನಲ್ಲಿ ಇಂದು ಕೂಡಾ ಭದ್ರವಾಗಿರುವ ಪ್ರತಿಯೊಂದಿಗೆ ಇಂದು ಲಭ್ಯವಿರುವ ನವೀನ ಪ್ರತಿಯೊಂದನ್ನು ತಾಳೆ ನೋಡಿದಲ್ಲಿ ಒಂದಕ್ಷರದ ವ್ಯತ್ಯಾಸವೂ ಕಂಡು ಬರಲಾರದು.

ಈ ಬಗ್ಗೆ ಅಲ್ಲಾಹನ ವಾಗ್ದಾನವು ಪವಿತ್ರ ಖುರ್‌ಆನಿನಲ್ಲಿ ಹೀಗಿದೆ :

ನಿಶ್ಚಯವಾಗಿಯೂ, ಈ ಝಿಕರ್‌ಅನ್ನು ಅವತೀರ್ಣಗೊಳಿಸಿದವರು ನಾವೇ. ಮತ್ತು ನಾವೇ ಇದರ ಸಂರಕ್ಷರೂ ಅಗಿರುತ್ತೇವೆ" (ಖುರ್‌ಆನ್ : 15 : 9)

5. ಪುರಾತನ ಧರ್ಮವು ಅತ್ಯುತ್ತಮವೇ ಆಗಿರಬೇಕು ಎಂದಿಲ್ಲ :

ಒಂದು ಧರ್ಮವನ್ನು ಅದು ಅತ್ಯಂತ ಪುರಾತನವಾಗಿದೆ ಎಂಬ ಏಕಮಾತ್ರ ಕಾರಣಕ್ಕೆ ಅತ್ಯುತ್ತಮವೆನ್ನಬೇಕಾಗಿಲ್ಲ. ಇದು ಒಬ್ಬ ವ್ಯಕ್ತಿಯು 19ನೇ ಶತಮಾನದ ಕಾರು 2007ರಲ್ಲಿ ಉತ್ಪಾದಿಸಲ್ಪಟ್ಟ ಟೊಯೊಟಾ ಕಾರಿಗಿಂತ ಉತ್ತಮ ಎನ್ನುವಂತಿದೆ. ಹೀಗೆನ್ನುವವನನ್ನು ಮೂರ್ಖನೆನ್ನದೆ ವಿಧಿಯಿಲ್ಲ. ಏಕೆಂದರೆ 19ನೇ ಶತಮಾನದ ಕಾರನ್ನು ಸ್ಟಾರ್ಟ್ ಮಾಡಲು ಕಬ್ಬಿಣದ ಕೋಲಿನಿಂದ ಅದರ ಎಂಜಿನನ್ನು ಬಲವಾಗಿ ಬಲವಾಗಿ ತಿರುಗಿಸಬೇಕಾಗಿತ್ತು. ಆಧುನಿಕವಾಗಿ ನಿರ್ಮಿಸಲ್ಪಟ್ಟ ಕಾರು ಕೇವಲ ಒಂದು ಗುಂಡಿಯನ್ನು ಅದುಮುವ ಮೂಲಕ ಚಾಲನೆಗೊಳ್ಳಬಲ್ಲುದು. ಆದುದರಿಂದ ಕೇವಲ ಪ್ರಾಯವು ಒಂದು ವಸ್ತುವಿನ ಶ್ರೇಷ್ಠತೆಯನ್ನು ಅಳೆಯುವ ಮಾನದಂಡವಾಗಲಾರದು.

6. ಧರ್ಮವು ಅತ್ಯಂತ ನವೀನವಾಗಿರುವುದು ಸಹ ಅದರ ಶ್ರೇಷ್ಠತೆಯನ್ನು ಅಳೆಯುವ ಸಾಧನವಾಗಲಾರದು :

ಒಂದು ಧರ್ಮವು ನವೀನವಾಗಿದೆ ಮತ್ತು ಇತ್ತೀಚೆಗಷ್ಟೇ ಬಂದಿದೆ ಎಂಬುದು ಅದರ ಅತ್ಯುತ್ತಮತನವನ್ನು ' ಅಳೆಯುವ ಕೋಲಾಗಲಾರದು. ಇದು ಒಬ್ಬ ವ್ಯಕ್ತಿಯು ತನ್ನ 800CC ಸಾಮರ್ಥ್ಯದ 2007ನೇ ಇಸವಿಯಲ್ಲಿ ಉತ್ಪಾದಿಸಿದ ಸುಜುಕಿ ಕಾರು 1997ನೇ ಇಸವಿಯಲ್ಲಿ ಉತ್ಪಾದಿಸಿದ 5000CC ಸಾಮರ್ಥ್ಯದ ಮರ್ಸಿಡಿಸ್ 500 SEL ಕಾರಿಗಿಂತ ಉತ್ತಮ ಎನ್ನುವಂತಿದೆ. ಒಬ್ಬ ವ್ಯಕ್ತಿಯು ಕಾರುಗಳಲ್ಲಿ ಉತ್ತಮವಾದುದು ಯಾವುದೆಂಬ ನಿರ್ಣಯಕ್ಕೆ ಬರಬೇಕಾದಲ್ಲಿ ಅದರ ಎಂಜಿನ್ ಸಾಮರ್ಥ್ಯ, ಸುರಕ್ಷಾ ವಿಧಾನಗಳು, ಅದು ಚಲಿಸುವ ಗರಿಷ್ಟ ವೇಗ, ಮುಂತಾದವುಗಳನ್ನು ಒರೆಗೆ ಹಚ್ಚಬೇಕಾಗುತ್ತದೆ. 1997 ರಲ್ಲಿ ಉತ್ಪಾದಿಸಿದ 5000CC ಸಾಮರ್ಥ್ಯದ ಮರ್ಸಿಡಿಸ್ 500 SEL ಕಾರು 2007ರಲ್ಲಿ ಉತ್ಪಾದಿಸಿದ ಸುಜುಕಿ 800 CC ಕಾರಿಗಿಂತ ಉತ್ತಮವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

7. ಒಂದು ಧರ್ಮವನ್ನು ಉತ್ತಮವೆಂದು ಪರಿಗಣಿಸಬೇಕಾದಲ್ಲಿ ಆದರಲ್ಲಿ ಮಾನವಕುಲದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾರ್ಗಗಳಿರಬೇಕಾದುದು ಕಡ್ಡಾಯ :

ಒಂದು ಧರ್ಮವನ್ನು ಉತ್ತಮವೆಂದು ಪರಿಗಣಿಸಬೇಕಾದಲ್ಲಿ ಆ ಧರ್ಮವು ಮಾನವರ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಸೂಚಿಸಬೇಕು. ಅದು ಸತ್ಯ ಧರ್ಮವಾಗಿರಬೇಕು. ಸಾರ್ವಕಾಲಿಕವಾಗಿರಬೇಕು. ಮನುಷ್ಯರ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳನ್ನು ಸೂಚಿಸಿ ಕೊಡುವ ಸತ್ಯಧರ್ಮವೊಂದಿದ್ದರೆ ಅದು ಇಸ್ಲಾಮ್' ಮಾತ್ರ . ಉದಾಹರಣೆಗೆ ಮಾದಕ ವಸ್ತುಗಳ ಸಮಸ್ಯೆ, ಸ್ತ್ರೀ-ಪುರುಷರ ಅನುಪಾತದಲ್ಲಿ ಸ್ತ್ರೀಯರ ಸಂಖ್ಯೆ ಅಧಿಕವಾಗಿರುವುದು, ಅತ್ಯಾಚಾರ, ಸ್ತ್ರೀ ಪೀಡನಾ ಪ್ರಕರಣಗಳು, ಕಳ್ಳತನ-ದರೋಡೆಗಳು, ವರ್ಣನೀತಿ ಸಿದ್ಧಾಂತ , ಕೋಮುವಾದ ಇತ್ಯಾದಿಗಳಿಗೆಲ್ಲಾ ಇಸ್ಲಾಮ್ ಧರ್ಮವು ಸೂಕ್ತ ಪರಿಹಾರ ಮಾರ್ಗಗಳನ್ನು ಸೂಚಿಸಿದೆ.

ಇಸ್ಲಾಮ್ ಸತ್ಯಧರ್ಮವಾಗಿದೆ. ಅದರ ನಿಯಮಗಳು ಮತ್ತು ಅದು ಮಾನವನ ಸಮಸ್ಯೆಗಳಿಗೆ ಪರಿಹಾರವಾಗಿ ಸೂಚಿಸಿಕೊಡುವ ಮಾರ್ಗಗಳು ಎಲ್ಲಾ ಕಾಲದಲ್ಲೂ ಪ್ರಾಯೋಗಿಕವಾಗಿದೆ. ಇಸ್ಲಾಮ್ ಧರ್ಮದ ಅಧಿಕೃತ ಗ್ರಂಥವಾದ ಖುರ್‌ಆನ್, ಮಾನವ ಹಸ್ತಕ್ಷೇಪಕ್ಕೊಳಪಡದ, ತನ್ನ ಶುದ್ಧತೆಯನ್ನು ಮತ್ತು ಅಧಿಕೃತತೆಯನ್ನು ಯಥಾರೂಪ ಕಾಯ್ದುಕೊಂಡಿರುವ ಭೂಮಿಯ ಮೇಲಿನ ಏಕೈಕ ದೈವಿಕ ಗ್ರಂಥವಾಗಿದೆ.

ಸರಿದು ಹೋದ ಒಂದು ಕಾಲವು ಪವಾಡ, ಸಾಹಿತ್ಯ, ಕವನಗಳ ಕಾಲವಾಗಿದ್ದರೆ, ಸಮಕಾಲೀನ ಜಗತ್ತು ವೈಜ್ಞಾನಿಕವಾಗಿದೆ. ಅರಬ್ಬೀ ಸಾಹಿತ್ಯವು ಸಜೀವವಾಗಿದ್ದು ಮಹಾನ್ ಕವಿಗಳ ಕವಿತೆಗಳಿಂದಾಗಿ ಜನರು ಅವರಿಗೆ ಸಾಷ್ಟಾಂಗವೆರಗುವಷ್ಟು ಜನಾದರಣೀಯರಾಗಿದ್ದ ಸಾಹಿತ್ಯ ಕಾಲ ಘಟ್ಟದಲ್ಲಿ ಖುರ್‌ಆನ್ ಅವತೀರ್ಣಗೊಂಡಾಗ ಆ ಮಹಾ ಕವಿಗಳೇ ಖುರ್‌ಆನಿನ ಶೈಲಿ ಮತ್ತು ವಾಕ್ಯ ರಚನೆಯ ಗಾಂಭೀರ್ಯಕ್ಕೆ ಮನಸೋತಿದ್ದರು ಅದರ ಒಂದು ಸೂಕ್ತಿಗಾದರೂ ತಾನು ಒಡೆಯನಾಗಿದ್ದರೆ ಅದೆಷ್ಟು ಚೆನ್ನಾಗಿತ್ತು ಎಂದು ಅವರು ಅಂದು ಹಂಬಲಿಸುವಂತಾಗಿದ್ದರೆ ವೈಜ್ಞಾನಿಕ ಯುಗವಾಗಿರುವ ಇಂದು ವಿಜ್ಞಾನವು ತೀರ ಇತ್ತೀಚೆಗಷ್ಟೇ ಆವಿಷ್ಕರಿಸಿರುವ ವೈಜ್ಞಾನಿಕ ವಿಷಯಗಳು 1400 ವರ್ಷಗಳ ಹಿಂದೆಯೇ ಖುರ್‌ಆನಿನಲ್ಲಿ ಉಲ್ಲೇಖಿಸಲ್ಪಟ್ಟಿರುವಿದನ್ನು ಕಂಡು ಇಂದಿನ ವಿಜ್ಞಾನಿಗಳು ವಿಸ್ಮಯಗೊಂಡಿರುವರು.

