ಜೀವನ ಘಟ್ಟದ ಪಯಣವೆತ್ತ ?
• ನಮ್ಮ ಜೀವನದ ಉದ್ದೇಶವೇನು?
ಈ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಾ ಇತರರ ಅನಿಸಿಕೆಗನ್ನು ಕೇಳುತ್ತಾ ಹೊದಂತೆ, ನಾವು ಚೆನ್ನಾಗಿ ಬದುಕಬೇಕು. ತಂದೆ ತಾಯಿಗಳ ಸೇವೆ ಮಾಡಿ ಚನ್ನಾಗಿ ನೊಡಿಕೊಳ್ಳಬೇಕು. ಜೀವನದಲ್ಲಿ ಒಂದು ಸಾಧನೆ ಮಾಡಬೇಕು .ಇತರರಿಗೆ ಒಳಿತು ಮಾಡಬೇಕು .ಬೇರೆಯವರಿಗೆ ತೊಂದರೆಯಾಗದ ಹಾಗೆ ಬದುಕಬೇಕು.ಹಣವಂತ, ಗುಣವಂತನಾಗಬೇಕು.ಗುರಿ ಸಾಧಿಸಬೇಕು. ಪದವಿ, ಕೆಲಸ ಪಡೆಯಬೇಕು .ವ್ಯಾಪಾರ ಅಭಿವೃದ್ಧಿ ಮಾಡಬೇಕು.ರಾಜಕೀಯ ಮಾಡಬೇಕು. ಹೀಗೆ ಮುಂತಾದ ಉತ್ತರಗಳು ದೊರೆಯುತ್ತವೆ. ಮುಖ್ಯವಾಗಿ ಈ ಎಲ್ಲಾ ಉತ್ತರಗಳ ಹಿಂದೆ ಒಂದು ಮುಖ್ಯವಾದ ಉದ್ದೇಶ ಹೊಟ್ಟೆ ಪಾಡಿನದ್ದಾಗಿದ್ದು ಪ್ರತಿಯೊಬ್ಬರು ಇದನ್ನು ಮುಂದಿಟ್ಟುಕೊಂಡೆ ತಮ್ಮ ಉದ್ದೇಶಗಳನ್ನು ನಿರ್ಣಯಿಸಿಕೊಳ್ಳುತ್ತಾರೆ. ನಮ್ಮ ಪ್ರಶ್ನೆಯ ಉದ್ದೇಶ ಈ ಉತ್ತರಗಳನ್ನು ಪಡೆಯುವುದಲ್ಲ, ಮುಖ್ಯವಾಗಿ ನಮ್ಮ ಜೀವನದ 3 ಘಟ್ಟಗಳಿವೆ.
1) ತಾಯಿಯ ಹೊಟ್ಟೆಯಲ್ಲಿ ಗರ್ಭದೊಳಗಿನ 9 ತಿಂಗಳ ಕಾಲದ ಘಟ್ಟ
ಸಹೊದರ ಸಹೊದರಿಯರೆ, ಭೂಮಿಯ ಮೇಲಿರುವ ಈ ನಮ್ಮ ಜೀವನಕ್ಕೂ, ತಾಯಿ ಗರ್ಭದಲ್ಲಿ ಬೇಳೆದ ಆ ಜೀವನವು ಭಿನ್ನವಾಗಿತ್ತು. ಅಲ್ಲಿ ನಮಗೆ ಶಕ್ತಿ ಇರಲಿಲ್ಲ, ಬಾಯಿಯಿಂದ ಊಟ ಮಾಡಲಿಲ್ಲ, ಮೂಗಿನಿಂದ ಉಸಿರಾಡಲಿಲ್ಲ, ಮಲ ಮೂತ್ರವಿರಲಿಲ್ಲ, ಹೊರಗೆ ಬರಲು ದಾರಿಯೂ ಇರಲಿಲ್ಲ, ಯಾವ ಅಂಗಗಳು ಹೇಗಿವೆ ಎಂಬುದು ಹೊರಗಿನವರಿಗೆ ಕಾಣಲಿಲ್ಲ, ಆದರೂ ಆ ಜೀವನದಲ್ಲಿ ನಮ್ಮ ದೇಹದ ಅಂಗಾಂಗಗಳು ಹಂತಹಂತವಾಗಿ ಸಂಪೂರ್ಣವಾಗಿ ವೃದ್ಧಿಯಾದವು. ಉದಾ:- ಕಣ್ಣು, ಕಿವಿ, ಮೂಗು, ರಕ್ತಕಣಗಳು, ಮೆದುಳು, ಮುಂತಾದವು. ಇವೆಲ್ಲವು ಗರ್ಭದ ಜೀವನದಲ್ಲಿ ವೃದ್ಧಿಯಾದರೂ ಅಲ್ಲಿ ಇವುಗಳನ್ನು ಬಳಸಲಾಗಲಿಲ್ಲ.
