• CONTACT US – ಸಂಪರ್ಕಿಸಿ
  • ABOUT US – ನಮ್ಮ ಕುರಿತು
  • Donation – ದೇಣಿಗೆ
  • Donation – ದೇಣಿಗೆ
  • ಸಹಾಯ ಬೇಕಿದೆಯೇ? – Do you need assistance?
  • ಸ್ವಯಂಸೇವಕ
Sunday, October 12, 2025
  • ಗೂಡು
  • ಇಸ್ಲಾಮ್ ಕುರಿತ ಪ್ರಶ್ನೋತ್ತರಗಳು – Questions and Answers about Islam
    • ಇಸ್ಲಾಮ್ ಕುರಿತ ಸಂಶಯಗಳು ಭಾಗ – 1
    • ಇಸ್ಲಾಮ್ ಕುರಿತ ಸಂಶಯಗಳು ಭಾಗ – 2
    • ಇಸ್ಲಾಮ್ ಕುರಿತ ಸಂಶಯಗಳು ಭಾಗ – 3
    • ರಂಜಾನ್ ತಿಂಗಳ ಕುರಿತಾದ ಪ್ರಶ್ನೆಗಳು ಮತ್ತು ಉತ್ತರಗಳು.
  • ಇಸ್ಲಾಮನ್ನು ಅನ್ವೇಷಿಸಿ
    • All
    • ಅತಿರೇಕತೆಯ ವಿರುದ್ಧ
    • ಇಸ್ಲಾಮನ್ನು ತಿಳಿಯಿರಿ
    • ಕಪಟ ವಿಶ್ವಾಸಿಗಳು
    • ಖುರಾನ್ ಕುರಿತು
    • ಜೀವನದ ಉದ್ದೇಶ
    • ಭಯೋತ್ಪಾದನೆಯ ವಿರುದ್ಧ
    • ಹಬ್ಬಗಳು
    • ಹೊಸದಾಗಿ ಇಸ್ಲಾಮಿಗೆ ಬಂದಿರುವಿರೇ?

    ಶಾಂತಿಗೆ ಮತ್ತೊಂದು ಹೆಸರೇ ಇಸ್ಲಾಮ್

    ಕನ್ನಡ ಇಸ್ಲಾಂ 360° – 01 – ಇಸ್ಲಾಂ ಎಂದರೇನು?

    ಪವಿತ್ರ ಕುರ್‌ಆನ್ ಎಂದರೇನು? – What is Holy Quran

    ಇಸ್ಲಾಮೇ ಏಕೆ? – Why Islam?

    ನವ ಮುಸ್ಲಿಮರಿಗೆ ಸಂಕ್ಷಿಪ್ತ ಉಪಯುಕ್ತ ಮಾರ್ಗದರ್ಶಿ – A brief useful guide for new-Muslims

    ನವ ಮುಸ್ಲಿಮರಿಗೆ ಸಂಕ್ಷಿಪ್ತ ಉಪಯುಕ್ತ ಮಾರ್ಗದರ್ಶಿ – A brief useful guide for new-Muslims

    ಇಸ್ಲಾಂ ಮತ್ತು ಕುರಾನಿನ ನೈಜ ಸಂದೇಶ – The true message of Islam and the Quran

  • ಅಲ್ಲಾಹ್
    231246

    ನಾವು ಇಲ್ಲೇಕ್ಕಿದ್ದೇವೆ? – Why are we here?

    231252

    ಯೇಸುವಿನ ಪ್ರಕಾರ ದೇವನೆಂದರೆ ಯಾರು ? – Who is God according to Jesus

    231233

    ದೇವನಿದ್ದರೆ ಅನ್ಯಾಯಗಳೇಕೆ? – If there is a God why injustices?

    230493

    ದೇವರ ನೈಜ ಧರ್ಮ ಯಾವುದು? – What is the true religion of God?

    230497

    ಅಲ್ಲಾಹನ(ದೇವರ) ಕೃಪೆ – By the grace of Allah (God)

    230502

    ಇಸ್ಲಾಮಿನಲ್ಲಿ ಏಕದೇವತ್ವ – Monotheism in Islam

  • ನಂಬಿಕೆ
    • All
    • ಆರಾಧನೆ
    • ಪ್ರಮಾಣೀಕರಣ
    • ಮರಣಾನಂತರ ಜೀವನ
    • ಸ್ವರ್ಗ

    ಆತ್ಮದ ವಾಸ್ತವ – The reality of the Soul

    ಜೀವನ ಘಟ್ಟದ ಪಯಣವೆತ್ತ ? – Where is the journey of the of life?

    ಇಸ್ಲಾಮಿನ ಮೂರು ಮೂಲಭೂತ ತತ್ವಗಳು – Three Fundamental Principles of Islam

    ನಮಗೆಲ್ಲಾ ಒಬ್ಬನೇ ಸೃಷ್ಟಿಕರ್ತ!! – One Creator for All of Us!!

    ನೀವೇಕೆ ಆರಾಧಿಸುವುದಿಲ್ಲ? – Why don’t you worship?

    ಸಾವು: ಅಂತ್ಯವೋ…? ಹೊಸದೊಂದು ಆರಂಭವೋ? – Death is End? or New Beginning

  • ಪವಿತ್ರೀಕರಣ

    ಖುರ್‌ಆನಿನ ಬೆಳಕಿನಲ್ಲಿ ರೋಗ ಪರಿಹಾರ

    ಶುದ್ಧೀಕರಣ / ವುದೂ – Wudu

  • ಖುರಾನ್
  • ಅಹದೀತ್ ಹೇಳಿಕೆಗಳು
  • ಇಸ್ಲಾಮ್ ಮತ್ತು ಶಾಸ್ತ್ರಗಳು
    • All
    • ಇಸ್ಲಾಮಿನ ಕುರಿತಾಗಿ ಇತರರು
    • ಕ್ರೈಸ್ತ ಧರ್ಮ
    • ಖುರಾನ್ ಆಧಾರಗಳು

    ಯೇಸುವಿನ ಪ್ರಕಾರ ದೇವನೆಂದರೆ ಯಾರು ? – Who is God according to Jesus

    ಯೇಸುವಿನ ಅದ್ಭುತ ಜನನ – Miraculous Birth of Jesus

    ಮಾನವ ಶರೀರವೆಂಬ ಅದ್ಭುತ ಯಂತ್ರವನ್ನು ನಿರ್ಮಿಸಿದವನು ಯಾರು? – Who built the amazing machine called human body?

    ಅಲ್ಲಾಹನ ಸಂದೇಶವಾಹಕರಾದ ಮಹಮ್ಮದ್(ಸ)ರ ಕುರಿತು ಮುಸ್ಲೀಮೇತರ ಟಿಪ್ಪಣಿಗಳು – Non-Muslim Notes on Muhammad (PBUH), Messenger of Allah

    ಕ್ರೈಸ್ತರೊಂದಿಗೆ ಸಂವಾದ (ಯೆಹೋವನ ಸಾಕ್ಷಿಗಳನ್ನು ಹೊರೆತುಪಡಿಸಿ) – Dialogue with Christians (Except Jehovah’s Witnesses)

    ದೇವನೊಬ್ಬನೆ ಅಥವ ಮೂವರೇ? – Is God one or three?

  • ಪ್ರವಾದಿಗಳು
    • All
    • ಮುಹಮ್ಮದ್(ﷺ)
    • ಯೇಸು(ಈಸ (ಅ))

    ರಬಿವುಲ್ ಅವ್ವಲ್ 12 ಪ್ರವಾದಿ(ಸ) ಮನೆಯ ವಾತಾವರಣ –

    ಇಸ್ಲಾಮಿನ ಸಂದೇಶವಾಹಕ  ಮುಹಮ್ಮದ್(ﷺ) – The Messenger of Islam ’Muhammad’ (ﷺ)

    ಯೇಸುವಿನ ಪ್ರಕಾರ ದೇವನೆಂದರೆ ಯಾರು ? – Who is God according to Jesus

    ಯೇಸುವಿನ ಅದ್ಭುತ ಜನನ – Miraculous Birth of Jesus

    ಪ್ರವಾದಿ (ﷺ) ಯನ್ನು ಅರಿಯಿರಿ – Know the Prophet (ﷺ)

    ಅಲ್ಲಾಹನ ಸಂದೇಶವಾಹಕರಾದ ಮಹಮ್ಮದ್(ಸ)ರ ಕುರಿತು ಮುಸ್ಲೀಮೇತರ ಟಿಪ್ಪಣಿಗಳು – Non-Muslim Notes on Muhammad (PBUH), Messenger of Allah

    ದೇವನೊಬ್ಬನೆ ಅಥವ ಮೂವರೇ? – Is God one or three?

    ದೇವರ ಸಂದೇಶವಾಹಕ ಮುಹಮ್ಮದ್ (ﷺ)Messenger of God Muhammad (ﷺ)

    ಪ್ರವಾದಿ ಮುಹಮ್ಮದ್(ﷺ) – Prophet Muhammad(ﷺ)

  • ಜೀವನ ಚರಿತ್ರೆಗಳು
    • All
    • ಅಲ್-ಅಶರ ಅಲ್-ಮುಬಶ್ಶರೂನ್
    • ಇಮಾಮ್‍ಗಳು
    • ಖುಲಫಾ-ಎ-ರಾಶಿದೂನ್
    • ಪ್ರಭಾವ ಬೀರುವ ಘಟನೆಗಳು
    • ಪ್ರವಾದಿಯ ಮಡದಿಯರು
    • ಸಹಾಬಿಗಳು
    • ಹದೀಸ್ ವಿದ್ವಾಂಸರು

    10. ಆಮಿರ್ ಬಿನ್ ಅಬ್ದುಲ್ಲಾ ಬಿನ್ ಅಲ್‌-ಜರ್ರಾಹ್(ಅಬೂ ಉಬೈದ)(ರ) – Aamir bin Abdillah bin al-Jarrah(Abu Ubaida)

    9. ಸಈದ್ ಬಿನ್ ಝೈದ್(ರ) – Saeed Ibn Zayd (RA)

    8. ಸಅದ್ ಬಿನ್ ಅಬೀ ವಕ್ಕಾಸ್‌(ರ) – Sa’d Ibn Abi Waqqas (RA)

    7. ಅಬ್ದುರ್ರಹ್ಮಾನ್ ಬಿನ್ ಔಫ್(ರ) – Abdul ar-Rahman Bin Auf (RA)

    6. ಝುಬೈರ್ ಬಿನ್‌ ಅವ್ವಾಮ್(ರ) – Zubair Ibn Al-Awwam (RA)

    5. ತಲ್ಹ ಬಿನ್ ಉಬೈದುಲ್ಲಾ(ರ) – Talha bin Ubaydillah (RA)

    ಮೈಮೂನ ಬಿಂತ್ ಹಾರಿಸ್(ರ) – ಪ್ರವಾದಿ(ಸ) ರವರ ಕೊನೆಯ ಮಡದಿ

    ರಮ್ಲ ಬಿಂತ್ ಅಬೂ ಸುಫ್ಯಾನ್ (ಉಮ್ಮು ಹಬೀಬ)(ರ) – ಪ್ರವಾದಿ(ಸ) ರವರ ಹತ್ತನೆಯ ಮಡದಿ

    ಸಫಿಯ್ಯ ಬಿಂತ್ ಹುಯಯ್(ರ) – ಪ್ರವಾದಿ(ಸ) ರವರ ಒಂಬತ್ತನೇ ಮಡದಿ

  • ಇಸ್ಲಾಮಿನ ಇತಿಹಾಸ
  • ಇಸ್ಲಾಮಿನ ಕಾನೂನು
    • All
    • ಅನಿಷ್ಟ ಪದ್ಧತಿಗಳು
    • ಫತ್ವಾ ಸ್ಪಷ್ಟೀಕರಣ
    • ಫಿಖ್
    • ಷರಿಯ(ಕಾನೂನು)

    ತಮ್ಮ ಮದ್‌ಹಬ್‌ಗಳ ಕುರಿತು ಇಮಾಮ್‌ಗಳು ಏನೆನ್ನುತ್ತಾರೆ? – What the imam’s say about their Madhab?

    ಭಯೋತ್ಪಾದನೆಯ ಬಗ್ಗೆ ಇಸ್ಲಾಮ್ ಏನೆನ್ನುತ್ತದೆ? – What does Islam say about terrorism?

    ಸೂಫಿಗಳ ಕೆಲವು ತತ್ವಗಳು – Some principles of the Sufis

    ಸಂಘಟನೆಯನ್ನು ಒಡೆಯುವವರು ಕಪಟ ವಿಶ್ವಾಸಿಗಳು! – Those who break the organization are hypocritical believers!

    ​ಇಸ್ಲಾಮ್’ನಲ್ಲಿ ಪುರುಷರಿಗೆ ಒಂದಕ್ಕಿಂತ ಹೆಚ್ಚಿನ ಪತ್ನಿಯರೇ? – Can men have more than one wife in Islam?

    ಶಿಶುಗಳನ್ನು ಕೊಲ್ಲದಿರಿ – Don”t Kill the Babies

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

  • ಇಸ್ಲಾಮ್ ಜೀವನಶೈಲಿ-ಸಂಸ್ಕೃತಿ
    • All
    • ಆರೋಗ್ಯ ಪದ್ಧತಿ
    • ಇಸ್ಲಾಮಿನ ಆಧ್ಯಾತ್ಮಿಕತೆ
    • ಇಸ್ಲಾಮಿನ ಆರ್ಥಿಕತೆ
    • ಇಸ್ಲಾಮಿನ ನಾಗರಿಕತೆ
    • ಇಸ್ಲಾಮಿನ ನೈತಿಕತೆ
    • ಇಸ್ಲಾಮಿನ ರಾಜಕೀಯತೆ
    • ಇಸ್ಲಾಮಿನ ಸಾಮಾಜಿಕತೆ
    • ಕೌಟುಂಬಿಕ ಪದ್ಧತಿ
    • ಧಾರ್ಮಿಕ ಸೈರಣೆ

    ಖುರ್‌ಆನಿನ ಬೆಳಕಿನಲ್ಲಿ ರೋಗ ಪರಿಹಾರ

    ಜೀವನ ಘಟ್ಟದ ಪಯಣವೆತ್ತ ? – Where is the journey of the of life?

    ಶುದ್ಧೀಕರಣ / ವುದೂ – Wudu

    ದೇವರ ನೈಜ ಧರ್ಮ ಯಾವುದು? – What is the true religion of God?

    ನಮ್ಮ ಜೀವನದ ಉದ್ದೇಶವೇನು? – The purpose of our life

    ಇಸ್ಲಾಮಿನ ಮೂರು ಮೂಲಭೂತ ತತ್ವಗಳು – Three Fundamental Principles of Islam

    ಇಸ್ಲಾಮಿನಲ್ಲಿ ಏಕದೇವತ್ವ – Monotheism in Islam

    ​ಇಸ್ಲಾಮ್’ನಲ್ಲಿ ಪುರುಷರಿಗೆ ಒಂದಕ್ಕಿಂತ ಹೆಚ್ಚಿನ ಪತ್ನಿಯರೇ? – Can men have more than one wife in Islam?

    ದೇವರ ಸಂದೇಶವಾಹಕ ಮುಹಮ್ಮದ್ (ﷺ)Messenger of God Muhammad (ﷺ)

  • ಇಸ್ಲಾಮಿನಲ್ಲಿ ಮೂಲಭೂತ ಹಕ್ಕುಗಳು
    • All
    • ಮಹಿಳಾ ಹಕ್ಕುಗಳು
    • ಮಾನವ ಹಕ್ಕುಗಳು
    • ಸಮಾನತೆ

    ಇಸ್ಲಾಂ ಧರ್ಮದಲ್ಲಿ ಮಹಿಳೆಯ ಹಕ್ಕು ಭಾದ್ಯತೆಗಳು – Women’s Right in Islam

    ​ಇಸ್ಲಾಮ್’ನಲ್ಲಿ ಪುರುಷರಿಗೆ ಒಂದಕ್ಕಿಂತ ಹೆಚ್ಚಿನ ಪತ್ನಿಯರೇ? – Can men have more than one wife in Islam?

    ನಿಮ್ಮ ತಂದೆ-ತಾಯಿಯರ ಹಕ್ಕುಗಳು – Your parental rights

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

  • ಪ್ರಚಲಿತ ವಿದ್ಯಮಾನ
  • ಮಾಸ ಪತ್ರಿಕೆಗಳು
  • ಅರೇಬಿಕ್
ಕನ್ನಡ ಇಸ್ಲಾಂ | Kannada Islam
  • Login
ಇಸ್ಲಾಮಿಗೆ ಹೊಸಬರೇ
ಇಸ್ಲಾಮ್ ಅಂಗೀಕರಿಸುವಿರೇ?
ಇನ್ನೂ ಹೆಚ್ಚಿನ ಮಾಹಿತಿಗಾಗಿ
Social icon element need JNews Essential plugin to be activated.
No Result
View All Result
ಕನ್ನಡ ಇಸ್ಲಾಂ | Kannada Islam
ಇಸ್ಲಾಮಿಗೆ ಹೊಸಬರೇ
ಇಸ್ಲಾಮ್ ಅಂಗೀಕರಿಸುವಿರೇ?
ಇನ್ನೂ ಹೆಚ್ಚಿನ ಮಾಹಿತಿಗಾಗಿ
No Result
View All Result
ಕನ್ನಡ ಇಸ್ಲಾಂ | Kannada Islam
No Result
View All Result
Home ಇಸ್ಲಾಮಿನ ಕಾನೂನು ಫಿಖ್

ತಮ್ಮ ಮದ್‌ಹಬ್‌ಗಳ ಕುರಿತು ಇಮಾಮ್‌ಗಳು ಏನೆನ್ನುತ್ತಾರೆ? – What the imam’s say about their Madhab?

GIRISH K S by GIRISH K S
30 June, 2024
in ಫಿಖ್
0 0
0
–      ಶೈಖ್ ಮುಹಮ್ಮದ್ ನಾಸಿರುದ್ದೀನ್ ಅಲ್ ಅಲ್ಬಾನೀ


ಪರಿವಿಡಿ

ಅನುವಾದಕರ ಮಾತು
ಗ್ರಂಥಕರ್ತರ ಕುರಿತು
ಪ್ರಸ್ತಾವನೆ
ಅಬೂ ಹನೀಫಾ (ರ)
ಮಾಲಿಕ್ ಇಬ್‌ನು ಅನಸ್ (ರ)
ಶಾಫಿಈ (ರ)
ಅಹ್ಮದ್ ಇಬ್‌ನು ಹಂಬಲ್ (ರ)
ಉಪಸಂಹಾರ

