ಇಂದು ಅನೇಕರಲ್ಲಿ ಇಸ್ಲಾಮಿನ ಬಗ್ಗೆ ವಾಸ್ತವಿಕತೆಗಳಿಗಿಂತ ಹೆಚ್ಚಾಗಿ ತಪ್ಪು ಕಲ್ಪನೆಗಳೇ ತುಂಬಿಕೊಂಡಿವೆ. ಅವರ ಮನಸ್ಸಿನಲ್ಲಿ ಉತ್ತರ ಕಾಣಲಾಗದೆ ಚಡಪಡಿಸುತ್ತಿರುವ ಅನೇಕ ಸಂಶಯಗಳಿವೆ. ನಿಮ್ಮ ಉತ್ತರಗಳು ಎಲ್ಲರನ್ನೂ ತೃಪ್ತಿಪಡಿಸಬಹುದು ಎಂಬುದು ಖಾತ್ರಿಯಲ್ಲದಿದ್ದರೂ ಅಮುಸ್ಲಿಮರ ಪೈಕಿ ಹೆಚ್ಚಿನವರಿಗೆ ಇಸ್ಲಾಮಿನ ಸತ್ಯತೆಯನ್ನು ಮನವರಿಕೆ ಮಾಡಿಕೊಡಲು ಸಾಧ್ಯ.
ಅಮುಸ್ಲಿಮರ ಪೈಕಿ ಹೆಚ್ಚಿನವರು ತಪ್ಪು ಕಲ್ಪನೆಗೊಳಗಾಗಲು ಕಾರಣ ಮಾಧ್ಯಮಗಳಾಗಿವೆ. ಇವುಗಳು ಇಸ್ಲಾಮಿನ ಬಗ್ಗೆ ನಿರಂತರ ತಪ್ಪು ಮಾಹಿತಿಗಳನ್ನು ಪ್ರಸಾರ ಮಾಡುತ್ತಿರುತ್ತವೆ. ಪಾಶ್ಚಾತ್ಯರ ನಿಯಂತ್ರಣದಲ್ಲಿರುವ ಎಲ್ಲಾ ಮಾಧ್ಯಮಗಳು, ಸಾಟೆಲೈಟ್ ಚಾಲನೆಗಳು, ಬಾನುಲಿ ಕೇಂದ್ರಗಳು ಪ್ರಸಾರ ಮಾಡುವ ಸುದ್ದಿಗಳು ಪೂರ್ವಗ್ರಹಪೀಡಿತ ಹಾಗೂ ದೋಷಪೂರಿತವಾಗಿರುತ್ತವೆ. ತಿರುಚಲ್ಪಟ್ಟ ಮೂಲಗಳಿಂದ ಇಸ್ಲಾಮನ್ನು ಅಪಾರ್ಥಮಾಡಿಕೊಂಡಿರುವ ಇವರ ಆಕ್ಷೇಪಗಳಿಗೂ ಸೂಕ್ತ ಉತ್ತರ ನೀಡಲಾಗಿದ್ದು ಇದನ್ನು ‘ಇಸ್ಲಾಮಿನ ಕುರಿತಾದ ಮುಸ್ಲಿಮೇತರರ ಸಂಶಯಗಳು ಎಂಬ ಈ ಲೇಖನದಲ್ಲಿ ಕಾಣಬಹುದು ಇನ್ಶಾ ಅಲ್ಲಹ್.
ಪರಮ ದಯಾಮಯನೂ ಕರುಣಾಮಯಿಯೂ ಆದ ಅಲ್ಲಾಹನ ನಾಮದಿಂದ
ಪರಿಚಯ
ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು. ಅವನ ಕೃಪೆ ಮತ್ತು ರಕ್ಷೆ ಅಂತ್ಯ ಪ್ರವಾದಿಯಾದ ಮುಹಮ್ಮದ್ (ಸ)ರವರ ಮೇಲೂ, ಅವರ ಕುಟುಂಬದ ಮೇಲೂ, ಅವರ ನಿಷ್ಕಳಂಕ ಸಹವರ್ತಿಗಳ ಮೇಲೂ , ಅಂತ್ಯ ದಿನದವರೆಗೆ ಅವರನ್ನು ಅನುಸರಿಸಿ ಬದುಕುತ್ತಿರುವ ಅವರ ಎಲ್ಲಾ ಅನುವರ್ತಿಗಳ ಮೇಲೂ ಸದಾ ವರ್ಷಸುತ್ತಿರಲಿ.
ಸಂದೇಶ ಪ್ರಚಾರವು ಒಂದು ಹೊಣೆಗಾರಿಕೆ:
ಇಸ್ಲಾಮ್ ಮನುಷ್ಯಸಮುದಾಯಕ್ಕಾಗಿ ಬಂದಿರುವ ಧರ್ಮವಾಗಿದೆ. ಆರಾಧನೆಗೆ ಅರ್ಹನಾದವನು ಸರ್ವಲೋಕಗಳ ಒಡೆಯನಾದ ಅಲ್ಲಾಹನು ಮಾತ್ನನಾಗಿರುವನು. ಅಲ್ಲಾಹನಿಂದ ದೊರೆತ ಸಂದೇಶವನ್ನು ಇತರರಿಗೆ ತಲುಪಿಸುವ ಮಹತ್ತರವಾದ ಒಂದು ಹೊಣೆಗಾರಿಕೆಯು ಮುಸ್ಲಿಮರ ಮೇಲಿದೆ. ಇದನ್ನೆಲ್ಲಾ ತಿಳಿದಿರುತ್ತಲೂ ತಮಗೆ ವಹಿಸಲ್ಪಟ್ಟ ಹೊಣೆಗಾರಿಕೆಯಿಂದ ವಿಮುಖರೂ, ಅಲಕ್ಷ್ಯರೂ ಆಗಿರುವ ಮುಸ್ಲಿಮ್ ಸಮುದಾಯದ ದೊಡ್ಡದೊಂದು ವಿಭಾಗವನ್ನು ನಾವಿಂದು ಕಾಣುತ್ತಿದ್ದೇವೆ. ಅತ್ಯುತ್ತಮ ಜೀವನ ಪದ್ದತಿಯಾದ ಇಸ್ಲಾಮನ್ನು ಸ್ವಂತಕ್ಕಾಗಿ ಆರಿಸಿಕೊಂಡಿರುವ ಮತ್ತು ತಮ್ಮನ್ನು ಮುಸ್ಲಿಮರೆಂದು ಪರಿಚಯಿಸಿಕೊಳ್ಳತ್ತಿರುವವರು ತಮಗೆ ದೊರೆತಿರುವ ಸುಜ್ಞಾನವನ್ನು ಅದು ಇನ್ನೂ ತಲುಪದಿರುವ ಅದೆಷ್ಟೋ ಜನರೊಂದಿಗೆ ಹಂಚಿಕೊಳ್ಳವ ಬಗ್ಗೆ ಆಸಕ್ತರಾಗಿಲ್ಲ. ಮಾತ್ರವಲ್ಲದೆ ಇಂತಹದೊಂದು ಘನವಾದ ಹೊಣೆಗಾರಿಕೆ ತಮ್ಮ ಮೇಲಿದೆ ಎಂಬುದನ್ನು ಕೂಡಾ ಅರಿಯದ ಅದೆಷ್ಟೋ ಮುಸಲ್ಮಾನರನ್ನೂ ನಾವಿಂದು ಕಾಣುತ್ತಿದ್ದೇವೆ.
ಅಲ್ಲಾಹನ ಸಂದೇಶವನ್ನು ಇತರರಿಗೆ ತಲುಪಿಸುವ ಕಾರ್ಯವನ್ನು ಅರಬೀ ಭಾಷೆಯಲ್ಲಿ ‘ದಅವಾ' ಎನ್ನಲಾಗುತ್ತದೆ. ಅರ್ಥಾತ್ ಜನರನ್ನು ಇಸ್ಲಾಮಿಗೆ ಆಹ್ವಾನಿಸುವುದು. (ಇದರಲ್ಲಿ ಯಾವುದೇ ಬಲವಂತಕ್ಕೆ ಅವಕಾಶವಿಲ್ಲ.)
“ಅಲ್ಲಾಹನು ಖುರ್ಆನ್ನಲ್ಲಿ ಹೇಳುತ್ತಾನೆ: ಅಲ್ಲಾಹನಿಂದ ದೊರೆತ ಒಂದು ಸಾಕ್ಷ್ಯವು ತನ್ನಲ್ಲಿದ್ದೂ ಅದನ್ನು ಅಡಗಿಸಿಟ್ಟುಕೊಳ್ಳುವವನಿಗಿಂತ ದೊಡ್ಡ ಅಕ್ರಮಿ ಇನ್ನಾರಿರಬಹುದು. ನಿಮ್ಮ ಚಟುವಟಿಕೆಗಳ ಬಗ್ಗೆ ಅಲ್ಲಾಹನು ಅಶ್ರದ್ಧನಲ್ಲ." (ಕುರ್ಆನ್ 2:140)
ಇಪ್ಪತ್ತು ಸಾಮಾನ್ಯ ಸಂಶಯಗಳು :
ಪರಸ್ಪರ ಮಾತುಕತೆಗಳೂ ಆರೋಗ್ಯಕರ ಸಂವಾದಗಳೂ ಸಂದೇಶಪ್ರಚಾರ ಕಾರ್ಯಕ್ಕೆ ನೆರವಾಗುವ ಅಂಶಗಳಾಗಿವೆ.
ಅಲ್ಲಾಹನು ಹೇಳುತ್ತಾನೆ: “ ನಿಮ್ಮ ರಬ್(ಪರಿಪಾಲಕಪ್ರಭು)ನ ಮಾರ್ಗದೆಡೆಗೆ (ಜನರನ್ನು) ಆಹ್ವಾನಿಸಿರಿ; ಹಿಕ್ಮತ್(ಸುಜ್ಞಾನ) ಹಾಗೂ ಸದುಪದೇಶದ ಮೂಲಕ ಮತ್ತು ಅತ್ಯತ್ತಮ ರೀತಿಯಿಂದ ಜನರೊಂದಿಗೆ ಸಂವಾದಿಸಿರಿ. ಕುರ್ಆನ್(16: 125)
ಇಸ್ಲಾಮಿನ ಸಂದೇಶವನ್ನು ತಲುಪಿಸುವ ದಅವಾ ಎಂಬ ಕಡ್ಡಾಯ ಕಾರ್ಯದಲ್ಲಿ ಇಸ್ಲಾಮಿನ ಅತ್ಯುತ್ತಮ ಮೌಲ್ಯಗಳನ್ನು ಮಾತ್ರ ಒಬ್ಬ ಅಮುಸ್ಲಿಮನಿಗೆ ತಲುಪಿಸುವುದು ಕೆಲವೊಮ್ಮೆ ಸಾಕಾಗಲಾರದು. ಏಕೆಂದರೆ ಇಂದು ಅನೇಕರಲ್ಲಿ ಇಸ್ಲಾಮಿನ ಬಗ್ಗೆ ವಾಸ್ತವಿಕತೆಗಳಿಗಿಂತ ಹೆಚ್ಚಾಗಿ ತಪ್ಪು ಕಲ್ಪನೆಗಳೇ ತುಂಬಿಕೊಂಡಿವೆ. ಅವರ ಮನಸ್ಸಿನಲ್ಲಿ ಉತ್ತರ ಕಾಣಲಾಗದೆ ಚಡಪಡಿಸುತ್ತಿರುವ ಅನೇಕ ಸಂಶಯಗಳಿವೆ. ಇಸ್ಲಾಮಿನ ಧನಾತ್ಮಕ ಹಾಗೂ ಅತ್ಯುತ್ತಮ ಮೌಲ್ಯಗಳನ್ನು ಅವರು ಒಪ್ಪಿಕೊಂಡರೂ ಅದೇ ಉಸಿರಿನಲ್ಲಿ ಅವರು ನಮ್ಮತ್ತ ಎಸೆಯುವ ಸವಾಲುಗಳು ಹೀಗಿರುತ್ತವೆ.
“ನಾಲ್ವರು ಹೆಂಡಂದಿರಿರುವುದು ಮುಸ್ಲಿಮರಿಗೆ ಮಾತ್ರ ತಾನೇ ?"
“ಸ್ತ್ರೀಯರನ್ನು ಬುರ್ಖಾದೊಳಗೆ ಬಂಧಿಸಿಡುವವರು ನೀವೇ ತಾನೇ?"
“ಮೂಲಭೂತವಾದಿಗಳೂ, ಉಗ್ರವಾದಿಗಳೂ ಆಗಿರುವವರೆಲ್ಲರೂ ಮುಸ್ಲಿಮರು ತಾನೆ?"
ಹೀಗೆ ಅವರು ನಿಮ್ಮತ್ತ ಎಸೆಯುವ ಸವಾಲುಗಳ ಪಟ್ಟಿ ಬೆಳೆಯುತ್ತಾ ಸಾಗುತ್ತದೆ.
ಆದರೆ ನಾನು ಒಬ್ಬ ಅಮುಸ್ಲಿಮನಲ್ಲಿ ಮೊತ್ತ ಮೊದಲು ಕೇಳುವ ಪ್ರಶ್ನೆ ‘ಇಸ್ಲಾಮಿನಲ್ಲಿ ನಮಗೆ ಇಷ್ಟವಿಲ್ಲದ, ಅಥವಾ ನೀವು ದ್ವೇಷಿಸುವ ಅಂಶಗಳು ಯಾವುವು?" ಎಂದಾಗಿದೆ. ಅವರ ಆಕ್ಷೇಪಗಳು ತಪ್ಪಾಗಿರಲಿ ಅಥವಾ ಅವುಗಳು ಯಾವುದೇ ಮೂಲದಿಂದ ಬಂದಿರಲಿ ಅವರನ್ನು ಆರೀತಿ ನೇರವಾಗಿ ಪ್ರಶ್ನಿಸುವುದನ್ನೇ ನಾನು ಇಷ್ಟಪಡುತ್ತೇನೆ. ‘ನಾನು ಮೆಚ್ಚುವುದೇ ಇಸ್ಲಾಮಿನ ವಿಮರ್ಶಕರನ್ನು' ಎಂದುಕೊಂಡು ಮುಕ್ತ ಮನಸ್ಸಿನಿಂದ ನಿರ್ಭಯರಾಗಿ ತಮ್ಮ ಆಕ್ಷೇಪಣೆಗಳನ್ನು ತೆರೆದಿಡಲು ಅವರನ್ನು ಪ್ರೋತ್ಸಾಹಿಸುತ್ತೇನೆ. ಕೇವಲ ಕೇಲವೇ ವರ್ಷಗಳ ನನ್ನ ದಅವಾ ಅನುಭವದಲ್ಲಿ ಇಸ್ಲಾಮಿನ ಕುರಿತಾಗಿ ಅಮುಸ್ಲಿಮರಲ್ಲಿರುವುದು ಹೆಚ್ಚೆಂದರೆ ಇಪ್ಪತ್ತು ಸಂಶಯಗಳು ಎಂಬುದನ್ನು ಕಂಡುಕೊಂಡಿದ್ದೇನೆ. ಅರ್ಥಾತ್ ಒಬ್ಬ ಸಾಮಾನ್ಯ ಅಮುಸ್ಲಿಮನನ್ನು ಕಂಡು ಇಸ್ಲಾಮಿನ ಬಗ್ಗೆ ನೀನು ಆಕ್ಷೇಪಿಸುವ ವಿಷಯಗಳಾವುವು ಎಂದು ಪ್ರಶ್ನಿಸಿದಲ್ಲಿ ಅವನು ನಿಮ್ಮತ್ತ ಎಸೆಯುವ ಐದಾರು ಸವಾಲುಗಳು ಆ ಇಪ್ಪತ್ತು ಸಂಶಯಗಳ ವ್ಯಾಪ್ತಿಯಲ್ಲೇ ಬರುತ್ತವೆ. ಆ ಇಪ್ಪತ್ತು ಸಂಶಯಗಳನ್ನು ಉತ್ತಮ ಕಾರಣಗಳು ಹಾಗೂ ತರ್ಕಬದ್ಧವಾಗಿ ನಿವಾರಿಸಬಹುದಾಗಿದೆ. ನಿಮ್ಮ ಉತ್ತರಗಳು ಎಲ್ಲರನ್ನೂ ತೃಪ್ತಿಪಡಿಸಬಹುದು ಎಂಬುದು ಖಾತ್ರಿಯಲ್ಲದಿದ್ದರೂ ಅಮುಸ್ಲಿಮರ ಪೈಕಿ ಹೆಚ್ಚಿನವರಿಗೆ ಇಸ್ಲಾಮಿನ ಸತ್ಯತೆಯನ್ನು ಮನವರಿಕೆ ಮಾಡಿಕೊಡಲು ಸಾಧ್ಯ. ಒಬ್ಬ ಮುಸ್ಲಿಮನು ಇವಿಷ್ಟು ವಿಷಯಗಳನ್ನು ಕಲಿತುಕೊಂಡಲ್ಲಿ ತನ್ನ ಹೊಣೆಗಾರಿಕೆಯಾದ ದಅವಾ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಸಫಲತೆಯನ್ನು ಕಾಣಬಹುದು. ಒಂದು ವೇಳೆ ಅವನು ಇಸ್ಲಾಮಿನ ಸತ್ಯತೆಯನ್ನು ಮನವರಿಕೆ ಮಾಡಿಕೊಡುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗದಿದ್ದರೂ ಕನಿಷ್ಟ ಪಕ್ಷ ಇಸ್ಲಾಮಿನ ಬಗ್ಗೆ ಅವರಿಗಿರುವ ಕೀಳರಿಮೆಯನ್ನು ಶೂನ್ಯವಾಗಿಸುವಲ್ಲಂತೂ ಖಂಡಿತಾ ಯಶಸ್ವಿಯಾಗುವನು. ನಮ್ಮ ಈ ವಾದಗಳಿಗೆ ವಿರುದ್ಧವಾಗಿ ಕೆಲವರಲ್ಲಿ ಇನ್ನಷ್ಟು ಪ್ರತಿವಾದಗಳಿರಲೂ ಬಹುದು. ಅವುಗಳನ್ನು ಉತ್ತರಿಸಲು ಇನ್ನಷ್ಟು ಮಾಹಿತಿಗಳನ್ನು ಸಂಗ್ರಹಿಸುವ ಅಗತ್ಯವಿದೆ.
ತಪ್ಪು ಕಲ್ಪನೆಗಳಲ್ಲಿ ಮಾಧ್ಯಮಗಳ ಪಾತ್ರ:
ಅಮುಸ್ಲಿಮರ ಪೈಕಿ ಹೆಚ್ಚಿನವರು ತಪ್ಪು ಕಲ್ಪನೆಗೊಳಗಾಗಲು ಕಾರಣ ಮಾಧ್ಯಮಗಳಾಗಿವೆ. ಇವುಗಳು ಇಸ್ಲಾಮಿನ ಬಗ್ಗೆ ನಿರಂತರ ತಪ್ಪು ಮಾಹಿತಿಗಳನ್ನು ಪ್ರಸಾರ ಮಾಡುತ್ತಿರುತ್ತವೆ. ಪಾಶ್ಚಾತ್ಯರ ನಿಯಂತ್ರಣದಲ್ಲಿರುವ ಎಲ್ಲಾ ಮಾಧ್ಯಮಗಳು, ಸಾಟೆಲೈಟ್ ಚಾಲನೆಗಳು, ಬಾನುಲಿ ಕೇಂದ್ರಗಳು ಪ್ರಸಾರ ಮಾಡುವ ಸುದ್ದಿಗಳು ಪೂರ್ವಗ್ರಹಪೀಡಿತ ಹಾಗೂ ದೋಷಪೂರಿತವಾಗಿರುತ್ತವೆ. ಅಂತರ್ಜಾಲವು ಇತ್ತೀಚೆಗಷ್ಟೇ ಆವಿಷ್ಕರಿಸಲ್ಪಟ್ಟ ಒಂದು ಪ್ರಮುಖ ಹಾಗೂ ಅತ್ಯುಪಯುಕ್ತ ಮಾಹಿತಿ ಕೇಂದ್ರವಾಗಿದೆ. ಇದು ಯಾವುದೇ ನಿರ್ಧಿಷ್ಟ ವ್ಯಕ್ತಿಗಳ ನಿಯಂತ್ರಣಕ್ಕೊಳಪಟ್ಟಿಲ್ಲವಾದರೂ ಇಲ್ಲಿ ಕೂಡಾ ಇಸ್ಲಾಮಿನ ಕುರಿತಾದ ಬಹಳಷ್ಟು ಅಪಪ್ರಚಾರಗಳು ತುಂಬಿಕೊಂಡಿರುವುದನ್ನು ಕಾಣಬಹುದು. ಇದೀಗ ಮುಸ್ಲಿಮರು ಕೂಡಾ ಇಸ್ಲಾಮಿನ ಕುರಿತಾದ ಸರಿಯಾದ ಚಿತ್ರಣವನ್ನು ಜನರ ಮುಂದಿಡುವ ಕಾರ್ಯದಲ್ಲಿ ಅಂತರ್ಜಾಲವೆಂಬ ಈ ಅಸ್ತ್ರವನ್ನು ಸಮರ್ಪಕವಾಗಿ ಬಳಸಿಕೊಂಡಿರುವರಾದರೂ ತತ್ಸಮಾನವಾದ ಪೈಪೋಟಿಯನ್ನು ನೀಡಲು ಸಾಧ್ಯವಾಗಿಲ್ಲ ಎಂಬುದು ಖೇದಕರ. ಮುಸ್ಲಿಮರು ಈ ಕಾರ್ಯದಲ್ಲಿ ಇನ್ನಷ್ಟು ಪ್ರಗತಿಯನ್ನು ಸಾಧಿಸುವರೆಂಬ ನಿರೀಕ್ಷೆ ಹಾಗೂ ಹಾರೈಕೆ ನನ್ನದು. ಅಲ್ಲಾಹನು ಅನುಗ್ರಹಿಸಲಿ.
ಇನ್ನು ಇಸ್ಲಾಮಿನ ಕುರಿತಾದ ಸಂಶಯ ಆಕ್ಷೇಪಗಳು ಕಾಲದೊಂದಿಗೆ ಬದಲಾಗುತ್ತಲಿರುತ್ತವೆ. ದಶಕಗಳ ಹಿಂದಿನ ಸಂಶಯಗಳು ಬೇರೆಯೇ ಆಗಿದ್ದರೆ ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಸಂಶಯಗಳೂ ಬೇರೆಯೇ ಆಗಿರುವ ಸಾಧ್ಯತೆಗಳಿವೆ. ಆದುದರಿಂದ ಇಸ್ಲಾಮಿನ ಕುರುತಾದ ಸಂಶಯಗಳು ಆಯಾಕಾಲದ ಜನರು ಇಸ್ಲಾಮಿನ ಬಗ್ಗೆ ತಳೆದಿರುವ ಧೋರಣೆ, ಆ ಕಾಲದ ಮಾಧ್ಯಮಗಳು ಇಸ್ಲಾಮನ್ನು ಜನರ ಮುಂದೆ ಪ್ರತಿಬಿಂಬಿಸಿರುವ ರೀತಿ ಇತ್ಯಾದಿಗಳ ಮೇಲೆ ಹೊಂದಿಕೊಂಡಿದೆ. ಜಗತ್ತಿನ ವಿವಿಧ ಭಾಗಗಳ ವಿವಿಧ ಜನರನ್ನು ಸಂಪರ್ಕಿಸಿದಾಗಲೂ ಇವೇ ಸುಮಾರು ಇಪ್ಪತ್ತು ಸಂಶಯಗಳು ಪುನರಾವರ್ತನೆಯಾಗುವುದನ್ನು ಕಂಡಿದ್ದೇನೆ. ಆದುದರಿಂದ ಕಾಲ, ಸ್ಥಳ, ಪರಿಸರ, ಹಾಗೂ ಸಂಪ್ರದಾಯಗಳಿಗೆ ತಕ್ಕಂತೆ ಇನ್ನು ಕೆಲವು ಸಂಶಯಗಳು ಸೇರ್ಪಡೆಗೊಳ್ಳುವುದನ್ನು ಹೊರಪಡಿಸಿದರೆ ಜಗತ್ತಿನಾದ್ಯಂತ ಇಸ್ಲಾಮಿನ ಕುರಿತಾದ ಸಂಶಯಗಳೆಲ್ಲವೂ ಏಕರೂಪದ್ದಾಗಿದೆ ಎನ್ನಬಹುದು. ಇತ್ತೀಚೆಗೆ ಅಮೆರಿಕದಲ್ಲಿ ಕೇಳಿ ಬರುತ್ತಿರುವ ಹೊದದೊಂದು ಸಂಶಯವು ಇಸ್ಲಾಮ್ ಬಡ್ಡಿ ಸ್ವೀಕಾರ ಮತ್ತು ಪಾವತಿಯನ್ನು ನಿಷೇಧಿಸಿರುವುದೇಕೆ ಎಂಬುದಾಗಿದೆ. ಇನ್ನು ಇಸ್ಲಾಮನ್ನು ಅಲ್ಪಮಟ್ಟಿಗೆ ಅಧ್ಯಯನ ಮಾಡಿದ ಅಮುಸ್ಲಿಮರ ವಿಷಯ; ಇವರಲ್ಲಿ ಹೆಚ್ಚಿನವರು ಓದಿರುವುದು ಪೂರ್ವಗ್ರಹಪೀಡಿತರಾದ ಇಸ್ಲಾಮ್ ವಿರೋಧಿ ಲೇಖಕರು ಬರೆದ ಕೃತಿಗಳನ್ನು ಮಾತ್ರ. ಇವರ ಬಳಿಯೂ ಇಸ್ಲಾಮಿನ ಕುರಿತಾದ ಒಂದಿಷ್ಟು ನವನವೀನ ಆರೋಪಗಳೂ ಇವೆ. ಕುರ್ಆನಿನಲ್ಲಿ ಅವೈಜ್ಞಾನಿಕತೆಗಳಿವೆಯೆಂದೂ ಇವರು ಆಕ್ಷೇಪಿಸುತ್ತಾರೆ. ಕುರ್ಆನಿನಲ್ಲಿ ವೈರುಧ್ಯಗಳಿವೆಯೆಂದು ಈ ಜನರು ಆರೋಪಿಸುತ್ತಾರೆ. ತಿರುಚಲ್ಪಟ್ಟ ಮೂಲಗಳಿಂದ ಇಸ್ಲಾಮನ್ನು ಅಪಾರ್ಥಮಾಡಿಕೊಂಡಿರುವ ಇವರ ಆಕ್ಷೇಪಗಳಿಗೂ ಸೂಕ್ತ ಉತ್ತರ ನೀಡಲಾಗಿದ್ದು ಇದನ್ನು ‘ಇಸ್ಲಾಮಿನ ಕುರಿತಾದ ಮುಸ್ಲಿಮೇತರರ ಸಂಶಯಗಳು - ಭಾಗ 2 ಎಂಬ ಕೃತಿಯಲ್ಲಿ ಕಾಣಬಹುದು ಇನ್ಶಾ ಅಲ್ಲಾಹ್.
ಡಾ || ಝಾಕಿರ್ ನಾಯ್ಕ್
ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್, ಮುಂಬಯಿ
1. ಪಾಲಿಗಮಿ ಎಂದು ಕರೆಯಲ್ಪಡುವುದರ ವಾಸ್ತವಿಕ ವ್ಯಾಖ್ಯಾನ
ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಪತಿ ಅಥವಾ ಪತ್ನಿಯರನ್ನು ಹೊಂದುವ ವಿವಾಹ ಪದ್ಧತಿಯನ್ನು ಆಂಗ್ಲ ಭಾಷೆಯಲ್ಲಿ ಪಾಲಿಗಮಿ ಎನ್ನುವರು. ಇದರಲ್ಲಿ ಎರಡು ವಿಧ. ಒಂದನೆಯದು ಪಾಲಿಜಿನಿ (polygyny), ಎರಡನೆಯದು ಪಾಲಿಯಾಂಡ್ರಿ. ಒಬ್ಬ ಪುರುಷನು ಒಂದಕ್ಕಿಂತ ಹೆಚ್ಚು ಸ್ತ್ರೀಯರನ್ನು ವಿವಾಹಬಂಧದಲ್ಲಿರಿಸಿಕೊಳ್ಳುವುದನ್ನು ಪಾಲಿಜಿನಿ(ಬಹುಪತ್ನಿತ್ವ) ಎನ್ನುವರು. ಒಬ್ಬ ಸ್ತ್ರೀಯು ಒಂದಕ್ಕಿಂತ ಹೆಚ್ಚು ಪುರುಷರೊಂದಿಗೆ ಏಕಕಾಲದಲ್ಲಿ ವಿವಾಹಬಂಧದಲ್ಲಿರುವುದನ್ನು ಪಾಲಿಯಾಂಡ್ರಿ [polyandry] (ಬಹುಪತ್ನಿತ್ವ) ಎನ್ನುವರು. ಇಸ್ಲಾಮಿನಲ್ಲಿ ಬಹುಪತ್ನಿತ್ವವನ್ನು ನಿರ್ಧಿಷ್ಟ ಮೇರೆಯೊಂದಿಗೆ ಅನುಮತಿಸಲಾಗಿದ್ದು ಬಹುಪತಿತ್ವವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ನಾವಿನ್ನು ಮೂಲಪ್ರಶ್ನೆಯಾದ ಬಹುಪತ್ನಿತ್ವದ ಕಡೆಗೆ ಬರೋಣ.
2. ಒಬ್ಬಳನ್ನೇ ವಿವಾಹವಾಗಿರಿ ಎನ್ನುವ ಏಕೈಕ ಧಾರ್ಮಿಕ ಗ್ರಂಥ ಕುರ್ಆನ್:
ಒಬ್ಬಳನ್ನೇ ವಿವಾಹವಾಗಿರಿ ಎಂದು ಹೇಳುವಂತಹ ಧಾರ್ಮಿಕಗ್ರಂಥವೊಂದು ಈ ಜಗತ್ತಿನಲ್ಲಿದ್ದರೆ ಅದು ಕುರ್ಆನ್ ಮಾತ್ರ. ಪುರುಷನಿಗೆ ಇಬ್ಬಳನ್ನೇ ವಿವಾಹವಾಗುವಂತೆ ಸೂಚನೆಯನ್ನು ನೀಡುವಂತಹ ಇನ್ನೊಂದು ಧಾರ್ಮಿಕಗ್ರಂಥವು ಈ ಜಗತ್ತಿನಲ್ಲಿಲ್ಲ. ಚತುರ್ವೇದಗಳಲ್ಲಾಗಲಿ, ರಾಮಾಯಣ - ಮಹಾಭಾರತ, ಭಗವದ್ಗೀತೆ, ತಲ್ಮೂದ್, ಬೈಬಲ್ ಇವುಗಳ ಪೈಕಿ ಯಾವುದರಲ್ಲೂ ಒಬ್ಬನು ಇಂತಿಷ್ಡೇ ಸಂಖ್ಯೆಯ ಪತ್ನಿಯರನ್ನು ಹೊಂದಿರಬೇಕು ಎಂಬಂತಹ ಚಿಕ್ಕ ಸೂಚನೆಯನ್ನು ಕೂಡಾ ಕಾಣಲು ಅಸಾಧ್ಯ. ಇವುಗಳ ಪ್ರಕಾರ ಒಬ್ಬನು ತಾನಿಷ್ಟಪಟ್ಟಷ್ಟು ಸಂಖ್ಯೆಯ ಸ್ತ್ರೀಯರನ್ನು ಏಕಕಾಲದಲ್ಲಿ ವಿವಾಹಬಂಧದಲ್ಲಿರಿಸಿಕೊಳ್ಳಬಹುದು. ಹಿಂದೂ ಪುರೋಹಿತರು ಮತ್ತು ಕ್ರೈಸ್ತಸಭೆಗಳಷ್ಟೇ ನಂತರದ ಕಾಲಘಟ್ಟದಲ್ಲಿ ಪತ್ನಿಯ ಸಂಖ್ಯೆಯನ್ನು ಒಂದಕ್ಕೆ ನಿಗದಿಗೊಳಿಸಿತು. ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ ರಾಜಾದಶರಥ, ಶ್ರೀಕೃಷ್ಣ ಮುಂತಾದ ಮಹಾಪುರುಷರು ಅಧಿಕ ಸಂಖ್ಯೆಯ ಸ್ತ್ರೀಯನ್ನು ಏಕಕಾಲದಲ್ಲಿ ವಿವಾಹಬಂಧದಲ್ಲಿರಿಸಿಕೊಂಡವರಾಗಿದ್ದರು.
ಹಿಂದಿನ ಕಾಲದಲ್ಲಿ ಕ್ರೈಸ್ತರಲ್ಲಿ ಕೂಡಾ ಬಹುಪತ್ನಿತ್ವವು ಅನುವದನೀಯವಾಗಿತ್ತು. ಏಕೆಂದರೆ ಬೈಬಲ್ ಪತ್ನಿಯರ ಸಂಖ್ಯೆಯನ್ನು ಇಂತಿಷ್ಟೇ ಎಂದು ನಿಗದಿಗೊಳಿಸಿರಲಿಲ್ಲ. ಕ್ರೈಸ್ತರು ಕೂಡಾ ಬಹುಪತ್ನಿತ್ವ ನಿಷೇಧವನ್ನು ಜಾರಿಗೆ ತಂದದ್ದು ತೀರಾ ಇತ್ತಿಚೆಗೆ ಅರ್ಥಾತ್ ಕೆಲವೇ ಶತಮಾನಗಳ ಹಿಂದೆಯಷ್ಟೇ ಎನ್ನಬಹುದು.
ಇನ್ನು ಯಹೋದ್ಯರು ಕೂಡಾ ಬಹುಪತ್ನಿತ್ವವನ್ನು ಸ್ವೀಕರಿಸಿಕೊಂಡಿದ್ದವರೇ ಆಗಿದ್ದರು. ಅವರ ಧಾರ್ಮಿಕಗ್ರಂಥ ‘ತಲ್ಮೂದ್'ನ ಪ್ರಕಾರ ಅಬ್ರಹಾಮರಿಗೆ ಮೂವರು ಪತ್ನಿಯರಿದ್ದರೆ, ಸೋಲೊಮನರ ಪತ್ನಿಯರ ಸಂಖ್ಯೆ ನೂರಾರು. ರಾಬ್ಬಿ ಜರ್ಷಮ್ ಬಿನ್ ಯಹೋದ (ಕ್ರಿ. ಶ. 960-1030) ಎಂಬವರು ಈ ಪದ್ದತಿಯ ವಿರುದ್ಧ ಧರ್ಮಶಾಸನವನ್ನು ತಿದ್ದುಪಡಿಗೊಳಪಡಿಸುವವರೆಗೂ ಯಹೋದ್ಯರಲ್ಲಿ ಬಹುಪತ್ನಿತ್ವವು ಸಾಮಾನ್ಯವಾಗಿತ್ತು. 1950ರಲ್ಲಿ ‘ಚೀಫ್ ರಾಬಿನೇಟ್ ಆಕ್ಟ್' ಎಂಬ ಯಹೂದೀ ಶಾಸನವು ಇದನ್ನು ಸಂಪೂರ್ಣವಾಗಿ ನಿಷೇಧಿಸುವವರೆಗೆ ಮುಸ್ಲಿಮ್ ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದ ಯಹೂದಿ ಸಮುದಾಯವೊಂದರಲ್ಲಿ ಬಹುಪತ್ನಿತ್ವವು ಚಾಲ್ತಿಯಲ್ಲಿತ್ತು.
3. ಬಹುಪತ್ನಿತ್ವವು ಮುಸ್ಲಿಮರಿಗಿಂತ ಹಿಂದೂಗಳಲ್ಲೇ ಅಧಿಕ
1951 ಮತ್ತು 1961ರ ಮಧ್ಯೆ ನಡೆದ ಬಹುಪತ್ನೀವಿವಾಹಗಳ ಪೈಕಿ 5.06%ದಷ್ಟು ವಿವಾಹಗಳು ಹಿಂದೂಗಳದ್ದಾಗಿದ್ದು, ಇದರಲ್ಲಿ ಮುಸ್ಲಿಮರ ಪಾಲು ಕೇವಲ 4.31% ಮಾತ್ರ. (ವರದಿ: ಕಮಿಟಿ ಆಫ್ ಸ್ಟೇಟಸ್ ಆಫ್ ವುಮನ್ ಇನ್ ಇಸ್ಲಾಮ್ ; ಪುಟ ಸಂಖ್ಯೆ 66, 67- ಕ್ರಿ. ಶ. 1975).
ಬಹುಪತ್ನಿತ್ವವನ್ನು ಹೊಂದುವ ಅನುಮತಿಯಿರುವುದು ಮುಸ್ಲಿಮರಿಗೆ ಮಾತ್ರ; ಭಾರತೀಯ ಕಾನೂನಿನಲ್ಲಿ ಹಿಂದೂಗಳು ಒಂದಕ್ಕಿಂತ ಅಧಿಕ ಪತ್ನಿಯರನ್ನು ಹೊಂದುವುದು ಅಪರಾಧ ಎಂಬುದರ ಹೊರತಾಗಿಯೂ ಈ ವಿಷಯದಲ್ಲಿ ಹಿಂದೂಗಳು ಮುಸಲ್ಲಾನರನ್ನು ಸೋಲಿಸಿದ್ದರು. ವಾಸ್ತವದಲ್ಲಿ ಇಂತಹ ಒಂದು ನಿಷೇಧವನ್ನು ಹಿಂದೂಗಳ ಮೇಲೆ ಹೇರಿದ್ದು ಭಾರತೀಯ ಕಾನೂನೇ (ಹಿಂದೂ ಮ್ಯಾರೇಜ್ ಆಕ್ಟ್ , 1954) ಹೊರತು ಅವರ ಧಾರ್ಮಿಕ ಗ್ರಂಥಗಳಲ್ಲ.
ಇನ್ನು ಇಸ್ಲಾಮ್ ಧರ್ಮವು ಬಹುಪತ್ನಿತ್ವವನ್ನು ನಿಷೇಧಿಸದಿರಲು ಕಾರಣವೇನು ಎಂಬುದನ್ನು ನೋಡೋಣ.
ಈ ಮೊದಲೇ ತಿಳಿಸಿದಂತೆ ಒಬ್ಬಳನ್ನೇ ವಿವಾಹವಾಗಲು ಸೂಚನೆ ನೀಡುವ ಧಾರ್ಮಿಕ ಗ್ರಂಥವೊಂದಿದ್ದರೆ ಅದು ಕುರ್ಆನ್ ಮಾತ್ರ. ಈ ಬಗ್ಗೆ ಕುರ್ಆನಿನಲ್ಲಿ ಹೀಗಿದೆ:
“...ಸ್ತ್ರೀಯರಲ್ಲಿ ನಿಮಗೆ ಮೆಚ್ಚಿದ ಇಬ್ಬರನ್ನೋ, ಮೂವರನ್ನೋ, ನಾಲ್ವರನ್ನೋ ವಿವಾಹವಾಗಿರಿ. ಆದರೆ ಅವರೊಂದಿಗೆ ನ್ಯಾಯ ಪಾಲಿಸಲಾರಿರೆಂಬ ಆಶಂಕೆ ನಿಮಗಿದ್ದರೆ ಒಬ್ಬಳನ್ನು ಮಾತ್ರ....."
ಕುರ್ಆನ್ ಗ್ರಂಥ ಅವತೀರ್ಣಕ್ಕೆ ಮೊದಲು ಬಹುಪತ್ನಿತ್ವವು ಸಾಮಾನ್ಯವಾಗಿದ್ದು ಒಬ್ಬನ ಪತ್ನಿಯರ ಸಂಖ್ಯೆಯ ಮೇಲೆ ಯಾವುದೇ ಮಿತಿಯಿರಲಿಲ್ಲ. ಒಬ್ಬನಿಗೆ ನೂರು ಪತ್ನಿಯರಿದ್ದರೂ ಯಾರೂ ಆಕ್ಷೇಪಿಸುವಂತಿರಲಿಲ್ಲ. ಜನರ ಇಂತಹ ಆಚರಣೆಯನ್ನು ಆಕ್ಷೇಪಿಸಿದ ಇಸ್ಲಾಮ್ ಗರಿಷ್ಟ ಸಂಖ್ಯೆಯು ನಾಲ್ಕಾಗಿರಬೇಕೆಂದು ಆಜ್ಞಾಪಿಸಿತು. ಮಾತ್ರವಲ್ಲದೆ ಅವರೆಲ್ಲರೊಂದಿಗೆ ಸರಿಸಮಾನವಾಗಿ, ಯಾವುದೇ ತಾರತಮ್ಯ ತೋರದೆ ನ್ಯಾಯ ಪಾಲಿಸಬೇಕು ಎಂಬ ಕಷ್ಟಕರವಾದ ಶರ್ತವನ್ನೂ ಅವರ ಮುಂದಿಟ್ಟಿತು. ಕುರ್ಆನ್ ಹೇಳುವುದನ್ನು ನೋಡಿರಿ:
“.... ಪತ್ನಿಯರ ನಡುವೆ ಸರ್ವಸಂಪೂರ್ಣ ನ್ಯಾಯ ಪಾಲಿಸಲು ನಿಮ್ಮಿಂದ ಸಾಧ್ಯವಾಗಲಾರದು...." (ಕುರ್ಆನ್ 4: 129)
ಬಹುಪತ್ನಿತ್ವವು ಇಸ್ಲಾಮಿನಲ್ಲಿ ಒಂದು ವಿನಾಯಿತಿಯೇ ಹೊರತು ಕಡ್ಡಾಯ ಕಾರ್ಯವಲ್ಲ. ಮುಸ್ಲಿಮನಾಗಬೇಕಾದಲ್ಲಿ ಮಾಂಸಾಹಾರ ಸೇವನೆ ಮತ್ತು ಬಹುಪತ್ನಿತ್ವ ಕಡ್ಡಾಯ ಎಂಬ ತಪ್ಪುಕಲ್ಪನೆ ಬಹಳಷ್ಟು ಜನರಲ್ಲಿ ಮನೆಮಾಡಿದೆ. ಇಸ್ಲಾಮಿನಲ್ಲಿ ‘ಮಾಡು - ಮಾಡದಿರು ' ಎಂಬುದನ್ನು ಐದು ವಿಧವಾಗಿ ವಿಂಗಡಿಸಬಹುದು.
a. ಫರ್ಝ್ (ಕಡ್ಡಾಯ)
b. ಮುಸ್ತಹಬ್ (ಪ್ರೋತ್ಸಾಹಿಸಲ್ಪಟ್ಟ)
c. ಮಬಾಹ್ (ಅನುಮತಿಸಲ್ಪಟ್ಟ)
d. ಮಕ್ರೂಹ್ (ಅನಿಷ್ಟಕರ)
e. ಹರಾಮ್ (ನಿಷಿದ್ಧ)
ಬಹುಪತ್ನಿತ್ವವು ಮಧ್ಯಮ ವಿಭಾಗವಾದ ‘ಕೇವಲ ಅನುಮತಿ' (ಮುಬಾಹ್)ಯಲ್ಲಿ ಬರುತ್ತಿದ್ದು, ಎರಡು, ಮೂರು, ಅಥವಾ ನಾಲ್ಕು ಮಡದಿಯರನ್ನು ಹೊಂದಿದವನು ಉತ್ಕೃಷ್ಟನು, ಏಕಪತ್ನಿಯನ್ನು ಹೊಂದಿದ ಮುಸ್ಲಿಮನು ನಿಕೃಷ್ಟನು ಎಂಬ ತಾರತಮ್ಯ ಇಸ್ಲಾಮಿನಲ್ಲಿಲ್ಲ.
