ಪರಮ ದಯಾಮಯನು ಕರುಣಾನಿಧಿಯೂ ಆದ ಅಲ್ಲಾಃನ ನಾಮದಿಂದ
ದೇವನೊಬ್ಬನೆ ಅಥವ ಮೂವರೇ?
‘ನೈಜ ದೇವನೊಬ್ಬನೆ ಎಂಬ ನಂಬಿಕೆ ಮತ್ತು ಕಲ್ಪನಾ ಭಾವನೆಯೇ ವಿಭಿನ್ನಗೊಂಡಿರುವ ಮಾನವ ಕುಲವನ್ನು ಒಗ್ಗೂಡಿಸುವ ಮಾಧ್ಯಮ’.
`ಓ ಗ್ರಂಥದವರೆ (ಕ್ರೈಸ್ತರೆ) ನಿಮ್ಮ ಧರ್ಮದಲ್ಲಿ ನೀವು ಹದಮೀರ ಬೇಡಿರಿ. ಸತ್ಯದ ಹೊರತು ಇನ್ನೆನನ್ನೂ ಅಲ್ಲಾಹನ ಮೇಲೆ ಹೊರಿಸಬೇಡಿರಿ. ಮರ್ಯಮರ ಪುತ್ರ ಈಸಾಮಸೀಹರು ಅಲ್ಲಾಃನ ಸಂದೇಶವಾಹಕರಾಗಿದ್ದಾರೇ ವಿನಃ ಇನ್ನೇನೂ ಆಗಿರಲಿಲ್ಲ. ಅವರು ಅಲ್ಲಾಹನು ಮರ್ಯಮರ ಕಡೆಗೆ ಕಳುಹಿಸಿದ ಒಂದು ಆಜ್ಞೆ ಆಗಿದ್ದರು ಮತ್ತು ಅಲ್ಲಾನ ಕಡೆಯಿಂದ (ಮರ್ಯಮರ ಗರ್ಭಾಶಯದಲ್ಲಿ ಶಿಶುವಿನ ರೂಪ ಧಾರಣ ಮಾಡಿದ) ಒಂದು ಆತ್ಮವಾಗಿದ್ದರು. ಆದುದರಿಂದ ಅಲ್ಲಾಃ ಮತ್ತು ಸಂದೇಷವಾಹಕರ ಮೇಲೆ ವಿಶ್ವಾಸವಿಡಿರಿ. ಮೂವರಿದ್ದಾರೆನ್ನಬೇಡಿರಿ. ಇದನ್ನು ತೊರೆಯಿರಿ. ಇದು ನಿಮಗೆ ಉತ್ತಮ ಅಲ್ಲಾಹನಂತೂ ಏಕಮಾತ್ರ ಆರಾಧ್ಯನಾಗಿರುವನು. ಅವನಿಗೊಬ್ಬ ಪುತ್ರನಿದ್ದಾನೆನ್ನಲು, ಅವನು ಅದರಿಂದ ಪರಿಶುದ್ಧನಾಗಿರುತ್ತಾನೆ. ಭೂಮಿ ಆಕಾಶಗಳ ಸಕಲ ವಸ್ತುಗಳೂ ಅವನ ಸೊತ್ತು ಮತ್ತು ಅವುಗಳ ಸಂರಕ್ಷಣೆಗೆ ಅಲ್ಲಾಹನೇ ಸಾಕು. ಪವಿತ್ರ ಕುರ್‍ಆನ್ 4 : 171
ಮರ್ಯಮರ ಪುತ್ರ ಮಸೀಹನೇ ಅಲ್ಲಾಹನೆಂದು ಹೇಳಿದವರು ಖಂಡಿತವಾಗಿಯೂ ‘ಸತ್ಯನಿಷೇಧ’ ಕೈಗೊಂಡರು. ಪವಿತ್ರ ಕುರ್‍ಆನ್ 5 : 72
1. ಕ್ರೈಸ್ತರ ನಂಬಿಕೆಗಳಾವುವು ?
