“ನಿಮ್ಮ ಪ್ರಭುವು ತನ್ನ ಕೃಪಾದೃಷ್ಟಿಯಲ್ಲಿ ಅಸೀಮನು…” (ಕುರ್‍ಆನ್ 6:147)
ಸರ್ವಶಕ್ತ ಅಲ್ಲಾಹನು ತನ್ನ ಸೃಷ್ಟಿಯೆಡೆಗೆ ಸಂಪೂರ್ಣ ಪ್ರೇಮಮಯನೂ, ಕರುಣಾಜನಕನೂ ಆಗಿರುವನು. ಇಹಲೋಕದ ಮತ್ತು ಪರಲೋಕದ ಒಳಿತುಗಳು ಹಾಗೂ ಅನುಗ್ರಹಗಳೆಲ್ಲವೂ ಅಲ್ಲಾಹನ ಕೃಪೆಯ ಕುರಿತಾಗಿರುವ ಸ್ಪಷ್ಟ ಪುರಾವೆಗಳಾಗಿರುವುವು. ನಿಶ್ಚಯವಾಗಿಯೂ, ಅಲ್ಲಾಹನು ನಮ್ಮ ಮೇಲೆ ನಮ್ಮ ಸ್ವಂತ ತಾಯಿಗೂ ಮೀರಿ ಅಧಿಕ ಕರುಣೆಯನ್ನಿರಿಸಿರುವನು ಎಂದು ಇಸ್ಲಾಮ್ ಕಲಿಸುತ್ತದೆ. ಅಲ್ಲಾಹನ ನಾಮ ಹಾಗೂ ಗುಣವಿಶೇಷಗಳು ಈ ಕೆಳಗಿನಂತಿರುವಾಗ ಇದಕ್ಕೆ ವ್ಯತಿರಿಕ್ತವಾಗಿರಲು ಹೇಗೆ ತಾನೇ ಸಾಧ್ಯ?
-
ಪಶ್ಚಾತ್ತಾಪ ಸ್ವೀಕರಿಸುವವನು;
-
ಪರಮ ಕರುಣಾಮಯಿ;
-
ಅತಿಯಾಗಿ ಪ್ರೀತಿಸುವವನು;
-
ಸಹನಾಶೀಲ ಪ್ರಭು;
-
ಸೌಜನ್ಯಪೂರ್ವಕ ಪ್ರಭು;
-
ಪರಮ ದಯಾಮಯನು;
-
ಒಳಿತಿನ ಮೂಲ;
-
ಔದಾರ್ಯಪೂರ್ವಕ ಪ್ರಭು;
-
ಅನುಗ್ರಹದಾತ
ಈ ಎಲ್ಲ ನಾಮವಿಶೇಷಗಳು ಅಲ್ಲಾಹನ- ಕರುಣೆ, ಔದಾರ್ಯ ಹಾಗೂ ಒಳಿತಿನ ವಿಶೇಷತೆಗಳನ್ನು ಸೂಚಿಸುತ್ತದೆ. ಅಲ್ಲಾಹನು ತನ್ನ ಸೃಷ್ಟಿಯ ಮೇಲೆ ಅನುಗ್ರಹಿಸಿರುವ ಪರಿಪೂರ್ಣ ಹಾಗೂ ವಿಶಾಲ ಔದಾರ್ಯತೆಗಳನ್ನು ಇದು ಅಂಗೀಕರಿಸುತ್ತದೆ. ಇದೇ ಸೃಷ್ಟಿಯನ್ನು ಅಭಿಸಂಭೋದಿಸುತ್ತ, ಅಲ್ಲಾಹನು ಹೇಳುತ್ತಾನೆ, “ಓ ಆದಮನ ಪುತ್ರ! ನೀನು ಭೂಮಿಯ ಗಾತ್ರದಷ್ಟು ಪಾಪಗಳನ್ನು ಹೊತ್ತು ನನ್ನ ಬಳಿ ಬರಲು ಮತ್ತು ನನ್ನೊಂದಿಗೆ ಯಾವುದೇ ಸಹವರ್ತಿಗಳನ್ನೇರ್ಪಡಿಸಿರದ ಸ್ಥಿತಿಯಲ್ಲಿ ಆಗ ನನ್ನನ್ನು ಎದುರಿಸುತ್ತಿರಲು, ನಾನು ನಿನ್ನೆಡೆಗೆ ಭೂಮಿಯ ಗಾತ್ರದಷ್ಟು ಕ್ಷಮೆಯನ್ನು ತರಲಿರುವೆನು.”
