ಪರಮದಯಾಮಯನು ಕರುಣಾನಿಧಿಯೂ ಆದ ಅಲ್ಲಾಹ್‍ನ ನಾಮದಿಂದ
ನೈಜ ದೇವನೊಬ್ಬನೇ ಎಂಬ ನಂಬಿಕೆ ಮತ್ತು ಕಲ್ಪನಾ ಭಾವನೆಯೇ ವಿಭಿನ್ನಗೊಂಡಿರುವ ಮಾನವ ಕುಲವನ್ನು ಒಗ್ಗೂಡಿಸುವ ಮಾಧ್ಯಮ.
ಈಸಾ (ಅ) ಅಥವ ಯೇಸುವಿನ ಪ್ರಕಾರ ದೇವನೆಂದರೆ ಯಾರು ?
`ಮರ್ಯಮರ ಪುತ್ರ ಮಸೀಹನೇ ಅಲ್ಲಾಹ್‍ನೆಂದು ಹೇಳಿದವರು ಖಂಡಿತವಾಗಿಗೂ `ಸತ್ಯನಿಷೇಧ’ ಕೈಗೊಂಡರು. ವಸ್ತುತಃ ಮಸೀಹರು `ಓ ಬನೀ ಇಸ್ರಾಈಲರೇ ನನ್ನ ಪ್ರಭುವೂ ನಿಮ್ಮ ಪ್ರಭುವೂ ಆಗಿರುವ ಅಲ್ಲಾಹ್‍ನ ದಾಸ್ಯ ಆರಾಧನೆ ಮಾಡಿರಿ’ ಎಂದು ಹೇಳಿದ್ದರು. ಅಲ್ಲಾಹ್‍ನೊಂದಿಗೆ ಇನ್ನಾರನ್ನಾದರೂ ಸಹಭಾಗಿಗಳನ್ನಾಗಿ ಮಾಡಿದವನಿಗೆ ಅಲ್ಲಾಹ್‍ನು ಸ್ವರ್ಗವನ್ನು `ನಿಷಿದ್ಧ’ಗೊಳಿಸಿರುತ್ತಾನೆ ಮತ್ತು ಅವನ ವಾಸಸ್ಥಾನವೂ `ನರಕ’ ಆಗಿರುತ್ತದೆ. ಇಂತಹ ಅಕ್ರಮಿಗಳಿಗೆ ಯಾರೂ ಸಹಾಯಕರಿಲ್ಲ. ಪವಿತ್ರ ಕುರ್‍ಆನ್ 5:72
1. ಯೇಸುಕ್ರಿಸ್ತರು ಸ್ವತಃ ಜನರನ್ನು ದೇವರ ಸನ್ನಿಧಿಗೆ ಹೀಗೆ ಕರೆಯುವ ರೂಢಿಯಿತ್ತು (ಅಲ್ಲಾಹ್/ಒಡೆಯ/ಯಹೋವ)
1) ಯೇಸುಕ್ರಿಸ್ತರು ಹೀಗೆ ಹೇಳುತ್ತಿದ್ದರು : `ಓ ಇಸ್ರಯೀಲ್ ಜನವೇ ಕೇಳಿ ನಮ್ಮ ದೇವರಾದ ಕರ್ತನು ಒಬ್ಬನೇ ದೇವರು’ ಎಂಬುದು ಮಾರ್ಕ್ 12 : 20