ಕ್ರೈಸ್ತರಲ್ಲಿ ವಿವಿಧ ಬಗೆಯ ನಂಬಿಕೆಗಳಿವೆ. ಮುಖ್ಯವಾಗಿ ವಿಶ್ವಕ್ಕೆ 3 ದೇವರುಗಳಿದ್ದಾರೆ ಮತ್ತು ಆ ಮೂವರೂ ಸೇರಿ ಒಬ್ಬ ದೇವನಾಗಿದ್ದಾನೆ. (ತಂದೆ,ಮಗ ಮತ್ತು ಪವಿತ್ರಾತ್ಮ ಅಥವ ಸುತ, ಪಿತ ಮತ್ತು ಪವಿತ್ರಾತ್ಮ) ಇದೇ ತರಹದ ನಂಬಿಕೆ ಎಲ್ಲಾ ಕ್ರೈಸ್ತರಲ್ಲಿ ಪ್ರಚಲಿತವಾಗಿದೆ. ಹಾಗೂ ಒಬ್ಬ ಸಾಮಾನ್ಯ ಕ್ರೈಸ್ತವ್ಯಕ್ತಿಯಿಂದ ಧಾರ್ಮಿಕ ಅರ್ಚಕರವರೆಗೆ ಈ ನಂಬಿಕೆ ಇದೆ. ಹೀಗಾಗಿ ಅಂತಿಮ ಹಂತದಲ್ಲಿ ಅಸಂಖ್ಯಾತ ಒಡಂಬಡಿಕೆಗಳು ಮೂರು ದೇವರು ಇರುವ ಭಾವನೆ ಹೊಂದಿವೆ.
2. ಕ್ರೈಸ್ತ ಪಾದ್ರಿ ಅಥವ ಅರ್ಚಕರ ವಿಷಯವೇನು ?
ಮೂವರು ಒಂದಾಗಿ ದೇವರಾಗಿರುವ ಬಗ್ಗೆ ನಂಬಿಕೆ ಹುಟ್ಟಿಸಲು ರುಜುವಾತು ಮತ್ತು ನಿದರ್ಶನಗಳಿಗಾಗಿ ಧರ್ಮಗುರುಗಳು ತಮ್ಮ ತಮ್ಮ ಅಸಂಖ್ಯಾತ ಪುಸ್ತಕಗಳನ್ನು ಬರೆದಿದ್ದಾರೆ. ಒಬ್ಬ ಸಾಮಾನ್ಯ ವ್ಯಕ್ತಿಯು ತನ್ನ ಜೀವನದಲ್ಲಿ ಬೈಬಲ್ ಹೊರತು ಒಮ್ಮೆ ಇಂತಹಾ ಪಾದ್ರಿಗಳು ಬರೆದಿರುವ ಪುಸ್ತಕಗಳನ್ನು ಮೂರು ರೂಪಗಳು ಏಕದೇವನಲ್ಲಿ ಎಂದು ಅರ್ಥೈಸಿಕೊಳ್ಳಲು ಈ ಗ್ರಂಥಗಳನ್ನು ಓದುತ್ತಾ ಸಾಗಿದರೆ ಈ ಜನ್ಮದ ಆಯುಶ್ಯ ಸಾಲದೇ ಅನೇಕ ಜೀವಾನಾಯುಶ್ಯಗಳು ಬೇಕಾಗಬಹುದು ಅಥವ ಓದಿ ತೃಪ್ತಿಪಡಲು ಅನೇಕ ಜೀವಾನವಶ್ಯಗಳು ಬೇಕಿವೆ.
ಹೀಗಾಗಿ ಈ ಮೂರು ದೇವರುಗಳು ಇರುವಿಕೆಯ ನಂಬಿಕೆಯು ಕೇವಲ ಮಾನವನು ಸ್ವಕಲ್ಪನೆ ಅಥವ ವಿವಿಧ ಲೇಖನ ಕಥೆಗಳ ಸಾರವು ಜನರಲ್ಲಿ ಪ್ರಚಲಿತವಾಗಿದೆಯೇ ಹೊರತು ಸತ್ಯವಾದುದು ವಾಸ್ತವವಾದುದು, ಪ್ರಾಮಾಣಿಕವಾಗಿ ರುಜುವಾಗಿಲ್ಲವೆಂದು ಸ್ಪಷ್ಟವಾಗುತ್ತದೆ.
3. ತ್ರಿದೇವರ ಬಗ್ಗೆ ಮಿಥ್ಯಾಂಶ ಹೇಗೆ ರುಜುವಾಗಿದೆ.
