بسم الله الرحمن الرحيم
ಪರಮದಯಮಯನು ಕರುಣಾನಿಧಿಯೂ ಆದ ದೇವನ ನಾಮದಿಂದ
ಖುರ್‍ಆನ್ ಎಂಬ ಅದ್ಭುತ
1) ಖುರ್‍ಆನ್ ಒಂದು ಸರ್ವಕಾಲಿ ಅದ್ಬುತ ಪುಸ್ತಕವಾಗಿದ್ದು ಪ್ರಪಂಚದಲ್ಲಿರುವ ಕೊಟ್ಯಾಂತರ ಮಾನವರಿಗೆ 1435 ವರ್ಷಗಳಿಂದ ಇಂದಿನವರೆಗೂ ಅದ್ಭುತವಾದ ದಾರಿದೀಪವಾಗಿದೆ.
2) ಮನುಷ್ಯನು ದೇಶ-ಪ್ರದೇಶ, ವರ್ಣ-ವರ್ಗ, ಜಾತಿ-ಮತ, ಕುಲ-ಗೋತ್ರಗಳನ್ನು ಸೃಷ್ಟಿಸಿಕೊಂಡು ವಿಭಿನ್ನ ರೀತಿಯಲ್ಲಿ ಗುರುತಿಸಲ್ಪಟ್ಟರೂ ಇವರೆಲ್ಲರನ್ನು ಒಂದು ಗೂಡಿಸುವ ಸತ್ಯ ನಿದರ್ಶನವಾಗಿದೆ ಖುರ್‍ಆನ್.
3) ಇಡೀ ಪ್ರಪಂಚದಲ್ಲಿರುವ ಯಾವುದೇ ಸಾಹಿತ್ಯಿಕ ಗ್ರಂಥಗಳಿಗೆ ಇರದೇ ಇರುವಂತಹ ಸತ್ಯವನ್ನು ಸಾರುವಂತಹ ಗುಣ ವಿಶೇಷತೆಗಳು ಈ ಗ್ರಂಥಕ್ಕಿದೆ.
ಏಕೈಕನಾಗಿರುವ ಸೃಷ್ಟಿಕರ್ತನೇ ಇದರ ಕರ್ತೃ ಎಂದು ಹೇಳುತ್ತಿದೆ.
“ಇದು ಮಹಾ ಪ್ರಬಲನೂ ಯುಕ್ತಿವಂತನೂ ಆಗಿರುವಾತನ ಕಡೆಯಿಂದ ಇಳಿಸಿ ಕೊಡಲಾಗಿರುವ ಗ್ರಂಥ” ಖುರ್‍ಆನ್.45:2
ಇದು (ಖುರ್‍ಆನ್) ನೂರಕ್ಕೆ ನೂರರಷ್ಟು ಸಂದೇಹ ರಹಿತವಾಗಿದೆ ಎಂದು ಸಾರುತ್ತದೆ. “ಈ ಗ್ರಂಥ ಸಂದೇಹಾತೀತವಿದು, ಭಯ ಭಕ್ತಿ ಉಳ್ಳವರಿಗೆ ಸರಿದಾರಿಯನ್ನು ತೋರಿಸುವ ಮಾರ್ಗದರ್ಶಿ” ಖುರ್‍ಆನ್. 2:2
ಇದು ಕೊಂಚವೂ ವೈರುಧ್ಯಗಳಿಲ್ಲವೆಂದು ಹೇಳಿಕೊಳ್ಳುತ್ತಾ ನಮಗೆ ತಿಳಿಸುತ್ತದೆ. “ಅವರನ್ನು, ಖುರ್‍ಆನ್ ಕುರಿತು ಚಿಂತನೆ ನಡೆಸುವುದಿಲ್ಲವೇ? ಒಂದು ವೇಳೆ ಇದು ದೇವನ ಹೊರತು ಬೇರೆ ಯಾರ ಕಡೆಯಿಂದ ಬಂದಿದ್ದರೂ, ಅವರು ಇದರಲ್ಲಿ ಹಲವು ವಿರೋಧಾಭಾಸಗಳನ್ನು ಕಾಣುತ್ತಿದ್ದರು.” ಖುರ್‍ಆನ್.4:82.