2) ಯಾವ ವ್ಯಕ್ತಿಯೂ ಇಬ್ಬರು ಒಡೆಯರ ಸೇವೆಯನ್ನು ಏಕಕಾಲದಲ್ಲಿ ಮಾಡಲಾರ. ಅವನು ಒಬ್ಬನನ್ನು ಪ್ರೀತಿ ನಿಷ್ಠೆಯಿಂದ, ಇನ್ನೊಬ್ಬರನ್ನು ವಿರೋಧದಿಂದ ಸೇವೆ ಸಲ್ಲಿಸಬಹುದಾಗಿದೆ. ಒಬ್ಬ ಮಾಲೀಕನಿಗೆ ವಿಧೇಯನಾಗಿಯೂ ಇನ್ನೊಬ್ಬನಿಗೆ ಹೀನಯಿಸುವ (ತಾತ್ಸಾರದಿಂದ) ವಿಧದಲ್ಲಿ ಸೇವೆ ಸಲ್ಲಿಸಬಹುದು. ಮತ್ತಾಯ 6 : 24
3) ಯೇಸುಕ್ರಿಸ್ತನು, ತನ್ನ ತಾಯಿಯ ಕುರಿತು ಹೀಗೆ ಸಂಬೋಧಿಸುತ್ತಾನೆ. `ನನಗೆ ಹೀಗೆ ನಿರ್ಭಂದಿಸಬೇಡ ನಾನು ಇನ್ನೂ ಆ ದೇವ ಸನ್ನಿಧಾನಕ್ಕೆ ತಲುಪಿಲ್ಲ ಆದರೆ ನಾನು ನನ್ನ ಮಾನವ ಸಹೋದರೆಡೆಗೆ ಹೋಗಬೇಕಾಗಿದೆ ಆ ದೇವ (ತಂದೆ) ನನ್ನ ಮತ್ತು ಅವರ ದೇವ. ಜಾನ್ 20 : 17
ಯೇಸು ಕ್ರಿಸ್ತನು ಸರ್ವರಿಗೂ ದೇವರೊಬ್ಬನೆ ಎಂದು ಹೇಳಿರುವುದು ಮಾತ್ರವಲ್ಲ. ತಾನೂ ಆ ದೇವರನ್ನು ಆರಾಧಿಸುತ್ತಿದ್ದನು. ತಾನು ಬೋಧಿಸಿದ್ದನ್ನು ಸ್ವತಃ ಅನುಸರಿಸುತ್ತಿದ್ದನು.
2) ಯೇಸುಕ್ರಿಸ್ತರು ನೈಜವಾಗಿ ಏಕದೇವ ಯಹೋವ(ಅಲ್ಲಾಹ್)ನನ್ನು ಮಾತ್ರ ಆರಾಧಿಸುತ್ತಿದ್ದರು.
ಆ ಮಹತ್ತರ ಘಳಿಗೆಯಲ್ಲಿ ಯೇಸುಕ್ರಿಸ್ತರು ಪ್ರಾರ್ಥಿಸಲು ಬೆಟ್ಟದ ಮೇಲೇರಿ ಹೋಗಿ ಇಡೀ ರಾತ್ರಿ ದೇವರನ್ನು ಪ್ರಾರ್ಥಿಸುತ್ತಾ ಕಳೆದರು. ಲೂಕ್ 6 : 12
3) ಯೇಸುಕ್ರಿಸ್ತರು ತಮ್ಮ ಪವಾಡಗಳನ್ನು ಮಾಡುವಾಗ ಯಹೋವಾ(ಅಲ್ಲಾಹ್) ನನ್ನು ಪ್ರಾರ್ಥಿಸುತ್ತಿದ್ದರು.