ಬೈಬಲ್‍ನಲ್ಲಿ ಎಲ್ಲೂ ಕನಿಷ್ಟ ಒಂದು ಸಾರಿಯಾದರೂ ತ್ರಿದೇವರುಗಳ ಬಗ್ಗೆ ನಮೂದಿಸಿಯೂ ಇಲ್ಲ. ಕಾಣ ಸಿಗುವುದೂ ಇಲ್ಲ.
ತಮ್ಮ ಜೀವನ ಪರ್ಯಂತ ಯೇಸುಕ್ರಿಸ್ತನಾಗಲಿ ಅವರ ಶಿಷ್ಯಂದಿರಾಗಲೀ ಅಥವ ಸಾಮಾನ್ಯ ಕ್ರೈಸ್ತನಾಗಲಿ ಅಥವ ಬೇರಾವ ಪ್ರವಾದಿಯೂ ಆಗಲಿ ಅವರ ಜೀವಿತಕಾಲದಲ್ಲಿ ಯಾವ ಘಳಿಗೆಂiÀiಲ್ಲೂ ಒಂದು ಬಾರಿಯೂ ಯಾರಿಗೂ ತ್ರಿದೇವರುಗಳ ಬಗ್ಗೆ ಬೋಧಿಸಿಲ್ಲ, ತಿಳಿಸಿಯೂ ಇಲ್ಲ.
ಯೇಸುಕ್ರಿಸ್ತರ ಜೀವನ ಮತ್ತು ಬೋಧನೆಗಳ ಗ್ರಂಥಕರ್ತರಾದ ಮಾಥೊವ್, ಮಾರ್ಕ್ ಲೂಕ್‍ಜಾನ್‍ರು ಎಲ್ಲೂ ತಮ್ಮ ಗ್ರಂಥಗಳಲ್ಲಿ ಶ್ಲೋಕಗಳಲ್ಲಿ, ತ್ರಿದೇವರುಗಳ ಬಗ್ಗೆ ಬರೆದೂ ಇಲ್ಲ, ಹೇಳಿಯೂ ಇಲ್ಲ. ಕಾಲಜ್ಞಾನವೂ ಇಲ್ಲ. ಈ ನಂಬಿಕೆಗಳು ರುಜುವಾಗಿರದೆ ತಪ್ಪು ಕಲ್ಪನೆಗಳಾಗಿವೆ.
ಯೇಸುಕ್ರಿಸ್ತರ 12 ಶಿಷ್ಯಂದಿರಲ್ಲಿ ಅಥವ ಪಾಲ್ ಆಗಲಿ ತನ್ನ 14 ಪತ್ರಗಳಲ್ಲಿ ಈ ತ್ರಿದೇವರುಗಳ ಕುರಿತು ಯಾವೊಂದು ವಿಷಯವನ್ನು ಬೈಬಲ್‍ನಲ್ಲಿ ಹೇಳಿಲ್ಲ.
ಯೇಸುಕ್ರಿಸ್ತರು ನಿದರ್ಶನ ಕೊಡದೇ ಯಾವ ವಿಷಯವನ್ನು ಬೋಧಿಸಿಲ್ಲ. ಆದರೆ ಅವರಿಂದ ಈ ತ್ರಿಮೂರ್ತಿಗಳ ಬಗ್ಗೆ ಉಲ್ಲೇಖಿಸಲ್ಪಟ್ಟಿರುವ ಒಂದು ಸಣ್ಣ ಸಾಮಾನ್ಯ ಉಲ್ಲೇಖವಾಗಲಿ, ಉದಾಹರಣೆಯಾಗಲಿ ಬೈಬಲ್‍ನಲ್ಲಿ ಎಲ್ಲಿಯೂ ಇಲ್ಲ.
ಬೈಬಲ್‍ನಲ್ಲಿ ಸ್ಪಷ್ಟವಾಗಿ ಒಬ್ಬ ದೇವರನ್ನು ನಂಬುವುದರ ಹೊರತು ಅವನಲ್ಲದೆ ಇತರೆ ಯಾವ ದೇವತೆಯನ್ನು ನಂಬುವ ಸಂದರ್ಭ ಅಥವ ಉದಾಹರಣೆ ನಮೂದಿಸಲ್ಪಟ್ಟಿಲ್ಲ. ಯೇಸುಕ್ರಿಸ್ತರು ನಿಜವಾಗಿಯೂ ಒಬ್ಬ ಪ್ರವಾದಿ ಹಾಗೂ ಮೂಲ ಕ್ರೈಸ್ತರು. ಆದರೆ ಇದನ್ನು ಅಲ್ಲಗಳೆದು ಅಥವ ನಿರಾಕರಿಸಿ ತ್ರಿದೇವರಲ್ಲಿ ನಂಬಿಕೆ ಇಡುವ ವಿಷಯವು ಬೈಬಲ್ಲಿನಲ್ಲಿ ಎಲ್ಲಿಯೂ ನಮೂದಿಸಲ್ಪಟ್ಟಿಲ್ಲ.