ಅಲ್ಲಾಹನ ಕೃಪೆ ಮತ್ತು ಅನುಗ್ರಹಗಳಿಗೆ ಉದಾಹರಣೆ
“ಇನ್ನು, ನಿಮ್ಮ ಪ್ರಭುವಿನ ಯಾವೆಲ್ಲಾ ಅನುಗ್ರಹಗಳನ್ನು ನೀವು ತಿರಸ್ಕರಿಸುವಿರಿ”
ಜನರು, ಜೀವನಾದ್ಯಂತ ನಿರಂತರವಾಗಿ ಉತ್ತಮ ಆರೋಗ್ಯ, ದೃಷ್ಟಿ, ಶ್ರವಣ ಶಕ್ತಿ, ಆರೈಕೆ, ಶುದ್ಧ ಗಾಳಿ, ಮಕ್ಕಳು ಮತ್ತು ಅಲ್ಲಾಹನ ಇನ್ನಿತರ ಅಸಂಖ್ಯಾತ ಅನುಗ್ರಹಗಳನ್ನು ಪಡೆಯುತ್ತಲೇ ಇರುವರು. ಕೆಲವರು, ದೈವವರವಾಗಿ ಬಂದ ಬುದ್ಧವಂತಿಕೆಯನ್ನು ಮತ್ತು ಚಾಣಾಕ್ಷತನವನ್ನು ಅಲ್ಲಾಹನ ಅನುಗ್ರಹಗಳ ಅಂಗೀಕಾರಕ್ಕಾಗಿ ಮತ್ತು ತಮ್ಮ ಅಸ್ತಿತ್ವದ ಉದ್ದೇಶವನ್ನರಿಯಲು, ತನ್ಮೂಲಕ ಅಲ್ಲಾಹನಿಗೆ ಸಂಪೂರ್ಣ ಶರಣಾಗತಗೊಳ್ಳಲು ಬಳಸುವರು. ಅದುವೇ, ಇನ್ನುಳಿದವರು ತಮ್ಮ ಕುರಿತೇ ಅಲ್ಲಾಹನ ಅನುಗ್ರಹಗಳನ್ನು ನಿರಾಕರಿಸುವರು. ಆದಾಗ್ಯೂ, ಅಲ್ಲಾಹ್ ಅವರ ಆಜ್ಞೋಲ್ಲಂಘನೆಯನ್ನೂ ಪರಿಗಣಿಸದೇ ಅವರಿಗೆ ಉಣಬಡಿಸುವನು ಮತ್ತು ಅವರನ್ನು ಪೋಷಿಸುವನು. ಅಲ್ಲಾಹನನ್ನು ಖಡಾಖಂಡಿತವಾಗಿ ನಿರಾಕರಿಸಿದಾಗ್ಯೂ ಅವರಿಗೆ ಸ್ವಚ್ಛಂದ ವಿಹರಿಸುವ, ಯೋಚಿಸುವ ಮತ್ತು ಅಂತೆಯೇ ನಡೆದುಕೊಳ್ಳುವ, ಸುಖಭೋಗದ ಸ್ವಾತಂತ್ರ್ಯವನ್ನು ನೀಡಲಾಗಿದೆ. ಅಲ್ಲಾಹನ ಕೃಪೆಯಿರದ ಹೊರತು ಅವರ ಅಸ್ತಿತ್ವವೂ ಇರಲಾರದು.
ಅಂತಿಮವಾಗಿ, ಪ್ರತಿಯೊಬ್ಬರೂ ತಮ್ಮ ಅನುಗ್ರಹಗಳ ಕುರಿತು ಕೃತಜ್ಞತೆ ಸಲ್ಲಿಸುವ, ಅಲ್ಲಾಹನ (ಸಕಲ ಮಾನವಕೋಟಿಯ ಪ್ರಭುವಿನ) ಆಜ್ಞಾನುಸಾರ ಅವುಗಳನ್ನು ಬಳಸುವ ಮತ್ತು ಆತನನ್ನು ಮಾತ್ರವೇ ಆರಾಧಿಸುವ ಸ್ವತಂತ್ರ ಆಯ್ಕೆಯನ್ನು ಹೊಂದಿರುವರು. ಈ ಕೆಳಗೆ ಇಂತಹ ಕೆಲವು ಅನುಗ್ರಹಗಳನ್ನು ಚಿತ್ರಿಸಿದ್ದೇವೆ.