ಇದು ಇಡೀ ಮಾನವ ಜನಾಂಗಕ್ಕೆ ಉಪದೇಶ ನೀಡುತ್ತದೆ. “ಮಾನವರೇ ಇದೋ ಬಂದಿದೆ ನಿಮ್ಮೊಡನೆ ನಿಮ್ಮ ಒಡೆಯನ ಕಡೆಯಿಂದ ಒಂದು ಉಪದೇಶ (ಖುರ್‍ಆನ್). ನಿಮ್ಮ ಮನಸ್ಸುಗಳಲ್ಲಿರುವ ಎಲ್ಲದಕ್ಕೂ ಇದು ಪರಿಹಾರವಾಗಿದೆ. ಹಾಗೆಯೇ ಇದು ನಂಬುವವರ ಪಾಲಿಗೆ ಮಾರ್ಗದರ್ಶಿ ಹಾಗೂ ಅನುಗ್ರಹವಾಗಿದೆ.” ಖುರ್‍ಆನ್.10:57
ಬೌದ್ಧಿಕ ಶಕ್ತಿಯಿಂದ ಆಲೋಚಿಸಿ ಇದನ್ನು ಒಪ್ಪಿಕೊಳ್ಳಿರಿ ಇಲ್ಲದಿದ್ದರೆ ಇದು ಎಚ್ಚರಿಕೆ ನೀಡುತ್ತದೆ. “ನಾವು ನಮ್ಮ ದಾಸನಿಗೆ ಇಳಿಸಿ ಕೊಟ್ಟಿರುವುದರ (ಖುರ್‍ಆನ್) ಕುರಿತು ನಿಮಗೆ ಸಂಶಯವಿದ್ದರೆ, ಅಂತಹ ಒಂದು ಅಧ್ಯಾಯವನ್ನಾದರೂ ನೀವು ರಚಿಸಿ ತನ್ನಿರಿ ಮತ್ತು ಅದಕ್ಕಾಗಿ ದೇವನ ಹೊರತು ನಿಮ್ಮೆಲ್ಲ ಸಹಾಯಕರನ್ನೂ ಕರೆಯಿರಿ – ನೀವು ಸತ್ಯವಂತರಾಗಿದ್ದರೆ (ಇಷ್ಟನ್ನು ಮಾಡಿರಿ).”
“ನಿಮಗೆ ಅದನ್ನು ಮಾಡಲಾಗದಿದ್ದರೆ ಮತ್ತು ಖಂಡಿತ ನಿಮಗೆ ಅದನ್ನು ಮಾಡಲಾಗುವುದಿಲ್ಲ. ಮನುಷ್ಯರು ಮತ್ತು ಕಲ್ಲುಗಳೇ ಇಂಧನವಾಗಿರುವ (ನರಕದ) ಬೆಂಕಿಗೆ ಅಂಜಿರಿ. ಸತ್ಯ ಧಿಕ್ಕಾರಿಗಳಿಗಾಗಿ ಅದನ್ನು ಸಿದ್ಧಪಡಿಸಲಾಗಿದೆ.” ಖುರ್‍ಆನ್. 2:23,24.
ಹೌದು, ಸಹೋದರರೆ, ನಮ್ಮ ಬುದ್ದಿಗೆ ಸವಾಲೆಸೆದು ತನ್ನನ್ನು ಯೋಚಿಸಿ ವಿಚಾರಿಸಿ, ಅವಲೋಕಿಸಿ ಒಪ್ಪಿಕೊಳ್ಳಿ ಎಂದು ಹೇಳುವ ಗ್ರಂಥವೇ ‘ಖುರ್‍ಆನ್’, ಈ ಲೋಕವನ್ನು ಸೃಷ್ಟಿಮಾಡಿ ಪರಿಪಾಲನೆ ಮಾಡುತ್ತಿರುವ ಏಕೈಕ ದೇವನು ನಮ್ಮೆಲ್ಲರಿಗಾಗಿ ಕಳುಹಿಸಿರುವ ಈ ಅಂತಿಮ ವೇದ ಗ್ರಂಥವೇ ಪವಿತ್ರ ಖುರ್‍ಆನ್.
ಪವಿತ್ರ ಖುರ್‍ಆನ್ ಎಲ್ಲರಿಗಾಗಿಯೇ?
