ನಮಗೆಲ್ಲಾ ಒಬ್ಬನೇ ಸೃಷ್ಟಿಕರ್ತ!!
ಸರ್ವ ವೇದಗ್ರಂಥಗಳ ಪ್ರಕಾರ ನಮ್ಮ ಸೃಷ್ಟಿಕರ್ತನು ಒಬ್ಬನೇ ಆಗಿರುತ್ತಾನೆ. ಆದರೆ ಇದನ್ನು ತಿಳಿಯದ ನಾವುಗಳು ನಮಗೆ ನಮ್ಮ ಪೂರ್ವಜರು ತಿಳಿಸಿ ಕೊಟ್ಟಿರುವ ಮಾರ್ಗಗಳನ್ನೇ ಸತ್ಯವೆಂದೂ ಯಾವುದೇ ವಿಚಾರಾನ್ವೇಷಣೆ ಮಾಡದೆಯೇ ಅನುಸರಿಸುತ್ತೇವೆ. ಆದರೆ ಕೊನೆಗೊಂದು ದಿನ ಬರುತ್ತದೆ ಅದು ನಮ್ಮ ಸೃಸ್ತಿಕರ್ತನನ್ನು ಎದುರ್ಗೊಳ್ಳುವ ದಿನ. ಹೌದು ಪ್ರಿಯರೇ! ಅದುವೇ ನಮ್ಮ ಪುನರುತ್ಥಾನ ದಿನ. ಅಂದು ನಾವು ಮಾಡಿದ ಎಲ್ಲಾ ಉತ್ತಮ ಹಾಗೂ ನೀಚ ಕಾರ್ಯಗಳ ಕುರಿತಾಗಿ ನ್ಯಾಯ ತೀರ್ಪಾಗುತ್ತದೆ.
ನಮಗೆ ನ್ಯಾಯತೀರ್ಪಾಗುವ ಸಮಯದಲ್ಲಿ ನಮ್ಮ ಅರಿವಿಗೆ ಬರುವ ಮೊದಲನೇ ನಮ್ಮ ಕಾರ್ಯವೆಂದರೆ “ನಾನು ಭೂಮಿಯಲ್ಲಿ ಇದ್ದಾಗ ನನ್ನ ಈ ಸೃಷ್ಟಿಕರ್ತನನ್ನೇ ಅನುಸರಿಸಿದೆನಾ ಅಥವಾ ಇತರರನ್ನೇ ಎಂಬುದಾಗಿರುತ್ತದೆ. ಅಕಸ್ಮಾತ್! ನಾನು ಆತನನ್ನು ಹೊರತುಪಡಿಸಿ ಇತರರನ್ನು ಆರಾಧಿಸಿದ್ದರೆ? ಅಂದು ನನ್ನನ್ನು ಕಾಪಾಡುವವರು ಯಾರು? ಯಾಕೆಂದರೆ ನಾನು ಆರಾಧಿಸಿದ್ದುದೆಲ್ಲವೂ ಕೂಡ ಆತನನ್ನೇ ಆರಾಧನೆಗೆ ಅರ್ಹನು ಎಂದು ನನ್ನ ವಿರುದ್ಧ ಸಾಕ್ಷಿ ಹೇಳುತ್ತದೆ.
ಆಗ ನನ್ನನ್ನು ಕಾಪಾಡುವವರು ಯಾರು? ಆಗ ನಾವು ಮುಂದೆ ನಡೆಯುವ ನ್ಯಾಯವಿವಿಚಾರಣೆಗಾಗಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿರುವುದಿಲ್ಲ. ಅದಕ್ಕೆ ಮೊದಲೇ ನಾವು ಇಲ್ಲಿ ಉಸಿರಾಡುತ್ತಿರುವಾಗಲೇ ನಮ್ಮ ಸೃಷ್ಟಿಕರ್ತನನ್ನು ಅರಿತು, ಆತನೊಬ್ಬನನ್ನೇ ಅನುಸರಿಸುವುದು ಉತ್ತಮವಲ್ಲವೇ?
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಪ್ರತಿಯೊಬ್ಬ ವ್ಯಕ್ತಿಯು ತಾನು ನಾಳೆ ಪರಲೋಕಕ್ಕಾಗಿ ಏನನ್ನು ಕಳುಹಿಸಿರುತ್ತಾನೆಂಬುದನ್ನು ನೋಡಲು ನೀವು ಸದಾ ಅಲ್ಲಾಹನ್ನು ಭಯಪಡಿರಿ. ಖಂಡಿತವಾಗಿಯು ಅಲ್ಲಾಹನು ನಿಮ್ಮ ಸಕಲ ಕರ್ಮಗಳ ಕುರಿತು ಅರಿವುಳ್ಳವನಾಗಿದ್ದಾನೆ.
ನೀವು ಅಲ್ಲಾಹನ್ನು ಮರೆತು ಬಿಟ್ಟವರಂತೆ ಆಗಬಾರದು.ಅಲ್ಲಾಹನೂ ಅವರನ್ನು ಸ್ವತಃ ತಮ್ಮನ್ನೇ ಮರೆಯುವಂತೆ ಮಾಡಿಬಿಟ್ಟನು.ಅವರೇ ದುರಾಚಾರಿಗಳಾಗಿದ್ದಾರೆ.
ನರಕವಾಸಿಗಳು, ಮತ್ತು ಸ್ವರ್ಗವಾಸಿಗಳು ಸಮಾನರಲ್ಲ. ಸ್ವರ್ಗವಾಸಿಗಳೇ ಯಶಸ್ಸು ಪಡೆದವರಾಗಿರುವರು. (ಖುರ್’ಆನ್ 2:256)