2) ಜನನ ನಂತರದ ಘಟ್ಟ
ಗರ್ಭದ ಜೀವನದ ಅವಧಿಯನಂತರ ಈ ಪ್ರಪಂಚದ ಜೀವನ ಆರಂಭವಾಯಿತು, ಇಲ್ಲಿ ನಮಗೆ ಗಾಳಿ, ನೀರು, ಆಹಾರ, ನಮ್ಮ ಶರೀರಕ್ಕೆ ತಕ್ಕ ಹವಾಗುಣ, ತಂದೆ-ತಾಯಿ ಹೃದಯದಲ್ಲಿ ಅನುಕಂಪ, ಮುಂತಾದ ಎನೆಲ್ಲಾ ಲಕ್ಷಾಂತರ ಅವಶ್ಯಕತೆಗಳು ಬೇಕಿತ್ತೊ ಅದೆಲ್ಲವನ್ನು ದೇವನು ನಮಗಾಗಿ ಮೊದಲೆ ಸಿದ್ಧಮಾಡಿ ಇಟ್ಟಿದ್ದಾನೆ. ಮೊದಮೊದಲು ನಾವು ಸ್ವಲ್ಪ ಹಾಲನ್ನು ಕುಡಿದು ಬೆಳೆದೆವು, ನಂತರ ಇತರೇ ಆಹಾವನ್ನು ತಿಂದು ಪ್ರಾಕ್ಕೆ ಬಂದೆವು, ಪ್ರಾಯದ ನಂತರ ಎಂತಹದೇ ಪೌಷ್ಠಿಕ ಆಹಾರ ತಿಂದರೂ ವಯಸ್ಸಾದಂತೆ ದೇಹ ಕ್ಷೀಣಿಸುತ್ತಾ ಹೊಗಿ ಒಂದುದಿನ ನಾಶವಾಗುವೆವು. ಮನುಷ್ಯನು ತಾನೊಬ್ಬ ಶ್ರಮ ಜೀವಿಯಾಗಿದ್ದು ಶ್ರಮಪಟ್ಟು ಜೀವನ ಸಾಗಿಸಬೇಕಾಗಿದೆ ನಿಜ, ಆದರೆ ಮನುಷ್ಯನು ಜೀವನ ಸಾಗಿಸಲು ಶ್ರಮಪಡಬೇಕಾದುದೇ ಮುಖ್ಯ ಉದ್ದೇಶವೆಂದು ತಿಳಿದು ಕೊಂಡಿದ್ದಾನೆ. ಆದರೆ ನಿಜವಾದ ಸ್ಥಿತಿ ಹಾಗಿಲ್ಲ, ದೇವನು ಯಾರಿಗೆ ಎಷ್ಟು ಶಕ್ತಿ ನೀಡಿರುವನೋ ಅವರಿಗೆ ಅಷ್ಟೇ ಹೊಣೆಗಾರಿಕೆಯನ್ನು ನೀಡಿದ್ದಾನೆ. ಉದಾಹರಣೆಗೆ ಒಂದು ಪಕ್ಷಿ ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡಿದ ನಂತರ ಮರಿಗಳಿಗೆ ಅದರ ತಾಯಿಯ ಬಳಿ ಹಾಲಿನ ವ್ಯವಸ್ಥೆ ಇರುವುದಿಲ್ಲ, ಅದು ತಾನು ತಿನ್ನುವ ಕಾಳು, ಹುಳ-ಹುಪ್ಪಟೆಯನ್ನೇ ತಂದು ಮರಿಗಳ ಬಾಯಿಗೆ ಹಾಕುತ್ತದೆ ಅಷ್ಟೆ, ಮರಿಗಳಿಗೆ ಬಾಯಿ ತೆರೆಯುವ ಶಕ್ತಿ, ಆ ಕಾಳು ಹುಳ-ಹುಪ್ಪಟೆಯನ್ನು ಜೀರ್ಣಮಾಡುವ ಶಕ್ತಿಯನ್ನು ಕೊಟ್ಟು ದೇವನು ಆ ಮರಿಗಳಿಗೆ ಸಹಕರಿಸುತ್ತಾನೆ.
