• CONTACT US – ಸಂಪರ್ಕಿಸಿ
  • ABOUT US – ನಮ್ಮ ಕುರಿತು
  • Donation – ದೇಣಿಗೆ
  • Donation – ದೇಣಿಗೆ
  • ಸಹಾಯ ಬೇಕಿದೆಯೇ? – Do you need assistance?
  • ಸ್ವಯಂಸೇವಕ
Sunday, October 12, 2025
  • ಗೂಡು
  • ಇಸ್ಲಾಮ್ ಕುರಿತ ಪ್ರಶ್ನೋತ್ತರಗಳು – Questions and Answers about Islam
    • ಇಸ್ಲಾಮ್ ಕುರಿತ ಸಂಶಯಗಳು ಭಾಗ – 1
    • ಇಸ್ಲಾಮ್ ಕುರಿತ ಸಂಶಯಗಳು ಭಾಗ – 2
    • ಇಸ್ಲಾಮ್ ಕುರಿತ ಸಂಶಯಗಳು ಭಾಗ – 3
    • ರಂಜಾನ್ ತಿಂಗಳ ಕುರಿತಾದ ಪ್ರಶ್ನೆಗಳು ಮತ್ತು ಉತ್ತರಗಳು.
  • ಇಸ್ಲಾಮನ್ನು ಅನ್ವೇಷಿಸಿ
    • All
    • ಅತಿರೇಕತೆಯ ವಿರುದ್ಧ
    • ಇಸ್ಲಾಮನ್ನು ತಿಳಿಯಿರಿ
    • ಕಪಟ ವಿಶ್ವಾಸಿಗಳು
    • ಖುರಾನ್ ಕುರಿತು
    • ಜೀವನದ ಉದ್ದೇಶ
    • ಭಯೋತ್ಪಾದನೆಯ ವಿರುದ್ಧ
    • ಹಬ್ಬಗಳು
    • ಹೊಸದಾಗಿ ಇಸ್ಲಾಮಿಗೆ ಬಂದಿರುವಿರೇ?

    ಶಾಂತಿಗೆ ಮತ್ತೊಂದು ಹೆಸರೇ ಇಸ್ಲಾಮ್

    ಕನ್ನಡ ಇಸ್ಲಾಂ 360° – 01 – ಇಸ್ಲಾಂ ಎಂದರೇನು?

    ಪವಿತ್ರ ಕುರ್‌ಆನ್ ಎಂದರೇನು? – What is Holy Quran

    ಇಸ್ಲಾಮೇ ಏಕೆ? – Why Islam?

    ನವ ಮುಸ್ಲಿಮರಿಗೆ ಸಂಕ್ಷಿಪ್ತ ಉಪಯುಕ್ತ ಮಾರ್ಗದರ್ಶಿ – A brief useful guide for new-Muslims

    ನವ ಮುಸ್ಲಿಮರಿಗೆ ಸಂಕ್ಷಿಪ್ತ ಉಪಯುಕ್ತ ಮಾರ್ಗದರ್ಶಿ – A brief useful guide for new-Muslims

    ಇಸ್ಲಾಂ ಮತ್ತು ಕುರಾನಿನ ನೈಜ ಸಂದೇಶ – The true message of Islam and the Quran

  • ಅಲ್ಲಾಹ್
    231246

    ನಾವು ಇಲ್ಲೇಕ್ಕಿದ್ದೇವೆ? – Why are we here?

    231252

    ಯೇಸುವಿನ ಪ್ರಕಾರ ದೇವನೆಂದರೆ ಯಾರು ? – Who is God according to Jesus

    231233

    ದೇವನಿದ್ದರೆ ಅನ್ಯಾಯಗಳೇಕೆ? – If there is a God why injustices?

    230493

    ದೇವರ ನೈಜ ಧರ್ಮ ಯಾವುದು? – What is the true religion of God?

    230497

    ಅಲ್ಲಾಹನ(ದೇವರ) ಕೃಪೆ – By the grace of Allah (God)

    230502

    ಇಸ್ಲಾಮಿನಲ್ಲಿ ಏಕದೇವತ್ವ – Monotheism in Islam

  • ನಂಬಿಕೆ
    • All
    • ಆರಾಧನೆ
    • ಪ್ರಮಾಣೀಕರಣ
    • ಮರಣಾನಂತರ ಜೀವನ
    • ಸ್ವರ್ಗ

    ಆತ್ಮದ ವಾಸ್ತವ – The reality of the Soul

    ಜೀವನ ಘಟ್ಟದ ಪಯಣವೆತ್ತ ? – Where is the journey of the of life?

    ಇಸ್ಲಾಮಿನ ಮೂರು ಮೂಲಭೂತ ತತ್ವಗಳು – Three Fundamental Principles of Islam

    ನಮಗೆಲ್ಲಾ ಒಬ್ಬನೇ ಸೃಷ್ಟಿಕರ್ತ!! – One Creator for All of Us!!

    ನೀವೇಕೆ ಆರಾಧಿಸುವುದಿಲ್ಲ? – Why don’t you worship?

    ಸಾವು: ಅಂತ್ಯವೋ…? ಹೊಸದೊಂದು ಆರಂಭವೋ? – Death is End? or New Beginning

  • ಪವಿತ್ರೀಕರಣ

    ಖುರ್‌ಆನಿನ ಬೆಳಕಿನಲ್ಲಿ ರೋಗ ಪರಿಹಾರ

    ಶುದ್ಧೀಕರಣ / ವುದೂ – Wudu

  • ಖುರಾನ್
  • ಅಹದೀತ್ ಹೇಳಿಕೆಗಳು
  • ಇಸ್ಲಾಮ್ ಮತ್ತು ಶಾಸ್ತ್ರಗಳು
    • All
    • ಇಸ್ಲಾಮಿನ ಕುರಿತಾಗಿ ಇತರರು
    • ಕ್ರೈಸ್ತ ಧರ್ಮ
    • ಖುರಾನ್ ಆಧಾರಗಳು

    ಯೇಸುವಿನ ಪ್ರಕಾರ ದೇವನೆಂದರೆ ಯಾರು ? – Who is God according to Jesus

    ಯೇಸುವಿನ ಅದ್ಭುತ ಜನನ – Miraculous Birth of Jesus

    ಮಾನವ ಶರೀರವೆಂಬ ಅದ್ಭುತ ಯಂತ್ರವನ್ನು ನಿರ್ಮಿಸಿದವನು ಯಾರು? – Who built the amazing machine called human body?

    ಅಲ್ಲಾಹನ ಸಂದೇಶವಾಹಕರಾದ ಮಹಮ್ಮದ್(ಸ)ರ ಕುರಿತು ಮುಸ್ಲೀಮೇತರ ಟಿಪ್ಪಣಿಗಳು – Non-Muslim Notes on Muhammad (PBUH), Messenger of Allah

    ಕ್ರೈಸ್ತರೊಂದಿಗೆ ಸಂವಾದ (ಯೆಹೋವನ ಸಾಕ್ಷಿಗಳನ್ನು ಹೊರೆತುಪಡಿಸಿ) – Dialogue with Christians (Except Jehovah’s Witnesses)

    ದೇವನೊಬ್ಬನೆ ಅಥವ ಮೂವರೇ? – Is God one or three?

  • ಪ್ರವಾದಿಗಳು
    • All
    • ಮುಹಮ್ಮದ್(ﷺ)
    • ಯೇಸು(ಈಸ (ಅ))

    ರಬಿವುಲ್ ಅವ್ವಲ್ 12 ಪ್ರವಾದಿ(ಸ) ಮನೆಯ ವಾತಾವರಣ –

    ಇಸ್ಲಾಮಿನ ಸಂದೇಶವಾಹಕ  ಮುಹಮ್ಮದ್(ﷺ) – The Messenger of Islam ’Muhammad’ (ﷺ)

    ಯೇಸುವಿನ ಪ್ರಕಾರ ದೇವನೆಂದರೆ ಯಾರು ? – Who is God according to Jesus

    ಯೇಸುವಿನ ಅದ್ಭುತ ಜನನ – Miraculous Birth of Jesus

    ಪ್ರವಾದಿ (ﷺ) ಯನ್ನು ಅರಿಯಿರಿ – Know the Prophet (ﷺ)

    ಅಲ್ಲಾಹನ ಸಂದೇಶವಾಹಕರಾದ ಮಹಮ್ಮದ್(ಸ)ರ ಕುರಿತು ಮುಸ್ಲೀಮೇತರ ಟಿಪ್ಪಣಿಗಳು – Non-Muslim Notes on Muhammad (PBUH), Messenger of Allah

    ದೇವನೊಬ್ಬನೆ ಅಥವ ಮೂವರೇ? – Is God one or three?

    ದೇವರ ಸಂದೇಶವಾಹಕ ಮುಹಮ್ಮದ್ (ﷺ)Messenger of God Muhammad (ﷺ)

    ಪ್ರವಾದಿ ಮುಹಮ್ಮದ್(ﷺ) – Prophet Muhammad(ﷺ)

  • ಜೀವನ ಚರಿತ್ರೆಗಳು
    • All
    • ಅಲ್-ಅಶರ ಅಲ್-ಮುಬಶ್ಶರೂನ್
    • ಇಮಾಮ್‍ಗಳು
    • ಖುಲಫಾ-ಎ-ರಾಶಿದೂನ್
    • ಪ್ರಭಾವ ಬೀರುವ ಘಟನೆಗಳು
    • ಪ್ರವಾದಿಯ ಮಡದಿಯರು
    • ಸಹಾಬಿಗಳು
    • ಹದೀಸ್ ವಿದ್ವಾಂಸರು

    10. ಆಮಿರ್ ಬಿನ್ ಅಬ್ದುಲ್ಲಾ ಬಿನ್ ಅಲ್‌-ಜರ್ರಾಹ್(ಅಬೂ ಉಬೈದ)(ರ) – Aamir bin Abdillah bin al-Jarrah(Abu Ubaida)

    9. ಸಈದ್ ಬಿನ್ ಝೈದ್(ರ) – Saeed Ibn Zayd (RA)

    8. ಸಅದ್ ಬಿನ್ ಅಬೀ ವಕ್ಕಾಸ್‌(ರ) – Sa’d Ibn Abi Waqqas (RA)

    7. ಅಬ್ದುರ್ರಹ್ಮಾನ್ ಬಿನ್ ಔಫ್(ರ) – Abdul ar-Rahman Bin Auf (RA)

    6. ಝುಬೈರ್ ಬಿನ್‌ ಅವ್ವಾಮ್(ರ) – Zubair Ibn Al-Awwam (RA)

    5. ತಲ್ಹ ಬಿನ್ ಉಬೈದುಲ್ಲಾ(ರ) – Talha bin Ubaydillah (RA)

    ಮೈಮೂನ ಬಿಂತ್ ಹಾರಿಸ್(ರ) – ಪ್ರವಾದಿ(ಸ) ರವರ ಕೊನೆಯ ಮಡದಿ

    ರಮ್ಲ ಬಿಂತ್ ಅಬೂ ಸುಫ್ಯಾನ್ (ಉಮ್ಮು ಹಬೀಬ)(ರ) – ಪ್ರವಾದಿ(ಸ) ರವರ ಹತ್ತನೆಯ ಮಡದಿ

    ಸಫಿಯ್ಯ ಬಿಂತ್ ಹುಯಯ್(ರ) – ಪ್ರವಾದಿ(ಸ) ರವರ ಒಂಬತ್ತನೇ ಮಡದಿ

  • ಇಸ್ಲಾಮಿನ ಇತಿಹಾಸ
  • ಇಸ್ಲಾಮಿನ ಕಾನೂನು
    • All
    • ಅನಿಷ್ಟ ಪದ್ಧತಿಗಳು
    • ಫತ್ವಾ ಸ್ಪಷ್ಟೀಕರಣ
    • ಫಿಖ್
    • ಷರಿಯ(ಕಾನೂನು)

    ತಮ್ಮ ಮದ್‌ಹಬ್‌ಗಳ ಕುರಿತು ಇಮಾಮ್‌ಗಳು ಏನೆನ್ನುತ್ತಾರೆ? – What the imam’s say about their Madhab?

    ಭಯೋತ್ಪಾದನೆಯ ಬಗ್ಗೆ ಇಸ್ಲಾಮ್ ಏನೆನ್ನುತ್ತದೆ? – What does Islam say about terrorism?

    ಸೂಫಿಗಳ ಕೆಲವು ತತ್ವಗಳು – Some principles of the Sufis

    ಸಂಘಟನೆಯನ್ನು ಒಡೆಯುವವರು ಕಪಟ ವಿಶ್ವಾಸಿಗಳು! – Those who break the organization are hypocritical believers!

    ​ಇಸ್ಲಾಮ್’ನಲ್ಲಿ ಪುರುಷರಿಗೆ ಒಂದಕ್ಕಿಂತ ಹೆಚ್ಚಿನ ಪತ್ನಿಯರೇ? – Can men have more than one wife in Islam?

    ಶಿಶುಗಳನ್ನು ಕೊಲ್ಲದಿರಿ – Don”t Kill the Babies

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

  • ಇಸ್ಲಾಮ್ ಜೀವನಶೈಲಿ-ಸಂಸ್ಕೃತಿ
    • All
    • ಆರೋಗ್ಯ ಪದ್ಧತಿ
    • ಇಸ್ಲಾಮಿನ ಆಧ್ಯಾತ್ಮಿಕತೆ
    • ಇಸ್ಲಾಮಿನ ಆರ್ಥಿಕತೆ
    • ಇಸ್ಲಾಮಿನ ನಾಗರಿಕತೆ
    • ಇಸ್ಲಾಮಿನ ನೈತಿಕತೆ
    • ಇಸ್ಲಾಮಿನ ರಾಜಕೀಯತೆ
    • ಇಸ್ಲಾಮಿನ ಸಾಮಾಜಿಕತೆ
    • ಕೌಟುಂಬಿಕ ಪದ್ಧತಿ
    • ಧಾರ್ಮಿಕ ಸೈರಣೆ

    ಖುರ್‌ಆನಿನ ಬೆಳಕಿನಲ್ಲಿ ರೋಗ ಪರಿಹಾರ

    ಜೀವನ ಘಟ್ಟದ ಪಯಣವೆತ್ತ ? – Where is the journey of the of life?

    ಶುದ್ಧೀಕರಣ / ವುದೂ – Wudu

    ದೇವರ ನೈಜ ಧರ್ಮ ಯಾವುದು? – What is the true religion of God?

    ನಮ್ಮ ಜೀವನದ ಉದ್ದೇಶವೇನು? – The purpose of our life

    ಇಸ್ಲಾಮಿನ ಮೂರು ಮೂಲಭೂತ ತತ್ವಗಳು – Three Fundamental Principles of Islam

    ಇಸ್ಲಾಮಿನಲ್ಲಿ ಏಕದೇವತ್ವ – Monotheism in Islam

    ​ಇಸ್ಲಾಮ್’ನಲ್ಲಿ ಪುರುಷರಿಗೆ ಒಂದಕ್ಕಿಂತ ಹೆಚ್ಚಿನ ಪತ್ನಿಯರೇ? – Can men have more than one wife in Islam?

    ದೇವರ ಸಂದೇಶವಾಹಕ ಮುಹಮ್ಮದ್ (ﷺ)Messenger of God Muhammad (ﷺ)

  • ಇಸ್ಲಾಮಿನಲ್ಲಿ ಮೂಲಭೂತ ಹಕ್ಕುಗಳು
    • All
    • ಮಹಿಳಾ ಹಕ್ಕುಗಳು
    • ಮಾನವ ಹಕ್ಕುಗಳು
    • ಸಮಾನತೆ

    ಇಸ್ಲಾಂ ಧರ್ಮದಲ್ಲಿ ಮಹಿಳೆಯ ಹಕ್ಕು ಭಾದ್ಯತೆಗಳು – Women’s Right in Islam

    ​ಇಸ್ಲಾಮ್’ನಲ್ಲಿ ಪುರುಷರಿಗೆ ಒಂದಕ್ಕಿಂತ ಹೆಚ್ಚಿನ ಪತ್ನಿಯರೇ? – Can men have more than one wife in Islam?

    ನಿಮ್ಮ ತಂದೆ-ತಾಯಿಯರ ಹಕ್ಕುಗಳು – Your parental rights

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

  • ಪ್ರಚಲಿತ ವಿದ್ಯಮಾನ
  • ಮಾಸ ಪತ್ರಿಕೆಗಳು
  • ಅರೇಬಿಕ್
ಕನ್ನಡ ಇಸ್ಲಾಂ | Kannada Islam
  • Login
ಇಸ್ಲಾಮಿಗೆ ಹೊಸಬರೇ
ಇಸ್ಲಾಮ್ ಅಂಗೀಕರಿಸುವಿರೇ?
ಇನ್ನೂ ಹೆಚ್ಚಿನ ಮಾಹಿತಿಗಾಗಿ
Social icon element need JNews Essential plugin to be activated.
No Result
View All Result
ಕನ್ನಡ ಇಸ್ಲಾಂ | Kannada Islam
ಇಸ್ಲಾಮಿಗೆ ಹೊಸಬರೇ
ಇಸ್ಲಾಮ್ ಅಂಗೀಕರಿಸುವಿರೇ?
ಇನ್ನೂ ಹೆಚ್ಚಿನ ಮಾಹಿತಿಗಾಗಿ
No Result
View All Result
ಕನ್ನಡ ಇಸ್ಲಾಂ | Kannada Islam
No Result
View All Result
Home ಇಸ್ಲಾಮನ್ನು ಅನ್ವೇಷಿಸಿ ಇಸ್ಲಾಮನ್ನು ತಿಳಿಯಿರಿ

ಶಾಂತಿಗೆ ಮತ್ತೊಂದು ಹೆಸರೇ ಇಸ್ಲಾಮ್

GIRISH K S by GIRISH K S
1 July, 2024
in ಇಸ್ಲಾಮನ್ನು ತಿಳಿಯಿರಿ
0 0
0

ಶಾಂತಿಗೆ ಮತ್ತೊಂದು ಹೆಸರೇ ಇಸ್ಲಾಮ್

ಪರಮ ದಯಾಮಯನೂ ಕರುಣಾನಿಧಿಯೂ ಆದ ದೇವ ನಾಮದಿಂದ

ಇಸ್ಲಾಮ್ ಎಂದರೆ…

                ಇಸ್ಲಾಮ್ ಎಂಬ ಪದದ ಅರ್ಥ ಅನುಸರಣೆ ಎಂದಾಗಿದ್ದು ಇದರ ಇನ್ನೊಂದು ಅರ್ಥ ಶಾಂತಿ ಎಂಬುದೇ ಆಗಿದೆ. ದೇವನ ಆಜ್ಞೆಗಳ ಅನುಸಾರವಾಗಿ ಜೀವಿಸಿದರೆ ಇಹಲೋಕದಲ್ಲಿ ಶಾಂತಿ ದೊರಕುವುದು ಎಂಬುದೇ ಇದರ ತತ್ವ. ಮುಸ್ಲಿಮ್ ಎಂದರೆ ಅನುಸರಿಸುವವನು ಎಂಬುದೇ ಅರ್ಥ, ಉದಾಹರಣೆಗೆ; ಅಧ್ಯಾಪಕರಿಗೆ ಅನುಸರಿಸುವವನಿಗೆ ವಿಧ್ಯಾರ್ಥಿ, ಯಜಮಾನನಿಗೆ ವಿಧೇಯನಾಗಿ ನಡೆಯುವವನಿಗೆ ನೌಕರ, ಎಂದು ಹೇಗೆ ಕರೆಯುವರೊ, ಹಾಗೆಯೇ ದೇವನ ಆಜ್ಞೆಗಳನ್ನು ಪರಿಪಾಲಿಸುವವನಿಗೆ ಅರಬಿ ಭಾಷೆಯಲ್ಲಿ ಮುಸ್ಲಿಮ್ ಎಂದು ಕರೆಯುವರು. ಒಂದು ಬಗೆಯ ಪೇಠಾ, ಟೋಪಿ ಹಾಕಿ ಗಡ್ಡ ಬಿಟ್ಟಿರುವುದರಿಂದ ಅರಬಿ ಅಥವ ಉರ್ದು ಹೆಸರಿಡುವುದರಿಂದ, ವ್ಯಕ್ತಿಯೊರ್ವನು ಮುಸ್ಲಿಮ್ ಎನಿಸಿಕೊಳ್ಳಲಾರ, ಅಲ್ಲದೆ ಮುಸ್ಲಿಮ್ ತಂದೆ ತಾಯಿಯರಿಗೆ ಹುಟ್ಟಿದ ಮಾತ್ರಕ್ಕೆ ಮುಸ್ಲಿಮ್ ಎನಿಸಿಕೊಳ್ಳಲಾರ, ಬದಲಾಗಿ ದೇವನ ಆಜ್ಞೆಗಳನ್ನು ಅನುಸರಿಸುವುದರಿಂದ ಮಾತ್ರವೇ ಮಸ್ಲಿಮ್ ಎಂದೆನಿಸಿಕೊಳ್ಳಲು ಸಾಧ್ಯ. ಮುಸ್ಲಿಮ್ ಎಂಬ ಪದವನ್ನು ಈ ರೀತಿಯೂ ಅರ್ಥಮಾಡಿಕೊಳ್ಳಬಹುದು,  ಪ್ರಕೃತಿಯನ್ನು ನೋಡಿರಿ, ಮರ, ಗಿಡ, ಬಳ್ಳಿ, ಸೂರ್ಯ, ಚಂದ್ರ, ನಕ್ಷತ್ರ, ಹಕ್ಕಿ ಪq್ಷಗಳು, ಮೀನು, ಇರುವೆ, ಮುಂತಾದವುಗಳೆಲ್ಲವು ದೇವನು ವಿಧಿಸಿರುವ ನಿಯಮಗಳಿಗೆ ವಿಧೇಯವಾಗಿ ಜೀವಿಸುತ್ತಿವೆ. ಆದ್ದರಿಂದ ಇವುಗಳೆಲ್ಲವೂ ಮುಸ್ಲಿಮ್ ಆಗಿವೆ, ಮಾತ್ರವಲ್ಲ ನಮ್ಮ ಶರೀರವನ್ನು ತೆಗೆದುಕೊಳ್ಳಿ, ನಮ್ಮ ಆರೀರದ ಭಾಗವಾದ ಹ್ಲದಯ, ಹೊಟ್ಟ, ನಾಡಿ, ಮೆದುಳು, ಮೂತ್ರಪಂಡಗಳು,,, ಮುಂತಾದವುಗಳೆಲ್ಲವೂ ಮುಸ್ಲಿಮ್ ಆಗಿವೆ. ಏಕೆಂದರೆ ಅವೆಲ್ಲವೂ ದೇವನು ವಿಧಿಸಿರುವ ವಿಧಿನಿಯಮಗಳೊಂದಿಗೆ ವಿಧೇಯವಾಗಿ ನಡೆಯುತ್ತಿವೆ. ಈ ಪ್ರಕಾರವಾಗಿ ಒಬ್ಬ ಮನುಷ್ಯನು ಮುಸ್ಲಿಮ್ ಅಲ್ಲದಿದ್ದರೂ ಅವನ ದೇಹ ಮುಸ್ಲಿಮ್ ಆಗಿದೆ. ಆದ್ದರಿಂದ ಈ ತತ್ವದ ಅಡಿಸ್ಥಾನದಲ್ಲಿ ದೇವನೆಡೆಗೆ ಯಾರ್ಯಾರಿಗೆ ವಿಧೆಯತೆ ಇದೆಯೋ ಅವರು ಯಾವುದೇ ಧರ್ಮದಲ್ಲಿ ಹಿಟ್ಟಿದವರಾಗಲಿ, ಪ್ರಪಂಚದ ಯಾವುದೇ ಮೂಲೆಯಲ್ಲಿ ಹುಟ್ಟಿದವರಾಗಲಿ, ಯಾವುದೇ ಭಾಷೆ ಮಾತನಾಡಲಿ, ಮಾತ್ರವಲ್ಲ ಯಾವುದೇ ಕಾಲದಲ್ಲಿ ಜೀವಿಸಿರಲಿ ಅವರೆಲ್ಲರೂ ಮುಸ್ಲಿಮರೆ, ಇದುವೇ ನಮಗೆ ಇಸ್ಲಾಮ್ ಹೇಳಿಕೊಡುವ ವಿಶಾಲ ನೋಟ. ದೇವರಿಗೆ ವಿಧೇಯರಾಗಿರುವವರು ಮಾತ್ರ ಮುಸ್ಲಿಮ್ ಆಗಿರುವರು. ವಿಧೇಯತೆ ತೊರೆದಲ್ಲಿ ಇಸ್ಲಾಮಿನಿಂದ ಹೊರ ಹೋಗಲ್ಪಡುವರು ಎಂಬುದನ್ನು ಅರ್ಥೈಸಿಕೊಳ್ಳಬೇಕು.
ಇಸ್ಲಾಮಿನ ಮೂಲವಿಶ್ವಾಸಗಳು; ಈ ದೇವನ ಮಾರ್ಗವು ಮುಖ್ಯವಾಗಿ ಮೂರು ವಿಶ್ವಾಸಗಳನ್ನು ಮುಂದಿಡುತ್ತದೆ, ಇವುಗಳನ್ನು ಎಲ್ಲಾಕಾಲದಲ್ಲಿಯೂ ಬಂದ ಸಂದೇಶವಾಹಕರು ತಮ್ಮ ತಮ್ಮ ಜನಾಂಗಗಳಿಗೆ ಬೊಧಿಸಿರುವರು. ಅವುಗಳು; 1) ಒಂದೇ ಮಾನವ ಕುಲ: ಪ್ರಪಂಚದಲ್ಲಿರುವ ಎಲ್ಲಾ ಮನುಷ್ಯರು ಒಂದು ಹೆಣ್ಣು ಮತ್ತು ಒಂದು ಗಂಡಿನಿಂದ ಹುಟ್ಟಿ ಇಡೀ ಪ್ರಪಂಚದಾದ್ಯಂತ ವ್ಯಾಪಿಸಿರುವರು. ನಾವು ಎಲ್ಲೇ ಜೀವಿಸಿದರೂ ಯಾವ ಭಾಷೆಯನ್ನೆ ಮಾತನಾಡಿದರೂ ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು.  “ಜನರೇ ನೀವು ನಿಮ್ಮ ಪಾಲಕ ಪ್ರಭುವನ್ನು ಭಯಪಡಿರಿ, ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಠಿಸಿರುವನು, ಅದೇ ಜೀವದಿಂದ ಅದರ ಜೋಡಿಯನ್ನು ಉಂಟು ಮಾಡಿದನು, ಮತ್ತು ಅವೆರಡರಿಂದ ಅನೇಕಾನೇಕ ಸ್ತ್ರೀ ಪುರುಷರನ್ನು ಲೋಕದಲ್ಲಿ ಹಬ್ಬಿಸಿದನು, ನೀವು ಯಾರ ಹೆಸರನ್ನೆತ್ತಿ ಪರಸ್ಪರ ಹಕ್ಕು ಬಾಧ್ಯತೆಗಳನ್ನು ಕೇಳುತ್ತೀರೊ ಆ ದೇವನನ್ನು ಭಯಪಡಿರಿ, ಕುಟುಂಬದ ಸಂಭಂಧಗಳನ್ನು ಕೆಡಿಸಬೇಡಿರಿ, ನಿಶ್ಚಯವಾಗಿಯೂ ದೇವನು ನಿಮಗೆ ವೀಕ್ಷಿಸುತ್ತಿರುವನೆಂಬುದು ಅರಿತುಕೊಳ್ಳಿ” ಪವಿತ್ರ ಖುರ್‍ಆನ್; 4:1. (ಅಲ್ಲಾಹ್ ಎಂದರೆ ಆರಾಧನೆಗೆ ಅರ್ಹನಿರುವ ಒಬ್ಬನೇ ದೇವರು) 2) ಒಬ್ಬನೇ ದೇವ: ಇಡೀ ಪ್ರಪಂಚವನ್ನು ಮಾನವ ಕುಲವನ್ನು ಸೃಷ್ಠಿಮಾಡಿ ಪಾಲನೆ ಮಾಡುತ್ತಿರುವ ದೇವನು ಒಬ್ಬನೇ ಅವನು ಮಾತ್ರವೇ ಆರಾಧನೆಗೆ ಅರ್ಹತೆ ಉಳ್ಳವನು, “ಹೇಳಿರಿ ಅಲ್ಲಾಹನು ಎಕೈಕನು, ಅಲ್ಲಾಹನು ಸಕಲರಿಂದಲೂ ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು, ಅವನಿಗೆ ಯಾವುದೇ ಸಂತಾನವಿಲ್ಲ ಅವನು ಯಾರ ಸಂತಾನವೂ ಅಲ್ಲ, ಅವನಿಗೆ ಸರಿಸಾಟಿ ಯಾರೂ ಇಲ್ಲ.” ಪವಿತ್ರ ಖುರ್‍ಆನ್;112:1-4. ಆದುದರಿಂದ ಪ್ರಪಂಚದ ಸೃಷ್ಠಿಕರ್ತನು ಏಕೈಕನೆ ಆಗಿದ್ದಾನೆ. ಅವನಿಗೆ ಅವನ ಸೃಷ್ಠಿಗಳಾದಂತಹಾ ನೀರು, ಗಾಳಿ, ಆಹಾರ, ಮುಂತಾದವುಗಳ ಅವಶ್ಯಕತೆಯಿಲ್ಲ ಅವನು ಹೊಸದಾಗಿ ಹುಟ್ಟಿರುವಂತಹವನಲ್ಲ.  ಅವನಿಗೆ ಮಡದಿ ಮಕ್ಕಳು, ಹಾಗೂ ತಂದೆ ತಾಯಿಯರಿಲ್ಲ, ಅವನಿಗೆ ಸರಿಸವಾಗಿ ಯಾರೂ ಯಾವುದೂ ಎಲ್ಲಿಯೂ ಇಲ್ಲ, ಈ ಗುಣಗಳನ್ನು ದೇವನ ಲಕ್ಷಣಗಳೆಂದು ಇಸ್ಲಾಮ್ ಹೇಳುತ್ತಿದೆ.
 ದೇವನನ್ನು ಬಿಟ್ಟು ಉಳಿದೇಲ್ಲವುಗಳು ಅವನ ಸೃಷ್ಠಿಗಳೇ ಆಗಿವೆ, ಅವನ ಬದಲಾಗಿ ಅವನ ಸೃಷ್ಠಿಗಳನ್ನು ಆರಾಧಿಸುವುದು, ನಿರ್ಜೀವ ವಸುಗಳನ್ನು ತೋರಿಸಿ ದೇವನೇಂದು ಹೇಳುವುದು ಮೋಸವೂ ಹಾಗೂ ಪಾಪವೂ ಆಗಿದೆ. ಈ ಕಾರ್ಯವು ದೇವನಿಗೆ ಅಪಮಾನ ಮಾಡುವುದಾಗಿದೆ, ಮಾತ್ರವಲ್ಲದೇ ಮನುಕುಲವು ದೇವರ ಹೆಸರಿನಲ್ಲಿ ವಿಭಜಿಸಲ್ಪಡುವುದಕ್ಕೆ ಮುಖ್ಯ ಕಾರಣವಾಗಿದೆ, (ಸೃಷ್ಠಿಕರ್ತನನ್ನು ಬಿಟ್ಟು ಸೃಷ್ಠಿಗಳನ್ನು ಆರಾಧಿಸುವಾಗ ಅವರವರ ಸ್ವಂತ ಕಲ್ಪನೆಗಳನ್ನು ಕೊಡಲಾಗುತ್ತದೆ, ಆಗ ಗುಂಪು ಗುಂಪುಗಳಾಗಿ ಜಗಳಗಳುಂಟಾಗುತ್ತವೆ) ಆಗ ಏಕತೆ ಅಸಾಧ್ಯವಾಗುತ್ತದೆ. ಈ ಕಾರಣದಿಂದ ಪ್ರತಿಯೊಬ್ಬರು ಅವರವರ ಅನಿಸಿಕೆಗಳ ಪ್ರಕಾರ ಎಂದೂ ಒಂದುಗೂಡದ ಗುಂಪುಗಳಾಗಿಬಿಡುವರು. ಈ ಕಾರಣದಿಂದ ಇದು ಇಸ್ಲಾಮಿನ ದೃಷ್ಠಿಯಲ್ಲಿ ಅತಿದೊಡ್ಡ ಪಾಪವಾಗಿದೆ. ಈ ಕಾರಣದಿಂದಲೇ ದೇವನು ಈ ಪಾಪವನ್ನು ಮಾತ್ರ ಖಂಡಿತ ಕ್ಷಮಿಸುವುದಿಲ್ಲ. 3) ಕರ್ಮಗಳ ವಿಚಾರಣೆ ಮತ್ತು ಮರಣಾನಂರ ಜೀವನ; ಒಂದು ದಿನ ಈ ಪ್ರಪಂಚವು ಸಂಪೂರ್ಣವಾಗಿ ನಾಶವಾಗುವುದು, ಪುನಃ ಎಲ್ಲಾ ಮನುಷ್ಯರು ತಮ್ಮ ಇಹಲೋಕದ ಕರ್ಮಗಳಿಗೆ ಪ್ರತಿಫಲ ಕೊಡುವುದಕ್ಕಾಗಿ ಜೀವ ನೀಡಿ ಎಬ್ಬಿಸಲ್ಪಡುವರು. ಈ ಭೂಲೋಕದಲ್ಲಿ ದೇವನ ಆಜ್ಞೆಗಳಿಗೆ ವಿಧೇಯರಾಗಿ ಜೀವಿಸಿರುವವರಿಗೆ ಸ್ವರ್ಗವು ಮತ್ತು ಅವಿಧೆಯರಾಗಿ ಬದುಕಿದ ಕೆಟ್ಟವರಿಗೆ ಆ ದಿನ ನರಕ ವಿಧಿಸಲ್ಪಡುವುದು. “ಕಟ್ಟಕಡೆಗೆ ಪ್ರತಯೊಬ್ಬನಿಗೂ ಮರಣ ಹೊಂದಬೇಕಾಗಿದೆ, ಮತ್ತು ನೀವೆಲ್ಲರೂ ನಿಮ್ಮ ನಿಮ್ಮ ಪ್ರತಿಫಲವನ್ನು ಪುನರುತ್ಥಾನ ದಿನದಂದು ಪಡೆಯುವವರಿದ್ದೀರಿ. ಅಲ್ಲಿ ನರಕಾಗ್ನಿಯಿಂದ ರಕ್ಷೆ ಹೊಂದುವವನೂ ಸ್ವರ್ಗದಲ್ಲಿ ದಾಖಲು ಮಾಡಪಡುವವನೂ ನಿಜವಾದ ಕೃತಾರ್ಥನು ಈ ಲೋಕದ ಜೀವನವಂತೂ ಕೇವಲ ಭ್ರಾಮಕ ಸಂಪತ್ತಾಗಿದೆ” ಪವಿತ್ರ ಖುರ್‍ಆನ್; 3:185.

