ಖುರ್ಆನ್ ಓದುವ ಮುನ್ನ…
ಪ್ರಿಯ ಓದುಗರೆ,
ಈ ಸುಸ್ಪಷ್ಟ ಖುರ್‍ಆನ್ ಭಾಷಾಂತರವನ್ನು ಓದಲಿಕ್ಕಾಗಿ, ನಿಮ್ಮ ಸಮಯವನ್ನು ತೆಗೆಯುತ್ತಿರುವುದಕ್ಕೆ ನಾವು ನಿಮಗೆ ಧನ್ಯವಾದವನ್ನು ತಿಳಿಸುಸುತ್ತೇವೆ. ನಿಮಗೆ ಇಸ್ಲಾಮ್‍ನ ಕುರಿತಾಗಿ ಇರುವ ಅರಿವಿಗೆ, ದೇವನು ಇಚ್ಚಿಸಿದಲ್ಲಿ, ಈ ಖುರ್‍ಆನ್‍ನ ಮೂಲಕ ಅಲ್ಲಾಹ್, ಖುರ್‍ಆನ್, ಇಸ್ಲಾಮ್, ಮತ್ತು ಮುಸ್ಲೀಮ್‍ನ ಕುರಿತಾಗಿ ಇನ್ನು ಉತ್ತಮವಾಗಿ ತಿಳಿಯಲು ಸಹಾಯ ಮಾಡಲೆಂದು ಆಶಿಸುತ್ತೇವೆ.
ಖುರ್‌ಆನ್ ಎಂದರೇನು?
‘ಖುರ್‍ಆನ್’ ಎಂಬ ಅರೇಬಿಕ್ ಪದದ ಅರ್ಥ ‘ಪಠಣ’. ದೇವನು ಆತನ ಅಂತಿಮ ಪ್ರವಾದಿಯಾದ ಮುಹಮ್ಮದ್(ಸ)ರ ಮೂಲಕ ಸಮಸ್ತ ಮಾನವಕುಲಕ್ಕಾಗಿ ಅವತೀರ್ಣಗೊಳಿಸಿದ ಅಂತಿಮ ಗ್ರಂಥವೇ(ನಡಾವಳಿ ಕ್ರಮ) ‘ಖುರ್‍ಆನ್’. ‘ಖುರ್‍ಆನ್’ ಸರ್ವಶಕ್ತ ದೇವನ ನುಡಿಗಳಾಗಿದ್ದು, ಇದು ಯಾವುದೇ ತಿದ್ದುಪಡಿಗೊಳಗಾಗದೆ, ಯಾವುದೇ ರೀತಿಯ ಸೇರ್ಪಡೆಗೋ, ಅಥವಾ ತೆಗೆಯುವಿಕೆಗೋ ಒಳಗಾಗದೆ, ಮೂಲ ಭಾಷೆಯಾದ ಅರಬ್ಬಿಕ್‍ನಲ್ಲಿ ಕಳೆದ 14 ಶತಮಾನಗಳಿಂದ ಸಂರಕ್ಷಿಸಲ್ಪಟ್ಟಿದೆ.
ನೀವು ಖುರ್‌ಆನ್ ಏಕೆ ಓದಬೇಕು?
ನಾವು ಸ್ವಇಚ್ಚೆಯಿಂದಾಗಿ ಈ ಭೂಮಿಗೆ ಬಂದಿಲ್ಲ ಅಥವಾ ನಾವು ನಮ್ಮ ಜನನ ಸ್ಥಳವನ್ನು ನಾವೇ ಆಯ್ಕೆ ಮಾಡಿಕೊಂಡಿಲ್ಲ. ಈ ಹೇಳಿಕೆ ಕೆಲವು ಈ ರೀತಿಯ ಪ್ರಶ್ನೆಗಳನ್ನು ಎಬ್ಬಿಸುತ್ತದೆ: ಯಾರಾದರು ನಮ್ಮನ್ನು ಸೃಷ್ಟಿಸಿದ್ದಾರೆಯೇ? ನಾವೇಕೆ ಇದ್ದೇವೆ? ಜೀವನ ಎಂದರೇನು? ಇತ್ಯಾದಿ. ‘ಖುರ್‍ಆನ್’ ನಮ್ಮ ಸೃಷ್ಟಿಕರ್ತನೂ ಹಾಗೂ ಸರ್ವಶಕ್ತನ ಕಡೆಯಿಂದ ನೇರಸಂದೇಶ ಮತ್ತು ಮಾರ್ಗದರ್ಶನವೆಂದು ಘೋಷಿಸುತ್ತಾ, ಈ ಮೇಲಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತದೆ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ನಿಸ್ಸಂಶಯವಾಗಿಯೂ ಈ ಗ್ರಂಥದ ಅವತೀರ್ಣಿಕೆಯು ಸರ್ವಲೋಕದ ಪಾಲಕಪ್ರಭುವಿನ ವತಿಯಿಂದಾಗಿದೆ.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ 32:2ನೇ ಸೂಕ್ತ.
‘ಓ ಜನರೇ, ನಿಸ್ಸಂದೇಹವಾಗಿಯೂ ನಿಮ್ಮ ಪಾಲಕ ಪ್ರಭುವಿನ ವತಿಯಿಂದ ನಿಮ್ಮೆಡೆಗೆ ಸದುಪದೇಶವೂ ಬಂದಿದೆ. ಅದು ಹೃದಯಗಳಲ್ಲಿರುವ ರೋಗಗಳಿಗೆ ಉಪಶಮನವೂ ಆಗಿದೆ. ಮತ್ತು ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗವೂ, ಕಾರುಣ್ಯವೂ ಆಗಿರುತ್ತದೆ.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ 10:57ನೇ ಸೂಕ್ತ.
ನೀವು ಈ ಭೂಮಿಯಲ್ಲಿರುವುದರ ಉದ್ದೇಶವನ್ನು ಅರಿಯಲಿಕ್ಕಾಗಿ ಸುಸ್ಪಷ್ಟ ಖುರ್‍ಆನ್ ಓದಲೇಬೇಕಾಗುತ್ತದೆ.
ನಾವು ಸೃಷ್ಟಿಕರ್ತನನ್ನು ಹೊಂದಿದ್ದೇವೆಯೇ?
ಅನೇಕ ಮಂದಿ ಧರ್ಮಕ್ಕಿಂತ ವಿಜ್ಞಾನದಲ್ಲಿ ಬೆಳೆದು ಬಂದಿರುತ್ತಾರೆ, ಮತ್ತು ಸೃಷ್ಟಿಕರ್ತನಿಗಿಂತ ವಿಕಸನದ ಮೇಲೆ ನಂಬಿಕೆಯುಳ್ಳವರಾಗಿದ್ದಾರೆ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ಆಕಾಶಗಳ ಹಾಗೂ ಭೂಮಿಯ ಸೃಷ್ಟಿಯು ಮನುಷ್ಯರ ಸೃಷ್ಟಿಗಿಂತಲೂ ಅತಿದೊಡ್ಡ ಕಾರ್ಯವಾಗಿದೆ. ಆದರೆ ಅಧಿಕ ಜನರು ಅಜ್ಞಾನಿಗಳಾಗಿದ್ದಾರೆ (ಎಂಬುದು ಬೇರೆ ವಿಚಾರ).’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ 40:57ನೇ ಸೂಕ್ತ.
ಮೇಲಿನ ಸೂಕ್ತವು ಮಾನವಕುಲದ ಸೃಷ್ಟಿಗಿಂತ ವಿಶ್ವದ ಸೃಷ್ಟಿಯು ನಿಜವಾಗಿ ದೊಡ್ಡದೆಂದು ಬೊಟ್ಟುಮಾಡುತ್ತದೆ. ಆದ್ದರಿಂದ ಈ ವಿಶ್ವದ ಉತ್ಪತ್ತಿಯ ಕುರಿತು ತಿಳಿಯಬೇಕಾಗಿರುವುದು ಬಹಳ ಅವಶ್ಯವಾಗಿದೆ.
ಸುಸ್ಪಷ್ಟ ಖುರ್‍ಆನ್ ನಮ್ಮ ಉತ್ಪತ್ತಿ ಹಾಗೂ ವಿಶ್ವದ ಉತ್ಪತ್ತಿಯ ಕುರಿತು ಕೆಲವು ಪ್ರಶ್ನೆಗಳನ್ನು ಕೇಳುತ್ತದೆ.
‘ಏನು; ಇವರು ಯಾರ (ಸೃಷ್ಟಿಕರ್ತನ) ಸಹಾಯವಿಲ್ಲದೆ ಶೂನ್ಯದಿಂದ ಸೃಷ್ಟಿಯಾಗಿರುವರೇ? ಅಥವಾ ಸ್ವತಃ ಇವರೇ ಸೃಷ್ಟಿಕರ್ತರಾಗಿರುವರೇ? ಅಥವಾ ಆಕಾಶಗಳನ್ನೂ, ಭೂಮಿಯನ್ನೂ ಇವರೇ ಸೃಷ್ಟಿಸಿರುತ್ತಾರೆಯೇ? ವಸ್ತುತಃ ಇವರು ನಂಬಿಕೆಯಿರಿಸದಂತಹ ಜನರಾಗಿದ್ದಾರೆ.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ 52:35-36ನೇ ಸೂಕ್ತ.
ಭೂಮಿಯ ವಯಸ್ಸನ್ನು ಅಳೆಯಬಹುದಾದ್ದರಿಂದ, ಅದರ ಆರಂಭವನ್ನು(ಜನನವನ್ನು) ವಿಜ್ಞಾನಿಗಳು ಅಂಗೀಕರಿಸುತ್ತಾರೆ. ಭೂಮಿಯು ಆರಂಭವನ್ನು ಹೊಂದಿರುವುದರಿಂದ, ನಮಗೆ ಅದರ ಮೂಲದ ಕುರಿತು ಕೇವಲ 3 ಸಾಧ್ಯತೆಗಳು ಮಾತ್ರ ಕಂಡುಬರುತ್ತದೆ. ಅವುಗಳೆಂದರೆ,
1.ಈ ವಿಶ್ವವು ಶೂನ್ಯದಿಂದ(ಏನೂ ಇಲ್ಲದೆಯೇ) ಅಸ್ಥಿತ್ವಕ್ಕೆ ಬಂದಿದೆ.
2.ವಿಶ್ವವು ತನ್ನಂತಾನೆ ಸೃಷ್ಟಿಗೊಂಡಿತು ಅಥವಾ,
3.ವಿಶ್ವವು ಸೃಷ್ಟಿಕರ್ತನಿಂದ ಸೃಷ್ಟಿಗೊಂಡಿತು ಅಂದರೆ, ನಾವು ದೇವನೆಂದು ಪರಿಗಣಿಸುವಾತನಿಂದ.
1ನೇ ಸಾಧ್ಯತೆ: ಈ ವಿಶ್ವವು ಶೂನ್ಯದಿಂದ(ಏನೂ ಇಲ್ಲದೆಯೇ) ಅಸ್ಥಿತ್ವಕ್ಕೆ ಬಂದಿದೆ.
ಸಾಮಾನ್ಯ ಜ್ಞಾನ, ಅನುಭವ ಮತ್ತು ಬುದ್ದಿ ಸೂಕ್ಷತೆಯು ನಮಗೆ, ಶೂನ್ಯವು ಏನನ್ನಾದರೊಂದನ್ನು ಸೃಷ್ಟಿಸಲು ಸಾಧ್ಯವೇ ಇಲ್ಲವೆಂದು ಕಲಿಸುತ್ತದೆ. ಶೂನ್ಯದಿಂದ ಅಸ್ಥಿತ್ವಕ್ಕೆ ಬಂದ ಯಾವುದೇ ಅಣುವನ್ನಾಗಲೀ ಅಥವಾ ವಿಷಯವನ್ನಾಗಲಿ ಕಾಣಲು ಸಾಧ್ಯವೇ ಇಲ್ಲ. ಆದ್ದರಿಂದಲೇ ಯಾರಾದರು ಕೈಗಡಿಯಾರವನ್ನೋ ಅಥವಾ ಮೊಬೈಲನ್ನೋ ಶೂನ್ಯದಿಂದ ಗಾಳಿಯಲ್ಲಿ ಬಂತೆಂದರೆ ನಾವು ನಂಬುವುದಿಲ್ಲ. ಎಲ್ಲಿಯವರೆವಿಗೂ ನಾವು ಶೂನ್ಯವು ಏನನ್ನಾದರೊಂದನ್ನು ಸೃಷ್ಟಿಯಾಗುವುದನ್ನು ಗಮನಿಸಲು ಮತ್ತು ಪ್ರಯೋಗಿಸಲು ಸಾಧ್ಯವಿಲ್ಲವೋ ಅಲ್ಲಿಯವರೆವಿಗೂ ಶೂನ್ಯವು ಏನನ್ನಾದರೊಂದನ್ನು ಸೃಷ್ಟಿಸುತ್ತದೆ ಎಂಬುದು ವಿವೇಚನೆಗೆ ಬಾರದ ಅಸಂಬದ್ಧ ವಿಚಾರವಾಗಿದೆ.
