• CONTACT US – ಸಂಪರ್ಕಿಸಿ
  • ABOUT US – ನಮ್ಮ ಕುರಿತು
  • Donation – ದೇಣಿಗೆ
  • Donation – ದೇಣಿಗೆ
  • ಸಹಾಯ ಬೇಕಿದೆಯೇ? – Do you need assistance?
  • ಸ್ವಯಂಸೇವಕ
Sunday, October 12, 2025
  • ಗೂಡು
  • ಇಸ್ಲಾಮ್ ಕುರಿತ ಪ್ರಶ್ನೋತ್ತರಗಳು – Questions and Answers about Islam
    • ಇಸ್ಲಾಮ್ ಕುರಿತ ಸಂಶಯಗಳು ಭಾಗ – 1
    • ಇಸ್ಲಾಮ್ ಕುರಿತ ಸಂಶಯಗಳು ಭಾಗ – 2
    • ಇಸ್ಲಾಮ್ ಕುರಿತ ಸಂಶಯಗಳು ಭಾಗ – 3
    • ರಂಜಾನ್ ತಿಂಗಳ ಕುರಿತಾದ ಪ್ರಶ್ನೆಗಳು ಮತ್ತು ಉತ್ತರಗಳು.
  • ಇಸ್ಲಾಮನ್ನು ಅನ್ವೇಷಿಸಿ
    • All
    • ಅತಿರೇಕತೆಯ ವಿರುದ್ಧ
    • ಇಸ್ಲಾಮನ್ನು ತಿಳಿಯಿರಿ
    • ಕಪಟ ವಿಶ್ವಾಸಿಗಳು
    • ಖುರಾನ್ ಕುರಿತು
    • ಜೀವನದ ಉದ್ದೇಶ
    • ಭಯೋತ್ಪಾದನೆಯ ವಿರುದ್ಧ
    • ಹಬ್ಬಗಳು
    • ಹೊಸದಾಗಿ ಇಸ್ಲಾಮಿಗೆ ಬಂದಿರುವಿರೇ?

    ಶಾಂತಿಗೆ ಮತ್ತೊಂದು ಹೆಸರೇ ಇಸ್ಲಾಮ್

    ಕನ್ನಡ ಇಸ್ಲಾಂ 360° – 01 – ಇಸ್ಲಾಂ ಎಂದರೇನು?

    ಪವಿತ್ರ ಕುರ್‌ಆನ್ ಎಂದರೇನು? – What is Holy Quran

    ಇಸ್ಲಾಮೇ ಏಕೆ? – Why Islam?

    ನವ ಮುಸ್ಲಿಮರಿಗೆ ಸಂಕ್ಷಿಪ್ತ ಉಪಯುಕ್ತ ಮಾರ್ಗದರ್ಶಿ – A brief useful guide for new-Muslims

    ನವ ಮುಸ್ಲಿಮರಿಗೆ ಸಂಕ್ಷಿಪ್ತ ಉಪಯುಕ್ತ ಮಾರ್ಗದರ್ಶಿ – A brief useful guide for new-Muslims

    ಇಸ್ಲಾಂ ಮತ್ತು ಕುರಾನಿನ ನೈಜ ಸಂದೇಶ – The true message of Islam and the Quran

  • ಅಲ್ಲಾಹ್
    231246

    ನಾವು ಇಲ್ಲೇಕ್ಕಿದ್ದೇವೆ? – Why are we here?

    231252

    ಯೇಸುವಿನ ಪ್ರಕಾರ ದೇವನೆಂದರೆ ಯಾರು ? – Who is God according to Jesus

    231233

    ದೇವನಿದ್ದರೆ ಅನ್ಯಾಯಗಳೇಕೆ? – If there is a God why injustices?

    230493

    ದೇವರ ನೈಜ ಧರ್ಮ ಯಾವುದು? – What is the true religion of God?

    230497

    ಅಲ್ಲಾಹನ(ದೇವರ) ಕೃಪೆ – By the grace of Allah (God)

    230502

    ಇಸ್ಲಾಮಿನಲ್ಲಿ ಏಕದೇವತ್ವ – Monotheism in Islam

  • ನಂಬಿಕೆ
    • All
    • ಆರಾಧನೆ
    • ಪ್ರಮಾಣೀಕರಣ
    • ಮರಣಾನಂತರ ಜೀವನ
    • ಸ್ವರ್ಗ

    ಆತ್ಮದ ವಾಸ್ತವ – The reality of the Soul

    ಜೀವನ ಘಟ್ಟದ ಪಯಣವೆತ್ತ ? – Where is the journey of the of life?

    ಇಸ್ಲಾಮಿನ ಮೂರು ಮೂಲಭೂತ ತತ್ವಗಳು – Three Fundamental Principles of Islam

    ನಮಗೆಲ್ಲಾ ಒಬ್ಬನೇ ಸೃಷ್ಟಿಕರ್ತ!! – One Creator for All of Us!!

    ನೀವೇಕೆ ಆರಾಧಿಸುವುದಿಲ್ಲ? – Why don’t you worship?

    ಸಾವು: ಅಂತ್ಯವೋ…? ಹೊಸದೊಂದು ಆರಂಭವೋ? – Death is End? or New Beginning

  • ಪವಿತ್ರೀಕರಣ

    ಖುರ್‌ಆನಿನ ಬೆಳಕಿನಲ್ಲಿ ರೋಗ ಪರಿಹಾರ

    ಶುದ್ಧೀಕರಣ / ವುದೂ – Wudu

  • ಖುರಾನ್
  • ಅಹದೀತ್ ಹೇಳಿಕೆಗಳು
  • ಇಸ್ಲಾಮ್ ಮತ್ತು ಶಾಸ್ತ್ರಗಳು
    • All
    • ಇಸ್ಲಾಮಿನ ಕುರಿತಾಗಿ ಇತರರು
    • ಕ್ರೈಸ್ತ ಧರ್ಮ
    • ಖುರಾನ್ ಆಧಾರಗಳು

    ಯೇಸುವಿನ ಪ್ರಕಾರ ದೇವನೆಂದರೆ ಯಾರು ? – Who is God according to Jesus

    ಯೇಸುವಿನ ಅದ್ಭುತ ಜನನ – Miraculous Birth of Jesus

    ಮಾನವ ಶರೀರವೆಂಬ ಅದ್ಭುತ ಯಂತ್ರವನ್ನು ನಿರ್ಮಿಸಿದವನು ಯಾರು? – Who built the amazing machine called human body?

    ಅಲ್ಲಾಹನ ಸಂದೇಶವಾಹಕರಾದ ಮಹಮ್ಮದ್(ಸ)ರ ಕುರಿತು ಮುಸ್ಲೀಮೇತರ ಟಿಪ್ಪಣಿಗಳು – Non-Muslim Notes on Muhammad (PBUH), Messenger of Allah

    ಕ್ರೈಸ್ತರೊಂದಿಗೆ ಸಂವಾದ (ಯೆಹೋವನ ಸಾಕ್ಷಿಗಳನ್ನು ಹೊರೆತುಪಡಿಸಿ) – Dialogue with Christians (Except Jehovah’s Witnesses)

    ದೇವನೊಬ್ಬನೆ ಅಥವ ಮೂವರೇ? – Is God one or three?

  • ಪ್ರವಾದಿಗಳು
    • All
    • ಮುಹಮ್ಮದ್(ﷺ)
    • ಯೇಸು(ಈಸ (ಅ))

    ರಬಿವುಲ್ ಅವ್ವಲ್ 12 ಪ್ರವಾದಿ(ಸ) ಮನೆಯ ವಾತಾವರಣ –

    ಇಸ್ಲಾಮಿನ ಸಂದೇಶವಾಹಕ  ಮುಹಮ್ಮದ್(ﷺ) – The Messenger of Islam ’Muhammad’ (ﷺ)

    ಯೇಸುವಿನ ಪ್ರಕಾರ ದೇವನೆಂದರೆ ಯಾರು ? – Who is God according to Jesus

    ಯೇಸುವಿನ ಅದ್ಭುತ ಜನನ – Miraculous Birth of Jesus

    ಪ್ರವಾದಿ (ﷺ) ಯನ್ನು ಅರಿಯಿರಿ – Know the Prophet (ﷺ)

    ಅಲ್ಲಾಹನ ಸಂದೇಶವಾಹಕರಾದ ಮಹಮ್ಮದ್(ಸ)ರ ಕುರಿತು ಮುಸ್ಲೀಮೇತರ ಟಿಪ್ಪಣಿಗಳು – Non-Muslim Notes on Muhammad (PBUH), Messenger of Allah

    ದೇವನೊಬ್ಬನೆ ಅಥವ ಮೂವರೇ? – Is God one or three?

    ದೇವರ ಸಂದೇಶವಾಹಕ ಮುಹಮ್ಮದ್ (ﷺ)Messenger of God Muhammad (ﷺ)

    ಪ್ರವಾದಿ ಮುಹಮ್ಮದ್(ﷺ) – Prophet Muhammad(ﷺ)

  • ಜೀವನ ಚರಿತ್ರೆಗಳು
    • All
    • ಅಲ್-ಅಶರ ಅಲ್-ಮುಬಶ್ಶರೂನ್
    • ಇಮಾಮ್‍ಗಳು
    • ಖುಲಫಾ-ಎ-ರಾಶಿದೂನ್
    • ಪ್ರಭಾವ ಬೀರುವ ಘಟನೆಗಳು
    • ಪ್ರವಾದಿಯ ಮಡದಿಯರು
    • ಸಹಾಬಿಗಳು
    • ಹದೀಸ್ ವಿದ್ವಾಂಸರು

    10. ಆಮಿರ್ ಬಿನ್ ಅಬ್ದುಲ್ಲಾ ಬಿನ್ ಅಲ್‌-ಜರ್ರಾಹ್(ಅಬೂ ಉಬೈದ)(ರ) – Aamir bin Abdillah bin al-Jarrah(Abu Ubaida)

    9. ಸಈದ್ ಬಿನ್ ಝೈದ್(ರ) – Saeed Ibn Zayd (RA)

    8. ಸಅದ್ ಬಿನ್ ಅಬೀ ವಕ್ಕಾಸ್‌(ರ) – Sa’d Ibn Abi Waqqas (RA)

    7. ಅಬ್ದುರ್ರಹ್ಮಾನ್ ಬಿನ್ ಔಫ್(ರ) – Abdul ar-Rahman Bin Auf (RA)

    6. ಝುಬೈರ್ ಬಿನ್‌ ಅವ್ವಾಮ್(ರ) – Zubair Ibn Al-Awwam (RA)

    5. ತಲ್ಹ ಬಿನ್ ಉಬೈದುಲ್ಲಾ(ರ) – Talha bin Ubaydillah (RA)

    ಮೈಮೂನ ಬಿಂತ್ ಹಾರಿಸ್(ರ) – ಪ್ರವಾದಿ(ಸ) ರವರ ಕೊನೆಯ ಮಡದಿ

    ರಮ್ಲ ಬಿಂತ್ ಅಬೂ ಸುಫ್ಯಾನ್ (ಉಮ್ಮು ಹಬೀಬ)(ರ) – ಪ್ರವಾದಿ(ಸ) ರವರ ಹತ್ತನೆಯ ಮಡದಿ

    ಸಫಿಯ್ಯ ಬಿಂತ್ ಹುಯಯ್(ರ) – ಪ್ರವಾದಿ(ಸ) ರವರ ಒಂಬತ್ತನೇ ಮಡದಿ

  • ಇಸ್ಲಾಮಿನ ಇತಿಹಾಸ
  • ಇಸ್ಲಾಮಿನ ಕಾನೂನು
    • All
    • ಅನಿಷ್ಟ ಪದ್ಧತಿಗಳು
    • ಫತ್ವಾ ಸ್ಪಷ್ಟೀಕರಣ
    • ಫಿಖ್
    • ಷರಿಯ(ಕಾನೂನು)

    ತಮ್ಮ ಮದ್‌ಹಬ್‌ಗಳ ಕುರಿತು ಇಮಾಮ್‌ಗಳು ಏನೆನ್ನುತ್ತಾರೆ? – What the imam’s say about their Madhab?

    ಭಯೋತ್ಪಾದನೆಯ ಬಗ್ಗೆ ಇಸ್ಲಾಮ್ ಏನೆನ್ನುತ್ತದೆ? – What does Islam say about terrorism?

    ಸೂಫಿಗಳ ಕೆಲವು ತತ್ವಗಳು – Some principles of the Sufis

    ಸಂಘಟನೆಯನ್ನು ಒಡೆಯುವವರು ಕಪಟ ವಿಶ್ವಾಸಿಗಳು! – Those who break the organization are hypocritical believers!

    ​ಇಸ್ಲಾಮ್’ನಲ್ಲಿ ಪುರುಷರಿಗೆ ಒಂದಕ್ಕಿಂತ ಹೆಚ್ಚಿನ ಪತ್ನಿಯರೇ? – Can men have more than one wife in Islam?

    ಶಿಶುಗಳನ್ನು ಕೊಲ್ಲದಿರಿ – Don”t Kill the Babies

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

  • ಇಸ್ಲಾಮ್ ಜೀವನಶೈಲಿ-ಸಂಸ್ಕೃತಿ
    • All
    • ಆರೋಗ್ಯ ಪದ್ಧತಿ
    • ಇಸ್ಲಾಮಿನ ಆಧ್ಯಾತ್ಮಿಕತೆ
    • ಇಸ್ಲಾಮಿನ ಆರ್ಥಿಕತೆ
    • ಇಸ್ಲಾಮಿನ ನಾಗರಿಕತೆ
    • ಇಸ್ಲಾಮಿನ ನೈತಿಕತೆ
    • ಇಸ್ಲಾಮಿನ ರಾಜಕೀಯತೆ
    • ಇಸ್ಲಾಮಿನ ಸಾಮಾಜಿಕತೆ
    • ಕೌಟುಂಬಿಕ ಪದ್ಧತಿ
    • ಧಾರ್ಮಿಕ ಸೈರಣೆ

    ಖುರ್‌ಆನಿನ ಬೆಳಕಿನಲ್ಲಿ ರೋಗ ಪರಿಹಾರ

    ಜೀವನ ಘಟ್ಟದ ಪಯಣವೆತ್ತ ? – Where is the journey of the of life?

    ಶುದ್ಧೀಕರಣ / ವುದೂ – Wudu

    ದೇವರ ನೈಜ ಧರ್ಮ ಯಾವುದು? – What is the true religion of God?

    ನಮ್ಮ ಜೀವನದ ಉದ್ದೇಶವೇನು? – The purpose of our life

    ಇಸ್ಲಾಮಿನ ಮೂರು ಮೂಲಭೂತ ತತ್ವಗಳು – Three Fundamental Principles of Islam

    ಇಸ್ಲಾಮಿನಲ್ಲಿ ಏಕದೇವತ್ವ – Monotheism in Islam

    ​ಇಸ್ಲಾಮ್’ನಲ್ಲಿ ಪುರುಷರಿಗೆ ಒಂದಕ್ಕಿಂತ ಹೆಚ್ಚಿನ ಪತ್ನಿಯರೇ? – Can men have more than one wife in Islam?

    ದೇವರ ಸಂದೇಶವಾಹಕ ಮುಹಮ್ಮದ್ (ﷺ)Messenger of God Muhammad (ﷺ)

  • ಇಸ್ಲಾಮಿನಲ್ಲಿ ಮೂಲಭೂತ ಹಕ್ಕುಗಳು
    • All
    • ಮಹಿಳಾ ಹಕ್ಕುಗಳು
    • ಮಾನವ ಹಕ್ಕುಗಳು
    • ಸಮಾನತೆ

    ಇಸ್ಲಾಂ ಧರ್ಮದಲ್ಲಿ ಮಹಿಳೆಯ ಹಕ್ಕು ಭಾದ್ಯತೆಗಳು – Women’s Right in Islam

    ​ಇಸ್ಲಾಮ್’ನಲ್ಲಿ ಪುರುಷರಿಗೆ ಒಂದಕ್ಕಿಂತ ಹೆಚ್ಚಿನ ಪತ್ನಿಯರೇ? – Can men have more than one wife in Islam?