ಇಸ್ಲಾಮಿನ ಸಂಸ್ಥಾಪಕ ಮುಹಮ್ಮದ್(ಸ)ಅಲ್ಲ;

 ಪ್ರೀತಿಯ ಸಹೋದರ ಸಹೋದರಿಯರೆ, ಇಸ್ಲಾಮ್ ಎಂಬುದು ತತ್ವ ಅಥವ ಗುಣದ ಹೆಸರು, ಇದನ್ನು ಅನುಸರಿಸುವವರೇ ಮುಸ್ಲಿಮರು ಎಂಬುದನ್ನು ನೀವು ಅರಿತುಕೊಂಡಿದ್ದೀರಾ ಹಾಗಾಗಿ ಇದು ಒಂದು ಹೊಸ ಮಾರ್ಗವಲ್ಲ ಎಂಬ ಸತ್ಯವನ್ನು ನೀವು ಅರ್ಥಮಾಡಿಕೊಳ್ಳಬಹುದು. ಆದರೆ ದುರದೃಷ್ಟವಶಾತ್ ಬಹಳಷ್ಟು ಜನರಲ್ಲಿ ಇಂದಿಗೂ ಕೂಡಾ ಇಸ್ಲಾಮ್ ಎಂಬುದು ಒಂದು ಹೊಸ ಧರ್ಮ ಮತ್ತು ಮುಹಮ್ಮದ್(ಸ) ಪೈಗಂಬರ್‍ರವರು ಈ ಧರ್ಮದ ಸಂಸ್ಥಾಪಕರು ಎಂದು ನಂಬಿರುವರು. ಆತ್ಮಿಯರೆ ಇದು ಖಂಡಿತ ಹುಸಿಯಾಗಿದ್ದು, ಈ ತಪ್ಪು  ಪಾಠವನ್ನು ಇಂದಿಗೂ ಪ್ರಸರಿಸಲಾಗುತ್ತಿದೆ. ಹಾಗೂ ಪಠ್ಯಪುಸ್ತಕಗಳಲ್ಲಿಯೂ ಮುಂದುವರೆಯುತ್ತಿದೆ, ಇಂದಿಗೂ ಈ ತಪ್ಪನ್ನು ಸರಿಪಡಿಸಲಾಗುತ್ತಿಲ್ಲ.
 ಹೌದು ಸ್ನೆಹಿತರೆ ನಾವೆಲ್ಲರೂ ಒಂದೇ ಕುಲಕ್ಕೆ ಸೇರಿರುವವರು ಎಂದು ಹೇಳುವಾಗ ನಮ್ಮ ದೇವನು ನಮಗಾಗಿ ಒಂದೇ ಮಾರ್ಗವನ್ನು ಕೊಡಲು ಸಾಧ್ಯ ಎಂಬುದು ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಆ ಮಾರ್ಗವೇ ಪ್ರತಿಯೊಂದು ಕಾಲ ಘಟ್ಟಗಳಲ್ಲಿ ಎಲ್ಲೆಲ್ಲಿ ನಮ್ಮ ಕುಟುಂಬಗಳು ಹರಿದು ಹೋಗಿವೆಯೋ ಅಲ್ಲಲ್ಲಿ ಸಂದೇಶವಾಹಕರ ಮೂಲಕ ಪುನಃ ಪುನಃ ಪರಿಚಯಿಸಲ್ಪಟ್ಟಿದೆ. ಆ ಮಾರ್ಗದ ಸಂದೇಶವಾಹಕರ ಸಾಲಿನಲ್ಲಿ ಅಂತಿಮವಾಗಿ ಬಂದಂತಹಾ ನನ್ನ ನಿಮ್ಮೆಲ್ಲರ ಸಂದೇಶವಾಹಕ ಮುಹಮ್ಮದ್(ಸ) ಪೈಗಂಬರ್‍ರವರ ಮೂಲಕವೂ ಅದೇ ಮಾರ್ಗ ಪರಿಚಯಿಸಲ್ಪಟ್ಟಿದೆ. ಆ ಮಾರ್ಗದ ಹೆಸರೇ ಇಂದು ಅರಬೀ ಭಾಷೆಯಲ್ಲಿ ಇಸ್ಲಾಮ್ ಎಂದು ಕರೆಯಲಾಗಿದೆಯೇ ಹೊರತು, ಮುಹಮ್ಮದ್(ಸ) ಪೈಗಂಬರ್‍ರವರು ಹೊಸದಾಗಿ ತಂದಿರುವ ಆಅಥವ ಸಂಸ್ಥಾಪಿಸಿರುವ ಧರ್ಮವಲ್ಲ ಎಂಬುದೂ ಸತ್ಯ.

ಇಸ್ಲಾಮ್ ಹೇಳುವ ದೇವಪರಿಕಲ್ಪನೆ:

 ದೇವನೊಬ್ಬನನ್ನು ಬಿಟ್ಟು ಬೇರೆಯಾರೂ ದೇವಸಮಾನರಿಲ್ಲ. ಒಂದು ಪಾಠ ಶಾಲೆಗೆ ಇಬ್ಬರು ಮುಖ್ಯೊಪಾಧ್ಯಾಯರು ಅಥವ ಪ್ರಾಂಶುಪಾಲರು, ಒಂದು ಬಸ್ಸಿಗೆ ಇಬ್ಬರು ಚಾಲಕರಿದ್ದರೆ ಗೊಂದಲ ಗಲಾಟೆಗಳು ನಡೆದು ಅಪಘಾತಗಳಾವ ಸಾಧ್ಯತೆಗಳಿವೆಯೋ ಹಾಗೆಯೇ ಒಂದಕ್ಕಿಂತ ಹೆಚ್ಚು ದೇವರುಗಳಿರುತ್ತಿದ್ದರೆ ಅದು ಎಂದೋ ನಾಶವಾಗುತ್ತಿತ್ತು ಎಂಬುದು ಸಾಮಾನ್ಯರಿಗೂ ಗೊತ್ತಾಗುತ್ತದೆ. ಪವಿತ್ರ ಖುರ್‍ಆನ್ ಹೇಳುತ್ತಿದೆ; “ಭೂಮಿಆಕಾಶಗಳಲ್ಲಿ ಏಕೈಕ ದೇವನ ಹೊರತು ಇತರ ದೇವರುಗಳಿರುತ್ತಿದ್ದರೆ (ಭೂಮಿ ಮತ್ತು ಆಕಾಶ) ಇವೆರಡರ ವ್ಯವಸ್ಥೆಯು ಕೆಟ್ಟು ಹೋಗುತ್ತಿತ್ತು. ಆದುದರಿಂದ ವಿಶ್ವ ಸಿಂಹಾಸನದ ಪ್ರಭುವಾಗಿವ ಅಲ್ಲಾಹನು ಇವರು ಹೊರಿಸುವ ಆರೋಪಗಳಿಂದ ಪರಿಶುದ್ಧನಾಗಿರುತ್ತಾನೆ” 21:22.

ಆರಾಧನೆಗೆ ಆರ್ಹನಿರುವವನು ಯಾರು ?

 “ಹೇ ಜನರೇ ನಿಮ್ಮನ್ನು ನಿಮ್ಮ ಪೂರ್ವಿಕರನ್ನೂ ಸೃಷ್ಠಿಸಿದ ನಿಮ್ಮ ಪ್ರಭುವಿನ ದಾಸ್ಯ ಆರಾಧನೆ ಮಾಡಿರಿ. (ಹೀಗೆ ಮಾಡಿದರೆ) ನೀವು ರಕ್ಷಣೆ ಹೊಂದಬಹುದು” ಪವಿತ್ರ ಖುರ್‍ಆನ್; 2:21. “ನಿಮ್ಮ ಮಾತೆಯರ ಗರ್ಭಗಳಲ್ಲಿ ತನಗಿಷ್ಟಬಂದ ರೂಪವನ್ನು ನಿಮಗೆ ಕೊವಾತನು ಅವನೇ, ಪ್ರಬಲನೂ ಯುಕ್ತಿಪೂರ್ಣನೂ ಆಗಿರುವ ಅವನ ಹೊರತು ಅನ್ಯ ಆರಾಧ್ಯನಿಲ್ಲ” ಪವಿತ್ರ ಖುರ್‍ಆನ್;3:6.

ಮಧ್ಯವರ್ತಿಗಳಿಗೆ ಜಾಗವಿಲ್ಲ:

ಈ ರೀತಿಯಾಗಿ ಎಲ್ಲಾ ಮನುಕುಲಕ್ಕೇ ಸಾಮಾನ್ಯನಾಗಿರುವವನು ಮತ್ತು ಸರ್ವ ಶಕ್ತನೂ ಆಗಿರುವ ಏಕ ದೇವನಿಗೆ ಮಾತ್ರ ಪೂಜಿಸಬೇಕೆಂದು ಮಧ್ಯವರ್ತಿಗಳ ರಹಿತವಾಗಿರಬೇಕು, ಮೂಢನಂಬಿಕೆ, ರೂಢಿ ಸಂಪ್ರದಾಯ, ಪಾಳು ಸಂಪ್ರದಾಯ ರಹಿತವಾಗಿ, ನೇರವಾಗಿ ಅವನನ್ನೇ ಆರಾಧಿಸಬೇಕೆಂದು ಇಸ್ಲಾಮ್ ಹೇಳುತ್ತದೆ. ಪವಿತ್ರ ಖುರ್‍ಆನಿನಲ್ಲಿ ದೇವನು ಹೇಳುವನು; “ನಾವು ಮಾನವನನ್ನು ಸೃಷ್ಠಿಸಿದ್ದೇವೆ ಮತ್ತು ನಾವು ಅವನ ಮನಸ್ಸಿನಲ್ಲಿ ಉದ್ಭವಿಸುವ ದುರ್ಭಾವನೆಗಳನ್ನು ಬಲ್ಲೇವು ನಾವು ಅವನ ಕಂಠನಾಡಿಗಿಂತಲೂ ಹೆಚ್ಚು ಅವನಿಗೆ ಸಮೀಪವಿದ್ದೇವೆ”. 50:16.
 “ಓ ಪೈಗಂಬರರೇ ನನ್ನ ದಾಸರು ನಿಮ್ಮೊಡನೆ ನನ್ನ ಬಗ್ಗೆ ಕೇಳಿದರೆ, ನಾನು ಅವರಿಗೆ ನಿಕಟವಾಗಿದ್ದೇನೆಂದೂ, ಪ್ರಾರ್ಥಿಸುವವನು ನನ್ನನ್ನು ಪ್ರಾರ್ಥಿಸುವಾಗ ಅವನ ಪ್ರಾರ್ಥನೆಯನ್ನು ಆಲಿಸುತ್ತೇನೆಂದೂ ಅದಕ್ಕೆ ಉತ್ತರಿಸುತ್ತೇನೆಂದೂ ಅವರಿಗೆ ಹೇಳಿರಿ. ಆದುದರಿಂದ ಅವರು ನನ್ನ ಕರೆಗೆ ಓಗೊಡಲಿ ಮತ್ತು ನನ್ನ ಮೇಲೆ ವಿಶ್ವಾಸವಿರಿಸಲಿ(ಇದನ್ನು ಅವರಿಗೆ ತಿಳಿಸಿಬಿಡಿರಿ) ಅವರು ಸನ್ಮಾರ್ಗ ಪಡೆಯಲೂಬಹುದು” ಪವಿತ್ರ ಖುರ್‍ಆನ್; 2:186. 

ದೇವನನ್ನು ಗುರುತಿಸುವುದು ಅಥವ ಅರಿಯುವುದು ಹೇಗೆ ?

 ದೇವನ ಬಗ್ಗೆ ಮತ್ತು ಮರಣಾನಂತರ ಜೀವನದ ಬಗ್ಗೆ ವೈರುಧ್ಯರಹಿತ ಸ್ಪಷ್ಟವಾದ ತತ್ವವಿದ್ದರೆ ಮಾತ್ರವೇ ಮನುಷ್ಯನು ಆಸ್ತಿಕತೆ ಅಥವ ದೇವ ನಂಬಿಕೆಯಲ್ಲಿ ಸ್ಥಿರವಾಗಿರಲು ಸಾಧ್ಯ, ಹಾಗೂ ಪಾಪಗಳಿಂದ ದೂರವಾಗಿರಲೂ ಸಹ ಸಾಧ್ಯ, ಅದಕ್ಕಾಗಿ ಪವಿತ್ರ ಖುರ್‍ಆನ್ ಯುಕ್ತಿ ಪೂರ್ಣವಾಗಿ ದಾರಿತೋರಿಸುತ್ತದೆ. ಆ ಕಾರಣದಿಂದ ಮನುಷ್ಯನು ದೇವವಿಶ್ವಾಸದಲ್ಲಿ ಆಸಕ್ತಿಯಿಂದ ಸ್ಥಿರವಾಗಿರುತ್ತಾನೆ. ನಮ್ಮ ಸುತ್ತ ಮುತ್ತಲಿರುವ ಸೃಷ್ಠಿಗಳನ್ನು ನೋಡಿ ಪರಿಶೀಲಿಸಿ, ದೇವನನ್ನು ಅರಿಯಲು ಅವು ನಮಗೆ ಮಾರ್ಗದರ್ಶಿಸುತ್ತಿವೆ. “( ಈ ಸತಯವನ್ನು ಅರಿತುಕೊಳ್ಳಲಿಕ್ಕಾಗಿ ಯಾವುದಾದರು ಕುರುಹು ಅಥವ ದೃಷ್ಟಾಂತ ಬೇಕಾದರೆ) ಆಕಾಶ ಮತ್ತು ಭೂಮಿಯ ನಿರ್ಮಾಣದಲ್ಲಿ ಇರುಳು ಹಗಲುಗಳು ಒಂದರ ಹಿಂದೆ ಇನ್ನೊಂದರಂತೆ ನಿರಂತರವಾಗಿ ಬರುತ್ತಿರುವುದರಲ್ಲಿ ಜನೊಪಯೊಗಿ ಸಾಮಗ್ರಿಗಳನ್ನು ಹೊತ್ತುಕೊಂಡು ಜಲಧಿಗಳಲ್ಲಿ ಸಂಚರಿಸುತ್ತಿರುವ ನೌಕೆಗಳಲ್ಲಿ ಅಲ್ಲಾಹನು ಆಕಾಶದಿಂದ ಸುರಿಸಿ ಅದರ ಮೂಲಕ ಭೂಮಿಯನ್ನು ನಿರ್ಜೀವಾವಸ್ಥೆಯ ಬಳಿಕ ಸಜೀವಗೊಳಿಸಿ, ಈ ವ್ಯವಸ್ಥೆಯ ಮೂಲಕ ಭೂಮಿಯಲ್ಲಿ ತರತರಹದ ಜೀವರಾಶಿಗಳು ಹರಡಿರುವಂತೆ ಮಾಡಿದ, ಮಳೆ ನೀರಿನಲ್ಲಿ ಮಾರುತಗಳ ಚಲನೆಯಲ್ಲಿ ಹಾಗೂ ಆಕಾಶ ಮತ್ತು ಭೂಮಿಯ ನಡುವೆ ನಿಯಂತ್ರಿಸಲ್ಪಟ್ಟಿರುವ ಮೋಡಗಳಲ್ಲಿ ನಿಶ್ಚಯವಾಗಿಯೂ ವಿಚಾರವಂತರಿಗೆ ಅನೇಕಾನೇಕ ದೃಷ್ಟಾಂತಗಳಿವೆ” ಪವಿತ್ರ ಖುರ್‍ಆನ್; 2:164. 

ಹಿಂದಿನ ವೇದಗಳಲ್ಲಿ ಏಕದೇವತ್ವ:

 ಇಂದು ಕೊನೇಯ ವೇದಗ್ರಂಥ ಒತ್ತಿ ಹೇಳುವಂತೆಯೇ, ದೇವನ ಹಿಂದಿನ ಗ್ರಂಥಗಳು ಮತ್ತು ದೈವಿಕ ಗ್ರಂಥಗಳೆಂದು ಯಾರು ನಂಬುತ್ತಿದಾರೆಯೋ ಅವರಿಗೆ ಆಗ್ರಂಥಗಳು ಕೂಡಾ ಈ ಸತ್ಯವನ್ನು ಒತ್ತಿ ಹೇಳುತ್ತಿರುವುದನ್ನು ಕಾಣಬಹುದು.
“ನಂಬಿದಾ ಹೆಂಡತಿಗೆ ಗಂಡನೊಬ್ಬ ಕಾಣಿರೋ, ನಂಬಬಲ್ಲ ಭಕ್ತರಿಗೆ ದೇವನೊಬ್ಬ ಕಾಣಿರೋ.
ಬೇಡ ಬೇಡ ಅನ್ಯ  ದೈವಂಗಗಳ ಸಂಗ ಬೇಡ, ಅನ್ಯ ದೈವವೇಂಬುದು ಹಾದರಾ ಕಾಣಿರೋ”. ಬಸವಣ್ಣ.
“ಅರುಹು ಬರಲೆಂದು ಕುರುಹನಿಟ್ಟೊಡೆ,(ಕುರುಹನ್ನು ಇಡಲಾಗಿದೆ) ಅರುಹನೇ ಮರೆತು (ಜ್ಞಾನ ಪಡೆಯುವುದನ್ನು ಮರೆತು), ಕುರುಹನೇ ಪೂಜಿಸುವವರಿಗೆ(ಸೃಷ್ಠಿಗಳನ್ನೇ) ಕೆರೆವಿಲಿ ಹೊಡೆ ಎಂದ ಸರ್ವಜ್ಞ.”
‘ಏಕ ಮೇವಾದ್ವಿತೀಯಮ್’ ಅವನು ಏಕನು ದ್ವತೀಯನಿಲ್ಲದವನು. (ಛಾಂದೋಗ್ಯುಪನಿಷತ್ 6/2/1).
‘ನಚಾಸ್ಯ ಕಶ್ಚಿಜ್ಜನಿತಾ ನ ಚಾಧಿಪ’ ಅವನನ್ನು ಸೃಷ್ಠಿಸುವವನಾಗಲಿ ಅವನಿಗೆ ಯಜಮಾನನಾಗಲಿ ಇಲ್ಲ (ಶ್ವೆತಾಶತರ ಉಪನಿಶತ್)
‘ಯಾಏಕ ಇತ್ತಮುಷ್ಠಿಹಿ’ ಏಕೈಕನೂ ಆದ. (ಋಗ್ವೇದ).
ಮುಂದೆ ಬ್ರಹ್ಮ ಸೂತ್ರದಲ್ಲಿ ನೋಡಬಹುದು, ‘ಎಕ್ಕಮ್ ಬ್ರಾಹ್ಮ ದ್ವಿತಿಯ ನಾಸ್ತೆ ನೆಹನ ನಾಸ್ತೆ ಕಿಂಚನ್’. ದೇವನು ಒಬ್ಬನೇ ಇನ್ನೋಬ್ಬನಿಲ್ಲ ಇಲ್ಲ ಇಲ್ಲ ಇಲ್ಲವೇಇಲ್ಲ. (ಬ್ರಹ್ಮ ಸೂತ್ರ)
‘ಲಾ ಇಲಾಹ ಇಲ್ಲಲ್ಲಾಹ್’ ದೇವನ ಹೊರತು ಇತರ ಯಾರೂ ಆರಾಧನೆಗೆ ಅರ್ಹರಿಲ್ಲ, ಎಂಬುದು ಇಸ್ಲಾಮಿನ ಮೂಲ ಮಂತ್ರ.

ಬೈಬಲ್‍ನಲ್ಲಿ ಏಕದೇವತ್ವ:

ದೇವರಲ್ಲದವರನ್ನು ಆರಾಧಿಸುವುದು ಮಹಾಪಾಪ.

1. ಯೇಸುಕ್ರಿಸ್ತರು ಸ್ವತಃ ಜನರನ್ನು ದೇವರ ಸನ್ನಿಧಿಗೆ ಹೀಗೆ ಕರೆಯುವ ರೂಢಿಯಿತ್ತು (ಅಲ್ಲಾಹ್/ಒಡೆಯ/ಯಹೋವ)

1) ಯೇಸುಕ್ರಿಸ್ತರು ಹೀಗೆ ಹೇಳುತ್ತಿದ್ದರು : `ಓ ಇಸ್ರಯೀಲ್ ಜನವೇ ಕೇಳಿ ನಮ್ಮ ದೇವರಾದ ಕರ್ತನು ಒಬ್ಬನೇ ದೇವರು’ ಎಂಬುದು ಮಾರ್ಕ್ 12 : 20
2) ಯಾವ ವ್ಯಕ್ತಿಯೂ ಇಬ್ಬರು ಒಡೆಯರ ಸೇವೆಯನ್ನು ಏಕಕಾಲದಲ್ಲಿ ಮಾಡಲಾರ. ಅವನು ಒಬ್ಬನನ್ನು ಪ್ರೀತಿ ನಿಷ್ಠೆಯಿಂದ, ಇನ್ನೊಬ್ಬರನ್ನು ವಿರೋಧದಿಂದ ಸೇವೆ ಸಲ್ಲಿಸಬಹುದಾಗಿದೆ. ಒಬ್ಬ ಮಾಲೀಕನಿಗೆ ವಿಧೇಯನಾಗಿಯೂ ಇನ್ನೊಬ್ಬನಿಗೆ ಹೀನಯಿಸುವ (ತಾತ್ಸಾರದಿಂದ) ವಿಧದಲ್ಲಿ ಸೇವೆ ಸಲ್ಲಿಸಬಹುದು. ಮತ್ತಾಯ 6 : 24
3) ಯೇಸುಕ್ರಿಸ್ತನು, ತನ್ನ ತಾಯಿಯ ಕುರಿತು ಹೀಗೆ ಸಂಬೋಧಿಸುತ್ತಾನೆ.
`ನನಗೆ ಹೀಗೆ ನಿರ್ಭಂದಿಸಬೇಡ ನಾನು ಇನ್ನೂ ಆ ದೇವ ಸನ್ನಿಧಾನಕ್ಕೆ ತಲುಪಿಲ್ಲ ಆದರೆ ನಾನು ನನ್ನ ಮಾನವ ಸಹೋದರೆಡೆಗೆ ಹೋಗಬೇಕಾಗಿದೆ ಆ ದೇವ (ತಂದೆ) ನನ್ನ ಮತ್ತು ಅವರ ದೇವ. ಜಾನ್ 20 : 17
                ಯೇಸು ಕ್ರಿಸ್ತನು ಸರ್ವರಿಗೂ ದೇವರೊಬ್ಬನೆ ಎಂದು ಹೇಳಿರುವುದು ಮಾತ್ರವಲ್ಲ. ತಾನೂ ಆ ದೇವರನ್ನು ಆರಾಧಿಸುತ್ತಿದ್ದನು. ತಾನು ಬೋಧಿಸಿದ್ದನ್ನು ಸ್ವತಃ ಅನುಸರಿಸುತ್ತಿದ್ದನು.

2) ಯೇಸುಕ್ರಿಸ್ತರು ನೈಜವಾಗಿ ಏಕದೇವ ಯಹೋವ(ಅಲ್ಲಾಹ್)ನನ್ನು  ಮಾತ್ರ ಆರಾಧಿಸುತ್ತಿದ್ದರು.

                ಆ ಮಹತ್ತರ ಘಳಿಗೆಯಲ್ಲಿ ಯೇಸುಕ್ರಿಸ್ತರು ಪ್ರಾರ್ಥಿಸಲು ಬೆಟ್ಟದ ಮೇಲೇರಿ ಹೋಗಿ ಇಡೀ ರಾತ್ರಿ ದೇವರನ್ನು ಪ್ರಾರ್ಥಿಸುತ್ತಾ ಕಳೆದರು. ಲೂಕ್ 6 : 12

3) ಯೇಸುಕ್ರಿಸ್ತರು ತಮ್ಮ ಪವಾಡಗಳನ್ನು ಮಾಡುವಾಗ ಯಹೋವಾ(ಅಲ್ಲಾಹ್) ನನ್ನು ಪ್ರಾರ್ಥಿಸುತ್ತಿದ್ದರು.

                ಯೇಸುಕ್ರಿಸ್ತರು ಜನರಿಗೆ ಉತ್ತರಿಸುತ್ತಿದ್ದರು. `ಕೇವಲ ಪ್ರಾರ್ಥನೆಯಿಂದ ಮಾತ್ರ ಇಂತಹ ಪವಾಡಗಳು ಜರುಗುತ್ತವೆ ಹೊರತು ಬೇರಾವುದರಿಂದಲೂ ಅಲ್ಲ.  ಮಾರ್ಕ್ 9 : 29

4) ಯೇಸುಕ್ರಿಸ್ತರು ತಮ್ಮ ಕಠಿಣ, ಕಷ್ಟಕಾರ್ಪಣ್ಯ ಕಾಲದಲ್ಲಿ ಯಹೋವ(ಅಲ್ಲಾಹ್) ನನ್ನು ಪ್ರಾರ್ಥಿಸುತ್ತಿದ್ದರು. (ಆರ್ಥರಾಗಿ ಆಲಾಪಿಸುತ್ತಿದ್ದರು)

                 ಅವರು ಸ್ವಲ್ಪ ದೂರ ಮುಂದೆ ಹೋಗಿ ತಮ್ಮ ದೇಹವನ್ನು ನೆಲದ ಮೇಲೆ ಚೆಲ್ಲಿ ಯಾತನೆಯ ಕಾಲದಲ್ಲಿ ತಾವು ನರಳುವ ಸ್ಥಿತಿ ಸಾಧ್ಯವಾಗುತ್ತಿದ್ದರೆ ಬರುತ್ತಿರಲಿಲ್ಲ ಎಂದು ಪ್ರಾರ್ಥಿಸುತ್ತಿದ್ದರು.         ಮಾರ್ಕ್ 14 : 35

5) ಯೇಸುಕ್ರಿಸ್ತರು, ತಮ್ಮ ಅನುಯಾಯಿಗಳಿಗೆ ಏಕದೇವ ಯಹೂದ(ಅಲ್ಲಾಹ್) ನನ್ನು ಆರಾಧಿಸಲು ಬೋಧಿಸಿದರು.

ನೀವು ದೇವರನ್ನು ಪ್ರಾರ್ಥಿಸುವಾಗ(ಬೇಕಾದರೆ) ನಿಮ್ಮ ಏಕಾಂತ ಕೋಣೆಗೆ ಹೋಗಿರಿ. ಕೋಣೆಯ ಬಾಗಿಲನ್ನು ಮುಚ್ಚಿ ಕೊಂಡು ಸರ್ವರಿಗೂ ತಂದೆಯಾದ ಅಗೋಚರವಾದ ಆ ಪರಮಾತ್ಮನನ್ನು ಆತ್ಮೀಯವಾಗಿ ಪ್ರಾರ್ಥಿಸಿರಿ. ಖಂಡಿತವಾಗಿಯೂ ನಮಗೆ ಅಗೋಚರವಾಗಿರುವ ಆ ದೇವರಿಗೆ ನಾವು ಏಕಾಂತದಲ್ಲಿಯೂ ಯಾರಿಗೂ ಕಾಣದಂತೆಯೂ ಮಾಡುವ ಪ್ರತಿ ಕೃತ್ಯವೂ ಮತ್ತು ಪ್ರಾರ್ಥನೆಯ ಪ್ರತಿಪದವು ನಮ್ಮ ಸ್ಥಿತಿಯೂ, ಮನಸ್ಸಿನ ವಾಣಿಯೂ ಅವನಿಗೆ ಕಾಣಿಸುತ್ತದೆ ಮತ್ತು ಕೇಳಿಸುತ್ತದೆ. ಆ ಕರುಣಾಮಯಿಯು ಖಂಡಿತವಾಗಿಯೂ ಅವುಗಳಿಗೆ ಸ್ಪಂದಿಸಿ ಆತನ ದಯೆ ಕರುಣಿಸುತ್ತಾನೆ ಮತ್ತು ಪ್ರತಿಫಲ ನೀಡುತ್ತಾನೆ. ಮ್ಯಾಥೊವ್ 6 : 6

6) ಯೇಸುಕ್ರಿಸ್ತರು ಕೇವಲ ಏಕೈಕ ಅಲ್ಲಾಹ್‍ನನ್ನೇ ಮಾತ್ರ ಸ್ತುತಿಸುತ್ತಿದ್ದರು ಮತ್ತು ಕೃತಜ್ಞತಾಪೂರ್ವಕವಾಗಿ ಸಾಷ್ಟಾಂಗವೆರಗುತ್ತಿದ್ದರು.

ಆ ಸಮಯದಲ್ಲಿ(ಪ್ರಾರ್ಥನಾಕಾಲ) ಯೇಸುಕ್ರಿಸ್ತರ ಮನ ಪವಿತ್ರ ಚೇತನ ಹಾಗೂ ಆನಂದದಿಂದ ತುಂಬುತ್ತಿತ್ತು ಹಾಗೂ ಹೀಗೆ ಉಚ್ಚರಿಸುತ್ತಿದ್ದರು. `ಓ ಭೂಮಿ ಆಕಾಶಗಳ ಒಡೆಯನಾದ ತಂದೆಯೇ ನನ್ನ ಕೃತಜ್ಞತೆ(ಶರಣತೆ)ಯನ್ನು ಸ್ವೀಕರಿಸು ಏಕೆಂದರೆ
                (ಕಾರಣ) ನೀನು ಈ ಅಜ್ಞಾನಿಗೆ ವಿದ್ಯಾವಂತರಿಂದ ಮತ್ತು ಬಲ್ಲವರಿಂದ ಅಡಗಿಸಿಟ್ಟಿದ್ದ ಅಮೂಲ್ಯವಾದದ್ದನ್ನು ನನಗೆ ಕರುಣಿಸಿರುವೆ. ಓ ತಂದೆಯೇ ಇದು ನಿನ್ನ ಇಚ್ಛೆಯಾಗಿತ್ತು. ಹಾಗೆಯೇ ನೀನು ಮಾಡಿರುವೆ. ಲೂಕ್ 10 : 21

7) ಜನರು ಯೇಸುಕ್ರಿಸ್ತರು ಮಾಡಿ ತೋರಿಸಿದ ಪವಾಡಗಳನ್ನು ನೋಡಿ ದೇವರನ್ನು ಸ್ತುತಿಸಿದರು.

          ಜನರು ಒಬ್ಬ ಮೂಕ ಮಾತನಾಡಲು ಪ್ರಾರಂಭಿಸಿದ್ದನ್ನು ಒಬ್ಬ ಅಂಗವಿಕಲ ತನ್ನ ಅಂಗವಿಕಲತೆಯಿಂದ ಮುಕ್ತನಾಗಿ ಅ ಒಬ್ಬ ಕುಂಟ ನಡೆದಾಡುವುದನ್ನು ನೋಡಿ ಹಾಗೂ ಒಬ್ಬ ಕುರುಡ ನೋಡುವಂತಹ ನೇತ್ರಶಕ್ತಿಯನ್ನು ಪಡೆದ ಮೇಲೆ ಆಶ್ಚರ್ಯ ಮತ್ತು ಭಕ್ತಿಯಿಂದ ಇಸ್ರೇಲಿನ ಏಕದೇವರನ್ನು ಸ್ತುತಿಸಿದರು. ಮ್ಯಾಥೋವ್ : 15 : 3

8)         ಯೇಸುಕ್ರಿಸ್ತರು ಸಾಮಾನ್ಯವಾಗಿ ಎಲ್ಲರಿಗೂ ಕೇಳಿಸುವಂತೆ `ತಂದೆ ಮಹಾನನು’ (ಅಲ್ಲಾಹು ಅಕ್ಬರ್) ಎಂದು ಕೂಗುತ್ತಿದ್ದರು.

                 1) ನಾನು ಸ್ಪಷ್ಟವಾಗಿ ಸತ್ಯವಾಗಿ ಘೋಷಿಸುತ್ತೇನೆ.        ಯಾವ ಗುಲಾಮನು ತನ್ನ ಧಣಿಗಿಂತ ದೊಡ್ಡವನಲ್ಲ. ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತ ದೊಡ್ಡವನಲ್ಲ ಅಥವಾ ಸಂದೇಶವಾಹಕನನ್ನು ಕಳುಹಿಸುವಂತಹ ಆ ಮಹಾನ್ ಪ್ರಭುವಿಗಿಂತ ದೊಡ್ಡವನಿಲ್ಲ. ಜಾನ್  13 : 16
                2) ಯೇಸುಕ್ರಿಸ್ತರ ಈ ನುಡಿಗಳನ್ನು ಕೇಳಿದಾಗ ನೆರೆದ ಜನರಲ್ಲಿ ಇದ್ದ ಒಬ್ಬ ಮಹಿಳೆ ಅವರಿಗೆ ಹೀಗೆ ಹೇಳಿದಳು. `ನಿನ್ನನ್ನು           ಜನ್ಮಕೊಟ್ಟು ಪಾಲಿಸಿ ಪೋಷಿಸಿದ ಆ ತಾಯಿ ಎಂತಹಾ ಅದೃಷ್ಟ ಮತ್ತು ಧನ್ಯಳು’. ಆದರೆ ಯೇಸುಕ್ರಿಸ್ತರು ಉತ್ತರಿಸಿದರು.           `ತಾಯಿ…. ಆ ಜನ ಎಷ್ಟು ಧನ್ಯರು ಆ ದೇವರ ಅಮೃತವಾಣಿಯನ್ನು ಕೇಳುವವರು ಮತ್ತು ಅದರಂತೆ ಪಾಲಿಸುವವರು.   ಲೂಕ್  11 : 27-28

1.         ಬಹುದೇವಾರಾಧನೆ(ಶಿರ್ಕ) ಎಂದರೇನು?

 ನಮ್ಮನ್ನು ಸೃಷ್ಠಿಮಾಡಿರುವ ಸೃಷ್ಠಿಕರ್ತನನ್ನು ಬಿಟ್ಟು ಮನುಷ್ಯ, ಸೂರ್ಯ, ಚಂದ್ರ, ಪ್ರಾಣಿ, ಮತ್ತು ಇದೇ ತರಹದ ಸೃಷ್ಠಿಗಳನ್ನು ಆರಾಧಿಸುವುದು ಮತ್ತು ಪ್ರಾರ್ಥಿಸುವುದು, ಸತ್ತುಹೊದ ಮನುಷ್ಯರ ಶಿಲೆ, ಸಮಾಧಿ(ದರ್ಗಾ)ಮತ್ತು ಕಲ್ಪಿತ ರೂಪಗಳನ್ನು ಆರಾಧಿಸುವುದು,ಅವುಗಳ ಹತ್ತಿರ ಪ್ರಾರ್ಥಿಸುವುದು, ದೇವರಲ್ಲದಿರುವ ವಸ್ತುವನ್ನು ದೇವರೆಂದು ಕರೆಯುವುದು. ಏಕೈಕನಾಗಿರುವ ದೇವರಿಗೆ ಮಡದಿ-ಮಕ್ಕಳು, ಇರುವರೆಂದು ಕಲ್ಪಿಸಿಕೊಂಡು ಅವರನ್ನು ಪೂಜಿಸುವುದು, ಇದೇ ರೀತಿಯ ಇತರೇ ಕೆಲಸಗಳಿಗೂ ಬಹುದೇವರಾಧನೆ(ಶಿರ್ಕ) ಎಂದು ಕರೆಯುವರು. ಪವಿತ್ರ ಖುರ್‍ಆನ್ ದೇವ ಸಹಭಾಗಿತ್ವವನ್ನು(ಶಿರ್ಕ) ಖಂಡಿಸುತ್ತದೆ. “ನೀನು ದೇವನೊಂದಿಗೆ ಸಹಭಾಗಿತ್ವವನ್ನು ಕಲ್ಪಿಸದಿರು, ನಿಸ್ಸಂದೇಹವಾಗಿಯೂ ಸಹಭಾಗಿತ್ವ ಕಲ್ಪಿಸುವುದು ಘೋರ ಅಕ್ರಮವಾಗಿದೆ” 31:13. “ತನ್ನ ಜೊತೆ (ಯಾರನ್ನಾದರೂ) ಪಾಲುದಾರರನ್ನಾಗಿಸುವುದನ್ನು ಅಲ್ಲಾಹನು ಖಂಸಿತ ಕ್ಷಮಿಸುವುದಿಲ್ಲ- ಅದರ ಹೊರತು ಬೇರಾವುದನ್ನೂ ಅವನು ತಾನಿಚ್ಛಿಸುವವರ ಪಾಲಿಗೆ ಕ್ಷಮಿಸಿ ಬಿಡುತ್ತಾನೆ. ಅಲ್ಲಾಹನ ಜೊತೆ ಪಾಲುದಾರರನ್ನು ಸೇರಿಸುವವನು ಮಹಾ ಸುಳ್ಳಾರೋಪವನ್ನು ಹೊರಿಸಿದನು. ಪವಿತ್ರ ಖುರ್‍ಆನ್;4:48.

2.         ಬಹುದೇವರಾಧನೆ(ಶಿರ್ಕ) ಮಾಡುವುದರಿಂದ ನಾವು ಅನುಭವಿಸುವ ಕಷ್ಟಗಳು.

ಕೊಲೆ, ಸುಲಿಗೆ, ಕೊಳ್ಳೆ, ದರೊಡೆ, ವೈಭಿಚಾರಗಳಂತಹಾ ದೊಡ್ಡ ಪಾಪಗಳಿರುವಾಗ ಬಹುದೇವಾರಾಧನೆ (ಶಿರ್ಕ) ಅಥವ ದೇವಸಹಭಾಗಿತ್ವವು ಅತಿದೊಡ್ಡ ಪಾಪವೆಂದು ದೇವನೇ ಏಕೆ ಹೇಳುತ್ತಿದ್ದಾನೆ? ಅದರಲ್ಲಿ ಅಂತಹಾ ವಿಪರೀತವೇನಿದೆ? ಹೆಚ್ಚಿನ ಜನರು ಈ ಪಾಪವನ್ನು ಮಾಡುತ್ತಿರುವುದರಿಂದ ಇದರ ಆಪತ್ತು ತುಂಬಾಜನರಿಗೆ ಗೊತ್ತಿಲ್ಲ. ಇದರೆಡೆಗೆ ಗಮನ ಹರಿಸಿದರೆ ಮಾತ್ರ ಇದು ತಿಳಿಯುತ್ತದೆ. ಇದು ನಮ್ಮ ದೇಹದಲ್ಲಿ ನಾಶಮಾಡುತ್ತಿರುವ ಕ್ಯಾನ್ಸರ್‍ನಂತಿರುವ ಮಾರಕವೆಂದು ನಮಗೆ ತಿಳಿಯುತ್ತದೆ.

3.         ಇದು ತಂಬಾ ದೊಡ್ಡ ಪಾಪ ಅಥವ ಮಹಾಪಾಪವೇಕೆ?

  ನಮ್ಮನ್ನು ಸೃಷ್ಠಿಮಾಡಿರುವುದು ಮಾತ್ರವಲ್ಲ ಪ್ರತಿಯೊಂದು ನಿಮಿಷವೂ ನಮಗೆ ಬೇಕಾಗಿರುವುದನ್ನು ತಪ್ಪದೇ ನಮಗೆ ಕೊಡುವ ಕರುಣಾಮಯಿ ದೇವನು, ನಾವು ನಮ್ಮ ತಾಯಿಯ ಗರ್ಭದೊಳಗೆ ಸೃಷ್ಠಿಯಾದಾಗಿನಿಂದ ನಮಗೆ ಬೇಕಾಗಿರುವ ಊಟ, ನೀರು, ಗಾಳಿ, ಜೊತೆಗೆ ತಂದೆತಾಯಿಯ ಹ್ಲದಯದಲ್ಲಿ ನಮಗಾಗಿ ಅನುಕಂಪವನ್ನು ನೀಡಿ, ನಾವು ಸಾಯುವವರೆಗೂ ಅವನು ನಮ್ಮ ಮೇಲೆ ತೋರಿಸುವ ಪ್ರೀತಿಗೆ ಸಾಟಿಯಿಲ್ಲ. ನಮ್ಮ ಅವಶ್ಯಕತೆಗಳನ್ನು ಈ ಪ್ರಪಂಚದಲ್ಲಿರುವ ಎಲ್ಲಾ ವಸ್ತುಗಳನ್ನು ಸೃಷ್ಠಿಮಾಡಿ ಪರಿಪಾಲಿಸುತ್ತಿದ್ದಾನೆ. ಈ ವಸ್ತುಗಳಿಗೆ ನಾವು ಕೃತಜ್ಞತೆ ತೋರಬಾರದೇ?. ಈ ಅನುಗ್ರಹಗಳಲ್ಲಿ ಯಾವುದಾದರೊಂದರ ಕೊರತೆಯಾದರೂ ಅಥವ ನಿಂತು ಹೋದರೂನಾವು ಪಡುವ ಕಷ್ಟದ ಕುರಿತು ಚಿಂತಿಸಿ ನೋಡಿ. ಆದರೆ ಬಹುದೇವಾರಾಧನೆ(ಶಿರ್ಕ) ಮೂಲಕ ನಾವು ಏನು ಮಾಡುತ್ತಿದ್ದೆವೆ?. ಅವನಿಗೆ ತೋರಿಸಬೇಕಾದ ಕೃತಜ್ಞತೆಗಳನ್ನು ನಿರ್ಜೀವ ಮತ್ತು ಜಡವಸ್ತುಗಳಿಗೆ ತೋರಿಸುತ್ತಿದ್ದೇವೆ. “ಮಾನವರೇ, ಅಲ್ಲಾಹನು ನಿಮಗೆ ನೀಡಿರುವ ಅನುಗ್ರಹಗಳನ್ನು ನೆನಪಿಸಿಕೊಳ್ಳಿರಿ. ನಿಮಗೇನು ಅಲ್ಲಾಹನಲ್ಲದೆ ಬೇರೆ ಸೃಷ್ಠಿಕರ್ತನಿದ್ದಾನೆಯೇ? ಅವನು ನಮಗೆ ಆಕಾಶಗಲಿಂದಲೂ ಆಹಾರವನ್ನು ಒದಗಿಸುತ್ತಾನೆ. ಅವನ ಹೊರತು ಆರಾಧನಾರ್ಹರು ಬೇರಿಲ್ಲ. ಹೀಗಿರುತ್ತಾ ನೀವು ಅದೆಲ್ಲಿ ಅಲೆಯುತ್ತಿರುವಿರಿ?” ಪವಿತ್ರ ಖುರ್‍ಆನ್; 35:3. “ಅಲ್ಲಾಹನೇ ನಿಮ್ಮನ್ನು ಸೃಷ್ಠಿಸಿದವನು, ಆ ಬಳಿಕ ನಮಗೆ ಆಹಾರ ಒದಗಿಸಿದವನು. ಆ ಬಳಿಕ ನಿಮಗೆ ಮರಣ ನೀಡುವವನು ಮತ್ತು ಆ ಬಳಿಕ ನಿಮ್ಮನ್ನು ಪುನಃ ಜೀವಂತಗೊಳಿಸುವವನಾಗಿದ್ದಾನೆ. ದೇವತ್ವದಲ್ಲಿ ಪಾಲುದಾರೆಂದು ನೀವು ನಂಬಿರುವ ಯಾರಾದರೂ ಈ ಪೈಕಿ ಯಾವ ಕೆಲಸವನ್ನಾದರೂ ಮಾಡಬಲ್ಲರೇ? ಅವನಂತು(ಅಲ್ಲಾಹನಂತು)ಪಾವನನಾಗೆದ್ದಾನೆ ಮತ್ತು (ಅವನ ಜೊತೆ)ನೀವು ಪಾಲುಗೊಳಿಸುವ ಎಲ್ಲರಿಗಿಂತ ತುಂಬಾ ಉನ್ನತನಾಗಿದ್ದಾನೆ”. ಪವಿತ್ರ ಖುರ್‍ಆನ್; 30:40.

4.         ಪಾಪಗಳು ಹೆಚ್ಚಾಗಲು ಮೂಲಕಾರಣ

ಮನುಷ್ಯನು ತಪ್ಪುಮಾಡದೇ ಒಳ್ಳೆಯವನಾಗಿರಬೆಕೆಂದರೆ, ಅವನಿಗೆ ದೇವನಲ್ಲಿ ನಿಜವಾದ ಭಯವಿರಬೇಕು. ನನ್ನ ಸೃಷ್ಠಿಕರ್ತ ನನ್ನನ್ನು ನೋಡುತ್ತಿದ್ದಾನೆ, ನಾಳೆ ನನ್ನನ್ನು ಕುರಿತು ವಿಚಾರಿಸುವವನಾಗಿದ್ದಾನೆ. ನಾನು ಪಾಪವೆಸಗಿದರೆ ಅವನು ಶಿಕ್ಷಿಸುತ್ತಾನೆ ಎಂಬ ವಿಷಯವನ್ನು ಮನುಷ್ಯನ ಮನದಲ್ಲಿ ಬಿತ್ತಬೇಕು. ದೇವ ಭಯವಿರದಿದ್ದರೆ ಅವನು ಪಾಪವನ್ನು ಮಾಡಲು ಹಿಂಜರಿಯುದಿಲ್ಲ, ಚಿಕ್ಕಂದಿನಿಂದಲೂ ನಿರ್ಜಿವವಾಗಿರುವ ವಸ್ತುಗಳನ್ನು ತೋರಿಸಿ ಇದೇ ದೇವರು ಎಚಿದು ತಿಳಿಸಿಕೊಡುವುದರಿಂದ ಆತನಿಗೆ ದೇವನ ಮೇಲಿರುವ ನಿಜವಾದ ಭಯವೇ ಹೊರಟು ಹೋಗಿದೆ. ಹಾಗಾಗಿ ಬಹುದೇವಾರಾಧನೆ(ಶಿರ್ಕ)ಯು ದೇಶದಲ್ಲಿ ನಾವು ಕಾಣುತ್ತಿರುವ ಎಲ್ಲಾ ಪಾಪಗಳಿಗೆ ಹಾಗೂ ಗೊಂದಲಗಳಿಗೆ ಮೂಲಕಾರಣ ಇದುವೇ ಆಗಿದೆ. ಈ ರೀತಿಯಾಗಿ ನೈಜ ದೇವಭಯ ಇರದೇ ಇರುವ ಜನಾಂಗವೇ ಹೆಚ್ಚುತ್ತಿರುವಾಗ ಪಾಪಗಳನ್ನು ಹತೋಟಿಗೆ ತರಲು ಸಾಧ್ಯವಿಲ್ಲ. ಉದಾಹರಣೆಗೆ; ಮನೆಯೊಂರಲ್ಲಿ ಗೆಳೆಚಿiÀುರ ಬಳಗವೊಂದು ಸೇರಿ ಮದ್ಯ ಸೇವನೆಯಲ್ಲ ತೊಡಗಿರುವಾಗ ದೇವರ ಚಿತ್ರಗಳು ಅಲ್ಲಿದ್ದರೆ ಅವರು ಆ ಚಿತ್ರಗಳಮೇಲೆ ಬಟ್ಟೆ ಹಾಕಿ ಮರೆ ಮಾಡಿ ಈ ಕೆಲಸವನ್ನು ಮುಂದುವರೆಸುವುದನ್ನು ನೋಡಬಹುದು.  ಅವರಲ್ಲಿ ಅದೇ ದೇವರು ಇಂಬ ನಂಬಿಕೆ ಇರುವುದೇ ಮುಖ್ಯಕಾರಣ.

5.         ಇದು(ಶಿರ್ಕ) ದೇವನನ್ನು ಅವಹೇಳನ ಮಾಡುವ ಕೆಲಸವಾಗಿದೆ.

      ನಮ್ಮ ಪ್ರೀತಿ ಮರ್ಯಾದೆಗೆ ಅರ್ಹನಿರುವವನು ಅಲ್ಲಾಹನೇ ಆಗಿದ್ದಾನೆ ಅವನ ಶಕ್ತಿ ಸಾಮಥ್ರ್ಯ ಬುದ್ಧಿಯು ಇಂತಿಷ್ಟೇ ಇದೆ ಎಂದು ಅಳೆಯಲು ಸಾಧ್ಯವಿಲ್ಲ. ಅವನನ್ನೇ ಸ್ತುತಿಸುತ್ತೇವೆ ಎಂದು ಹೇಳಿ, ಕಲ್ಲು, ಮರ, ಮನುಷ್ಯ, ಸಮಾಧಿ, ಸೂರ್ಯ, ಚಂದ್ರ, ನಕ್ಷತ್ರಗಳನ್ನು ತೋರಿಸಿ ಇದೇ ದೇವರು ಎಂದು ಹೇಳುವುದು ಸುಳ್ಳು ಮಾತ್ರವಲ್ಲದೇ ಅದು ಅವಹೇಳನವಾಗಿದೆ. ಒಂದು ನಾಯಿಯನ್ನು ಅಥವ ಒಂದು ಹಂದಿಯನ್ನು ತೋರಿಸಿ ಇದೇ ನಿನ್ನ ತಾಯಿ ಎಂದು ಯಾರೋ ಒಬ್ಬ ವ್ಯಕ್ತಿ ನಮಗೆ ಹೇಳಿದರೆ, ಎಷ್ಟು ಕೋಪ ಬರುತ್ತದೆ? ಸರ್ವ ಲೋಕವನ್ನು ಸೃಷ್ಠಿ ಮಾಡಿ ಪರಿಪಾಲನೆ ಮಾಡುತ್ತಿರುವ ನಮ್ಮ ದೇವನಿಗೆ ಸರಿಸಮಾನವಾಗಿ ನಿರ್ಜೀವ ವಸ್ತುಗಳನ್ನು ಹೋಲಿಸುವುದು ಎಷ್ಟುದೊಡ್ಡ ಮೋಸ?

6.         ಇದೊಂದು ದೊಡ್ಡ ಸುಳ್ಳೆಂಬುದು ಹೇಗೆ?.

  ಉದಾಹರಣೆಗೆ ; ಒಬ್ಬರು ಒಂದು ಲೇಖನಿಯನ್ನು ತೋರಿಸಿ ಇದು ಆನೆ ಎಂದರೆ ನೀವು ಆ ವಯಕ್ತಿಗೆ ನಂಬುವಿರಾ?. ಇದನ್ನು ಸುಳ್ಳು ಎನ್ನುವಿರಾ ಅಥವ ಅತ್ಯ ಎನ್ನವಿರಾ?.  ಹೌದು ಆತ್ಮಿಯರೇ ಯೋಚಿಸಿ ಇದು ಎಷ್ಟು ಭಯಂಕರವಾದ ಸುಳ್ಳು ಇದನ್ನು ಅತಿ ಹೆಚ್ಚುಜನರು ನಂಬಿದರೆ ಇವರೆಲ್ಲರನ್ನು ಏನೆಂದು ಕರೆಯುವಿರಿ? ಇಂದು ನಿಮ್ಮ ಕಣ್ಣ ಮುಂದೆ ಏನೇನು ನಡೆಯುತ್ತಿವೆ ಎಂಬುದನ್ನು ನೋಡಿರಿ. ನಿರ್ಜೀವ ಜಡ ವಸ್ತುಗಳ ರೂಪಗಳನ್ನು ಮತ್ತು ಸಮಾಧಿಗಳನ್ನು ತೋರಿಸಿ ಇವರೇ ದೇವರು ಅಥವ ಇದೇ ದೇವನ ರೂಪ ಎಂದು ಹೇಳಿದರೆ ಅದು ಎಷ್ಟು ದೊಡ್ಡ ಸುಳ್ಳು? ಒಂದು ಸುಳ್ಳು ವಿಷಯವನ್ನು ಅತಿ ಹೆಚ್ಚು ಜನರು ನಂಬಿದರೆ ಅದು ಎಂದಿಗೂ ನಿಜವಾಗಲು ಸಾಧ್ಯವೇ? ಸಾಧ್ಯವಿಲ್ಲ ಆರಂಭವೂ ಅಂತ್ಯವೂ ಇಲ್ಲದಿರುವ ಯಾವಾಗಲೂ ಜೀವಂತವಿರುವ ಸರ್ವ ಶಕ್ತ ದೇವನು(ಅಲ್ಲಾಹನು) ಎಲ್ಲಿ?. ಮನಷ್ಯನೇ ಸ್ವತಃ ತನ್ನ ಕೈಗಳಿಂದ ನಿರ್ಮಿಸಿರುವ ನಿರ್ಜೀವ ರೂಪಗಳೆಲ್ಲಿ? ಯಾವುದನ್ನು ಯಾವುದರ ಜೊತೆ ಹೋಲಿಸಿ ಸಂಭಂಧ ಕಲ್ಪಿಸುತ್ತಿದ್ದಾರೆ?. ಅಕ್ಷರಸ್ಥರನ್ನು ಹಾಗೂ ಅನಕ್ಷರಸ್ಥರನ್ನೂ ಸಹ ಬಲಿ ತೆಗೆದುಕೊಳ್ಳುತ್ತಿರುವ ಮಹಾ ಸುಳ್ಳು ಇದಾಗಿದೆ.

7.         ಮೋಸಗಳಲ್ಲಿಯೇ ಅತ್ಯಂತ ದೊಡ್ಡ ಮೋಸವಿದು.

  ಮೇಲೆ ಹೇಳಿರುವ ಸುಳ್ಳುಗಳನ್ನು ಬಳಸಿ ಅತಿದೊಡ್ಡ ಮೋಸಭರಿತ ನಾಟಕವೇ ನಡೆಯುತ್ತಿದೆ. ಕಂಡಿದ್ದೆಲ್ಲಾ ದೇವರು ಎಂದು ಜನ ನಂಬಿರುವಾಗ ಅಲ್ಲಿ ಮಧ್ಯವರ್ತಿಗಳು ಉದಯವಾಗುತ್ತಾರೆ. ಆನಂತರ ಆ  ಮಧ್ಯವರ್ತಿಗಳು ಹೇಳುವುದೇ ಸಮಾಜದಲ್ಲಿ ನಿಯಮಗಳಾಗುತ್ತವೆ. ಅವರು ತಮ್ಮ ಮನಬಂದಂತೆ ಅಥವ ತಮಗೆ ಅನುಕೂಲವಾಗುಂತೆ ಯಾಮಾರಿಸಿ ತಮ್ಮ ಹೊಟ್ಟೆಯನ್ನು ತುಂಬಿಕೊಳ್ಳುತ್ತಾರೆ. ಪಾಪನಿವಾರಣೆಗೆ, ದೋಷ ನಿವಾರಣೆಗೆ, ಪರಿಹಾರ ಎಂಬ ಹೆಸರುಗಳಲ್ಲಿ ಎನೇನೋ ಹೇಳಿ ಬಡವರ ಸಂಪತ್ತನ್ನು ಕೊಳ್ಳೆ ಹೊಡೆಯುತ್ತದ್ದಾರೆ. ಸೃಷ್ಠಿಕರ್ತನ ಆರಾಧನೆ ಮಾಡಲು ಯಾವ ಖರ್ಚೂ ಬೇಕಾಗಿಲ್ಲ ಅವನನ್ನು ನೇರವಾಗಿ ಆರಾಧಿಸಲಿಕ್ಕೆ ನಮ್ಮ ಎಲ್ಲಾ ಸಂದೇಶವಾಹಕರು ಹೇಳಿಕೊಟ್ಟರು. ಅವನನ್ನು ಕೂಗಿ ಕರೆಯಲು ನಮಗೆ ಬೇಕೇಗಿರುವುದನ್ನು ಕೇಳಲು, ಪ್ರಾರ್ಧಿಸಲು, ಬೇಸಿಕೊಳ್ಳಲು, ನಮ್ಮ ಮತ್ತು ಆ ದೇವನ ಮಧ್ಯದಲ್ಲಿ ಯಾವ ಮಧ್ಯಸ್ಥನೂ ಬೇಕಾಗಿಲ್ಲ. ಗೊಡ್ಡು ಸಂಪ್ರದಾಯಗಳಿಗೆ ಇಲ್ಲಿ ಜಾಗವಿಲ್ಲ ಸೃಷ್ಠಿಕರ್ತನನ್ನು ಬಿಟ್ಟು ಡಾಂಭಿಕ ದೇವರುಗಳನ್ನು ಆರಾಧಿಸಲು ಜನ ಅನುವಾಗುತ್ತಿರುವಾಗ, ನೈಜ ಆರಾಧನೆ ಎಂಬುದು ಕಠಿಣ ವಿಷಯವಾಗಿದೆ. ಗೊಡ್ಡು ಸಂಪ್ರದಾಯಗಳು, ಮೂಢ ನಂಬಿಕೆಗಳು ಪ್ರವೇಶಿಸಿ ಆರಾಧನೆ ಎಂಬುದು ವ್ಯಾಪಾರೀಕರಣವಾಗಿದೆ. ಮಧ್ಯವರ್ತಿಗಳು ಜನರನ್ನು ಅಂಧಕಾರಕ್ಕೆ ತಳ್ಳಿ ಜನರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಇದು ಜನರನ್ನು ಸುಲಭವಾಗಿ ಮೋಸಗೊಳಿಸಿ ಬದುಕುವ ದಾರಿಯಾಗಿದೆ. ತುಂಬಾ ವೇಗವಾಗಿ ಹರಡುತ್ತಿರುವ ಮೋಸವಿದು. ಈ ಮೋಸ ಎಲ್ಲಿಯವರೆಗೆ ಬೃಹದಾಕಾರವಾಗಿ ಬೆಳೆದಿದೆ ಎಂದರೆ ಇದರ ಮೂಲಕ ದೇಶದ ಹಾಗೂ ಜನರ ಸೊತ್ತು, ಹಣ, ಮತ್ತು ಪ್ರಕೃತಿ ಸಂಪತ್ತುಗಳು ಕೊಳ್ಳೆ ಹೊಡೆಯಲಾಗುತ್ತಿರುವುದರಿಂದ ರಾಷ್ಟ್ರವು ಅಧೋಗತಿಗೆ ಹೋಗುತ್ತಿದೆ, ದೇಶ ಹಾಗೂ ಜನರ ಸಂಪತ್ತು ಮತ್ತು ಶ್ರಮಗಳು ಪೋಲಾಗುತ್ತಿವೆ.
  ನಮ್ಮ ದೇಶದಲ್ಲಿ ಅತಿ ಹೆಚ್ಚು ಪ್ರಾಕೃತಿಕ ಸಿರಿಸಂಪತ್ತು, ಮಾನವ ಸಂಪನ್ಮೂಲ, ಬೌದ್ಧಿಕ ಸಂಪನ್ಮೂಲ ಸಂಪದ್ಭರಿತವಾಗಿದ್ದರೂ ಸಹ, ದೇಶದಲ್ಲಿ ಹಸಿವು, ಬಡತನ, ಆಹಾರದ ಕೊರತೆ, ಹೆಚ್ಚಾಗಿ ತಾಡವಾಡುವ ಸ್ಥಿತಿ ಉಂಟಾಗುತ್ತಿದೆ, ಹಾಗೂ ವ್ಯಾಪಕವಾಗುತ್ತಿದೆ. ಇದಕ್ಕೆ ದೊಡ್ಡದೊಂದು ಉದಾಹರಣೆ ಎಂದರೆ ಅದು ಭಾರತವೇ ಆಗಿದೆ. ಭಾರತದಲ್ಲಿ ಎಲ್ಲಾ ಸಂಪತ್ತುಗಳು ಪ್ರಕೃತಿ ಸಂಪನ್ಮೂಲಗಳು, ಕಣಿವೆಗಳು, ಗಣಿಗಳು, ಹಾಗೂ ಮುಖ್ಯವಾಗಿ ಮಾನವ ಸಂಪನ್ಮೂಲ ಮತ್ತು ಬೌದ್ಧಿಕ ಸಂಪತ್ತು ಹೇರಳವಾಗಿರುವಚಿತೆ ಇತರ ಯಾವುದೇ ದೇಶ ಮತ್ತೊಂದಿಲ್ಲ. ಆದರೂ ಇಚಿತಹಾ ಶಕ್ತಿಯುತ ದೇಶದ ವಾಸಿಗಳಾದ ನಾವು ಮೊದಲನೇ ಸ್ಥಾನದಲ್ಲಿರಬೇಕಾದವರು ಏಕೆ ನೀಚ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದೇವೆ, ಎಂಬುದನ್ನು ಅತಿ ಮುಖ್ಯವಾಗಿ ಅವಲೋಕನ ಮಾಡಬೇಕಾಗಿರುವ ವಿಷಯವಾಗಿದೆ. ಹೀಗೇಕೆ ಎಂಬುದಕ್ಕೆ ಈ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ನೋಡಿದರೆ ನಿಜವೇನೆಂಬುದು ನಮಗೆ ತಿಳಿಯುತ್ತದೆ.