2ನೇ ಸಾಧ್ಯತೆ: ವಿಶ್ವವು ತನ್ನಂತಾನೆ ಸೃಷ್ಟಿಗೊಂಡಿತು.
ಯಾರಾದರೂ ವಿಶ್ವವು ತನ್ನಂತಾನೇ ಸೃಷ್ಟಿಗೊಂಡಿತೆನ್ನುವುದಾದರೆ, ಭೂಮಿಯು ತಾನೇ ಅಸ್ಥಿತ್ವದಲ್ಲಿಲ್ಲದಿರುವಾಗ ತನ್ನನ್ನು ತಾನೇ ಸೃಷ್ಟಿಸಿಕೊಂಡಿತು. ಹೇಗೆ ಯಾವುದಾದರೊಂದು ಅಸ್ಥಿತ್ವದಲ್ಲಿಲ್ಲದೆಯೇ ಸೃಷ್ಟಿಗೊಳ್ಳಲು ಸಾಧ್ಯ? ಇದು ಲೇಖನಿಯೊಂದು ತನ್ನನ್ನು ತಾನೇ ಸೃಷ್ಟಿಯಾಯಿತು. ಮಾನವ ತನಗೆ ತಾನೇ ಜನ್ಮ ನೀಡಿದ, ಅಥವಾ ನಿಮಗೆ ನೀವೇ ಜನ್ಮ ತಾಳಿದಿರಿ. ಇದು ತರ್ಕಶಾಸ್ತ್ರದ ಪ್ರಕಾರ ಹಾಗೂ ವೈಜ್ಞಾನಿಕವಾಗಿ ಸಾಧ್ಯವಿಲ್ಲದ ಮಾತು. ಆದ್ದರಿಂದ ವಿಶ್ವವು ತನ್ನಂತಾನೆ ಸೃಷ್ಟಿಗೊಂಡಿತು ಎಂಬುದು ವಿವೇಚನೆಗೆ ಬಾರದ ಅಸಂಬದ್ಧ ವಿಚಾರವಾಗಿದೆ.
3ನೇ ಸಾಧ್ಯತೆ: ವಿಶ್ವವು ಸೃಷ್ಟಿಕರ್ತನಿಂದ ಸೃಷ್ಟಿಗೊಂಡಿತು ಅಂದರೆ, ನಾವು ದೇವನೆಂದು ಪರಿಗಣಿಸುವಾತನಿಂದ.
ಈ ವಿಶ್ವವು ಶೂನ್ಯದಿಂದ(ಏನೂ ಇಲ್ಲದೆಯೇ) ಅಸ್ಥಿತ್ವಕ್ಕೆ ಬಂದಿಲ್ಲವೆಂದಾದರೆ ಅಥವಾ ವಿಶ್ವವು ತನ್ನಂತಾನೆ ಸೃಷ್ಟಿಗೊಂಡಿಲ್ಲವೆಂದಾದರೆ, ಇನ್ನು ಉಳಿದಿರುವುದು ಒಂದೇ ಸಾಧ್ಯತೆ, ಅದು ವಿಶ್ವವು ಸೃಷ್ಟಿಕರ್ತನಿಂದ ಸೃಷ್ಟಿಗೊಂಡಿತು ಅಂದರೆ, ನಾವು ದೇವನೆಂದು ಪರಿಗಣಿಸುವಾತನಿಂದ.
ಸೃಷ್ಟಿಕರ್ತನ ಅಸ್ಥಿತ್ವಕ್ಕೆ ವಿಶ್ವದಲ್ಲಿನ ಕುರುಹುಗಳು
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ಅವನು ಏಳು ಆಕಾಶಗಳನ್ನು ಅಂತಸ್ತುಗಳಾಗಿ ಸೃಷ್ಟಿಸಿದನು, ಪರಮ ದಯಾಮಯನ ಸೃಷ್ಟಿಯಲ್ಲಿ ನೀವು ಯಾವ ಅಪೂರ್ಣತೆಯನ್ನು ಕಾಣಲಾರಿರಿ ಮತೊಮ್ಮೆ ದೃಷ್ಟಿ ಹಾಯಿಸಿ ನೋಡಿ. ಯಾವುದಾದರೂ ನ್ಯೂನ್ಯತೆಯನ್ನು ಕಾಣುತ್ತಿರುವಿರಾ? ತರುವಾಯ ಆವರ್ತಿಸಿ, ಪುನಃ ಪುನಃ ನೋಡಿ. ದೃಷ್ಟಿಯು ನಿಮ್ಮಡೆಗೆ ಸೋತು ಹತ್ತರವಾಗಿಒ ಮರಳುವುದು.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ 67:3-4ನೇ ಸೂಕ್ತ.
‘ನಿಸ್ಸಂದೇಹ ಭೂಮ್ಯಾಕಾಶಗಳ ಸೃಷ್ಟಯಲ್ಲಿಯೂ, ರಾತ್ರಿಹಗಲುಗಳ ಹಿಂಬಾಲಿಸುವಿಕೆಯಲ್ಲಿಯೂ. ಬುದ್ಧಿಜೀವಿಗಳಿಗೆ ಧಾರಾಳ ದೃಷ್ಟಾಂತಗಳಿರುವುವು.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ 3:190ನೇ ಸೂಕ್ತ.
ಈ ಮೇಲಿನ ಸೂಕ್ತಗಳು ನಮ್ಮನ್ನು ವಿಶ್ವದಲ್ಲಿನ ನ್ಯೂನ್ಯತೆಯಿಲ್ಲದ ಹಾಗೂ ಅದ್ಭುತವಾದ ಸಂಯೋಜನೆಯನ್ನು ಕುರಿತು ಚಿಂತಿಸಲು/ಯೋಚಿಸಲು ತಿಳಿಸುತ್ತದೆ.
ಸೌರಮಂಡಲದ ಅನೇಕ ಗ್ರಹಗಳಲ್ಲಿ ನಮ್ಮ ಗ್ರಹ ಪೃಥ್ವಿಯೂ ಒಂದು. ಮತ್ತು ಅದೇರೀತಿ ನಕ್ಷತ್ರಸಮೂಹದಲ್ಲಿರುವ ಅನೇಕ ಸೌರಮಂಡಲಗಳಲ್ಲಿ, ನಮ್ಮ ಸೌರಮಂಡಲವು ಒಂದು. ಪ್ರಪಂಚದ ಆಕಾಶಗಂಗೆಯಲ್ಲಿರುವ ನಕ್ಷತ್ರಸಮೂಹಗಳಲ್ಲಿ ನಮ್ಮ ನಕ್ಷತ್ರಸಮೂಹವೊಂದಾಗಿದೆ. ನಾವು ವಿಶ್ವದಲ್ಲಿರುವ ಈ ಅಮೋಘ ಕ್ರಮಬದ್ಧತೆಯನ್ನು ಗಮನಿಸಬಹುದು.
ಉದಾಹರಣೆಗಳು:
1.ಸಂಭವಿಸಬಹುದಾದ ಸೂರ್ಯ ಮತ್ತು ಚಂದ್ರ ಗ್ರಹಣವನ್ನು ಮುಂಚಿತವಾಗಿಯೇ ಲೆಕ್ಕಿಸಬಹುದು. 2090ರಲ್ಲಿ ಘಟಿಸಬಹುದಾದ ಗ್ರಹಣವನ್ನು ಎಲ್ಲಿ ಮತ್ತು ಯಾವಾಗ ಸಂಭವಿಸುತ್ತದೆ ಎಂಬುದನ್ನು ಅರಿಯಬಹುದು.
2.ಮುಂದಿನ 200 ವರ್ಷಗಳ ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ಲೆಕ್ಕಮಾಡಲು ಸಾಧ್ಯವಿದೆ.
ಈ ಸಂಗತಿಗಳು ವಿಶ್ವದ ಗ್ರಹಗಳು ಹಾಗೂ ನಕ್ಷತ್ರಗಳ ಏಕಕಾಲದಲ್ಲಿ ಸಂಭವಿಸುವ, ಸಮತೋಲನ ಮತ್ತು ಸಾಮರಸ್ಯದ ಕ್ರಮಬದ್ಧತೆಯಿಂದ ಇದು ಸಾಧ್ಯವಾಗುತ್ತದೆ.
ವಿಶ್ವದ ಅದ್ಭುತವಾದ ರಚನೆ ಹಾಗೂ ಮಾದರಿಯ ಗುಂಪುಗಳ ಕುರಿತು ಇದೊಂದು ಮಹತ್ತಾದ ಉದಾಹರಣೆಯಾಗಿದೆ.
ಕೆಲವರು ಹೇಳಬಹುದು, ಈ ವಿಶ್ವದ ರಚನೆಯು ಒಂದು ಆಕಸ್ಮಿಕ. ಗೋಡೆಯ ಮೇಲೆ ನಿರಂತರವಾಗಿ ಬಣ್ಣವನ್ನು ಎಸೆಯ ತೊಡಗಿದರೆÀ ಕೈ, ಹಕ್ಕಿ ರೀತಿಯ ಚಿತ್ರಗಳು ಮೂಡಬಹುದು ಆದರೆ, ಅಲ್ಲಿ ಎಂದಿಗೂ ಮೋನಾಲಿಸಾ ಅಥವಾ ರವಿವರ್ಮನ ಅಥವಾ ಇತರೆ ಹೆಸರಾಂತ ಚಿತ್ರಕಾರರ ಚಿತ್ರಗಳು ಮೂಡಲು ಸಾಧ್ಯವೇ ಇಲ್ಲ. ಯಾರಾದರು ಮೊನಾಲಿಸ ಆಕಸ್ಮಿಕವಾಗಿ ಮೂಡಿಬಂದಿದೆ ಎಚಿದರೆ ನಾವು ನಂಬುತ್ತೇವೆಯೇ? ನಮ್ಮ ವಿಶ್ವದಲ್ಲಿರುವ ರಚನೆ ಮೋನಾಲಿಸಾ ಚಿತ್ರಕ್ಕಿಂತ ಅತ್ಯಂತ ಗೋಜಿನ ಮತ್ತು ಜಟಿಲವಾದ ವಿಚಾರವಾಗಿದೆ. ರಚನಾಕಾರನಿಲ್ಲದೆ ರಚನೆ ಮೂಡಿದೆ ಎಂಬುದು ಹೇಗೆ ತರ್ಕಸಮ್ಮತವಾದ ವಿಚಾರವಾಗುತ್ತದೆ?
ಮಾನವ ದೇಹದ ರಚನೆ
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ಮತ್ತು ದೃಢನಂಬಿಕೆಯುಳ್ಳವರಿಗಂತು ಭೂಮಿಯಲ್ಲಿ ಹಲವಾರು ನಿದರ್ಶನಗಳಿವೆ.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ51:20-21ನೇ ಸೂಕ್ತಗಳು.
ನೀವು ಎಂದಾದರು ಸೇತುವೆ, ಕಟ್ಟಡ, ವಾಹನವನ್ನು ಕಂಡಾಗ, ನೀವು ಎಂದಿಗೂ ಅದರ ರಚನೆಕಾರನಾಗಿ ಒಬ್ಬ ವ್ಯಕ್ತಿಯೋ ಒಂದು ಸಂಸ್ಥೆಯೋ ಅದರ ಹಿಂದಿದೆ ಎಂಬುದನ್ನು ಕಡೆಗಣಿಸುವುದೇ ಇಲ್ಲ. ಹಾಗಾದರೆ, ಸ್ಥೂಲವಾದ ಹಾಗೂ ಜಟಿಲವಾದ ನಿಯಂತ್ರಣಾ ವ್ಯವಸ್ಥೆಯನ್ನು ಹೊಂದಿರುವ ಮಾನವನ ದೇಹದ ಕುರಿತ ವಿಚಾರವೇನು?