    ನಿಮ್ಮ ತಂದೆ-ತಾಯಿಯರ ಹಕ್ಕುಗಳು – Your parental rights

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

  • ಪ್ರಚಲಿತ ವಿದ್ಯಮಾನ
  • ಮಾಸ ಪತ್ರಿಕೆಗಳು
  • ಅರೇಬಿಕ್
ಕನ್ನಡ ಇಸ್ಲಾಂ | Kannada Islam
  • Login
ಇಸ್ಲಾಮಿಗೆ ಹೊಸಬರೇ
ಇಸ್ಲಾಮ್ ಅಂಗೀಕರಿಸುವಿರೇ?
ಇನ್ನೂ ಹೆಚ್ಚಿನ ಮಾಹಿತಿಗಾಗಿ
Social icon element need JNews Essential plugin to be activated.
No Result
View All Result
ಕನ್ನಡ ಇಸ್ಲಾಂ | Kannada Islam
ಇಸ್ಲಾಮಿಗೆ ಹೊಸಬರೇ
ಇಸ್ಲಾಮ್ ಅಂಗೀಕರಿಸುವಿರೇ?
ಇನ್ನೂ ಹೆಚ್ಚಿನ ಮಾಹಿತಿಗಾಗಿ
No Result
View All Result
ಕನ್ನಡ ಇಸ್ಲಾಂ | Kannada Islam
No Result
View All Result
Home ಪ್ರವಾದಿಗಳು ಮುಹಮ್ಮದ್(ﷺ)

ಪ್ರವಾದಿ (ﷺ) ಯನ್ನು ಅರಿಯಿರಿ – Know the Prophet (ﷺ)

GIRISH K S by GIRISH K S
11 December, 2023
in ಮುಹಮ್ಮದ್(ﷺ)
0 0
0

ಪರಮದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಲ್ಲಿ

ಪ್ರವಾದಿ ಮುಹಮ್ಮದ್(ﷺ)ರವರನ್ನು ತಿಳಿಯಿರಿ

اعرف نبيك ﷺ

 ಜಗತ್ತು ಕಂಡ ಅತ್ಯುನ್ನತರೂ, ಮಾನವರಲ್ಲಿ ಮಹೋನ್ನತರೂ ಆದ ಪ್ರವಾದಿ ಮುಹಮ್ಮದ್(ﷺ) ರವರ ಬಗ್ಗೆ ತಿಳಿದಿರಬೇಕಾದುದು ಪ್ರತಿಯೋರ್ವ ಮನುಷ್ಯನ ಮೇಲಿರುವ ಬಾಧ್ಯತೆಯಾಗಿದೆ. ಕಾರಣ, ಸತ್ಯದೆಡೆಗೂ ಒಳಿತುಗಳೆಡೆಗೂ ಮಾರ್ಗದರ್ಶನ ನೀಡಲು ಸೃಷ್ಟಿಕರ್ತನು ಕಳುಹಿಸಿದ ಅಂತ್ಯ ಪ್ರವಾದಿ ಯಾಗಿದ್ದಾರೆ ಪ್ರವಾದಿ ಮುಹಮ್ಮದ್(ﷺ). ಜಗತ್ತಿಗೆ ಕಾರುಣ್ಯವಾಗಿ ನಿಯೋಗಿಸಲ್ಪಟ್ಟ ಕೊನೆಯ ಸಂದೇಶ ವಾಹಕರು. ಅಂತ್ಯ ದಿನದವರೆಗಿರುವ ಸರ್ವ ಮನುಷ್ಯರು ಅನುಸರಿಸಬೇಕಾದ ಪ್ರವಾದಿ. ಪ್ರವಾದಿ(ﷺ) ರವರನ್ನು ತಿಳಿಯುವುದು ಮತ್ತು ಅನುಸರಿಸುವುದು ಪ್ರಪಂಚದಲ್ಲೇ ಲಭಿಸುವ ಅತೀ ದೊಡ್ಡ ಅನುಗ್ರಹ ವಾಗಿದೆ, ಅದಕ್ಕಾಗಿ ವ್ಯಯಿಸುವ ಸಮಯವು ಅನುಗ್ರಹೀತವಾಗಿದೆ.

ಪ್ರವಾದಿ( ﷺ )ರವರ ಪರಂಪರೆ

 ಅದ್‍ನಾನರ ಮಗನು, ಮಅದ್ದರ ಮಗನು, ನಿಸಾರರ ಮಗನು, ಮುಳರಿನ ಮಗನು, ಇಲ್ಯಾಸರ ಮಗನು, ಮುದ್‍ರಿಕರ ಮಗನು, ಖುಸೈಮರ ಮಗನು, ಕಿನಾನರ ಮಗನು, ನಳ್‍ರಿನ ಮಗನು, ಮಾಲಿಕರ ಮಗನು, ಫಿ’ರಿನ ಮಗನು, ಗ್ವಾಲಿಬರ ಮಗನು, ಲುಹೈರ ಮಗನು, ಕಅಬರ ಮಗನು, ಮುರ್ರರ ಮಗನು, ಕಿಲಾಬರ ಮಗನು, ಕುಸೈರ ಮಗನು, ಅಬ್ದುಮನಾಫರ ಮಗನು, ಹಾಶಿಮರ ಮಗನು, ಅಬ್ದುಲ್ ಮತ್ತಲಿಬರ ಮಗನು ಹಾಗೂ ಅಬ್ದುಲ್ಲಾಹರ ಪುತ್ರರೂ ಖಾಸಿಮರ ಪಿತರೂ ಆಗಿರುವರು ಅಂತ್ಯ ಪ್ರವಾದಿ ಮುಹಮ್ಮದ್(ﷺ). ಇದು ಪಂಡಿತರುಗಳ ನಡುವೆ ಒಮ್ಮಾತಾಭಿಪ್ರಾಯವಿರುವ ಪ್ರವಾದಿ ಪರಂಪರೆಯಾಗಿದೆ.

ಪ್ರವಾದಿ(ﷺ)ರವರ_ನಾಮಗಳು

ಪ್ರವಾದಿ(ﷺ)ರವರಿಗೆ ಅನೇಕ ನಾಮಗಳಿರುವುದಾಗಿ ಹದೀಸ್‍ಗಳಿಂದ ತಿಳಿಯಬಹುದು. ಜುಬೈರ್ ಇಬ್ನ್ ಮುತ್‍ಇಂ(ರ)ರವರಿಂದ ವರದಿ: ಪ್ರವಾದಿ(ﷺ)ರವರು ಹೇಳುವುದನ್ನು ನಾನು ಆಲಿಸಿದ್ದೇನೆ.
“ಖಂಡಿತವಾ ಗಿಯೂ ನನಗೆ ತುಂಬಾ ನಾಮಗಳಿವೆ. ನಾನು ಮುಹಮ್ಮದ್ ಆಗಿರುವೆನು, ಅಹ್ಮದ್ ಆಗಿರುವೆನು, ನಾನು ಅವಿಶ್ವಾಸವನ್ನು ಅಳಿಸಿ ಬಿಡುವ ಅಲ್ ಮಾಹಿ ಆಗಿರುವೆನು. ನಾನು ನನ್ನ ಸುತ್ತಲೂ ಜನರನ್ನು ಒಟ್ಟು ಸೇರಿಸುವ ಅಲ್‍ಹಾಶಿರ್ ಆಗಿರುವೆನು. ನಾನು, ಇನ್ನು ಯಾರೂ ಬರಲಿಕ್ಕಿಲ್ಲದ ಅಂತ್ಯದವನು(ಪ್ರವಾದಿ) ಆಗಿರುವೆನು.’’(ಬುಖಾರಿ,ಮುಸ್ಲಿಂ) 
ಇನ್ನೊಂದು ಹದೀಸ್‍ನಲ್ಲಿ: ಅಬೂ ಮೂಸಲ್ ಅಶ್‍ಅರಿ(ರ)ರವರಿಂದ ವರದಿ: ಪ್ರವಾದಿ(ﷺ)ರವರೇ ಸ್ವಯಂ ತನಗೆ ಕೆಲವು ನಾಮಗಳಿವೆಯೆಂದು ನಮ್ಮೊಡನೆ ಹೇಳುತ್ತಿದ್ದರು.
“ನಾನು ಮುಹಮ್ಮದ್ ಆಗಿರುವೆನು, ಅಹ್ಮದ್ ಆಗಿರುವೆನು, ನಾನು ಮುಖಫ್ಫ್(ಹೆಚ್ಚು ಜನರಿಂದ ಅನುಸರಿಸಲ್ಪಡುವ ದೂತನು) ಆಗಿರುವೆನು. ಅಲ್ ಹಾಶಿರ್ ಆಗಿರುವೆನು, ತೌಬಾದ ದೂತನಾಗಿ ರುವೆನು, ಕಾರುಣ್ಯದ ದೂತನಾಗಿರುವೆನು.’’(ಮುಸ್ಲಿಂ)

ಪ್ರವಾದಿ(ﷺ)ರವರ ಪರಂಪರೆಯ ಪಾವಿತ್ರ್ಯತೆ

 ಪ್ರವಾದಿ(ﷺ)ರವರ ಕುಟುಂಬ ಪರಂಪರೆಯು ಪಾವಿತ್ರ್ಯತೆ ಹೊಂದಿರುವುದಾಗಿದೆ. ಅದರಲ್ಲಿ ವ್ಯಭಿಚಾರದ ಅಥವಾ ನೀಚ ಕೃತ್ಯದ ಯಾವುದೇ ಅಂಶವೂ ಇಲ್ಲ. ಅಲ್ಲಾಹನು ಪ್ರವಾದಿ(ﷺ)ರವರ ಪರಂಪರೆಯನ್ನು ಸಂರಕ್ಷಿಸಿದ್ದಾನೆ. ಒಂದು ಹದೀಸ್ ಹೀಗಿದೆ:
ವಾಥಿಲ್ ಇಬ್ನ್ ಅಸ್‍ಖಹಿ(ರ)ರವರಿಂದ ವರದಿ: ಪ್ರಾವಾದಿ ﷺ) ರವರು ಹೇಳುವುದನ್ನು ನಾನು ಆಲಿಸಿದ್ದೇನೆ: “ಉನ್ನತನೂ ಪ್ರತಾಪಶಾಲಿಯೂ ಆದ ಅಲ್ಲಾಹನು ಇಸ್ಮಾಈಲ್(ಅ)ರವರನ್ನು ಇಬ್ರಾಹೀಮ್ (ಅ)ರವರ ಸಂತಾನಗಳಿಂದ ಆಯ್ಕೆ ಮಾಡಿದನು. ಇಸ್ಮಾಈಲ್ (ಅ)ರವರ  ಸಂತಾನ ಪರಂಪರೆಯಿಂದ ಕಿನಾನ ರನ್ನು ಅಯ್ಕೆ ಮಾಡಿದನು. ಕಿನಾನರ ಸಂತಾನ ಪರಂಪರೆಯಿಂದ ಖುರೈಶರನ್ನು ಆಯ್ಕೆ ಮಾಡಿದನು, ಖುರೈಶರಿಂದ ಬನೂ ಹಾಶಿಮರನ್ನು ಆಯ್ಕೆ ಮಾಡಿದನು, ಬನೂ ಹಾಶಿಮರಿಂದ ನನ್ನನ್ನು ಆಯ್ಕೆ ಮಾಡಲಾಯಿತು.’’(ಮುಸ್ಲಿಂ).
ಅಬೂ ಸುಫಿಯಾ ನರಲ್ಲಿ ಹಿರ್ಕಲ್ ರಾಜರು ಪ್ರವಾದಿ(ﷺ)ರವರ ಕುಟುಂಬ ಪರಂಪರೆಯ ಬಗ್ಗೆ ವಿಚಾರಿಸಿದಾಗ ಅಬೂ ಸುಫಿಯಾನ್ ಹೇಳಿದರು: “ಅವರು ನಮ್ಮಲ್ಲಿ ಉನ್ನತ ಕುಟುಂಬ ಪರಂಪರೆಯಿರುವವರು ಆಗಿರುವರು, ಆಗ ಹಿರ್ಕಲ್ ಹೇಳಿದರು: ಪ್ರವಾದಿಗಳನ್ನು ನಿಯೋಗಿಸ ಲ್ಪಡುವುದು ಹಾಗಾಗಿದೆ. ಅವರ ಪರಂಪರೆ ಯಿಂದಲೇ ಆಗಿದೆ’’(ಬುಖಾರಿ)

ಪ್ರವಾದಿ(ﷺ)ರವರ ಜನನ

 ರಬೀಉಲ್ ಅವ್ವಲಿನ ಸೋಮವಾರ ದಿನ ಜನಿಸಿದರು. ಅಬೀಉಲ್ ಅವ್ವಲ್ 2ರಂದು, 8ರಂದು, 10ರಂದು, 12ರಂದು ಮುಂತಾದ ಅಭಿಪ್ರಾಯಗಳಿವೆ. ಇಮಾಮ್ ಇಬ್ನ್ ಕಥೀರ್(ರೆ) ಹೇಳಿದರು: ಪ್ರವಾದಿ(ﷺ)ರವರು ಆನೆ ಕಳಹ ವರ್ಷದಲ್ಲಿ ಜನಿಸಿದ್ದಾರೆಂಬುವುದು ದೃಢಪಟ್ಟಿರುವುದೂ ಸರಿಯಾದ ಅಭಿಪ್ರಾಯವೂ ಆಗಿದೆ. ಇದನ್ನೇ ಇಮಾಮ್ ಬುಖಾರಿಯವರ ಅಧ್ಯಾಪಕರಾಗಿರುವ ಇಬ್ರಾಹೀಮ್ ಇಬ್ನ್ ಮುಂದಿರುಲ್ ಇಸಾಮಿ ಮತ್ತು ಖಲೀಫತ್ ಇಬ್ನ್ ಖಯ್ಯಾತ್‍ರವರು ಹೇಳಿದ್ದಾರೆ. ಪ್ರವಾದಿ(ﷺ) ರವರ ಪಿತರು ಅವರ ಜನನಕ್ಕೆ ಮುಂಚೆಯೇ ಇಹಲೋಕಕ್ಕೆ ವಿದಾಯ ಹೇಳಿದ್ದರು.

ಪ್ರವಾದಿ(ﷺ)ರವರ ಸ್ತನಪಾನ

 ಅಬೂ ಲಹಬನ ದಾಸಳಾಗಿದ್ದ `ಥುವೈಬ’ ಕೆಲವು ದಿನ ಪ್ರವಾದಿ(ﷺ)ರವರಿಗೆ ಹಾಲುಣಿಸಿದ್ದಾಳೆ. ನಂತರ ಬನೂ ಸಅದ್ ಗೋತ್ರಕ್ಕೆ ಸ್ತನಪಾನಕ್ಕಾಗಿ ಪ್ರವಾದಿ ಯವರನ್ನು ಕಳುಹಿಸಲಾಗಿತ್ತು. ಅಲ್ಲಿ `ಹಲೀಮ ಸಅದಿಯ್ಯ’ ಎಂಬ ಹೆಸರಿನ ಮಹಿಳೆಯು ಪ್ರವಾದಿ( ﷺ) ರವರಿಗೆ ಹಾಲುಣಿಸಿದರು. ಸರಿಸುಮಾರು 4 ವರ್ಷದಷ್ಟು ಕಾಲ ಪ್ರವಾದಿ(ﷺ)ರವರು ಸಅದ್ ಗೋತ್ರದಲ್ಲಿ ಹಲೀಮರೊಂದಿಗೆ ಕಳೆದರು. ಪ್ರವಾದಿ(ﷺ)ರವರ ಹೃದಯವನ್ನು ಸೀಳಲಾದ ಘಟನೆ ನಡೆದಿರುವುದೂ ಅಲ್ಲೇ ಆಗಿದೆ. ಆ ಮೂಲಕ ಹೃದಯದಲ್ಲಿ ಶೈತಾನನಿಗಿದ್ದ ಭಾಗವನ್ನು ಅವರ ಹೃದಯದಿಂದ ತೆಗೆಯಲಾಯಿತು. ಈ ಘಟನೆಯ ಬಳಿಕ ಹಲೀಮರು ಮಗುವನ್ನು ತಾಯಿ ಆಮೀನಾರಿಗೆ ಒಪ್ಪಿಸಿದರು. ಮಕ್ಕಾದೆಡೆಗೆ ಮರಳುವಾಗ ದಾರಿಯಲ್ಲಿ `ಅಬವಾ’’ ಎಂಬ ಸ್ಥಳದಲ್ಲಿ ತಾಯಿ ಆಮಿನಾರು ಕೊನೆಯು ಸಿರೆಳೆದರು. ಅಂದು ಪ್ರವಾದಿಯವರಿಗೆ ಆರು ವಯಸ್ಸು ಪ್ರಾಯವಾಗಿತ್ತು. ಮಕ್ಕಾ ವಿಜಯಕ್ಕಾಗಿ ಪ್ರವಾದಿ(ﷺ) ರವರು ಮಕ್ಕಾದ ಕಡೆಗಿರುವ ಯಾತ್ರೆಯ ನಡುವೆ `ಅಬವಾ’’ ಎಂಬ ಸ್ಥಳಕ್ಕೆ ತಲುಪಿದಾಗ ತಮ್ಮ ಪ್ರಭುವಿನಲ್ಲಿ ತಾಯಿಯ ಖಬರನ್ನು ಸಂದರ್ಶಿಸಲು ಅನುಮತಿ ಕೇಳಿದರು, ಅಲ್ಲಾಹನಿಂದ ಅನುಮತಿ ಲಭಿಸಿತು. ಈ ಘಟನೆಯು ಹದೀಸ್‍ನಲ್ಲಿ ಹೀಗಿದೆ:
 ಅಬೂಹುರೈರಃ(ರ)ರವರಿಂದ ವರದಿ: ಪ್ರವಾದಿ (ﷺ)ರವರು ತಮ್ಮ ತಾಯಿಯ ಖಬರನ್ನು ಸಂದರ್ಶಿ ಸಿದರು, ಆಗ ಅವರು ಅತ್ತರು, ಅವರ ಸುತ್ತಲೂ ಇದ್ದವರೂ ಅತ್ತರು, ನಂತರ ಪ್ರವಾದಿ(ﷺ) ರವರು ಹೇಳಿದರು:
“ನಾನು ನನ್ನ ತಾಯಿಗೆ ಇಸ್ತಿಗ್ಫಾರನ್ನು (ಪಾಪವಿಮೋಚನೆಯನ್ನು) ಕೇಳಲು ಅಲ್ಲಾಹನಲ್ಲಿ ಅನುಮತಿ ಕೇಳಿದೆ. ಆದರೆ ಅಲ್ಲಾಹನು ಅನುಮತಿ ಕೊಡಲಿಲ್ಲ. ನಾನು ನನ್ನ ತಾಯಿಯ ಖಬರನ್ನು ಸಂದರ್ಶಿಸಲು ಅನುಮತಿ ಕೇಳಿದಾಗ ಅಲ್ಲಾಹನು ಅನುಮತಿ ಕೊಟ್ಟನು. ನೀವು ಖಬರನ್ನು ಸಂದರ್ಶಿಸಿರಿ ಅದು ಮರಣವನ್ನು ನೆನಪಿಸುತ್ತದೆ’’ (ಮುಸ್ಲಿಂ).
ಪ್ರವಾದಿವರ್ಯರ ಪಿತರಿಂದ ವಾರಿಸಾಗಿ ಲಭಿಸಿದ ಉಮ್ಮು ಐಮನ್ ಎಂಬ ದಾಸಿಯು ತಾಯಿಯ ಮರಣಾ ನಂತರ ಪ್ರವಾದಿ(ﷺ)ರವನ್ನು ಆರೈಸಿದರು. ಹಾಗೆಯೇ ಪ್ರವಾದಿ(ﷺ)ರವರ ಪಿತಾಮಹ ರಾದ ಅಬ್ದುಲ್ ಮುತ್ತಲಿಬರು ಪ್ರವಾದಿ(ﷺ)ರವರ ಪರಿಪಾಲನೆ ಯನ್ನು ವಹಿಸಿ ಕೊಂಡರು. ಪ್ರವಾದಿ(ﷺ) ರವರ 8 ವಯಸ್ಸು ಪ್ರಾಯದಲ್ಲಿ ಪಿತಾಮ ಹರಾದ ಅಬ್ದುಲ್ ಮುತ್ತಲಿಬರೂ ನಿಧನರಾದರು. ಅಬ್ದುಲ್ ಮತ್ತಲಿಬರ ವಸ್ವಿಯತಿನ ಪ್ರಕಾರ ಅನಂತರ ಪ್ರವಾದಿ( ﷺ)ರವರ ಆರೈಕೆಯನ್ನು ಚಿಕ್ಕಪ್ಪರಾದ ಅಬೂ ತ್ವಾಲಿಬರು ವಹಿಸಿಕೊಂಡರು. ಅಬೂ ತ್ವಾಲಿಬರು ಪ್ರವಾದಿ(ﷺ) ರವರನ್ನು ಅತ್ಯಧಿಕ ಪ್ರೀತಿಸಿದರು ಮತ್ತು ಸಂರಕ್ಷಿಸಿದರು. ಪ್ರವಾದಿ(ﷺ)ರವರು ಪ್ರವಾದಿಯಾಗಿ ನಿಯುಕ್ತರಾದಾಗ ಲೂಪ್ರವಾದಿ(ﷺ)ರವರನ್ನು ಶತ್ರುಗಳಿಂದ ಸಂರಕ್ಷಿಸಿದರು, ಪ್ರಯಾಸದ ಮತ್ತು ಸಂಕಷ್ಟದ ಸಂದರ್ಭದಲ್ಲಿ ಅವರು ಅವಿಶ್ವಾಸದಲ್ಲಿದ್ದು ಕೊಂಡೇ ಪ್ರವಾದಿವರ್ಯರಿಗೆ ಸಹಾಯದ ಹಸ್ತವನ್ನು ಚಾಚಿ ನೆರಳಾದರು. ಆದರೆ ಅವರು ಅವಿಶ್ವಾಸದಲ್ಲೇ ಮರಣ ಗೊಂಡರು.