ಹೌದು ಈ ಪವಿತ್ರ ಖುರ್‍ಆನ್ ಸರ್ವ ಮಾನವಕುಲಕ್ಕಾಗಿ ಆಗಿದೆ. ಏಕೆಂದರೆ ಇದು ನಮ್ಮನ್ನು ಸೃಷ್ಟಿಮಾಡಿ ಪರಿಪಾಲನೆ ಮಾಡುತ್ತಿರುವ ದೇವನಿಂದ ನಮಗೆ ಕಳುಹಿಸಲ್ಪಟ್ಟಿರುವ ಸಂದೇಶ.
- ಅವನು ನಮ್ಮನ್ನು ಏಕೆ ಸೃಷ್ಟಿಸಿದ್ದಾನೆ?
- ಇಲ್ಲಿ ನಾವು ಹೇಗೆ ಬದುಕಬೇಕು?
- ಉತ್ತಮವಾಗಿ ಬದುಕಿದರೆ ನಮಗಿರುವ ಲಾಭಗಳೇನು?
- ಇಲ್ಲದಿದ್ದರೆ ನಷ್ಟಗಳೇನು?
ಎಂಬುದರ ಬಗ್ಗೆ ದೀರ್ಘವಾಗಿ, ಸ್ಪಷ್ಟವಾಗಿ, ಸರಳ ಸುಲಲಿತವಾಗಿ, ಸಂದೇಹ ರಹಿತವಾಗಿ ತಿಳಿಸುವ ಹಾಗೂ ನನ್ನ ನಿಮ್ಮೆಲ್ಲರ ದೇವನ ಕುರಿತು ನಿರ್ದೆಶನಗಳ ಮೂಲಕ ವ್ಯಾಖ್ಯಾನಿಸುವ ಗ್ರಂಥ ಖುರ್ ಆನ್ ಅಗಿದೆ. ಇದು - ಪರಲೋಕದ ಬದುಕಿನಲ್ಲಿ ಒಳಿತು ಯಾವುದು?
- ಕೇಡು ಯಾವುದು?
- ತಪ್ಪು ಸರಿ ಯಾವುದು?
ಎಂಬುವುದು ಸ್ಪಷ್ಟವಾಗಿ ಪ್ರತ್ಯೇಕಿಸಿ ತಿಳಿಸಿ ಕೊಡುತ್ತದೆ. ಈ ಗ್ರಂಥವನ್ನು ಬಳಸಿಯೇ ಅಂತಿಮ ದಿನದಂದು ಎಲ್ಲಾ ಮನುಷ್ಯರನ್ನು ವಿಚಾರಿಸಲಾಗುತ್ತದೆ. ಈ ಮೇಲಿನ ಕಾರಣಗಳಿಂದ ಪ್ರಸಕ್ತ ಕಾಲದಲ್ಲಿ ಭೂಮಿಯ ಮೇಲಿರುವ ಸರ್ವರೂ ಈ ಗ್ರಂಥವನ್ನು ಖಂಡಿತವಾಗಿ ಓದಿ ಅನುಸರಿಸಬೇಕಾಗಿದೆ.
ಖುರ್‍ಆನ್ ವಿಷೇಷತೆಗಳು
ಸರಿಸುಮಾರು 1435 ವರ್ಷಗಳ ಹಿಂದೆ ಅರೇಬಿಯಾದಲ್ಲಿರುವ ಮಕ್ಕಾ ನಗರದಲ್ಲಿ ಬದುಕಿದ ಅಂತಿಮ ಸಂದೇಶವಾಹಕ ಮುಹಮ್ಮದ್{ಸ} ಕಾಲದಲ್ಲಿ ಜಿಬ್ರಯೀಲ್ (ಅ.ಸ.) ಎಂಬ ದೇವದೂತರ ಮೂಲಕ ಸ್ವಲ್ಪಸ್ವಲ್ಪವಾಗಿ ದೇವನು ಅವತರಿಸಿದ ಸತ್ಯಸಂದೇಶಗಳನ್ನು ಒಂದುಗೂಡಿಸಿದ ಸಂಪೂರ್ಣ ಭಾಗವೇ ಪವಿತ್ರ ಖುರ್‍ಆನ್ ಆಗಿದೆ. ಈ ಗ್ರಂಥವು ಹೊಂದಿರುವ ತನ್ನ ಮಧುರತೆಯಿಂದಲೂ ಸ್ಪಷ್ಟ ವಿಚಾರ ಧಾರೆಯಿಂದಲೂ ಅಂದಿನಿಂದ ಇಂದಿನವರೆಗೂ ಮನುಷ್ಯರ ಹೃದಯಗಳನ್ನು ಆಕರ್ಶಿಸಿದೆ. ಉತೃಷ್ಟವಾದ ಗ್ರಂಥ ಮತ್ತೊಂದಿಲ್ಲ. ಇದನ್ನು ಸತ್ಯವಿಶ್ವಾಸಗಳು ಪ್ರತಿದಿನವೂ ಮತ್ತೆ ಮತ್ತೆ ಓದುತ್ತಲೇ ಇದ್ದಾರೆ.