ಏಕೆಂದರೆ, “…ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಕೆ ಮಾಡಲು ಪ್ರಯತ್ನಿಸುತ್ತಿರಲು, ನೀವೆಂದೂ ಎಣಿಸಲಾರಿರಿ. ನಿಶ್ಚಯವಾಗಿಯೂ, ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುವನು.” ಕುರ್‍ಆನ್ 16:18
ದಿವ್ಯ ಗ್ರಂಥಗಳು ಹಾಗೂ ಸಂದೇಶವಾಹಕರ ಮೂಲಕ ಸನ್ಮಾರ್ಗದರ್ಶನ
“ಅವನು ಈ ಗ್ರಂಥವನ್ನು(ಕುರ್‍ಆನ್), ನಿಮಗೆ(ಮುಹಮ್ಮದ್) ಸತ್ಯಸಹಿತ ಅವತೀರ್ಣಗೊಳಿಸಿರುವನು, ಈ ಮುಂಚೆ ಬಂದವುಗಳನ್ನು ದೃಢೀಕರಿಸುತ್ತ. ಮತ್ತು ಅವನು ತೌರಾತ್‍ಅನ್ನೂ ಮತ್ತು ಇಂಜೀಲ್‍ಅನ್ನೂ ಇಳಿಸಿದ್ದನು (ಕ್ರಮವಾಗಿ, ಮೂಸಾ ಮತ್ತು ಈಸಾರಿಗೆ ಅವತೀರ್ಣಗೊಂಡ ಮೂಲಗ್ರಂಥಗಳು)” ಕುರ್‍ಆನ್ 3:3
ಸೃಷ್ಟಿಯ ಆದ್ಯ ಕಾಲದಿಂದಲೂ ಮಾನವನನ್ನು ಜೀವನದ ತೊಂದರೆಗಳನ್ನೆಲ್ಲಾ ಒಂಟಿಯಾಗಿಯೇ ಎದುರಿಸಲು ಬಿಟ್ಟುಬಿಡಲಾಗಿಲ್ಲ. ಅಲ್ಲಾಹನ ಕೃಪೆಯಿಂದ, ಮಾನವನು ಸಂದೇಶವಾಹಕರ ಮೂಲಕ ವಾಣಿಯನ್ನು ಪಡೆದನು. ಸಂದೇಶವಾಹಕರು ಅಲ್ಲಾಹನ ಸಂದೇಶವನ್ನು ಜನರಿಗೆ ತಲುಪಿಸಿದರು, ಮತ್ತು ಅವರನ್ನು ರಕ್ಷಿಸಲು, ಸನ್ಮಾರ್ಗದಲ್ಲಿ ನಡೆಸಲು ಈ ಶಿಕ್ಷಣವನ್ನು ಅವರಿಗೆ ನೀಡಿದರು. ಅತ್ಯುತ್ತಮ ಹಾಗೂ ಕರುಣಾಮಯ, ಅವತೀರ್ಣ- ಕುರ್‍ಆನ್ ಮತ್ತು ವ್ಯಕ್ತಿ- ಮುಹಮ್ಮದ್(ಅವರ ಮೇಲೆ ಶಾಂತಿ ಇರಲಿ) ಆಗಿರುವರು.
ಕುರ್‍ಆನ್- ದೇವರ ಅಂತಿಮ ಗ್ರಂಥವು, ಈ ಹಿಂದಿನ ಎಲ್ಲ ಅವತರಿತ ಗ್ರಂಥಗಳನ್ನು ಮೀರಿ ನಿಂತಿದೆ ಮತ್ತು ಮಾನವನಿಗೆ ಇದೊಂದು ಸರ್ವಶ್ರೇಷ್ಠ ಅನುಗ್ರಹ ಹಾಗೂ ದಾರಿದೀಪವಾಗಿದೆ. ಅಲ್ಲಾಹನು ಈ ಹಿಂದೆ ಅನೇಕ ಸಂದೇಶವಾಹಕರನ್ನು ಕಳುಹಿಸಿದ್ದಂತೆಯೇ, ಮಾನವರಿಗಾಗಿ, ಕುರ್‍ಆನಿನ ವಿನಮೃತೆಯ ಹಾಗೂ ನ್ಯಾಯಪೂರ್ವಕ ಶಿಕ್ಷಣವನ್ನು ದಿನನಿತ್ಯದ ಚಟುವಟಿಕೆಗಳಲ್ಲಿ ಅಳವದಿಸಿಕೊಳ್ಳುವುದು ಹೇಗೆಂದು ತೋರಿಸಲು, ಒಂದು ಜೀವಂತ, ಪರಿಪೂರ್ಣ ಹಾಗೂ ಪ್ರಾಯೋಗಿಕ ಉದಾಹರಣೆಯನ್ನು ಕಳುಹಿಸಿರುವನು. ಆ ಉದಾಹರಣೆಯೇ, ಪೈಗಂಬರ್ ಮುಹಮ್ಮದ್(ಅವರ ಮೇಲೆ ಶಾಂತಿ ಇರಲಿ) – ಮಾನವಜನಾಂಗಕ್ಕೆ ಒಂದು ಅನುಗ್ರಹ.
“ಮತ್ತು ನಾವು(ಅಲ್ಲಾಹನು) ನಿಮ್ಮನ್ನು(ಮುಹಮ್ಮದ್) ಅಖಿಲ ಜಗತ್ತಿಗೇ ಅನುಗ್ರಹವನ್ನಾಗಿ ಕಳುಹಿಸಿರುತ್ತೇವೆ” ಕುರ್‍ಆನ್ 21:107
ಈ ಕೆಳಗಿನವುಗಳು, ಅಲ್ಲಾಹನ ಸಂದೇಶವಾಹಕರ ಔದಾರ್ಯತೆ, ಸೌಜನ್ಯಭಾವ, ಸೌಹಾರ್ದತೆ ಹಾಗೂ ಉತ್ತಮ ಶಿಕ್ಷಣವನ್ನು ಸೂಚಿಸುವ ಕೆಲವು ಹೇಳಿಕೆಗಳು:
-
“ಸೌಜನ್ಯತೆಯ ಉಪಸ್ಥಿತಿಯು ವ್ಯಕ್ತಿಯ ಸೌಂದರ್ಯವನ್ನು ವೃದ್ಧಿಸುತ್ತದೆ ಮತ್ತು ಸೌಜನ್ಯತೆಯ ಕೊರತೆಯು ಅವರ ಸೌಂದರ್ಯವನ್ನು ಕಳೆಗುಂದಿಸುತ್ತದೆ.
