ನಾವು ಇಲ್ಲೇಕ್ಕಿದ್ದೇವೆ ?
ನಮ್ಮ ಅಸ್ತಿತ್ವ; ನಮ್ಮ ಅಸ್ತಿತ್ವವು ಉದ್ದೇಶಉಳ್ಳದ್ದಾಗಿದೆಯೋ? ಅಥವ ಉದ್ದೇಶರಹಿತವಾಗಿದೆಯೋ?, ನಾವು ಇಂದು ಜೀವಂತವಾಗಿರುವುದು ಒಂದು ಸತ್ಯ. ಹಾಗೆಯೇ, ಒಂದು ದಿನ ನಾವೆಲ್ಲರೂ ಸಾವನ್ನಪ್ಪುವುದೂ ವಾಸ್ತವಿಕವಾಗಿದೆ. ಆದರೆ ಇಲ್ಲಿ ಉದ್ಭವಿಸುವ ಪ್ರಶ್ನೆಯೇನೆಂದರೆ,ನಾವು ಜೀವಿಸುವುದು ಮತ್ತು ಮರಣ ಹೊಂದುವುದು ಉದ್ದೇಶ ರಹಿತವಾಗಿದೆಯೇ? ಅಥವ ನಮ್ಮ ಅಸ್ತಿತ್ವಕ್ಕೆ ಏನಾದರೂ ಉದ್ದೇಶವಿದೆಯೇ? ನಮ್ಮ ಸುತ್ತಮುತ್ತಲಿನ ಜಗತ್ತನ್ನು ನೋಡೋಣ,. ಇಲ್ಲಿ ಯಾವುದಾದರೂ ವಸ್ತು ವಿನಾಃ ಕಾರಣ ಅಥವ ಉದ್ದೇಶವಿಲ್ಲದೇ ಸಂಭವಿಸುತ್ತಿದೆಯೇ? ಖಂಡಿತ ಇಲ್ಲ. ಯಾವುದೂ ವಿನಾಃ ಕಾರಣ ಸಣಭವಿಸುವುದಿಲ್ಲ. ವಿಷಯ ಹೀಗಿರುವಾಗ ಇಡೀ ಮಾನವ ಕುಲವನ್ನು ಯಾವುದೇ ಉದ್ದೇಶವಿಲ್ಲದೇ ಸೃಷ್ಟಿಸಲಾಗಿದೆಯೆಂದು ನಾವು ಒಪ್ಪುವುದಾದರೂ ಹೇಗೆ? ಹೌದು ಖಂಡಿತವಾಗಿ ಭೂಮಿಯ ಮೇಲೆ ನಮ್ಮ ಅಸ್ತಿತ್ವದ ಹಿಂದೆ ಮಹತ್ವವಾದ ಒಂದು ಉದ್ದೇಶವಿದೆ. ಕಾಲ ಮಿಂಚುವ ಮೊದಲು ಪ್ರತಿಯೊಬ್ಬ ಮನುಷ್ಯನು ಈ ಉದ್ದೇಶವನ್ನು ಅರಿಯುವುದು ಅಗತ್ಯವಾಗಿದೆ.
ಈ ಭೂಮಿಯ ಮೇಲೆ ನಾವು ನಮ್ಮ ಇಚ್ಛೆಯಂತೆ ಬರಲಿಲ್ಲ. ನಮ್ಮ ಇಚ್ಛೆಯ ಪ್ರಕಾರ ಈ ಭೂಮಿಯಿಂದ ನಾವು ತೆರಳುವುದಿಲ್ಲ. ಆದ್ದರಿಂದ ಈ ಎಲ್ಲಾ ಕಾರ್ಯಗಳ ಹಿಂದೆ ಒಂದು ಸರ್ವೋಚ್ಛ ಶಕ್ತಿಯದೆಂದು ಸ್ಪಷ್ಟವಾಗುತ್ತದೆ. ಅದೇ ನಮ್ಮ ಹುಟ್ಟು ಮತ್ತು ಸಾವನ್ನು ನಿಯಂತ್ರಿಸುತ್ತಿದೆ.
ಆ ಸೃಷ್ಟಿಕರ್ತನೇ ನಮ್ಮನ್ನು ಪರೀಕ್ಷಿಸಲಿಕ್ಕಾಗಿ ಭೂಮಿಯ ಮೇಲೆ ಸೃಷ್ಟಿಸಿದ್ದಾನೆ. ಅವನೇ ಪ್ರತಿಯೊಬ್ಬ ಮನುಷ್ಯನಿಗೂ, ಈ ಪರೀಕ್ಷೆಯಲ್ಲಿ ಮಾರ್ಗದರ್ಶನ ಮಾಡಲು ಒಳಿತು ಮತ್ತು ಕೆಡುಕನ್ನು ಗ್ರಹಿಸುವ ಸಾಮಥ್ರ್ಯವನ್ನು ನೀಡಿದ್ದಾನೆ, ಆ ಸೃಷ್ಟಿಕರ್ತನು ತನ್ನ ಗ್ರಂಥದಲ್ಲಿ ಹೇಳಿದ್ದಾನೆ.
“ಮನುಷ್ಯನ ಆತ್ಮ ಹಾಗೂ ಅದನ್ನು ಸುಗಮಗೊಳಿಸಿದನಾಣೆ ಆ ಬಳಿಕ ಅವನು ಅದರ ಸುಷ್ಟತೆಯನ್ನು ಅದರ ಸಾತ್ವಿಕತೆಯನ್ನು ಅದಕ್ಕೆ ಪ್ರೇರೇಪಿಸಿದನು.”(ಖುರ್‍ಆನ್ 91:7,8)
ಅವನು ಮನುಷ್ಯರಲ್ಲಿಯೇ ಸಂದೇಶವಾಹಕರನ್ನು ಆರಿಸಿ ಅವರ ಮುಖಾಂತರ ಜನರಿಗೆ, ಮಾರ್ಗದರ್ಶನವನ್ನು ಮಾಡುತ್ತಾನೆ ಮತ್ತು ಅವನು, ಅನೇಕ ದಿವ್ಯ ಗ್ರಂಥಗಳನ್ನು ಮನುಷ್ಯರ ಮಾರ್ಗದರ್ಶನಕ್ಕಾಗಿ ಅವತೀರ್ಣಗೊಳಿಸಿರುವನು. ಈ ಸಂದೇಶವಾಹಕರಿಗೆ ಪುರಾತನ ಬಾರತದಲ್ಲಿ ಋಷಿಗಳು ಮತ್ತು ಪ್ರವಾದಿಗಳು ಎನ್ನಲಾಗುತ್ತಿತ್ತು. ಆ ಸಂದೇಶವಾಹಕರ ಸರಣಿಯ ಘಟ್ಟದಲ್ಲೇ ಅಂತಿಮವಾಗಿ ಬಂದಿರುವವರು ಮುಹಮ್ಮದ್{ಸ} ಆಗಿರುವರು. ಅವರು 1435 ವರ್ಷಗಳ ಹಿಂದೆ ಅರೇಬಿಯಾದ ಮರಳುಗಾಡಿನಲ್ಲಿ ಜನಿಸಿದರು. ಅನಕ್ಷರಸ್ಥರಾಗಿದ್ದ ಅವರ ಮೇಲೆ ಅಲ್ಲಾಹನ ವಾಣಿ ಅವತೀರ್ಣಗೊಂಡಿತು.