ಈ ಪವಿತ್ರ ಖುರ್‍ಆನನ್ನು ಪ್ರಪಂಚದ ಎಲ್ಲಾ ಮುಸ್ಲೀಮರು ಮೂಲ ಭಾಷೆಯಾದ ಅರಬೀ ಭಾಷೆಯಲ್ಲಿಯೇ ನಮಾಜಿನಲ್ಲಿ ಹಾಗೂ ಇತರ ಪಠಣದಲ್ಲಿ ಓದುತ್ತಿರುವುದನ್ನು ನೀವೂ ಕೂಡ ನೋಡಿರಬಹುದು. ಪ್ರಮಾಣಿಕವಾಗಿ ರಮದಾನಿನ ತಿಂಗಳಿನಲ್ಲಿ ಹೆಚ್ಚು ಜನರು ಸಂಪೂರ್ಣ ಖುರ್‍ಆನ್‍ನ್ನು ಓದಿ ಮುಗಿಸುವರು. `ಖುರ್‍ಆನ್ ಎಂಬ ಪದದ ಅರ್ಥವೇ ಪುನರಾವರ್ತನೆ ಅಥವಾ ಪುನರಾವರ್ತಿಸಿ ಓದುವುದು ಎಂದಾಗಿದೆ’.
ಅತ್ಯಂತ ಅಮೂಲ್ಯ ರೀತಿಯಿಂದ ರಕ್ಷಿಸಲ್ಪಟ್ಟ ಗ್ರಂಥ
ಆರಂಭ ಕಾಲದಿಂದಲೂ ಇಂದಿನವರೆಗೂ ಪ್ರಪಂಚದಾದ್ಯಂತ ಅಸಂಖ್ಯಾತ ಜನರು ಕಂಠ ಪಾಠ ಮಾಡಿದ್ದಾರೆ. ಖುರ್‍ಆನಿನ ವಚನಗಳು ಮಾನವರ ಮನ ಮಸ್ತಿಷ್ಕದಲ್ಲಿ ಹಾಗೂ ಲಿಖಿತ ರೂಪದ ಪ್ರತಿಗಳಲ್ಲಿ ಇಂದಿಗೂ ಸಂರಕ್ಷಿಸಲ್ಪಟ್ಟಿದೆ. ಪ್ರಪಂಚದ ಯಾವೂದೇ ಮೂಲೆಯಲ್ಲಿ ಯಾವುದೇ ಭಾಷೆಯಲ್ಲಿ ನೀವು ಅದರ ಅನುವಾದಿತ ಪ್ರತಿಗಳನ್ನು ತೆಗೆದುಕೊಂಡರೆ ಅದರಲ್ಲಿ ಮೂಲಭಾಷೆಯಾದ ಅರಬಿಯಾದಲ್ಲಿರುವುದನ್ನು ನೀವು ನೋಡಬಹುದು. ಈ ಪ್ರಪಂಚದ ಅಂತ್ಯದಿನದವರೆಗೂ ಪ್ರಪಂಚದ ಸರ್ವರಿಗೂ ಇದುವೇ ಅಂತಿಮ ವೇದ ಗ್ರಂಥ. ಇದನ್ನು ಕಾಪಾಡುವ ಹೊಣೆಯನ್ನು ಅಲ್ಲಾಹನು ಸ್ವತಃ ತಾನೆ ತೆಗೆದುಕೊಂಡಿದ್ದಾನೆ.
“ಖಂಡಿತವಾಗಿಯೂ ನಾವೇ ಈ ದಿವ್ಯ ಬೋಧನೆಯನ್ನು ಇಳಿಸಿಕೊಟ್ಟವರು ಮತ್ತು ಖಂಡಿತವಾಗಿಯೂ ನಾವೇ ಇದರ ಸಂರಕ್ಷಕರಾಗಿದ್ದೇವೆ.” ಖುರ್‍ಆನ್ 15:9
ಈ ಪವಿತ್ರ ಖುರ್‍ಆನ್ ನ್ನು ಬರೆದವರು ಸಂದೇಶವಾಹಕ ಮುಹಮ್ಮದ್.ಸ. ರವರೆ?