ಇಸ್ಲಾಮ್ ಮಾನವ ನಿರ್ಮಿತ ಧರ್ಮವಲ್ಲ. ಬದಲಾಗಿ ಅದು ಭೂಮ್ಯಾಕಾಶಗಳ ಮತ್ತು ಅವುಗಳ ಮಧ್ಯೆಯಿರುವ ಎಲ್ಲಾ ವಸ್ತುಗಳ ಸೃಷ್ಟಿಕರ್ತನು ಮಾನವನಿಗಾಗಿ ಅವತೀರ್ಣಗೊಳಿಸಿಕೊಟ್ಟ ಧರ್ಮವಾಗಿದೆ. ಅಲ್ಲಾಹ (ಸೃಷ್ಟಿಕರ್ತ)ನ ಬಳಿ ಸ್ವೀಕಾರಾರ್ಹ ಧರ್ಮವೊಂದಿದ್ದರೆ ಅದು ಇಸ್ಲಾಮ್ ಮಾತ್ರ." (ಖುರ್‌ಆನ್ 3:19)

ಉತ್ತರ :

1. ಮಾನವ ದೇಹದಲ್ಲಿರುವ ಎಲ್ಲಾ ಘಟಕಾಂಶಗಳೂ ಮಣ್ಣಿನಲ್ಲಿರುವವುಗಳೇ ಆಗಿದೆ :

ಮಣ್ಣಿನಲ್ಲಿರುವ ಮೂಲವಸ್ತುಗಳೇ ಮಾನವ ದೇಹದಲ್ಲಿರುವುದು. ಪ್ರಮಾಣದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಿರಬಹುದಷ್ಟೇ. ಆದುದರಿಂದ ಮೃತ ದೇಹವನ್ನು ಮಣ್ಣಿನಲ್ಲಿ ದಫನ ಮಾಡುವುದೇ ಯುಕ್ತಿಪರ ಹಾಗೂ ವೈಜ್ಞಾನಿಕವಾಗಿದೆ. ದಫನ ಮಾಡುವುದರಿಂದ ಕೊಳೆಯಲ್ಪಡುವ ದೇಹದ ವಿವಿಧ ಘಟಕಗಳು ದೇಹದಿಂದ ಪ್ರತ್ಯೇಕಿಸಲ್ಪಟ್ಟು ಅತ್ಯಂತ ಸುಲಭವಾಗಿ ಮಣ್ಣಿನಲ್ಲಿ ಲೀನವಾಗಿ ಬಿಡುತ್ತವೆ.

2. ದಫನಗೊಳಿಸುವಿಕೆಯು ಮಾಲಿನ್ಯ ರಹಿತವಾಗಿದೆ :

ದೇಹವನ್ನು ಸುಡುವುದರಿಂದ ಮಾಲಿನ್ಯವುಂಟಾಗುವುದಲ್ಲದೆ ಅದು ಆರೋಗ್ಯಕ್ಕೂ ಪರಿಸರಕ್ಕೂ ಮಾರಕವಾಗಿದೆ. ದಫನಗೊಳಿಸುವಿಕೆಯಿಂದ ಪರಿಸರಕ್ಕೆ ಯಾವುದೇ ಅಪಾಯವಿಲ್ಲ.

3. ದಫನಗೊಳಿಸುವಿಕೆಯು ಭೂಮಿಯನ್ನು ಫಲವತ್ತಾಗಿಸುವುದು :

ದೇಹವನ್ನು ಸುಡುವ ಉರುವಲಿಗಾಗಿ ಅನೇಕ ಮರಗಳ ನಾಶ ಅನಿವಾರ್ಯ. ಇದು ಹಸಿರನ್ನು ಕಡಿಮೆಗೊಳಿಸುವುದು, ಪ್ರಕೃತಿ ಸಂತುಲತೆಯನ್ನು ಕೆಡಿಸುವುದು. (ಇಂದಿನ ಈ ದಿನಗಳಲ್ಲಿ ವಿದ್ಯುತ್ ಒಲೆಯನ್ನು ಬಳಸುವರಾದರೂ, ವಿದ್ಯುತ್ ಅಭಾವದ ಈ ಕಾಲದಲ್ಲಿ ಇದೂ ಸಹ ಅತ್ಯಂತ ತುಟ್ಟಿಯೆನಿಸಬಹುದು) ದೇಹವನ್ನು ದಫನ ಮಾಡುವುದರಿಂದ ಮರಗಳನ್ನು ಉಳಿಸಬಹುದಲ್ಲದೆ ಸುತ್ತ ಮುತ್ತಲಿನ ಭೂಮಿಯು ಫಲವತ್ತಾಗುವುದು. ಇದು ಪರಿಸರವನ್ನು ಉತ್ತಮಗೊಳಿಸಲು ಸಹಕಾರಿಯಾಗಿದೆ.

4. ದಫನಗೊಳಿಸುವುದು ಮಿತವ್ಯಯಕರವಾಗಿದೆ :

ದೇಹವನ್ನು ಸುಡುವ ಪ್ರಕ್ರಿಯೆಯು ದುಬಾರಿಯಾಗಿದೆ. ಟನ್ನುಗಟ್ಟಳೆ ಸೌದೆಯನ್ನು ಸುಡಬೇಕಾಗುವುದು ದೇಹವನ್ನು ಸುಡುವ ಸಲುವಾಗಿಯೇ ಭಾರತ ದೇಶದಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ದೇಹವನ್ನು ದಫನ ಮಾಡುವ ಕಾರ್ಯವು ಅತ್ಯಂತ ಮಿತವ್ಯಯಕಾರಿಯಾಗಿದೆ. ಇದಕ್ಕೆ ತಗಲುವ ಖರ್ಚು ಅತ್ಯಲ್ಪ.

5. ದಫನಗೊಳಿಸಿದ ಭೂಮಿಯ ಮರು ಬಳಕೆ ಅಸಾಧ್ಯವೇನಲ್ಲ :

ದೇಹವನ್ನು ಸುಡಲು ಒಮ್ಮೆ ಬಳಸಿದ ಉರುವಲಿನ ಮರುಬಳಕೆ ಅಸಾಧ್ಯ. ಏಕೆಂದರೆ ಅದು ಉರಿದು ಬೂದಿಯಾಗಿ ಬಿಡುತ್ತದೆ. ಆದರ ದೇಹವನ್ನು ದಫನಗೊಳಿಸಿದ ಅದೇ ಭೂಮಿಯನ್ನು ನಿಗದಿತ ಸಮಯದ ಬಳಿಕ ಮರು ಬಳಸುವುದು ಅಸಾಧ್ಯವೇನಲ್ಲ. ಕೆಲವು ವರ್ಷಗಳ ಬಳಿಕ ದೇಹವು ಕೊಳೆತು ಮಣ್ಣಿನೊಂದಿಗೆ ಮಣ್ಣಾಗಿ ಬಿಡುವುದರಿಂದ ಅದೇ ಸ್ಥಳದಲ್ಲಿ ಇನ್ನೊಂದು ದೇಹವನ್ನು ದಫನಗೊಳಿಸಲು ಸಾಧ್ಯ.

ಉತ್ತರ

1: ಹಣೆ ತಿಲಕ ಅಥವಾ ಕುಂಕುಮದ ಬಿಂದಿ :

ಬಿಂದಿ' ಎಂಬ ಪದವು ಬಿಂದು' ಅರ್ಥಾತ್ ಚುಕ್ಕೆ' ಎಂಬ ಸಂಸ್ಕೃತ ಪದದಿಂದ ಹೊರಟ ಪದವಾಗಿದೆ. ಸಾಮಾನ್ಯವಾಗಿ ಹಿಂದೂ ವಿವಾಹಿತ ಸ್ತ್ರೀಯರು ತಮ್ಮ ಹಣೆಯಲ್ಲಿ ಅಥವಾ ಕಣ್ಣು ಹುಬ್ಬುಗಳ ಮಧ್ಯದಲ್ಲಿ ಕುಂಕುಮದಿಂದ ಒಂದು ಚಿಕ್ಕ ಚುಕ್ಕೆಯನ್ನು ಹಾಕಿಕೊಳ್ಳುವರು.

ಬಿಂದಿ'ಯು ಪಾರ್ವತೀ ದೇವಿಯ ಪ್ರತೀಕವಾಗಿದ್ದು, ಸ್ತ್ರೀ ಶಕ್ತಿಯನ್ನು ಬಿಂಬಿಸುವ ಅದು ಸ್ತ್ರೀಯನ್ನು ಮತ್ತು ಅವಳ ಪತಿಯನ್ನು ರಕ್ಷಿಸುತ್ತದೆ ಎಂಬ ಸಾಮಾನ್ಯ ನಂಬಿಕೆಯು ಬಿಂದಿಯ ಬಗ್ಗೆ ಪ್ರಚಲಿತದಲ್ಲಿದೆ. ಸಾಂಪ್ರದಾಯಿಕವಾಗಿ ಅದನ್ನು ವಿವಾಹದ ಪ್ರತೀಕವೆಂದು ಪರಿಗಣಿಸಲಾಗಿದ್ದು ಎಲ್ಲಾ ವಿವಾಹಿತ ಹಿಂದೂ ಸ್ತ್ರೀಯರು ಕಡ್ಡಾಯವಾಗಿ ಹಾಕಿಕೊಳ್ಳುವ ಇದನ್ನು ಸಿಂಧೂರ (Tilaka) ಎಂದೂ ಕರೆಯುವ ವಾಡಿಕೆಯಿದೆ.