ಪ್ರವಾದಿ(ﷺ)ರವರಿಗೆ ಜಾಹಿಲಿಯ್ಯತಿನ ಕೆಡುಕಿನಿಂದ ಅಲ್ಲಾಹನ ಸಂರಕ್ಷಣೆ

 ಪ್ರವಾದಿ(ﷺ)ರವರನ್ನು ಅವರ ಕಿರಿಯ ಪ್ರಾಯದಲ್ಲೇ ಅಲ್ಲಾಹನು ಸರ್ವ ವಿಧಧ ನೀಚ ಕೃತ್ಯಗಳಿಂದ ಮತ್ತು ಜಾಹಿಲಿಯ್ಯಾ ಕಾಲದಲ್ಲಿ ನಡೆಯುತ್ತಿದ್ದ ಸರ್ವ ರೀತಿಯ ಶಿರ್ಕ್ ಹಾಗೂ ಅಂಧವಿಶ್ವಾಸಗಳಿಂದ ಸಂರಕ್ಷಿಸಿ, ಸರ್ವ ರೀತಿಯ ಸದ್ಗುಣಗಳನ್ನು ದಯಪಾಲಿಸಿದನು. ಆದುದರಿ ಂದ ಜನರ ಮಧ್ಯೆ ಅವರು `ಅಲ್ ಅಮೀನ್’(ವಿಶ್ವಸ್ತನು) ಎಂಬ ಬಿರುದಿನಿಂದ ಪ್ರಸಿದ್ಧರಾ ಗಿದ್ದರು. ಖುರೈಶರು ಕಅಬಾಲಯವನ್ನು ಪುನರ್ ನಿರ್ಮಾಣ ಮಾಡಲು ತೀರ್ಮಾನಿಸಿ ಅವರು ಅದರ ಕೆಲಸವನ್ನಾರಂಭಿಸಿದರು. ಹಜರುಲ್ ಅಸ್ವದನ್ನು ಇಡುವ ಸ್ಥಳದ ವಿಷಯದಲ್ಲಿ ಅಲ್ಲಿಯ ಗೋತ್ರಗಳ ಮಧ್ಯೆ ಭಿನ್ನಾಭಿಪ್ರಾಯ ತಲೆ ದೋರಿತು. ಪ್ರತಿಯೊಂದು ಗೋತ್ರದವರು ನಾವು ಅದನ್ನು ಇಡುತ್ತೇವೆ, ನಾವು, ನಾವು ಎನ್ನುತ್ತಾ ಹೀಗೆ ಭಿನ್ನಾಭಿಪ್ರಾಯ ತಲೆದೋರಿದಾಗ ಕೊನೆಗೆ ಅವರ ಮಧ್ಯೆ ಉಂಟಾದ ತೀರ್ಪು: ಮೊಟ್ಟಮೊದಲು ಅವರ ಕಡೆಗೆ ಹಾದು ಬರುವವರ್ಯಾರೋ ಅವರ ತೀರ್ಮಾನವನ್ನು ನಾವು ಸ್ವೀಕರಿಸೋಣ ಎಂದಾಗಿತ್ತು. ಹಾಗೆ ಅವರ ಬಳಿಗೆ ಮೊಟ್ಟಮೊದಲಾಗಿ ಪ್ರವಾದಿ(ﷺ)ರವರು ಹಾದು ಬಂದರು. ಅವರು ಸಂತೋಷ ಗೊಂಡರು. ವಿಶ್ವಸ್ತತೆಯಲ್ಲೂ, ಪಾವಿತ್ರ್ಯತೆಯಲ್ಲೂ, ಸತ್ಯಸಂಧತೆಯಲ್ಲೂ ಅವರ ಬಳಿಯಲ್ಲಿ ಉತ್ತುಂಗತೆಗೇರಿದ್ದ ಪ್ರವಾದಿ(ﷺ) ರವರನ್ನು ಕಂಡಾಗ ಅವರು ಘೋಷಣೆ ಕೂಗಿದರು: `ಅಲ್ ಅಮೀನ್’ ಬಂದಿದ್ದಾರೆ ಅವರ ತೀರ್ಮಾನವನ್ನು ನಾವು ಸ್ವೀಕರಿಸೋಣ. ಹಾಗೆ ಅವರು ತೃಪ್ತರಾದರು. ಆ ಮೇಲೆ ಪ್ರವಾದಿ(ﷺ)ರವರ ಬೇಡಿಕೆಯಂತೆ ಒಂದು ಬಟ್ಟೆಯನ್ನು ತರಲಾಯಿತು. ಆ ಬಟ್ಟೆಯ ಮೇಲೆ ತಮ್ಮ ಪವಿತ್ರವಾದ ಕೈಯಲ್ಲಿ ಹಜರುಲ್ ಅಸ್ವದನ್ನು ಇಟ್ಟ ಬಳಿಕ ಆ ಬಟ್ಟೆಯ ತುದಿಗಳನ್ನು ಪ್ರತಿಯೊಂದು ಗೋತ್ರದ ಮುಖಂಡರೊಡನೆ ಹಿಡಿಯಲು ಸೂಚಿಸಿದರು. ಹಾಗೆ ಅದರ ಸ್ಥಾನಕ್ಕೆ ತಲುಪಿದಾಗ ಪ್ರವಾದಿ(ﷺ)ರವರು ತಮ್ಮ ಕೈಯಿಂದಲೇ ಹಜರುಲ್ ಅಸ್ವದನ್ನು ಅದರ ಸೂಕ್ತ ಭಾಗದಲ್ಲಿಟ್ಟರು. ಇದನ್ನು ಕಂಡ ಖುರೈಶರು ತುಂಬಾ ಸಂತೋಷಭರಿತರಾದರು. ಯುದ್ಧದ ವರೆಗೂ ತಲುಪಿದ್ದ ಸಮಸ್ಯೆಯನ್ನು ಅತ್ಯಂತ ಸರಳವಾದ ರೀತಿಯಲ್ಲಿ ಪರಿಹರಿಸಿ ಕೊಟ್ಟ ಪ್ರವಾದಿ(ﷺ)ರವರ ಬುದ್ಧಿಯನ್ನು ಕಂಡು ಅವರು ಅಚ್ಚರಿ ಗೊಂಡರು. ಈ ಘಟನೆಯು ಇಮಾಮ್ ಅಹ್ಮದರ ಮುಸ್ನದ್‍ನಲ್ಲೂ ಮತ್ತು ಹಾಕಿಮ್‍ನಲ್ಲೂ ವರದಿಯಾಗಿದೆ.

ಪ್ರವಾದಿ(ﷺ)ರವರ ವಿವಾಹ

 25ನೇ ವಯಸ್ಸು ಪ್ರಾಯದಲ್ಲಿ ಪ್ರವಾದಿ(ﷺ)ರವರು ಖದೀಜ(ರ)ರವರನ್ನು ವಿವಾಹವಾದರು. ಖದೀಜ(ರ) ರವರ ದಾಸರಾದ ಮೈಸರರೊಂದಿಗೆ ಖದೀಜ(ರ) ರವರ ನಿರ್ದೇಶನದ ಪ್ರಕಾರ ಪ್ರವಾದಿ(ﷺ)ರವರು ಶಾಮಿಗೆ(ಸಿರಿಯಾ) ವ್ಯಾಪಾರಕ್ಕಾಗಿ ತೆರಳಿದರು. ಹಾಗೆ ಮೈಸರ ಪ್ರವಾದಿ(ﷺ)ರವರ ವಿಶ್ವಸ್ತತೆಯನ್ನೂ, ಸೌಮ್ಯತೆ ಯನ್ನೂ, ಸದ್ಗುಣವನ್ನೂ ದರ್ಶಿಸಿ ಅದನ್ನು ತನ್ನ ಯಜಮಾನರಾದ ಖದೀಜರಿಗೆ ವಿವರಿಸಿ ಕೊಟ್ಟಾಗ ಅವರು ಪ್ರವಾದಿವರ್ಯರನ್ನು ವಿವಾಹವಾಗಲು ಇಚ್ಛೆಯನ್ನು ವ್ಯಕ್ತಪಡಿಸಿದರು. ಅಂದು ಅವರಿಗೆ 40 ವಯಸ್ಸು ಪ್ರಾಯ ಮತ್ತು ವಿಧವೆಯೂ ಆಗಿದ್ದರು.
 ನುಬುವತ್ತಿನ ನಂತರ ಪ್ರವಾದಿ(ﷺ)ರವರು ಮದೀನಾ ಗೆ ಹಿಜಿರ ಹೋಗುವುದಕ್ಕಿಂತ ಮೂರು ವರ್ಷ ಮುಂಚೆ ಖದೀಜ(ರ)ರವರು ಮರಣ ಹೊಂದಿದರು. ಖದೀಜ (ರ)ರವರು ಮರಣ ಹೊಂದುವ ವರೆಗೆ ಪ್ರವಾದಿ (ﷺ)ರವರು ಇನ್ನೊಂದು ವಿವಾಹವಾಗಿರಲಿಲ್ಲ ಖದೀಜ(ರ)ರವರ ವಫಾತಿನ ಬಳಿಕ  ಪ್ರವಾದಿ(ﷺ)ರವರು `ಸಂಅಃರ ಮಗಳು ಸೌದಃ(ರ)ರವರನ್ನು ವಿವಾಹವಾ ದರು. ಆ ಮೇಲೆ ಅಬೂಬಕರ್ ಸಿದ್ದೀಖ್(ರ)ರವರ ಪುತ್ರಿ ಆಇಶಾ(ರ)ರವರನ್ನು ವಿವಾಹವಾದರು. ಪ್ರವಾದಿ (ﷺ)ರವರು ಆಇಶಾ(ರ)ರನ್ನಲ್ಲದೆ ಕನ್ಯೆಯಾಗಿ ಇತರ ಯಾರನ್ನೂ ವಿವಾಹವಾಗಿರಲಿಲ್ಲ. ಅದರ ಬಳಿಕ ಉಮರ್ ಇಬ್ನ್ ಖತ್ತಾಬ್(ರ)ರವರ ಪುತ್ರಿ ಹಫ್ಸ(ರ) ರವರನ್ನು ವಿವಾಹವಾದರು. ನಂತರ  ಹಾರಿಸರ ಮಗಳು ಖುಸೈಮರ ಪುತ್ರಿಯಾದ ಝೈನಬ(ರ) ರವರನ್ನು ವಿವಾಹವಾದರು. ಆ ಬಳಿಕ ಉಮಯ್ಯರ ಪುತ್ರಿಯಾದ ಉಮ್ಮು ಸಲಮ ಎಂಬ ಕುನಿಯತ್ತಿನಿಂದ ಕರೆಯಲ್ಪಡುವ ಹಿಂದರನ್ನು ವಿವಾಹವಾದರು. ಅದರ ನಂತರ ಜಹ್‍ಶಿಯ ಮಗಳು ಝೈನಬ(ರ)ರನ್ನು ಪ್ರವಾದಿವರ್ಯರು ವಿವಾಹವಾದರು. ಆ ಮೇಲೆ ಹಾರಿಸರ ಮಗಳು ಜುವೈರಿಯ್ಯಾ ರನ್ನು ವಿವಾಹ ವಾದರು. ನಂತರ ಉಮ್ಮು ಹಬೀಬರಾದ ಅಬೂ ಸುಫಿಯಾನರ ಮಗಳು ರಮ್ಲಃ(ರ)ರನ್ನು ವಿವಾಹವಾ ದರು. ಖೈಬರ್ ಯುದ್ಧದ ವೇಳೆಯಲ್ಲಿ ಉಯೈಯ್ ಇಬ್ನ್ ಅಹ್‍ತ್ವಬರ ಪುತ್ರಿಯಾದ ಸ್ವಫಿಯ್ಯಾ(ರ) ರವರನ್ನು ವಿವಾಹವಾದರು. ಕೊನೆಯದಾಗಿ ಹಾರಿಸರ ಪುತ್ರಿಯಾದ ಮೈಮೂನ(ರ)ರವರನ್ನು ವಿವಾಹವಾ ದರು.

ಪ್ರವಾದಿ(ﷺ)ರವರ ಸಂತಾನಗಳು

 ಇಬ್ರಾಹೀಮ್ ಎಂಬ ಮಗನ ಹೊರತು ಇತರ ಎಲ್ಲ ಸಂತಾನವು ಖದೀಜಃ(ರ)ರವರಿಂದಲೇ ಜನಿಸಿರುವುದು. ಇಬ್ರಾಹೀಮ್(ರ)ರವರು,ಮುಖೈಖಿಸ್ ರಾಜರು ಉಡು ಗೊರೆಯಾಗಿ ನೀಡಿದ ಮಾರಿಯತುಲ್ ಖಿಬ್ತಿಯಾಃ (ರ) ಎಂಬ ದಾಸಿಗೆ ಜನಿಸಿದ್ದಾರೆ.
 ಗಂಡು ಮಕ್ಕಳು: ಕಾಸಿಮ್(ರ), ಇವರು ಸ್ವಲ್ಪ ದಿನ ಗಳು ಮಾತ್ರ ಜೀವಿಸಿದ್ದರು. ಪ್ರವಾದಿ(ﷺ)ರಿಗೆ ಅಬುಲ್ ಖಾಸಿಮ್ (ಖಾಸಿಮರ ಪಿತರು) ಎಂಬ ಕುನಿಯತಿತ್ತು. ನಂತರ ಅಬ್ದುಲ್ಲಾಹ್(ರ) ಜನಿಸಿದರು. ಅದರ ಬಳಿಕ ಮದೀನಾದಲ್ಲಿ ಜನಿಸಿದರು. ಇಬ್ರಾಹೀಮರು(ರ) ಒಂದು ವರ್ಷ ಮತ್ತು ಹತ್ತು ತಿಂಗಳು ಜೀವಿಸಿದ್ದರು.
 ಹೆಣ್ಮಕ್ಕಳು: ಝೈನಬಃ(ರ)ರವರು ಪ್ರವಾದಿ(ﷺ) ರವರ ಹಿರಿಯ ಪುತ್ರಿ. ಅವರನ್ನು ಅಬುಲ್ ಆಸ್ ಇಬ್ನ್ ರಬೀಅಃ ವಿವಾಹವಾಗಿದ್ದರು. ರುಕಿಯ್ಯಾ(ರ), ಅವರ ನ್ನು ಉಸ್ಮಾನ್ ಇಬ್ನ್ ಅಫ್ಫಾನ್(ರ)ರವರು ವಿವಾಹವಾ ದರು. ಫಾತಿಮಃ(ರ), ಅವರನ್ನು ಅಲೀ ಇಬ್ನ್ ಅಬೀ ತ್ವಾಲಿಬ್(ರ)ರವರು ವಿವಾಹವಾದರು. ಫಾತಿಮಾ(ರ) ರಿಂದ ಸ್ವರ್ಗೀಯ ಯುವಕರ ಮುಖಂಡರುಗಳಾದ ಹಸನ್-ಹುಸೈನ್(ರ)ರುಜನಿಸಿದರು. ಉಮ್ಮುಕುಲ್ಸೂಂ (ರ), ರುಕಿಯ್ಯಾ(ರ)ರ ಮರಣಾನಂತರ ಉಮ್ಮು ಕುಲ್ಸೂಂ(ರ)ರನ್ನು ಉಸ್ಮಾನ್(ರ) ರವರು ವಿವಾಹ ವಾದರು.