ಖಂಡಿತ ಇಲ್ಲ.. …ಸಂದೇಶವಾಹಕ ಮುಹಮ್ಮದ್ (ಸ) ರವರು ಓದು ಬರಹ ಅರಿಯದೇ ಇರುವವರಾಗಿದ್ದರು. ಅಲ್ಲಾಹನು ಅವರಿಗೆ ದೇವದೂತರಾದ ಜಿಬ್ರಯಿಲ್ (ಅ.ಸ.) ರವರ ಮೂಲಕವಾಗಿ ಅವತೀರ್ಣಗೊಳಿಸಿರುವ ಸಂಪೂರ್ಣ ಸೂಕ್ತಿಗಳ ಸಂಗ್ರಹ ಪವಿತ್ರ ಖುರ್‍ಆನ್. ಈ ಪವಿತ್ರ ಖುರ್‍ಆನಿನಲ್ಲಿ ಸಂದೇಶವಾಹಕ ಮುಹಮ್ಮದ್.ಸ. ರವರು ಸಹ ಸೇರಿದಂತೆ ಪ್ರಪಂಚದ ಇತರ ಯಾವುದೇ ವ್ಯಕ್ತಿಯ ಸ್ವರಚಿತ ವಚನಗಳು, ಸೂಕ್ತಿಗಳು, ಸೇರ್ಪಡೆಯಾಗದೇ, ಅಂದಿನಿಂದ ಇಂದಿನವರೆಗೆ ಇದು ಸಂರಕ್ಷಿಸಲ್ಪಟ್ಟಿದೆ. ಸಂದೇಶವಾಹಕ ಮುಹಮ್ಮದ್.ಸ.ರವರ ಮಾತುಗಳನ್ನು ಅವರ ಕುರಿತು ತಿಳಿಸಿರುವ ವಾರ್ತೆಗಳು ಅವರ ಸಂಗಡಿಗರಿಂದ ಹದೀಸ್ ಎಂಬ ಹೆಸರಿನಲ್ಲಿ ಸಂಗ್ರಹಿಸಲ್ಪಟ್ಟಿದೆ.
ಪವಿತ್ರ ಖುರ್‍ಆನಿನ ಮುಖ್ಯವಾದ ಬೋಧನೆಯೇನು?
ಪವಿತ್ರ ಖುರ್‍ಆನ್ ಮುಖ್ಯವಾಗಿ 3 ನಂಬಿಕೆಯ ವಿಷಯಗಳ ಕುರಿತು ಮಾರ್ಗದರ್ಶನ ಮಾಡುತ್ತದೆ. ಅದು ಎಲ್ಲಾ ಕಾಲದಲ್ಲಿಯೂ ಬೇರೆ ಬೇರೆ ಭಾಗಗಳಲ್ಲಿ ದೇವನು ತನ್ನ ದೇವದೂತರ ಮೂಲಕ ಆಯಾ ದೇಶದ ಜನರಿಗಾಗಿ ಅವತೀರ್ಣಗೊಳಿಸಿ ಬೋಧನೆ ಮಾಡಿದ ಅಂಶಗಳಾಗಿದೆ.ಆ ಮೂರು ವಿಷಯಗಳೆಂದರೆ:
1) ಒಂದೆ ಕುಲ : ಪ್ರಪಂಚದಲ್ಲಿರುವ ಎಲ್ಲಾ ಮಾನವಕುಲದ ಜನಾಂಗವು ಒಂದೇ ಗಂಡು ಒಂದೇ ಹೆಣ್ಣಿನಿಂದ ಹುಟ್ಟಿ ಪ್ರಪಂಚದಾದ್ಯಂತ ವ್ಯಾಪಿಸಿದದ್ದಾರೆ ನಾವು ಎಲ್ಲೆ ಇದ್ದರೂ ಯಾವುದೇ ಭಾಷೆ ಮಾತನಾಡಿದರು. ನಾವೆಲ್ಲರೊ ಒಂದೆ ಕುಟುಂಬದ ಅಂಗಗಳಾಗಿದ್ದವೆ.
