بسم الله الرحمن الرحيم
ಪರಮ ದಯಾಮಯನು ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ
ಶಿಶುಗಳನ್ನು ಕೊಲ್ಲದಿರಿ
ಈ ಲೋಕದಲ್ಲಿ ಶಿಶು ಜನನವೆಂಬುದು ಪ್ರಾಕೃತಿಕ, ಆದರೆ ಮನುಷ್ಯನು ತನಗೆ ಹುಟ್ಟುವ ಶಿಶುವು ತನ್ನ ಊಟ ಹಾಗೂ ವಸತಿ ಸೌಕರ್ಯಗಳಲ್ಲಿ ಪಾಲುಕೇಳುತ್ತದೆ ಹಾಗೂ ಹಂಚಿಕೊಳ್ಳುತ್ತದಲ್ಲ ಎಂಬ ಭಯದಿಂದ ತುಂಬಾ ಕೀಳಾಗಿ ಯೋಚಿಸಲು ಆರಂಭಿಸಿದನು, ಆ ಕಾರಣದಿಂದ ತನ್ನಜವಾಬ್ದಾರಿಯನ್ನು ಮರೆತು ಸ್ವಾರ್ಥಕ್ಕಾಗಿತನಗೆ ಹುಟ್ಟುವ ಶಿಶುಗಳನ್ನು ಭ್ರೂಣದಲ್ಲೆ ಕೊಲ್ಲಲು ಮುಂದಾಗುತ್ತಿದ್ದಾನೆ. ಯಾವ ಮೃಗವೂ ಕೂಡ ಈ ರೀತಿಮಾಡಲು ಹಿಂಜರಿಯುವಂತಹಾ ಕಾರ್ಯವದು. ಇಂತಹಾ ಕ್ರೌರ್ಯವನ್ನು ಕುಟುಂಬ ಯೋಜನೆ ಎಂದು ಸಮಾಜವೂ ಇದನ್ನು ಅಂಗೀಕರಿಸಿದೆ.
ಭ್ರಷ್ಟಾಚಾರದಿಂದ ರಾಷ್ಟ್ರದ ಸಂಪತ್ತನ್ನು ಕೊಳ್ಳೆ ಹೊಡೆದಿರುವ ರಾಜಕೀಯ ನಾಯಕರು ಮತ್ತು ಆಡಳಿತ ಅಧಿಕಾರಿಗಳು, ರಾಷ್ಟ್ರದ ಸಂಪತ್ತನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಅಸಮರ್ಥರಾಗಿದ್ದು ತಮ್ಮ ಕೊರತೆಗಳನ್ನು ಮರೆಮಾಚಿಸಲು, ರಾಷ್ಟ್ರದಲ್ಲಿ ಜನಸಂಖ್ಯಾ ಹೆಚ್ಚಳವೇ ಸಂಪತ್ತಿನಲ್ಲಿ ಕೊರತೆಯುಂಟಾಗಲು ಕಾರಣವೆಂದು ಜನಸಾಮಾನ್ಯರಲ್ಲಿ ಭಯ ಹುಟ್ಟಿಸಿ, ಸುಳ್ಳು ವದಂತಿ ಹಬ್ಬಿಸಿದರು. ಅದಕ್ಕಾಗಿ ಮಾಧ್ಯಮಗಳನ್ನು ಸಮರ್ಪಕವಾಗಿ ಬಳಸಿಕೊಂಡರು.