ಪ್ರವಾದಿತ್ವ:

 ಪ್ರವಾದಿ(ﷺ)ರವರಿಗೆ ಅವರ 40ನೇ ವಯಸ್ಸಿನಲ್ಲಿ ಅಲ್ಲಾಹನು ಪ್ರವಾದಿತ್ವ ನೀಡಿದನು. ರಮದಾನ್ 17ರಂದು ಹಿರಾ ಗುಹೆಯಲ್ಲಿದ್ದ ಪ್ರವಾದಿ(ﷺ)ರವರ ಬಳಿಗೆ ಮೊಟ್ಟಮೊದಲು ಜಿಬ್ರೀಲ್(ಅ)ರವರು ದಿವ್ಯ ಸಂದೇಶದೊಂದಿಗೆ ಬಂದರು. ವಹ್ಯ್ ಅವತೀರ್ಣ ವಾಗುವ ವೇಳೆಯಲ್ಲಿ ಪ್ರವಾದಿ(ﷺ)ರವರ ಹಣೆಯಲ್ಲಿ ಬೆವರೇಳುತ್ತಿತ್ತು ಮತ್ತು ಪ್ರಯಾಸದ ಅನುಭವವಾಗು ತ್ತಿತ್ತು. ಪ್ರವಾದಿ(ﷺ)ರವರ ಬಳಿಗೆ ಮೊಟ್ಟಮೊದಲು ವಹ್ಯ್‍ನೊಂದಿಗೆ ಜಿಬ್ರೀಲ್ ಆಗಮಿಸಿ, ಅವರಲ್ಲಿ ಓದಿರಿ ಎಂದರು. ನನಗೆ ಓದಲು ತಿಳಿದಿಲ್ಲ ಎಂದು ಪ್ರವಾದಿ (ﷺ)ರವರು ಉತ್ತರಿಸಿದಾಗ ಪ್ರವಾದಿ(ﷺ)ರವನ್ನು ಜಿಬ್ರೀಲ್(ಅ) ಅಪ್ಪಿ ಹಿಡಿದರು. ಪುನಃ ಓದಿರಿ ಎನ್ನ ಲಾಯಿತು. ನನಗೆ ಓದಲು ತಿಳಿದಿಲ್ಲ ಎಂದು ಪ್ರವಾದಿ(ﷺ)ರವರು ಪುನಃ ಉತ್ತರಿಸಿದರು. ಹೀಗೆ ಮೂರು ಬಾರಿ ಪುನರಾವರ್ತಿಸಲ್ಪಟ್ಟಿತು. ಆ ಬಳಿಕ ಮಲಕ್ ಜಿಬ್ರೀಲ್(ಅ) ಸೃಷ್ಟಿಕರ್ತನ ಈ ದಿವ್ಯ ಸಂದೇಶವನ್ನು ನೀಡಿದರು:  
اقْرَأْ بِاسْمِ رَبِّكَ الَّذِي خَلَقَ (1) خَلَقَ الْإِنْسَانَ مِنْ عَلَقٍ (2) اقْرَأْ وَرَبُّكَ الْأَكْرَمُ (3) الَّذِي عَلَّمَ بِالْقَلَمِ (4) عَلَّمَ الْإِنْسَانَ مَا لَمْ يَعْلَمْ (5)         
``ಸೃಷ್ಟಿಸಿರುವ ತಮ್ಮ ಪ್ರಭುವಿನ ನಾಮದಿಂದ ಓದಿರಿ. ಅವನು ಮನುಷ್ಯನನ್ನು ರಕ್ತಪಿಂಡದಿಂದ ಸೃಷ್ಟಿಸಿರುವನು. ತಾವು ಓದಿರಿ. ಲೇಖನಿಯ ಮೂಲಕ (ವಿಧ್ಯೆ)ಕಲಿಸಿ ಕೊಟ್ಟ ತಮ್ಮ ಪ್ರಭು ಅತ್ಯಧಿಕ ಔದಾರ್ಯವುಳ್ಳವನಾಗಿರುವನು. ಮನುಷ್ಯನು ಅರಿಯದಿರುವುದನ್ನು ಅವನು ಮನುಷ್ಯನಿಗೆ ಕಲಿಸಿ ಕೊಟ್ಟಿರುವನು’’ (ಸೂರತುಲ್ ಅಲಖ್ 1-5).
 ಇದನ್ನು ಆಲಿಸಿದ ಪ್ರವಾದಿ(ﷺ)ರವರು ಹೆದರಿ ನಡುಗುತ್ತಾ ಪತ್ನಿ ಖದೀಜ(ರ)ರವರ ಬಳಿಗೆ ನನಗೆ ಹೊದಿಸು, ನನಗೆ ಹೊದಿಸು ಎನ್ನುತ್ತಾ ಓಡಿ ಬಂದರು ಮತ್ತು ನಡೆದ ಘಟನೆಯನ್ನು ವಿವರಿಸಿ ಕೊಟ್ಟರು. ಖದೀಜ(ರ)ರವರು ಪ್ರವಾದಿ(ﷺ)ರವರಿಗೆ ಸಾಂತ್ವನ ಹೇಳಿ ಬಳಿಕ ಹೀಗಂದರು: “ತಾವು ಸಂತೋಷ ಗೊಳ್ಳಿರಿ, ಅಲ್ಲಾಹು ತಮ್ಮನ್ನು ಎಂದಿಗೂ ನಿಂದಿಸಲಾರನು. ತಾವು ಕುಟುಂಬ ಸಂಬಂಧದಲ್ಲಿ ಏರ್ಪಡುತ್ತೀರಿ, ಸತ್ಯಸಂಧತೆಯನ್ನು ಮೈಗೂಡಿಸುತ್ತೀರಿ, ನಿರ್ಗತಿಕರಿಗೆ ಸಹಾಯದ ಹಸ್ತ ಚಾಚುತ್ತೀರಿ, ಬಡ ಬಗ್ಗರಿಗೆ ನೆರಳಾಗುತ್ತೀರಿ. ಆದುದರಿಂದ ತಮ್ಮನ್ನು ಅಲ್ಲಾಹನು ಎಂದಿಗೂ ಕೈಬಿಡಲಾರನು.’’ 
 ಅನಂತರ ಸ್ವಲ್ಪ ಸಮಯದ ತನಕ ವಹ್ಯ್ ಸ್ಥಗಿತ ಗೊಂಡಿತು. ಅಲ್ಲಾಹನು ಉದ್ದೇಶಿಸಿದ ಸಮಯವಷ್ಟು ಹಾಗೆಯೇ ಮುಂದುವರಿಯಿತು. ಪ್ರವಾದಿ(ﷺ)ರವರು, ವಹ್ಯ್ ಬರುತ್ತಿದ್ದರೆ ಎಂದು ಬಯಸಿದರು. ಒಮ್ಮೆ ಆಕಾಶ ಮತ್ತು ಭೂಮಿಯ ಮಧ್ಯೆದಲ್ಲಿ ಒಂದು ಮಲಕನ್ನು ದರ್ಶಿಸಿದರು. ಆ ಮಲಕ್, ಅಲ್ಲಾಹನು ತಮ್ಮನ್ನು ಪ್ರವಾದಿಯಾಗಿ ಆರಿಸಿದ್ದಾನೆಂದು ಹೇಳಿತು. ಇದನ್ನು ಕಂಡ ಪ್ರವಾದಿ(ﷺ)ರವರು ಹೆದರಿ ನನಗೆ ಹೊದಿಸಿರಿ… ನನಗೆ ಹೊದಿಸಿರಿ… ಎನ್ನುತ್ತಾ ಪತ್ನಿ ಖದೀಜ(ರ) ರವರ ಬಳಿಗೆ ಓಡಿ ಹೋದರು. ಆಗ ಅಲ್ಲಾಹನು ಪುನಃ ವಹ್ಯ್ ಅವತೀರ್ಣ ಗೊಳಿಸಿದನು. “ಓ ಹೊದಿಯಲಾಗಿ ರುವವರೇ! ಎದ್ದೇಳಿರಿ! (ಜನರಿಗೆ) ಎಚ್ಚರಿಕೆ ನೀಡಿರಿ. ತಮ್ಮ ಪ್ರಭುವನ್ನು ಮಹತ್ವ ಪಡಿಸಿರಿ. ತಮ್ಮ ಉಡುಪುಗಳನ್ನು ಶುದ್ಧೀಕರಿಸಿರಿ.’’(ಸೂರತುಲ್ ಮುದ್ದಸಿರ್: 1-4). ಈ ಆಯತಿನಲ್ಲಿ ಅಲ್ಲಾಹನು ಪ್ರವಾದಿ(ﷺ)ರಲ್ಲಿ, ಎದ್ದೇಳಿ ಜನರನ್ನು ಸತ್ಯದೆಡೆಗೆ ಆಹ್ವಾನಿಸಲು ಆದೇಶಿಸುತ್ತಾನೆ. ಪ್ರವಾದಿ(ﷺ)ರವರು ಎಚ್ಚೆತ್ತು ಕೊಂಡು, ತಮಗೆ ವಹಿಸಿ ಕೊಡಲಾಗಿರುವ ದೌತ್ಯವನ್ನು ನಿರ್ವಹಿಸಲು ತೀರ್ಮಾನಿ ಸಿದರು. ಹಾಗೆ ಹಿರಿಯರಲ್ಲೂ-ಕಿರಿಯರಲ್ಲೂ, ಸ್ವತಂತ್ರ ರಲ್ಲೂ-ದಾಸರಲ್ಲೂ, ಪುರುಷರಲ್ಲೂ-ಸ್ತ್ರೀಯರಲ್ಲೂ, ಕರಿಯರಲ್ಲೂ – ಬಿಳಿಯರಲೂ ಬೋಧನೆಯನ್ನಾರಂಭಿ ಸಿದರು. ಇಹ-ಪರದಲ್ಲಿ ವಿಜಯ ಮತ್ತು ಯಶಸ್ಸು ಲಭಿಸಬೇಕೆಂದೂ ಅಲ್ಲಾಹನ ತೃಪ್ತಿಗೆ ಪಾತ್ರರಾಗ ಬೇಕೆಂ ದೂ ಆಗ್ರಹಿಸುವವರಲ್ಲೊಳಪಟ್ಟ ಪ್ರತೀ ಗೋತ್ರದವರು ಈ ಬೋಧನೆಗೆ ಓಗೊಟ್ಟರು. ಹೀಗೆ ಪ್ರತಿಯೋ ರ್ವರೂ ಪ್ರಕಾಶದೆಡೆಗೂ ಮತ್ತು ಪ್ರಮಾಣದೆಡೆಗೂ ಪ್ರವೇಶಿಸಿದರು. ಆದರೆ ಮಕ್ಕಾದಲ್ಲಿದ್ದ ಅವಿವೇಕಿಗಳು ಸತ್ಯವಿಶ್ವಾಸಿಗಳನ್ನು ಮರ್ದಿಸಲು ತೊಡಗಿದರು. ಅಲ್ಲಾಹನು ಪ್ರವಾದಿ(ﷺ)ರವರನ್ನು ಅವರಿಂದ ಸಂರಕ್ಷಿ ಸಿದನು. ಅವರಲ್ಲೇ ಸ್ಥಾನವು, ಪ್ರತಾಪವು ಮತ್ತು ಅಂಗೀ ಕಾರವು ಇದ್ದ ಪ್ರವಾದಿ(ﷺ) ರವರ ಚಿಕ್ಕಪ್ಪರಾಗಿದ್ದ ಅಬೂ ತ್ವಾಲಿಬರ ಮೂಲಕ ಅಲ್ಲಾಹನು ಅವರಿಗೆ ಸಂರಕ್ಷಣೆಯನ್ನು ನೀಡಿದನು. 
  ಇಬ್ನ್‍ಅಬ್ಬಾಸ್(ರ)ರವರಿಂದ ವರದಿ:
 وَأَنْذِرْعَشِيرَتَكَ الْأَقْرَبِينَ

`ತಮ್ಮ ನಿಕಟ ಸಂಬಂಧಿಕರಿಗೆ ಮುನ್ನೆಚ್ಚರಿಕೆ ನೀಡಿರಿ.’ ಎಂಬ ಆಯತ್ ಅವತೀರ್ಣ ವಾದಾಗ ಪ್ರವಾದಿ(ﷺ) ರವರು ಸಫಾ ಬೆಟ್ಟದ ಮೇಲೆ ಹತ್ತಿ, ಬನೂಫಿಹ್ರ್, ಬನೂಅದಿಯ್ಯ್ ಮೊದಲಾದ ಅರಬಿ ಗೋತ್ರಗಳನ್ನು ಕರೆದರು. ಈ ಕರೆಯನ್ನು ಆಲಿಸಿ ಅವರೆಲ್ಲರೂ ಅಲ್ಲಿ ಒಟ್ಟು sಗೂಡಿದರು. ಅದರಲ್ಲಿ ಪಾಲ್ಗೊಳ್ಳಲು ಅಸಾಧ್ಯವಾದವರು ಅಲ್ಲೇನು ನಡೆಯುತ್ತಿದೆ ಎಂಬು ವುದನ್ನು ಅರಿಯಲು ದೂತರನ್ನು ಕಳುಹಿಸಿದರು. ನಂತರ ಅಬೂ ಲಹಬ್ ಮತ್ತು ಖುರೈಶರು ಅಲಿಗೆ ಆಗಮಿಸಿದರು. ನಂತರ ಪ್ರವಾದಿ(ﷺ)ರವರು ಅಲ್ಲಿ ಒಟ್ಟು ಗೂಡಿದವರನ್ನುದ್ದೇಶಿಸಿ ಹೇಳಿದರು: ಈ ಬೆಟ್ಟದ ಹಿಂಭಾಗದಿಂದ ಒಂದು ಕುದುರೆ ಸೈನ್ಯ ತಮ್ಮ ಮೇಲೆ ದಾಳಿ ನಡೆಸಲು ಸಜ್ಜಾಗಿ ಬರುತ್ತಿದೆಯೆಂದು ನಾನು ಹೇಳಿದರೆ ನೀವು ಅದನ್ನು ಅಂಗೀಕರಿಸುವಿರೇ? ಅವರೆಲ್ಲರೂ ಏಕಧ್ವನಿಯಿಂದ ಹೇಳಿದರು” ಹೌದು, ನಾವು ಅಂಗೀಕರಿಸುವೆವು. ಕಾರಣ ನೀನು ಇಂದಿನ ತನಕ ನಮ್ಮೊಂದಿಗೆ ಸತ್ಯವನ್ನಲ್ಲದೆ ಹೇಳಿಲ್ಲ. ನಂತರ ಪ್ರವಾದಿ(ﷺ)ರವರು ಮುಂದುವರಿಸಿದರು: “ಖಂಡಿತ ವಾಗಿಯೂ ನಾನು ನಿಮಗೆ ಕಠಿಣವಾದ ಶಿಕ್ಷೆಯ ವಿಷಯದಲ್ಲಿ ಮುನ್ನೆಚ್ಚರಿಗೆ ನೀಡಲು ಬಂದವನಾ ಗಿರುವೆನು’’ ಆಗ ಅಬೂಲಹಬ್ ಹೇಳಿದನು: ನಿನಗೆ ಪ್ರತಿದಿನವೂ ನಾಶವುಂಟಾಗಲಿ, ಇದಕ್ಕಾಗಿಯೇ ನೀನು ನಮ್ಮನ್ನು ಒಟ್ಟು ಸೇರಿಸಿರುವುದು.