ಆ ಸೃಷ್ಟಿಕರ್ತನ ಸಂದೇಶವೇ ಖುರ್‍ಆನ್ ಆಗಿದ್ದು 1435 ವರ್ಷಗಳ ದೀರ್ಘಾವಧಿಯಿಂದ ಇದು ಸೃಷ್ಟಿಕರ್ತನಿಂದಲೇ ಸಂರಕ್ಷಿಸಲ್ಪಟ್ಟಿದೆ. ಆ ಸೃಷ್ಟಿಕರ್ತನು ಹೇಳುತ್ತಾನೆ
“ಈ ಉಪದೇಶವನ್ನು ನಿಶ್ಚಯವಾಗಿ ನಾವು ಅವತೀರ್ಣಗೊಳಿಸಿರುತ್ತೇವೆ, ಮತ್ತು ನಾವೇ ಅದರ ಸಂರಕ್ಷಕರಾಗಿರುತ್ತೇವೆ”(ಖುರ್‍ಆನ್ 15:9)
ಈ ಖುರ್‍ಆನ್ ಸಕಲ ಮಾನವ ಕುಲಲ್ಲೆ ಸರ್ವಶಕ್ತನಾದ ಸೃಷ್ಟಿಕರ್ತನ ಕಡೆಯಿಂದ ಅವತೀರ್ಣಗೊಂಡ ಕೊನೇಯ ಅಥವ ಅಂತಿಮ ಸಂದೇಶವಾಗಿದೆ. ಅರಬಿ ಭಾಷೆಯಲ್ಲಿ ಸೃಷ್ಟಿಕರ್ತನಿಗೆ ‘ಅಲ್ಲಾಹ್’ ಎನ್ನುತ್ತಾರೆ. ಬನ್ನಿ ಈ ವಿಶ್ವವನ್ನು ಸೃಷ್ಟಿಸಿ ಅದನ್ನು ಪರಿಪಾಲಿಸುತ್ತಿರುವವನ ಸಂದೇಶದ ಮೂಲಕ ನಮ್ಮ ಜೀವನದ ಉದ್ದೇಶವನ್ನು ಮರಣನಂತರ ಏನಾಗುವುದೆಂಬುದು ಅರಿಯೋಣ.
ನಮ್ಮ ಅಸ್ತಿತ್ವದ ಉದ್ದೇಶ:
ಖುರ್‍ಆನ್‍ನಲ್ಲಿ ಸೃಷ್ಟಿಕರ್ತನು ನಮ್ಮ ಅಸ್ತಿತ್ವದ ಉದ್ದೇಶವನ್ನು ಸ್ಪಷ್ಟವಾಗಿ ಹೇಳಿದ್ದಾನೆ. “ ನಿಮ್ಮನ್ನು ಪರೀಕ್ಷಿಸಿ ನಿಮ್ಮ ಪೈಕಿ ಯಾರು ಸತ್ಕರ್ಮವೆಸಗುವವನೆಂದು ನೋಡಲಿಕ್ಕಾಗಿ ಅವನು ಜೀವನವನ್ನೂ ಮರಣವನ್ನೂ ಉಂಟುಮಾಡಿದನು” (ಖುರ್‍ಆನ್ 67:2)
ಹೌದು ಸಹೋದರ ಸಹೋದರಿಯರೇ ಈ ಜೀವನವು ಒಂದು ಪರೀಕ್ಷೆಯಾಗಿದೆ. ಮನುಷ್ಯನು ಒಳಿತಿನ ಕಾರ್ಯಗಳನ್ನು ಎಸಗುತ್ತಾನೋ ಅಥವ ಕೆಡುಕಿನ ಕಾರ್ಯಗಳನ್ನೋ, ಸತ್ಯದ ಮಾರ್ಗವನ್ನು ಅನುಸರಿಸುವನೋ ಅಥವ ಮಿತ್ಯವನ್ನೋ ಎಂಬುದನ್ನು ನೋಡಲಿಕ್ಕಾಗಿ ಅವನನ್ನು ಅರೀಕ್ಷೆಗೆ ಒಳಪಡಿಸಲಾಗುತ್ತದೆ. ನಮ್ಮ ಅಸ್ತಿತ್ವದ ಉದ್ದೇಶ ಈ ಪರಿಕ್ಷೆಯಲ್ಲಿ ತೇರ್ಗಡೆಯಾಗುವುದಾಗಿದೆ. ನಿರ್ಣಯಕ ದಿನದ ಒಂದು ಪ್ರಶ್ನೆ
“ಈ ಪರೀಕ್ಷೆಯ ಫಲಿತಾಂಶವು ಯಾವಾಗ ಪ್ರಕಟಿತವಾಗುವುದು?’ ಅಲ್ಲಾಹನು ಹೇಳುತ್ತಾನೆ ’ಪ್ರತಿಯೊಂದು ಜೀವಿಗೂ ಮರಣದ ರುಚಿ ಸವಿಯಬೇಕಾಗಿದೆ ಮತ್ತು ನೀವೆಲ್ಲರೂ ನಿಮ್ಮ ಪ್ರತಿಫಲವ್ನನ್ನು ಪುನರುತ್ಥಾನ ದಿನದಂದು ಪಡೆಯುವವರಿದ್ದೀರಿ. ಅಲ್ಲಿ ಯಾರು ನರಕಾಗ್ನಿಯಿಂದ ರಕ್ಷಣೆ ಹೊಂದಿ ಸ್ವರ್ಗದಲ್ಲಿ ಪ್ರವೇಶಿಸಲ್ಪಡುವವನೇ ನಿಜವಾದ ಜಯಶಾಲಿಯಾದನು. ಈ ಲೋಕದ ಜೀವನವಂತೂ ಕೇವಲ ಭ್ರಾಮಕ ಸಂಪತ್ತಾಗಿದೆ”(ಖುರ್‍ಆನ್ 3:158)
“ಇಹಲೋಕದ ಜೀವನದ ನಂತರ ಪರಲೋಕದ ಜೀವನವಿದೆ. ಈ ಲೋಕದ ಪ್ರತಿಯೊಬ್ಬ ಮನುಷ್ಯನನ್ನು ಪುನಃ ಜೀವಂತಗೊಳಿಸಿ, ವಿಚಾರಣೆಗೆ ಒಳಪಡಿಸಲಾಗುವುದು. ಆ ದಿನ ಯಾರಿಗೂ ತಪ್ಪಿಸಿಕೊಳ್ಳಲು ಸಾಧ್ಯವಾಗಲಾರದು, ಅಲ್ಲಾಹನು ಹೇಳುತ್ತಾನೆ ನಿಸ್ಸಂದೇಹವಾಗಿಯು ತೀರ್ಮಾನದ ದಿನವು ಒಂದು ನಿಶ್ಚಿತ ಸಮಯವಾಗಿದೆ. ಕಹಳೆ ಮುಳುಗಿದಂದು ನೀವು ತಂಡೋಪ ತಂಡಗಳಾಗಿ ಹೊರಟು ಬರುವಿರಿ”( ಖುರ್‍ಆನ್ 78: 17,19)