ಮಾಧ್ಯಮಗಳೂ ಸಹ “ಚಿಕ್ಕ ಕುಟುಂಬ ಚೊಕ್ಕ ಕುಟುಂಬ”, “ನಾವಿಬ್ಬರು ನಮಗಿಬ್ಬರು”, “ಮನೆಗೊಂದು ಮಗು ದೇಶಕ್ಕೆ ನಗು” ಎಂಬ ನಾಣ್ಣುಡಿಗಳನ್ನು ಪ್ರಚಾರ ಮಾಡುವುದರ ಮೂಲಕ ಸಾಮಾನ್ಯ ಜನರೂ ಸಹ ಇದನ್ನು ಒಪ್ಪಿಕೊಳ್ಳುವಂತೆ ಪ್ರಯೊಗಿಸಿದವು. ಮುಂದುವರೆದು ಇನ್ನು ಕೆಲ ಬೇಜವಾಬ್ದಾರಿ ಜನರು “ನಾವೇ ಇಬ್ಬರು ನಮಗ್ಯಾಕೆ ಇನ್ನೊಬ್ಬರು?” ಎಂದೆಲ್ಲಾ ಚಿಂತನೆ ನಡೆಸಿದರು. ಇಂತಹಾ ಸ್ಥಿತಿಯಲ್ಲಿ ಹುಟ್ಟುವ ಮಗು ಹೆಣ್ಣಾಗಿದ್ದರೆ ಪರಿಸ್ಥಿತಿ ಹೇಗಾಗಿರಬಹುದು, ಯೋಚಿಸಿ ನೋಡಿ?
ಹೌದು ಸಹೊದರ ಸಹೊದರಿಯರೆ, ಹೆಣ್ಣಿನ ವರ್ಗವನ್ನು ಹುಟ್ಟುವ ಮುಂಚೆಯೇ ಸ್ಕ್ಯಾನಿಂಗ್ ಮೂಲಕ ಕಂಡುಹಿಡಿದು ಕೊಂದರು. ಅಪ್ಪಿತಪ್ಪಿ ಹುಟ್ಟಿದ ಶಿಶುಗಳಿಗೆ, ಕೆಲವರು ಕಳ್ಳಿ ಹಾಲನ್ನು ಬಾಯಿಗೆ ಹಾಕಿ ಕೊಂದರೆ ಇನ್ನು ಕೆಲವರು ಬಾಯಿಗೆ ಅಕ್ಕಿ ಹಾಕಿ ವಿವಿಧ ಪ್ರಯೋಗಗಳ ಮೂಲಕ ಕೊಂದು ವಿನಾಶ ಮಾಡಲಾಗಿದೆ. ಹೀಗೆ ಹಲವಾರು ರೀತಿಯ ಪ್ರಯೊಗಗಳ ಮೂಲಕ ಗುಂಪು ಗುಂಪಾಗಿ ಯಾವುದೇ ಭಯವಿಲ್ಲದೆ ಕೊಲೆಗೈದು ವಿನಾಶ ಮಾಡಿದ್ದಾರೆ, ಇಂದೂ ಕೂಡ ಮಾಡುತ್ತಿದ್ದಾರೆ. ರಾಷ್ಟ್ರದಲ್ಲಿ ಸಾಕು ಪ್ರಾಣಿಗಳು ಮತ್ತು ವನಮೃಗಗಳು ವಿನಾಶವಾಗುತ್ತಿರುವುದನ್ನು ನೋಡಿ, ಪ್ರಾಣಿ ಸಂರಕ್ಷಣಾ ಸಂಸ್ಥೆಗಳು, ಸಂಘ ಸಂಸ್ಥೆಗಳು ಪ್ರಾಣಿ ಹತ್ಯೆಯನ್ನು ತಡೆಯಲು ಹುಟ್ಟಿಕೊಂಡಿವೆ, ಮೊಸಳೆ ಕಣ್ಣೀರು ಬಿಡುವ ಈ ‘ಪ್ರಾಣಿಸಂರಕ್ಷಕರಿಗೆ’ ತನ್ನ ಮಾನವ ವರ್ಗ ನಾಶವಾಗುತ್ತಿರುವುದರ ಬಗ್ಗೆ ಚಿಂತೆಯಿಲ್ಲವೆ? ಈ ಭ್ರೂಣ ಹತ್ಯೆಗಳನ್ನು ನೊಡಿ ಇವರಿಗೆ ಕಣ್ಣೀರು ಬರುವುದಿಲ್ಲವೆ?. ಎಂತಹಾ ಆಶ್ಚರ್ಯ…..!