1.            ಈ ರಾಷ್ರದಲ್ಲಿ ಯಾವುದೇ ಉತ್ಪದನೆ ಕೊಡದೆ ಹಾಗೂ ಸೇವೆ ಕೊಡದೆ ಜನರ ಹಣವನ್ನು ಮಾತ್ರ ಸಂಗ್ರಹಿಸುವ ವ್ಯಾಪಾರ ಯಾವುದು?

2.            ಆನರ ಮೂಢನಂಬಿಕೆಗಳನ್ನು ಬಿಟ್ಟು ಬೇರೆಯಾವ ಹೂಡಿಕೆಗಳೂ ಇಲ್ಲದೆ ಮೂಲೆ ಮೂಲೆಯಲ್ಲೂ ಪ್ರತಿನಿತ್ಯ ಅಭಿವೃದ್ಧಿಗೊಳ್ಳುತ್ತಿರುವ ವ್ಯಾಪಾರ ಯಾವುದು?

3.            ದೇಶದ ಆರ್ಥಿಕ ಅಭಿವೃದ್ಧಿಗೆ, ಸಾಮಾಜಿಕ ಒಳಿತಿಗೆ ಯಾವುದೇ ರೀತಿಯಿಂದಲೂ ಸಹಾಯ ಮಾಡದೇ, ಸಹಕರಿಸದೇ, ಸರಿಯಾಗಿ ವರಮಾನವನ್ನು ಬಾಚಿಕೊಳ್ಳುತ್ತಿರುವ ವ್ಯಕ್ತಿಗಳು ಯಾರು?

4.            ನಮ್ಮ ದೇಶದ ಜನರ ಹಣವನ್ನು ಕೊಳ್ಳೆ ಹೊಡೆದು ಬಗೆಯುತ್ತಿರುವ ಕಪ್ಪುಹಣದ ಮೊಸಳೆಗಳಿಗೆ ಕಾನೂನಿನ ಕೈಗೂ ಸಿಗದಂತಿರುವ ಕದಿಮರಿಗೆ ರಹಸ್ಯವಾಗಿ ರಕ್ಷಣೆ ನೀಡುತ್ತಿರುವವರು ಯಾರು?

  ಇಂತಹಾ ಹಲವಾರು ಪ್ರಶ್ನೆಗಳಿಗೆ ನಮಗೆ ಸಿಗುವ ಒಂದೇ ಉತ್ತರವೆಂದರೆ, ಸೃಷ್ಠಿಕರ್ತನನ್ನು ಬಿಟ್ಟು ಇತರೆ ವಸ್ತುಗಳನ್ನು ದೇವರೆಂದು ನಂಬಿಸುವ ಮೋಸದ ವ್ಯಾಪಾರಗಳು, ವ್ಯಾಪಾರಿಗಳು, ಹಾಗೂ ಇವರೊಂದಿಗಿರುವ ಸಹಾಯಕರೇ ಇದಕ್ಕೆ ಕಾರಣರಾಗಿದ್ದಾರೆ.
  ನಮ್ಮ ದೇಶದಲ್ಲಿ ದರ್ಗಾಗಳು, ದೇವಸ್ಥಾನಗಳು, ಮಠಗಳು, ಆಶ್ರಮಗಳನ್ನು ಸೇರಿಸಿ ಇವೆಲ್ಲವುಗಳು ಒಂದು ವರ್ಷಕ್ಕೆ ಪಡೆಯುವ ದೇಣಿಗೆ ಹಣವನ್ನು ಶೇಖಡಾವಾರು ಒಟ್ಟುಗೂಡಿಸಿ ಪರಿಶೋಧಿಸಿದರೆ, ನಮ್ಮ ದೇಶದ ಸಂಪತ್ತು, ದೇಶದ ಜನರ ಶ್ರಮ ಹಾಗೂ ಸಿರಿ ಸಂಪತ್ತು ಎಲ್ಲಿ ಪೊಲಾಗುತ್ತಿದೆ ಎಂಬುದು ತಿಳಿಯುತ್ತದೆ. ಇತ್ತೀಚೆಗೆ ವಿವಿಧ ಧರ್ಮಗಳಿಗೆ ಸೇರಿದ ಧರ್ಮ ಕ್ಷೆತ್ರಗಳಲ್ಲಿ ಹಾಗೂ ಆಶ್ರಮಗಳಲ್ಲಿನ ನಿಧಿಗಳನ್ನು ಶೋಧಸಿದಾಗ ಅಥವ ತೆರೆದಾಗ ಆಶ್ಚರ್ಯವೆನಿಸುವಷ್ಟು ನಗ ನಾಣ್ಯ, ಚಿನ್ನ, ಬೆಳ್ಳಿ, ಒಡವೆ, ಹಣ, ಸಂಪತ್ತು ಪತ್ತೆಯಾಗಿರುವುದು ನಿಮ್ಮೇಲ್ಲರಿಗೂ ತಿಳಿದೇ ಇದೆ. ಈ ಸಂಪತ್ತನ್ನು ನಮ್ಮ ದೇಶದ ಪ್ರಜೆಗಳಿಗಾಗಿಯೊ ಅವರ ಸರ್ವತೋಮುಖ ಅಭಿವೃದ್ಧಿಗಾಗಿಯೋ ಬಳಸಿದರೆ ನಮ್ಮ ದೇಶದಲ್ಲಿ ಬಡತನವಿರಲು ಸಾಧ್ಯವೇ? ನೀವೇ ಯೋಚಿಸಿ ನೋಡಿ…
  ನೈಜ ದೇವನನ್ನು ಆರಾಧಿಸಲು ಹಣದ ಯಾವ ಖರ್ಚೂ ಮಾಡಬೇಕಾಗಿಲ್ಲ. ಅಂತೆಯೇ ಗೊಡ್ಡು ಸಂಪ್ರದಾಯಗಳು ಬೇಕಾಗಿಲ್ಲ, ಆದರೆ ಜನರು ನಿರ್ಜೀವವಾಗಿರುವ ಸಮಧಿಗಳನ್ನು ಮತ್ತು ರೂಪಗಳನ್ನು ಆರಾಧನೆಗಾಗಿ ಹುಡುಕಿಕೊಂಡು ಹೊರಟು ಎಂಥಹಾ ಮೊಸಗಳಿಗೆ ಬಲಿಯಾಗುತ್ತದ್ದಾರೆ? ದೇಶದ ಜನರ ಸಂಪತ್ತು ಹೇಗೆ ಪೊಲಾಗುತ್ತಿದೆ? ಹೇಗೆ ಅವರನ್ನು ಕೊಳ್ಳೆ ಹೊಡೆಯಲಾಗುತ್ತಿದೆ?, ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಲೆಂದೇ ಈ ಎಲ್ಲಾ ರೀತಿಯ ಉದಾಹರಣೆಗಳನ್ನು ನಾವು ನಿಮ್ಮ ಮುಂದೆ ಇಟ್ಟಿದ್ದೆವೆಯೇ ಹೊರತು ಯಾರ ಮನಸ್ಸನ್ನು ನೋಯಿಸುವುದಕ್ಕಲ್ಲ. ನೋಯಿಸುವ ಉದ್ದೇಶವೂ ನಮ್ಮದಲ್ಲ. ದೇವನೆಂಬವನು ಅಣುವಿನಿಂದ ಹಿಡಿದು ತಾರಾಪುಂಜ ಅಥವ ಆಕಾಶಗಂಗೆ(ಗೆಲಾಕ್ಸಿ)ಗಳನ್ನು ಹಾಗೂ ಪ್ರಪಂಚದಲ್ಲಿರುವ ಎಲ್ಲಾ ವಸ್ತುಗಳನ್ನು ಸೃಷ್ಠಿಮಾಡಿ ಪರಿಪಾಲಿಸುವವನು ಅವನ ಶಕ್ತಿಯನ್ನು ಅಳೆಯಲು ಸಾಧ್ಯವಿಲ್ಲ. ಅವನ ಜ್ಞಾನಕ್ಕೆ ಮಿತಿಯೇ ಇಲ್ಲ, ಆರಂಭವೂ ಅಂತ್ಯವೂ ಇಲ್ಲದವನು, ಸರ್ವ ಕಾಲದಲ್ಲೂ ಚಿರಾಯುವಾಗಿರುವವನು. ಪ್ರತಿಯೊದು ಜೀವಿಗಳನ್ನೆಲ್ಲಾ ತಡೆಯಿಲ್ಲದೆ ನಿರಂತರವಾಗಿ ಆಜ್ಞೆಗಳ ಮೂಲಕ ನಿಯಂತ್ರಿಸುತ್ತಿರುವನು. ಅವನಿಗೆ ಸರಿಸಮಾನವಾದುದು ಯಾವುದೂ ಇಲ್ಲ ಹಾಗೂ ಉಪಮೆಗಳು ಇಲ್ಲದವನು ನಮ್ಮ ದೇವನು. ಆದರೆ ಇಲ್ಲಿ ಏನು ನಡೆಯುತ್ತಿದೆ?, ಸ್ವಲ್ಪವೂ ಜೀವವಿಲ್ಲದ ಜಡವಸ್ತುಗಳನ್ನು ನಮಗೆ ತೋರಿಸಿ ಇದೇ ನಿಮ್ಮ ದೇವನು ಅದೇ ನಿಮ್ಮ ದೇವನು ಎಂದು ಕಲಿಸುವುದರ ಮೂಲಕ ಎಷ್ಟು ದೊಡ್ಡ ಮೊಸ ನಡೆಯುತ್ತಿದೆ ಎಂದು ಯೋಚಿಸಿ ನೋಡಿ, ಇದಕ್ಕೆ ಎಷ್ಟು ಸಂತಾನಗಳು ನಿರಂತರವಾಗಿ ಮೂರ್ಖರಾಗುತ್ತಿದ್ದಾರೆ?.

8.         ಮನುಷ್ಯ ಕುಲವನ್ನೇ ಒಡೆದು ವಿಭಾಗಿಸುವ ಒಡಕು ಮಾರ್ಗವಿದು;

 ‘ಒಂದೇ ಕುಲ ಒಬ್ಬನೇ ದೇವ’  ಎಂಬುದು ಎಲ್ಲಾ ಕಾಲದಲ್ಲಿಯೂ ಹೇಳಲಾಗುತ್ತಿರುವ ತತ್ವವಾಗಿದೆ. ಆದರೆ ಆ ಏಕೈಕ ದೇವನನ್ನು ಬಿಟ್ಟು ಸೃಷ್ಠಿಗಳನ್ನು ಆರಾಧನೆ ಮಾಡಲು ಪ್ರಯತ್ನಿಸುವಾಗ ಮನುಷ್ಯಕುಲವು ಅವರವರ ಅಥವ ತಮ್ಮತಮ್ಮ ದೇವ ನಂಬಿಕೆಗಳಿಂದ ಬೇರೆ ಬೇರೆಯಾಗುತ್ತಾರೆ. ಈ ತರಹದ ಕೆಡುಕುಗಳಿಗೆ ಬಲಿಯಾದ ಸನೇಕ ಸಮೂಹಗಳು ಕಾಣಸಿಗುತ್ತವೆ. ಇದರಲ್ಲಿ ಮುಖ್ಯವಾದ ಉದಾಹರಣೆ ಎಂದರೆ ನಮ್ಮ ಭಾರತ ದೇಶವೇ ಆಗಿದೆ ನಮ್ಮ ದೇಶದಲ್ಲಿ ಇರುವ ಜಾತಿಗಳ ವ್ಯವಸ್ಥೆಗಳನ್ನು ನೋಡಿರಿ ಯಾವ ಜಾತಿಯವರಾಗಿದ್ದರೂ ನಾವು ಮನುಷ್ಯರು. ನಾವೆಲ್ಲಾ ಒಂದೇ ರೂಪ, ಒಂದೇ ತರಹದ ರಕ್ತ, ಒಂದೇ ತರಹದ ಮಾಂಸ, ದೇಹವೂ ಒಂದೇತರಹನಾಗಿದ್ದರೂ, ಒಂದು ಜಾತಿ ಇನ್ನೊಂದು ಜಾತಿಯ ಜೊತೆ ಬೆರೆಯುವುದಿಲ್ಲ. ಇದರಲ್ಲಿಯೂ ಮೆಲ್ಜಾತಿ, ಕೆಳಜಾತಿ, ಹೀನಜಾತಿ, ಅಸ್ಪøಷ್ಯ ಎಂದು ಗುರುತಿಸಲ್ಪಡುತ್ತಾರೆ. ಹಾಗೂ ವಿಭಿನ್ನ ರೀತಿಯಲ್ಲಿ ವಿಭಜಿಸಿ ಕೊಂಡಿದ್ದಾರೆ. ಈ ವ್ಯವಸ್ಥೆ ಏಕೆ ? ಒಂದೊಂದು ಜಾತಿಯೂ ಒಂದೊಂದು ದೇವರನ್ನು ಇಟ್ಟುಕೊಂಡು ಪೂಜಿಸುತ್ತಿದ್ದಾರೆ. ಅದನ್ನೆ ತಮ್ಮ ಕುಲ ದೈವವೆಂದು ಹೇಳುತ್ತಾರೆ, ಇದು ಮಾತ್ರವಲ್ಲ ಪ್ರತಿಯೊಂದು ಊರಿಗೂ ಊರು ಕಾಪಾಡಲೊಂದು ದೇವರು, ದೇಶ ಕಾಪಾಡಲೊಂದು ದೇವರು, ಮನೆ ದೇವರೊಂದು ಹೀಗೆ ವಿಭಿನ್ನ ದೇವರುಗಳನ್ನು ಸೃಷ್ಠಿಸಿಕೊಂಡಿದ್ದಾರೆ. ಅದೇ ನಮ್ಮ ಕುಲದೈವ ಎಂದೂ ಹೇಳುತ್ತಾರೆ. ಇಸ್ಲಾಮ್ ಹೇಳುವುದೆನೆಂದರೆ, ಈ ವಿಭಿನ್ನ ಕಲ್ಪನೆಗಳನ್ನು ತ್ಯಜಿಸಿರಿ ಇದರಿಂದ ಯಾವುದೇ ಲಾಭವಿಲ್ಲ. ನಮ್ಮ ನಿಮ್ಮೆಲ್ಲರನ್ನು ಸೃಷ್ಠಿಸಿ ಪರಿಪಾಲನೆ ಮಾಡುತ್ತಿರುವ ಏಕೈಕ ಸೃಷ್ಠಿಕರ್ತನೆಡೆಗೆ ಹಿಂದಿರುಗಿರಿ ಎಂದು ತಿಳಿಸುತ್ತದೆ.

ಇದರಿಂದ ಲಾಭವೇನು ಎನ್ನುತ್ತೀರಾ?.

  ಇಂದು ನಮ್ಮ ದೇಶದಲ್ಲಿರುವ ಮುಸ್ಲಿಮರನ್ನು ತೆಗೆದುಕೊಳ್ಳಿ, ಇವರೆಲ್ಲರೂ ಮೂಲತಃ ಅರೇಬಿಯಾದಿಂದ ಬಂದವರಲ್ಲ. ಸಂದೇಶವಾಹಕರ ವಾರಿಸುದಾರರೂ ಅಲ್ಲ. ಇವರೆಲ್ಲರೂ ಆದಿವಾಸಿ, ಹಿಂದೂ ಕ್ರಿಶ್ಚಿಯನ್ ಮತ್ತು ಇತರೇ ಒಂದಲ್ಲಾ ಒಂದು ಧರ್ಮಗಳಲ್ಲಿದ್ದು ಇಸ್ಲಾಮಿಗೆ ಬಂದಿರುವವರ ಸಂತತಿಗಳು. ಇವರು ಏಕದೇವ ವಿಶ್ವಾಸ ಸ್ವೀಕರಿಸಿದ ನಂತರ ಎಂತಹಾ ಬದಲಾವಣೆ ಆಗಿದೆ ಎಂಬುದನ್ನು ನೋಡಿರಿ, ಈಗ ಅವರ ಮಧ್ಯ ಜಾತಿಗಳೇ ಇಲ್ಲ. ಇವರ ಮಧ್ಯದಲ್ಲಿ ಅಸ್ಪøಶ್ಯರೆಂಬುದಿಲ್ಲ. ಒಂದು ಕಾಲದಲ್ಲಿ ಭಿನ್ನ ಭಿನ್ನವಾಗಿರುವ ಜನಾಂಗವನ್ನು ಇಂದು ಮಸೀದಿಗಳಲ್ಲಿ ಒಚಿದೇ ತಟ್ಟೆಯಲ್ಲಿ ಭೇಧಭಾವವಿಲ್ಲದೆ ಊಟ ಮಾಡಿಸುವುದು, ಮಾಡುವುದು, ಈ ಏಕ ದೇವ ವಿಶ್ವಾಸ ನಡೆಸುತ್ತಿರುವ ಅದ್ಭುತಗಳೇ ಆಗಿದೆ. ಅಂಬೇಡ್ಕರ್, ಗಾಂಧಿ, ಬಸವಣ್ಣ, ಕನಕದಾಸ, ಸರ್ವಜ್ಞ, ಮುಂತಾದ ಸಮಾಜ ಸುಧಾರಕರು ಈ ಕೆಡುಕುಗಳ ವಿರುದ್ಧ ಜೀವನವನ್ನೇ ಹೋರಾಟಕ್ಕೆ ಮುಡುಪಾಗಿಟ್ಟರೂ, ಅವರಿಂದ ಸಾಧ್ಯವಾಗದ ಜಾತಿ ನಿರ್ಮೂಲನೆ ಮತ್ತು ಅಸೃಷ್ಯತೆ ನಿರ್ಮೂಲನೆಯನ್ನು ಇಸ್ಲಾಮ್ ಹೇಳುವ ಏಕದೇವ ವಿಶ್ವಾಸದೊಂದಿಗೆ ಪ್ರಾಯೋಗಿಕವಾಗಿ ಪ್ರಸ್ತುತ ಪಡಿಸುತ್ತಿದೆ.ನಮ್ಮ ದೇಶದಲ್ಲಿ ಮಾತ್ರವಲ್ಲ ಪ್ರಪಂಚದಲ್ಲೇ ಮಾನವ ಕುಲವನ್ನು ವಿಭಾಗಿಸಿ ಪರಸ್ಪರ ಕಚ್ಚಾಟದಲ್ಲಿ ತೊಡಗಿಸಿ, ಜನಾಂಗ, ಜಾತಿ, ವರ್ಣ, ಭಾಷೆ ಎಂದು ವಿಭಾಗಿವ ಪೆಡಂಭೂತಗಳನ್ನು ನಿರ್ಮೂಲನೆ ಮಾಡುತ್ತಿದೆ. ಈ ಏಕದೇವ ವಿಶ್ವಾಸ ಅಮೇರಿಕಾದಲ್ಲಿ, ಆಫ್ರಿಕಾದಲ್ಲಿ, ವಿಚಾರ ರಹಿತ ಹೆಮ್ಮೆಯುಳ್ಳ (Chauvinisum) ಜನಾಂಗ ಭೇದದಿಂದ ಒಬ್ಬರನ್ನೊಬ್ಬರು ಬೇಟೆಯಾಡುತ್ತಿದ್ದ ಜನರನ್ನು ಇಸ್ಲಾಮ್ ಒಬ್ಬರನ್ನೊಬ್ಬರು ಭುಜಕ್ಕೆ ಭುಜ ತಾಗಿಸಿ ಸಮಾನತೆಯಿಂದ ಒಂದೇ ಸಾಲಿನಲ್ಲಿ ನಿಂತು ನಮಾಜ್ ಮಾಡುವುದನ್ನು ಅವರ ಅನ್ಯೂನ್ಯತೆಯನ್ನು ಇಂದು ಒಂದು ಕಂಡರೆ ಎಷ್ಟು ಸುಂದರ, ಅದ್ಭುತ ಎಂದು ಸಂತಸವಾಗುತ್ತದೆ. ಇಂದು ಪ್ರಪಂಚದಲ್ಲೆ ಎಲ್ಲಾಕಡೆ ಅತಿ ಹೆಚ್ಚು ಹಾಗೂ ವೇಗವಾಗಿ ಏಕದೇವನ ಸಂದೇಶ ಹಾಗೂ ಏಕತೆಯ ಸಂದೇಶ ಸರ್ವವ್ಯಾಪಕವಾಗುತ್ತಿದೆ.

ಮನುಷ್ಯನ ಸ್ವಮರ್ಯಾದೆಯನ್ನು ಅಡಮಾನವಿಡುವ ನೀಚಕೆಲಸ:

   ವಾಸ್ತವವಾಗಿ ಸರ್ವಶಕ್ತನಾಗಿರುವ ದೇವನ ಮುಂದೆ ಮಾತ್ರ ಮನುಷ್ಯನು ಸಾಸ್ಟ್ರಾಂಗ ಮಾಡಬೇಕಾಗಿದೆ. ಸೃಷ್ಠಿಗಳಲ್ಲಿಯೇ ಶ್ರೇಷ್ಠವಾದ ಬುದ್ಧಿಶಕ್ತಿ ಇರುವ ಮನುಷ್ಯನಿಗೆ ಬಹುದೇವ ಆರಾಧನೆಯು ಅವನಂತೆ ಇರುವ ಪ್ರಾಣಿಗಳ ಮುಂದೆ, ಘೋರಿಗಳ ಮುಂದೆ, ಕಲ್ಲು ಕಟ್ಟೆಗಳ ಮುಂದೆ, ಮರಗಳ ಮುಂದೆ, ಸಾಸ್ಟ್ರಾಂಗ ಮಾಡಿಸುತ್ತಿದೆ.
  ಸರ್ವಶಕ್ತನಾದ ಆ ಸೃಷ್ಠಿಕರ್ತನಿಗೆ ಮಾತ್ರವೇ ಭಯಪಟ್ಟು ಜೀವಿಸಬೇಕು ಎಂದು ಇಸ್ಲಾಮ್ ಹೇಳುತ್ತದೆ. ಹಾಗೆ ಜೀವಸಿದರೆ ಮಾತ್ರ ಯಾವ ಸೃಷ್ಠಿಯನ್ನೂ ಭಯಪಡಬೇಕಾಗಿಲ್ಲ ಎಂಬ ಮನೋಧೈರ್ಯ ಬೆಳೆಯುತ್ತದೆ. ದೇವನು ಕಲಿಸಿದ ಈ ಮಾರ್ಗದಂತೆ ಬೇರೊಂದು ಸ್ವಮರ್ಯಾದೆಯ ಮಾರ್ಗವು ಇಡೀ ಪ್ರಪಂಚದಲ್ಲೇ ಎಲ್ಲೂ ಇಲ್ಲ.
  ಹಾಗಾಗಿ ಕೇಡುಗಳಿಗೆ ಮಾರ್ಗ ತೋರಿಸುವ ದರ್ಗಾ ಅರಾಧನೆ, ಮೂರ್ತಿ ಆರಾಧನೆ, ಶಿಲುಬೆ ಆರಾಧನೆ,ಎಲ್ಲವನ್ನೂ ನಾವು ತ್ಯಜಿಸಿ, ಇವುಗಳ ವಿರುದ್ಧವಾಗಿ ಏಕದೇವ ಆರಾದನೆಯ ಮಾರ್ಗವನ್ನು ಕೈಗೊಳ್ಳಬೇಕು. ಇದೇ ನಮ್ಮ ನೈಜ ಕರ್ತವ್ಯವಾಗಿದೆ. ಸೃಷ್ಠಿಕರ್ತನಿಗೆ ಬದಲಾಗಿ ಬೇರೆಯಾರನ್ನು ಆರಾಧಿಸಿದರೂ ಯಾವುದೇರೀತಿ ಮಾಡಿದರೂ ಅದು ಪಾಪವೇಸರಿ. ಅದಕ್ಕೆ ಅಂತ್ಯ ದಿನದಲ್ಲಿ ಶಾಶ್ವತ ನರಕ ಕಾದಿದೆ.
  ಇಹಲೋಕದಲ್ಲಿ ಈ ಪಾಪವು ನಮ್ಮನ್ನು ಹೇಗೆ ನಾಶ ಮಾಸುತ್ತಿದೆ ಎಂಬುದನ್ನು ಮೇಲೆ ಓದಿದ್ದೇವೆ. ಈಗ ನಾವು ಯಾವ ಮತ ಧರ್ಮದಲ್ಲಿ ಹುಟ್ಟಿದರೂ ನಮ್ಮನ್ನು ಸೃಷ್ಠಮಾಡಿ ಪರಿಪಾಲಿಸುತ್ತಿರುವ ಆ ಒಚಿದೇ ದೇವನ್ನು ಆರಾಧಿಸುವುದು ನಮ್ಮ ಕರ್ತವ್ಯವಾಗಿದೆ. ಅದರಲ್ಲಿ ಮಾತ್ರವೇ ನಮ್ಮ ಇಹಲೋಕ ಮತ್ತು ಪರಲೋಕದ ವಿಜಯ ಇದೆ. “ಯಾರಾದರೂ ಅಲ್ಲಾಹನಿಗೆ ಭಾಗೀದಾರರನ್ನಾಗಿ ಮಾಡಿದರೆ ಖಂಡಿತ ಅಲಲಾಹನು ಅಂತಹವರಿಗೆ ಸ್ವರ್ಗವನ್ನು ನಿಶಿದ್ಧಗೊಳಿಸಿದ್ದಾನೆ. ಅವನ ವಾಸಸ್ಥಾನ ನರಕವಾಗಿದೆ. ಅಕ್ರಮಿಗಳಿಗಂತೂ ಯಾವ ಸಹಾಯವೂ ಇರುವುದಿಲ್ಲ” ಪವಿತ್ರ ಖುರ್‍ಆನ್; 5 :72. “ ಯಾರು ಅಲ್ಲಾಹನ ಸಮಾನವಾಗಿ ಬೇರೆ ಯಾರನ್ನೂ ಆರಾಧಿಸಲಿಲ್ಲವೂ ಅವನು ಸ್ವರ್ಗ ಪ್ರವೇಶಿಸುವನು. ಯಾರು ಶಿರ್ಕ(ಬಹುದೇವ ಆರಾಧನೆ) ಮಾಡಿದನೋ ಅವನು ನರಕ ಪ್ರವೇಶಿಸುವನು” ಜಾಬಿರ್‍ಬಿನ್ ಅಬ್ದುಲ್ಲಾ ರ ಅ.

ಅಲ್ಲಗಳೆಯಲು ಸಾಧ್ಯವಿರದ ಅಂತ್ಯದಿನ:

  ಮನುಷ್ಯ ಜೀವನದ ಗುರಿ ಏನು? ಹುಟ್ಟಿನಿಂದ ಸಾವಿನವರೆಗಿರುವ ತಾತ್ಕಾಲಿಕ ಬದುಕು ಏಕೆ? ಮರಣದ ನಂತರವೇನು? ಪ್ರತಿಯೊಬ್ಬರಿಗೂ ಸಾವಿನ ನಂತರವೇನು ಕಾದಿದೆ? ಎನ್ನುವುದರ ಬಗ್ಗೆ ನಮ್ಮ ಸೃಷ್ಠಿಕರ್ತ ಮಾತ್ರ ಸರಿಯಾಗಿ ಹೇಳಲು ಸಾಧ್ಯವಿದೆ. ಮಿಕ್ಕಿರುವವರು ಹೇಳುವುದೆಲ್ಲವೂ ಕಾಲ್ಪನಿಕ ಅಥವ ಸಂದೇಹಮಯವಾಗಿದೆ, ಬನ್ನಿ ದೇವನ ಮಾತುಗಳಿಂದ ಅವುಗಳನ್ನು ಅರಿಯೋಣ.

ಈ ಜೀವನವು ಒಂದು ಪರಿಕ್ಷೆ ಮಾತ್ರವಾಗಿದೆ:

  “ನಿಮ್ಮನ್ನು ಪರೀಕ್ಷಿಸಿ ನಿಮ್ಮ ಪೈಕಿ ಯಾರು ಸತ್ಕರ್ಮವೆಸಗುವವನೆಚಿದು ನೋಡಲಿಕ್ಕಾಗಿ ಅವನು ಜೀವನವನ್ನು ಮರಣವನ್ನು ಆವಿಷ್ಕರಿಸಿದನು ಅವನು ಪ್ರಬಲನೂ ಕ್ಷಮಾಶೀಲನೂ ಆಗಿರುತ್ತಾನೆ” ಪವಿತ್ರ ಖುರ್‍ಆನ್; 67:2.

ನಾವು ಮಾಡಿರುವ ಕರ್ಮಗಳ ಕುರಿತು ಸಂಪೂರ್ಣ ವಿಚಾರಿಸಲಾಗುವುದು.

  “ಅಂದು ಜನರು ವಿಭಿನ್ನ ಸ್ಥಿತಿಗಳಲ್ಲಿ ಮರಳುವರು(ಇದು) ಅವರ ಕವ್ರ್ಮಗಳು ಅವರಿಗೆ ತೋರಿಸಲ್ಪಡಲಿಕ್ಕಾಗಿ” “ತರುವಾಯ ಅಣು ಗಾತ್ರದಷ್ಟು ಪುಣ್ಯ ಕಾರ್ಯವೆಸಗಿದವನು ಅದನ್ನು ಕಂಡೇ ತೀರುವನು” “ಮತ್ತು ಅಣು ಗಾತ್ರದಷ್ಟು ಪಾಪ ಕಾರ್ಯವೆಸಗಿದವನು ಅದನ್ನು ಕಂಡೇ ತೀರುವನು” ಪವಿತ್ರ ಖುರ್‍ಆನ್; 99:6,7,8.

ಸತ್ಕರ್ಮಿಗಳು ಸ್ವರ್ಗ ಪ್ರವೇಶಿಸುವರು:

  “ನಮ್ಮ ನಿದರ್ಶನಗಳನ್ನು ಮಾನ್ಯ ಮಾಡಿಕೊಂಡು ಸತ್ಕರ್ಮ ಮಾಡಿದವರಿಗೆ ನಾವು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೊದ್ಯಾನಗಳಲ್ಲಿ ಪ್ರವೇಶ ಕೊಡುವೆವು. ಅಲ್ಲಿ ಅವರು ಅನಂತ ಕಾಲ ನೆಲೆಸುವರು ಅಲ್ಲಿ ಅವರಿಗೆ ಪರಿಶುದ್ಧ ಜೊತೆಗಾರರು ಸಿಗುವರು ಮತ್ತು ನಾವು ಅವರನ್ನು ದಟ್ಟವಾದ ನೆರಳಿನಲ್ಲಿರಿಸುವೆವು” ಪವಿತ್ರ ಖುರ್‍ಆನ್; 4:57.

ದುಷ್ಕರ್ಮಿಗಳು ನರಕ ಪ್ರವೇಶಿಸುವರು:

  “ವಾಸ್ತವದಲ್ಲಿ ನರಕವು ಒಂದು ಬೋನಾಗಿದೆ(ಹೊಂಚಿನ ತಾಣ). ಅದು ವಿದ್ರೋಹಿಗಳ ವಾಸಸ್ಥಾನವಾಗಿದೆ. ಅದರಲ್ಲಿ ಅವರು ದೀರ್ಘಕಾಲ ಬಿದ್ದು ಕೊಂಡಿರುವರು. ಅದರೊಳಗೆ ಅವರು ಯಾವುದೇ ತಂಪನ್ನಾಗಲಿ ಕುಡಿಯಲರ್ಹವಾದ ಯಾವುದೇ ವಸ್ತುವಿನ ರುಚಿಯನ್ನಾಗಲಿ ಸವಿಯಲಾರರು. ಏನಾದರೂ ಸಿಗುವುದಿದ್ದರೆ ಅದು ಕುದಿಯುವ ನೀರು ಮತ್ತು ಹುಣ್ಣುಗಳ ಕೀವು ಮಾತ್ರ. (ಅವರ ದುಷ್ಕøತ್ಯಗಳ) ಪರಿಪೂರ್ಣ ಪ್ರತಿಫಲವಿದು” ಪವಿತ್ರ ಖುರ್‍ಆನ್; 78:21-26.