4. ಸ್ತ್ರೀಯರ ಸರಾಸರಿ ಆಯುಷ್ಯವು ಪುರುಷರಿಗಿಂತ ಹೆಚ್ಚು :
ಪುಟ್ಟದೊಂದು ವ್ಯತ್ಯಾಸವನ್ನು ಹೊರತು ಪಡಿಸಿದರೆ ಗಂಡು - ಹೆಣ್ಣಿನ ಹುಟ್ಟಿನ ಅನುಪಾತವು ಸಮಾನವಾಗಿರುವುದು ಪ್ರಕೃತಿ ಸಹಜ. ಮಾತ್ರವಲ್ಲದೆ ಒಂದು ಹೆಣ್ಣು ಶಿಶುವಿನ ರೋಗ ನಿರೋಧಕ ಶಕ್ತಿಯು ಗಂಡು ಶಿಶುವಿಗಿಂತ ಹೆಚ್ಚಾಗಿರುತ್ತದೆ. ಅರ್ಥಾತ್ ಒಂದು ಹೆಣ್ಣು ಶಿಶುವಿನ ಶರೀರವು ರೋಗಕಾರಕ ಕ್ರಿಮಿಗಳ ವಿರುದ್ಧ ನಡೆಸುವ ಹೋರಾಟವು ಗಂಡು ಶಿಶುವಿಗಿಂತ ಪ್ರಬಲವಾಗಿರುತ್ತದೆ. ಆದುದರಿಂದ ಬಾಲ್ಯದ ಹಂತದಲ್ಲೇ ಗಂಡುಶಿಶುವಿನ ಮರಣ ಸಂಭವವು ಹೆಣ್ಣಿಗಿಂತ ಅಧಿಕ. ಇನ್ನು ಯುದ್ಧಗಳು, ಅಪಘಾತಗಳು ಸಂಭವಿಸಿದಾಗಲಂತೂ ಮರಣಿಸುವವರಲ್ಲಿ ಅಧಿಕರೂ ಪುರುಷರಾಗಿರುತ್ತಾರೆ. ಇವೆಲ್ಲಾ ವಾಸ್ತವಿಕತೆಗಳು ಸ್ತ್ರೀಯರ ಸರಾಸರಿ ಆಯುಷ್ಯವು ಪುರುಷರಿಗಿಂತ ಹೆಚ್ಚು ಮತ್ತು ಯಾವುದೇ ನಿರ್ಧಿಷ್ಟ ಕಾಲದಲ್ಲಿ ಸಮಾಜದಲ್ಲಿನ ವಿದುರರ ಸಂಖ್ಯೆಗಿಂತ ವಿಧವೆಯರ ಸಂಖ್ಯೆ ಹೆಚ್ಚಾಗಿರುವುದನ್ನು ಸ್ಪಷ್ಟಪಡಿಸಿಕೊಡುತ್ತವೆ. ಆದರೆ ಭಾರತದಂತಹ ಕೆಲವೇ ಕೆಲವು ರಾಷ್ಟ್ರಗಳು ಮಾತ್ರ ಇದಕ್ಕೊಂದು ಅಪವಾದ.
5. ಸ್ತ್ರೀಯರ ಸಂಖ್ಯೆ ಇಳಿಮುಖವಾಗಲು ಕಾರಣ ಹೆಣ್ಣುಭ್ರೂಣ ಹತ್ಯೆ:
ಸ್ತ್ರೀಯರ ಸಂಖ್ಯೆ ಕಡಿಮೆಯಿರುವ ಕೆಲವೇ ದೇಶಗಳ ಪೈಕಿ ಭಾರತವೂ ಒಂದು. ಇದಕ್ಕೆ ಮುಖ್ಯ ಕಾರಣ ಭ್ರೂಣಹತ್ಯೆ. ಒಂದು ಸುಸಜ್ಜಿತ ಆಸ್ಪತ್ರೆಯಲ್ಲಿ ಭ್ರೂಣವು ಹೆಣ್ಣೆಂದು ಪತ್ತೆ ಹಚ್ಚಿದ ಬಳಿಕ ಅದನ್ನು ಹತ್ಯೆ ಮಾಡಲಾಗುತ್ತದೆ. ಪ್ರತೀವರ್ಷ ಭಾರತದಲ್ಲಿ ನಡೆಯುವ ಇಂತಹ ಹೆಣ್ಣುಭ್ರೂಣ ಹತ್ಯೆಗಳ ಸಂಖ್ಯೆ ಒಂದು ಮಿಲಿಯ. ಅರ್ಥಾತ್ ಪ್ರತೀವರ್ಷ ಹತ್ತುಲಕ್ಷ ಸ್ತ್ರೀಯರಿಂದ ಅವರ ಹುಟ್ಟಿಬರುವ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳಲಾಗುತ್ತದೆ. ಈ ಕೆಟ್ಟ ಚಾಳಿ ನಿಲ್ಲಿಸಿದಲ್ಲಿ ಭಾರತವು ಕೂಡಾ ಅಧಿಕ ಸ್ತ್ರೀಯರನ್ನು ಹೊಂದಿದ ದೇಶಗಳ ಸಾಲಗೆ ಸೆರಲೂಬಹುದು.
6. ಎಲ್ಲೆಲ್ಲಿ ಎಷ್ಟೆಷ್ಟು ? ;
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ (U. S. A). ಪುರುಷರಿಗಿಂತ 7.8 ಮಿಲಿಯ ಅಧಿಕ ಸ್ತ್ರೀಯರು. ನ್ಯೂಯಾರ್ಕ್ ಪಟ್ಟಣವೊಂದರಲ್ಲೇ ಒಂದು ಮಿಲಿಯ ಅಧಿಕ ಸ್ತ್ರೀಯರು. ಈ ನಗರದ ಒಟ್ಟು ಪುರುಷರ ಪೈಕಿ ಮೂರನೇ ಒಂದರಷ್ಟು ಪುರುಷರು ಸಲಿಂಗಕಾಮಿಗಳು. ಅಮೆರಿಕಾದ ಒಟ್ಟು ಪುರುಷರಲ್ಲಿ 25 ಮಿಲಿಯ ಪುರಿಷರು ಸಲಿಂಗಕಾಮಿಗಳು. ಅರ್ಥಾತ್ 25 ಮಿಲಿಯ ಪುರುಷರು ಸ್ತ್ರೀಯರನ್ನು ವಿವಾಹವಾಗಲು ತಯಾರಿಲ್ಲದವರು.
ಗ್ರೇಟ್ ಬ್ರಿಟನ್ (Great britain)
ನಾಲ್ಕು ಮಿಲಿಯ ಅಧಿಕ ಸ್ತ್ರೀಯರು
ಜರ್ಮನಿ(Germainy)
ಐದು ಮಿಲಿಯ ಅಧಿಕ ಸ್ತ್ರೀಯರು.
ರಷ್ಯಾ(Russia)
ಒಂಭತ್ತು ಮಿಲಿಯ ಅಧಿಕ ಸ್ತ್ರೀಯರು.
ಇನ್ನು ಇಡೀ ಜಗತ್ತಿನಲ್ಲಿ ಪುರುಷರಿಗಿಂತ ಎಲ್ಲೆಲ್ಲಿ ಎಷ್ಷೆಷ್ಟು ಮಿಲಿಯ ಅಧಿಕ ಸ್ತ್ರೀಯರು ಎಂಬುದನ್ನು ಆ ದೇವನೊಬ್ಬನೇ ಸರಿಯಾಗಿ ತಿಳಿಸಬಲ್ಲ.
7. ಏಕಪತ್ನಿತ್ವವನ್ನು ಕಡ್ಡಾಯಗೊಳಿಸುವುದು ಪ್ರಾಯೋಗಿಕವಲ್ಲ:
ಅಮೆರಿಕಾದ ಪ್ರಸಕ್ತ ಸ್ಥಿತಿಯಲ್ಲಿ ಒಬ್ಬ ಪುರುಷನಿಗೆ ಒಬ್ಬಳೇ ಸ್ತ್ರೀ ಎಂಬ ನಿಯಮವನ್ನು ಜಾರಿಗೆ ತಂದಲ್ಲಿ ಸುಮಾರು 30 ಮಿಲಿಯಕ್ಕಿಂತಲೂ ಅಧಿಕ ಸ್ತ್ರೀಯರಿಗೆ ವಿವಾಹಯೋಗ್ಯ ಪುರುಷರೇ ಸಿಗಲಾರರು. ಇದೇ ರೀತಿ ಬ್ರಿಟನ್ನಿನ 4 ಮಿಲಿಯ ಸ್ತ್ರೀಯರೂ, ಜರ್ಮನಿಯ 5 ಮಿಲಿಯ ಸ್ತ್ರೀಯರೂ, ರಷ್ಯಾದ 9 ಮಿಲಿಯ ಸ್ತ್ರೀಯರೂ ವಿವಾಹಯೋಗ್ಯ ಪುರುಷರಿಲ್ಲದೇ ವಿವಾಹವಂಚಿತರಾಗಿ ಬಾಳಬೇಕಾದೀತು. ನನ್ನ ಅಥವಾ ನಿಮ್ಮ ನತದೃಷ್ಟ ಸಹೋದರಿಯೊಬ್ಬಳು ಅಮೆರಿಕ ಅಥವಾ ರಷ್ಯಾದ ಪ್ರಜೆಯಾಗಿದ್ದಲ್ಲಿ ಅವಳಿಗೆ ಉಳಿಯುವುದು ಎರಡು ಆಯ್ಕೆಗಳು ಮಾತ್ರ . ಸಂಭಾವಿತ ಹಾಗೂ ವಿವಾಹಿತ ಪುರುಷನೊಬ್ಬನ ಎರಡನೇ ಪತ್ನಿಯಾಗಿ ಗೌರವಾನ್ವಿತ ಜೀವನ ಸಾಗಿಸುವುದು ಅಥವಾ ಚರ್ಮದ ಮೆರಗು ಮಾಸುವವರೆಗೆ ಪ್ರತಿಷ್ಟಿತರ ‘ಇಟ್ಟುಕೊಂಡವಳಾಗಿ' ಜೀವನ ನಡೆಸುವುದು. ಆಯ್ಕೆ ಅವರವರದು.
ಪಾಶ್ಚಾತ್ಯ ಸಮಾಜದಲ್ಲಿ ಪುರುಷನು ಹಲವು ಪ್ರೇಯಸಿಯರನ್ನು ಹೊಂದಿರುವುದು, ಹಲವರೊಂದಿಗೆ ವಿವಾಹೇತರ ದೈಹಿಕ ಸಂಪರ್ಕವನ್ನು ಹೊಂದುವುದು ಸಾಮಾನ್ಯ. ಇಂತಹ ಸಂಬಂಧಗಳಿಂದಾಗಿ ಸ್ತ್ರೀಯು ಅಸುರಕ್ಷಿತ, ಅಪಮಾನಕರ ಬಾಳನ್ನು ಸವೆಸಬೇಕಾಗುವುದು. ಸ್ತ್ರೀಯರನ್ನು ಶೋಷಣೆಗೊಳಪಡಿಸಿ ಅವಳ ಬಾಳನ್ನು ನರಕಸದೃಶವಾಗಿಸುವ ಕಾರ್ಯವನ್ನು ಮೌನವಾಗಿ ಸಮ್ಮತಿಸುವ ಸಮಾಜವು ಗೌರವಾನ್ವಿತನೊಬ್ಬನ ಎರಡನೇ ಪತ್ನಿಯಾಗಿ ಸುರಕ್ಷಿತ ಬದುಕನ್ನು ಸಾಗಿಸುವ ಪದ್ದತಿಯನ್ನು ವಿರೋಧಿಸುವುದು ವಿಚಿತ್ರವಾಗಿದೆ.
ನಿಗದಿತ ಮೇರೆಯೊಂದಿಗೆ ಇಸ್ಲಾಮ್ ಬಹುಪತ್ನಿತ್ವವನ್ನು ಅನುಮತಿಸಿರುವುದಕ್ಕೆ ಇನ್ನೂ ಹಲವು ಕಾರಣಗಳಿರಲೂಬಹುದು. ಅದರಲ್ಲಿ ಮುಖ್ಯವಾದುದು ಸ್ತ್ರೀಯರ ಗೌರವವನ್ನು ಕಾಪಾಡುವುದು ಮತ್ತು ಅವರಿಗೊಂದು ಸುರಕ್ಷಿತ ಬದುಕನ್ನು ನೀಡುವುದು.
ಉತ್ತರ: ಬಹುಪತ್ನಿತ್ವವನ್ನು ಇಸ್ಲಾಮ್ ಸ್ತ್ರೀಯರಿಗೆ ಅನುಮತಿಸಿಲ್ಲ ಎಂಬುದರ ಹಿಂದಿನ ಔಚಿತ್ಯವನ್ನು ಕೆಲವು ಮುಸ್ಲಿಮರೂ ಸೇರಿದಂತೆ ಹಲವಾರು ಅಮುಸ್ಲಿಮರು ಪ್ರಶ್ನಿಸುತ್ತಾರೆ.
ಪ್ರಶ್ನೆಯನ್ನು ಉತ್ತರಿಸುವ ಮೊದಲು ಇಸ್ಲಾಮೀ ಸಮಾಜದ ತಳಹದೀಯೇ ನ್ಯಾಯ ಹಾಗೂ ಸಮಾನತೆಯ ಮೇಲೆ ಸ್ಥಾಪಿತವಾಗಿದೆ ಎಂಬುದನ್ನು ನೆನಪಿಸಲು ಇಚ್ಛಿಸುತ್ತೇನೆ. ಅಲ್ಲಾಹನು ಸ್ತ್ರೀ- ಪುರುಷರನ್ನು ಸರಿಸಮಾನರಾಗಿ ಸೃಷ್ಟಿಸಿದರೂ ಅವರಿಬ್ಬರ ಸಾಮರ್ಥ್ಯ ಹಾಗೂ ಹೊಣೆಗಾರಿಕೆಗಳಲ್ಲಿ ವ್ಯತ್ಯಾಸಗಳನ್ನಿರಿಸಿರುವನು. ಅವರಿಬ್ಬರ ಶಾರೀರಿಕ ಹಾಗೂ ಮಾನಸಿಕ ಸಾಮರ್ಥ್ಯಗಳಲ್ಲಿ ಭಿನ್ನತೆಯಿದೆ. ಸಮಾಜದಲ್ಲಿ ಆದರೆ ತದ್ರೂಪಿಗಳೆಂದಲ್ಲ.
ಕುರ್ಆನಿನ 4 ನೆ ಅಧ್ಯಾಯ ಸೂರತುನ್ನಿಸಾಅ ದ 22ರಂದ 24ನೆವರೆಗಿನ ಸೂಕ್ತಿಗಳು ಪುರುಷರಿಗೆ ವಿವಾಹ ನಿಷಿದ್ಧವಾದ ಸ್ತ್ರೀಯರ ವಿವರಗಳನ್ನು ನೀಡುತ್ತಾ “ ಮತ್ತು ವಿವಾಹಿತ ಸ್ತ್ರೀ ಕೂಡಾ ನಿಮಗೆ ನಿಷಿದ್ಧ...." ಎನ್ನುವ ಮೂಲಕ ಒಬ್ಬ ಸ್ತ್ರೀಯು ಏಕಕಾಲದಲ್ಲಿ ಇಬ್ಬರು ಪುರುಷರನ್ನು ಹೊಂದುವ ‘ಬಹು ಪತಿತ್ವ'ವನ್ನು ನಿಷೇಧಿಸುತ್ತದೆ.
ಬಹುಪತಿತ್ವದಿಂದಾಗುವ ಪ್ರತ್ಯಕ್ಷ ತೊಂದರೆಗಳು:
a. ಒಬ್ಬ ಪುರುಷನಿಗೆ ಇರುವ ಹಲವಾರು ಪತ್ನಿಯರಲ್ಲಿ ಜನಿಸುವ ಪ್ರತಿಯೊಂದು ಮಗುವಿನ ತಂದೆಯನ್ನೂ ತಾಯಿಯನ್ನೂ ಸುಲಭವಾಗಿ ಗುರುತಿಸಬಹುದು. ಆದರೆ ಒಬ್ಬ ಸ್ತ್ರೀಗೆ ಹಲವಾರು ಪತಿಯಂದಿರಿರುವ ಪ್ರಕರಣದಲ್ಲಿ ಇದು ಸುಲಭವಲ್ಲ. ಇಸ್ಲಾಮೀ ಕುಟುಂಬ ವ್ಯವಸ್ಥೆಯಲ್ಲಿ ಮಾತಾ-ಪಿತರಿಗೆ ಅತ್ಯಂತ ಪ್ರಾಮುಖ್ಯವಾದ ಸ್ಥಾನವಿದೆ. ಆದುದರಿಂದ ಒಂದು ಮಗುವಿನ ತಂದೆ - ತಾಯಿಯರ ಗುರುತಿಸುವಿಕೆಯು ಅತ್ಯಂತ ಪ್ರಮುಖವಾಗಿದೆ. ತಮ್ಮ ಮಾತಾಪಿತರನ್ನು ಅದರಲ್ಲೂ ಪ್ರತ್ಯೇಕವಾಗಿ ತಂದೆಯನ್ನು ಗುರುತಿಸಿಕೊಳ್ಳಲಾರದ ಮಕ್ಕಳು ಮಾನಸಿಕ ಆಘಾತಕ್ಕೊಳಗಾಗುತ್ತಾರೆ ಮತ್ತು ತಮ್ಮ ಬಾಲ್ಯದ ಸವಿಯನ್ನು ಕಳೆದುಕೊಳ್ಳುತ್ತಾರೆ ಎಂದು ಮನಃಶಾಸ್ತ್ರಜ್ಞರು ಕಂಡುಕೊಂಡಿರುವರು. ಒಬ್ಬ ವೇಶ್ಯೆಯ ಮಕ್ಕಳು ತಮ್ಮ ಸುಂದರವಾದ, ಆನಂದಕರವಾದ ಬಾಲ್ಯದಿಂದ ವಂಚಿತರಾಗಿರಲು ಕಾರಣ ಇದುವೇ ಎಂದು ಅವರು ಹೇಳುತ್ತಾರೆ.
b. ಸ್ತ್ರೀಯೊಂದಿಗೆ ಹೋಲಿಸಲ್ಪಟ್ಟರೆ ಪುರುಷನು ಹೆಚ್ಚು ಪಾಲಿಗಮಸ್ (ಒಂದಕ್ಕಿಂತ ಹೆಚ್ಚು ಜೋಡಿಯನ್ನು ಬಯಸುವ ಸ್ವಭಾವ) ಪ್ರಕೃತಿಯವನು.
c. ಜೀವಶಾಸ್ತ್ರದ ಪ್ರಕಾರ ಬಹುಪತ್ನಿಯರನ್ನು ಹೊಂದಿದ ಪುರುಷನು ಪತಿಯ ಸ್ಥಾನದಲ್ಲಿದ್ದುಕೊಂಡು ತನ್ನ ಹೊಣೆಗಾರಿಕೆಗಳನ್ನು ಸಮರ್ಥವಾಗಿ, ಸುಲಭವಾಗಿ ನಿರ್ವಹಿಸಬಲ್ಲ. ಆದರೆ ಸ್ತ್ರೀಗೆ ಹಲವು ಪತಿಯಂದಿರಿದ್ದಲ್ಲಿ ಪತ್ನಿಯಾಗಿ, ತಾಯಿಯಾಗಿ ತನ್ನ ಹೊಣೆಗಾರಿಕೆಗಳನ್ನು ಸಮರ್ಥವಾಗಿ ನಿರ್ವಹಿಸಲು ಅಸಾಧ್ಯ. ಮಾತ್ರವಲ್ಲದೇ ತನ್ನ ಋತುಚಕ್ರದ ವಿವಿಧ ಅವಧಿಗಳಲ್ಲಿ ಅವಳ ವರ್ತನೆ ಹಾಗೂ ಮಾನಸಿಕ ಸ್ಥಿತಿಗಳು ಅನೇಕ ರೀತಿಯ ಮಾರ್ಪಾಡುಗಳಿಗೆ ಒಳಪಡುತ್ತವೆ ಎಂದೂ ಶಾಸ್ತ್ರಜ್ಞರು ಹೇಳುತ್ತಾರೆ.
d. ಹಲವು ಪುರುಷರೊಂದಿಗೆ ದೇಹವನ್ನು ಹಂಚಿಕೊಳ್ಳುವ ಸ್ತ್ರೀಯು ಅನೇಕ ರೀತಿಯ ಗುಹ್ಯ- ಲೈಂಗಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು ಮತ್ತು ಹೀಗೆ ತಗುಲಿಸಿಕೊಂಡ ರೋಗಗಗಳು ಅವಳ ಪತಿಯಂದಿರಿಗೆ (ಅವರು ಯಾವುದೇ ಅನ್ಯಸ್ತ್ರೀ ಸಂಪರ್ಕವನ್ನು ಹೊಂದದವರಾಗಿದ್ದರೂ) ಹರಡುವ ಅಪಾಯವಿದೆ. ಆದರೆ ಬಹುಪತ್ನಿಯರನ್ನು ಹೊಂದಿದ ಸದಾಚಾರಿ ಪುರುಷನ ವಿಷಯದಲ್ಲಿ ಇಂತಹ ಅಪಾಯಗಳಿಲ್ಲ.
ಇವುಗಳೆಲ್ಲವೂ ಪಾಲಿಯಾಂಡ್ರಿ (ಬಹುಪತಿತ್ವ)ಯಲ್ಲಿರುವ, ಮನುಷ್ಯದೃಷ್ಟಿಗೆ ಗೋಚರವಾಗಿರುವ ಕೇಡುಗಳಾಗಿವೆ. ಇಂತಹ ಅದೆಷ್ಟೋ ಅಗೋಚರ ಕೇಡುಗಳಿರಲೂ ಬಹುದು. ತನ್ನ ಅನಂತ ಜ್ಞಾನಭಂಡಾರದಿಂದ ಇವನ್ನೆಲ್ಲಾ ಅರಿತ ಅಲ್ಲಾಹನು ಬಹುಪತಿತ್ವವನ್ನು ನಿಷೇಧಿಸಿರಬಹುದು. ಇದಕ್ಕಿಂತ ಹೆಚ್ಚು ಅಲ್ಲಾಹನೇ ಬಲ್ಲ.
ಉತ್ತರ: ‘ಇಸ್ಲಾಮಿನಲ್ಲಿ ಸ್ತ್ರೀಯರ ಸ್ಥಾನ-ಮಾನ ಇದು ಮಾಧ್ಯಮದವರ ದಾಳಿಗೆ ಪದೇಪದೇ ಈಡಾಗುತ್ತಿರುವ ವಿಷಯವಾಗಿದೆ. ಇಸ್ಲಾಮೀ ವಸ್ತ್ರಧಾರಣಾ ರೀತಿಯನ್ನು ಅದು ಇಸ್ಲಾಮೀ ಕಾನೂನು ಅಂಗೀಕರಿಸಿರುವ ಸ್ತ್ರೀಶೋಷಣೆ ಎಂಬಂತೆ ಚಿತ್ರೀಕರಿಸಲಾಗುತ್ತದೆ. ಇಸ್ಲಾಮ್ ಧರ್ಮವು ಆಜ್ಞಾಪಿಸಿರುವ ‘ಹಿಜಾಬ್' ನ ವಾಸ್ತವಿಕತೆಯನ್ನು ಮನದಟ್ಟು ಮಾಡಿಕೊಳ್ಳುವ ಮೊದಲು ಇಸ್ಲಾಮಿನ ಪುನಃಸ್ಥಾಪನಾ ಪೂರ್ವದಲ್ಲಿ ಅಥವಾ ಕುರ್ಆನಿನ ಅವತೀರ್ಣ ಪೂರ್ವಕಾಲದಲ್ಲಿ ಆಯಾ ಸಮಾಜದಲ್ಲಿನ ಸ್ತ್ರೀಯರ ಸ್ಥಾನಮಾನವೇನಾಗಿತ್ತೆಂಬುದನ್ನು ಅವಲೋಕಿಸೋಣ.
1. ಪ್ರಾಚೀನ ಕಾಲದ ಸ್ತ್ರೀಯರ ಸ್ಥಾನವು ಕೇವಲ ಉದಾಹರಣೆಗಳು ಪ್ರಾಚೀನ ನಾಗರಿಕತೆಗಳಲ್ಲಿ ಸ್ತ್ರೀಯರು ಮನುಷ್ಯರಾಗಿ ಜನ್ಮ ತಾಳಿದರೆಂಬ ಅರ್ಹತೆಯಲ್ಲಿ ಅವರಿಗೆ ದೊರೆಯಬೇಕಾಗಿದ್ದ ಕನಿಷ್ಟ ಘನತೆ- ಗೌರವಗಳಿಂದಲೂ ವಂಚಿತರಾಗಿದ್ದರು ಎಂಬುದನ್ನು ಸ್ಪಷ್ಟಪಡಿಸಿಕೊಡುತ್ತವೆ
- ಬ್ಯಾಬಿಲೋನಿಯನ್ ನಾಗರಿಕತೆ: ಕೀಳುದರ್ಜೆಯವರಾಗಿ ಪರಿಗಣಿಸಲ್ಪಟ್ಟ ಸ್ತ್ರೀಯರು ತಮ್ಮೆಲ್ಲಾ ಹಕ್ಕುಗಳಿಂದ ವಂಚಿತರಾಗಿದ್ದರು. ಪುರುಷನು ಮಹಿಳೆಯೊಬ್ಬನ್ನು ಕೊಲೆಗೈದಲ್ಲಿ ಕೊಲೆಗಾರನ ಬದಲಿಗೆ ಅವನ ಪತ್ನಿಯನ್ನು ಕೊಲ್ಲಲಾಗುತ್ತಿತ್ತು.
- ಗ್ರೀಕ್ ನಾಗರಿಕತೆ: ಇದನ್ನು ಪುರಾತನ ನಾಗರಿಕತೆಗಳ ಪೈಕಿ ಅತ್ಯತ್ತಮವೆಂದು ಬಣ್ಣಿಸಲಾಗುತ್ತದೆ ಇಂತಹ ‘ಅತ್ಯತ್ತಮ' ಪದ್ಧತಿಯಲ್ಲೂ ಅವರನ್ನು ಕೀಳಾಗಿ ಮಾಡಲಾಗುತ್ತಿತ್ತು ಮಾತ್ರವಲ್ಲದೆ ಅವರ ಎಲ್ಲಾ ನೈತಿಕ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು. ಗ್ರೀಕ್ ಪುರಾಣದಲ್ಲಿರುವ ‘ಪಂಡೋರ'ವೆಂಬ ಕಾಲ್ಪನಿಕ ಸ್ತ್ರೀ ವಿಭಾಗವೇ ಎಲ್ಲಾ ಕೆಡುಕುಗಳಿಗೂ, ದುರದೃಷ್ಟಗಳಿಗೂ ಕಾರಣರೆಂದು ನಂಬಲಾಗುತ್ತಿತ್ತು. ಪುರುಷನಿಗಿಂತ ಕೀಳು ದರ್ಜೆಯವರೆಂದು ಅವರನ್ನು ಪರಿಗಣಿಸಿ ತಮ್ಮ ಕೈಗೊಂಬೆಗಳನ್ನಾಗಿಸಿಕೊಂಡಿದ್ದರು. ಪರಿಶುದ್ಧರೂ, ಪ್ರಶಂಸಾರ್ಹರೂ ಆಗಿದ್ದ ಸ್ತ್ರೀಯರನ್ನು ತಮ್ಮ ಮಿತಿ ಮೀರಿದ ಅಹಂ ಮತ್ತು ಕಾಮಲಾಲಸೆಗಳಿಂದಾಗಿ ದುರ್ಮಾರ್ಗಕ್ಕೆಳೆದರು. ಎಲ್ಲಾ ದರ್ಜೆಗಳಲ್ಲೂ ವೇಶ್ಯಾವೃತ್ತಿ ಸಾಮಾನ್ಯವಾಗಿತ್ತು.
- ರೋಮನ್ ನಾಗರಿಕತೆ: ರೋಮನ್ ನಾಗರಿಕತೆಯು ತನ್ನ ವೈಭವದ ತುತ್ತತುದಿಯನ್ನು ತಲುಪಿದ ಕಾಲದಲ್ಲಿ ಒಬ್ಬ ಪುರುಷನಿಗೆ ತನ್ನ ಪತ್ನಿಯನ್ನು ವಧಿಸುವ ಹಕ್ಕಿತ್ತು. ನಗ್ನತೆ ಮತ್ತು ವೇಶ್ಯಾವೃತ್ತಿ ಸಾಮಾನ್ಯವಾಗಿತ್ತು.
- ಈಜಿಪ್ಷಿಯನ್ ನಾಗರಿಕಯತೆ: ಸ್ತ್ರೀಯರನ್ನು ಅನಿಷ್ಟಕಾರಿ ಹಾಗೂ ಪಿಶಾಚಿಯ ವಕ್ತಾರರೆಂದು ಪರಿಗಣಿಸಿದ್ದರು.
- ಇಸ್ಲಾಮೀ ಪೂರ್ವ ಅರೇಬಿಯಾ: ಸ್ತ್ರೀಯರನ್ನು ಅವಗಣಿಸಲಾಗಿತ್ತು, ಜನಿಸಿದ ಮಗು ಹೆಣ್ಣಾದಲ್ಲಿ ಅದನ್ನು ಜೀವಂತ ಹೂಳಲಾಗುತ್ತಿತ್ತು.
2. ಇಸ್ಲಾಮ್ ಸ್ತ್ರೀಯರಿಗೆ ಸಮಾನತೆಯನ್ನು ಘೋಷಿಸಿ ಅವರ ಸ್ಥಾನಮಾನಗಳನ್ನು ಉನ್ನತಗೊಳಿಸಿತು.
1400 ವರ್ಷಗಳ ಹಿಂದೆಯೇ ಅವರ ನ್ಯಾಯಯುತ ಹಕ್ಕುಗಳನ್ನು ಅವರಿಗೆ ಹಿಂತಿರುಗಿಸಿದ ಇಸ್ಲಾಮ್ ತಮಗೆ ದೊರೆತ ಉನ್ನತ ಸ್ಥಾನಮಾನಗಳನ್ನು ಯಥಾರೀತಿ ಕಾಯ್ದುಕೊಳ್ಳಲು ಕರೆ ನೀಡುತ್ತದೆ.
ಮೊತ್ತಮೊದಲ ಬುರ್ಖಾ ಪುರುಷರಿಗೆ.
ಬುರ್ಖಾದ ಬಗ್ಗೆ ಚರ್ಚಿಸುವಾಗಲೆಲ್ಲಾ ಜನಮನಃದಲ್ಲಿ ಮೂಡುವುದು ಸ್ತ್ರೀಯರ ಚಿತ್ರ ಮಾತ್ರ. ವಾಸ್ತವದಲ್ಲಿ ಹಿಜಾಬ್(ಬುರ್ಖಾ)ನ ಆದೇಶವನ್ನು ಅಲ್ಲಾಹನು ಮೊತ್ತಮೊದಲು ನೀಡಿರುವುದು ಪುರುಷನಿಗೇ ಹೊರತು ಸ್ತ್ರೀಯರಿಗಲ್ಲ.
ಕುರ್ಆನ್ ಹೇಳುತ್ತದೆ:
“ಸತ್ಯವಿಶ್ವಾಸಿ ಪುರುಷರೊಡನೆ ತಮ್ಮ ದೃಷ್ಟಿಗಳನ್ನು ತಗ್ಗಿಸಿಕೊಳ್ಳಲೂ, ತಮ್ಮ ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳಲೂ ಹೇಳಿರಿ. ಇದು ಅವರ ಪಾಲಿಗೆ ಅತ್ಯಂತ ಹೆಚ್ಚು ಪರಿಶುದ್ಧವಾದ ಕ್ರಮವಾಗಿದೆ." ಕುರ್ಆನ್ (24 : 30 )
ಪುರುಷ ದೃಷ್ಟಿಯು ಸ್ತ್ರೀಯ ದೃಷ್ಟಿಯೊಂದಿಗೆ ಬೆರೆತರೆ ಪುರುಷನು ತನ್ನ ಮನದಲ್ಲಿ ಯಾವುದೇ ಕೆಟ್ಟ ಚಿಂತನೆಗಳು ಮೂಡದಂತೆ ದೃಷ್ಟಿಯನ್ನು ತಗ್ಗಿಸಬೇಕು.
ಹೀಗೆ ಮೊತ್ತಮೊದಲು ಕುರ್ಆನ್ ಪುರುಷನಿಗೆ ಹಿಜಾಬನ್ನು ಆದೇಶಿಸಿದ ಬಳಿಕ ಸ್ತ್ರೀಯರಿಗೂ ಈ ಆದೇಶ ನಿಡುತ್ತದೆ.
ಸ್ತ್ರೀಯರಿಗೆ ಹಿಜಾಬ್.
ಕುರ್ಆನಿನ 24ನೆ ಅಧ್ಯಾಯದ ತದನಂತರದ ಅಂದರೆ 31ನೆ ಸೂಕ್ತಿಯು ಸ್ತ್ರೀಯರಿಗೆ ಹೀಗೆಂದು ಆದೇಶ ನಿಡುತ್ತದೆ.:
“ಮತ್ತು ಸತ್ಯವಿಶ್ವಾಸಿ ಸ್ತ್ರೀಯರೊಡನೆ ಅವರು ತಮ್ಮ ದೃಷ್ಟಿಗಳನ್ನು ತಗ್ಗಿಸಿಕೊಳ್ಳಲೂ, ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳಲೂ ಹೇಳಿರಿ. ಅವರು ತಮ್ಮ ಶೃಂಗಾರಗಳನ್ನು ತೋರಿಸದಿರಲಿ; ಸ್ವಯಂ ಪ್ರಕಟವಾಗುವಂತಹವುಗಳನ್ನು ಹೊರತುಪಡಿಸಿ; ಮತ್ತು ತಮ್ಮ ಎದೆಯ ಮೇಲೆ ತಮ್ಮ ಮೇಲು ಹೊದಿಕೆಯ ಸೆರಗನ್ನು ಹಾಕಿಕೊಂಡಿರಲಿ. ಅವರು ತಮ್ಮ ಶೃಂಗಾರವನ್ನು ತಮ್ಮ ಪತಿಯರು, ತಂದೆಯರು, ಪತಿಯ ತಂದೆಯರು, ಪುತ್ರರು, ಪತಿಯ ಪುತ್ರರು, ಸಹೋದರರು, ಸಹೋದರ ಪುತ್ರರು, ವಾಪ್ತ ಸ್ತ್ರೀಯರು .... ಇವರ ಹೊರತು ಇನ್ನಾರಿಗೂ ತೋರಿಸದಿರಲಿ...... (ಕುರ್ಆನ್ 24:31)
3. ಹಿಜಾಬಿನ ಆರು ಷರತ್ತುಗಳು.
- ಮೊದಲನೆಯ ಷರತ್ತು ವಸ್ತ್ರದ ವಿಸ್ತೀರ್ಣತೆಯಾಗಿದೆ. ಅರ್ಥಾತ್ ವಸ್ತ್ರವು ದೇಹದ ಎಷ್ಟು ಭಾಗಗಳನ್ನು ಮುಚ್ಚಬೇಕು ಎಂದಾಗಿದೆ. ಇದು ಸ್ತ್ರೀ ಮತ್ತು ಪುರುಷರಿಗೆ ಬೇರೆ ಬೇರೆಯಾಗಿದೆ. ಪುರುಷನ ವಸ್ತ್ರವು ಕನಿಷ್ಟ ನಾಭಿಯಿಂದ ಮೊಣಕಾಲವರೆಗಿನ ಭಾಗಗಳನ್ನು ಮುಚ್ಚುವಂತಿರಬೇಕು. ಸ್ತ್ರೀಯರ ವಸ್ತ್ರವು ಅಂಗೈ ಮತ್ತು ಮುಖವನ್ನು ಹೊರತುಪಡಿಸಿ ಪೂರ್ಣ ದೇಹವನ್ನು ಮುಚ್ಚುವಂತಿರಬೇಕು. ಅವರಿಷ್ಟಪಟ್ಟಲ್ಲಿ ಇವೆರಡು ಭಾಗಗಳನ್ನು ಮುಚ್ಚಬಹುದಾಗಿದೆ. ಆದರೆ ಕೆಲವು ವಿದ್ವಾಂಸರು ಇವೆರಡು ಭಾಗಗಳನ್ನು ಮುಚ್ಚುವುದು ಕೂಡಾ ಕಡ್ಡಾಯವೆಂದಿರುವರು.
ಉಳಿದ ಎಲ್ಲಾ ಐದು ಷರತ್ತುಗಳು ಸ್ತ್ರೀ- ಪುರುಷರಿಬ್ಬರಿಗೂ ಸಮಾನವಾಗಿದೆ.
- ದೇಹದ ಉಬ್ಬು - ತಗ್ಗುಗಳು ತೋರದಂತೆ ವಸ್ತ್ರವು ಸಡಿಲವಾಗಿರಬೇಕು.
- ಪಾರದರ್ಶಕವಾಗಿರಬಾರದು.
- ವಿರುದ್ಧ ಲಿಂಗವನ್ನು ಲೈಂಗಿಕವಾಗಿ ಆಕರ್ಷಿಸದಂತಿರಬೇಕು
- ಪುರುಷರ ವಸ್ತ್ರ ವಿನ್ಯಾಸವು ಸ್ತ್ರೀಯರದನ್ನೂ , ಸ್ತ್ರೀಯರದು ಪುರುಷರದನ್ನೂ ಹೋಲಬಾರದು. ವಸ್ತ್ರವು ಅನ್ಯಧರ್ಮೀಯರ ವಸ್ತ್ರವನ್ನು ಹೋಲಬಾರದು. ಅರ್ಥಾತ್ ಇಸ್ಲಾಮೇತರ ಧರ್ಮದವರು ಧಾರ್ಮಿಕ ಲಾಂಛನವಾಗಿ ಬಳಸುವ ಅಥವಾ ಒಬ್ಬನ ವಸ್ತ್ರದಿಂದಲೇ ಅವನು ಇಂತಹದೇ ಧರ್ಮದವನು ಎಂದು ಗುರುತಿಸಲ್ಪಡುವಂತಹ ವಸ್ತ್ರಗಳು.
4. ‘ಹಿಜಾಬ್' ಪದದಲ್ಲಿ ಸನ್ನಡತೆ, ಸಚ್ಚಾರಿತ್ರ್ಯಗಳೂ ಸುಪ್ತವಾಗಿವೆ.
ಇಸ್ಲಾಮೀ ಪಾರೊಭಾಷಿಕವಾದ ಹಿಜಾಬ್ನಲ್ಲಿ ವಸ್ತ್ರಧಾರಣೆಯ ಕೇವಲ 6 ಷರತ್ತುಗಳು ಮಾತ್ರವಲ್ಲದೆ ಒಬ್ಬ ವ್ಯಕ್ತಿಯ ಚಾರಿತ್ರ್ಯ , ನಡತೆ, ಮನೋಭಾವ, ನೈತಿಕತೆಗಳೂ ಪತಿಗಣಿಸಲ್ಪಡುತ್ತವೆ. ಕೇವಲ ಆರು ವಸ್ತ್ರಧಾರಣಾ ನಿಯಮಗಳನ್ನು ಅಂಗೀಕರಿಸುವಾತನು ಹಿಜಾಬಿನ ಚಿಕ್ಕದೊಂದು ಭಾಗವನ್ನಷ್ಟೇ ಸ್ವೀಕರಿಸಿದನು ಎಂದರ್ಥ. ವಸ್ತ್ರಧಾರಣಾ ರೀತಿಯ ಜೊತೆಗೆ ಅವನ್ನು ತನ್ನ ಕಣ್ಣಿನ ಕೆಟ್ಟ ನೋಟಗಳಿಗೆ, ಹೃದಯದ ಕೆಟ್ಟ ಭಾವನೆ - ಉದ್ದೇಶಗಳಿಗೆ ಹಿಜಾಬ್ (ಬುರ್ಖಾ) ತೊಡಿಸಿದಾಗಲೇ ಅದು ಸಂಪೂರ್ಣವೆನಿಸಿಕೊಳ್ಳುತ್ತದೆ.
5. ‘ಹಿಜಾಬ್' ಪೀಡನೆಗಳ ವಿರುದ್ಧ ಒಂದು ಗುರಾಣಿ.