ಅಂದು ನಾವು ನಮ್ಮನ್ನು ಮತ್ತೊಮ್ಮೆ ಜೀವಂತಗೊಳಿಸಲಾಗಿದೆಯೆಂದು ಖಚಿತವಾಗಿ ಅರಿತುಕೊಳ್ಳುವೆವು. ಆದರೆ ಅಂದು ನಮ್ಮ ರಕ್ಷಣೆಗಾಗಿ ಯಾವ ಕಾರ್ಯವನ್ನೂ ಮಾಡಲಿಕ್ಕೆ ಸಾಧ್ಯವಾಗಲಾರದು. ಕೇವಲ ನಾವು ಇಹಲೋಕದಲ್ಲಿ ಮಾಡಿದ ಕಾರ್ಯಗಳ ಫಲಿತಾಂಶಗಳನ್ನು ಕಾಣುವೆವು. ಆ ದಿನ ನಮ್ಮ ಸಂಪತ್ತು, ತಂದೆ-ತಾಯಿ, ಮಡದಿ-ಮಕ್ಕಳು, ಬಂಧು-ಬಳಗ, ಮಿತ್ರರು, ಯಾರೂ ಜೊತೆಗಿರುವುದಿಲ್ಲ. ಹುಟ್ಟಿದಾಗ ನಗ್ನರಾಗಿ ಒಬ್ಬಂಟಿಗರಾಗಿರುವಂತೆ, ಆ ದಿನ ಅಲ್ಲಿ ನಾವು ನಮ್ಮ ಪ್ರಭುವನ್ನು ಒಬ್ಬೊಬ್ಬರಾಗಿ ಭೇಟಿಯಾಗಲಿರುವೆವು.
“ಆ ದಿನ ನಮ್ಮ ಜೊತೆ ನಮ್ಮ ಕರ್ಮಗಳ ಹೊರತು ಬೇರೇನೂ ಇರುವುದಿಲ್ಲ. ಪುನಃ ಜೀವಂತಗೊಳಿಸುವುದು ಸಾಧ್ಯವೇ?” (ಖುರ್‍ಆನ್: 36: 81,82.)
ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಠಿಸಿದವನನ್ನು ಅದರಂತಹವನ್ನು ಸೃಷ್ಠಿಸಲು ಸಾಮಥ್ರ್ಯವುಳ್ಳವನಲ್ಲವೇ? ಅವನೇ ಮಹಾ ಸೃಷ್ಠಿಕರ್ತನು ಮಹಾ ಜ್ಞಾನಿಯೂ ಆಗಿರುವನು. ಅವನು ಯಾವುದಾದರೂ ವಸ್ತುವನ್ನು ಬಯಸಿದರೆ ಅದಕ್ಕೆ ಆಗು ಎಂದು ಹೇಳುತ್ತಾನೆ, ಅದು ಆಗಿಬಿಡುತ್ತದೆ. ಖುರ್‍ಆನ್ ಹೇಳುತ್ತದೆ
“ಸೃಷ್ಠಿಯ ಆರಂಭ ಮಾಡುವವನೂಅವನೇ ಮತ್ತು ಅದರ ಪುನರಾವರ್ತನೆ ಮಾಡುವವನೂ ಅವನೇ. ಇದು ಅವನಿಗೆ ಅತ್ಯಂತ ಸುಲಭವಾದದ್ದು” (ಖುರ್‍ಆನ್; 30:27)
ಅಂತಿಮ ತೀರ್ಪು:
ಖುರ್‍ಆನ್ ಹೇಳುತ್ತದೆ,
“ಅಣು ಗಾತ್ರದಷ್ಟು ಪುಣ್ಯ ಕಾರ್ಯವೆಸಗಿದವನು ಅದನ್ನು ಕಂಡೇ ತೀರುವನು, ಅಣು ಗಾತ್ರದಷ್ಟು ಪಾಪ ಕಾರ್ಯವೆಸಗಿದವನು ಅದನ್ನು ಕಂಡೇತಿರುವನು.” (ಖುರ್‍ಆನ್;99:7,8)
ಆ ದಿನ ನಾವು ಮಾಡಿರುವ ಕಾರ್ಯಗಳ ದಾಖಲೆಯನ್ನು ನಮ್ಮ ಮುಂದೆ ಪ್ರಸ್ತುತ ಪಡಿಸಲಾಗುವುದು ಯಾರ ಮೇಲಾದರೂ ಅನ್ಯಾಯವೆಸಗಲಾಗದಿದ್ದರೆ ಅಂದು ನ್ಯಾಯ ದೊರಕಿಸಿ ಕೊಡಲಾಗುವುದು. ಆ ದಿನದ ಕುರಿತು ಖುರ್‍ಆನ್ ಹೇಳುತ್ತದೆ;
“ಇವರ ಬಾಯಿಗಳಿಗೆ ಮುದ್ರೆಯನ್ನೂತ್ತಿ ಬಿಡುವೆವು. ಇವರು ಭೂಲೋಕದಲ್ಲಿ ಏನು ಸಂಪಾದಿಸುತ್ತಿದ್ದಾರೆಂದು ಇವರ ಕೈಗಳು ನಮ್ಮೊಡನೆ ಮಾತಾಡುವುದು ಮತ್ತು ಇವರ ಕಾಲುಗಳು ಸಾಕ್ಷ್ಯ ಹೇಳುವುವು” (36:65)
ತೀರ್ಪಿನ ನಂತರ ನಮ್ಮ ಕಾರ್ಯಗಳ ಅನುಗುಣವಾಗಿ ನಮಗೆ ಶಾಶ್ವತವಾದ ಸ್ಥಾನ (ಸ್ವರ್ಗ ಅಥವ ನರಕ) ನೀಡಲಾಗುವುದು. ಖುರ್‍ಆನ್ ಹೇಳುವುದು;
“ತರುವಾಯ ಯಾರ (ಪುಣ್ಯ ಕರ್ಮಗಳ) ತೂಕವು ಭಾರವಾಗಿರುವುದೋ ಅವನು ಮನೋಹರವಾದ ಸುಖಭೋಗದಲ್ಲಿರುವನು (ಸ್ವರ್ಗದಲ್ಲಿ) ಮತ್ತು ಯಾರ (ಪುಣ್ಯ ಕರ್ಮಗಳ) ತೂಕವು ಹಗುರವಾಗಿರುವುದೋ ಅವನ ನಿವಾಸವು ಆಳವಾದ (ನರಕಾಗ್ನಿಯ) ಹೊಂಡವಾಗಿರುವುದು.” (ಖುರ್‍ಆನ್; 101:9)
ಸಹೋದರ ಸಹೋದರಿಯರೆ, ಈ ಘಟನೆಗಳು ಖಂಡಿತವಾಗಿ ಜರುಗಲಿವೆ. ಖುರ್‍ಆನ್ ಹೇಳುತ್ತದೆ;
“ಖಂಡಿತವಾಗಿಯೂ ಪುನರುತ್ಥಾನದ ಘಳಿಗೆ ಬರಲಿದೆ.ಅದು ಬರುವುದರಲ್ಲಿ ಯಾವ ಸಂದೇಹವಿಲ್ಲ”(40:59)
ಸೃಷ್ಠಿಕರ್ತನಿಂದ ನಾವು ಪುನಃ ಜೀವಂತಗೊಳಿಸಲ್ಪಟ್ಟಿದ್ದೇವೆ ಎಂಬ ಅರಿವು ಎಲ್ಲರಿಗೂ ಉಂಟಾಗುತ್ತದೆ. ಅಂದು ನಿರಾಕರಿಸುತ್ತಿದ್ದವನು ಬಹಳ ಪಶ್ಚಾತ್ತಾಪ ಪಡುವನು.
ಖುರ್‍ಆನ್ ಹೇಳುತ್ತದೆ;
“ ಆ ದಿನ ಅಕ್ರಮಿಯು ತನ್ನ ಕೈಗಳನ್ನು ಕಚ್ಚಿಕೊಂಡು ಅಯ್ಯೋ ನಾನು ಪ್ರವಾದಿಯೊಂದಿಗೆ ಅವರ ಮಾರ್ಗವನ್ನು ಹಿಡಿದಿದ್ದರೆ.” ಎಂದು ಹೇಳುವನು. (25:27)
ಖುರ್‍ಆನ್ ಹೇಳುತ್ತದೆ;
“ಆ ಪ್ರಳಯ ಬಂದೆರಗುವ ದಿನ ಅಪರಾಧಿಗಳು ಮೂಕ ವಿಸ್ಮಿತರಾಗಿಬಿಡುವರು. (30:12)
ಒಳಿತಿನ ಕಾರ್ಯಗಳನ್ನು ಮಾಡುತ್ತಿದ್ದವರು ತಮ್ಮ ಕಾರ್ಯಗಳ ಪ್ರತಿಫಲವನ್ನು ಕಾಣುವರು.
ಸ್ವರ್ಗ ಮತ್ತು ನರಕಗಳಲ್ಲಿ ಏನಿದೆ?
ಸೃಷ್ಠಿಕರ್ತನ ಅಂತಿಮ ಗ್ರಂಥವಾದ ಖುರ್‍ಆನ ಸ್ವರ್ಗ ಮತ್ತು ನರಕ ದ ಬಗ್ಗೆ ಪದೇ ಪದೇ ನೆನಪಿಸುತ್ತದೆ. ಖುರ್‍ಆನ್ ಹೇಳುತ್ತದೆ; “ ಮುಂದೆ ಅವರ ಕರ್ಮಗಳಿಗೆ ಪ್ರತಿಫಲವಾಗಿ ಅವರ ಕಣ್ಮನಗಳನ್ನು ತಣಿಸುವಂತಹಾ ಯಾವ ಸತ್ಫಲಗಳನ್ನು ಅವರಿಗಾಗಿ ಬಚ್ಚಿಡಲಾಗಿದೆಯೋ ಅದರ ಅರಿವು ಯಾವ ಜೀವಿಗೂ ಇಲ್ಲ” (32:17,18)
ಖುರ್‍ಆನ್ ಹೇಳುತ್ತದೆ;
“ ಸತ್ಯ ವಿಶ್ವಾಸ ಸ್ವೀಕರಿಸಿದವರೂ ಸತ್ಕರ್ಮ ಮಾಡಿದವರೂ ಅತ್ತ್ಯುತ್ತಮ ಸೃಷ್ಠಿಗಳು ಅವರ ಪ್ರತಿಫಲ ಅವರ ಪ್ರಭುವಿನ ಬಳಿ ಶಾಶ್ವತ ನಿವಾಸವಾದ ಸ್ವರ್ಗೋದ್ಯಾನಗಳಾಗಿವೆ. ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು. ಅವರು ಅವುಗಳಲ್ಲಿ ಸದಾಕಾಲ ವಾಸಿಸುವರು, ಅಲ್ಲಾಹ್ ಅವರಿಂದ ಸಂತುಷ್ಟನಾದನು ಮತ್ತು ಅವರು ಅಲ್ಲಾಹ್‍ನಿಂದ ಸಂತುಷ್ಟರಾದರು. ಇವೆಲ್ಲವು ತನ್ನ ಪ್ರಭುವನ್ನು ಭಯಪಟ್ಟವನಿಗಾಗಿದೆ.”(98:7,8)
ಖುರ್‍ಆನ್ ಹೇಳುತ್ತದೆ;
“ಅತ್ತ್ಯುನ್ನತ ಸ್ವರ್ಗೋದ್ಯಾನದಲ್ಲಿ ಅದರ ಫಲದ ಗೊಂಚಲುಗಳು ಬಾಗಿಕೊಂಡಿರುವುವು (ಇಂತಹವರೊಡನೆ) ನೀವು ಗತಿಸಿ ಹೋದ ದಿನಗಳಲ್ಲಿ ಮಾಡಿರುವ ಸತ್ಕರ್ಮಗಳ ಪ್ರತಿಫಲವಾಗಿ ಸಂತೋಷದಿಂದ ತಿನ್ನಿರಿ ಮತ್ತು ಕುಡಿಯಿರಿ ಎಂದು ಹೇಳಲಾಗುವುದು” (69:22-24)
ಸ್ವರ್ಗದಲ್ಲಿ ಜೀವನವು ಶಾಶ್ವತವಾಗಿರುವುದು, ಅಲ್ಲಿ ಮರಣ ಮತ್ತು ರೋಗಬಾಧಿಸದು. ಅವರಿಗೆ ಪರಿಸುದ್ಧ ಮಡದಿಗಳನ್ನು ಕೊಡಲಾಗುವುದು. ಮನಸ್ಸು ಇಚ್ಛಿಸುವ ಎಲ್ಲಾ ವಸ್ತುಗಳು ದೊರಕುವವು. ಸುಖವು ಅದರ ಪರಿಪೂರ್ಣ ರೂಪದಲ್ಲಿರುವುದು. ಇದೇ ಸಂದರ್ಭದಲ್ಲಿ ಖುರ್‍ಆನ್ ನರಕದ ಬಗ್ಗೆ ಎಚ್ಚರಿಕೆಯನ್ನು ನೀಡುತ್ತಿದೆ. ಯಾರು ಈ ಪರಿಕ್ಷೆಯಲ್ಲಿ ವಿಫಲರಾಗುತ್ತಾರೋ ಅವರು ಶಾಶ್ವತವಾಗಿ ನರಕದಲ್ಲಿ ಎಸೆಯಲ್ಪಡುತ್ತಾರೆ. ಖುರ್‍ಆನ್ ಹೇಳುತ್ತದೆ;
