بسم الله الرحمن الرحيم
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ
ಕ್ರೈಸ್ತರೊಂದಿಗೆ ಸಂವಾದ
(ಯೆಹೋವನ ಸಾಕ್ಷಿಗಳನ್ನು ಹೊರೆತುಪಡಿಸಿ)
ಮುಸ್ಲಿಮ್ – ದಯವಿಟ್ಟು ಗಮನ ನೀಡಿ! ನೀವು ಯಾವುದಾದರು ಧರ್ಮವನ್ನು ಅನುಸರಿಸುತ್ತಿರುವಿರಾ?
ಕ್ರೈಸ್ತ – ಹೌದು ನಾನು ಕ್ರೈಸ್ತ.(ಕ್ಯಾಥೊಲಿಕ್/ಸಿ ಎಸ್ ಐ/ ಪೆನ್ಥಕೊಸ್ತಲ್/ಬ್ರೋದೆರೆನ್/ಮೆಥಡಿಸ್ಟ್/ಸೆವೆಂತ್ ಡೇ ಅಡ್ವೆಂಟಿಸ್ಟ್)
ಮುಸ್ಲಿಮ್ – ನಾನು ನಿಮ್ಮನ್ನೊಂದು ಪ್ರಶ್ನೆ ಕೇಳಲೇ? ನೀವು ಯೇಸುವನ್ನು ದೇವನೆಂದು ನಂಬುತ್ತೀರಾ? ಅಥವಾ ದೇವನಿಂದ ಕಳುಹಿಸಲ್ಪಟ್ಟ ಪ್ರವಾದಿ(ಸಂದೇಶವಾಹಕ)ನೆಂದು ನಂಬುತ್ತೀರಾ?
ಕ್ರೈಸ್ತ – ನಾನು ನಂಬುತ್ತೇನೆ ಆತನು ದೇವನಿಂದ ಕಳುಹಿಸಲ್ಪಟ್ಟವನೆಂದು ನಂಬುತ್ತೇನೆ.
ಮುಸ್ಲಿಮ್ – ಯೇಸುವು, ಸರ್ವಶಕ್ತನಾದ ದೇವನಿಂದ ಕಳುಹಿಸಲ್ಪಟ್ಟವನು ಎಂದು ಹೇಳುವ ಒಂದೇ ಒಂದು ಧರ್ಮ ಯಾವುದೆಂದು ನಿಮಗೆ ತಿಳಿದಿದೆಯೇ?
ಕ್ರೈಸ್ತ – (ಆಶ್ಚರ್ಯದಿಂದ ನೋಡುತ್ತಾನೆ)
ಮುಸ್ಲಿಮ್ – ಅದು ಯಾವ ಧರ್ಮ ಎಂದು ತಿಳಿದಿದೆಯೇ?
ಕ್ರೈಸ್ತ – ಇಲ್ಲಾ(ತಲೆ ಆಡಿಸುತ್ತಾ)
ಮುಸ್ಲಿಮ್ – ಯೇಸುವು, ಸರ್ವಶಕ್ತನಾದ ದೇವನಿಂದ ಕಳುಹಿಸಲ್ಪಟ್ಟವನು ಎಂದು ಹೇಳುವ ಒಂದೇ ಒಂದು ಧರ್ಮ ”ಇಸ್ಲಾಮ್”. ಮತ್ತು ಯೇಸುವು ಮಸ್ಸೀಹನೆಂದು ಇಸ್ಲಾಮ್ ಎಂದೂ ಹೇಳುತ್ತದೆ, ಆತನು ಕನ್ಯೆಯಾದ ತಾಯಿ ಮರಿಯ(ಮೇರಿ)ಳಿಗೆ ಹುಟ್ಟಿದವ ಎಂದೂ ಹೇಳುತ್ತದೆ ಮತ್ತು ಆತನು ಅನೇಕ ಅದ್ಭುತ ಕಾರ್ಯ(ಪವಾಡ)ಗಳನ್ನು ದೇವಶಕ್ತಿಯ ಸಹಾಯದಿಂದ ಮಾಡಿದನು.
ಕ್ರೈಸ್ತ – ಇಲ್ಲಾ! ಕ್ರೈಸ್ತ ಧರ್ಮವು ಯೇಸುವನ್ನು ದೇವನೆಂದು ಹೇಳುವುದಿಲ್ಲ.
ಮುಸ್ಲಿಮ್ – “ತಂದೆಯಾದ ದೇವರೇ, ಮಗನಾದ ದೇವರೇ ಮತ್ತು ಪವಿತ್ರಾತ್ಮನಾದ ದೇವರೇ” ಎಂದು ಕ್ರೈಸ್ತರು ಹೇಳುವುದಿಲ್ಲವೇ?