2. ತಿಲಕವಿಟ್ಟುಕೊಳ್ಳುವುದು ಇದೀಗ ಫ್ಯಾಷನ್ :

ಕುಂಕುಮ ಬಿಂದುವನ್ನು ಧರಿಸಿಕೊಳ್ಳುವುದು ಇದೀಗ ಫ್ಯಾಷನ್ ಎನಿಸಿಕೊಂಡಿದ್ದು ವಿವಾಹಿತ ಸ್ತ್ರೀಯರು ಮಾತ್ರವಲ್ಲದೆ ಅವಿವಾಹಿತರೂ ಇದನ್ನು ಧರಿಸಿಕೊಳ್ಳುತ್ತಿರುವರು. ಇದರ ಆಕಾರವು ಒಂದು ಚಿಕ್ಕ ಚುಕ್ಕೆಗೆ ಮಾತ್ರ ಸೀಮಿತವಾಗಿರದೆ ಇದೀಗ ಅಂಡಾಕಾರ, ನಕ್ಷತ್ರಾಕಾರ , ಹೃದಯಾಕಾರ ಮುಂತಾದ ನವ-ನವೀನಾಕಾರದ ಬಿಂದಿಗಳೂ ಪ್ರತ್ಯಕ್ಷವಾಗುತ್ತಿವೆ. ಇದರ ಬಣ್ಣವು ಸಹ ಬದಲಾಗಲಾರಂಭಿಸಿದ್ದು ನೀಲಿ, ಹಸಿರು, ಹಳದಿ, ಕಿತ್ತಳೆ ಮುಂತಾದ ಎಲ್ಲಾ ಬಣ್ಣಗಳಲ್ಲೂ ಸಿದ್ಧಪಡಿಸಿದ ಬಿಂದಿ (ತಿಲಕ)ಗಳು ಲಭ್ಯವಿದೆ. ಹಿಂದಿನ ಕಾಲದಲ್ಲಿ ಇದನ್ನು ಕುಂಕುಮ ಪುಡಿಯಿಂದ ಮಾತ್ರ ತಯಾರಿಸುವ ವಾಡಿಕೆಯಿತ್ತು. ಆದರೆ ಇದೀಗ ಫೆಲ್ಟ್' ಅರ್ಥಾತ್ ಗಟ್ಟಿ ಮಾಡಿದ ಉಣ್ಣೆಯಂಥಹಾ ವಸ್ತುವಿನಿಂದಲೂ ತಯಾರಿಸಲಾಗುತ್ತಿದೆ. ಪಳಪಳನೆ ಹೊಳೆಯುವ ವಿವಿಧ ಬಣ್ಣಗಳ ಬಿಂದಿ'ಗಳೂ ಲಭ್ಯವಿದೆ.

3. ಮಂಗಳ ಸೂತ್ರ : ಮಂಗಳ ಸೂತ್ರ' ವೆಂದರೆ ಸಧ್ಬಾವನೆಯ ದಾರ ಎಂದರ್ಥ :

ಮಂಗಳ ಸೂತ್ರ' ವೆಂದು ಕರೆಯಿಸಿಕೊಳ್ಳುವ ಆಭರಣವನ್ನು ತಮ್ಮ ವಿವಾಹದ ಸಂಕೇತವಾಗಿ ಎಲ್ಲಾ ಹಿಂದೂ ಸ್ತ್ರೀಯರೂ ಧರಿಸಿಕೊಳ್ಳುವ ವಾಡಿಕೆಯಿದೆ. ಕಪ್ಪು ಬಣ್ಣದ ಮಣಿ (ಕರಿಮಣಿ)ಯಿಂದ ಪೋಣಿಸಲ್ಪಟ್ಟ ಇದರ ಪದಕವು ಸಾಮಾನ್ಯವಾಗಿ ಚಿನ್ನದ್ದಾಗಿರುತ್ತದೆ. ಕಪ್ಪು ಮಣಿಗಳು ಕೆಡುಕಿನಿಂದ ರಕ್ಷಿಸುತ್ತವೆ ಎಂಬ ನಂಬಿಕೆಯಿದೆ. ಸ್ತ್ರೀಯ ವಿವಾಹ ಬಂಧವನ್ನು ಮತ್ತು ಅವಳ ಪತಿಯನ್ನು ಅವುಗಳ ರಕ್ಷಿಸುತ್ತವೆ ಎಂಬ ಪ್ರತೀತಿಯೂ ಇದೆ. ದಕ್ಷಿಣ ಭಾರತದಲ್ಲಿ ಇದನ್ನು ತಾಳಿ' ಎಂದು ಕರೆಯುವರು.

ಹಿಂದೂ ವಿವಾಹಿತ ಸ್ತ್ರೀಯರು ಇದನ್ನು ಧರಿಸುವುದು ಕಡ್ಡಾಯ. ಅವಳು ವಿಧವೆಯಾದ ಬಳಿಕ ಮಾತ್ರ ಅದನ್ನು ಕಿತ್ತು ತೆಗೆಯಲಾಗುತ್ತದೆ.

4. ಸಂರಕ್ಷಕನು ಅಲ್ಲಾಹನಾಗಿರುವನು :

ಮುಸ್ಲಿಮರಾದ ನಾವು ನಮ್ಮೆಲ್ಲರ ಸೃಷ್ಟಿ ಕರ್ತನಾದ ಅಲ್ಲಾಹನನ್ನೇ ಅತ್ಯುತ್ತಮ ಸಂರಕ್ಷಕನಾಗಿ ಸ್ವೀಕರಿಸಿಕೊಂಡಿರುವೆವು. ಯಾವುದೇ ಕೆಂಪು ಚಕ್ಕೆಯನ್ನು ಅಥವಾ ಕಪ್ಪು ದಾರವನ್ನು ನಮ್ಮ ಸಂರಕ್ಷಕನೆಂದು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ. ಅವುಗಳು ಕೆಡುಕಿನಿಂದ ನಮ್ಮನ್ನು ರಕ್ಷಿಸುತ್ತವೆ ಎಂಬ ನಂಬಿಕೆಯೂ ನಮಗಿಲ್ಲ. ಇದು ಪವಿತ್ರ ಖುರ್‌ಆನಿನ 6ನೇ ಅಧ್ಯಾಯ ಅನ್ಆಮ್'14ನೇ ಸೂಕ್ತಿಯಲ್ಲಿ ಸ್ಪಷ್ಟವಾಗಿದೆ.
ಹೇಳು : ಭೂಮ್ಯಾಕಾಶಗಳ ಕರ್ತೃನಾದ ಅಲ್ಲಾಹನನ್ನು ಬಿಟ್ಟು ಇನ್ನಾರನ್ನಾದರೂ ನನ್ನ ಸಂರಕ್ಷಕನಾಗಿ ಮಾಡಿಕೊಳ್ಳಬೇಕೇ ?" (ಖುರ್‌ಆನ್ 6:14)

ಇದೇ ವಿಷಯವನ್ನು ಖುರ್‌ಆನಿನ ಇನ್ನಿತರ ಹಲವು ಸ್ಥಳಗಳಲ್ಲಿ ಆವರ್ತಿಸಲಾಗಿದೆ. ಅಧ್ಯಾಯ ಆಲಿ ಇಮ್ರಾನ್'150ನೇ ಸೂಕ್ತಿ ಮತ್ತು ಅಧ್ಯಾಯ ಅಲ್ ಹಜ್ಜ್‌ನ 78ನೇ ಸೂಕ್ತಿಯಲ್ಲಿ ಹೀಗೆನ್ನಲಾಗಿದೆ.

ಅಲ್ಲಾಹನೇ ನಿಮ್ಮ ರಕ್ಷಕ ಮಿತ್ರನು ಮತ್ತು ಅವನು ಸಹಾಯಕರಲ್ಲಿ ಅತ್ಯುತ್ತಮನು."

ಹಣೆ ತಿಲಕವನ್ನೋ, ಮಂಗಳ ಸೂತ್ರವನ್ನೋ ರಕ್ಷಣೆಗಾಗಿ ಧರಿಸಿಕೊಳ್ಳುವುದು ನಮ್ಮ ಸೃಷ್ಟಿಕರ್ತನಾದ ಅಲ್ಲಾಹನಲ್ಲಿ ಇಟ್ಟಿರುವ ವಿಶ್ವಾಸದ ಕೊರತೆಯ ಸಂಕೇತವಾಗಿದೆ. ವಾಸ್ತವದಲ್ಲಿ ಅವನೇ ಅತ್ಯುತ್ತಮ ಸಂರಕ್ಷಕನು.

5. ಇಸ್ಲಾಮೀ ವಸ್ತ್ರಸಂಹಿತೆಯ ಉಲ್ಲಂಘನೆ :

ತಿಲಕವನ್ನು ಅಥವಾ ಮಂಗಳಸೂತ್ರವನ್ನು ಧರಿಸಿಕೊಳ್ಳುವುದು ಅನ್ಯ ಧರ್ಮೀಯ ಸಂಸ್ಕೃತಿಯಾಗಿದೆ. ಒಂದು ನಿರ್ಧಿಷ್ಟ ಧರ್ಮವನ್ನು ಸಂಕೇತಿಸುವ ಅರ್ಥಾತ್ ಒಬ್ಬನ ವೇಷದಿಂದಲೇ ಅವನು ಇಸ್ಲಾಮೇತರ ಧರ್ಮದವನೆಂದು ಗುರುತಿಸಲ್ಪಡುವ ಯಾವುದೇ ವಸ್ತ್ರವನ್ನು ಧರಿಸುವುದು ಇಸ್ಲಾಮಿನಲ್ಲಿ ನಿಷಿದ್ಧ.

6. ಸ್ತ್ರೀಯರು ವಿವಾಹಿತರಾಗಿರಲಿ, ಅಥವಾ ಅವಿವಾಹಿತರಾಗಿ ಪೀಡನೆಗೆ ಒಳಗಾಗಬಾರದು ಎಂದು ಇಸ್ಲಾಮ್ ಬಯಸುತ್ತದೆ :

ಮಂಗಳ ಸೂತ್ರದ ಲಾಭಗಳನ್ನು ವಿವರಿಸಿ ಕೊಡುತ್ತಾ ಮಿತ್ರನೊಬ್ಬನು ಮಂಗಳ ಸೂತ್ರವು ಸ್ತ್ರೀಯರನ್ನು ವಿವಾಹಿತರು ಮತ್ತು ಅವಿವಾಹಿತರೆಂದು ಸುಲಭವಾಗಿ ಪ್ರತ್ಯೇಕಿಸಿಕೊಡುವುದರಿಂದ ಅದು ವಿವಾಹಿತ ಸ್ತ್ರೀಯರನ್ನು ಕಾಮುಕರ ದೃಷ್ಟಿಯಿಂದ ಕಾಪಾಡುತ್ತದೆ ಎಂದಿದ್ದನು.