ಅನುವಾದಕರ ಮಾತು

ಸರ್ವಸ್ತುತಿಗಳು ಸೃಷ್ಟಿಕರ್ತನಾದ ಅಲ್ಲಾಹನಿಗೆ ಮೀಸಲು. ಅವನ ಕೃಪೆ ಮತ್ತು ರಕ್ಷೆ ಅಂತ್ಯ ಪ್ರವಾದಿಯಾದ ಮುಹಮ್ಮದ್‌ರವರ (ಅರೇಬಿಕ್) ಮೇಲೂ, ಅವರ ಕುಟುಂಬದ ಮೇಲೂ, ಅವರ ನಿಷ್ಕಳಂಕ ಸಹವರ್ತಿಗಳ ಮೇಲೂ, ಅಂತ್ಯದಿನದವರೆಗೆ ಅವರನ್ನು ಅನುಸರಿಸಿ ಜೀವಿಸುವ ಅವರ ಎಲ್ಲಾ ಅನುವರ್ತಿಗಳ ಮೇಲೂ ಸದಾ ವರ್ಷಿಸುತ್ತಿರಲಿ.
‘ದಹಬ’  [ذَهَبَ] ಎಂಬ ಕ್ರಿಯೆಯ ಕ್ರಿಯಾಧಾತುವಾಗಿದೆ ‘ಮದ್‌ಹಬ್’ [مَذْهَب]. ‘ದಹಬ’ ಎಂಬುದಕ್ಕೆ ಹೋದನು, ಅಭಿಪ್ರಾಯಪಟ್ಟನು ಇತ್ಯಾದಿ ಅರ್ಥಗಳಿವೆ. ‘ಮದ್‌ಹಬ್’ ಎಂದರೆ ಅಭಿಪ್ರಾಯ, ವೀಕ್ಷಣೆ ಎಂದಾಗಿದೆ. ‘ಮದ್‌ಹಬು ಅಬೀ ಹನೀಫಾ’ (ಹನಫೀ ಮದ್‌ಹಬ್) ಎಂದರೆ ಇಮಾಮ್ ಅಬೂ ಹನೀಫಾರವರ (ರ) ಅಭಿಪ್ರಾಯ, ಅವರ ವೀಕ್ಷಣೆ ಎಂದಾಗಿದೆ. ಇದರಂತೆಯೇ ಮಾಲಿಕೀ ಮದ್‌ಹಬ್, ಶಾಫಿಈ ಮದ್‌ಹಬ್, ಹಂಬಲೀ ಮದ್‌ಹಬ್ ಎಂದರೆ ಅವು ಪ್ರಸ್ತುತ ಇಮಾಮ್‌ಗಳ ಅಭಿಪ್ರಾಯ ಅಥವಾ ವೀಕ್ಷಣೆ ಎಂದಾಗಿದೆ.
ಮದ್‌ಹಬ್‌ಗಳು ಅಥವಾ ಅಭಿಪ್ರಾಯಗಳು ಈ ನಾಲ್ವರು ಇಮಾಮ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ಇತರ ಹಲವಾರು ವಿದ್ವಾಂಸರಿಗೂ ಮದ್‌ಹಬ್‌ಗಳಿದ್ದವು. ಉದಾಹರಣೆಗೆ ಔಝಾಈ (ರ), ಸೌರೀ (ರ), ನಖ‌ಈ (ರ), ಝುಹ್‌ರೀ ಮುಂತಾದವರಿಗೆ ಅವರದೇ ಆದ ಮದ್‌ಹಬ್‌ಗಳಿದ್ದವು. ಆದರೆ ಅವುಗಳಲ್ಲಿ ಪ್ರಖ್ಯಾತಿ ಹೊಂದಿದ್ದು ಉಪರಿಯುಕ್ತ ನಾಲ್ಕು ಮದ್‌ಹಬ್‌ಗಳು ಮಾತ್ರವಾಗಿದ್ದವು.
ಮದ್‌ಹಬ್‌ಗಳು ಪ್ರಸ್ತುತ ಇಮಾಮ್‌ಗಳ ಅಭಿಪ್ರಾಯಗಳು ಮಾತ್ರವಾಗಿವೆ. ಅಭಿಪ್ರಾಯಗಳು ಎಂದ ಮೇಲೆ ಅವುಗಳಲ್ಲಿ ಸರಿಯೂ ತಪ್ಪೂ ಇರಬಹುದಾಗಿದೆ. ‌ಯಾಕೆಂದರೆ ಇಮಾಮ್‌ಗಳಲ್ಲಿ ಯಾರೂ ಕೂಡ ಪ್ರವಾದಿಗಳಂತೆ ಮ‌ಅ್‌ಸೂಮ್ [مَعْصُوم] ಅರ್ಥಾತ್‌ ತಪ್ಪು ಸಂಭವಿಸುವುದರಿಂದ ಸುರಕ್ಷಿತರಲ್ಲ. ಮಾತ್ರವಲ್ಲದೇ ಅವರ ಕಾಲಘಟ್ಟದಲ್ಲಿ ಹದೀಸ್‌ಗಳು ಕ್ರೋಢೀಕೃತಗೊಂಡಿರಲಿಲ್ಲ. ಮತ್ತು ಮಲಿನಗೊಂಡ ಹದೀಸ್‌ಗಳಿಂದ ಶುದ್ಧವಾದ ಹದೀಸ್‌ಗಳನ್ನು ಬೇರ್ಪಡಿಸುವ ಸಾರ್ವಾಂಗೀಕೃತವಾದ ಹದೀಸ್ ಸಾಂಕೇತಿಕ ಶಾಸ್ತ್ರವು [علم مصطلح الحديث] ಅಸ್ತಿತ್ವದಲ್ಲಿರಲಿಲ್ಲ.
ಈ ಎಲ್ಲಾ ಕಾರಣಗಳಿಂದಾಗಿ ಇಮಾಮ್‌ಗಳು ತಮಗೆ ಸರಿ ಕಂಡ ಅಥವಾ ತಮ್ಮ ನಿಯಮಗಳ ಪ್ರಕಾರ ಸಹೀಹ್ ಎಂದು ಪರಿಗಣಿಸಲ್ಪಟ್ಟ ಹದೀಸ್‌ಗಳ ಮತ್ತು ಸಹಾಬಿ, ತಾಬಿಈಗಳ ಫತ್ವಾಗಳ ಆಧಾರದ ಮೇಲೆ ತಮ್ಮ ಅಭಿಪ್ರಾಯ(ಮದ್‌ಹಬ್)ಗಳನ್ನು ರಚಿಸಿದರು.
“ ನಮ್ಮ ಮದ್‌ಹಬ್ ನೂರು ಶೇಕಡ ಸರಿಯಾಗಿದೆ, ಅದು ಸಂಪೂರ್ಣವಾಗಿ ಸುನ್ನತ್‌ನ ತಳಹದಿಯಲ್ಲಿದೆ. ಆದ್ದರಿಂದ ಸಹೀಹ್ ಆದ ಹದೀಸ್ ಲಭಿಸಿದರೂ ಕೂಡ ನಮ್ಮ ಮದ್‌ಹಬ್‌ನ್ನು ಕೈಬಿಡಬಾರದು” ಎಂದು ಅವರಲ್ಲಿ ಒಬ್ಬರೂ ಕೂಡ ವಾದಿಸಿಲ್ಲ. ಬದಲಾಗಿ  ಅವರೆಲ್ಲರೂ ಹೇಳಿದ್ದು “ನಾವು ಕೇವಲ ಮನುಷ್ಯರಾಗಿದ್ದೇವೆ, ನಮ್ಮ ಅಭಿಪ್ರಾಯಗಳಲ್ಲಿ ಸರಿಯೂ ತಪ್ಪೂ ಸಂಭವಿಸುತ್ತದೆ. ಆದ್ದರಿಂದ ನೀವು ನಮ್ಮ ಅಭಿಪ್ರಾಯಗಳನ್ನು ಸಹೀಹ್ ಆಗಿರುವ ಹದೀಸ್‌ಗಳೊಂದಿಗೆ ಹೋಲಿಸಿ ನೋಡಿರಿ. ಸಹೀಹ್ ಆಗಿರುವ ಹದೀಸ್‌ಗಳಿಗೆ ನಮ್ಮ ಅಭಿಪ್ರಾಯಗಳು ವಿರುದ್ಧವಾಗಿದ್ದರೆ ನಮ್ಮ ಅಭಿಪ್ರಾಯಗಳನ್ನು ತಿರಸ್ಕರಿಸಿ ಸಹೀಹ್ ಆಗಿರುವ ಹದೀಸ್‌ಗಳನ್ನು ಅನುಸರಿಸಿರಿ” ಎಂದಾಗಿದೆ.
ಆದರೆ ಇಂದು ಮದ್‌ಹಬ್‌ಗಳನ್ನು ಅನುಸರಿಸುವವರು ಇಮಾಮ್‌ಗಳ ಮಾತಿಗೆ ವಿರುದ್ಧವಾಗಿ ಸಾಗುವವರಾಗಿದ್ದಾರೆ. ಇವರಿಗೆ ಸಹೀಹ್ ಆಗಿರುವ ಹದೀಸ್‌ಗಳನ್ನು ತೋರಿಸಿಕೊಟ್ಟರೂ ಕೂಡ ಅದಕ್ಕೆ ವಿರುದ್ಧವಾಗಿರುವ ಇಮಾಮ್‌ಗಳ ಅಭಿಪ್ರಾಯಗಳನ್ನು ತಿರಸ್ಕರಿಸಲು ಸಿದ್ಧರಿಲ್ಲ. ಆದ್ದರಿಂದ ಅಂತಹವರಿಗೆ ಒಂದು ಉಪದೇಶವಾಗಿ ಶೈಖ್ ಅಲ್ಬಾನಿಯವರು (ರ) ಈ ಕೃತಿಯನ್ನು ಸಮರ್ಪಿಸುತ್ತಿದ್ದೇನೆ.
ಆಧುನಿಕ ಮುಹದ್ದಿಸ್ ಆಗಿರುವ ಶೈಖ್ ನಾಸಿರುದ್ದೀನ್ ಅಲ್ ಅಲ್ಬಾನಿ (ರ) ಬರೆದಿರುವ ‘ಸಿಫತು ಸಲಾತು ನ್ನಬಿಯ್ಯಿ (ಸ) ಮಿನ ತ್ತಕ್‌ಬೀರಿ ಇಲ ತ್ತಸ್‌ಲೀಮಿ ಕ‌ಅನ್ನಕ ತರಾಹಾ’ ಎಂಬ ಗ್ರಂಥದ ಆದಿಯಲ್ಲಿ ಬರುವ ‘ಅಕ್‌ವಾಲುಲ್ ಅಇಮ್ಮತಿ ಫಿತ್ತಿಬಾಇ ಸ್ಸುನ್ನತಿ ವತರ್‌ಕಿ ಅಕ್‌ವಾಲಿಹಿಮುಲ್ ಮುಖಾಲಿಫತಿ ಲಹಾ’ ಎಂಬ ಅಧ್ಯಾಯದ ಕನ್ನಡಾನುವಾದವಾಗಿದೆ ಈ ಕೃತಿ. ಈ ಕೃತಿಯನ್ನು ಓದಿದ ಬಳಿಕವೂ ಯಾರಾದರೂ ಪ್ರವಾದಿಯ (ಸ) ಸುನ್ನತ್‌ಗಿಂತಲೂ ಇಮಾಮ್‌ಗಳ ಅಭಿಪ್ರಾಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಅದನ್ನು ಅನುಸರಿಸಿದರೆ ಖಂಡಿತವಾಗಿಯೂ ಅವನು ಇಮಾಮ್‌ ಅಹ್ಮದ್ (ರ) ಹೇಳಿದಂತೆ ಸರ್ವನಾಶದ ಅಂಚಿನಲ್ಲಿದ್ದಾನೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ಈ ಕೃತಿಯ ರಚನಗೆ ಹಾಗೂ ಪ್ರಕಟನೆಗೆ ಸಹಾಯ ನೀಡಿ ಸಹಕರಿಸಿದ ಸರ್ವರಿಗೂ ಅಲ್ಲಾಹನು ಅತ್ಯುತ್ತಮವಾದ ಪ್ರತಿಫಲವನ್ನು ನೀಡಲಿ ಮತ್ತು ಇದನ್ನೊಂದು ಸತ್ಕರ್ಮವಾಗಿ ಸ್ವೀಕರಿಸಲಿ. ಆಮೀನ್

– ಮುಹಮ್ಮದ್ ಹಂಝಾ

ಗ್ರಂಥಕರ್ತರ ಕುರಿತು

ಹಿಜ್‌ರಾ 1332ರಲ್ಲಿ (ಕ್ರಿ.ಶ 1914) ಅಲ್ಬೇನಿಯಾದ ಅಂದಿನ ರಾಜಧಾನಿಯಾಗಿದ್ದ ಅಶ್ಕೋದಿರಾ ಎಂಬ ಪಟ್ಟಣದಲ್ಲಿ ಒಂದು ಬಡ ಕುಟುಂಬದಲ್ಲಿ   ಅಲ್ಬಾನೀ (ರ) ಜನ್ಮ ತಾಳಿದರು. ಅವರ ತಂದೆ ಅಲ್‌ಹಾಜ್ ನೂಹ್ ನಜ್ಜಾತೀ ಅಲ್ ಅಲ್ಬಾನೀ ಇಸ್ತಾಂಬೂಲ್‌ನಲ್ಲಿ ಶರೀಅಃ ವಿದ್ಯಾಭ್ಯಾಸಗಳನ್ನು ಪೂರ್ತೀಕರಿಸಿ  ಓರ್ವ ವಿದ್ವಾಂಸರಾಗಿ ಅಲ್ಬೇನಿಯಾಗೆ ಮರಳಿದರು. ಅಲ್ಬೇನಿಯಾವನ್ನು ನಾಸ್ತಿಕರು ವಶಪಡಿಸಿದಾಗ ಅವರು ತಮ್ಮ ಕುಟುಂಬ ಸಮೇತ ಡಮಾಸ್ಕಸ್‌ಗೆ ವಲಸೆಹೋದರು. ಡಮಾಸ್ಕಸ್‌ನಲ್ಲಿ ಅಲ್ಬಾನೀ ತನ್ನ ಪ್ರಾರ್ಥಮಿಕ ವಿದ್ಯಾಭ್ಯಾಸವನ್ನು ಪೂರ್ತಿ ಕರಿಸಿದರು. ನಂತರ ಅವರು ವಿವಿಧ ಶೈಖ್‌ಗಳಿಂದ ಮತ್ತು ತನ್ನ ತಂದೆಯ ಕುರ್‌ಆನ್, ತಜ್‌ವೀದ್, ಅರಬಿ ಭಾಷಾ ವಿಜ್ಞಾನ, ಹನಫೀ ಫಿಕ್‌ಹ್ ಮತ್ತಿತರ ವಿದ್ಯೆಗಳನ್ನು ಕರಗತ ಮಾಡಿದರು.
 
ತನ್ನ ತಂದೆಯಿಂದ ಗಡಿಯಾರ ರಿಪೇರಿಯನ್ನು ಕಲಿತ ಅಲ್ಬಾನೀ (ರ) ಅದರಲ್ಲಿ ನಿಪುಣರಾಗಿದ್ದರು ಮತ್ತು ತನ್ನ ಆದಾಯವನ್ನು ಅದರಿಂದಲೇ ಸಂಪಾದಿಸುತ್ತಿದ್ದರು. ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ‘ಅಲ್ ಮನಾರ್’ ಪತ್ರಿಕೆಯ ಪ್ರಭಾವಕ್ಕೊಳಗಾಗಿ ಅವರು ಹದೀಸ್ ಅಧ್ಯಯನವನ್ನು ಕೈಗೆತ್ತಿಕೊಂಡರು. ಮೊತ್ತಮೊದಲನೆಯದಾಗಿ ಅವರು ಹಾಫಿದ್ ಇರಾಕಿಯವರ (ರ) ‘ಅಲ್ ಮುಗ್‌ನೀ ಅನ್ ಹಮ್‌ಲಿಲ್ ಅಸ್‌ಫಾರಿ ಫಿಲ್ ಅಸ್‌ಫಾರ, ಫೀ ತಖ್‌ರೀಜಿ ಮಾ ಫಿಲ್ ಇಹ್‌ಯಾ ಮಿನಲ್ ಅಖ್‌ಬಾರ್’ ಎಂಬ ಅನರ್ಘ್ಯ ಕೃತಿಯ ಅಧ್ಯಯನವನ್ನು ಕೈಗೆತ್ತಿಕೊಂಡರು ಹಾಗೂ ಅದಕ್ಕೆ ಟಿಪ್ಪಣಿಗಳನ್ನು ಬರೆಯತೊಡಗಿದರು.
 
ತನ್ನ ತಂದೆಯ ಪ್ರೋತ್ಸಾಹರಾಹಿತ್ಯದ ಹೊರತಾಗಿಯೂ ಅವರು ತಮ್ಮನ್ನು ಹದೀಸ್ ಅಧ್ಯಯನದಲ್ಲಿ ತೊಡಗಿಸಿಕೊಂಡರು. ಆದರೆ ಇದಕ್ಕಾಗಿ ಅವರಿಗೆ ಹೆಚ್ಚಿನ ಗ್ರಂಥಗಳ ಅವಶ್ಯಕತೆಯಿತ್ತು. ಮತ್ತು ತನ್ನ ತಂದೆಯ ಬಳಿ ಅವುಗಳ ಭಂಡಾರವಿರಲಿಲ್ಲ. ಅವರ ತಂದೆಯ ಬಳಿಯಿದ್ದ ಹೆಚ್ಚಿನ ಗ್ರಂಥಗಳೂ ಹನಫೀ ಫಿಕ್‌ಹ್‌ಗೆ ಸಂಬಂಧಿಸಿದ್ದಾಗಿದ್ದವು. ಆದ್ದರಿಂದ ಅವರು ಡಮಾಸ್ಕಸ್‌ನ ಪ್ರಸಿದ್ಧ ಗ್ರಂಥಾಲಯವಾದ ‘ಅಲ್ ಮಕ್ತಬತು ದ್ದಾಹಿರಿಯ್ಯಃ’ದಿಂದ ಪುಸ್ತಕಗಳನ್ನು ಪಡೆಯತೊಡಗಿದರು ಹಾಗೂ ಕೆಲವೊಮ್ಮೆ ಅವುಗಳನ್ನು ನೇರವಾಗಿ ಮಾರಾಟಗಾರರಿಂದಲೇ ಪಡೆಯುತ್ತಿದ್ದರು.
 
ಅವರ ಪುಸ್ತಕ ಪ್ರೇಮವು ಯಾವ ಹಂತವನ್ನು ತಲುಪಿತ್ತೆಂದರೆ ದಿನಗಟ್ಟಲೆ ಅವರು ತಮ್ಮ ಅಂಗಡಿಯನ್ನು ಮುಚ್ಚಿ ತಡರಾತ್ರಿಯವರೆಗೆ ಗ್ರಂಥಾಲಯದಲ್ಲಿ ಮುಳುಗಿರುತ್ತಿದ್ದರು. ನಮಾಝ್‌ನ ಹೊರತಾಗಿ ಅವರು ಅಲ್ಲಿಂದ ನಿರ್ಗಮಿಸಿದ್ದುದು ತೀರಾ ಅಪರೂಪ. ಇದನ್ನು ಕಂಡ ಗ್ರಂಥಾಲಯದ ಪಾಲಕರು ಕಟ್ಟಡದ ಕೀಲಿಕೈಯನ್ನು ಅವರಿಗೆ ನೀಡಿ ಯಾವ ಸಮಯದಲ್ಲೂ ಮುಕ್ತವಾಗಿ ಪ್ರವೇಶಿಸಲು ಅನುಮತಿ ನೀಡಿದರು. ಈ ಸಮಯದಲ್ಲಿ ಅವರು ಮುದ್ರಣ ಕಾಣದ ಕೆಲವೊಂದು ಕೃತಿಗಳನ್ನು ಸೇರಿಸಿದಂತೆ ಹಲವಾರು ಕೃತಿಗಳನ್ನು ಬರೆದರು.
 
ಶೈಖ್ ಅಲ್ಬಾನಿಯವರಿಗೆ (ರ) ಸುನ್ನತ್‌ನ ಮೇಲಿದ್ದ ಅದಮ್ಯ ಪ್ರೇಮವು ಅಧಿಕಗೊಂಡಂತೆ ಅವರು ತಮ್ಮ ಮದ್‌ಹಬ್ ಆಗಿದ್ದ ಹನಫೀ ಮದ್‌ಹಬನ್ನು ಬದಿಗಿಟ್ಟು ಶುದ್ಧವಾದ ಸುನ್ನತ್‌ನ ಬುನಾದಿಯಲ್ಲಿ ಕಾರ್ಯಪ್ರವೃತ್ತರಾಗತೊಡಗಿದರು. ಸಲಫುಸ್ಸಾಲಿಹ್‌ಗಳಂತೆ ತಮ್ಮ ಕರ್ಮಗಳೆಲ್ಲವನ್ನೂ ಸುನ್ನತ್‌ಗೆ ಅನುಗುಣವಾಗಿ ನಿರ್ವಹಿಸತೊಡಗಿದರು. ಇದರಿಂದ ಸ್ವಾಭಾವಿಕವಾಗಿಯೂ ಕುಪಿತಗೊಂಡ ಹನಫೀ ಮದ್‌ಹಬನ್ನು ಅಂಧವಾಗಿ ಅನುಕರಿಸುವ ಪ್ರಾದೇಶಿಕ ವಿದ್ವಾಂಸರು, ಸೂಫಿ ಇಮಾಮ್‌ಗಳು ಮತ್ತಿತರರು ಅವರನ್ನು ಬಹಿರಂಗವಾಗಿ ಟೀಕಿಸತೊಡಗಿದರು.  ಸಾಮಾನ್ಯ ಜನರನ್ನು ಅವರ ವಿರುದ್ಧ ಎತ್ತಿಕಟ್ಟಿ ‘ವಹ್ಹಾಬೀ’ ಎಂದು ಮೂದಲಿಸತೊಡಗಿದರು. ಇಂತಹ ದುರಂತ ಸನ್ನಿವೇಶದಲ್ಲಿ ಡಮಾಸ್ಕಸ್‌ನ ವಿದ್ವಾಂಸರಾದ ಶೈಖ್ ಬಹ್ಜತುಲ್ ಬೈಜಾರ್ (ರ), ಅಬ್ದುಲ್ ಫತ್ತಾಹ್ (ರ), ತೌಫೀಕ್ ಅಲ್ ಬರ್ಝಾ (ರ), ಮುಂತಾದವರು ಶೈಖ್ ಅಲ್ಬಾನಿಯವರ (ರ) ನೆರವಿಗೆ ಧಾವಿಸಿದರು.
 
ತದನಂತರ ಶೈಖ್ ಅಲ್ಬಾನೀ (ರ) ಕ್ಲಾಸ್‌ಗಳನ್ನು ಸಂಘಟಿಸತೊಡಗಿದರು ಮತ್ತು ದ‌ಅ್‌ವಾ ಕಾರ್ಯಗಳಿಗಾಗಿ ಸಿರಿಯಾ, ಜೋರ್ಡಾನ್, ಕತಾರ್, ಈಜಿಪ್ಟ್, ಕುವೈತ್, ಇಮಾರಾತ್, ಸ್ಪೆಯಿನ್ ಮತ್ತು ಇಂಗ್ಲೆಂಡಿನಾದ್ಯಂತ ಪ್ರವಾಸ ಮಾಡತೊಡಗಿದರು. ಹಿಜ್‌ರಾ 1381ರಿಂದ 1383ವರೆಗೆ ಮೂರು ವರ್ಷಗಳ ಕಾಲ ಅವರು ಮದೀನಾ ವಿಶ್ವವಿದ್ಯಾಲಯದ ಹದೀಸ್ ಪ್ರಾದ್ಯಾಪಕರಾಗಿ ಆಯ್ಕೆಯಾಗಿದ್ದರು. ಅವರು ಮದೀನಾ ವಿಶ್ವವಿದ್ಯಾಲಯದ ಮಂಡಳಿಯ ಸದಸ್ಯರು ಕೂಡ ಆಗಿದ್ದರು. ಹದೀಸ್ ಕ್ಷೇತ್ರದಲ್ಲಿ ಅವರು ನೂರಕ್ಕಿಂತಲೂ ಅಧಿಕ ಗ್ರಂಥಗಳನ್ನು ರಚಿಸಿದ್ದರು.
 
ಶೈಖ್ ಹಮ್‌ದೀ ಅಬ್ದುಲ್ ಮಜೀದ್ ಮಜೀದ್ ಅಸ್ಸಲಫೀ, ಶೈಖ್ ಮುಹಮ್ಮದ್ ಈದ್ ಅಬ್ಬಾಸೀ, ಡಾ. ಉಮರ್ ಸುಲೈಮಾನ್ ಅಲ್ ಅಷ್ಕರ್, ಶೈಖ್ ಮುಹಮ್ಮದ್ ಇಬ್ರಾಹೀಮ್ ಶಕ್‌ರಾ, ಶೈಖ್ ಮುಕ್‌ಬಿಲ್ ಇಬ್‌ನು ಹಾದೀ ಅಲ್ ವಾದಿಈ, ಶೈಖ್ ಅಲೀ ಖುಶ್ಶಾನ್, ಶೈಖ್ ಮುಹಮ್ಮದ್ ಜಮೀಲ್ ಝೈನೂ, ಶೈಖ್ ‌ಅಬ್ದುರ್‌-ರಹಾಮಾನ್ ಅಬ್ದುಸ್ಸಮದ್, ಶೈಖ್ ಅಲೀ ಹಸನ್ ಅಬ್ದುಲ್ ಹಮೀದ್ ಅಲ್ ಹಲಬೀ, ಶೈಖ್ ಸಲೀಮ್ ಅಲ್ ಹಿಲಾಲಿ ಮತ್ತು ಶೈಖ್ ಅಬ್ದುರ್‌-ರಹ್‌ಮಾನ್ ಅಬ್ದುಲ್ ಖಾಲಿಕ್ ಮುಂತಾದವರು ಶೈಖ್  ಅಲ್ಬಾನಿಯವರ (ರ) ಶಿಷ್ಯಗಣದಲ್ಲಿ ಒಳಪಟ್ಟವರಾಗಿದ್ದಾರೆ.