-
ನಡುವಳಿಕೆಯಲ್ಲಿ ಯಾರು ಉತ್ತಮರೋ, ಅವರೇ ಸತ್ಯವಿಶ್ವಾಸದಲ್ಲಿ ಉತ್ಕøಷ್ಟರು.
-
ನೆರೆಯವರು ಹಸಿದಿರುವಾಗ ಹೊಟ್ಟೆ ತುಂಬ ಉಣ್ಣುವವನು ಪರಿಪಕ್ವ ಮುಸ್ಲಿಮನಲ್ಲ.
-
ಇತರರ ಮೇಲೆ ಕರುಣೆ ತೋರದವನಿಗೆ ಅಲ್ಲಾಹನೂ ಕರುಣೆ ತೋರುವುದಿಲ್ಲ.
ಇಂದಿನ ಕಾಲಕ್ಕೆ, ಒಂದು ಸಮಾಜದ ಸುವ್ಯವಸ್ಥೆಗೆ ಇಂತಹ ಉತ್ತಮ ಸಲಹೆಗಳು ಎಷ್ಟು ಅವಶ್ಯಕವಲ್ಲವೇ?
ಸೃಷ್ಟಿಯೆಡೆಗೆ ಔದಾರ್ಯತೆ
ಮಾನವರ ಸೃಷ್ಟಿ ಮತ್ತು ಅವರಿಗೆ ನೀಡಲಾಗಿರುವ ಸಕಲ ಸಾಮಥ್ರ್ಯಗಳು, ಸ್ವತಃ ತನ್ನಲ್ಲೇ ಒಂದು ಮಹಾವರದಾನವಾಗಿದೆ. ವಾಸ್ತವದಲ್ಲಿ, ನಾವು ಹಾಸಿಗೆಯಿಂದ ಎದ್ದೇಳುವುದು, ಕೆಲಸ ಮಾದುವುದು, ಆಹಾರ ಸೇವಿಸುವುದು, ಆಟವಾಡುವುದು, ಮಲಗುವುದು- ಇವೆಲ್ಲಾ ಸಾಮಥ್ರ್ಯಗಳು ನಿಜವಾಗಿಯೂ ನಮ್ಮನ್ನು ಚಿರಋಣಿಯನ್ನಾಗಿಸಬೇಕು.
“ಅವನ ಕೃಪೆಯ ಅಂಗವಾಗಿ, ಅವನು ನಿಮಗಾಗಿ ರಾತ್ರಿ ಮತ್ತು ಹಗಲುಗಳನ್ನು ಮಾಡಿರುವನು, ತನ್ಮೂಲಕ ನೀವು ವಿಶ್ರಾಂತಿ ಪಡೆಯಲೆಂದು ಮತ್ತು (ಹಗಲಿನಲ್ಲಿ) ಅವನ ಅನುಗ್ರಹಗಳನ್ನು ಅರಸಲೆಂದು ಮತ್ತು ಬಹುಶಃ, ನೀವು ಕೃತಜ್ಞರಾಗಬಹುದು” ಕುರ್‍ಆನ್ 28:73
ಪತ್ನಿ(ಪತಿ)ಯರೂ ಕೂಡ ನೆಮ್ಮದಿ ಹಾಗೂ ಪ್ರಶಾಂತತೆಗೆ ದಾರಿಯಾಗುವ ಮೂಲಕ ವಿಶೇಷ ಅನುಗ್ರಹವಾಗಿದ್ದಾರೆ. “ಮತ್ತು ನಿಮ್ಮೊಳಗೇ ನಿಮ್ಮ ಸಂಗಾತಿಗಳನ್ನು ಸೃಷ್ಟಿಸುವ ಮೂಲಕ ನಿಮಗೆ ನೆಮ್ಮದಿಯನ್ನು ನೀಡುವುದು ಅವನ ನಿದರ್ಶನಗಳಲ್ಲೊಂದು; ಮತ್ತು ನಿಮ್ಮ ನಡುವೆ ಪ್ರೇಮ ಮತ್ತು ಔದಾರ್ಯತೆಯನ್ನು ಸ್ಥಾಪಿಸಿರುವನು. ನಿಶ್ಚಯವಾಗಿಯೂ, ವಿಚಾರವಂತರಿಗೆ ಇದರಲ್ಲೊಂದು ನಿದರ್ಶನವಿದೆ.” ಕುರ್‍ಆನ್ 30:21
ಅವನ ಇನ್ನೊಂದು ಅನುಗ್ರಹವೆಂದರೆ, ನಮ್ಮನ್ನು ಪಾಪರಹಿತವಾಗಿ ಸೃಷ್ಟಿಸಿರುವ ಮತ್ತು ಪ್ರೌಢರಾಗುವವರೆಗೂ ಮತ್ತು ನಿರ್ಧಾರ ತೆಗೆದುಕೊಳ್ಳಲು ಸಾಮಥ್ರ್ಯರಾಗುವವರೆಗೂ ನಮ್ಮಿಂದ ನಮ್ಮ ಕರ್ಮಗಳ ಕುರಿತು ಲೆಕ್ಕಾಚಾರವನ್ನು ಪಡೆಯದಿರುವ ವಾಸ್ತವಿಕತೆಯಾಗಿದೆ. ಇದು ಕ್ರಿಶ್ಚಿಯಾನಿಟಿಯ “ಮೂಲ ಪಾಪ” ಕಲ್ಪನೆಗೆ ತೀರಾ ವಿರುದ್ಧವಾಗಿದೆ.