“ಮಾನವರೆ ನಿಮ್ಮನ್ನು ಒಂದೇ ಜೀವನದಿಂದ ಸೃಷ್ಟಿಸಿದ ಒಡೆಯಾನಿಗೆ ನಿಷ್ಠರಾಗಿರಿ ಅವನು ಅದೇ ಜೀವದಿಂದ ಅದರ ಜೊತೆಯನ್ನೂ ಸಹ ಸೃಷ್ಠಿಸಿದನು ಮತ್ತು ಅವರಿಬ್ಬರ ಮೂಲಕ ಅನೇಕಾರು ಪುರುಷರನ್ನು ಸ್ತ್ರೀಯರನ್ನು (ಲೋಕದಲ್ಲಿ) ಹಬ್ಬಿದನು ಯಾವ ಅಲ್ಲಾಹನ ಹೆಸರಿನಲ್ಲಿ ನೀವು ಹಕ್ಕುಗಳನ್ನು ಕೇಳುತ್ತಿರೊ ಅವನಿಗೆ ಸದಾ ಅಂಜಿರಿ ಮತ್ತು ಭಾಂಧವ್ಯಗಳನ್ನು ಕಾಪಾಡಿರಿ ಖಂಡಿತವಾಗಿಯೂ ಅಲ್ಲಾಹನು ನಿಮ್ಮ ಮೇಲೆ ಸದಾ ಕಣ್ಣಿಟ್ಟಿರುತ್ತಾನೆ”. ಖುರ್‍ಆನ್ 4:1 (“ಅಲ್ಲಾಹನೆಂದರೆ ಆರಾಧನೆಗೆ ಏಕೈಕ ಅರ್ಹನು)
2) ಒಬ್ಬನೆ ದೇವನು : ಸರ್ವ ಮಾನವ ಕುಲವನ್ನು ಪ್ರಪಂಚವನ್ನು ಪ್ರಪಂಚದ ಸಕಲ ಸೃಷ್ಠಿಸಿಗಳನ್ನು ಸೃಷ್ಠಿಸಿ ಪರಿಪಾಲನೆ ಮಾಡುತ್ತಿರುವ ದೇವನು ಒಬ್ಬನೆ ಅವನು ಮಾತ್ರವೇ ಆರಾಧನೆಗೆ ಅರ್ಹನಾಗಿರುವನು.
“ ಹೇಳಿ: ಅಲ್ಲಾಹನು ಏಕೈಕನು (ಅದ್ವಿತೀಯನು) ಅಲ್ಲಾಹನು ಎಲ್ಲಾ ಅಗತ್ಯತೆ ಮುಕ್ತನು (ನಿರಪೇಕ್ಷನು) ಅವನಿಗೆ ಯಾರೂ ಜನಿಸಿಲ್ಲ ಅವನು ಯಾರಿಗೂ ಜನಿಸಿದವನಲ್ಲ ಮತ್ತು ಅವನಿಗೆ ಸರಿಸಾಟಿ ಯಾರೂ ಇಲ್ಲ”(ಖುರ್‍ಆನ್ 112:1 ರಿಂದ4)
ಆ ಏಕೈಕನಾದ ಸೃಷ್ಟಿಕರ್ತನನ್ನು ಬಿಟ್ಟು ಇನ್ನುಳಿದೆಲ್ಲವು ಆತನ ಸೃಷ್ಟಿಗಳಾಗಿವೆ. ಅವನ ಬದಲಾಗಿ ಸೃಷ್ಠಿಗಳನ್ನು ಆರಾಧನೆ ಮಾದುವುದು ಮತ್ತು ನಿರ್ಜೀವ ವಸ್ತುಗಳನ್ನು ಆಕೃತಿಗಳನ್ನು ತೋರಿಸಿ ದೇವರೆನ್ನುವುದು ಅತ್ಯಂತ ಘೋರ ಪಾಪ ಮತ್ತು ಮೋಸವಾಗಿದೆ. ಈ ಕೆಲಸವು ಪರಿಶುದ್ಧನಾದ ಆ ದೇವನನ್ನು ಅವಹೇಳನ ಮಾಡಿದಂತಾಗೆದೆ. ಹಾಗು ಅದು ಮಾನವಜನಾಂಗವನ್ನು ಗುಂಪು ಗುಂಪುಗಳಾಗಿ ವಿಂಗಡಿಸುವುದೇ ಆಗಿದೆ. ಹಾಗಾಗಿ ಈ ಮಹಾ ಪಾಪವನ್ನು ದೇವನು ಎಂದಿಗೂ ಮನ್ನಿಸುವುದಿಲ್ಲ.