ಯೇಸುಕ್ರಿಸ್ತರು ಜನರಿಗೆ ಉತ್ತರಿಸುತ್ತಿದ್ದರು. `ಕೇವಲ ಪ್ರಾರ್ಥನೆಯಿಂದ ಮಾತ್ರ ಇಂತಹ ಪವಾಡಗಳು ಜರುಗುತ್ತವೆ ಹೊರತು ಬೇರಾವುದರಿಂದಲೂ ಅಲ್ಲ. ಮಾರ್ಕ್ 9 : 29
4) ಯೇಸುಕ್ರಿಸ್ತರು ತಮ್ಮ ಕಠಿಣ, ಕಷ್ಟಕಾರ್ಪಣ್ಯ ಕಾಲದಲ್ಲಿ ಯಹೋವ(ಅಲ್ಲಾಹ್) ನನ್ನು ಪ್ರಾರ್ಥಿಸುತ್ತಿದ್ದರು. (ಆರ್ಥರಾಗಿ ಆಲಾಪಿಸುತ್ತಿದ್ದರು)
ಅವರು ಸ್ವಲ್ಪ ದೂರ ಮುಂದೆ ಹೋಗಿ ತಮ್ಮ ದೇಹವನ್ನು ನೆಲದ ಮೇಲೆ ಚೆಲ್ಲಿ ಯಾತನೆಯ ಕಾಲದಲ್ಲಿ ತಾವು ನರಳುವ ಸ್ಥಿತಿ ಸಾಧ್ಯವಾಗುತ್ತಿದ್ದರೆ ಬರುತ್ತಿರಲಿಲ್ಲ ಎಂದು ಪ್ರಾರ್ಥಿಸುತ್ತಿದ್ದರು. ಮಾರ್ಕ್ 14 : 35
5) ಯೇಸುಕ್ರಿಸ್ತರು, ತಮ್ಮ ಅನುಯಾಯಿಗಳಿಗೆ ಏಕದೇವ ಯಹೂದ(ಅಲ್ಲಾಹ್) ನನ್ನು ಆರಾಧಿಸಲು ಬೋಧಿಸಿದರು.
ನೀವು ದೇವರನ್ನು ಪ್ರಾರ್ಥಿಸುವಾಗ(ಬೇಕಾದರೆ) ನಿಮ್ಮ ಏಕಾಂತ ಕೋಣೆಗೆ ಹೋಗಿರಿ. ಕೋಣೆಯ ಬಾಗಿಲನ್ನು ಮುಚ್ಚಿ ಕೊಂಡು ಸರ್ವರಿಗೂ ತಂದೆಯಾದ ಅಗೋಚರವಾದ ಆ ಪರಮಾತ್ಮನನ್ನು ಆತ್ಮೀಯವಾಗಿ ಪ್ರಾರ್ಥಿಸಿರಿ. ಖಂಡಿತವಾಗಿಯೂ ನಮಗೆ ಅಗೋಚರವಾಗಿರುವ ಆ ದೇವರಿಗೆ ನಾವು ಏಕಾಂತದಲ್ಲಿಯೂ ಯಾರಿಗೂ ಕಾಣದಂತೆಯೂ ಮಾಡುವ ಪ್ರತಿ ಕೃತ್ಯವೂ ಮತ್ತು ಪ್ರಾರ್ಥನೆಯ ಪ್ರತಿಪದವು ನಮ್ಮ ಸ್ಥಿತಿಯೂ, ಮನಸ್ಸಿನ ವಾಣಿಯೂ ಅವನಿಗೆ ಕಾಣಿಸುತ್ತದೆ ಮತ್ತು ಕೇಳಿಸುತ್ತದೆ. ಆ ಕರುಣಾಮಯಿಯು ಖಂಡಿತವಾಗಿಯೂ ಅವುಗಳಿಗೆ ಸ್ಪಂದಿಸಿ ಆತನ ದಯೆ ಕರುಣಿಸುತ್ತಾನೆ ಮತ್ತು ಪ್ರತಿಫಲ ನೀಡುತ್ತಾನೆ. ಮ್ಯಾಥೊವ್ 6 : 6
6) ಯೇಸುಕ್ರಿಸ್ತರು ಕೇವಲ ಏಕೈಕ ಅಲ್ಲಾಹ್‍ನನ್ನೇ ಮಾತ್ರ ಸ್ತುತಿಸುತ್ತಿದ್ದರು ಮತ್ತು ಕೃತಜ್ಞತಾಪೂರ್ವಕವಾಗಿ ಸಾಷ್ಟಾಂಗವೆರಗುತ್ತಿದ್ದರು.