ಪಾಪಗಳನ್ನು ಕ್ಷಮಿಸುವುದು, ಅಲ್ಲಾಹನ ಕೃಪೆಯ ಇನ್ನೊಂದು ಶ್ರೇಷ್ಠ ಉದಾಹರಣೆಯಾಗಿದೆ. ಏಕೆಂದರೆ, ನಾವು ದುರ್ಬಲರು ಮತ್ತು ತಪ್ಪುಗಳನ್ನು ಮಾಡುವುದು ಸಹಜ ಎಂಬುದನ್ನು ಅಲ್ಲಾಹ್ ಚೆನ್ನಾಗಿ ಬಲ್ಲನು. ಸತ್ಯವಿಶ್ವಾಸಿಗಳು ಪಾಪ ಮಾಡಿದರೆ, ಅದರ ಅರ್ಥ, ಅವರು ಅಲ್ಲಾಹನ ಕೃಪೆಯನ್ನು ನಿರೀಕ್ಷಿಸಬಾರದೆಂದಲ್ಲ ಅಥವಾ ಅವರು ಅಲ್ಲಾಹನ ಕ್ಷಮೆಯಿಂದ ವಂಚಿತರಾದರೆಂದಲ್ಲ.
“ತಮ್ಮ ಮೇಲೆಯೇ ಅತಿರೇಕವೆಸಗಿಕೊಂಡಿರುವ ನನ್ನ ದಾಸರೇ! ಅಲ್ಲಾಹನ ಕೃಪೆಯಿಂದ ನಿರಾಶರಾಗದಿರಿ; ಅಲ್ಲಾಹನು ಸಕಲ ಪಾಪಗಳನ್ನೂ ಕ್ಷಮಿಸುವನು: ಅವನು ಮಹಾ ಕ್ಷಮಾಶೀಲನೂ, ಪರಮ ಕರುಣಾನಿಧಿಯೂ ಆಗಿರುವನು.” ಕುರ್‍ಆನ್ 39:53
ಪ್ರಾಣಿಗಳೂ ಅಲ್ಲಾಹನ ಕೃಪೆಯಿಂದ ವಂಚಿತವಾಗಿಲ್ಲ. ಅವು ಕೂಡ ನೋಡುವ ಹಾಗೂ ಕೇಳುವ ಸಾಮಥ್ರ್ಯವನ್ನು ಹೊಂದಿವೆ; ಅವುಗಳಿಗೂ ಜೀವನಾಧಾರವನ್ನು ಮತ್ತು ಸಂತತಿಗಳನ್ನು ಹಾಗೂ ಇನ್ನೂ ಅನೇಕ ಅನುಗ್ರಹಗಳನ್ನು ದಯಪಾಲಿಸಲಾಗಿದೆ. ಅವುಗಳನ್ನಾವರಿಸಿರುವ ಔದಾರ್ಯತೆಯು ಎಷ್ಟರಮಟ್ಟಿಗಿದೆಯೆಂದರೆ, ಭೂಮಿಯಲ್ಲಿ ಅದು ಕೇವಲ ಅಲ್ಲಾಹನ ಕೃಪೆಯ ಒಂದಂಶವಾಗಿದೆ. “…ಅವನ ಸೃಷ್ಟಿಯು ಪರಸ್ಪರ ಕರುಣಾಜನಕವಾಗಿದೆ. ಎಷ್ಟರಮಟ್ಟಿಗೆಯೆಂದರೆ, ತನ್ನ ಮರಿಯನ್ನು ತುಳಿದುಬಿಡುವೆನೆಂಬ ಭಯದಿಂದ ಕುದುರೆಯೂ ತನ್ನ ಕಾಲನ್ನು ಮೇಲಕ್ಕೆತ್ತಿಕೊಳ್ಳುತ್ತದೆ.” ಪರಮ ಕರುಣಾಮಯಿ ಸೃಷ್ಟಿಕರ್ತನು ತನ್ನ ಎಲ್ಲಾ ಸೃಷ್ಟಿಯು – ಸಮುದ್ರದಾಳದಲ್ಲಿರುವ ಮೀನಿನಿಂದ ಹಿಡಿದು ಭೂಮಿಯಲ್ಲಿರುವ ಕ್ರಿಮಿಗಳು ಮತ್ತು ಆಕಾಶದಲ್ಲಿ ಹಾರಾಡುವ ಹಕ್ಕಿಗಳು- ಎಲ್ಲವೂ ಜೀವನಾಧಾರವನ್ನು ಪಡೆಯುವಂತೆ ನೋಡಿಕೊಳ್ಳುತ್ತಾನೆ.