( ಡಾ. ಆಸಿಮ್ ಅಬ್ದುಲ್ಲಾಹ್ ಅಲ್ ಕರ್ಯಾತೀ ಬರೆದ ಶೈಖ್ ಅಲ್ಬಾನಿಯವರ (ರ) ಜೀವನ ಚರಿತ್ರೆಯಿಂದ)

ಪ್ರಸ್ತಾಪನೆ

ಮದ್‌ಹಬ್‌ನ ಇನಾಮ್‌ಗಳ ಅಭಿಪ್ರಾಯಗಳನ್ನು ಅನುಸರಿಸುವವರಿಗೆ ಒಂದು ಉಪದೇಶವಾಗಿ ಮತ್ತು ಅವರನ್ನು ಮಾತ್ರವಲ್ಲದೆ ಅವರಿಗಿಂತ ಕೆಳಗಿನ ಪದವಿಯನ್ನು ಹೊಂದಿರುವ ಇತರ ವಿದ್ವಾಂಸರನ್ನು ಅಂಧವಾಗಿ ತಕ್‌ಲೀದ್(1) ಮಾಡುತ್ತಾ ಅವರ ಮದ್‌ಹಬ್‌ಗಳನ್ನು ಮತ್ತು ಅವರ ಮಾತುಗಳನ್ನು, ಅವುಗಳು ಮುಗಿಲಿನಿಂದ ಅವತೀರ್ಣಗೊಂಡದ್ದೆಂಬ ಪರಿಭಾವನೆಯಲ್ಲಿ ಸಮರ್ಥಿಸುವವರಿಗೆ ಒಂದು ಸ್ಮರಣಿಕೆಯಾಗಿ ನಾನಿದನ್ನು ಬರೆಯುತ್ತಿರುವೆನು.
ಅಲ್ಲಾಹನು ಹೇಳುತ್ತಾನೆ
 [اتَّبِعُوا مَا أُنْزِلَ إِلَيْكُمْ مِنْ رَبِّكُمْ وَلَا تَتَّبِعُوا مِنْ دُونِهِ أَوْلِيَاءَ ۗ قَلِيلًا مَا تَذَكَّرُونَ]
“ ನಿಮಗೆ ನಿಮ್ಮ ಪ್ರಭುವಿನ ವತಿಯಿಂದ ಅವತೀರ್ಣಗೊಂಡದ್ದನ್ನು ಅನುಸರಿಸಿರಿ. ಅವನ ಹೊರತು ಇತರ ರಕ್ಷಾಧಿಕಾರಿಗಳನ್ನು ಅನುಸರಿಸದಿರಿ. ನೀವು ಅಲ್ಪ ಮಾತ್ರವೇ ಚಿಂತಿಸುತ್ತಿರುವಿರಿ.”(2)

ಅಬೂ ಹನೀಫಾ

ಮದ್‌ಹಬ್‌ಗಳ ಇಮಾಮ್‌ಗಳಲ್ಲಿ ಮೊದಲನೆಯವರು ಅಬೂ ಹನೀಫಾ ನುಅ್‌ಮಾನ್ ಇಬ್‌ನು ಸಾಬಿತ್ ಆಗಿದ್ದರು. ಅವರಿಂದ ಅವರ ಸಹಚರರು ಹಲವಾರು ರೀತಿಯ ವರದಿಗಳನ್ನು ಉಲ್ಲೇಖಿಸಿದ್ದಾರೆ. ವಾಸ್ತವವಾಗಿ ಅವೆಲ್ಲವೂ ನಮ್ಮನ್ನು ಒಂದೇ ಒಂದು ಲಕ್ಷ್ಯದೆಡೆಗೆ ಸಾಗಿಸುತ್ತವೆ. ಅದೇನೆಂದರೆ…………
[وُحُوبُ الأَخذ بِالْحَديث، وترك تقليد آراء الْأَئِمَّةِ الْمُخَالِفَةِ لَهُ]
“ಹದೀಸ್ ಸ್ವೀಕರಿಸಬೇಕಾದ ಅನಿವಾರ್ಯತೆ ಮತ್ತು ಅದಕ್ಕೆ ವಿರುದ್ಧವಾಗಿರುವ ಇಮಾಮ್‌ಗಳ ಅಭಿಪ್ರಾಯಗಳನ್ನು ತಕ್ ಲೀದ್ ಮಾಡುವುದರ ತಿರಸ್ಕರಣೆ.”
  ಅಬೂ ಹನೀಫಾ ಹೇಳುತ್ತಾರೆ
  [إِذَا صَحَ الْحَدِيثُ فَهُوَ مَذْهَبِي]
“ಹದೀಸ್ ಸಹೀಹ್ ಆಗಿದ್ದರೆ ಅದು ನನ್ನ ಮದ್‌ಹಬ್ ಆಗಿದೆ.”(3)
[لا يحل لأحد أن يَأْخُذَ بِقَوْلَنَا مَا لَمْ يَعْلَمْ مِنْ أَيْنَ أَخَذْنَاهُ]
“ ನಾವು ಹೇಳುವ ಅಭಿಪ್ರಾಯಗಳನ್ನು ನಾವು ಎಲ್ಲಿಂದ ಪಡೆದೆವೆಂದು ತಿಳಿದಿಲ್ಲವಾದರೆ ಅವುಗಳನ್ನು ಸ್ವೀಕರಿಸಲು ಯಾರಿಗೂ ಹಲಾಲ್ (ಧರ್ಮಸಮ್ಮತ) ಆಗಲಾರದು.”(4)
ಇನ್ನೊಂದು ವರದಿಯಲ್ಲಿ
[حَرَامٌ عَلَى مَنْ لَمْ يَعْرِفُ دَلِيلِي أَنْ يُفْتِي بكلامي]
“ನಾನು ನೀಡುವ ಪುರಾವೆಯನ್ನು ತಿಳಿಯದವನಿಗೆ ನನ್ನ ಅಭಿಪ್ರಾಯಗಳ ಆಧಾರದ ಮೇಲೆ ಫತ್ವಾ ನೀಡುವುದು ಹರಾಮ್ (ನಿಷಿದ್ಧ) ಆಗಿದೆ.”(5)
ಇನ್ನೊಂದು ವರದಿಯಲ್ಲಿ
[فإننا بشر، تَقُولُ الْقَوْلَ الْيَومَ وَتَرْجِعُ عَنْهُ غَدًا]
“ಯಾಕೆಂದರೆ ಖಂಡಿತವಾಗಿಯೂ ನಾವು ಮನುಷ್ಯರಾಗಿದ್ದೇವೆ. ಇಂದು ನಾವೊಂದು ಅಭಿಪ್ರಾಯವನ್ನು ಹೇಳುತ್ತೇವೆ ಮತ್ತು ನಾಳೆ ಅದನ್ನು ಹಿಂದೆಗೆಯುತ್ತೇವೆ.”(6)
ಇನ್ನೊಂದು ವರದಿಯಲ್ಲಿ
[وَيْحَكَ يَا يَعْقُوبَ لاَ تَكُتب كُلِّ مَا تَسْمَعُ منى، فإنِّي قَدْ أَرَى الرَّأَى الْيَوْمَ وَأَتْرُكُهُ غدًا، وَأَرَى الرَّأْيَ غَدًا وَأَتْرُكُهُ بَعْدَ غَد]
“ಓ ಯ‌ಅ್‌ಕೂಬ್! (7) ನನ್ನಿಂದ ಆಲಿಸುವುದೆಲ್ಲವನ್ನೂ ಬರೆದಿಡಬೇಡ. ಯಾಕೆಂದರೆ ಇಂದು ನಾನೊಂದು ಅಭಿಪ್ರಾಯವನ್ನು ಎತ್ತಿಹಿಡಿದರೆ ನಾಳೆ ಅದನ್ನು ಉಪೇಕ್ಷಿಸುತ್ತೆನೆ. ನಾಳೆ ಒಂದು ಅಭಿಪ್ರಾಯವನ್ನು ಎತ್ತಿಹಿಡಿದರೆ ನಾಡಿದ್ದು ಅದನ್ನು ಉಪೇಕ್ಷಿಸುತ್ತೇನೆ.”(8)
[إِذَا قُلْتُ قَوْلاً يُخَالِفُ كِتَابَ اللَّهِ تَعَالَى وَخَيْرَ الرَّسُولِ صَلَّى اللَّهُ عَلَيْهِ وَسَلَّمَ فَائرُ كُوا قَوْلِي]
“ಅಲ್ಲಾಹನ ಗ್ರಂಥ ಮತ್ತು ಪ್ರವಾದಿಯವರ (ಸ) ಹದೀಸ್‌ಗೆ ವಿರುದ್ಧವಾಗಿ ನಾನೇನಾದರೂ ಹೇಳಿದರೆ ನನ್ನ ತಿರಸ್ಕರಿಸಿರಿ.”(9)

ಮಾಲಿಕ್ ಇಬ್‌ನು ಅನಸ್

ಮಾಲಿಕ್ ಇಬ್‌ನು ಅನಸ್ (ರ) ಹೇಳುತ್ತಾರೆ
[إِنَّمَا أَنَا بَشَرٌ أُخْتِى وَأُصِيبُ، فَانْظُرُوا فِي رأيي ؛ فَكُلِّمَا وَافَقَ الْكِتَابَ وَالسُّنَّةَ فَخُذُوهُ، وَكُلَّمَا لَمْ يُوَافِقِ الْكِتَابِ وَالسُّنَّةَ فائر كوه]
“ನಾನೋರ್ವ ಮನುಷ್ಯ ಮಾತ್ರವಾಗಿದ್ದೇನೆ‌. ನನ್ನಿಂದ ಸರಿಯೂ ತಪ್ಪೂ ಸಂಭವಿಸುತ್ತದೆ. ಆದ್ದರಿಂದ ನನ್ನ ಅಭಿಪ್ರಾಯಗಳನ್ನು ಪರಿಶೀಲಿಸಿ, ಅವುಗಳನ್ನು ಕುರ್‌ಆನ್ ಮತ್ತು ಸುನ್ನತ್‌ಗೆ ಪೂರಕವಾಗಿರುವುದನ್ನು ಸ್ವೀಕರಿಸಿರಿ, ಕುರ್‌ಆನ್ ಮತ್ತು ಸುನ್ನತ್‌ಗೆ ಪೂರಕವಲ್ಲದಿರುವುದನ್ನು ತಿರಸ್ಕರಿಸಿರಿ.”(10)
[ليسَ أَحَدٌ بَعْدَ النَّبِيِّ صَلَّى اللَّهُ عَلَيْهِ وَسَلَّمَ إِلَّا وَيُؤْخَذُ مِنْ قَوْلِهِ وَيُتْرَكَ إِلَّا النبي صَلَّى اللهُ عَلَيْهِ وَسَلَّمَ]
“ ಪ್ರವಾದಿಯವರ (ಸ) ನಂತರ ಅವರ ಹೊರತು ಸ್ವೀಕಾರಯೋಗ್ಯ ಮತ್ತು ತಿರಸ್ಕಾರಯೋಗ್ಯ ಅಭಿಪ್ರಾಯಗಳಿರದ ಒಬ್ಬನೇ ವ್ಯಕ್ತಿಯೂ ಇಲ್ಲ.”(11)
ಇಬ್‌ನು ವಹಬ್ (ರ) ಹೇಳುತ್ತಾರೆ.
قَالَ ابْنُ وَهَب: سَمِعْتُ مَالِكًا سُئِلَ عَنْ تخليل أصابع الرِّجْلَيْنِ فِي الْوُضُوءِ فَقَالَ: لَيْسَ ذَلِكَ عَلَى النَّاسِ، قَالَ فتَرَكُهُ حَتَّى حَقَّ النَّاسُ فَقُلْتُ لَهُ عنْدَنَا في ذَلِكَ سُنَّةٌ، فَقَالَ وَمَا هِي؟ قُلْتُ حدَّثَنَا اللَّيْثُ بْنُ سَعْدِ وَابْنُ لَهِيعَةً وَعَمْرُو بْنُ الْحَارِثِ عَنْ يَزِيدَ بْنِ عَمْرٍو الْمَعَافِرِي عن أبي عبد الرَّحْمَنِ الْحُبْلِى عَنِ الْمُسْتَوْرِدِ بْنِ شَدَّادِ الْقُرْشِي قَالَ: رَأَيْتُ رسُولَ اللهِ صَلَّى اللهُ عَلَيْهِ وَسَلَّمَ يَدْلُكُ بِحَنْصَرِهِ مَا بَيْنَ أَصَابِعِ رِحْلَيْهِ، فَقَالَ إِنَّ هَذَا الْحَدِيثُ حَسَنٌ وَمَا سَمِعْتُ بِهِ فَط إِلا السَّاعَةَ، ثُمَّ سَمِعْتُهُ بَعْدَ ذَلِكَ يُسْأَلُ فيأمر بتخليل الأصابع
“ವುದೂ ಮಾಡುವಾಗ ಪಾದಗಳ ಬೆರಳುಗಳ ಮಧ್ಯೆ ನೀರು ಹಾಯಿಸುವುದರ ಕುರಿತು ಇಮಾಮ್ ಮಾಲಿಕ್‌ರೊಂದಿಗೆ ಪ್ರಶ್ನಿಸಲಾಯಿತು. ಅವರು ಹೇಳಿದರು: ‘ಜನರು ಅದನ್ನು ಮಾಡಬೇಕಾಗಿಲ್ಲ.’ ಜನರೆಲ್ಲಾ ಚದುರಿಹೋದ ನಂತರ ನಾನು ಹೇಳಿದೆ: ‘ಅದು ಸುನ್ನತ್ ಆಗಿದೆಯೆಂಬುದಕ್ಕೆ ನಮ್ಮ ಬಳಿ ಪುರಾವೆಯಿದೆ.’ ಅದೇನೆಂದು ಅವರು ಕೇಳಿದರು. ನಾನು ಹೇಳಿದೆ: ‘ಲೈಸ್ ಇಬ್‌ನು ಸ‌ಅದ್, ಇಬ್‌ನು ಲಹೀಅಃ ಮತ್ತು ಅಮ್ರ್ ಇಬ್ ನುಲ್ ಹಾರಿಸ್ ನಮಗೆ ಯಝೀದ್ ಇಬ್‌ನು ಅಮ್ರ್ ಅಲ್ ಮ‌ಆಫಿರೀಯಿಂದ, ಅವರು ಅಬೂ ಅಬ್ದಿರ್-ರಹ್‌ಮಾನ್ ಅಲ್ ಹುಬ್‌ಲೀಯಿಂದ , ಅವರು ಮುಸ್ತವ್‌ರಿದ್ ಇಬ್‌ನು ಶದ್ದಾದ್ ಅಲ್ ಕುರ್‌ಶೀಯಿಂದ ಈ ರೀತಿ ವರದಿ ಮಾಡಿದ್ದಾರೆ: ‘ಪ್ರವಾದಿಯವರು ತಮ್ಮ ಕಿರುಬೆರಳಿನಿಂದ ತಮ್ಮ ಪಾದದ ಬೆರಳುಗಳ ಮಧ್ಯೆ ಉಜ್ಜುವುದನ್ನು ನಾನು ಕಂಡಿದ್ದೇನೆ.’ ಮಾಲಿಕ್ ಹೇಳಿದರು: ‘ಈ ಹದೀಸ್ ಹಸನ್ ಆಗಿದೆ, ಇದುವರೆಗೆ ನಾನಿದನ್ನು ಆಲಿಸಲೇ ಇಲ್ಲ.’ ತದನಂತರ ಅವರೊಂದಿಗೆ (ವುದೂ ಮಾಡುವಾಗ ಪಾದಗಳ ಬೆರಳುಗಳ ಮಧ್ಯೆ ನೀರು ಹಾಯಿಸುವುದರ ಕುರಿತು) ಪ್ರಶ್ನಿಸಲ್ಪಟ್ಟಾಗ, ಬೆರಳುಗಳ ಮಧ್ಯೆ ನೀರು ಹಾಯಿಸಿ ತೊಳೆಯಬೇಕೆಂದು ಅವರು ಆದೇಶಿಸುತ್ತಿದ್ದುದಾಗಿ ನಾನು ಕಂಡಿರುವೆನು.”(12)

ಶಾಫಿಈ (ರ)

ಇಮಾಮ್ ಶಾಫಿಈಯವರಿಂದ (ರ) ಉಲ್ಲೇಖಿಸಲ್ಪಟ್ಟ ಉಲ್ಲೇಖಗಳು ಅತ್ಯಧಿಕವೂ ಅತಿಸುಂದರವೂ(13) ಆಗಿವೆ. ಅವರ ಅನುಯಾಯಿಗಳು ಅವುಗಳನ್ನು ಪೂರ್ಣವಾಗಿ ಅನುಸರಿಸುತ್ತಿದ್ದರು.
ಅವುಗಳಲ್ಲಿ
ما مِنْ أَحَدٍ إِلَّا وَتَذْهَبُ عَلَيْهِ سُنَّةٌ لِرَسُولِ الله صَلَّى اللهُ عَلَيْهِ وَسَلَّمَ وَتَعْرُبُ عَنْهُ فَمَهُمَا قُلْتُ مِنْ قَوْلٍ، أَوْ أَصَلْتُ مِنْ أَصْلِ فِيهِ عَنْ رَسُولِ اللهِ صَلَّى اللهُ عَلَيْهِ وَسَلَّمَ خِلافُ مَا قُلْتُ فَالْقَوْلُ مَا قَالَ رَسُولُ اللَّهِ صَلَّى اللهُ عَلَيْهِ وَسَلَّمَ، وَهُوَ قَوْلى
“ಓರ್ವನಿಗೆ ಅಲ್ಲಾಹನ ಸಂದೇಶವಾಹಕರ (ಸ) ಸುನ್ನತ್ ತಲುಪದೇ ಇರದು ಮತ್ತು ಅವನಿಂದ ವಿದೂರವಾಗದೆಯೂ ಇರಲಾರದು. ಆದ್ದರಿಂದ ನಾನೊಂದು ಅಭಿಪ್ರಾಯವನ್ನು ಹೇಳುವಾಗ ಅಥವಾ ಒಂದು ನಿಯಮವನ್ನು ಸ್ಥಾಪಿಸುವಾಗ ಅಲ್ಲಾಹನ ಸಂದೇಶವಾಹಕರ (ಸ) ಸುನ್ನತ್ ನಾನು ಹೇಳಿದ ಅಭಿಪ್ರಾಯವು ವಿರುದ್ಧವಾದರೆ, ಅಲ್ಲಾಹನ ಸಂದೇಶವಾಹಕರ (ಸ) ಮಾತೇ ನನ್ನ ಅಭಿಪ್ರಾಯವಾಗಿದೆ. “(14)
[أَجْمَعَ الْمُسْلِمُونَ عَلَى أَنَّ مَنِ اسْتَبَانَ لَـه سُنَّةٌ عَنْ رَسُولِ اللهِ صَلَّى اللهُ عَلَيْهِ وَسَلَّمَ؛ لَمْ يَحِلُّ لَهُ أَنْ يَدَعَهَا لِقَوْلِ أَحَدٍ]
“ಓರ್ವ ವ್ಯಕ್ತಿಗೆ ಅಲ್ಲಾಹನ ಸಂದೇಶವಾಹಕರ (ಸ) ಸುನ್ನತ್ ವ್ಯಕ್ತಗೊಂಡರೆ ಮತ್ತೆ ಯಾರೊಬ್ಬರ ಅಭಿಪ್ರಾಯಕ್ಕಾಗಿಯೂ ಅದನ್ನು ತ್ಯಜಿಸುವುದು ಅವನಿಗೆ ಧರ್ಮಸಮ್ಮತವಲ್ಲವೆಂಬ ಬಗ್ಗೆ ಮುಸ್ಲಿಮರು ಒಮ್ಮತಾಭಿಪ್ರಾಯವನ್ನು ಹೊಂದಿದ್ದಾರೆ.” (15)
إِذَا وَجَدْتُمْ فِي كِتَابِي خِلافُ سُنَّةِ رَسُولِ الله صَلَّى اللهُ عَلَيْهِ وَسَلَّمَ؛ فَقُولُوا بسُنَّةِ رَسُولِ اللهِ صَلَّى اللهُ عَلَيْهِ وَسَلَّمَ وَدَعُوا مَا قُلْتُ – وَفِي رِوَايَة – فَاتَّبِعُوهَا وَلا تَلْتَفِتُوا إِلَى قَوْلِ أَحَدٍ
“ಅಲ್ಲಾಹನ ಸಂದೇಶವಾಹಕರ (ಸ) ಸುನ್ನತ್ ವಿರುದ್ಧವಾಗಿ ನನ್ನ ಕಿತಾಬ್‌ನಲ್ಲಿ ಏನಾದರೂ ಕಂಡುಬಂದರೆ, ನೀವು ಅಲ್ಲಾಹನ ಸಂದೇಶವಾಹಕರ (ಸ) ಸುನ್ನತ್ತನ್ನು ಸ್ವೀಕರಿಸಿರಿ ಮತ್ತು ನನ್ನ  ಮಾತನ್ನು ತಿರಸ್ಕರಿಸಿರಿ -ಇನ್ನೊಂದು ವರದಿಯಲ್ಲಿ -‌ನೀವು ಸುನ್ನತ್ತನ್ನು ಅನುಸರಿಸಿರಿ ಮತ್ತು ಯಾರೊಬ್ಬರ ಮಾತಿನೆಡೆಗೂ ತಿರುಗಿ ನೋಡದಿರಿ.”(16)
[إِذَا صَحَ الْحَدِيثُ فَهُوَ مُذْهَبِي]
“ಹದೀಸ್ ಸಹೀಹ್ ಆಗಿದ್ದರೆ ಅದು ನನ್ನ ಮದ್‌ಹಬ್ ಆಗಿದೆ “(17)
أَنْتُمْ أَعْلَمُ بِالْحَدِيثِ وَالرِّجَالِ مِنّى ، فَإِذَا كَانَ الْحَدِيثُ الصَّحِيحُ فَاعْلَمُونِي بـ بِهِ أَيُّ شَيْءٍ يَكُونُ؛ كُوفِيًّا أَوْ بَصَرِيًّا أَوْ شَامِيًّا؛ حَتَّى أَذْهَبَ إِلَيْهِ إِذَا كَانَ صَحِيحًا
“ ನೀವು (18) ಹದೀಸ್ ಮತ್ತು ವರದಿಗಾರರ ಬಗ್ಗೆ ನನಗಿಂತಲೂ ಅಧಿಕ ತಿಳುವಳಿಕೆಯುಲ್ಲವರಾಗಿರುವಿರಿ. ಆದ್ದರಿಂದ ಹದೀಸೊಂದು ಸಹೀಹ್ ಆದರೆ ಅದೇನಾಗಿದ್ದರೂ ಅದನ್ನು ನನಗೆ ತಿಳಿಸಿರಿ. ಅದು ಕೂಫಾ, ಬಸ್ರಾ ಅಥವಾ ಸಿರಿಯಾದಿಂದಾದರೂ ಸರಿ. ಅದು ಸಹೀಹ್ ಆಗಿದ್ದರೆ ಅದು ನನ್ನ ಮದ್‌ಹಬ್ ಆಗಿದೆ. “(19)
[كُلُّ مَسْأَلَة صَحَّ فِيهَا الْخَبَرُ عَنْ رَسُولَ الله صَلَّى اللهُ عَلَيْهِ وَسَلَّمَ عِنْدَ أَهْلِ النَّقْلِ بخلاف ما قُلْتُ فَأَنَا رَاجِعٌ عَنْهَا في حاتِي وَبَعْدَ مَوْتَى]
“ಪ್ರತಿಯೊಂದು ವಿಷಯದಲ್ಲಿಯೂ ನಾನು ಹೇಳಿದ್ದಕ್ಕೆ ವಿರುದ್ಧವಾಗಿ ಹದೀಸ್ ವಿದ್ವಾಂಸರು ಅಲ್ಲಾಹನ ಸಂದೇಶವಾಹಕರಿಂದ ಒಂದು ಸುನ್ನತ್ತನ್ನು ಸಹೀಹ್ ಆಗಿ ಕಂಡುಕೊಂಡರೆ ನನ್ನ ಜೀವಿತಾವಧಿಯಲ್ಲಿಯೂ ಮರಣಾನಂತರವೂ ನಾನು ನನ್ನ ಅಭಿಪ್ರಾಯವನ್ನು ಹಿಂದೆಗೆದುಕೊಳ್ಳತ್ತೇನೆ.” (20)
[إِذَا رَأَيْتُمُونِي أَقُولُ قَوْلاً، وَقَدْ صَحَ عَنِ النَّبِيِّ صَلَّى اللهُ عَلَيْهِ وَسَلَّمَ خِلافَهُ فَاعْلَمُوا أَنَّ عَقْلَى قَدْ ذَهَبٌ]
“ನಾನು ಒಂದು ಅಭಿಪ್ರಾಯವನ್ನು ಹೇಳುವುದಾಗಿ ನೀವು ಕಂಡರೆ ಮತ್ತು ಅದಕ್ಕೆ ವಿರುದ್ಧವಾಗಿ ಪ್ರವಾದಿಯವರ (ಸ) ಹದೀಸ್ ಸಹೀಹ್ ಆಗಿದ್ದರೆ, ನನ್ನ ಬುದ್ಧಿಮತ್ತೆಯು ಕಡಿದುಕೊಂಡದೆಯೆಂದೇ ತಿಳಿದುಕೊಳ್ಳಿರಿ.”(21)
[كُلُّ مَا قُلْتُ، فَكَانَ عَنِ النَّبِيِّ صَلَّى اللَّهُ عَلَيْهِ وَسَلَّمَ خِلافُ قَوْلِى مِمَّا يَصُحُ فَحَدِيثُ النَّبِيِّ صَلَّى اللَّهُ عَلَيْهِ وَسَلَّمَ أولى، فَلا تُقَلِّدوني]
“ನಾನು ಹೇಳುವ ಮಾತಿಗೆ ಪ್ರವಾದಿಯವರ (ಸ) ಸಹೀಹ್ ಆದ ಹದೀಸೊಂದು ತದ್ವಿರುದ್ಧವಾಗಿದ್ದರೆ, ಪ್ರವಾದಿಯವರ (ಸ) ಹದೀಸನ್ನು ಅನುಸರಿಸಿರಿ, ನನ್ನನ್ನು ತಕ್‌ಲೀದ್ ಮಾಡಬೇಡಿ. “(22)
[كُلُّ حَدِيثٍ عَنِ النَّبِيِّ صَلَّى اللهُ عَلَيْ وَسَلَّمَ فَهُوَ قَوْلى، وَإِنْ لَمْ تَسْمَعُوهُ مِنِّى]
“ಪ್ರವಾದಿಯವರ (ಸ) ಹದೀಸ್‌ಗಳೆಲ್ಲವೂ ನನ್ನ ಅಭಿಪ್ರಾಯಗಳಾಗಿವೆ, ನೀವು ನನ್ನಿಂದ ಅವುಗಳನ್ನು ಆಲಿಸದಿದ್ದರೂ ಕೂಡ.” (23)

