ಮಲಿನ ವಸ್ತುಗಳಲ್ಲಿ ವಾಸಿಸುವ ಜೀವಿ.ಮಲಿನ ವಸ್ತುಗಳನ್ನು ಪ್ರೀತಿಸುವ ಜೀವಿ ಮಲಿನಗಳನ್ನು ಪಸರಿಸುವ ಜೀವಿ ಕೂಡ.
ಪ್ರವಾದಿಯವರುﷺ ನೊಣವು ನಾವು ಕುಡಿಯುವ ನೀರು,ಚಾ ಅಥವಾ ತಂಪಾದ ಪಾನೀಯಗಳಲ್ಲಿ ಬಿದ್ದರೆ ನೊಣವನ್ನು ಕ್ರಮಪ್ರಕಾರ ಮೂರು ಸಲ ಮುಳುಗಿಸಿ,ಹೊರ ತೆಗೆದು ಬಿಸಾಡಿ,ನಂತರ ನೊಣ ಬಿದ್ದಂತಹ ಪಾನೀಯಗಳನ್ನು ಉಪಯೋಗಿಸಬಹುದೆಂದು ಹೇಳಿದ್ದಾರೆ.ಇದನ್ನು ಕೇಳಿದ ಪ್ರವಾದಿಯವರ ﷺ ವಿರೋಧಿಗಳು ನೆಬಿಯವರನ್ನು ﷺ ಗೇಲಿ ಮಾಡತೊಡಗಿದರು.ಆದರೆ ಅದು ಸತ್ಯವೆಂದು ಜಗತ್ತೇ ಅಂಗೀಕರಿಸಿತು.
1886 ರಲ್ಲಿ ಜಪಾನಿನ ವಟ್ಟಾಭಿ ನಗರದಲ್ಲಿ ಯಹೂದಿಯಾದ ಕೈರೋಥಮಿಸ್ ಎಂಬವನು ಇಸ್ಲಾಂ ಧರ್ಮದ ಬಗ್ಗೆ ವಿಮರ್ಶನೆ ಮಾಡಬೇಕೆಂಬ ತುಡಿತವಿದ್ದವನಾಗಿದ್ದನು.ಆದರೆ ವಿಮರ್ಶನೆ ಮಾಡುವ ಮುಂಚೆ ಇಸ್ಲಾಂ ಧರ್ಮದ ಬಗ್ಗೆ ಅಧ್ಯಯನ ನಡೆಸಲು ಮದೀನದ ಕಿಂಗ್ ಅಬ್ದುಲ್ ಅಝೀಝ್ ಯುನಿವರ್ಸಿಟಿಗೆ ಭೇಟಿ ನೀಡಿದನು.ಅಲ್ಲಿ ಇಸ್ಲಾಮಿನ ಬಗ್ಗೆ ಅಧ್ಯಯನ ನಡೆಸುವಾಗ ಪ್ರವಾದಿಯವರು ﷺ ಹೇಳಿದ ನೊಣದ ಬಗೆಗಿನ ಹದೀಸ್ ಕಂಡಾಗ,ಇಸ್ಲಾಮನ್ನು ವಿಮರ್ಶಿಸಲು ಸಿಕ್ಕಿದ ಚಾನ್ಸೆಂದು ಭಾವಿಸಿದನು.ಆದರೆ ವಿಮರ್ಶಿಸುವ ಮುಂಚೆ ನೊಣವನ್ನು ಹಿಡಿದು ಮೂರು ವರುಷಗಳವರೆಗೆ ನೊಣದ ಬಗ್ಗೆ ಸಂಶೋಧನೆ ನಡೆಸಿದನು.ಮೂರು ವರುಷಗಳ ತರುವಾಯ ಪ್ರವಾದಿಯವರು ﷺ ಹೇಳಿದ ನೊಣದ ಬಗೆಗಿನ ಮಹತ್ತರವಾದ ಸತ್ಯ ಸಂಗತಿ ತಿಳಿದು ಬೆಚ್ಚಿ ಬಿದ್ದನು ಕೈರೋಥಮಿಸ್.
ಹೌದು, ನೊಣವು ಪಾನೀಯ ಅಥವಾ ಭೋಜನ ವಸ್ತುಗಳಲ್ಲಿ ಬೀಳುವಾಗ ಒಂದು ರೆಕ್ಕೆಯನ್ನು ಬಿದ್ದ ವಸ್ತುಗಳಲ್ಲಿ ಮುಳುಗಿಸುತ್ತದೆ; ಮತ್ತು ಇನ್ನೊಂದು ರೆಕ್ಕೆಯನ್ನು ಹೊರಭಾಗದಲ್ಲಿ ಎತ್ತಿ ಹಿಡಿಯುತ್ತದೆ.ಮುಳುಗಿಸಿದ ರೆಕ್ಕೆಯಲ್ಲಿ ವಿಷವಿದ್ದು,ಆ ವಿಷಕ್ಕಿರುವ ಔಷಧಿಯು ಹೊರಭಾಗದಲ್ಲಿ ಎತ್ತಿ ಹಿಡಿದ ರೆಕ್ಕೆಯಲ್ಲಿ ಇರುತ್ತದೆ.ಆದ್ದರಿಂದ ನೊಣವನ್ನು ಮೂರು ಸಲ ಕ್ರಮಪ್ರಕಾರ ಮುಳುಗಿಸಿ,ಹೊರತೆಗೆಯಬೇಕೆಂದು ಹೇಳಿದ ಪ್ರವಾದಿಯವರ ﷺ ಹದೀಸ್’ನ್ನು ಕೈರೋಥಮಿಸ್ ಸತ್ಯವೆಂದು ಜಗತ್ತಿಗೆ ತಿಳಿಯಪಡಿಸಿದ.
ನೊಣದ ಬಗೆಗಿನ ಮಹತ್ ಸಂಶೋಧನೆಯಿಂದಾಗಿ,ಪ್ರವಾದಿಯವರ ﷺಹದೀಸ್’ನ ಸತ್ಯದ ಅಧ್ಯಯನದಿಂದಾಗಿ ಕೈರೋಥಮಿಸ್ ಜಗತ್ತಿನ ಮುಂದೆ ದೃಢವಾದ ಪೂರ್ಣ ವಿಶ್ವಾಸದೊಂದಿಗಿನ ಸ್ವರದಲ್ಲಿ ಹೇಳಿದರು,