ಅತ್ಯಂತ ಆಶ್ಚರ್ಯಜನಕ ಅಧ್ಬುತ ವಿಷಯವೆಂದರೆ ಈ ತ್ರಿಮೂರ್ತಿಗಳನ್ನು ನಂಬಿ ಆರಾಧಿಸುವ ಅನುಯಾಯಿಗಳೂ ಸಹ ಈ ತ್ರಿಮೂರ್ತಿ ಎಂಬ ಪದ ಇಡೀ ಬೈಬಲ್‍ನಲ್ಲಿ ಎಲ್ಲಿಯೂ ಕಾಣ ಸಿಗುವುದಿಲ್ಲ ಎಂದು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತಾರೆ.
ಹೀಗೆ ನಿಜವಾಗಿ ಸತ್ಯ ಅರಸುವ ಮತ್ತು ಅಂತರಾಳದಲ್ಲಿ ಆಲೋಚಿಸುವ ಜನರು ಮನದಟ್ಟು ಮಾಡಿಕೊಳ್ಳುವರು. ಈ ತ್ರಿಮೂರ್ತಿಗಳಿರುವ ನಂಬಿಕೆ ಯಾವುದೇ ಆಧಾರರಹಿತವಾಗಿದ್ದು. ರುಜುವಾತಿಲ್ಲದ್ದು. ಯಾರ ಬೋಧನೆಯಲ್ಲಿ ಬಂದಿರದೇ ಇರುವುದು. ಈ ನಂಬಿಕೆ ದೇವವಾಣಿಯಲ್ಲಿ ಬಾರದೇ ಇದ್ದು ಕೇವಲ ಮಿಥ್ಯವಾಗಿದೆ.
4. ಯೇಸುಕ್ರಿಸ್ತರ ಎಚ್ಚರಿಕೆಗಳು :
(ತಿಳಿದುಕೊಳ್ಳಿರಿ) ಮನುಷ್ಯನ ಬಾಯೊಳಕ್ಕೆ ಹೋಗುವಂತಹದ್ದು ಆತನನ್ನು ಕಲುಷಿತಗೊಳಿಸುವುದಿಲ್ಲ. ಮನುಷ್ಯನ ಮನಸ್ಸಿನಿಂದ ಅಥವ ಬಾಯಿಯಿಂದ ಬರುವಂತಹದ್ದೆ ಅಥವ ಹೊರಡುವಂತಹದ್ದೆ ಆತನನ್ನು ಕಲುಷಿತಗೊಳಿಸುತ್ತದೆ.