ಒಂದು ಜಿಂಕೆಗೆ ಹಾಲಿದೆ, ಮರಿಹಾಕಿದ ನಂತರ ಅದಕ್ಕೆ ಮಡಿಲಲ್ಲೇತ್ತುಕೊಂಡು ಹಾಲುಣಿಸುವ ಸಾಮಥ್ರ್ಯವಿಲ್ಲ, ಅದೇತಾನೆ ಹುಟ್ಟಿದ ಮರಿಯ ಕಾಲುಗಳಲ್ಲಿ ಎದ್ದು ನಿಲ್ಲುವ ಶಕ್ತಿ, ಕೆಚ್ಚಲನ್ನು ಗುರುತಿಸಿ ಹಾಲು ಕುಡಿಯುವ ಸಾಮಥ್ರ್ಯವನ್ನು ಕೊಟ್ಟು ದೇವನು ಇದಕ್ಕೆ ಸ್ವತಃ ಸಹಕರಿಸುತ್ತಾನೆ. ಆದರೆ ಮನುಷ್ಯನ ಮಗುವು ಎಲ್ಲಾ ಪ್ರಾಣಿಗಳ ಮಗುವಿಗಿಂತಲೂ ಬಲಹೀನವಾಗಿರುತ್ತದೆ, ಅದಕ್ಕೆ ನಾವುತಿನ್ನುವ ಆಹಾರ ಕುಡಿಯುವ ನೀರು ಕೊಟ್ಟರೆ ಗುಬ್ಬಿ ಮರಿಯಂತೆ ಜೀರ್ಣಿಸಿಕೊಳ್ಳುವ ಶಕ್ತಿಯೂ ಇರುವುದಿಲ್ಲ, ಹೊಗಲಿ ಹಾಲು ಸಿಗುತ್ತದೆ ಎಂದಾದರೆ ಜಿಂಕೆಮರಿಯಂತೆ ಎದ್ದು ಕುಡಿಯುವ ಶಕ್ತಿಯೂ ಇದಕ್ಕಿಲ್ಲ, ಹುಟ್ಟಿದ ಮಗುವು ಇವೆರಡಕ್ಕಿಂತ ದುರ್ಬಲವಾಗಿರುತ್ತದೆ. ತನ್ನ ಯಾವುದೇ ಕೆಲಸಗಳನ್ನು ಮಾಡಿಕೊಳ್ಳಲು ಅಸಮರ್ಥವಾಗಿರುತ್ತದೆ. ಆದರೆ ಮಗುವಿನ ತಂದೆ-ತಾಯಿಯರಲ್ಲಿ ಎಲ್ಲಾ ಪ್ರಾಂಣಿಗಳಿಗಿಂತ ಹೆಚ್ಚು ಬುದ್ಧಿ ಶಕ್ತಿ ಸಾಮಥ್ರ್ಯಗಳನ್ನು ಕೊಟ್ಟು, ಪೋಶಣೆಯ ಎಲ್ಲಾ ಹೊಣೆಗಾರಿಕೆಯನ್ನು ಅವರ ಮೇಲೆ ಹಾಕಿದ್ದಾನೆ. ಇವರ ಮೂಲಕ ಮನುಷ್ಯನು ಬೆಳೆಯುತ್ತಾನೆ. ಈ ಜೀವನದಲ್ಲಿ ಇದಕ್ಕಾಗಿ ಅವನು ಶ್ರಮಪಡಬೇಕಾಗಿದೆ, ಆದರೆ ಕೆವಲ ಜೀವನಕ್ಕಾಗಿಯೇ ಶ್ರಮಪಡುವುದು ನಮ್ಮ ಜೀವನದ ಮುಖ್ಯ ಉದ್ದೇಶವಲ್ಲ. ನಮಗೆ ದೇವನು ಕೊಟ್ಟಿರುವ ತಲೆಕೂದಲಿನಿಂದ ಕಾಲುಗುರಿನ ತನಕವಿರುವ ಎಲ್ಲಾ ಅಂಗಾಂಗಗಳನ್ನು ನಾವು ಒಳ್ಳೆಯ ಕೆಲಸಕ್ಕಾಗಲಿ ಕೆಟ್ಟ ಕೆಲಸಕ್ಕಾಗಲಿ ಬಳಸಿಕೊಳ್ಳುತ್ತಿದ್ದೆವೆ. ಆದರೆ ಅದರ ಪ್ರತಿಫಲ ನಮಗೆ ಇಲ್ಲಿ ಸಿಗುತ್ತಿಲ್ಲ. ನಾವು ಸಂಪಾದಿಸಿದ ಎಲ್ಲಾ ಭೌತಿಕ ಸಂಪತ್ತನ್ನು ದೇಹವನ್ನು ಇಲ್ಲೆ ಬಿಟ್ಟು 3 ನೇ ಘಟ್ಟಕ್ಕೆ ಹೊಗುವೆವು.
