ಮುಹಮ್ಮದ ಇಬ್ನ್ ಸುಲೈಮಾನ್ ಅತ್-ತಮೀಮಿ”ಯವರ ಸಂಕ್ವಿಪ್ತ ಜೀವನ ಚರಿತ್ರೆ
ಬನೂ ತಮೀಮ್ ಜನಾಂಗದ ಒಂದು ಗುಂಪಿನವರಾದ ಶೇಖ್ ಮುಹಮ್ಮದ ಇಬ್ನ್ ಅಬ್ದುಲ್ ವಹ್ಹಾಬ್ ಇಬ್ನ್ ಸುಲೈಮಾನ್ ಇಬ್ನ್ ಅಲಿ ಇಬ್ನ್ ಮುಹಮ್ಮದ್ ಇಬ್ನ್ ಅಹ್ಮದ್ ಇಬ್ನ್ ರಾಶೀದ್ ಇಬ್ನ್ ಬುರೈದ್ ಇಬ್ನ್ ಮುಹಮ್ಮದ್ ಇಬ್ನ್ ಮುಶ್ರೀಫ್ ಇಬ್ನ್ ಉಮರ್, ಒಬ್ಬ ಇಮಾಮ ಆಗಿದ್ದರು.
ಶ್ರೀಯುತರ ಜನನವು, ಜ್ಞಾನ, ಉದಾತ್ತಮನೋಭಾವ ಹಾಗು ಧಾರ್ಮಿಕ ಒಲವಿಗೆ ಹೆಸರುವಾಸಿಯಾದ ಮನೆತನದಲ್ಲಿ, ‘ಉನೈಝಾ’ ನಗರದಲ್ಲಿ ಹಿ. 1115 ರಲ್ಲಿ ಆಯಿತು. ಇವರ ತಂದೆ ಒಬ್ಬ ಶ್ರೇಷ್ಠ ವಿದ್ವಾಂಸರಾಗಿದ್ದರು ಮತ್ತು ಇವರ ತಾತ ಕೂಡ, ತಮ್ಮ ಕಾಲದಲ್ಲಿ ನಜ್ದ್‍ನ ಶ್ರೇಷ್ಠ ವಿದ್ವಾಂಸರಾಗಿದ್ದರು. ಮಾನ್ಯ ಶೇಖ್‍ರವರು ಹತ್ತು ವರ್ಷ ವಯಸ್ಸಿಗೂ ಮುಂಚೆಯೇ ಸಂಪೂರ್ಣ ಕುರ್‍ಆನಅನ್ನು ಕಂಠಸ್ಥಗೊಳಿಸಿದ್ದರು ಮತ್ತು ಪಿಖ್‍ಃ (ಇಸ್ಲಾಮಿ ಕಾನೂನು ಮತ್ತು ಕಾರ್ಯರೂಪ)ಗೆ ಸಂಬಂಧಪಟ್ಟಂತೆ ಅಗಾಧ ಅಧ್ಯಯನ ನಡೆಸಿರುವರು. ವಾಸ್ತವದಲ್ಲಿ, ಇವರ ತಂದೆಯೂ ಇವರ ಜ್ಞಾಪಕ ಶಕ್ತಿಯನ್ನು ಕಂಡು ಚಕಿತರಾಗಿದ್ದರು.
ತಫ್ಸೀರ್ (ಕುರ್‌ಆನಿನ ವಿವರಣೆ) ಮತ್ತು ಹದೀಸ್ (ಪ್ರವಾದಿ(ಸ)ರ ನಡೆನುಡಿ)ಗಳ ಅಧ್ಯಯನಕ್ಕಾಗಿಯೇ ಅವರು ತಮ್ಮ ಅಗಾಧ ಸಮಯವನ್ನು ಮುಡಿಪಾಗಿಟ್ಟಿದ್ದರು. ಹಗಲು-ರಾತ್ರಿ ಜ್ಞಾನದ ಹುಡುಕಾಟದಲ್ಲಿರುತ್ತಿದ್ದರು. ಇಸ್ಲಾಮಿ ಜ್ಞಾನದ ಹೆಚ್ಚಿನ ಎಲ್ಲ ವಿಭಾಗಗಳಲ್ಲಿಯ ಗ್ರಂಥಗಳನ್ನು ಕಂಠಪಾಠ ಮಾಡುತ್ತಿದ್ದರು. ನಜ್ದ್‍ನ ಸುತ್ತಮುತ್ತ ಹಾಗು ಮಕ್ಕಾಗೆ ಪ್ರಯಾಣಿಸಿ ವಿದ್ವಾಂಸರುಗಳಿಂದ ಜ್ಞಾನಭರಿತ ಗ್ರಂಥಗಳನ್ನು ಅಧ್ಯಯಿಸಿರುವರು. ನಂತರ ಅವರು ಮದೀನಾಕ್ಕೆ ತೆರಳಿ ಅಲ್ಲಿನ ವಿದ್ವಾಂಸರ ಬಳಿ ಕಲಿತರು. ಅವರಲ್ಲಿ ‘ಶೇಖ್ ಅಬ್ದುಲ್ಲಾಹ್ ಇಬ್ನ್ ಇಬ್ರಾಹೀಮ್ ಅಶ್-ಶಮ್ಮರೀ’ರಂತಹ ಮಹಾ ವಿದ್ವಾಂಸರು ಕೂಡ ಒಬ್ಬರು. ಅಷ್ಟೇ ಅಲ್ಲದೇ, ‘ಅಲ್-ಅಬ್ದುಲ್ ಫಾಇದ್‍ಫೀ ಶರ್‍ಃ ಅಲ್‍ಪಿಯ್ಯಾತಿಲ್ ಫರಾಇದ್’ ಎಂಬ ಗ್ರಂಥದ ಲೇಖಕರಾದ ಅವರ ಪುತ್ರ ‘ಇಬ್ರಾಹೀಮ್ ಅಶ್-ಶಮ್ಮರೀ’ಯವರ ಬಳಿಯೂ ಕಲಿತರು. ಇಬ್ರಾಹೀಮ್ ಅಶ್-ಶಮ್ಮರೀ ಅನುವಂಶೀಯ ಬಾಧ್ಯತೆಗಳು ಹಾಗು ಅವುಗಳಿಗೆ ಸಂಬಂಧಪಟ್ಟಂತೆ ಅಗಾಧ ಜ್ಞಾನವನ್ನು ಹೊಂದಿದ್ದರು. ನಂತರದ ಕಾಲದಲ್ಲಿ ಇವರುಗಳೇ ಹದೀಸ್‍ನ ಪ್ರಸಿದ್ಧ ವಿದ್ವಾಂಸರಾದ ‘ಮುಹಮ್ಮದ್ ಹಯಾತ್ ಅಸ್-ಸಿಂಧೀ’ಯವರನ್ನು ಶೇಖ್‍ರಿಗೆ ಪರಿಚಯಿಸಿದರು. ಅವರ ಬಳಿ ಹದೀಸ್‍ನ ವಿಜ್ಞಾನ ಮತ್ತು ಅದರ ವರದಿಗಾರರ ಕುರಿತ ಸಂಪೂರ್ಣ ಅಧ್ಯಯನ ನಡೆಸಿದರು. ಮಾತ್ರವಲ್ಲದೇ, ಹದೀಸ್‍ನ ಮೂಲಗ್ರಂಥಗಳನ್ನು ವರದಿ ಮಾಡುವ ಅನುಮತಿಯನ್ನೂ ಅವರಿಗೆ ನೀಡಲಾಯಿತು. ಶೇಖ್ ಮುಹಮ್ಮದ್ ಇಬ್ನ್ ಸುಲೈಮಾನ್ ಅತ್-ತಮೀಮಿ, ಅಲ್ಲಾಹ್, ಅತ್ಯುನ್ನತನು ಅವರನ್ನು ಕರುಣಿಸಲಿ, ಅವರಿಗೆ ಅಲ್ಲಾಹನು ಗಾಢವಾದ ಜ್ಞಾನವನ್ನೂ ಶ್ರೇಷ್ಠಮಟ್ಟದ ಬುದ್ಧಿವಂತಿಕೆಯನ್ನೂ ದಯಪಾಲಿಸಿದ್ದನು. ಅವರು ತಮ್ಮ ಹೆಚ್ಚಿನ ಸಮಯವನ್ನು ಅನ್ವೇಷಣೆ, ಅಧ್ಯಯನ ಮತ್ತು ಬರವಣಿಗೆಗೆಂದೇ ಮುಡಿಪಾಗಿಟ್ಟಿದ್ದರು. ಹೀಗೆ ಅನ್ವೇಷಿಸುವಾಗ ಅಥವಾ ಅಧ್ಯಯನ ನಡೆಸುವಾಗ ಯಾವೆಲ್ಲ ಮಹತ್ವಪೂರ್ಣ ವಿಷಯಗಳನ್ನು ಗಮನಿಸುತ್ತಿದ್ದರೋ ತಕ್ಷಣ ಅವುಗಳನ್ನು ವರದಿ ಮಾಡುತ್ತಿದ್ದರು ಮತ್ತು ಕಂಠಸ್ಥಗೊಳಿಸುತ್ತಿದ್ದರು. ಬರೆಯುವ ವಿಷಯದಲ್ಲಿ ಅವರು ಎಂದಿಗೂ ದಣಿದಿಲ್ಲ. ಅಷ್ಟೇ ಅಲ್ಲದೇ ಇಬ್ನ್ ತಯ್ಮಿಯಾಹ್ ಹಾಗು ಇಬ್ನುಲ್ ಖಯ್ಯಿಮ್, ರಹೀಮಉಲ್ಲಾಹ್,ರ ಅನೇಕ ಕೃತಿಗಳನ್ನೂ ನಕಲು ಮಾಡಿರುವರು. ಅವರ ಬರವಣಿಗೆಯಲ್ಲಿಯೇ ಅನೇಕ ಕೃತಿಗಳು ವಿವಿಧ ಮ್ಯೂಸಿಯಂಗಳಲ್ಲಿ ಸುರಕ್ಷಿತವಾಗಿವೆ. ಅವರ ತಂದೆಯು ಮೃತರಾದ ಬಳಿಕ ಅವರು ಬಹಿರಂಗವಾಗಿ ‘ಪೂರ್ವಿಕರ ದಾವಾಃ’ದೆಡೆಗೆ ಕರೆ ನೀಡಿದರು. ಅದುವೇ, ಎಲ್ಲ ರೀತಿಯ ಆರಾಧನೆಗಳಲ್ಲಿ ಮತ್ತು ಅವನ ಹಕ್ಕುಗಳಲ್ಲಿ ಅಲ್ಲಾಹನನ್ನು ಅನನ್ಯವಾಗಿಸುವುದು, ಎಲ್ಲ ಪಾಪಗಳ ತಿರಸ್ಕಾರ. ಅವರು, ಗೋರಿ ಪೂಜೆಯೆಡೆಗೆ ಆಹ್ವಾನಿಸುವ, ನವೀನಾಚಾರಗಳನ್ನು ಅಳವಡಿಸಿಕೊಂಡಿರುವವರನ್ನು ವಿರೋಧಿಸಿದರು. ಅಲ್ ಸ’ಊದ್‍ರ ಮೂಲಕ ಅವರಿಗೆ ಸಲಹೆ, ಸಾಮಥ್ರ್ಯ ಹಾಗು ಅವರ ಸತ್ಯದೆಡೆಗಿನ ಆಹ್ವಾನವನ್ನು ಎಲ್ಲೆಡೆ ಪಸರಿಸಲು ಬೆಂಬಲ ದೊರೆಯಿತು.
ಅವರು ಅನೇಕ ಮಹತ್ವಪೂರ್ಣ ಕೃತಿಗಳನ್ನೂ ಪ್ರಕಟಿಸಿದರು. ಅವುಗಳಲ್ಲಿ ಅತ್ಯಮೂಲ್ಯ ಮತ್ತು ಶ್ರೇಷ್ಠ ಶೀರ್ಷಿಕೆಗಳು ಈ ರೀತಿ ಇವೆ: ಕಿತಾಬುತ್-ತೌಹೀದ್, ಅನೇಕ ಬಾರಿ ಮುದ್ರಿತಗೊಂಡಿತು; ಪ್ರತಿಬಾರಿಯೂ ಮುದ್ರಣವು ಮಾರಾಟವಾದಂತೆ ಪುನಃ ಮುದ್ರಿತಗೊಂಡಿತು. ಕಷ್‍ಪುಷ್-ಷುಬುಹಾತ್, ಅಲ್-ಕಬಾಇರ್, ಮುಖ್ತಸರುಲ್-ಇನ್ಸಾಫ್, ಅಶ್-ಶರಹುಲ್-ಕಬೀರ್, ಮುಖ್ತಸರ್ ಝಾದೀಲ್-ಮಆದ್. ಅವರು ಅಗಾಧ ಸಂಖ್ಯೆಯ ಫತಾವಾ (ಧಾರ್ಮಿಕ ತೀರ್ಪು) ಹಾಗು ಪ್ರಬಂಧಗಳ ಸಂಗ್ರಹವನ್ನು ಹೊಂದಿದ್ದರು. ಅವುಗಳನ್ನು ‘ಮಜ್ಮೂಆಹ್ ಮುಅಲ್ಲಫಾತ್ ಅಲ್-ಇಮಾಮ್ ಮುಹಮ್ಮದ್ ಇಬ್ನ್ ಅಬ್ದಿಲ್ ವಹ್ಹಾಬ್’ ಎಂಬ ಶೀರ್ಷಿಕೆಯಡಿಯಲ್ಲಿ ಇಮಾಮ್ ಮುಹಮ್ಮದ್ ಇಬ್ನ್ ಸಊದ್ ವಿಶ್ವವಿದ್ಯಾಲಯದ ಉಸ್ತುವಾರಿಯಲ್ಲಿ ಸಂಗ್ರಹಿಸಲಾಗಿರುವುದು.
ಹಿ. 1206ರಲ್ಲಿ ಅವರ ನಿಧನವಾಯಿತು. ಅಲ್ಲಾಹ್ ಅವರನ್ನು ತನ್ನ ಕರುಣೆಯಲ್ಲಿ ಆಲಂಗಿಸಿಕೊಳ್ಳಲಿ. ಇಸ್ಲಾಮ್ ಹಾಗು ಮುಸ್ಲಿಮರಿಗೆ ಅವರು ಸಲ್ಲಿಸಿರುವ ಸೇವೆಗಳಿಗಾಗಿ ಅಲ್ಲಾಹ್ ಅವರನ್ನು ಸನ್ಮಾನಿಸಲಿ. ನಿಶ್ಚಯವಾಗಿಯೂ, ಅಲ್ಲಾಹ್ ಪ್ರಾರ್ಥನೆಗಳನ್ನು ಆಲಿಸುವವನೂ, ಅವುಗಳನ್ನು ಸ್ವೀಕರಿಸುವವನು ಆಗಿರುವನು. ಸರ್ವಸ್ತುತಿಯೂ, ಧನ್ಯತೆಯೂ ಅಲ್ಲಾಹ್‍ನಿಗೆ ಮೀಸಲು ಹಾಗು ಪ್ರವಾದಿ ಮುಹಮ್ಮದ(ಸ), ಅವರ ಪರಿವಾರ, ಅವರ ನೈಜ ಅನುಯಾಯಿಗಳು ಮತ್ತು ಅವರ ಸಂಗಡಿಗರ ಮೇಲೆ ಅಲ್ಲಾಹ್ ಅನುಗ್ರಹಗಳನ್ನಿಳಿಸಲಿ.
ಇಸ್ಲಾಮನ್ನು ಅನ್ವೇಷಿಸಿ





ಅಲ್ಲಾಹ್
ನಂಬಿಕೆ




ಪವಿತ್ರೀಕರಣ
ಅಹದೀತ್ ಹೇಳಿಕೆಗಳು
ಇಸ್ಲಾಮ್ ಮತ್ತು ಶಾಸ್ತ್ರಗಳು





ಪ್ರವಾದಿಗಳು


ಜೀವನ ಚರಿತ್ರೆಗಳು








ಇಸ್ಲಾಮಿನ ಇತಿಹಾಸ
ಇಸ್ಲಾಮಿನ ಕಾನೂನು






ಇಸ್ಲಾಮ್ ಜೀವನಶೈಲಿ-ಸಂಸ್ಕೃತಿ


ಇಸ್ಲಾಮಿನಲ್ಲಿ ಮೂಲಭೂತ ಹಕ್ಕುಗಳು
ಪ್ರಚಲಿತ ವಿದ್ಯಮಾನ
ಮಾಸ ಪತ್ರಿಕೆಗಳು
ಅರೇಬಿಕ್