ಕ್ರೈಸ್ತ – ಹೌದು ನಾವು ಹೇಳುತ್ತೇವೆ?
ಮುಸ್ಲಿಮ್ – ನಾನು ಹೇಳಲಿಲ್ಲವೇ, ಕ್ರೈಸ್ತರು ಯೇಸುವನ್ನು ದೇವರೆನ್ನುತ್ತಾರೆಂದು?
ಕ್ರೈಸ್ತ – ಹೌದು, ನಾನು ಅದನ್ನೇ ಹೇಳಬಯಸಿದ್ದೆ, ಯೇಸು ತ್ರೈಯೇಕತ್ವದ ಭಾಗವೆಂದು.
ಮುಸ್ಲಿಮ್ – ನಾನು ದೇವರೆಂದರೆ ಏನು ಎಂದು ವಿವರಿಸಿ ಹೇಳಲೇ?
ದೇವರು,
- ಎಲ್ಲವನ್ನೂ ನೋಡುಬಲ್ಲನು.
- ಎಲ್ಲವನ್ನೂ ಕೇಳಬಲ್ಲನು.
- ಎಲ್ಲವನ್ನೂ ಅರಿತಿರುವನು.
- ಆದಿಯಿಲ್ಲದವನು.
- ಅಂತ್ಯವಿಲ್ಲದವನು.
- ಲಿಂಗತ್ವಕ್ಕೆ ನಿಲುಕದವನು.
- ಆತನು ಸರಿಸಾಟಿಯಿಲ್ಲದವನು.
- ಆತನು ಪರಿಪೂರ್ಣನು.
- ಆತನು ತನ್ನ ಸೌಂದರ್ಯ, ಪ್ರೀತಿ ಮತ್ತು ಅಧಿಕಾರದಲ್ಲಿ ಪರಿಪೂರ್ಣನು.
ಎಂದು ನಂಬುತ್ತೀರಾ?
ಕ್ರೈಸ್ತ – ಹೌದು ನಾನು ಅದನ್ನು ಒಪ್ಪಿಕೊಳ್ಳುತ್ತೇನೆ.
ಮುಸ್ಲಿಮ್ – ಆದರೆ ಯೇಸು ಆ ರೀತಿ ಇರಲಿಲ್ಲ.
ಕ್ರೈಸ್ತ – ಅವರು ಆ ರೀತಿಯೇ ಇದ್ದರು.
ಮುಸ್ಲಿಮ್ – ನಾವು ಈ ಮಾತಿಗಾಗಿ ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ, ನಾವು ದೇವರು ಎಲ್ಲವನ್ನು ಬಲ್ಲವನೆಂದು ಒಪ್ಪಿಕೊಂಡೆವು, ಅಂತೆಯೇ ಪ್ರಶ್ನಿಸುವುದಾದರೆ ಯೇಸುವು ಎಲ್ಲವನ್ನೂ ಬಲ್ಲವನೇ?
ಕ್ರೈಸ್ತ – ಹೌದು! ಆತನಿಗೆ ಅರಿವಿತ್ತು.
ಮುಸ್ಲಿಮ್ – ಆದರೆ ಬೈಬಲ್ ನಲ್ಲಿ ”ಆ ಸಮಯ” ಅಂದರೆ ಅಂತ್ಯಕಾಲದ ಕುರಿತಾಗಿ ಯೇಸುವನ್ನು ಕೇಳಿದಾಗ “ಆದರೆ ಆ ದಿನವಾಗಲೀ ಗಳಿಗೆಯಾಗಲೀ ನನ್ನ ತಂದೆಗೆ ಮಾತ್ರವೇ ಹೊರತು ಮತ್ತಾರಿಗೂ ಪರಲೋಕದ ದೂತರಿಗೂ ತಿಳಿಯದು.” (ಮತ್ತಾಯ 4:36)
ಹಾಗೆಯೇ ಬೈಬಲ್ ನಲ್ಲಿ ಹಣ್ಣನ್ನು ತೆಗೆಯಲಿಕ್ಕಾಗಿ ಅಂಜೂರದ ಮರದ ಬಳಿ ನಡೆದಾಗ, ಅಲ್ಲಿ ಹಣ್ಣು ಸಿಗದ ಕಾರಣ ಮರವನ್ನು ಶಪಿಸಿದನು. (ಮತ್ತಾಯ 21: 18-22) ಹಾಗೇನಾದರು ಏಸುವು ದೇವನಾಗಿದ್ದಲ್ಲಿ ಆತನಿಗೆ ಮರದ ಬಳಿ ತೆರಳುವುದಕ್ಕೂ ಮುನ್ನವೇ ತಿಳಿಬೇಕಿತ್ತಲ್ಲವೇ?