ಪುನರ್ಜೀವನವು ಅತಿ ಪರಿಪಕ್ವವಾಗಿ ನಡೆಯಲಿದೆ. 

  “ನಾವು ಅವನ ಎಲುಬುಗಳನ್ನು ಒಟ್ಟುಗೂಡಿಸಲಾರೆವೆಂದು ಮಾನವನು ಭಾವಿಸುತ್ತಿರುವನೇ?. ಯಾಕಿಲ್ಲ?. ನಾವಚಿತು ಅವನ ಬೆರಳುಗಳ ತುದಿಗಳನ್ನು ಕೂಡಾ ಸರಿಯಾಗಿ ರಚಿಸಲು ಶಕ್ತರಾಗಿದ್ದೇವೆ” ಪವಿತ್ರ ಖುರ್‍ಆನ್; 75:3-4.

ನಿಮ್ಮ ಸುತ್ತಮುತ್ತಲಿರುವ ದೃಷ್ಟಾಂತಗಳನ್ನು ನೋಡಿರಿ:

  ನಮ್ಮ ಇಂದ್ರಿಯಗಳು ಅರಿಯುವ ವಿಷಯಗಳನ್ನು (Sensible data) ಆಧರಿಸಿ ಇಂದ್ರಿಯಗಳಿಗೆ ನಿಲುಕದೇ ಇರುವ (Non Sensible data) ವಿಷಯಗಳನ್ನು ತಿಳಿದುಕೊಳ್ಳುವುದೇ (Reasaning) ಬುದ್ಧಿವಂತಿಕೆಯಾಗಿದೆ.
  “ಇದು ಅಲ್ಲಾಹನ ನಿದರ್ಶನಗಳಲ್ಲೊಂದು, ಭೂಮಿಯು ಬರಡಾಗಿ ಬಿದ್ದಿರುವುದನ್ನು ನೀವು ಕಾಣುತ್ತೀರಿ. ಆ ಬಳಿಕ ನಾವು ಅದರ ಮೇಲೆ ನೀರನ್ನು ಸುರಿದ ತಕ್ಷಣ ಅದು ಹಿಗ್ಗುತ್ತದೆ ಮತ್ತು ಅರಳಿಕೊಳ್ಳುತ್ತದೆ. ಖಚಿಡಿತವಾಗಿಯೂ ಯಾವ ದೇವನು ಈ ಸತ್ತು ಹೋಗಿದ್ದ ಭೂಮಿಯನ್ನು ಜೀವಂತಗೊಳಿಸುತ್ತಾನೋ ಅವನೇ ಮೃತರನ್ನು ಪುನಃ ಜೀವಂತಗೊಳಿಸಲಿರುವನು.ನಿಶ್ಚಯವಾಗಿಯೂ ಅವನು ಎಲ್ಲಾ ಕಾರ್ಯಗಳ ಸಾಮಥ್ರ್ಯಉಳ್ಳವನು” ಪವಿತ್ರ ಖುರ್‍ಆನ್; 41:39.

ಮರಣ ಮತ್ತು ಪುರ್ಜೀವನವನ್ನು(ನಿದ್ರೆ) ನೀವು ಪ್ರತಿದಿನ ಅನುಭವಿಸುತ್ತಿದ್ದೀರಿ:

  ದಿನವೂ ನಾವು ಮಲಗುವೆವು ನಂತರ ಎದ್ದೇಳುವೆವು, ನಿದ್ರೆಮಾಡುವಾಗ ಏನು ನಡೆಯುತ್ತಿದೆ? ನಿದ್ರೆ ಮಾಡುವಾಗ ಪ್ರಾಣ ನಮ್ಮ ಹತೋಟಿಯಲ್ಲಿರುವುದಿಲ್ಲ ದೇಹದಿಂದ ಹೊರಗಿರುತ್ತದೆ, ಆಗ ದೇವನಿಂದ ನಮ್ಮ ಪ್ರಾಣವು ನಮ್ಮ ದೇಹದಿಂದ ತೆಗೆಯಲ್ಪಟ್ಟಿರುತ್ತದೆ. ನಂತರ ಆ ಪ್ರಾಣವು ಮತ್ತೆ ಹಿಂದಿರುಗಿಸಿದರೆ ಮಾತ್ರ ಎಚ್ಚರಗೊಳ್ಳಲು ಸಾಧ್ಯ ಇಲ್ಲದಿದ್ದರೆ ನಿದ್ರೆಯಲ್ಲೇ ನಾವು ಸಾವನ್ನಪ್ಪುವೆವು.
  “ಮರಣದ ವೇಳೆ ಆತ್ಮಗಳನ್ನು ವಶಪಡಿಸಿಕೊಳ್ಳುವವನು ಅಲ್ಲಾಹನೇ ಮತ್ತು ಉನ್ನೂ ಸಾಯದಿದ್ದವನ ಆತ್ಮವನ್ನು ನಿದ್ರಾವಸ್ಥೆಯಲ್ಲಿ ವಶಪಡಿಸಿಕೊಳ್ಳುವವನೂ ಅವನೆ. ಅವನು ಯಾವುದರ ಮೇಲೆ ಮರಣದ ತೀರ್ಮಾನವನ್ನು ಜಾರಿಗೊಳಿಸುತ್ತಾನೋ ಅದನ್ನು ತಡೆಹಿಡಿಯುತ್ತಾನೆ ಮತ್ತು ಇತರರ ಆತ್ಮಗಳನ್ನು ಒಂದು ನಿರ್ದಿಷ್ಟಕಾಲದವರೆಗಾಗಿ ಹಿಂದಕ್ಕೆ ಕಳುಹಿಸುತ್ತಾನೆ. ನಿಶ್ಚಯವಾಗಿಯೂ ವಿಚಾರ ಶೀಲರಿಗೆ ಇದರಲ್ಲಿ ದೊಡ್ಡ ನಿದರ್ಶನಗಳಿವೆ”. ಪವಿತ್ರ ಖುರ್‍ಆನ್; 39:42.

ಮರಣವು ನಮ್ಮನ್ನು ಅಪ್ಪುವ ಮುಂಚೆ ನಾವು ದೇವನಲ್ಲಿಗೆ ಮರಳೊಣ:

  “ಅವರೊಡನೆ ಕೇಳಿರಿ ನಿಮಗೆ ಆಕಾಶಗಳಿಂದಲೂ ಭೂಮಿಯಿಂದಲೂ ಜೀವನಾಧಾರ ನೀಡುತ್ತಿರುವವನಾರು?. ಈ ಶ್ರವಣ ಮತ್ತು ದೃಕ್ ಶಕ್ತಿಗಳು ಯಾರ ವಶದಲ್ಲಿವೆ? ನಿರ್ಜೀವಿಯಿಂದ ಸಜೀವಿಯನ್ನು,ಸಜೀವಿಯಿಂದ ನಿರ್ಜೀವಿಯನ್ನು ಹೊರತರುವವನಾರು?. ಈ ಜಗತ್ತಿನ ವ್ಯವಸ್ಥೆಯನ್ನು ಶಿಸ್ತು ಬದ್ಧವಾಗಿ ನಡೆಸುತ್ತಿರುವವನಾರು?. ಅಲ್ಲಾಹ್ ಎಂದೇ ಅವರು ಹೇಳುವರು. ಹೇಳಿರಿ ಹಾಗಿದ್ದರೂ ನೀವು (ಪರಮಾರ್ಥಕ್ಕೆ ವಿರುದ್ಧವಾಗಿ ನೆಡೆಯುವುದನ್ನು) ತೊರೆಯುವುದಿಲ್ಲವೇ?. ಪವಿತ್ರ ಖುರ್‍ಆನ್; 10:31.
  ಹೌದು ಸ್ನೆಹಿತರೆ ನಮ್ಮನ್ನು ಸೃಷ್ಠಿಸಿ ಪರಿಪಾಲನೆ ಮಾಡುತ್ತಿರುವವನು ನಮ್ಮ ದೇವನು, ಅವನಿಗೆ ಕೃತಜ್ಞತೆ ತೋರಿಸುವುದು ನಮ್ಮ ಕರ್ತವ್ಯ, ನಮ್ಮ ದೇಹ, ಸಂಪತ್ತು, ಜೀವ ಎಲ್ಲವೂ ಅವನದೇ ಸ್ವತಃವಾಗಿವೆ ಅವನ ಆಜ್ಞೆಗಳಿಗೆ ನಾವು ಶಿರಬಾಗಿ ಅಥವ ಬದ್ಧರಾಗಿ ಬದುಕಿದರೆ ಇಹ ಮತ್ತು ಪರಲೋಕದಲ್ಲಿ ಶಾಂತಿ ಸಿಗುತ್ತದೆ. ಅಂತ್ಯದಿನದ ನಂತರ ಸ್ವರ್ಗ ಸಿಗುತ್ತದೆ ಇಲ್ಲದಿದ್ದರೆ ಶಾಂತಿಯೂ ಇಲ್ಲ ನರಕವಂತೂ ಕಡ್ಡಾಯವಾಗಿದೆ.

ಮುಹಮ್ಮದ್(ಸ)ಪೈಗಂಬರ್ ಯಾರು? ಮತ್ತು ಅವರ ಪ್ರಾಮುಖ್ಯತೆ:

  ಪವಿತ್ರ ಖುರ್‍ಆನ್‍ನ್ನು ಮಾನವ ಕುಲಕ್ಕೆ ಪರಿಚಯಿಸಿದವರು ಅದರ ಆಜ್ಞೆಗಳನ್ನುತಮ್ಮ ಜೀವನದಲ್ಲಿ ಚಾಚೂತಪ್ಪದೆ ಅನುಸರಣೆ ಮಾಡಿ ತೋರಿಸಿದವರು ಮತ್ತು ಮಾನವಕುಲಕ್ಕೆ ಸಂದೇಶವಾಹಕರಾಗಿ ಮುಹಮ್ಮದ್(ಸ)ರವರು ಒಂದು ಅಮೂಲ್ಯ ಸುಂದರ ಉದಾಹರಣೆಯಾಗಿದ್ದಾರೆ ಎಂದು ಅಲ್ಲಾಹನೇ ಪವಿತ್ರ ಖುರ್‍ಆನ್‍ನಲ್ಲಿ ಹೇಳಿದ್ದಾನೆ. ಆದ್ದರಿಂದ ಇಂತಹಾ ಸಂದೇಶವಾಹಕರ ಬಗ್ಗೆ ತಿಳಿದುಕೊಳ್ಳುವುದು ಕಡ್ಡಾಯವಾvದೆಯಲ್ಲವೇ?. ಈ ಸಂದೇಶವಾಹಕರ ಜೀವನ ಶೈಲಿ, ಅವರು ತೋರಿಸಿಕೊಟ್ಟಿರುವ ಆಚರಣೆಗಳು ಉದಾಹರಣೆಗಳು ಮತ್ತು ಖುರ್‍ಆನ್, ಇಸ್ಲಾಮೀ ಬದುಕಿನ ಮಾರ್ಗದರ್ಶನವಾಗಿದೆ. ಆದಿಪಿತ ಆದಮ್ ಅ ಸ, ಮೊದಲನೆ ಮಾನವನಾಗಿದ್ದರು ಹಾಗೂ ಸಂದೇಶವಾಹಕರೂ(ನಬಿ) ಸಹ ಆಗಿದ್ದರು ಅವರ ನಂತರ ಬಹಳಷ್ಟು ಸಂದೇಶವಾಹಕರು ಬಂದಿದ್ದಾರೆ ಅವರೆಲ್ಲರೂ ಆ ಒಂದೇ ದೇವನಿಗೆ ಶರಣಾಗಿರಿ ಎಂದು ಹೇಳಿದರು. ಈ ಶರಣಾಗತಿಯನ್ನು ಅರಬೀ ಭಾಷೆಯಲ್ಲಿ ಇಸ್ಲಾಮ್ ಎಂದು ಕರೆಯುತ್ತಾರೆ. ಅವರ್ಯಾರೂ ತಮ್ಮನ್ನು ಪೂಜಿಸಿರಿ ಎಂದು ಹೇಳಲಿಲ್ಲ, ಅವನನ್ನೇ ಪೂಜಿಸಿರಿ ಎಂದು ಹೇಳಿದರು. ಆ ಒಬ್ಬ ದೇವನಿಗೆ  ಶರಣಾಗಿ ಬದುಕಿರಿ ಎಂದು ಹೇಳಿದರು.ಹಾಗೆ ಬದುಕಿದರೆ ಮಾತ್ರ ಇಹಲೋಕದಲ್ಲಿ ಶಾಂತಿ, ಪರಲೋಕದಲ್ಲಿ ಸ್ವರ್ಗ ದಕ್ಕಲು ಸಾಧ್ಯ. ಇದರ ವಿರುದ್ಧವಾಗಿ ಬದುಕಿದರೆ ಇಹಲೋಕದಲ್ಲಿ ಅಶಾಂತಿ ಪರಲೋಕದಲ್ಲಿ ನರಕವೇ ಗತಿ. ಮುಹಮ್ಮದ್(ಸ)ರವರು ಜನರಿಗೆ ಪಾಪ ಪುಣ್ಯಗಳಾವುವು ಎಂಬುದನ್ನು ಉದಾಹರಣೆ ಸಮೇತ ತೋರಿಸಿ ಕೊಟ್ಟು ಮಾದರಿ ಪುರುಷನಾಗಿ ಬದುಕಿ ತೋರಿಸಿದವರಾಗಿದ್ದಾರೆ. ಹೀಗೆ ಎಲ್ಲಾ ಸಂದೇಶವಾಹಕರು ತಮ್ಮ ತಮ್ಮ ಜನಾಂಗದವರೊಂದಿಗೆ ಧರ್ಮವನ್ನು ನೆಲೆಗೊಳಿಸಿದರು. ಆನರು(ಅನುಯಾಯಿಗಳು) ಸಹ ಒಬ್ಬದೇವನನ್ನು ಆರಾಧಿಸಿ ಸುವ್ಯವಸ್ಥಿತವಾದ ಸಮಾಜವನ್ನು ಸೃಷ್ಠಿಸಿ ತೋರಿಸಿಕೊಟ್ಟರು. ಆಗ ಅವರೆಲ್ಲರೂ ಶಾಂತಿ ಸಮಾಧಾನ ಸಹೊದರತ್ವ ಸಮತ್ವ ಅಥವ ಸಮಾನತೆಯನ್ನು ಅನುಭವಿಸಿದರು. 
  ಆದರೆ…

  ಸಂದೇಶವಾಹಕರ ನಂತರದ ವ್ಯವಸ್ಥೆ ಹೇಗಿರುತ್ತಿತ್ತು?

  ಪ್ರತಿಯೊಂದು ಸಮುದಾಯಕ್ಕೂ ಓರ್ವ ಸಂದೇಶವಾಹಕ ಸಂದ ನಂತರ ಅವರ ಜನಾಂಗದ ಕೆಲವರು ಅವರ ಸ್ಮರಣೆಗಾಗಿ ಶ್ರದ್ಧಾಂಜಲಿಯ ಹೇಸರಿನಲ್ಲಿ ಅವರ ಚಿತ್ರವನ್ನು ಬರೆದು ಗೌರವಿಸಲು ಆರಂಭಿಸಿದರು ನಂತರದ ಜನಾಂಗ ಶೈತಾನಿನ ಕುಮ್ಮಕ್ಕಿನಿಂದ ಅವರ ಪ್ರತಿಮೆಯನ್ನು ಮಾಡಿದರು, ನಂತರ ಹೂವು ಆಹಾರಗಳನ್ನು ಇಡಲು ಆರಂಭಿಸಿದರು, ನಂತರ ಆ ಸಂದೇಶವಾಹಕರನ್ನೆ ಆರಾಧಿಸಲು ಆರಂಭಿಸಿದರು.
  ಎಂತಹಾ ವಿಪರ್ಯಾಸವಿದು,,,,,,,,? ಸೃಷ್ಠಿಕರ್ತನನ್ನು ಮಾತ್ರ ಆರಾಧಿಸಿರಿ ಅವನನ್ನು ಬಿಟ್ಟು ಇತರ ಯಾರನ್ನೂ ಆರಾಧಿಸದಿರಿ ಎಂದು ಹೇಳಿದ ಸಂದೇಶವಾಹಕರನ್ನೆ ಅವರ ಮೂರ್ತಿಗಳನ್ನು ಮಾಡಿಕೊಂಡು ಆರಾಧಿಸುವುದು ಎಂತಹಾ ಮೂರ್ಖತನ?  ಅವರು ಮುಂದೆ ಹೊದಂತೆ ಅವರಿಗಾಗಿ(ಮೂರ್ತಿಗಳಿಗಾಗಿ) ದೇವಸ್ಥಾನಗಳನ್ನು ಕಟ್ಟಿಸಿದರು.
  ಈ ರೀತಿಯಾಗಿ ದೇವರು ಎನ್ನುವ ಪದಕ್ಕೇ ದೇವನ ನೈಜ ಭಾವನೆ ಅಳಿಸಿ ಹೊಗಿರುವ ಕಾರಣದಿಂದ ಪಾಪಗಳು ಹೇಚ್ಚಾದವು. ಆನಾಂಗಕ್ಕೊಂದು, ಊರಿಗೊಂದು, ಎಂದು ದೇವರ ಸಂಖ್ಯಗಳು ಉದಯವಾದ ಕಾರಣದಿಂದ ಜಾತಿಗಳು ಜನಾಂಗಗಳು ಎಂದು ವಿಭಜಿಸಲ್ಪಟ್ಟಿದೆ. ಈ ರೀತಿಯಾಗಿ ಅಧರ್ಮ ಹೆಚ್ಚಾದಾಗಲೆಲ್ಲಾ ಪುನಃ ಪುನಃ ಧರ್ಮ ಸ್ಥಾಪಿಸಲಿಕ್ಕಾಗಿ ಸಂದೇಶವಾಹಕರು ಬರುತ್ತಿದ್ದರು. ಹೀಗೆ ಇವರಲ್ಲಿ ಕೊನೇಯದಾಗಿ ಅಲ್ಲಾಹನು ಕಳುಹಿಸಿದ ಅಂತಿಮ ಸಂದೇಶವಾಹಕರೇ ಮುಹಮ್ಮದ್(ಸ) ಆಗಿದ್ದಾರೆ. ಯಾವ ಏಕ ದೇವನ ಸಂದೇಶವನ್ನು ಹಿಂದಿನ ಎಲ್ಲಾ ಸಂದೇಶವಾಹಕರು ಬೋಧಿಸಿದರೋ ಮುಹಮ್ಮದ್(ಸ)ರವರೂ ಸಹ ಚಾಚೂ ತಪ್ಪದೆ ಅದನ್ನೇ ಬೋಧಿಸಿದರು. ನಿಶ್ಚಯವಾಗಿ ದೇವರು ಯಾವಾಗಲೂ ವೈರುಧ್ಯಗಳನ್ನು ಕಲಿಸುವುದಿಲ್ಲ ಅಂತೆಯೇ ಎಲ್ಲಾ ಸಂದೇಶವಾಹಕರೂ ವೈರುಧ್ಯಗಳನ್ನು ಕಲಿಸಿಕೊಡುವುದಿಲ್ಲ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಈ ವೈರುಧ್ಯಗಳೇನಾದರೂ ಕಂಡು ಬರುತ್ತಿದ್ದರೆ ಅವುಗಳು ಹಿಂದಿನ ಕಾಲದಲ್ಲಿನ ಕೆಲವು ಶಕ್ತಿಗಳ ಕುತಂತ್ರಿಗಳು ತಮ್ಮ ಪ್ರತಿಷ್ಟೆಗಾಗಿ ಧರ್ಮದ ಹೆಸರಿನಲ್ಲಿ ಜನರನ್ನು ಹಾಗೂ ಜನರ ಸಂಪತ್ತನ್ನು ಬಗೆಯಲಿಕ್ಕಾಗಿಯೇ ಇದರಲ್ಲಿ(ಧರ್ಮ) ಬೆರೆಸಿರುವುದು ಎಂಬುದನ್ನು ನಾವು ಸ್ಪಷ್ಟವಾಗಿ ತಿಳಿದು ಕೊಳ್ಳಬೇಕು.

ಮುಹಮ್ಮದ್(ಸ)ರವರ ಇತಿಹಾಸ:

  ಸಂದೇಶವಾಹಕ ಮುಹಮ್ಮದ್(ಸ)ರವರು ಉನ್ನತ ವರ್ಗವಾದ ಖುರೈಶ್ ಮನೆತನದಲ್ಲಿ ಅಬ್ದುಲ್ಲಾ ಮತ್ತು ಆಮಿನಾ ಸಂಪತಿಗಳಿಗೆ ಕ್ರಿ,ಶ, 571 ರಲ್ಲಿ ಮಕ್ಕಾ ನಗರದಲ್ಲಿ ಹುಟ್ಟಿದರು. ಅವರು ತಾಯಿಯ ಗರ್ಭದಲ್ಲಿರುವಾಗಲೇ ತಂದೆಯನ್ನು ಕಳೆದುಕೊಂಡರು. ಹುಟ್ಟಿದ ಕೆಲವೇ ವರ್ಷಗಳಲ್ಲಿ(6 ವರ್ಷ) ತಾಯಿಯನ್ನೂ ಸಹ ಕಳೆದುಕೊಂಡರು. ಅನಾಥರಾದ ಮುಹಮ್ಮದ್(ಸ)ರನ್ನು ತನ್ನ ಚಿಕ್ಕಪ್ಪ ಅಬೂತಾಲಿಬ್‍ರವರು ತಮ್ಮ ಆಶ್ರಯದಲ್ಲಿ ಇರಿಸಿಕೊಂಡು ಸಾಕಿ ಸಲಹಿದರು. ಅನಾಥರಾದರೂ ಕೂಡಾ ಅತ್ತ್ಯುತ್ತಮ ಗುಣವಿಶೇಷತೆಗಳನ್ನು ಹಾಗೂ ಸತ್ಯಾಸತ್ಯತೆಯನ್ನು ಕಂಡು ಅವರನ್ನು ಸತ್ಯಸಂಧರು ಎಂದು ಕರೆಯುತ್ತಿದ್ದರು ಹಾಗೂ ‘ಅಲ್ ಅಮೀನ್’ ಅಥವ ನಂಬಿಕೆಗೆ ಪಾತ್ರರಾದವರು ಎಂದು ಕರೆಯುತ್ತಿದ್ದರು.
 
ಆದರೆ ಅವರ ಸುತ್ತ ಮುತ್ತ ಮೂಢ ನಂಬಿಕೆಗಳು, ಅನ್ಯಾಯ ಅನಾಚಾರಗಳು ಹೆಚ್ಚಿರುತ್ತಿದ್ದುವು. ಅಲ್ಲಿ ಜನರೆಲ್ಲರೂ ತಮ್ಮ ಹಿರಿಯರು ಬಿಟ್ಟುಹೋದ ಅಂಧ ಆಚರಣೆಗಳನ್ನು ಕಣ್ಣು ಮುಚ್ಚಿಕೊಂಡು ಅನುಸರಿಸುತ್ತಿದ್ದರು. ಅವರು ಕಲ್ಲಿನ ಮೂರ್ತಿಗಳನ್ನು  ಪೂಜಿಸುತ್ತಿದ್ದರು. ಅವರು ಯಾರೆಂದು ಗೊತ್ತಿರದೇ ಇರುವಂತಹವರ ಮೂರ್ತಿಗಳನ್ನು ಮಾಡಿಕೊಂಡು ಪೂಜಿಸುತ್ತಿದ್ದರು. ದೇವರ ಹೆಸರ ಮೇಲೆ ಪುರೋಹಿತಶಾಹಿಗಳು ಹೇಳಿಕೊಟ್ಟ ಮೂಢ ನಂಬಿಕೆಗಳನ್ನು ಅಂಧಾಚಾರಗಳನ್ನು ಪ್ರಶ್ನಿಸದೇ ಆಚರಣೆ ಮಾಡುತ್ತಿದ್ದರು.

ಹೆಣ್ಣು ಶಿಶುಗಳನ್ನು ಜೀವಂತ ಹೊಳುತ್ತಿದ್ದರು ಮದ್ಯ ಸೇವನೆ ಮಾಡುತ್ತಿದ್ದರು. ಜೀವ ಅಥವ ಪ್ರಾಣ ತೆಗೆಯುವುದೊಂದು ತುಚ್ಚ ಕೆಲಸವೆಂದು ತಿಳಿದಿದ್ದರು. ಸ್ತ್ರೀಯರನ್ನು ದಾಸಿಯರಂತೆ ಕಾಣುತ್ತಿದ್ದರು. ಚಿಕ್ಕ ಚಿಕ್ಕ ವಿಷಯಗಳಿಗೆ ತಲೆತಲಾಂತರದವರೆಗೆ  ವರ್ಷಗಟ್ಟಲೆ ಯುದ್ಧ ಮಾಡಿತ್ತಿದ್ದರು. ವರ್ಣ, ಗೋತ್ರ, ಜನಾಂಗಿಯ, ಪ್ರಾಂತೀಯ ದ್ವೆಷಗಳು ಹೆಚ್ಚಾಗಿ ತಾಂಡವಾಡುತ್ತಿದ್ದು ಇವುಗಳೆಲ್ಲವು ಜನರಿಗೆ ತುಂಬಾ ತೊಂದರೆ ಮಾಡುತ್ತಿದ್ದವು. ಇಂತಹಾ ಕ್ರೂರ ಯುಗದಲ್ಲಿ ಮುಹಮ್ಮದ್(ಸ)ರವರು ಅರೇಬಿಯಾ ಪ್ರದೇಶದಲ್ಲಿ ಅವರ 40ನೇ ವಯಸ್ಸಿನಲ್ಲಿ ದೇವ ದೂತರಂತೆ ಸಂದೇಶವಾಹಕರಾಗಿ ಪ್ರತ್ಯಕ್ಷರಾದರು.
 
ಅಶಾಂತಿ ಜನರಲ್ಲಿ ತಾಂಡವಾಡುತ್ತಿತ್ತು. ಅಂತಹಾ ಸಂದರ್ಭದಲ್ಲಿ ಆ ರಾಜ್ಯದಲ್ಲಿ ಇಸ್ಲಾಮ್ ಧರ್ಮ ಎಂಬ ಅತ್ತ್ಯುನ್ನತ ಪರಿವರ್ತನೆಯ ತತ್ವವನ್ನು ಪರಿಚಯಿಸಿ ಜನರನ್ನು ಶಾಂತಿಯ ಹಾಗೂ ಏಕ ದೇವನೆಡೆಗೆ ಕರೆದರು. ಈ ಉಪದೇಶದ ಮುಖ್ಯವಾದ ಅಂಶ, ದೇವನು ಒಬ್ಬನೇ ಎಂಬುದಾಗಿದ್ದು ಅವನನ್ನು ಮಾತ್ರ ಪೂಜಿಸಬೇಕು ಎಂದಾಗಿತ್ತು. ಅವನನ್ನು ಪೂಜಿಸಲು ಮಧ್ಯವರ್ತಿಗಳು, ಅಂಧ ಆಚರಣೆಗಳು, ಕುರುಡು ಪದ್ಧತಿಗಳು ಬೇಕಿಲ್ಲ ಎಂಬುದು ಮುಖ್ಯವಾದ ಅಂಶವಾಗಿತ್ತು, ಮಾತ್ರವಲ್ಲದೇ ದೇವನ ಹೊರತು ಮನುಷ್ಯರನ್ನು, ಸೃಷ್ಠಿಗಳನ್ನು, ಘೋರಿಗಳನ್ನು, ನಿರ್ಜೀವ ಕಲ್ಲುಗಳನ್ನು, ರೂಪಗಳನ್ನು ಆರಾಧಿಸುವುದು ಅವುಗಳನ್ನು ದೇವರೆಂದು ಕರೆಯುವುದು ದೊಡ್ಡ ಪಾಪವೆಂದು ಇಸ್ಲಾಮ್ ಹೇಳುವುದು ನಿಮಗೆ ಗೊತ್ತು. ದೇವನ ಹೆಸರಿನಲ್ಲಿ ಜನರ ಶಕ್ತಿ ಸಂಪತ್ತನ್ನು ಬಗೆಯುತ್ತಿರುವವರಿಗೆ ಇದನ್ನು ಸಹಿಸಿಕೊಳ್ಳಲಾಗುತ್ತದೆಯೇ?
ನೀವೇ ಸ್ವಲ್ಪ ಯೋಚಿಸಿ ನೋಡಿ..! ನಂತರ ಪೈಗಂಬರ್ ಹಾಗೂ ಅವರ ಸಂಗಡಿಗರನ್ನು ಚಿತ್ರಹಿಂಸೆ ಮಾಡಲಾರಂಭಿಸಿದರು, 13 ವರ್ಷಗಳವರೆಗೆ ಸತತವಾಗಿ ಎಲ್ಲಾ ಚಿತ್ರಹಿಂಸೆಯನ್ನು ಶಾಂತ ರೀತೀಯಿಂದ ಸಹಿಸಿದರು. ಕಾಲ ಸರಿದಂತೆ ತೊಂದರೆ ಹೆಚ್ಚಾಗಿ ಅದು ಮಿತಿಮೀರಿದಾಗ ಅಲ್ಲಾಹನು ಮಕ್ಕಾ ತೊರೆಯಲು ಆಜ್ಞೆಮಾಡಿದನು. ಹಾಗಾಗಿ ಮುಹಮ್ಮದ್(ಸ)ಮಕ್ಕಾ ನಗರವನ್ನು ಬಿಟ್ಟು ಸುಮಾರು 500 ಕಿ,ಮಿ, ದೂರದಲ್ಲಿರುವ ಮದಿನಾ ಪಟ್ಟಣಕ್ಕೆ ಪ್ರಯಾಣ ಅಥವ ಹಿಜರತ್ ಮಾಡಿ ಹೋಗಬೇಕಾಯಿತು.
    ಮದೀನಾದಲ್ಲಿ ಆಗಲೇ ಇಸ್ಲಾಮ್ ಪರಿಚಯವಾಗಿ ವ್ಯಾಪಿಸಿತ್ತು, ಅಲ್ಲಿ ಅವರಿಗೆ ಅನುಯಾಯಿಗಳೂ ರಕ್ಷಣೆಯೂ ಮತ್ತು ಆದರವೂ ದೊರೆಯಿತು, ಮಾತ್ರವಲ್ಲದೆ ಮದಿನಾದಲ್ಲಿ ಇಸ್ಲಾಮ್ ಬೆಳೆಯುತ್ತಾ ಮುಸ್ಲಿಮರು ಹೆಚ್ಚಾಗತೊಡಗಿದರು. ಇಲ್ಲಿಂದ ಒಂದು ಚಿಕ್ಕ ಇಸ್ಲಾಮಿ ರಾಜ್ಯದ ಆರಂಭವಾಯಿತು. ಅದನ್ನು ಕಂಡು ಮಕ್ಕಾದಲ್ಲಿರುವ ದುಷ್ಟ ಅಧಿಕಾರಿಗಳು ಸೈನ್ಯವನ್ನು ತೆಗೆದುಕೊಂಡು ಮುಹಮ್ಮದ್(ಸ) ಇರುವ ಮದೀನಾದ ಮೇಲೆ ಯುದ್ಧ ಸಾರಿದರು. ಆಗ ಮುಹಮ್ಮದ್(ಸ)ರು ತಮ್ಮ ಜನರ ಅಥವ ಅನುಯಾಯಿಗಳ ರಕ್ಷಣೆಗಾಗಿ ರಕ್ಷಣಾತ್ಮಕ ಯುದ್ಧ ಮಾಡಿದರು. ಈ ರೀತಿಯ ಹಲವು ಯುದ್ಧಗಳು ನಡೆದು ಸೋಲು ಗೆಲುವು ಎರಡನ್ನೂ ಸವಿದರು. ಕೊನೇಯದಾಗಿ ಸತ್ಯವೇ ಗೆಲುವು ಸಾಧಿಸಿತು, ಆಗ ಮಕ್ಕಾನಗರವನ್ನು ಮುಸ್ಲಿಮರು ವಷಪಡಿಸಿಕೊಂಡರು. ಮಕ್ಕಾದ ಎಲ್ಲಾ ಅಕ್ರಮಿಗಳು ತಾವು ಮಾಡಿದ ಅತಿಕ್ರಮಕ್ಕೆ ಕ್ಷಮೆ ಕೇಳಿದಾಗ ಮುಹಮ್ಮದ್(ಸ)ರು ಅವರೆಲ್ಲರನ್ನು ಸಾಮಾಜಿಕ ಸತ್ಯನಿಷ್ಠೆಯಿಂದ ಕ್ಷಮಿಸಿದರು. ಅದರಿಂದ ಅವರೆಲ್ಲರೂ ಮನಃ ಪೂರ್ವಕವಾಗಿ ಮುಸ್ಲಿಮರಾದರು. ಹೀಗೆ ಅರೇಬಿಯಾ ದೇಶದ ತುಂಬಾ ಇಸ್ಲಾಮ್ ಹರಡಿದ ನಂತರ ಮುಹಮ್ಮದ್(ಸ)ರು ತಮ್ಮ 63 ನೇ ವಯಸ್ಸಿನಲ್ಲಿ ಮರಣ ಹೊಂದಿದರು. ಈ ರೀತಿಯಾಗಿ ಮುಹಮ್ಮದ್(ಸ)ರವರು ನಬಿಯಾಗಿ ಪೈಗಂಬರರಾಗಿ ನೇಮಕವಾದ ವಯಸ್ಸಿನಿಂದ ಮರಣದವರೆಗೂ ಅಂದರೆ ತಮ್ಮ 40 ನೇ ವಯಸ್ಸಿನಿಂದ 63 ನೇ ವಯಸ್ಸಿನವರೆಗೆ ಗತಿಸಿದ 23 ವರ್ಷಗಳಲ್ಲಿ ಎದುರಿಸಿರುವ, ವಿವಿಧ ಸಂಧರ್ಭಗಳಲ್ಲಿ ಅವರಿಗೆ ದೇವನ ಕಡೆಯಿಂದ ಉಪದೇಶವಾಗಿಯೂ ಆಜ್ಞೆಗಳಾಗಿಯೂ ಸ್ವಲ್ಪ ಸ್ವಲ್ಪವಾಗಿ ಅವತರಿಸಲ್ಪಟ್ಟ ದಿವ್ಯವಾಣಿಗಳ ಸಂಗ್ರಹ ರೂಪವೇ ಪವಿತ್ರ ಖುರ್‍ಆನ್. 