ಇಸ್ಲಾಮಿನ ದೃಷ್ಟಿಯಲ್ಲಿ ಸ್ತ್ರೀಯರು ವಿವಾಹಿತರಾಗಿರಲಿ ಅವಿವಾಹಿತರಾಗಿರಲಿ, ಮುಸ್ಲಿಮರಾಗಿರಲಿ ಅಮುಸ್ಲಿಮರಾಗಿರಲಿ ; ಪೀಡನೆಗಳಿಗೆ , ದೌರ್ಜನ್ಯಗಳಿಗೆ ಒಳಗಾಗಬಾರದು. ವಿವಾಹಿತ ಸ್ತ್ರೀಯರಿಗೆ ಮಾತ್ ರಕ್ಷಣೆ, ಮುಸ್ಲಿಮ್ ಸ್ತ್ರೀಯರಿಗೆ ಮಾತ್ರ ರಕ್ಷಣೆ ಎಂಬ ನಿಯಮ ತಾರತಮ್ಯ ಇಸ್ಲಾಮಿನಲ್ಲಿಲ್ಲ. ಪ್ರತಿಯೊಬ್ಬ ಸ್ತ್ರೀಯೂ ಸಮಾಜದಲ್ಲಿ ಸುರಕ್ಷಿತಳಾಗಿರಬೇಕು ಎಂದು ಇಸ್ಲಾಮ್ ಬಯಸುತ್ತದೆ.

ಉತ್ತರ :

1. ಅದಾನ್‌ನಲ್ಲಿ ಹೇಳುವುದು ಅಕ್ಬರ ಚಕ್ರವರ್ತಿಯ ಹೆಸರನ್ನಲ್ಲ :

ಅದಾನ್‌ನಲ್ಲಿ ಅಕ್ಬರ ಚಕ್ರವರ್ತಿಯ ಹೆಸರನ್ನು ಕೂಗಲಾಗುತ್ತದೆ ಎಂಬುದು ಸಾಮಾನ್ಯವಾಗಿ ಮುಸ್ಲಿಮೇತರರಲ್ಲಿರುವ ಇನ್ನೊಂದು ತಪ್ಪುಕಲ್ಪನೆಯಾಗಿದೆ. ಒಮ್ಮೆ ಕೇರಳದಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಭಾಗವಹಿಸಿದ್ದೆ. ಮುಸ್ಲಿಮೇತರ ಜಿಲ್ಲಾಧಿಕಾರಿಯೊಬ್ಬರು ನನ್ನ ಭಾಷಣಕ್ಕೆ ಮೊದಲು ಮಾತನಾಡಿದ್ದರು. ಭಾರತೀಯ ಮುಸ್ಲಿಮರ ಸಾಧನೆಗಳು ಮತ್ತು ಭಾರತ ದೇಶದ ಪ್ರಗತಿಯಲ್ಲಿ ಅವರ ಪಾತ್ರ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು ಭಾರತವನ್ನು ಆಳಿದ ರಾಜರಲ್ಲಿ ಅಕ್ಬರ ಚಕ್ರವರ್ತಿಯು ಅತ್ಯಂತ ಪ್ರಮುಖನು ಎಂದಿದ್ದರು. ಹೀಗೆ ಸಾಗಿದ್ದ ಅವರ ಭಾಷಣವು ಮುಸ್ಲಿಮರು ದಿನಂಪ್ರತಿ ಐದು ಬಾರಿ ಅಕ್ಬರ ಚಕ್ರವರ್ತಿಯ ಹೆಸರನ್ನು ಹೇಳುತ್ತಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ ಎನ್ನುವವರೆಗೆ ತಲಪಿತ್ತು.

ನನ್ನ ಸರದಿ ಬಂದಾಗ ನಾನು ಅವರ ಆ ತಪ್ಪು ಕಲ್ಪನೆಯನ್ನು ನಿವಾರಿಸಿಕೊಟ್ಟಿದ್ದೆನು.

2. ಅದಾನ್‌ನಲ್ಲಿ ಹೇಳುವ ಅಕ್ಬರ್' ಎಂಬ ಪದಕ್ಕೂ ಅಕ್ಬರ ಚಕ್ರವರ್ತಿಗೂ ಯಾವುದೇ ಸಂಬಂಧವಿಲ್ಲ :

ಅದಾನ್‌ನಲ್ಲಿ ಹೇಳಲಾಗುವ ಅಕ್ಬರ್' ಎಂಬ ಪದಕ್ಕೂ, ಭಾರತವನ್ನಾಳಿದ ಅಕ್ಬರ ಚಕ್ರವರ್ತಿಗೂ ಯಾವುದೇ ನಂಟಿಲ್ಲ. ಆದಾನಿನಲ್ಲಿ ಹೇಳಲಾಗುವ ಎಲ್ಲಾ ಶಬ್ದಗಳನ್ನು ಅಕ್ಬರ ಚಕ್ರವರ್ತಿಯು ಹುಟ್ಟುವ ಹಲವು ಶತಮಾನಗಳ ಮೊದಲೇ ಹೇಳಲಾಗುತ್ತಿತ್ತು.

3. ‘ಅಕ್ಬರ್' ಅಂದರೆ ಮಹಾನನು' ಎಂದರ್ಥ :

ಅರಬೀ ಪದನಾದ ಅಕ್ಬರ್' ಎಂಬುದು ಮಹಾನನು' ಎಂಬ ಅರ್ಥವನ್ನು ನೀಡುತ್ತದೆ. ಅದಾನಿನಲ್ಲಿ ನಾವು ಅಲ್ಲಾಹು ಅಕ್ಬರ್ ಅರ್ಥಾತ್ ಅಲ್ಲಾಹನು ಮಹಾನನು ಎನ್ನುತ್ತೇವೆ. ಮಹಾನನಾದ ಹಾಗೂ ಏಕೈಕನಾದ ಅಲ್ಲಾಹನ ಆರಾಧನೆಗೆ ಬನ್ನಿ ಎಂದು ನಾವು ಜನರನ್ನು ಕರೆಯುತ್ತೇವೆ.

ಉತ್ತರ :

1. ಪರ್ಸನಲ್ ಲಾ (ಮುಸ್ಲಿಮ್ ವೈಯಕ್ತಿಕ ಕಾನೂನು) :

ಪರ್ಸನಲ್ ಲಾ ಅಂದರೆ ಒಬ್ಬ ವ್ಯಕ್ತಿ ಮತ್ತು ಅವನ ನಿಕಟವರ್ತಿಗಳಿಗೆ ಸಂಬಂಧಿಸಿದ ಕಾನೂನು ಎಂದರ್ಥ. ಉದಾಹರಣೆಗೆ ವಿವಾಹ, ವಿವಾಹ ವಿಚ್ಛೇದನ , ವಾರೀಸು ಹಕ್ಕು ಮುಂತಾದವುಗಳ ಕುರಿತಾದ ಕಾನೂನುಗಳು. ಒಂದು ನಿರ್ದಿಷ್ಟ ವರ್ಗ ಅಥವಾ ಸಮುದಾಯದ ಜನರು ತಮ್ಮೊಳಗೆ ಪರಸ್ಪರ ತೀರ್ಮಾನಿಸಿ ಒಪ್ಪಂದ ಮಾಡಿಕೊಂಡ ನಿಯಮಗಳೂ ಈ ವ್ಯಾಪ್ತಿಗೊಳಪಡುತ್ತವೆ. ಪರ್ಸನಲ್ ಲಾ ಎಂಬ ಈ ಕಾನೂನು ಯಾವುದೇ ಅಪರಾಧ ಅಥವಾ ಸಮಾಜಕ್ಕೆ ಹಾನಿಕಾರಕವಾಗಿರುವ ಯಾವುದೇ ಕೃತ್ಯಗಳ ಕಾನೂನಿನ ವ್ಯಾಪ್ತಿಯಲ್ಲಿ ಬರಲಾರದು.

2. ಭಾರತವು ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ :

ಯಾವುದೇ ರಾಷ್ಟ್ರದ ಪರ್ಸನಲ್ ಲಾ' ಎಂಬುದು ಆ ರಾಷ್ಟ್ರದ ಬೇರೆ ಬೇರೆ ವರ್ಗಗಳ ಮತ್ತು ಧರ್ಮಗಳ ಜನರಿಗೆ ಬೇರೆ ಬೇರೆಯಾಗಿರಲು ಸಾಧ್ಯವಿದೆ. ಭಾರತವು ಒಂದು ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಅದು ಬೇರೆ ಬೇರೆ ಧರ್ಮಗಳ ಜನರಿಗೆ ಅವರಿಚ್ಛಿಸಿದಲ್ಲಿ ಅವರವರ ಖಾಸಗಿ ಧಾರ್ಮಿಕ ನಿಯಮಗಳನ್ನು ಅನುಸರಿಸುವ ಅನುಮತಿಯನ್ನು ನೀಡುತ್ತದೆ.

3. “ಇಸ್ಲಾಮಿಕ್ ಪರ್ಸನಲ್ ಲಾ " ಅತ್ಯುತ್ತಮವಾಗಿದೆ :

ಜಗತ್ತಿನಲ್ಲಿರುವ ಎಲ್ಲಾ ಪರ್ಸನಲ್ ಲಾ' (ಖಾಸಗಿ ಧಾರ್ಮಿಕ ಕಾನೂನು)ಗಳಿಗೆ ಹೋಲಿಸಿದಲ್ಲಿ ಇಸ್ಲಾಮಿಕ್ ಪರ್ಸನಲ್ ಲಾ' ಅತ್ಯತ್ತಮ ಮತ್ತು ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಮುಸ್ಲಿಮರು ನಂಬುತ್ತಾರೆ. ಇಸ್ಲಾಮ್ ಧರ್ಮದಲ್ಲಿ ವಿಶ್ವಾಸವಿಟ್ಟಿರುವ ಭಾರತೀಯ ಮುಸಲ್ಮಾನರು ಮುಸ್ಲಿಮ್ ಪರ್ಸನಲ್ ಲಾ ' ವನ್ನೇ ಅನುಸರಿಸುವ ಇಚ್ಛಿಸುವರು.

4. ಕ್ರಿಮಿನಲ್ ಕಾನೂನು :

ಸಮಾಜಕ್ಕೆ ನೇರವಾಗಿ ಹಾನಿಯೆಸಗುವ ಯಾವುದೇ ಅಪರಾಧ ಅಥವಾ ಕೃತ್ಯ ಸಂಬಂಧಿತ ಕಾನೂನನ್ನು ಕ್ರಿಮಿನಲ್ ಲಾ' ಎನ್ನುವರು.