ಸಮಾಜದಲ್ಲಿ ಮಾನವೀಯ ಭಾವನೆ, ಪ್ರೀತಿ-ವಾತ್ಸಲ್ಯವನ್ನು ಸರಿದೂಗಿಸಲು ದೇವನು ಕೊಟ್ಟಿರುವ ಅತಿದೊಡ್ಡ ಅನುಗ್ರವೇ ‘ಹೆಣ್ತನ’ ಇದನ್ನೇ ಮನುಷ್ಯನು ತನ್ನ ಅಜ್ಞಾನದಿಂದ ಕಳೆದುಕೊಳ್ಳುತ್ತಿದ್ದಾನೆ.
ಸರ್ಕಾರಿ ಅಂಕಿಅಂಶಗಳು:- ಸರ್ಕಾರಿ ಅಂಕಿಅಂಶಗಳ ಪ್ರಕಾರ ಭ್ರೂಣಹತ್ಯೆ ಎಂಬುದು ನಿರಂತರವಾಗಿ ನಡೆಯುತ್ತಿದೆ, ಪ್ರತಿವರ್ಷ ಪ್ರಪಂಚದಲ್ಲಿ 1.5 ಕೋಟಿ ಹಾಗೂ ಭಾರತದಲ್ಲಿ 90 ಲಕ್ಷ ಭ್ರೂಣ ಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ. ಲಿಂಗ ಪತ್ಯೆ ಮಾಡುವುದು ಅಪರಾಧ ಅದಕ್ಕೆ ಶಿಕ್ಷೆ ವಿಧಿಸಲಾಗುವುದೆಂಬ ಸರ್ಕಾರಿ ಆದೇಶವಿದ್ದರೂ ಈ ಕೃತ್ಯಗಳು ಮುಂದುವರೆದು ಸರ್ಕಾರಿ ಆದೇಶ ಇಂದು ಡಾಂಭಿಕವಾಗಿದೆ.
ಮಹಿಳಾಹಕ್ಕು ಮೀಸಲಾತಿ ಹೊರಾಟಗಾರರು: ಒಂದೆಡೆ ಹುಟ್ಟುವ ಹಣ್ಣುಳನ್ನು ಭ್ರೂಣದಲ್ಲೆ ಕೊಂದು ಹಾಕಿ ಲೊಕಕ್ಕೆ ಹೆಣ್ಣಿನ ಪ್ರವೆಶ ದ್ವಾರವನ್ನೆ ಮುಚ್ಚಿ ಇನ್ನೊಂದೆಡೆ ಅವರ ಹಕ್ಕುಗಳಿಗಾಗಿ ಬೊಬ್ಬೆ ಹೊಡೆಯುವ ಸಂಘ ಸಂಸ್ಥೆಗಳು, ಮಹಿಳಾ ಸಂಘಗಳು ಯಾರಿಗಾಗಿ ಹೊರಾಡುತ್ತಿವೆ? ಮಹಿಳಾ ಸಂಘಗಳಿಗೆ ಈ ಭ್ರೂಣಹತ್ಯೆಗಳು ಕಾಣುವುದಿಲ್ಲವೆ? ನಿರಂತರವಾಗಿ ನಡೆಯುತ್ತಿರುವ ಈ ಕಠೊರ ಅಕ್ರಮವನ್ನು ಎದುರಿಸಲಾಗದ ಅವರ ಹೊರಾಟದ ಧ್ವನಿಗಳು ಬೊಬ್ಬೆಗಳು ಮೌನವಾಗಲು ಕಾರಣವೇನು? ಮಹಿಳೆಗೆ ಬೇಕಾಗಿರುವ ಮೊದಲನೆ ಹಕ್ಕು ಅವಳು ಈ ಭೂಮಿಯ ಮೇಲೆ ಯಾವುದೇ ಅಡೆತಡೆಯಿಲ್ಲದೆ ಜನ್ಮತಾಳುವುದೇ ಆಗಿದೆ. ಇದಕ್ಕಾಗಿ ಇವರಲ್ಲಿ ಪೂರ್ವಸಿದ್ಧತಾ ಕಾರ್ಯಕ್ರಮವೇನಿದೆ?