ಮನುಷ್ಯನು ಪಾಪವೆಸಗಬಾರದೆಂದರೆ ಆತನು ದೇವನ ಬಗ್ಗೆ ದೃಢ ನಂಬಿಕೆಹಾಗೂ ಭಯ ಭಕ್ತಿ ಉಳ್ಳವನಾಗಿರಬೇಕು ಅವನು ನನ್ನ ಪಾಪಗಳನ್ನು ಬಲ್ಲವನಾಗಿರುವನು. ಅದು ಅಂತಿಮ ದಿನದಂದು ಬಹಿರಂಗವಾಗಲಿದೆ ಎಂಬುದು ಅರಿಯಬೇಕು. ನಿರ್ಜೀವ ಮತ್ತು ಜಡ ವಸ್ತುಗಳನ್ನು ತೋರಿಸಿ ಅದೇ ದೇವರು ಎಂದು ಬೋಧಿಸುವುದರಿಂದ ಮನುಷ್ಯನಿಗೆ ನಿಜವಾದ ದೇವನ ಮೇಲಿನ ಭಯ ಇಂದು ಕಾಣೆಯಾಗಿದೆ. ಈ ನಿಜವಾದ ದೇವ ಭಯವಿಲ್ಲದುದರಿಂದ ಮನುಷ್ಯನು ಯಾವುದೇ ರೀತಿಯ ಪಾಪವನ್ನು ಮಾದಲು ತಯಾರಾಗುತ್ತಾನೆ ಅಥವ ಹಿಂಜರಿಯುವುದಿಲ್ಲ. ಇದೇ ಭೂಮಿಯ ಮೇಲೆ ಪಾಪಗಳು ಕೇಡುಗಳು ಹೆಚ್ಚಾಗಲು ಮುಖ್ಯ ಕಾರಣವಾಗಿದೆ, ಈ ಪಾಪದಿಂದಲೇ ಮನುಷ್ಯನು ಹಿಂದಿರುಗಿದರೆ ದೇವನ ಹೆಸರಿನಲ್ಲಿರುವ ಬೇಧ ಭಾವಗಳನ್ನು ಕಲ್ಪಿಸುವುದು ಬೋಧಿಸುತ್ತಿರುವುದು. ಹಾಗೂ ದೇವನ ಹೆಸರಿನಲ್ಲಿ ಮನುಷ್ಯನ ಸಂಪತ್ತು ಕೊಳ್ಳೆ ಹೊಡೆಯಲಾಗುತ್ತಿರುವ ಕಾರ್ಯಗಳು ನಿಲ್ಲುತ್ತವೆ. ಆಗ ಪ್ರಪಂಚದಲ್ಲಿ ಸಹೋದರತೆ, ಮಾನವ ಸಮಾನತೆ ಮತ್ತು ಶಾಂತಿ ಹಿಂದಿರುಗಲು ಸಾಧ್ಯವಾಗಿದೆ.
3) ಕರ್ಮಫಲ ಮತ್ತು ಪರಲೋಕ ಜೀವನ: ಈ ಲೋಕ ಒಂದು ದಿನ ಸಂಪೂರ್ಣವಾಗಿ ಸರ್ವ ನಾಶವಾಗಲಿದೆ. ಅಲ್ಲಾಹನು ಎಲ್ಲಾ ಮನುಷ್ಯರನ್ನು ಅವರವರು ಮಾಡಿರುವ ಒಳಿತು ಕೆಡುಕುಗಳ ಪ್ರತಿಫಲವನ್ನು ನೀಡಲು ಮತ್ತೆ ಪುನರ್ಜನ್ಮ ನೀಡಿ ಎಬ್ಬಿಸುವನು. ಈ ಲೋಕದಲ್ಲಿ ದೇವನ ಅಜ್ಞೆಗಳ ಪ್ರಕಾರ ಬದುಕಿದವರಿಗೆ ಸ್ವರ್ಗವು, ಅಕ್ರಮವೆಸಗಿದ ದುಷ್ಟರಿಗೆ ನರಕದ ತೀರ್ಪು ನೀಡಲಿದ್ದಾನೆ.