ಆಗ ಅಲ್ಲಾಹನು ಸೂರತ್ ಮಸದ್‍ನ ಈ ಸೂಕ್ತಿಗಳನ್ನು ಅವತೀರ್ಣ ಗೊಳಿಸಿದನು:
“ಅಬೂಲಹಬ್‍ನ ಎರಡು ಕೈಗಳೂ ನಾಶವಾಗಿವೆ. ಅವನೂ ನಾಶವಾಗಿರುವನು. ಅವನ ಸಂಪತ್ತಾಗಲಿ, ಅವನು ಸಂಪಾದಿಸಿರುವುದಾಗಲಿ ಅವನಿಗೆ ಪ್ರಯೋಜನ ಕಾರಿಯಾಗಲಿಲ್ಲ. (ಸೂರತ್‍ಅಲ್‍ಮಸದ್)’’ (ಬುಖಾರಿ)

ಮರ್ದನೆಯ ಸಂದರ್ಭಗಳಲ್ಲಿ ಪ್ರವಾದಿ(ﷺ)ರವರ ಸಹನೆ

 ಧರ್ಮ ಬೋಧನೆಯೊಂದಿಗೆ ಮುನ್ನಡೆದಾಗ ಪ್ರವಾದಿ (ﷺ)ರವರು ತಮ್ಮ ಸ್ವಸಮುದಾಯದಿಂದಲೇ ಸಹಿಸ ಲಾಗದ ಮರ್ದನೆಗಳನ್ನು ಎದುರಿಸಬೇಕಾಯಿತು. ಆ ಸಂದರ್ಭಗಳಲ್ಲೆಲ್ಲಾ ಅಲ್ಲಾಹನಿಂದಿರುವ ಪ್ರತಿಫಲ ವನ್ನು ಉದ್ದೇಶಿಸಿ ಪ್ರವಾದಿ(ﷺ)ರವರು ಸಹನೆ ಕೈ ಗೊಂಡರು. ತಮ್ಮ ಮೇಲೆ ವಿಶ್ವಾಸವನ್ನಿಟ್ಟವರ ಮೇಲಿನ ಮರ್ದನೆ ಯು ಕಠಿಣವಾದಾಗ ಅನುಚರ ರೊಡನೆ ಅಬಿಸೀನಿ ಯಾ (ಯಥ್ಯೋಪ್ಯಾ)ಗೆ ವಲಸೆ (ಹಿಜಿರ) ಹೋಗಲು ಆದೇಶಿಸಿದರು. ಪ್ರವಾದಿ(ﷺ)ರವರ ಅದೇಶಕ್ಕನುಸಾರ ಅವರು ಅಬಿಸೀನಿಯಾಗೆ ವಲಸೆ ಹೋದರು. 
 ಇಬ್ನ್ ಇಸ್ಹಾಖ್ ಹೇಳುತ್ತಾರೆ: ಅಬೂತ್ವಾಲಿಬ್ ಮರಣ ಹೊಂದಿದಾಗ ಖುರೈಶಿಗಳು ಪ್ರವಾದಿ(ﷺ) ರವರನ್ನು ಅತ್ಯಧಿಕವಾಗಿ ಮರ್ದಿಸಲಾರಂಭಿಸಿದರು. ಅದನ್ನು ಪ್ರವಾದಿ(ﷺ)ರವರೇ ಹೀಗೆ ಹೇಳುತ್ತಾರೆ: “ಚಿಕ್ಕಪ್ಪರವರೇ, ತಾವು ಇಷ್ಟು ಬೇಗ ವಿದಾಯ (ಮರಣ) ಹೇಳುವಿರೆಂದು ನಾನು ಭಾವಿಸಿರಲಿಲ್ಲ.’’ ಅಂದರೆ ಅಬೂತ್ವಾಲಿಬ್ ಮರಣ ಗೊಂಡ ಬಳಿಕ ಖುರೈಶಿಗಳು ಪ್ರವಾದಿ(ﷺ)ರವರನ್ನು ಅತ್ಯಧಿಕವಾಗಿ ಉಪದ್ರವಿಸಲಾರಂಭಿಸಿದರು.
 ಅಬ್ದುಲ್ಲಾಹ್ ಇಬ್ನ್ ಮಸ್‍ಊದ್(ರ)ರವರಿಂದ ವರದಿ: ಪ್ರವಾದಿ(ﷺ)ರವರು ಕಅಬಾಲಯದ ಸಮೀಪದಲ್ಲಿ ನಮಾಝ್ ನಿರ್ವಹಿಸುತ್ತಿದ್ದರು. ಆಗ ಅಬೂ ಜಹಲ್ ಮತ್ತು ಆತನ ಸಂಗಡಿಗರು ಅಲ್ಲಿ ಕುಳಿತು ಕೊಂಡಿದ್ದರು. ಅವರು ಪರಸ್ಪರ ಹೀಗೆನ್ನು ತ್ತಿದ್ದರು: ಇಂತಹ ವ್ಯಕ್ತಿಯ ಬಳಿಗೆ ಹೋಗಿ ಒಂಟೆಯ ಕೊಳೆತ ಕರಳನ್ನು ತಂದು ಮುಹಮ್ಮದ್(ﷺ) ಸುಜೂದಿಗೆ ಹೋದಾಗ ಅವರ ಕೊರಳಿನ ಮೇಲೆ ಹಾಕುವರ್ಯಾರು? ಆಗ ಅವರಲ್ಲಿ ದೌಭಾಗ್ಯವಂತರಾದ ಕೆಲವರು ಅದನ್ನು ತಂದು ಪ್ರವಾದಿ(ﷺ)ರವರು ಯಾವಾಗ ಸುಜೂದಿಗೆ ಹೋಗುತ್ತಾರೆಂಬುವುದನ್ನು ಕಾಯುತ್ತಾ ಸುಜೂದಿಗೆ ಹೋದಾಗ ಪ್ರವಾದಿ(ﷺ)ರವರ ಹೆಗಲ ಮತ್ತು ಕೊರಳಿನ ಮಧ್ಯೆ ಭಾಗಕ್ಕೆ ಅದನ್ನು ಆ ದುಷ್ಠರು ಹಾಕಿಯೇ ಬಿಟ್ಟರು. ಅಬ್ದುಲ್ಲಾಹ್ ಇಬ್ನ್ ಮಸ್‍ಊದ್(ರ)ರವರು ಹೇಳುತ್ತಾರೆ: ಆಗ ನನಗೆ ಏನನ್ನೂ ಮಾಡಲಿಕ್ಕೆ ಸಾಧ್ಯವಾಗಿಲ್ಲ. ಸಾಧ್ಯವಾಗಿರುತ್ತಿದ್ದರೆ ಕೂಡಲೇ ನಾನದನ್ನು ತೆಗೆಯುತ್ತಿದ್ದೆ. ಖುರೈಶರು ಪ್ರವಾದಿ(ﷺ) ರವರ ಪ್ರಯಾಸವನ್ನು ನೋಡಿ ಅವರು ಪರಸ್ಪರ ವ್ಯಂಗ್ಯ ಮಾಡಿ ನಗುತ್ತಲೂ ಆನಂದಿಸುತ್ತಲೂ ಇದ್ದರು. ಇನ್ನೂ ಪ್ರವಾದಿ(ﷺ)ರವರು ಏಳಲಿಕ್ಕಾಗದೆ ಸುಜೂದಿನಲ್ಲೇ ಇದ್ದಾರೆ. ತಕ್ಷಣ ಪುತ್ರಿ ಫಾತಿಮಾ (ರ)ರವರು ಅಲ್ಲಿಗೆ ಆಗಮಿಸಿದೊಡನೆ ಅದನ್ನು ತೆಗೆದು ಹಾಕಿದರು. ಆ ಬಳಿಕ ಪ್ರವಾದಿ(ﷺ)ರವರು ಸುಜೂದ್ ನಿಂದ ಎದ್ದು ಅವರಿಗೆ ವಿರುದ್ಧ ಪ್ರಾರ್ಥಿಸಿದರು: ಅಲ್ಲಾಹನೇ ನೀನು ಖುರೈಶಿಗಳನ್ನು ನಾಶ ಮಾಡು. ಹೀಗೆ ಮೂರು ಬಾರಿ ಪುನರಾವರ್ತಿಸಿದರು. ಪ್ರವಾದಿ (ﷺ)ರವರ ಪ್ರಾರ್ಥನೆಯನ್ನು ಅವರು ಆಲಿಸುತ್ತಿದ್ದರು. ಪವಿತ್ರ ಮಕ್ಕಾ ಪ್ರಾರ್ಥನೆಗೆ ಉತ್ತರ ಲಭಿಸುವ ಸ್ಥಳ. ಆದುದರಿಂದ ಅವರಿಗೆ ಅತ್ಯಧಿಕ ಮನಃಪ್ರಯಾಸವುಂ ಟಾಯಿತು. ಪ್ರವಾದಿ(ﷺ)ರವರು ಪ್ರಾರ್ಥನೆಯನ್ನು ಮುಂದುವರಿ ಸುತ್ತಾರೆ: ಅಲ್ಲಾಹನೇ, ಅಬೂ ಜಹ್‍ಲ್, ಉತ್‍ಬ ಬಿನ್ ರಬೀಅಃ, ಶೈಬ ಬಿನ್ ರಬೀಅಃ, ವಲೀದ್ ಬಿನ್ ಉತ್‍ಬ, ಉಮಯ್ಯ ಬಿನ್ ಖಲಫ್, ಉಖ್‍ಬ ಬಿನ್ ಅಬೀಮುಈತ್ವ್ ಮುಂತಾದವರನ್ನು ನೀನು ನಾಶ ಮಾಡು! ಹೀಗೆ ಏಳನೇ ವ್ಯಕ್ತಿಯ ಹೆಸರನ್ನೂ ಪ್ರವಾದಿ(ﷺ)ರವರು ಎಣಿಸಿದರು. ಆ ಹೆಸರು ನನಗೆ ಮರೆತು ಹೋಯಿತು. ಅಲ್ಲಾಹನ ಮೇಲಾಣೆ! ಪ್ರವಾದಿ(ﷺ)ರವರು ಅಂದು ಎಣಿಸಿ, ಎಣಿಸಿ ಹೇಳಿದ ಪ್ರತಿಯೊಬ್ಬರನ್ನೂ ಬದ್ರ್ ಯುದ್ಧದಲ್ಲಿ ಸತ್ತು ಮಾಲಿನ್ಯಭರಿತ ಬಾವಿಯೊಳಗೆ ಬಿದ್ದಿರುವುದನ್ನು ನಾನು ಕಂಡಿರುವೆನು.(ಬುಖಾರಿ, ಮುಸ್ಲಿಂ)
 ಉರ್ವತುಬಿನ್ ಝುಬೈರ್(ರ)ರವರು ಹೇಳುತ್ತಾರೆ: ಮುಶ್ರಿಕರು ಪ್ರವಾದಿ(ﷺ)ರವರ ಮೇಲೆ ಮಾಡಿದ ಪೀಡನೆಯ ಕಾಠಿಣ್ಯತೆಯ ಬಗ್ಗೆ ನಾನು ಅಬ್ದುಲ್ಲಾಹ್ ಬಿನ್ ಅಂರ್(ರ)ರವರಲ್ಲಿ ವಿಚಾರಿಸಿದೆ: ಅವರು ಹೀಗಂದರು: ಉಖ್‍ಬತ್‍ಬಿನ್ ಅಬೂ ಮುಈತ್ವನು ಒಮ್ಮೆ ನಮಾಝ್ ನಿರ್ವಹಿಸುತ್ತಿದ್ದ ಪ್ರವಾದಿ(ﷺ)ರವರ ಬಳಿಗೆ ಬಂದು ಅತನ ಕೈಯಲ್ಲಿದ್ದ ಟವಲಿನಿಂದ ಪ್ರವಾದಿ(ﷺ)ರವರ ಕೊರಳಿಗೆ ಸುತ್ತಿ ನೋವಿಸಿದನು. ಆಗ ಅಲ್ಲಿಗೆ ಆಗಮಿಸಿದ ಅಬೂಬಕರ್(ರ)ರವರು ಹೇಳಿದರು: “ನನ್ನ ಪ್ರಭು ಅಲ್ಲಾಹನು ಎಂದ ಕಾರಣಕ್ಕೊ ಇವರನ್ನು ನೀವು ಕೊಲ್ಲುತ್ತಿರುವುದು. ಅವರು ನಿಮ್ಮ ಪ್ರಭುವಿನ ಬಳಿಯಿಂದ ವ್ಯಕ್ತವಾದ ಆಧಾರ ಪ್ರಮಾಣವನ್ನು ತಂದಿರುವಾಗ’’(ಬುಖಾರಿ)

ಪ್ರವಾದಿ(ﷺ)ರವರಿಗೆ ತನ್ನ ಸಮೂಹದೊಂದಿಗಿದ್ದ ಕಾರುಣ್ಯ

 ಖದೀಜ(ರ) ಮತ್ತು ಅಬೂತ್ವಾಲಿಬ್‍ರ ಮರಣಾ ನಂತರ ಪ್ರವಾದಿ(ﷺ)ರವರ ಮೇಲೆ ಶತ್ರುಗಳ ಮರ್ದನೆ ಗಳು ಇನ್ನಷ್ಟು ವೃದ್ಧಿಸಿತು. ಅವರು ಅತಿ ಕಠಿಣವಾಗಿ ಪೀಡಿಸ ತೊಡಗಿದರು. ಆ ವೇಳೆಯಲ್ಲಿ ತಮ್ಮ ಸಂಬಂ ಧಿಕರಿರುವ ತ್ವಾಇಫಿನೆಡೆಗೆ ಸ್ವಲ್ಪ ಆಶ್ವಾಸನೆಗಾಗಿಯೂ ಬೋಧನೆಗಾಗಿಯೂ ತೆರಳಿದರು. ಅಲ್ಲಿದ್ದ ಥಲೀಫ್ ಗೋತ್ರವನ್ನು ಇಸ್ಲಾಮಿನೆಡಗೆ ಆಹ್ವಾನಿಸಿದರು. ಆದರೆ ಅವರ ಪ್ರತಿಕ್ರಿಯೆಯು ಅನಿರೀಕ್ಷಿತವಾದ ರೀತಿಯಲ್ಲಾ ಗಿತ್ತು. ಅವರು ಪ್ರವಾದಿ(ﷺ)ರವರನ್ನು ಕಠಿಣವಾಗಿ ಉಪದ್ರವಿಸಲಾರಂಭಿ ಸಿದರು. ಪ್ರವಾದಿ(ﷺ)ರವರನ್ನು  ಭೀಕರವಾಗಿ ಪೀಡಿಸಿದರು, ಕಲ್ಲೆಸೆದು ಓಡಿಸಿದರು. ಆ ಕಾರಣದಿಂದ ಪ್ರವಾದಿ(ﷺ)ರವರ ಕಾಲಿಗೆ ಗಾಯವಾಗಿ ರಕ್ತ ಹರಿಯಲಾರಂಭಿಸಿತು. ಹಾಗೆ ಅವರು ಮಕ್ಕಾದೆ ಡೆಗೇ ಮರಳಲು  ನಿರ್ಬಂಧಿತರಾದರು. ಈ ವಿಷಯ ವನ್ನು ಸ್ವಯಂ ಪ್ರವಾದಿ(ﷺ)ರವರೇ ವಿವರಿಸುವುದನ್ನು ಬುಖಾರಿ ಮತ್ತು ಮುಸ್ಲಿಂ ಉಲ್ಲೇಖಿಸುತ್ತಾರೆ: “ತುಂಬಾ ದುಃಖದಿಂದ ನಾನು ಅಲ್ಲಿಂದ ಮರಳಿ ಬಂದೆ. ದುಃಖದ ಕಾರಣದಿಂದ ನನಗೆ ಮಾನಸಿಕವಾಗಿ ಪ್ರಯಾ ಸವುಂಟಾಯಿತು. ಹಾಗೆ ಮಕ್ಕಾದ ಪಕ್ಕದಲ್ಲಿರುವ ಖರ್‍ನುಸಆಲಿಬ್ ಎಂಬ ಸ್ಥಳಕ್ಕೆ ತಲುಪಿದಾಗ ನಾನು ನನ್ನ ತಲೆ ಎತ್ತಿ ನೋಡಿದೆ. ಆಗ ಮೋಡವು ನನಗೆ ನೆರಳನ್ನು ಹಾಸಿದೆ. ನಂತರ ನಾನು ಕಣ್ಣೆತಿ ಮೇಲೆ ನೋಡಿದೆ, ಆಗ  ಜಿಬ್ರೀಲ್(ಅ) ನನ್ನನ್ನು ಕರೆದು ಹೇಳುತ್ತಿದ್ದಾರೆ: ತಮ್ಮೊಂದಿಗೆ ನಿಮ್ಮ ಸಮೂಹ ಹೇಳಿರು ವುದನ್ನು ಖಂಡಿತ ಅಲ್ಲಾಹನು ಆಲಿಸಿದ್ದಾನೆ. ತಮಗೆ ಅವರು ಉತ್ತರ ಕೊಡಲಿಲ್ಲ. ಆದುದರಿಂದ ತಾವು ಹೇಳುವ ಶಿಕ್ಷೆಯನ್ನು ಅವರ ಮೇಲೆ ಎರಗಲು ಅಲ್ಲಾಹನು ಪರ್ವತದ ಮಲಕನ್ನು ಕಳುಹಿಸಿದ್ದಾನೆ. ತಕ್ಷಣ ಪರ್ವತಗಳ ಮಲಕ್ ಕರೆದು ಸಲಾಂ ಹೇಳಿ ನಂತರ ಹೀಗೆಂದಿತು: ಮುಹಮ್ಮದರೇ, ತಾವು ಉದ್ದೇಶಿ ಸುವುದನ್ನು ಅಪ್ಪಣೆ ಕೊಡಿರಿ. ತಾವು ಉದ್ದೇಶಿಸು ವುದಾದರೆ ಅಖ್‍ಶಬೈನಿಯ(ಮಕ್ಕಾದ ಎರಡು ಪರ್ವತ ಗಳು) ಆಚೆ ಕಡೆಯಲ್ಲಿ ಅವರನ್ನು ನಾಶ ಗೊಳಿಸಲಾ ಗುವುದು. ಆಗ ಕಾರುಣ್ಯದ ಪ್ರವಾದಿ(ﷺ) ರವರು ಹೇಳುತ್ತಾರೆ: ಬೇಡ, ಒಂದು ವೇಳೆ ಅವರ ಬೆನ್ನಿನಿಂದ ಅಲ್ಲಾಹನನ್ನು ಮಾತ್ರ ಆರಾಧಿಸುವ ಮತ್ತು ಅವನಿಗೆ ಯಾರನ್ನೂ ಸಹಭಾಗಿಯನ್ನಾಗಿ ಸೇರಿಸದ ವರನ್ನು ಅಲ್ಲಾಹನು ಸೃಷ್ಟಿಸಬಹುದು. ಅದನ್ನು ನಾನು ಬಯಸುತ್ತೇನೆ.’’(ಬುಖಾರಿ).
 ಪ್ರವಾದಿ(ﷺ)ರವರು, ಅವರಿಗೆ ಶಿಕ್ಷೆ ಕೊಡಿರಿ ಎಂದರೆ ಸಾಕಾಗುತ್ತಿತ್ತು, ತಕ್ಷಣ ಅಲ್ಲಾಹನ ಶಿಕ್ಷೆ ಎರಗುತ್ತಿತ್ತು ಖಚಿತ. ಆದರೆ ಕಾರುಣ್ಯದ ಪ್ರವಾದಿ(ﷺ)ರವರು ತಮ್ಮ ಸಮೂಹದ ಮೇಲೆ ಅತ್ಯಧಿಕ ಕಾರುಣ್ಯವನ್ನು ತೋರುವವರಾಗಿದ್ದಾರೆ. ಆದುದರಿಂದ ಆ ಪ್ರಯಾಸ ಘಟ್ಟದಲ್ಲೂ ಕಾರುಣ್ಯದ ಅಪ್ರತಿಮ ಮಾದರಿಯನ್ನು ಅವರಲ್ಲಿ ಕಾಣಲು ಸಾಧ್ಯವಾಯಿತು.
 ಪ್ರವಾದಿ(ﷺ)ರವರು ಪ್ರತಿಯೊಂದು ಹಜ್ಜ್‍ನ ಮತ್ತು ಇನ್ನಿತರ ಸಂದರ್ಭದಲ್ಲಿ ಪ್ರತಿ ಗೋತ್ರವನ್ನು ಸಮೀಪಿಸಿ ಹೇಳುತ್ತಿದ್ದರು: “ನನಗೆ ಅಭಯ ನೀಡಲು ಯಾರಿದ್ದಾರೆ, ನನಗೆ ಸಹಾಯ ಮಾಡಲು ಯಾರಿದ್ದಾರೆ, ಕಾರಣ ಖುರೈಶಿಗಳು ನನ್ನ ಪ್ರಭುವಿನ ಸೂಕ್ತಿಗಳನ್ನು ಉಚ್ಛರಿ ಸುವುದರಿಂದ ನನ್ನನ್ನು ತಡೆಯುತ್ತಿದ್ದಾರೆ.’’
 ಹಾಗೆ ಒಂದು ಹಜ್ಜ್‍ನ ವೇಳೆಯಲ್ಲಿ ಮಕ್ಕಾದಲ್ಲಿರುವ ಅಖಬಾಕ್ಕೆ ಸಮೀಪದಲ್ಲಿ ಆರು ವ್ಯಕ್ತಿಗಳನ್ನು ಕಂಡರು. ಬಳಿಕ ಅವರನ್ನು ಇಸ್ಲಾಮಿಗೆ ಆಹ್ವಾನಿಸಿದರು. ಅವರು ಆ ಆಹ್ವಾನವನ್ನು ಸ್ವೀಕರಿಸಿ ಇಸ್ಲಾಮ್‍ಗೆ ಪ್ರವೇಶಿಸಿ ಮುಸ್ಲಿಮರೊಂದಿಗೆ ಸೇರಿದರು. ನಂತರ ಮುಸ್ಲಿಮರಾದ ಆ ಆರು ಮಂದಿ ಮದೀನಾಕ್ಕೆ ಮರಳಿದರು. ನಂತರ ಅಲ್ಲಿ ಅವರ ಸಮೂಹವನ್ನು ಅವರು ಇಸ್ಲಾಮಿನೆಡೆಗೆ ಆಹ್ವಾನಿಸಿದರು. ಹಾಗೆ ಅವರ ಮೂಲಕ ಇಸ್ಲಾಮ್ ವ್ಯಾಪಿಸಿತು. ಹೀಗೆ ರಹಸ್ಯವಾದ ಒಂದನೆಯ ಮತ್ತು ಎರಡನೆಯ ಅಖಬ ಒಪ್ಪಂದ ನಡೆಯಿತು. ಆ ಮೇಲೆ ಪ್ರವಾದಿ(ﷺ)ರವರ ಆದೇಶಕ್ಕನುಸಾರ ಕಿರಿಯ ಕಿರಿಯ ಗುಂಪುಗಳಾಗಿ ವಿಶ್ವಾಸಿಗಳು ಮದೀನಾಗೆ ವಲಸೆ(ಹಿಜಿರ) ಹೋದರು.
ಪ್ರವಾದಿ(ﷺ)ರವರ ಮದೀನಾದೆಡೆಗಿರುವ ಹಿಜಿರ
 ಅಲ್ಲಾಹನ ಅಪ್ಪಣೆಗನುಸಾರ ಪ್ರವಾದಿ(ﷺ)ರವರು ಮತ್ತು ಸಂಗಡಿಗರಾದ ಅಬೂಬಕರ್(ರ)ರವರು ಮದೀನಾದೆಡೆಗೆ ಹಿಜಿರ ಹೊರಟು, ಮಕ್ಕಾದಿಂದ ಸೌರ್ ಗುಹೆಯ ಕಡೆಗೆ ಹೋದರು. ಅಲ್ಲಿ ಮೂರು ದಿನ ತಂಗಿದರು. ಆದರೆ ಪ್ರವಾದಿ ಮುಹಮ್ಮದ್(ﷺ)ರನ್ನು ಮತ್ತು ಸಂಗಡಿಗರನ್ನು ಹಿಡಿಯಲಿಕ್ಕಾಗಿ ಖುರೈಶಿಗಳು ಸರ್ವ ಕಡೆಗಳಿಗೆ ಜನರನ್ನು ರವಾನಿಸಿದರು. ಆದರೆ ಖುರೈಶಿಗಳಿಗೆ ಅವರನ್ನು ಕಂಡು ಹಿಡಿಯಲು  ಸಾಧ್ಯವಾಗಲಿಲ್ಲ. ಹಾಗೆ ಪ್ರವಾದಿ(ﷺ)ರವರು ಅಲ್ಲಿಂದ ಮದೀನಾಗೆ ವಲಸೆ ಹೋದರು. ಮದೀನಾಗಾರರು ಗೌರವಾದರದಿಂದ ಅವರನ್ನು ಬರಮಾಡಿ ಕೊಂಡರು. ತದನಂತರ ಅಲ್ಲಿ ಪ್ರವಾದಿ(ﷺ)ರವರ ಮಸೀದಿ ಮತ್ತು ಮನೆ ನಿರ್ಮಿಸಲ್ಪಟ್ಟಿತು.