3) ಮರಣ ನಂತರದ ಘಟ್ಟ
ನಾವೆಲ್ಲರೂ ಈ ಹಿಂದಿನ ಎರಡೂ ಘಟ್ಟಗಳನ್ನು ನೋಡಿದ್ದೇವೆ. ಅದಕ್ಕೆ ಇದನ್ನು ನಂಬುತ್ತೇವೆ, ಮೂರನೇ ಘಟ್ಟವನ್ನು ನಾವಿನ್ನೂ ನೊಡಿಲ್ಲ ನಮಗೆ ಈ ಲೋಕಕ್ಕೆ ಯಾರು ಕಳುಹಿಸಿದನು? ಏಕೆ ಕಳುಹಿಸಿದನು? ಮುಂದೇನಾಗುತ್ತದೆ? ಅವನೇನು ಬಯಸುತ್ತಾನೆ? ಅದರ ಬಗ್ಗೆ ತಿಳಿಯಲು ನಮಗೆ ಜ್ಞಾನವಿಲ್ಲ, ಅದನ್ನು ತಿಳಿಯಲು ನಮ್ಮ ಬಳಿ ಮಾರ್ಗವಿಲ್ಲ, ಅದ್ದರಿಂದ ಮನುಷ್ಯನು ಇಲ್ಲಿ ಬಹಳ ಗೊಂದಲದಲ್ಲಿದ್ದಾನೆ, ಆದ್ದರಿಂದ ಮನುಷ್ಯನು ಇಲ್ಲಿ ಒಂದು ಕ್ಷುಲ್ಲಕ ವಿಷಯಕ್ಕೂ ಬಹಳ ಗಂಭೀರವಾಗಿ ಯೋಚಿಸುತ್ತಾನೆ. ಉದಾಹರಣೆಗೆ; ಮನುಷ್ಯನು ಮಾರುಕಟ್ಟೆಗೆ ಹೋಗಿ ಅವಶ್ಯವಿರುವ ತರಕಾರಿಗಳನ್ನು ಕೊಳ್ಳುತ್ತಾನೆ, ಅದರ ಜೊತೆಗೆ ಒಂದೊ ಎರಡೊ ರೂಪಾಯಿಯ ಕರಿಬೇವು ಸೊಪ್ಪನ್ನೂ ಸಹ ಕೊಂಡುತರುತ್ತಾನೆ, ತಂದಿರುವುದರಲ್ಲಿ ಒಂದು ಕಡ್ಡಿಯ ಕೆಲವು ಎಲೆಗಳನ್ನು ಒಗ್ಗರಣೆಗೆ ಬಳಸುತ್ತಾನೆ, ತಿನ್ನುವಾಗ ಎಲೆಗಳನ್ನು ಪಕ್ಕಕ್ಕೆ ಅಥವ ಬದಿಗಿಡುತ್ತಾನೆ, ಇಲ್ಲಿ ಗಮನಿಸ ಬೇಕಾದುದೆನೆಂದರೆ, ಕೇವಲ ಬದಿಗಿರಿಸಲು ತಾನೆ ಎಂದು ಸರಳವಾಗಿ ಕೊಂಡುತರುವುದಿಲ್ಲ. ಕೊಳ್ಳುವಾಗ ಅದರ ತಾಜಾತನ ಪರಿಶಿಲಿಸುತ್ತಾನೆ, ಬಾಡಿದೆಯೋ, ಹುಳುಕಾಗಿದೆಯೋ, ಹಳಕಾಗಿದೆಯೋ, ನಾಟಿಯೋ, ಫಾರಮ್‍ತಳಿಯೋ, ವಾಸನೆಯಿದೆಯೋ ಇಲ್ಲವೋ, ತೀರಾ ಎಳೇಯದೋ, ತೀರಾ ಬಲಿತಿರುವುದೋ, ಎಂಬ ವಿಷಯಗಳನ್ನು ಮುಂದಿಟ್ಟುಕೊಂಡು ಪರಿಶೀಲನೆ ಮಾಡಿ ಕೊಳ್ಳುತ್ತಾನೆ. ಲೌಕಿಕ ವಿಷಯದಲ್ಲಿ ಮನುಷ್ಯ ಹೀಗೆ ನಡೆಯುತ್ತಾನೆ, ಆದರೆ ಆಧ್ಯಾತ್ಮಿಕ ವಿಷಯದಲ್ಲಿ ಯಾವುದೇ ರೀತಿಯ ವಿಚಾರ ವಿಮರ್ಶೆ ಶೋಧನೆಯನ್ನು ಮಾಡುವುದಿಲ್ಲ. ಉದಾಹರಣೆಗೆ; ಮನುಷ್ಯರಲ್ಲಿ ಕಲ್ಲನ್ನು,ಮರವನ್ನು, ಪ್ರಾಣಿಯನ್ನು, ಮಹಾಪುರುಷರನ್ನು,ಘೋರಿಯನ್ನು, ಸತ್ತ ಮನುಷ್ಯರನ್ನು, ಸೂರ್ಯ, ಚಂದ್ರ, ನಕ್ಷತ್ರಗಳನ್ನು ಹಾಗೂ ಇತರೆ ವಸ್ತುಗಳನ್ನು ದೇವರೆಂದು ನಂಬುವವರೂ ಇದ್ದಾರೆ. ದೇವರು ಒಬ್ಬನೇ ಎಂದರೂ, ಮೂವರು ಎಂದರೂ, ಮುನ್ನೂರೆಂದರೂ, ಮುಕ್ಕೋಟಿ ಎಂದರೂ ಕೊನೆಗೆ ದೇವನೇ ಇಲ್ಲವೆಂದರೂ ನಂಬುವವರಿದ್ದಾರೆ. ಹೀಗೆ ಇದಕ್ಕೆ ಕಾರಣವೆನೆಂದರೆ, ಮನುಷ್ಯನಿಗೆ ಜ್ಞಾನ ಸಂಪಾದನೆಗೆ ಎರಡು ಮಾರ್ಗಗಳಿವೆ, 1, ಪಂಚೇಂದ್ರಿಯ. 2, ಜ್ಞಾನೇಂದ್ರಿಯ(ಬುದ್ಧಿ). ಪ್ರತಿಯೊಂದು ಇಂದ್ರಿಯಗಳೂ ತಮ್ಮ ಸೀಮೆಯಲ್ಲಿ ತಮ್ಮದೇ ಆದ ಕಾರ್ಯಗಳನ್ನು ನಿರ್ವಹಿಸುತ್ತಿವೆ, ಯಾವುದೂ ಕೂಡಾ ಒಂದು ಮಾಡುವ ಕೆಲಸವನ್ನು ಇನ್ನೊಂದು ಮಾಡುವುದಿಲ್ಲ. ಹಾಗೆಯೇ ಬುದ್ಧಿ ಪಂಚೇಂದ್ರಿಯಗಳ ಕೆಲಸ ಮಾಡುವುದಿಲ್ಲ. ಆದರೂ ಇವುಗಳ ಸಹಾಯದಿಂದಲೇ ಮನುಷ್ಯನು ಪ್ರಪಂಚದಲ್ಲಿ ಇಂದು ಇಷ್ಟು ಮುಂದುವರೆದಿದ್ದಾನೆ, ಎಕೆಂದರೆ ದೇವನು ಲೌಕಿಕ ಜ್ಞಾನವನ್ನು ಮನುಷ್ಯನ ಸ್ವಭಾವದಲ್ಲಿಟ್ಟಿದ್ದಾನೆ. ಆತನು ಎಷ್ಟು ಪ್ರಯತ್ನಿಸುವನೋ ಆತನಿಗೆ ಅಷ್ಟು ಲಭಿಸಲಿದೆ. ಆದರೆ ಆಧ್ಯಾತ್ಮಿಕ ಜ್ಞಾನವನ್ನು ಮನುಷ್ಯನ ಸ್ವಭಾವದಲ್ಲಿಟ್ಟಿಲ್ಲ. ದೇವನು ದೇಳುವನು,
“ದೇವನು ಆದಮರಿಗೆ ಎಲ್ಲಾ ವಸ್ತುಗಳ ಹೆಸರುಗಳನ್ನು ಕಲಿಸಿದನು” ಖುರ್‍ಆನ್ 2:31.