ಸಹೊದರ ಸಹೊದರಿಯರೆ ಈ ಕೆಡುಕಿನ ವಿರುದ್ಧ ಯಾರು ಕಾರ್ಯಾಚರಣೆ ಮಾಡಿದರೇನು ಮಾಡದಿದ್ದರೇನು, ಮುಂದೆ ಇದು ಹೆಚ್ಚಾಗದಂತೆ ಕಾರ್ಯಾಚರಣೆ ಮಾಡುವುದು, ದೇವನನ್ನು ನಂಬಿ ಅವನಿಗೆ ವಿಧೇಯರಾಗಿ ಜೀವಿಸುವ ಸತ್ಯವಿಶ್ವಾಸಿಗಳ ಕರ್ತವ್ಯವಾಗಿದೆ. ಇಸ್ಲಾಮ್ ಎಂಬ ಅರಬೀ ಪದಕ್ಕೆ ಅರ್ಥ ಅನುಸರಿಸುವುದು ಅಥವ ಅನುಕರಣೆ ಎಂದಾಗಿದೆ. ಮತ್ತೊಂದು ಅರ್ಥದಲ್ಲಿ ಶಾಂತಿ ಎಂಬುದೇ ಆಗಿದೆ. ಅಂದರೆ ದೇವನಿಗೆ ವಿಧೇಯನಾಗಿ ಜೀವಿಸಿದರೆ ಈ ಲೋಕದಲ್ಲೂ ಪರಲೋಕದಲ್ಲಿಯೂ ಶಾಂತಿ ಸಿಗುತ್ತದೆ ಎಂಬುದಾಗಿದ್ದು ಇಸ್ಲಾಮ್ ಧರ್ಮ ತಿಳಿಸುವ ತತ್ವ ಆಗಿದೆ. ಅಂದರೆ ಈ ಧರ್ಮದ ಪ್ರಕಾರ ಪ್ರಪಂಚದ ಒಡೆಯನಾದ ದೇವನು ಯಾವುದನ್ನು ಮಾಡಬೇಕೆಂದು ಆಜ್ಞೆ ಮಾಡುತ್ತಾನೋ ಅದನ್ನು ಮಾಡಬೇಕಾಗಿದೆ. ಅದರ ಹೆಸರೇ ಒಳಿತು ಅಥವಾ ಪುಣ್ಯ ಅಥವ ಧರ್ಮ ಎಂದಾಗಿದೆ. ಅವನು ಯಾವುದೆಲ್ಲಾ ಮಾಡಬಾರದೆಂದು ತಡೆಯಾಜ್ಞೆ ಮಾಡಿದ್ದಾನೆಯೋ ಆ ಎಲ್ಲಾ ವಿಷಯಗಳಿಂದ ದೂರವಿರಬೇಕು. ಅದೇ ಪಾಪ ಅಥವ ಕೆಡುಕು ಅಥವ ಅಧರ್ಮ ಎಂದಾಗಿದೆ, ಯಾರು ಈ ತತ್ವವನ್ನು ಒಪ್ಪಿಕೊಂಡು ಅದರ ಪ್ರಕಾರ ಜೀವಿಸುವರೋ ಅವರನ್ನು ಅರಬಿ ಭಾಷೆಯಲ್ಲಿ ಮುಸ್ಲಿಂ (ಅನುಸರಿಸುವವನು) ಎಂದು ಹೇಳುವರು. ಈ ರೀತಿಯಾಗಿ ದೇವನು ಹೇಳಿರುವ ಮಾರ್ಗದ ಪ್ರಕಾರ ಜೀವನ ಸಾಗಿಸುತ್ತಿರುವವರ ಮಧ್ಯದಲ್ಲಿ ಇಂತಹಾ ಅಕ್ರಮಗಳು ಖಂಡಿತ ನಡೆಯುತ್ತಿಲ್ಲ. ಪ್ರಸಕ್ತ ಜನಾಂಗಕ್ಕೂ ಮುಂದೆ ಬರುವ ಜನಾಂಗಕ್ಕೂ, ವಂಶಾವಳಿಗೂ ಈ ಅಕ್ರಮದ ಕುರಿತು ಎಚ್ಚರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಬನ್ನಿ ಪ್ರಪಂಚವನ್ನು ಸರಿಪಡಿಸೊಣ, ಇದು ದೇವನ ಸ್ವಂತ ಪ್ರಪಂಚ, ಅವನು ಈ ಪ್ರಪಂಚವನ್ನು ಒಂದು ಪರಿಕ್ಷಾ ಕೊಠಡಿಯಂತೆ ನಿರ್ಮಿಸಿದ್ದಾನೆ. ಇದರಲ್ಲಿ ನಾವು ಮಾಡುವ ಎಲ್ಲಾ ಕಾರ್ಯಗಳು ದಾಖಲಾಗುತ್ತಿವೆ. ಅವೆಲ್ಲವುಗಳಿಗೆ ಅಂತಿಮ ದಿನದಂದು ವಿಚಾರಣೆ ನಡೆಯಲಿದೆ ಮತ್ತು ಅವುಗಳಿಗೆ ಪ್ರತಿಫಲವೂ ಇದೆ. ಈ ಪ್ರಪಂಚದಲ್ಲಿ ದೇವನಿಗೆ ವಿಧೇಯರಾಗಿ ಜೀವಿಸುವುದು ನಮ್ಮೇಲ್ಲರ ಕರ್ತವ್ಯವಾಗಿದೆ. ಇದರಲ್ಲಿ ಸ್ವಇಚ್ಛೆಯಂತೆಜೀವಿಸಲು ಅನುಕೂಲವಾಗುವಂತಹ ಸ್ವಂತ ಕಾನೂನುಗಳನ್ನು ರಚಿಸಲು ಆ ದೇವನು ನಮಗೆ ಅಧಿಕಾರ ಕೊಟ್ಟಿಲ್ಲ ಎಂಬುದು ಮನಗಾಣ ಬೇಕು. ಅವನು ತನ್ನ ಗ್ರಂಥಗಳ ಹಾಗೂ ಸಂದೇಶವಾಹಕರ ಮೂಲಕ ತಿಳಿಸಿರುವ ನಿಯಮಗಳನ್ನು ಪಾಲಿಸದಿರುವುದೇ ಇಂದು ನಡೆಯುತ್ತಿರುವ ಕೇಡುಗಳಿಗೆ ಮುಖ್ಯ ಕಾರಣವಾಗಿದೆ. ದೇವನ ನಿಯಮಗಳಿಗೆ ವಿರುದ್ಧವಾಗಿ ನಾವು ಮಾಡುವ ಕರ್ಮಗಳಿಗೆ ಒಂದು ವೇಳೆ ಈ ಭೂಲೋಕದಲ್ಲಿ ಶಿಕ್ಷೆ ಸಿಗದೇ ಇರಬಹುದು, ಆದರೆ ಅಂತಿಮ ದಿನದಂದು ವಿಚಾರಣೆ ಮಾಡಲಾದಾಗ ಅದಕ್ಕೆ ಖಂಡಿತ ಶಿಕ್ಷೆಯಾಗಲಿದೆ.