ಅಹ್ಮದ್ ಇಬ್‌ನು ಹಂಬಲ್ (ರ)

ಇಮಾಮ್ ಅಹ್ಮದ್ ಇಬ್‌ನು ಹಂಬಲ್ ಸುನ್ನತ್ತನ್ನು ಶೇಖರಿಸುವುದರಲ್ಲಿ ಹಾಗೂ ಅದನ್ನು ಅನುಸರಿಸುವುದರಲ್ಲಿ ಇತರೆಲ್ಲರಿಗಿಂತಲೂ ಮುಂಚೂಣಿಯಲ್ಲಿದ್ದರು. ತಿದ್ದುಪಡಿಗಳನ್ನು ಮತ್ತು ಅಭಿಪ್ರಾಯಗಳನ್ನು ಹೊಂದಿರುವ ಗ್ರಂಥವೊಂದನ್ನು ಬರೆಯಲು ಅವರು ಅಸಹ್ಯಪಡುತ್ತಿದ್ದರು.(24) ಆದ್ದರಿಂದ ಅವರು ಹೇಳುತ್ತಾರೆ
[لا تقلدني، ولا تقلد مالكا و ا ولا الشافعي ولا الأَوْرَائِي وَلَا الثَّوْرِيُّ، وَخُذْ مِنْ أَيْنَ أَخَذُوا]
“ನನ್ನನ್ನು ತಕ್‌ಲೀದ್ ಮಾಡಬೇಡ, ಮಾಲಿಕ್‌ರನ್ನಾಗಲಿ, ಶಾಫಿಈಯವರನ್ನಾಗಲಿ, ಔಝಾಈಯವರನ್ನಾಗಲಿ, ಸೌರೀಯವರನ್ನಾಗಲಿ, ಯಾರನ್ನೂ ತಕ್‌ಲೀದ್ ಮಾಡಬೇಡ. ಅವರೆಲ್ಲರೂ ಎಲ್ಲಿಂದ ಶೋಧಿಸಿದರೋ ಅಲ್ಲಿಂದಲೇ ಶೋಧಿಸು.”(25)
[وفي رواية: لا تُقَلِّدُ دِينَكَ أَحَدًا مِنْ هَؤُلَاءِ مَا جَاءَ عَنِ النَّبِيِّ صَلَّى اللهُ عَلَيْهِ وَسَلَّمَ وأَصْحَابِهِ فَخُذْ بِهِ، ثُمَّ التَّابِعِينَ بَعْدُ الرَّجُلُ فِيهِ مُخير]
ಇನ್ನೊಂದು ವರದಿಯಲ್ಲಿ
 “ನಿನ್ನ ದೀನನ್ನು ಇವರಲ್ಲೊಬ್ಬರಿಂದಲೂ ತಕ್‌ಲೀದ್ ಮಾಡಬೇಡ, ಪ್ರವಾದಿಯವರಿಂದ (ಸ) ಮತ್ತು ಅವರ ಸಹಾಬಿಗಳಿಂದ ಬಂದುದೆಲ್ಲವನ್ನೂ ಸ್ವೀಕರಿಸು, ಆಯ್ಕೆ ಬಯಸುವವರು ನಂತರ ತಾಬಿಉಗಳಿಂದಲೂ ಸ್ವೀಕರಿಸಲಿ.”(26)
ಅವರೊಮ್ಮೆ ಹೇಳಿದರು
[الإتباع أَنْ يَتَّبِعَ الرَّجُلُ مَا جَاءَ عَنِ النَّبِيِّ صَلَّى اللهُ عَلَيْهِ وَسَلَّمَ وَعَنْ أَصْحَابه، ثُمَّ هُوَ مِنْ بَعْدُ التابعين مُخير]
“ಇತ್ತಿಬಾಅ್ ಎಂದರೆ ಓರ್ವ ವ್ಯಕ್ತಿಯು ಪ್ರವಾದಿಯವರಿಂದ (ಸ) ಮತ್ತು ಸಹಾಬಿಗಳಿಂದ ಬಂದುದನ್ನು ಅನುಸರಿಸುವುದಾಗಿದೆ ಮತ್ತು ಆಯ್ಕೆ ಬಯಸುವವರು ನಂತರ ತಾಬಿಉಗಳಿಂದ ಬಂದುದನ್ನು ಅನುಸರಿಸಲಿ.”(27)
[رَأَي الْأَوْزَائِي، وَرَأَي مالك، وَرَأَي أَبــــــــى حَنِيفَةَ كُلُّهُ رَأْيِّ، وَهُوَ عِنْدِي سَوَاءٌ، وَإِنَّمَا الْحُجَّةُ فِي الْآثَارِ]
“ಔಝಾಈಯವರ (ರ) ಅಭಿಪ್ರಾಯ, ಮಾಲಿಕ್‌ರವರ(ರ) ಅಭಿಪ್ರಾಯ, ಅಬೂ ಹನೀಫಾರವರ(ರ) ಅಭಿಪ್ರಾಯ ಇವೆಲ್ಲವೂ ಕೇವಲ ಅಭಿಪ್ರಾಯಗಳಾಗಿವೆ ಮತ್ತು ಇವೆಲ್ಲವೂ ನನ್ನ ದೃಷ್ಟಿಯಲ್ಲಿ ಸಮಾನವಾಗಿದವೆ. ಖಂಡಿತವಾಗಿಯೂ ಪುರಾವೆಯಿರುವುದು ಹದೀಸ್‌ಗಳಲ್ಲಿ ಮಾತ್ರವಾಗಿದೆ.”(28)
[منْ رَدَّ حَدِيثَ رَسُولِ اللهِ صَلَّى اللهُ عَلَيْهِ وَسَلَّمَ؛ فَهُوَ عَلَى شَفَا هَلَكَة]
“ಯಾರಾದರೂ ಪ್ರವಾದಿಯವರ (ಸ) ಹದೀಸನ್ನು ತಿರಸ್ಕರಿಸಿದರೆ ಖಂಡಿತವಾಗಿಯೂ ಅವನು ಸರ್ವನಾಶದ ಅಂಚಿನಲ್ಲಿದ್ದಾನೆ.”(29)

ಉಪಸಂಹಾರ

ಇವೆಲ್ಲವೂ ಹದೀಸ್‌ಗಳಿಗೆ ಪ್ರಾಮುಖ್ಯತೆಯನ್ನು ನೀಡಬೇಕೆಂಬ ಬಗ್ಗೆ ಮತ್ತು ಸ್ಪಷ್ಟವಾದ ಪುರಾವೆಯ ಹೊರತು ತಮ್ಮನ್ನು ತಕ್‌ಲೀದ್ ಮಾಡಬಾರದೆಂಬುದರ ಬಗ್ಗೆ ಇಮಾಮ್‌ಗಳು ಹೇಳಿದ ಸುಸ್ಪಷ್ಟವಾದ ಮಾತುಗಳಾಗಿವೆ. ಆದ್ದರಿಂದ ಇಲ್ಲಿ ತರ್ಕಗಳಿಗಾಗಲಿ, ವ್ಯಾಖ್ಯಾನಗಳಿಗಾಗಲಿ ಸ್ಥಾನವಿಲ್ಲ. ಆದ್ದರಿಂದ ಯಾರಾದರೂ ದೃಢಪಟ್ಟ ಸುನ್ನತ್‌ಗೆ ಅಂಟಿಕೊಂಡು ಅದಕ್ಕೆ ವಿರುದ್ಧವಾಗಿರುವ ತಮ್ಮ ಇಮಾಮ್‌ಗಳ ಅಭಿಪ್ರಾಯಗಳನ್ನು ತಿರಸ್ಕರಿಸಿದರೆ ವಾಸ್ತವವಾಗಿ ಅವನು ತಾನು ಅನುಸರಿಸುವ ಮದ್‌ಹಬ್‌‌ಗೆ ವಿರುದ್ಧವಾಗಿ ಹೋಗುವುದಿಲ್ಲ ಅಥವಾ ಇಮಾಮ್‌ಗಳ ಮಾರ್ಗದಿಂದ ಹೊರಹೋಗುವುದಿಲ್ಲ. ಬದಲಾಗಿ ಅವನು ಅವರೆಲ್ಲರನ್ನೂ ಅನುಸರಿಸುವವನಾಗಿರುತ್ತಾನೆ ಹಾಗೂ ಎಂದೆಂದಿಗೂ ಕಡಿಯದಂತಹ ಬಲವಾದ ಪಾಶವನ್ನು ಬಿಗಿಯಾಗಿ ಹಿಡಿದುಕೊಳ್ಳುವವನಾಗಿರುತ್ತಾನೆ. ಆದರೆ ತಮ್ಮ ಇಮಾಮ್‌ಗಳ ಅಭಿಪ್ರಾಯಕ್ಕೆ ವಿರುದ್ಧವಾಗಿದೆಯೆಂಬ  ಒಂದೇ ಒಂದು ಕಾರಣಕ್ಕಾಗಿ ಪ್ರವಾದಿಯವರ ಸುನ್ನತ್ತನ್ನು ತಿರಸ್ಕರಿಸುವವನು ಹಾಗಿರಲಾರನು. ಅವನು ತನ್ಮೂಲಕ ಇಮಾಮ್‌ಗಳನ್ನು ಪೂರ್ಣವಾಗಿ ಧಿಕ್ಕರಿಸುವವನಾಗಿರುತ್ತಾನೆ. ಮಾತ್ರವಲ್ಲದೆ ಅವರ ಉಪರಿಯುಕ್ತ ಮಾತುಗಳಿಗೆ ವಿರುದ್ಧವಾಗಿ ಚಲಿಸುವವನಾಗಿರುತ್ತಾನೆ.
ಅಲ್ಲಾಹನು ಹೇಳುತ್ತಾನೆ
[فَلَا وَرَبِّكَ لَا يُؤْمِنُونَ حَتَّىٰ يُحَكِّمُوكَ فِيمَا شَجَرَ بَيْنَهُمْ ثُمَّ لَا يَجِدُوا۟ فِىٓ أَنفُسِهِمْ حَرَجًۭا مِّمَّا قَضَيْتَ وَيُسَلِّمُوا۟ تَسْلِيمًۭا]
“(ಓ ಪ್ರವಾದಿಯವರೇ) ತಮ್ಮ ಪ್ರಭುವಿನ ಮೇಲಾಣೆ, ಅವರು ತಮ್ಮೊಳಗೆ ಉಂಟಾಗುವ ಭಿನ್ನಾಭಿಪ್ರಾಯಗಳಿಗೆ ತಮ್ಮನ್ನು ನ್ಯಾಯಾಧಿಪತಿಯಾಗಿಸುವವರೆಗೆ, ಮತ್ತು ತಾವು ನೀಡುವ ತೀರ್ಪಿಗೆ ತಮ್ಮ ಮನಸ್ಸುಗಳಲ್ಲಿ ಏನನ್ನೂ ಅಂದುಕೊಳ್ಳದೆ ಸಂಪೂರ್ಣವಾಗಿ ತಲೆಬಾಗುವವರೆಗೆ ಅವರೆಂದೂ ವಿಶ್ವಾಸಿಗಳಾಗಲಾರರು.”(30)
[فَلْيَحْذَرِ الَّذِينَ يُخَالِفُونَ عَنْ أَمْرِهِ أَنْ تُصِيبَهُمْ فِتْنَةٌ أَوْ يُصِيبَهُمْ عَذَابٌ أَلِيمٌ]
“ಅವರ (ಪ್ರವಾದಿಯವರ) ಆದೇಶಕ್ಕೆ ವಿರುದ್ಧವಾಗಿ ಚಲಿಸುವವರು, ತಮಗೇನಾದರೂ ವಿಪತ್ತು ಸಂಭವಿಸುವುದನ್ನು ಅಥವಾ ವೇದನಾಯುಕ್ತವಾದ ಶಿಕ್ಷೆಯುಂಟಾಗುವುದನ್ನು ಕುರಿತು ಜಾಗ್ರತೆ ವಹಿಸಲಿ.”(31)
  ಹಾಫಿದ್ ಇಬ್‌ನು ರಜಬ್ (ರ) ಹೇಳುತ್ತಾರೆ
فَالْوَاحِبُ عَلَى كُلِّ مَنْ بَلَغَهُ أَمْرُ الرَّسُولِ صلَّى اللهُ عَلَيْهِ وَسَلَّمَ وَعَرَفَهُ أَنْ بيه للأمة، ويَنْصُحَ لَهُمْ، وَيَأْمُرَهُمْ باتباع أَمْرِهِ، وَإِنْ خَالَفَ ذَلِكَ رَأَي عَظِيم من الأُمَّةِ، فَإِنَّ أَمْرَ الرَّسُولِ صَلَّى اللهُ عَلَيْهِ وَسَلَّمَ أَحَقُّ أَنْ يُعَظِّمَ وَيُقْتَدَي بهِ مِنْ رَأَي أَي مُعظم قَدْ خَالَفَ أَمْرَهُ فِي بعض الأشياء خطأ، وَمِنْ هُنَا رَدَّ الصَّحَابَهُ وَمَنْ بَعْدَهُمْ عَلَى كُلِّ مُخَالِفِ سُنَّة صحيحة وَرُبَّمَا أَعْلَطُوا في الرد، لا بُعْضًا لَهُ بَلْ هُوَ مَحْبُوبٌ عِنْدَهُمْ مُعَظْمٌ فِي نُفُوسِهِمْ لَكِنْ رَسُولُ اللهِ صَلَّى اللهُ عَلَيْهِ وَسَلَّمَ أَحَبُّ إِلَيْهِمْ، وَأَمْرُهُ فَوْقَ أَمْرِ كُلِّ مَخْلُوقِ، فَإِذَا تعارَضَ أَمْرُ الرَّسُول صَلَّى اللهُ عَلَيْهِ وَسَلَّمَ وَأَمْرُ غَيْرِهِ؛ فَأَمْرُ الرَّسُول صَلَّى اللهُ عَلَيْهِ وَسَلَّمَ أَوْلَى أَنْ يُقَدَّمَ وَيُتَّبَعَ، وَلَا يَمْنَعُ مِنْ ذَلِكَ تَعْظِيمَ مَنْ خالَفَ أَمْرَهُ وَإِنْ كَانَ مَغْفُورًا لَهُ، بَلْ ذَلِكَ الْمُخَالِفُ الْمَغْفُورُ لَهُ لَا يَكْرَهُ أَنْ يُخَالِفَ أَمْرَهُ إِذَا ظَهَرَ أَمْرُ الرَّسُولِ صَلَّى اللَّهُ عَلَيْهِ وَسَلَّم بخلافه
“ಯಾರಿಗಾದರೂ ಪ್ರವಾದಿಯವರ (ಸ) ಆದೇಶವೊಂದು ತಲುಪಿದರೆ, ಅದು ಸಮುದಾಯದ ಓರ್ವ ಮಹಾನ್ ವ್ಯಕ್ತಿಯ ಅಭಿಪ್ರಾಯಕ್ಕೆ ವಿರುದ್ಧವಾಗಿದೆಯೆಂದು ಕಂಡುಕೊಂಡರೂ ಕೂಡ ಅದನ್ನು ಸಮುದಾಯಕ್ಕೆ ವಿವರಿಸಿ, ಅವರಿಗೆ ಉಪದೇಶ ನೀಡಿ, ಅವರು ಆ ಆದೇಶವನ್ನು ಅನುಸರಿಸುವಂತೆ ಆಜ್ಞಾಪಿಸಬೇಕಾದುದು ಅವನ ಮೇಲೆ ಕಡ್ಡಾಯವಾಗಿದೆ. ಯಾಕೆಂದರೆ ಯಾವುದೇ ವಿಷಯದಲ್ಲಿಯೂ ಪ್ರವಾದಿಯವರ (ಸ) ಆದೇಶಕ್ಕೆ ವಿರುದ್ಧವಾಗಿ ಅಬದ್ಧಪೂರ್ವಕವಾಗಿ ಯಾರಾದರೊಬ್ಬ ಮಹಾನ್ ವ್ಯಕ್ತಿಯು ಏ‌ನಾದರೂ ಅಭಿಪ್ರಾಯಪಟ್ಟರೆ, ಆ ಅಭಿಪ್ರಾಯಕ್ಕಿಂತಲೂ ಪ್ರವಾದಿಯವರ (ಸ) ಆದೇಶವನ್ನು ಗೌರವಿಸಬೇಕಾದುದು ಹಾಗೂ ಅದನ್ನು ಅನುಸರಿಸಬೇಕಾದುದು ಹೆಚ್ಚು ಮಹತ್ವವುಳ್ಳದ್ದಾಗಿದೆ. ಇದರಿಂದಾಗಿ ಸಹಾಬಿಗಳು ಮತ್ತು ಅವರ ನಂತರದವರು ಸಹೀಹಾದ ಸುನ್ನತ್‌ಗೆ ವಿರುದ್ಧವಾಗಿ ಅಭಿಪ್ರಾಯಹೊಂದುವವನನ್ನು ತಿರಸ್ಕರಿಸುತ್ತಿದ್ದರು. ಮತ್ತು ಕೆಲವೊಮ್ಮೆ ಅವರ ತಿರಸ್ಕಾರವು ಅತ್ಯಂತ ಕಠಿಣವಾಗಿರುತ್ತಿತ್ತು.(32) ಇದು ಅವರಿಗೆ ಅವನೊಂದಿಗಿರುವ ದ್ವೇಷದಿಂದಾಗಿರಲಿಲ್ಲ. ಹೊರತು ಅವನನ್ನು ಅವರು ಪ್ರೀತಿಸುತ್ತಿದ್ದರು ಮತ್ತು ಸ್ವತಃ ಅತ್ಯಂತ ಗೌರವಿಸುತ್ತಿದ್ದರು.
ಆದರೂ ಅವರಿಗೆ ಅವನಿಗಿಂತಲೂ ಹೆಚ್ಚು ಪ್ರೀತಿಪಾತ್ರರು ಪ್ರವಾದಿಯವರಾಗಿದ್ದರು (ಸ) ಮತ್ತು ಅವರಿಗೆ ಪ್ರವಾದಿಯವರ (ಸ) ಆದೇಶವು ಇತರೆಲ್ಲಾ ಸೃಷ್ಟಿಗಳ ಆದೇಶಗಳಿಗಿಂತಲೂ ಮಿಗಿಲಾಗಿತ್ತು. ಆದ್ದರಿಂದ ಇತರರ ಆದೇಶವು ಪ್ರವಾದಿಯವರ (ಸ) ವಿರುದ್ಧವಾದರೆ, ಆಯ್ಕೆಗೆ ಅತ್ಯಂತ ಅರ್ಹವಾದುದು ಮತ್ತು ಅನುಸರಣೆಗೆ ಅತ್ಯಂತ ಯೋಗ್ಯವಾದುದು ಪ್ರವಾದಿಯವರ (ಸ) ಆದೇಶವಾಗಿದೆ. ಆದರೆ ಇವಾವುದೂ ವಿರೋಧಾಭಿಪ್ರಾಯ ಪ್ರಕಟಿಸಿದ ಆ ವ್ಯಕ್ತಿಯನ್ನು ಗೌರವಿಸುವುದರಿಂದ ಅವರನ್ನು ತಡೆಯುತ್ತಿರಲಿಲ್ಲ. ಯಾಕೆಂದರೆ ಈ ಬಗ್ಗೆ ಆ ವ್ಯಕ್ತಿಗೆ ಕ್ಷಮೆಯಿದೆ. (33) ವಾಸ್ತವವಾಗಿ ವಿರೋಧಾಭಿಪ್ರಾಯ ಪ್ರಕಟಿಸಿದ ವ್ಯಕ್ತಿಗೆ ಪ್ರವಾದಿಯವರ (ಸ) ನೈಜ ಸುನ್ನತ್ ತನ್ನ ಅಭಿಪ್ರಾಯಕ್ಕೆ ವಿರುದ್ಧವಾಗಿದೆಯೆಂದು ಸ್ಪಷ್ಟವಾದರೆ ಅವನು ತನ್ನ ಅಭಿಪ್ರಾಯವನ್ನು ತ್ಯಜಿಸಿ, ಸುನ್ನತ್ತನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿರಲಿಲ್ಲ.”(34)
ಅವರು ತನ್ನ ಅನುಯಾಯಿಗಳಿಗೆ ಸುನ್ನತ್ತನ್ನು ಅನುಸರಿಸುವಂತೆ ಆದೇಶಿಸಿರುವಾಗ ಮತ್ತು ಸುನ್ನತ್‌ಗೆ ವಿರುದ್ಧವಾಗಿರುವ ಅಭಿಪ್ರಾಯಗಳೆಲ್ಲವನ್ನೂ ಉಪೇಕ್ಷಿಸುವಂತೆ ಅವರ ಮೇಲೆ ಕಡ್ಡಾಯಗೊಳಿಸಿರುವಾಗ ಅವರು ಸುನ್ನತ್ತನ್ನು ತಿರಸ್ಕರಿಸುವುದಾದರೂ ಹೇಗೆ? ತಾನು ಅದನ್ನು ಸ್ವೀಕರಿಸದಿದ್ದರೂ ಅಥವಾ ಅದಕ್ಕೆ ವಿರುದ್ಧವಾಗಿ ಅಭಿಪ್ರಾಯಪಟ್ಟಿದ್ದರೂ ಕೂಡ ಸಹೀಹಾದ ಸುನ್ನತ್ತನ್ನು ಮಾತ್ರ ತನ್ನ ಹೆಸರಲ್ಲಿ ಹೇಳಬೇಕೆಂದು ಇಮಾಮ್ ಶಾಫಿಈ (ರ) ತನ್ನ ಸಹಚರರಿಗೆ ಆದೇಶಿಸಿದ್ದಾರೆ. ಆದ್ದರಿಂದ ಹದೀಸ್ ವಿದ್ವಾಂಸರಾದ ಇಬ್‌ನು ದಕೀಕುಲ್ ಈದ್ (ರ) ಸಹೀಹಾದ ಹದೀಸ್‌ಗೆ ವಿರುದ್ಧವಾಗಿರುವ ನಾಲ್ಕು ಮದ್‌ಹಬ್‌ಗಳ ಅಭಿಪ್ರಾಯಗಳನ್ನು ಬೃಹತ್ ಸಂಪುಟಗಳಿರುವ ಕೃತಿಯೊಂದರಲ್ಲಿ ಶೇಖರಿಸಿ, ಆ ಕೃತಿಯ ಪ್ರಾರಂಭದಲ್ಲಿ ಬರೆಯುತ್ತಾರೆ
[إِنَّ نِسْبَةً هَذِهِ الْمَائِلَ إِلَى الأَئِمَّةِ الْمُجْتَهِدِينَ حَرَامٌ، وَإِنَّهُ يَجِبُ عَلَى الْفُقَهَاءِ لذِينَ لَهُمْ مَعْرِفَنَهَاء لَفَلا يَعْرُوهَا إِلَيْهِمْ فَيَكُذِبُوا عَلَيْهِمْ]
“ಈ ಕೃತಿಯಲ್ಲಿರುವುದನ್ನು ಮುಜ್‌ತಹಿದ್‌ಗಳಾದ ಇಮಾಮ್‌ಗಳ ಹೆಸರಿಗೆ ಸೇರ್ಪಡೆಗೊಳಿಸುವುದು ನಿಷಿದ್ಧವಾಗಿದೆ. ಇವುಗಳನ್ನು ಅವರಿಂದ ಉಲ್ಲೇಖಿಸಿ ಅವರ ಮೇಲೆ ಸುಳ್ಳಾರೋಪಿಸಬಾರದೆಂಬ ಕಾರಣದಿಂದ ಅವರ ಅಭಿಪ್ರಾಯಗಳನ್ನು ತಕ್‌ಲೀದ್ ಮಾಡುವ ಕರ್ಮಶಾಸ್ತ್ರ ವಿದ್ವಾಂಸರು ಇದನ್ನು ತಿಳಿದಿರುವುದು ಕಡ್ಡಾಯವಾಗಿದೆ. “(35)

1. ತಕ್‌ಲೀದ್‌ನ ಕುರಿತು ಇಮಾಮ್ ತಹಾವೀ (ರ) ಹೇಳುತ್ತಾರೆ

        لا يقلد إلا عَصَبِيٌّ أَوْ عَي

“ಪಕ್ಷಪಾತಿ ಅಥವಾ ಮೂರ್ಖನ ಹೊರತು ಇತರ ಯಾರು ತಕ್‌ಲೀದ್ ಮಾಡಲಾರರು.” ಇಬ್‌ನು ಆಬಿದೀನ್ ತನ್ನ ‘ರಸ್‌ಮುಲ್ ಮುಫ್‌ತೀ’ 1/32ರಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.

2. ಕುರ್‌ಆನ್ 73

3. ಇಬ್‌ನು ಆಬಿದೀನ್ ತನ್ನ ‘ಅಲ್ ಹಾಶಿಯತು ಅಲದ್ದುರ್-ರಿಲ್ ಮುಖ್ತಾರ್’ 1/63ರಲ್ಲಿ, ಮತ್ತು ‘ರಸ್‌ಮುಲ್ ಮುಫ್‌ತೀ’ 1/4ರಲ್ಲಿ, ಶೈಖ್ ಸಾಲಿಹ್ ಅಲ್ ಫುಲಾನೀ ತನ್ನ ‘ಈಕಾದುಲ್ ಹಿಮಮ್’ ಪುಟ 62ರಲ್ಲಿ.

ಇಬ್‌ನು ಆಬಿದೀನ್‌ರವರು ಇಬ್‌ನುಲ್ ಹುಮಾಮ್‌ರವರ ಗುರುವರ್ಯರಾದ ಇಬ್‌ನು ಶಹ್‌ನಃ ಅಲ್‌ಕಬೀರ್‌ರವರ ‘ಶರ್‌ಹುಲ್ ಹಿದಾಯ’ದಿಂದ ಈ ರೀತಿ ಉಲ್ಲೇಖಿಸಿದ್ದಾರೆ.

إذا صح الحديث، وكان على خلاف المذهب، عمل بالحديث، ويكون ذلك مدهه ولا يَخْرُجُ مُقَلِّدُهُ عَن كونه حبا بالعمل به، فقد من عن أبي خيفة آلة قال : إذا صح الحديث فهو مذهبي، وقد حكى ذلك الإمام ابن عبد البر عن أبي حنيفة وغيره من الأئمة 

“ಹದೀಸೊಂದು ಸಹೀಹ್ ಆಗಿದ್ದರೆ, ಮತ್ತು ಅದು ಮದ್‌ಹಬ್‌ಗೆ ವಿರುದ್ಧವಾಗಿದ್ದರೆ, ಹದೀಸನ್ನು ಅನುಸರಿಸಿ ಕಾರ್ಯಪ್ರವೃತ್ತರಾಗಬೇಕಾಗಿದೆ. ಯಾಕೆಂದರೆ ಆ ಹದೀಸ್ ಅವನ ಮದ್‌ಹಬ್ ಆಗಿರುತ್ತದೆ. ಹದೀಸನ್ನು ಅನುಸರಿಸಿ ಕಾರ್ಯವೆಸಗುವುದರಿಂದಾಗಿ ಅವನು ಹನಫೀ ಮದ್‌ಹಬ್‌ನಿಂದ ಹೊರಹೋಗಲಾರನು, ಯಾಕೆಂದರೆ ಆಬೂ ಹನೀಫಾರವರು (ರ) ‘ಹದೀಸ್ ಸಹೀಹ್ ಆದರೆ ಅದು ನನ್ನ ಮದ್‌ಹಬ್ ಆಗಿದೆ’ ಎಂದು ಹೇಳಿದ್ದಾಗಿ ದೃಢಪಟ್ಟಿದೆ. ಇದನ್ನು ಇಮಾಮ್ ಇಬ್‌ನು ಅಬ್ದುಲ್ ಬರ್-ರ್, ಅಬೂ ಹನೀಫಾ (ರ) ಹಾಗೂ ಮತ್ತಿತರ ಇಮಾಮ್‌ಗಳಿಂದ ಉಲ್ಲೇಖಿಸಿದ್ದಾರೆ. “

ಅಬೂ ಹನೀಫಾ (ರ) ಈ ರೀತಿ ಹೇಳಿರುವುದು ಅವರ ಪರಿಜ್ಞಾನದ ಮತ್ತು ದೇವಭಕ್ತಿಯ ಪರಿಪೂರ್ಣತೆಯಿಂದಾಗಿದೆ. ಅವರು ಹದೀಸ್‌ಗಳೆಲ್ಲವನ್ನೂ ಪಡೆದಿರಲಿಲ್ಲ ಎಂಬುದರ ಬಗ್ಗೆ ಅವರು ಸೂಚಿಸಿದ ದ್ಯೋತಕವಾಗಿದೆಯಿದು. ಇಮಾಮ್ ಶಾಫಿಈ (ರ) ಇದನ್ನು ಸ್ಪಷ್ಟವಾಗಿಯೇ ಹೇಳಿದ್ದಾರೆ. ತಮ್ಮನ್ನು ತಲುಪದ ಹದೀ‌ಸ್‌ಗಳಿಗೆ ವಿರುದ್ಧವಾಗಿ ಇಮಾಮ್‌ಗಳು ಸ್ವತಂತ್ರವಾದ ಅಭಿಪ್ರಾಯವನ್ನು ಹೊಂದುವುದು ಸ್ವಾಭಾವಿಕವಾಗಿದೆ. ಅಂತಹ ಸಂದರ್ಭಗಳಲ್ಲಿ ಸಹೀಹಾದ ಹದೀಸನ್ನು ಸ್ವೀಕರಿಸಿ ಅದನ್ನು ತಮ್ಮ ಮದ್‌ಹಬನ್ನಾಗಿ ಮಾಡಬೇಕೆಂಬುದಾಗಿದೆ ಅವರ ಅಭಿಮತ. ಅಲ್ಲಾಹನು ಅವರೆಲ್ಲರ ಮೇಲೂ ಕರುಣೆ ತೋರಲಿ.

4. ಇಬ್‌ನು ಅಬ್ದುಲ್ ಬರ್-ರ್ ತನ್ನ ‘ಅಲ್ ಇನ್ತಿ ಕಾಉ ಫೀ ಫದಾಇಲಿ ಸ್ಸಲಾಸತಿಲ್ ಅಇಮ್ಮತಿಲ್ ಫುಕಹಾಅ್’ ಪುಟ 145ರಲ್ಲಿ, ಇಬ್‌ನುಲ್ ಕಯ್ಯಿಮ್ ತನ್ನ ‘ಇಅ್‌ಲಾಮುಲ್ ಮುವಕ್ಕಿಈನ್’ 2/309ರಲ್ಲಿ, ಇಬ್‌ನು ಆಬಿದೀನ್ ತನ್ನ ‘ಅಲ್ ಹಾಶಿಯತು ಆಲಲ್ ಬಹ್‌ರಿ ರಾ-ರ್‌ಇಕ್ ‘6/293ರಲ್ಲಿ ಮತ್ತು ‘ರಸ್‌ಮುಲ್ ಮುಫ್‌ತೀ’ ಪುಟ 29,32ರಲ್ಲಿ.

5. ಶ‌ಅ್‌ರಾನೀ ತನ್ನ ‘ಅಲ್ ಮೀಝಾನ್’ 1/55ರಲ್ಲಿ.

6. ಇಬ್‌ನು ಅಬ್ದುಲ್ ಬರ್-ರ್, ಇಬ್‌ನುಲ್ ಕಯ್ಯಿಮ್ ಮುಂತಾದವರಿಂದ ವರದಿಯಾದ ಈ ರಿವಾಯತ್ತನ್ನು ಶೈಖ್ ಸಾಲಿಹ್ ಅಲ್ ಫುಲಾನೀ ತನ್ನ ‘ಈಕಾದುಲ್ ಹಿಮಮ್’ ಪುಟ 65ರಲ್ಲಿ ಉಲ್ಲೇಖಿಸಿದ್ದಾರೆ.

7. ಅರ್ಥಾತ್ ಅಬೂ ಯೂಸುಫ್, ಅಬೂ ಹನೀಫಾರವರ (ರ) ಪ್ರಮುಖ ಶಿಷ್ಯ.

8. ಅಬ್ಬಾಸು ದ್ದೌರೀಯಿಂದ ಶೇಖರಿಸಲ್ಪಟ್ಟ ಈ ರಿವಾಯತ್ತನ್ನು ಇಬ್‌ನು ಮ‌ಈನ್ ತನ್ನ ‘ಆತ್ತಾರೀಖ್’ 6/77/1ರಲ್ಲಿ ಅಬೂ ಹನೀಫಾರವರ (ರ) ಶಿಷ್ಯನಾದ ಝಫರ್‌ರಿಂದ  ಸಹೀಹಾದ ಸನದ್‌ನೊಂದಿಗೆ ಉಲ್ಲೇಖಿಸಿದ್ದಾರೆ. ಇಬ್‌ನು ಹನೀಫಾರವರ (ರ) ಸಹಚರರಾದ ಝಫರ್, ಅಬೂ ಯೂಸುಫ್, ಆಫಿಯಃ ಇಬ್‌ನು ಯಝೀದ್ ಮುಂತಾದವರಿಂದಲೂ ಇದೇ ರೀತಿ ಉಲ್ಲೇಖಿಸಲ್ಪಟ್ಟಿದೆ. (ನೋಡಿ ‘ಈಕಾದುಲ್ ಹಿಮಮ್’ ಪುಟ 52) ಇಬ್‌ನುಲ್ ಕಯ್ಯಿಮ್ ತನ್ನ ‘ಇಅ್‌ಲಾಮುಲ್ ಮುವಕ್ಕಿಈನ್’ 2/344ರಲ್ಲಿ

ಅಬೂ ಯೂಸುಫ್‌ರಿಂದ ಇದು ವರದಿ ಮಾಡಲ್ಪಟ್ಟಿದೆಯೆಂಬ ಬಗ್ಗೆ ಖಡಾಖಂಡಿತವಾಗಿ ಹೇಳಿದ್ದಾರೆ. ಇಮಾಮ್ ಅಬೂ ಹನೀಫಾ (ರ) ಕಿಯಾಸ್‌ನ ಆಧಾರದ ಮೇಲೆ ಅಭಿಪ್ರಾಯಗಳನ್ನು ಹೊಂದುತ್ತಿದ್ದರು. ಒಂದು ರೀತಿಯ ಕಿಯಾಸ್ ಮಾಡಿದ ನಂತರ ಅವರಿಗೆ ಇನ್ನೊಂದು ರೀತಿಯ ಕಿಯಾಸ್ ಹೆಚ್ಚು ಪ್ರಬಲವೆಂದು ಕಂಡುಬಂದರೆ, ಅಥವಾ ಪ್ರವಾದಿಯವರ (ಸ) ಹದೀಸೊಂದು ಸಹೀಹಾಗಿ ಅವರನ್ನು ತಲುಪಿದರೆ ತಮ್ಮ ಪೂರ್ವಾಭಿಪ್ರಾಯವನ್ನು ಉಪೇಕ್ಷಿಸಿ ಅವರು ಹೊಸ ಅಭಿಪ್ರಾಯವನ್ನು ಹೊಂದುತ್ತಿದ್ದರು.

ಇಮಾಮ್ ಶ‌ಅ್‌ರಾನಿ (ರ) ಬರೆಯುತ್ತಾರೆ.

وَاعْتقَادُنَا وَاعْتقاد كل مصنف في الإمام أبي حنيفة له لو عاش حتى دولت الشريعة، وبعد رحيل الحفاظ في جمعها من البلاد والتعور وظفر بهاء الأخذ بها ولرك كل قياس كان قاه، وكان القياس قُلْ فِي مَذْهَبِهِ كَمَا قُل في مذهب غيره بالية إليه، لكن لما كانت أدلة الشريعة لفرقة في عمره مع التابعين وتابع التابعين في المدائن والقرى والنعورة كثر القياس في مذهبه بالنسبة إلى غيره من الأئمة ضرورة لعدم وجود الشعر في تلك المسائل التي قام فيها، بخلاف غيره من الأئمة، فإن الحفاظ كَانُوا قَدْ رَحلُوا في طلب الأحاديث وجمعها فِي عَصْرِهِمْ مِنَ الْمَدَائِنِ وَالْقُرَى، وَقَوْلُوهَا فحاوية أحاديث الشريعة بعضها بعضا، فَهَذَا كَانَ سبب كثرة القياس في مذهه، وقلته في مذاهب غيره الميزان وهذا مختصره  

“ನಮ್ಮ ನಂಬಿಕೆ ಮತ್ತು ಅಬೂ ಹನೀಫಾರವರ (ರ) ಕುರಿತು ಸಂಶೋಧನೆ ನಡೆಸುವವರ ನಂಬಿಕೆಯೇನೆಂದರೆ ಒಂದು ವೇಳೆ ಹದೀಸ್‌ಗಳೆಲ್ಲವೂ ಕ್ರೋಢೀಕೃತಗೊಳ್ಳುವವರೆಗೆ ಮತ್ತು ಹದೀಸ್ ಸಂಗ್ರಹಕ್ಕೋಸ್ಕರ ವಿವಿಧ ದೇಶಗಳತ್ತ ಸಾಗಿದ ಹದೀಸ್ ಸಂರಕ್ಷಕರು ಆಗಮಿಸುವವರೆಗೆ ಅಬೂ ಹನೀಫಾ (ರ) ಜೀವಿಸಿರುತ್ತಿದ್ದರೆ ಖಂಡಿತವಾಗಿಯೂ ಅವರು ಹದೀಸ್‌ಗಳನ್ನು ಸ್ವೀಕರಿಸುತ್ತಿದ್ದರು ಮತ್ತು ತಮ್ಮ ಕಿಯಾಸ್‌ಗಳೆಲ್ಲವನ್ನೂ ಉಪೇಕ್ಷಿಸುತ್ತಿದ್ದರು. ಅವರ ಮದ್‌ಹಬ್‌ನಲ್ಲಿರುವ ಕಿಯಾಸ್‌ನ ಪ್ರಮಾಣವು ಇತರ ಮದ್‌ಹಬ್‌ಗಳಲ್ಲಿರುವಷ್ಟೇ ಆಗಿದೆ. ಆದರೆ ಶರೀಅತ್‌ನ ಪುರಾವೆಗಳು ತಾಬಿಉಗಳೊಂದಿಗೆ ಮತ್ತು ತಾಬಿಉತ್ತಾಬಿಇಗಳೊಂದಿಗೆ ವಿವಿಧ ದೇಶಗಳಲ್ಲಿ ಹಂಚಿ ಹೋಗಿದ್ದುದರಿಂದ , ಮತ್ತು ಅಬೂ ಹನೀಫಾರ (ರ) ಜೀವಿತಾವಧಿಯಲ್ಲಿ ಅವುಗಳು ಶೇಖರಿಸಲ್ಪಡದ್ದರಿಂದ, ಮತ್ತು ಇತರ ಇಮಾಮ್‌ಗಳಿಗೆ ಲಭಿಸಿದಂತೆ ಅವರು ಕಿಯಾಸ್ ನಡೆಸಿದ ವಿಷಯಗಳಿಗೆ ಸೃಷ್ಟವಾದ ಆಧಾರಗಳು ಅಲಭ್ಯವಾಗಿದ್ದುದರಿಂದ, ಇತರ ಮದ್‌ಹಬ್‌ಗಳಿಗೆ ಹೋಲಿಸಲ್ಪಟ್ಟಾಗ ಅವರ ಮದ್‌ಹಬ್‌ನಲ್ಲಿ ಕಿಯಾಸ್‌ನ ಅಂಶವು ಅಧಿಕವಾಗಿರುವುದು ಅವಶ್ಯಕವಾಗಿದೆ. ತದನಂತರ ಹದೀಸ್ ವಿದ್ವಾಂಸರು ದೂರದ ದೇಶಗಳಿಗೆ ತೆರಳಿ, ಹದೀಸ್‌ಗಳನ್ನು ಶೇಖರಿಸಿ ಅವುಗಳನ್ನು ಬರೆದರು. ಆಗ ಕೆಲವು ಹದೀಸ್‌ಗಳು ಇತರ ಹದೀಸ್‌ಗಳಿಗೆ ಉತ್ತರವಾಗಿ ಮೂಡಿಬಂದವು. ಇತರ ಮದ್‌ಹಬ್‌ಗಳಿಗೆ ಹೋಲಿಸಿದರೆ ಹನಫೀ ಮದ್ ಹಬ್ ನಲ್ಲಿ ಕಿಯಾಸ್ ಅಧಿಕವಾಗಿರುವುದು ಇದರಿಂದಾಗಿದೆ” (ಅಲ್ ಮೀಝಾನ್ 1/62)

ಅಬುಲ್ ಹಸನಾತ್ ಅಲ್ಲಕ್‌ನವೀ (ರ) ತನ್ನ ‘ಅನ್ನಾಫಿ‌ಉಲ್ ಕಬೀರ್’ ಪುಟ 135ರಲ್ಲಿ ಇದರ ಬಗ್ಗೆ ಸುವಿಸ್ತಾರವಾಗಿ ಬರೆದಿದ್ದಾರೆ. ಅಧಿಕ ಮಾಹಿತಿ ಬಯಸುವವರು ಅದನ್ನು ವೀಕ್ಷಿಸಲಿ.

ಅಬೂ ಹನೀಫಾ (ರ) ಉದ್ದೇಶರಹಿತವಾಗಿ ಸಹೀಹಾದ ಹದೀಸ್‌ಗಳಿಗೆ ವಿರುದ್ಧವಾದ ಅಭಿಪ್ರಾಯಗಳನ್ನು ಹೊಂದಿದಕ್ಕಿರುವ ನ್ಯಾಯೀಕರಣವು ಸ್ವೀಕಾರಯೋಗವಾದ ಕಾರಣವಾಗಿದೆ. ಯಾಕೆಂದರೆ ಅಲ್ಲಾಹನು ಓರ್ವ ವ್ಯಕ್ತಿಯ ಮೇಲೆ ಅವನ ಸಾಮಾರ್ಥ್ಯಕ್ಕಿಂತಲೂ ಅಧಿಕ ಭಾರವನ್ನು ಹೊರಿಸಲಾರನು. ಆದ್ದರಿಂದ ಸಾಧಾರಣ ಜನರು ಮಾಡುವಂತೆ ಅಬೂ ಹನೀಫಾರನ್ನು (ರ) ಹಿಯಾಳಿಸುವುದು ಸರಿಯಲ್ಲ. ಅವರು ಮುಸ್ಲಿಮರ ನೇತಾರರಾಗಿರುವುದರಿಂದ ಮತ್ತು ಅವರ ಮೂಲಕ ಈ ಧರ್ಮ ಮತ್ತು ಅದರ ಶಾಖೆಗಳು ನಮಗೆ ತಲುಪಿರುವುದರಿಂದ ಅವರು ಸರಿಯಾಗಿದ್ದರೂ ತಪ್ಪಾಗಿದ್ದರೂ ಅಲ್ಲಾಹನ ಬಳಿ ಅವರಿಗೆ ಉತ್ತಮವಾದ ಪ್ರತಿಫಲವು ಮಾತ್ರವೇ ಲಭಿಸುವುದು. ಆದರೆ ಸಹೀಹಾದ ಹದೀಸ್‌ಗಳಿಗೆ ವಿರುದ್ಧವಾಗಿರುವ ಅವರ ಅಭಿಪ್ರಾಯಗಳಿಗೆ ಅಂಟಿಕೊಂಡಿರುವುದು ಅವರ ಅನುಯಾಯಿಗಳಿಗೆ ಆನುವದನೀಯವಲ್ಲ. ಯಾಕೆಂದರೆ ಉಪರಿಯುಕ್ತ ಉಲ್ಲೇಖಗಳು ಹೇಳುವಂತೆ ಆ ಅಭಿಪ್ರಾಯಗಳು ಅವರ ಮದ್‌ಹಬ್‌ನ ಅಂಗವೇ ಅಲ್ಲ. ಆದ್ದರಿಂದ ಇಲ್ಲಿ ಎರಡು ತುದಿಗಳಿವೆ, ಮತ್ತು ಸತ್ಯವು ಅವುಗಳ ನಡುವೆಯಿದೆ. “ಓ ಪ್ರಭುವೇ, ನಮಗೆ ಮತ್ತು ನಮಗಿಂತ ಮುಂಚೆ ವಿಶ್ವಾಸವಿಟ್ಟ ನಮ್ಮ ಸಹೋದರರಿಗೆ ಕ್ಷಮಿಸು. ವಿಶ್ವಾಸಿಗಳ ವಿರುದ್ಧ ನಮ್ಮ ಹೃದಯದಲ್ಲಿ ನೀನು ಮತ್ಸರವನ್ನಿರಿಸದಿರು. ಓ ಪ್ರಭುವೇ ನೀನು ದಯಾಮಯನೂ ಕರುಣಾಮಯಿಯೂ ಆಗಿರುವೆ.”

9. ಫುಲಾನೀ ತನ್ನ ‘ಈಕಾದುಲ್ ಹಿಮಮ್’ ಪುಟ 50ರಲ್ಲಿ. ಇದು ಇಮಾಮ್ ಮುಹಮ್ಮದ್‌‌ರಿಂದ (ರ) ವರದಿಯಾಗಿದೆಯೆಂದು ಹೇಳುತ್ತಾ ಅವರು ಬರೆಯುತ್ತಾರೆ.