ಆ ಸಮಯದಲ್ಲಿ(ಪ್ರಾರ್ಥನಾಕಾಲ) ಯೇಸುಕ್ರಿಸ್ತರ ಮನ ಪವಿತ್ರ ಚೇತನ ಹಾಗೂ ಆನಂದದಿಂದ ತುಂಬುತ್ತಿತ್ತು ಹಾಗೂ ಹೀಗೆ ಉಚ್ಚರಿಸುತ್ತಿದ್ದರು. `ಓ ಭೂಮಿ ಆಕಾಶಗಳ ಒಡೆಯನಾದ ತಂದೆಯೇ ನನ್ನ ಕೃತಜ್ಞತೆ(ಶರಣತೆ)ಯನ್ನು ಸ್ವೀಕರಿಸು ಏಕೆಂದರೆ
(ಕಾರಣ) ನೀನು ಈ ಅಜ್ಞಾನಿಗೆ ವಿದ್ಯಾವಂತರಿಂದ ಮತ್ತು ಬಲ್ಲವರಿಂದ ಅಡಗಿಸಿಟ್ಟಿದ್ದ ಅಮೂಲ್ಯವಾದದ್ದನ್ನು ನನಗೆ ಕರುಣಿಸಿರುವೆ. ಓ ತಂದೆಯೇ ಇದು ನಿನ್ನ ಇಚ್ಛೆಯಾಗಿತ್ತು. ಹಾಗೆಯೇ ನೀನು ಮಾಡಿರುವೆ. ಲೂಕ್ 10 : 21
7) ಜನರು ಯೇಸುಕ್ರಿಸ್ತರು ಮಾಡಿ ತೋರಿಸಿದ ಪವಾಡಗಳನ್ನು ನೋಡಿ ದೇವರನ್ನು ಸ್ತುತಿಸಿದರು.
ಜನರು ಒಬ್ಬ ಮೂಕ ಮಾತನಾಡಲು ಪ್ರಾರಂಭಿಸಿದ್ದನ್ನು ಒಬ್ಬ ಅಂಗವಿಕಲ ತನ್ನ ಅಂಗವಿಕಲತೆಯಿಂದ ಮುಕ್ತನಾಗಿ ಅ ಒಬ್ಬ ಕುಂಟ ನಡೆದಾಡುವುದನ್ನು ನೋಡಿ ಹಾಗೂ ಒಬ್ಬ ಕುರುಡ ನೋಡುವಂತಹ ನೇತ್ರಶಕ್ತಿಯನ್ನು ಪಡೆದ ಮೇಲೆ ಆಶ್ಚರ್ಯ ಮತ್ತು ಭಕ್ತಿಯಿಂದ ಇಸ್ರೇಲಿನ ಏಕದೇವರನ್ನು ಸ್ತುತಿಸಿದರು. ಮ್ಯಾಥೋವ್ : 15 : 3
8) ಯೇಸುಕ್ರಿಸ್ತರು ಸಾಮಾನ್ಯವಾಗಿ ಎಲ್ಲರಿಗೂ ಕೇಳಿಸುವಂತೆ `ತಂದೆ ಮಹಾನನು’ (ಅಲ್ಲಾಹು ಅಕ್ಬರ್) ಎಂದು ಕೂಗುತ್ತಿದ್ದರು.