ಮೆದುಳಿನ ಕುರಿತಾಗಿ ಯೋಚಿಸಿ: ಅದು ಹೇಗೆ ಯೋಚಿಸುತ್ತದೆ, ಕಾರ್ಯ ನಿರ್ವಹಿಸುತ್ತದೆ, ನಿರ್ಧರಿಸುತ್ತದೆ, ಮನನ ಮಾಡುತ್ತದೆ, ಸಂಗ್ರಹಿಸುತ್ತದೆ, ಗುಣಲಕ್ಷಣವನ್ನು ವಿವರಿಸುತ್ತದೆ, ಹಾಗೂ ಕ್ಷಣಾರ್ಧದ ಲಕ್ಷಾಂತರ ಮಾಹಿತಿಗಳನ್ನು ಹೇಗೆ ವಿಭಾಗಿಸುತ್ತದೆ, ಅದೂ ಕೂಡ ತಕ್ಷಣ. (ಹಾ! ಮರೆಯದಿರಿ, ಈಗ ಈ ಸತ್ಯದ ಕುರಿತು ಕೂಡ ನಿಮ್ಮ ಮೆದುಳು ಯೋಚಿಸುತ್ತಿದೆ). ಹೃದಯದ ಕುರಿತು ಯೋಚಿಸಿರಿ, ಅದು ಹೇಗೆ ನಿರಂತರವಾಗಿ ರಕ್ತವನ್ನು ರೇಚಿಸುತ್ತಿದೆ, ಮತ್ತು ಮಾನವನ ಜೀವನದ ಅಂತ್ಯದವರೆವಿಗೂ ಏಕಪ್ರಕಾರದ ಅಸಂಧಿಗ್ಧತೆಯನ್ನು ಪಾಲಿಸುತ್ತಿದೆ. ಮೂತ್ರಕೋಶದ ಅಥವಾ ಕರುಳಿನ ಕುರಿತು ಯೋಚಿಸಿ, ಅದು ಹೇಗೆ ವಿಭಿನ್ನವಾದ ಕಾರ್ಯಗಳನ್ನು ನಿರ್ವಹಿಸುತ್ತಿದೆ. ದೇಹದ ಶುದ್ಧೀಕರಣದ ಘಟಕಗಳು ಒಂದೇ ಬಾರಿಗೆ ನೂರಾರು ರಾಸಾಯನಿಕ ವಿಭಜನೆಯನ್ನು ಮಾಡುತ್ತದೆ ಮತ್ತು ದೇಹದಲ್ಲಿ ನಂಜಿನ ಅಂಶವನ್ನು ನಿಯಂತ್ರಿಸುತ್ತದೆ. ನಿಮ್ಮ ಕಣ್ಣಿನ ಕುರಿತಾಗಿ ಯೋಚಿಸಿ, ಮಾನವನ ಕ್ಯಾಮೆರಾಗಳ ಕುರಿತು. ಹೊಂದಿಕೊಳ್ಳುವ, ಕೇಂದ್ರೀಕರಿಸುವ, ಅರ್ಥವಿವರಿಸುವ, ತನಗೆ ತಾನೆ ಬಣ್ಣವನ್ನು ಗ್ರಹಿಸುವ, ಸ್ವಾಭಾವಿಕವಾಗಿ ಬೆಳಕನ್ನು ಹಾಗೂ ದೂರವನ್ನು ಪಡೆಯುತ್ತದೆ ಹಾಗೂ ಹೊಂದಿಕೊಳ್ಳುತ್ತದೆ. ಈ ರಚನೆಯು ತನ್ನಂತಾನೆ ಅಸ್ಥಿತ್ವಕ್ಕೆ ಬಂದಿತೇ? ಇದಕ್ಕೆ ಉತ್ತರ ಖಂಡಿತವಾಗಿ ಇಲ್ಲ, ಈ ಗೋಜಿನ ಅಥವಾ ಜಟಿಲವಾದ ರಚನೆಯು ರಚನೆಕಾರನನ್ನೋ ಅಥವಾ ಸೃಷ್ಟಿಕರ್ತನನ್ನು ಹೊಂದಿರುತ್ತದೆ.
ದೇವನನ್ನು ಯಾರು ಸೃಷ್ಟಿಸಿದರು?
ಯಾರಾದರು, ಈ ಎಲ್ಲವನ್ನು ದೇವನು ಸೃಷ್ಟಿಸಿದ್ದರೆ, ದೇವನನ್ನು ಯಾರು ಸೃಷ್ಟಿಸಿದರು? ಎಂದು ಕೇಳಬಹುದು.
ಪ್ರಪಂಚ ಹಾಗೂ ಸಮಯದ ಹಾಗೆಯೇ, ನಾವು ಉಪಯೋಗಿಸುವ ಆರಂಭ ಹಾಗೂ ಅಂತ್ಯದ ಅಳಯುವ ಅಂಶಗಳು ಕೂಡ ಅಸ್ಥಿತ್ವಕ್ಕೆ ಬಂದವು.
ಈ ಪ್ರಪಂಚದಲ್ಲಿರುವ ಎಲ್ಲ ಸೃಷ್ಟಿಗಳು ಕೂಡ ಸಮಯದ ಮೇಲೆ ಆಧಾರವಾಗಿದೆ, ಆದ್ದರಿಂದ ಅವುಗಳೆಲ್ಲವೂ ಆರಂಭ ಮತ್ತು ಅಂತ್ಯವನ್ನು ಹೊಂದಿದೆ. ಪ್ರಪಂಚವನ್ನು ಸೃಷ್ಟಿಸಿದ ಸೃಷ್ಟಿಕರ್ತನು ಸಮಯಕ್ಕೂ ಮುನ್ನ ಅಸ್ಥಿತ್ವದಲ್ಲಿದ್ದ. ಆನಚಿತರವೇ ಅಂಶಗಳು ಕೂಡ ಅಸ್ಥಿತ್ವಕ್ಕೆ ಬಂದವು ಆದರೆ ಆತನು ಇವುಗಳಿಂದ ಸ್ವತಂತ್ರನಾಗಿರುವನು. ಆದ್ದರಿಂದಲೇ, ಸೃಷ್ಟಿಕರ್ತನಿಗೆ ಆರಂಭ ಅಥವಾ ಅಂತ್ಯವೆಂಬುದಿಲ್ಲ, ಮತ್ತು ಆತನು ನಿರಂತರವಾಗಿ ಅಸ್ಥಿತ್ವದಲ್ಲಿರುವನು. ಉದಾಹರಣೆಗೆ ಈ ಪುಸ್ತಕವು ಅನಂತ ವಾಗಿ ಅಸ್ಥಿತ್ವದಲ್ಲಿದ್ದರೆ, ಇದಕ್ಕೆ ಕತೃವಿನ ಅಥವಾ ಸೃಷ್ಟಿಕರ್ತನ ಅವಶ್ಯಕತೆ ಇಲ್ಲ. ಇದೇ ನಿಯಮವು ದೇವನ ಹಾಗೂ ಒಳಿತಿಗೂ ಅನ್ವಯಿಸುತ್ತದೆ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ಅಲ್ಲಾಹ, ಆತನ ಹೊರತು ದೇವನಿಲ್ಲ. ಚಿರಂತನನ್ನು ಸ್ವಯಂಸ್ಥಿರನು; ನಿಯಂತ್ರಕನು (ಜಗನ್ನಿಯಾಮಕನು) ತೂಕಡಿಕೆಯಾಗಲೀ, ನಿದ್ರೆಯಾಗಲೀ ಆತನನ್ನು ಬಾಧಿಸದು.
ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಆತನವೇ, ಆತನ ಅನುಮತಿ ಇಲ್ಲದೆ ಆತನಲ್ಲಿ ಶಿಫಾರಸ್ಸು ಮಾಡಬಲ್ಲವರಾರು? ಅವರ ಮುಂದಿರುವುದನ್ನೂ, ಹಿಂದಿರುವುದನ್ನೆಲ್ಲ ಆತನು ಅರಿಯುತ್ತಾನೆ. ಆತನ ಜ್ಞಾನಭಂಡಾರದಲ್ಲಿರುವ ಯಾವೊಂದು ಸಂಗತಿಯನ್ನೂ ಅವರು ಅರಿಯರು, ಆತನೇ ಉದ್ದೇಶಿಸಿದ್ದನ್ನು ಹೊರತು. ಆತನ ಸಿಂಹಾಸನವಾದರೋ ಭೂಮ್ಯಾಕಾಶಗಳನ್ನು ವ್ಯಾಪಿಸಿದೆ. ಅವೆರಡರ ರಕ್ಷಣೆ ಆತನಿಗೇನೂ ದುಷ್ಕರವಲ್ಲ. ಆತನು ಸರ್ವೊಚ್ಚನೂ. ಮಹಾನನೂ ಆಗಿರುತ್ತಾನೆ.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ2:255ನೇ ಸೂಕ್ತ.
ದೇವನು ನಮ್ಮನ್ನೇಕೆ ಸೃಷ್ಟಿಸಿದನು?
ದೇವನು ನಮ್ಮನ್ನು ವಿನೋದಕ್ಕಾಗಿಯೋ ಅಥವಾ ಆಟಕ್ಕಾಗಿಯೋ ಸೃಷ್ಟಿಸಲಿಲ್ಲ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ಮತ್ತು ನಾವು ಆಕಾಶಗಳನ್ನೂ, ಭೂಮಿಯನ್ನೂ, ಅವುಗಳ ನಡುವೆಯಿರುವ ವಸ್ತುಗಳನ್ನೂ ಆಟಕ್ಕಾಗಿ (ಕಾಲಕ್ಷೇಪಕ್ಕಾಗಿ) ಸೃಷ್ಟಿಸಿರುವುದಿಲ್ಲ.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ44:38ನೇ ಸೂಕ್ತ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ಮತ್ತು ನಾವು ಆಕಾಶವನ್ನು, ಭೂಮಿಯನ್ನು ಮತ್ತು ಅವುಗಳ ನಡುವೆಯಿರುವವುಗಳನ್ನು ವ್ಯರ್ಥವಾಗಿ ಸೃಷ್ಟಿಸಿರುವುದಿಲ್ಲ. ಇದು ಕೇವಲ ಸತ್ಯ ನಿಷೇಧಿಗಳ ಊಹೆಯಾಗಿದೆ. ಆದ್ದರಿಂದ ಸತ್ಯನಿಷೇಧಿಗಳಿಗೆ ನರಕಾಗ್ನಿಯ ವಿನಾಶವು ಇದೆ.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ38:27ನೇ ಸೂಕ್ತ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ’ನಿಮ್ಮನ್ನು ನಾವು ವ್ಯರ್ಥವೇ ಸೃಷ್ಟಿಸಿರುತ್ತೇವೆಂದೂ ನಮ್ಮೆಡೆಗೆ ನೀವೆಂದೂ ಮರಳಲಿಕ್ಕಿರುವುದಿಲ್ಲವೇಮದೂ ನೀವು ಎಣಿಸಿದ್ದಿರೇನು ?’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ23:115ನೇ ಸೂಕ್ತ.