[هذا وتحوه ليس في حن المُجتهد؛ لعدم احتياطه في ذلك إلى قولهمْ، بَلْ هُوَ فِي حَنُ الْمُقلد]

“ಇದು ಮತ್ತು ಇದರಂತಿರುವ ವಾಕ್ಯಗಳು ಮುಜ್‌ತಹಿದ್‌ಗಳಿಗೆ ಅನ್ವಯಿಸುವುದಿಲ್ಲ. ಯಾಕೆಂದರೆ ಅವರು ಅಂತಹ ಸಂದರ್ಭಗಳಲ್ಲಿ ಇಮಾಮ್‌ಗಳ ಮಾತುಗಳನ್ನು ಪರಿಗಣಿಸುವುದಿಲ್ಲ. ಆದರೆ ಇದು ಮುಕಲ್ಲಿದ್‌ಗಳಿಗೆ (ತಕ್‌ಲೀದ್ ಮಾಡುವವರಿಗೆ) ಅನ್ವಯಿಸುತ್ತದೆ”.

ಶ‌ಅ್‌ರಾನೀ (ರ) ತನ್ನ ‘ಅಲ್ ಮೀಝಾನ್’  1/26ರಲ್ಲಿ ಬರೆಯುತ್ತಾರೆ.

فإن قلت: فما أَصْنَعُ بالأحاديث التي صحت بعد موت إمامي ولم يأخذ بها؟ فَالْحَوَابُ: الذي ينبغي لك أن تعمل بهاء فَإِنْ إِمَامُكَ لَوْ ظفر بها، وصحت عنده لربما كان أمرك بها، فإن الأئمة كُنهُمْ أَسْرَى في بد الشريعة، ومن فعل ذلك فقد حار الخير بكلتا يديه ومن قال: لا أعمل بحديث إلا إن أحد به إمامي قالة خير كثير من المقلدين الأئمة المذاهب، وكان الأولى لَهُمُ الْعَمَلُ بكل . حديث صح بعد إمامهم تنفي تنفيذ الوصية الأئمة، فإن اعتقادنا فيهمْ أَنَّهُمْ لَوْ عَامُوا وظفروا بتلك الأحاديث التي صحت بَعْدَهُم؛ لأحَدُوا بها، وعملوا بما فيها، وتركوا كل قياس كَانُوا قَامُوهُ، وَكُل قول كانُوا قَالُوه

“ನನ್ನ ಇಮಾಮ್ ಉಪಯೋಗಿಸದ ಮತ್ತು ಅವರ ಮರಣಾನಂತರ ಲಭಿಸಿದ ಸಹೀಹಾದ ಹದೀಸ್‌ಗಳನ್ನು ನಾನೇನು ಮಾಡಬೇಕು ಎಂದು ಕೆಳಲ್ಪಟ್ಟರೆ ಅವನಿಗೆ ಈ ರೀತಿ ಉತ್ತರಿಸಬೇಕು. -‘ನೀನು ಆ ಹದೀಸ್‌ಗಳನ್ನನುಸರಿಸಿ ಕಾರ್ಯಪ್ರವೃತ್ತನಾಗಬೇಕು. ಯಾಕೆಂದರೆ ಒಂದು ವೇಳೆ ನಿನ್ನ ಇಮಾಮ್‌ಗೆ ಈ ಹದೀಸ್‌ಗಳು ಲಭಿಸಿದ್ದರೆ ಹಾಗೂ ಅವುಗಳು ಅವರ ಬಳಿ ಸಹೀಹ್ ಆಗಿದ್ದರೆ ಅದನ್ನನುಸರಿಸಿ ಕಾರ್ಯಪ್ರವೃತ್ತನಾಗಬೇಕೆಂದು ಅವರು ನಿನ್ನೊಡನೆ ಆದೇಶಿಸುತ್ತಿದ್ದರು.’ ಇಮಾಮ್‌ಗಳೆಲ್ಲರೂ ಶರೀಅಃದ ಕರಗಳಲ್ಲಿ ಬಂಧಿತರಾಗಿದ್ದಾರೆ. ಯಾರಾದರೂ ಹದೀಸ್‌ಗಳನ್ನನುಸರಿಸಿದರೆ ಅವನು ತನ್ನೆರಡು ಕೈಗಳಲ್ಲೂ ಪುಣ್ಯಗಳನ್ನು ಬಾಚಿಕೊಳ್ಳುವವನಾಗಿದ್ದಾನೆ. ನನ್ನ ಇಮಾಮ್ ಉಪಯೋಗಿಸದ ಹದೀಸನ್ನು ನಾನು ಸ್ವೀಕರಿಸಲಾರೆ ಎಂದೆನ್ನುವವನು ಮದ್‌ಹಬ್‌ಗಳ ಬಹುತೇಕ ಮುಕಲ್ಲಿದ್‌ಗಳಂತೆ ಬಹಳಷ್ಟು ಪುಣ್ಯಗಳನ್ನು ಕೈಚೆಲ್ಲುವವನಾಗಿದ್ದಾನೆ. ಇಮಾಮ್‌ಗಳ ವಸಿಯ್ಯತ್‌ಗಳಿಗೆ ಅನುಸೃತವಾಗಿ ಅವರ ನಂತರ ಸಹೀಹಾದ ಎಲ್ಲಾ ಹದೀಸ್‌ಗಳನ್ನೂ ಸ್ವೀಕರಿಸುವುದು ಅತ್ಯುತ್ತಮವಾದ ಮಾರ್ಗವಾಗಿದೆ. ಮತ್ತು ಇಮಾಮ್‌ಗಳ ಬಗ್ಗೆ ನಮ್ಮ ನಂಬಿಕೆಯೇನೆಂದರೆ ಒಂದು ವೇಳೆ ಅವರಿಗೆ ಈ ಹದೀಸ್‌ಗಳು ಲಭಿಸಿದ್ದರೆ ಖಂಡಿತವಾಗಿಯೂ ಅವರು ಅವುಗಳನ್ನು ಸ್ವೀಕರಿಸುತ್ತಿದ್ದರು. ಮಾತ್ರವಲ್ಲದೆ ತಮ್ಮ ಕಿಯಾಸ್‌ಗಳನ್ನೂ, ಅಭಿಪ್ರಾಯಗಳನ್ನು ದೂರಕ್ಕೆಸೆಯುತ್ತಿದ್ದರು”.

10. ಇಬ್‌ನು ಅಬ್ದಿಲ್ ಬರ್-ರ್ ತನ್ನ ‘ಅಲ್ ಜಾಮಿಅ್’ 2/32ರಲ್ಲಿ, ಇಬ್‌ನು ಹಝ್‌ಮ್ ತನ್ನ ‘ಉಸೂಲುಲ್ ಅಹ್‌ಕಾಮ್’ 6/149 ರಲ್ಲಿ ಮತ್ತು ಫುಲಾನೀ ತನ್ನ ‘ಈಕಾದುಲ್ ಹಿಮಮ್’ ಪುಟ 72ರಲ್ಲಿ.

11. ಇದು ಮಾಲಿಕ್‌ರವರ (ರ) ಹೇಳಿಕೆಯಾಗಿದೆಯೆಂದು ತದನಂತರ ವಿದ್ವಾಂಸರ ನಡುವೆ ಪ್ರಸಿದ್ಧವಾಗಿತ್ತು. ಇಬ್‌ನು ಅಬ್ದುಲ್ ಹಾದೀ ತನ್ನ ‘ಇರ್‌ಶಾದು ಸ್ಸಾಲಿಕ್’ 227/1ರಲ್ಲಿ ಇದನ್ನು ಸಹೀಹ್ ಎಂದಿದ್ದಾರೆ. ಇಬ್‌ನು ಅಬ್ದುಲ್ ಬರ್-ರ್ ತನ್ನ ‘ಅಲ್ ಜಾಮಿಅ್’ 2/91ರಲ್ಲಿ ಮತ್ತು ಇಬ್‌ನು ಹಝ್‌ಮ್ ತನ್ನ ‘ಉಸೂಲುಲ್ ಅಹ್‌ಕಾಮ್’ 6/145, 179ರಲ್ಲಿ ಇದನ್ನು ಅಲ್ ಹಕಮ್ ಇಬ್‌ನು ಉತೈಬಾ (ರ) ಮತ್ತು ಮುಜಾಹಿದ್‌ರಿಂದ (ರ) ಉಲ್ಲೇಖಿಸಿದ್ದಾರೆ. ತಕಿಯ್ಯುದ್ದೀನ್ ಸುಬ್‌ಕೀ ತನ್ನ ‘ಅಲ್ ಫತಾವಾ’ 1/148ರಲ್ಲಿ ಇಬ್‌ನು ಅಬ್ಬಾಸ್‌ರಿಂದ (ರ) ಇದನ್ನು ಉಲ್ಲೇಖಿಸಿದ್ದಾರೆ. ಅವರು ಹೇಳುತ್ತಾರೆ.

[واحد هذه الكلمة من الي علي محامدٌ، وَأَحَدَهَا مِنْهُمَا مَالِك بن أنس واشتهرت عنه]

“ಈ ವಾಕ್ಯವನ್ನು ಇಬ್‌ನು ಅಬ್ಬಾಸ್‌ರಿಂದ (ರ) ಮುಜಾಹಿದ್ (ರ) ಸ್ವೀಕರಿಸಿದರು. ಮತ್ತು ಅವರಿಬ್ಬರಿಂದ ಮಾಲಿಕ್ ಇಬ್‌ನು ಅನಸ್ (ರ) ಸ್ವೀಕರಿಸಿದರು. ಮಾಲಿಕ್‌ರವರ (ರ) ಹೆಸರಲ್ಲಿ ಇದು ಪ್ರಸಿದ್ಧವಾಯಿತು. ” ತದನಂತರ ಅವರಿಂದ ಇದನ್ನು ಇಮಾಮ್ ಅಹ್ಮದ್ (ರ) ಸ್ವೀಕರಿಸಿದರು. ಅಬೂದಾವೂದ್ ಹೇಳುತ್ತಾರೆ.

[سبعت أحمد يقول: ليس أحدٌ إِلَّا وَيُؤْحَد من رأيه ويترك، ما خلا النبي صلى اللهُ عَلَيْهِ وَسَلَّم]

“ಪ್ರವಾದಿಯವರ (ಸ) ಹೊರತು ಇತರೆಲ್ಲರ ಅಭಿಪ್ರಾಯಗಳಲ್ಲಿಯೂ ಸ್ವೀಕಾರಾರ್ಹವೂ ತಿರಸ್ಕಾರಾರ್ಹವೂ ಇವೆಯೆಂದು ಇಮಾಮ್ ಅಹ್ಮದ್ (ರ) ಹೇಳುವುದನ್ನು ನಾನು ಆಲಿಸಿದ್ದೇನೆ.” (ಮಸಾಇಲುಲ್ ಇಮಾಮ್ ಅಹ್ಮದ್ ಪುಟ 276)

12. ಇಬ್‌ನು ಅಬೀ ಹಾತಮ್ ತನ್ನ ‘ಅಲ್ ಜುರ್‌ಹು ವತ್ತ‌ಅ್‌ದೀಲ್’ನ ಮುನ್ನುಡಿ ಪುಟ 31-32ರಲ್ಲಿ. ಬೈಹಕೀ ತನ್ನ ‘ಅಸ್ಸುನನ್’ 1/81ರಲ್ಲಿ ಇದನ್ನು ಪೂರ್ತಿಯಾಗಿ ಉಲ್ಲೇಖಿಸಿದ್ದಾರೆ.

13. ಇಬ್‌ನು ಹಝ್‌ಮ್ ತನ್ನ ‘ಉಸೂಲುಲ್ ಅಹ್‌ಕಾಮ್’ 6/118ರಲ್ಲಿ ಬರೆಯುತ್ತಾರೆ.

إِنَّ الْفُقَهَاءُ الدين قلدوا منطلون للتقليد، وَإِنَّهُمْ لَهوا أَصْحَابَهُمْ عَنْ تقليدهم، وكانَ أَشَدُّهُمْ فِي ذلك الشافعي فَإِنَّهُ رَحِمَهُ الله بلغ من التأكيد في الاع صحاح الآثار، والأخد بِمَا أَوْجَنَهُ الْحُجَّة، حيث لم يبلغ غيره، وتراً من أن يُقلد حملة، وأعلن بذلك تفع الله به وأَعْظَمَ أَخرَهُ، فَقَدْ كَانَ سيا إلى خير كَثِيرٍ

“ತಕ್‌ಲೀದ್ ಮಾಡಲ್ಪಡುವ ಫುಕಹಾಗಳೆಲ್ಲರೂ ತಮ್ಮನ್ನು ತಕ್‌ಲೀದ್ ಮಾಡುವ ಅನುಯಾಯಿಗಳಿಂದ ಅದನ್ನು ವಿರೋಧಿಸುತ್ತಿದ್ದರು. ಅವರಲ್ಲಿ ತಕ್‌ಲೀದನ್ನು ಅತ್ಯಂತ ಶಕ್ತವಾಗಿ ವಿರೋಧಿಸಿದವರು ಇಮಾಮ್ ಶಾಫಿಈ (ರ) ಆಗಿದ್ದರು. ಇತರೆಲ್ಲರಿಗಿಂತಲೂ ಹೆಚ್ಚಾಗಿ ಅವರು ಸಹೀಹಾದ ಹದೀಸ್‌ಗಳನ್ನು ಅನುಸರಿಸುವಂತೆ ಹಾಗೂ ಪುರಾವೆಗಳನ್ನು ಸ್ವೀಕರಿಸುವಂತೆ ಒತ್ತಿ ಹೇಳುತ್ತಿದ್ದರು. ಅವರು ತಕ್‌ಲೀದ್ ಮಾಡಲ್ಪಡುವುದರಿಂದ ಪೂರ್ಣವಾಗಿ ಮುಕ್ತರಾಗಿದ್ದರು ಮತ್ತು ತಮ್ಮನ್ನು ತಕ್‌ಲೀದ್ ಮಾಡದಂತೆ ಅವರು ಬಹಿರಂಗವಾಗಿ ಹೇಳುತ್ತಿದ್ದರು.ಅಲ್ಲಾಹನು ಅವರಿಗೆ ಉತ್ತಮವಾದ ಪ್ರತಿಫಲವನ್ನು ನೀಡಲಿ ಮತ್ತು ಅವರ ಪ್ರತಿಫಲವನ್ನು ವರ್ಧಿಸಲಿ. ಖಂಡಿತವಾಗಿಯೂ ಅಗಾಧವಾದ ಪುಣ್ಯಕ್ಕೆ ಅವರು ಕಾರಣರಾಗಿದ್ದರು.”

14. ಇಬ್‌ನು ಅಸಾಕಿರ್‌ರವರ ‘ತಾರೀಖ್ ದಿಮಶ್ಕ್’ 15/1/3ರಲ್ಲಿ ಕಯ್ಯಿಮ್ ತನ್ನ ‘ ಇಅ್‌ಲಾಮುಲ್ ಮುವಕ್ಕಿಈನ್’ 2/363,364ರಲ್ಲಿ ಮತ್ತು ಫುಲಾನೀ ತನ್ನ ‘ ಈಕಾದುಲ್ ಹಿಮಮ್’ ಪುಟ 100ರಲ್ಲಿರುವಂತೆ ಇಮಾಮ್ ಶಾಫಿಈಗೆ (ರ) ಸೇರುವ ಸನದ್‌ನೊಂದಿಗೆ ಹಾಕಿಮ್ ಇದನ್ನು ಉಲ್ಲೇಖಿಸಿದ್ದಾರೆ.

15. ಇಬ್‌ನುಲ್ ಕಯ್ಯಿಮ್ ತನ್ನ ‘ಇಅ್‌ಲಾಮುಲ್ ಮುವಕ್ಕಿಈನ್’ 2/361ರಲ್ಲಿ ಮತ್ತು ಫುಲಾನೀ ತನ್ನ ‘ಈಕಾದುಲ್ ಹಿಮಮ್’ ‌ಪಟ 68ರಲ್ಲಿ.

16. ಹರವೀ ತನ್ನ ‘ದಮ್ಮುಲ್ ಕಲಾಮ್’ 3/47/1ರಲ್ಲಿ, ಅಲ್‌ ಖತೀಬ್ ತನ್ನ ‘ಅಲ್ ಇಹ್‌ತಿಜಾಜು ಬಿಶ್ಶಾಫಿಈ’ 8/2ರಲ್ಲಿ, ಇಬ್‌ನು ಅಸಾಕಿರ್ ತನ್ನ ‘ತಾರೀಖ್ ದಿಮಶ್ಕ್’ 15/9/10ರಲ್ಲಿ, ನವವೀ ತನ್ನ ‘ಮಜ್‌ಮೂಅ್’ 1/63ರಲ್ಲಿ, ಇಬ್‌ನುಲ್ ಕಯ್ಯಿಮ್ ತನ್ನ ‘ಇಅ್‌ಲಾಮುಲ್ ಮುವಕ್ಕಿಈನ್’ 2/361ರಲ್ಲಿ ಮತ್ತು ಫುಲಾನೀ ತನ್ನ ‘ಈಕಾದುಲ್ ಹಿಮಮ್’ ಪುಟ 100ರಲ್ಲಿ. ಇನ್ನೊಂದು ವರದಿಯು ಅಬೂ ನುಐಮ್ ತನ್ನ ‘ಹಿಲ್‌ಯತುಲ್ ಅವ್‌ಲಿಯಾಅ್’ 9/107ರಲ್ಲಿ, ಇಬ್‌ನು ಹಿಬ್ಬಾನ್ ತನ್ನ ‘ಸಹೀಹ್’ 3/284ರಲ್ಲಿ ಪ್ರಬಲವಾದ ಸರಣಿಯೊಂದಿಗೆ ಉಲ್ಲೇಖಿಸಿದ್ದಾರೆ.

17.  ನವವೀ ತನ್ನ ‘ಮಜ್‌ಮೂಅ್’ 1/63ರಲ್ಲಿ, ಶ‌ಅ್‌ರಾನೀ ತನ್ನ ‘ಅಲ್ ಮೀಝಾನ್’ 1/57ರಲ್ಲಿ, ಫುಲಾನೀ ತನ್ನ ‘ಈಕಾದುಲ್ ಹಿಮಮ್’ ಪುಟ 107ರಲ್ಲಿ. ಶ‌ಅ್‌ರಾನೀ ಹೇಳುತ್ತಾರೆ.

[قَالَ ابْنُ حَرم: أَي صَح عندَهُ أو عند غيره من الأئمة]

“ಇಬ್‌ನು ಹಝ್‌ಮ್ ಹೇಳುತ್ತಾರೆ. ಅರ್ಥಾತ್‌ ಅವರಿಗೆ ಅಥವಾ ಇನ್ನಿತರ ಇಮಾಮ್‌ಗಳಿಗೆ ಸಹೀಹಾಗಿ ಲಭಿಸಿದ ಹದೀಸ್‌ಗಳು.”

ಇಮಾಮ್ ನವವೀ ಹೇಳುತ್ತಾರೆ

وقد عمل بهذا أصحابنا في مسألة التوبي، واشتراط التحلل من الإحرام بعذر المرض وَغَيْرِهِمَا هُوَ مَعْرُوف في كتب الْمَذْهَ، وَمِن حكى عنه أنه أثنى بالحديث من أصحابنا أبو يعقوب البويطي، وأبو القاسم التاركي وَمِمَّنِ اسْتَعْمَلَهُ مِنْ أَصْحَابِنَا الْمُحَدِّثين الإمام أبو بكر البيهقي واخرون، وكان جَمَاعَة من مقدمي أصحابنا إذا رأو مسألة فيها حديث، ومذهب الشافعي خلافه، عملوا بالحديث وافترا به قائلين، مذهب الشافعي ما وافق الحديث، قال الشيخ أبو عمرو: فمن وحد من الشافعية حديثًا يُخالف مذهبة نظرا إن كملت الآن الإجتهاد فيه مطلقا – أو فى ذلك الباب أو المسألة – كان له الاستقلال بالعمل به، وإن لم تكمل – وَشَنَّ عَلَيْهِ مخالفة الحديث بعد أن بحث قلم يجد المخالفه عنه خوانا شافيا – فَلَهُ العمل به إن كان عمل به إمام مستقل غير الشافعي، ويكون هذا عُدْرًا لَهُ في ترك مذهب إمامه ها ، وهذا الذي قَالَهُ حَسَنٌ منعين، وَاللَّهُ أَعْلَمُ

“ತಸ್‌ವೀಬ್ (ಆದಾನ್‌ನೊಂದಿಗೆ ನಮಾಝ್‌ಗಾಗಿ ನೀಡುವ ಇನ್ನೊಂದು ಕರೆ),ರೋಗ ಕಾರಣ ಇಹ್‌ರಾಮ್‌ನಿಂದ  ವಿಮುಕ್ತನಾಗುವುದಕ್ಕಿರುವ ನಿಬಂಧನೆಗಳು ಮುಂತಾದ ಮದ್‌ಹಬ್‌ನ ಗ್ರಂಥಗಳಲ್ಲಿ ಪ್ರಖ್ಯಾತವಾಗಿರುವ ಇನ್ನಿತರ ಕಾರ್ಯಗಳಿಗಾಗಿ ನಮ್ಮ ಸಹವರ್ತಿಗಳು ಈ ವಿಧಾನವನ್ನು (ಅರ್ಥಾತ್ ಹದೀಸ್‌ಗೆ ಇಮಾಮ್ ಶಾಫಿಈಯವರ (ರ) ಅಭಿಪ್ರಾಯವು ವಿರುದ್ಧವಾಗಿದ್ದರೆ, ಇಮಾಮ್ ಶಾಫಿಈಯವರ (ರ) ಅಭಿಪ್ರಾಯವನ್ನು ತಿರಸ್ಕರಿಸಿ ಹದೀಸನ್ನು ಅಂಗೀಕರಿಸುವುದು) ಅವಲಂಬಿಸುತ್ತಿದ್ದರು. ಅಬೂ ಯ‌ಅ್‌ಕೂಬ್ ಅಲ್ ಬುವೀತೀ, ಅಬುಲ್ ಕಾಸಿಮ್ ಅದ್ದಾರಿಕೀ ಮೊದಲಾದ ನಮ್ಮ ಸಹಚರರು ಶಾಫಿಈಯವರ  (ರ) ಅಭಿಪ್ರಾಯಗಳಿಗೆ ಬದಲಾಗಿ ಹದೀಸ್‌ಗಳ ತಳಹದಿಯ ಮೇಲೆ ಫತ್‌ವಾ ನೀಡುತ್ತಿದ್ದರು. ಇಮಾಮ್ ಅಬೂಬಕ್‌ರ್ ಅಲ್ ಬೈಹಕೀ ಮುಂತಾದ ಹದೀಸ್ ವಿದ್ವಾಂಸರಾದ ನಮ್ಮ ಸಹವರ್ತಿಗಳು ಇದೇ ವಿಧಾನವನ್ನು ಅವಲಂಬಿಸಿದ್ದರು.