ಸ್ತ್ರೀಯರಿಗೆ ಹಿಜಾಬನ್ನು ಶಿಫಾರಸು ಮಾಡಲು ಮುಖ್ಯ ಕಾರಣವೇನೆಂದರೆ ಕುರ್ಆನ್ ವಿವರಿಸಿ ಕೊಡುತ್ತದೆ:
‘ಓ ಪ್ರವಾದಿ, ನಿನ್ನ ಪತ್ನಿಯರೊಡನೆ, ಪುತ್ರಿಯರೊಡನೆ, ಸತ್ಯವಿಶ್ವಾಸಿನಿಯರೊಡನೆ ಅವರು ತಮ್ಮ ಮೇಲೆ ತಮ್ಮ ಚಾದರಗಳ ಸೆರಗನ್ನು ಇಳಿಸಿಕೊಳ್ಳಲು ಹೇಳು. ಇದು ಅವರು ಗುರುತಿಸಲ್ಪಡುವಂತಾಗಲೂ, ಪೀಡನೆಗಳಿಗೆ ಈಡಾಗದಿರಲೂ (ಅವರಿಗೆ) ಉತ್ತಮವಾಗಿದೆ. ಅಲ್ಲಾಹನು ಅತ್ಯಂತ ಕ್ಷಮಾಶೀಲನೂ, ಕರುಣಾಮಯಿಯೂ ಆಗಿರುವನು.' ( ಕುರ್ಆನ್ 33:59)
ಹಿಜಾಬ್ ಪಾಲಿಸುವ ಸ್ತ್ರೀಯರು ಕುಲೀನ ಸ್ತ್ರೀಯರೆಂದು ಗುರುತಿಸಲ್ಪಡುವುದರಿಂದ ಮತ್ತು ಇದು ಅವರನ್ನು ಪೀಡನೆಗಳಿಂದ ಮುಕ್ತಗೊಳಿಸಲೂಬಹುದು ಎನ್ನುವ ಕರ್ಆನ್ ಸ್ತ್ರೀಯರಿಗೆ ಹಿಜಾಬನ್ನು ಒಂದು ಗುರಾಣಿಯಾಗಿ ಶಿಫಾರಸು ಮಾಡುತ್ತದೆ.
6. ಅವಳಿ ಸೋದರಿಯರ ಉದಾಹರಣೆ.
ಅದೊಂದು ರಸ್ತೆ ಸುಂದರಿಯರಾದ ಇಬ್ಬರು ಅವಳಿ ಸೋದರಿಯರು ನಡೆದುಕೊಂಡು ಬರುತ್ತಿರುವರು. ಒಬ್ಬಳು ಸಂಪೂರ್ಣ ಹಿಜಾಬಿನಲ್ಲಿದ್ದರೆ ಮತ್ತೊಬ್ಬಳು ಧರಿಸಿರುವುದು ಪಾಶ್ಚಾತ್ಯ ಶೈಲಿಯ ಅಂಗ ಸೌಷ್ಠವಗಳನ್ನು ಪ್ರದರ್ಶಿಸುವ ‘ಮಿಡಿ'ಯನ್ನಾಗಿದೆ. ಅದೇ ರಸ್ತೆಯ ಇನ್ನೊಂದು ಅಂಚಿನಲ್ಲಿ ಮಿಕವನ್ನರಸುತ್ತಿರುವ ಪುಂಡ. ಈ ಪುಂಡನು ತನ್ನ ಬಲೆಯನ್ನು ಯಾರ ಮೇಲೆ ಬೀಸಬಹುದೆಂದು ಊಹಿಸಬಲ್ಲಿರಾ? ಬಹುಷಃ ನಿಮ್ಮ ಊಹೆ ಸರಿಯಾಗಿಯೇ ಇರಬಹುದು. ಪಾಶ್ಚಾತ್ಯರ ಶಿಫಾರಸು ಮೇರೆಗೆ ಅಂಗಸೌಷ್ಠವವನ್ನು ಹೊರಚೆಲ್ಲಿ ಪೀಡಿಸಲ್ಪಡಲು ಪರೋಕ್ಷ ಆಹ್ವಾನವನ್ನು ನೀಡುತ್ತಿರುವ ‘ಮಿಡಿಧಾರಿಣಿ'ಯನ್ನೇ ಆ ಪುಂಡನು ಆಯ್ಕೆ ಮಾಡಬಹುದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ಕುರ್ಆನ್ ಸರಿಯಾಗಿಯೇ ಹೇಳಿದೆ : ‘ಹಿಜಾಬ್ ಸ್ತ್ರೀ - ಪೀಡನೆಗಳನ್ನು ತಡೆಯುತ್ತದೆ'
7. ಅತ್ಯಾಚಾರಿಗೆ ಮರಣದಂಡನೆ.
ಇಸ್ಲಾಮೀ ಕಾನೂನಿನಲ್ಲಿ ಅತ್ಯಾಚಾರವೆಸಗಿದ ಅಪರಾಧಿಗೆ ಶಿಕ್ಷೆ .ಮರಣದಂಡನೆಯಾಗಿದೆ. ಇದು ಅತಿಯಾಯಿತೆಂದು ಹಲವರು ಆಕ್ಷೇಪಿಸುತ್ತಾರೆ. ಇಸ್ಲಾಮ್ ಅತ್ಯಂತ ಕ್ರೂರ ಧರ್ಮವೆಂಬುದು ಇನ್ನು ಕೆಲವರ ಆಕ್ಷೇಪ. ಈ ಬಗ್ಗೆ ನಾನು ಹಲವು ಅಮುಸ್ಲಿಮರಲ್ಲಿ ಚರ್ಚಿಸಿದ್ದೇನೆ. ಒಂದು ವೇಳೆ ನಿಮ್ಮ ಸ್ವಂತ ಸೋದರಿಯರೋ, ತಾಯಿಯೋ, ಪತ್ನಿಯೋ ಅತ್ಯಾಚಾರಕ್ಕೀಡಾಗಿ (ಅಲ್ಲಾಹನು ರಕ್ಷಿಸಲಿ) ಅಪರಾಧಿಯನ್ನು ನಿಮ್ಮ ಮುಂದೆ ತಂದು ತೀರ್ಪು ನೀಡಲು ನಿಮ್ಮಲ್ಲಿ ಕೇಳಿಕೊಂಡಲ್ಲಿ ನಿಮ್ಮ ತೀರ್ಮಾನವೇನಾಗಿರಬಹುದು? ಎಲ್ಲರ ತೀರ್ಪೂ ಅಪರಾಧಿಗೆ ಮರಣವೇ ಸೂಕ್ತ ದಂಡನೆ ಎಂದಾಗಿತ್ತು. ಇನ್ನು ಕೆಲವರು ಅವನಿಗೆ ಚಿತ್ರಹಿಂಸೆ ಕೊಟ್ಟು ಕೊಲ್ಲಬೇಕು ಎಂದಿದ್ದರು. ಓಹೋ ! ಬಲಿಪಶು ನಿಮ್ಮ ಸ್ವಂತ ತಂಗಿಯೋ, ತಾಯಿಯೋ ಆಗಿದ್ದರೆ ಮರಣದಂಡನೆ, ಅನ್ಯರಾಗಿದ್ದರೆ ಮಾಫಿ !! ಇದೆಂತಹಾ ದ್ವಂದ್ವ ನೀತಿ ! ?
8. ಸ್ತ್ರೀ ಸ್ವಾತಂತ್ರ್ಯವೆಂಬ ಪಾಶ್ಚಾತ್ಯ ಬಡಾಯಿ.
ಸ್ತ್ರೀ -ಸ್ವಾತಂತ್ರ್ಯದ ಸೋಗಿನಲ್ಲಿರುವ ಪಾಶ್ಚಾತ್ಯರ ಸವಿ(ಬಡಾಯಿ) ಮಾತುಗಳು ಅವಳ ಶರೀರವನ್ನು ಶೋಷಣೆಗೊಳಪಡಿಸುವ, ಅವಳ ಆತ್ಮವನ್ನು ಅವನತಿಗೆ ತಳ್ಳುವ ಹಾಗೂ ಅವಳ ಪ್ರತಿಷ್ಠೆಯನ್ನು ಮಣ್ಣುಗೂಡಿಸುವ ಹುನ್ನಾರವಲ್ಲದೆ ಇನ್ನೇನೂ ಅಲ್ಲ. ನಾವು ಸ್ತ್ರೀಯರನ್ನು ಉನ್ನತಗೊಳಿಸಿರುವೆವು ಎಂಬುದು ಪಾಶ್ಚಾತ್ಯರ ಬಡಾಯಿ. ವಾಸ್ತವದಲ್ಲಿ ಈ ಜನರು ತಮ್ಮ ‘ಧ್ಯೇಯ ವಾಕ್ಯ'ಗಳಿಗೆ ವಿರುದ್ಧವಾಗಿ ಸ್ತ್ರೀಯರನ್ನು ವಿವಾಹವಿಲ್ಲದ ಖಾಯಂ ಪ್ರಯತಮೆಯರ ಸ್ಥಾನಕ್ಕೂ, (concubines) ‘ಇಟ್ಟುಕೊಂಡವಳು'(ಸ್ಟೆಪಿನ್) ಎಂದು ಕರೆಯಲ್ಪಡುವ ಅಧಮಾವಸ್ಥೆಗೂ ತಳ್ಳುವವರಾಗಿರುವರು. ಸುಖಲೋಲುಪರೂ, ಬೆಲೆವೆಣ್ಣುಗಳ ದಲ್ಲಾಲಿಗಳೂ ಆಗಿರುವ ಈ ಜನರು ಸಮಾಜದ ಶೋಕಿಲಾಲರಾದ ವಿಟಪುರುಷರನ್ನು ತಮ್ಮ ಕೈಗೊಂಬೆಗಳನ್ನಾಗಿಸಿಕೊಂಡಿರುವರು. ‘ಕಲೆ -ಸಂಸ್ಕೃತಿ'ಗಳೆಂಬ ಬಣ್ಣದ ತೆರೆಯ ಮರೆಯಲ್ಲಿ ಅಡಗಿಕೊಂಡಿರುವ ಗಟ್ಟಿಕುಳಗಳು ಇವರೇ.
9. ಅತ್ಯಾಚಾರ ಪ್ರಕರಣ ದಾಖಲಾತಿಯಲ್ಲಿ ಅಮೆರಿಕಾಕ್ಕೆ ಮೊದಲ ಸ್ಥಾನ.
ಜಗತ್ತಿನಲ್ಲಿ ಅತ್ಯಂತ ಮುಂದುವರಿದ ದೇಶ ಎಂಬುದು ಅಮೆರಿಕಾದ ಹೆಗ್ಗಳಿಕೆ. ಅತ್ಯಾಚಾರ ಪ್ರಕರಣ ದಾಖಲಾತಿಯಲ್ಲೂ ಇದು ಇತರೆಲ್ಲಾ ರಾಷ್ಟ್ರಗಳಿಗಿಂತ ಮುಂದಿದೆ. ಎಫ್.ಬಿ.ಐ. (ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ಹೊರಗೆಡಹಿದ ಒಂದು ವರದಿಯಂತೆ 1990ರಲ್ಲಿ ದಿನಂಪ್ರತಿ ಅಮೆರಿಕದಲ್ಲಿ ನಡೆದ ಅತ್ಯಾಚಾರಗಳ ಸರಾಸರಿ ಸಂಖ್ಯೆ 1756.ಆ ಬಳಿಕಷ ನಿರ್ಧಿಷ್ಟ ಇಸವಿಯನ್ನು ನಮೂದಿಸದ ಇನ್ನೊಂದು ವರದಿಯು ಅಮೆರಿಕದಲ್ಲಿ ದಿನವೊಂದರಲ್ಲಿ 1900 ಅತ್ಯಾಚಾರಗಳು ನಡೆಯುತ್ತವೆ ಎಂದು ಸೂಚಿಸುತ್ತದೆ. ಅದು 1992 ಅಥವಾ 1993 ಆಗಿರಲೂ ಬಹುದು. ದಿನ ಕಳೆದಂತೆಲ್ಲಾ ಅಮೆರಿಕನ್ನರು ಈ ವಿಚಾರದಲಿ ಹೆಚ್ಚು ಹೆಚ್ಚು ಧೈರ್ಯಶಾಲಿಗಳಾಗುತ್ತಿದ್ದಾರೆ !!
ನಾವೀಗ ಅಮೆರಿಕವು ಇಸ್ಲಾಮೀ ಶರಿಯಃವನ್ನು (ಹಿಜಾಬ್) ಅಳವಡಿಸಿಕೊಂಡಿರುವ ದೃಶ್ಯವನ್ನು ಊಹಿಸಿಕೊಳ್ಳೋಣ.
ಪುರುಷನ ನೋಟ ಮಹಿಳೆಯತ್ತ ಸಾಗಿದಾಗ ಅವನು ತನ್ನ ಮನದಲ್ಲಿ ಕೆಟ್ಟ ಭಾವನೆಗಳು ಮೂಡದಂತೆ ದೃಷ್ಟಿಯನ್ನು ತಗ್ಗಿಸಿಕೊಳ್ಳುವನು. ಎಲ್ಲಾ ಮಹಿಳೆಯರಿಗೂ ಸಂಪೂರ್ಣ ಹಿಜಾಬ್. ಅರ್ಥಾತ್ ಮುಖ - ಮುಂಗೈಯನ್ನುಳಿದು ಶರೀರದ ಭಾಗಗಳೆಲ್ಲವೂ ಬಂದ್. ಇದರ ಬಳಿಕವೂ ಅಕಸ್ಮಾತ್ ಯಾರಾದರೂ ಅತ್ಯಾಚಾರವೆಸಗಿದಲ್ಲಿ ಮರಣದಂಡನೆ.
ಇಂತಹ ಸನ್ನಿವೇಶದಲ್ಲಿ ನಿಮ್ಮಲ್ಲಿ ನನ್ನದೊಂದು ಚಿಕ್ಕ ಪ್ರಶ್ನೆ !
ಅಮೆರಿಕಾದ ಅತ್ಯಾಚಾರ ಪ್ರಕರಣಗಳು ಇನ್ನಷ್ಟು ಹೆಚ್ಚಬಹುದೋ, ಯಥಾಸ್ಥಿತಿಯಲ್ಲಿರಬಹುದೋ ಅಥವಾ ಕಡಿಮೆಯಾಗಬಹುದೋ ?
10. ಇಸ್ಲಾಮೀ ಶರಿಯಃ (ಕಾನೂನು) ದಿಂದ ಸುಧಾರಣೆ.
ಇಸ್ಲಾಮಿಕ್ ಶರಿಯ:ವನ್ನು ಅಳವಡಿಸಿಕೊಂಡರೆ; ಅದು ಅಮೆರಿಕವಾಗಿರಲಿ ಅಥವಾ ಐರೋಪ್ಯ ರಾಷ್ಟ್ರಗಳೇ ಆಗಿರಲಿ ಪರಿಸ್ಥಿತಿ ಸುಧಾರಣೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆತಂಕಕಾರೀ ಸ್ಥಿತಿಯಿಂದ ಪಾರಾಗುವ ಅಮೆರಿಕ ಅಥವಾ ಐರೋಪ್ಯ ಸಮಾಜದ ಉಸಿರಾಟ ನಿರಾಳಗೊಳ್ಳುವುದು ಖಚಿತ.
ಆದುದರಿಂದ ಇಸ್ಲಾಮ್ ಅಥವಾ ಹಿಜಾಬ್ ಸ್ತ್ರೀಯರನ್ನು ಅವಮಾನಿಸಿಲ್ಲ. ಬದಲಾಗಿ ಅವರನ್ನು ಉನ್ನತಗೊಳಿಸುತ್ತದೆ ಮತ್ತು ಪೀಡನೆಗಳಿಂದ ಪಾರಾಗುವ ಒಂದು ಮಾರ್ಗವನ್ನು ತೋರಿಸಿಕೊಡುತ್ತದೆ. ಅವಳ ಮಾನವನ್ನು ರಕ್ಷಿಸುತ್ತದೆ.
ಉತ್ತರ: ‘ಇಸ್ಲಾಮ್ ಧರ್ಮ ಹಬ್ಬಿದ್ದೇ ಖಡ್ಗಬಲದಿಂದ ; ಖಡ್ಗವಿಲ್ಲದಿದ್ದಲ್ಲಿ ಇಸ್ಲಾಮಿಗೆ ಇಷ್ಟೊಂದು ಅನುಯಾಯಿಗಳು ದೊರಕುತ್ತಿರಲಿಲ್ಲ.' ಇದು ಅಮುಸ್ಲಿಮರಲ್ಲಿ ಕೆಲವರು ಇಸ್ಲಾಮಿನ ಮೇಲೆ ಹೊರಿಸುವ ಆರೋಪವಾಗಿದೆ. ವಾಸ್ತವದಲ್ಲಿ ಇಸ್ಲಾಮಿನ ಹರಡುವಿಕೆಯಲ್ಲಿ ಖಡ್ಗದ ಪಾತ್ರವೇನೂ ಇಲ್ಲ. ಯಾವುದೇ ಮಾನವನಿರ್ಮಿತ ಧರ್ಮಗಳ ಪೊಳ್ಳುತನಗಳನ್ನು ಬಯಲಿಗೆಳೆಯುವ ತನ್ನ ತಾರ್ಕಿಕತೆ ಮತ್ತು ಸತ್ಯಸಂಧತೆಗಳಿಂದಾಗಿಯೇ ಇಸ್ಲಾಮ್ ಜನಮನಗಳನ್ನು ಗೆದ್ದುಕೊಂಡಿದೆ. ಈ ಕೆಳಗಿನ ಅಂಶಗಳು ಇದನ್ನು ಸ್ಪಷ್ಟಪಡಿಸುತ್ತವೆ.
1. ಇಸ್ಲಾಮ್ ಎಂದರೆ ಶಾಂತಿ:
ಇಸ್ಲಾಮ್ ಎಂಬ ಪದದ ಮೂಲ ಧಾತು ‘ಸಲಾಮ್' ಅರ್ಥಾತ್ ಶಾಂತಿ. ಇದರ ಇನ್ನೊಂದು ಅರ್ಥ ‘ಸಮರ್ಪಣೆ'. ಅರ್ಥಾತ್ ಒಬ್ಬನು ತನ್ನ ಇಚ್ಛೆಯನ್ನು ಅಲ್ಲಾಹನಿಗೆ ಅಧಿನಗೊಳಿಸುವುದು ಎಂದಾಗಿದೆ. ಆದುದರಿಂದ ಇಸ್ಲಾಮ್ ಶಾಂತಿಯ ಧರ್ಮವಾಗಿದ್ದು, ಒಬ್ಬನು ತನ್ನ ಇಚ್ವೆಯನ್ನು ಪರಮೋಚ್ಛನೂ, ಸೃಷ್ಟಿಕರ್ತನೂ ಆದ ಅಲ್ಲಾಹನಿಗೆ ಅಧೀನಗೊಳಿಸುವ ಮೂಲಕ ಅದನ್ನು ತನ್ನದಾಗಿಕೊಳ್ಳಬಹುದು.
2. ಶಾಂತಿ ಸ್ಥಾಪನೆಗೆ ಕೆಲವೊಮ್ಮೆ ಬಲಪ್ರಯೋಗವೂ ಅನಿವಾರ್ಯ :
ಶಾಂತಿ - ಸೌಹಾರ್ದತೆಗಳು ಸ್ಥಾಪನೆಯಾಗಬೇಕು ಎಂಬ ಇಚ್ಛೆಯನ್ನೇ ಈ ಜಗತ್ತಿನಲ್ಲಿ ಎಲ್ಲಾ ಮನುಷ್ಯರೂ ಹೊಂದಿರುವರು ಎನ್ನಲು ಅಸಾಧ್ಯ. ಅಶಾಂತಿ - ದ್ವೇಷಗಳನ್ನು ಹರಡುಬಯಸುವ ಚಿಕ್ಕದೊಂದು ವರ್ಗವೂ ಇಲ್ಲಿದೆ. ಏಕೆಂದರೆ ಅದೇ ಅವರ ಬದುಕುವ ಮಾರ್ಗವಾಗಿದೆ. ಈ ಜನರಿಂದಾಗಿ ಕದಡಿ ಹೋದ ಶಾಂತಿಯ ಮರುಸ್ಥಾಪನೆಗೆ ಬಲಪ್ರಯೋಗ ಅನಿವಾರ್ಯ . ಇದಕ್ಕಾಗಿಯೇ ಪೊಲಿಸ್ ಎಂಬ ವ್ಯವಸ್ಥೆ ನಮ್ಮಲ್ಲಿದೆ. ಇವರ ಸಹಾಯದಿಂದ ಅಪರಾಧಿಗಳು ಹಾಗೂ ಸಮಾಜಘಾತುಕ ಶಕ್ತಿಗಳನ್ನು ಹತ್ತಿಕ್ಕಿ ದೇಶದಲ್ಲಿ ಶಾಂತಿಯನ್ನು ಸ್ಥಾಪಿಸಲಾಗುತ್ತದೆ. ಯಾವತ್ತೂ ಶಾಂತಿಯನ್ನೇ ಬಯಸುವ ಇಸ್ಲಾಮ್ ಅದರ ಸ್ಥಾಪನೆಗಾಗಿ ಅನ್ಯಾಯದ ವಿರುದ್ಧ ಹೋರಾಡಲೂ ಕರೆ ನೀಡುತ್ತದೆ. ಈ ಹೋರಾಟದಲ್ಲಿ ಕೆಲವೊಮ್ಮೆ ಬಲಪ್ರಯೋಗವೂ ಅನಿವಾರ್ಯಗಬಹುದು. ಅವರ
3. ಖಡ್ಗ ಹಾಗೂ ಇಸ್ಲಾಮಿನ ಹರಡುವಿಕೆ ಕುರಿತು ಖ್ಯಾತ ಇತಿಹಾಸ ತಜ್ಞ ಡಿಲೇಸಿ ಒಲೇರಿ (de lacy o' leary) ಯವರ ಅಭಿಪ್ರಾಯ :
ಇಸ್ಲಾಮ್ ಖಡ್ಗದಿಂದ ಹರಡಿದೆ ಎಂಬ ಆರೋಪಕ್ಕೆ ಖ್ಯಾತ ಇತಿಹಾಸ ತಜ್ಞ ಡಿಲೇಸಿ ಒಲ್ಯಾರಿಯವರು ತಮ್ಮ ‘ಇಸ್ಲಾಮ್ ಎಟ್ ದಿ ಕ್ರಾಸ್ ರೋಡ್ಸ್' ಎಂಬ ಪುಸ್ತಕದ 8ನೆ ಪುಟದಲ್ಲಿ ಬರೆದಿರುವ ಒಂದೆರಡು ಸಾಲುಗಳೇ ಅತ್ಯುತ್ತಮ ಉತ್ತರವಾಗಬಲ್ಲದು.
‘History makes it clear, however, that the legend of fanatical Muslims sweeping through the world and forcing Islam at the point of the sword upon conquered races is one of the most fantastically absurd myths that historians have ever repeated.'
‘ ಮತಾಂಧ ಮುಸ್ಲಿಮರು ಜಗತ್ತಿನಾದ್ಯಂತ ದಂಡಯಾತ್ರೆ ಮಾಡಿ ಖಡ್ಗದ ತುದಿಯಿಂದ ತಾವು ಜಯಿಸಿದ ಜನಾಂಗಗಳ ಮೇಲೆ ಇಸ್ಲಾಮ್ ಧರ್ಮವನ್ನು ಬಲವಂತವಾಗಿ ಹೇರಿದರು ಎಂಬುದು ಚರಿತ್ರೆಕಾರರು ಆಗಾಗ್ಗೆ ಪುನರಾವರ್ತಿಸುತ್ತಿದ್ದ ಅಸಂಬದ್ಧ ಕಟ್ಡುಕತೆಗಳು ಎಂದು ಇತಿಹಾಸವೇ ಸಾಕ್ಷ್ಯ ನುಡಿಯುತ್ತದೆ.'
4. ಸ್ಪೈನ್ ದೇಶದಲ್ಲಿ 800 ವರ್ಷಗಳ ಕಾಲ ಮುಸ್ಲಿಮರ ಆಡಳಿತ :
ಸುಮಾರು 800 ವರ್ಷಗಳಷ್ಟು ದೀರ್ಘಕಾಲ ಮುಸ್ಲಿಮರು ಸ್ಪೈನ್ ದೇಶವನ್ನು ಆಳಿದ್ದರು. ಆದರೆ ಅವರೆಂದೂ ಖಡ್ಗವನ್ನು ಮತಾಂತರಕ್ಕಾಗಿ ಬಳಸಿರಲಿಲ್ಲ. ಹಾಗೆ ಯಾರಾದರೂ ಖಡ್ಗವನ್ನು ಮತಾಂತರಕ್ಕಾಗಿ ಬಳಸಿದ್ದರೆ ಅದು ಕ್ರೈಸ್ತ ಕ್ರುಸೇಡರ್ (ಕ್ರೈಸ್ತ ಧರ್ಮಯುದ್ಧ ಯೋಧರು) ಗಳಾಗಿರುವರು. ಮುಸ್ಲಿಮರನ್ನು ಹೊಡೆದೋಡಿಸಿದ ಬಳಿಕ ಇವರ ಆಡಳಿತ ಕಾಲದಲ್ಲಿ ಸಾರ್ವಜನಿಕವಾಗಿ ಆಝಾನ್ (ನಮಾಜಿಗಾಗಿ ನೀಡುವ ಕರೆ) ನೀಡುವ ಒಬ್ಬ ಮುಸ್ಲಿಮನೂ ಅಲ್ಲಿರುವಂತಿರಲಿಲ್ಲ.
5. ಅರೇಬಿಯಾದಲ್ಲಿರುವ ಕ್ರೈಸ್ತ ಸಂಜಾತರ ಸಂಖ್ಯೆ ಹದಿನಾಲ್ಕು ಮಿಲಿಯ :
ಅಲ್ಪ ಕಾಲದ ಬ್ರಿಟಿಷರ ಮತ್ತು ಫ್ರೆಂಚರ ಆಡಳಿತವನ್ನು ಹೊರಪಡಿಸಿದರೆ ಮುಸ್ಲಿಮರು ಸುಮಾರು 1400 ವರ್ಷಗಳಷ್ಟು ದೀರ್ಘಕಾಲ ಅರೇಬಿಯಾ ದೇಶವನ್ನು ಆಳಿದವರು. ಇಂದು ಅರೇಬಿಯಾ ದೇಶದಲ್ಲಿ ವಾಸಿಸುತ್ತಿರುವ ಕ್ರೈಸ್ತ ಸಂಜಾತರ ಸಂಖ್ಯೆ 14 ಮಿಲಿಯ. ಇಸ್ಲಾಮ್ ಖಡ್ಗದಿಂದ ವ್ಯಾಪಿಸಿದ್ದಿದ್ದರೆ ಒಬ್ಬನೇ ಒಬ್ಬ ಕ್ರೈಸ್ತನು ಇಂದು ಅರೇಬಿಯಾದಲ್ಲಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ.
6. ಭಾರತದಲ್ಲಿ 80 ಶೇಕಡಾಕ್ಕಿಂತಲೂ ಅಧಿಕ ಅಮುಸ್ಲಿಮರು :
ಭಾರತದಲ್ಲಿ ಸುಮಾರು 1000 ವರ್ಷಗಳಷ್ಟು ಕಾಲ ಮುಸ್ಲಿಮರ ಆಡಳಿತವಿತ್ತು. ಅವರಿಚ್ಛಿಸಿದ್ದಲ್ಲಿ ಪ್ರತೀಯೊಬ್ಬನನ್ನೂ ಖಡ್ಗ ಬಲದಿಂದ ಮತಾಂತರಗೊಳಿಸಬಹುದಿತ್ತು. ಇಂದು ಭಾರತದಾದ್ಯಂತ ಶೇಕಡಾ 80ರಷ್ಟಿರುವ ವಿವಿಧ ಧರ್ಮೀಯರೇ ಇಸ್ಲಾಮ್ ವ್ಯಾಪಿಸಿದ್ದು ಖಡ್ಗದಿಂದಲ್ಲ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಗಳು.
7. ಇಂಡೋನೇಶಿಯ ಮತ್ತು ಮಲೇಶಿಯ :
ಜಗತ್ತಿನ ರಾಷ್ಟ್ರಗಳ ಪೈಕಿ ಅತ್ಯಂತ ಹೆಚ್ಚು ಸಂಖ್ಯೆಯ ಮುಸ್ಲಿಮರನ್ನು ಹೊಂದಿದ ರಾಷ್ಟ್ರ ಇಂಡೋನೇಶಿಯ.ಮಾತ್ರವಲ್ಲದೆ ಮಲೇಶಿಯಾದ ಬಹುಸಂಖ್ಯಾತರು ಮುಸ್ಲಿಮರು. ಇಸ್ಲಾಮಿನ ಕಿರೀಟಕ್ಕೆ ಖಡ್ಗವನ್ನು ಸಿಕ್ಕಿಸುವವರೊಂದಿಗೆ ಪ್ರಶ್ನಿಸಬೇಕಾಗಿದೆ -‘ಈ ದೇಶಗಳ ಮೇಲೆ ದಂಡೆತ್ತಿಹೋದ ಮುಸ್ಲಿಮ್ ಸೈನ್ಯ ಯಾವುದು' ?
8. ಆಫ್ರಿಕಾದ ಪೂರ್ವ ಕರಾವಳಿ :
ಇಸ್ಲಾಮ್ ಕ್ಷಿಪ್ರವಾಗಿ ವ್ಯಾಪಿಸಿದ ಇನ್ನೊಂದು ಪ್ರದೇಶ ಆಫ್ರಿಕಾದ ಪೂರ್ವ ಕರಾವಳಿಯಾಗಿದೆ. ಈ ಪ್ರದೇಶಗಳ ಮೇಲೆ ದಂಡೆತ್ತಿ ಹೋದ ಮುಸ್ಲಿಮ್ ಸೇನಾ ದಂಡನಾಯಕನಾರು ?
9. ಥಾಮಸ್ ಕಾರ್ಲೈಲ್ (Thomas carlyle).
ಪ್ರಖ್ಯಾತ ಚರಿತ್ರೆಕಾರ ಥಾಮಸ್ ಕಾರ್ಲೈಲ್ ತಮ್ಮ ‘ ಹೀರೋಸ್ ಆಂಡ್ ಹೀರೋ ವರ್ಷಿಪ್' ಎಂಬ ಪುಸ್ತಕದಲ್ಲಿ ಇಸ್ಲಾಮ್ ಧರ್ಮವು ವ್ಯಾಪಿಸಿದ್ದು ಖಡ್ಗದಿಂದ ಎಂಬ ತಪ್ಪು ಗ್ರಹಿಕೆಯನ್ನು ನಿವಾರಿಸುತ್ತಾರೆ:
‘The sword indeed, but where will you get your sword? Every new opinion at it's starting is precisely in a minority of one . in one man's head alone. There it dwells as yet. Man alone of the whole world believes it, there is one man against all men. That he takes a sword and try to propagate with that, will do little for him. You must get your sword ! On the whole, a thing will propagate itself as it can.'
“ಖಡ್ಗ ಅಂತಲೇ ಭಾವಿಸೋಣ, ಆದರೆ ನೀವು ನಿಮ್ಮ ಖಡ್ಗವನ್ನು ಎಲ್ಲಿಂದ ಪಡೆಯುತ್ತೀರಿ? ಪ್ರತಿಯೊಂದು ಹೊಸ ಅಭಿಪ್ರಾಯವು ಆರಂಭದಲ್ಲಿ ಒಬ್ಬ ಏಕಾಂಗಿ ವ್ಯಕ್ತಿಯ ತಲೆಯಲ್ಲಿ ಮಾತ್ರ ಇರುತ್ತದೆ. ಅದು ಅಲ್ಲಿಯೇ ನೆಲೆಸಿರುತ್ತದೆ. ಇಡೀ ಜಗತ್ತಿನಲ್ಲಿ ಒಬ್ಬ ಮಾತ್ರ ಅದರಲ್ಲಿ ನಂಬಿಕೆ ಇಟ್ಟಿರುತ್ತಾನೆ. ಎಲ್ಲ ಮನುಷ್ಯರ ವಿರುದ್ಧ ಆತ ಏಕಾಂಗಿಯಾಗಿರುತ್ತಾನೆ. ಆಗ ಆತ ಒಂದು ಖಡ್ಗವನ್ನೆತ್ತಿಕೊಂಡು ಅದರ ಮೂಲಕ ಪ್ರಚಾರಕ್ಕೆ ಪ್ರಯತ್ನಿಸುತ್ತಾನೆಂಬುದು ಆತನಿಗೆ ಯಾವುದೇ ಫಲವನ್ನು ನೀಡಲಾರದು. ಒಟ್ಟಿನಲ್ಲಿ ಹೇಳುವುದಾದರೆ ಸ್ವಂತಿಕೆಯಿರುವ, ಪ್ರಚಾರಗೊಳ್ಳಲು ಸಾಮರ್ಥ್ಯವಿರುವ ಸಿದ್ಧಾಂತವೇ ನಿಮ್ಮ ಖಡ್ಗವಾಗಿರುತ್ತದೆ."
10. ಧರ್ಮದಲ್ಲಿ ಯಾವುದೇ ಬಲತ್ಕಾರವಿಲ್ಲ :
ಇಸ್ಲಾಮ್ ಧರ್ಮವನ್ನು ವ್ಯಾಪಿಸುವಂತೆ ಮಾಡಿದ ಖಡ್ಗ ಯಾವುದು ? ಕೆಲವರು ಆರೋಪಿಸಿದಂಥ ಖಡ್ಗವು ಮುಸ್ಲಿಮರ ಬಳಿಯಿದ್ದರೂ ಅವರು ಅದನ್ನು ಪ್ರಯೋಗಿಸುವಂತಿಲ್ಲ. ಏಕೆಂದರೆ ಕುರ್ಆನ್ ಹೇಳುತ್ತದೆ:
“ ಧರ್ಮದಲ್ಲಿ ಯಾವುದೇ ಬಲಾತ್ಕಾರವಿಲ್ಲ. ಸನ್ಮಾರ್ಗವು ದುರ್ಮಾರ್ಗದಿಂದ ಬೇರ್ಪಟ್ಟು ಸ್ಪಷ್ಟವಾಗಿದೆ." (ಕುರ್ಆನ್ 2: 256)
11. ಸುಜ್ಞಾನ ಹಾಗೂ ಸದುಪದೇಶವೆಂಬ ಖಡ್ಗ :
ಹೌದು. ಅದು ಜ್ಞಾನ ಮತ್ತು ಸದುಪದೇಶವೆಂಬ ಖಡ್ಗವಾಗಿದ್ದು ಇದರ ಮೂಲಕವೇ ಇಸ್ಲಾಮ್ ಜನಮನಗಳನ್ನು ಜಯಿಸಿದೆ.
“ ಹಿಕ್ಮಃ (ಸುಜ್ಞಾನ) ಹಾಗೂ ಸದುಪದೇಶದ ಮೂಲಕ ಜನರನ್ನು ನಿಮ್ಮ ಪ್ರಭುವಿನ ಮಾರ್ಗಕ್ಕೆ ಆಹ್ವಾನಿಸಿರಿ. ಅವರೊಂದಿಗೆ ಅತ್ಯುತ್ತಮ ರೀತಿಯಲ್ಲಿ ಸಂವಾದಿಸಿರಿ.'
(ಕುರ್ಆನ್ 16: 125)
12. ಜಗತ್ತಿನ ಪ್ರಮುಖ ಧರ್ಮಗಳ ಬೆಳವಣಿಗೆಗಳು (1934 ರಿಂದ 1984).
1986ರಲ್ಲಿ ರೀಡರ್ಸ್ ಡೈಜಸ್ಟ್ (Reader's Digest) ನಲ್ಲಿ ಪ್ರಕಟಗೊಂಡ ‘ಅಲ್ ಮನಾಕ್(almanac)' ಎಂಬ ಲೇಖನದಲ್ಲಿ 1934 ರಿಂದ 1984ರವರೆಗಿನ 50ವರ್ಷಗಳ ಅವಧಿಯಲ್ಲಿ ಅಧಿಕ ಬೆಳವಣಿಗೆ ಸಾಧಿಸಿದ ಜಗತ್ತಿನ ಪ್ರಮುಖ ಧರ್ಮಗಳ ಅಂಕಿ ಅಂಶಗಳನ್ನು ವರದಿ ಮಾಡಲಾಗಿತ್ತು. ‘ದಿ ಪ್ಲೈನ್ ಟ್ರುಥ್ (the plain truth)' ಮ್ಯಾಗಸಿನ್ನಲ್ಲೂ ಪ್ರಕಟಗೊಂಡ ಈ ಲೇಖನದಲ್ಲಿ ವಿವಿಧ ಧರ್ಮಗಳ ಶೇಕಡಾವಾರು ಪಟ್ಟಿಯಲ್ಲಿ 235% ದೊಂದಿಗೆ ಇಸ್ಲಾಮ್ ಧರ್ಮವು ಮೊತ್ತ ಮೊದಲ ಸ್ಥಾನದಲ್ಲಿದ್ದರೆ, ಕ್ರೈಸ್ತ ಧರ್ಮವು 47%ದೊಂದಿಗೆ ಎರಡನೇ ಸ್ಥಾನದಲ್ಲಿತ್ತು.
ಈ 50 ವರ್ಷಗಳ ಅವಧಿಯಲ್ಲಿ ಲಕ್ಷಾಂತರ ಜನರನ್ನು ಇಸ್ಲಾಮಿಗೆ ಮತಾಂತರಿಸಲು ನಡೆದ ಖಡ್ಗಕಾಳಗ ಯಾವುದು ಎಂಬುದನ್ನು ಆಕ್ಷೇಪಕರು ಸ್ಪಷ್ಟಪಡಿಸಿ ಕೊಡಬೇಕಾಗಿದೆ.
13. ಅಮೆರಿಕ ಮತ್ತು ಯುರೋಪ್ಗಳಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಧರ್ಮ ಇಸ್ಲಾಮ್.
ಇಂದು ಅಮೆರಿಕ ಮತ್ತು ಯುರೋಪ್ಗಳಲ್ಲಿ ಅತ್ಯಂತ ವೇಗವಾಗಿ ವೃದ್ಧಿಸುತ್ತಿರುವ ಧರ್ಮ ಇಸ್ಲಾಮ್. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪಾಶ್ಚಾತ್ಯರನ್ನು ಇಸ್ಲಾಮ್ ಸ್ವೀಕರಿಸುವಂತೆ ಬಲವಂತ ಮಾಡುತ್ತಿರುವ ಖಡ್ಗ ಯಾವುದು ?
14. ಡಾ | ಜೋಸೆಫ್ ಆದಮ್ ಪಿಯರ್ಸನ್ (Dr. Joseph Adam Pearson )
ಈ ಬಗ್ಗೆ ಡಾ | ಜೊಸೆಫ್ ಆದಮ್ ಪಿಯರ್ಸನ್ರವರ ಮಾತು ಅರ್ಥಪೂರ್ಣವಾಗಿದೆ : “ನ್ಯೂಕ್ಲಿಯರ್ ಅಸ್ತ್ರವು ಎಂದಾದರೂ ಒಂದು ದಿನ ಅರಬರ ಕೈವಶವಾಗುವುದಂತೂ ಖಂಡಿತ ಎಂದು ಜನರು ಭಯಭೀತರಾಗಿದ್ದಾರೆ. ಆದರೆ ಪಾಪ ; ಇಸ್ಲಾಮ್ ಎಂಬ ಹೆಸರಿನ ಬಾಂಬೊಂದು ‘ಮುಹಮ್ಮದ್' ಎಂಬ ವ್ಯಕ್ತಿಯು ಜನಿಸಿದಂದೇ ಬಿದ್ದಾಗಿದೆ ಎಂಬ ವಾಸ್ತವಿಕತೆಯನ್ನು ಅರಿಯುವಲ್ಲಿ ಈ ಜನರು ವಿಫಲರಾಗಿರುವರು"
ಉತ್ತರ: ಇದು ಯಾವುದೇ ಧಾರ್ಮಿಕ ಅಥವಾ ಜಾಗತಿಕ ಮಟ್ಟದ ಇನ್ನಾವುದೇ ಚರ್ಚೆಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಮುಸ್ಲಿಮರತ್ತ ಎಸೆಯಲ್ಪಡುತ್ತಿರುವ ಒಂದು ಸಾಮಾನ್ಯ ಪ್ರಶ್ನೆಯಾಗಿದೆ. ಇದೇ ಪ್ರಶ್ನೆಯು ಇತ್ತಿಚೆಗೆ ‘ ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ ಆದರೆ ಭಯೋತ್ಪಾದಕರೆಲ್ಲರೂ ಮುಸ್ಲಿಮರು' ಎಂಬ ನವೀನ ರೂಪದಲ್ಲಿ ಹೊರಬಂದಿದೆ. ವಾಸ್ತವದಲ್ಲಿ ಇಸ್ಲಾಮಿನ ಹಾಗೂ ಮುಸ್ಲಿಮರ ಮೇಲೆ ಕೆಟ್ಟ ಅಭಿಪ್ರಾಯಗಳನ್ನುಂಟು ಮಾಡುವ ಸುಳ್ಳುಗಳನ್ನು ಸ್ಥಾಪಿತ ಹಿತಾಸಕ್ತಿಯ ಕೆಲವು ಮಾಧ್ಯಮಗಳು ಪ್ರಸಾರ ಮಾಡುತ್ತಿರುತ್ತವೆ. ಇಂತಹ ಪೂರ್ವಾಗ್ರಹಪೀಡಿತ ವರದಿಗಳೇ ಮುಸ್ಲಿಮರ ವಿರುದ್ಧ ಕೋಮು ಭಾವನೆಗಳನ್ನು ಕೆರಳಿಸಿ ಅವರನ್ನು ದೌರ್ಜನ್ಯಕ್ಕೀಡು ಮಾಡುವ ಸ್ಥಿತಿಯನ್ನುಂಟು ಮಾಡುತ್ತವೆ. ಅಮೆರಿಕಾದ ಕೆಲವು ಮಾಧ್ಯಮಗಳು ತಮ್ಮನ್ನು ಇಸ್ಲಾಮ್ ವಿರೋಧೀ ಅಭಿಯಾನದಲ್ಲಿ ಹೇಗೆ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಎಂಬುದಕ್ಕೆ ಒಕ್ಲಹೋಮ (oklahoma) ಸ್ಪೋಟ ಪ್ರಕರಣವು ಚಿಕ್ಕದೊಂದು ಉದಾಹರಣೆ. ಸ್ಪೋಟ ನಡೆದ ಕೂಡಲೇ ಅದನ್ನೊಂದು ಮಧ್ಯ ಪೌರಾತ್ಯ ದೇಶಗಳ ಸಂಚು ಎಂದು ತೀರ್ಪು ನೀಡಲು ಅಮೆರಿಕದ ಮಾಧ್ಯಮಗಳು ಕಿಂಚಿತ್ತೂ ತಡ ಮಾಡಲಿಲ್ಲ. ಆ ಬಳಿಕ ಆ ಸ್ಪೋಟದ ಹಿಂದಿದ್ದ ವ್ಯಕ್ತಿಗಳು ಅಮೆರಿಕನ್ ಸೇನಾದಳದ ಸೈನಿಕರಾಗಿದ್ದರು ಎಂಬುದನ್ನು ಪತ್ತೆ ಹಚ್ಚಲಾಯಿತು.