ದೇವನು ನಮ್ಮನ್ನು ಮತ್ತು ಪ್ರಪಂಚವನ್ನು ಸೃಷ್ಟಿಸಿದ ಕುರಿತ ಸತ್ಯತೆ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ಮತ್ತು ಭೂಮ್ಯಾಕಾಶಗಳನ್ನೂ ಅವುಗಳ ಮಧ್ಯೆ ಇರುವ ಎಲ್ಲವನ್ನೂ ನಾವು ಸತ್ಯಪೂರ್ಣವಾಗಿಯೇ (ನ್ಯಾಯದೊಂದಿಗೇ) ಸೃಷ್ಟಿಸಿದ್ದೇವೆ. ಆ ಘಳಿಗೆ (ಪ್ರಳಯಕಾಲ) ಖಂಡಿತ ಬರಲಿದೆ. ಅಂತಲೇ (ಓ ಮುಹಮ್ಮದರೇ) ನೀವು ದಯಾಭರಿತ (ಸುಂದರವಾದ) ಕ್ಷಮೆಯಿಂದ ಅವರನ್ನು ಮನ್ನಿಸಿರಿ.‘ ಸುಸ್ಪಷ್ಟ ಖುರ್‍ಆನ್ ಅಧ್ಯಾಯ15:85ನೇ ಸೂಕ್ತ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ಅವರು ತಮ್ಮ ಮನಸ್ಸಿನಲ್ಲಿ ಇದನ್ನು ವಿಚಾರ ಮಾಡಲಿಲ್ಲವೇ; ಅಲ್ಲಾಹನು ಆಕಾಶಗಳನ್ನೂ, ಭೂಮಿಯನ್ನೂ ಅವೆರಡರ ಮಧ್ಯೆಯಿರುವುದನ್ನೆಲ್ಲಾ ಉತ್ತಮ ಸ್ವರೂಪದಲ್ಲಿ ಒಂದು ನಿಶ್ಚಿತ ಕಾಲಾವಧಿಗೆಂದೇ ಸೃಷ್ಟಿಸಿರುತ್ತಾನೆಂಬುದನ್ನು? ಆದರೆ ಹೆಚ್ಚಿನ ಜನರು ನಿಜವಾಗಿಯೂ ತಮ್ಮ ಪಾಲಕಪ್ರಭುವಿನ ಭೇಟಿಯನ್ನು ನಿಷೇಧಿಸುವವರಾಗಿರುತ್ತಾರೆ.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ30:8ನೇ ಸೂಕ್ತ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ನಾವು ಆಕಾಶಗಳನ್ನು ಮತ್ತು ಭೂಮಿಯನ್ನು ಮತ್ತು ಅವುಗಳ ನಡುವೆಯಿರುವ ಸಕಲ ವಸ್ತುಗಳನ್ನು ಪರಮ ಸತ್ಯವಾಗಿ ಅತ್ಯುತ್ತಮ ಯೋಜನೆಯೊಂದಿಗೇ ಒಂದು ನಿರ್ದಿಷ್ಟ ಅವಧಿಗಾಗಿ ಸೃಷ್ಟಿಸಿರುತ್ತೇವೆ ಮತ್ತು ‘ಕುಫ್ರ’(ಸತ್ಯನಿಷೇಧಿ)ಗಳು ಯಾವುದರ ಕುರಿತು ಎಚ್ಚರಿಕೆ ನೀಡಲಾಗುತ್ತಿರುವರೋ ಆ ನಿಜದಿಂದ ವಿಮುಖರಾಗುತ್ತಾರೆ.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ46:3ನೇ ಸೂಕ್ತ.
ನಮ್ಮ ಅಸ್ಥಿತ್ವದ ಉದ್ದೇಶವೇನು?
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ನಾನು ಜಿನ್ನ್‍ಗಳನ್ನೂ, ಮನುಷ್ಯರನ್ನೂ ಅವರು ನನ್ನನ್ನು ಆರಾಧಿಸಲೆಂದು ಮಾತ್ರವೇ ಸೃಷ್ಟಿಸಿರುತ್ತೇನೆ.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ51:56ನೇ ಸೂಕ್ತ.
ನಮ್ಮ ಅಸ್ಥಿತ್ವದ ಉದ್ದೇಶ ಸರ್ವಶಕ್ತನಾದ ದೇವನನ್ನು ಆರಾಧಿಸಿ, ಆತನಿಗೇ ವಿಧೇಯರಾಗಿರುವುದು. ಇಲ್ಲಿ ಆರಾಧನೆ ಎಂದರೆ, ದೇವನ ಆದೇಶಕ್ಕೆ ಒಳಗಾಗಿ ಜೀವನವನ್ನು ನಡೆಸುವುದು ಮತ್ತು ದೇವನ ಕೃಪೆಗೆ ಒಳಗಾಗುವ ಕಾರ್ಯವನ್ನು ಮಾಡುವುದು ಮತ್ತು ದೇವನ ಕ್ರೋದಕ್ಕೆ ಗುರಿಪಡಿಸುವ ಕಾರ್ಯದಿಂದ ದೂರವಿರುವುದು.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ನಿಮ್ಮ ಪೈಕಿ ಉತ್ತಮ ಕರ್ಮವೆಸಗುವವರು ಯಾರೆಂದು ಪರಿಕ್ಷಿಸುವ ಸಲುವಾಗಿ ಅವನು ಮರಣ ಮತ್ತು ಜೀವನವನ್ನು ಸೃಷ್ಟಿಸಿದನು. ಅವನು ಪ್ರತಾಪಶಾಲಿಯು ಕ್ಷಮಾಶೀಲನೂ ಆಗಿದ್ದಾನೆ.‘ ಸುಸ್ಪಷ್ಟ ಖುರ್‍ಆನ್ ಅಧ್ಯಾಯ67:2ನೇ ಸೂಕ್ತ.
ಪ್ರಪಂಚದ ಈ ಜೀವನ ನಮಗೊಂದು ಪರೀಕ್ಷೆಯಷ್ಟೇ. ನಮ್ಮಲ್ಲಿ ಯಾರು ದೇವನನ್ನು ಆರಾಧಿಸುತ್ತಾರೆ ಮತ್ತು ಯಾರು ಆತನ ಆಜ್ಞೆಗೆ ಒಳಗಾಗಿ ಉತ್ತಮ ಕರ್ಮವೆಸಗುತ್ತಾರೆ ಎಂಬುದನ್ನು ದೇವನು ನೋಡಲಿಚ್ಚಿಸುತ್ತಾನೆ.
ದೇವನಿಂದ ಮಾರ್ಗದರ್ಶನ’ ನಮಗೇಕೆ ಅವಶ್ಯಕ?
ನಾವು ಬಹಳ ಬುದ್ದಿಜೀವಿಯೂ ಹಾಗೂ ಒಳಿತು ಕೆಡುಕನ್ನು ನಿರ್ದರಿಸಬಲ್ಲೆವಾದ್ದರಿಂದ ನಮಗೆ ದೇವನ ಮಾರ್ಗದರ್ಶನದ ಅವಶ್ಯಕತೆಯೇ ಇಲ್ಲವೆಂದು ಭಾವಿಸುತ್ತಾರೆ. ನಾವು ಈ ಅಧಿಕಾರವಾಣಿ ಸರಿಯಾಗಿದೆಯೇ ಎಂದು ನೋಡೋಣ.
ಈ ಪ್ರಪಂಚವು ಮಾನವನ ಜೀವನದ ಕುರಿತಾಗಿ ಚಿಂತಿಸಿದ ಮತ್ತು ಅನೇಕ ಬರಹಗಳನ್ನು ಬರೆದ ಅನೇಕ ಚಿಂತಕರು, ತತ್ವಜ್ಞಾನಿಗಳು, ಮನೋವಿಜ್ಞಾನಿಗಳನ್ನು ಕಂಡಿದೆ. ಚಾಲ್ರ್ಸ್ ಡಾರ್ವಿನ್, ಸಿಗ್ಮಂಡ್ ¥sóÁ್ರಯ್ಡ್, ಹೇಗೆಲ್ ಮತ್ತು ಕಾರ್ಲ್ ಮಾಕ್ರ್ಸ್ ಇತರರು ಅನೇಕ ದೃಷ್ಟಿಕೋನದಿಂದ ಗಮನಿಸಿದ್ದಾರೆ ಮತ್ತು ವಿಭಿನ್ನ ಸಿದ್ಧಾಂತಗಳನ್ನು ಆವಿಷ್ಕರಿಸಿದ್ದಾರೆ.
1.ಅವರ ದೃಷ್ಟಿಯಲ್ಲಿ ಮಾನವನನ್ನು ಅರಿಯುವುದೆಂದರೆ, ದೇಹ, ಅದರ ಆಕಾರ ಮತ್ತು ಅದರ ರೂಪದ ಕುರಿತಾಗಿತ್ತು. ಆದ್ದರಿಂದಲೇ ದೇಹವನ್ನು ಗಮನದಲ್ಲಿರಿಸಿ ಕೆಲವು ನಿರ್ಧಾರಕ್ಕೆ ಬಂದರು.
2.ಇನ್ನು ಕೆಲವರು ಮಾನವನನ್ನು ಅವನ ಕಸುಬಿನಿಂದ ಗಮನಿಸಿದರು, ಮತ್ತು ಆತನನ್ನು ಪ್ರಾಣಿಶಾಸ್ತ್ರದ ಆಧಾರದಲ್ಲಿ ಮೌಲ್ಯಮಾಪನ ಮಾಡಿದರು.
3.ಮತ್ತು ಕೆಲವು ಚಿಂತಕರ ಪ್ರಕಾರ ಹಸಿವು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ಅರಿಯಲು ಉದ್ದೇಶಿಸಿದರು. ಮತ್ತು ಅವರು ಇದನ್ನು ಬಹಳ ಮುಖ್ಯವಾಗಿ ಪರಿಗಣಿಸಿ, ಹಸಿವೇ ಎಲ್ಲಾ ತೊಂದರೆಗಳ ಮೂಲವೆಂದು ನಿರ್ಧರಿಸಿದರು. ಒಮ್ಮೆ ಈ ತೊಂದರೆ ತೀರಿದಲ್ಲಿ ಎಲ್ಲವೂ ಸರಿಹೋಗುವುದೆಂದು ಭಾವಿಸುತ್ತಾರೆ.
4.ಕೆಲವರು ಲೈಂಗಿಕತೆಯೇ ಮಾನವ ಹಾಗೂ ಆತನ ಜೀವನದ ಅತಿಮುಖ್ಯ ಘಟ್ಟವೆಂದು ನಿರ್ಧರಿಸಿ, ಅದರ ಕುರಿತು ಅವರು ಏನೆಲ್ಲಾ ನೋಡಿದರೋ, ಕೇಳಿದರೋ ಮತ್ತು ಗ್ರಹಿಸಿದರ ಆಧಾರದ ಮೇಲೆ ಅವರು ಮಾನವನ ಸಂಪೂರ್ಣ ಚಟುವಟಿಕೆಗಳು ಲೈಂಗಿಕತೆಯ ಮೇಲೆ ಕೇಂದ್ರಿಕೃತವೆಂದೂ ಮತ್ತು ಲೈಂಗಿಕತೆಯ ಮೇಲಿರುವ ಎಲ್ಲಾ ಅಡೆತಡೆಗಳನ್ನು ತೆಗೆದಾಗ ಎಲ್ಲವೂ ಸರಿಹೋಗುತ್ತದೆ ಎಂದು ನಿರ್ಧರಿಸಿದರು.
5.ಇನ್ನೂ ಕೆಲವರು ಆಧ್ಯಾತ್ಮಿಕತೆಗೆ ಅಯೋಗ್ಯ ಮಹತ್ವವನ್ನು ನೀಡಿ, ದೇಹ ಹಾಗೂ ಅದರ ಅವಶ್ಯಕತೆಗಳನ್ನು ಕಡೆಗಣಿಸಿದರು.
ಆದ್ದರಿಂದ ದೈವೀಕ ಮಾರ್ಗದರ್ಶನವನ್ನು ಅಗಲಿ ಮಾನವನನ್ನು ಅರಿಯಲು ಹೊರಟ ಜನರು, ಆನೆಯನ್ನು ತಮ್ಮದೇ ಆದ ರೀತಿಯಲ್ಲಿ ಅರಿತ ಕುರುಡರಂತೆ. ಅವರು ಕೆಲವು ನಿರ್ಧಾರಕ್ಕೆ ಬಂದರಾದರೂ, ಅದು ಸಂಪೂರ್ಣವಾಗಿ ತಪ್ಪಾಗಿತ್ತು ಹಾಗೂ ಸರಿಯಿರಲಿಲ್ಲ.
ಸರಿಯಾದ ಮಾರ್ಗದರ್ಶನವನ್ನು ನೀಡಲು ದೇವನೊಬ್ಬನಿಂದಲೇ ಸಾಧ್ಯ.