ಮ್ಯಾಥೋವ್ 15 : 11
ಇನ್ನು ಅವನು ತನ್ನ ತಂದೆಯನ್ನು ಗೌರವಿಸಬೇಕಾಗಿಲ್ಲ ಎಂದು ಬೋಧಿಸುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ಸಲುವಾಗಿ ದೇವರ ವಾಕ್ಯವನ್ನೇ ನಿರರ್ಥಕ ಅಥವ ಕಲುಷಿತ ಮಾಡಿಬಿಟ್ಟೀರಿ ಕಪಟಿಗಳೇ. ಮ್ಯಾಥೋವ್ 15 : 6
5. ಯೇಸುಕ್ರಿಸ್ತರು “ದೇವನು ಒಬ್ಬನೆ ಇದ್ದಾನೆ’’ ಎಂದು ಬೋಧಿಸಿಲ್ಲವೇ? (ಘೋಷಿಸಿಲ್ಲವೆ)
ಯೇಸುಕ್ರಿಸ್ತರು ಆ ವ್ಯಕ್ತಿಗೆ ಪ್ರಶ್ನಿಸಿದರು “ನೀನು ನನ್ನನ್ನೇಕೆ ಸರ್ವಶ್ರೇಷ್ಟರು ಎಂದು ಕರೆಯುವಿರಿ’’ ಆದರೆ ಲೋಕಕ್ಕೆಲ್ಲಾ ಇರುವ ದೇವರು ಒಬ್ಬನೇ ಸರ್ವಶ್ರೇಷ್ಟನು ಎಂದು ಘೋಷಿಸಿದರು. ಲೂಕ 18 : 19
ನಿಮ್ಮೆಲ್ಲರಿಗೂ ಸ್ವರ್ಗದಲ್ಲಿರುವ ತಂದೆಯಾದ ದೇವರು ಒಬ್ಬನೆ ಮ್ಯಾಥೊವ್ 23 : 9
ವಿಶ್ವಕ್ಕೆಲ್ಲಾ ಇರುವ ಶ್ರೇಷ್ಟದೇವರು ಒಬ್ಬನೆ. ಈ ಜೀವನದಲ್ಲಿ ಆತನ ಆಜ್ಞೆಯನ್ನು ಪರಿಪೂರ್ಣವಾಗಿ ಪಾಲಿಸಿದರೆ ಸ್ವರ್ಗ ಜೀವನವನ್ನು (ಅಂತ್ಯದಿನದಂದು) ಪಡೆಯಬಹುದು. ಮ್ಯಾಥೋವ 19 : 17
6. ದೇವರು ಒಬ್ಬನೆ ಎಂದು ಮತ್ತು ಯೇಸು ಅಥವ ಜೀಸಸ್‍ರವರು ಪ್ರವಾದಿ ಎಂದು ನಂಬಿದರೆ ಸಿಗುವ ಪ್ರತಿಫಲ.
ನಾನು ಸತ್ಯವಾಗಿ ಸುಸ್ಪಷ್ಟಪಡಿಸುತ್ತೇನೆ. ಯಾರು ನನ್ನ ಮಾತನ್ನು ಆಲಿಸಿ ಧೃಡವಾಗಿ ನಂಬುವರೊ ಅವರು ಖಂಡಿತವಾಗಿಯೂ ನನ್ನನ್ನು ಕಳುಹಿಸಿದ ಆತನಿಂದ ಶಾಶ್ವತ (ಅಮರ) ಜೀವನ ಪಡೆಯುವರು. ಜಾನ್: 5:24.
ಅಮರ ಜೀವನವೆಂದರೆ ನಿಮ್ಮನ್ನು ಅರೆಯುವುದು, ದೇವನೊಬ್ಬನೆ ಅದು ಸತ್ಯ, ಯೇಸುಕ್ರಿಸ್ತನೆ (ಪ್ರವಾದಿಯಾಗಿ) ಆತನಿಂದ ಸೃಷ್ಟಿಯಾಗಿವೆ ಎಂದು. ಜಾನ್: 17:3
ಹೀಗೆ ಬೈಬಲ್‍ನಲ್ಲಿ ಅಸಂಖ್ಯಾತ ಉಲ್ಲೇಖಗಳನ್ನು ನೇರವಾಗಿ ಯೇಸುಕ್ರಿಸ್ತರೇ ಹೇಳಿರುವಂತೆ ದೇವನೊಬ್ಬನೆ ಎಂಬ ಆಧಾರಗಳು ಸಿಗುತ್ತವೆ. ದೇವರೊಬ್ಬನೆ ಯೇಸು ಆತನ ಪ್ರವಾದಿ ಎಂಬುದರಲ್ಲಿ ಸಂಶಯವೇ ಇಲ್ಲ.
7. ತ್ರಿಮೂರ್ತಿದೇವರುಗಳನ್ನು ನಂಬುವುದರ ಫಲಿತಾಂಶ.