ಅಂದರೆ, ಒಂದು ವಸ್ತುವಿನ ಹೆಸರು ಬಾಹ್ಯ ಹಾಗೂ ಆಂತರಿಕ ರಚನೆಯನ್ನು ಸೂಚಿಸುತ್ತದೆ.
ಇನ್ನು ಆಧ್ಯಾತ್ಮಿಕ ಜ್ಞಾನ ಇವನ ಸ್ವಭಾವದಲ್ಲಿ ಇಲ್ಲ, ಧರ್ಮದ ವಿಷಯದಲ್ಲಿ, ದೇವರು, ಆತ್ಮ, ಪರಲೋಕ, ಪಾಪ, ಪುಣ್ಯ, ನರಕ, ಸ್ವರ್ಗ, ಪ್ರತಿಫಲಗಳ ಬಗ್ಗೆ ಚರ್ಚೆ ನಡೆಯುತ್ತದೆ. ಮನುಷ್ಯನು ಕೇವಲ ತನ್ನ ಬುದ್ಧಿಯಿಂದ ಇದಕ್ಕೆ ಉತ್ತರಗಳನ್ನು ಹುಡುಕಿ ಗುರಿತಲುಪಲು ಸಾಧ್ಯವಿಲ್ಲ. ಆದರೆ ದೇವನು ಇದಕ್ಕೆ ಬೇರೆ ಮಾರ್ಗವನ್ನು ತೋರಿದ್ದಾನೆ, ಅವನು ಮನುಷ್ಯರಲ್ಲೇ ಸಂದೇಶವಾಹಕರ ಅಥವ ಪೈಗಂಬರರ ಮೂಲಕ ದೈವವಾಣಿಯನ್ನು ಕಳುಹಿಸಿ ತನ್ನ ಸಂದೇಶವನ್ನು ತಲುಪಿಸಿದನು. ಪ್ರಥಮ ಮಾನವನನ್ನು ಕುರಿತು ದೇವನು ಹೇಳಿದನು
“ ನಾವು ಹೇಳಿದೆವು ನೀವು ಇಲ್ಲಿಂದ ಕೆಳಗಿಳಿಯಿರಿ. ಮುಂದೆ ನನ್ನ ಕಡೆಯಿಂದ ನಿಮಗೆ ಮಾರ್ಗದರ್ಶನ ಬಂದರೆ ಅದನ್ನು ಅನುಸರಿಸುವವರಾರೋ ಅವರಿಗೆ ಯಾವೊಂದು ಭಯವೂ ಇರಲಾರದು, ವ್ಯಸನವೂ ಇರಲಾರದು”.
“ಇನ್ನು ಸತ್ಯ ನಿಷೇಧಕರ ಮತ್ತು ನಮ್ಮ ದೃಷ್ಟಾಂತಗಳನ್ನು ನಿರಾಕರಿಸಿದವರು ಅವರೇ ನರಕದವರು ಅದರಲ್ಲಿ ಅವರು ಸ್ಥಿರ ನಿವಾಸಿಗಳು” ಖುರ್‍ಆನ್ 2:38,39.