“ ನಮ್ಮ ನಿದರ್ಶನಗಳನ್ನು ನಿಷೇಧಿಸಿದವರನ್ನು ರ್ನವು ನಿಶ್ಚವಾಗಿಯೂ ನರಕಾಗ್ನಿಗೆ ತಳ್ಳಿಬಿಡುವೆವು. ಅವರ ಮೈ ಚರ್ಮ ಕರತಿ ಹೊದಾಗಲೆಲ್ಲಾ ಅವರು ಶಿಕ್ಷೆಯನ್ನು ಚೆನ್ನಾಗಿ ಸವಿಯುವಂತಾಲೂ ನಾವು ಅದರ ಸ್ಥಾನದಲ್ಲಿ ಬೇರೆ ಚರ್ಮವನ್ನು ಸೃಷ್ಠಿಸುತ್ತಾ ಹೋಗುವೆವು” (4:56)
ಅಲ್ಲಾಹನು ಹೇಳುತ್ತಾನೆ
“ ವಾಸ್ತವದಲ್ಲಿ ನರಕವು ಒಂದು ಹೊಚಾಗಿದೆ. ಅದು ಪಾಪಿಗಳ ವಾಸಸ್ಥಾನವಾಗಿದೆ. ಅದರಲ್ಲಿ ಅವರು ದೀರ್ಘಕಾಲ ಬಿದ್ದುಕೊಂಡಿರುವರು. ಅದರೊಳಗೆ ಅವರು ಯಾವುದೇ ತಂಪನ್ನಾಗಲಿ, ಕುಡಿಯಲು ಅರ್ಹವಾದ ಯಾವುದೇ ವಸ್ತುವಿನ ರಿಚಿಯನ್ನಾಗಲಿ ಸವಿಯಲಾರರು. ಏನಾದರೂ ಸಿಗುವುದಿದ್ದರೆ ಅದು ಕುದಿಯುವ ನೀರು ಮತ್ತು ಹುಣ್ಣುಗಳ ಕೀವು ಮಾತ್ರ” (78:21,26)
ಇದೇ ರೀತಿಯ ಎಚ್ಚರಿಕೆಗಳು ಖುರ್‍ಆನಿನ ಅನೇಕ ಅಧ್ಯಾಯಗಳಲ್ಲಿ ಹಾಗೂ ಸಂದೇಶವಾಹಕ ಮುಹಮ್ಮದ್{ಸ}ರವರ ವಚನಗಳಲ್ಲಿ ಸ್ಪಷ್ಟವಾಗಿ ಸಿಗುತ್ತವೆ.
ವಾಸ್ತವಿಕ ಅಂಶ
ಆತ್ಮೀಯ ಸಹೋದರ ಸೋದರಿಯರೆ, ನಿರ್ಣಯಕ ದಿನ, ಸ್ವರ್ಗ ಮತ್ತು ನರಕ, ಇವೆಲ್ಲಾ ಊಹೆ ಅಥವ ಕಟ್ಟು ಕಥೆಗಳಲ್ಲ, ನಮ್ಮ ಇಹ ಜೀವನದಂತೆ ಅವು ಸಹ ನೈಜವಾಗಿವೆ. ಮರಣೋತ್ತರ ಜೀವನದ ಶಿಕ್ಷೆ ಮತ್ತು ಪುರಸ್ಕಾರವನ್ನು ನಾವು ಭೌತಿಕ ಶರೀರದೊಂದಿಗೆ ಅನುಭವಿಸುತ್ತೇವೆ. ಈ ಜೀವನದಲ್ಲಿ ನಾವು ದೇಹದ ಬಗ್ಗೆ ಬಹಳಷ್ಟು ಕಾಳಜಿಯನ್ನು ವಹಿಸುತ್ತೇವೆ. ಒಳಿತಿನ ಕಾರ್ಯಗಳನ್ನು ಮಾಡಿ ಶಾಶ್ವತ ಜೀವನದ ಬಗ್ಗೆ ಕಾಳಜಿಯನ್ನು ನಾವೇಕೆ ವಹಿಸಬಾರದು?
ದೃಷ್ಟಾಂತಗಳನ್ನು ಅವಲೋಕಿಸಿ; ಇಂದು ನಾವು ಸೃಷ್ಠಿಕರ್ತನನ್ನು, ಸ್ವರ್ಗವನ್ನು, ನರಕವನ್ನು ಕಣ್ಣಾರೆ ಕಾಣಲು ಸಾಧ್ಯವಿಲ್ಲ. ಆದರೆ ಇದುವೇ ನಮ್ಮ ಪರೀಕ್ಷೆಯಾಗಿದೆ. ಒಂದು ದಿನ ಎಲ್ಲಾ ಮನುಷ್ಯರು ಇವೆಲ್ಲವನ್ನು ಪ್ರತ್ಯಕ್ಷವಾಗಿ ಕಾಣುವರು. ಆಗ ಯಾರೂ ಅಲ್ಲಗಳೆಯಲಾರರು. ಆದರೆ ಆಗಿನ ವಿಸ್ವಾಸ ಯಾವ ಪ್ರಯೋಜನಕ್ಕೂ ಬರಲಾರದು. ಏಕೆಂದರೆ ಆಗ ಪರೀಕ್ಷೆಯ ಸಮಯ ಮುಕ್ತಾಯಗೊಂಡಿರುವುದು. ಕಣ್ಣಿಗೆ ಕಾಣದವುಗಳಲ್ಲಿ ವಿಶ್ವಾಸವಿಡುವುದೇ ಪರೀಕ್ಷೆಯಾಗಿದೆ. ಜಗತ್ತಿನಲ್ಲಿ ನಮ್ಮ ಕಣ್ಣಿನ ಸುತ್ತಮುತ್ತ ನಮ್ಮ ಮಾರ್ಗದರ್ಶನಕ್ಕಾಗಿ ಅನೇಕ ದೃಷ್ಟಾಂತಗಳಿವೆ. 100 ವರ್ಷಗಳ ಹಿಂದೆ ನಾವೇನಾಗಿದ್ದೇವು? ಏನೂ ಇಲ್ಲ ಆದರೆ ಇಂದು ನಾವು ಜೀವಂತವಾಗಿದ್ದು ಚಟುವಟಿಕೆಯಿಂದ ಕೂಡಿದ್ದೇವೆ. ಇದನ್ನು ಮಾಡಿದವರ್ಯಾರು? ಖಂಡಿತವಾಗಿ ನಮ್ಮ ಸೃಷ್ಟಿಕರ್ತನೇ.