ಪ್ರವಾದಿ(ﷺ)ರವರು ಭಾಗವಹಿಸಿದ ಯುದ್ಧಗಳು

 ಇಬ್ನ್ ಅಬ್ಬಾಸ್(ರ)ರವರಿಂದ ವರದಿ: ಪ್ರವಾದಿ(ﷺ) ರವರು ಮಕ್ಕಾದಿಂದ ಮದೀನಾಗೆ ಹಿಜ್‍ರ ಹೊರಟಾಗ ಅಬೂಬಕರ್(ರ)ರವರು ಹೇಳಿದರು: ಅವರು ಅವರ ಪ್ರವಾದಿಯನ್ನು ಹೊರಗಟ್ಟಿದರು. ಅವರು ಖಂಡಿತ ನಾಶ ಗೊಳ್ಳಲಿದ್ದಾರೆ. ಆ ಸಂದರ್ಭದಲ್ಲಿ ಅಲ್ಲಾಹನು ಈ ಸೂಕ್ತಿಯನ್ನು ಅವತೀರ್ಣ ಗೊಳಿಸಿದನು.
أُذِنَ لِلَّذِينَ يُقَاتَلُونَ بِأَنَّهُمْ ظُلِمُوا وَإِنَّ اللَّهَ عَلَى نَصْرِهِمْ لَقَدِير
``ಯುದ್ಧಕ್ಕೆ ಬಲಿಯಾಗುವವರಿಗೆ, ಅವರು ಮರ್ದಿತರಾ ಗಿರುವುದರಿಂದ (ತಿರುಗೇಟು ನೀಡಲು) ಅನುಮತಿ ನೀಡಲಾಗಿದೆ.  ಖಂಡಿತವಾಗಿಯೂ  ಅವರಿಗೆ  ನೆರವು ನೀಡಲು ಅಲ್ಲಾಹು ಸಮರ್ಥನಾಗಿರುವನು.’’ (ಅಲ್‍ಹಜ್ಜ್: 39). 
ಇದು ಯುದ್ಧದ ವಿಷಯದಲ್ಲಿ ಪ್ರಥಮವಾಗಿ ಅವತೀರ್ಣವಾದ ಆಯತಾಗಿದೆ. ಪ್ರವಾದಿ(ﷺ)ರವರು ಬೋಧನಾ ರಂಗದಲ್ಲಿ ಇಪ್ಪತ್ತೇಳು ಯುದ್ಧಕ್ಕೆ ನೇತ್ರತ್ವ ವಹಿಸಿದರು. ಅದರಲ್ಲಿ ಬದ್ರ್, ಉಹ್ದ್, ಮುರೈಸೀಹ್, ಖಂದಖ್, ಖುರೈಳ, ಖೈಬರ್, ಫತ್‍ಹ್ ಮಕ್ಕಾ, ಉನೈನ್, ತ್ವಾಇಫ್ ಮುಂತಾದ 9 ಯುದ್ಧದಲ್ಲಿ ಪ್ರವಾದಿ(ﷺ)ರವರು ಸ್ವತಃ ಪಾಲ್ಗೊಂಡಿದ್ದರು. ಹಾಗೆಯೇ ಐವತ್ತಾರು ಯುದ್ಧಾ ಸಂಘವನ್ನು ನಿಯೋಗಿಸಿದರು.

ಪ್ರವಾದಿ(ﷺ)ರವರ ಹಜ್ಜ್ ಮತ್ತು ಉಮ್ರಾ

  ಪ್ರವಾದಿ(ﷺ)ರವರು ಮದೀನಾಗೆ ಹಿಜಿರ ಹೋದ ಬಳಿಕ ಒಂದಕ್ಕಿಂತ ಹೆಚ್ಚು ಹಜ್ಜ್ ನಿರ್ವಹಿಸಿಲ್ಲ.(ಪ್ರವಾದಿ (ﷺ)ರವರು ಅವರ ಜೀವನದಲ್ಲಿ ಒಂದು ಹಜ್ಜ್ ಮಾತ್ರವೇ ನಿರ್ವಹಿಸಿರುವುದು). ಅದುವೇ ಹಜ್ಜತುಲ್ ವದಾ’. ಹಾಗೆಯೇ ನಾಲ್ಕು ಉಮ್ರಾವನ್ನೂ ನಿರ್ವಹಿಸಿದರು. ಅವುಗಳೆಲ್ಲವೂ ದುಲ್‍ಕಅದಃ ತಿಂಗಳ ಲ್ಲಾಗಿತ್ತು. ಅದರಲ್ಲೊಂದು ಉಮ್ರಾ ತಮ್ಮ ಹಜ್ಜ್‍ನೊಂದಿ ಗಾಗಿತ್ತು.

ಪ್ರವಾದಿ(ﷺ)ರವರ ರೂಪ

 ಪ್ರವಾದಿ(ﷺ)ರವರು  ಹೆಚ್ಚು  ಉದ್ದವೊ ಗಿಡ್ಡವೊ ಆಗಿರಲಿಲ್ಲ. ದೇಹಕ್ಕೆ ತಕ್ಕ ಉದ್ದವಿದ್ದವರಾಗಿದ್ದರು. ಕೆಂಪು ಮಿಶ್ರಿತ ಬಿಳಿ ಬಣ್ಣದವರಾಗಿದ್ದರು. ಅವರ ಕಣ್ಣುಗಳು ವೃತ್ತಾಕಾರದ ಕಪ್ಪು ಬಣ್ಣದ್ದಾಗಿತ್ತು. ಪ್ರವಾದಿ(ﷺ)ರವರ ಎದೆ ಮತ್ತು ಹೊಟ್ಟೆಯ ಮಧ್ಯೆ ಭಾಗದಲ್ಲಿ ಮಾತ್ರ ರೋಮಗಳಿದ್ದವು.

ಪ್ರವಾದಿ(ﷺ)ರವರ ಸ್ವಭಾವಗಳು

 ಪ್ರವಾದಿ(ﷺ)ವರು ಜನರಲ್ಲಿ ಅತ್ಯಂತ ಔದಾರ್ಯ ವಂತರಾಗಿದ್ದರು. ನಡತೆÉ ಮತ್ತು ಮಾತಿನಲ್ಲಿ ಸೌಮ್ಯತೆ, ಸತ್ಯಸಂಧತೆ ಹಾಗೂ ಕುಟುಂಬ ಮತ್ತು ಇತರರೊಂದಿಗೆ ಅತ್ಯಂತ ಮಾನ್ಯವಾಗಿ ವರ್ತಿಸುತ್ತಿದ್ದರು. ಪ್ರವಾದಿ (ﷺ)ರವರ ಸ್ವಭಾವದ ಬಗ್ಗೆ ಪವಿತ್ರ ಖುರ್‍ಆನ್ ಹೇಳುತ್ತದೆ:
وَإِنَّكَ لَعَلَى خُلُقٍ عَظِيمٍ
“ಖಂಡಿತವಾಗಿಯೂ ತಾವು ಸರ್ವಶ್ರೇಷ್ಠ ಸ್ವಭಾವ ದವರಾಗಿರುವಿರಿ’’(ಖಲಮ್:4).ಪ್ರವಾದಿ(ﷺ)ರವರು ಅತ್ಯ ಧಿಕ ದೈರ್ಯ ಶಾಲಿ ಹಾಗೂ ಮದುಮಗಳಿಗಿಂತ ಲಜ್ಜೆಯಿರುವವರಾಗಿದ್ದರು. ಉಡುಗೊರೆಗಳನ್ನು ಪಡೆಯು ತ್ತಲೂ ಕೊಡುತ್ತಲೂ ಇದ್ದರು. ಝಕಾತನ್ನು ಸ್ವೀಕರಿಸು ತ್ತಿರಲಿಲ್ಲ ಮತ್ತು ಅದರಿಂದ ತಿನ್ನುತ್ತಿರಲಿಲ್ಲ. ಸ್ವಂತಕ್ಕಾಗಿ ಒಮ್ಮೆಯೂ ಕೋಪ ಗೊಂಡಿಲ್ಲ. ಆದರೆ ಅಲ್ಲಾಹನಿಗಾಗಿ ಕೋಪಿಸುತ್ತಿದ್ದರು. ತನಗೆ ಲಭಿಸುವುದನ್ನು ತಿನ್ನುತ್ತಿದ್ದರು ಮತ್ತು ಕೊಡಲಾಗುವ ಯಾವೊಂದನ್ನೂ ಹಿಂತಿರುಗಿ ಸುತ್ತಿರಲಿಲ್ಲ. ಪ್ರವಾದಿ(ﷺ)ರವರು ಒರಗಿ ಕುಳಿತು ಆಹಾರ ಸೇವಿಸುತ್ತಿರಲಿಲ್ಲ. ಪ್ರವಾದಿ(ﷺ)ರವರ ಮನೆಯ ಲ್ಲಿ ಹಲವು ಬಾರಿ ಮೂರು ತಿಂಗಳ ವರೆಗೆ ಅಡುಗೆ ಮನೆಯ ಒಲೆಯು ಬೆಂಕಿ ಕಂಡಿರಲಿಲ್ಲ. ಪ್ರವಾದಿ(ﷺ) ರವರ ಮನೆಯಲ್ಲಿ ಅಷ್ಟು ಮಾತ್ರಕ್ಕೂ ದಾರಿದ್ರ್ಯವಾಗಿತ್ತು. ಪ್ರವಾದಿ(ﷺ)ರವರು ಬಡವರ ಜೊತೆಯಲ್ಲೂ, ರೋಗಿಗ ಳನ್ನು ಸಂದರ್ಶಿಸುತ್ತಲೂ, ಮಯ್ಯತನ್ನು ಅನುಗಮಿಸು ತ್ತಲೂ ಇದ್ದರು.
 ಪ್ರವಾದಿ(ﷺ)ರವರು ಸತ್ಯವನ್ನಲ್ಲದೆ ಹೇಳುತ್ತಿರಲಿಲ್ಲ. ತಮಾಷೆಗೂ ಸುಳ್ಳನ್ನು ಹೇಳುತ್ತಿರಲಿಲ್ಲ. ನಗುತ್ತಿದ್ದರು ಆದರೆ ಗಟ್ಟಿಯಾಗಿ ನಗುತ್ತಿರಲಿಲ್ಲ. ತನ್ನ ಕುಟುಂಬ ದೊಂದಿಗೆ ಕೆಲಸದಲ್ಲಿ ಸಹಕರಿಸುತ್ತಿದ್ದರು. ತಿರ್ಮಿದಿ ವರದಿ ಮಾಡಿದ ಹದೀಸ್‍ನಲ್ಲಿ ಹೀಗಿದೆ:
 ((عن عائشة قالت : قال رسول الله صلى الله عليه و سلم خيركم خيركم لأهله وأنا خيركم لأهلي)) (ترمذي)
 ಆಇಶಾ(ರ)ರವರು ಹೇಳುತ್ತಾರೆ. ಪ್ರವಾದಿ(ﷺ) ರವರು ಹೇಳಿದರು: “ನಿಮ್ಮಲ್ಲಿ ಅತ್ಯುತ್ತಮರು ತಮ್ಮ ಕುಟುಂಬದವರೊಂದಿಗೆ ಅತ್ಯುತ್ತಮವಾದ ನಡತೆ ಹೊಂ ದಿದವರಾಗಿದ್ದಾರೆ. ನಾನು ನನ್ನ ಕುಟುಂಬದೊಂ ದಿಗೆ ಅತ್ಯುತ್ತಮವಾದ ನಡತೆ ಹೊಂದಿದವನಾ ಗಿದ್ದೇನೆ.’’ (ತಿರ್ಮಿದಿ)
 ((عَنْ أَنَسِ بْنِ مَالِكٍ قَالَ خَدَمْتُ رَسُولَ اللَّهِ -صلى الله عليه وسلم- عَشْرَ سِنِينَ وَاللَّهِ مَا قَالَ لِى أُفًّا قَطُّ وَلاَ قَالَ لِى لِشَىْءٍ لِمَ فَعَلْتَ كَذَا وَهَلاَّ فَعَلْتَ كَذَا)) (مسلم)
 ಅನಸ್ ಬಿನ್ ಮಾಲಿಕ್(ರ)ರವರು ಹೇಳುತ್ತಾರೆ: “ನಾನು ಹತ್ತು ವರ್ಷ ಪ್ರವಾದಿ(ﷺ)ರವರಿಗೆ ಸೇವೆ ಸಲ್ಲಿಸಿದ್ದೇನೆ. ಆದರೆ ಒಮ್ಮೆಯೂ ನನ್ನಲ್ಲಿ ಛೇ ಎಂಬೊಂದು ಮಾತು ಹೇಳಿಲ್ಲ ಹಾಗೂ ನೀನ್ಯಾಕೆ ಹೀಗೆ ಮಾಡಿದೆ? ನೀನ್ಯಾಕೆ ಹಾಗೆ ಮಾಡಿದೆ? ನೀನ್ಯಾಕೆ ಹಾಗೆ ಮಾಡಿಲ್ಲ ? ಎಂದು ಕೇಳಿರಲಿಲ್ಲ!!!’’(ಮುಸ್ಲಿಂ) (ಸುಬ್ಹಾನಲ್ಲಾಹ್)
 ಪ್ರವಾದಿ(ﷺ)ರವರು ಅನುಚರರೊಂದಿಗೆ ಅತ್ಯಧಿಕ ಅನುಕಂಪ ತೋರುವವರಾಗಿದ್ದರು. ತಮ್ಮ ಮೂಲಕ ಅಲ್ಲಾಹನು ಪ್ರಕಟಿಸಿದ ದೃಷ್ಟಾಂತಗಳನ್ನು ಜನತೆಗೆ ತೋರಿಸಿ ಕೊಟ್ಟರು. ಚಂದ್ರನನ್ನು ಸೀಳಲ್ಪಟ್ಟಿತು. ಬೆರಳುಗಳ ಮಧ್ಯೆದಿಂದ ನೀರು ಚಿಮ್ಮಿತು. ಖರ್ಜೂರದ ಮರ ಪ್ರವಾದಿ(ﷺ)ರವರೊಂದಿಗೆ ಬಿಕ್ಕಿ ಬಿಕ್ಕಿ ಅತ್ತಿದೆ. ಒಂಟೆ ಪ್ರವಾದಿ(ﷺ)ರವರಲ್ಲಿ ಆರೋಪ ಹೇಳಿದೆ. ಅಲ್ಲಾಹನು ತಿಳಿಸಿ ಕೊಟ್ಟ ಅದೃಶ್ಯ ವಿಷಯಗಳನ್ನು ಪ್ರವಾದಿ(ﷺ)ರವರು ಜನತೆಯ ಮುಂದಿಟ್ಟಾಗ ಅವುಗಳು ಹಾಗೆಯೇ ರುಜುವಾತಾಗಿದೆ.