ತಾನು ನಿರ್ಮಾಣ ಮಾಡಿದ ವಸ್ತುಗಳ ಉತ್ಕøಷ್ಟತೆಯ ಕುರಿತು ನಿರ್ಮಾಣಕಾರನೊಬ್ಬನೇ ಬಲ್ಲನು. ಉದಾಹರಣೆಗೆ, ಒಂದು ವಾಹನದ ನಿರ್ಮಾತೃ ನಿರ್ದೇಶಿಸಿದ ತೈಲವು, ವಾಹನದ ಬಿಡಿಭಾಗಗಳು ಅತ್ಯುತ್ತಮವಾಗಿಯೇ ಇರುತ್ತದೆ. ಅತಿಸಣ್ಣ ವಸ್ತುವಾಗಲಿ ಅಂದರೆ, ಚಕ್ರದ ಗಾಳಿಒತ್ತಡದ ಕುರಿತಾಗಲಿ, ವಾಹನದ ನಿರ್ಮಾತೃವಿನ ನಿರ್ದೇಶಿಸಿದಂತೆ ಪಾಲಿಸುತ್ತೇವೆ. ಯಾರಾದರು ‘ಅದು ಯಾಕೆ?’ ಎಂದು ಪ್ರಶ್ನಿಸಬಹುದು. ಇದು ನಮ್ಮ ವಾಹನ, ಇದನ್ನು ನಾವು ಕೊಂಡಿದ್ದೇವೆ ಮತ್ತು ನಾವು ಉಪಯೋಗಿಸುತ್ತೇವೆ. ಆದರೂ ಏಕೆ ನಾವು ನಮ್ಮಿಚ್ಚೆಯ ಮೇರೆ ಇದನ್ನು ಉಪಯೋಗಿಸುವುದಿಲ್ಲ. ಅಂದಂದಿನ ನಮ್ಮ ಮನಃಸ್ಥಿತಿಯಂತೆ ನಾವ್ಯಾಕೆ ಚಕ್ರದ ಗಾಳಿಯನ್ನು ಬದಲಾಯಿಸುವುದಿಲ್ಲ. ನಮ್ಮ ಚಪಲ ಹಾಗೂ ಕಲ್ಪನೆಯಂತೆ ಯಾಕೆ ಅದನ್ನು ಮಾರ್ಪಡಿಸುವುದಿಲ್ಲ? ಏಕೆಂದರೆ, ನಾವು ವಾಹನದ ನಿರ್ಮಾತೃವನ್ನು ವಾಹನದ ಕುರಿತಾಗಿ ಹೆಚ್ಚಿಗೆ ತಿಳಿದವನೆಂದು ನಂಬುತ್ತೇವೆ. ಕ್ಷುಲ್ಲಕ ವಿಚಾರಗಳಿಗೂ ನಾವು ವಾಹನದ ನಿರ್ಮಾತೃವನ್ನು ಅವಲಂಭಿಸುತ್ತೇವೆ. ಮಾನವ ನಿರ್ಮಿತ ಸಂಗತಿಗಳ ಕುರಿತಾಗಿ ಹೀಗಾದರೆ, ನಮ್ಮ ಜೀವನದ ಕುರಿತಾಗಿ, ನಾವು ನಮ್ಮ ಸೃಷ್ಟಿಕರ್ತನೂ, ಸರ್ವಶಕ್ತನಾದ ದೇವನ ಮಾರ್ಗದರ್ಶನದ ತೊರೆದು ನಿರ್ಧರಿಸಲು ಹಾಗೂ ತರ್ಕಿಸಲು ಹೇಗೆ ಸಾಧ್ಯ?
ನಾವು ಮಾನವನನ್ನು ಯಂತ್ರವೆಂದು ಕರೆದದ್ದೇ ಆದಲ್ಲಿ, ಪ್ರಪಂಚದಲ್ಲಿ ನಾವೊಂದು ಗೋಜಿನ ಯಂತ್ರವಾಗಿದ್ದೇವೆ ಯಾಕೆಂದರೆ, ನಮ್ಮಲ್ಲಿರುವ ಯೋಚಿಸುವ ಸಾಮಥ್ರ್ಯ ಮತ್ತು ಭಾವನೆಗಳು. ದೇವನು ನಮ್ಮ ಸೃಷ್ಟಿಕರ್ತ, ನಮಗೆ ಯಾವುದು ಒಳ್ಳೆಯದೆಂದು ಆತನಿಗೆ ಅರಿವಿದೆ ಮತ್ತು ಆತನು ನಾವು ಅನುಸರಿಸಬೇಕಾದ ಜೀವನ ಮಾರ್ಗವನ್ನು ಆತನ ಸಂದೇಶವಾಹಕರ ಮೂಲಕ ಹಾಗೂ ಆತನ ಸೂಕ್ತಗಳಿಂದ ವಿವರಿಸಿದ್ದಾನೆ. ದೇವನ ಮಾರ್ಗದರ್ಶನದಿಂದ ದೂರಸರಿಯುವುದು, ಅವ್ಯವಸ್ಥೆ ಹಾಗೂ ವಿನಾಶಕ್ಕೆ ಮುನ್ನಡೆಸುತ್ತದೆ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ನಿಸ್ಸಂದೇಹವಾಗಿಯು ಮಾರ್ಗದರ್ಶನ ಮಾಡುವುದು ನಮ್ಮ ಹೊಣೆಯಾಗಿದೆ.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ92:12ನೇ ಸೂಕ್ತ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ನಾವು ಹೇಳಿದೆವು, ನೀವೆಲ್ಲ ಇಲ್ಲಿಂದ ಕೆಳಗಿಳಿಯಿರಿ. ಮುಂದೆ ನನ್ನ ಕಡೆಯಿಂದ ನಿಮಗೆ ಮಾರ್ಗದರ್ಶನ ಬಂದರೆ, ಅದನ್ನು ಅನುಸರಿಸುವವರಾರೋ. ಅವರಿಗೆ ಯಾವೊಂದು ಭಯವೂ ಇರಲಾರದು; ವ್ಯಸನವೂ ಇರದು.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ2:38ನೇ ಸೂಕ್ತ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ಮತ್ತು ಹೇಳಿದನು. ನೀವಿಬ್ಬರೂ (ಮನುಷ್ಯನೂ, ಸೈತಾನನು) ಇಲ್ಲಿಂದ ಇಳಿದುಬಿಡಿ. ನೀವು ಪರಸ್ಪರ ಶತ್ರುಗಳಾಗುವಿರಿ. ಮುಂದೆ ನನ್ನ ವತಿಯಿಂದ ನಿಮಗೇನಾದರೂ ಮಾರ್ಗದರ್ಶನ ತಲುಪಿದರೆ, ಯಾವನು ಆ ನನ್ನ ಮಾರ್ಗದರ್ಶನವನ್ನು ಅನುಕರಿಸುವನೋ, ಅವನು ದಾರಿ ತಪ್ಪಲಿಕ್ಕೂ ಇಲ್ಲ. ದೌರ್ಭಾಗ್ಯದೊಳಗೆ ಸಿಲುಕಲಿಕ್ಕೂ ಇಲ್ಲ.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ20:123ನೇ ಸೂಕ್ತ.
ದೇವನು ಹೇಗೆ ಮಾನವನನ್ನು ಸಂಪರ್ಕಿಸುತ್ತಾನೆ?
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ಅವರೆಲ್ಲರೂ ಸವಾರ್ತೆ ಕೊಡುವ. ಮುನ್ನೆಚ್ಚರಿಕೆ ಕೊಡುವ ಸಮದೇಶವಾಕರಾಗಿದ್ದರು. ಇದು ಆ ಸಂದೇಶವಾಹಕರ ನಂತರ ಜನರಿಗೆ ಅಲ್ಲಾಹನೆದುರು ಒಂದು ತರ್ಕ-ಆಧಾರವಿರದಂತಾಗಲಿಕ್ಕೆ. ಅಲ್ಲಾಹನು ಪ್ರತಾಪಶಾಲಿಯೂ, ಯುಕ್ತಿವಂತನೂ ಆಗಿರುತ್ತಾನೆ. ಸುಸ್ಪಷ್ಟ ಖುರ್‍ಆನ್ ಅಧ್ಯಾಯ4:165ನೇ ಸೂಕ್ತ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘(ಪ್ರವಾದಿಗಳೇ!) ವಿಶ್ವಾಸವಿಟ್ಟು ಸತ್ಕಾರ್ಯಗಳನ್ನು ಮಾಡುವವರಿಗೆ ಈ ಸುವಾರ್ತೆಯನ್ನು ಅರುಹಿರಿ, ಅವರಿಗಾಗಿ ತಳಭಾಗದಲ್ಲಿ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆ. ಅವರಿಗೆ ಅಲ್ಲಿ ಆಹಾರವಾಗಿ ಫಲಗಳನ್ನು ಕೊಡುವಾಗಲೆಲ್ಲ ಹಿಂದೆ (ಭೂಮಿಯಲ್ಲಿ) ನಮಗೆ ಕೊಟ್ಟಿದ್ದ ಫಲಗಳಿವು ಎಂದು ಅವರು ಹೇಳುವರು. (ನಿಜಕ್ಕೂ) ಹೋಲಿಕೆಯಿರುವವುಗಳನ್ನೇ ಅವರಿಗೆ ಕೊಡಲಾಗುವುದು, ಅಲ್ಲಿ ಅವರಿಗೆ ಪರಿಶುದ್ಧ ಜೊತೆಗಳು (ಸಂಗಾತಿಗಳು) ಇದ್ದಾರೆ; ಅಲ್ಲಿ ಅವರು ಶಾಶ್ವತವಾಗಿ ಬಾಳುವರು.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ57:25ನೇ ಸೂಕ್ತ.
ದೇವನು ನಮ್ಮನ್ನು ಸೃಷ್ಟಿಸಿ, ಮಾರ್ಗದರ್ಶನವಿಲ್ಲದಂತೆಯೇ ನಮ್ಮನ್ನು ಬಿಟ್ಟಿಲ್ಲ. ದೇವನು ಆತನ ಸಂದೇಶವಾಹಕರನ್ನು ಕಳುಹಿಸಿ, ದೇವನ ಕೃಪೆಗೆ ಪಾತ್ರರಾಗುವಂತೆ ಹೇಗೆ ಪ್ರಮಾಣಿಕ ಜೀವನವನ್ನು ನಡೆಸಬೇಕು ಎಂಬುದನ್ನು ಕಲಿಸಿಕೊಟ್ಟನು.
ಪ್ರವಾದಿಗಳೆಂದರೆ ಯಾರು?
ಪ್ರವಾದಿಗಳೆಂದರೆ, ಪ್ರಮಾಣಿಕಮನುಷ್ಯರಾಗಿದ್ದು ಇತರರಿಗೆ ಆದರ್ಶವಾಗಿ ಜೀವನ ನಡೆಸಿದವರು. ಪ್ರವಾದಿಗಳು ಮಾನವರೇ ಹೊರತು ಯಾವುದೇ ಸ್ವರ್ಗೀಯ ದಿವ್ಯಶಕ್ತಿಯನ್ನು ಹೊಂದಿಲ್ಲ. ಕೆಲವು ಪ್ರವಾದಿಗಳೆಂದರೆ, ನೋಹ್, ಅಬ್ರಹಾಮ್, ಡೇವಿಡ್, ಸೋಲೊಮನ್, ಮೋಸಸ್ ಮತ್ತು ಜೀಸಸ್(ಅವರ ಮೇಲೆ ಶಾಂತಿ ಇರಲಿ). ದೇವನು ಪ್ರವಾದಿಗಳನ್ನು ಎಲ್ಲಾ ಸ್ಥಳಗಳಿಗೂ ಕಳುಹಿಸಿರುತ್ತಾನೆ, ಭಾರತಕ್ಕೂ ಕೂಡ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ಹೇ ಜಿನ್ ಮತ್ತು ಮನುಷ್ಯ ಸಮೂಹವೇ! ನನ್ನ ನಿರ್ದೇಶಗಳನ್ನು ನಿಮಗೆ ಕೇಳಿಸುತ್ತ ಹಾಗೂ ಇಂದಿನ ದಿವಸದ ಭೇಟಿಯನ್ನು ಕುರಿತು ನಿಮಗೆ ಮುನ್ನೆಚ್ಚರಿಕೆ ನೀಡುತ್ತ ನಿಮ್ಮೊಳಗಿಂದಲೇ ಸಂದೇಶವಾಹಕರು ನಿಮ್ಮ ಬಳಿ ಬಂದಿರಲಿಲ್ಲವೇ? ಅವರು ಹೇಳುವರು, (ಅಹುದು) ನಾವೀಗ ನಮಗೇ ಇದಿರು ಸಾಕ್ಷ್ಯ ವಹಿಸುತ್ತೇವೆ. ಇಹಲೋಕ ಜೀವನ ಅವರನ್ನು ವಂಚಿಸಿತು. ತಾವು ಸತ್ಯನಿಷೇಧಿಗಳಾಗಿದ್ದರೆಂದು ಅವರು ತಮಗೆದುರು ತಾವೇ ಸಾಕ್ಷ್ಯವಹಿಸುವರು.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ 6:130ನೇ ಸೂಕ್ತ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ಎಲ್ಲ ಜನಾಂಗಗಳಲ್ಲಿಯೂ ನಾವು ಸಂದೇಶವಾಹಕರನ್ನು ನಿಯೋಗಿಸಿರುತ್ತೇವೆ. ನೀವು ಅಲ್ಲಾಹನ `ಇಬಾದತ್’ ಮಾಡಿರಿ ಮತ್ತು `ತಾಗೂತ’ರಿಂದ ದೂರವಿರಿ. – (ಎಂಬ ಸಂದೇಶದೊಂದಿಗೆ) ಅವರ ನಂತರವೂ ಅವರಲ್ಲೊಂದು ತಂಡಕ್ಕೆ ಅಲ್ಲಾಹನು ಮಾರ್ಗದರ್ಶನ ಮಾಡಿದನಲ್ಲದೆ, ಪಥಭ್ರಷ್ಟತೆಗೆ ವಿಧೇಯರಾದ ಕೆಲವರೂ ಅವರಲ್ಲಿದ್ದಾರೆ. ಹೀಗಿರುವಾಗ ಭೂಮಿಯಲ್ಲಿ ನೀವು ಸಂಚರಿಸಿ ನೋಡಿ! – (ಸತ್ಯವನ್ನು) ಸುಳ್ಳಾಗಿಸಿದವರ ಪರಿಣಾಮ ಏನಾಗಿರುವುದೆಂದು.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ16:36ನೇ ಸೂಕ್ತ.