ಅಲ್ಲಾಹನು ಹಾಳುತ್ತಾನೆ; “ನಾವು ಮಾನವನನ್ನು ವೀರ್ಯಾಣುವಿನಿಂದ ಸೃಷ್ಠಿಸಿರುವುದನ್ನು ಅವನು ನೋಡುವುದಿಲ್ಲವೇ? ಮತ್ತೆ ಅವನು ಸ್ಪಷ್ಟ ಜಗಳಗಂಟನಾಗಿ ನಿಂತು ಬಿಟ್ಟನು ಈಗ ಅವನು ನಮಗೆ ಹೋಲಿಕೆ ಕೊಡುತ್ತಾನೆ ಮತ್ತು ತನ್ನ ಸೃಷ್ಠಿಯನ್ನು ಮರೆತು ಬಿಡುತ್ತಾನೆ. ಈ ಎಲುಬುಗಳು ಶಿಥಿಲವಾಗಿ ಹೋದ ಬಳಿಕ ಇವುಗಳನ್ನು ಜೀವಂತಗೊಳಿಸುವವನಾರು? ಎಂದು ಕೇಳುತ್ತಾನೆ. ಇವರೋಡನೆ ಹೇಳಿರಿ ಇವುಗಳನ್ನು ಪ್ರಥಮ ಬಾರಿ ಸೃಷ್ಠಿಸಿದವನೇ ಪುನಃ ಜೀವಂತಗೊಳಿಸುವನು. ಅವನು ಸೃಷ್ಠಯ ಪ್ರತಿಯೊಂದು ಕಾರ್ಯವನ್ನು ಬಲ್ಲವನು” (36:77,78,79,)
ನಾವು ಈ ಪರಿಕ್ಷೆಯಲ್ಲಿ ಯಶಸ್ಸುಗಳಿಸುವುದು ಹೇಗೆ? ; ನಾವು ಸೃಷ್ಠಿಕರ್ತನಿಗೆ ವಿಧೇಯರಾಗಿ ಬಾಳಬೇಕು. ಅರಬಿ ಭಾಷೆಯಲ್ಲಿ ಇದನ್ನು ಇಸ್ಲಾಮ್ ಎನ್ನುತ್ತಾರೆ. ಪ್ರಥಮವಾಗಿ ಸೃಷ್ಠಿಕರ್ತನನ್ನು ನಮ್ಮ ಒಡೆಯನೆಂದು ನಾವು ಅಂಗೀಕರಿಸಬೇಕು. ಆತನಿಂದ ಕಳುಹಿಸಲ್ಪಟ್ಟಿರುವ ಎಲ್ಲಾ ಸಂದೇಶವಾಹಕರನ್ನು ಮತ್ತು ದೈವಿಕ ಗ್ರಂಥಗಳನ್ನು ನಾವು ಒಪ್ಪಿಕೊಳ್ಳಬೇಕು. ಆತನ ಆಜ್ಞಾಪಾಲನೆಯನ್ನು ಮಾಡಬೇಕು. ಇದನ್ನು ಪುಣ್ಯ ಕಾರ್ಯ ಎನ್ನುತ್ತಾರೆ. ಆತನು ನಿಷೇಧಿಸಿರುವ ಪಾಪ ಕಾರ್ಯಗಳಿಂದ ನಾವು ದೋರವಿರಬೇಕು. ತನ್ನ ಇಷ್ಟದಂತೆ ಅಥವ ತನ್ನ ಸಮುದಾಯದ ಇಚ್ಛೆಯಂತೆ ಮನುಷ್ಯನು ಯಾವುದು ಒಳಿತು ಯಾವುದು ಕೆಡುಕು ಎಂದು ನಿರ್ಧರಿಸುವಂತಿಲ್ಲ. ನಾವು ಅಂತಿಮವಾಗಿ ಸೃಷ್ಠಿಕರ್ತನ ಬಳಿಗೇ ಮರುಳಬೇಕಾಗಿರುವುದರಿಂದ ಈ ಪರಿಕ್ಷೆಯಲ್ಲಿ ಯಶಸ್ಸು ಗಳಿಸಲು ಆತನ ಮಾರ್ಗದರ್ಶನದ ಮೇಲೆಯೇ ಸಂಪೂರ್ಣವಾಗಿ ಅವಲಂಬಿತರಾಗಬೇಕಾಗಿದೆ. ಅಲ್ಲಾಹನು ಹೇಳುತ್ತಾನೆ;
“ನೇರ ಮಾರ್ಗವನ್ನು ತೋರಿಸುವ ಹೊಣೆ ನಮ್ಮ ಮೇಲೆಯೇ ಇದೆ” (16:9)
ಅಲ್ಲಾಹನು ಹೇಳುತ್ತಾನೆ;
“ಖಂಡಿತವಾಗಿಯೂ ದಾರಿ ತೋರಿಸುವ ಹೊಣೆ ನಮ್ಮ ಮೇಲಿದೆ ಮತ್ತು ವಾಸ್ತವದಲ್ಲಿ ಪರಲೋಕ ಮತ್ತು ಇಹಲೋಕ ಇವೆರಡಕ್ಕೂ ನಾವೇ ಒಡೆಯರು” (92: 12,13.)
ಸೃಷ್ಠಿಕರ್ತನ ನೈಜ ಮಾರ್ಗದರ್ಶನ ಎಲ್ಲಿ ದೊರಕುವುದು?