ಕಣ್ಣಿಗೆ ಕಾಣುವ ಜೀವಿಯಾಗಲಿ ಕಾಣದೇ ಇರುವ ಜೀವಿಯಾಗಲಿ, ದೊಡ್ಡದಾಗಿರಲಿ ಚಿಕ್ಕದಾಗಿರಲಿ, ಅವುಗಳನ್ನು ಅನ್ಯಾಯವಾಗಿಕೊಂದರೇನು, ನೋಯಿಸಿದರೇನು, ಅದು ದೇವನೆದುರು ಪಾಪವೇ ಆಗಿದೆ. ಇದರ ಪ್ರಕಾರವಾಗಿ ಪ್ರತಿ ಮಗುವುನ ಕೊಲೆಗೂ ದೇವನ ಹತ್ತಿರ ಖಂಡಿತ ಶಿಕ್ಷೆ ಇದೆ ಎಂದು ದೇವನು ತನ್ನ ಅಂತಿಮ ವೇದ ಗ್ರಂಥವಾದ ಖುರ್‍ಆನಿನಲ್ಲಿ ಎಚ್ಚರಿಸುತ್ತಾನೆ.
“ದಾರಿದ್ರ್ಯದ ಭಯದಿಂದ ನಿಮ್ಮ ಸಂತಾನಗಳನ್ನು ಕೊಲ್ಲಬೇಡಿರಿ.(ಏಕೆಂದರೆ) ಅವರಿಗೂ ನಾವು ಜೀವನಾಧಾರಕೊಡುವೆವು. ನಿಮಗೂ ಕೊಡುವೆವು. ವಾಸ್ತವದಲ್ಲಿ ಅವುಗಳ ಹತ್ಯೆಇಂದು ಮಹಾ ಪಾತಕವಾಗಿದೆ” (ಖುರ್‍ಆನ್ 17:31.)
ಇಂದು ಹೆಣ್ಣು ಮಗುವೆಂದು ಸ್ಕ್ಯಾನ್ ಮೂಲಕ ತಿಳಿದು ಕೊಂದು ಹಾಕುವ ತಂದೆ-ತಾಯಂದರಿಗೆ ಅಂತಿಮ ದಿನದಲ್ಲಿ ಶಿಕ್ಷೆಗೆ ಗುರಿಯಾಗುವರು. ಯಾವ ಮಕ್ಕಳನ್ನು ಕೊಂದು ದುಷ್ಕೃತ್ಯವೆಸಗಿದರೊ ಆ ಮಕ್ಕಳೆ ಇವರ ವಿರುದ್ಧ ಸಾಕ್ಷಿಯಾಗಿ ನಿಲ್ಲುತ್ತಾರೆ, ಪವಿತ್ರ ಖುರ್‍ಆನ್ ಎಚ್ಚರಿಸುತ್ತದೆ;
“ಜೀವಿಗಳನ್ನು (ಶರೀರಗಳೊಂದಿಗೆ) ಸೇರಿಸಲಾಗುವಾಗ. ಜೀವಂತ ಹೂಳಲಾದ ಹೆಣ್ಣು ಶಿಶುವಿನೊಂದಿಗೆ ವಿಚಾರಿಸಲಾಗುವಾಗ. ಅವಳು ಯಾವತಪ್ಪಿಗಾಗಿ ವಿಧಿಸಲ್ಪಟ್ಟಳೆಂದು ಕೆಳಲಾದಾಗ”(ಖುರ್‍ಆನ್ 81:7.8.9)
ದೇವ ವಿಶ್ವಾಸಿಗಳೇ ಬನ್ನಿ ನಾಸ್ತಿಕರನ್ನು ನಂಬಿ ನಿಮ್ಮ ವಂಶಾವಳಿಯನ್ನು ನಿಮ್ಮ ಕೈಯಿಂದಲೇ ನೀವೇ ವಿನಾಶ ಮಾಡದಿರಿ. ದೇವನ ಹಿತವಚನಗಳನ್ನು ನಂಬಿರಿ, ಶಿಶುಗಳನ್ನು ಅದರಲ್ಲೂ ಹೆಣ್ಣು ಶಿಶುಗಳನ್ನು ಅಮೂಲ್ಯ ಸಂಪತ್ತಿನಂತೆ ಅವರ ಸಂರಕಷಣೆ ಮಾಡಿರಿ.