ನಮ್ಮ ಸಹವರ್ತಿಗಳಲ್ಲಿ ಮೊದಲಿನವರು ಶಾಫಿಈಯವರ (ರ) ಅಭಿಪ್ರಾಯಕ್ಕೆ ವಿರುದ್ಧವಾಗಿರುವ ಹದೀಸನ್ನು ಕಂಡರೆ, ಹದೀಸನ್ನು ಅವಲಂಬಿಸುತ್ತಿದ್ದರು ಮತ್ತು ಅದರ ಆಧಾರದಲ್ಲಿ ಫತ್‌ವಾ ನೀಡುತ್ತಿದ್ದರು, ಮತ್ತು ಹೇಳುತ್ತಿದ್ದರು. – ಹದೀಸ್‌ಗಳಿಗೆ ಅನುಯೋಜ್ಯವಾಗಿರುವುದು ಮಾತ್ರ ಶಾಫಿಈಯವರ (ರ) ಮದ್‌ಹಬ್ ಆಗಿದೆ. – ಶೈಖ್ ಅಬೂ ಅಮ್ರ್ ಹೇಳುತ್ತಾರೆ – ಶಾಫಿಈಗಳಲ್ಲಿ ಯಾರಾದರೂ ತನ್ನ ಮದ್‌ಹಬ್‌ಗೆ ವಿರುದ್ಧವಾಗಿರುವ ಹದೀಸೊಂದರನ್ನು ಕಂಡರೆ, ಪ್ರಸ್ತುತ ವಿಷಯದಲ್ಲಿ ತನಗೆ ಇಜ್‌ತಿಹಾದ್‌ನ ನಿಬಂಧನೆಗಳು ಪೂರ್ತಿಯಾಗಿದ್ದರೆ, ಅವನು ಹದೀಸ್ ಅವಲಂಬಿಸಿ ಕಾರ್ಯಪ್ರವೃತ್ತನಾಗಲು ಮುಕ್ತನಾಗಿದ್ದಾನೆ. ನಿಬಂಧನೆಗಳು ಪೂರ್ತಿಯಾಗದಿದ್ದರೆ ಮತ್ತು ಸಂಶೋಧನೆಯ ನಂತರವೂ ಹದೀಸ್‌ಗೆ ವಿರುದ್ಧವಾಗಿ ಮದ್‌ಹಬ್‌ನ ಅಭಿಪ್ರಾಯವನ್ನು ಸ್ವೀಕರಿಸಲು ತೃಪ್ತಿಕರವಾದ ಕಾರಣವು ಅವನಿಗೆ ಲಭಿಸದಿದ್ದರೆ, ಹಾಗೂ ಹದೀಸ್‌ಗೆ ವಿರುದ್ಧವಾಗಿ ಹೋಗುವುದು ಅವನಿಗೆ ಪ್ರಯಾಸಕವಾಗಿ ಗೋಚರಿಸಕದರೆ, ಶಾಫಿಈಯ (ರ) ಹೊರತು ಇತರ ಇಮಾಮ್‌ಗಳ ಅಭಿಪ್ರಾಯವು ಹದೀಸ್‌ಗೆ ಅನುಸೃತವಾಗಿದ್ದರೆ ಅವನಿಗೆ ಹದೀಸನ್ನು ಅವಲಂಬಿಸಿ ಕಾರ್ಯಪ್ರವೃತ್ತನಾಗಬಹುದಾಗಿದೆ. ತನ್ನ ಮದ್‌ಹಬ್‌ನ ಇಮಾಮ್‌ನ್ನು ತ್ಯಜಿಸಲು ಇಲ್ಲಿ ಅವನಿಗೆ ರಿಯಾಯಿತಿಯಿದೆ. ಅಬೂ ಅಮ್ರ್ ಹೇಳಿರುವ ಈ ಮಾತು ಸುಂದರವೂ ಸುದೃಢವೂ ಆಗಿದೆ. ಅಲ್ಲಾಹನು ಎಲ್ಲವನ್ನೂ ತಿಳಿದವನಾಗಿದ್ದಾನೆ.” (ಮಜ್‌ಮೂಅ್ 1/63)

ಇಬ್‌ನು ಸ್ಸಲಾಹ್ (ಅಬೂ ಅಮ್ರ್) ಪ್ರಸ್ತಾಪಿಸಲು ಮರೆತ ಇನ್ನೊಂದು ಸಾಧ್ಯತೆಯು ಈ ರೀತಿಯಿದೆ. ಇಮಾಮ್‌ಗಳಲ್ಲಿ ಯಾರೊಬ್ಬರೂ ಅವಲಂಬಿಸದ ಹದೀಸೊಂದು ಲಭಿಸಿದರೆ ಏನು ಮಾಡಬೇಕು? ಇದಕ್ಕುತ್ತರವಾಗಿ ತಕಿಯುದ್ದೀನ್ ಸುಬುಕೀ (ರ) ಹೇಳುತ್ತಾರೆ

والأولى عندى اتباع الحديث، وليفرض الإنسان النبي صلى اللهُ عَلَيْهِ وَسَلَّمَ وَقَدْ الفه بين يديا سمع ذلك منها أيع التأخر عن العمل به؟ لا والله وكل واحد مكلف بحب فهي

“ನನ್ನ ಅನಿಸಿಕಯಂತೆ ಹದೀಸನ್ನು ಅನುಸರಿಸುವುದು ಅತ್ಯುತ್ತಮವಾಗಿದೆ. ಓರ್ವ ವ್ಯಕ್ತಿ ತಾನು ಪ್ರವಾದಿಯವರ (ಸ) ಸಮಕ್ಷಮದಲ್ಲಿ ನೇರವಾಗಿ ಈ ‘ಹದೀಸನ್ನು ಆಲಿಸಿದ್ದೇನೆಂದು ಕಲ್ಪಿಸಿಕೊಳ್ಳಲಿ. ಆಗ ಅದಕ್ಕನುಸಾರವಾಗಿ ಕಾರ್ಯಪ್ರವೃತ್ತನಾಗುವುದನ್ನು ನಿಧಾನಗೊಳಿಸಲು ಅವನಿಗೆ ಸಾಧ್ಯವಾಗುವುದೇ? ಅಲ್ಲಾಹನಾಣೆ ಸಾಧ್ಯವಾಗಲಾರದು. ಪ್ರತಿಯೊಬ್ಬ ವ್ಯಕ್ತಿಗೂ ಅವನ ಗ್ರಹಣಶಕ್ತಿಯನುಸಾರ ಬಾಧ್ಯತೆಯಿದೆ.” (ಮ‌ಅ್‌ನಾ ಕೌಲು ಶ್ಯಾಫಿಈ ಇದಾ ಸಹ್ಹಲ್ ಹದೀಸು ಫಹುವ ಮದ್‌ಹಬೀ 3/102)

ಇದರ ಬಗ್ಗೆ ಹೆಚ್ಚಿನ ಅಧ್ಯಯನಕ್ಕಾಗಿ ‘ಇಅ್‌ಲಾಮುಲ್ ಮುವಕ್ಕಿಈನ್’ 2/302 ಮತ್ತು 320, ಹಾಗೂ ಫುಲಾನಿಯವರು ‘ಈಕಾದುಲ್ ಹಿಮಮ್ ಉಲಿಲ್ ಅಬ್‌ಸಾರ್ ಲಿಲ್‌ಇಕ್‌ತಿದಾಇ ಬಿಸ್ಸಯ್ಯಿದಿಲ್ ಮುಹಾಜಿರೀನ ವಲ್ ಅನ್ಸಾರ್ ವ ತಹ್‌ದೀರಿಹಿಮ್ ಅನಿಲ್ ಇಬ್‌ತಿದಾಇ ಶ್ಸಾಇಇ ಫಿಲ್ ಕುರಾ ವಲ್ ಅಮ್‌ಸಾರ್ ಮಿನ್ ತಕ್‌ಲೀದಿಲ್ ಮದಾಹಿಬಿ ಮ‌ಅಲ್ ಹಮಿಯ್ಯತಿ ವಲ್ ಅಸಬಿಯ್ಯತಿ ಬೈನ ಫುಕಹಾಇಲ್ ಅ‌ಅ್‌ಸಾರ್’ ಎಂಬ ಗ್ರಂಥಗಳನ್ನು ನೋಡಿರಿ. ಸತ್ಯಾನ್ವೇಶಿಯು ಅವಶ್ಯಕವಾಗಿ ಓದಿ ಪರಿಗ್ರಹಿಸಬೇಕಾದ ಗ್ರಂಥವಾಗಿದೆಯಿದು.

18. ನೀವು ಅರ್ಥಾತ್ ಅಹ್ಮದ್ ಇಬ್‌ನು ಹಂಬಲ್ (ರ).

19. ಇಬ್‌ನು ಅಬೀ ಹಾತಿಮ್ ತನ್ನ ‘ಆದಾಬು ಶ್ಯಾಫಿಈ’ ಪುಟ 94,95ರಲ್ಲಿ, ಅಬೂ ನುಐಮ್ ತನ್ನ ‘ಹಿಲ್‌ಯತುಲ್ ಅವ್‌ಲಿಯಾಅ್’ 9/106ರಲ್ಲಿ, ಅಲ್ ಖತೀಬ್ ತನ್ನ ‘ಅಲ್ ಇಹ್‌ತಿಜಾಜು ಬಿಶ್ಯಾಫಿಈ’ 8/1ರಲ್ಲಿ, ಇಬ್‌ನು ಅಸಾಕಿರ್ ತನ್ನ ‘ತಾರೀಕ್ ದಿಮಶ್ಕ್’ 15/9/1ರಲ್ಲಿ, ಇಬ್‌ನು ಅಬ್ದುಲ್ ಬರ್-ರ್ ತನ್ನ ‘ಇಂತಿಕಾಅ್’ ಪುಟ 75ರಲ್ಲಿ, ಇಬ್‌ನುಲ್ ಜೌಝೀ ತನ್ನ ‘ಮನಾಕಿಬುಲ್ ಇಮಾಮ್ ಅಹ್‌ಮದ್’ ಪುಟ 499ರಲ್ಲಿ, ಹರವೀ ತನ್ನ ‘ದಮ್ಮುಲ್ ಕಲಾಮ್’ 2/47/2ರಲ್ಲಿ ಇಬ್‌ನು ಹಂಬಲ್‌ರವರ (ರ) ಮೂಲಕ ಅವರ ತಂದೆಯಿಂದ ಶಾಫಿಈ (ರ) ಹೇಳಿದ್ದಾರೆಂದು ಮೂರು ವ್ಯತ್ಯಸ್ತ ರೀತಿಗಳಲ್ಲಿ ಉಲ್ಲೇಖಿಸಿದ್ದಾರೆ. ಇಬ್‌ನು ಕಯ್ಯಿಮ್ ತನ್ನ ‘ಇಅ್‌ಲಾಮುಲ್ ಮುವಕ್ಕಿಈನ್’ 2/325ರಲ್ಲಿ ಮತ್ತು ಫುಲಾನೀ ತನ್ನ ‘ ಈಕಾದುಲ್ ಹಿಮಮ್’ ಪುಟ 152ರಲ್ಲಿ ಇದನ್ನು ಶಾಫಿಈಯಿಂದ (ರ) ಉಲ್ಲೇಖಿಸಿದ್ದಾರೆ.

ಫುಲಾನಿ ಹೇಳುತ್ತಾರೆ

قال اليهقى : ولهذا كثر أخذه – يعني الشافعي بالحديث، وهو أنه جمع علم أهْلِ الْحِجَارِ وَالشَّامِ وَالْيَمَنِ والعراقي، وأخذ يخيع فاضح عنده من غير محاباة منه ولا مثل إلى ما استحلاة من مذهب أهل بلدها مهما بأن له الحن في غيره، وممن كانَ قَلَهُ مَنِ اقتصر على ما عهده من مذهب أهل بلده، ولم تحتهد في معرفة صحة ما خَالَفَهُ، وَاللهُ يَغْفِرُ لَا وَلَهُمْ

“ಬೈಹಕೀ ಹೇಳುತ್ತಾರೆ ಇದರಿಂದಾಗಿ ಶಾಫಿಈ (ರ) ಹದೀಸ್‌ಗಳನ್ನು ಹೆಚ್ಚಾಗಿ ಅವಲಂಬಿಸುತ್ತಿದ್ದರು. ಅವರು ಹಿಜಾಝ್, ಸಿರಿಯಾ, ಯಮನ್ ಮತ್ತು ಇರಾಕ್‌ನ ಜನರಿಂದ ಹದೀಸ್‌ಗಳೆಲ್ಲವನ್ನೂ ಕ್ರೋಢೀಕರಿಸಿ ತನಗೆ ಸಹೀಹಾಗಿ ಕಂಡದ್ದೆಲ್ಲವನ್ನೂ ಸ್ವೀಕರಿಸಿದರು. ಸತ್ಯವು ಇತರೆಡೆ ಸ್ಪಷ್ಟವಾಗಿರುವಾಗ ಅವರು ತಮ್ಮ ಊರಿನ ಮದ್‌ಹಬ್‌ನ ಜನರ ಆಗ್ರಹಗಳೆಡೆಗೆ ತಿರುಗಲೇ ಇಲ್ಲ. ಆದರೆ ಅವರ ಮುಂಚಿನ ಇಮಾಮ್‌ಗಳು ತಮ್ಮ ಊರಿನ ಜನರ ಮದ್‌ಹಬ್‌ನಲ್ಲಿರುವುದಕ್ಕೆ ತಮ್ಮನ್ನು ಸೀಮಿತಗೊಳಿಸಿದರು. ಅದಕ್ಕೆ ವಿರುದ್ಧವಾಗಿರುವ ಸಹೀಹ್‌ಗಳ ಬಗ್ಗೆ ಅವರು ಇಜ್‌ತಿಹಾದ್ ನಡೆಸಲೇ ಇಲ್ಲ. ಅಲ್ಲಾಹನು ನಮ್ಮನ್ನೂ ಅವರನ್ನೂ ಕ್ಷಮಿಸಲಿ.”

20. ಅಬೂ ನುಐಮ್ ತನ್ನ ‘ಹಿಲ್‌ಯತುಲ್ ಅವ್‌ಲಿಯಾಅ್’ 9/107ರಲ್ಲಿ, ಹರವೀ ತನ್ನ ‘ದಮ್ಮುಲ್ ಕಲಾಮ್’ 47/1ರಲ್ಲಿ, ಇಬ್‌ನುಲ್ ಕಯ್ಯಿಮ್ ತನ್ನ ‘ಇಅ್‌ಲಾಮುಲ್ ಮುವಕ್ಕಿಈನ್’ 2/363ರಲ್ಲಿ, ಪುಲಾನಿ ತನ್ನ ‘ಈಕಾದುಲ್ ಹಿಮಮ್’ ಪುಟ 104ರಲ್ಲಿ.

21. ಇಬ್‌ನು ಅಬೀ ಹಾತಿಮ್ ತನ್ನ ‘ಆದಾಬು ಶ್ಯಾಫಿಈ’ ಪುಟ 93ರಲ್ಲಿ, ಅಬುಲ್ ಕಾಸಿಮ್ ಅಸ್ಸಮರ್‌ಕಂದೀ ತನ್ನ ‘ಅಲ್ ಅಮಾಲೀ’ 234/1ರಲ್ಲಿ, ಅಬೂ ನುಐಮ್ ತನ್ನ ‘ ಹಿಲ್‌ಯತುಲ್ ಅವ್‌ಲಿಯಾಅ್’ 9/106ರಲ್ಲಿ ಮತ್ತು ಇಬ್‌ನು ಅಸಾಕಿರ್ ತನ್ನ ‘ತಾರೀಕ್ ದಿಮಶ್ಕ್’ 15/10/1ರಲ್ಲಿ ಸಹೀಹಾದ ಸನದ್‌ನೊಂದಿಗೆ.

22. ಇಬ್‌ನು ಅಬೀ ಹಾತಿಮ್ ತನ್ನ ‘ಆದಾಬು ಶ್ಯಾಫಿಈ’ ಪುಟ 93ರಲ್ಲಿ, ಅಬೂ ನುಐಮ್ ತನ್ನ ‘ ಹಿಲ್‌ಯತುಲ್ ಅವ್‌ಲಿಯಾಅ್’ 9/106ರಲ್ಲಿ ಮತ್ತು ಇಬ್‌ನು ಅಸಾಕಿರ್ ತನ್ನ ‘ತಾರೀಕ್ ದಿಮಶ್ಕ್’ 15/9/2ರಲ್ಲಿ ಸಹೀಹಾದ ಸನದ್‌ನೊಂದಿಗೆ.

23. ಇಬ್‌ನು ಅಬೀ ಹಾತಿಮ್ ತನ್ನ ‘ಆದಾಬು ಶ್ಯಾಫಿಈ’ ಪುಟ 93-94 ರಲ್ಲಿ.

24. ಇರ್‌ನುಲ್ ಜೌಝೀ ತನ್ನ ‘ಅಲ್ ಮನಾಕಿಬ್’ ಪುಟ 192ರಲ್ಲಿ.

25. ಫುಲಾನೀ ತನ್ನ ‘ಈಕಾದುಲ್ ಹಿಮಮ್’ ಪುಟ 113ರಲ್ಲಿ ಮತ್ತು ಇಬ್‌ನುಲ್ ಕಯ್ಯಿಮ್ ತನ್ನ ‘ಇಅ್‌ಲಾಮುಲ್ ಮುವಕ್ಕಿಈನ್’ 2/302ರಲ್ಲಿ.

26. ಅಬೂದಾವೂದ್ ತನ್ನ ‘ಮಸಾಇಲುಲ್ ಇಮಾಮ್ ಅಹ್‌ಮದ್’ ಪುಟ 276ರಲ್ಲಿ.

27. ಅಬೂದಾವೂದ್ ತನ್ನ ‘ಮಸಾಇಲುಲ್ ಇಮಾಮ್ ಅಹ್‌ಮದ್’ ಪುಟ 277ರಲ್ಲಿ.

28. ಇಬ್‌ನು ಅಬ್ದುಲ್ ಬರ್-ರ್ ತನ್ನ ‘ಅಲ್ ಜಾಮಿಅ್ ಬಯಾನುಲ್ ಇಲ್‌ಮ್’ 2/149ರಲ್ಲಿ.

29. ಇಬ್‌ನುಲ್ ಜೌಝೀ ತನ್ನ ‘ಅಲ್ ಮನಾಕಿಬ್’ ಪುಟ 182ರಲ್ಲಿ.

30.ಕುರ್‌ಆನ್ 4:65

31. ಕುರ್‌ಆನ್ 24:63

32. ತಿರಸ್ಕಾರವು ಅವರ ತಂದೆ ಅಥವಾ ವಿದ್ವಾಂಸರ ಮೇಲೂ ತಿರುಗಿದ ಘಟನೆಗಳಿವೆ. ತಹಾವೀ ತನ್ನ ‘ಶ‌ರ್‌ಹ್ ಮ‌ಆನಿಲ್ ಆಸಾರ್’ 1/372ರಲ್ಲಿ ಮತ್ತು ಅಬೂ ಯ‌ಅ್‌ಲಾ ತನ್ನ ‘ಮುಸ್ನದ್’ 3/1317ರಲ್ಲಿ ವಿಶ್ವಾಸಾರ್ಹವಾದ ಸನದ್‌ನೊಂದಿಗೆ ಸಾಲಿಮ್ ಇಬ್‌ನು ಅಬ್ದುಲ್ಲಾಹ್ ಇಬ್‌ನು ಉಮರ್‌ರವರಿಂದ (ರ) ವರದಿ ಮಾಡುತ್ತಾರೆ.

إنَّى خالي معَ ابْنِ عُمَرَ رَضِيَ اللهُ عَنْهُ فِي الْمَسْجِدِ إِذْ خانه رحل من أهل الشام فَسَأَلَهُ عَنِ التمتع بالعمرة إلى الحج، فقالَ ابْنُ عُمَر: حَسَن حَمِيل، فقال: فإن أباك كان ينهى عن ذلك، فقال: ويلكا فإن كان أبي قد نهى عن ذلك، وقد فَعَلَهُ رَسُولُ الله صَلَّى اللهُ عَلَيْهِ وَسَلَّمَ وأمر به فيقول أبي تأخذ أم بأمر رسول الله صلى الله عَلَيْهِ وَسَلَّمَ قَالَ: بِأَمْرِ رَسُولِ اللهِ صلى الله عليه وسلم، فَقَالَ: فَقُمْ عَنى

“ನಾನು ಇಬ್‌ನು ಉಮರ್‌ರೊಂದಿಗೆ (ರ) ಮಸೀದಿಯಲ್ಲಿ ಕುಳಿತಿರುವಾಗ ಸಿರಿಯಾ ನಿವಾಸಿಯಾದ ಓರ್ವ ವ್ಯಕ್ತಿ ಇಬ್‌ನು ಉಮರ್‌ರವರ (ರ)  ಬಳೆ ಬಂದು ಉಮ್ರಾವನ್ನು ಹಜ್‌ನವರೆಗೆ ಮುಂದುವರೆಸುವುದರ ಕುರಿತು (ಹಜ್ಜುತ್ತ ಮತ್ತುಅ್) ವಿಚಾರಿಸಿದರು. ಇಬ್‌ನು ಉಮರ್ (ರ) ಹೇಳಿದರು – ‘ಅದು ಉತ್ತಮವೂ ಸುಂದರವೂ ಆಗಿದೆ’. ಆಗ ಆ ವ್ಯಕ್ತಿ ಹೇಳಿದರು – ‘ಆದರೆ ತಮ್ಮ ತಂದೆಯವರು (ಉಮರ್ ಇಬ್‌ನುಲ್ ಖತ್ತಾಬ್ (ರ) ) ಅದನ್ನು ವಿರೋಧಿಸುತ್ತಾರಲ್ಲವೇ?’ ಆಗ ಇಬ್‌ನು ಉಮರ್ (ರ) ಹೇಳಿದರು – ‘ನಿನಗೆ ನಾಶ! ಪ್ರವಾದಿಯವರು (ಸ) ಮಾಡಿದ ಮತ್ತು ಆದೇಶಿಸಿದ ಒಂದು ಕಾರ್ಯವನ್ನು ನನ್ನ ತಂದೆ ವಿರೋಧಿಸಿದರೆ ನೀನು ತಂದೆಯ ಮಾತನ್ನು ಸ್ವೀಕರಿಸುತ್ತೀಯೋ ಅಥವಾ ಪ್ರವಾದಿಯವರ (ಸ) ಆದೇಶವನ್ನು ಸ್ವೀಕರಿಸುತ್ತೀಯೋ?’  ಆ ವ್ಯಕ್ತಿ ಉತ್ತರಿಸಿದರು – ‘ನಾನು ಪ್ರವಾದಿಯವರ (ಸ)  ಆದೇಶವನ್ನು ಸ್ವೀಕರಿಸುತ್ತೆನೆ’. ಇಬ್‌ನು ಉಮರ್ (ರ) ಹೇಳಿದರು – ‘ಹಾಗಾದರೆ ನನ್ನ ಬಳಿಯಿಂದ ಎದ್ದೇಳು’.”

ಅಹ್ಮದ್ ಕೂಡ ಇದೇ ರೀತಿ ಉಲ್ಲೇಖಿಸಿದ್ದಾರೆ (5700). ತಿರ್ಮುದಿ ಇದನ್ನು ಸಹೀಹ್ ಎಂದಿದ್ದಾರೆ (2/82).