ನಾವೀಗ ಮೂಲಭೂತವಾದಿ ಹಾಗೂ ಉಗ್ರವಾದಿಗಳ ನಿಜಸ್ಥಿತಿಯನ್ನು ಪರಿಶೋಧಿಸೋಣ.
1. ‘ ಮೂಲಭೂತವಾದಿ' ಪದದ ವ್ಯಾಖ್ಯಾನ.
ತಾನು ಅನುಸರಿಸುವ ಸಿದ್ಧಾಂತಕ್ಕೆ ಬಲವಾಗಿ ಅಂಟಿಕೊಂಡು ಆ ಸಿದ್ಧಾಂತದ ಮೂಲಭೂತ ತತ್ವಗಳಿಗೆ ನಿಷ್ಠಾವಂತನಾಗಿರುವ ವ್ಯಕ್ತಿಯನ್ನು ಮೂಲಭೂತವಾದಿ ಎಂದು ಕರೆಯುವರು. ಒಬ್ಬ ವ್ಯಕ್ತಿಯು ಉತ್ತಮ ವೈದ್ಯನೆಂದು ಪರಿಗಣಿಸಲ್ಪಡಬೇಕಾದಲ್ಲಿ ಆ ವ್ಯಕ್ತಿಯು ವೈದ್ಯಶಾಸ್ತ್ರದ ಮೂಲತತ್ಬ ಹಾಗೂ ಶಿಕ್ಷಣಗಳನ್ನು ಕಲಿತವನಾಗಿರಬೇಕು ಮಾತ್ರವಲ್ಲದೆ ಅವನು ಕಡ್ಡಾಯವಾಗಿ ಅನುಸರಿಸುವವನ್ನೂ ಆಗಿರಬೇಕು. ಒಬ್ಬ ವ್ಯಕ್ತಿಯು ಶ್ರೇಷ್ಠ ವಿಜ್ಞಾನಿಯಾಗಬೇಕಾದಲ್ಲಿ ಅವನು ವಿಜ್ಞಾನದ ಮೂಲ ಶಿಕ್ಷಣ ಹಾಗೂ ತತ್ವಗಳನ್ನು ಕಲಿತಿರುವುದರ ಜೊತೆಗೇ ಆ ತತ್ವಗಳನ್ನು ಅನುಸರಿಸುವವನೂ ಆಗಿರಬೇಕು. ಹಾಗಿದ್ದಲ್ಲಿ ಅವನು ವೈಜ್ಞಾನಿಕ ಕ್ಷೇತ್ರದ ಒಬ್ಬ ಮೂಲಭೂತವಾದಿ (fundamentalist) ಎಂದು ಪರಿಗಣಿಸಲ್ಪಡುವನು.
2. ಎಲ್ಲಾ ಮೂಲಭೂತವಾದಿಗಳು ಸಮಾನರಲ್ಲ.
ಎಲ್ಲಾ ಮೂಲಭೂತವಾದಿಗಳನ್ನು ಒಳ್ಳೆಯವರು ಎನ್ನಲು ಹೇಗೆ ಅಸಾಧ್ಯವೋ ಅದೇ ರೀತಿ ಎಲ್ಲಾ ಮೂಲಭೂತವಾದಿಗಳೂ ಕೆಟ್ಟವರು ಎನ್ನುವ ಹಾಗಿಲ್ಲ. ಒಳ್ಳೆಯ ಮತ್ತು ಕೆಟ್ಟ ಮೂಲಭೂತವಾದಿಗಳು ಎಂಬ ತೀರ್ಮಾನವು ಅವರು ಕಾರ್ಯವೆಸಗುವ ಆಯಾ ಕ್ಷೇತ್ರವನ್ನು ಅವಲಂಬಿಸಿಕೊಂಡಿದೆ. ಒಬ್ಬ ಮೂಲಭೂತವಾದೀ ಕಳ್ಳ ಅಥವಾ ದರೋಡೆಕೋರನು ಕೆಟ್ಟ ಮೂಲಭೂತವಾದಿಯಾಗಿರುವನು. ಏಕೆಂದರೆ ಅವನಿಂದ ಸಮಾಜದ ಸ್ವಾಸ್ಥ್ಯವು ಕೆಡುವುದು. ಒಬ್ಬ ಮೂಲಭೂತವಾದೀ ವೈದ್ಯ ಅಥವಾ ವಿಜ್ಞಾನಿಯು ಸಮಾಜಕ್ಕೆ ಪ್ರಯೋಜನಕಾರಿ. ಆದುದರಿಂದ ಅವನನ್ನು ಉತ್ತಮ ಮೂಲಭೂತವಾದಿಯೆಂದು ಕರೆಯಬಹುದು.
3. ನಾನೊಬ್ಬ ಮುಸ್ಲಿಮ್ ಮೂಲಭೂತವಾದಿಯೆಂದು ಕರೆಸಿಕೊಳ್ಳಲು ಹೆಮ್ಮೆ ಪಡುತ್ತೇನೆ.
ನಾನೊಬ್ಬ ಮುಸ್ಲಿಮ್ ಮೂಲಭೂತವಾದಿಯಾಗಲು ಇಷ್ಟಪಡುತ್ತೇನೆ. ಅಲ್ಲಾಹನ ಕೃಪೆಯಿಂದ ನಾನು ಇಸ್ಲಾಮ್ ಧರ್ಮದ ಮೂಲತತ್ವಗಳನ್ನು ಅರಿತವನಾಗಿದ್ದು, ಅದನ್ನು ಸಾಧ್ಯವಾದಷ್ಟು ಮಟ್ಟಿಗೆ ಅನುಸರಿಸಲು ಶ್ರಮಿಸುವವನಾಗಿದ್ದೇನೆ. ಒಬ್ಬ ನೈಜ ಮುಸ್ಲಿಮನು ತನ್ನನ್ನು ತಾನೇ ಮುಸ್ಲಿಮ್ ಮೂಲಭೂತವಾದಿಯೆಂದು ಪರಿಚಯಿಸಿಕೊಳ್ಳಲು ಸಂಕೋಚ ಪಡಲಾರನು. ಏಕೆಂದರೆ ಇಸ್ಮಾಮಿನ ತತ್ವಗಳು ಮಾನವೀಯತೆಗೆ ಮತ್ತು ಇಡೀ ಜಗತ್ತಿಗೆ ಹಿಯಕಾರಿಯೆಂದು ಅವನು ಸ್ಪಷ್ಟವಾಗಿ ಅರಿತಿರುವನು. ಮಾನವೀಯತೆಗೆ ಮಾರಕವಾದ ಒಂದೇ ಒಂದು ತತ್ವವೂ ಇಸ್ಲಾಮಿನಲ್ಲಿಲ್ಲ ಎಂಬುದನ್ನೂ ಅವನು ಅರಿತಿರುವನು. ಕೆಲವರು ಇಸ್ಲಾಮಿನ ಕೆಲವು ತತ್ವಗಳು ಸರಿಯಿಲ್ಲವೆಂದು ಆಕ್ಷೇಪಿಸಲು ಕಾರಣ ಅವರಿಗೆ ಅದರ ಕುರಿತಾದ ಜ್ಞಾನವು ಅಪೂರ್ಣವಾಗಿರುವುದಾಗಿದೆ. ಇಸ್ಲಾಮಿನ ಕುರಿತಾಗಿ ಅವರಿಗೆ ಲಭಿಸಿದ ಮಾಹಿತಿಗಳು ಕೆಲವು ವೇಳೆ ತಪ್ಪಾಗಿರುತ್ತವೆ. ಒಬ್ಬನು ತೆರೆದ ಮನಸ್ಸಿನಿಂದ ಇಸ್ಲಾಮಿನ ಶಿಕ್ಷಣಗಳನ್ನು ಅಧ್ಯಯನ ನಡೆಸಿದಲ್ಲಿ ಇಸ್ಲಾಮಿನ ಎಲ್ಲಾ ತತ್ವಗಳು ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಲಾಭಕರವೂ , ಪ್ರಾಯೋಗಿಕವೂ ಆಗಿದೆ ಎಂಬ ಸತ್ಯದಿಂದ ವಿಮುಖನಾಗಲು ಅಸಾಧ್ಯ..
4. ಅರ್ಥಕೋಶಗಳಲ್ಲಿ ‘ಮೂಲಭೂತವಾದಿ'.
ವೆಬ್ಸ್ಟರ್ ಅರ್ಥಕೋಶದಲ್ಲಿ ‘ ಮೂಲಭೂತವಾದ' (Fudamentalism) ದ ವ್ಯಾಖ್ಯಾನವು ಹೀಗಿದೆ :‘20ನೆ ಶತಮಾನದ ಆದಿಯಲ್ಲಿ ಅಮೆರಿಕನ್ ಪ್ರೊಟೆಸ್ಟಾನಿಸಮ್ನಲ್ಲಿ ಹುಟ್ಟಿಕೊಂಡ ಆಧುನೀಕರಣದ ವಿರುದ್ಧದ ಒಂದು ಚಳವಳಿ '. ಬೈಬಲ್ ಒಂದು ಸಂಪೂರ್ಣ ಚಾರಿತ್ರಿಕ ದಾಖಲೆ ; ಇದು ಪ್ರತಿಪಾದಿಸುವ ನೈತಿಕತೆ - ನಂಬಿಕೆಗಳು ದೋಷರಹಿತ; ಮಾತ್ರವಲ್ಲದೆ ಅಕ್ಷರಶ: ಇದೊಂದು ದೈವವಾಣಿ ಎಂದು ಒತ್ತಾಯಿಸುವುದೇ ಆ ಚಳವಳಿಯ ಧ್ಯೇಯವಾಗಿತ್ತು. ಆದುದರಿಂದ ‘ಮೂಲಭೂತವಾದ' ಎಂಬ ಪದವು ಮೊತ್ತಮೊದಲಾಗಿ ಬಳಕೆಯಾದದ್ದು ಬೈಬಲ್ ದೋಷರಹಿತ ದೈವಿಕ ಗ್ರಂಥ ಎಂದು ನಂಬಿದ್ದ ಕ್ರೈಸ್ತರ ನಿರ್ಧಿಷ್ಟ ಸಮೂಹವನ್ನು ಸೂಚಿಸುವ ಸಲುವಾಗಿ.
ಆಕ್ಸ್ಫರ್ಡ್ ನಿಘಂಟಿನ ಪ್ರಕಾರ ಮೂಲಭೂತವಾದವೆಂದರೆ ಯಾವುದೇ ಧರ್ಮದ ಮೂಲತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು; ವಿಶೇಷತ: ಇಸ್ಲಾಮ್ . ‘ವಿಶೇಷತಃ ಇಸ್ಲಾಮ್' ಎಂಬುದನ್ನು ಇತ್ತೀಚೆಗಷ್ಟೇ ಸೇರ್ಪಡೆಗೊಳಿಸಲಾಗಿದ್ದು ಇಂದು ಮೂಲಭೂತವಾದಿ ಎಂದ ಕೂಡಲೇ ಗಡ್ಡ ಬಿಟ್ಟ ಮುಸ್ಲಿಮ್ ಭೀತಿವಾದಿಯ ಚಿತ್ರ ಜನಮನದಲ್ಲಿ ಮೂಡುವಂತಹ ಪರಿಸ್ಥಿತಿಯನ್ನು ಉಂಟು ಮಾಡಲಾಗಿದೆ.
5. ಪ್ರತಿಯೊಬ್ಬ ಮುಸ್ಲಿಮನೂ ಮೂಲಭೂತವಾದಿ ಹಾಗೂ ಭಯೋತ್ಪಾದಕನಾಗಿರಬೇಕು !!
ಭಯವನ್ನುಂಟು ಮಾಡುವ ವ್ಯಕ್ತಿಯೇ ಭಯೋತ್ಪಾದಕ. ಒಬ್ಬ ಕಳ್ಳನು ಜನಮನದಲ್ಲಿ ಭಯವನ್ನು ಬಿತ್ತುವ ಭಯೋತ್ಪಾದಮನಾದರೆ, ಒಬ್ಬ ಪೊಲಿಸ್ ಸಿಪಾಯಿಯು ಕಳ್ಳಕಾಕರಿಗೆ ಭಯೋತ್ಪಾದಕನು. ದಕ್ಷ ಪೊಲೀಸ್ ಅಧಿಕಾರಿಯೊಬ್ಬನು ಕಳ್ಳರಿಗೆ, ದರೋಡೆಕೋರರಿಗೆ ಹೇಗೆ ಭಯೋತ್ಪಾದಕನೋ ಅದೇ ರೀತಿ ಒಬ್ಬ ಮುಸ್ಲಿಮ್ ವ್ಯಕ್ತಿಯು ಸಮಾಜಘಾತುಕ ಶಕ್ತಿಗಳಿಗೆ ಭಯೋತ್ಪಾದಕನಾಗಿರಬೇಕು.
ಭಯೋತ್ಪಾದಕ ಎಂಬ ಪದವು ಸಾಮಾನ್ಯವಾಗಿ ಜನಸಾಮಾನ್ಯರಲ್ಲಿ ಭಯವನ್ನುಂಟು ಮಾಡುವ ವ್ಯಕ್ತಿಗೇ ಬಳಸಲ್ಪಡುವುದಾದರೂ ಒಬ್ಬ ಮುಸ್ಲಿಮನು ಭಯೋತ್ಪಾದಕನಾಗಿರಬೇಕಾದ್ದು ಒಂದು ಆಯ್ದ ಸಮಾಜವಿರೋಧೀ ಗುಂಪಿಗೆ ಮಾತ್ರ. ಮುಗ್ದ ಜನಸಾಮಾನ್ಯರ ಪಾಲಿಗೆ ಅವನೊಬ್ಬ ಶಾಂತಿಯ ವಕ್ತಾರನಾಗಿರಬೇಕು.
6. ಕಾರ್ಯ ಒಂದೇ - ಬಿರುದುಗಳು ಎರಡು.
ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ತೀವ್ರಗಾಮಿಗಳಾಗಿದ್ದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರು ಭಯೋತ್ಪಾದಕರೆಂದು ಕರೆದರು. ಆದರೆ ಭಾರತೀಯರಾದ ನಾವು ಅವರನ್ನು ದೇಶಪ್ರೇಮಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರೆಂಬ ಬಿರುದಿನಿಂದ ಗೌರವಿಸುತ್ತೇವೆ. ಅಂದರೆ ನಿರ್ಧಿಷ್ಟ ಜನರು ಎಸಗಿದ ನಿರ್ಧಿಷ್ಟ ಏಕರೂಪದ ಕಾರ್ಯಕ್ಕೆ ವಿಭಿನ್ನ ಬಿರುದುಗಳು. ಒಂದು ವರ್ಗದವರಿಗೆ ಅವರು ಭಯೋತ್ಪಾದಕರಾಗಿ ಕಂಡರೆ ಇನ್ನೊಬ್ಬರ ದೃಷ್ಟಿಯಲ್ಲಿ ಅವರು ದೇಶಪ್ರೇಮಿಗಳು. ಬ್ರಿಟಿಷರಿಗೆ ಭಾರತವನ್ನು ಆಳುವ ಹಕ್ಕಿದೆಯೆಂದು ವಾದಿಸುವವರು ಆ ಜನರನ್ನು ಭಯೋತ್ಪಾದಕರೆಂದು ಕರೆದರೆ, ಬ್ರಿಟಿಷರಿಗೆ ನಮ್ಮನ್ನಾಳುವ ಹಕ್ಕಿಲ್ಲವೆನ್ನುವ ನಾವು ಆ ಹೋರಾಟಗಾರರನ್ನು ದೇಶಪ್ರೇಮಿಗಳೆನ್ನುತ್ತೇವೆ.
ಆದುದರಿಂದ ಒಬ್ಬ ವ್ಯಕ್ತಿಯ ಬಗ್ಗೆ ಹಠಾತ್ತನೆ ತೀರ್ಮಾನಿಸುವ ಬದಲು ಅವನಿಗೂ ತನ್ನ ವಾದವನ್ನು ಮಂಡಿಸುವ ಅವಕಾಶವನ್ನು ನೀಡಿ, ಇತ್ತಂಡಗಳ ವಾದಗಳನ್ನು ಆಲಿಸಿದ ಬಳಿಕ ಘಟನೆಯ ಹಿಂದಿನ ಕಾರಣ, ಉದ್ದೇಶಗಳನ್ನು ಅವಲೋಕಿಸಿ ತೀರ್ಪು ನೀಡುವುದೇ ಅತ್ಯುತ್ತಮ.
7. ಇಸ್ಲಾಮ್ನ ಇನ್ನೊಂದು ಅರ್ಥ ಶಾಂತಿ.
‘ಸಲಾಮ್' ಎಂಬ ಮೂಲಧಾತುವಿನಿಂದ ಹೊರಡುವ ‘ಇಸ್ಲಾಮ್'ನ ಇನ್ನೊಂದರ್ಥ ಶಾಂತಿ. ಶಾಂತಿಯ ಧರ್ಮವಾಗಿರುವ ಇದರ ಮೂಲಭೂತ ತತ್ವಗಳು ತನ್ನ ಅನುಯಾಯಿಗಳಿಗೆ ಜಗತ್ತಿನಾದ್ಯಂತ ಶಾಂತಿಸ್ಥಾಪನೆಯ ಕರೆ ನೀಡುತ್ತದೆ. ಹೀಗೆ ಒಬ್ಬ ಮುಸ್ಲಿಮನು ಶಾಂತಿಯ ಧರ್ಮವಾದ ಇಸ್ಲಾಮಿನ ಮೂಲಭೂತವಾದೀ ಅನುಯಾಯಿಯೂ ಹೌದು.
ಉತ್ತರ: ‘ಶಾಖಾಹಾರಿತ್ವ' ಎಂಬುದು ಇತ್ತೀಚೆಗೆ ಒಂದು ಚಳುವಳಿಯೇ ಆಗಿಬಿಟ್ಟಿದೆ. ಮನುಷ್ಯರು ಶಾಖಾಹಾರಿಗಳಾಗುವುದು ಪ್ರಾಣಿಗಳ ಹಕ್ಕು ಎಂಬ ರೀತಿಯಲ್ಲಿ ಕೆಲವರು ಇದನ್ನು ವ್ಯಾಖ್ಯಾನಿಸಿರುವರು. ಇವರ ಪ್ರಕಾರ ಮಾಂಸಾಹಾರ ಸೇವನೆಯು ಪ್ರಾಣಿ ಹಕ್ಕುಗಳ ಉಲ್ಲಂಘನೆಯಾಗಿದೆ.
ಇಸ್ಲಾಮ್ ಎಲ್ಲಾ ಜೀವಚರಗಳ ಮೇಲೆ ದಯೆ, ಕನಿಕರ ತೋರಲು ಆಜ್ಞಾಪಿಸುತ್ತದೆ. ಇದರ ಜೊತೆಗೇ ಈ ಭೂಮಿಯ ಮೇಲಿರುವ ಎಲ್ಲಾ ವನ್ಯಮೃಗಗಳನ್ನು ಮಾನವನ ಅನುಕೂಲತೆಗಾಗಿ ಸೃಷ್ಟಿಸಲಾಗಿದೆ ಎಂದೂ ಹೇಳುತ್ತದೆ. ಈ ಎಲತ ಸಂಪನ್ಮೂಲಗಳನ್ನು , ಅವುಗಳು ಅಲ್ಲಾಹನ ಅನುಗೃಹಗಳು ಎಂಬುದನ್ನು ಮರೆಯದೆ, ನ್ಯಾಯಯುತವಾಗಿ ಬಳಸಿಕೊಳ್ಳುವ ಹೊಣೆಗಾರಿಕೆಯೂ ಮಾನವನ ಮೇಲಿದೆ.
ನಾವೀಗ ಈ ವಿಷಯದ ವಿವಿಧ ಮಜಲುಗಳ ಮೇಲೊಂದು ನೋಟವನ್ನು ಬೀರೋಣ.
1. ಶುದ್ಧ ಸಸ್ಯಾಹಾರೀ ಮುಸ್ಲಿಮ್.
ಮುಸ್ಲಿಮನಾಗಲು ಮಾಂಸಾಹಾರಿಯಾಗಿರಬೇಕು ಎಂಬ ನಿಯಮವೇನಿಲ್ಲ. ಶುದ್ಧ ಸಸ್ಯಾಹಾರಿಯಾಗಿದ್ದುಕೊಂಡು ಕೂಡಾ ಒಬ್ಬನಿಗೆ ಉತ್ತಮ ಮುಸ್ಲಿಮನಾಗಿರಲು ಸಾಧ್ಯ. ಮಾಂಸಾಹಾರವು ಇಸ್ಲಾಮಿನಲ್ಲಿ ಕಡ್ಡಾಯವಲ್ಲ.
2. ಮಾಂಸಾಹಾರಕ್ಕೂ ಅನುಮತಿ.
ಕುರ್ಆನ್ ಮುಸ್ಲಿಮನಿಗೆ ಮಾಂಸಾಹಾರದ ಅನುಮತಿಯನ್ನು ನೀಡುತ್ತದೆ
a. “ ಓ ಸತ್ಯವಿಶ್ವಾಸಿಗಳೇ, ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರಿ. ಆಕ್ಷೇಪಿಸಿದವುಗಳನ್ನು ಹೊರತುಪಡಿಸಿ ಜಾನುವಾರು ವರ್ಗದ ಎಲ್ಲಾ ಪ್ರಾಣಿಗಳನ್ನು ನಿಮಗೆ ಧರ್ಮಸಮ್ಮತಗೊಳಿಸಲಾಗಿದೆ" (ಕುರ್ಆನ್ 5:1)
b. “ ಅವನು ಪ್ರಾಣಿಗಳನ್ನು ಸೃಷ್ಟಿಸಿದನು. ಅವುಗಳಲ್ಲಿ ನಿಮಗೆ ಉಡುಪು, ಆಹಾರ ಮಾತ್ರವಲ್ಲದೇ ಇನ್ನೂ ಹಲವು ಪ್ರಯೋಜನಗಳಿವೆ." (ಕುರ್ಆನ್ 16:5)
c. “ ವಾಸ್ತವದಲ್ಲಿ ಜಾನುವಾರುಗಳಲ್ಲಿಯೂ ನಿಮಗೊಂದು ಪಾಠವಿದೆ. ಅವುಗಳ ಉದರದೊಳಗೆ ಏನಿರುವುದೋ ಅದರಿಂದಲೇ ನಾವು ನಿಮಗೊಂದು ಪಾನಕವನ್ನು ಉತ್ಪಾದಿಸುತ್ತೇವೆ; ಇದಲ್ಲದೇ ಅವುಗಳನ್ನು ನಿಮಗೆ ಅನೇಕಾನೇಕ ಪ್ರಯೋಜನಗಳೂ ಇವೆ. ಮತ್ತು ಅವುಗಳ(ಮಾಂಸವ)ನ್ನು ತಿನ್ನುತ್ತೀರಿ." (ಕುರ್ಆನ್ 23:21)
3. ಮಾಂಸಾಹಾರವು ಪ್ರೊಟೀನುಭರಿತ ಹಾಗೂ ಪುಷ್ಟಿದಾಯಕ.
ಮಾಂಸಾಹಾರವು ಅತ್ಯುತ್ಕೃಷ್ಟ ಪ್ರೋಟಿನುಗಳ ಮೂಲವಾಗಿದೆ. ಇದು ದೇಹಕ್ಕೆ ಅವಶ್ಯವಾಗಿರುವ ಪೂರ್ಣ ಪ್ರಮಾಣದ ಪ್ರೊಟೀನ್ ಅನ್ನು ಹೊಂದಿದೆ. ಅರ್ಥಾತ್ ಮಾನವ ಶರೀರವು ತನಗೆ ಅತ್ಯಾವಶ್ಯವಾದ ಎಲ್ಲಾ ಎಂಟು ವಿಧದ ಅಮೈನೋ ಆಮ್ಲಗಳನ್ನು ಉತ್ಪಾದಿಸಲಾರದು. ಅವುಗಳ ಪೂರೈಕೆಯು ಆಹಾರ ಸೇವನೆಯಿಂದ ಆಗಬೇಕಾಗಿದೆ. ಎಂಟು ವಿಧದ ಅಮೈನೋ ಆಮ್ಲಗಳನ್ನು ಸಸ್ಯಾಹಾರದ ಮೂಲಕ ದೇಹಕ್ಕೆ ಒದಗಿಸಿಕೊಡಬೇಕಾದಲ್ಲಿ ಹತ್ತು ಹಲವು ವಿಧದ ತರಕಾರಿ ಸೊಪ್ಪುಗಳನ್ನು ಸೇವಿಸಬೇಕಾಗುತ್ತದೆ. ಆದರೆ ಮಾಂಸಾಹಾರದಲ್ಲಿ ಇವೆಲ್ಲವೂ ಲಭ್ಯವಿದೆ ಮಾತ್ರವಲ್ಲದೆ ಕಬ್ಬಿಣ, ವಿಟಮಿನ್ ಬಿ 1 ಮತ್ತು ನಿಯಾಸಿನ್ಗಳು ಇದರಲ್ಲಿ ಧಾರಾಳವಿದೆ.
4. ಮಾನವನಿಗೆ ಮಿಶ್ರಾಹಾರೀ (omnivorous) ಮಾದರಿಯ ದಂತ ಪಂಕ್ತಿ.
ಸಸ್ಯಾಹಾರಿ ಪ್ರಾಣಿಗಳಾದ ದನ, ಆಡು, ಕುರಿ ಮುಂತಾದವುಗಳ ದಂತ ಪಂಕ್ತಿ ರಚನೆಗಳನ್ನು ಪರೀಕ್ಷಿಸಿದಲ್ಲಿ ಒಂದು ರೀತಿಯ ಸಾಮ್ಯತೆಯನ್ನು ಕಾಣಬಹುದು. ಸಸ್ಯಾಹಾರವನ್ನು ಮಾತ್ರ ಜಗಿಯಲು ಸಾಧ್ಯವಾಗುವಂತೆ ಇವುಗಳ ಹಲ್ಲುಗಳು ಚಪ್ಪಟೆಯಾಗಿರುತ್ತವೆ. ಇದೇ ರೀತಿ ಮಾಂಸಾಹಾರೀ ಪ್ರಾಣಿಗಳಾದ ಹುಲಿ, ಸಿಂಹ ಮುಂತಾದವುಗಳು ಚೂಪಾದ ದಂತ್ತಪಂಕ್ತಿಗಳನ್ನು ಹೊಂದಿದ್ದು ಇವುಗಳು ಮಾಂಸಾಹಾರ ಸೇವನೆಗೆ ಮಾತ್ರ ಸಹಕಾರಿ. ಆದರೆ ಮಾನವನು ಈ ಎರಡೂ ವಿಧದ ದಂತಪಂಕ್ತಿಗಳನ್ನು ಹೊಂದಿದವನಾಗಿರುವನು. ಮಾಂಸಾಹಾರ ಹಾಗೂ ಸಸ್ಯಾಹಾರಗಳೆರಡನ್ನೂ ಸೇವಿಸುವಂತೆ ಅವನಿಗೆ ಎರಡೂ ವಿಧದ ಹಲ್ಲುಗಳನ್ನು ನೀಡಲಾಗಿದೆ. ಅರ್ಥಾತ್ ಮನುಷ್ಯನು ಮಿಶ್ರಾಹಾರಿಯಾಗಿಯೇ ಸೃಷ್ಟಿಸಲ್ಪಟ್ಟವನು. ಆ ದೇವನು ಮಾನವನನ್ನು ಕೇವಲ ಸಸ್ಯಾಹಾರಿಯಾಗಿಯೇ ಬದುಕಬೇಕೆಂಬ ನಿಯತ್ತಿನಲ್ಲಿ ಸೃಷ್ಟಿಸಿದ್ದಲ್ಲಿ ಅವನಿಗೆ ಚೂಪು ಹಲ್ಲನ್ನು ನೀಡುವ ಅವಶ್ಯಕತೆಯೇನಿತ್ತು ? ಆದುದರಿಂದ ಮಾನವನು ಮಿಶ್ರಾಹಾರಿಯಾಗಿ, ಅರ್ಥಾತ್ ಸಸ್ಯಾಹಾರ ಮತ್ತು ಮಾಂಸಾಹಾರಗಳೆರಡನ್ನೂ ಸೇವಿಸಿ ಬದುಕಬೇಕು ಎಂಬುದೇ ಹೆಚ್ಚು ಯುಕ್ತಿಪರವಾಗಿದೆ.
5. ಮಾನವನಿಗೆ ಮಿಶ್ರಾಹಾರೀ ಮಾದರಿಯ ಜೀರ್ಣಾಂಗ ವ್ಯೂಹ.
ಸಸ್ಯಾಹಾರಿ ಪ್ರಾಣಿಗಳಿಗಿರುವ ಜೀರ್ಣಾಂಗ ವ್ಯೂಹಗಳು ಕೇವಲ ಸಸ್ಯಾಹಾರವನ್ನಷ್ಟೇ ಜೀರ್ಣಿಸಬಲ್ಲದು. ಮಾಂಸಾಹಾರಿ ಪ್ರಾಣಿಗಳದ್ದು ಕೇವಲ ಮಾಂಸಾಹಾರವನ್ನಷ್ಟೇ ಜೀರ್ಣಿಸಬಲ್ಲದು. ಆದರೆ ಮಾನವನಿಗಿರುವ ಜೀರ್ಣಾಂಗ ವ್ಯೂಹವು ಎರಡೂ ವಿಧದ ಆಹಾರವನ್ನು ಜೀರ್ಣಿಸಲು ಶಕ್ತವಾಗಿದೆ. ಆ ದೇವನಿಗೆ ಮನುಷ್ಯನು ಮಾಂಸಾಹಾರ ಸೇವಿಸುವುದು ಇಷ್ಟವಿಲ್ಲವೆಂದಾಗಿದ್ದಲ್ಲಿ ಇಂತಹದ್ದೊಂದು ಜೀರ್ಣಾಂಗವನ್ನು ಅವನಿಗೆ ನೀಡುವ ಅವಶ್ಯಕತೆಯೇನಿತ್ತು ?
6. ಹಿಂದೂ ವೇದಗ್ರಂಥಗಳಲ್ಲಿ ಮಾಂಸಾಹಾರದ ಅನುಮತಿ.
a. ಮಾಂಸಾಹಾರ ಸೇವನೆಯು ಧರ್ಮನಿಷಿದ್ಧವೆಂಬ ತಪ್ಪು ಕಲ್ಪನೆಯಲ್ಲಿ ಅನೇಕ ಹಿಂದೂ ಧರ್ಮೀಯರು ಕಟ್ಟಾ ಶಾಖಾಹಾರಿಗಳಾಗಿರುವರು. ವಾಸ್ತವದಲ್ಲಿ ಹಿಂದೂ ಧಾರ್ಮಿಕ ಗ್ರಂಥಗಳು ಮಾಂಸಾಹಾರವನ್ನು ಅನುಮತಿಸುತ್ತವೆ. ಈ ಗ್ರಂಥಗಳಲ್ಲಿ ಹಿಂದೂ ಋಷಿ -ಮುನಿಗಳು ಮಾಂಸಾಹಾರ ಸೇವಸುತ್ತಿದ್ದ ಬಗ್ಗೆ ಪುರಾವೆಗಳಿವೆ.
b. “ಪ್ರತಿದಿನವೂ ತಿನ್ನಲಿಕ್ಕೆ ಯೋಗ್ಯವಾದ ಪ್ರಾಣಿಗಳನ್ನೇ ಕೊಂದು ತಿಂದರೆ ಅದು ಅಪರಾಧವಲ್ಲ. ಏಕೆಂದರೆ ತಿನ್ನುವವರನ್ನೂ ಪ್ರಾಣಿಗಳನ್ನೂ ಭಗವಂತನೇ ಸೃಷ್ಟಿ ಮಾಡಿದ್ದಾನೆ."
(ಮನುಸ್ಮೃತಿ 5: 30)c. ಮನುಸ್ಮೃತಿಯ ಮುಂದಿನ ಶ್ಲೋಕದಲ್ಲಿ ಹೀಗಿದೆ.
“ಯಜ್ಞಕ್ಕಾಗಿ ಪಶುವನ್ನು ಕೊಂದು ಮಾಡಿದ ಮಾಂಸ ಭಕ್ಷಣವು ದೈವಿಕ ರೀತಿಯೆಂದು ಹೇಳಲ್ಪಟ್ಟಿದೆ. ಇದಕ್ಕೆ ವಿರುದ್ಧವಾಗಿ ಅನ್ಯ ಸಂದರ್ಭಗಳಲ್ಲಿ ಮಾಡುವ ಅಕಾರಣ ಪಶುವಧೆ ಮತ್ತು ಮಾಂಸ ಭಕ್ಷಣವು ರಾಕ್ಷಸ ರೀತಿಯೆಂದು ಹೇಳಲ್ಪಟ್ಟಿದೆ." ( ಮನುಸ್ಮೃತಿ 5 : 31)
d. “ಯಜ್ಞಗಳಿಗೆಂದೇ ಪರಮಾತ್ಮನು ಈ ಪಶುಗಳನ್ನು ಸೃಷ್ಟಿ ಮಾಡಿದ್ದಾನೆ. ಈ ಎಲ್ಲವೂ ಯಜ್ಞದ ಆಚರಣೆಗೆಂದೇ ಇದೆ. ಆದ್ದರಿಂದ ಯಜ್ಞದಲ್ಲಿ ಮಾಡುವ ಪಶು ವಧೆ ಪಾಪಕರವಲ್ಲ"
( ಮನುಸ್ಮೃತಿ 5: 39)e. ಮಹಾಭಾರತ ಅನುಶಾಸನ ಪರ್ವದ 88ನೆ ಅಧ್ಯಾಯದಲ್ಲಿ ಯುಧಿಷ್ಠರ ಮತ್ತು ಭೀಷ್ಮರ ನಡುವೆ ತಮ್ಮ ಪೂರ್ವಜರ ಶ್ರಾದ್ಧದಲ್ಲಿ ಅರ್ಪಿಸಬೇಕಾದ ಆಹಾರದ ಬಗ್ಗೆ ‘ ಓ ಬಲಾಢ್ಯನೇ, ನಮ್ಮ ಪಿತೃಗಳ ಶ್ರಾದ್ಧದಲ್ಲಿ ಯಾವುದನ್ನು ಅರ್ಪಿಸಿದಲ್ಲಿ ಶಾಶ್ವತವಾಗಿರುವುದು ಎಂಬುದನ್ನು ನನಗೆ ತಿಳಿಸು" ಎಂದು ಯುಧಿಷ್ಠಿರನು ಭೀಷ್ಮನನ್ನು ಕೇಳಿಕೊಂಡು ತೊಡಗುವ ಸಂಭಾಷಣೆಯಲ್ಲಿ ಭೀಷ್ಮನು ಯುಧಿಷ್ಠಿರನಿಗೆ ಪಶುಬಲಿಯನ್ನೇ ಶಿಫಾರಸು ಮಾಡುವುದನ್ನು ಕಾಣಬಹುದು."
ಹೀಗೆ ಹಿಂದೂ ಧಾರ್ಮಿಕ ಗ್ರಂಥಗಳು ತಮ್ಮ ಅನುಯಾಯಿಗಳಿಗೆ ಇಷ್ಟೊಂದು ಸ್ಪಷ್ಟವಾಗಿ ಮಾಂಸಾಹಾರವನ್ನು ಅನುಮತಿಸಿದ ಮೇಲೂ ಹಲವು ಹಿಂದೂ ಜನರು ಬೌದ್ಧ, ಜೈನ ಮುಂತಾದ ಧರ್ಮಗಳಿಂದ ಪ್ರಭಾವಿತರಾಗಿ ಶಾಖಾಹಾರಿತ್ವವನ್ನು ತಮ್ಮ ಧರ್ಮದಲ್ಲಿ ಅಳವಡಿಸಿಕೊಂಡರು.
7. ಸಸ್ಯಗಳಲ್ಲೂ ಜೀವ.
ಕೆಲವು ಧಾರ್ಮಿಕ ಪಂಗಡಗಳು ಕಟ್ಟಾ ಶಾಖಾಹಾರಿತ್ವವನ್ನು ತಮ್ಮ ಧರ್ಮದ ಆಹಾರ ನಿಯಮವನ್ನಾಗಿ ಮಾಡಿಕೊಂಡಿವೆ. ಏಕೆಂದರೆ ಈ ಜನರು ಸಂಪೂರ್ಣ ಜೀವಹತ್ಯಾ ವಿರೋಧಿಗಳಂತೆ! ಯಾವುದೇ ಒಂದು ಜೀವವುಳ್ಳ ವಸ್ತುವನ್ನು ವಧಿಸದೇ ಈ ಭೂಮಿಯಲ್ಲಿ ಜೀವಿಸಲು ಸಾಧ್ಯವಿದೆಯೆಂದಾದಲ್ಲಿ. ಅಂತಹ ಜೀವನ ಪದ್ದತಿಯನ್ನು ಸ್ವೀಕರಿಸಿಕೊಳ್ಳಲು ನಾನಿದೋ ಸಿದ್ಧನಾಗಿರುವೆನು. ಹಿಂದಿನ ಕಾಲದಲ್ಲಿ ಸಸ್ಯಗಳನ್ನು ನಿರ್ಜೀವಿಗಳು ಎಂದು ತಿಳಿಯಲಾಗಿತ್ತು. ಆದರೆ ಸಸ್ಯಗಳಿಗೂ ಜೀವವಿದೆ ಎಂಬುದು ಇಂದು ಜಗಜ್ಜಾಹೀರು. ಆದುದರಿಂದ ಶಾಖಾಹಾರಿಯಾಗಿದ್ದುಕೊಂಡು ಜೀವಹತ್ಯೆಯನ್ನು ತಡೆಯಬಹುದೆಂಬ ವಾದವು ಚಲಾವಣೆಗೆ ಅನರ್ಹವಾದ ಒಂದು ಸವಕಲು ನಾಣ್ಯವೇ ಸರಿ.
8. ಸಸ್ಯಗಳಿಗೂ ನೋವಿನ ಅನುಭವ.
ಸಸ್ಯಗಳಿಗೆ ನೋವಿನ ಅನುಭವವಾಗಲಾರದು( ಅವುಗಳಿಗೆ ಮೆದುಳೇ ಇಲ್ಲ ಎಂಬುದು ಇನ್ನು ಕೆಲವರ ವಾದ). ಆದುದರಿಂದ ಸಸ್ಯಾರಾಶಿಯನ್ನು ಕೊಲ್ಲುವುದು ಪ್ರಾಣಿವಧೆಗಿಂತ ಚಿಕ್ಕ ಅಪರಾಧ ಎಂಬುದು ಇವರ ಇನ್ನೊಂದು ವಾದ. ಆದರೆ ಸಸ್ಯಗಳಿಗೂ ನೋವಿನ ಅನುಭವವಾಗುತ್ತದೆ ಎಂಬುದನ್ನು ವಿಜ್ಞಾನವಿಂದು ಕಂಡುಕೊಂಡಿದೆ. ವ್ಯತ್ಯಾಸವೆಂದರೆ ಸಸ್ಯಗಳ ಆರ್ತನಾದವನ್ನು ಮನುಷ್ಯನು ಆಲಿಸಲಾರ. ಏಕೆಂದರೆ ಈ ಚೀರುವಿಕೆಯ ಆವರ್ತನ ಸಂಖ್ಯೆ (Frequency) ಯು ಮಾನವ ಕಿವಿಗಳ ಶ್ರವಣ ಸಾಮರ್ಥ್ಯಕ್ಕಿಂತ ಹೊರಗಿದೆ. ಮಾನವನು 20 ರಿಂದ 20,000 Hertz ಆವರ್ತನ ಸಂಖ್ಯೆ (Frequency)ಯುಳ್ಳ ಶಬ್ದವನ್ನು ಮಾತ್ರ ಆಲಿಸಬಲ್ಲ. ಒಂದು ನಾಯಿಯು 40,000 Hertz ಆವರ್ತನ ಸಂಖ್ಯೆಯವರೆಗಿನ ಶಬ್ದವನ್ನು ಆಲಿಸಬಲ್ಲದು. ಇಪ್ಪತ್ತು ಸಾವಿರದಿಂದ ನಲವತ್ತು ಸಾವಿರದವರೆಗಿನ ಆವರ್ತನ ಸಂಖ್ಯೆಯ ಶಬ್ದವನ್ನುಂಟು ಮಾಡುವ ಸೀಟಿಯೊಂದನ್ನು ವಿಜ್ಞಾನಿಗಳು ಕಂಡು ಹಿಡಿದಿರುವರು. ಈ ಸೀಟಿಯ ಶಬ್ದವನ್ನು ಮನುಷ್ಯನು ಆಲಿಸಲಾರ. ಈ ಸೀಟಿಯನ್ನು ಬಳಸಿದ ತನ್ನ ಒಡೆಯನ ದ್ವನಿಯನ್ನು ಗುರುತಿಸುವ ನಾಯಿಗಳು ಅವನ ಬಳಿಗೆ ಓಡಿ ಬರುತ್ತವೆ. ಸಸ್ಯಗಳ ಚೀರುವಿಕೆಯನ್ನು ಮನುಷ್ಯರು ಆಲಿಸುವಂತೆ ಮಾಡುವ ಸಲಕರಣೆಯು ಅಮೆರಿಕದ ರೈತನೊಬ್ಬನ ಇತ್ತೀಚಿನ ಸಂಶೋಧನೆಯಾಗಿದೆ. ಸಸ್ಯಗಳು ನೀರಿಗಾಗಿ ಆಗ್ರಹಿಸುವುದನ್ನು ಕೂಡಲೇ ಕಂಡುಕೊಳ್ಳಲು ಅವನಿಗೆ ಸಾಧ್ಯವಾಗುತ್ತಿತ್ತು. ಇದೀಗ ಸಸ್ಯಗಳು ಸಂತೋಷ ಹಾಗೂ ದುಃಖವನ್ನೂ ಅನುಭವಿಸುತ್ತವೆ ಎಂಬುದನ್ನೂ ಕಂಡುಕೊಳ್ಳಲಾಗಿದೆ.
9. ಅಂಗವಿಕಲರ ಹತ್ಯೆ ಪುಟ್ಟ ಪಾಪವೇನಲ್ಲ.