ಪ್ರವಾದಿಗಳೇಕೆ ಮಾನವರು?
ನಿಮಗೆ ಬಟ್ಟೆ ಒಗೆಯುವ ಯಂತ್ರದ ಇತರರಿಗೆ ಪ್ರತಿಪಾದಿಸುವಾಗ ಬಟ್ಟೆ ಒಗೆಯುವ ಯಂತ್ರವನ್ನೇ ಬಳಸುತ್ತೇವೆಯೇ ಹೊರತು, ನೆಲಗುಡಿಸುವ ಯಂತ್ರವನ್ನಲ್ಲ. ಅದೇ ರೀತಿಯಾಗಿ ದೇವನು ಕೂಡ ಆದರ್ಶವ್ಯಕ್ತಿಗಳನ್ನೇ ಇತರರಿಗೆ ಹೇಗೆ ಉತ್ತಮವಾಗಿ ಜೀವಿಸಬೇಕೆಂಬ ಮಾದರಿಯಾಗಿ ಕಳುಹಿಸಿರುತ್ತಾನೆ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ಹೇಳಿರಿ. ಭೂಮಿಯಲ್ಲಿ ಮಲಕ್ (ದೇವದೂತ)ರು ನೆಮ್ಮದಿಯೊಂದಿಗೆ ಅಡ್ಡಾಡುತ್ತಿದ್ದರೆ. ನಾವು ಅವರಿಗಾಗಿ ಆಕಾಸದಿಂದ ಒಬ್ಬ ಮಲ್ಲಕ್ (ದೇವದೂತ)ನನ್ನೇ ಸಂದೇಶ ವಾಹಕನಾಗಿ ಕಳುಹಿಸಿ ಕೊಡುತ್ತಿದ್ದೆವು.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ17:95ನೇ ಸೂಕ್ತ.
ಭಾರತಕ್ಕೆ ಕಳುಹಿಸಲ್ಪಟ್ಟ ಪ್ರವಾದಿಗಳಾರು? ರಾಮ, ಕೃಷ್ಣ, ಬುದ್ಧರನ್ನು ಪ್ರವಾದಿಗಳೆಂದು ಪರಿಗಣಿಸಬಹುದೇ?
ದೇವನು ಸುಸ್ಪಷ್ಟ ಖುರ್‍ಆನ್‍ನಲ್ಲಿ ಪ್ರತಿರಾಷ್ಟ್ರಕ್ಕೆ ಪ್ರವಾದಿಗಳನ್ನು ಕಳುಹಿಸಿರುವುದಾಗಿ ಉಲ್ಲೇಖಿಸಿರುವುದರಿಂದ, ಭಾರತದಲ್ಲಿ ಕೂಡ ಪ್ರವಾದಿಗಳಿದ್ದರು ಎಂಬುದನ್ನು ನಾವು ಕೂಡ ಬಲವಾಗಿ ವಿಶ್ವಾಸಿಸಬೇಕು. ಕೇವಲ 25 ಪ್ರವಾದಿಗಳ ಹೆಸರುಗಳು ಮಾತ್ರ ಖುರ್‍ಆನ್‍ನಲ್ಲಿ ಉಲ್ಲೇಖಿಸಲ್ಪಟ್ಟಿವೆ. ಉದಾಹರಣೆಗೆ, ಆದಾಮ್, ನೂಹ್, ಇಬ್ರಾಹೀಮ್, ಮೂಸ, ಈಸಾ, ಮುಹಮ್ಮದ್(ಅವರ ಮೇಲೆ ಶಾಂತಿಯಿರಲಿ). ದೇವನು ಖುರ್‍ಆನ್‍ನಲ್ಲಿ ತಾನೇ ತಿಳಿಸಿದಂತೆ, ಆತನು ಕೆಲವು ಪ್ರವಾದಿಗಳ ಗಾಥೆಗಳನ್ನು ಮಾತ್ರ ಉಲ್ಲೇಖಿಸಿದ್ದಾನೆ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ಅದೇ ರೀತಿ, ನಿಮಗೆ ನಾವು ಈ ಮೊದಲು ವಿವರಿಸಿಕೊಟ್ಟಂತೆ, ಅನೇಕ ಸಂದೇಶವಾಹಕರಿದ್ದರು. ನಿಮಗೆ ತಿಳಿಸಿರದ ಅದೆಷ್ಟೋ ಸಂದೇಶವಾಹಕರೂ ಇದ್ದರು. ಮೂಸಾರೊಡನೆ ಅಲ್ಲಾಹನು ನೇರವಾಗಿಯೇ ಮಾತನಾಡಿದನು.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ4:164ನೇ ಸೂಕ್ತ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ನಿಶ್ಚಯವಾಗಿಯೂ ನಾವು ತಮಗೆ ಮೊದಲು ಸಹ ಅನೇಕ ಸಂದೇಶವಾಹಕರನ್ನು ಕಳುಹಿಸಿರುತ್ತೇವೆ. ಅವರ ಪೈಕಿ ಕೆಲವರ (ವೃತ್ತಾಂತಗಳ)ನ್ನು ನಾವು ತಮಗೆ ವಿವರಿಸಿಕೊಟ್ಟಿರುತ್ತೇವೆ ಮತ್ತು ಅವರ ಪೈಕಿ ಕೆಲವರ(ವೃತ್ತಾಂತವ)ನ್ನಂತು ನಾವು ತಮಗೆ ವಿವರಿಸಿಯೇ ಕೊಟ್ಟಿಲ್ಲ ಮತ್ತು ಯಾವೊಬ್ಬ ಸಂದೇಶವಾಹಕನು ಅಲ್ಲಾಹನ ಅಪ್ಪಣೆ ಇಲ್ಲದೆ ಯಾವೊಂದು ದೃಷ್ಟಾಂತ ತರುವುದು (ಅವರ ಸಾಮಥ್ರ್ಯದ ವ್ಯಾಪ್ತಿಯಲ್ಲಿ) ಇರುವುದಿಲ್ಲ. ಅನಂತರ ಯಾವಾಗ ಅಲ್ಲಾಹನ ಆದೇಶವು ಬರುತ್ತದೋ ಸತ್ಯದೊಂದಿಗೆ ನ್ಯಾಯತೀರ್ಪು ನೀಡಲಾಗುತ್ತದೆ. ಹಾಗೂ ಅಲ್ಲಿ ಮಿಥ್ಯವಾದಿಗಳು ನಷ್ಟದಲ್ಲಿ ಬಿದ್ದಿರುತ್ತಾರೆ.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ40:78ನೇ ಸೂಕ್ತ.
ಭಾರತಕ್ಕೆ ಕಳುಹಿಸಲ್ಪಟ್ಟ ಪ್ರವಾದಿಗಳ ಹೆಸರುಗಳು ಖುರ್‍ಆನ್‍ನಲ್ಲಿ ಇಲ್ಲದಿರುವುದರಿಂದ ರಾಮ, ಕೃಷ್ಣ, ಬುದ್ಧರನ್ನು ಪ್ರವಾದಿಗಳೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ದೇವನು ಸ್ವತಃ ಭೂಮಿಗೆ ಬಂದನೇ? ಅಥವಾ ಅವತಾರವೆತ್ತಿದನೇ?
ದೇವನು ಭೂಮಿಗೆ ಬರಲಿಲ್ಲ ಅಥವಾ ಅವತಾರವೆತ್ತಿಲ್ಲ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ಅಲ್ಲಾಹನು ಯಾವೊಬ್ಬ ದಾಸನೊಂದಿಗೆ ಮಾತುಕತೆ ನಡೆಸುವುದು ಅಸಂಭವನೀಯವಾಗಿದೆ; ಆದರೆ ವಹ್ಯ್‍ನ ಮೂಲಕ ಅಥವಾ ಮರೆಯ ಹಿಂದಿನಿಂದ ಅಥವಾ ಯಾವುದಾದರೂ ಮಲಕ್‍ದೂತನನ್ನು ಕಳುಹಿಸುವುದರ ಹೊರತು ಮತ್ತು ಅವನು ಅಲ್ಲಾಹನ ಅಪ್ಪಣೆ ಪ್ರಕಾರ ಅವನು ಉದ್ದೇಶಿಸುವುದನ್ನು ವಹ್ಯ್ ಮಾಡುತ್ತಾನೆ. ನಿಸ್ಸಂಶಯವಾಗಿಯೂ ಅವನು ಉನ್ನತನೂ, ಯುಕ್ತಿಪೂರ್ಣನೂ ಆಗಿದ್ದಾನೆ.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ42:51ನೇ ಸೂಕ್ತ.
ದೇವನೇಕೆ ಸ್ವತಃ ಆತನೇ ಭೂಮಿಯಲ್ಲಿ ಅವತರಿಸಲಿಲ್ಲ?
ದೇವನು ಭೂಮಿಗೆ ಬರುವುದು ಮಾನವನ ದೋಷಗಳ ಮಿತಿಯಾಗುತ್ತದೆ ಮತ್ತು ದೇವನ ದೈವಿಕತೆಯ ಗುಣಕ್ಕೆ ಯಾವುದೇ ಫಲಪ್ರದವಾಗಿರುವುದಿಲ್ಲ.
ದೇವರು ಮತ್ತು ಮಾನವ ತದ್ವಿರುದ್ಧ. ಇದು ಒಂದೇ ಸಮಯದಲ್ಲಿ ಚೌಕಾಕೃತಿ ಹಾಗೂ ವೃತ್ತವನ್ನು ಹೊಂದಿರುವ ಒಂದು ರೇಖಾಕೃತಿಯಂತೆ.
ಉದಾಹರಣೆಗೆ,
1.ದೇವನು ಮರಣ ಹೊಂದನು, ಆದರೆ ಮಾನವನು ಮರಣಹೊಂದುವನು.
2.ದೇವನಿಗೆ ಅವಶ್ಯಕತೆಗಳಿಲ್ಲ. ಆದರೆ ಮಾನವನಿಗೆ ಅವಶ್ಯಕತೆಗಳಿವೆ.