ಈ ರೀತಿಯಾಗಿ ಇದರ ತಾತ್ಪರ್ಯವೇನೆಂದರೆ? ಮನುಷ್ಯನ ಸೃಷ್ಠಿಯ ಉದ್ದೇಶವೇ ಪರೀಕ್ಷೆಯಾಗಿದೆ. ಇದರ ವಿವರ ಖುರ್‍ಆನಿನಲ್ಲಿ ದೇವನು ಹೇಳುವನು,
“ನಿಮ್ಮಲ್ಲಿ ಉತ್ತಮ ಕರ್ಮವೆಸಗುವವರು ಯಾರೆಂದು ಪರೀಕ್ಷಿಸುವ ಸಲುವಾಗಿ ಅವನು ಮರಣ ಜೀವನವನ್ನು ಸೃಷ್ಠಿಸಿರುವನು, ಅವನು ಪ್ರತಾಪಶಾಲಿಯೂ ಅತ್ಯಧಿಕ ಕ್ಷಮಿಸುವವನೂ ಆಗಿರುವನು.” ಖುರ್‍ಆನ್ 67:2.
“ನಿಸ್ಸಂಶವಾಗಿಯೂ ನಾವು ಮಾನವನನ್ನು ಪರಿಕ್ಷಿಸಲಿಕ್ಕಾಗಿ ಸಮ್ಮಿಶ್ರ ವೀರ್ಯದಿಂದ ಸೃಷ್ಠಿಸಿದೆವು ಮತ್ತು ಅವನ್ನನ್ನು ಆಲಿಸುವವನಾಗಿಯೂ ನೋಡುವವನಾಗಿಯೂ ಮಾಡಿದೆವು.”
“ನಾವು ಅವನಿಗೆ ಮಾರ್ಗದರ್ಶನ ಮಾಡಿದೆವು, ಇನ್ನು ಅವನು ಕೃತಜ್ಞನಾಗಲಿ ಇಲ್ಲವೇ ಕೃತಘ್ನನಾಗಲಿ” ಖುರ್‍ಆನ್ 76:2.3.
ಮನುಷ್ಯ ಈ ಜೀವನವು ಕರ್ಮಗಳನ್ನು ಮಾಡುವ ಅವಧಿಯಾಗಿದೆಯೇ ಹೊರತು, ಇದು ಭೋಗ ಕಾಲವಲ್ಲ. ಅವನಿಲ್ಲಿ ಎಸಗಿದ ಕರ್ಮಗಳ ಪ್ರತಿಫಲ ಪರಲೋಕದಲ್ಲಿ ಲಭೀಸಲಿದೆ. ಪ್ರಾಣಿಗಳಿಗೂ ಮನುಷ್ಯನಿಗೂ ವ್ಯತ್ಯಾಸವಿದೆ, ಪ್ರಾಣಿಗಳು ಒಂದೇ ಸ್ವಭಾವದಲ್ಲಿ ಹುಟ್ಟುತ್ತವೆ. ಅವುಗಳಿಗೆ ತಿನ್ನುವ ಆಹಾರ, ಸುರಕ್ಷತೆಯ ಒಂದು ಜಾಗ, ಅವುಗಳ ಸಂತಾನ ಮುಂದುವರೆಯಬೇಕು, ಇದಿಷ್ಟರ ಹೊರತು ಅವುಗಳು ಇನ್ನೆನನ್ನೂ ಬಯಸುವುದಿಲ್ಲ. ಆದರೆ ಮನುಷ್ಯನ ಆಸೆಗೆ ಕೊನೆಯೇ ಇಲ್ಲ, ಅದು ಮಗಿಲು ಮುಟ್ಟುತ್ತದೆ. ಇದರ ಈಡೇರಿಕೆಗಾಗಿ ಅವನು ಪುಣ್ಯಗಳನ್ನು ಮಾಡುತ್ತಾನೆ, ಪಾಪಗಳನ್ನು ಮಾಡುತ್ತಾನೆ, ಮುಂದೆ ಶೈತಾನನ ಹಾದಿಯನ್ನು ತುಳಿದು ಘೋರ ಪಾಪಗಳನ್ನೂ ಎಸಗುತ್ತಾನೆ. ಪುಣ್ಯ ಮಾರ್ಗಗಳಲ್ಲಿ ಉತ್ತಮವಾದ ಪುಣ್ಯ ಮಾರ್ಗವು ‘ತನ್ನ ಸೃಷ್ಠಿಕರ್ತನ್ನು ಅರಿತು ಅವನಲ್ಲಿ ವಿಶ್ವಾಸವಿಟ್ಟು