ಪ್ರಾಣಿಗಳಿಗೆ ಪಂಚೇಂದ್ರಿಯಗಳಿದ್ದರೆ ಸಸ್ಯಗಳಿಗೆ ಒಂದೆರಡು ಇಂದ್ರಿಯಗಳು ಕಡಿಮೆಯಿರುತ್ತವೆ. ಆದುದರಿಂದ ಸಸ್ಯಗಳನ್ನು ಕೊಲ್ಲುವುದು ಅಂತಹ ದೊಡ್ಡ ಪಾಪವೇನಲ್ಲ ಎಂಬುದು ಕೆಲವು ಶಾಖಾಹಾರಿಗಳ ವಾದ. ಇದೆಂತಹ ತಮಾಷೆ !! ಕಿವುಡ ಹಾಗೂ ಮೂಗನಾಗಿ ಹುಟ್ಟಿದ ಇವರ ತಮ್ಮನನ್ನು ಯಾರಾದರೂ ಕೊಂದಲ್ಲಿ ಇವರು ಇದೇ ರೀತಿ ವಾದಿಸುವರೋ ? ನಾನು ಕೊಂದಿದ್ದು ಎರಡು ಇಂದ್ರಿಯಗಳು ಕಡಿಮೆ ಇರುವವನನ್ನಾಗಿದೆ. ಆದುದರಿಂದ ಮೈ ಲಾರ್ಡ್ ನನಗೆ ಶಿಕ್ಷೆಯಲ್ಲಿ ರಿಯಾಯಿತಿ ದೊರಕಬೇಕು ಎಂದು ಅಪರಾಧಿಯು ವಾದಿಸಿದಲ್ಲಿ ಇವರೇನನ್ನುವರು ? ವಾಸ್ತವದಲ್ಲಿ ಬಲಹೀನರನ್ನು, ಅಂಗವಿಕಲರನ್ನು ಕೊಂದಲ್ಲಿ ಶಿಕ್ಷೆಯು ಇನ್ನಷ್ಟು ಕಠಿಣವಾಗಿರುತ್ತದೆ.
ಖಾದ್ಯ ಯೋಗ್ಯ ವಸ್ತುಗಳಾವುವು ಎಂಬುದನ್ನು ಮನುಷ್ಯನು ತನ್ನ ‘ಸಂಶೋಧನೆ' ಗಳಿಂದ ನಿರ್ಧರಿಸಲು ಹೊರಟಲ್ಲಿ ಅಂತ್ಯ ಪ್ರಹಸನವನ್ನು ತೊರೆದು ತನ್ನ ಸೃಷ್ಟಿಕರ್ತನ ಸಲಹೆಯನ್ನು ಸ್ವೀಕರಿಸುವುದೇ ಅವನ ಪಾಲಿಗೆ ಉತ್ತಮ.
“ಓ, ಮನುಷ್ಯರೇ, ಭೂಮಿಯ ಮೇಲಿನ ಧರ್ಮಸಮ್ಮತ ಮತ್ತು ಶುದ್ಧ ವಸ್ತುಗಳನ್ನು ಸೇವಿಸಿರಿ" (ಕುರ್ಆನ್ 2 : 168 )
10. ಜಾನುವಾರುಗಳ ಸಂಖ್ಯೆಯಲ್ಲಿ ಹೆಚ್ಚಳ.
ಪ್ರತಿಯೊಬ್ಬನೂ ಶಾಖಾಹಾರಿಯಾಗಿ ಬಿಟ್ಟಲ್ಲಿ ಜಾನುವಾರುಗಳು ಸಂಖ್ಯೆಯಲ್ಲಿ ಮಿತಿ ಮೀರುವುದು ಖಂಡಿತ. ಏಕೆಂದರೆ ಇವುಗಳ ಸಂತಾನ ವೃದ್ಧಿಯು ವೇಗವಾಗಿದೆ. ತನ್ನ ಸೃಷ್ಟಿಯ ಸಮತೋಲನವನ್ನು ಹೇಗೆ ಕಾಪಾಡಬೇಕು ಎಂಬುದನ್ನು ಅಲ್ಲಾಹನು ಚೆನ್ನಾಗಿ ಬಲ್ಲನು. ಆದುದರಿಂದಲೇ ಅವನು ನಮಗೆ ಮಾಂಸಾಹಾರದ ಅನುಮತಿಯನ್ನು ನೀಡಿರಬಹುದು.
11. ಸಕಲರೂ ಮಾಂಸಾಹಾರಿಗಳಾಗಿದ್ದಲ್ಲಿ ಮಾಂಸವು ಇನ್ನಷ್ಟು ದುಬಾರಿ.
ಕೆಲವು ಜನರು ಶುದ್ಧ ಶಾಖಾಹಾರಿಗಳು ಎಂಬ ವಿಷಯದಲ್ಲಿ ನನ್ನದೇನೂ ಆಕ್ಷೇಪವಿಲ್ಲ. ಆದರೆ ಅವರು ಮಾಂಸಾಹಾರಿಗಳನ್ನು ಆಕ್ಷೇಪಿಸುವುದು ಸರಿಯಲ್ಲ. ವಾಸ್ತವದಲ್ಲಿ ಅವರೆಲ್ಲರೂ ಮಾಂಸಾಹಾರಿಗಳಾಗಿದ್ದಲ್ಲಿ ಮಾಂಸದ ಬೆಲೆಯು ಇನ್ನಷ್ಟು ತುಟ್ಟಿಯಾಗಿ ನಾವು ನಷ್ಟದಲ್ಲಿರುತ್ತಿದ್ದೆವು.
ಪ್ರಾಣಿಗಳನ್ನು ವಧಿಸುವ ಇಸ್ಲಾಮೀ ಪದ್ಧತಿಯನ್ನು ಝಬಿಹ ಎನ್ನುವರು. ಇದು ಅತ್ಯಂತ ಹೆಚ್ಚು ವಿಮರ್ಶಿಸಲ್ಪಡುವ ಒಂದು ವಿಷಯವಾಗಿದೆ. ಈ ಕೆಳಗಿನ ಕೆಲವು ಮುಖ್ಯ ಅಂಶಗಳು ಇಸ್ಲಾಮೀ ಪದ್ಧತಿಯಾದ ಝಬಿಹವು ಮಾನವೀಯತೆಯಿಂದ ಕೂಡಿದೆಯಲ್ಲದೆ, ವೈಜ್ಞಾನಿಕವಾಗಿಯೂ ಉತ್ತಮವೆಂದು ಪರಿಗಣಿಸಲ್ಪಟ್ಟಿದೆಯೆಂಬುದನ್ನು ಸ್ಪಷ್ಟಪಡಿಸುತ್ತವೆ.
1. ಇಸ್ಲಾಮೀ ವಧಾ ರೀತಿ (ಝಬಿಹ)
‘ಝಕ್ಕೈತುಮ್' ಎಂಬುದು ‘ಝಕಿಯಃ' ಎಂಬುದರ ಕ್ರಿಯಾಪದವಾಗಿದ್ದು, ಇದರ ಭಾವರೂಪಕವು ‘ಝಕಾಃ' ಅರ್ಥಾತ್ ಪ್ರಕಾಶಿಸು ಅಥವಾ ಹರಿತವಾಗಿಸು ಎಂದಾಗಿದೆ. ಆದುದರಿಂದ ಪ್ರಾಣಿಗಳನ್ನು ಝಬಿಹ ಮಾಡಲು ಈ ಕೆಳಗಿನ ಷರತ್ತುಗಳನ್ನು ಅವಶ್ಯ ಪಾಲಿಸಬೇಕಾಗಿದೆ.
a. ಕತ್ತಿಯು ಅತ್ಯಂತ ಹರಿತವಾಗಿರಬೇಕು ಮತ್ತು ನೋವು ಕನಿಷ್ಟವಾಗಿರುವಂತೆ ಕೊಯ್ಯುವ ಕ್ರಿಯೆಯು ಕ್ಷಿಪ್ರವಾಗಿರಬೇಕು.
b. ಪ್ರಾಣಿಯ ಮರಣವು ಬೆನ್ನುಹುರಿಯನ್ನು ಘಾಸಿಮಾಡದ, ಗಂಟಲು,ಕೊರಳಿನ ರಕ್ತನಾಳ ಮತ್ತು ಶ್ವಾಸನಾಳಗಳ ತುಂಡರಿಸುವಿಕೆಯಿಂದ ಸಂಭವಿಸಿರಬೇಕು.
c. ರುಂಡವನ್ನು ಬೇರ್ಪಡಿಸುವ ಮೊದಲು (ಅರ್ಥಾತ್ ಬೆನ್ನುಹುರಿ ತುಂಡಾಗುವ ಮೊದಲು ರಕ್ತವು ಸಂಪೂರ್ಣವಾಗಿ ಹೊರ ಹರಿದಿರಬೇಕು.
ರಕ್ತವು ರೋಗಾಣುಗಳಿಗೆ ಒಂದು ಅತ್ಯುತ್ತಮ ತಾಣವಾಗಿದೆ. ಹೆಚ್ಚಿನೆಲ್ಲಾ ರಕ್ತವನ್ನು ಹೊರಹರಿಸುವುದರಿಂದ ಮಾಂಸವು ರೋಗಾಣುಗಳಿಂದ ಮುಕ್ತವಾಗುತ್ತದೆ. ಬೆನ್ನುಹುರಿಯು ತುಂಡರಿಸಲ್ಪಡುವುದರಿಂದ ಹೃದಯ ಸಂಬಂಧಿತ ನಾಳಗಳು ಘಾಸಿಗೊಂಡು ಹೃದಯವು ಸ್ಥಗಿತಗೊಳ್ಳಬಹುದು ಮತ್ತು ರಕ್ತವು ನಾಳಗಳಲ್ಲೇ ಉಳಿದುಬಿಡುವ ಸಾಧ್ಯತೆಗಳಿವೆ. ಆದುದರಿಂದಲೇ ಬೆನ್ನುಹುರಿಯನ್ನು ತುಂಡರಿಸುವುದನ್ನು ತಡೆಯಲಾಗಿದೆ.
d. ಇತರ ರೀತಿಗಳಿಗೆ ಹೋಲಿಸಿದರೆ ಇಸ್ಲಾಮಿಕ್ ಪದ್ದತಿಯಲ್ಲಿ ವಧಿಸಿದ ಪ್ರಾಣಿಗಳ ಮಾಂಸವು ಹೆಚ್ಚು ಕಾಲ ಕೆಡದೇ ಉಳಿಯುವುದು.
e. ಕೊರಳ ನಾಳಗಳನ್ನು ಕ್ಷಿಪ್ರವಾಗಿ ಕೊಯ್ಯುವುದರಿಂದ ನೋವಿನ ಅರಿವನ್ನುಂಟು ಮಾಡುವ ಮೆದುಳಿನ ನರಗಳಿಗೆ ರಕ್ತ ಪೂರೈಕೆ ಸ್ಥಗಿತಗೊಳ್ಳತ್ತದೆ ಮತ್ತು ಇದರಿಂದ ವಧಾಪ್ರಾಣಿಗೆ ನೋವು ಅನುಭವಕ್ಕೆ ಬರಲಾರದು. ಮರಣ ವೇಳೆಯಲ್ಲಿ ಪ್ರಾಣಿಯ ಒದ್ದಾಟವು ನೋವಿನ ಕಾರಣದಿಂದಲ್ಲ. ಬದಲಾಗಿ ಅದು ಸ್ನಾಯುಗಳ ಚಲನೆ (Contraction & Relaxation) ಯಿಂದಾಗಿರುತ್ತದೆ.
ಹೀಗೆ ಪ್ರಾಣಿಗಳನ್ನು ವಧಿಸುವ ಇಸ್ಲಾಮೀ ವಧಾ ರೀತಿ(ಝಬಿಹ) ಯು ಅತ್ಯಂತ ಶುದ್ಧ ಹಾಗೂ ನೋವನ್ನು ಅತ್ಯಂತ ಕನಿಷ್ಟಗೊಳಿಸುವ ಅತ್ಯುತ್ತಮ ರೀತಿಯಾಗಿದೆ.
ಉತ್ತರ:
1. ಸಸ್ಯಾಹಾರಿ ಪ್ರಾಣಿಗಳ ಮಾಂಸಸೇವನೆಗೆ ಮಾತ್ರ ಅನುಮತಿ.
ಒಬ್ಬ ವ್ಯಕ್ತಿಯು ಸೇವಿಸುವ ಆಹಾರವು ಅವನ ಸ್ವಭಾವದ ಮೇಲೆ ಪ್ರಭಾವ ಬೀರುತ್ತದೆ ಎಂಬ ವಿಷಯಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಇದೇ ಕಾರಣಕ್ಕಾಗಿ ಇಸ್ಲಾಮ್ ಮಾಂಸಾಹಾರೀ ಕ್ರೂರ ಪ್ರಾಣಿಗಳಾದ ಹುಲಿ, ಸಿಂಹ ಮುಂತಾದವುಗಳ ಮಾಂಸ ಸೇವನೆಯನ್ನು ನಿಷೇಧಿಸಿರಲೂ ಬಹುದು. ಇಂತಹ ಪ್ರಾಣಿಗಳ ಮಾಂಸ ಭಕ್ಷಣೆಯಿಂದ ಒಬ್ಬನು ಕ್ರೂರಿಯಾಗುವ ಸಾಧ್ಯತೆಗಳಿರಬಹುದು. ಇಸ್ಲಾಮ್ ಧರ್ಮವು ಸಸ್ಯಾಹಾರಿ ಶಾಂತ ಪ್ರಾಣಿಗಳಾದ ದನ, ಕುರಿ, ಆಡು ಮುಂತಾದವುಗಳ ಭಕ್ಷಣೆಯನ್ನು ಮಾತ್ರ ಅನುಮತಿಸಿದೆ. ಮುಸ್ಲಿಮರಾದ ನಾವು ಶಾಂತ ಸ್ವಭಾವದ ಸಾಧು ಪ್ರಾಣಿಗಳನ್ನು ಮಾತ್ರ ಭಕ್ಷಿಸುತ್ತೇವೆ. ಏಕೆಂದರೆ ನಾವು ಶಾಂತಿಪ್ರಿಯರು ಹಾಗೂ ಹಿಂಸೆಯನ್ನು, ಅನ್ಯಾಯವನ್ನು ವಿರೋಧಿಸುವ ಸಾಧು ಜನರು.
2. ಪ್ರವಾದಿ(ಸ) ಕೆಟ್ಟದ್ದನ್ನು ನಿಷೇಧಿಸಿರುವರು.
“ ಇವರು (ಪ್ರವಾದಿ (ಸ)) ಅವರಿಗೆ ಸತ್ಕರ್ಮದ ಆದೇಶ ನೀಡುತ್ತಾರೆ ಮತ್ತು ದುಷ್ಕೃತ್ಯದಿಂದ ತಡೆಯುತ್ತಾರೆ. ಶುದ್ಧ ವಸ್ತುಗಳನ್ನು ಧರ್ಮ ಸಮ್ಮತಗೊಳಿಸುತ್ತಾರೆ ಮತ್ತು ಅಶುದ್ಧ ವಸ್ತುಗಳನ್ನು ನಿಷಿದ್ಧಗೊಳಿಸುತ್ತಾರೆ" (ಕುರ್ಆನ್ 7 : 157)
“ ......ಪ್ರವಾದಿ (ಸ) ನೀಡಿದುದನ್ನು ಸ್ವೀಕರಿಸಿಕೊಳ್ಳಿರಿ. ಅವರು ತಡೆದವುಗಳಿಂದ ದೂರವಿರಿ" ( ಕುರ್ಆನ್ 59 : 7)
3. ಮಾಂಸಾಹಾರಿ ಪ್ರಾಣಿಗಳ ಮಾಂಸ ಸೇವನೆಗೆ ಪ್ರವಾದಿ (ಸ) ವಚನಗಳಲ್ಲಿ ತಡೆ:
ಇಮಾಮ್ ಬುಖಾರಿ, ಮುಸ್ಲಿಮ್ ಮುಂತಾದ ವಿದ್ವಾಂಸರು ಉದ್ಧರಿಸಿದ ಅಧಿಕೃತ ಪ್ರವಾದಿ ವಚನಗಳಲ್ಲಿ ಈ ಕೆಳಗಿನ ವರ್ಗದ ಪ್ರಾಣಿಗಳ ಭಕ್ಷಣೆಯನ್ನು ನಿಷೇಧಿಸಲಾಗಿದೆ :
a. ಕೋರೆ ಹಲ್ಲುಗಳನ್ನು ಹೊಂದಿರುವ ಕಾಡುಪ್ರಾಣಿಗಳು, ಅರ್ಥಾತ್ ಮಾಂಸಾಹಾರಿ ಪ್ರಾಣಿಗಳು, ಮಾರ್ಜಾಲ ವಂಶಕ್ಕೆ ಸೇರಿದ ಸಿಂಹ, ಹುಲಿ, ನಾಯಿ ತೋಳ, ಕತ್ತೆಕಿರುಬ ....ಮುಂತಾದವುಗಳು.
b. ನಿರ್ಧಿಷ್ಟ ದಂಶಕ ವರ್ಗಕ್ಕೆ ಸೇರಿದ ಇಲಿ, ಹೆಗ್ಗಣ....ಮುಂತಾದವುಗಳು.
c. ಉರಗ ಅಥವಾ ಸರೀಸೃಪ ವಂಶಕ್ಕೆ ಸೇರಿದ ಹಾವು, ಮೊಸಳೆ ...ಮುಂತಾದವುಗಳು.
d. ಪಂಜಗಳಿಂದ ಬೇಟೆಯಾಡುವ ಗಿಡುಗ, ಕಾಗೆ, ಗೂಬೆ..ಮುಂತಾದವುಗಳು.
- (ಸಹೀಹ್ ಮುಸ್ಲಿಮ್ : ಹದೀಸು ಸಂಖ್ಯೆ 4752, ಅಧ್ಯಾಯ ಬೇಟೆ ಮತ್ತು ಕೊಯ್ಯುವಿಕೆ)
- (ಸುನನ್ ಇಬ್ನು ಮಾಜಃ ಹದೀಸು ಸಂಖ್ಯೆ 3232 ಮತ್ತು 3234, ಅಧ್ಯಾಯ 13)
ಉತ್ತರ: ಕಅಬಾವು ಮುಸ್ಲಿಮರ ‘ಕಿಬ್ಲಾ' ಅರ್ಥಾತ್ ಮುಸ್ಲಿಮರು ನಮಾಜಿನಲ್ಲಿ ಅಭಿಮುಖವಾಗಿರಬೇಕಾದ ದಿಕ್ಕು. ಮುಸ್ಲಿಮರು ನಮಾಜಿನಲ್ಲಿ ಕಅಬಾ ಕ್ಕೆ ಅಭಿಮುಖವಾಗಿರುತ್ತಾರೆಯೇ ಹೊರತು ಕಅಬಾವನ್ನು ಆರಾಧಿಸುವುದಿಲ್ಲ. ಇದರ ಆದೇಶವು ಕುರ್ಆನಿನಲ್ಲಿ ಹೀಗಿದೆ :
“ ನಿಮ್ಮ ಮುಖವು ಆಕಾಶದತ್ತ (ಮಾರ್ಗದರ್ಶನಕ್ಕಾಗಿ) ತಿರುಗುವುದನ್ನು ನಾವು ಕಾಣುತ್ತಿದ್ದೇವೆ. ಇದೋ, ನಾವು ನಿಮ್ಮನ್ನು ನೀವಿಷ್ಟ ಪಡುವ ಕಿಬ್ಲಾದ (ದಿಕ್ಕಿನ) ಕಡೇಗೆ ತಿರುಗಿಸಿಬಿಡುತ್ತೇವೆ. ಮಸ್ಜಿದುಲ್ ಹರಾಮ್ (ಕಅಬಾ)ನ ದಿಕ್ಕಿಗೆ. ನೀವೆಲ್ಲಿದ್ದರೂ ಅದರ ಕಡೇಗೆ ಮುಖ ಮಾಡಿ (ನಮಾಜು ಮಾಡುತ್ತಲಿ) ರಿ..."
1. ಇಸ್ಲಾಮ್ ಒಗ್ಗಟ್ಟನ್ನು ಪ್ರೋತ್ಸಾಹಿಸುತ್ತದೆ.
ಒಂದು ಮಸೀದಿ . ಅಲ್ಲೊಂದಿಷ್ಟು ಮುಸ್ಲಿಮರು. ನಮಾಜಿನ ಕರೆ ಕೇಳಿಸುತ್ತದೆ. ನಮಾಜಿಗೆ ಸಿದ್ಧರಾಗುವ ಮುಸ್ಲಿಮರಲ್ಲಿ ಒಬ್ಬನಿಗೆ ಪೂರ್ವ ದಿಕ್ಕಿಗೆ ಮುಖಮಾಡಲು ಇಷ್ಟವಾದರೆ, ಇನ್ನೊಬ್ಬನಿಗೆ ಪಶ್ಚಿಮ. ಮೂರನೆಯವನಿಗೆ ದಕ್ಷಿಣದತ್ತ ಅಭಿಮುಖವಾಗಿರಲು ಇಷ್ಟವಾದರೆ, ಉತ್ತರ ದಿಕ್ಕೇ ಸರಿಯಾದುದೆಂದು ನಾಲ್ಕನೆಯವನು. ಹೀಗೆ ಒಬ್ಬೊಬ್ಬನು ಒಂದೊಂದು ದಿಕ್ಕಿಗೆ ಮುಖಮಾಡಿ ನಮಾಜು ನಿರ್ವಹಿಸುವ ದೃಶ್ಯವು ಹೇಗಿರಬಹುದು, ಊಹಿಸಬಲ್ಲಿರಾ ? ಇಂತಹ ವಿಚಿತ್ರ ಗೋಜಲುಗಳಿಂದ ಮುಸ್ಲಿಮರನ್ನು ರಕ್ಷಿಸಿ, ಏಕೈಕ ನೈಜ ಆರಾಧ್ಯನ ಆರಾಧನೆಯಲ್ಲಿ ಒಗ್ಗಟ್ಟಾಗಿಸುವ ಸಲುವಾಗಿ ಅವರನ್ನು ಒಂದೇ ದಿಕ್ಕಿಗೆ ಅಭಿಮುಖವಾಗಿರಲು ಹೇಳಲಾಯಿತು. ಅದು ಕಅಬಾ ಇರುವ ದಿಕ್ಕಾಗಿದೆ. ಹೀಗೆ ಕಅಬಾ ದ ಪಶ್ಚಿಮಕ್ಕಿರುವ ಜನರು ಪೂರ್ವ ದಿಕ್ಕಿಗೂ, ಪೂರ್ವಕ್ಕಿರುವ ಜನರನ್ನು ಪಶ್ಚಿಮ ದಿಕ್ಕಗೂ ಅಭಿಮುಖವಾಗಿ ನಮಾಜು ನಿರ್ವಹಿಸಲು ಆದೇಶಿಸಲಾಯಿತು.
2. ಜಗತ್ತಿನ ಭೂಪಟದ ಮಧ್ಯದಲ್ಲಿ ಕಅಬಾ.
ಜಗತ್ತಿನ ಭೂಪಟವನ್ನು ಮೊತ್ತ ಮೊದಲ ಬಾರಿ ಬಿಡಿಸಿದವರು ಮುಸ್ಲಿಮರು. ಅದರಲ್ಲಿ ಅವರು ದಕ್ಷಿಣ ದಿಕ್ಕನ್ನು ಮೇಲ್ಮುಖವಾಗಿಯೂ, ಉತ್ತರವನ್ನು ಕೆಳಮುಖವಾಗಿಯೂ ಬಿಡಿಸಿದ್ದರು. ಕಅಬಾ ವು ಜಗತ್ತಿನ ಕೇಂದ್ರವಾಗಿತ್ತು. ಆ ಬಳಿಕ ಪಾಶ್ಚಾತ್ಯ ನಕ್ಷೆಗಾರರು ನಕ್ಷೆಯನ್ನು ತಲೆಕೆಳಗಾಗಿಸಿ, ಅಂದರೆ ಉತ್ತರ ದಿಕ್ಕನ್ನು ಮೇಲ್ಮುಖವಾಗಿಯೂ, ದಕ್ಷಿಣವನ್ನು ಕೆಳಮುಖವಾಗಿಯೂ ಬಿಡಿಸಿದರು. ಆದರೆ , ಅಲ್ಹಮ್ದುಲಿಲ್ಲಾಹ್, ಕಅಬಾ ಈಗಲೂ ಜಗತ್ತಿನ ಭೂಪಟದ ಕೇಂದ್ರ ಸ್ಥಾನದಲ್ಲಿದೆ.
3. ಆ ದೇವನು ಏಕೈಕನು ಎಂಬುದರ ಸಾಂಕೇತಿಕಾರ್ಥದಲ್ಲಿ ತವಾಫ್ (ಕಅಬಾ ಪ್ರದಕ್ಷಿಣೆ)
ಮಕ್ಕಾದ ಮಸ್ಜಿದುಲ್ ಹರಮ್ನಲ್ಲಿರುವ ಕಅಬಾ ಭವನಕ್ಕೆ ಪ್ರದಕ್ಷಿಣೆ ಬರುವುದನ್ನು ‘ತವಾಫ್' ಎನ್ನುವರು. ಈ ಕಾರ್ಯವು ಏಕದೇವ ವಿಶ್ವಾಸ ಮತ್ತು ಆರಾಧನೆಯ ಸಂಕೇತವಾಗಿದೆ. ಏಕೆಂದರೆ ಇಲ್ಲಿ ಪ್ರದಕ್ಷಿಣೆ ಬರುವ ವೃತ್ತಗಳೆಲ್ಲವೂ ಏಕ ಕೇಂದ್ರೀಯವಾಗಿದೆ. ಅಲ್ಲಾಹನು ಏಕೈಕನು, ಆರಾಧನೆಗೆ ಅವನು ಮಾತ್ರ ಅರ್ಹನು.
4. ಹಜರುಲ್ ಅಸ್ವದ್ ಬಗ್ಗೆ (ಕಪ್ಪು ಶಿಲೆ) ಹಜರತ್ ಉಮರ್(ರ)ರ ಹೇಳಿಕೆ.
ಕಅಬಾ ದ ನಿರ್ಧಿಷ್ಟ ಮೂಲೆಯಲ್ಲಿರುವ ಹಜರುಲ್ ಅಸ್ವದ್ ಅನ್ನು ಚುಂಬಿಸುವಾಗ ಹ. ಉಮರ್ ನುಡಿದ ಮಾತುಗಳು ಹೀಗಿವೆ : “ ನೀನು ಲಾಭವನ್ನೋ ಉಂಟು ಮಾಡಲಾರದ ಕೇವಲ ಒಂದು ಶಿಲೆ ಮಾತ್ರ ಎಂಬುದನ್ನು ನಾನು ಚೆನ್ನಾಗಿ ಬಲ್ಲೆನು. ಪ್ರವಾದಿ (ಸ) ನಿನ್ನನ್ನು ಮುಟ್ಟುವುದನ್ನು (ಚುಂಬಿಸುವುದನ್ನು) ನಾನು ಕಂಡಿರದಿದ್ದಲ್ಲಿ, ನಾನು ಕೂಡಾ ನಿನ್ನನ್ನು ಮುಟ್ಟುವುದನ್ನೋ (ಚುಂಬಿಸುವುದನ್ನೋ) ಮಾಡುತ್ತಿರಲಿಲ್ಲ.
- ( ಬುಖಾರಿ, ಭಾಗ 2, ಅಧ್ಯಾಯ 56, ಹದೀಸ್ ಸಂಖ್ಯೆ 675)
5. ಕಅಬಾ ಭವನದ ಮೇಲೆ ನಿಂತು ಆದಾನ್.
ಪ್ರವಾದಿ (ಸ) ಯವರ ಕಾಲದಲ್ಲಿ ಅವರ ಸಂಗಾತಿಗಳು ಕಅಬಾ ಭವನದ ಮೇಲೆ ಹತ್ತಿ ಆದಾನ್(ನಮಾಜಿಗಾಗಿ ಕೊಡುವ ಕರೆ) ಕೊಡುತ್ತಿದ್ದರು. ಮುಸ್ಲಿಮರು ಕಅಬಾವನ್ನು ಆರಾಧಿಸುವರು ಎಂದು ಆಕ್ಷೇಪಿಸುವವರೊಂದಿಗೆ ಕೇಳಲಿಕ್ಕಿರುವುದು - ‘ಯಾವ ಪೂಜಕನಿಗೆ ತಾನು ಆರಾಧಿಸುವ ಮೂರ್ತಿಯನ್ನೇ ಮೆಟ್ಟಿ ನಿಲ್ಲುವ ಧೈರ್ಯವಿದೆ ?' ಎಂದು ಮಾತ್ರ.
ಉತ್ತರ: ಸೌದಿ ಅರೇಬಿಯಾದ ಕಾನೂನಿನಂತೆ ಮುಸ್ಲಿಮೇತರರರಿಗೆ ಪವಿತ್ರ ಪಟ್ಟಣಗಳಾದ ಮಕ್ಕಾ- ಮದೀನಾಗಳ ಪ್ರವೇಶಾನುಮತಿ ಇಲ್ಲ. ಈ ಕೆಳಗಿನ ಅಂಶಗಳು ಇಂತಹದ್ದೊಂದು ನಿಷೇಧದ ಹಿಂದಿನ ನೈಜ ಕಾರಣಗಳ ಮೇಲೆ ಬೆಳಕನ್ನು ಚೆಲ್ಲುತ್ತವೆ.
1. ಒಂದು ದೇಶದ ಸೇನಾನೆಲೆಗಳಿಗೆ ಸೀಮಿತ ಪ್ರವೇಶಾವಕಾಶ.
ನಾನು ಭಾರತ ದೇಶದ ಒಬ್ಬ ಪ್ರಜೆ. ಆದರೂ ನನಗೆ ಈ ದೇಶದ ಕೆಲವು ಸೇನಾ ನೆಲೆಗಳಿಗೆ ಪ್ರವೇಶಾನುಮತಿಯಿಲ್ಲ. ಎಲ್ಲಾ ದೇಶಗಳಿಗೂ ತಮ್ಮದೇ ಕೆಲವು ವಿಶೇಷ ವಲಯಗಳಿಗೆ ಆ ದೇಶದ ಸಾಮಾನ್ಯ ಪೌರರಿಗೆ ಪ್ರವೇಶಾನುಮತಿ ದೊರಕಲಾರದು. ಆಯಾ ದೇಶದ ರಕ್ಷಣಾ ಖಾತೆಗೆ ಸಂಬಂಧ ಪಟ್ಟ ವಿಶಿಷ್ಟ ವ್ಯಕ್ತಿಗಳಿಗೆ ಮಾತ್ರ ಪ್ರವೇಶಾನುಮತಿ. ಇಸ್ಲಾಮ್ ಒಂದು ಜಾಗತಿಕ ಹಾಗೂ ಸಾರ್ವತ್ರಿಕ ಧರ್ಮವಾಗಿದೆ. ಮಕ್ಕಾ - ಮದೀನಗಳು ಇಸ್ಲಾಮಿನ ಎರಡು ವಿಶಿಷ್ಟ ವಲಯಗಳಾಗಿವೆ. ಈ ವಲಯಗಳನ್ನು ಪ್ರವೇಶಿಸಲಿಚ್ಛಿಸುವವನು ಇಸ್ಲಾಮ್ ಧರ್ಮದ ಅನುಯಾಯಿಯಾಗಿರಬೇಕು. ಈ ಧರ್ಮದ ರಕ್ಷಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡವನಾಗಿರಬೇಕು.
ಒಂದು ರಾಷ್ಟ್ರದ ಸಾಮಾನ್ಯ ಪೌರನೊಬ್ಬನು ತನಗೆ ಆ ರಾಷ್ಟ್ರದ ಸೇನಾನೆಲೆಗಳಿಗೆ ಪ್ರವೇಶಾನುಮತಿ ಇಲ್ಲದ ಕಾರಣಕ್ಕಾಗಿ ಆಕ್ಷೇಪವೆತ್ತುವುದು ಹೇಗೆ ಸರಿಯಲ್ಲವೋ ಅದೇ ರೀತಿ ಅಮುಸ್ಲಿಮನೊಬ್ಬನು ತನಗೆ ಮುಸ್ಲಿಮ್ ರಾಷ್ಟ್ರವೊಂದರ ವಿಶಿಷ್ಟ ವಲಯಗಳಿಗೆ ಪ್ರವೇಶಾನುಮತಿ ನಿರಾಕರಿಸಿದ ಕಾರಣಕ್ಕಾಗಿ ಆಕ್ಷೇಪಿಸುವುದು ಸಮಂಜಸವಲ್ಲ.
2. ವಿದೇಶ ಪ್ರಯಾಣಕ್ಕೆ ವೀಸಾ.
a. ವಿದೇಶ ಪ್ರಯಾಣ ಮಾಡಬಯಸುವ ವ್ಯಕ್ತಿಯು ಆ ದೇಶದ ಪ್ರವೇಶಾನುಮತಿ (ವೀನಾ) ಕೋರಿ ಅರ್ಜಿಸಲ್ಲಿಸಬೇಕಾಗುತ್ತದೆ. ಒಬ್ಬ ವಿದೇಶಿ ಪ್ರಜೆಗೆ ವೀಸಾ ನೀಡುವಾಗ ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಕಾನೂನು ಕಾಯಿದೆಗಳಿವೆ. ಆ ರಾಷ್ಟ್ರವು ಒಡ್ಡುವ ಷರತ್ತುಗಳನ್ನು ಪೂರ್ಣವಾಗಿ ಪಾಲಿಸಿದವನಿಗೆ ಮಾತ್ರ ಪ್ರವೇಶಾನುಮತಿ.
b. ವೀಸಾ ನೀಡುವ ವಿಷಯದಲ್ಲಿ ಅತ್ಯಂತ ಕಠಿಣವಾದ ಷರತ್ತುಗಳನ್ನು ಒಡ್ಡುವ ಒಂದು ದೇಶವೆಂದರೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ : ವಿಶೇಷತ: ತೃತೀಯ ಜಗತ್ತಿನ ಪೌರರಿಗೆ. ಅವರು ಆಗ್ರಹಿಸುವ ಹತ್ತು -ಹಲವು ಷರತ್ತುಗಳಿಗೆ ತಲೆ ಬಾಗಿಸದ ವಿನಹ ನಿಮಗೆ ವೀಸಾ ದೊರಕಲಾರದು.
c. ನಾನೊಮ್ಮೆ ಸಿಂಗಾಪುರಕ್ಕೆ ತೆರಳಿದ್ದಾಗ ಅವರ ವಲಸೆ ಪತ್ರದಲ್ಲಿ ‘ಅಮಲು ಪದಾರ್ಥ ಸಾಗಾಟಕ್ಕೆ ಮರಣ ದಂಡನೆ' ಎಂದಿತ್ತು. ನನಗೆ ಸಿಂಗಾಪುರಕ್ಕೆ ತೆರಳಲೇ ಬೇಕು ಎಂದಿದ್ದಲ್ಲಿ ಆ ನಿಯಮವನ್ನು ಪಾಲಿಸಲೇ ಬೇಕಾಗುವುದು. ಈ ಚಿಲ್ಲರೆ ವಿಷಯಕ್ಕೆ ದಂಡನೆ ಅತಿಯಾಯಿತು ಎನ್ನುವಂತಿಲ್ಲ. ಅವರ ಎಲ್ಲಾ ಆದೇಶಗಳನ್ನು ಬೇಷರತ್ ಪಾಲಿಸಿದಾಗಲೇ ನಿಮಗೆ ವೀಸಾ.
d. ಇಸ್ಲಾಮಿನ ಪವಿತ್ರ ಪಟ್ಟಣಗಳಾದ ಮಕ್ಕಾ- ಮದೀನಾಗಳಿಗೆ ನಿಮಗೆ ವೀಸಾ ದೊರೆಯಬೇಕಾದಲ್ಲಿ ನೀವು ಪಾಲಿಸಬೇಕಾದ ಪ್ರಪ್ರಥಮ ಷರತ್ತು ‘ಲಾ ಇಲಾಹ್ ಇಲ್ಲಲ್ಲಾಹ್ , ಮುಹಮ್ಮದರ್-ರಸೂಲುಲ್ಲಾಹ್' ಅರ್ಥಾತ್ ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲ. ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದುಚ್ಛರಿಸಿ ಅದರಂತೆ ನಡೆಯುವುದಾಗಿದೆ.
ಉತ್ತರ : ಇಸ್ಲಾಮ್ ಹಂದಿಮಾಂಸ ಸೇವನೆಯನ್ನು ನಿಷೇಧಿಸುತ್ತದೆ ಎಂಬುದು ಎಲ್ಲರೂ ತಿಳಿದಿರುವಂಥಾದ್ದೇ. ಹಂದಿಮಾಂಸವು ತ್ಯಾಜ್ಯಯೋಗ್ಯವೇ ಸರಿ ಎಂಬುದನ್ನು ಈ ಕೆಳಗಿನ ಅಂಶಗಳು ಸ್ಪಷ್ಟ ಪಡಿಸುತ್ತವೆ.
1. ಕುರ್ಆನಿನಲ್ಲಿ ಹಂದಿಮಾಂಸ ನಿಷೇಧ.
ಕುರ್ಆನ್ ನಾಲ್ಕು ಸ್ಥಳಗಳಲ್ಲಿ ಹಂದಿ ಮಾಂಸಸೇವನೆಯನ್ನು ನಿಷೇಧಿಸಿದೆ.
“ ನಿಮಗೆ ನಿಷಿದ್ಧ ವಸ್ತುಗಳು ಶವ, ರಕ್ತ, ಹಂದಿ ಮಾಂಸ, ಅಲ್ಲಾಹನ ಹೊರತು ಇತರರ ಹೆಸರಿನಲ್ಲಿ ದಿಬ್ಹ್ ಮಾಡಲ್ಪಟ್ಟ ಪ್ರಾಣಿ...." (ಕುರ್ಆನ್ 5:3)
ಒಬ್ಬ ಮುಸ್ಲಿಮನಿಗೆ ಒಂದು ವಸ್ತು ಅಥವಾ ವಿಷಯವನ್ನು ಸಂಪೂರ್ಣವಾಗಿ ತೊರೆಯಲು ಕುರ್ಆನಿನ ಚಿಕ್ಕದೊಂದು ಸೂಕ್ತಿಯೇ ಧಾರಾಳ ಸಾಕು. ಕುರ್ಆನ್ ಹೇಳಿತೆಂದರೆ ಮುಗಿಯಿತು.
ನಿಷೇಧವನ್ನು ವಿಧಿಸುವ ಇತರ ಸೂಕ್ತಿಗಳು 2: 173, 6: 145, 16: 115.
2. ಹಂದಿ ಮಾಂಸವನ್ನು ನಿಷೇಧಿಸುವ ಬೈಬಲ್.
ಈ ಬಗ್ಗೆ ಒಬ್ಬ ಕ್ರೈಸ್ತನಿಗೆ ಬೈಬಲ್ ಮೂಲಕ ಮನವರಿಕೆ ಮಾಡಿಕೊಟ್ಟರೆ ಅದುವೇ ಧಾರಾಳವಾಗಬಹುದು ಎಂದು ನನ್ನ ಅನಿಸಿಕೆ. ಈ ಕೆಳಗಿನ ಸ್ಥಳಗಳಲ್ಲಿ ಬೈಬಲ್ ಕೂಡ ಹಂದಿ ಮಾಂಸವನ್ನು ನಿಷೇಧಿಸುತ್ತದೆ.
a. “ಹಂದಿಯ ಗೊರಸು ಸೀಳಿದೆ. ಆದರೂ ಅವು ಮೆಲುಕು ಹಾಕುವುದಿಲ್ಲವಾದ್ದರಿಂದ ಅದು ನಿಮಗೆ ಅಶುದ್ಧ. ಇವುಗಳ ಮಾಂಸವನ್ನು ನೀವು ತಿನ್ನ ಬಾರದು. ಅವುಗಳ ಹೆಣವನ್ನು ನೀವು ಮುಟ್ಟಬಾರದು."
(ಯಾಜಕ ಕಾಂಡ (Leviticus) 11: 7,8 )b. “ಹಂದಿಯ ಗೊರಸು ಸೀಳಿದ್ದರೂ ಅದು ಮೆಲಕು ಹಾಕುವುದಿಲ್ಲವಾದುದರಿಂದ ಅದು ನಿಮಗೆ ಅಶುದ್ಧ. ಇವುಗಳ ಮಾಂಸವನ್ನು ನೀವು ತಿನ್ನಕೂಡದು. ಇವುಗಳ ಹೆಣವನ್ನು ನೀವು ಮುಟ್ಟಕೂಡದು."
( ಧರ್ಮೋಪದೇಶ ಕಾಂಡ (Deuteronomy) 14: 8)
ಯೆಶಾಯ (Isaiah) ಪುಸ್ತಕದ 65ನೆ ಅಧ್ಯಾಯದ 2, 3 ವಚನಗಳಲ್ಲೂ ಹಂದಿಮಾಂಸ ನಿಷೇಧಿಸಲ್ಪಟ್ಟಿದೆ.
3. ಹಂದಿ ಮಾಂಸದಿಂದ ಹಲವು ರೋಗಗಳು.