1. ಬೈಬಲ್ ಸ್ಪಷ್ಟಪಡಿಸುವಂತೆ, ವಿಶ್ವದ ಏಕ ದೇವನ ಜೊತೆಗೆ ಅವನ ಸ್ಥಾನಕ್ಕೆ ಇತರೆ ಅಂಶವನ್ನು ಸೇರಿಸುವುದರಿಂದ, ಘನರೋಗಕ್ಕೆ ತುತ್ತಾಗುವರೆಂಬ ವರ್ಣನೆ ಇದರಲ್ಲಿದೆ. ರೆವಲೂಷನ್ 22 : 18
2. ಧಾರ್ಮಿಕ ನಂಬಿಕೆಗೆ ಆಧಾರವಿಲ್ಲದ ಯಾವ ಅಂಶವೇ ಆಗಲಿ ಅದು ಪಾಪ, ರೊಮಾನ್ಸ್ 14 : 23
ಈ ಮೇಲಿನ ಉಲ್ಲೇಖಗಳ ಪ್ರಕಾರ ಬೈಬಲ್ ಗ್ರಂಥವು ಹೀಗೆಯೇ ಎಚ್ಚರಿಸುತ್ತದೆ. ಧರ್ಮಶಾಸ್ತ್ರಗಳಲ್ಲಿ ಹುಸಿ ನಂಬಿಕೆ ಕೃತಕ ಅಂಶಗಳನ್ನು ಸೇರಿಸುವುದರಿಂದ. ಉದಾಹರಣೆಗೆ: ತ್ರಿದೇವತೆಗಳ ಇರುವಿಕೆ ಇತ್ಯಾದಿ. ಅವರನ್ನು ಮಹಾ ಪ್ರಕೋಪಕ್ಕೆ ತಳ್ಳುವುದಲ್ಲದೆ ಸಾಮಾಜಿಕ ಮತ್ತು ಧಾರ್ಮಿಕ ಖಾಯಿಲೆಗಳಿಗೆ ಎಡೆ ಮಾಡಿದಂತಾಗುತ್ತದೆ. ಇದಕ್ಕೆ ಖಂಡಿತ ದುರ್ಮರಣವೇ ಶಿಕ್ಷೆಯಾಗುತ್ತದೆ.
8. ವಾಸ್ತವಿಕವಾಗಿ ದೇವನಿರುವುದು ಒಬ್ಬನೊ ಅಥವ ಮೂವರೊ ಎಂಬುದರ ನಿರ್ಣಯ.
ಯಹೋವ ಹೇಳಿದರು. `ಕೇವಲ ನಾನೊಬ್ಬನೆ ಸೃಷ್ಟಿಕರ್ತ ನಿಮ್ಮನ್ನು ಸೃಷ್ಟಿಸಿದವನು ಭೂಮಿ ಆಕಾಶಗಳನ್ನು ಸವಿಸ್ತಾರವಾಗಿ ವಿಸ್ತರಿಸಿರುವನು ನಾನೊಬ್ಬನೆ ನನ್ನ ಹೊರತು ಬೇರೊಬ್ಬನಿಲ್ಲ’ ಐಸಾಯ. 44:24
ಯೇಸುಕ್ರಿಸ್ತನ ಸಂದೇಶ : ಆ ದೇವನಲ್ಲದೆ ಅನ್ಯದೇವನಿಲ್ಲ ಅವನೇ ಸರ್ವಶ್ರೇಷ್ಟ ಏಕೈಕನು. ಮಾರ್ಕ್ 10:18
ಜೇಮ್ಸರವರ ಸಾಕ್ಷಿ : ವಿಶ್ವಕ್ಕೆಲ್ಲಾ ದೇವನಿರುವುದು ಒಬ್ಬನೇ, ಸರ್ವಶ್ರೇಷ್ಟ ನಾದ ಅವನ ಹೊರತು ಬೇರಿಲ್ಲ. ಭೂತ ಪ್ರೇತಗಳು ಸಹ ಇದನ್ನು ನಂಬಿ ಭಯ ದಿಂದ ಅದರುತ್ತವೆ ಅಥವ ನಡುಗುತ್ತವೆ. ಜೇಮ್ಸ್ 2 : 19
ಪಾಲ್‍ನ ಸಾಕ್ಷಿ : ಆ ದೇವನಿರುವವನು ಒಬ್ಬನೇ ತಿಮೋಥಿ 2:5.
ವಿಶ್ವಕ್ಕೆಲ್ಲಾ ದೇವರು ಒಬ್ಬನೇ ಎಲ್ಲಾ ಮಾನವಕೋಟಿಗೂ ತಂದೆ ಸಕಲಜೀವ ಸೃಷ್ಟಿಗಳಿಗೆ ಆತನೇ ಒಡೆಯ. ಇಠಿhesiಚಿಟಿs 4 : 5-7