1) ನಾನು ಸ್ಪಷ್ಟವಾಗಿ ಸತ್ಯವಾಗಿ ಘೋಷಿಸುತ್ತೇನೆ.ಯಾವ ಗುಲಾಮನು ತನ್ನ ಧಣಿಗಿಂತ ದೊಡ್ಡವನಲ್ಲ. ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತ ದೊಡ್ಡವನಲ್ಲ ಅಥವಾ ಸಂದೇಶವಾಹಕನನ್ನು ಕಳುಹಿಸುವಂತಹ ಆ ಮಹಾನ್ ಪ್ರಭುವಿಗಿಂತ ದೊಡ್ಡವನಿಲ್ಲ. ಜಾನ್ 13 : 16
2) ಯೇಸುಕ್ರಿಸ್ತರ ಈ ನುಡಿಗಳನ್ನು ಕೇಳಿದಾಗ ನೆರೆದ ಜನರಲ್ಲಿ ಇದ್ದ ಒಬ್ಬ ಮಹಿಳೆ ಅವರಿಗೆ ಹೀಗೆ ಹೇಳಿದಳು. `ನಿನ್ನನ್ನು ಜನ್ಮಕೊಟ್ಟು ಪಾಲಿಸಿ ಪೋಷಿಸಿದ ಆ ತಾಯಿ ಎಂತಹಾ ಅದೃಷ್ಟ ಮತ್ತು ಧನ್ಯಳು’. ಆದರೆ ಯೇಸುಕ್ರಿಸ್ತರು ಉತ್ತರಿಸಿದರು. `ತಾಯಿ.... ಆ ಜನ ಎಷ್ಟು ಧನ್ಯರು ಆ ದೇವರ ಅಮೃತವಾಣಿಯನ್ನು ಕೇಳುವವರು ಮತ್ತು ಅದರಂತೆ ಪಾಲಿಸುವವರು. ಲೂಕ್ 11 : 27-28
9) ಯೇಸುಕ್ರಿಸ್ತರ ಬೋಧನೆಯ ತಡೆಯಿಂದ ಆದ ಪರಿಣಾಮಗಳು (ಫಲಿತಾಂಶಗಳು)
1) ಜನರನ್ನು ಕುರಿತು ಯೇಸುಕ್ರಿಸ್ತರು `ನನ್ನ ಮಾತುಗಳನ್ನು ನೀವು ಪಾಲಿಸದಿದ್ದರೆ ಏಕೆ ನನ್ನನ್ನು ಒಡೆಯ(ಸ್ವಾಮಿ)ಒಡೆಯನೇ (ಸ್ವಾಮಿಯೇ) ಎಂದು ಕರೆಯುತ್ತೀರಿ. ಲೂಕ್ 6 : 46
2) ಯಾರು ನನ್ನ ಹಿತವಚನಗಳನ್ನು ಆಲಿಸುವರೋ ಮತ್ತು ಅದರಂತೆ ನಡೆಯದೇ ಇರುವರೋ ಮರಳುಭೂಮಿಯ ಮೇಲೆ ಮನೆ ಕಟ್ಟಿದಂತೆಯೇ ಸರಿ’ ಎಂದಿದ್ದಾರೆ. ಮ್ಯಾಥೋವ 7 : 26
10) ಜನರು ಅತಿ ಮುಖ್ಯವಾಗಿ ಅಪಾರ್ಥ ಮಾಡಿಕೊಂಡಿರುವ ಹಿತವಚನಗಳು
1) ಆ ತಂದೆ (ದೇವರು) ಮತ್ತು ನಾನು ಒಂದೇ ಆಗಿದ್ದೇವೆ.
2) ಜನರೆ ನಾನು ತಂದೆ(ದೇವ)ಯಲ್ಲಿ ಇದ್ದೇನೆ. ತಂದೆ(ದೇವ)ಯು ನನ್ನಲ್ಲಿ ಇದ್ದಾನೆಂಬುವ ನನ್ನ ಮಾತನ್ನು ನಂಬಿ. ಇಲ್ಲವೇ, ನಾನು ಮಾಡುವ ಸುಕೃತ್ಯಗಳಿಂದಾದರೂ ವಿಶ್ವಾಸವಿರಿಸಿ. ಜಾನ್ 14 : 11
ಆದರೆ ವಾಸ್ತವವಾಗಿ ಈ ಭೌತ ಜಗತ್ತಿನಲ್ಲಿ ಯೇಸುಕ್ರಿಸ್ತರು ಹೇಳಿದಂತೆ ಯೇಸುಕ್ರಿಸ್ತರು ಮತ್ತು ದೇವರು ಒಂದೇ ಆಗಿರುವುದಿಲ್ಲ. ಆದರೆ ಅವರಿಬ್ಬರು ಆಧ್ಯಾತ್ಮಿಕವಾಗಿ ಹಾಗೂ ನಮ್ಮ ಆಲೋಚನಾ ತಿಳುವಳಿಕೆಯಲ್ಲಿ ಒಂದೇ ಆಗಿರುವರು.