ಪ್ರವಾದಿ(ﷺ)ರವರ ಶ್ರೇಷ್ಠತೆಗಳು

 ಜಾಬಿರ್(ರ)ರವರು ಹೇಳುತ್ತಾರೆ: ಪ್ರವಾದಿ(ﷺ) ರವರು ಹೇಳಿದರು:
“ನನಗೆ ಐದು ಕಾರ್ಯಗಳನ್ನು ನೀಡಲಾಗಿದೆ. ನನಗಿಂತ ಮುಂಚೆ ಅದನ್ನು ಇನ್ಯಾರಿಗೂ ನೀಡಲಾಗಿಲ್ಲ. ನನ್ನ ಮತ್ತು ಶತ್ರುಗಳ ಮಧ್ಯೆ ಒಂದು ತಿಂಗಳ ಸಂಚಾರ ದೂರವಿದ್ದರೂ ಶತ್ರುಗಳಿಗೆ ಭಯ ನೀಡಿ ಅಲ್ಲಾಹನು ನನಗೆ ಸಹಾಯ ಮಾಡುವನು, ಭೂಮಿಯನ್ನು ನನಗೆ ಮಸೀದಿಯನ್ನಾಗಿಯೂ,ಶುದ್ಧೀಕ ರಿಸಲಿಕ್ಕಿರುವ ವಸ್ತುವಾಗಿಯೂ ಮಾಡಿ ಕೊಟ್ಟನು. ಆದುದರಿಂದ ನನ್ನ ಸಮುದಾಯದಲ್ಲಿ ಯಾರಿಗಾದರೂ ನಮಾಝಿನ ಸಮಯವಾದರೆ ಅವನು ನಮಾಝ್ ನಿರ್ವಹಿಸಲಿ. ಯುದ್ಧಾರ್ಜಿತ ಸೊತ್ತನ್ನು ಅಲ್ಲಾಹನು ನನಗೆ ಅನುವದನೀಯ ಗೊಳಿಸಿದನು. ನನಗೆ ಮುಂಚೆ ಯಾರಿಗೂ ಅದನ್ನು ಅನವದನೀಯ ಗೊಳಿಸಲಾಗಿಲ್ಲ. ಶಫಾಅತಿ(ಪರಲೋಕದಲ್ಲಿ ಶಿಫಾರಸ್ಸಿ) ಗಿರುವ ಅಧಿಕಾರ ವನ್ನೂ ನೀಡಿದನು. ಪ್ರತಿಯೊಂದು ಪ್ರವಾದಿಗಳನ್ನು ತಂತಮ್ಮ ಸಮುದಾಯದ ಕಡೆಗೆ ನಿಯೋಗಿಸಲಾಗಿದೆ. ಆದರೆ ನನ್ನನ್ನು ಸರ್ವ ಮನುಷ್ಯರಿ ಗಾಗಿ ನಿಯೋಗಿ ಸಲಾಗಿದೆ’’(ಬುಖಾರಿ).
 ಅನಸ್(ರ)ರವರಿಂದ ವರದಿ: ಪ್ರವಾದಿ(ﷺ)ರವರು ನುಡಿದರು:
“ಅಂತ್ಯ ದಿನದಂದು ಅತ್ಯಧಿಕ ಅನುಚರ ರಿರುವ ಪ್ರವಾದಿ ನಾನಾಗಿರುವೆನು, ಖಬರಿನಿಂದ ಪ್ರಥಮವಾಗಿ ಎದ್ದೇಳಿಸಲ್ಪಡುವುದೂ ನಾನಾಗಿರುವೆನು, ಮೊಟ್ಟಮೊದಲು  ಶಫಾಅತ್ ಹೇಳುವವನು ನಾನು ಮತ್ತು ಮೊಟ್ಟಮೊದಲು ಶಫಾಅತ್ ಸ್ವೀಕರಿಸಲ್ಪಡುವುದೂ ನನ್ನದೇ’’(ಮುಸ್ಲಿಂ).

ಪ್ರವಾದಿ(ﷺ)ರವರ ಆರಾಧನೆಗಳು ಮತ್ತು ಜೀವನ

 ಆಇಶಾ(ರ)ರವರುಹೇಳುತ್ತಾರೆ:
“ಪ್ರವಾದಿ(ﷺ)ರ ವರು ತಮ್ಮ ಕಾಲು ಬಾತು ಹೋಗುವ ವರೆಗೆ ನಿಂತು ನಮಾಝ್ ನಿರ್ವಹಿಸುತ್ತಿದ್ದರು’’(ಬುಖಾರಿ).
ಇಬ್ನ್ ಉಮರ್(ರ)ರವರು ಹೇಳುತ್ತಾರೆ: ಪ್ರವಾದಿ(ﷺ)ರವರಿ ಗೆ ಒಮ್ಮೆ ಹಸಿವನ್ನು ತಣಿಸಲು ಒಂದು ಒಣ ಖರ್ಜೂರ ಕೂಡಾ ಲಭಿಸಲಿಲ್ಲ.’’  
ಜೀವಿಸುತ್ತಿದ್ದವರ ಮತ್ತು ಮರಣಗೊಂಡವರ ಮುಖಂಡರಾದ ಪ್ರವಾದಿ (ﷺ)ರವರು ಇಹಲೋಕದಲ್ಲಿ ಕಷ್ಟ-ನಷ್ಟವಾ ದವುಗಳ ಬಗ್ಗೆ ಯೋಚಿಸಿ ದುಃಖಪಡಲಿಲ್ಲ. ನಮಗೆ ಪ್ರವಾದಿ (ﷺ)ರವರ ಆದರ್ಶದೆಡೆಗೆ ಮಾರ್ಗದರ್ಶನ ನೀಡಿದ ಅಲ್ಲಾಹನಿಗೆ ಸರ್ವಸ್ತುತಿಗಳು. ಪ್ರವಾದಿ(ﷺ) ರವರನ್ನು ಅನುಸರಿಸಲು ಮತ್ತು ಹಿಂಬಾಲಿಸಲು ಅಲ್ಲಾಹನು ನಮಗೆ ತೌಫೀಖ್ ನೀಡಿ ಅನುಗ್ರಹಿಸಲಿ. ಆವಿೂನ್.

 

ಮುಖ್ಯ ಘಟನೆಗಳು

•              ಇಸ್ರಾ’ ಮತ್ತು ಮಿ’ರಾಜ್. ಮದೀನಾಗೆ ಹಿಜಿರ ಹೋಗುವುದಕ್ಕಿಂತ ಮೂರು ವರ್ಷ ಮುಂಚೆ ನಡೆಯಿತು. ಐದು ಹೊತ್ತಿನ ನಮಾಝ್ ಖಡ್ಡಾಯ ಗೊಳಿಸಿರುವುದು ಈ ಸಂದರ್ಭದಲ್ಲಾಗಿದೆ.
•              ಹಿಜಿರದ ಒಂದನೆ ವರ್ಷ: ಮದೀನಾ ಮಸೀದಿ ನಿರ್ಮಾಣ.
•              ಎರಡನೆ ವರ್ಷ : ಬದ್ರ್ ಯುದ್ಧ, ಈ ಯುದ್ಧ ದಲ್ಲಿ ಮುಸ್ಲಿಮರನ್ನು ಉನ್ನತಿಗೇರಿಸ ಲಾಯಿತು, ಸತ್ಯನಿಷೇಧಿಗಳಿಗೆ ವಿರುದ್ಧ ಸಹಾಯವು ಲಭಿಸಿತು.
•              ಮೂರನೆ ವರ್ಷ: ಉಹ್ದ್ ಯುದ್ಧ, ಅನುಚರ ರಲ್ಲಿ ಕೆಲವರು ಪ್ರವಾದಿ(ﷺ)ರವರ ಆದೇಶ ವನ್ನು ಕಡೆಗಣಿಸಿ, ಗನೀಮತ್ ಸೊತ್ತನ್ನು ಆಗ್ರಹಿಸಿದ ಕಾರಣದಿಂದ ಮುಸ್ಲಿಮರಿಗೆ ಈ ಯುದ್ಧದಲ್ಲಿ ಸೋಲು ಅನುಭವಿಸ ಬೇಕಾಯಿತು.
•              ನಾಲ್ಕನೆ ವರ್ಷ: ಬನೂ ನಳೀರ್ ಯುದ್ಧ, ಮುಸ್ಲಿಮರ ಮತ್ತು ಬನೂ ನಳೀರ್ ಗೋತ್ರದ ನಡುವೆ ಮಾಡಲಾದ ಒಪ್ಪಂದವನ್ನು ಬನೂ ನಳೀರ್ ಗೋತ್ರದವರು ಉಲ್ಲಂಘಿಸಿದ ಕಾರಣ ದಿಂದ ಪ್ರವಾದಿ(ﷺ)ರವರು ಯಹೂದಿ ಗಳನ್ನು ಅಲ್ಲಿಂದ ಹೊರಹಾಕಿದರು.
•              ಐದನೆ ವರ್ಷ: ಬನೂ ಮುಝ್‍ತಲಕ್, ಅಹ್‍ಝಾಬ್, ಬನೂ ಖುರೈಳ ಮುಂತಾದ ಯುದ್ಧಗಳು.
 •             ಆರನೆ ವರ್ಷ: ಹುದೈಬಿಯಾ ಒಪ್ಪಂದ, ಮದ್ಯಪಾನವನ್ನು ಪೂರ್ಣವಾಗಿ ವಿರೋಧಿಸ ಲ್ಪಟ್ಟದ್ದೂ ಈ ವರ್ಷವೇ ಆಗಿದೆ.
•              ಏಳನೆ ವರ್ಷ: ಖೈಬರ್ ಯುದ್ಧ. ಪ್ರವಾದಿ(ﷺ)ರವರು ಮತ್ತು ಸ್ವಹಾಬಿಗಳು ಮಕ್ಕಾಗೆ ತೆರಳಿ ಉಮ್ರಾ ನಿರ್ವಹಿಸಿರುವುದು ಇದೇ ವರ್ಷ. ಹುಯಯಿರ ಮಗಳು ಸ್ವಫಿಯ್ಯಾ (ರ)ರವರನ್ನು ಪ್ರವಾದಿ(ﷺ)ರವರು ವಿವಾಹ ವಾಗಿರುವುದೂ ಇದೇ ವರ್ಷ.
•              ಎಂಟನೆ ವರ್ಷ: ಮುಸ್ಲಿಮರ ಮತ್ತು ರೋಮರ ಮಧ್ಯೆ ನಡೆದ ಮುತ್‍ಅಃ ಯುದ್ಧ, ಮಕ್ಕಾ ವಿಜಯ. ಥಖೀಫ್, ಹವಾಸಿಲ್ ಮುಂತಾದ ಗೊತ್ರಗಳಿಗೆ ವಿರುದ್ಧವಾಗಿ ಹುನೈನ್ ಯುದ್ಧ ನಡೆದಿರುವುದೂ ಈ ವರ್ಷವೇ.
•              ಒಂಬತ್ತನೆ ವರ್ಷ: ಪ್ರವಾದಿ(ﷺ)ರವರ ಕೊನೆಯ ಯುದ್ಧವಾದ ತ್ವಬೂಕ್ ಯುದ್ಧ. ಈ ವರ್ಷದ ಲ್ಲಿ ಪ್ರವಾದಿ(ﷺ)ರವರ ಬಳಿಗೆ ಅನೇಕ ಗುಂಪು ಗಳು ಬಂದು ತಂಡೋಪತಂಡವಾಗಿ ಇಸ್ಲಾಮ್ ಸ್ವೀಕರಿಸಿದರು. ಆದುದರಿಂದ ಈ ವರ್ಷಕ್ಕೆ ತಂಡಗಳ(ಸಂಘಗಳ) ವರ್ಷ ಎಂಬ ಹೆಸರು ಬಂದಿದೆ.
•              ಹತ್ತನೆ ವರ್ಷ: ಪ್ರವಾದಿ(ﷺ)ರವರ ವಿದಾಯ ಹಜ್ಜ್(ಹಜ್ಜತುಲ್ ವಿದಾ’). ಈ ವರ್ಷ ಪ್ರವಾದಿ(ﷺ)ರವರ ಜೊತೆಯಲ್ಲಿ ಒಂದು ಲಕ್ಷ ಮಂದಿ ಹಜ್ಜ್ ನಿರ್ವಹಿಸಿದರು.
•              ಹನ್ನೊಂದನೆ ವರ್ಷ: ಪ್ರವಾದಿ(ﷺ)ರವರ ಮರಣ. ಅದು ರಬೀಉಲ್ ಅವ್ವಲ್ ತಿಂಗಳ ಸೋಮವಾರ ದಿನವಾಗಿತ್ತು. ಆದರೆ ರಬೀಉಲ್ ಅವ್ವಲ್ ಎಷ್ಟರಂದು ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯವಿದೆ.
•              ಪ್ರವಾದಿ(ﷺ)ರವರಿಗೆ ಅಂದು 63 ವರ್ಷ ಪ್ರಾಯವಾಗಿತ್ತು. ಪ್ರವಾದಿತ್ವಕ್ಕೆ ಮುಂಚೆ 40 ವರ್ಷ ಪ್ರಾಯ, ಪ್ರವಾದಿತ್ವದ ನಂತರ ಹದಿಮೂರು ವರ್ಷ ಮಕ್ಕಾದಲ್ಲೂ ಹತ್ತು ವರ್ಷ ಮದೀನಾದಲ್ಲೂ ಜೀವಿಸಿದರು. ಪ್ರವಾದಿ (ﷺ)ರವರ ಮೇಲೆ ಶಾಂತಿ ಮತ್ತು ಸಮಾಧಾನ ಸದಾ ವರ್ಷಿಸುತ್ತಿರಲಿ. ಆಮೀನ್.

وصلى الله وسلم على رسول الله وعلى آله وصحبه أجمعين

ಪ್ರಕಟಣೆ:

ಕರ್ನಾಟಕ ಸಲಫಿ ಅಸೋಸಿಯೇಷನ್ ದಮ್ಮಾಮ್-ಖೋಬರ್ ಘಟಕ

ಮದಾರುಲ್ ವತನ್ ವಿದ್ವಾಂಸರ ವಿಭಾಗ

ಸಯ್ಯದ್ ಸಅಫರ್ ಸ್ವಾದಿಕ್

ಅನುವಾದ: ಅಬೂ ಬಿಲಾಲ್ ಎಸ್.ಎಮ್(ಅಬ್ದುಲ್ ಮಜೀದ್. ಎಸ್. ಎಂ)

ಪರಿಶೀಲನೆ: ಉಮರ್ ಅಹ್ಮದ್ ಮದನಿ

 

Tags: biography of prophet muhammad in kannadaಅಲ್ಲಾಹ್ ﷻಇತಿಹಾಸಇಸ್ಲಾಮ್‍ಖುರಾನ್ಜೀವನಶೈಲಿದೇವನುಪ್ರಭಾವ ಬೀರುವ ಘಟನೆಗಳುಪ್ರವಾದಿತ್ವಪ್ರವಾದಿಯವರ ಪರಂಪರೆಮಹಾನ್ ವ್ಯಕ್ತಿಗಳುಮುಹಮ್ಮದ್(ﷺ)
Previous Post

ಭಯೋತ್ಪಾದನೆಯ ಬಗ್ಗೆ ಇಸ್ಲಾಮ್ ಏನೆನ್ನುತ್ತದೆ? – What does Islam say about terrorism?