ಅವನಿಗೆ ಮಾತ್ರವೇ ಶರಣಾಗಿ ಅವನ ಆದೇಶಗಳನ್ನೇ ಪಾಲಿಸಿ ಉತ್ತಮ ಜೀವನವನ್ನು ಸಾಗಿಸುವುದಾಗಿದೆ. ಇದಲ್ಲಿರುವುದು ಒಂದೇ ಮಾರ್ಗ, ಅದು, ದೇವನು ಸ್ವತಃ ತೋರಿರುವ ಏಕೈಕ ಮಾರ್ಗವನ್ನು ಅಥವ ಅವನ ಧರ್ಮ, ಆವನ ನಿಯಮಗಳನ್ನು, ತತ್ವಸಿದ್ಧಾಂತಗಳನ್ನು ಪಾಲಿಸುವುದೇ ಆಗಿದೆ. ಇನ್ನು ಜನರು ಸ್ವತಃ ರಚಿಸಿರುವ ಧರ್ಮಗಳು ಮತಪಂಥಗಳು, ತತ್ವ ಸಿದ್ಧಾಂತಗಳು ನರಕದೆಡೆಗೆ ಒಯ್ಯುವ ಭ್ರಷ್ಠ ಮಾರ್ಗಗಳಾಗಿವೆ. ಉದಾಹರಣೆಗೆ; ನಮ್ಮ ಭಾರತದಂತಹಾ ದೇಶದಲ್ಲಿ ಒದೊಂದು ಜನಾಂಗ, ಜಾತಿಯವರು ತಮ್ಮದೇ ಆದ ಕಾನೂನು ನಿಯಮಾವಳಿಗಳನ್ನು ಮಾಡಿಕೊಂಡು, ಸಂವಿಧಾನದ ವಿರುದ್ಧವಾಗಿ ನಾವು ಇದನ್ನೇ ಪಾಲಿಸುವೆವು ಎಂದರೆ,…… ನಮ್ಮ ಸಂವಿಧಾನ ಸುಮ್ಮನಿರುತ್ತದೆಯೇ? ಹಾಗೆಯೇ, ದೇವನ ಆಜ್ಞೆಗಳಂತೆ ನಡೆಯದೆ ಸ್ವರಚಿತ ತತ್ವಗಳನ್ನು ರಚಿಸಿಕೊಂಡು ಅನುಸರಿಸಿದರೆ, ಅಂತಿಮ ದಿನದಲ್ಲಿ ಮೊಕ್ಷ ಸಿಗುವುದೇ?…. ಖಂಡಿತ ಇಲ್ಲ, ದೇವನು ಹೇಳುವನು,
“ಖಂಡಿತವಾಗಿ ದೇವನ ಬಳಿ ಧರ್ಮವೆಂದರೆ ದೇವನ ಆಜ್ಞಾನುಸರಣೆಯೇ ಆಗಿದೆ” ಖುರ್‍ಆನ್ 3: 19.
“ಯಾರಾದರೂ ಈ ಅನುಸರಣಾಮಾರ್ಗವಲ್ಲದ ಧರ್ಮವನ್ನು ಬಯಸಿದರೆ ಅದೆಂದೂ ಅವನಿಂದ ಸ್ವೀಕೃತವಾಗದು. ಅವನು ಪರಲೋಕದಲ್ಲಿ ನಷ್ಟಹೊಂದಿದವರಲ್ಲಿ ಸೇರಿದವನಾಗುವನು”. ಖುರ್‍ಆನ್ 3:85.
ವಿಷಯ ಹೀಗಿರುವಾಗ ನಾವು ನಮ್ಮ ಸೃಷ್ಠಿಕರ್ತ ಪ್ರಭುವಿನಿಂದ ಬಂದಿರುವ ಮಾರ್ಗದರ್ಶನವನ್ನು ಅಧ್ಯಯನ ಮಾಡುವುದು ನಮ್ಮ ಜನ್ಮಸಿದ್ಧ ಹಕ್ಕು ಬಾಧ್ಯತೆಯಾಗಿದೆ. ಆದ್ದರಿಂದ ಆ ದೇವನು ನಮ್ಮೇಲ್ಲರಿಗೆ ಈ ಸತ್ಯ ಮಾರ್ಗವನ್ನು ಅರಿಯುವ ಸಬ್ದುದ್ಧಿಯನ್ನು ದಯಪಾಲಿಸಲಿ, ಆಮೀನ್.(ಸ್ವೀಕರಿಸಲಿ)