5. ಎಲ್ಲಾ ಧರ್ಮದ ಜನರಿಗೂ ಕ್ರಿಮಿನಲ್ ಲಾ' ಒಂದೇ ಆಗರಬೇಕಾದ್ದು ಕಡ್ಡಾಯ :

ಪರ್ಸನಲ್ ಲಾ' ನಂತೆ ಕ್ರಿಮಿನಲ್ ಲಾ 'ವು ಒಂದು ರಾಷ್ಟ್ರದ ಬೇರೆ ಬೇರೆ ವರ್ಗದ ಅಥವಾ ಧರ್ಮದ ಜನರಿಗೆ ಬೇರೆ ಬೇರೆಯಾಗಿರುವುದು ಅಸಾಧ್ಯ. ಉದಾಹರಣೆಗೆ ಕಳ್ಳನ ಕೈಗಳನ್ನು ಕಡಿಯಬೇಕೆಂಬುದು ಇಸ್ಲಾಮಿನ ಕ್ರಿಮಿನಲ್ ಕಾನೂನು. ಆದರೆ ಹಿಂದೂ ಕ್ರಿಮಿನಲ್ ಕಾನೂನಿನಲ್ಲಿ ಇಂತಹ ಪ್ರಸ್ತಾಪವಿಲ್ಲ. ಉದಾಹರಣೆಗೆ ಹಿಂದೂ ಮತೀಯನೊಬ್ಬನು ಇಸ್ಲಾಮ್ ಧರ್ಮದ ಅನುಯಾಯಿಯೊಬ್ಬನನ್ನು ದೋಚಿದರೆ ಕಳ್ಳನಿಗೆ ಯಾವ ಶಿಕ್ಷೆಯನ್ನು ವಿಧಿಸಬೇಕಾಗಿದೆ ? ಮುಸ್ಲಿಮನು ಕಳ್ಳನ ಕೈಯನ್ನು ಕಡಿಯಬೇಕೆಂದು ಆಗ್ರಹಿಸಬಹುದು. ಇದೇ ಸಮಯ ಹಿಂದೂ ಕ್ರಿಮಿನಲ್ ಕಾನೂನು ಇದನ್ನು ಅನುಮತಿಸಲಾರದು.

6. ಭಾರತದಲ್ಲಿ ಮುಸ್ಲಿಮರಿಗೆ ಮಾತ್ರ ಇಸ್ಲಾಮಿಕ್ ಕ್ರಿಮಿನಲ್ ಲಾ, ಎಂಬುದು ಪ್ರಾಯೋಗಿಕವಲ್ಲ :

ಅಪರಾಧವೆಸಗಿದ ಮುಸ್ಲಿಮರಿಗೆ ಇಸ್ಲಾಮಿಕ್ ಕ್ರಿಮಿನಲ್ ಕಾನೂನಿನ ಪ್ರಕಾರವೇ ದಂಡನೆ ಕೊಡಿಸಬೇಕೆಂದು ಅವರೇ ಸ್ವತಃ ಇಚ್ಚಿಸಿದರೂ ಅದು ಪ್ರಾಯೋಗಿಕವಲ್ಲ. ಉದಾಹರಣೆಗೆ ಕಳ್ಳತನದ ಆರೋಪ ಹೊರಿಸಲ್ಪಟ್ಟ ಮುಸ್ಲಿಮನ ಪ್ರಕರಣವನ್ನು ತೆಗೆದುಕೊಳ್ಳೋಣ. ಇಲ್ಲಿ ಸಾಕ್ಷಿಯಾಗಿರುವವನು ಅಮುಸ್ಲಿಮನಾಗಿದ್ದಲ್ಲಿ ಮತ್ತು ಪ್ರತಿಯೊಬ್ಬನಿಗೂ ತಮ್ಮ ತಮ್ಮದೇ ಕ್ರಿಮಿನಲ್ ಕಾನೂನು ಎಂದಾಗಿದ್ದಲ್ಲಿ ನ್ಯಾಯವಾದ ತೀರ್ಮಾನವು ಹೊರಬರಲು ಅಸಾಧ್ಯ. ಏಕೆಂದರೆ ಸುಳ್ಳು ಸಾಕ್ಷಿ ನುಡಿಯುವವನಿಗೆ ಇಸ್ಲಾಮ್ 80 ಛಡಿಯೇಟಿನ ಶಿಕ್ಷೆಯನ್ನು ವಿಧಿಸುತ್ತದೆ. ಆದರೆ ಭಾರತೀಯ ಕ್ರಿಮಿನಲ್ ಕಾನೂನಿನಲ್ಲಿ ಸುಳ್ಳು ಸಾಕ್ಷಿಯನ್ನು ನುಡಿದ ವ್ಯಕ್ತಿಯು ಅತೀ ಸುಲಭವಾಗಿ ಪಾರಾಗಬಲ್ಲನು. ಆದುದರಿಂದ ಪ್ರತಿಯೊಬ್ಬರಿಗೆ ಅವರವರ ಕ್ರಿಮಿನಲ್ ಕಾನೂನು ಎಂದಾದಲ್ಲಿ ಒಬ್ಬ ಅಮುಸ್ಲಿಮನಿಗೆ ಮುಸ್ಲಿಮ್ ವ್ಯಕ್ತಿಯೊಬ್ಬನನ್ನು ಅಪರಾಧಿಯ ಕಟಕಟೆಯಲ್ಲಿ ನಿಲ್ಲಿಸುವುದು ಅತೀ ಸುಲಭ ಕಾರ್ಯ. ಇದೇ ರೀತಿ ಪ್ರಕರಣದ ಪಾತ್ರ ಅದಲು ಬದಲು ಗೊಂಡರೂ ದರೋಡೆಕೋರನಾದ ಅಮುಸ್ಲಿಮನು ಭಾರತೀಯ ದಂಡ ಸಂಹಿತೆಯ ಮೃದುತ್ವದ ಲಾಭವನ್ನು ಎತ್ತಿಕೊಳ್ಳುವನು. ಇದೇ ವೇಳೆ ತನ್ನ ಸಾಕ್ಷಿಯು ನ್ಯಾಯಾಲಯದಲ್ಲಿ ಬಿದ್ದು ಹೋದಲ್ಲಿ ಛಡಿಯೇಟಿನ ಶಿಕ್ಷೆಯು ದೊರಕೀತು ಎಂಬ ಭಯದಿಂದ ಮುಸ್ಲಿಮನು ದೂರು ನೀಡಲೇ ಹಿಂಜರಿಯಬೇಕಾದೀತು! ಇದು ದರೋಡೆ, ಕಳ್ಳತನಗಳನ್ನು ಇನ್ನಷ್ಟು ಪ್ರೋತ್ಸಾಹಿಸಿದಂತಾಗುವುದು.

7. ಎಲ್ಲಾ ಭಾರತೀಯರ ಮೇಲೂ ಇಸ್ಲಾಮಿಕ್ ಕ್ರಿಮಿನಲ್ ಲಾ ಜಾರಿಗೊಳ್ಳಲಿ ಎಂಬುದು ಭಾರತೀಯ ಮುಸ್ಲಿಮರ ಇಚ್ಛೆ :

ಮುಸ್ಲಿಮರಾದ ನಾವು ಭಾರತ ದೇಶದಲ್ಲಿ ಇಸ್ಲಾಮಿಕ್ ಕ್ರಿಮಿನಲ್ ಲಾ ಜಾರಿಗೊಳ್ಳಲಿ ಎಂದು ಇಚ್ಛಿಸುತ್ತೇವೆ. ಕಳ್ಳನ ಕೈಗಳನ್ನು ಕಡಿಯುವುದು ಎಂಬ ಕಾನೂನು ಜಾರಿಯಾದಲ್ಲಿ ಕಳ್ಳತನ, ದರೋಡೆಗಳ ಪ್ರಯಾಣ ಖಂಡಿತವಾಗಿಯೂ ಕಡಿಮೆಗೊಳ್ಳುವುದು. 80 ಛಡಿಯೇಟುಗಳ ಭಯವು ಒಬ್ಬನನ್ನು ಸುಳ್ಳು ಸಾಕ್ಷಿ ಹೇಳುವುದರಿಂದ ತಡೆಯಬಹುದು.

8. ಇಸ್ಲಾಮಿಕ್ ಕ್ರಿಮಿನಲ್ ಲಾ ಪ್ರಾಯೋಗಿಕವಾಗಿದೆ :

ಇಸ್ಲಾಮ್ ಧರ್ಮವು ಒಂದು ಕೃತ್ಯವನ್ನು ಅಪರಾಧವೆಂದು ಸಾರುವುದರ ಜೊತೆಗೆ ಅದನ್ನು ತಡೆಯುವ ಸೂಕ್ತ ಮಾರ್ಗವನ್ನೂ ತಿಳಿಸಿಕೊಡುತ್ತದೆ. ಉದಾಹರಣೆಗೆ ಕಳ್ಳನ ಕೈಗಳನ್ನು ಕಡಿಯುವುದು, ಅತ್ಯಾಚ್ಯಾರಿಗೆ ಮರಣ ದಂಡನೆ, ಶಿಕ್ಷೆಯು ಅದೆಷ್ಟು ಕಠಿಣವಾಗಿದೆಯೆಂದರೆ ಒಂದು ಅಪರಾಧವೆನ್ನಸಗುವ ಮೊದಲು ಅಪರಾಧಿಯು ಸಾವಿರ ಸಲ ಯೋಚಿಸಬೇಕಾಗುತ್ತದೆ.

ಆದುದರಿಂದ ಭಾರತದಲ್ಲಿ ಅಪರಾಧವನ್ನು ತಡೆಗಟ್ಟಬೇಕೆಂದಾದಲ್ಲಿ ಸಮಾನ ಇಸ್ಲಾಮಿಕ್ ದಂಡ ಸಂಹಿತೆಯನ್ನು ಜಾರಿಗೊಳಿಸುವುದೇ ಅತ್ಯಂತ ಸೂಕ್ತ ಪರಿಹಾರ ಮಾರ್ಗ.