ಮುಹಮ್ಮದ್(ಸ)ರವರ ವಿಷೇಶತೆಗಳು:

  ಮುಹಮ್ಮದ್(ಸ)ರವರು ಕೊನೇಯ ಪೈಗಂಬರ ಅಥವ ಸಂದೇಶವಾಹಕರಾಗಿ ಬಂದಿರುವುದರಿಂದ ನಾವು ಜೀವಿಸಿರುವ ಈ ಕಾಲಘಟ್ಟಕ್ಕಾಗಿ ಕಳುಹಿಸ್ಪಟ್ಟಿರುವರೆಂದು ಮತ್ತು ಅವರ ಮೂಲಕ ನೇರ ಮಾರ್ಗವು ಸಂಪೂರ್ಣಗೊಳಿಸಲ್ಪಟ್ಟದೆ ಎಂಬುದು ನಿಜ. ಹಾಗಾಗಿ ಅವರ ಕೆಲವು ವಿಷೇಶತೆಗಳು ತಿಳಿದು ಕೊಳ್ಳುವುದು ಮುಖ್ಯ. ಅವರ ಸಂದೇಶಕ್ಕೆ ಗೌರವ ಹಾಗೂ ಪ್ರಾಮುಖ್ಯತೆಯು ಅವರಲ್ಲಿದ್ದ ಪ್ರಾಮುಖ್ಯತೆಯಿಂದ ನಮಗೆ ತಿಳಿದು ಬರುತ್ತದೆ. ಇವರ ಮುಂಚಿತವಾಗಿ ಬಂದಿರುವ ಸಂದೇಶವಾಹಕರನ್ನು ಹೋಲಿಸಿದರೆ ಮುಹಮ್ಮದ್(ಸ) ರವರಲ್ಲಿ ಕೆಲವು ವಿಷೇಶತೆಗಳಿರುವುದನ್ನು ನೋಡಬಹುದು ಅವುಗಳೆಂದರೆ..

ಮುಹಮ್ಮದ್(ಸ)ಕೊನೇಯ ಹಾಗೂ ಇಡೀ ಪ್ರಪಂಚದ ಸಂದೇಶವಾಹಕರಾಗಿದ್ದಾರೆ;

  ಇವರ ಮುಂಚಿತವಾಗಿಬಂದ ಸಂದೇಶವಾಹಕರು ಅಥವ ಪೈಗಂಬರರು, ಪ್ರತ್ಯೇಕ ಕಾಲಘಟ್ಟದಲ್ಲಿ ಕೇವಲ ಸೀಮಿತ ಪ್ರದೇಶ, ರಾಜ್ಯ, ದೇಶ ಹಾಗೂ ಸೀಮಿತ ಜನಾಂಗಕ್ಕಾಗಿ ಬಂದಿದ್ದರು. ಆದರೆ ಮುಹಮ್ಮದ್(ಸ)ರು ಬಂದಾಗಿನಿಂದ ಇಂದಿನವರೆಗೂ ಹಾಗೂ ಪ್ರಳಯ ದಿನದವರೆಗೂ ಬರುವ ಜನಾಂಗಕ್ಕಾಗಿ ಬಂದಿರುವರು, ಈಗ ನಾವು ಭೂಮಿಯಲ್ಲಿ ಕೊನೇಯ ಕಾಲದಲ್ಲಿ ಬದುಕುತ್ತಿದ್ದೇವೆ.
  ಅಂದಿನ ಕಾಲ ಹಾಗೂ ಇಂದಿನ ಕಾಲದ ಸಂಪರ್ಕ ವ್ಯವಸ್ಥೆ ನೋಡಿದರೆ ಆ ಕಾಲದಲ್ಲಿ ಒಂದು ದೇಶಕ್ಕೂ ಮತ್ತು ಇನ್ನೊಂದು ದೇಶಕ್ಕೂ ಸಂಪರ್ಕವಿರದ ಕಾರಣ ಒಂದೊಂದು ದೇಶ ಪ್ರಾಂತ್ಯಗಳಿಗೆ ಒಂದೊಂದು ಸಂದೇಶವಾಹಕರನ್ನು ಕಳುಹಿಸಲಾಗುತ್ತಿತ್ತು. ಆದರೆ ಇಂದು ಸಂಪರ್ಕ ಮಾಧ್ಯಮಗಳು ಎಷ್ಟು ಪ್ರಗತಿ ಸಾಧಿಸಿವೆ ಎಂದರೆ ಕೂತಲ್ಲಿಂದ ಕೂತಲ್ಲಿಗೆ ಸಂಪರ್ಕ ಸಾಧಿಸಬಹುದು. ಇಂತಹಾ ಪರಿಸ್ಥಿತಿಯಲ್ಲಿ ನಮ್ಮ ಕೊನೇಯ ಸಂದೇಶವಾಹಕರು ಇಡೀ ಲೋಕದವರಿಗೆ ಪೈಗಂಬರರಾಗಿ ಕಳುಹಿಸಲ್ಪಟ್ಟರು. ಇವರ ನಂತರ ಇತರ ಯಾವ ಸಂದೇಶವಾಹಕನೂ ಪೈಗಂಬರನೂ ಬರುವುದಿಲ್ಲ ಪ್ರಪಂಚದ ಅಂತ್ಯದವರೆಗೂ ಇವರೆ ಕೊನೇಯ ಸಂದೇಶವಾಹಕರು.

ಅತ್ಯಂತ ಸುರಕ್ಷಿತವಾಗಿರಿಸಲ್ಪಟ್ಟ ದೇವ ಗ್ರಂಥ;

  ಮುಹಮ್ಮದ್(ಸ)ರವರಿಗಿಂತ ಮುಂಚಿನ ಸಂದೇಶವಾಹಕರಿಗೆ ಹೋಲಿಸಿದರೆ ಅವರಿಗೆ ಅವತರಿತವಾದಂತಹಾ ಗ್ರಂಥಗಳು ಬದಲಾವಣೆಯಾದಂತೆ, ಮಿಶ್ರಣವಾದಂತೆ ಈ ಪವಿತ್ರ ಖುರ್‍ಆನ್ ಗ್ರಂಥದಲ್ಲಿ ಒಂದಕ್ಷರವೂ ಬದಲಾಗಿಲ್ಲ ಬದಲಾಗುವುದೂ ಇಲ್ಲ, ಅಲ್ಲದೆ ಮಿಶ್ರಣವೂ ಆಗದಂತೆ, ನಾಶವೂ ಆಗದಂತೆ ರಕ್ಷಿಸಲ್ಪಟ್ಟಿದೆ. ಖುರ್‍ಆನಿನ ಮೂಲ ವಚನಗಳು ಇಳಿದಿರುವ ಕಾಲದಿಂದಲೂ ಇಂದಿನವರೆಗೆ, ಅಂದರೆ 1436 ವರ್ಷಗಳಾದರೂ ಒಂದಕ್ಷರವೂ ಬದಲಾಗದೆ ಸ್ವಲ್ಪವೂ ಕಲಬೆರಕೆಯಾಗದೆ ಸುಕ್ಷಿತವಾಗಿದೆ ಎಂಬುದನ್ನು ನೀವು ನೋಡಬಹುಸು. ಇದು ಹೇಗೆ ಸಾಧ್ಯವಾಗಿದೆ?
  ಮುಹಮ್ಮದ್(ಸ)ರವರು ತಮ್ಮ 40ನೇ ವಯಸ್ಸಿನಲ್ಲಿ ಪೈಗಂಬರರಾದರು 63ನೇ ವಯಸ್ಸಿನಲ್ಲಿ ಮರಣಹೊಂದಿದರು, ಈ 23 ವರ್ಷಗಳ ಮಧ್ಯದಲ್ಲಿ ಅಲ್ಲಾಹನು ಅವತರಿಸಿದ ದೈವವಾಣಿಯೇ ಪವಿತ್ರ ಖುರ್‍ಆನ್ ಆಗಿದೆ. ದೇವದೂತ ಜಿಬ್ರಯೀಲ್(ಅ,ಸ) ಈ ಸೂಕ್ತಿಗಳನ್ನು ತಂದು ಓದಿ ತಿಳಿಸಿದರು ಮುಹಮ್ಮದ್(ಸ)ರವರಿಗೆ ಓದುಬರಹ ಬರುತ್ತಿರಲಿಲ್ಲ, ಜಿಬ್ರಯೀಲ್(ಅ,ಸ) ಹೇಳುವುದನ್ನು ಕೇಳಿ ಮನನಮಾಡಿ ಜ್ಞಾಪಕವಿಟ್ಟುಕೊಂಡು ಹೇಳುತ್ತಿದ್ದರು. ಇದು ಅಲ್ಲಾಹನ ಒಂದು ಎರ್ಪಾಡು ತಾವು ಕೇಳಿ ನೆನಪಿಟ್ಟುಕೊಂಡ ಸೂಕ್ತಿಗಳನ್ನು ಸಹಾಬಿಗಳ(ಸಹಚರರು) ಮುಂದೆ ಓದಿ ತಿಳಿಸುತ್ತಿದ್ದರು. ಆಗ ಸಹಾಬಿಗಳು ಅದನ್ನು ಚರ್ಮ ಖರ್ಚೂರದೆಲೆಗಳು ಹಾಗೂ ಮೂಳೆಗಳ ಮೇಳೆ ಬರೆದಿಟ್ಟುಕೊಂಡರು. ಆ ವಚನಗಳ ಆಕರ್ಷಣೆಯಲ್ಲಿ ತಮ್ಮ ಮನಸ್ಸನ್ನು ಮೊಳಗಿಸುತ್ತಿದ್ದರು, ಆ ವಚನಗಳನ್ನು ನಮಾಜಿóóನಲ್ಲಿ ಹಾಗೂ ಇತರೆ ಸಮಯದಲ್ಲಿ ಓದುತ್ತಿದ್ದರು ಅಂದಿನಿಂದ ಇಂದಿನವರೆಗೆ ಈ ವಚನಗಳು ಪ್ರಖ್ಯಾತಿಯಾಗಿವೆ.
ಪವಿತ್ರ ಖುರ್‍ಆನ್ ಅಂದಿನಿಂದ ಮುಸ್ಲಿಮರಲ್ಲಿ ಪ್ರಖ್ಯಾತವಾಗಿದೆ, ಪುಣ್ಯಕ್ಕಾಗಿ ಹಾಗೂ ನಿರಂತರ ಓದುವ ಕಾರಣದಿಂದಲೂ ತುಂಬಾ ಜನರು ಖುರ್‍ಆನ್ ವಚನಗಳನ್ನು ಮನನ ಮಾಡಿದರು. ಖುರ್‍ಆನ್ ಎಂಬ ಪದಕ್ಕೆ ಅರ್ಥವೂ ಸಹ ಓದಲ್ಪಡುವುದು ಎಂದಾಗಿದೆ. ಹೌದು ಅಂದಿನಿಂದ ಇಂದಿನವರೆಗೂ ಖುರ್‍ಆನ್‍ನ್ನು ಹೆಚ್ಚು ಹೆಚ್ಚಾಗಿ ಮುಸ್ಲಿಮರು ಓದುತ್ತಿದ್ದಾರೆ. ಇದು ಪ್ರಪಂಚದೆಲ್ಲೆಡೆ ವ್ಯಾಪಿಸಿರುವ ಮುಸ್ಲಿಮರ ಅಭ್ಯಾಸವಾಗಿದೆ. ಅತಿ ಹೆಚ್ಚು ಮೂಲಭಾಷೆ(ಅರಬೀ)ಯಲ್ಲಿ ಓದಲ್ಪಡುವ ಗ್ರಂಥವೆಂದರೆ ಅದುವೆ ಪವಿತ್ರ ಖುರ್‍ಆನ್ ಮಾತ್ರವೇ ಆಗಿದೆ. ಮುಖ್ಯವಾಗಿ ರವ್ಮಜಾóóನ್ ತಿಂಗಳಲ್ಲಿ ಹಗಲಿನಲ್ಲಿ ಉಪವಾಸ ಹಾಗೂ ರಾತ್ರಯಲ್ಲಿ ನಿಂತು ಹೆಚ್ಚಿನ ನಮಾಜ್óó(ತರಾವಿಹ್)ಮಾಡುವುದು ಎಲ್ಲಾ ಮುಸ್ಲಿಮರಿಗೂ ಕಡ್ಡಾಯ ಎಂಬುದು ನಿಮಗೂ ಗೊತ್ತು. ಖುರ್‍ಆನ್ ಪಠಣವೆಂಬುದು ಸರ್ವೆಸಾಮಾನ್ಯ ಹಾಗೂ ಕಡ್ಡಾಯವಾಗಿ ಆಚರಿಸಲ್ಪಡುವ ಒಂದು ಆಚರಣೆಯಾಗಿದೆ. ರವ್ಮಜಾóóನ್ ತಿಂಗಳ 30 ದಿನಗಳಲ್ಲಿ ಸಂಪೂರ್ಣ ಖುರ್‍ಆನ್‍ನ್ನು ಇಮಾಮ್ ಓದಿ ಮುಗಿಸುವುದು ರೂಢಿ. ಹೀಗೆ ಓದಲು ಮನನ ಮಾಡಿರುವ ಸಾವಿರಾರು ಅಷ್ಟೆಅಲ್ಲ ಕೊಟ್ಯಾಂತರ ಹಾಫಿಜ್‍ಗಳು (ಕಂಠ ಪಾಠಮಾಡಿರುವವರು) ಪ್ರಪಂಚದಾದ್ಯಂತ ಉಪಸ್ಥಿತರಿದ್ದಾರೆ. ಮುಂದಿನ ದಿನಮಾನಗಳಲ್ಲಿ ಇವರ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಈರೀತಿಯಾಗಿ ಖುರ್‍ಆನ್ ಮಧುರತೆ ಮನದಿಂದ ಮನಗಳಿಗೆ ಸರ್ವವ್ಯಾಪಿ ಆಗುತ್ತಲಿದ್ದು ಮನುಷ್ಯರ ಮನಗಳಲ್ಲಿ ಭದ್ರವಾಗಿ ನೆಲೆಗೊಂಡಿದೆ.
  ದೇವನು ಹೇಳುವನು “ಈ ಉಪದೇಶವನ್ನು ನಿಶ್ಚವಾಗಿಯೂ ನಾವು ಅವತೀರ್ಣಗೋಳಿಸಿರುತ್ತೇವೆ ಮತ್ತು ಸ್ವತಃ ನಾವೇ ಅದರ ರಕ್ಷಕರೂ ಆಗಿರುತ್ತೇವೆ” ಪವಿತ್ರ ಖುರ್‍ಆನ್; 15:9.
  ಪವಿತ್ರ ಖುರ್‍ಆನಿನ ಎಲ್ಲಾ ಗ್ರಂಥ ಪ್ರತಿಗಳನ್ನು ಒಂದುಗೂಡಿಸಿ ಅಗ್ನಿಗೆ ಹಾಕಿದರೂ ಇಂದು ಮತ್ತೆ ಬರೆಯಲ್ಪಡುವ ಗ್ರಂಥ ಖುರ್‍ಆನ್ ಆಗಿದೆ. ಎಕೆಂದರೆ ಪ್ರಪಂಚದಾದ್ಯಂತ ಮುಸ್ಲಿಮರಲ್ಲಿ ಒಂದೇ ರೀತಿಯಲ್ಲಿ ಮನುಷ್ಯರ ಮನಸ್ಸಿನಲ್ಲಿ ದಾಖಲಾಗಿರುವುದರಿಂದ ಈ ಮೇಲಿನ ವಚನ ಸತ್ಯ ಎಂಬುದು ತಿಳಿದು ಬರುತ್ತದೆ.

ಹಿಂದಿನ ಎಲ್ಲಾ ಗ್ರಂಥಗಳು ಏಕೆ ಸಂರಕ್ಷಿಸಲ್ಪಟ್ಟಿಲ್ಲ?

  ನಿಮ್ಮ ಮನಸ್ಸಿನಲ್ಲಿ ಒಂದು ಸಂದೇಹವಿರಬಹುದು. ಹಿಂದಿನ ಎಲ್ಲಾ ಗ್ರಂಥಗಳೆಲ್ಲವೂ ದೇವನೇ ಕೊಟ್ಟಿದ್ದರೂ ಏಕೆ ಸಂರಕ್ಷಿಸಲ್ಪಟ್ಟಿಲ್ಲ? ಏಕೆಂದರೆ ಹಿಂದಿನ ಗ್ರಂಥಗಳು ಆಯಾ ಜನಾಂಗಕ್ಕೆ ಮಾತ್ರ ಸೀಮಿತವಾಗಿದ್ದಿತು, ಹಾಗೂ ಹಳೆಯ ಸಂವಿಧಾನದ ಮುಂದೆ ಹೊಸದೊಂದು ಉತ್ತಮ ಸಂವಿಧಾನ ಬಂದರೆ ಹೇಗೆ ಬದಲಾಗಿ ಅದು ಜಾರಿಗೆ ಬರುವುದೂ ಹಾಗೆಯೇ ಹಿಂದಿನದ್ದೆಲ್ಲವನ್ನು ನಿಷೇಧಿಸಿ ಅದ್ಭುತ ಗ್ರಂಥವೊಂದನ್ನು ಅಲ್ಲಾಹನು ದಯಪಾಲಿಸಿದನು.

ಖುರ್‍ಆನ್ ಏಕೆ ಸಂರಕ್ಷಣೆಯಾಗಿದೆ?

  ಇದು ದೇವನ ವೇದ ಗ್ರಂಥ, ಅಂತಿಮ ದಿನದವರೆಗೆ ಬರುವ ಜನರಿಗೆ ಇದು ಮಾರ್ಗದರ್ಶನವಾಗಿದೆ ಇದನ್ನು ಆಧರಿಸಿಯೇ ನಮ್ಮ ಪಾಪ ಪುಣ್ಯಗಳು ಅಂತಿಮ ದಿನದಲ್ಲಿ ನಿರ್ಧರಿಸಲ್ಪಡುತ್ತವೆ, ಈ ಕಾರಣದಿಂದಲೆ ಇದು ಸಂರಕ್ಷಿಸಲ್ಪಟ್ಟಿದೆ.

ಪ್ರತಿಮೆಯೇ ಇಲ್ಲದಿರುವ ಮಹಾಪುರುಷ;

  ಸಂದೇಶವಾಹಕ ಮುಹಮ್ಮದ್(ಸ)ರವರಿಗಿಂತ ಮುಂಚಿನ ಸಂದೇಶವಾಹಕರನ್ನು ದೇವರುಗಳಾಗಿಸಿ ಜನರು ಆರಾಧಿಸಲ್ಪಡುವ ರೀತಿಯಲ್ಲಿ ಈ ಮುಹಮ್ಮದ್(ಸ)ಪೈಗಂಬರರನ್ನು ಯಾರೂ ಆರಾಧಿಸುತ್ತಿಲ್ಲ. ಅಂತಿಮ ಸಂದೇಶವಾಹಕರ ಹಿಂದಿನ ಸಂದೇಶವಾಹಕರನ್ನು ಜನರು ಅವರ ಮರಣದ ನಂತರ ನೆನಪಿನ ಸ್ಮಾರಕಗಳಾಗಿ ಅವರ ಮೂರ್ತಿ ಮತ್ತು ಚಿತ್ರಗಳನ್ನಾಗಿ ಪೂಜಿಸಲು ಆರಂಭಿಸಿದರು. ಪೂಜಿಸುತ್ತಿರುವುದನ್ನು ನಾವು ಇಂದಿಗೂ ಕಾಣಬಹುದು. ಈ ಆಚರಣೆಗೆ ಯೇಸುರವರೂ ಕೂಡ ಅನ್ವಯರಲ್ಲ, ಅವರಿಗೂ ಕೂಡಾ ಇಂದು ಚಿತ್ರ ಅಥವ ಪ್ರತಿಮೆಯನ್ನಾಗಿಸಿ ಇಟ್ಟು ಆರಾಧಿಸುತ್ತಿರುವುದನ್ನು ನಾವು ಕಾಣಬಹುದು. ಆದರೆ ಮುಹಮ್ಮದ್(ಸ) ಪೈಗಂಬರರು ಗತಿಸಿ 1436 ವರ್ಷಗಳಾದರೂ ಅವರ ಪ್ರತಿಮೆ ಎಲ್ಲಾದರೂ ನೊಡಿದ್ದೀರಾ? ಇಂದು ಅವರನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸಿ ಅವರನ್ನು ಮಾದರಿಯನ್ನಾಗಿಸಿ ಅವರ ಅನುಯಾಯಿಗಳಾಗಿ ಹಿಂಬಾಲಿಸುವವರು, ಭೂಮಿಯಲ್ಲಿ ಎಲ್ಲಾಕಡೆ ಇದ್ದರೂ ಕೂಡಾ ಎಲ್ಲೂ ಕೂಡಾ ಅವರ ರೂಪ ಚಿತ್ರ ಕಾಣಸಿಗುವುದಿಲ್ಲ ಎಂದರೆ ಏನರ್ಥ,,,,,? ಅವರು ಬೋಧಿಸಿರುವ ಏಕದೇವ ವಿಶ್ವಾಸವನ್ನು ಇಷ್ಟೊಂದು ಜನರು ಅನುಸರಿಸುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಅವರ ತತ್ವದ ಘರ್ಜನೆ ಇಂದೂ ಕೂಡ ಉಚ್ಚವಾಗಿ ಪ್ರತಿಧ್ವನಿಸುತ್ತಿದೆ ಅಲ್ಲವೆ,?
 ಮುಹಮ್ಮದ್(ಸ) ತಮ್ಮ ಮರಣ ಸಮಯದಲ್ಲಿ ಹಾಸಿಗೆಯಲ್ಲಿದ್ದಾಗ ಜನರಿಗೆ ಹೇಳಿದರು ಓ ಜನರೇ ನನ್ನ ಮರಣದ ನಂತರ ನನ್ನನ್ನು ಮತ್ತು ನನ್ನ ಘೋರಿಯನ್ನು ಸಮಾರಂಭ ನಡೆಯುವ ಸ್ಥಳವನ್ನಾಗಿ ಮಾಡಿಕೊಳ್ಳದಿರಿ. ಹಿಂದಿನ ಜನಾಂಗದ ಜನರೆಲ್ಲರೂ ಈ ರೀತಿ ಅಕ್ರಮವೆಸಗಿ ತಮ್ಮ ಸಂದೇಶವಾಹಕರನ್ನು ದೇವರುಗಳಾಗಿಸಿ ಆರಾಧಿಸಿದಂತೆ ನೀವು ನನ್ನನ್ನು ದೇವರನ್ನಾಗಿ ಮಾಡಿ ಆರಾಧಿಸದಿರಿ ಎಂದು ಆಜ್ಞೆ ಮಾಡಿದರು. ಇಂದಿಗೂ ಮುಹಮ್ಮದ್(ಸ)ರವರ ಸಮಾಧಿ ಸೌದಿ ಅರೇಬಿಯಾದ ಮದಿನಾ ನಗರದಲ್ಲಿ ಇರುವುದು ನಿಮಗೆಲ್ಲರಿಗೂ ಗೊತ್ತು. ಯಾರೂ ಕೂಡಾ ಅಲ್ಲಿ ಹೋಗಿ ಮುಹಮ್ಮದ್(ಸ)ರೇ ನನಗೆ ಅದು ಕೊಡಿ ಇದು ಕೊಡಿ ಎಂದು ಬೇಡುವುದು ಕಾಣಸಿಗುವುದಿಲ್ಲ. ಅವರ ಜೀವಿತ ಸಮಯದಲ್ಲಿ ಕಾಲು ಬೀಳುವವರನ್ನು ತಡೆದು ನಿಷೇಧಿಸಿರುವುದು ಮಾತ್ರವಲ್ಲ ಅವರು ಆಗಮಿಸಿದಾಗ ಗೌರವ ಪೂರ್ವಕವಾಗಿ ಎದ್ದು ನಿಲ್ಲುವುದನ್ನು ಕೂಡಾ ನಿಷೇಧಿಸಿದರು ಹಾಗೂ ಹೇಳಿದರು ಹಾಗೆ ಮಾಡಿದರೆ, ಅಥವ ತಮಗಾಗಿ ಎದ್ದು ನಿಲ್ಲುವ್ಯದರಿಂದ ಸಂತೋಷಪಟ್ಟರೆ  ಅವರ ನೆಲೆ ರಕವೆಂಬುದು ತಿಳಿದುಕೊಳ್ಳಲಿ ಹೀಗೆ ಸ್ವಗೌರವಕ್ಕೆ ನೀತಿ ಪಾಠ ಹೇಳಿ ಕೊಟ್ಟಿದ್ದಾರೆ.