ನಿದರ್ಶನಕ್ಕಾಗಿ : ಈ ಕೆಳಗಿನ ಉಲ್ಲೇಖಗಳನ್ನು ಗಮನಿಸೋಣ (ನೋಡೋಣ)
1) ಆ ನಿರ್ಣಾಯಕ ದಿನದಂದು ನಿಮಗೆ ತಿಳಿಯುವುದು ನಾನು ಆ ನನ್ನ ತಂದೆ ದೇವರಲ್ಲಿರುವುದು ಮತ್ತು ನೀವು ನನ್ನಲ್ಲಿರುವುದು. ನಾನು ದೃಢವಾಗಿ ನಿಮ್ಮಲ್ಲಿ ಇರುವಂತೆ ನೀವು ನನ್ನಲ್ಲಿರುವಿರಿ. ಜಾನ್ 14 : 20
2) ಯೇಸುಕ್ರಿಸ್ತರು ಹೀಗೆ ಅರಿಕೆ ಮಾಡಿಕೊಳ್ಳುತ್ತಿದ್ದರು `ಇನ್ನು ನಾನು ಲೋಕದಲ್ಲಿ ಇರುವುದಿಲ್ಲ. ಇವರು ಲೋಕದಲ್ಲಿ ಇರುತ್ತಾರೆ. ಪವಿತ್ರನಾದ ತಂದೆಯೇ ದಯವಿಟ್ಟು ಇವರನ್ನು ನಿನ್ನ ದಯೆ ಕೃಪೆಯಿಂದ ಕ್ಷೇಮವಾಗಿ ಇಡು. ನಿನ್ನ ನಾಮದ ಬಲದಿಂದ ನೀನು ಕೊಟ್ಟ ನನ್ನ ನಾಮದ ಕರುಣೆಯಿಂದ ಅವರೆಲ್ಲರು ಒಂದಾಗಿ ಬಾಳಲಿ ನಾನು ನೀನು ಒಂದಾಗಿರುವಂತೆ. (ನನ್ನ ನಿನ್ನ ಚೇತನ ಒಂದಾಗಿರುವಂತೆ) ಜಾನ್ 17 : 11
3) `ನಾನು ನಿನ್ನಲ್ಲಿರುವೆ ನೀನು ನನ್ನಲ್ಲಿರುವೆ, ಹಾಗೆಯೇ ಈ ಜನರೆಲ್ಲ ಒಂದಾಗಬಹುದು ಈ ಜಗತ್ತೆಲ್ಲ ಒಂದಾಗಲಿಕ್ಕಾಗಿ ಮತ್ತು ನಿನ್ನನ್ನು ಅರಿಯಲಿಕ್ಕಾಗಿ ಹಾಗೂ ನೀನು ನನ್ನನ್ನು ಅವರಲ್ಲಿಗೆ ಕಳುಹಿಸಿರುವುದನ್ನು ಮತ್ತು ನನ್ನನ್ನು ನೀನು ಪ್ರೀತಿಸು ವಂತೆ ಅವರನ್ನೂ ಸಹ ಪ್ರೀತಿಸುತ್ತಿರುವ ಅಂಶ ತಿಳಿಯಲಿ. ಜಾನ್ 17 : 27
ಮೇಲಿನ ಉಲ್ಲೇಖಗಳಿಂದ ದೇವರು ಯೇಸುಕ್ರಿಸ್ತ್ರ ಅವರ ಶಿಷ್ಯಂದಿರು ಭೌತಿಕವಾಗಿ ಒಂದೇ ಹಾಗೂ ಅವರ ಶಿಷ್ಯಂದಿರೂ ಸಹ ಯೇಸುಕ್ರಿಸ್ತರಂತೆ ದೇವರಲ್ಲಿರುವ ಅಂಶಗಳು ಆಗಿರಬೇಕು. ಹೀಗೆ ನಿಜವಾಗಿ ಆಧ್ಯಾತ್ಮಿಕ ಭಾವನೆಗಳಿಂದ ಮಾನಸಿಕವಾಗಿ ಅವರೆಲ್ಲಾ ಒಂದೇ ಹೊರತು ಭೌತದೇಹಾಧಾರಿಗಳಾಗಿ ಅಲ್ಲ.