ಉತ್ತರ :

1. ಎಲ್ಲಾ ಸಮುದಾಯಗಳಿಗೂ ಪ್ರವಾದಿಗಳನ್ನು ರವಾನಿಸಲಾಗಿತ್ತು :

a. ಪವಿತ್ರ ಖುರ್‌ಆನಿನ 35 ನೇ ಅಧ್ಯಾಯ ಫಾತಿರ್ ನ 24ನೆ ಸೂಕ್ತಿಯಲ್ಲಿ ಹೀಗಿದೆ :

ಎಚ್ಚರಿಕೆ ಕೊಡುವವರಾರೂ ಬಂದಿರದಂತಹ ಸಮುದಾಯವೊಂದು ಗತಿಸಿಲ್ಲ" (ಖುರ್‌ಆನ್ 35:24)

b. ಇದೇ ಸಂದೇಶವನ್ನು ಅಧ್ಯಾಯ ರ‌ಅದ್'ನಲ್ಲಿ ಆವರ್ತಿಸಲಾಗಿದೆ.

ಪ್ರತಿಯೊಂದು ಜನಾಂಗಕ್ಕೂ ಒಬ್ಬ ಮಾರ್ಗದರ್ಶಕನಿದ್ದಾನೆ' (ಖುರ್‌ಆನ್ 13:7)

2. ಖುರ್‌ಆನಿನಲ್ಲಿ ಪ್ರವಾದಿಗಳ ಪೈಕಿ ಕೆಲವರ ಪ್ರಸ್ತಾಪವನ್ನು ಮಾತ್ರ ಮಾಡಲಾಗಿದೆ :

a. ಅಧ್ಯಾಯ 4, ಅನ್ನಿಸಾದ 164ನೇ ಸೂಕ್ತಿಯಲ್ಲಿ ಅಲ್ಲಾಹನು ಹೇಳುತ್ತಾನೆ :

ಪ್ರವಾದಿಗಳ ಪೈಕಿ ಕೆಲವರ ಪ್ರಸ್ತಾಪವನ್ನು ಈಗಾಗಲೇ ಮಾಡಿರುವೆವು, ಇನ್ನು ಕೆಲವರ ಬಗ್ಗೆ ಪ್ರಸ್ತಾಪಿಸಿಲ್ಲ" (ಖುರ್‌ಆನ್ 4:164)

b. ಇದೇ ಸಂದೇಶವನ್ನು 40ನೇ ಅಧ್ಯಾಯ ಗಾಫಿರ್‌ನ 78ನೇ ಸೂಕ್ತಿಯಲ್ಲಿ ಆವರ್ತಿಸಲಾಗಿದೆ.

(ಸಂದೇಶ ವಾಹಕರೇ) ನಾವು ನಿಮಗಿಂತ ಮುಂಚೆ ಅನೇಕ ಸಂದೇಶವಾಹಕರನ್ನು ರವಾನಿಸಿರುತ್ತೇವೆ. ಅದರಲ್ಲಿ ಕೆಲವರ ವೃತ್ತಾಂತವನ್ನು ನಿಮಗೆ ತಿಳಿಸಿದ್ದೇವೆ ಮತ್ತು ಕೆಲವರ ವೃತ್ತಾಂತವನ್ನು ನಿಮಗೆ ತಿಳಿಸಿಲ್ಲ..." (ಖುರ್‌ಆನ್ 40:78)

3. ಅಲ್ಲಾಹನ ಪ್ರವಾದಿಗಳ ಪೈಕಿ 25 ಮಂದಿಗಳ ಹೆಸರನ್ನು ಮಾತ್ರ ಖುರ್‌ಆನಿನಲ್ಲಿ ಉಲ್ಲೇಖಿಸಲಾಗಿದೆ :

ಪ್ರವಾದಿ ಆದಂ, ನೂಹ್, ಇಬ್ರಾಹಿಂ , ಮೂಸಾ, ಈಸಾ, ಮುಹಮ್ಮದ್ (ಸ) ಮುಂತಾದ 25 ಪ್ರವಾದಿಗಳ ಹೆಸರುಗಳು ಮಾತ್ರ ಖುರ್‌ಆನಿನಲ್ಲಿ ಉಲ್ಲೇಖಿಸಲ್ಪಟ್ಟಿವೆ.

4. ಜಗತ್ತಿಗೆ ಬಂದ ಪ್ರವಾದಿಗಳ ಸಂಖ್ಯೆ 1,24000ಕ್ಕಿಂತಲೂ ಅಧಿಕ :

ಪ್ರವಾದಿ ಮುಹಮ್ಮದ್ (ಸ)ರ ಅಧಿಕೃತ ಹದೀಸೊಂದರಲ್ಲಿ ಉಲ್ಲೇಖಿಸಿದಂತೆ ಈ ಜಗತ್ತಿಗೆ ಅಲ್ಲಾಹನ ಸಂದೇಶವನ್ನು ಸಾರಲು ಬಂದ ಪ್ರವಾದಿಗಳ ಸಂಖ್ಯೆ ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರಕ್ಕಿಂತಲೂ ಅಧಿಕ.

5. ಪೂರ್ವ ಪ್ರವಾದಿಗಳ ಸಂದೇಶವು ಅವರವರ ಕಾಲಕ್ಕೆ ಮತ್ತು ಜನಾಂಗಕ್ಕೆ ಸೀಮಿತ :

ಅಂತಿಮ ಪ್ರವಾದಿ ಮುಹಮ್ಮದ್ (ಸ)ರಿಗಿಂತ ಮೊದಲು ಬಂದ ಎಲ್ಲಾ ಪ್ರವಾದಿಗಳ ಸಂದೇಶಗಳು ಅವರವರ ಕಾಲಕ್ಕೆ ಮತ್ತು ಜನಾಂಗಕ್ಕೆ ಸೀಮಿತವಾಗಿತ್ತು.

3ನೇ ಅಧ್ಯಾಯ ಆಲಿ ಇಮ್ರಾನ್‌ನ 49ನೇ ಸೂಕ್ತಿಯಲ್ಲಿ ಪ್ರವಾದಿ ಈಸಾ (ಅ)ರ ಸಂದೇಶವು ಕೇವಲ ಇಸ್ರಾಯೀಲ್ ಜನಾಂಗಕ್ಕೆ ಮಾತ್ರ ಎಂದು ಹೇಳಲಾಗಿದೆ.

ಮತ್ತು ಅವನನ್ನು ಇಸ್ರಾಯೀಲ್ ಸಂತತಿಗೆ ಸಂದೇಶವಾಹಕನನ್ನಾಗಿ ನೇಮಕ ಮಾಡುವನು" (ಖುರ್‌ಆನ್ 3:49)

6. ಮುಹಮ್ಮದ್ (ಸ)ರು ಅಲ್ಲಾಹನು ಕಳುಹಿಸಿದ ಅಂತಿಮ ಹಾಗೂ ಕಟ್ಟಕಡೆಯ ಪ್ರವಾದಿ :

ಮುಹಮ್ಮದ್(ಸ)ರು ಜಗತ್ತಿಗೆ ಬಂದಿರುವ ಪ್ರವಾದಿಗಳ ಪೈಕಿ ಅಂತಿಮ ಹಾಗೂ ಕಟ್ಟಕಡೆಯ ಪ್ರವಾದಿಯಾಗಿರುವರು. ಇವರ ಬಳಿಕ ಅಂತಿಮ ದಿನದವರೆಗೂ ಯಾವುದೇ ಪ್ರವಾದಿಯು ಬರಲಿಕ್ಕಿಲ್ಲ. ಇದನ್ನು 33ನೇ ಅಧ್ಯಾಯ 40ನೇ ಸೂಕ್ತಿಯಲ್ಲಿ ತಿಳಿಸಿಕೊಡಲಾಗಿದೆ.

ಮುಹಮ್ಮದ್ ನಿಮ್ಮ ಪುರುಷರ ಪೈಕಿ ಯಾರದೇ ತಂದೆಯಲ್ಲ. ವಾಸ್ತವದಲ್ಲಿ ಅವರು ಅಲ್ಲಾಹನ ಸಂದೇಶವಾಹಕರು ಮತ್ತು ಪ್ರವಾದಿಗಳ ಪೈಕಿ ಅತ್ಯಂತ ಕೊನೆಯವರಾಗಿರುತ್ತಾರೆ. ಅಲ್ಲಾಹನು ಸಕಲ ವಸ್ತುಗಳ ಜ್ಞಾನವುಳ್ಳವನು" (ಖುರ್‌ಆನ್ 33:40)

7. ಮುಹಮ್ಮದ್(ಸ)ರನ್ನು ಸಮಸ್ತ ಮಾನವಕುಲಕ್ಕೆ ಪ್ರವಾದಿಯನ್ನಾಗಿ ಕಳುಹಿಸಲಾಗಿದೆ :

a. ಪ್ರವಾದಿಗಳ ಪೈಕಿ ಮುಹಮ್ಮದ್ (ಸ)ರು ಕೊನೆಯ ಹಾಗೂ ಅಂತಿಮ ಪ್ರವಾದಿಯಾಗಿರುವುದರಿಂದ, ಅವರನ್ನು ಕೇವಲ ಅರಬೀ ಸಮುದಾಯಕ್ಕೆ ಅಥವಾ ಮುಸ್ಲಿಮ್ ಸಮುದಾಯಕ್ಕೆ ಮಾತ್ರ ಪ್ರವಾದಿಯಾಗಿ ಕಳುಹಿಸಿರುವುದಲ್ಲ. ಬದಲಾಗಿ ಅವರು ಸಕಲ ಮಾನವ ರಾಶಿಗೆ ಪ್ರವಾದಿಯಾಗಿ ಕಳುಹಿಸಲ್ಪಟ್ಟಿರುವರು.