3.ದೇವನಿಗೆ ಮಿತಿಗಳಿಲ್ಲ, ಆದರೆ ಮಾನವನಿಗೆ ಕೆಲವು ಮಿತಿಗಳಿವೆ. ಉದಾಹರಣೆಗೆ, ಮಾನವನು ನಾಯಿಗಳು ಕೇಳುವುದನ್ನು ಕೇಳಲಾರ, ಗೂಬೆಗಳು ಕಾಣಬಲ್ಲವನ್ನು ಕಾಣಲಾರ ಇತ್ಯಾದಿಗಳು. ದೇವನೇನಾದರೂ ಮಾನವನಾದರೆ, ಈ ಎಲ್ಲಾ ನ್ಯೂನ್ಯತೆಗಳನ್ನು ದೇವನೂ ಹೊಂದಿದಂತಾಗುತ್ತದೆ. ಇದು ದೇವನ ದೈವೀಕತೆಯ ಗುಣದ ನ್ಯೂನ್ಯತೆ ಎಂದಾಗುತ್ತದೆ.
4.ದೇವನು ಸಮಯದ ಅಥವಾ ಅವಧಿಯ ಬಂಧನಕ್ಕೆ ಒಳಪಡಲಾರ, ಏಕೆಂದರೆ ಸಮಯ ಹಾಗೂ ಅವಧಿಯು ದೇವನಿಂದ ಸೃಷ್ಟಿಸಲ್ಪಟ್ಟಿದೆ. ಆದರೆ ಮಾನವನು ಸಮಯ ಹಾಗೂ ಅವಧಿಗೆ ಒಳಪಡುತ್ತಾನೆ.
ಸತ್ಯಾಂಶವೇನೆಂದರೆ, ನೀಡಲ್ಪಟ್ಟ ಅಂಶ ಸಮಯದ ಪ್ರಕಾರ ವ್ಯಕ್ತಿಯೋರ್ವ ದೇವನಾಗಲಾರ, ಅದೇರೀತಿ ದೇವನು ಮಾನವನಾಗಲಾರ. ಅಥವಾ ಎರಡೂ ಕೂಡ ಏಕಕಾಲದಲ್ಲಿಯೂ ಸಂಭವಿಸುವುದಿಲ್ಲ.
ಕೆಲವರು ವಾದಿಸಬಹುದು, ಆತನು ದೇವನಾದ್ದರಿಂದ ಏನನ್ನು ಬೇಕಾದರೂ ಮಾಡಬಹುದು. ಆತನು ಒಂದೇ ಸಮಯದಲ್ಲಿ ದೇವನಾಗಿಯೂ ಮಾನವನಾಗಿಯೂ ಇರಬಹುದೆಂದು.
ದೇವನು ಏನನ್ನು ಬೇಕಾದರೂ ಮಾಡಬಹುದಾದರೆ, ದೇವನು ಅನ್ಯಾಯ ಮಾಡುತ್ತಾನೆಯೇ? ದೇವನು ಸುಳ್ಳಾಡುತ್ತಾನೆಯೇ? ಉತ್ತರ ಇಲ್ಲವೆಂದೇ ಆಗಿರುತ್ತದೆ. ದೇವನು ಅನ್ಯಾಯ ಮಾಡಬೇಕೆಂದೋ, ಸುಳ್ಳಾಡಬೇಕೆಂದೋ ಯೋಚಿಸಿದಲ್ಲಿ, ಅವನು ಹಾಗೆಯೇ ಮಾಡಬಹುದು. ಆದರೆ ಆತನು ಆರೀತಿ ಮಾಡಲಾರ. ಕಾರಣ, ಸುಳ್ಳಾಡುವುದು, ಅನ್ಯಾಯ ಮಾಡುವುದು ದೇವನ ಫಲಪ್ರದ ಗುಣಗಳಲ್ಲ. ಆತನೇನೇ ಮಾಡಿದರೂ ಅತನ ದೈವೀಕ ಗುಣಗಳಿಗೆ ಫಲಪ್ರದವಾಗುವುದನ್ನೇ ಆತನು ಮಾಡುತ್ತಾನೆ.
ನಾವೇನಾದರೂ ದೇವನು ಮಾನವನಾಗಿ ಭೂಮಿಗೆ ಬಂದನೆಂದು ಕಲ್ಪಿಸಿದರೆ, ಅದು ಮಾನವರನ್ನು ಮಾರ್ಗದರ್ಶನ ಮಾಡುವ ಉದ್ದೇಶವನ್ನು ಪುಷ್ಟೀಕರಿಸುವುದಿಲ್ಲ. ನಮಗೆ ಸಾವಿರಾರು ವಿವಾಹವಾಗಿ ಜೀವಿಸಿದ, ವಸ್ತುಗಳನ್ನು ಕಳ್ಳತನ ಮಾಡಿದ, ಸುಳ್ಳು ಹೇಳಿದ ಹಾಗೂ ಮೋಸ ಮಾಡಿದ ದೇಹಧಾರಿ ದೇವರುಗಳ ಕಥೆಗಳು ನಮಗೆ ತಿಳಿದಿವೆ. ಸಾಮಾನ್ಯ ವ್ಯಕ್ತಿಗಳು ಹೀಗೆಂದು ತರ್ಕಿಸಬಹುದು, ‘ಅವರು ದೇವರುಗಳಾದ್ದರಿಂದ ಅವರು ಮಾಡಬಹುದು, ಆದರೆ ಮಾನವರಾದ ನಾವು ಅದನ್ನು ಮಾಡಬಾರದು. ಇದು, ಅವರುಗಳೂ ಕೂಡ ನಮ್ಮಂತೆಯೇ ಮಿತಿಗಳನ್ನು ಹೊಂದದೇ ಮತ್ತು ಅವರು ನಮ್ಮಂತೆ ಆಗಾಗ ಒಳಗಾಗುವ ತತ್ವಗಳಿಗೆ ಒಳಗಾಗದೇ ಇರುವವರೆಗೆ, ದೇಹಧಾರಿ ದೇವರುಗಳು ನಮಗೆ ಉತ್ತಮ ಆದರ್ಶ ಮಾದರಿಗಳಲ್ಲವೆಂಬುದನ್ನು ಸಾಧಿಸಿತೋರುತ್ತದೆ.
ಈ ಎಲ್ಲಾ ಅಂಶಗಳು ನಮಗೆ ತಿಳಿಸುವುದೇನೇಂದರೆ, ಮಾನವನಿಗೆ ಉತ್ತಮ ಆದರ್ಶಮಾದರಿ ಮಾನವನೇ ಹೊರತು, ದೇಹಧಾರಿ ದೇವನಲ್ಲ.
ಪ್ರವಾದಿ ಮುಹಮ್ಮದ್(ಸ)ರು ಯಾರು?
ಪ್ರವಾದಿಗಳ ಸರಣಿಯಲ್ಲಿ ಕೊನೆಯ ಹಾಗೂ ಅಂತಿಮ ಪ್ರವಾದಿಯೇ ಪ್ರವಾದಿ ಮುಹಮ್ಮದ್(ಸ)ರು. ಆತನು ಸಂಪೂರ್ಣ ಮಾನವಜನಾಂಗಕ್ಕೆ ಅಂತ್ಯ ಸಮಯದವರೆವಿಗೂ ಪ್ರವಾದಿಯಾಗಿ ಕಳುಹಿಸಲ್ಪಟ್ಟವನು. ಎಲ್ಲಾ ಪೂರ್ವ ಪ್ರವಾದಿಗಳು ಪ್ರತ್ಯೇಕ ಸಂದರ್ಭದಲ್ಲಿ, ಪ್ರತ್ಯೇಕ ಜನಾಂಗಕ್ಕೆ ನೇಮಿಸಲ್ಪಟ್ಟವರು.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘(ಜನರೇ) ಮಹಮ್ಮದ್(ಸ) ನಿಮ್ಮ ಪುರುಷರ ಪೈಕಿ ಯಾರದೇ ತಂದೆಯಾಗಿರುವುದಿಲ್ಲ. ಆದರೆ ಅವರು ಅಲ್ಲಾಹನ ಸಂದೇಶವಾಹಕರೂ, ಪ್ರವಾದಿಗಳಲ್ಲಿ ಅಂತಿಮದವನೂ ಆಗಿದ್ದಾರೆ ಮತ್ತು ಅಲ್ಲಾಹ್ ಎಲ್ಲಾ ಸಂಗತಿಗಳನ್ನು (ಚೆನ್ನಾಗಿ) ಅರಿಯುವವನಾಗಿದ್ದಾನೆ.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ33:40ನೇ ಸೂಕ್ತ.
ಪ್ರವಾದಿ ಮುಹಮ್ಮದ್ ಏಕೆ ಕೊನೆಯ ಪ್ರವಾದಿ? ನಮಗೆ ಏಕೆ ಹೆಚ್ಚಿನ ಪ್ರವಾದಿಗಳಿಲ್ಲ?
ದೇವನು ಪ್ರವಾದಿಗಳನ್ನು ಕಳುಹಿಸುವ ಉದ್ದೇಶ, ಜನರನ್ನು ಮಾರ್ಗದರ್ಶನ ಮಾಡಲಿಕ್ಕಾಗಿಯೂ, ದೇವನನ್ನು ಆರಾಧಿಸುತ್ತಾ ಜೀವನವನ್ನು ಜೀವಿಸಲಿಕ್ಕಾಗಿ ಮತ್ತು ದೇವನ ಆದೇಶಗಳನ್ನು ಪಾಲಿಸಲಿಕ್ಕಾಗಿ ಆಗಿದೆ. ಈ ಉದ್ದೇಶ ಪೂರ್ತಿಗೊಂಡಾಗ, ಇನ್ನೊಬ್ಬ ಪ್ರವಾದಿಯ ಅವಶ್ಯಕತೆಯಿಲ್ಲ.
ಪ್ರವಾದಿ ಮುಹಮ್ಮದ್(ಸ)ರು ಅಂತಿಮ ಪ್ರವಾದಿ, ಏಕೆಂದರೆ, ನಮಗೆ ಇನ್ನೊಬ್ಬ ಪ್ರವಾದಿಯ ಅವಶ್ಯಕತೆಯಿಲ್ಲ. ಮಾನವಕುಲದ ಅವಶ್ಯಕತೆಗಳನ್ನು ಪರಿಶೋಧಿಸಿದಾಗ ಹಿಂದಿನ ಪ್ರವಾದಿಗಳು ನಿಗಧಿತ ಕೊರತೆಗಳನ್ನಷ್ಟೇ ಸರಿಪಡಿಸಲು ಮನುಕುಲವನ್ನು ಎಚ್ಚರಿಸುತ್ತಿದ್ದರು. ಆದರೆ ಪ್ರವಾದಿ ಮುಹಮ್ಮದ್(ಸ)ರು ಹಾಗಲ್ಲ, ಮಾನವಕುಲದ ಎಲ್ಲ ರೀತಿಯ ಕೊರತೆಗಳನ್ನು ನೀಗಸಲಿಕ್ಕಾಗಿ ನಿಯೋಗಿಸಲ್ಪಟ್ಟವರು. ಆದ್ದರಿಂದ ಪ್ರವಾದಿ ಮುಹಮ್ಮದ್(ಸ)ರು ಪೂರ್ವಕಾಲದ ಪ್ರವಾದಿಗಳಿಗಿಂತ ಹೆಚ್ಚಿನ ಪದವಿ ಹೊಂದಿದವರು ಹಾಗೂ ಅವರ ಮೂಲಕ ಸಕಲ ಕೊರತೆಗಳ ಪರಿಹಾರ ತಿಳಿಸಿರುವುದರಿಂದ ಅವರ ತರುವಾಯ ಯಾವುದೇ ಪ್ರವಾದಿಗಳ ಅಗತ್ಯವಿಲ್ಲ. ಪ್ರವಾದಿ ಮುಹಮ್ಮದ್(ಸ)ರ ಮೂಲಕ ನೀಡಲ್ಪಟ್ಟ ಮಾರ್ಗದರ್ಶನವನ್ನು ಅನುಸರಿಸಿದರಷ್ಟೇ, ಸಾಕು.
ಪ್ರವಾದಿಗಳ ಭೋದನೆಗಳೇನಾಗಿದ್ದವು?
ಎಲ್ಲ ಪ್ರವಾದಿಗಳ ದೇವನು ಜನರಿಗೆ ಈ ಕೆಳಗಿನವುಗಳನ್ನು ಕಲಿಸಿದನು.