ಕ್ರೈಸ್ತ – ಆದರೆ ಯೇಸುವು ಅದ್ಭುತ ಕಾರ್ಯ(ಪವಾಡ)ಗಳನ್ನು ಮಾಡಿರುವನು.
ಮುಸ್ಲಿಮ್ – ಆತನು ತನ್ನ ಸ್ವಶಕ್ತಿಯಿಂದ ಅದನ್ನು ಮಾಡಿದನೇ?
ಕ್ರೈಸ್ತ – ಹೌದು!
ಮುಸ್ಲಿಮ್ – ಆದರೆ ಬೈಬಲ್ ನಲ್ಲಿ ಯೇಸು ಹೇಳಿರುವನು, “ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು”(ಯೋಹಾನ್ನ 5:30) ಆದರೆ ಆತನು ಅದ್ಭುತ ಕಾರ್ಯ(ಪವಾಡ)ಗಳನ್ನು ಮಾಡಿದಾಗ ಅದನ್ನು ತಂದೆಯ ಅಂದರೆ ಯಾರನ್ನು ನಾವು ದೇವನೆನ್ನುತ್ತೇವೆಯೋ ಅವರ ಹೆಸರಿನಲ್ಲಿಯೇ ಮಾಡಿರುವನು.
ಕ್ರೈಸ್ತ – ಆದರೂ ನಾನು ತ್ರೈಯೇಕತ್ವವನ್ನು ನಂಬುತ್ತೇನೆ.
ಮುಸ್ಲಿಮ್ – ತ್ರೈಯೇಕತ್ವವೆಂದಾಗ ಯೇಸು ಕೂಡ ದೇವನೆಂದಾಗುತ್ತದೆ.. ಆದರೆ ಯೇಸುವು ದೇವರಲ್ಲಿ ಪ್ರಾರ್ಥಿಸಲಿಲ್ಲವೇ?
ಕ್ರೈಸ್ತ – ಹೌದು! ಪ್ರಾರ್ಥಿಸಿದನು.
ಮುಸ್ಲಿಮ್ – ಪ್ರಾರ್ಥನೆಯೆಂಬುದು, ದೇವರನ್ನು ಯಾವುದಕ್ಕಾದರೂ ಬೇಡಲಿಕ್ಕಾಗಿ ಮತ್ತು ಆತನ ಸ್ತುತಿಸುವುದಕ್ಕಾಗಿ ಅಲ್ಲವೇ?
ಕ್ರೈಸ್ತ – ಹೌದು ಅದು ನಿಜ.
ಮುಸ್ಲಿಮ್ – ಆದರೆ ಯೇಸುವು ಯಾರಲ್ಲಿಯಾದರೂ ಸಹಾಯಕ್ಕಾಗಿ ಎದುರು ನೋಡಿದರೆ, ಆತನು ದೇವನಾಗಲಿಕ್ಕೆ ಸಾಧ್ಯವಿಲ್ಲ ಅಲ್ಲವೇ? ಯಾಕೆಂದರೆ ನಾವು ಈಗಾಗಲೇ ದೇವನು ಸರ್ವಶಕ್ತನೆಂಬುದನ್ನು ಒಪ್ಪಿಕೊಂಡಿರುತ್ತೇವೆ.
ಕ್ರೈಸ್ತ – ಇರಬಹುದು, ಆದರೆ ನಾನು ಯೇಸುವನ್ನು ಸರ್ವಶಕ್ತನೆಂದು ಎಂದಿಗೂ ನಂಬಿರಲಿಲ್ಲ. (ಈಗ ಆ ಕ್ರೈಸ್ತನು ಯೇಸುವನ್ನು ದೇವನಲ್ಲವೆಂದು ಒಪ್ಪಿಕೊಂಡಿದ್ದಾನೆ, ಆದರೂ ಯೇಸುವನ್ನು ದೇವಕುಮಾರ ಎಂದು ಅರಿತುಕೊಂಡಿರುತ್ತಾನೆ. ಆದ್ದರಿಂದ ನಾವು ಯೇಸುವನ್ನು ದೇವಕುಮಾರನಲ್ಲ ಎಂಬುದನ್ನು ಪ್ರಮಾಣಿಕರಿಸುವುದರ ಮೇಲೆ ಗಮನ ಹರಿಸಬೇಕಾಗುತ್ತದೆ.)
ಕ್ರೈಸ್ತ – ನಾನು ಯೇಸುವನ್ನು ದೇವಕುಮಾರನೆಂದು ನಂಬುತ್ತೇನೆ.
(ಮುಂದುವರೆಯುತ್ತದೆ..)