ಇದನ್ನು 21ನೇ ಅಧ್ಯಾಯ ಅಲ್ ಅಂಬಿಯಾದ 107ನೇ ಸೂಕ್ತಿಯಲ್ಲಿ ಹೀಗೆ ಉಲ್ಲೇಖಿಸಲಾಗಿದೆ : ನಾವು ನಿನ್ನನ್ನು ಸಕಲ ಮಾನವಕುಲಕ್ಕೆ ಅನುಗ್ರಹವಾಗಿಯಲ್ಲದೆ ಕಳುಹಿಸಿಲ್ಲ" (ಖುರ್‌ಆನ್ 21:107)

b. ಇಂಥದೇ ಸಂದೇಶವನ್ನು 34ನೇ ಅಧ್ಯಾಯ ಸಬಾ'28ನೇ ಸೂಕ್ತಿಯಲ್ಲಿ ಆವರ್ತಿಸಲಾಗಿದೆ. ನಾವು ನಿನ್ನನ್ನು ಸಕಲ ಮಾನವರಿಗೆ ಸುವಾರ್ತೆ ಕೊಡುವವರಾಗಿಯೂ, ಎಚ್ಚರಿಕೆ ನೀಡುವವರಾಗಿಯೂ ಅಲ್ಲದೆ ಕಳುಹಿಸಿಲ್ಲ ಆದರೆ ಮಾನವರಲ್ಲಿ ಅಧಿಕರೂ ಅರಿಯುವುದಿಲ್ಲ. (ಖುರ್‌ಆನ್ 34:28)

c. ಒಂದು ಅಧಿಕೃತ ಪ್ರವಾದಿ ಹೀಗಿದೆ : ಅಲ್ಲಾಹನ ಸಂದೇಶವಾಹಕರು ಹೇಳಿದರು: ಪೂರ್ವ ಪ್ರವಾದಿಗಳೆಲ್ಲರೂ ತಮ್ಮ ಸಮುದಾಯಕ್ಕೆ ಮಾತ್ರ ನಿಯೋಗಿಸಿಲ್ಪಟ್ಟವರಾಗಿರುವರು. ಆದರೆ ನನ್ನುನ್ನು ಮಾತ್ರ ಸಮಸ್ತ ಮನುಷ್ಯಕುಲಕ್ಕಾಗಿ ನಿಯೋಗಿಸಲಾಗಿದೆ. " [ಬುಖಾರಿ ಭಾಗ 1, ಬಾಬುಸ್ಸಲಾಹ್, ಅಧ್ಯಾಯ 56, ಹದೀಸು ಸಂಖ್ಯೆ - 429, ಜಾಬಿರ್ ಇಬ್‌ನು ಅಬ್ದುಲ್ಲಾರಿಂದ ವರದಿ]

8. ಭಾರತಕ್ಕೆ ಬಂದ ಪ್ರವಾದಿ ಯಾರು? :

ಇನ್ನು ಭಾರತಕ್ಕೆ ಬಂದ ಪ್ರವಾದಿ ಯಾರು ; ಶ್ರೀ ರಾಮ, ಶ್ರೀ ಕೃಷ್ಣರನ್ನು ಪ್ರವಾದಿಗಳೆಂದು ಪರಿಗಣಿಸಲಾದೀತೇ ಎಂಬ ಪ್ರಶ್ನೆ ! ಪವಿತ್ರ ಖುರ್‌ಆನಿನಲ್ಲಿ ಅಥವಾ ಯಾವುದೇ ಅಧಿಕೃತ ಪ್ರವಾದಿ ವಚನಗಳಲ್ಲಿ ಭಾರತಕ್ಕೆ ಯಾವ ಪ್ರವಾದಿಗಳು ಬಂದಿದ್ದರು, ಅವರ ಹೆಸರೇನು ಎಂಬುದರ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲ. ಅವರು ಪ್ರವಾದಿಗಳೋ ಅಲ್ಲವೋ ಎಂಬುದನ್ನು ಖಚಿತವಾಗಿ ಹೇಳಲು ಯಾರಿಗೂ ಸಾಧ್ಯವಿಲ್ಲ. ಕೆಲವು ಮುಸಲ್ಮಾನರು, ವಿಶೇಷವಾಗಿ ರಾಜಕಾರಣಿಗಳು ಹಿಂದೂ ಜನರನ್ನು ಓಲೈಸುವ ಸಲುವಾಗಿ ರಾಮ್ ಅಲೈಸ್ಸಲಾಂ ಅರ್ಥಾತ್ ಅವರ ಮೇಲೆ ಅಲ್ಲಾಹನ ಶಾಂತಿಯಿರಲಿ ಎಂದು ಹೇಳುವುದಿದೆ. ಇದು ಸರಿಯಲ್ಲ ಮತ್ತು ಸರ್ವರ್ಥಾಃ ಖಂಡನೀಯ. ಏಕೆಂದರೆ ಅವರು ಪ್ರವಾದಿಗಳು ಎನ್ನುವುದಕ್ಕೆ ಅಧಿಕೃತ ಪುರಾವೆಗಳಿಲ್ಲ. ಆದರೆ ಆ ಜನರು ಪ್ರವಾದಿಗಳಾಗಿರಲೂಬಹುದು, ಅಲ್ಲದಿರಲೂಬಹುದು ಎಂದು ಹೇಳುವುದರಲ್ಲಿ ತಪ್ಪಿಲ್ಲ. ವಾಸ್ತವಿಕತೆಯನ್ನು ಬಲ್ಲವನು ಅಲ್ಲಾಹನು ಮಾತ್ರ.

9. ಇಂದು ಮನುಷ್ಯನು ಅನುಸರಿಸಬೇಕಾದುದು ಅಂತಿಮ ಪ್ರವಾದಿ(ಸ)ಯ ಮಾರ್ಗದರ್ಶನವನ್ನು :

ಇನ್ನು ಯಾವನಾದರೂ ಶ್ರೀ ರಾಮ, ಶ್ರೀ ಕೃಷ್ಟರನ್ನು ಪ್ರವಾದಿಗಳಾಗಿದ್ದರು ಎಂದು ಪರಿಗಣಿಸಿಕೊಂಡರೂ ಇಂದು ಅವನು ಅನುಸರಿಸಬೇಕಾದುದು ಆ ಸೃಷ್ಟಿಕರ್ತನ ಅಂತಿಮ ಪ್ರವಾದಿಯಾದ ಮುಹಮ್ಮದ್ (ಸ)ರು ಕಲಿಸಿಕೊಟ್ಟ ಮಾರ್ಗದರ್ಶನವನ್ನಾಗಿದೆ. ಏಕೆಂದರೆ ಎಲ್ಲಾ ಪೂರ್ವ ಪ್ರವಾದಿಗಳ ಸಂದೇಶಗಳೂ ಅವರವರ ಕಾಲಕ್ಕೆ ಸೀಮಿತ. ಭಾರತೀಯ ಅಧಿಕೃತ ವೇದ ಗ್ರಂಥಗಳಲ್ಲೂ ಅಂತಿಮ ಪ್ರವಾದಿ ಮುಹಮ್ಮದ್ (ಸ)ರ ಆಗಮನದ ಕುರಿತಾದ ಭವಿಷ್ಯವಾಣಿಗಳಿರುವುದನ್ನು ಕಾಣಬಹುದು. ಆದುದರಿಂದ ಇಂದು ಜಗತ್ತಿನಲ್ಲಿ ಎಲ್ಲಾ ಜನರೂ ಮನುಷ್ಯಕುಲಕ್ಕೆ ಅಂತಿಮ ಪ್ರವಾದಿಯಾಗಿ ಆಗಮಿಸಿದ್ದ ಮುಹಮ್ಮದ್(ಸ)ರನ್ನೇ ಅನುಸರಿಸಬೇಕಾಗಿದೆ.

ಉತ್ತರ :

1. ದಿವ್ಯ ಗ್ರಂಥಗಳು ಎಲ್ಲಾ ಕಾಲ ಘಟ್ಟಗಳಲ್ಲೂ ಅವತೀರ್ಣಗೊಂಡಿದ್ದವು :

ಪವಿತ್ರ ಖುರ್‌ಆನ್ ತನ್ನ 13ನೇ ಅಧ್ಯಾಯ ರ‌ಅದ್‌ನ 38ನೇ ಸೂಕ್ತಿಯಲ್ಲಿ ಹೇಳುತ್ತದೆ.

ಪ್ರತಿಯೊಂದು ಕಾಲಘಟ್ಟಕ್ಕೂ ಒಂದು ಗ್ರಂಥ (ಅವತೀರ್ಣಗೊಂಡಿತ್ತು)" (ಖುರ್‌ಆನ್ 13:38)

2. ಸೃಷ್ಟಿಕರ್ತನು ಅವತೀರ್ಣಗೊಳಿಸಿದ ನಾಲ್ಕು ದಿವ್ಯಗ್ರಂಥಗಳ ಹೆಸರನ್ನು ಮಾತ್ರ ಖುರ್‌ಆನಿನಲ್ಲಿ ಉಲ್ಲೇಖಿಸಲಾಗಿದೆ :

ನಾಲ್ಕು ದಿವ್ಯ ಗ್ರಂಥಗಳ ಹೆಸರುಗಳನ್ನು ಮಾತ್ರ ಖುರ್‌ಆನಿನಲ್ಲಿ ಉಲ್ಲೇಖಿಸಲಾಗಿದೆ. ಅವುಗಳು ತೌರಾಃ, ಝಬೂರ್, ಇಂಜೀಲ್ ಮತ್ತು ಖುರ್‌ಆನ್. ತಾರಾಃ ಗ್ರಂಥ, ಪ್ರವಾದಿ ಮೂಸಾ (ಅ)ರಿಗೆ ಅವತೀರ್ಣಗೊಳಿಸಲ್ಪಟ್ಟ ದಿವ್ಯ ಗ್ರಂಥವಾಗಿದ್ದರೆ, ಝಬೂರ್ ಪ್ರವಾದಿ ದಾವೂದ (ಅ)ರಿಗೆ ಅವತೀರ್ಣಗೊಳಿಸಲ್ಪಟ್ಟಿತ್ತು. ಪ್ರವಾದಿ ಈಸಾ (ಅ) [ಯೇಸು] ರಿಗೆ ಇಂಜೀಲ್' ಅನ್ನು ಅವತೀರ್ಣಗೊಳಿಸಲಾಯಿತು. ಖುರ್‌ಆನ್ ದಿವ್ಯ ಗ್ರಂಥಗಳ ಪೈಕಿ ಅತ್ಯಂತ ಕೊನೆಯದು. ಇದರ ನಂತರ ಇನ್ನಾವುದೇ ಗ್ರಂಥವು ಅವತೀರ್ಣಗೊಳ್ಲಿಕ್ಕಿಲ್ಲ.

3. ಪೂರ್ವ ಗ್ರಂಥಗಳು ಸೀಮಿತ ಅವಧಿಗೆ ಮಾತ್ರವಾಗಿತ್ತು :

ಖುರ್‌ಆನಿಗೆ ಮೊದಲು ಅವತೀರ್ಣಗೊಂಡ ಎಲ್ಲಾ ದಿವ್ಯ ಗ್ರಂಥಗಳು ಒಂದು ನಿರ್ದಿಷ್ಟ ಸಮುದಾಯಕ್ಕೆ ಮತ್ತು ನಿರ್ದಿಷ್ಟ ಕಾಲಕ್ಕೆ ಸೀಮಿತವಾಗಿತ್ತು.