ಅಲ್ಲಾಹನ ಅನುಗ್ರಹಗಳನ್ನು ನಮ್ಮ ಮೇಲೆ ಹೇಗೆ ವೃದ್ಧಿಸುವುದು
ಅಲ್ಲಾಹನ ಕೃಪೆಯಿಂದಾಗಿಯೇ, ಅವನು ನಮ್ಮನ್ನು ಕ್ಷಮಿಸುವ ಮತ್ತು ಸನ್ಮಾರ್ಗವನ್ನನುಸರಿಸಿದಲ್ಲಿ ನಮ್ಮನ್ನು ಮನ್ನಿಸುವ ಪ್ರಮಾಣವನ್ನಿತ್ತಿದ್ದಾನೆ. ಅಲ್ಲಾಹನು ಹೇಳುತ್ತಾನೆ,
“ಮತ್ತು ಪಶ್ಚಾತ್ತಾಪಪಟ್ಟು ಸತ್ಯವಿಶ್ವಾಸವಿರಿಸುವ (ನನ್ನ ಏಕತೆಯಲ್ಲಿ ಸತ್ಯವಿಶ್ವಾಸವಿರಿಸಿ, ಆರಾಧನೆಯಲ್ಲಿ ನನ್ನೊಂದಿಗೆ ಯಾರನ್ನೂ ಸಹಭಾಗಿಯಾಗಿಸದವನು) ಮತ್ತು ಸತ್ಕರ್ಮಗಳನ್ನೆಸಗುತ್ತ, ಅದರಲ್ಲಿ ಸ್ಥಿರವಾಗಿರುವ ವ್ಯಕ್ತಿಗೆ, ನಿಶ್ಚಯವಾಗಿಯೂ, ನಾನು ಮಹಾ ಕ್ಷಮಾಶೀಲನಾಗಿದ್ದೇನೆ” ಕುರ್‍ಆನ್ 20:82.
ಸತ್ಯವಿಶ್ವಾಸದ ಒಂದು ಬೇಡಿಕೆ, ಅಲ್ಲಾಹನ ಅಂತಿಮ ಸಂದೇಶವಾಹಕ ಮುಹಮ್ಮದ್‍ರ(ಅವರ ಮೇಲೆ ಶಾಂತಿ ಇರಲಿ) ಮೇಲೆ ವಿಶ್ವಾಸವಿರಿಸಿ, ಅವರನ್ನನುಸರಿಸುವುದೂ ಆಗಿರುತ್ತದೆ.
ಸಂಕ್ಷಿಪ್ತವಾಗಿ, ಅಲ್ಲಾಹನ ಕೃಪೆಯನ್ನು ಅಧಿಕವಾಗಿ ಸವಿಯುವವರು ಯಾರೆಂದರೆ,- ಅಲ್ಲಾಹನ ಕೃಪೆ ಮತ್ತು ಅನುಗ್ರಹಗಳನ್ನು ಅಂಗೀಕರಿಸುವವರು; ಅದನ್ನು ಅಲ್ಲಾಹನು ಸಂತುಷ್ಟಗೊಳ್ಳುವ ಹಾದಿಯಲ್ಲಿ ಬಳಸುವವರು; ಅಲ್ಲಾಹನು ದಯಪಾಲಿಸಿರುವ ಸಂಪತ್ತನ್ನು ದಾನಧರ್ಮಗಳಲ್ಲಿ ಮತ್ತು ನಿರ್ಗತಿಕರ ಪಾಲನೆ-ಪೋಷಣೆಗಾಗಿ ಬಳಸುವವರು; ಅನಾಥರ ಕಲ್ಯಾಣಕ್ಕಾಗಿ ಶ್ರಮಿಸುವವರು, ಅಲ್ಲಾಹನ ಕೊಡುಗೆಯಾದ ವಾಕ್‍ಸಾಮಥ್ರ್ಯವನ್ನು ಒಳ್ಳೆಯ ಮಾತಾಡಲು ಬಳಸುವವರು ಮತ್ತು ಅಲ್ಲಾಹನು ಆಜ್ಞಾಪಿಸಿರುವ ಇನ್ನುಳಿದ ಗೌರವಪೂರ್ಣ ಕಾರ್ಯಗಳಲ್ಲಿ ತೊಡಗುವವರು ಆಗಿರುತ್ತಾರೆ.