ಇಲ್ಲಿ ತಿಳಿಸಿದ ಕುರ್ಆನ್ ಹಾಗೂ ಬೈಬಲಿನ ಸೂಕ್ತಿಗಳು ಮುಸ್ಲಿಮ್ ಹಾಗೂ ಕ್ರೈಸ್ತ ಸಹೋದರರಿಗೆ ಸಾಕಾಗಬಹುದಾದರೂ ಅನ್ಯಧರ್ಮೀಯರು ಹಾಗೂ ನಿರೀಶ್ವರವಾದಿಗಳು ಇದನ್ನು ಒಪ್ಪಲಾರರು. ಇವರಿಗೆ ಮನವರಿಕೆ ಮಾಡಬೇಕಾದಲ್ಲಿ ಯುಕ್ತಿ ಹಾಗೂ ವಿಜ್ಞಾನದ ನೆರವು ಬೇಕಾಗುತ್ತದೆ. ಹಂದಿ ಮಾಂಸ ಸೇವನೆಯಿಂದ ಸುಮಾರು ಎಪ್ಪತ್ತು ವಿಧದ ರೋಗಗಳು ಬಾಧಿಸುವ ಸಾಧ್ಯತೆಗಳಿವೆ. ಮನಷ್ಯ ದೇಹವು ರೌಂಡ್ವರ್ಮ್, ಪಿನ್ವರ್ಮ್ , ಹುಕ್ವರ್ಮ್, (ಕೊಕ್ಕೆ ಹುಳ) ಮುಂತಾದ ರೋಗಕಾರಕ ಕ್ರಿಮಿಗಳ ತಾಣವಾಗಿ ಮಾರ್ಪಡಬಹುದು . ತೇನಿಯಾ ಸೋಲಿಯಮ್ (Taenia solium) ಎಂಬುದು ಅತ್ಯಂತ ಅಪಾಯಕಾರಿಯಾಗಿದ್ದು ಇದನ್ನು ಆಡುಭಾಷೆಯಲ್ಲಿ ಟೇಪ್ವರ್ಮ್ (Tapeworm) ಎನ್ನುವರು. ಅತ್ಯಂತ ಉದ್ದವಾಗಿರುವ ಇದರ ತಾಣವೇ ಕರುಳು. ರಕ್ತಪ್ರವಾಹವನ್ನು ಪ್ರವೇಶಿಸುವ ಇದರ ಮೊಟ್ಟಗಳು ದೇಹದ ಎಲ್ಲಾ ಅಂಗಗಳನ್ನೂ ಸೇರಬಲ್ಲದು. ಇದು ಮೆದುಳನ್ನು ಪ್ರವೇಶಿಸಿದಲ್ಲಿ ಜ್ಞಾಪಕಶಕ್ತಿಯನ್ನು ಕಳಕೊಳ್ಳುವ ಸಾಧ್ಯತೆಗಳಿವೆ. ಹೃದಯವನ್ನು ಪ್ರವೇಶಿಸಿದಲ್ಲಿ ಹೃದಯಾಘಾತವೂ, ಕಣ್ಣುಗಳಿಗೆ ಪ್ರವೇಶಿಸಿದಲ್ಲಿ ಅಂಧತ್ವ ಮತ್ತು ಪಿತ್ಥಕೋಶಕ್ಕೆ ಪ್ರವೇಶಿಸಿದಿಲ್ಲಿ ಅದನ್ನೂ ಘಾಸಿಗೊಳಿಸುವ ಸಾಧ್ಯತೆಗಳಿವೆ. ಹೀಗೆ ಇದು ದೇಹದ ಎಲ್ಲಾ ಅಂಗಗಳನ್ನೂ ಬಾಧಿಸುವ ಅಪಾಯವಿದೆ.
‘ಟ್ರಿಕುರಾ ಟಿಕುರಾಸಿಸ್'(Trichura Tichurasis) ಎಂಬುದು ಹಂದಿಮಾಂಸದ ಮೂಲಕ ಹರಡುವ ಇನ್ನೊಂದು ಅತ್ಯಂತ ಅಪಾಯಕಾರೀ ಹುಳವಾಗಿದೆ. ಹಂದಿ ಮಾಂಸವನ್ನು ಚೆನ್ನಾಗಿ ಬೇಯಿಸಿದಲ್ಲಿ ಇಂತಹ ಹುಳಗಳಿಂದ ಮುಕ್ತಿ ಹೊಂದಬಹುದು ಎಂದು ಬಹಳಷ್ಟು ಜನರು ಭಾವಿಸಿಕೊಂಡಿರುವರು. ವಾಸ್ತವದಲ್ಲಿ ಇದೊಂದು ತಪ್ಪು ತಿಳುವಳಿಕೆ ಮಾತ್ರ ಅಮೆರಿಕಾದ ಸಂಶೋಧನಾ ಶಿಬಿರಗಳಲ್ಲಿ ನಡೆದ ಸಂಶೋಧನೆಗಳು ‘ಬೇಯಿಸಿ ಬಚಾವಾಗುವ' ತಂತ್ರಗಳ ಪೊಳ್ಳುತನವನ್ನು ಬಯಲಿಗೆಳೆದಿವೆ. ಟ್ರಿಕುರಾ ಟಿಕುರಾಸಿಸ್ ಪೀಡಿತರಾದ 24 ರೋಗಿಗಳಲ್ಲಿ 20 ಮಂದಿ ಹಂದಿ ಮಾಂಸವನ್ನು ಬೇಯಿಸಿಯೇ ತಿಂದಿದ್ದರು. ಇದು ಪೋರ್ಕ್(ಹಂದಿಮಾಂಸ)ನಲ್ಲಿರುವ ರೋಗಾಣು ಮೊಟ್ಟೆಗಳ (Ova)ಕುದಿಯುವ ಉಷ್ಣತೆಯಲ್ಲಿ ನಾಶ ಹೊಂದಲಾರವು ಎಂಬುದನ್ನು ಸ್ಪಷ್ಟಪಡಿಸುತ್ತವೆ.
4. ಕೊಬ್ಬು ಶೇಖರಣಾ ಅಂಶ ಹಂದಿ ಮಾಂಸದಲ್ಲಿ ಅತ್ಯಧಿಕ.
ಹಂದಿಮಾಂಸದಲ್ಲಿ ಸ್ನಾಯುವರ್ಧಕ ಅಂಶಗಳು ಅತ್ಯಲ್ಪ ಮತ್ತು ಕೊಬ್ಬಿನಾಂಶಗಳು ಅತ್ಯಧಿಕವಾಗಿದೆ. ಕೊಬ್ಬಿನ ಅಂಶಗಳು ರಕ್ತನಾಳಗಳಲ್ಲಿ ಶೇಖರಿಸಲ್ಪಟ್ಟು ಅಧಿಕ ರಕ್ತದೊತ್ತಡ ಹಾಗೂ ಹೃದಯಾಘಾತಕ್ಕೆ ಕಾರಣವಾಗುತ್ತವೆ. ಅಮೆರಿಕಾದ 50 ಶೇಖಡಾಕ್ಕಿಂತಲೂ ಅಧಿಕ ಮಂದಿಗೆ ಹೈಪರ್ಟೆಂಶನ್ (ಅಧಿಕ ರಕ್ತದೊತ್ತಡ) ಇರುವುದರಲ್ಲಿ ಆಶ್ಚರ್ಯಪಡಬೇಕಾಗಿಲ್ಲ.
5. ಹಂದಿ ಪ್ರಾಣಿಗಳಲ್ಲೇ ಅತ್ಯಂತ ಕೊಳಕು.
ಹಂದಿಯು ಜಗತ್ತಿನ ಅತ್ಯಂತ ಕೊಳಕು ಪ್ರಾಣಿಗಳ ಪೈಕಿ ಒಂದಾಗಿದೆ. ಇದು ಕೊಳಕಿನಲ್ಲಿಯೇ ಜೀವಿಸಿ ಬೆಳೆಯುವ ಪ್ರಾಣಿಯಾಗಿದೆ. ನನ್ನ ಅನಿಸಿಕೆಯಂತೆ ದೇವರು ಸೃಷ್ಟಿಸಿದ ಅತ್ಯುತ್ತಮ ಜಾಡಮಾಲಿ. ಸುಸಜ್ಜಿತ ಪಾಯಿಖಾನೆಗಳಿಲ್ಲದ ಹಳ್ಳಿಗರು ತೆರೆದ ಮೈದಟನದಲ್ಲೇ ತಮ್ಮ ಪ್ರಕೃತಿ ಕರೆಗೆ ಓ ಗೊಡುವರು. ಹಂದಿಗಳು ಕ್ಷಣಾರ್ಧಸಲ್ಲೇ ಇವನ್ನು ತಿಂದು ಸ್ವಚ್ಛ ಮಾಡಿಬಿಡುತ್ತವೆ.
ಮುಂದುವರಿದ ರಾಷ್ಟ್ರಗಳಾದ ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಹಂದಿಗಳನ್ನು ಸುವ್ಯವಸ್ಥಿತ ರೀತಿಯಲ್ಲಿ. ಶುದ್ಧ ಪರಿಸರದಲ್ಲಿ ಸಾಕುತ್ತಾರೆ ಎಂಬ ವಾದ ಕೆಲವರಿಗಿದೆ. ಆದರೆ ಅವುಗಳನ್ನು ಶುದ್ಧವಾಗಿಡಲು ನೀವೆಷ್ಟೇ ಪ್ರಯತ್ನ ಪಟ್ಟರೂ ಅದು ತನ್ನ ಪ್ರಕೃತಿದತ್ತ ಕೊಳಕುತನವನ್ನು ಬಿಡಲಾರದು. ತನ್ನ ಸಂಗಾತಿಯದ್ದನ್ನು; ಅದೂ ಸಿಗದಿದ್ದಲ್ಲಿ ಸ್ವಂತದ್ದನ್ನೇ ಸ್ವಾಹಾ ಮಾಡಿ ಮುಗಿಸುತ್ತವೆ.
6. ಹಂದಿಯು ಅತ್ಯಂತ ಲಜ್ಜಾಹೀನ ಪ್ರಾಣಿ.
ಹಂದಿಯು ಜಗತ್ತಿನ ಅತ್ಯಂತ ಲಜ್ಜಾಹೀನ ಪ್ರಾಣಿಯೂ ಆಗಿದೆ. ತನ್ನ ಸಂಗಾತಿಯ ಜೊತೆ ಕಾಮಕೇಳಿ ನಡೆಸಲು ತನ್ನ ಗೆಳೆಯರನ್ನೇ ಆಹ್ವಾನಿಸಿ ಖುಷಿ ಪಡುವ ಏಕೈಕ ಪ್ರಾಣಿಯಾಗಿದೆ. ಅಮೆರಿಕನ್ನರ ಪೈಕಿ ಹೆಚ್ಚಿನವರು ಪೋರ್ಕ್ ಪ್ರಿಯರು . ಇವರಲ್ಲಿ ಚಾಲ್ತಿಯಿರುವ ನೃತ್ಯ ಕೂಟಗಳ ಬಳಿಕ ಸ್ವೇಪಿಂಗ್ (Swapping) ಅರ್ಥಾತ್ ‘ಪತ್ನಿಯರ ವಿನಿಮಯ' ಎಂಬ ಕಾರ್ಯಕ್ರಮವೂ ಇರುತ್ತದೆ. ‘ ಈ ರಾತ್ರಿ ನಿನ್ನ ಪತ್ನಿ ನನಗೆ, ನನ್ನ ಪತ್ನಿ ನಿನಗೆ '. ಸೇವಿಸುವ ಆಹಾರವು ಸ್ವಭಾವದ ಮೇಲೆ ಪರಿಣಾಮ ಬೀರುತ್ತದೆ ಎಂಬ ಇವರ ತಿರುಮಂತ್ರವು ಸರಿಯಾಗಿಯೇ ಇದೆ. ಹಂದಿ ಮಾಂಸ ತಿಂದವರಿಗೆ ಸ್ವಭಾವವೂ ಅದರದೇ ಅಂಟಿಕೊಂಡಿದೆ. ಅಮೆರಿಕದವರನ್ನು ಉನ್ನತರೆಂದು ಭ್ರಮಿಸಿಕೊಂಡಿರುವ ಭಾರತೀಯರಾದ ನಾವು ಕೆಲವು ವರ್ಷಗಳ ಬಳಿಕ ಅವರ ಬೆನ್ನು ಹತ್ತುತ್ತೇವೆ. ಮ್ಯಾಗಸಿನ್ (island magazine) ಒಂದರ ವರದಿಯಂತೆ ಮುಂಬಯಿಯ ಶ್ರೀಮಂತ ವರ್ತುಲಗಳಲ್ಲಿ ‘ಸ್ವೇಪಿಂಗ್' ಪದ್ಧತಿಯು ಸಾಮಾನ್ಯವಾಗಿದೆ.
ಉತ್ತರ: ಅಮಲು ಪದಾರ್ಥಗಳು ಅನಾದಿ ಕಾಲದಿಂದಲೇ ಮನುಷ್ಯ ಸಮುದಾಯಕ್ಕೊಂದು ಶಾಪವಾಗಿದೆ. ಮನುಷ್ಯ ಸಮುದಾಯಕ್ಕೆ ಘೋರ ವಿಪತ್ತಾಗಿರುವ ಮದ್ಯವು, ಅಸಂಖ್ಯಾತ ಮಾನವ ಜೀವಗಳನ್ನು ಬಲಿ ತೆಗೆದುಕೊಳ್ಳುವ ತನ್ನ ಹಳೇ ಚಾಳಿಯನ್ನು ಇಂದು ಕೂಡಾ ಮುಂದುವರಿಸಿ ಕೊಂಡಿದೆ. ಸಮುದಾಯವು ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳ ಮೂಲ ಕಾರಣಗಳಲ್ಲಿ ಒಂದು ಮಧ್ಯವಾಗಿದೆ. ಏರುತ್ತಿರುವ ಅಪರಾಧಗಳ ಸಂಖ್ಯೆ , ಹೆಚ್ಚುತ್ತಿರುವ ಮಾನಸಿಕ ರೋಗಿಗಳು, ಒಡೆದು ಛಿದ್ರವಾಗುತ್ತಿರುವ ಕುಟುಂಬ ಸಂಬಂಧಗಳು ಅಮಲು ಪದಾರ್ಥ ಸೇವನೆಯ ವಿನಾಶಕಾರೀ ಪರಿಣಾಮಕ್ಕೆ ಮೂಕ ಸಾಕ್ಷಿಗಳಾಗಿವೆ.
1. ಕುರ್ಆನಿನಲ್ಲಿ ಅಮಲು ಪದಾರ್ಥ ನಿಷೇಧ.
“ ಓ, ಸತ್ಯವಿಶ್ವಾಸಿಗಳೇ, ಮದ್ಯ, ಜೂಜು, ಅನ್ಸಾಬ್ (ಬಲಿಪೀಠಗಳು), ಮತ್ತು ಅಝ್ಲಾಮ್(ದಾಳ ಹಾಕುವುದು) ಇವೆಲ್ಲ ಹೊಲಸು ಪೈಶಾಚಿಕ ಕೃತ್ಯಗಳಾಗಿವೆ. ಅವುಗಳನ್ನು ವರ್ಜಿಸಿರಿ. ನಿಮಗೆ ಯಶಸ್ಸು ಲಭಿಸಬಹುದು." (ಕುರ್ಆನ್ 5 : 90 )
2. ಬೈಬಲಿನಲ್ಲಿ ಅಮಲು ಪದಾರ್ಥ ನಿಷೇಧ.
ಬೈಬಲ್ ಕೂಡಾ ಮದ್ಯಪಾನವನ್ನು ನಿಷೇಧಿಸುತ್ತದೆ.
a. “ದ್ರಾಕ್ಷಾರಸವು ಪರಿಹಾಸ್ಯ , ಮದ್ಯವು ಕೂಗಾಟ, ಇವುಗಳಿಂದ ಓಲಾಡುವವನು ಜ್ಞಾನಿಯಲ್ಲ" [ಜ್ಞಾನೋಕ್ತಿಗಳು (proverbs) 20 : 1,2 ]
b. “ಮದ್ಯಪಾನ ಮಾಡಿ ಮತ್ತರಾಗಬೇಡಿ, ಅದರಿಂದ ಫಟಿಂಗತನವು ಹುಟ್ಟುತ್ತದೆ" [ಎಫೆಸದವರಿಗೆ (Ephesians) 5 : 18 ]
3. ಮದ್ಯಪಾನದಿಂದ ‘ಇನ್ಹಿಬಿಟರಿ ಕೇಂದ್ರ' (Inhibitory) ಸ್ಥಗಿತ.
ಮಾನವ ಮೆದುಳಿನಲ್ಲಿ ಇನ್ಹಿಬಿಟರಿ ಕೇಂದ್ರ (Inhibitory) ಎಂಬ ಭಾಗವಿದೆ. ತಪ್ಪಾದ ಒಂದು ಕಾರ್ಯವನ್ನು ಮನುಷ್ಯನು ಮಾಡುವಾಗ ಅವನ ಇನ್ಹಿಬಿಟರಿ ಕೇಂದ್ರಗಳು ಅವನನ್ನು ತಡೆಯುತ್ತವೆ. ಉದಾಹರಣೆಗೆ ಒಬ್ಬ ವ್ಯಕ್ತಿಯು ತನ್ನ ತಂದೆ-ತಾಯಿ ಅಥವಾ ಹಿರಿಯರೊಂದಿಗೆ ಮಾತನಾಡುವಾಗ ಸಭ್ಯ ಭಾಷೆಯನ್ನು ಬಳಸಿ ಮಾತನಾಡುತ್ತಾನೆ. ಅವರ ಮುಂದೆ ಅವಾಚ್ಯ ಪದಗಳನ್ನು ಬಳಸುವುದನ್ನು ಅವನ ಇನ್ಹಿಬಿಟರಿ ಕೇಂದ್ರವು ಅವನನ್ನು ತಡೆಯುತ್ತದೆ. ಒಬ್ಬ ವ್ಯಕ್ತಿಯು ಬಹಿರಂಗವಾಗಿ ಮಲವಿಸರ್ಜನೆ ಮಾಡುವುದನ್ನು ಅವನ ಇನ್ಹಿಬಿಟರಿ ಕೇಂದ್ರಗಳು ತಡೆಯುತ್ತವೆ. ಆದುದರಿಂದಲೇ ಅವನು ತನ್ನ ಪ್ರಕೃತಿದತ್ತ ಕರೆಗೆ ಓಗೊಡಲು ಪಾಯಿಖಾನೆಯನ್ನು ಬಳಸುತ್ತಾನೆ.
ಒಬ್ಬ ವ್ಯಕ್ತಿಯು ಅಮಲು ಪದಾರ್ಥ ಅಥವಾ ಮದ್ಯಪಾನ ಮಾಡಿದಲ್ಲಿ ಲಜ್ಜಾಹೀನ ಕಾರ್ಯಗಳಿಂದ ಅವನನ್ನು ತಡೆಯುವ ಕೇಂದ್ರಗಳೇ(ಇನ್ಹಿಬಿಟರಿ ಕೇಂದ್ರ) ಸ್ವಯಂ ತಡೆಯಲ್ಪಡುತ್ತವೆ. ಆದುದರಿಂದಲೇ ಮದ್ಯದ ನಿಶೆಯಲ್ಲಿರುವ ವ್ಯಕ್ತಿಯು ತನ್ನ ಸಹಜ ಸ್ವಭಾವಕ್ಕೆ ವಿರುದ್ಧವಾಗಿ ವರ್ತಿಸುತ್ತಾನೆ. ತನ್ನ ಸ್ವಂತ ತಂದೆ -ತಾಯಂದಿರಾದರೂ ಬಳಸುವುದು ಅವಾಚ್ಯ ಪದಗಳನ್ನೇ. ಕೆಲವೊಮ್ಮೆ ಉಟ್ಟ ಬಟ್ಟೆಯಲ್ಲೇ ಮಲಮೂತ್ರ ವಿಸರ್ಜನೆ ಮಾಡಿಕೊಂಡಿರುವುದನ್ನೂ ಕಾಣಬಹುದು. ನೇರವಾಗಿ ನಡೆಯಲಾರ, ಸರಿಯಾದ ಮಾತನ್ನೂ ಆಡಲಾರ.
4. ಅಪರಾಧಗಳಲ್ಲಿ ಕುಡುಕರ ಪಾಲು ಅಧಿಕ.
ವ್ಯಭಿಚಾರ, ಅತ್ಯಾಚಾರ ಮುಂತಾದ ಅಪರಾಧಗಳು ಮಾತ್ರವಲ್ಲದೆ ಏಡ್ಸ್ ಪ್ರಕರಣಗಳಲ್ಲೂ ಅಧಿಕ ಪಾಲು ಅಮಲು ಪದಾರ್ಥ ಮತ್ತು ಮದ್ಯಪಾನಿಗಳದೇ ಆಗಿದೆ. “ ನ್ಯಾಷನಲ್ ಕ್ರೈಮ್ ವಿಕ್ಟಿಮೈಸೇಶನ್ ಸರ್ವೇ ಬ್ಯೂರೋ ಆಫ್ ಜಸ್ಟಿಸ್" (ಯು.ಎಸ್.ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್) ಕೈಗೊಂಡ ಒಂದು ಸಮೀಕ್ಷೆಯ ಪ್ರಕಾರ 1996 ರಲ್ಲಿ ನಡೆದ ಅತ್ಯಾಚಾರಗಳ ಸರಾಸರಿ ಸಂಖ್ಯೆ 2713. ಅಪರಾಧವೆಸಗಿದವರಲ್ಲಿ ಅಧಿಕ ಜನರೂ ಅಪರಾಧವೆಸಗುವ ಸಮಯದಲ್ಲಿ ಮದ್ಯಪಾನ ಅಥವಾ ಅಮಲು ಪದಾರ್ಥ ಸೇವನೆಗೈದವರಾಗಿದ್ದರು.
ಆಪ್ತ ಬಂಧುಗಳು ಅಥವಾ ಕುಟುಂಬಸ್ತರ ಮೇಲೆ ಎಸಗುವ ಲೈಂಗಿಕ ದೌರ್ಜನ್ಯವನ್ನು ಆಂಗ್ಲ ಭಾಷೆಯಲ್ಲಿ ‘ಇನ್ಸಿಸ್ಟ್' ಎನ್ನುವರು. ಒಂದು ಸಮೀಕ್ಷೆಯ ಪ್ರಕಾರ ಅಮೆರಿಕನ್ನರಲ್ಲಿ ಶೇಕಡಾ 8 ರಷ್ಟು ಮಂದಿ ಈ ಅಪರಾಧವನ್ನೆಸಗುವವರು. ಅರ್ಥಾತ್ ಪ್ರತೀ ಹನ್ನೆರಡು ಅಥವಾ ಹದಿಮೂರು ಅಮೆರಿಕಾ ಪೌರರ ಪೈಕಿ ಒಬ್ಬ ತನ್ನದೇ ಬಂಧುಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಅಪರಾಧಿ. ಹೆಚ್ಚಿನ ಎಲ್ಲಾ ಪ್ರಕರಣಗಳಲ್ಲೂ ಒಬ್ಬ ಅಥವಾ ಇಬ್ಬರೂ ನಶೆಗೀಡಾದ ಸ್ಥಿತಿಯಲ್ಲೇ ಅಪರಾಧ ಎಸಗಲ್ಪಟ್ಟಿರುವುದು ಕಂಡು ಬಂದಿದೆ.
ಮನುಷ್ಯ ಕುಲಕ್ಕೇ ಮಹಾ ಬೆದರಿಕೆಯಾಗಿರುವ ‘ಏಡ್ಸ್' ರೋಗದ ಹಬ್ಬುವಿಕೆಯಲ್ಲಿ ಅಮಲು ಪದಾರ್ಥಗಳ ಪಾತ್ರವು ಅತ್ಯಧಿಕವಾಗಿದೆ.
5. ಪ್ರತಿಯೊಬ್ಬ ಕುಡುಕನೂ ಆರಂಭದಲ್ಲಿ ‘ ಸೋಷಿಯಲ್ ಡ್ರಿಂಕರ್'.
ತಮ್ಮನ್ನು ತಾವೇ ‘ಸೋಷಿಯಲ್ ಡ್ರಿಂಕರ್'* ಎಂಬ ಸಭ್ಯ ಹೆಸರಿನಿಂದ ಕರೆದುಕೊಂಡು ಕೆಲವರು ಮದ್ಯದ ಪರವಾಗಿ ವಾದಿಸುವುದೂ ಇದೆ. 'ನಾವು ಫ್ರೆಂಡ್ಶಿಪ್ ಪಾರ್ಟಿಗಳಲ್ಲಿ , ಅದೂ ಸಹ ಒಂದೆರಡು ಪೆಗ್ಗಳಷ್ಟನ್ನು ಮಾತ್ರ ಏರಿಸಿಕೊಳ್ಳುವವರು, ನಿಯಂತ್ರಣ ಕಳಕೊಳ್ಳುವಷ್ಟು ಎಂದೂ ಸೇವಿಸಿಲ್ಲ' ಎಂದೆಲ್ಲಾ ಈ ಜನರು ವಾದಿಸುವರು. ಆದರೆ ಪ್ರತಿಯೊಬ್ಬ ಕುಡುಕನೂ ಆರಂಭದಲ್ಲಿ ಒಬ್ಬ ‘ಸೋಷಿಯಲ್ ಡ್ರಿಂಕರ್' ಎಂದು ಸಂಶೋಧಕರು ಹೇಳುತ್ತಾರೆ. ಕುಡಿತವನ್ನು ಆರಂಭಿಸಿದ್ದು ಸೋಷಿಯಲ್ ಡ್ರಿಂಕರ್ ಎಂಬ ಸಭ್ಯ ಲೇಬಲಿನಲ್ಲಿ ಎಂಬುದು ಒಂದು ವಾಸ್ತವಿಕತೆ. ಆದುದರಿಂದ ಯಾವುದೇ ಸೋಷಿಯಲ್ ಡ್ರಿಂಕರ್ ಕೂಡಾ ತನ್ನ ಸುದೀರ್ಘ ಕಾಲದ ಕುಡಿತದ ಚಟವನ್ನು ಪುರಾವೆಯಾಗಿಟ್ಟು ನಾನೊಂದು ಸಲವೂ ಮಿತಿ ಮೀರಿಲ್ಲ ಎನ್ನುವ ಹಾಗಿಲ್ಲ. (* ಇಲ್ಲಿ ವಿಷಪ್ರಾಶನದಿಂದ ಮರಣ ಎಂಬುದು ಒಂದು ಸಾಮಾನ್ಯ ನಿಯಮ. ಆದರೆ ಬದುಕುಳಿದವರೂ ಇಲ್ಲವೆಂದಿಲ್ಲ. ಆದರೆ ಇಂತಹ ಅಪವಾದಗಳೆನ್ನಬಹುದಾದ ಪ್ರಕರಣಗಳನ್ನು ಎತ್ತಿಕೊಂಡು ವಿಷಪದಾರ್ಥದ ಪರವಾಗಿ ವಾದಿಸಲಾಗದು : ಅನುವಾದಕ )
6. ಒಮ್ಮೆ ಅಂಟಿದ ಕಳಂಕ ಜೀವನ ಪರ್ಯಂತ.
‘ಸೋಷಿಯಲ್ ಡ್ರಿಂಕರ್'ನಿಂದ ಅಕಸ್ಮಾತ್ ತಪ್ಪಿದ ನಿಯಂತ್ರಣವು ಅವನ ಪೂರ್ತಿ ಜೀವನಕಾಲದ ಸಾಧನೆಯನ್ನೇ ಮಸುಕಾಗಿಸಬಹುದು. ನಶೆಯಿಂದಾಗಿ ಸಂಭವಿಸಿದ ಅಕಸ್ಮಿಕ ಅಚಾರ್ತುರ್ಯದ ಕಳಂಕವು ಜೀವನಪೂರ್ತಿ ಅಂಟಿಕೊಳ್ಳಬಹುದು. ಅಪರಾಧಿ ಮತ್ತು ಅಪರಾಧಕ್ಕೀಡಾದವನಿಗೆ ಆಗುವ ನಷ್ಟವು ಭರಿಸಲಾರದ್ದು ; ಅದೇಷ್ಟೇ ಪಶ್ಚಾತಾಪ ಪಟ್ಟರೂ ಸರಿ.
7. ಪ್ರವಾದಿ (ಸ) ವಚನಗಳಲ್ಲಿ ಅಮಲು ಪದಾರ್ಥ ನಿಷೇಧ.
ಪ್ರವಾದಿ ಮುಹಮ್ಮದ್(ಸ) ಹೇಳಿದರು:
a. “ ಅಮಲು ಪದಾರ್ಥವು ಎಲ್ಲಾ ಕೆಡಕುಗಳ ತಾಯಿ ಮತ್ತು ಕೆಡಕುಗಳ ಪೈಕಿ ಅತ್ಯಂತ ಲಜ್ಜಾಹೀನ " (ಸುನನ್ ಇಬ್ನು ಮಾಜ:, ಭಾಗ 3, ಅಧ್ಯಾಯ 30, ಹದೀಸ್ ಸಂಖ್ಯೆ 3371)
b. “ ಒಂದು ವಸ್ತುವಿನ ದೊಡ್ಡ ಪ್ರಮಾಣವು ಅಮಲುಂಟು ಮಾಡುವುದಾದಲ್ಲಿ ಅದರ ಚಿಕ್ಕ ಪ್ರಮಾಣದ ಸೇವನೆಯೂ ಹರಾಮ್ (ನಿಷಿದ್ಧ)". (ಇಬ್ನು ಮಾಜ:, ಭಾಗ 3, ಅಧ್ಯಾಯ 39, ಹದೀಸು ಸಂಖ್ಯೆ 3392 )
c. ಅಮಲು ಪದಾರ್ಥ ಸೇವಿಸುವವರನ್ನು ಮಾತ್ರ ಅಲ್ಲಾಹನು ಶಪಿಸಿರುವುದಲ್ಲ. ಬದಲಾಗಿ ಆ ಕಾರ್ಯದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾದ ಎಲ್ಲರನ್ನೂ ಶಪಿಸಿರುವನು.“ಅನಸ್ (ರ) ವರದಿ ಮಾಡುತ್ತಾರೆ; ಪ್ರವಾದಿ ಮುಹಮ್ಮದ್(ಸ) ಹೇಳಿದರು: ‘ಅಮಲು ಪದಾರ್ಥ ವಿಷಯದಲ್ಲಿ ಭಾಗಿಯಾದ ಹತ್ತು ವರ್ಗದ ಜನರ ಮೇಲೆ ಅಲ್ಲಾಹನ ಶಾಪವಿದೆ. ಅದನ್ನು ಭಟ್ಟಿ ಇಳಿಸುವವನು, ಯಾರಿಗಾಗಿ ಭಟ್ಟಿ ಇಳಿಸಲಾಯಿತೋ ಅವನು, ಅದನ್ನು ಸೇವಿಸುವವನು, ಅದನ್ನು ಸಾಗಿಸುವವನು, ಯಾರಿಗಾಗಿ ಸಾಗಿಸಲಾಯಿತೋ ಅವನು, ಅದನ್ನು ವಿತರಿಸುವವನು, ಯಾರಿಗಾಗಿ ವಿತರಿಸಲಾಯಿತೋ ಅವನು, ಅದನ್ನು ಮಾರುವವನು, ಅದರ ಆದಾಯವನ್ನು ಬಳಸುವವನು, ಅದರ ಖರೀದಿದಾರನು, ಇತರರಿಗಾಗಿ ಅದನ್ನು ಖರೀದಿಸುವವನು". ( ಸುನನ್ ಇಬ್ನು ಮಾಜ: ಭಾಗ 3, ಅಧ್ಯಾಯ 30, ಹದೀಸು ಸಂಖ್ಯೆ 3380)
8. ಮದ್ಯಪಾನ ಸಂಬಂಧಿತ ರೋಗಗಳು.
ಮದ್ಯಪಾನ ಅಥವಾ ಅಮಲು ಪದಾರ್ಥಸೇವನೆ ನಿಷೇಧವನ್ನು ವಿಜ್ಞಾನ ಕೂಡಾ ತನ್ನದೇ ಆದ ಕೆಲವು ಕಾರಣಗಳನ್ನು ನೀಡಿ ಸಮರ್ಥಿಸುತ್ತದೆ. ಜಗತ್ತಿನಲ್ಲಿ ನಿರ್ಧಿಷ್ಠ ಕಾರಣದಿಂದಾಗಿ ಉಂಟಾಗುವ ಗರಿಷ್ಟ ಮರಣಗಳು ಮದ್ಯಪಾನ ಸಂಬಂಧಿತವಾಗಿದೆ. ಮದ್ಯಪಾನದಿಂದಾಗಿ ವರ್ಷಂಪ್ರತಿ ಮರಣ ಹೊಂದುವವರ ಸಂಖ್ಯೆ ದಶಲಕ್ಷಕ್ಕೂ ಅಧಿಕ . ಈ ಕೆಳಗೆ ಮದ್ಯಪಾನ ಸಂಬಂಧಿತ ರೋಗಗಳ ಪುಟ್ಟದೊಂದು ಪಟ್ಟಿಯನ್ನು ನೀಡಲಾಗಿದೆ.
a. ಸಿರೋಸಿಸ್ ಆಫ್ ಲಿವರ್ (cirrhosis of liver).
b. ಕ್ಯಾನ್ಸರ್ ಆಫ್ ಇಸೋಫೇಗಸ್, ತಲೆ, ಕುತ್ತಿಗೆ ಮತ್ತು ಪಿತ್ಥಕೋಶ ಕ್ಯಾನ್ಸರ್, ಕ್ಯಾನ್ಸರ್ ಆಫ್ ಬವೆಲ್
c. ಇಸೋಫೇಜೈಟಿಸ್, ಗ್ಯಾಸ್ಟ್ರಿಟಿಸ್, ಪ್ಯಾಂಕ್ರಿಯಾಟೈಟಿಸ್, ಹೆಪಟೈಟಿಸ್ಗಳು ಮದ್ಯಪಾನ ಸಂಬಂಧಿತವಾಗಿವೆ.
d. ಕಾರ್ಡಿಯೋಮಯೋಪತಿ, ಹೈಪರ್ಟೆನ್ಶನ್, ಕೊರೋನರಿ ಅಥರೋಸ್ಕ್ಲೆರೋಸಿಸ್, ಆಂಜೈನ ಮತ್ತು ಹೃದಯಾಘಾತಗಳು ಅತಿಮದ್ಯಸಾನದಿಂದ ಬರುತ್ತವೆ
e. ಆಘಾತಗಳು, ಅಪೋಪ್ಲೆಕ್ಸಿ, ಫಿಟ್ಸ್ ಮತ್ತು ಇತರ ವಿಧದ ಪಕ್ಷಪಾತ ರೋಗಗಳು.
f. ಪೆರಿಫೆರಲ್ ನ್ಯೂರೋಪತಿ,ಕಾರ್ಟಕಲ್ ಅಟ್ರೋಫಿ, ಸೆರೆಬೆಲ್ಲರ್ ಅಟ್ರೋಫಿ ಮುಂತಾದ ಮದ್ಯಪಾನದಿಂದಾಗಿ ತೋರಿಬರುವ ರೋಗಲಕ್ಷಣಗಳು.
g. ವೆರ್ನಿಕ - ಕೊರ್ಸಕಾಫ್ ಸಿಂಡ್ರೋಮ್ (ಸ್ಮೃತಿಲೋಪ ಲಕ್ಷಣದೊಂದಿಗೆ). ಹೊಸ ಘಟನೆಗಳನ್ನು ಮರೆಯುವುದು ಮತ್ತು ಹಳೆಯ ಘಟನೆಗಳು ಮಾತ್ರ ನೆನಪಿನಲ್ಲಿಡುವುದು ಮುಂತಾದವುಗಳಿಂದ ಕೂಡಿದ ವಿಧದ ರೂಪದ ಪಕ್ಷಘಾತ ರೋಗಗಳು ಮುಖ್ಯವಾಗಿ ಥಿಯೋಮಿನ್ ಢಿಫಿಶಿಯನ್ಸಿಯಿಂದಾಗಿ ತಗಲುವವುಗಳಾಗಿದ್ದು ಇದು ಅತಿಯಾದ ಮದ್ಯಸೇವನೆಯಿಂದಾಗಿ ಬರುತ್ತವೆ.
h. ಮದ್ಯಪಾನಿಗಳಲ್ಲಿ ಸಾಮಾನ್ಯವಾಗಿರುವ ಬೆರಿಬೆರಿ ಮಾತ್ರವಲ್ಲದೆ ಪೆಲಿಗ್ರ ಮುಂತಾದ ಡೆಫಿಶಿಯನ್ಸಿಗಳು.
I. ಡೆಲಿರಿಯಮ್ ಟ್ರೆಮೆನ್ಸ್ ; ಇದು ಮದ್ಯಪಾನಿಗಳಲ್ಲಿ ಶಸ್ತ್ರ ಚಿಕಿತ್ಸೆಯ ಬಳಿಕ ತಲೆದೋರುವ ಗಂಭೀರ ಸಮಸ್ಯೆಯಾಗಿದೆ. ಮದ್ಯಪಾನ ಚಟವನ್ನು ತ್ಯಜಿಸುವ ಸಂದರ್ಭದಲ್ಲೂ ಈ ಸಮಸ್ಯೆಯು ಕಾಣಿಸುತ್ತಿದ್ದು ಅತ್ಯಾಧುನಿಕ ಚಿಕಿತ್ಸಾ ಕೇಂದ್ರಗಳಲ್ಲಿ ನೀಡುವ ಉಪಚಾರಗಳ ನಂತರವೂ ರೋಗಿಯು ಮರಣವನ್ನಪ್ಪುವ ಸಾಧ್ಯತೆಗಳಿವೆ.
j. ಹಲವು ನಿರ್ನಾಳ ಗ್ರಂಥಿ ಸಂಬಂಧಿತ ಮಿಕ್ಸೋಡಿಮಾದಿಂದ ತೊಡಗಿ ಹೈಪರ್ ಥೈರೋಡಿಸಮ್ವರೆಗಿನ ಖಾಯಿಲೆಗಳು ಮತ್ತು ಫ್ಲೋರಿಡ್ ಕುಷಿಂಗ್ ಸಿಂಡ್ರೋಮ್.
k. ರಕ್ತ ಸಂಬಂಧಿ ಖಾಯಿಲೆಗಳು , ಫೋಲಿಕ್ ಆಸಿಡ್ ಡಿಫೀಶಿಯನ್ಸಿ, ಮೈಕ್ರೋಸೈಟಿಕ್ ಅನೀಮಿಯ, ಹಿಮೋಲೈಟಿಕ್ ಅನೀಮಿಯ, ಜಾಂಡಿಸ್, ಹೈಪರ್ ಲಿಪಿಡೇಮಿಯವನ್ನೊಳಗೊಂಡ ಜೀವ್ಸ್ ಸಿಂಡ್ರೋಮ್. ಇವೆಲ್ಲಾ ಅತಿಮದ್ಯಸೇವನೆ ಸಂಬಂಧೀ ರೋಗಗಳು.
l. ತ್ರೊಂಬೋಸೈಟೊಪಿನಿಯ ಮತ್ತು ಇತರ ಪ್ಲೇಟ್ಲೆಟ್ ಸಂಬಂಧೀ ರೋಗಗಳು.
m. ಸಾಮಾನ್ಯವಾಗಿ ಉಪಯೋಗಿಸುವ ಮೆಟ್ರೋನೈಡಝೋಲ್ ಎಂಬ ಔಷಧಿ ಮದ್ಯದೊಂದಿಗೆ ಬೆರೆತು ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ.
n. ಮದ್ಯಪಾನ ಚಟ ಅಂಟಿಕೊಂಡವರಲ್ಲಿ ಇನ್ಫೆಕ್ಷನ್(ಸೋಂಕು) ಸರ್ವೇಸಾಮಾನ್ಯ ಕಾರಣ ದುರ್ಬಲ ರೋಗ ನಿರೋಧಕ ವ್ಯವಸ್ಥೆ.
o. ಪಪ್ಪುಸ ಸಂಬಂಧೀ ಸೋಂಕು ರೋಗಗಳು : ನುಮೋನಿಯಾ, ಲಂಗ್ ಅಬ್ಸಸ್, ಎಂಫಿಸೀಮ, ಟ್ಯೂಬರ್ ಕುಲೋಸಿಸ್....
p. ಮದ್ಯಪಾನವು ಪುರುಷರಿಗಿಂತ ಸ್ತ್ರೀಯರನ್ನು ಹೆಚ್ಚು ಬಾಧಿಸುತ್ತದೆ. ಗರ್ಭಿಣಿಯರು ಮದ್ಯಸೇವಿಸಿದಲ್ಲಿ ಭ್ರೂಣದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಇದನ್ನು ‘ಫೀಟಲ್ ಆಲ್ಕೋಹಾಲಿಕ್ ಸಿಂಡ್ರೋಮ್ ' ಎನ್ನುವರು.
q. ಇಸಬು, ಕೂದಲುದುರುವಿಕೆ, ನೈಲ್ ಡಿಸ್ಟ್ರೋಪಿ(ಅನಾರೋಗ್ಯಕರ ಉಗುರು), ಪ್ರಾರೋನೈಕಿಯ, ಆಂಗುಲರ್ ಸ್ಟೊಮಟೈಟಿಸ್ ತುಟಿಯಂಚಿನ ಹುಣ್ಣುಗಳು... ಇತ್ಯಾದಿ.
9. ಮದ್ಯಪಾನ ; ಒಂದು ‘ ಖಾಯಿಲೆ'!!
ಇದೀಗ ವೈದ್ಯರು ಮದ್ಯಪಾನವನ್ನು ಒಂದು ‘ರೋಗ'ವೆಂದು ಕರೆದು ಮದ್ಯಪಾನಿಗಳೊಂದಿಗೆ ಔದಾರ್ಯತೆಯನ್ನು ಮೆರೆದಿರುವರು. ವಾಸ್ತವದಲ್ಲಿ ಇದೊಂದು ಕೆಟ್ಟ ಚಟವಾಗಿದೆ. ಐ.ಆರ್.ಎಫ್.(I.R.F), ಮುಂಬಯಿ, ಪ್ರಕಟಿಸಿದ ಕರಪತ್ರವೊಂದು ಹೀಗನ್ನುತ್ತದೆ.
“ ಮದ್ಯಪಾನವು ಒಂದು ರೋಗವೆಂದಾದಲ್ಲಿ, ಅದು;
- - ಸೀಸೆಗಳಲ್ಲಿ ಬಿಕರಿಯಾಗುವ
- - ರೇಡಿಯೋ, ದೂರದರ್ಶನ, ವಾರ್ತಾಪತ್ರಿಕೆಗಳಲ್ಲಿ ಜಾಹೀರಾತು ನೀಡಲ್ಪಡುವ
- - ಪ್ರಸಾರಗೊಳ್ಳಲು ಪರವಾನಗಿ ನೀಡಲ್ಪಡುವ
- - ಸರಕಾರಕ್ಕೆ ಆದಾಯ ತರುವ
- - ಹೆದ್ದಾರಿಗಳಲ್ಲಿ ಮರಣಗಳನ್ನು ತರುವ ಕುಟುಂಬಗಳನ್ನು ಛಿದ್ರಗೊಳಿಸುವ ಮತ್ತು ಅಪರಾಧಗಳನ್ನು ಅಧಿಕಗೊಳಿಸುವ
- - ಯಾವುದೇ ಬ್ಯಾಕ್ಟೀರಿಯಾಗಳು ಅಥವಾ ವೈರಸ್ರಹಿತವಾದ ಏಕೈಕ ರೋಗವಾಗಿದೆ.