ಸೃಷ್ಠಿಕರ್ತನು ಎಲ್ಲಾ ಕಾಲಗಳಲ್ಲಿಯೂ ಎಲ್ಲಾ ದೇಶಗಳಲ್ಲಿಯೂ ತನ್ನ ಸಂದೇಶವಾಹಕರನ್ನು ದಿವ್ಯ ಕಳುಹಿತ್ತಿದ್ದಾನೆಂಬುದು ನಿಜ. ಆ ಕಾಲದಲ್ಲಿ ದಿವ್ಯ ಸಂದೇಶವು ತನ್ನ ಮೂಲ ಸ್ವರೂಪದಲ್ಲಿಯೇ ಇತ್ತು. ಆದರೆ ನಂತರದ ತಲೆಮಾರಿನ ಜನರು ಅಜ್ಞಾನದಿಂದಾಗಿ ಅಥವ ಜನರನ್ನು ಶೋಷಣೆ ಮಾಡುವುದಕ್ಕಾಗಿ ಇದರಲ್ಲಿ ಬದಲಾವಣೆಗಳನ್ನು ಮಾಡಿದರು. ಇಂದು ಸೃಷ್ಠಿಕರ್ತನ ಹೊಸ ದಿವ್ಯ ಸಂದೇಶವನ್ನು ಪವಿತ್ರ ಖುರ್‍ಆನ್ ರೂಪದಲ್ಲಿ ಮತ್ತು ಸಂದೇಶವಾಹಕ ಮುಹಮ್ಮದ್{ಸ}ರವರ ಬೋಧನೆಗಳಲ್ಲಿ ಸುರಕ್ಷಿತವಾಗಿ ಕಾಣಬಹುದು. ಖುರಾನ್ ಬಗ್ಗೆ ಸೃಷ್ಠಿಕರ್ತನು ಈ ರೀತಿ ಹೇಳುತ್ತಾನೆ;
“ಇದು (ದೈವಿಕ) ಗ್ರಂಥ ಸಂದೇಹಾತೀತವಿದು. ಭಯಭಕ್ತಿಯುಳ್ಳವರಿಗೆ ಇದು ಮಾರ್ಗದರ್ಶಿ” (2:2)
ಖುರ್‍ಆನಿನ ಮೇಲೆ ವಿಶ್ವಾಸವಿಡದವರಿಗೆ ಖುರ್‍ಆನ್ ಪಥಾಹ್ವಾನ ನೀಡುತಿದ್ದು ಅವರಿಗೆ ಎಚ್ಚರಿಕೆಯನ್ನೂ ನೀಡುತ್ತದೆ ಅಲ್ಲಾಹನು ಹೇಳುತ್ತಾನೆ;
“ನಾವು ನಮ್ಮ ದಾಸನಿಗೆ ಅವತೀರ್ಣಗೊಳಿಸಿದ ಈ ಗ್ರಂಥವು ನಮ್ಮದೋ ಆಥವ ಅಲ್ಲವೋ ಎಂಬ ವಿಷಯದಲ್ಲಿ ನಿಮಗೆ ಸಂದೇಹವಿದ್ದರೆ ಇದಕ್ಕೆ ಸರಿಸಮಾನವಾದ ಒಂದು ಅಧ್ಯಾಯವನ್ನಾದರೂ ರಚಿಸಿ ತನ್ನಿರಿ. ಅಲ್ಲಾಹನ ಹೊರತು ನಿಮ್ಮೇಲ್ಲ ಸಾಕ್ಷಿಗಳನ್ನು ನಿಮ್ಮ ಸಹಾಯಕ್ಕಾಗಿ ಕರೆದು ಕೊಳ್ಳಿರಿ. ನಿವು ಸತ್ಯವಾದಿಗಳಿಗಾಗಿ ಸಿದ್ಧಗೊಳಿಸಲ್ಪಟ್ಟಿರುವ ಹಾಗೂ ಮನುಷ್ಯರನ್ನು ಶಿಲೆಗಳನ್ನು ಇಂಧನವಾಗಿ ಉರಿಸುವ ಆ ನರಕವನ್ನು ಭಯಪಡಿರಿ” (2:23,24)
ಸೃಷ್ಠಿಕರ್ತನು ಅಧಿಕಾರಯುಕ್ತವಾಗಿ ತನ್ನ ದಿವ್ಯ ಗ್ರಂಥದಲ್ಲಿ ಈ ರೀತಿ ಘೋಷಿಸುತ್ತಾನೆ,
“ಅಲ್ಲಾಹನ ಬಳಿ ಧರ್ಮವು ಇಸ್ಲಾಮ್ ಮಾತ್ರವಾಗಿದೆ” (3:19)
ಅಂದರೆ ಸಂದೇಶವಾಹಕರು ತೋರಿಸುವ ಮಾರ್ಗದರ್ಶನವೇ ಸೃಷ್ಠಿಕರ್ತನಿಗೆ ಸ್ವೀಕಾರರರ್ಹವಾಗಿರುವುದು. ಸೃಷ್ಠಿಕರ್ತನು ಈ ಎಚ್ಚರಿಕೆಯನ್ನು ನೀಡಿದ್ದಾನೆ.
“ಅವರು ಅಲ್ಲಾಹನ ಧರ್ಮವನ್ನು ಬಿಟ್ಟು ಬೇರೆ ಯಾವುದನ್ನಾದರೂ ಬಯಸುತ್ತಿರುವರೇ, ವಸ್ತುತಃ ಆಕಾಶಗಳ ಮತ್ತು ಭೂಮಿಯ ಸಕಲ ವಸ್ತುಗಳು ಬಯಸಿಯೋ ಬಯಸದೆಯೋ ಅಲ್ಲಾಹನ ಆಜ್ಞಾಪಾಲಕರಾಗಿ (ಮುಸ್ಲಿಮ್‍ಗಳಾಗಿ)ಯೇ ಇವೆ. ಮತ್ತು ಸರ್ವರಿಗೂ ಅವನ ಕಡೆಗೆ ಮರಳಲಿಕ್ಕಿದೆ” (3:83)
“ಯಾರಾದರೂ ಇಸ್ಲಾಮ್ ಹೊರತು ಯಾವುದಾದರೂ ಇತರೆ ಧರ್ಮವನ್ನು ಸ್ವೀಕರಿಸಿದರೆ ಅವನ ಆ ಧರ್ಮವನ್ನು ಎಷ್ಟು ಮಾತ್ರಕ್ಕೂ ಮಾನ್ಯಮಾಡಲಾಗದು ಮತ್ತು ಪರಲೋಕದಲ್ಲಿ ಅವನು ವಿಫಲನೂ ಹತಾಶನೂ ಆಗಿಬಿಡುವನು”. (3:85).