Next Post

ಮುಹಮ್ಮದ ಇಬ್ನ್ ಸುಲೈಮಾನ್ ಅತ್-ತಮೀಮಿಯವರ ಸಂಕ್ವಿಪ್ತ ಜೀವನ ಚರಿತ್ರೆ – A Concise Biography of Muhammad by Ibn Sulaiman at-Tamimi

GIRISH K S

GIRISH K S

Next Post

ಮುಹಮ್ಮದ ಇಬ್ನ್ ಸುಲೈಮಾನ್ ಅತ್-ತಮೀಮಿಯವರ ಸಂಕ್ವಿಪ್ತ ಜೀವನ ಚರಿತ್ರೆ - A Concise Biography of Muhammad by Ibn Sulaiman at-Tamimi

Leave a Reply Cancel reply

Your email address will not be published. Required fields are marked *

Categories

© 2023 Kannada Islam - Premium Kannada Islamic news & magazine by GIRISH (ISHAAQ).

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ಗೂಡು
  • ಇಸ್ಲಾಮ್ ಕುರಿತ ಪ್ರಶ್ನೋತ್ತರಗಳು – Questions and Answers about Islam
    • ಇಸ್ಲಾಮ್ ಕುರಿತ ಸಂಶಯಗಳು ಭಾಗ – 1
    • ಇಸ್ಲಾಮ್ ಕುರಿತ ಸಂಶಯಗಳು ಭಾಗ – 2
    • ಇಸ್ಲಾಮ್ ಕುರಿತ ಸಂಶಯಗಳು ಭಾಗ – 3
    • ರಂಜಾನ್ ತಿಂಗಳ ಕುರಿತಾದ ಪ್ರಶ್ನೆಗಳು ಮತ್ತು ಉತ್ತರಗಳು.
  • ಇಸ್ಲಾಮನ್ನು ಅನ್ವೇಷಿಸಿ
    • All
    • ಅತಿರೇಕತೆಯ ವಿರುದ್ಧ
    • ಇಸ್ಲಾಮನ್ನು ತಿಳಿಯಿರಿ
    • ಕಪಟ ವಿಶ್ವಾಸಿಗಳು
    • ಖುರಾನ್ ಕುರಿತು
    • ಜೀವನದ ಉದ್ದೇಶ
    • ಭಯೋತ್ಪಾದನೆಯ ವಿರುದ್ಧ
    • ಹಬ್ಬಗಳು
    • ಹೊಸದಾಗಿ ಇಸ್ಲಾಮಿಗೆ ಬಂದಿರುವಿರೇ?

    ಶಾಂತಿಗೆ ಮತ್ತೊಂದು ಹೆಸರೇ ಇಸ್ಲಾಮ್

    ಕನ್ನಡ ಇಸ್ಲಾಂ 360° – 01 – ಇಸ್ಲಾಂ ಎಂದರೇನು?

    ಪವಿತ್ರ ಕುರ್‌ಆನ್ ಎಂದರೇನು? – What is Holy Quran

    ಇಸ್ಲಾಮೇ ಏಕೆ? – Why Islam?

    ನವ ಮುಸ್ಲಿಮರಿಗೆ ಸಂಕ್ಷಿಪ್ತ ಉಪಯುಕ್ತ ಮಾರ್ಗದರ್ಶಿ – A brief useful guide for new-Muslims

    ನವ ಮುಸ್ಲಿಮರಿಗೆ ಸಂಕ್ಷಿಪ್ತ ಉಪಯುಕ್ತ ಮಾರ್ಗದರ್ಶಿ – A brief useful guide for new-Muslims

    ಇಸ್ಲಾಂ ಮತ್ತು ಕುರಾನಿನ ನೈಜ ಸಂದೇಶ – The true message of Islam and the Quran

  • ಅಲ್ಲಾಹ್
    231246

    ನಾವು ಇಲ್ಲೇಕ್ಕಿದ್ದೇವೆ? – Why are we here?

    231252

    ಯೇಸುವಿನ ಪ್ರಕಾರ ದೇವನೆಂದರೆ ಯಾರು ? – Who is God according to Jesus

    231233

    ದೇವನಿದ್ದರೆ ಅನ್ಯಾಯಗಳೇಕೆ? – If there is a God why injustices?

    230493

    ದೇವರ ನೈಜ ಧರ್ಮ ಯಾವುದು? – What is the true religion of God?

    230497

    ಅಲ್ಲಾಹನ(ದೇವರ) ಕೃಪೆ – By the grace of Allah (God)

    230502

    ಇಸ್ಲಾಮಿನಲ್ಲಿ ಏಕದೇವತ್ವ – Monotheism in Islam

  • ನಂಬಿಕೆ
    • All
    • ಆರಾಧನೆ
    • ಪ್ರಮಾಣೀಕರಣ
    • ಮರಣಾನಂತರ ಜೀವನ
    • ಸ್ವರ್ಗ

    ಆತ್ಮದ ವಾಸ್ತವ – The reality of the Soul

    ಜೀವನ ಘಟ್ಟದ ಪಯಣವೆತ್ತ ? – Where is the journey of the of life?

    ಇಸ್ಲಾಮಿನ ಮೂರು ಮೂಲಭೂತ ತತ್ವಗಳು – Three Fundamental Principles of Islam

    ನಮಗೆಲ್ಲಾ ಒಬ್ಬನೇ ಸೃಷ್ಟಿಕರ್ತ!! – One Creator for All of Us!!

    ನೀವೇಕೆ ಆರಾಧಿಸುವುದಿಲ್ಲ? – Why don’t you worship?

    ಸಾವು: ಅಂತ್ಯವೋ…? ಹೊಸದೊಂದು ಆರಂಭವೋ? – Death is End? or New Beginning

  • ಪವಿತ್ರೀಕರಣ

    ಖುರ್‌ಆನಿನ ಬೆಳಕಿನಲ್ಲಿ ರೋಗ ಪರಿಹಾರ

    ಶುದ್ಧೀಕರಣ / ವುದೂ – Wudu

  • ಖುರಾನ್
  • ಅಹದೀತ್ ಹೇಳಿಕೆಗಳು
  • ಇಸ್ಲಾಮ್ ಮತ್ತು ಶಾಸ್ತ್ರಗಳು
    • All
    • ಇಸ್ಲಾಮಿನ ಕುರಿತಾಗಿ ಇತರರು
    • ಕ್ರೈಸ್ತ ಧರ್ಮ
    • ಖುರಾನ್ ಆಧಾರಗಳು

    ಯೇಸುವಿನ ಪ್ರಕಾರ ದೇವನೆಂದರೆ ಯಾರು ? – Who is God according to Jesus

    ಯೇಸುವಿನ ಅದ್ಭುತ ಜನನ – Miraculous Birth of Jesus

    ಮಾನವ ಶರೀರವೆಂಬ ಅದ್ಭುತ ಯಂತ್ರವನ್ನು ನಿರ್ಮಿಸಿದವನು ಯಾರು? – Who built the amazing machine called human body?

    ಅಲ್ಲಾಹನ ಸಂದೇಶವಾಹಕರಾದ ಮಹಮ್ಮದ್(ಸ)ರ ಕುರಿತು ಮುಸ್ಲೀಮೇತರ ಟಿಪ್ಪಣಿಗಳು – Non-Muslim Notes on Muhammad (PBUH), Messenger of Allah

    ಕ್ರೈಸ್ತರೊಂದಿಗೆ ಸಂವಾದ (ಯೆಹೋವನ ಸಾಕ್ಷಿಗಳನ್ನು ಹೊರೆತುಪಡಿಸಿ) – Dialogue with Christians (Except Jehovah’s Witnesses)

    ದೇವನೊಬ್ಬನೆ ಅಥವ ಮೂವರೇ? – Is God one or three?

  • ಪ್ರವಾದಿಗಳು
    • All
    • ಮುಹಮ್ಮದ್(ﷺ)
    • ಯೇಸು(ಈಸ (ಅ))

    ರಬಿವುಲ್ ಅವ್ವಲ್ 12 ಪ್ರವಾದಿ(ಸ) ಮನೆಯ ವಾತಾವರಣ –

    ಇಸ್ಲಾಮಿನ ಸಂದೇಶವಾಹಕ  ಮುಹಮ್ಮದ್(ﷺ) – The Messenger of Islam ’Muhammad’ (ﷺ)

    ಯೇಸುವಿನ ಪ್ರಕಾರ ದೇವನೆಂದರೆ ಯಾರು ? – Who is God according to Jesus

    ಯೇಸುವಿನ ಅದ್ಭುತ ಜನನ – Miraculous Birth of Jesus

    ಪ್ರವಾದಿ (ﷺ) ಯನ್ನು ಅರಿಯಿರಿ – Know the Prophet (ﷺ)

    ಅಲ್ಲಾಹನ ಸಂದೇಶವಾಹಕರಾದ ಮಹಮ್ಮದ್(ಸ)ರ ಕುರಿತು ಮುಸ್ಲೀಮೇತರ ಟಿಪ್ಪಣಿಗಳು – Non-Muslim Notes on Muhammad (PBUH), Messenger of Allah

    ದೇವನೊಬ್ಬನೆ ಅಥವ ಮೂವರೇ? – Is God one or three?

    ದೇವರ ಸಂದೇಶವಾಹಕ ಮುಹಮ್ಮದ್ (ﷺ)Messenger of God Muhammad (ﷺ)

    ಪ್ರವಾದಿ ಮುಹಮ್ಮದ್(ﷺ) – Prophet Muhammad(ﷺ)

  • ಜೀವನ ಚರಿತ್ರೆಗಳು
    • All
    • ಅಲ್-ಅಶರ ಅಲ್-ಮುಬಶ್ಶರೂನ್
    • ಇಮಾಮ್‍ಗಳು
    • ಖುಲಫಾ-ಎ-ರಾಶಿದೂನ್
    • ಪ್ರಭಾವ ಬೀರುವ ಘಟನೆಗಳು
    • ಪ್ರವಾದಿಯ ಮಡದಿಯರು
    • ಸಹಾಬಿಗಳು
    • ಹದೀಸ್ ವಿದ್ವಾಂಸರು

    10. ಆಮಿರ್ ಬಿನ್ ಅಬ್ದುಲ್ಲಾ ಬಿನ್ ಅಲ್‌-ಜರ್ರಾಹ್(ಅಬೂ ಉಬೈದ)(ರ) – Aamir bin Abdillah bin al-Jarrah(Abu Ubaida)

    9. ಸಈದ್ ಬಿನ್ ಝೈದ್(ರ) – Saeed Ibn Zayd (RA)

    8. ಸಅದ್ ಬಿನ್ ಅಬೀ ವಕ್ಕಾಸ್‌(ರ) – Sa’d Ibn Abi Waqqas (RA)

    7. ಅಬ್ದುರ್ರಹ್ಮಾನ್ ಬಿನ್ ಔಫ್(ರ) – Abdul ar-Rahman Bin Auf (RA)

    6. ಝುಬೈರ್ ಬಿನ್‌ ಅವ್ವಾಮ್(ರ) – Zubair Ibn Al-Awwam (RA)

    5. ತಲ್ಹ ಬಿನ್ ಉಬೈದುಲ್ಲಾ(ರ) – Talha bin Ubaydillah (RA)

    ಮೈಮೂನ ಬಿಂತ್ ಹಾರಿಸ್(ರ) – ಪ್ರವಾದಿ(ಸ) ರವರ ಕೊನೆಯ ಮಡದಿ

    ರಮ್ಲ ಬಿಂತ್ ಅಬೂ ಸುಫ್ಯಾನ್ (ಉಮ್ಮು ಹಬೀಬ)(ರ) – ಪ್ರವಾದಿ(ಸ) ರವರ ಹತ್ತನೆಯ ಮಡದಿ

    ಸಫಿಯ್ಯ ಬಿಂತ್ ಹುಯಯ್(ರ) – ಪ್ರವಾದಿ(ಸ) ರವರ ಒಂಬತ್ತನೇ ಮಡದಿ

  • ಇಸ್ಲಾಮಿನ ಇತಿಹಾಸ
  • ಇಸ್ಲಾಮಿನ ಕಾನೂನು
    • All
    • ಅನಿಷ್ಟ ಪದ್ಧತಿಗಳು
    • ಫತ್ವಾ ಸ್ಪಷ್ಟೀಕರಣ
    • ಫಿಖ್
    • ಷರಿಯ(ಕಾನೂನು)

    ತಮ್ಮ ಮದ್‌ಹಬ್‌ಗಳ ಕುರಿತು ಇಮಾಮ್‌ಗಳು ಏನೆನ್ನುತ್ತಾರೆ? – What the imam’s say about their Madhab?

    ಭಯೋತ್ಪಾದನೆಯ ಬಗ್ಗೆ ಇಸ್ಲಾಮ್ ಏನೆನ್ನುತ್ತದೆ? – What does Islam say about terrorism?

    ಸೂಫಿಗಳ ಕೆಲವು ತತ್ವಗಳು – Some principles of the Sufis

    ಸಂಘಟನೆಯನ್ನು ಒಡೆಯುವವರು ಕಪಟ ವಿಶ್ವಾಸಿಗಳು! – Those who break the organization are hypocritical believers!

    ​ಇಸ್ಲಾಮ್’ನಲ್ಲಿ ಪುರುಷರಿಗೆ ಒಂದಕ್ಕಿಂತ ಹೆಚ್ಚಿನ ಪತ್ನಿಯರೇ? – Can men have more than one wife in Islam?

    ಶಿಶುಗಳನ್ನು ಕೊಲ್ಲದಿರಿ – Don”t Kill the Babies

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

  • ಇಸ್ಲಾಮ್ ಜೀವನಶೈಲಿ-ಸಂಸ್ಕೃತಿ
    • All
    • ಆರೋಗ್ಯ ಪದ್ಧತಿ
    • ಇಸ್ಲಾಮಿನ ಆಧ್ಯಾತ್ಮಿಕತೆ
    • ಇಸ್ಲಾಮಿನ ಆರ್ಥಿಕತೆ
    • ಇಸ್ಲಾಮಿನ ನಾಗರಿಕತೆ
    • ಇಸ್ಲಾಮಿನ ನೈತಿಕತೆ
    • ಇಸ್ಲಾಮಿನ ರಾಜಕೀಯತೆ
    • ಇಸ್ಲಾಮಿನ ಸಾಮಾಜಿಕತೆ
    • ಕೌಟುಂಬಿಕ ಪದ್ಧತಿ
    • ಧಾರ್ಮಿಕ ಸೈರಣೆ

    ಖುರ್‌ಆನಿನ ಬೆಳಕಿನಲ್ಲಿ ರೋಗ ಪರಿಹಾರ

    ಜೀವನ ಘಟ್ಟದ ಪಯಣವೆತ್ತ ? – Where is the journey of the of life?

    ಶುದ್ಧೀಕರಣ / ವುದೂ – Wudu

    ದೇವರ ನೈಜ ಧರ್ಮ ಯಾವುದು? – What is the true religion of God?

    ನಮ್ಮ ಜೀವನದ ಉದ್ದೇಶವೇನು? – The purpose of our life

    ಇಸ್ಲಾಮಿನ ಮೂರು ಮೂಲಭೂತ ತತ್ವಗಳು – Three Fundamental Principles of Islam

    ಇಸ್ಲಾಮಿನಲ್ಲಿ ಏಕದೇವತ್ವ – Monotheism in Islam

    ​ಇಸ್ಲಾಮ್’ನಲ್ಲಿ ಪುರುಷರಿಗೆ ಒಂದಕ್ಕಿಂತ ಹೆಚ್ಚಿನ ಪತ್ನಿಯರೇ? – Can men have more than one wife in Islam?

    ದೇವರ ಸಂದೇಶವಾಹಕ ಮುಹಮ್ಮದ್ (ﷺ)Messenger of God Muhammad (ﷺ)

  • ಇಸ್ಲಾಮಿನಲ್ಲಿ ಮೂಲಭೂತ ಹಕ್ಕುಗಳು
    • All
    • ಮಹಿಳಾ ಹಕ್ಕುಗಳು
    • ಮಾನವ ಹಕ್ಕುಗಳು
    • ಸಮಾನತೆ

    ಇಸ್ಲಾಂ ಧರ್ಮದಲ್ಲಿ ಮಹಿಳೆಯ ಹಕ್ಕು ಭಾದ್ಯತೆಗಳು – Women’s Right in Islam

    ​ಇಸ್ಲಾಮ್’ನಲ್ಲಿ ಪುರುಷರಿಗೆ ಒಂದಕ್ಕಿಂತ ಹೆಚ್ಚಿನ ಪತ್ನಿಯರೇ? – Can men have more than one wife in Islam?

    ನಿಮ್ಮ ತಂದೆ-ತಾಯಿಯರ ಹಕ್ಕುಗಳು – Your parental rights

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

  • ಪ್ರಚಲಿತ ವಿದ್ಯಮಾನ
  • ಮಾಸ ಪತ್ರಿಕೆಗಳು
  • ಅರೇಬಿಕ್

© 2023 Kannada Islam - Premium Kannada Islamic news & magazine by GIRISH (ISHAAQ).

WhatsApp us