4. ಖುರ್‌ಆನ್ ಸಮಸ್ತ ಮಾನವಕುಲಕ್ಕೆ ಮತ್ತು ಸಾರ್ವಕಾಲಿಕ :

ಖುರ್‌ಆನ್ ಕೇವಲ ಅರಬೀ ಜನರಿಗೆ ಅಥವಾ ಮುಸಲ್ಮಾನರಿಗೆ ಅವತೀರ್ಣಗೊಂಡ ಗ್ರಂಥವಲ್ಲ. ಅದು ಅವತೀರ್ಣಗೊಂಡಂದಿನಿಂದ ತೊಡಗಿ ಲೋಕಾಂತ್ಯದವರೆಗಿನ ಎಲ್ಲಾ ಮಾನವರಿಗಾಗಿ ಅವತೀರ್ಣಗೊಳಿಸಲ್ಪಟ್ಟಿದೆ. ಈ ಬಗ್ಗೆ ಉಲ್ಲೇಖಗಳು ಖುರ್‌ಆನಿನಲ್ಲಿ ಹೀಗಿವೆ :

a. ಅಲಿಫ್ ಲಾಮ್ ರಾ. ಜನರನ್ನು ಅಂಧಕಾರಗಳಿಂದ ಹೊರತೆಗೆದು ಪ್ರಕಾಶದ ಕಡೆಗೆ ತರಲಿಕ್ಕಾಗಿ ಅವರ ಪ್ರಭುವಿನ ಅನುಜ್ಞೆಯಂತೆ ಅವತೀರ್ಣಗೊಳಿಸಿದ ಗ್ರಂಥವಿದು". (ಖುರ್‌ಆನ್ 14:1)

b. ಇದೇ ರೀತಿಯ ಇನ್ನೊಂದು ವಾಕ್ಯವನ್ನು ಇದೇ ಅಧ್ಯಾಯದ 52ನೇ ಸೂಕ್ತಿಯಲ್ಲೂ ಕಾಣಬಹುದು.

ಇದು ಸಕಲ ಮಾನವರಿಗಾಗಿ ಒಂದು ಸಂದೇಶ. ಅವರಿಗೆ ಇದರ ಮೂಲಕ ಮುನ್ನೆಚ್ಚರಿಕೆ ಕೊಡಲಿಕ್ಕಾಗಿಯೂ, ದೇವನು ಒಬ್ಬನೇ ಎಂದು ಅವರು ತಿಳಿದುಕೊಳ್ಳಲಿಕ್ಕಾಗಿಯೂ, ಬುದ್ಧಿ ಜೀವಿಗಳು ಎಚ್ಚೆತ್ತುಕೊಳ್ಳಲೆಂದೂ (ಇದನ್ನು ಕಳುಹಿಸಲಾಗಿದೆ.) (ಖುರ್‌ಆನ್ 14:52)

c. 2ನೇ ಅಧ್ಯಾಯದ 185ನೇ ಸೂಕ್ತಿಯಲ್ಲಿ ಹೀಗಿದೆ.

ಖುರ್‌ಆನ್ ಅವತೀರ್ಣಗೊಂಡ ತಿಂಗಳು ರಮಝಾನ್ ಆಗಿದೆ.

ಮಾನವರಿಗೆ ಮಾರ್ಗದರ್ಶನ ಹಾಗೂ (ಇದು) ಸತ್ಯಾಸತ್ಯತೆಗಳನ್ನು ಒರೆಹಚ್ಚುವ ಸುಸ್ಪಷ್ಟ ಶಿಕ್ಷಣ ಹಾಗೂ ಒರೆಗಲ್ಲು.

d. ಈ ಬಗ್ಗೆ ಇನ್ನೊಂದು ಸೂಕ್ತಿಯು ಹೀಗಿದೆ.

(ಓ ಸಂದೇಶವಾಹಕರೇ) ನಾವು ಸತ್ಯದೊಂದಿಗೆ ಸಕಲ ಮಾನವರಿಗಾಗಿ ಈ ಗ್ರಂಥವನ್ನು ನಿಮ್ಮ ಮೇಲೆ ಅವತೀರ್ಣಗೊಳಿಸಿರುತ್ತೇವೆ. (ಖುರ್‌ಆನ್ 39:41)

5. ಭಾರತದಲ್ಲಿ ಅವತೀರ್ಣಗೊಂಡ ಗ್ರಂಥ?:

ವಾಸ್ತವಿಕತೆಯು ಹೀಗಿರುವಾಗ ಭಾರತ ದೇಶಕ್ಕೆ ಅವತೀರ್ಣಗೊಂಡ ಗ್ರಂಥ ಯಾವುದಾಗಿದೆ ಮತ್ತು ಭಾರತೀಯ ವೇದ ಗ್ರಂಥಗಳನ್ನು ದೇವರು ಅವತೀರ್ಣಗೊಳಿಸಿದ ದಿವ್ಯ ಗ್ರಂಥಗಳೆಂದು ಪರಿಗಣಿಸಬಾರದೇಕೆ ಎಂಬ ಪ್ರಶ್ನೆಯೇಳುವುದು ಸಹಜ. ಭಾರತಕ್ಕೆ ಇಂತಿಂತಹದೇ ಗ್ರಂಥಗಳನ್ನು ಅವತೀರ್ಣಗೊಳಿಸಲಾಯಿತು ಎಂಬ ಬಗ್ಗೆ ಖುರ್‌ಆನಿನಲ್ಲಾಗಲೀ ಅಧಿಕೃತ ಪ್ರವಾದಿ ವಚನಗಳಲ್ಲಾಗಲೀ ಯಾವುದೇ ಉಲ್ಲೇಖಗಳಿಲ್ಲ. ಆದುದರಿಂದ ಭಾರತೀಯ ವೇದ ಗ್ರಂಥಗಳು ದಿವ್ಯ ಗ್ರಂಥಗಳೋ ಅಲ್ಲವೋ ಎಂಬುದನ್ನು ನಿಖರವಾಗಿ ಹೇಳಲು ಅಸಾಧ್ಯ. ಅದು ಆಗಿರಲೂಬಹುದು, ಅಲ್ಲದಿರಲೂಬಹುದು. ಒಂದು ವೇಳೆ ಆಗಿದ್ದರೂ ಅದು ಅವತೀರ್ಣಗೊಂಡ ರೀತಿಯಲ್ಲಿ ಶುದ್ಧವಾದ ಉಳಿದಿಲ್ಲ.

6. ಭಾರತೀಯ ವೇದಗ್ರಂಥಗಳು ದೈವಿಕವಾಗಿದ್ದರೂ ಇಂದು ಮಾನವರು ಅನುಸರಿಸಬೇಕಾದ ಗ್ರಂಥ ಖುರ್‌ಆನ್ :

ಭಾರತೀಯ ವೇದಗ್ರಂಥಗಳು ದೈವಿಕ ಗ್ರಂಥಗಳಾಗಿದ್ದವು ಎಂದು ಪರಿಗಣಿಸಿದರೂ ಅವುಗಳು ಆ ಕಾಲದ ಜನರಿಗೆ ಮಾತ್ರ ಸೀಮಿತವಾಗಿದ್ದರಿಂದ ಇಂದು ಮನುಷ್ಯರು ಅಂತಿಮ ದಿವ್ಯ ಗ್ರಂಥವಾದ ಖುರ್‌ಆನನ್ನೇ ಅನುಸರಿಸಬೇಕಾಗಿದೆ. ದೈವಿಕವೆಂದು ಕರೆಯಲ್ಪಡುತ್ತಿರುವ ಪೂರ್ವಗ್ರಂಥಗಳಲ್ಲಿ ಅವುಗಳ ಸಂರಕ್ಷಣೆಯ ವಾಗ್ದಾನವಿಲ್ಲ. ಅವುಗಳನ್ನು ಅವತೀರ್ಣಗೊಂಡ ರೀತಿಯಲ್ಲೇ ಸಂರಕ್ಷಿಸುವೆನು ಎಂದು ಅವುಗಳನ್ನು ಅವತಿರ್ಣಗೊಳಿಸಿದವನು ವಾಗ್ದಾನವಿತ್ತಿಲ್ಲ. ಅವುಗಳು ಅವತೀರ್ಣಗೊಂಡಿದ್ದೇ ಒಂದು ಸೀಮಿತ ಅವಧಿಗಾದುದರಿಂದ ಅಂಥಹ ವಾಗ್ದಾನಗಳ ಅವಶ್ಯಕತೆಯೂ ಇರಲಿಲ್ಲ. ಖುರ್‌ಆನ್ ಅನ್ನು ಹೊರತುಪಡಿಸಿದರೆ ತನ್ನನ್ನು ದೈವಿಕವೆಂದು ಸ್ವಯಂ ಪರಿಚಯಿಸಿಕೊಳ್ಳುವ ಒಂದೇ ಒಂದು ಗ್ರಂಥವೂ ಇಂದು ಈ ಭೂಮಿಯ ಮೇಲಿಲ್ಲ. ಎಲ್ಲಾ ಪೂರ್ವ ಗ್ರಂಥಗಳು ಹಲವು ಬಾರಿ ತಿದ್ದುಪಡಿಗಳಿಗೆ, ಪರಿಷ್ಕರಣೆಗಳಿಗೆ ಒಳಪಟ್ಟಿವೆ. ಮಾನವನ ಹಸ್ತಕ್ಷೇಪಕ್ಕೊಳಪಡದೆ, ಅವತೀರ್ಣಗೊಂಡ ಭಾಷೆಯಲ್ಲೇ, ಅವತೀರ್ಣಗೊಂಡ ರೀತಿಯಲ್ಲೇ ಶುದ್ಧವಾಗಿ ಇರುವಂತೆ ಸಂರಕ್ಷಿಸಲ್ಪಟ್ಟಿರುವ ಒಂದು ಗ್ರಂಥವಿದ್ದರೆ ಅದು ಖುರ್‌ಆನ್ ಮಾತ್ರ. ಏಕೆಂದರೆ ಅದು ಸಕಲ ಮಾನವರಿಗಾಗಿ ಅವತೀರ್ಣಗೊಳಿಸಲ್ಪಟ್ಟ ಗ್ರಂಥವಾಗಿದೆ. ಸೃಷ್ಟಿಕರ್ತನೇ ಸ್ವಯಂ ಅದರ ಸಂರಕ್ಷಣೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿರುವನು. ಖುರ್‌ಆನಿನ ಸುರಕ್ಷಿತತೆಯ ಬಗ್ಗೆ ಅಲ್ಲಾಹನ ವಾಗ್ದಾನವು ಹೀಗಿದೆ.

ನಿಶ್ಚಯವಾಗಿಯೂ ಈ ಝಿಕರ್ (ಗ್ರಂಥ)ಅನ್ನು ನಾವೇ ಅವತೀರ್ಣಗೊಳಿಸಿರುತ್ತೇವೆ. ಮತ್ತು ಇದರ ಸಂರಕ್ಷಕರೂ ನಾವೇ ಆಗಿರುತ್ತೇವೆ." (ಖುರ್‌ಆನ್ 15:9)

  • Trending
  • Comments
  • Latest

Recommended

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page