ಆತ್ಮೀಯ ಸಹೋದರ ಸಹೋದರಿಯರೆ, ಈ ದೈವ ವಚನಗಳ ಮೂಲಕ ನಮ್ಮ ಸೃಷ್ಠಿಕರ್ತ ಮತ್ತು ಒಡೆಯನು ಆತನಿಗೆ ಅವಿಧೇಯತೆ ತೋರುವವರನ್ನು ಅವರ ಕಾರ್ಯಗಳಿಗೆ ಶಿಕ್ಷೆ ನೀಡುವುದಾಗಿ ಎಚ್ಚರಿಸುತ್ತಿದ್ದಾನೆ. ಗರಿಷ್ಟ ಮಟ್ಟದ ಅವಿಧೆಯತೆಯು ಸೃಷ್ಠಿಕರ್ತನ ಆರಾಧನೆಯಲ್ಲಿ ಆತನೊಂದಿಗೆ ಇತರರನ್ನು ಪಾಲುಗೊಳಿಸುವುದಾಗಿದೆ. ಇದು ಘೋರ ಅಪರಾಧವಾಗಿದ್ದು ಬಹಳಷ್ಟು ಜನರು ಇದನ್ನು ಎಸಗುತ್ತಿದ್ದಾರೆ. ನಮ್ಮ ಸೃಷ್ಠಿಕರ್ತನು, ಪರಿಪಾಲಕನು, ನಮ್ಮ ಮೇಲೆ ಅನೇಕ ಅನುಗ್ರಹಗಳನ್ನು ತೋರಿದಾತನೂ ಈ ಕೃತ್ಯದ ಬಗ್ಗೆ ಕಡು ಶಬ್ದಗಳಲ್ಲಿ ಎಚ್ಚರಿಕೆಯನ್ನು ನೀಡಿದ್ದಾನೆ.
ಖುರ್‍ಆನ್ ಹೇಳುತ್ತದೆ;
“ಅಲ್ಲಾಹನೊಂದಿಗೆ ಸಹಭಾಗಿಯನ್ನಾಗಿ ಮಾಡುವುದು ಮಹಾ ಅಕ್ರಮವಾಗಿದೆ” (31:13)
ಸೂರ್ಯ, ಚಂದ್ರ, ನಕ್ಷತ್ರಗಳು, ಮೂರ್ತಿಗಳು, ಪ್ರಾಣಿಗಳು, ಮನುಷ್ಯರು, ಸ್ವಾಮಿಗಳು, ಘೋರಿಗಳು, ಮೊದಲಾದ ಸೃಷ್ಠಿಗಳನ್ನು ಆರಾಧಿಸುವುದನ್ನು ಸೃಷ್ಠಿಕರ್ತನು ನಿಷೇಧಿಸುತ್ತಾನೆ. ಬಹುದೇವಾರಾಧನೆಯ ಈ ಪಾಪ ಕಾರ್ಯವುಮನುಷ್ಯರನ್ನು ವಿವಿಧ ಪಂಗಡಗಳಲ್ಲಿ, ಜಾತಿಗಳಲ್ಲಿ, ಜನಾಂಗಗಳಲ್ಲಿ ವಿಂಗಡಿಸುತ್ತದೆ. ಈ ಘೋರ ಅಪರಾಧವನ್ನು ಎಂದೂ ಕ್ಷಮಿಸಲಾಗುವುದಿಲ್ಲವೆಂದು ಸೃಷ್ಠಿಕರ್ತನು ಘೋಷಿಸುತ್ತಾನೆ. ಇದು ಖುರ್‍ಆನ್ ಪಂಥಾಹ್ವಾನವಾಗಿದೆ. (4:116) (98:6)
ನೀವು ಖುರ್‍ಆನನ್ನು ತೀವ್ರಕರ ಪರಿಕ್ಷೆಗೆ ಒಳಪಡಿಸಿ, ಅದನ್ನು ವಿಶ್ಲೆಷಿಸಿದರೂ ಅದರಲ್ಲಿ ಒಂದು ಅವಕಾಶಮಾತ್ರ ಇರುವುದು. ಮರಣೋತ್ತರ ಜೀವನವು ಒಂದು ವಾಸ್ತವಿಕತೆಯಾಗಿದೆ. ನಿರ್ಣಾಯಕ ದಿನ, ಸ್ವರ್ಗ, ನರಕ, ಎಲ್ಲವೂ ಸತ್ಯವಾಗಿದೆ. ಸತ್ಯದ ಅನ್ವೇಶಣೆ ಮಾಡಿ ಕಾಲ ಮಿಂಚುವ ಮೊದಲು ನಮ್ಮ ಅಸ್ತಿತ್ವದ ಉದ್ದೇಶವನ್ನು ಏಕೆ ಸಫಲಗೊಳಿಸಬಾರದು?
“ಅವನು ಯಾವುದಾದರೊಂದು ವಸ್ತುವನ್ನು ಬಯಸಿದಾಗ ಅದಕ್ಕೆ ಆಗು ಎಂದು ಹೇಳುತ್ತಾನೆ. ಅದು ಆಗಿ ಬಿಡುತ್ತದೆ. ಸಕಲ ವಸ್ತುಗಳ ಮೇಲೆ ಸಂಪೂರ್ಣ ಅಧಿಕಾರವಿರುವವನು ಪರಮ ಪಾವನನು, ಮತ್ತು ನೀವು ಅವನ ಕಡೆಗೇ ಮರಳಿಸಲ್ಪಡುವಿರಿ” (36:82)
“ ಸೃಷ್ಠಿಯ ಆರಂಭ ಮಾಡುವವನೂ ಅವನೇ ಅದರ ಪುನರಾವರ್ತನೆ ಮಾಡುವವನೂ ಅವನೇ, ಇದು ಅವನಿಗೆ ಅತ್ಯಂತ ಸುಲಭವಾದದು. ಭೂಮಿ ಆಕಾಶಗಳಲ್ಲಿ ಅವನ ಗುಣವು ಸರ್ವ ಶ್ರೇಷ್ಠವಾಗಿದ್ದು, ಅವನು ಪ್ರಬಲನೂ ಯುಕ್ತಿಪೂರ್ಣನೂ ಆಗಿರುತ್ತಾನೆ. ಕಟ್ಟ ಕಡೆಗೆ ಪ್ರತಿಯೊಬ್ಬನಿಗೂ ಮರಣ ಹೊಂದ ಬೇಕಾಗಿದೆ ಮತ್ತು ನೀವೆಲ್ಲರೂ ನಿಮ್ಮ ನಿಮ್ಮ ಪ್ರತಿಫಲವನ್ನು ಪುನರುತ್ಥಾನ ದಿನದಂದು ಪಡೆಯುವವರಿದ್ದೀರಿ ಯಾರು ಅಕ್ಕಿ ನರಕಾಗ್ನಿಯಿಂದ ರಕ್ಷೆ ಹೊಂದಿ ಸ್ವರ್ಗದಲ್ಲಿ ಪ್ರವಾಶಿಸಲ್ಪಡುವನೊ ನಿಜವಾಗಿಯೂ ಅವನು ಜಯಶಾಲಿಯಾದನು. ಈ ಲೋಕದ ಜೀವನವಂತೂ ಕೇವಲ ಭ್ರಾಮಕ ಸಂಪತ್ತಾಗಿದೆ” (3:185)