“ಪ್ರತಿಯೊಂದು ಜೀವವೂ ಮರಣವನ್ನು ಸವಿಯಲೇ ಬೇಕು. ಪುನರುತ್ಥಾನದಿನ ನಿಮಗೆ ನಿಮ್ಮ (ಕರ್ಮಗಳ) ಪೂರ್ಣ ಪ್ರತಿಫಲವು ಸಿಗಲಿದೆ. ಅಂದು ನರಕದಿಂದ ರಕ್ಷಿತನಾದವನು ಮತ್ತು ಸ್ವರ್ಗವನ್ನು ಪ್ರವೇಶಿಸಿದವನು ವಿಜಯಿಯಾದನು. ಇಹಲೋಕದ ಜೀವನವಂತೂ ಕೇವಲ ಒಂದು ಮೋಸದ ವ್ಯವಹಾರವೇ ಹೊರತುಬೇರೇನೂ ಅಲ್ಲ”. (ಖುರ್‍ಆನ್ 3.185.)
ಈ ಮೇಲಿರುವ ಮುಖ್ಯವಾದ ಬೋಧನೆಗಳನ್ನು ಬಿಟ್ಟು ಖುರ್‍ಆನ್ ಹೇಳುವುದು, ಮನುಷ್ಯನು ತನ್ನ ಜೀವನದಲ್ಲಿ ಎದುರಿಸಿದ ಸಮಸ್ಯೆಗಳಿಗೂ ಸಹ ಸೃಷ್ಟಿಕರ್ತನು ಕೊಡುವ ಪರಿಹಾರವಾಗಲು ಖುರ್‍ಆನ್ ಹೇಳುತ್ತದೆ. ಕುಟುಂಬ, ಮದುವೆ, ದಾಂಪತ್ಯ ಸಮಸ್ಯೆಗಳು, ಸಂತಾನವನ್ನು ಬೆಳೆಸುವುದು, ಶುಚಿತ್ವ, ಆರೋಗ್ಯ, ಸಂಪತ್ತು ಹಂಚಿಕೆ, ಅಪರಾಧ, ಒಪ್ಪಂದಗಳು, ವ್ಯಾಪಾರ, ಅರ್ಥಶಾಸ್ತ್ರ, ರಾಜಕೀಯ, ನ್ಯಾಯ ನೀತಿ ನಿಯಮಗಳು ಇವುಗಳಲ್ಲಿ ಆದ ಅಪರಾಧಗಳು, ಹೀಗೆ ಒಬ್ಬ ಮನುಷ್ಯನ ವೈಯಕ್ತಿಕ ಹಾಗೂ ಸಮೂಹದ ಸಾಮಾಜಿಕ ಬದುಕಿನ ಹಾಗೂ ಇತರೆ ವಿಭಾಗಗಳಿಗೆ ಸಂಬಂಧಿಸಿದ ಎಲ್ಲಾ ವಿಭಾಗಗಳ ಕುರಿತು ಅತ್ಯುತ್ತಮ ಪರಿಹಾರ ಹಾಗೂ ಮಾರ್ಗದರ್ಶನವನ್ನು ಪವಿತ್ರ ಖುರ್‍ಆನ್ ಮಾಹಿತಿ ನೀಡುತ್ತಿದೆ. ಹಾಗು ತೀರ್ಪನ್ನು ನೀಡುತ್ತಿದೆ. ಅದನ್ನು ಒಪ್ಪಿ ಆ ದಾರಿಯಲ್ಲಿ ಬದುಕನ್ನು ಸಾಗಿಸುವವರಿಗೆ ಇಹಲೋಕದಲ್ಲಿ ಶಾಂತಿ ಸಿಗುತ್ತದೆ. ಹಾಗೂ ಪರಲೋಕದಲ್ಲಿ ಸ್ವರ್ಗ ಸುಖ ಸಿಗಲಿದೆ. ಯಾರು ಇದನ್ನು ಧಿಕ್ಕರಿಸುವರೊ ಅವರಿಗೆ ಇಹಲೋದಲ್ಲಿ ಆ ಶಾಂತಿಯೂ ಹಾಗೂ ಪರಲೋಕದಲ್ಲಿ ನರಕಕಾದಿದೆ.
ನಮಗೆ ಅರ್ಥವಾಗುವ ರೀತಿಯಲ್ಲಿ ಕನ್ನಡ ಭಾಷೆಯಲ್ಲಿ ಖುರಾನ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು,
ಇಂತಿ
ಸುರೇಶ ಎನ್@ಎಂ.ಡಿ ಸುಹೈಲ್
ಧನ್ಯವಾದಗಳು ಸಹೋದರ