ಅದ್ಭುತ ಮಾದರಿ;

  ಸಂದೇಶವಾಹಕ ಮುಹಮ್ಮದ್(ಸ)ರವರ ಜೀವನ ಚರಿತ್ರೆಯ ಅಂಶಗಳು ಇಂದಿಗೂ ಎಂದಿಗೂ ನಮಗೆ ಜೀವಂತ ಮಾರ್ಗದರ್ಶನಗಳಾಗಿ ಸಿಗುವಂತೆ ಹಿಂದಿನ ಸಂದೇಶವಾಹಕರ ಮಾರ್ಗದರ್ಶನಗಳಾವುವೂ ಸಂಪೂರ್ಣ ರೀತಿಯಲ್ಲಿ ಸಿಗುವುದಿಲ್ಲ, ಸಿಕ್ಕಿಯೂ ಇಲ್ಲ. ಪ್ರತಿಯೊಬ್ಬ ಸಂದೇಶವಾಹಕರು  ಯಾವ ಜನಾಂಗಕ್ಕೆ ಕಳುಹಿಸಲ್ಪಟ್ಟಿದ್ದರೊ ಅವರು ಆ ಜನಾಂಗದ ಜನರಿಗೆ ಮಾತ್ರ ಜೀವಂತ ಮಾದರಿಯಾಗಿದ್ದರು. ಹಿಂದಿನ ಸಂದೇಶವಾಹಕರ ಜೀವನ ಚರಿತ್ರೆಯನ್ನು ಯಾರೂ ಸಂಪೂರ್ಣವಾಗಿ ಸಂಗ್ರಹಿಸಿಡಲಿಲ್ಲ ಎಂಬುದನ್ನು ನಾವು ನೋಡಬಹುದು. ಕೊನೇಯ ಸಂದೇಶವಾಹಕ ಮುಹಮ್ಮದ್(ಸ) ಇಡೀ ಮಾನವ ಜನಾಂಗಕ್ಕಾಗಿ ಬಂದಿದ್ದಾರೆ. ಹಾಗೂ ಕೊನೇಯವರೆಗೂ ಒಂದು ಮಾದರಿಯಾಗಿ ಕಳುಹಿಸಲ್ಪಟ್ಟಿರುವವರಾಗಿದ್ದಾರೆ. ಅವರು ಪೈಗಂಬರರಾಗಿ ಜೀವಿಸಿದ 23 ವರ್ಷಗಳ ಜೀವಿತ ಜೀವನದ ಪ್ರತಿಯೊಂದು ಘಟ್ಟಗಳ ವಿಷಯಗಳನ್ನು ಅವರ ಸಹಚರರು ಮತ್ತು ಪತ್ನಿಯರು ವರದಿ ಮಾಡಿ, ಅದು ಪರೀಕ್ಷಿಸಲ್ಪಟ್ಟು ದಾಖಲಾಗಿದೆ. ಎಂಬುದನ್ನು ನಾವು ನೋಡಬಹುದು ಈ ದಾಖಲೆಗಳಿಗೆ ಹದೀಸ್‍ಗಳೆಂದು ಹೇಳಲಾಗುತ್ತದೆ. ಈ ಭೂಲೋಕದಲ್ಲಿ ಜೀವಿಸಿದ ಯಾವುದೇ ನಾಯಕರ, ಚಾರಿತ್ರಿಕ ನಾಯಕರ, ಚಕ್ರವರ್ತಿಗಳ ಹಾಗೂ ಇತರ ಯಾರದೇ ಚರಿತ್ರೆಗಳು ಆಧಾರ ಸಹಿತವಾಗಿ ದಾಖಲಾಗಿಲ್ಲ. ಮನುಷ್ಯ ಜೀವನಕ್ಕೆ ಸಭಂದಿಸಿದ ಎಲ್ಲಾ ವಿಭಾಗಗಳಿಗೆ ಅವರ ಮಾದರಿ ಅತಿ ಸುಂದರವಾದುದು ಎಂಬುದನ್ನು ಕಾಣಬಹುದಾಗಿದೆ. ಉದಾಹರಣೆಗೆ ಅವರು ಒಬ್ಬ ದಾಸನಾಗಿ, ಕೆಲಸಗಾರನಾಗಿ, ಯಜಮಾನನಾಗಿ, ವ್ಯಾಪಾರಿಯಾಗಿ, ಸಾಮಾನ್ಯ ಪ್ರಜೆಯಾಗಿ, ಸೇನಾಧಿಪತಿಯಾಗಿ, ನಾಯಕನಾಗಿ, ಮಾರ್ಗದರ್ಶಕನಾಗಿ, ಆಧ್ಯಾತ್ಮಿಕ ಗುರುವಾಗಿ, ಪತಿಯಾಗಿ, ತಂದೆಯಾಗಿ, ಬದುಕಿರುವಾಗ ಎನೆಲ್ಲಾ ಮಾಡಿರುವರೊ ಅದೆಲ್ಲವನ್ನು ನೋಡಿ ಅವರ ಸ್ನೆಹಿತರು, ಸಂಗಡಿಗರು, ಮಡದಿಗಳು, ಹೇಳಿರುವ ಮಾತುಗಳೇ ಹದೀಸ್‍ಗಳು…, ಅವರ ಮನೆಯ ಒಳಗಿನ ಹಾಗೂ ಮನೆಯ ಹೊರಗಿನ ಎಲ್ಲಾ ಜೀವನಾಂಶದ ವಿಷಯಗಳು ದಾಖಲಾಗಿವೆ. ಅವರು ಹೇಳಿರು ಮಾತುಗಳು ಅವರು ಮಾಡಿರುವ ಕರ್ಮಗಳನ್ನು ಮಿಕ್ಕವರು ಮಾಡಿ ಅಂಗೀಕರಿಸಿರುವುದರಿಂದ ಆ ಕೆಲಸ ಕಾರ್ಯಗಲೆಲ್ಲವೂ ಇಸ್ಲಾಮಿನ ಶರಿಯತ್‍ಗಳಿಗೆ ಮೂಲಾಧಾರವಾಗಿದೆ.
  ಮುಹಮ್ಮದ್(ಸ)ರವರ ಇನ್ನೊಂದು ಅದ್ಭುತವೆಂದರೆ ಅವರ ಜೀವನ ಚರಿತ್ರೆಯು ಕೇವಲ ಇತಿಹಾಸದ ಪುಸ್ತಕಗಳಲ್ಲಿ ಮಾತ್ರವಲ್ಲ, ಜನರ ಚಿಂತನೆಗಳಲ್ಲಿ ಮಾತ್ರವಲ್ಲ, ಅವರನ್ನು ಹಿಂಬಾಲಿಸಿ ಜೀವಿಸಿದ ಹಾಗೂ ಜೀವಿಸುತ್ತಿರುವ ಮುಸ್ಲಿಮ್ ಜನಾಂಗದಲ್ಲಿ ಇಂದಿಗೂ ನೋಡಬಹುದು. ಅಂದು ಅವರು ಹೇಳಿದ ಮಾರ್ಗದರ್ಶನಗಳನ್ನು ಅವರ ಪ್ರತಿಯೊಂದು ಜೀವನ ಶೈಲಿಯನ್ನು ತಮ್ಮ ಜೀವನದಲ್ಲಿ ಪಾಲಿಸುವುದಲ್ಲೆ ಪ್ರಯತ್ನಿಸಿರುವ ಜನರು ಕೊಟ್ಯಾಂತರವಿದ್ದಾರೆ. ಉದಾಹರಣೆಗೆ; ನಮಾಜ್‍ಗಾಗಿ ಹೇಗೆ ನಿಂತರು, ಹೇಗೆ ಊಟ ಮಾಡಿದರು, ಊಟಕ್ಕಾಗಿ ಹೇಗೆ ಕುಳಿತುಕೊಳ್ಳುತ್ತಿದ್ದರು,? ಎಂಬುದನ್ನು ತಿಳಿದುಕೊಂಡು ಅದೇ ರೀತಿ ನಿರಂತರವಾಗಿ ತಲೆತಲಾಂತರಗಳಿಂದ ಅನುಸರಿಸುತ್ತಿರುವವರು ಮುಸ್ಲಿಮರು. ಅಚಿದು ಅವರು ಗಡ್ಡ ಬಿಟ್ಟಿದ್ದರು ಎಂಬ ಒಂದೇ ಒಂದು ಕಾರಣಕ್ಕಾಗಿ ಇಂದಿಗೂ ಕೊಟ್ಯಾಂತರ ಜನರ ಮುಖದಲ್ಲಿ ಕಾಣುವುದನ್ನು ನೀವೇ ನೋಡಿಕೊಳ್ಳಿ. “ನಿಶ್ಚವಾಗಿಯೂ ಅಲ್ಲಾಹನ ಸಂದೇಶವಾಹಕರಲ್ಲಿ ನಿಮಗಾಗಿ ಒಂದು ಅತ್ಯುತ್ತಮ ಮಾದರಿ ಇದೆ(ಇದು)ಅಲ್ಲಾಹ್ ಹಾಗೂ ಅಂತಿಮ ದಿನವನ್ನು ನಿರೀಕ್ಷಿಸುವವನಿಗೆ ಮತ್ತು ಅಲ್ಲಾಹ್‍ನನ್ನು ಬಹಳವಾಗಿ ಸ್ಮರಿಸುವವನಿಗೆ” ಪವಿತ್ರ ಖುರ್‍ಆನ್; 33:21. ಹಾಗಾಗಿ ಈ ಕಾಲದಲ್ಲಿ ಬದುಕುತ್ತಿರುವ ನಮಗಾಗಿ ದೇವನಿಂದ ಕಳುಹಿಸಲ್ಪಟ್ಟಿರುವ ಅತ್ತ್ಯುತ್ತಮ ಮಾದರೀ ನಾಯಕ ಎಂದರೆ ಮುಹಮ್ಮದ್(ಸ) ಆಗಿದ್ದಾರೆ. ಅವರ ಮೂಲಕ ದೇವನು ಕಳುಹಿಸಲ್ಪಟ್ಟಿರು ಸಂದೇಶಗಳೇ ಹದೀಸ್‍ಗಳೆಂದು ತಿಳಿಸಲಾಗಿದೆ.

ಇಸ್ಲಾಮಿಗೆ ಯಾಕಿಷ್ಟು ವಿರೊಧಿಸುತ್ತಾರೆ…?

   ಆತ್ಮೀಯ ಸಹೋದರ ಸಹೋದರಿಯರೆ,

*              “ನೀವು ಭೂಮಿಯ ಮೇಲಿರುವವರನ್ನು ಪ್ರೀತಿಸಿದರೆ ಆಕಾಶದಲ್ಲಿರುವವನು ನಿಮ್ಮನ್ನು ಪ್ರೀತಿಸುತ್ತಾನೆ”
*              “ಇತರ ಮನುಷ್ಯರ ಮೇಲೆ ಕರುಣೆ ತೋರಿಸದಿದ್ದರೆ ದೇವನು ಅವರ ಮೇಲೆ ಕರುಣೆ ತೋರುವುದಿಲ್ಲ” ಸಂದೇಶವಾಹಕ ಮುಹಮ್ಮದ ಸ.
                ಇಸ್ಲಾಮ್ ಧರ್ಮವು ಸಂದೇಶವಾಹಕರಾದ ಮುಹಮ್ಮದ ಸ. ರವರ ಕಾಲದಿಂದ ಇಂದಿನವರೆಗೂ ತುಂಬಾ ವೇಗವಾಗಿ ಹರಡುತ್ತಿದೆ.  ಇಂದು ಪ್ರಪಂಚದಲ್ಲಿರುವ ಒಟ್ಟು ಜನ ಸಂಖ್ಯೆಯಲ್ಲಿ 1/4  ಭಾಗಕ್ಕಿಂತ ಹೆಚ್ಚು ಜನರು ಇಸ್ಲಾಮ್ ಅನ್ನು ಅನುಸರಿಸುವವರಿದ್ದಾರೆ ಎಂಬುದನ್ನು ತಿಳಿಯುತ್ತದೆ.  ಇಸ್ಲಾಮ್ ಧರ್ಮವು ಪ್ರಪಂಚದಲ್ಲೇ 2ನೇ ಸ್ಥಾನದಲ್ಲಿದ್ದರೂ ಆಚರಣೆಯ ಅನುಸರಣೆಯಲ್ಲಿ ಮೊದಲನೇ ಸ್ಥಾನವನ್ನು ಪಡೆದಿದೆ.  (ಅಮೆರಿಕನ್ ಸೊಸಿಯಲೊಜಿಕಲ್ ರೆವ್ಯೂ ಸರ್ವೆ)
                ಇಸ್ಲಾಮ್ ವಿರೋಧಿಗಳ ಅಪಪ್ರಚಾರ, ವಿರೋಧವಿದ್ದರೂ ಇದು ಅತ್ಯಂತ ವೇಗವಾಗಿ ಬೆಳೆಯಲು ಕಾರಣ ಇಸ್ಲಾಂ ತಿಳಿಸುವ ಸಮಾಧಾನ, ಸ್ನೇಹ, ಪ್ರೀತಿ, ಕಾರುಣ್ಯ ಮತ್ತು ಮಾನವ ಸಹೋದರತ್ವ. ಇಸ್ಲಾಮ್ ಎಂಬ ಪದಕ್ಕೆ ಶಾಂತಿ ಎಂಬ ಹೆಸರಿರುವುದು.
*              ಮುಸ್ಲಿಮರು ಯಾವುದೇ ಕೆಲಸವನ್ನು ಆರಂಭಿಸುವ ಮೊದಲು “ಬಿಸ್ಮಿಲ್ಲಾ ಹಿರ್ರಹಮಾ ನಿರ್ರಹೀಮ್” ಎಂದು ಆರಂಭಿಸುತ್ತಾರೆ ಇದರ ಅರ್ಥ, ‘ಪರಮ ದಯಾಮಯನು ಕರುಣಾನಿಧಿಯೂ ಆದ ದೇವ ನಾಮದಿಂದ ಆರಂಭಿಸುತ್ತೇನೆ ಎಂದಾಗಿದೆ.
* ಆದೇ ರೀತಿ ಒಬ್ಬ ಮುಸ್ಲಿಂ ಇನ್ನೊಬ್ಬರನ್ನು ಭೇಟಿ ಮಾಡುವಾಗ ಮೊಟ್ಟ ಮೊದಲು “ಅಸ್ಸಲಾಮುವಾಲೈಕುಂ” ಎಂದು ಶುಭ ಕೋರುವುದು ಸಾಮಾನ್ಯವಾಗಿದ್ದು ಅದರ ಅರ್ಥ ‘ನಿಮ್ಮ ಮೇಲೆ ಶಾಂತಿಯಿರಲಿ’ ಎಂಬುದಾಗಿದೆ.
* “ಓ ಮನುಷ್ಯರೆ ನಿಮ್ಮೆಲ್ಲರನ್ನು ಒಂದು ಹೆಣ್ಣು ಮತ್ತು ಒಂದು ಗಂಡಿನಿಂದ ಸೃಷ್ಟಿಸಲಾಗಿದೆ” (ಖುರ್‍ಆನ್49:30) ಎಂದೂ ಹೇಳುತ್ತಿರುವುದು ಕುಲ, ಭಾಷೆ, ಧರ್ಮಗಳ ಭೇದ ಭಾವದಿಂದಲ್ಲ.  ಪ್ರಪಂಚದಾದ್ಯಂತ ಇರುವ ಎಲ್ಲಾ ಮಾನವರನ್ನು ಕುರಿತು ಸಹೋದರತೆಯ ಸಂದೇಶವನ್ನು ಸಾರುತ್ತಿದೆ.
* ಅಂತಿಮ ಸಂದೇಶವಾಹಕರ ಬಗ್ಗೆ ಪವಿತ್ರ ಖುರ್‍ಆನಿನಲ್ಲಿ “ಓ ಸಂದೇಶವಾಹಕರೇ ನಿಮ್ಮನ್ನು ನಾವು ಈ ಲೋಕದ ಜನರಿಗೆ ನನ್ನ ವತಿಯಿಂದ ಕರುಣೆಯಾಗಿಯೇ ನಿಮ್ಮನ್ನು ನಿಯೋಗಿಸಿರುತ್ತೇನೆ” (ಖುರ್‍ಆನ್ 21:107) ಎಂದು ದೇವನು ತನ್ನ ಗ್ರಂಥದಲ್ಲಿ ಇಡೀ ಮನುಕುಲಕ್ಕೆ ಅನುಗ್ರಹವೆಂದು ಹೇಳುತ್ತಾನೆ.
* “ಯಾರು ಒಬ್ಬ ಮನುಷ್ಯನನ್ನು ಅನ್ಯಾಯವಾಗಿ ಕೊಂದರೆ ಅವನು ಇಡೀ ಮಾನವ ಕುಲವನ್ನೇ ಕೊಂದಂತೆ” (ಖುರ್‍ಆನ್ 5:32) ಎಂದು ಮುಗ್ಧ ಜನರನ್ನು ಕೊಲ್ಲುವ ಪ್ರವೃತ್ತಿಯನ್ನು ಖುರ್‍ಆನ್ ಖಡಾಖಂಡಿತವಾಗಿ ಖಂಡನೆ ಮಾಡುತ್ತದೆ ಮತ್ತು ಈ ರೀತಿಯ ಪಾಪ ಕೃತ್ಯಗಳಿಗೆ ಅಂತಿಮ ದಿನದಲ್ಲಿ ಅಥವ ಪರಲೋದಲ್ಲಿ ನರಕದ ಶಿಕ್ಷೆಯಿದೆ ಎಂಬುದಾಗಿ ಖುರ್‍ಆನ ಮತ್ತು ಸಂದೇಶವಾಹಕರ ವಚನಗಳಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ರೀತಿಯಾಗಿ ಮನುಕುಲದ ಸಹೋದರತ್ವ ಹಾಗೂ ಮನುಷ್ಯನ ಜೀವನದ ಪ್ರತಿ ಹೆಜ್ಜೆಯಲ್ಲೂ ಶಾಂತಿ ಸಮಾಧಾನವನ್ನು ಪಾಲಿಸಬೇಕೆಂದು ತಿಳಿಸಿಕೊಡುವ ಧರ್ಮದಲ್ಲಿ ಅತಿಕ್ರಮ ಮತ್ತು ಭಯೋತ್ಪಾದನೆ ಹೇಗೆ ಸಾಧ್ಯ?

  ಬನ್ನಿ ಸತ್ಯವನ್ನು ಅರಿಯೋಣ:

ಒಬ್ಬ ಹಿಂದೂ ಅಥವ ಕ್ರೈಸ್ತವ ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿಕೊಂಡರೆ ಹಿಂದೂ ಭಯೋತ್ಪಾದಕ ಅಥವ ಕ್ರೈಸ್ತ ಭಯೋತ್ಪಾದಕನೆಂದು ಮಾಧ್ಯಮಗಳು ಪ್ರಚಾರ ಮಾಡುವುದಿಲ್ಲ.  ಹಿರೋಶಿಮ ಮತ್ತು ನಾಗಸಾಕಿ ಮಹಾನಗರಗಳ ಮೇಲೆ ವಿನಾಶಕಾರಿ ಬಾಂಬ್ (ಆಟಂಬಾಂಬ್) ದಾಳಿ ಮಾಡಿ, ತಲೆಮಾರುಗಳನ್ನೆ ನಾಶ ಮಾಡಿರುವ ಅಮೇರಿಕನ್ನರಿಗೆ ಯಾರೂ ಕೂಡ ಕ್ರೈಸ್ತ ಭಯೋತ್ಪಾದಕರೆಂದು ಕರೆಯಲಿಲ್ಲ.  ಹಾಗೂ ಶ್ರೀಲಂಕಾದಲ್ಲಿ ಸಾವಿರಾರು ತಮಿಳುಗರಿಗೆ ಕೊಂದ ಬೌದ್ಧರಿಗೆ ಬೌದ್ಧ ಭಯೋತ್ಪಾದಕರೆಂದು ಕರೆಯಲಿಲ್ಲ.  ಆದರೆ ತಮ್ಮ ಸ್ವಂತ ದೇಶದ ಹಕ್ಕಿಗಾಗಿ ಅಮೇರಿಕದ ವಿರುದ್ಧ ಹೋರಾಡುತ್ತಿರುವ ಆಫಘನ ಹಾಗೂ ಇರಾಖ್ ಜನರಿಗೆ ಇಸ್ಲಾಮಿ ಭಯೋತ್ಪಾದಕರೆಂದು ಮಾಧ್ಯಮಗಳು ಬಿಂಬಿಸುತ್ತಿರುವುದು ಸತ್ಯದ ಮಾತಾಗಿದ್ದು ಅದು ತಮಗೆಲ್ಲರಿಗೂ ಗೊತ್ತಿರುವ ವಿಷಯ ಆಗಿದೆ. (ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಬ್ರಿಟೀಷರು ಭಯೋತ್ಪಾಕರೆಂದು ಕರೆದಿರುವುದು ತಮಗೆಲ್ಲರಿಗೂ ತಿಳಿದಿರುವ ವಿಷಯವಾಗಿದೆ) ಈ ಅಪಪ್ರಚಾರಕ್ಕೆ ಕಾರಣವೇನು? 
ಇಸ್ಲಾಮಿನ ವಿರುದ್ಧವೇ ದೋಷಾರೋಪಣೆ ಏಕೆ?  ಎಂಬುದನ್ನು ತಿಳಿಯುವ ಮುಂಚಿತವಾಗಿ …..

  ಇಸ್ಲಾಮ್ ಎಂದರೇನು?

ಇಸ್ಲಾಮ್ ಎಂಬ ಅರಬೀ ಪದಕ್ಕೆ ಅರ್ಥ ಅನುಸರಿಸುವುದು ಅಥವಾ ಅನುಕರಣೆ ಎಂದಾಗಿದೆ. ಮತ್ತೊಂದು ಅರ್ಥದಲ್ಲಿ ಶಾಂತಿ ಎಂಬುದೇ ಆಗಿದೆ. ಅಂದರೆ ದೇವನಿಗೆ ವಿಧೇಯನಾಗಿ ಜೀವಿಸಿದರೆ ಈ ಲೋಕದಲ್ಲೂ ಪರಲೋಕದಲ್ಲಿಯೂ ಶಾಂತಿ ಸಿಗುತ್ತದೆ ಎಂಬುದಾಗಿದ್ದು ಇಸ್ಲಾಮ್ ಧರ್ಮ ತಿಳಿಸುವ ತತ್ವ ಆಗಿದೆ.  ಅಂದರೆ ಈ ಧರ್ಮದ ಪ್ರಕಾರ ಪ್ರಪಂಚದ ಒಡೆಯನಾದ ದೇವನು ಯಾವುದನ್ನು ಮಾಡಬೇಕೆಂದು ಆಜ್ಞೆ ಮಾಡುತ್ತಾನೋ ಅದನ್ನು ಮಾಡಬೇಕಾಗಿದೆ.  ಅದರ ಹೆಸರೇ ಒಳಿತು ಅಥವಾ ಪುಣ್ಯ ಅಥವಾ ಧರ್ಮ ಎಂದಾಗಿದೆ.  ಅವನು ಯಾವುದೆಲ್ಲಾ ಮಾಡಬಾರದೆಂದು ತಡೆಯಾಜ್ಞೆ ಮಾಡಿದ್ದಾನೆಯೋ ಆ ಎಲ್ಲಾ ವಿಷಯಗಳಿಂದ ದೂರವಿರಬೇಕು.  ಅದೇ ಪಾಪ ಅಥವಾ ಕೆಡುಕು ಅಥವಾ ಅಧರ್ಮ ಎಂದಾಗಿದೆ, ಯಾರು ಈ ತತ್ವವನ್ನು ಒಪ್ಪಿಕೊಂಡು ಅದರ ಪ್ರಕಾರ ಜೀವಿಸುವರೋ ಅವರನ್ನು ಅರಬಿ ಭಾಷೆಯಲ್ಲಿ ಮುಸ್ಲಿಂ (ಅನುಸರಿಸುವವನು) ಎಂದು ಹೇಳುವರು.
*              ಈ ತತ್ವವನ್ನು ಯಾರು ಬೇಕಾದರು ಒಪ್ಪಿಕೊಂಡು ಅನುಸರಿಸಬಹುದು.  ಇದು ಯಾವುದೇ ಒಂದು ಪ್ರತ್ಯೇಕ ಕುಲಕ್ಕೆ, ದೇಶಕ್ಕೆ ಹಾಗೂ ವಂಶಕ್ಕೆ ಸೀಮಿತವಾದುದ್ದಲ್ಲ ಹಾಗೂ ಇದೊಂದು ಹೊಸಧರ್ಮವೂ ಅಲ್ಲ. ಎಲ್ಲಾ ಕಾಲದಲ್ಲಿಯೂ ಈ ಭೂಮಿಯ ವಿವಿಧ ಭಾಗಗಳಿಗೆ ಕಳುಹಿಸಲ್ಪಟ್ಟಿರುವ ದೇವನ ಸಂದೇಶವಾಹಕರು ಈ ತತ್ವವನ್ನೇ ಅವರವರ ಜನಾಂಗಕ್ಕೆ ಭೋಧಿಸಿದರು.  ಇದೇ ತತ್ವವನ್ನೇ ಕೊನೆಯದಾಗಿ ಬಂದ ಸಂದೇಶವಾಹಕರಾದ ಮುಹಮ್ಮದ್ {ಸ} ಮೂಲಕ ಇಸ್ಲಾಮ್ ಎಂಬ ಹೆಸರಿನಲ್ಲಿ ಪುನಃ ಪರಿಚಯವಾಗಿದೆ.
*              ಯಾರೆಲ್ಲಾ ಈ ತತ್ವವನ್ನು ಒಪ್ಪಿಕೊಂಡು – ಅಂದರೆ ಒಳಿತನ್ನು ಮಾಡಿ ಕೆಡುಕಿನಿಂದ ಮುಕ್ತರಾಗಿ ಜೀವಿಸುತ್ತಾರೋ ಅವರು ಪರಲೋಕದ ಜೀವನದಲ್ಲಿ ಸ್ವರ್ಗಕ್ಕೆ ಹೋಗುವರು.  ಯಾರೂ ದೇವನನ್ನು ಮತ್ತು ಅವನು ಅನುಗ್ರಹಿಸಿರುವ ಮಾರ್ಗವನ್ನು ಅಲಕ್ಷಿಸಿ ತನ್ನಿಚ್ಚೆಯಂತೆ ಜೀವಿಸುತ್ತಾರೆಯೋ ಅವರು ನರಕ ಪ್ರವೇಶಿಸುವರು.
*              ಈ ತತ್ವದ ಮುಖ್ಯವಾದ ಮೂಲ ಅಂಶವೇನೆಂದರೆ ಈ ಪ್ರಪಂಚವನ್ನು ಸೃಷ್ಟಿಸಿ ಪರಿಪಾಲಿಸುತ್ತಿರುವ ದೇವನೇ ಅರಾಧನೆಗೆ ಅರ್ಹನು. ಅವನಲ್ಲದೆ ಇತರ ಯಾರೇ ಆಗಿರಲಿ ಅವರು ಎಷ್ಟು ದೊಡ್ಡ ವ್ಯಕ್ತಿಗಳೇ ಆಗಿರಲಿ ರಾಜನೇ ಆಗಿರಲಿ, ಅಧ್ಯಾತ್ಮಿಕ ನಾಯಕರೇ ಆಗಿರಲಿ,  ಅವರನ್ನು ದೇವರು ಎಂದು ಹೇಳುವುದು, ಅವರನ್ನು ಆರಾಧಿಸುವುದಾಗಲೀ ಖಂಡಿತ ಮಾಡಬಾರದು.  ದೇವನನ್ನೇ ನೇರವಾಗಿ ಯಾವುದೇ ಮಧ್ಯವರ್ತಿಗಳಿಗಲ್ಲದೆ ಆರಾಧಿಸಬೇಕು.
*              ಈ ತತ್ವದ ಮತ್ತೊಂದು ಮುಖ್ಯ ಅಂಶವೇನೆಂದರೆ ಮನುಷ್ಯರೆಲ್ಲರೂ ಒಂದು ಗಂಡು ಒಂದು ಹೆಣ್ಣಿನಿಂದ ಜನಿಸಿ ಪ್ರಪಂಚದಾದ್ಯಂತ ವ್ಯಾಪಿಸಿದ್ದಾರೆ.  ಮನುಷ್ಯರೆಲ್ಲರೂ ಅವರು ಯಾವುದೇ ದೇಶದವರಾಗಲೀ ಯಾವುದೇ ಭಾಷೆ ಮಾತನಾಡಲಿ ಯಾವುದೇ ಬಣ್ಣದವರಾಗಲೀ ಒಂದೇ ಕುಟುಂಬಕ್ಕೆ ಸೇರಿರುವ ಪರಸ್ಪರ ಸಹೋದರ ಸಹೋದರಿಯರಾಗಿದ್ದಾರೆ. ಹಾಗಾಗಿ ಎಲ್ಲರೂ ಸಮಾನರು ಅವರ ಮಧ್ಯದಲ್ಲಿ ದೇಶ, ವಂಶ, ಭಾಷೆ, ಕುಲ, ಜಾತಿ, ಎಂಬ ಅಡಿಯಲ್ಲಿ ಭೇದ-ಭಾವ ಸಲ್ಲದು ಹಾಗೂ ಮಾಡಬಾರದು. ದೇವನ ಭಯ ಭಕ್ತಿಯಿಂದ ಮಾತ್ರವೇ ಅವರ ಸ್ಥಾನ ಉನ್ನತವಾಗಲಿದೆ ಎಂದು ಇಸ್ಲಾಮ್ ಹೇಳುತ್ತದೆ.  ಈ ತತ್ವವನ್ನು ಒಪ್ಪಿಕೊಂಡಿರುವವರು ದೇವನಲ್ಲಿ ವಿಶ್ವಾಸವಿಡುವುದಲ್ಲದೆ ಒಳಿತನ್ನು ಮಾಡುವುದರೊಂದಿಗೆ ಒಳಿತನ್ನೆ ಬೋಧಿಸಬೇಕು.  ಕೆಡುಕುಗಳಿಂದ ದೂರವಿರಬೇಕು ಹಾಗೂ ಕೆಡುಕನ್ನು ಕಂಡಲ್ಲಿ ಎಷ್ಟು ಸಾಧ್ಯವೋ ಅಷ್ಟು ಅದನ್ನು ತಡೆಯುವಲ್ಲಿ ಶ್ರಮಿಸಬೇಕು.

ಈಗ ನಿಮಗೇ ಅರ್ಥವಾಗಿರಬೇಕು ಇಸ್ಲಾಮ್ ಎಂಬ ತತ್ವಕ್ಕೆ ವಿರೋಧ ಏಕೆ?

*              ಧರ್ಮವು ಪ್ರಚಲಿತವಾಗುವಾಗ, ಅಧರ್ಮವನ್ನೇ ತಮ್ಮ ಜೀವನಾಧಾರವನ್ನಾಗಿ ಮಾಡಿಕೊಂಡವರು ಕೋಪಾವೇಶವಾಗಿ ಇದನ್ನು ಎದುರಿಸುತ್ತಾರೆ.
*             ದೇವನನ್ನು ನೇರವಾಗಿ ಪ್ರಾರ್ಥಿಸ ಹೋಗಬಹುದೆಂಬ ವಿಷಯ ಸಾಮಾನ್ಯರು ತಿಳಿಯುವಾಗ, ಮಧ್ಯವರ್ತಿಗಳಿಗೆ ಅದು ಸಹಿಸಲಾಗುವುದಿಲ್ಲ.  ಅವರು ಜನರಲ್ಲಿ ಮೂಢನಂಬಿಕೆಗಳನ್ನು ಸಾರಿ ಜನರ ಸಂಪತ್ತನ್ನು ಲೂಟಿ ಮಾಡುವವರಿಗೆ ಈ ಧರ್ಮ ಪ್ರಚಾರವಾಗುವುದು ಅವರಿಗೆ ಸಹಿಸಲಾಗುವುದಿಲ್ಲ.
*              ಬಣ್ಣದ, ವಂಶದ, ಭಾಷೆಯ, ಜಾತಿಯ, ವಿಶೇಷತೆಗಳನ್ನು ಹೇಳಿ ಇನ್ನುಳಿದ ಅಥವ ಮಿಕ್ಕ ಜನರ ಮೇಲೆ ಆಧಿಪತ್ಯ ಸಾಧಿಸುವವರಿಗೆ ಈ ಧರ್ಮ ಕಂಡರೆ ಆಗದು.
*              ಮನುಷ್ಯನನ್ನು ಈ ಧರ್ಮ ಸ್ವಾಭಿಮಾನದೊಂದಿಗೆ ಜೀವಿಸಲು ಪ್ರೇರೇಪಿಸುವ ಕಾರಣದಿಂದ ಜನರಲ್ಲಿ ಜಾಗೃತಿ ಮೂಡುತ್ತದೆ.  ಆಗ ಜನರು ಇವರ ಅಧಿಪತ್ಯದ ವಿರುದ್ಧವಾಗಿ, ಹಾಗೂ ತಮ್ಮ ದೇಶವನ್ನು ಮತ್ತು ದೇಶದ ಸಂಪತ್ತನ್ನು ಪೋಲಾಗುವುದರಿಂದ ತಡೆಯಲು ಹೋರಾಡುತ್ತಾರೆ.  ಇದು ಅಧರ್ಮಗಳಿಗೆ ಸಹಿಸಲಾಗದು.
  ಈ ರೀತಿಯಾಗಿ ಪ್ರಪಂಚದಾದ್ಯಂತ ಇರುವ ಅಧರ್ಮಿಗಳ ಹೊಟ್ಟೆ ಪಾಡಿಗೆ ಧಕ್ಕೆ ಉಂಟಾಗುತ್ತದೆ.  ಇಸ್ಲಾಮಿನ ಪ್ರಸಾರವು ಅವರಿಗೆ ಭಯವನ್ನು ಹುಟ್ಟಿಸುತ್ತಿದೆ.  ಹಾಗಾಗಿ ಅವರು ಇಸ್ಲಾಮಿನ ಪ್ರಸಾರವನ್ನು ತಡೆಯಲು ಒಟ್ಟಾಗಿ ಪಣ ತೊಟ್ಟಿದ್ದಾರೆ.  ಅದು ತಮ್ಮ ಹತೋಟಿಯಲ್ಲಿರುವ ಮಾಧ್ಯಮಗಳ ಶಕ್ತಿಗಳ ಮೂಲಕ ಮುಗ್ಧ ಜನರನ್ನು ಒಲಿಸಿಕೊಳ್ಳುವುದರ ಮೂಲಕ ಬಲವಂತವಾಗಿ ಅಪ ಪ್ರಚಾರವನ್ನು ಕೈಗೊಳ್ಳುತ್ತಾರೆ.  ಆದರೆ ಪ್ರಪಂಚದ ಒಡೆಯನು ಇಡೀ ಪ್ರಪಂಚದ ಜನರಿಗಾಗಿ ಅನುಗ್ರಹವಾಗಿ ಕೊಟ್ಟ ಈ ಮಾರ್ಗವು ಪ್ರಸಾರವಾಗುವುದರಿಂದ ತಡೆಯಲು ಯಾರಿಂದಲೂ ಸಾಧ್ಯವಿಲ್ಲವೆಂದು ತನ್ನ ಗ್ರಂಥದಲ್ಲಿ ಹೇಳಿಕೊಂಡಿದ್ದಾನೆ.
“ಅವರು ದೇವನ ಪ್ರಕಾಶವನ್ನು ತಮ್ಮ ಬಾಯಿಯಿಂದ ಊದಿ ನಂದಿಸಬಯಸುತ್ತಾರೆ.  ದೇವನು ಮಾತ್ರ ತನ್ನ ಪ್ರಕಾಶವನ್ನು ಪರಿಪೂರ್ಣವಾಗಿ ವ್ಯಾಪಿಸದೆ ಬಿಡಲಾರನು – ಧಿಕ್ಕಾರಿಗಳಿಗೆ ಅದು ಎಷ್ಟೇ ಅಪ್ರಿಯವಾಗಿದ್ದರೂ ಸರಿಯೇ” (ಖುರ್‍ಆನ್ 9:32)
ಆದರೆ ಈ ಧರ್ಮದ ಬೆಳವಣಿಗೆಯನ್ನು ನೋಡಿ ಯಾರೂ ಚಿಂತಿಸುವ ಅವಶ್ಯಕತೆಯಿಲ್ಲ , ಇದು ಒಂದು ಪ್ರತ್ಯೇಕ ದೇಶವನ್ನೋ ವಂಶವನ್ನೋ ವಿನಾಶ ಮಾಡಲಾಗಲೀ, ಬೆಳಸಲಾಗಲೀ ಬಂದಿರುವುದಿಲ್ಲ, ಆದರೆ ಪ್ರಪಂಚದಾದ್ಯಂತ ಧರ್ಮವನ್ನು ನೀತಿಯನ್ನು ಸ್ಥಾಪಿಸಿ ಶಾಂತಿಯನ್ನು ಸಂಸ್ಥಾಪಿಸಲು ಬಂದಿದೆ ಎಂಬುದನ್ನು ಮನಗಂಡರೆ, ಇದರ ಕುರಿತು ಇರುವ ದೋಷ ಹೋಗುತ್ತದೆ.  ಇಂದಿನ ವಿರೋಧಿಗಳೇ ನಾಳೆ ಇದನ್ನು ತಿಳಿದ ನಂತರ ಇದರ ಸಂರಕ್ಷಕರಾಗಿ ಬದಲಾಗುತ್ತಾರೆ.  ಇದನ್ನೇ ಅಮೇರಿಕಾ ಮತ್ತು ಯೂರೋಪ್ ರಾಷ್ಟ್ರಗಳಲ್ಲಿನ ಬೆಳವಣಿಗೆ ಎತ್ತಿ ತೋರಿಸುತ್ತಿದೆ.
ಆತ್ಮೀಯ ಸಹೋದರ ಸಹೋದರಿಯರೆ ಈಗ ನಾವು ಹೇಳಿರುವ ವಿಷಯವನ್ನು ನೀವೇ ಪರಿಶೀಲಿಸಿ ನೋಡಬಹುದಲ್ಲ ಅದು ಪವಿತ್ರ ಖುರಆನಿನ ಕನ್ನಡ ಅನುವಾದವನ್ನು ಅಥವಾ ನಿಮಗೆ ತಿಳಿದಿರುವ ಭಾಷೆಯಲ್ಲಿ ಓದಿ ತಿಳಿಯ ಬಹುದಲ್ಲವೇ ……

ಇಸ್ಲಾಮ್ ಅರಳಿದರೆ ಏನಾಗುತ್ತದೆ,?