ಅಲ್ಲಾಹನ ಅಚಿತಿಮ ಸಂದೇಶವಾಹಕ ಮುಹಮ್ಮದ್(ಅವರ ಮೇಲೆ ಶಾಂತಿ ಇರಲಿ) ಹೇಳಿದರು: “ಅಲ್ಲಾಹ್, ಜನರ ಮೇಲೆ ಕರುಣೆ ತೋರುವವರಿಗಾಗಿ ಕೃಪಾಶಾಲಿಯಾಗಿರುವನು. ಭೂಮಿಯಲ್ಲಿರುವವರ ಮೇಲೆ ಕರುಣೆ ತೋರಿರಿ – ಆಕಾಶದಲ್ಲಿರುವವನು ನಿಮ್ಮ ಮೇಲೆ ಕರುಣೆ ತೋರುವನು”
ಈ ಕೆಳಗೆ ಅಲ್ಲಾಹನ ಕೃಪೆಯನ್ನು ಸಿದ್ಧಿಸುವ ಕೆಲವು ಮಾರ್ಗಗಳನ್ನು ತಿಳಿಸಲಾಗಿದೆ,
“ಅಲ್ಲಾಹ್ ಮತ್ತು ಅಲ್ಲಾಹನ ಸಂದೇಶವಾಹಕರನ್ನು ಅನುಸರಿಸಿರಿ, ತನ್ಮೂಲಕ ಕೃಪೆಯನ್ನರಸಿರಿ”ಕುರ್‍ಆನ್ 3:132
ಕುರ್‍ಆನ್‍ನಲ್ಲಿರುವ ಔದಾರ್ಯತೆಯ ಮತ್ತು ನ್ಯಾಯಪೂರ್ಣ ಶಿಕ್ಷಣವನ್ನನುಸರಿಸುವ ಮೂಲಕ: “ಮತ್ತು ಇದು ನಾವು ಅವತರಿಸಿರುವ ಅನುಗ್ರಹಭರಿತ ಗ್ರಂಥವಾಗಿದೆ; ಆದ್ದರಿಂದ ಇದನ್ನು ಅನುಸರಿಸಿರಿ ಮತ್ತು (ಕೆಟ್ಟ ಕಾರ್ಯಗಳಿಂದ) ನಿಮ್ಮನ್ನು ರಕ್ಷಿಸಿಕೊಳ್ಳಿ, ಹೀಗೆ ನಿಮ್ಮ ಮೇಲೆ ಕರುಣೆ ತೋರಲಾಗುವುದು” ಕುರ್‍ಆನ್ 6:155
ನಮಾಝ್‍ಅನ್ನು ಸಂಸ್ಥಾಪಿಸಿರಿ ಮತ್ತು ಕಡ್ಡಾಯ ದಾನವನ್ನು (ನಿರ್ಗತಿಕರಿಗೆ) ನೀಡಿರಿ ಮತ್ತು ಸಂದೇಶವಾಹಕರನ್ನನುಸರಿಸಿರಿ, ಆ ಮೂಲಕ ನಿಮ್ಮ ಮೇಲೆ ಕರುಣೆ ತೋರಲಾಗಲೆಂದು” ಕುರ್‍ಆನ್ 24:56
ಪ್ರಾಮಾಣಿಕವಾಗಿ, ಆಲ್ಲಾಹನಿಂದ ಕರುಣೆಯನ್ನು ಯಾಚಿಸುವುದು. “ಓ ನಮ್ಮ ಪ್ರಭು! ನೀನು ನಮ್ಮನ್ನು ಸನ್ಮಾರ್ಗದಲ್ಲಿ ನಡೆಸಿದ ನಂತರ ನಮ್ಮ ಹೃದಯವನ್ನು ಪಥಭೃಷ್ಟತೆಯಲ್ಲಿ ಬೀಳಲು ಬಿಡದಿರು, ಮತ್ತು ನಮ್ಮ ಮೇಲೆ ನಿನ್ನ ಕರುಣೆಯನ್ನು ದಯಪಾಲಿಸು; ನಿಶ್ಚಯವಾಗಿಯೂ, ನೀನು ಪರಮ ದಯಾಮಯನು.” ಕುರ್‍ಆನ್ 3:8
ಕೃಪೆ ಮತ್ತು ಉತ್ತರವಾದಿತ್ವ
ಅಲ್ಲಾಹನು ಪರಮ ಕರುಣಾಮಯಿಯಾಗಿರುವ ಜೊತೆಗೆ ನ್ಯಾಯವನ್ನು ಪರಿಪಾಲಿಸುವವನೂ ಆಗಿರುವನು.