ವಾಸ್ತವದಲ್ಲಿ ಅಮಲು ಪದಾರ್ಥ ಅಥವಾ ಮದ್ಯ ಸೇವನೆಯು ರೋಗವಲ್ಲ - ಅದು ಶೈತಾನನ ಪಾಶವಾಗಿದೆ.
ಅಲ್ಲಾಹನು ತನ್ನ ಅನಂತ ಜ್ಞಾನ ಭಂಡಾರದಿಂದ ಶೈತಾನನ ಕುಣಿಕೆಯ ಬಗ್ಗೆ ಮಾನವರಾಶಿಯನ್ನು ಎಚ್ಚರಿಸಿರುವನು. ಇಸ್ಲಾಮ್ ಅನ್ನು ‘ ದೀನುಲ್ ಫಿತ್ರ: ' ಎನ್ನಲಾಗುತ್ತದೆ. ಅರ್ಥಾತ್ ಮನುಷ್ಯನ ‘ಪ್ರಾಕೃತಿಕ ಧರ್ಮ' ಇಸ್ಲಾಮಿನ ಆದೇಶಗಳ ಗುರಿ, ಉದ್ದೇಶಗಳು ಮಾನವನ ಪ್ರಕೃತಿಸಹಜ ಸ್ಥಿತಿಯನ್ನು ವ್ಯಕ್ತಿಗತವಾಗಿಯೂ, ಸಾಮಾಜಿಕವಾಗಿಯೂ ಯಥಾಸ್ಥಿತಿ ಕಾಪಾಡುವುದಾಗಿದೆ. ಅಮಲು ಪದಾರ್ಥಗಳು ಮಾನವನ ಸಹಜ ಸ್ಥಿತಿಯನ್ನು ಬದಲಿಸುವ ಸಾಮಗ್ರಿಗಳು ಮತ್ತು ಪಥಭ್ರಷ್ಟತೆಯಾಗಿದೆ. ಅದು ಮನುಷ್ಯನನ್ನು ಅವನ ಉನ್ನತ ಸ್ಥಾನದಿಂದ ಮೃಗೀಯ ಸ್ಥಿತಿಗೆ ತಳ್ಳುತ್ತದೆ. ಬಹುಷಃ ಕೆಲವರು ಇದನ್ನೇ ಅತ್ಯುನ್ನತ ಸ್ಥಾನವೆಂದು ಭ್ರಮಿಸಿಕೊಂಡಿರಲೂ ಬಹುದು.
“ ಓ ಸತ್ಯವಿಶ್ವಾಸಿಗಳೇ, ಮದ್ಯ ,ಜೂಜು, ......ಇವೆಲ್ಲಾ ಪೈಶಾಚಿಕ ಕೃತ್ಯಗಳಾಗಿವೆ. ಇವುಗಳನ್ನು ವರ್ಜಿಸಿರಿ. ನೀವು ಯಶಸ್ವಿಯಾಗಲೂ ಬಹುದು." ( ಕುರ್ಆನ್ 5 : 90)
ಉತ್ತರ: ಒಬ್ಬ ಪುರುಷನ ಸಾಕ್ಷಿಯು ಇಬ್ಬರು ಸ್ತ್ರೀಯರ ಸಾಕ್ಷಿಗೆ ಸಮಾನ ಎಂಬುದು ಇಸ್ಲಾಮಿನ ಸಾರ್ವತ್ರಿಕ ನಿಯಮವಲ್ಲ. ಬದಲಾಗಿ ಅದು ಕೆಲವೊಂದು ಆಯ್ದ ಪ್ರಕರಣಗಳಲ್ಲಿ ಮಾತ್ರ ಹಾಗೆಂದು ಪರಿಗಣಿಸುತ್ತದೆ. ಸಾಕ್ಷ್ಯ ನುಡಿಯುವ ಬಗ್ಗೆ ಕುರ್ಆನಿನ ಸುಮಾರು ಐದು ಸ್ಥಳಗಳಲ್ಲಿ ಇರುವ ಉಲ್ಲೇಖಗಳಲ್ಲಿ ಸಾಕ್ಷಿಗಳು ಪುರುಷನಾಗಿರಬೇಕೆಂದೋ, ಸ್ತ್ರೀಯಾಗಿರಬೇಕೆಂದೋ ನಿರ್ಬಂಧಿಸಲಾಗಿಲ್ಲ. ಅರ್ಥಾತ್ ಸಾಕ್ಷಿಗಳು ಸ್ತ್ರೀಯಾಗಿರಲಿ ಪುರುಷನಾಗಿರಲಿ ಸಮಾನರು. ಒಬ್ಬ ಪುರುಷನ ಸಾಕ್ಷಿ ಇಬ್ಬರು ಸ್ತ್ರೀಯರ ಸಾಕ್ಷಿಗೆ ಸಮಾನ ಎನ್ನುವಂತಹ ಸೂಕ್ತಿಯು ಕೇವಲ ಒಂದೇ ಆಗಿದ್ದು, ಹಣಕಾಸಿನ ವ್ಯವಹಾರದ ಬಗ್ಗೆ ಸೂಕ್ತ ನಿರ್ದೇಶನವನ್ನು ನೀಡುವ ಈ ಸೂಕ್ತಿಯು ಕುರ್ಆನಿನಲ್ಲಿರುವ ಅತ್ಯಂತ ದೊಡ್ಡದಾದ ಸೂಕ್ತಿಯೆಂದೂ ಪರಿಗಣಿಸಲ್ಪಟ್ಟಿದೆ. ಎರಡನೇ ಅಧ್ಯಾಯ ‘ಅಲ್ ಬಕರ' ದಲ್ಲಿರುವ ಈ ಸೂಕ್ತಿಯು ಹೀಗನ್ನುತ್ತದೆ.
“ ಓ ಸತ್ಯವಿಶ್ವಾಸಿಗಳೇ, ನೀವು ಅವಧಿಯನ್ನು ನಿಶ್ಚಯಿಸಿಕೊಂಡು ಪರಸ್ಪರ ಸಾಲದ ಲೇವಾದೇವಿ ಮಾಡುವಾಗ ಅದನ್ನು ಬರೆದಿಟ್ಟುಕೊಳ್ಳಿರಿ. ಅನಂತರ ನಿಮ್ಮ ಪುರುಷರ ಪೈಕಿ ಇಬ್ಬರನ್ನು ಸಾಕ್ಷಿಯಾಗಿಸಿಕೊಳ್ಳಬೇಕು.. ಮತ್ತು ಇಬ್ಬರು ಪುರುಷರು ಸಿಗದಿದ್ದಲ್ಲಿ ನೀವು ತೃಪ್ತಿಪಡುವ ( ಸಾಕ್ಷಿಗಳಲ್ಲಿಂದ) ಒಬ್ಬ ಪುರುಷನೂ, ಇಬ್ಬರು ಸ್ತ್ರೀಯರೂ ಇರಬೇಕು. ಇದು ಒಬ್ಬಳು ತಪ್ಪು ಮಾಡಿದಲ್ಲಿ (ತಝಲ್) ಇನ್ನೊಬ್ಬಳು ನೆನಪಿಸಲಿಕ್ಕಾಗಿ........" (ಕುರ್ಆನ್ 2 : 282)
ಈ ಸೂಕ್ತಿಯು ಕೇವಲ ಹಣಕಾಸು ವ್ಯವಹಾರ ಬಗೆಗಿನ ಆದೇಶವಾಗಿದೆ. ಇಬ್ಬರು ವ್ಯಕ್ತಿಗಳ ನಡುವಿನ ಹಣಕಾಸು ವ್ಯವಹಾರದ ಕರಾರನ್ನು ಲಿಖಿತಗೊಳಿಸಲು ಸೂಚಿಸಿ, ಆ ಬಗ್ಗೆ ಇಬ್ಬರು ಪುರುಷರನ್ನು ಸಾಕ್ಷಿಯಾಗಿಸುವುದಕ್ಕೆ ಆಧ್ಯತೆ ನೀಡಲಾಗಿದೆ. ಇಬ್ಬರು ಪುರುಷರ ಅನುಪಸ್ಥಿತಿಯಲ್ಲಿ ಕನಿಷ್ಟ ಒಬ್ಬ ಪುರುಷ ಹಾಗೂ ಈರ್ವರು ಸ್ತ್ರೀಯರು ಧಾರಾಳ ಸಾಕು ಎಂದಿದೆ.
ಉದಾಹರಣೆಗೆ ಒಬ್ಬ ವ್ಯಕ್ತಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದಿಟ್ಟುಕೊಳ್ಳೋಣ. ಚಿಕಿತ್ಸೆಯ ಬಗ್ಗೆ ವಿವರಗಳನ್ನು ಇನ್ನಷ್ಟು ದೃಢ ಪಡಿಸಿಕೊಳ್ಳಲು ಸಾಧಾರಣವಾಗಿ ಅವನು ಇಬ್ಬರು ನುರಿತ ಶಸ್ತ್ರಚಿಕಿತ್ಸಾ ತಜ್ಞರನ್ನು ಸಂದರ್ಶಿಸುತ್ತಾನೆ. ಇಬ್ಬರು ಶಸ್ತ್ರಚಿಕಿತ್ಸಕರು ಅಲಭ್ಯರೆಂದಾದಲ್ಲಿ ಅವನ ಮುಂದಿನ ಆಯ್ಕೆಯು ಒಬ್ಬ ನುರಿತ ಶಸ್ತ್ರಚಿಕಿತ್ಸಾ ತಜ್ಞ ಮತ್ತು ಇಬ್ಬರು ಎಮ್. ಬಿ.ಬಿ.ಎಸ್. ವೈದ್ಯರಾಗಿರಬಹುದು.
ಇದೇ ರೀತಿ ಹಣಕಾಸು ವ್ಯವಹಾರಗಳಲ್ಲಿ ಸಾಕ್ಷಿಗಳಾಗಿ ಇಬ್ಬರು ಪುರುಷರಿಗೆ ಆದ್ಯತೆ. ಇಸ್ಲಾಮೀ ಕುಟುಂಬದಲ್ಲಿ ಯಜಮಾನ ಪುರುಷನು. ತನ್ನ ಕುಟುಂಬವನ್ನು ಸಾಕಿ ಸಲಹುವ ಹೊಣೆ ಅವನ ಮೇಲಿರುವುದರಿಂದ ಸ್ತ್ರೀಯೊಂದಿಗೆ ಹೋಲಿಸಿದಲ್ಲಿ ಹಣಕಾಸು ವ್ಯವಹಾರಗಳಲ್ಲಿ ಅವನು ಹೆಚ್ಚು ನಿಪುಣನು. ಇನ್ನು ಎರಡನೆಯ ಆಯ್ಕೆಯಾಗಿ ಒಬ್ಬ ಪುರುಷ ಮತ್ತು ಇಬ್ಬರು ಸ್ತ್ರೀಯರನ್ನು ಸೂಚಿಸಿರುವುದೇಕೆಂದರೆ ಈರ್ವರು ಸ್ತ್ರೀಯರಲ್ಲಿ ಒಬ್ಬಳು ತಪ್ಪನ್ನೆಸಗಿದರೆ ಇನ್ನೋರ್ವಳಾದರೂ ಜ್ಞಾಪಿಸಲೆಂದು. ಇಲ್ಲಿ ಕುರ್ಆನ್ ಬಳಸಿದ ಅರೇಬಿಕ್ ಪದವು ‘ತಝಿಲ್' ಅರ್ಥಾತ್ ‘ಗೊಂದಲಗೊಳ್ಳು' ಅಥವಾ ‘ತಪ್ಪೆಸಗು' ಎಂದಾಗಿದೆ. ಆದರೆ ಪ್ರಮಾದವಶಾತ್ ಕೆಲವು ವ್ಯಾಖ್ಯಾನಕಾರರು ಇದನ್ನು ‘ಮರೆತುಬಿಡು' ಎಂಬುದಾಗಿ ವ್ಯಾಖ್ಯಾನಿಸಿರುವರು. ಆದುದರಿಂದ ಒಬ್ಬ ಪುರುಷನ ಸಾಕ್ಷಿಗೆ ಇಬ್ಬರು ಸ್ತ್ರೀಯರ ಸಾಕ್ಷಿಯನ್ನು ಸಮಾನವಾಗಿ ಪರಿಗಣಿಸಿದುದು ಆರ್ಥಿಕ ಹಣಕಾಸು ವ್ಯವಹಾರದಲ್ಲಿ ಮಾತ್ರವಾಗಿದೆ.
ಆದರೂ ಕೆಲವು ವ್ಯಾಖ್ಯಾನಕಾರರು ‘ಗೊಂದಲಗೊಳ್ಳುವ', ಸ್ತ್ರಿ ಸ್ವಭಾವವನ್ನು ಕೊಲೆ ಪ್ರಕರಣದಲ್ಲೂ ಪರಿಗಣಿಸಬೇಕೆಂದು ಅಭಿಪ್ರಾಯ ಪಟ್ಟಿರುವರು.
ಇಂತಹ ಪ್ರಕರಣಗಳಲ್ಲಿ ಸೂಕ್ಷ್ಮಸಂವೇದಿಯಾದ ಸ್ತ್ರೀಯು ಪುರುಷನೊಂದಿಗೆ ಹೋಲಿಸಿದಲ್ಲಿ ಹೆಚ್ಚು ಬೆದರಿಕೊಳ್ಳುವ, ಗೊಂದಲಕ್ಕೊಳಗಾಗುವ ಭಯವಿದೆ. ಆದುದರಿಂದ ಪ್ರಕರಣದ ತೀವ್ರತೆಯನ್ನು ಪರಿಗಣಿಸಿಕೊಂಡು ಕೆಲವು ನ್ಯಾಯ ಶಾಸ್ತ್ರ ಪಂಡಿತರು ಇಬ್ಬರು ಸ್ತ್ರೀ - ಸಾಕ್ಷಿಗಳನ್ನು ಒಬ್ಬ ಪುರುಷನಿಗೆ ಸಮಾನವಾಗಿಸಬೇಕು ಎಂದಿರುವರು. ಇನ್ನು ಸಾಕ್ಷಿ ನೀಡುವಿಕೆಯ ಬಗ್ಗೆ ಕುರ್ಆನಿನಲ್ಲಿರುವ ಇನ್ನಿತರ ಐದು ಸೂಕ್ತಿಗಳಲ್ಲಿ ಸ್ತ್ರೀ - ಪುರುಷರೆಂಬ ಬೇಧವಿಲ್ಲ.
a. “ ಓ ಸತ್ಯವಿಶ್ವಾಸಿಗಳೇ, ನಿಮ್ಮ ಪೈಕಿ ಯಾರಾದರೂ ಮರಣಾಸನ್ನನಾಗಿ ಮೃತ್ಯುಪತ್ರವನ್ನು ಮಾಡುವಾಗ ನಿಮ್ಮ ಪೈಕಿ ಇಬ್ಬರು ನ್ಯಾಯಶೀಲರನ್ನು ಸಾಕ್ಷಿಗಳಾಗಿಸಿರಿ" (ಕುರ್ಆನ್ : 5 : 106)
b. “...ಅಥವಾ ನೀವು ಪ್ರಯಾಣದಲ್ಲಿರುವಾಗ ಮರಣ ಅಪಾಯವು ಎದುರಾದಲ್ಲಿ ಅನ್ಯ(ಧರ್ಮೀಯ )ರಿಂದಾದರೂ ಇಬ್ಬರನ್ನು ಸಾಕ್ಷಿಗಳಾಗಿಸಿರಿ' (ಕುರ್ಆನ್ 5 : 106)
c. “ಅವರು ತಮ್ಮ ಕಾಲಾವಧಿಯ (ಇದ್ದ : )ಕೊನೆಯನ್ನು ತಲುಪಿದಾಗ ಅವರನ್ನು ಉತ್ತಮ ರೀತಿಯಿಂದ (ವಿವಾಹದಲ್ಲಿ )ತಡೆದಿರಿಸಿಕೊಳ್ಳಿರಿ' ಇಲ್ಲವೇ ಉತ್ತಮ ರೀತಿಯಲ್ಲಿ ಅವರಿಂದ ಬೇರ್ಪಡಿರಿ ಮತ್ತು ನಿಮ್ಮ ಪೈಕಿ ನ್ಯಾಯಶೀಲರಾದ ಇಬ್ಬರನ್ನು ಸಾಕ್ಷಿಗಳಾಗಿ ಮಾಡಿಕೊಳ್ಳಿರಿ.....' ( ಕುರ್ಆನ್ 65 : 2)
d. “ ಯಾರು ಸುಶೀಲೆಯರ ಮೇಲೆ ಆರೋಪ ಹೊರಸಿ ನಾಲ್ವರು ಸಾಕ್ಷಿದಾರರನ್ನು ತರುವುದಿಲ್ಲವೋ ಅವರಿಗೆ ಎಂಭತ್ತು ಛಡಿಯೇಟುಗಳನ್ನು ಕೊಡಿರಿ" ( ಕುರ್ಆನ್ 24 : 4)
ಕೆಲವು ಪಂಡಿತರು ಎಲ್ಲಾ ಪ್ರಕರಣಗಳಲ್ಲೂ ಇಬ್ಬರು ಸ್ತ್ರೀಸಾಕ್ಷಿಗಳು ಒಬ್ಬ ಪುರುಷ ಸಾಕ್ಷಿಗೆ ಸಮಾನ ಎಂದಿರುವರು. ಆದರೆ ಈ ಅಭಿಪ್ರಾಯವು ಸರ್ವಥಾ ಸ್ವೀಕಾರಾರ್ಹವಲ್ಲ. ಏಕೆಂದರೆ ಕುರ್ಆನಿನ 24 ನೆ ಅಧ್ಯಾಯ 6ನೆ ಸೂಕ್ತಿಯು ಸ್ತ್ರೀ- ಪುರುಷರಿಬ್ಬರ ಸಾಕ್ಷಿಯನ್ನೂ ಸಮಾನವೆನ್ನುತ್ತದೆ.
“ ತಮ್ಮ ‘ಅಝ್ವಾಜ್'(ಪತಿ ಅಥವಾ ಪತ್ನಿ)ಗಳ ಮೇಲೆ ಆರೋಪ ಹೊರಿಸುವವರು ಮತ್ತು ಅವರಿಗೆ ಬೇರೆ ಸಾಕ್ಷಿಗಳಿಲ್ಲದಿದ್ದಲ್ಲಿ ಅವರ ಸ್ವಂತ ಸಾಕ್ಷಿಯು ಸ್ವೀಕಾರಾರ್ಹವಾಗಿದೆ" (ಕುರ್ಆನ್ 24 : 6)
ಒಬ್ಬ ವ್ಯಕ್ತಿಯ ಮೇಲೆ ವ್ಯಭಿಚಾರ ಆರೋಪವನ್ನು ಹೊರಿಸುವವನ್ನು ಒಟ್ಟು ನಾಲ್ಕು ಸಾಕ್ಷಿಗಳನ್ನು ಹಾಜರುಪಡಿಸಬೇಕಾದ್ದು ಕಡ್ಡಾಯ. ಆದರೆ ಪತಿಪತ್ನಿಯರ ವಿಷಯದಲ್ಲಿ ಹೀಗಿಲ್ಲ. ಅವರಿಗೆ ಇತರ ಮೂವರು ಸಾಕ್ಷಿಗಳು ಸಿಗದಿದ್ದಲ್ಲಿ ಸ್ವಂತಸಾಕ್ಷ್ಯವನ್ನೇ ನಾಲ್ಕು ಸಾಕ್ಷಿಗಳಾಗಿ ಪರಿಗಣಿಸಲಾಗುವುದು. ಇಲ್ಲಿ ಕೂಡಾ ಸ್ತ್ರೀ ಮತ್ತು ಪುರುಷರ ಸಾಕ್ಷ್ಯಗಳಿಗೆ ಸಮಾನ ಬೆಲೆ. ಯಾವುದೇ ಲಿಂಗ ತಾರತಮ್ಯವಿಲ್ಲ.
ಇನ್ನು ರಮಝಾನ್ ತಿಂಗಳ ಆರಂಭದ ಚಂದ್ರದರ್ಶನದ ಬಗ್ಗೆ ಕೇವಲ ಒಂದು ಸಾಕ್ಷಿ ; ಅದು ಸ್ತ್ರೀಯಾಗಿದ್ದರೂ ಸಾಕು ಎಂಬುದು ಹೆಚ್ಚಿನೆಲ್ಲಾ ಪಂಡಿತರಅಭಿಮತ. ಇಸ್ಲಾಂ ಧರ್ಮದ ಆಧಾರ ಸ್ತಂಭಗಳಲ್ಲಿ ಒಂದಾಗಿರುವ ರಮಝಾನಿನ ವೃತವನ್ನಾರಂಭಿಸಲು ಕೇವಲ ಒಬ್ಬಳೆ ಸ್ತ್ರೀಯ ಸಾಕ್ಷ್ಯ ಸಾಕು !! ವಾಸ್ತವಿಕತೆಯು ಹೀಗಿರುವಾಗ ಇಸ್ಲಾಮಿನಲ್ಲಿ ಲಿಂಗ ತಾರತಮ್ಯ ಎಂಬ ಆರೋಪವೇ ಹುರುಳಿಲ್ಲದ್ದು. ಇನ್ನು ಕೆಲವು ವಿದ್ವಾಂಸರ ಅಭಿಪ್ರಾಯವು ರಮಝಾನ್ ತಿಂಗಳನ್ನು ಅಂತಿಮಗೊಳಿಸಲು ಇಬ್ಬರ ಸಾಕ್ಷ್ಯಗಳು ಅಗತ್ಯ ಎಂದಿದ್ದರೂ, ಇಲ್ಲಿ ಸ್ತ್ರೀ- ಪುರುಷರೆಂಬ ಬೇಧವಿಲ್ಲ.
ಆದುದರಿಂದ ಇಸ್ಲಾಮ್ ಧರ್ಮವು ಮುಖ್ಯವಾಗಿ ಹಣಕಾಸಿನ ವಿಚಾರದಲ್ಲಿ ; ಅದು ಸ್ತ್ರೀ ಮತ್ತು ಪುರುಷರ ವಿಭಿನ್ನ ಪ್ರಕೃತಿ, ಸಮಾಜವು ಅವರಿಗೆ ವಹಿಸಿಕೊಟ್ಟಿರುವ ವಿಭಿನ್ನ ಹೊಣೆಗಾರಿಕೆ, ಇತ್ಯಾದಿಗಳನ್ನು ಪರಿಗಣಿಸಿಕೊಂಡೇ ಅವರಿಬ್ಬರ ಸಾಕ್ಷ್ಯಕ್ಕೆ ಸಮಾನ ಬೆಲೆಯನ್ನು ಕಲ್ಪಿಸಿಲ್ಲ ಎಂಬುದು ವಾಸ್ತವಿಕತೆಯೇ ಹೊರತು ಇಲ್ಲಿ ಯಾವುದೇ ಲಿಂಗ ತಾರತಮ್ಯವಿಲ್ಲ.
ಉತ್ತರ: ಕುರ್ಆನಿನಲ್ಲಿ ವಾರೀಸು ಹಕ್ಕುಗಳ ಬಗ್ಗೆ ಇರುವ ವಿವರಗಳು ವಿಶಿಷ್ಟ ಮತ್ತು ಅನನ್ಯವಾಗಿದೆ. ಈ ಬಗ್ಗೆ ಕುರ್ಆನ್ ಸುಮಾರು ಆರು ಸ್ಥಳಗಳಲ್ಲಿ ಸಂಕ್ಷಿಪ್ತ ಮಾರ್ಗದರ್ಶನಗಳನ್ನು ನೀಡುತ್ತದೆ :
ಅಲ್ ಬಕರ ಅಧ್ಯಾಯ 2 ಸೂಕ್ತಿ 180
ಅಲ್ ಬಕರ ಅಧ್ಯಾಯ 2 ಸೂಕ್ತಿ 240
ಅನ್ನಿಸಾ ಅಧ್ಯಾಯ 4 ಸೂಕ್ತಿ 7-9
ಅಧ್ಯಾಯ 4 ಅನ್ನಿಸಾ ಸೂಕ್ತಿ 19
ಅಧ್ಯಾಯ 4 ಅನ್ನಿಸಾ ಸೂಕ್ತಿ 33
ಅಧ್ಯಾಯ 5 ಮಾಇದಾ ಸೂಕ್ತಿ 106-108
ಮಾತ್ರವಲ್ಲದೆ ಕುಟುಂಬದ ನಿಕಟವರ್ತಿಗಳ ಹಕ್ಕುಗಳ ಬಗ್ಗೆ ವಿಶದೀಕರಿಸುವ ಸೂಕ್ತಿಗಳು 4 ನೆ ಅಧ್ಯಯನ 11, 12 ಮತ್ತು 176ನೆ ಸೂಕ್ತಿಗಳಾಗಿವೆ. ಅವುಗಳ ಬಗ್ಗೆ ಕನ್ನಡಾನುವಾದವು ಹೀಗಿದೆ :
“ ಅಲ್ಲಾಹ್ ನಿಮ್ಮ ಮಕ್ಕಳ (ಹಕ್ಕುಗಳ) ಬಗ್ಗೆ ಹೀಗೆ ಆದೇಶವನ್ನೀಯುತ್ತಾನೆ: ಪುರುಷನಿಗೆ ಇಬ್ಬರು ಸ್ತ್ರೀಯರಿಗೆ ಸಮಾನವಾದ ಪಾಲಿದೆ. (ಮೃತನಿಗೆ ) ಇಬ್ಬರಿಗಿಂತ ಹೆಚ್ಚು ಪುತ್ರಿಯರಿದ್ದರೆ ಅವನಿಗೆ ಉತ್ತರಾಧಿಕಾರದ ಸೊತ್ತಿನಿಂದ ಮೂರನೆಯ ಎರಡಂಶ ಕೊಡಲಾಗುವುದು ಮತ್ತು ಒಬ್ಬಳೇ ಮಗಳಿದ್ದರೆ ಅವಳಿಗೆ ಅರ್ಧಾಂಶ. ಮೃತನು ಮಕ್ಕಳಿದ್ದವನಾಗಿದ್ದರೆ ಅವನ ಮಾತಾಪಿತರಲ್ಲಿ ಪ್ರತಿಯೊಬ್ಬರಿಗೂ ಆರನೆಯ ಒಂದಂಶ ಸಿಗಬೇಕು. ಅವನು ಮಕ್ಕಳಿಲ್ಲದ್ದವನಾಗಿದ್ದು ಮಾತಾಪಿತರೇ ಅವನ ವಾರೀಸುದಾರರಾಗಿರುವಾಗ ತಾಯಿಗೆ ಮೂರನೆಯ ಒಂದಂಶ ಕೊಡಬೇಕು. ಮೃತನಿಗೆ ಸಹೋದರ ಸಹೋದರಿಯರೂ ಇದ್ದಲ್ಲಿ ತಾಯಿಯು ಆರನೆಯ ಒಂದಂಶಕ್ಕೆ ಹಕ್ಕುದಾರಳಾಗುವಳು. ಮೃತನು ಮಾಡಿದ ವಸಿಯ್ಯತ್ ಅನ್ನು ಪೂರ್ತಿಗೊಳಿಸಿದ ಮತ್ತು ಅವನ ಮೇಲಿರುವ ಸಾಲಗಳ ಸಂದಾಯದ ನಂತರವೇ (ಇವೆಲ್ಲಾ ಪಾಲುಗಳು )“ ನಿಮ್ಮ ಮಾತಾಪಿತರ ಮತ್ತು ಮಕ್ಕಳ ಪೈಕಿ ಪ್ರಯೋಜನದ ದೃಷ್ಟಿಯಿಂದ ಯಾರು ಸಮೀಪದವರೆಂದು ನಿಮಗೆ ತಿಳಿಯದು. ಅಲ್ಲಾಹನು ನಿಶ್ಚಯಿಸಿದ ಪಾಲುಗಳಿವು.. ನಿಶ್ಚಯವಾಗಿಯೂ ಅಲ್ಲಾಹ್ ಸಕಲವನ್ನೂ ಬಲ್ಲವನ್ನೂ, ಮಹಾಯುಕ್ತಿಪೂರ್ಣನೂ ಆಗಿರುತ್ತಾನೆ " ( ಕುರ್ಆನ್ 4 : 11)
“ ನಿಮ್ಮ ಪತ್ನಿಯರು ಮಕ್ಕಳಿಲ್ಲವರಾಗಿದ್ದರೆ ಅವರು ಬಿಟ್ಟು ಹೋದುದರಲ್ಲಿ ಅರ್ಧಾಂಶ ನಿಮಗೆ ಸಿಗುವುದು. ಮಕ್ಕಲಿದ್ದರೆ ಅವರು ಮಾಡುದ ವಸಿಯ್ಯತ್ ಅನ್ನು ಈಡೇರಿಸಿದ ಮತ್ತು ಸಾಲಗಳನ್ನು ಪಾವತಿ ಮಾಡಿದ ಬಳಿಕ ಉಳಿಯುವ ಸೊತ್ತಿನ ನಾಲ್ಕನೆಯ ಒಂದಂಶ ನಿಮ್ಮದು. ನೀವು ಮಕ್ಕಳಿಲ್ಲದವರಾಗಿದ್ದರೆ ನೀವು ಬಿಟ್ಟುಹೋದ ಸೊತ್ತಿನ ನಾಲ್ಕನೆಯ ಒಂದಂಶ ಅವರದು. ಮಕ್ಕಳಿದ್ದರೆ ನೀವು ಮಾಡಿದ್ದ ವಸಿಯ್ಯತ್ ಮತ್ತು ಸಾಲಗಳ ಪಾವತಿಯ ಬಳಿಕ ಉಳಿಯುವ ಸೊತ್ತಿನಲ್ಲಿ ಎಂಟನೆಯ ಒಂದಂಶ ಅವರದಾಗುವುದು. (ವಾರೀಸುದಾರರೊಳಗೆ ಪಾಲಾಗತಕ್ಕ ಸೊತ್ತನ್ನು ಬಿಟ್ಟು ಹೋದ) ಪುರುಷನಾಗಲೀ, ಸ್ತ್ರೀಯಾಗಲೀ ಮಕ್ಕಾಳಿಲ್ಲದವರಾಗಿದ್ದು, ಅವರ ಮಾತಾಪಿತರೂ ಜೀವಂತರಾಗಿಲ್ಲದಿದ್ದು, ಅವರಿಗೆ ಒಬ್ಬ ಸಹೋದರ ಅಥವಾ ಒಬ್ಬ ಸಹೋದರಿ ಇದ್ದರೆ ಅವರಲ್ಲಿ ಪ್ರತಿಯೊಬ್ಬರಿಗೆ ಆರನೆಯ ಒಂದಂಶ ಸಿಗುವುದು ಮತ್ತು ಸಹೋದರ ಸಹೋದರಿಯರು ಒಬ್ಬರಿಗಿಂತ ಅಧಿಕವಿದ್ದರೆ ಮೃತರು ಹಾನಿಕಾರಕವಲ್ಲದ ವಸಿಯ್ಯತ್ತನ್ನು ಈಡೇರಿಸಿದ ಮತ್ತು ಸಾಲಗಳನ್ನು ಪಾವತಿಮಾಡಿದ ಬಳಿಕ ಉಳಿಯುವ ಸೊತ್ತಿನ ಮೂರನೆಯ ಒಂದಂಶದಲ್ಲಿ ಅವರೆಲರೂ ಭಾಗಿಗಳು. ಇವು ಅಲ್ಲಾಹನ ಆದೇಶಗಳು ಮತ್ತು ಅಲ್ಲಾಹ್ ಸರ್ವಜ್ಞನೂ, ಸಹನಶೀಲನೂ ಆಗಿರುವನು" (ಕುರ್ಆನ್ 4 : 12)
“ (ಓ ಪ್ರವಾದಿ) ಅವರು ನಿನ್ನೊಂದಿಗೆ ಧರ್ಮವಿಧಿ ಕೇಳುತ್ತಾರೆ. ಹೇಳು, ಅಲ್ಲಾಹ್ ನಿಮಗೆ ಕಲಾಲಃದ ಕುರಿತು ಹೀಗೆ ಧರ್ಮವಿಧಿ ಕೊಡುತ್ತಾನೆ. ಯಾರಾದರೂ ಸಂತತಿ ವಿಹೀನನಾಗಿ ಮೃತಪಟ್ಟರೆ ಮತ್ತು ಅವನಿಗೆ ಒಬ್ಬಳೇ ಸಹೋದರಿ ಇದ್ದರೆ ಅವಳು ಅವನು ಬಿಟ್ಟು ಹೋದ ಸೊತ್ತಿನಿಂದ ಅರ್ಧಾಂಶ ಪಡೆಯುವಳು ಮತ್ತು ಸಹೋದರಿಯು ಸಂತತಿವಿಹೀನಳಾಗಿ ಮೃತಪಟ್ಟರೆ ಸಹೋದರನು ಅವಳ ಸೊತ್ತನ ವಾರೀಸುದಾರನಾಗುವನು. ಮೃತನ ವಾರೀಸುದಾರರಾಗಿ ಇಬ್ಬರು ಸಹೋದರಿಯರಿದ್ದರೆ ಅವರು ಸೊತ್ತಿನ ಮೂರರಲ್ಲೆರಡು ಅಂಶದ ಹಕ್ಕುದಾರರಾಗುವರು. ಅನೇಕ ಮಂದಿ ಸಹೋದರ ಸಹೋದರಿಯರಿದ್ದರೆ ಸ್ತ್ರೀಯರಿಗೆ ಒಂದು ಮತ್ತು ಪುರುಷರಿಗೆ ಇಮ್ಮಡಿ ಪಾಲು ಸಿಗುವುದು. ನೀವು ದಾರಿ ತಪ್ಪಿ ಅಲೆಯದಂತೆ ಅಲ್ಲಾಹ್ ನಿಮಗಾಗಿ ಆದೇಶಗಳನ್ನು ವಿಶದೀಕರಿಸುತ್ತಾನೆ. ಅಲ್ಲಾಹ್ ಪ್ರತಿಯೊಂದು ವಸ್ತುವಿನ ಜ್ಞಾನವುಳ್ಳವನು". ( ಕುರ್ಆನ್ 4:176)
ಹೆಚ್ಚಿನ ಎಲ್ಲಾ ಸಂದರ್ಭಗಳಲ್ಲೂ ಸ್ತ್ರೀಗೆ ಪುರುಷನ ಅರ್ಧದಷ್ಟು ಪಾಲು. ಆದರೆ ಇದು ಎಲ್ಲಾ ಸಂದರ್ಭಗಳಲ್ಲೂ ಅನ್ವಯವಾಗಲಾರದು. ಅವಳು ಪುರುಷನಷ್ಟೇ ಪಾಲನ್ನು ಪಡೆಯುವ ಸಂದರ್ಭಗಳೂ ಇವೆ. ಉದಾಹರಣೆಗೆ ಮೃತ ವ್ಯಕ್ತಿಗೆ ಮಾತಾಪಿತರೂ, ಸಂತಾನಗಳೂ ಇಲ್ಲದೆ ಒಬ್ಬ ಸಹೋದರ ಮತ್ತು ಒಬ್ಬಳು ಸಹೋದರಿ ಮಾತ್ರ ಇರುವ ಪ್ರಕರಣದಲ್ಲಿ ಅವರಿಬ್ಬರಿಗೂ ಸಮಪಾಲುಬ: ಅರ್ಥಾತ್ ಆರನೆ ಒಂದಂಶ.
ಮೃತ ವ್ಯಕ್ತಿಯು ಸಂತಾನವಿರುವವನಾಗಿದ್ದಲ್ಲಿ ಅವನ ಮಾತಾಪಿತರಲ್ಲಿ ಪ್ರತಿಯೊಬ್ಬರಿಗೂ ಸಮಪಾಲು ಅರ್ಥಾತ್ ಆರನೆ ಒಂದಂಶ.
ಇನ್ನು ಸ್ತ್ರೀಯು ಪುರುಷನ ಇಮ್ಮಡಿ ಪಾಲನ್ನು ಪಡೆಯುವ ಪ್ರಕರಣಗಳೂ ಇವೆ. ಉದಾಹರಣೆಗೆ ಮಕ್ಕಳು, ಸಹೋದರ - ಸಹೋದರಿಯರು ಇಲ್ಲದ ಸ್ತ್ರೀಯು ಮೃತಳಾದಲ್ಲಿ ಆಕೆಯ ಪತಿಗೆ 2ನೆ ಒಂದು ಪಾಲು, ತಂದೆಗೆ 6 ನೆ ಒಂದು ಪಾಲು ಮತ್ತು ತಾಯಿಗೆ ಇಮ್ಮಡಿ ಅರ್ಥಾತ್ 3ನೆ ಒಂದು ಪಾಲು.
ವಾರೀಸು ಹಕ್ಕು ನಿಯಮದಲ್ಲಿ ಕೆಲವು ವಿಶೇಷ ಸಂದರ್ಭಗಳನ್ನು ಹೊರತು ಪಡಿಸಿದರೆ ಸ್ತ್ರೀಗೆ ಪುರುಷನ ಅರ್ಧಾಂಶ ಎಂಬುದು ಕೂಡಾ ನಿಜ. ಆ ಸಂದರ್ಭಗಳು ಈ ಕೆಳಗಿನಂತಿವೆ.
1. ಮಗಳಿಗೆ ಮಗನ ಪಾಲಿನ ಅರ್ಧಾಂಶ.
2. ಸಂತಾನರಹಿತ ದಂಪತಿಗಳ ಪೈಕಿ ಪತಿಯು ಮೃತನಾದಲ್ಲಿ ಪತ್ನಿಗೆ 8 ನೆ ಒಂದು, ಪತ್ನಿಯು ಮೃತಳಾದಲ್ಲಿ ಪತಿವೆ ಇಮ್ಮಡಿ ಅರ್ಥಾತ್ 4ನೆ ಒಂದು.
3. ದಂಪತಿಗಳಿಗೆ ಮಕ್ಕಳಿದ್ದಲ್ಲಿ ಪತ್ನಿಗೆ 4ನೆ ಒಂದು, ಪತಿಗೆ 2ನೆ ಒಂದು.
4. ಮೃತನಿಗೆ ಮಾತಾಪಿತರೂ, ಮಕ್ಕಳೂ ಇಲ್ಲದಿದ್ದಲ್ಲಿ ಸಹೋದರಿಗೆ ಸಹೋದರನ ಅರ್ಧ ಪಾಲು.
ಇಸ್ಲಾಮ್ ಧರ್ಮವು ಸ್ತ್ರೀಯ ಮೇಲೆ ಯಾವುದೇ ಹಣಕಾಸಿನ ಅಥವಾ ಆರ್ಥಿಕ ಹೊರೆಯನ್ನು ಹೇರಿಲ್ಲ. ಕುಟುಂಬ ನಿರ್ವಹಣೆಯ ಹೊರೆ ಪುರುಷನ ಮೇಲೆ. ಸ್ತ್ರೀಯ ಮಾಸಿಕ ಆದಾಯವು ಆಕೆಯ ಪತಿಗಿಂತ ಹತ್ತು ಪಟ್ಟಾಗಿದ್ದರೂ ಚಿಕ್ಕಾಸನ್ನೂ ಆಕೆ ಕುಟುಂಬಕ್ಕಾಗಿ ವ್ಯಯಿಸಬೇಕಾಗಿಲ್ಲ. ಒಬ್ಬ ಸ್ತ್ರೀಯ ವಿವಾಹಪೂರ್ವ ಆಹಾರ, ವಸತಿ, ಉಡುಪುಗಳು ಮತ್ತು ಇನ್ನಿತರ ಹಣಕಾಸಿನ ಅಗತ್ಯಗಳನ್ನು ಆಕೆಯ ತಂದೆ ಅಥವಾ ಸಹೋದರನೇ ಭರಿಸಬೇಕಾಗಿದೆ. ವಿವಾಹದ ಬಳಿಕ ಅದು ಅವಳ ಪತಿ ಅಥವಾ ಪುತ್ರನ ಹೊಣೆಗಾರಿಕೆಯಾಗಿದೆ. ಕುಟುಂಬ ನಿರ್ವಹಣೆಯು ಪುರುಷನ ಕರ್ತವ್ಯವೆಂಬುದು ನಿರ್ವಹಿಸಲು ಸುಲಭವಾಗುವಂತೆ ಇಸ್ಲಾಮ್ ಅವನಿಗೆ ಪಿತ್ರಾರ್ಜಿತ ಸೊತ್ತಿನಲ್ಲಿ ಸ್ತ್ರೀಯರಿಗಿಂತ ಅಧಿಕ ಪಾಲನ್ನು ನೀಡಿದೆ. ಉದಾಹರಣೆಗೆ ವ್ಯಕ್ತಿಯೊಬ್ಬನು ಮೃತಹೊಂದಿದಾಗ ಅವನ ಸೊತ್ತು ರೂ. 150000. ಅವನಿಗೆ ಇಬ್ಬರು ಮಕ್ಕಳು. ಒಂದು ಗಂಡು, ಒಂದು ಹೆಣ್ಣು. ಇಸ್ಲಾಮೀ ವಾರೀಸು ನಿಯಮದಂತೆ ಮಗನಿಗೆ ದೊರಕುವ ಮೊತ್ತ ರೂ. 100000, ಮಗಳಿಗೆ ದೊರಕುವ ಮೊತ್ತ ರೂ. 50000. ಮಗನಿಗೆ ದೊರೆತ ಒಂದು ಲಕ್ಷದಲ್ಲಿ ಅವನಿಗೆ ಕುಟುಂಬ ನಿರ್ವಹಣೆಯ ಬಾಧ್ಯತೆಗಳಿವೆ. ತನ್ನ ಕುಟುಂಬಕ್ಕಾಗಿ ಅವನು ಎಲ್ಲಾ ಹಣವನ್ನೂ ಖರ್ಚು ಮಾಡಬೇಕಾಗಿ ಬರಬಹುದು. ಅಥವಾ ಅವನು ತನ್ನ ಪಾಲಿನ ಸುಮಾರು ಎಂಭತ್ತು ಸಾವಿರದಷ್ಟು ಖರ್ಚು ಮಾಡಬೇಕಾಗಿ ಬರಬಹುದು. ಅವನಿಗೆ ಉಳಿಯುವುದು ಕೇವಲ 20000 ಮಾತ್ರ. ಆದರೆ ಯಾವುದೇ ಕೌಟುಂಬಿಕ ಬಾಧ್ಯತೆಯಿಲ್ಲದ ಹೆಣ್ಣು ಮಗಳು ಚಿಕ್ಕಾಸನ್ನು ಕೂಡಾ ಖರ್ಚು ಮಾಡದೆ ಪೂರ್ತಿ 50000ವನ್ನು ಜೇಬಿಗಿಳಿಸಿಕೊಳ್ಳುತ್ತಾಳೆ. ಒಂದು ಲಕ್ಷವನ್ನು ಪಡೆದು ಇಪ್ಪತ್ತು ಸಾವಿರವನ್ನು ಉಳಿತಾಯ ಮಾಡುವುದೊಳಿತೋ ಅಥವಾ ಐವತ್ತು ಸಾವಿರವನ್ನು ಪಡೆದು ಪೂರ್ತಿ ಹಣವನ್ನು ಜೇಬಿಗಿಳಿಸಿಕೊಳ್ಳವುದೊಳಿತೋ? ನೀವೇ ನಿರ್ಧರಿಸಿ.