1.ನಮ್ಮ ಅಸ್ಥಿತ್ವದ ಉದ್ದೇಶ
2.ದೇವನ ಗುಣಗಳು
3.ಮರಣಾನಂತರ ಜೀವನದಲ್ಲಿ ಕರ್ಮಗಳ ಲೆಕ್ಕವಿZ್ಫರಣೆ
4.ಸ್ವರ್ಗ
5.ನರಕ
6.ದೇವನ ದೃಷ್ಟಿಯಲ್ಲಿ ಕ್ಷಮಿಸಲಾರದ ಪಾಪ
ನಮ್ಮ ಅಸ್ಥಿತ್ವದ ಉದ್ದೇಶ
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ನಾನು ಜಿನ್ನ್‍ಗಳನ್ನೂ, ಮನುಷ್ಯರನ್ನೂ ಅವರು ನನ್ನನ್ನು ಆರಾಧಿಸಲೆಂದು ಮಾತ್ರವೇ ಸೃಷ್ಟಿಸಿರುತ್ತೇನೆ.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ51:56ನೇ ಸೂಕ್ತ.
ದೇವನು ನಮ್ಮನ್ನು ಆತನನ್ನು ಮಾತ್ರ ಆರಾಧಿಸಲಿಕ್ಕಾಗಿ ಸೃಷ್ಟಿಸಿದ್ದಾನೆ ಮತ್ತು ಆತನ ಸೃಷ್ಟಿಗಳಾದ ವಿಗ್ರಹಗಳು, ಚಿತ್ರಗಳು, ಸೂರ್ಯ, ನಕ್ಷತ್ರ, ಗ್ರಹಗಳು, ಮಾನವೇತರರನ್ನು ಆರಾಧಿಸಲಿಕ್ಕಲ್ಲ. ಇಲ್ಲಿ ಆರಾಧನೆ ಎಂದರೆ, ದೇವನ ಆದೇಶಗಳಿಗೆ ಒಳಗಾಗಿ ಜೀವನ ನಡೆಸುವುದೂ ಹಾಗೂ ಆತನ ಕೃಪೆಗೆ ಒಳಗಾಗುವ ಕರ್ಮಗಳನ್ನು ಮಾಡಲಿಕ್ಕೂ ಮತ್ತು ಆತನ ಕ್ರೋಧಕ್ಕೆ ಒಳಗಾಗುವ ದೂರವಿರುವುದೇ ಆಗಿದೆ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ನಿಮ್ಮ ಪೈಕಿ ಉತ್ತಮ ಕರ್ಮವೆಸಗುವವರು ಯಾರೆಂದು ಪರಿಕ್ಷಿಸುವ ಸಲುವಾಗಿ ಅವನು ಮರಣ ಮತ್ತು ಜೀವನವನ್ನು ಸೃಷ್ಟಿಸಿದನು. ಅವನು ಪ್ರತಾಪಶಾಲಿಯು ಕ್ಷಮಾಶೀಲನೂ ಆಗಿದ್ದಾನೆ.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ67:2ನೇ ಸೂಕ್ತ.
ಈ ಜೀವನವೊಂದು ಪರೀಕ್ಷೆಯಾಗಿದ್ದು ಇಲ್ಲಿ ಯಾರೆಲ್ಲ ಏಕೈಕ ಸತ್ಯದೇವರನ್ನು ಆರಾಧಿಸುತ್ತಾರೆ ಎಂಬುದನ್ನು ಅಲ್ಲಾಹನು ನೋಡಲಿಚ್ಚಿಸುತ್ತಾನೆ.
ದೇವನ ಗುಣಗಳು
1.ದೇವನು ಏಕೈಕನು, ಆತನಿಗೆ ಸರಿಸಮಾನ ಯಾರೂ, ಯಾವುದೂ ಇಲ್ಲ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ಹೇಳಿರಿ: ಅವನು ಅಲ್ಲಾಹನು ಏಕೈಕನಾಗಿದ್ದಾನೆ.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ112:1ನೇ ಸೂಕ್ತಗಳು.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ನಿಮ್ಮ ಇಲಾಹನು (ದೇವನು) ಏಕಮಾತ್ರ (ಇಲಾಹ)ನು. ದಯಾಮಯನೂ. ಕರುಣಾನಿಧಿಯೂ ಆದ ಆತನ ಹೊರತು (ಬೇರೆ) ಇಲಾಹ(ದೇವ)ನಿಲ್ಲ.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ2:163ನೇ ಸೂಕ್ತ.
2.ದೇವನಿಗೆ ಯಾವುದೇ ಆಹಾರ, ನಿದ್ರೆ, ಪತ್ನಿ, ಮಕ್ಕಳು, ಕುಟುಂಬದ ಅವಶ್ಯಕತೆಗಳಿಲ್ಲ. ಅದರ ಅವಶ್ಯಕತೆ ಮಾನವನಿಗಷ್ಟೇ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ಅಲ್ಲಾಹನು ನಿರಪೇಕ್ಷಕನು ಮತ್ತು ಸರ್ವರೂ ಅವನ ಅವಲಂಭಿತರು. ಅವನು ಯಾರಿಗೂ ಜನ್ಮ ನೀಡಿಲ್ಲ. ಮತ್ತು ಅವನು ಯಾರಿಂದಲೂ ಜನ್ಮ ಪಡೆದಿಲ್ಲ.‘ ಸುಸ್ಪಷ್ಟ ಖುರ್‍ಆನ್ ಅಧ್ಯಾಯ112:2-3ನೇ ಸೂಕ್ತ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ನಾನು ಅವರಿಂದ ಜೀವನಾಧಾರವನ್ನು ಬಯಸುವುದಾಗಲಿ, ಅವರು ನನಗೆ ಉಣಬಡಿಸಲೆಂದಾಗಲಿ ಇಚ್ಛಿಸುವುದಿಲ್ಲ.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ51:57ನೇ ಸೂಕ್ತ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ಖಂಡಿತವಾಗಿಯು ನಮ್ಮ ಪ್ರಭುವಿನ ಮಹತ್ವವು ಅತ್ಯುನ್ನತವಾಗಿದೆ. ಅವನು ಯಾರನ್ನೂ ತನ್ನ ಪತ್ನಿಯನ್ನಾಗಿ, ಮತ್ತು ತನ್ನ ಪುತ್ರನನ್ನಾಗಿ ನಿಶ್ಚಯಿಸಿಲ್ಲ.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ72:3ನೇ ಸೂಕ್ತ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ಭೂಮ್ಯಾಕಾಶಗಳ ಮೂಲನಿರ್ಮಾಪಕ. ಆತನಿಗೋಬ್ಬಳು ಜೀವನಸಖಿಯೇ ಇಲ್ಲದಿರುವಾಗ ಸಂತಾನವುಂಟಾಗುವುದಾದರೂ ಹೇಗೆ? ಮಾತ್ರವಲ್ಲ. ಸರ್ವ ವಸ್ತುಗಳನ್ನೂ ಆತನೇ ಸೃಷ್ಟಿಸಿದ್ದಾನೆ. ಸರ್ವ ವಸ್ತುಗಳನ್ನೂ ಆತನೇ ಸೃಷ್ಟಿಸಿದ್ದಾಗಿದೆ. ಸಕಲ ವಸ್ತುಗಳ ಬಗ್ಗೆ ಅಗಾಧ ಜ್ಞಾನವುಳ್ಳವನು ಆತನು.’ ಸುಸ್ಪಷ್ಟ ಖುರ್‍ಆನ್ ಅಧ್ಯಾಯ6:101ನೇ ಸೂಕ್ತ.
3.ದೇವನು ಸರ್ವಶಕ್ತನು ಮತ್ತು ಆತನ ಸೃಷ್ಟಿಗಳಂತಲ್ಲ. ಆದ್ದರಿಂದ ಆತನಿಗೆ ಬಳಲಿಕೆಯಾಗಲಿ ಅಥವಾ ಅವನಿಂದ ಮರೆತು ಯಾವುದೇ ತಪ್ಪುಗಳಾಗಲಿ ಘಟಿಸುವುದಿಲ್ಲ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘(ಮೂಸಾ) ಹೇಳಿದರು: “ಅದರ ಜ್ಞಾನವಾದರೋ. ನನ್ನ ಪ್ರಭುವಿನಲ್ಲಿ ಒಂದು ಗ್ರಂಥದಲ್ಲಿ (ಸುರಕ್ಷಿತ) ಇದೆ. ನನ್ನ ಪ್ರಭು ತಪ್ಪುವುದೂ ಇಲ್ಲ, ಮರೆಯುವುದೂ ಇಲ್ಲ.‘ ಸುಸ್ಪಷ್ಟ ಖುರ್‍ಆನ್ ಅಧ್ಯಾಯ20:52ನೇ ಸೂಕ್ತ.
ಸುಸ್ಪಷ್ಟ ಖುರ್‍ಆನ್ ಹೇಳುತ್ತದೆ, ‘ನಿಶ್ಚಯವಾಗಿಯೂ ಆಕಾಶಗಳನ್ನು, ಭೂಮಿಯನ್ನು ಮತ್ತು ಅವುಗಳ ಮಧ್ಯೆ ಏನೆಲ್ಲ ಇರುವುವೋ ಅವುಗಳೆಲ್ಲವನ್ನು ನಾವು (ಕೇವಲ) ಆರು ದಿನಗಳಲ್ಲಿ ಸೃಷ್ಟಿಸಿದ್ದೇವೆ ಮತ್ತು ದಣಿವು ನಮ್ಮನ್ನು ಸ್ಪರ್ಶಿಸಲೂ ಇಲ್ಲ.‘ ಸುಸ್ಪಷ್ಟ ಖುರ್‍ಆನ್ ಅಧ್ಯಾಯ50:38ನೇ ಸೂಕ್ತ.
4.ದೇವನು ಎಲ್ಲಾ ಮಾನವರನ್ನು ನ್ಯಾಯಬದ್ಧವಾಗಿ ಒಂದೇರೀತಿಯಲ್ಲಿ ಕಾಣುವನು, ಮತ್ತು ಬಣ್ಣ, ಜಾತಿ, ಪಂಗಡ ಅಥವಾ ವಂಶ/ಕುಟುಂಬದ ಆಧಾರದ ಮೇಲೆ ವಿಭಾಗಿಸುವುದಿಲ್ಲ.
ಮರಣಾನಂತರ ಜೀವನ
ಈ ಪ್ರಪಂಚವು ಒಮ್ಮೆ ಕೊನೆಗೊಳ್ಳುತ್ತದೆ. ಅದು ನ್ಯಾಯತೀರ್ಮಾನದ ದಿನವಾಗಿದ್ದು, ಎಲ್ಲಾ ಜನರು ಅಂದರೆ ಸೃಷ್ಟಿಯ ಮೊದಲ ಮಾನವನಿಂದ ಕೊನೆಯ ಮಾನವನವರೆಗೂ ಎಲ್ಲರೂ ಮರಳಿ ಮರಣದಿಂದ ಎಬ್ಬಿಸಲ್ಪಡುತ್ತಾರೆ ಮತ್ತು ಅವರ ಕರ್ಮಗಳ ಕುರಿತು ಪ್ರಶ್ನಿಸಲ್ಪಡುತ್ತಾರೆ. ಒಬ್ಬನೇ ಸತ್ಯದೇವನನ್ನು ಆರಾಧಿಸಿದವರು ಹಾಗೂ ಉತ್ತಮ ಗುಣಗಳನ್ನು ಅನುಸರಿಸಿ, ಸತ್ಕರ್ಮಗಳನ್ನು ಮಾಡಿದ ಜನರು ಉತ್ತಮ ಪ್ರತಿಫಲದಿಂದ ಸನ್ಮಾನಿಸಲ್ಪಡುತ್ತಾರೆ. ದೇವನನ್ನು ನಿರಾಕರಿಸಿ, ಅವಿಧೇಯರಾದವರು ಶಿಕ್ಷೆಗೆ ಗುರಿಯಾಗುತ್ತಾರೆ. ಕೊನೆಯ ಬಹುಮಾನವೆಂದರೆ ಸ್ವರ್ಗ ಮತ್ತು ಶಿಕ್ಷೆಯೆಂದರೆ ನರಕ. ತದನಂತರದ ಸ್ವರ್ಗ ಹಾಗೂ ನರಕದ ಜೀವನ ನಿರಂತರವಾದದ್ದೂ ಹಾಗೂ ಅಂತ್ಯವಿಲ್ಲದ್ದು.