“ನಿಶ್ಚಯವಾಗಿಯೂ, ಧರ್ಮನಿಷ್ಠರಿಗಾಗಿ ಅವರ ಪ್ರಭುವಿನ ಬಳಿ ಹರ್ಷಭರಿತ ಉದ್ಯಾನಗಳಿವೆ. ನಾವು ಸತ್ಯವಿಶ್ವಾಸಿಗಳನ್ನೂ ಸತ್ಯನಿಷೇಧಿಗಳಂತೆಯೇ ನಡೆಸಿಕೊಳ್ಳಬೇಕೆ? ನಿಮಗೇನಾಗಿದೆ? ಹೇಗೆ ನೀವು ನ್ಯಾಯ ಪರಿಪಾಲಿಸುವಿರಿ? ಕುರ್‍ಆನ್ 68:34-36
ಅಲ್ಲಾಹನು ಪರಮ ಕರುಣಾಮಯಿ, ಅಂತಯೇ, ತೀರ್ಮಾನ ಪಡೆಯುವಲ್ಲಿಯೂ ಅವನು ಅತಿ ಶೀಘ್ರನು. ನಿಷ್ಠೆಯಿಂದ ಪರಿತಪಿಸುವ ಮತ್ತು ಪಾಪಗಳನ್ನು ಪುನಃ ಮರುಕಳಿಸಲಾರೆನೆಂದು ದೃಢಸಂಕಲ್ಪ ಕೈಗೊಳ್ಳುವ ಹೊರತು ಅಲ್ಲಾಹನನ್ನು ವಂಚಿಸಿ, ಅವನ ಕೃಪೆಯ ಲಾಭವನ್ನು ಪಡೆಯಲು ಯಾರಿಂದಲೂ ಸಾಧ್ಯವಿಲ್ಲ.
“ಮತ್ತು ಪಾಪಕಾರ್ಯಗಳನ್ನು ಮಾಡುತ್ತಲೇ ಸಾಗುತ್ತಿದ್ದು ಮರಣವು ಆಸನ್ನವಾದಾಗ, ‘ಈಗ ನಾನು ಪಶ್ಚಾತ್ತಾಪ ಪಟ್ಟೆನು’ ಎಂದು ಹೇಳುವ ಮತ್ತು ಸತ್ಯನಿಷೇಧದ ಸ್ಥಿತಿಯಲ್ಲಿಯೇ ಸಾವನ್ನಪ್ಪುವ ವ್ಯಕ್ತಿಯ ಮರುಗುವಿಕೆ ಎಷ್ಟುಮಾತ್ರಕ್ಕೂ ಫಲಕಾರಿಯಾಗದು” ಕುರ್‍ಆನ್ 4:18
ಮುಸ್ಲಿಮರಿಗೆ, ತಮ್ಮಿಂದಾಗಬಹುದಾದ ಪಾಪಕಾರ್ಯಗಳ ಕುರಿತು ಜಾಗರೂಕರಾಗಿದ್ದು, ಉತ್ತಮ ಕಾರ್ಯಗಳಿಗಾಗಿ ಪ್ರತಿಫಲವನ್ನೂ ನಿರೀಕ್ಷಿಸಲು ಪ್ರೇರೇಪಿಸಲಾಗಿದೆ. ಅವರಿಂದೇನಾದರೂ ಪಾಪವಾದರೆ, ಅವರು ನಿಷ್ಠಯಿಂದ ಪ್ರಾಮಾಣಿಕವಾಗಿ ಪಶ್ಚಾತ್ತಾಪ ಪಡುವರು ಮತ್ತು ಕ್ಷಮಿಸಲ್ಪಡುವ ನಿರೀಕ್ಷೆಯಿಂದಿರುವರು. ಅಂತಿಮವಾಗಿ, ಅವರು ತಮ್ಮ ಸೃಷ್ಟಿಕರ್ತನ ವಾಗ್ದಾನಗಳಿಂದ ಸಂತೃಪ್ತರಾಗುವರು ಮತ್ತು ತಮ್ಮ ಹೃದಯಕ್ಕೆ ಹತ್ತಿರವಾಗಿಟ್ಟುಕೊಳ್ಳುವರು:
“ಅವನು ಸಹಾನುಭೂತಿಯುಳ್ಳವನೂ, ಪ್ರಶಂಸಾರ್ಹನೂ ಆಗಿರುವನು.” ಕುರ್ಆನ್ 22:65
ಇಸ್ಲಾಮನ್ನು ಅನ್ವೇಷಿಸಿ





ಅಲ್ಲಾಹ್
ನಂಬಿಕೆ




ಪವಿತ್ರೀಕರಣ
ಅಹದೀತ್ ಹೇಳಿಕೆಗಳು
ಇಸ್ಲಾಮ್ ಮತ್ತು ಶಾಸ್ತ್ರಗಳು





ಪ್ರವಾದಿಗಳು


ಜೀವನ ಚರಿತ್ರೆಗಳು








ಇಸ್ಲಾಮಿನ ಇತಿಹಾಸ
ಇಸ್ಲಾಮಿನ ಕಾನೂನು






ಇಸ್ಲಾಮ್ ಜೀವನಶೈಲಿ-ಸಂಸ್ಕೃತಿ


ಇಸ್ಲಾಮಿನಲ್ಲಿ ಮೂಲಭೂತ ಹಕ್ಕುಗಳು
ಪ್ರಚಲಿತ ವಿದ್ಯಮಾನ
ಮಾಸ ಪತ್ರಿಕೆಗಳು
ಅರೇಬಿಕ್