ದೇವನ ಅಂತಿಮ ಸಂದೇಶವಾಹರಾದ ಮುಹಮ್ಮದ್{ಸ}ರವರು, ಹೇಳಿದರು. “ಓರ್ವನಿಗೆ ಹೆಣ್ಣು ಮಗು ಹುಟ್ಟಿದರೆ ದೇವನು ಅಲ್ಲಿಗೆ ದೇವಚರರನ್ನು ಕಳುಹಿಸುತ್ತಾನೆ. ಅವರು ಹೇಳುವರು ಈ ಮನೆಯಲ್ಲಿರುವವರೇ ನಿಮ್ಮ ಮೇಲೆ ದೇವನ ಶಾಂತಿ ಇರಲಿ ಎಂದು ಹೇಳಿ ಆ ಮಗುವನ್ನು ತಮ್ಮ ರೆಕ್ಕೆಗಳಿಂದ ಅಪ್ಪಿಕೊಳ್ಳುತ್ತಾರೆ, ಮತ್ತು ಕೈಗಳಿಂದ ಮಗುವಿನ ತಲೆ ಸವರುತ್ತಾ ಹೇಳುವರು, ಇದೊಂದು ಬಲಹೀನವಾದ ಆತ್ಮ, ಈ ಮಗುವನ್ನು ಸಂರಕ್ಷಣೆ ಮಾಡಿ ಪಾಲನೆ ಮಾಡುವವರಿಗೆ ಅಂತಿಮ ದಿವಸದವರೆಗೂ ದೇವನ ಸಹಾಯ ಸಿಗುತ್ತಲೇ ಇರುತ್ತದೆ” (ನಬೀತ್‍ಇಬ್ನೆ ಶುರೈಇತ್‍ರ.ಅ. ರವರಿಂದ ವರದಿ ಅಧಾರ ಗ್ರಂಥ ಅಲ್ ಮುಅಜಮುಸ್ಸಕಿರ್ 243)
ಸಂದೇಶವಾಹರಾದ ಮುಹಮ್ಮದ್{ಸ}ರವರು, ಹೇಳಿದರು. “ಯಾರಿಗೆಹೆಣ್ಣು ಮಕ್ಕಳಿರುವರೊ, ಅವರು ಆ ಮಕ್ಕಳನ್ನು ಪಾಲಿಸಿ ಪೊಷಿಸಿ ನೇರ ಮಾರ್ಗ ತೊರಿಸುವರೋ ಅವರಿಗೆ ಸ್ವರ್ಗ ಖಚಿತ.”
ಇಸ್ಲಾಮನ್ನು ಅನ್ವೇಷಿಸಿ





ಅಲ್ಲಾಹ್
ನಂಬಿಕೆ




ಪವಿತ್ರೀಕರಣ
ಅಹದೀತ್ ಹೇಳಿಕೆಗಳು
ಇಸ್ಲಾಮ್ ಮತ್ತು ಶಾಸ್ತ್ರಗಳು





ಪ್ರವಾದಿಗಳು


ಜೀವನ ಚರಿತ್ರೆಗಳು








ಇಸ್ಲಾಮಿನ ಇತಿಹಾಸ
ಇಸ್ಲಾಮಿನ ಕಾನೂನು






ಇಸ್ಲಾಮ್ ಜೀವನಶೈಲಿ-ಸಂಸ್ಕೃತಿ


ಇಸ್ಲಾಮಿನಲ್ಲಿ ಮೂಲಭೂತ ಹಕ್ಕುಗಳು
ಪ್ರಚಲಿತ ವಿದ್ಯಮಾನ
ಮಾಸ ಪತ್ರಿಕೆಗಳು
ಅರೇಬಿಕ್