             ಮನುಷ್ಯರ ಹೃದಯಗಳಲ್ಲಿ ನೈಜ ದೇವನ ಮೇಲೆ ಅಂತ್ಯದಿನದ ಮೇಲೆ ನಂಬಿಕೆ ಬರುತ್ತದೆ. ಈ ನೈಜ ನಂಬಿಕೆಯಿಂದ ಪಾಪಗಳು ದೂರವಾಗುತ್ತವೆ, ಆಗ ಮನುಷ್ಯನು ಸ್ವಸಾಮಥ್ರ್ಯ ಉಳ್ಳವನಾಗುತ್ತಾನೆ. ಆತ್ಮ ಸ್ಥೈರ್ಯಉಳ್ಳವನಾಗುತ್ತಾನೆ, ಕರ್ತವ್ಯ ಪ್ರಜ್ಞನಾಗುತ್ತಾನೆ, ಅನೀತಿ, ಅಕ್ರಮ, ಮೋಸ, ಅಧರ್ಮವೆಲ್ಲಾ ನಾಶವಾಗಿ ಅಲ್ಲಿ ನೀತಿ, ನಿಯಮ, ಧರ್ಮಗಳು ಒಳಿತಿನ ಕಾರ್ಯಗಳು, ಪರಸ್ಪರ ಹೊಂದಾಣಿಕೆ ಸ್ವಭಾವ ಹೆಚ್ಚಾಗುತ್ತದೆ, ದೇಶದ ಸಂಪತ್ತನ್ನು ಇಲ್ಲರೂ ಸೂಕ್ತರೀತಿಯಲ್ಲಿ ಹಂಚಿಕೊಳ್ಳವ ಮನೋಭಾವನೆ ಎಲ್ಲರಲ್ಲೂ ಬರುತ್ತದೆ.
             ಮನುಷ್ಯನ ಹೃದಯದಲ್ಲಿ ನಿಜವಾದ ದೇವವಿಶ್ವಾಸ ಭಕ್ತಿ ಮರಣಾನಂತರ ಜೀವನದ ಬಗ್ಗೆ ನಂಬಿಕೆ ಬಿತ್ತಲ್ಪಡುವುದು ಅದರಿಂದ ದೇವನಲ್ಲಿ ನೇರ ಸಂಪರ್ಕವಾಗುವುದು.
             ಇದರಿಂದ ವ್ಯಕ್ತಿಯ ಜೀವನದಲ್ಲಿ ಆತನ ಬದುಕಿನಲ್ಲಿ ಸ್ವಮರ್ಯಾದೇ, ಆತ್ಮಸ್ಥೈರ್ಯ, ಸ್ವಾಭಿಮಾನ, ಧೈರ್ಯ, ತ್ಯಾಗ, ಪ್ರೀತಿ, ಶಾಂತಿ, ಆದರ, ಪಾಪಕಾರ್ಯದಿಂದ ದೂರಸರಿಯುವುದು, ತ್ಯಾಗ ಕ್ಷಮೆ, ಸಂಗಡಿಗರೊಂದಿಗೆ ಪ್ರೀತಿ, ತಾಳ್ಮೆ ಸರಳತೆ, ಜೀವನದಲ್ಲಿ ಒಳ್ಳೆಯ ನಡತೆಗಳು ಜನರ ಜೀವನದಲ್ಲಿ ಅರಳುತ್ತವೆ..
             ಸುಳ್ಳು ದೇವರುಗಳು ವ್ಯಾಜ್ಯ ದೇವರುಗಳು ಸಂಪ್ರದಾಯಗಳು, ಮಧ್ಯವರ್ತಿಗಳು ನಿರ್ಮೂಲವಾಗುತ್ತಾರೆ. ದೇವರ ಹೆಸರಿನಲ್ಲಿ ಬಗೆಯಲ್ಪಡುವ ಕೊಳ್ಳೆಗಳು ಮೂಢನಂಬಿಕೆಗಳು, ಅಂಧಾಚಾರಗಳು, ಪೂಳ್ಳು ಸಂಪ್ರದಾಯಗಳು, ದೂರವಾಗುತ್ತವೆ. ಆರಾಧನೆಗೆ ಯಾವುದೇರೀತಿಯ ಖರ್ಚುವೆಚ್ಚಗಳು ಇರುವುದಿಲ್ಲ, ಪ್ರತಿನಿಮಿಷವೂ ನಡೆಯುವ ಹಗಲುದರೋಡೆಯಿಂದ ರಕ್ಷಣೆಯಾಗಿ ದೇಶದ ಸಂಪತ್ತು ವೃದ್ಧಿಸುತ್ತದೆ. ಆಗ ಆ ಸಂಪತ್ತನ್ನು ಪ್ರಯೋಜನಾತ್ಮಕ ಅಭಿವೃದ್ಧಿಗಾಗಿ ಬಳಸಿದರೆ ಉತ್ತಮವಾಗುತ್ತದೆ.
             ಒಂದೇ ಕುಲ ಒಬ್ಬನೇ ದೇವ ಎಂಬ ತತ್ವ ಅಥವ ತಾರಕ ಮಾತ್ರವು ಮೊಳಗಿ, ಜಾತಿಗಳು, ಅಸ್ಪøಶ್ಯತೆ, ವರ್ಣದ್ವೇಶ ಜನಾಂಗೀಯ ಏರಿಳಿತ, ಕುಲದ್ವೇಷ ಹೊರಟು ಹೋಗುತ್ತದೆ. ಕುಲಕ್ಕೆ ಒಂದು ನೀತಿ, ಜಾತಿಗೆ ಒಂದು ನೀತಿ, ದೇಶಕ್ಕೇ ಒಂದುನೀತಿ,ರಾಜ್ಯಕ್ಕೆ ಒಂದು ನೀತಿ, ಎಂಬ ವ್ಯತ್ಯಾಸ ಕೊನೆಯಾಗಿ ಎಲ್ಲರಿಗೂ ಒಂದೇ ನ್ಯಾಯ ನೀತಿ ಪ್ರಯೋಗಕ್ಕೆ ಬರುತ್ತದೆ. ಸಹೋದರತೆಯಿಂದ ಪರಸ್ಪರ ಆದರತೆ ಉಂಟಾಗುತ್ತದೆ.
             ಸುಜ್ಞಾನಕ್ಕೆ ಪ್ರೇರಣೆ ಹೆಚ್ಚಾಗುತ್ತದೆ, ಆಗ ಮಂಕುತನ ಹೊರಟು ಹೋಗುತ್ತದೆ. ಮನುಕುಲಕ್ಕೆ ಪ್ರಯೊಜನವಿರುವ ಶಿಕ್ಷಣ ಮತ್ತು ವಿಜ್ಞಾನದ ಅಭಿವೃದ್ಧಿಯಾಗುತ್ತದೆ. ಎಲ್ಲರೂ ದೇವ ಭಯದೊಂದಿಗೆ ಕಲಿಯುತ್ತಾರೆ, ಶಿಕ್ಷಣ ಮತ್ತು ವಿಜ್ಞಾನ ಮನುಕುಲವನ್ನು ನಾಶಮಾಡಲು ಹಾಗೂ ಅಕ್ರಮ ಮಾಡಲು ಪ್ರಯೋಗಿಸುವ ಬದಲಾಗಿ, ಪ್ರಯೊಜನಾತ್ಮಕ ಅಭಿವೃದ್ಧಿಗೆ ಬಳಸಲಾಗುತ್ತದೆ. ಅಂತ್ಯದಿನ ಇರುವುದನ್ನು ಹಾಗೂ ದೇವನ ಇರುವಿಕೆಯನ್ನು ಬಲಪಡಿಸಲು ದೇವಭಯವನ್ನು ವೃದ್ಧಿಸಲು ಈ ವಿಜ್ಞಾನ ಮತ್ತು ಶಿಕ್ಷಣ ಸಹಕಾರಿಯಾಗುತ್ತದೆ.
             ಯುದ್ಧಗಳು, ದ್ವೇಶ, ವೈಶಮ್ಯಗಳು,ಮೊಸಗಳು ದೂರವಾಗುತ್ತವೆ, ಸುರಕ್ಷಿತ ಶಾಂತಿ ಆವರಿಸಲ್ಪಟ್ಟು ಹೊಸ ಸಮಾಜವೊಂದು ಅರಳುತ್ತದೆ. ಎಲ್ಲವೂ ನಮ್ಮ ಊರುಗಳೆ, ಎಲ್ಲರೂ ನಮ್ಮವರು, ಎಲ್ಲರೂ ನಮ್ಮ ಬಂಧುಗಳೇ, ಎನ್ನುವ ವಾಸ್ತವಾಂಶ ಅನುಸರಿಸಲಾಗುತ್ತದೆ. ಆನರು ಮಾಡುವ ಗಡಿರೇಖೆಗಳು, ದೇಶಗಳ ಮಧ್ಯದಲ್ಲಿನ ವಿಭಜಕಗಳು ಕೊನೆಗೊಳ್ಳುತ್ತವೆ. ದೇಶದ ಆರ್ಥಿಕತೆಯ ಮೂರನೇ ಒಂದು (1/3) ಭಾಗವನ್ನು ನುಂಗುವ ಸೈನ್ಯ ವ್ಯವಸ್ಥೆಗಳು ಕೊನೆಗೊಳ್ಳುತ್ತವೆ.
             ಆಗ ದೇವನ ಪ್ರೀತಿಗಾಗಿ ಮತ್ತು ಮರಣನಂತರ ಬರುವ ಸ್ವರ್ಗಸುಖ ಜೀವನಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವ ಸಜ್ಜನರಿಂದ ಆ ಹೊಸಲೋಕ ತುಂಬಿರುತ್ತದೆ.

ಅಂತಿಮವಾಗಿ;

“ವಿಶ್ವಾಸಿಗಳೇ, ನೀವು ಸದಾ ಅಲ್ಲಾಹನಿಗಾಗಿ ನ್ಯಾಯದ ಪರ ಸಾಕ್ಷಿ ನಿಲ್ಲುವವರಾಗಿರಿ. ಒಂದು ಜನಾಂಗದ ಮೇಲಿನ ಹಗೆತನ ಕೂಡಾ, ನ್ಯಾಯ ಪಾಲಿಸದೆ ಇರಲು ನಿಮ್ಮನ್ನು ಪ್ರಚೋದಿಸ ಬಾರದು. ನೀವು ಸದಾ ನ್ಯಾಯವನ್ನೇ ಪಾಲಿಸಿರಿ. ಅದುವೇ ಧರ್ಮನಿಷ್ಠೆಗೆ ಹೆಚ್ಚು ನಿಕಟ ಧೋರಣೆಯಾಗಿದೆ. ಸದಾ ಅಲ್ಲಾಹನಿಗೆ ಅಂಜಿರಿ. ಅಲ್ಲಾಹನಂತೂ ನೀವು ಮಾಡುತ್ತಿರುವ ಎಲ್ಲವನ್ನೂ ಚೆನ್ನಾಗಿ ಅರಿತಿರುತ್ತಾನೆ” ಪವಿತ್ರ ಖುರ್‍ಆನ್; 5:8.
“ಒಳಿತು ಮತ್ತು ಕೆಡುಕುಗಳು ಸಮಾನವಲ್ಲ. ನೀವು ಕೆಡುಕನ್ನು ಒಳಿತಿನಿಂದ ಎದುರಿಸಿ ಆಗ ನಿಮ್ಮ ವಿರುದ್ಧ ಹಗೆತನ ಉಳ್ಳವನೂ ನಿಮ್ಮ ಆಪ್ತ ಮಿತ್ರನಂತಾಗಿಬಿಡುವನು” ಪವಿತ್ರ ಖುರ್‍ಆನ್;41:34.
“ ಒಂದು ವೇಳೆ ನೀವು ದಂಡಿಸುವುದಿದ್ದರೂ, ಅವರು ನಿಮ್ಮನ್ನು ನೋಯಿಸಿದಷ್ಟು ಮಾತ್ರ ನೀವು ಅವರನ್ನು ನೋಯಿಸಿರಿ. ಇನ್ನು ನೀವು ಸಹನೆಯನ್ನು ಪಾಲಿಸಿದರೆ, ಸಹನ ಶೀಲರ ಪಾಲಿಗೆ ಅದುವೇ ಉತ್ತಮ”. ಪವಿತ್ರ ಖುರ್‍ಆನ್; 16:126.
“ ಅವರು ಸುಖದ ಸ್ಥಿತಿಯಲ್ಲೂ ಸಂಕಷ್ಟದಲ್ಲೂ (ಸತ್ಕಾರ್ಯಗಳಿಗಾಗಿ) ಖರ್ಚು ಮಾಡುವವರು, ಕೋಪವನ್ನು ನುಂಗಿಕೊಳ್ಳುವವರು ಮತ್ತು ಜನರನ್ನು ಕ್ಷಮಿಸುವವರಾಗಿರುತ್ತಾರೆ. ಅಲ್ಲಾಹನಂತು ಸೌಜನ್ಯಶೀಲರನ್ನು ಪ್ರೀತಿಸುತ್ತಾನೆ”. ಪವಿತ್ರ ಖುರ್‍ಆನ್; 3:134.
Previous Post

ಕನ್ನಡ ಇಸ್ಲಾಂ 360° – 01 – ಇಸ್ಲಾಂ ಎಂದರೇನು?

GIRISH K S

GIRISH K S

Leave a Reply Cancel reply

Your email address will not be published. Required fields are marked *

Categories

© 2023 Kannada Islam - Premium Kannada Islamic news & magazine by GIRISH (ISHAAQ).

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ಗೂಡು
  • ಇಸ್ಲಾಮ್ ಕುರಿತ ಪ್ರಶ್ನೋತ್ತರಗಳು – Questions and Answers about Islam
    • ಇಸ್ಲಾಮ್ ಕುರಿತ ಸಂಶಯಗಳು ಭಾಗ – 1
    • ಇಸ್ಲಾಮ್ ಕುರಿತ ಸಂಶಯಗಳು ಭಾಗ – 2
    • ಇಸ್ಲಾಮ್ ಕುರಿತ ಸಂಶಯಗಳು ಭಾಗ – 3
    • ರಂಜಾನ್ ತಿಂಗಳ ಕುರಿತಾದ ಪ್ರಶ್ನೆಗಳು ಮತ್ತು ಉತ್ತರಗಳು.
  • ಇಸ್ಲಾಮನ್ನು ಅನ್ವೇಷಿಸಿ
    • All
    • ಅತಿರೇಕತೆಯ ವಿರುದ್ಧ
    • ಇಸ್ಲಾಮನ್ನು ತಿಳಿಯಿರಿ
    • ಕಪಟ ವಿಶ್ವಾಸಿಗಳು
    • ಖುರಾನ್ ಕುರಿತು
    • ಜೀವನದ ಉದ್ದೇಶ
    • ಭಯೋತ್ಪಾದನೆಯ ವಿರುದ್ಧ
    • ಹಬ್ಬಗಳು
    • ಹೊಸದಾಗಿ ಇಸ್ಲಾಮಿಗೆ ಬಂದಿರುವಿರೇ?

    ಶಾಂತಿಗೆ ಮತ್ತೊಂದು ಹೆಸರೇ ಇಸ್ಲಾಮ್

    ಕನ್ನಡ ಇಸ್ಲಾಂ 360° – 01 – ಇಸ್ಲಾಂ ಎಂದರೇನು?

    ಪವಿತ್ರ ಕುರ್‌ಆನ್ ಎಂದರೇನು? – What is Holy Quran

    ಇಸ್ಲಾಮೇ ಏಕೆ? – Why Islam?

    ನವ ಮುಸ್ಲಿಮರಿಗೆ ಸಂಕ್ಷಿಪ್ತ ಉಪಯುಕ್ತ ಮಾರ್ಗದರ್ಶಿ – A brief useful guide for new-Muslims

    ನವ ಮುಸ್ಲಿಮರಿಗೆ ಸಂಕ್ಷಿಪ್ತ ಉಪಯುಕ್ತ ಮಾರ್ಗದರ್ಶಿ – A brief useful guide for new-Muslims

    ಇಸ್ಲಾಂ ಮತ್ತು ಕುರಾನಿನ ನೈಜ ಸಂದೇಶ – The true message of Islam and the Quran

  • ಅಲ್ಲಾಹ್
    231246

    ನಾವು ಇಲ್ಲೇಕ್ಕಿದ್ದೇವೆ? – Why are we here?

    231252

    ಯೇಸುವಿನ ಪ್ರಕಾರ ದೇವನೆಂದರೆ ಯಾರು ? – Who is God according to Jesus

    231233

    ದೇವನಿದ್ದರೆ ಅನ್ಯಾಯಗಳೇಕೆ? – If there is a God why injustices?

    230493

    ದೇವರ ನೈಜ ಧರ್ಮ ಯಾವುದು? – What is the true religion of God?

    230497

    ಅಲ್ಲಾಹನ(ದೇವರ) ಕೃಪೆ – By the grace of Allah (God)

    230502

    ಇಸ್ಲಾಮಿನಲ್ಲಿ ಏಕದೇವತ್ವ – Monotheism in Islam

  • ನಂಬಿಕೆ
    • All
    • ಆರಾಧನೆ
    • ಪ್ರಮಾಣೀಕರಣ
    • ಮರಣಾನಂತರ ಜೀವನ
    • ಸ್ವರ್ಗ

    ಆತ್ಮದ ವಾಸ್ತವ – The reality of the Soul

    ಜೀವನ ಘಟ್ಟದ ಪಯಣವೆತ್ತ ? – Where is the journey of the of life?

    ಇಸ್ಲಾಮಿನ ಮೂರು ಮೂಲಭೂತ ತತ್ವಗಳು – Three Fundamental Principles of Islam

    ನಮಗೆಲ್ಲಾ ಒಬ್ಬನೇ ಸೃಷ್ಟಿಕರ್ತ!! – One Creator for All of Us!!

    ನೀವೇಕೆ ಆರಾಧಿಸುವುದಿಲ್ಲ? – Why don’t you worship?

    ಸಾವು: ಅಂತ್ಯವೋ…? ಹೊಸದೊಂದು ಆರಂಭವೋ? – Death is End? or New Beginning

  • ಪವಿತ್ರೀಕರಣ

    ಖುರ್‌ಆನಿನ ಬೆಳಕಿನಲ್ಲಿ ರೋಗ ಪರಿಹಾರ

    ಶುದ್ಧೀಕರಣ / ವುದೂ – Wudu

  • ಖುರಾನ್
  • ಅಹದೀತ್ ಹೇಳಿಕೆಗಳು
  • ಇಸ್ಲಾಮ್ ಮತ್ತು ಶಾಸ್ತ್ರಗಳು
    • All
    • ಇಸ್ಲಾಮಿನ ಕುರಿತಾಗಿ ಇತರರು
    • ಕ್ರೈಸ್ತ ಧರ್ಮ
    • ಖುರಾನ್ ಆಧಾರಗಳು

    ಯೇಸುವಿನ ಪ್ರಕಾರ ದೇವನೆಂದರೆ ಯಾರು ? – Who is God according to Jesus

    ಯೇಸುವಿನ ಅದ್ಭುತ ಜನನ – Miraculous Birth of Jesus

    ಮಾನವ ಶರೀರವೆಂಬ ಅದ್ಭುತ ಯಂತ್ರವನ್ನು ನಿರ್ಮಿಸಿದವನು ಯಾರು? – Who built the amazing machine called human body?

    ಅಲ್ಲಾಹನ ಸಂದೇಶವಾಹಕರಾದ ಮಹಮ್ಮದ್(ಸ)ರ ಕುರಿತು ಮುಸ್ಲೀಮೇತರ ಟಿಪ್ಪಣಿಗಳು – Non-Muslim Notes on Muhammad (PBUH), Messenger of Allah

    ಕ್ರೈಸ್ತರೊಂದಿಗೆ ಸಂವಾದ (ಯೆಹೋವನ ಸಾಕ್ಷಿಗಳನ್ನು ಹೊರೆತುಪಡಿಸಿ) – Dialogue with Christians (Except Jehovah’s Witnesses)

    ದೇವನೊಬ್ಬನೆ ಅಥವ ಮೂವರೇ? – Is God one or three?

  • ಪ್ರವಾದಿಗಳು
    • All
    • ಮುಹಮ್ಮದ್(ﷺ)
    • ಯೇಸು(ಈಸ (ಅ))

    ರಬಿವುಲ್ ಅವ್ವಲ್ 12 ಪ್ರವಾದಿ(ಸ) ಮನೆಯ ವಾತಾವರಣ –

    ಇಸ್ಲಾಮಿನ ಸಂದೇಶವಾಹಕ  ಮುಹಮ್ಮದ್(ﷺ) – The Messenger of Islam ’Muhammad’ (ﷺ)

    ಯೇಸುವಿನ ಪ್ರಕಾರ ದೇವನೆಂದರೆ ಯಾರು ? – Who is God according to Jesus

    ಯೇಸುವಿನ ಅದ್ಭುತ ಜನನ – Miraculous Birth of Jesus

    ಪ್ರವಾದಿ (ﷺ) ಯನ್ನು ಅರಿಯಿರಿ – Know the Prophet (ﷺ)

    ಅಲ್ಲಾಹನ ಸಂದೇಶವಾಹಕರಾದ ಮಹಮ್ಮದ್(ಸ)ರ ಕುರಿತು ಮುಸ್ಲೀಮೇತರ ಟಿಪ್ಪಣಿಗಳು – Non-Muslim Notes on Muhammad (PBUH), Messenger of Allah

    ದೇವನೊಬ್ಬನೆ ಅಥವ ಮೂವರೇ? – Is God one or three?

    ದೇವರ ಸಂದೇಶವಾಹಕ ಮುಹಮ್ಮದ್ (ﷺ)Messenger of God Muhammad (ﷺ)

    ಪ್ರವಾದಿ ಮುಹಮ್ಮದ್(ﷺ) – Prophet Muhammad(ﷺ)

  • ಜೀವನ ಚರಿತ್ರೆಗಳು
    • All
    • ಅಲ್-ಅಶರ ಅಲ್-ಮುಬಶ್ಶರೂನ್
    • ಇಮಾಮ್‍ಗಳು
    • ಖುಲಫಾ-ಎ-ರಾಶಿದೂನ್
    • ಪ್ರಭಾವ ಬೀರುವ ಘಟನೆಗಳು
    • ಪ್ರವಾದಿಯ ಮಡದಿಯರು
    • ಸಹಾಬಿಗಳು
    • ಹದೀಸ್ ವಿದ್ವಾಂಸರು

    10. ಆಮಿರ್ ಬಿನ್ ಅಬ್ದುಲ್ಲಾ ಬಿನ್ ಅಲ್‌-ಜರ್ರಾಹ್(ಅಬೂ ಉಬೈದ)(ರ) – Aamir bin Abdillah bin al-Jarrah(Abu Ubaida)

    9. ಸಈದ್ ಬಿನ್ ಝೈದ್(ರ) – Saeed Ibn Zayd (RA)

    8. ಸಅದ್ ಬಿನ್ ಅಬೀ ವಕ್ಕಾಸ್‌(ರ) – Sa’d Ibn Abi Waqqas (RA)

    7. ಅಬ್ದುರ್ರಹ್ಮಾನ್ ಬಿನ್ ಔಫ್(ರ) – Abdul ar-Rahman Bin Auf (RA)

    6. ಝುಬೈರ್ ಬಿನ್‌ ಅವ್ವಾಮ್(ರ) – Zubair Ibn Al-Awwam (RA)

    5. ತಲ್ಹ ಬಿನ್ ಉಬೈದುಲ್ಲಾ(ರ) – Talha bin Ubaydillah (RA)

    ಮೈಮೂನ ಬಿಂತ್ ಹಾರಿಸ್(ರ) – ಪ್ರವಾದಿ(ಸ) ರವರ ಕೊನೆಯ ಮಡದಿ

    ರಮ್ಲ ಬಿಂತ್ ಅಬೂ ಸುಫ್ಯಾನ್ (ಉಮ್ಮು ಹಬೀಬ)(ರ) – ಪ್ರವಾದಿ(ಸ) ರವರ ಹತ್ತನೆಯ ಮಡದಿ

    ಸಫಿಯ್ಯ ಬಿಂತ್ ಹುಯಯ್(ರ) – ಪ್ರವಾದಿ(ಸ) ರವರ ಒಂಬತ್ತನೇ ಮಡದಿ

  • ಇಸ್ಲಾಮಿನ ಇತಿಹಾಸ
  • ಇಸ್ಲಾಮಿನ ಕಾನೂನು
    • All
    • ಅನಿಷ್ಟ ಪದ್ಧತಿಗಳು
    • ಫತ್ವಾ ಸ್ಪಷ್ಟೀಕರಣ
    • ಫಿಖ್
    • ಷರಿಯ(ಕಾನೂನು)

    ತಮ್ಮ ಮದ್‌ಹಬ್‌ಗಳ ಕುರಿತು ಇಮಾಮ್‌ಗಳು ಏನೆನ್ನುತ್ತಾರೆ? – What the imam’s say about their Madhab?

    ಭಯೋತ್ಪಾದನೆಯ ಬಗ್ಗೆ ಇಸ್ಲಾಮ್ ಏನೆನ್ನುತ್ತದೆ? – What does Islam say about terrorism?

    ಸೂಫಿಗಳ ಕೆಲವು ತತ್ವಗಳು – Some principles of the Sufis

    ಸಂಘಟನೆಯನ್ನು ಒಡೆಯುವವರು ಕಪಟ ವಿಶ್ವಾಸಿಗಳು! – Those who break the organization are hypocritical believers!

    ​ಇಸ್ಲಾಮ್’ನಲ್ಲಿ ಪುರುಷರಿಗೆ ಒಂದಕ್ಕಿಂತ ಹೆಚ್ಚಿನ ಪತ್ನಿಯರೇ? – Can men have more than one wife in Islam?

    ಶಿಶುಗಳನ್ನು ಕೊಲ್ಲದಿರಿ – Don”t Kill the Babies

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

  • ಇಸ್ಲಾಮ್ ಜೀವನಶೈಲಿ-ಸಂಸ್ಕೃತಿ
    • All
    • ಆರೋಗ್ಯ ಪದ್ಧತಿ
    • ಇಸ್ಲಾಮಿನ ಆಧ್ಯಾತ್ಮಿಕತೆ
    • ಇಸ್ಲಾಮಿನ ಆರ್ಥಿಕತೆ
    • ಇಸ್ಲಾಮಿನ ನಾಗರಿಕತೆ
    • ಇಸ್ಲಾಮಿನ ನೈತಿಕತೆ
    • ಇಸ್ಲಾಮಿನ ರಾಜಕೀಯತೆ
    • ಇಸ್ಲಾಮಿನ ಸಾಮಾಜಿಕತೆ
    • ಕೌಟುಂಬಿಕ ಪದ್ಧತಿ
    • ಧಾರ್ಮಿಕ ಸೈರಣೆ

    ಖುರ್‌ಆನಿನ ಬೆಳಕಿನಲ್ಲಿ ರೋಗ ಪರಿಹಾರ

    ಜೀವನ ಘಟ್ಟದ ಪಯಣವೆತ್ತ ? – Where is the journey of the of life?

    ಶುದ್ಧೀಕರಣ / ವುದೂ – Wudu

    ದೇವರ ನೈಜ ಧರ್ಮ ಯಾವುದು? – What is the true religion of God?

    ನಮ್ಮ ಜೀವನದ ಉದ್ದೇಶವೇನು? – The purpose of our life

    ಇಸ್ಲಾಮಿನ ಮೂರು ಮೂಲಭೂತ ತತ್ವಗಳು – Three Fundamental Principles of Islam

    ಇಸ್ಲಾಮಿನಲ್ಲಿ ಏಕದೇವತ್ವ – Monotheism in Islam

    ​ಇಸ್ಲಾಮ್’ನಲ್ಲಿ ಪುರುಷರಿಗೆ ಒಂದಕ್ಕಿಂತ ಹೆಚ್ಚಿನ ಪತ್ನಿಯರೇ? – Can men have more than one wife in Islam?

    ದೇವರ ಸಂದೇಶವಾಹಕ ಮುಹಮ್ಮದ್ (ﷺ)Messenger of God Muhammad (ﷺ)

  • ಇಸ್ಲಾಮಿನಲ್ಲಿ ಮೂಲಭೂತ ಹಕ್ಕುಗಳು
    • All
    • ಮಹಿಳಾ ಹಕ್ಕುಗಳು
    • ಮಾನವ ಹಕ್ಕುಗಳು
    • ಸಮಾನತೆ

    ಇಸ್ಲಾಂ ಧರ್ಮದಲ್ಲಿ ಮಹಿಳೆಯ ಹಕ್ಕು ಭಾದ್ಯತೆಗಳು – Women’s Right in Islam

    ​ಇಸ್ಲಾಮ್’ನಲ್ಲಿ ಪುರುಷರಿಗೆ ಒಂದಕ್ಕಿಂತ ಹೆಚ್ಚಿನ ಪತ್ನಿಯರೇ? – Can men have more than one wife in Islam?

    ನಿಮ್ಮ ತಂದೆ-ತಾಯಿಯರ ಹಕ್ಕುಗಳು – Your parental rights

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

    ಭಯೊತ್ಪಾದನೆಗೆ ಕಾರಣಕಾರರು ಯಾರು? – Who is behind of Terrorism?

  • ಪ್ರಚಲಿತ ವಿದ್ಯಮಾನ
  • ಮಾಸ ಪತ್ರಿಕೆಗಳು
  • ಅರೇಬಿಕ್

© 2023 Kannada Islam - Premium Kannada Islamic news & magazine by GIRISH (ISHAAQ).

WhatsApp us