ಇಬ್‌ನು ಅಸಾಕಿರ್ ಇಬ್‌ನು ಅಬೀ ದಿಅ್‌ಬ್‌ರಿಂದ (ರ) ಈ ರೀತಿ ವರದಿ ಮಾಡಿದ್ದಾರೆ (7/51/1)

قضى سعد بن إبراهيم يعى ابن عبد الرحمن بن عوف على رحل برأي ربعة من أبي عبد الرحمن فأخبرته عن رسول الله صلى اللهُ عَلَيْهِ وَسَلَّم بخلاف ما قضى به، فقال سعد الربيعة: هَذَا ابْن أَبي دل، وهو عندى لقد يُحدث عن الي صلى الله عليه وسلم بخلاف ما قضيت به، فقال له ربيعة قد اجتهدت ومضى حكمك، فقال سعد: وَاعْحا الفد قضاء سعد ولا ألقد فضاء رسول الله صَلَّى اللهُ عَلَيْهِ وسلم بَلْ أَرَدُّ قَضَاءَ تعد من أم سعد، والقد قضاء رَسُولِ اللهِ صَلَّى اللهُ عَلَيْهِ وَسَلَّمَ، فَدَعَا سَعَدْ بِكِتَابِ انه وقضى النقضى عليه

“ಸ‌ಅದ್ ಇಬ್‌ನು ಇಬ್ರಾಹೀಮ್‌ರವರು (ರ) (ಇಬ್‌ನು ಅಬ್ದುರ್-ರಹ್‌ಮಾನ್ ಇಬ್‌ನು ಔಫ್) ರಬೀಅಃ ಇಬ್‌ನು ಅಬೀ ಅಬ್ದುರ್ -ರಹ್‌ಮಾನ್‌ರವರ (ರ) ಅಭಿಪ್ರಾಯದ ತಳಹದಿಯಲ್ಲಿ ಓರ್ವ ವ್ಯಕ್ತಿಯ ಮೇಲೆ ತೀರ್ಪನ್ನು ಜಾರಿಗೊಳಿಸಿದರು. ಆಗ ನಾನು (ಇಬ್‌ನು ಅಬೀ ದಿಅ್‌ಬ್) ಅವರ ತೀರ್ಪಿಗೆ ವಿರುದ್ಧವಾಗಿರುವ ಪ್ರವಾದಿಯವರ (ಸ) ಹದೀಸೊಂದನ್ನು ಅವರಿಗೆ ತಿಳಿಸಿದೆ. ಸ‌ಅದ್ (ರ) ರಬೀಅಃರೊಂದಿಗೆ (ರ) ಹೇಳಿದರು -‘ಇಬ್‌ನು ಅಬೀ ದಿಅ್‌ಬ್ ಓರ್ವ ವಿಶ್ವಾಸಾರ್ಹ ವ್ಯಕ್ತಿಯಾಗಿದ್ದಾರೆ. ಅವರು ನನ್ನ ತೀರ್ಪಿಗೆ ವಿರುದ್ಧವಾದ ಹದೀಸೊಂದನ್ನು ಪ್ರವಾದಿಯವರಿಂದ (ಸ) ತಿಳಿಸಿದ್ದಾರೆ’. ಆಗ ರಬೀಅಃ (ರ) ಹೇಳಿದರು – ‘ನೀನು ಇಜ್‌ತಿಹಾದ್ ಮಾಡಿರುವೆ ಮತ್ತು ನಿನ್ನ ತೀರ್ಪು ಜಾರಿಗೊಳಿಸಲ್ಪಟ್ಟಿದೆ’. ಆಗ ಸ‌ಅದ್ ಹೇಳಿದರು -‘ಆಶ್ವರ್ಯ! ನಾನು ಸ‌ಅದ್‌ನ ತೀರ್ಪನ್ನು ಜಾರಿಗೊಳಿಸಿ, ಪ್ರವಾದಿಯವರ (ಸ) ತೀರ್ಪನ್ನು ತಡೆಹಿಡಿಯುವುದೇ? ಇಲ್ಲ, ನಾನು ಸ‌ಅದ್‌ನ ತೀರ್ಪನ್ನು ತಡೆಹಿಡಿದು ಪ್ರವಾದಿಯವರ (ಸ) ತೀರ್ಪನ್ನು ಜಾರಿಗೊಳಿಸುವೆ’. ಹಾಗೆ ಅವರು ತೀರ್ಪು ಪುಸ್ತಕವನ್ನು ತರಿಸಿ ಆ ತೀರ್ಪನ್ನು ಹರಿದುಹಾಕಿದರು ಮತ್ತು ಹೊಸ ತೀರ್ಪನ್ನು ಜಾರಿಗೊಳಿಸಿದರು.”

33. ಮಾತ್ರವಲ್ಲ ಅದಕ್ಕೆ ಪ್ರತಿಫಲವೂ ಇದೆ.

ಪ್ರವಾದಿಯವರು (ಸ) ಹೇಳಿದರು

[إِذا حكَمَ الْحَاكِمُ فَاجْتَهَدَ، فَأَصَابَ، فَلَهُ أَحْرَانِ، وَإِذَا حَكم ناحهد، فأخطاء قله أخر واحد]

“ಓರ್ವ ತೀರ್ಪುಗಾರನು ಇಜ್‌ತಿಹಾದ್ ನಡೆಸಿ ತೀರ್ಪು ನೀಡಿದಾಗ ಅವನ ತೀರ್ಪು ಸರಿಯಾಗಿದ್ದರೆ ಅವನಿಗೆ ಎರಡು ಪುಣ್ಯಗಳಿವೆ. ಅವನು ಇಜ್‌ತಿಹಾದ್ ನಡೆಸಿ ತೀರ್ಪು ನೀಡಿದಾಗ ಅವನ ತೀರ್ಪು ತಪ್ಪಾಗಿದ್ದರೆ ಅವನಿಗೆ ಒಂದು ಪುಣ್ಯವಿದೆ”. ಬುಖಾರಿ, ಮುಸ್ಲಿಮ್ ಮತ್ತಿತರರು ಇದನ್ನು ಉಲ್ಲೇಖಿಸಿದ್ದಾರೆ.

34. ‘ಈಕಾದುಲ್ ಹಿಮಮ್’ನ ಟಿಪ್ಪಣಿಯಿಂದ ಪುಟ 93

35. ಫುಲಾನೀ ತನ್ನ ‘ಈಕಾದುಲ್ ಹಿಮಮ್’ ಪುಟ 99ರಲ್ಲಿ.

Tags: ಅಬೂ ಹನೀಫಾಅಲ್ಲಾಹ್ ﷻಅಹ್ಮದ್ ಇಬ್‌ನು ಹಂಬಲ್ (ರ)ಇತಿಹಾಸಇಸ್ಲಾಮ್‍ಕಾನೂನುಖುರಾನ್ಜೀವನಶೈಲಿತಕ್‌ಲೀದ್ಮಹಾನ್ ವ್ಯಕ್ತಿಗಳುಮಾಲಿಕ್ ಇಬ್‌ನು ಅನಸ್ಮುಹಮ್ಮದ್(ﷺ)ಶಾಫಿಈ (ರ)ಶೈಖ್ ಅಲ್ಬಾನೀಶೈಖ್ ಮುಹಮ್ಮದ್ ನಾಸಿರುದ್ದೀನ್ ಅಲ್ ಅಲ್ಬಾನೀ
Previous Post

ಪವಿತ್ರ ಕುರ್‌ಆನ್ ಎಂದರೇನು? – What is Holy Quran

Next Post

ಕನ್ನಡ ಇಸ್ಲಾಂ 360° – 01 – ಇಸ್ಲಾಂ ಎಂದರೇನು?

GIRISH K S

GIRISH K S

Next Post

ಕನ್ನಡ ಇಸ್ಲಾಂ 360° - 01 - ಇಸ್ಲಾಂ ಎಂದರೇನು?

Leave a Reply Cancel reply

Your email address will not be published. Required fields are marked *

Categories

© 2023 Kannada Islam - Premium Kannada Islamic news & magazine by GIRISH (ISHAAQ).

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ಗೂಡು
  • ಇಸ್ಲಾಮ್ ಕುರಿತ ಪ್ರಶ್ನೋತ್ತರಗಳು – Questions and Answers about Islam
    • ಇಸ್ಲಾಮ್ ಕುರಿತ ಸಂಶಯಗಳು ಭಾಗ – 1
    • ಇಸ್ಲಾಮ್ ಕುರಿತ ಸಂಶಯಗಳು ಭಾಗ – 2
    • ಇಸ್ಲಾಮ್ ಕುರಿತ ಸಂಶಯಗಳು ಭಾಗ – 3
    • ರಂಜಾನ್ ತಿಂಗಳ ಕುರಿತಾದ ಪ್ರಶ್ನೆಗಳು ಮತ್ತು ಉತ್ತರಗಳು.
  • ಇಸ್ಲಾಮನ್ನು ಅನ್ವೇಷಿಸಿ
    • All
    • ಅತಿರೇಕತೆಯ ವಿರುದ್ಧ
    • ಇಸ್ಲಾಮನ್ನು ತಿಳಿಯಿರಿ
    • ಕಪಟ ವಿಶ್ವಾಸಿಗಳು
    • ಖುರಾನ್ ಕುರಿತು
    • ಜೀವನದ ಉದ್ದೇಶ
    • ಭಯೋತ್ಪಾದನೆಯ ವಿರುದ್ಧ
    • ಹಬ್ಬಗಳು
    • ಹೊಸದಾಗಿ ಇಸ್ಲಾಮಿಗೆ ಬಂದಿರುವಿರೇ?

    ಶಾಂತಿಗೆ ಮತ್ತೊಂದು ಹೆಸರೇ ಇಸ್ಲಾಮ್

    ಕನ್ನಡ ಇಸ್ಲಾಂ 360° – 01 – ಇಸ್ಲಾಂ ಎಂದರೇನು?

    ಪವಿತ್ರ ಕುರ್‌ಆನ್ ಎಂದರೇನು? – What is Holy Quran

    ಇಸ್ಲಾಮೇ ಏಕೆ? – Why Islam?

    ನವ ಮುಸ್ಲಿಮರಿಗೆ ಸಂಕ್ಷಿಪ್ತ ಉಪಯುಕ್ತ ಮಾರ್ಗದರ್ಶಿ – A brief useful guide for new-Muslims

    ನವ ಮುಸ್ಲಿಮರಿಗೆ ಸಂಕ್ಷಿಪ್ತ ಉಪಯುಕ್ತ ಮಾರ್ಗದರ್ಶಿ – A brief useful guide for new-Muslims

    ಇಸ್ಲಾಂ ಮತ್ತು ಕುರಾನಿನ ನೈಜ ಸಂದೇಶ – The true message of Islam and the Quran

  • ಅಲ್ಲಾಹ್
    231246

    ನಾವು ಇಲ್ಲೇಕ್ಕಿದ್ದೇವೆ? – Why are we here?

    231252

    ಯೇಸುವಿನ ಪ್ರಕಾರ ದೇವನೆಂದರೆ ಯಾರು ? – Who is God according to Jesus

    231233

    ದೇವನಿದ್ದರೆ ಅನ್ಯಾಯಗಳೇಕೆ? – If there is a God why injustices?

    230493

    ದೇವರ ನೈಜ ಧರ್ಮ ಯಾವುದು? – What is the true religion of God?

    230497

    ಅಲ್ಲಾಹನ(ದೇವರ) ಕೃಪೆ – By the grace of Allah (God)

    230502

    ಇಸ್ಲಾಮಿನಲ್ಲಿ ಏಕದೇವತ್ವ – Monotheism in Islam

  • ನಂಬಿಕೆ
    • All
    • ಆರಾಧನೆ
    • ಪ್ರಮಾಣೀಕರಣ
    • ಮರಣಾನಂತರ ಜೀವನ
    • ಸ್ವರ್ಗ

    ಆತ್ಮದ ವಾಸ್ತವ – The reality of the Soul

    ಜೀವನ ಘಟ್ಟದ ಪಯಣವೆತ್ತ ? – Where is the journey of the of life?

    ಇಸ್ಲಾಮಿನ ಮೂರು ಮೂಲಭೂತ ತತ್ವಗಳು – Three Fundamental Principles of Islam

    ನಮಗೆಲ್ಲಾ ಒಬ್ಬನೇ ಸೃಷ್ಟಿಕರ್ತ!! – One Creator for All of Us!!

    ನೀವೇಕೆ ಆರಾಧಿಸುವುದಿಲ್ಲ? – Why don’t you worship?

    ಸಾವು: ಅಂತ್ಯವೋ…? ಹೊಸದೊಂದು ಆರಂಭವೋ? – Death is End? or New Beginning

  • ಪವಿತ್ರೀಕರಣ

    ಖುರ್‌ಆನಿನ ಬೆಳಕಿನಲ್ಲಿ ರೋಗ ಪರಿಹಾರ

    ಶುದ್ಧೀಕರಣ / ವುದೂ – Wudu

  • ಖುರಾನ್
  • ಅಹದೀತ್ ಹೇಳಿಕೆಗಳು
  • ಇಸ್ಲಾಮ್ ಮತ್ತು ಶಾಸ್ತ್ರಗಳು
    • All
    • ಇಸ್ಲಾಮಿನ ಕುರಿತಾಗಿ ಇತರರು
    • ಕ್ರೈಸ್ತ ಧರ್ಮ
    • ಖುರಾನ್ ಆಧಾರಗಳು

    ಯೇಸುವಿನ ಪ್ರಕಾರ ದೇವನೆಂದರೆ ಯಾರು ? – Who is God according to Jesus

    ಯೇಸುವಿನ ಅದ್ಭುತ ಜನನ – Miraculous Birth of Jesus

    ಮಾನವ ಶರೀರವೆಂಬ ಅದ್ಭುತ ಯಂತ್ರವನ್ನು ನಿರ್ಮಿಸಿದವನು ಯಾರು? – Who built the amazing machine called human body?

    ಅಲ್ಲಾಹನ ಸಂದೇಶವಾಹಕರಾದ ಮಹಮ್ಮದ್(ಸ)ರ ಕುರಿತು ಮುಸ್ಲೀಮೇತರ ಟಿಪ್ಪಣಿಗಳು – Non-Muslim Notes on Muhammad (PBUH), Messenger of Allah

    ಕ್ರೈಸ್ತರೊಂದಿಗೆ ಸಂವಾದ (ಯೆಹೋವನ ಸಾಕ್ಷಿಗಳನ್ನು ಹೊರೆತುಪಡಿಸಿ) – Dialogue with Christians (Except Jehovah’s Witnesses)

    ದೇವನೊಬ್ಬನೆ ಅಥವ ಮೂವರೇ? – Is God one or three?

  • ಪ್ರವಾದಿಗಳು
    • All
    • ಮುಹಮ್ಮದ್(ﷺ)
    • ಯೇಸು(ಈಸ (ಅ))

    ರಬಿವುಲ್ ಅವ್ವಲ್ 12 ಪ್ರವಾದಿ(ಸ) ಮನೆಯ ವಾತಾವರಣ –

    ಇಸ್ಲಾಮಿನ ಸಂದೇಶವಾಹಕ  ಮುಹಮ್ಮದ್(ﷺ) – The Messenger of Islam ’Muhammad’ (ﷺ)

    ಯೇಸುವಿನ ಪ್ರಕಾರ ದೇವನೆಂದರೆ ಯಾರು ? – Who is God according to Jesus

    ಯೇಸುವಿನ ಅದ್ಭುತ ಜನನ – Miraculous Birth of Jesus

    ಪ್ರವಾದಿ (ﷺ) ಯನ್ನು ಅರಿಯಿರಿ – Know the Prophet (ﷺ)

    ಅಲ್ಲಾಹನ ಸಂದೇಶವಾಹಕರಾದ ಮಹಮ್ಮದ್(ಸ)ರ ಕುರಿತು ಮುಸ್ಲೀಮೇತರ ಟಿಪ್ಪಣಿಗಳು – Non-Muslim Notes on Muhammad (PBUH), Messenger of Allah

    ದೇವನೊಬ್ಬನೆ ಅಥವ ಮೂವರೇ? – Is God one or three?

    ದೇವರ ಸಂದೇಶವಾಹಕ ಮುಹಮ್ಮದ್ (ﷺ)Messenger of God Muhammad (ﷺ)

    ಪ್ರವಾದಿ ಮುಹಮ್ಮದ್(ﷺ) – Prophet Muhammad(ﷺ)

  • ಜೀವನ ಚರಿತ್ರೆಗಳು
    • All
    • ಅಲ್-ಅಶರ ಅಲ್-ಮುಬಶ್ಶರೂನ್
    • ಇಮಾಮ್‍ಗಳು
    • ಖುಲಫಾ-ಎ-ರಾಶಿದೂನ್
    • ಪ್ರಭಾವ ಬೀರುವ ಘಟನೆಗಳು
    • ಪ್ರವಾದಿಯ ಮಡದಿಯರು
    • ಸಹಾಬಿಗಳು
    • ಹದೀಸ್ ವಿದ್ವಾಂಸರು

    10. ಆಮಿರ್ ಬಿನ್ ಅಬ್ದುಲ್ಲಾ ಬಿನ್ ಅಲ್‌-ಜರ್ರಾಹ್(ಅಬೂ ಉಬೈದ)(ರ) – Aamir bin Abdillah bin al-Jarrah(Abu Ubaida)

    9. ಸಈದ್ ಬಿನ್ ಝೈದ್(ರ) – Saeed Ibn Zayd (RA)

    8. ಸಅದ್ ಬಿನ್ ಅಬೀ ವಕ್ಕಾಸ್‌(ರ) – Sa’d Ibn Abi Waqqas (RA)

    7. ಅಬ್ದುರ್ರಹ್ಮಾನ್ ಬಿನ್ ಔಫ್(ರ) – Abdul ar-Rahman Bin Auf (RA)

    6. ಝುಬೈರ್ ಬಿನ್‌ ಅವ್ವಾಮ್(ರ) – Zubair Ibn Al-Awwam (RA)

    5. ತಲ್ಹ ಬಿನ್ ಉಬೈದುಲ್ಲಾ(ರ) – Talha bin Ubaydillah (RA)

    ಮೈಮೂನ ಬಿಂತ್ ಹಾರಿಸ್(ರ) – ಪ್ರವಾದಿ(ಸ) ರವರ ಕೊನೆಯ ಮಡದಿ

    ರಮ್ಲ ಬಿಂತ್ ಅಬೂ ಸುಫ್ಯಾನ್ (ಉಮ್ಮು ಹಬೀಬ)(ರ) – ಪ್ರವಾದಿ(ಸ) ರವರ ಹತ್ತನೆಯ ಮಡದಿ

    ಸಫಿಯ್ಯ ಬಿಂತ್ ಹುಯಯ್(ರ) – ಪ್ರವಾದಿ(ಸ) ರವರ ಒಂಬತ್ತನೇ ಮಡದಿ

  • ಇಸ್ಲಾಮಿನ ಇತಿಹಾಸ
  • ಇಸ್ಲಾಮಿನ ಕಾನೂನು
    • All
    • ಅನಿಷ್ಟ ಪದ್ಧತಿಗಳು
    • ಫತ್ವಾ ಸ್ಪಷ್ಟೀಕರಣ
    • ಫಿಖ್
    • ಷರಿಯ(ಕಾನೂನು)

    ತಮ್ಮ ಮದ್‌ಹಬ್‌ಗಳ ಕುರಿತು ಇಮಾಮ್‌ಗಳು ಏನೆನ್ನುತ್ತಾರೆ? – What the imam’s say about their Madhab?

    ಭಯೋತ್ಪಾದನೆಯ ಬಗ್ಗೆ ಇಸ್ಲಾಮ್ ಏನೆನ್ನುತ್ತದೆ? – What does Islam say about terrorism?

    ಸೂಫಿಗಳ ಕೆಲವು ತತ್ವಗಳು – Some principles of the Sufis

    ಸಂಘಟನೆಯನ್ನು ಒಡೆಯುವವರು ಕಪಟ ವಿಶ್ವಾಸಿಗಳು! – Those who break the organization are hypocritical believers!

    ​ಇಸ್ಲಾಮ್’ನಲ್ಲಿ ಪುರುಷರಿಗೆ ಒಂದಕ್ಕಿಂತ ಹೆಚ್ಚಿನ ಪತ್ನಿಯರೇ? – Can men have more than one wife in Islam?

    ಶಿಶುಗಳನ್ನು ಕೊಲ್ಲದಿರಿ – Don”t Kill the Babies

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

  • ಇಸ್ಲಾಮ್ ಜೀವನಶೈಲಿ-ಸಂಸ್ಕೃತಿ
    • All
    • ಆರೋಗ್ಯ ಪದ್ಧತಿ
    • ಇಸ್ಲಾಮಿನ ಆಧ್ಯಾತ್ಮಿಕತೆ
    • ಇಸ್ಲಾಮಿನ ಆರ್ಥಿಕತೆ
    • ಇಸ್ಲಾಮಿನ ನಾಗರಿಕತೆ
    • ಇಸ್ಲಾಮಿನ ನೈತಿಕತೆ
    • ಇಸ್ಲಾಮಿನ ರಾಜಕೀಯತೆ
    • ಇಸ್ಲಾಮಿನ ಸಾಮಾಜಿಕತೆ
    • ಕೌಟುಂಬಿಕ ಪದ್ಧತಿ
    • ಧಾರ್ಮಿಕ ಸೈರಣೆ

    ಖುರ್‌ಆನಿನ ಬೆಳಕಿನಲ್ಲಿ ರೋಗ ಪರಿಹಾರ

    ಜೀವನ ಘಟ್ಟದ ಪಯಣವೆತ್ತ ? – Where is the journey of the of life?

    ಶುದ್ಧೀಕರಣ / ವುದೂ – Wudu

    ದೇವರ ನೈಜ ಧರ್ಮ ಯಾವುದು? – What is the true religion of God?

    ನಮ್ಮ ಜೀವನದ ಉದ್ದೇಶವೇನು? – The purpose of our life

    ಇಸ್ಲಾಮಿನ ಮೂರು ಮೂಲಭೂತ ತತ್ವಗಳು – Three Fundamental Principles of Islam

    ಇಸ್ಲಾಮಿನಲ್ಲಿ ಏಕದೇವತ್ವ – Monotheism in Islam

    ​ಇಸ್ಲಾಮ್’ನಲ್ಲಿ ಪುರುಷರಿಗೆ ಒಂದಕ್ಕಿಂತ ಹೆಚ್ಚಿನ ಪತ್ನಿಯರೇ? – Can men have more than one wife in Islam?

    ದೇವರ ಸಂದೇಶವಾಹಕ ಮುಹಮ್ಮದ್ (ﷺ)Messenger of God Muhammad (ﷺ)

  • ಇಸ್ಲಾಮಿನಲ್ಲಿ ಮೂಲಭೂತ ಹಕ್ಕುಗಳು
    • All
    • ಮಹಿಳಾ ಹಕ್ಕುಗಳು
    • ಮಾನವ ಹಕ್ಕುಗಳು
    • ಸಮಾನತೆ

    ಇಸ್ಲಾಂ ಧರ್ಮದಲ್ಲಿ ಮಹಿಳೆಯ ಹಕ್ಕು ಭಾದ್ಯತೆಗಳು – Women’s Right in Islam

    ​ಇಸ್ಲಾಮ್’ನಲ್ಲಿ ಪುರುಷರಿಗೆ ಒಂದಕ್ಕಿಂತ ಹೆಚ್ಚಿನ ಪತ್ನಿಯರೇ? – Can men have more than one wife in Islam?

    ನಿಮ್ಮ ತಂದೆ-ತಾಯಿಯರ ಹಕ್ಕುಗಳು – Your parental rights

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

  • ಪ್ರಚಲಿತ ವಿದ್ಯಮಾನ
  • ಮಾಸ ಪತ್ರಿಕೆಗಳು
  • ಅರೇಬಿಕ್

© 2023 Kannada Islam - Premium Kannada Islamic news & magazine by GIRISH (ISHAAQ).

WhatsApp us