ಅಬ್ದುಲ್ಲಾಹ್ ಬಿನ್ ’ಉಮರ್(ರ) ವರದಿ ಮಾಡಿದಂತೆ,
ಅಲ್-ಷಾಮ್‌ಗೆ”ಉಮರ್ ಬಿನ್ ಖತ್ತಾಬ್(ರ) ಬಂದಾಗ, ಅಬೂ ’ಉಬೈದ(ರ)ರಿಗೆ ಹೇಳಿದರು: “ನಮ್ಮನ್ನು ನಿಮ್ಮ ಮನೆಗೆ ಕರೆದೊಯ್ಯಿರಿ.” ಅಬೂ ’ಉಬೈದ(ರ)ರು ಕೇಳಿದರು, “ನನ್ನ ಮನೆಯಲ್ಲಿ ಏನು ಮಾಡುವಿರಿ?” ’ಉಮರ್(ರ) ಹೇಳಿದರು, “ಹಾಗೆಯೇ ಅಲ್ಲಿಗೆ ಕರೆದೊಯ್ಯಿರಿ” ಅಬೂ ’ಉಬೈದ(ರ) ಹೇಳಿದರು, “(ಕರೆದೊಯ್ದರೆ) ನೀವು ನಮ್ಮನ್ನು ನೋಡಿ ಕಣ್ಣೀರು ಹರಿಸುವಿರಷ್ಟೇ.” ಅವರು ಮನೆಯನ್ನು ಪ್ರವೇಶಿಸಿದಾಗ ಅದರಲ್ಲಿ ಏನನ್ನೂ(ಪೀಠೋಪಕರಣಗಳ ಸಜ್ಜುಗೊಳಿಸಿರುವಿಕೆಯನ್ನು) ಕಾಣಲಿಲ್ಲ. ’ಉಮರ್(ರ) ಕೇಳಿದರು, “ನಿಮ್ಮ ವಸ್ತುಗಳೆಲ್ಲಿ? ಚಿಂದಿ, ನೀರಿನ ಚೀಲ ಮತ್ತು ತಟ್ಟೆಯ (ಹರಿವಾಣವ)ನ್ನು ಹೊರತುಪಡಿಸಿದರೆ ನಾನು ಇನ್ನೇನನ್ನೂ ಕಾಣುತ್ತಿಲ್ಲ. ಮತ್ತು ನೀವೊಬ್ಬ ರಾಜ್ಯಪಾಲರಾಗಿದ್ದೀರಿ! ನಿಮ್ಮಲ್ಲಿ ಆಹಾರವಿದೆಯೇ?” ಆಗ ’ಉಬೈದ(ರ)ರು ಹಳೆಯ ಗಡಿಗೆಯ ಬಳಿಗೆ ಹೋಗಿ ಕೆಲ ತುಂಡು-ತುಣುಕುಗಳನ್ನು ಹೊರತೆಗೆದರು. ಅದನ್ನು ಕಂಡು ’ಉಮರ್(ರ)ರು ಕಣ್ಣೀರಿಡಲು ಆರಂಭಿಸಿದರು. ಅಬೂ ’ಉಬೈದ(ರ) ಅವರಿಗೆ ಹೇಳಿದರು, ನಾನು ಮೊದಲೇ ತಿಳಿಸಿದ್ದೆ “ನೀವು ನನಗಾಗಿ ದುಃಖಿಸುವಿರಿ ಎಂದು. ಓ ಉಮ್ಮುಲ್ ಮುಅ’ಮಿನೀನ್(ಸತ್ಯವಿಶ್ವಾಸಿಗಳ ಸರದಾರರೇ), ವಿಶ್ರಾಂತಿಯ ಸ್ಥಳದಲ್ಲಿ ಯಾವುದು ನಮಗೆ ನೆರವಾಗುವುದೋ ಅಷ್ಟು ಮಾತ್ರ ಈ ದುನ್ಯಾ(ಇಹಲೋಕ)ದಲ್ಲಿ ನಮಗೆ ಸಾಕಾಗಿರುತ್ತದೆ!” ’ಉಮರ್ ಹೇಳಿದರು, “ ಅಬೂ ’ಉಬೈದ(ರ), ನಿಮ್ಮನ್ನು ಹೊರತು ಪಡಿಸಿ ಈ ದುನ್ಯಾ ನಮ್ಮೆಲ್ಲರನ್ನು ಬದಲಿಸಿದೆ”
ಅಬೂ ದಾವೂದ್, ಕಿತಾಬ್ ಅಲ್-ಜುಹ್‌ದ್ ಲೇಖನ123, ಮತ್ತು ಇತರರು.
ಇಸ್ಲಾಮನ್ನು ಅನ್ವೇಷಿಸಿ





ಅಲ್ಲಾಹ್
ನಂಬಿಕೆ




ಪವಿತ್ರೀಕರಣ
ಅಹದೀತ್ ಹೇಳಿಕೆಗಳು
ಇಸ್ಲಾಮ್ ಮತ್ತು ಶಾಸ್ತ್ರಗಳು





ಪ್ರವಾದಿಗಳು


ಜೀವನ ಚರಿತ್ರೆಗಳು








ಇಸ್ಲಾಮಿನ ಇತಿಹಾಸ
ಇಸ್ಲಾಮಿನ ಕಾನೂನು






ಇಸ್ಲಾಮ್ ಜೀವನಶೈಲಿ-ಸಂಸ್ಕೃತಿ


ಇಸ್ಲಾಮಿನಲ್ಲಿ ಮೂಲಭೂತ ಹಕ್ಕುಗಳು
ಪ್ರಚಲಿತ ವಿದ್ಯಮಾನ
ಮಾಸ ಪತ್ರಿಕೆಗಳು
ಅರೇಬಿಕ್