11. ಯಹೋವಾ(ಅಲ್ಲಾಹ್) ನನ್ನು ಬಿಟ್ಟು ಇತರೆ ದೇವತೆಗಳನ್ನು ಪೂಜಿಸುವುದು ಮಹಾಪಾಪ ಮತ್ತು ವ್ಯಭಿಚಾರವಲ್ಲದೆ ಇನ್ನೇನು?
1) ಒಡೆಯ (ಅಲ್ಲಾಹ್/ಯಹೋವ) ಹೇಳುತ್ತಾನೆ `ನಾನು ನನ್ನಿಂದ ದೂರವಾಗಿ ಇತರಲ್ಲಿ ನಶ್ವರ ಮತ್ತು ಶಕ್ತನಾಗಿದ್ದೆ ಮಾನವನಿಗೆ ನಂಬಿಕೆ ಇಟ್ಟು ಅಧಃಪತನಕ್ಕೆ ತಳ್ಳುತ್ತೇನೆ. ಜರಿಮಿಹಾಃ 17 : 5
2) ನೀನು ಮತ್ತು ನೀವು ಸರ್ವಶಕ್ತಿ ಆ ದೇವನಿಂದ ದೂರವಾಗಿ ವಿಶ್ವಾಸ ದ್ರೋಹಿಗಳಾಗಿದ್ದೀರಿ. ಹೊಸೇಯ 17 : 5
ಪ್ರಿಯ ವಾಚಕರೆ, ಹೀಗೆ ಯೇಸುಕ್ರಿಸ್ತರ ಬೋಧನೆಗಳ ಬೆಳಕಿನಲ್ಲಿ ನಮಗೆ ಯಹೋವಾ, ಅಲ್ಲಾಹ್, ಒಡೆಯ, ತಂದೆ, ಎಲ್ಲರೂ ಒಂದೇ ಎಂಬುದು ಅರ್ಥವಾಗಿದೆ. ಇನ್ನಾದರೂ ನಾವು ವ್ಯರ್ಥಕಾಲವೇಕೆ ಕಾಯಬೇಕು? ಇಂದೇ ಮನಃಪೂರ್ವಕವಾಗಿ ಪಶ್ಚಾತ್ತಾಪ ದಿಂದ ದೇವರಲ್ಲಿ ಕ್ಷಮಾದಾನ ಪಡೆಯಲು ಮತ್ತು ಆತನ ದೈವವಾಣಿಗಳನ್ನು ಕೇಳಿ ಪಾಲಿಸಲು ಅವನಲ್ಲಿ ಶರಣಾಗೋಣ ಬನ್ನಿ.
12. ಯೇಸುರವರ ಕೊನೆಯ ಎಚ್ಚರಿಕೆ:
1) ಕೇವಲ ನನ್ನನ್ನು ಸ್ವಾಮಿ, ಒಡೆಯ, ದೇವ ಎಂದು ಕರೆಯುವುದರಿಂದ ಅಥವಾ ಸಂಬೋಧಿಸುವುದರಿಂದ ಸ್ವರ್ಗ ಸಿಗುವುದಿಲ್ಲ, ಆದರೆ ಆ ಸರ್ವಜ್ಞನಾದ ಸೃಷ್ಟಿಕರ್ತ ಅಪೇಕ್ಷಿಸುವಂತೆ ಪುಣ್ಯಕಾರ್ಯಗಳನ್ನು ಮಾಡಿದರೆ ಮಾತ್ರ ಸಾಧ್ಯ.ಮ್ಯಾಥೋವ್ 7 : 21