ಉತ್ತರ:
1. ಪರಲೋಕ ವಿಶ್ವಾಸ ಎಂಬುದು ಮೂಢ ನಂಬಿಕೆಯಲ್ಲ.
ವೈಜ್ಞಾನಿಕ ಯುಗದಲ್ಲಿ ಬದುಕುತ್ತಿರುವ ಒಬ್ಬ ಸುಶಿಕ್ಷಿತ ವ್ಯಕ್ತಿಯು ಪರಲೋಕ ಅಥವಾ ಮರಣೋತ್ತರ ಜೀವನದ ಬೆನ್ನು ಹತ್ತಿದ್ದಾದರೂ ಹೇಗೆ ಎಂದು ಕೆಲವು ಜನರು ವಿಸ್ಮಯಗೊಳ್ಳುತ್ತಾರೆ. ಪರಲೋಕ ವಿಶ್ವಾಸವೆಂಬುದು ಒಂದು ಮೂಢನಂಬಿಕೆ ಎಂದು ಈ ಜನರು ಅಭಿಪ್ರಾಯ. ಆದರೆ ವಾಸ್ತವಿಕತೆಯು ಹೀಗಿಲ್ಲ. ನನ್ನ ಪರಲೋಕ ವಿಶ್ವಾಸವು ಯುಕ್ತಿಪರವಾಗಿದೆ.
2. ಪರಲೋಕ ವಿಶ್ವಾಸವು ಯುಕ್ತಿಪರವಾಗಿದೆ.
ಮರಣಾನಂತರ ನಿಮಗೊಂದು ಜೀವನವಿದೆ - ಎಂದು ತಿಳಿಸಿ ಕೊಡುವ ಗ್ರಂಥ ಕುರ್ಆನ್. ಈ ಗ್ರಂಥದಲ್ಲಿರುವ ಸುಮಾರು ಒಂದು ಸಾವಿರದಷ್ಟು ಸೂಕ್ತಿಗಳು ವೈಜ್ಞಾನಿಕ ವಿಷಯಗಳ ಬಗ್ಗೆ ಮಾತನಾಡುತ್ತವೆ (ನೋಡಿರಿ : ಕುರ್ಆನ್ ಮತ್ತು ವಿಜ್ಞಾನ : ಪರಸ್ಪರ ಪೂರಕವೇ ?) ಕುರ್ಆನಿನಲ್ಲಿ ಉಲ್ಲೇಖಿಸಲ್ಲಟ್ಟ ಅನೇಕ ವೈಜ್ಞಾನಿಕ ವಿಷಯಗಳು ಅತ್ಯಂತ ನಿಖರವಾಗಿರುವುದನ್ನು ವಿಜ್ಞಾನವು ಕೇವಲ ಕೆಲವೇ ಶತಮಾನಗಳಿಂದೀಚೆಗಷ್ಟೇ ಕಂಡು ಹಿಡಿದಿದೆ. ಆದರೆ ವಿಜ್ಞಾನವು ಕುರ್ಆನಿನಲ್ಲಿರುವ ಎಲ್ಲಾ ಸೂಕ್ತಿಗಳ ನಿಖರತೆಯನ್ನು ಒರೆಗೆ ಹಚ್ಚಿ ಪರೀಕ್ಷಿಸುವಷ್ಟು ಮುಂದುವರಿದಿಲ್ಲ.
ಉದಾಹರಣೆಗೆ ಕುರ್ಆನಿನಲ್ಲಿರುವ ವೈಜ್ಞಾನಿಕ ಸೂಕ್ತಿಗಳ ಪೈಕಿ ಎಂಭತ್ತು ಶೇಕಡಾ ಸೂಕ್ತಿಗಳು ನೂರು ಶೇಕಡಾ ನಿಖರವಾಗಿದೆಯೆಂದು ವಿಜ್ಞಾನವು ಕಂಡುಕೊಂಡಿದೆ. ಇನ್ನುಳಿದ ಇಪ್ಪತ್ತು ಶೇಕಡಾ ಸೂಕ್ತಿಗಳ ಬಗ್ಗೆ ವಿಜ್ಞಾನವು ಯಾವುದೇ ಸ್ಪಷ್ಟ ಹೇಳಿಕೆಯನ್ನು ನೀಡದೇ ಮೌನ ತಾಳಿದೆ. ಅವುಗಳು ಸರಿಯೆಂದೋ ತಪ್ಪೆಂದೋ ಹೇಳುವಷ್ಟು ವಿಜ್ಞಾನವು ಮುಂದುವರಿದಿಲ್ಲ. ಅರ್ಥಾತ್ ಕುರ್ಆನ್ ಸೂಕ್ತಿಗಳ ಪೈಕಿ ಎಂಭತ್ತು ಶೇಕಡಾದಷ್ಟು ವೈಜ್ಞಾನಿಕ ಸೂಕ್ತಿಗಳು ನೂರಕ್ಕೆ ನೂರು ಸರಿ ಮತ್ತು ಇನ್ನುಳಿದ ಇಪ್ಪತ್ತು ಶೇಕಡದಷ್ಟು ಸೂಕ್ತಿಗಳು ತಪ್ಪೆಂದು ಸಾಬೀತು ಪಡಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ ತಪ್ಪೆಂದು ಸಾಬೀತು ಪಡಿಸಲಾಗದ ಸೂಕ್ತಿಗಳನ್ನು ಸಹ ಬೇಕೆಂದು ಪರಿಗಣಿಸುವುದು ಹೆಚ್ಚು ತಾರ್ಕಿಕ ಹಾಗೂ ಯುಕ್ತಿಪರವಾಗಿದೆ.
ಈ ವಿಷಯವನ್ನು ತರ್ಕಶಾಸ್ತ್ರಕ್ಕನುಸಾರವಾಗಿ ಹೀಗೆ ಚರ್ಚಿಸಬಹುದು.
ದರೋಡೆ, ಕಳ್ಳತನಗಳು ಉತ್ತಮ ಕಾರ್ಯಗಳೇ ? ಮಾನಸಿಕ ಅಸ್ವಸ್ಥನ ಹೊರತು ಯಾರೂ ಹೌದೆನ್ನಲಾರರು. ಒಬ್ಬ ಯುಕ್ತಿವಂತ, ಶಕ್ತಿಶಾಲೀ, ಪ್ರಭಾವಶಾಲೀ ಅಪರಾಧಿಗೆ ದರೋಡೆ ಕಳ್ಳತನಗಳು ಕೆಟ್ಟದೆಂದು ಮನವರಿಕೆ ಮಾಡಿಕೊಡಲು ಒಬ್ಬ ದೇವನಿಷೇಧೀ (ಪರಲೋಕವನ್ನು ನಿರಾಕರಿಸುವವನು) ಮನುಷ್ಯನಿಗೆ ಹೇಗೆ ತಾನೇ ಸಾಧ್ಯ ?
ಉದಾಹರಣೆಗೆ ನಾನು ಈ ಜಗತ್ತಿನ ಅತ್ಯಂತ ದೊಡ್ಡ ಕ್ರಿಮಿನಲ್ ಮಾತ್ರವಲ್ಲದೇ ಒಬ್ಬ ಯುಕ್ತಿಶಾಲೀ, ಶಕ್ತಿಶಾಲೀ ಹಾಗೂ ಅತ್ಯಂತ ಪ್ರಭಾವಶಾಲೀ ವ್ಯಕ್ತಿ ಎಂದಿಟ್ಟುಕೊಳ್ಳೋಣ. ದರೋಡೆ, ದೋಚುವಿಕೆಗಳೇ ನನ್ನ ಕಾಯಕಮ ನಾನು ನನ್ನ ಕಾರ್ಯವನ್ನು ಅತ್ಯುತ್ತಮವೆಂದು ವಾದಿಸುತ್ತೇನೆ. ಏಕೆಂದರೆ ಅದರಿಂದ ನನಗೆ ಅತ್ಯಂತ ಭವ್ಯವಾದ ಬಂಗಲೆಯನ್ನು ಹೊಂದಲು ಸಾಧ್ಯವಾಗಿದೆ. ಇದರಿಂದ ನನಗೊಂದು ಐಷಾರಾಮೀ ಜೀವನ ಸಾಗಿಸಲು ಸಾಧ್ಯವಾಗಿದೆ. ಇನ್ನು ಯಾರಾದರೂ ನನ್ನ ಕಾರ್ಯವನ್ನು ಕೆಟ್ಟದೆಂದು ಸಾಬೀತು ಪಡಿಸಿದಲ್ಲಿ ನನ್ನ ಕಾರ್ಯಕ್ಕೆ ಪೂರ್ಣವಿರಾಮ ಖಂಡಿತ. ನನ್ನನ್ನು ತಡೆಯುವ ಸಲುವಾಗಿ ಜನರು ನನ್ನ ಮುಂದೆ ಮಂಡಿಸಬಹುದಾದ ವಾದಗಳು ಹೀಗಿರಬಹುದು.
a. ದರೋಡೆಗೊಳಗಾದವನಿಗೆ ತೊಂದರೆಗಳು
ದರೋಡೆಗೊಳಗಾದವನು ಸಂಕಷ್ಟಕ್ಕೀಡಾಗುವನು ಎಂಬುದು ಮೊತ್ತಮೊದಲ ವಾದ. ಹೌದು; ದರೋಡೆಗೊಳಗಾದವನು ಸಂಕಷ್ಟಕ್ಕೀಡಾಗುವನು. ಆದರೇನಂತೆ ; ನನಗದು ಲಾಭದಾಯಕ. ಸಾವಿರ ರುಪಾಯಿ ದೋಚಿದರೆ ನನಗಂದು ಪಂಚತಾರಾ ಹೋಟೆಲಿನಲ್ಲಿ ಮೃಷ್ಟಾನ್ನ ಭೋಜನ.
b. ಸ್ವತಃ ದರೋಡೆಗೊಳಗಾಗುವುದು
ಇನ್ನು ಕೆಲವರು ನಾನೇ ಅನ್ಯರಿಂದ ದರೋಡೆಗೊಳಗಾಗಬಹುದು ಎಂದು ಬೆದರಿಸಬಹುದು. ಸಾಧ್ಯವಿಲ್ಲ ; ಏಕೆಂದರೆ ನನ್ನಲ್ಲಿ ಅತ್ಯಂತ ಬಲಿಷ್ಠವಾದ ರಕ್ಷಣಾ ವ್ಯವಸ್ಥೆಯಿದೆ. ನನ್ನ ಅಂಗರಕ್ಷಕರ ಸಂಖ್ಯೆ ನೂರಕ್ಕೂ ಅಧಿಕ. ನಾನು ಯಾರನ್ನಾದರೂ ಹೊರತು ನನ್ನನ್ನು ಯಾರೂ ದೋಚಲಾರರು. ದೋಚುವ ಕಾರ್ಯವು ಒಬ್ಬ ಸಾಮಾನ್ಯ ವ್ಯಕ್ತಿಗೆ ಹೊರತು ನನಗಲ್ಲ.
c. ಪೋಲೀಸು ಭಯ
ದರೋಡೆಕೋರರನ್ನು ಪೋಲೀಸರು ಬಂಧಿಸಿ ಜೈಲಲ್ಲಿಡುತ್ತಾರೆ ಎಂಬುದು ಮೂರನೆಯ ವಾದ. ಅಸಾಧ್ಯ; ಏಕೆಂದರೆ ಪೋಲಿಸರ ಪಾಲನ್ನು ನಾನು ಯಾವತ್ತೂ ಇಟ್ಟುಕೊಂಡಿಲ್ಲ. ಮಹಾ ಮಹಾ ಮಂತ್ರಿಗಳೆಲ್ಲಾ ನಿನ್ನ ಮಿತ್ರರು. ಒಬ್ಬ ಸಾಮಾನ್ಯ ಮನುಷ್ಯನಿಗೆ ಸಂಬಂಧಿಸಿದಂತೆ ನಿಮ್ಮ ಮಾತೆಲ್ಲಾ ಒಪ್ಪತಕ್ಕದ್ದೇ. ಆದರೆ ನಾನು ಹಾಗಲ್ಲವಲ್ಲ. ನಾನೊಬ್ಬ ಅಸಾಮಾನ್ಯ ಶಕ್ತಿಶಾಲೀ, ಪ್ರಭಾವಶಾಲೀ ಕ್ರಿಮಿನಲ್. ಇಂತಹ ಚಿಲ್ಲರೆ ವಾದಗಳೆನ್ನೆಲ್ಲಾ ಬಿಟ್ಟು ದರೋಡೆಯು ಒಂದು ಕೆಟ್ಟ ಕಾರ್ಯವೇಕೆ ಎಂಬುದನ್ನು ಯುಕ್ತಿಪೂರ್ವಕವಾಗಿ ತಿಳಿಸಿ. ನಾನು ದರೋಡೆಯನ್ನು ನಿಲ್ಲಿಸುತ್ತೇನೆ.
d. ದರೋಡೆಯ ಗಳಕೆಯು ಕಠಿಣ ದುಡಿಮೆಯ ಫಲವಲ್ಲ
ದರೋಡೆಯಿಂದ ಗಳಿಸಿದ ಹಣವು ಕಠಿಣ ದುಡಿಮೆಯ ಫಲವಲ್ಲ ಎಂದು ಇನ್ನು ಕೆಲವರು ಹೇಳಬಹುದು. ಹೌದು ; ದರೋಡೆಯು ಸಂಪಾದನೆಗೆ ಅತ್ಯಂತ ಸುಲಭ ದಾರಿ. ನಾನದನ್ನು ಚೆನ್ನಾಗಿ ಬಲ್ಲೆ. ಆದ್ದರಿಂದಲೇ ನಾನು ದರೋಡೆಯನ್ನು ಜೀವನ ಮಾರ್ಗವಾಗಿ ಆರಿಸಿಕೊಂಡಿರುವುದು. ಒಬ್ಬ ವ್ಯಕ್ತಿಯ ಮುಂದೆ ಜೀವನ ಮಾರ್ಗವಾಗಿ ಎರಡು ಆಯ್ಕೆಗಳಿದ್ದಲ್ಲಿ ಬುದ್ದಿವಂತನಾದವನು ಅತ್ಯಂತ ಸುಲಭವಾದುದನ್ನೇ ಆಯ್ದುಕೊಳ್ಳುವನು ಎಂಬುದರಲ್ಲಿ ನಿಮಗೇನಾದರೂ ಸಂಶಯಗಳಿವೆಯೇ ?
e. ದರೋಡೆಯು ಮಾನವೀಯತೆಗೆ ವಿರುದ್ಧ
ಅದು ‘ಮಾನವೀಯತೆ'ಗೆ ವಿರುದ್ಧವಂತೆ !!! ಸಹಜೀವಿಯ ಮೇಲೆ ಅನುಕಂಪ ತೋರುವುದು ಮಾನವೀಯತೆಯ ಲಕ್ಷಣ ಎಂಬುದು ಇವರ ಉಪದೇಶ. ಈ ಮಾನವೀಯತೆ ಎಂಬ ಪಾಠವನ್ನು ಇವರಿಗೆ ಯಾರು ಕಲಿಸಿದರು ? ಅಂಥಹ ಪಾಠವೊಂದಿದೆ ಎಂದಿಟ್ಟುಕೊಂಡರೂ ಅದನ್ನು ಅನುಸರಿಸಬೇಕಾದ ಅನಿವಾರ್ಯತೆ ನನಗೇನಿದೆ ? ಇಂತಹ ದುರ್ವಾದಗಳೆನ್ನೆಲ್ಲಾ ಕೈಲಾಗದ ಭಾವನಾತ್ಮಕ ಮನುಷ್ಯರ ಮುಂದಿಡುವುದೊಳಿತು. ಆದರೆ ನಾನೊಬ್ಬ ಯುಕ್ತಿವಾದಿ . ಈ ಚಿಕ್ಕ ಜೀವನದಲ್ಲಿ ಸಾಧ್ಯವಾದಷ್ಟು ಬಾಚಿಕೊಂಡು ಸುಖಿಸುವುದೇ ನನ್ನ ಗುರಿ. ಅನುಕಂಪ, ಮಾನವೀಯತೆಗಳೆಲ್ಲಾ ನನ್ನ ಮುಂದೆ ಗೌಣ.
f. ದರೋಡೆಯು ಒಂದು ಸ್ವಾರ್ಥದ ಕಾರ್ಯವಾಗಿದೆ
ಯಾಕಲ್ಲ ! ಖಂಡಿತವಾಗಿಯೂ ದರೋಡೆಯು ಒಂದು ಸ್ವಾರ್ಥವಾಗಿದೆ. ಸ್ವಾರ್ಥಿಯಾಗಿ ಬದುಕಬಾರದು ಎಂದು ಹೇಳಿದವನಾರು ? ಹಾಗೆ ಬದುಕಿದಲ್ಲಿ ಮಾತ್ರ ಬದುಕನ್ನು ಎಂಜಾಯ್ ಮಾಡಬಹುದು.
3. ಒಳಿತು - ಕೆಡುಕುಗಳ ವಿಂಗಡನೆ ಯುಕ್ತಿವಾದದಿಂದ ಅಸಾಧ್ಯ.
ಕಳ್ಳತನ ದರೋಡೆಗಳು ಕೆಟ್ಟವೆಂದು ವಾದಿಸಲು ಪಟ್ಟ ಪ್ರಯತ್ನಗಳು ವ್ಯರ್ಥವಾದುದನ್ನು ಕಂಡೆವು. ಆದುದರಿಂದ ಕಳ್ಳತನ ದರೋಡೆಗಳು ಕೆಟ್ಟ ಕಾರ್ಯಗಳು ಎಂದು ಯುಕ್ತಿಪೂರ್ವಕವಾಗಿ ಸಾಬೀತು ಪಡಿಸಲು ಅಸಾಧ್ಯ.. ಪೋಲೀಸು ಹಿಡಿಯುವುದು, ಸ್ವತಃ ದೋಚಲ್ಪಡುವುದು ಮುಂತಾದವುಗಳೆಲ್ಲಾ ಒಬ್ಬ ಮಾಮೂಲೀ ಚೋರನ ಮಟ್ಟಿಗೆ ಸರಿಹೊಂದಬಹುದಾದರೂ ಒಬ್ಬ ಬಲಿಷ್ಠ, ಬುದ್ದಿವಂತ ಅಪರಾಧಿಯ ಮುಂದೆ ಕೆಲಸಕ್ಕೆ ಬರಲಾರದು.
ಮೇಲ್ನೋಟಕ್ಕೆ ಇದೊಂದು ಅವಾಸ್ತವಿಕ ಕುತರ್ಕಗಳೆಂಬಂತೆ ಕಂಡು ಬಂದರೂ ಇಂತಹ ಅಸಂಖ್ಯಾತ ಅಪರಾಧಿಗಳು ನಮ್ಮ ಕಣ್ಣಮುಂದೆಯೇ ಓಡಾಡಿಕೊಂಡಿರುವುದು ಒಂದು ಕಟು ವಾಸ್ತವಿಕತೆಯಾಗಿದೆ. ದುರ್ಬಲರ ಪಾಲಿಗೆ ನ್ಯಾಯವು ಮರೀಚಿಕೆಯಾಗಿರುವುದು ಇದೇ ಕಾರಣದಿಂದ. ಇದೇ ರೀತಿ ವಂಚನೆ, ಅತ್ಯಾಚಾರ ಮುಂತಾದ ಅಪರಾಧಗಳನ್ನೆಲ್ಲಾ ಒಬ್ಬ ಬಲಿಷ್ಠ ಅಪರಾಧಿಯು ಕೆಡುಕಲ್ಲವೆಂದು ಸಮರ್ಥಿಸಿಕೊಳ್ಳಲು ಸಾಧ್ಯವಿದೆ.
4. ಬಲಿಷ್ಠ ಅಪರಾಧಿಗೂ ಮುಸ್ಲಿಮನಿಂದ ಮನವರಿಕೆ ಸಾಧ್ಯ.
ನಾನೀಗ ಒಬ್ಬ ಮುಸ್ಲಿಮನಾಗಿ ದರೋಡೆಯು ಒಂದು ಕೆಟ್ಟ ಕಾರ್ಯವೆಂದು ಮನದಟ್ಟು ಮಾಡಿಕೊಡಲು ಪ್ರಯತ್ನಿಸುತ್ತೇನೆ ಮತ್ತು ನಿಮ್ಮದು ಇದೀಗ ನೂರಾರು ಅಂಗರಕ್ಷಕರಿರುವ, ಅತ್ಯಂತ ಬಲಿಷ್ಠ ಪ್ರಭಾವಶಾಲೀ ಅಪರಾಧಿಯ ಪಾತ್ರ. ಒಬ್ಬ ಸಾಮಾನ್ಯ ಚೋರನಿಗೆ ಮನದಟ್ಟು ಮಾಡುವ ರೀತಿಯಲ್ಲಿ ನಾನು ನಿಮ್ಮ ಮುಂದೆ ಇಟ್ಟಿರುವ ತರ್ಕಗಳೆಲ್ಲಾ ಮಣ್ಣು ಮುಕ್ಕಿವೆ. ಒಬ್ಬ ಬಲಿಷ್ಠ ಅಪರಾಧಿಯ ಮಟ್ಟಿಗೆ ಅವನು ನನ್ನ ಮುಂದಿಟ್ಟಿರುವ ವಾದಗಳೆಲ್ಲಾ ಸರಿಯಾದುದೇ ಎಂದು ಒಪ್ಪಿಕೊಳ್ಳದೇ ಅನ್ಯ ದಾರಿಯಿಲ್ಲ.
5. ಎಲ್ಲಾ ಮನುಷ್ಯರೂ ನ್ಯಾಯವನ್ನು ಹಂಬಲಿಸುವವರೇ.
ತನಗೆ ನ್ಯಾಯ ದೊರಕಬೇಕೆಂಬುದು ಪ್ರತಿಯೊಬ್ಬ ಮನುಷ್ಯನ ಹಂಬಲವಾಗಿದೆ. ಒಂದು ವೇಳೆ ಅವನಲ್ಲಿ ಅನ್ಯರಿಗೆ ನ್ಯಾಯ ದೊರಕಬೇಕೆಂಬ ಆಗ್ರಹವಿಲ್ಲದಿದ್ದರೂ ಸ್ವಂತಕ್ಕೆ ನ್ಯಾಯ ದೊರಕಬೇಕೆಂಬ ಹಂಬಲ ಅವನಲ್ಲಿ ಇಲ್ಲದಿರಲು ಅಸಾಧ್ಯ. ಕೆಲವು ಜನರು ತಮ್ಮಲ್ಲಿರುವ ಹಣ ಮತ್ತು ಅಧಿಕಾರ ಮದದಿಂದ ಅನ್ಯರ ಮೇಲೆ ಅನ್ಯಾಯ, ದೌರ್ಜನ್ಯಗಳನ್ನು ಎಸಗುತ್ತಾರೆ. ಆದರೆ ಇದೇ ಜನರು ಇಂತಹ ದೌರ್ಜನ್ಯಗಳು ಸ್ವಯಂ ತಮ್ಮ ಮೇಲೆಯೇ ಎಸಗಲ್ಪಡುವುದನ್ನು ಭಯಂಕರವಾಗಿ ವಿರೋಧಿಸುತ್ತಾರೆ. ತಮ್ಮ ಮೇಲೆ ಎಸಗಲ್ಪಡುವ ಅತೀ ಚಿಕ್ಕ ಅನ್ಯಾಯವನ್ನು ಕೂಡಾ ಸಹಿಸಲು ಈ ಜನರು ಸಿದ್ಧರಿಲ್ಲ. ಇತರರ ಮೇಲಿನ ದೌರ್ಜನ್ಯಗಳ ಬಗ್ಗೆ ಯಾವುದೇ ಹೃದಯಸ್ಪಂದನ ಇವರಲ್ಲಿ ಶೂನ್ಯವಾಗಿರುವುದಕ್ಕೆ ಮುಖ್ಯ ಕಾರಣ ಇವರು ಅಧಿಕಾರವನ್ನು ಪೂಜಿಸುವ, ಆರಾಧಿಸುವ ಜನರಾಗಿರುವುದು. ಇವರೆಣಿಸಿಕೊಂಡಂತೆ ಅಧಿಕಾರ - ಶಕ್ತಿಗಳು ಇವರ ಪರವಾಗಿರುವುದರಿಂದಲೇ ಇತರರ ಮೇಲೆ ಅನ್ಯಾಯವೆಸಗಲು ಇವರಿಗೆ ಸಾಧ್ಯವಾಗಿದೆ ಮತ್ತು ಇತರರು ಇವರ ಮೇಲೆ ಅನ್ಯಾಯವೆಸಗದಂತೆ ತಡೆದಿರುವುದು ಕೂಡಾ ಇವರ ವಶದಲ್ಲಿರುವ ಆ ಶಕ್ತಿಸಾಮರ್ಥ್ಯಗಳಾಗಿವೆ.
6. ಅಲ್ಲಾಹನೇ ಅತ್ಯಂತ ಬಲಾಢ್ಯನು ಹಾಗೂ ಅತ್ಯುತ್ತಮ ನ್ಯಾಯಧಿಕಾರಿಯೂ
ಮುಸ್ಲಿಮನಾಗಿರುವ ನಾನು ಮೊತ್ತಮೊದಲಾಗಿ ಅಲ್ಲಾಹನ ಅಸ್ತಿತ್ವವನ್ನು ಅಪರಾಧಿಗೆ ಮನದಟ್ಟು ಮಾಡಿಕೊಡುವೆನು ( ಅಲ್ಲಾಹನ ಅಸ್ತಿತ್ವವನ್ನು ಸಾಬೀತು ಪಡಿಸುವ ನನ್ನ ಕೃತಿಯನ್ನು ನೋಡಿರಿ). ಆ ನೈಜ ದೇವನೇ ನಿನಗಿಂತ ಮತ್ತು ಎಲ್ಲರಿಗಿಂತ ಹೆಚ್ಚು ಬಲಿಷ್ಠನು ಮತ್ತು ನ್ಯಾಯ ಪಾಲನೆಯಲ್ಲಿ ಅತ್ಯುತ್ತಮನು.
“ಅಲ್ಲಾಹ್ ಯಾರ ಮೇಲೂ ಕಿಂಚಿತ್ತೂ ಅಕ್ರಮ ವೆಸಗುವುದಿಲ್ಲ" ( ಕುರ್ಆನ್ 4 : 40)
7. ಕಠಿಣವಾಗಿ ಶಿಕ್ಷಿಸುವ ಅಧಿಕಾರವೂ ಅತ್ಯಂತ ಬಲಿಷ್ಠನಿಗೆ
ಕುರ್ಆನಿನಲ್ಲಿರುವ ವೈಜ್ಞಾನಿಕ ಸೂಕ್ತಿಗಳ ಆಧಾರದಿಂದಲೂ ಮತ್ತು ದೇವಾಸ್ಥಿತ್ವವನ್ನು ಸಾಬೀತು ಪಡಿಸುವ ಇನ್ನಿತರ ಯುಕ್ತಿಪೂರ್ವಕ ವಾದಗಳಿಂದಲೂ ಅಪರಾಧಿಯು ಒಂದು ಅತ್ಯಂತ ಬಲಿಷ್ಠ ಶಕ್ತಿಯ ಅಸ್ತಿತ್ವವನ್ನು ಒಪ್ಪದಿರಲಾರ. ಏಕೆಂದರೆ ಅವನೊಬ್ಬ ಯುಕ್ತಿವಾದಿ. ಚಿಕ್ಕಮಟ್ಟಿನ ಶಕ್ತಿ-ಸಾಮರ್ಥ್ಯಗಳನ್ನು ಹೊಂದಿರುವ ನಾನು ಇತರರ ಮೇಲೆ ಅನ್ಯಾಯವೆಸಗುತ್ತಿರುವಾಗ, ನನಗಿಂತ ಅದೆಷ್ಟೋ ಪಟ್ಟು ಅಧಿಕ ಬಲಿಷ್ಠನಾದವನು ನನ್ನನ್ನು ಅದೇಕೆ ಶಿಕ್ಷಿಸಬಾರದು? ಇತರರ ಮೇಲೆ ಅನುಕಂಪ ತೋರದ ನನ್ನ ಮೇಲೆ ಇತರರು ಕನಿಕರ ತೋರಬೇಕೆಂದು ಆಶಿಸುವುದರಲ್ಲಿ ಯಾವ ನ್ಯಾಯವಿದೆ ? ಹೀಗೆ ಆ ಅಪರಾಧಿಯು ಚಿಂತಿಸ ತೊಡಗಲೂಬಹುದು.
8. ಮಾಡಿದ್ದುಣ್ಣೋ ಮಹರಾಯ
ಮನುಷ್ಯನು; ಅವನು ಸಿರಿವಂತನಾಗಿರಲಿ ಅಥವಾ ಬಡವನಾಗಿರಲಿ, ರಾಜನಾಗಿರಲಿ ಅಥವಾ ಸಾಮಾನ್ಯ ಪೌರನಾಗಿರಲಿ ದೌರ್ಜನ್ಯವೆಸಗಿದವನು ದಂಡನೆಗೊಳಗಾಗಲೇ ಬೇಕು ಎಂದು ಹಂಬಲಿಸುತ್ತಾನೆ. ಅತ್ಯಾಚಾರಿಗಳು, ಕಳ್ಳರು ಬಂಧಿಸಲ್ಪಟ್ಟು ಕಠಿಣವಾಗಿ ಶಿಕ್ಷಿಸಲ್ಪಡಬೇಕು ಎಂಬುದೇ ಜನಸಾಮಾನ್ಯರ ಮನದಿಚ್ಛೆ. ಇಲ್ಲಿ ಬಹಳಷ್ಟು ಅಪರಾಧಿಗಳು ಶಿಕ್ಷಿಸಲ್ಪಡುವರು ಎಂಬುದು ನಿಜವಾದರೂ ಅಷ್ಟೇ ಸಂಖ್ಯೆಯ ಅಪರಾಧಿಗಳು ಶಿಕ್ಷೆಯಿಂದ ನುಣುಚಿಕೊಳ್ಳುತ್ತಲೂ ಇರುವರು ಎಂಬುದು ಒಂದು ನಿರಾಕರಿಸಲಾಗದ ವಾಸ್ತವಿಕತೆ. ಈ ಅಪರಾಧಿಗಳು ನಿರಾತಂಕರಾಗಿ ಐಷಾರಾಮದ ಬದುಕು ಸಾಗಿಸುವುದನ್ನು ನಾವು ಕಾಣುತ್ತೇವೆ. ಒಬ್ಬ ಪ್ರಭಾವಶಾಲೀ ವ್ಯಕ್ತಿಗೆ ಅವನಿಗಿಂತ ಬಲಿಷ್ಠನಿಂದ ಅನ್ಯಾಯವೆಸಗಲ್ಪಟ್ಟರೆ ಅನ್ಯಾಯಕ್ಕೀಡಾದ ಆ ಬಲಿಷ್ಠ ವ್ಯಕ್ತಿ ಕೂಡಾ ನ್ಯಾಯವನ್ನು ಹಂಬಲಿಸುವುದು ಸಹಜ.
9. ಭೂಲೋಕ ಜೀವನವು ಪರಲೋಕ ಜೀವನಕ್ಕಿರುವ ಪರೀಕ್ಷೆ
ಭೂಲೋಕ ಜೀವನದಲ್ಲಿ ಯಾವುದೇ ಒಬ್ಬ ವ್ಯಕ್ತಿಗೆ ; ಅವನು ಧನಿಕನಾಗಿರಲಿ, ಬಡವನಾಗಿರಲಿ ಸಂಪೂರ್ಣ ನ್ಯಾಯವು ಲಭಿಸಲಾರದು. ಕುರ್ಆನಿನ ಪ್ರತಿಪಾದನೆಯಂತೆ ಇಹಲೋಕವು ಪರಲೋಕ ಜೀವನಕ್ಕಿರುವ ಪರೀಕ್ಷೆಯಾಗಿದೆ.
“ಅವನೇ ಆಗಿರುವನು ಮರಣ ಮತ್ತು ಜನನವನ್ನು ಸೃಷ್ಟಿಸಿದವನು ; ನಿಮ್ಮ ಪೈಕಿ ಕರ್ಮಗಳನ್ನು ಮಾಡುವುದರಲ್ಲಿ ಉತ್ತಮನಾರೆಂದು ಪರೀಕ್ಷಿಸಲು. ಮತ್ತು ಅವನು ಅತ್ಯಂತ ಬಲಾಢ್ಯನೂ, ಕ್ಷಮಾಶೀಲನೂ ಆಗಿರುವನು". (ಕುರ್ಆನ್ 67 : 2)
10. ಸಂಪೂರ್ಣ ನ್ಯಾಯ ತೀರ್ಮಾನ ಅಂತಿಮ ದಿನದಂದು
“ ಪ್ರತೀ ವ್ಯಕ್ತಿಯೂ ಮರಣವನ್ನು ಸವಿಯಲಿರುವುದು. ಮತ್ತು ನಿಮ್ಮ ಸಂಪೂರ್ಣ ಪ್ರತಿಫಲ (ಅಂತಿಮ ) ತೀರ್ಮಾನ ದಿನದಂದು. ಆ ದಿನದಂದು ನರಕಾಗ್ನಿಯಿಂದ ರಕ್ಷೆ ಹೊಂದಿ ಸ್ವರ್ಗ ಪ್ರವೇಶವನ್ನು ಪಡೆಯುವವನು ಮಾತ್ರ (ಜೀವನದಲ್ಲಿ) ಯಶಸ್ಸು ಸಾಧಿಸಿದನು. ಈ ಲೋಕದ ಜೀವನವಂತೂ ಕೇವಲ ಭ್ರಾಮಕ ಸಾಮಗ್ರಿಗಳಾಗಿವೆ" (ಕುರ್ಆನ್ 3 : 185)
ಉತ್ತಮ ಚಾರಿತ್ರ್ಯವಂತ ವ್ಯಕ್ತಿಗಳು ಅತ್ಯಂತ ಕಷ್ಟಕರವಾದ ಜೀವನವನ್ನು ಸವೆಸಿ ಮರಣ ಹೊಂದುವುದನ್ನೂ, ದುಷ್ಟವ್ಯಕ್ತಿಗಳು ತಮ್ಮ ದುಷ್ಕೃತ್ಯಗಳ ಹೊರತಾಗಿಯೂ ವಿಲಾಸೀ ಜೀವನದಲ್ಲಿ ತಲೀನರಾಗಿರುವುದನ್ನೂ ಕೆಲವು ಸಲ ನಾವು ಕಾಣುತ್ತೇವೆ. ಆದರೆ ನಾವು ನಿರಾಶರಾಗಬೇಕೆಂದಿಲ್ಲ. ಪ್ರತಿಯೊಬ್ಬರಿಗೂ ಸಂಪೂರ್ಣ ನ್ಯಾಯವನ್ನು ಒದಗಿಸಿಕೊಡುವ, ಪ್ರತಿಯೊಬ್ಬರ ಕರ್ಮಗಳಿಗೆ ತಕ್ಕ ಪ್ರತಿಫಲ ನೀಡಲ್ಪಡುವ ಅಂತಿಮ ನ್ಯಾಯ ತೀರ್ಮಾನ ದಿನವೊಂದು ಬರಲಿದೆ. ಮರಣಹೊಂದಿದ ಪ್ರತಿಯೊಬ್ಬನೂ ಸಹಮಾನವರೊಂದಿಗೆ ಆ ದಿನದಂದು ಜೀವಂತವಾಗಿ ಎಬ್ಬಿಸಲ್ಪಡಲಿರುವನು. ಆದರೆ ತನ್ನ ಕರ್ಮ ಫಲಗಳ ಅಲ್ಪ ಭಾಗವೊಂದನ್ನು ಈ ಲೋಕದಲ್ಲೇ ಅನುಭವಿಸುವ ಪ್ರಸಂಗವೂ ಇಲ್ಲವೆಂದಿಲ್ಲ. ಸಂಪೂರ್ಣ ಪ್ರತಿಫಲವು ಮಾತ್ರ ಪುನರುತ್ಥಾನ ದಿನದಂದಾಗಿದೆ. ಒಬ್ಬ ದರೋಡೆಕೋರನು ಈ ಲೋಕದಲ್ಲಿ ತನ್ನ ಕೃತ್ಯಗಳ ಫಲವನ್ನನುಭವಿಸುವುದರಿಂದ ತಪ್ಪಿಸಿಕೊಳ್ಳಲೂ ಬಹುದು. ಆದರೆ ಅಂತಿಮ ತೀರ್ಮಾನದ ಆ ದಿನದ ವಿಚಾರಣೆ ಮತ್ತು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅಸಾಧ್ಯ.
11. ಹಿಟ್ಲರನನ್ನು ಶಿಕ್ಷಿಸಲು ವಿಫಲವಾದ ಮಾನವ ನಿರ್ಮಿತ ಕಾನೂನುಗಳು
ಹಿಟ್ಲರನು ನಡೆಸಿದ ನರಮೇಧದ ಬಗ್ಗೆ ಅರಿಯದವರಾರು? ಒಂದು ವೇಳೆ ಪೋಲೀಸರು ಹಿಟ್ಲರನನ್ನು ಬಂಧಿಸಿದ್ದಲ್ಲಿ ಹೆಚ್ಚೆಂದರೆ ಯಾವ ಶಿಕ್ಷೆಯನ್ನು ಕೊಡುತ್ತಿದ್ದರು ? ನೇಣುಗಂಬ ; ಅಲ್ಲವೇ ?
ಆರು ದಶಲಕ್ಷ ಯಹೂದಿಯರ ಮಾರಣಹೋಮ ನಡೆಸಿದ ಹಿಟ್ಲರನನ್ನು ನೇಣಿಗೇರಿಸಲು ಸಾಧ್ಯವಾಗುವುದು ಕೇವಲ ಒಂದು ಬಾರಿ. ಉಳಿದ ಐವತ್ತೊಂಭತ್ತು ಲಕ್ಷದ ತೊಂಭತ್ತೊಂಭತ್ತು ಸಾವಿರದ ಒಂಬೈನೂರ ತೊಂಭತ್ತೊಂಭತ್ತು (59,99,999) ಯಹೂದಿಯರನ್ನು ವಧಿಸಿದ್ದಕ್ಕಾಗಿ ಹಿಟ್ಲರನಿಗೆ ಶಿಕ್ಷೆ ನೀಡುವುದಾದರೂ ಹೇಗೆ?
12. ಹಿಟ್ಲರನನ್ನು ಆರು ದಶಲಕ್ಷ ಬಾರಿಯೂ ಸುಡಬಲ್ಲ ಅಲ್ಲಾಹ್
“ ನಮ್ಮ ದೃಷ್ಠಾಂತಗಳನ್ನು ನಿಷೇಧಿಸಿದವರನ್ನು ನಾವು ನಿಶ್ಚಯವಾಗಿಯೂ ನರಕಾಗ್ನಿಗೆ ತಳ್ಳಿ ಬಿಡುವೆವು. ಅವರ ಮೈಚರ್ಮ ಕರಟಿ ಹೋದಂತೆಲ್ಲಾ ಅದರ ಸ್ಥಾನದಲ್ಲಿ ಹೊಸ ಚರ್ಮವನ್ನು ಬದಲಿಸುವೆವು; ಅವರು ಶಿಕ್ಷೆಯನ್ನು ಚೆನ್ನಾಗಿ ಅನುಭವಿಸಲೆಂದು. ನಿಶ್ಚಯವಾಗಿಯೂ ಅಲ್ಲಾಹನು ಅತ್ಯಂತ ಬಲಾಢ್ಯನೂ, ಸುಜ್ಞಾನಿಯೂ ಆಗಿರುವನು". ( ಕುರ್ಆನ್ 4 : 56)
ಅಲ್ಲಾಹನಿಚ್ಛಿಸಿದಲ್ಲಿ ಅವನು ಹಿಟ್ಲರನನ್ನು ಆರು ದಶಲಕ್ಷ ಬಾರಿ ನರಕಾಗ್ನಿಯಲ್ಲಿ ಸುಡಬಲ್ಲನು.
13. ಮರಣೋತ್ತರ ಜೀವನವಿಲ್ಲದಿದ್ದಲ್ಲಿ ಮೌಲ್ಯರಹಿತಗೊಳ್ಳುವ ಮಾನವೀಯ ಮೌಲ್ಯಗಳು
ಪರಲೋಕ ಅಥವಾ ಮರಣೋತ್ತರ ಜೀವನ ಎಂಬುದನ್ನು ಮನವರಿಕೆ ಮಾಡಿಕೊಡದ ವಿನಹ ಒಳಿತು - ಕೆಡುಕು, ಮಾನವೀಯತೆ ಅಥವಾ ‘ಮಾನವಿಯ ಮೌಲ್ಯಗಳು' ಎಂಬಂತಹ ಪದಗಳೇ ಅರ್ಥಹೀನವೆನಿಸಿಕೊಳ್ಳುತ್ತವೆ. ಪರಲೋಕ ಪರಿಕಲ್ಪನೆಯ ಹೊರತಾದ ಮಾನವೀಯ ಮೌಲ್ಯಗಳನ್ನು ಒಬ್ಬ ಪ್ರಭಾವಶಾಲೀ, ಶಕ್ತಿಶಾಲೀ, ದುಷ್ಟನಿಗೆ ಮನದಷ್ಟು ಮಾಡಿಕೊಡುವುದು ಸರ್ವಥಾ ಅಸಾಧ್ಯ.
ಉತ್ತರ:
1. ಮುಸ್ಲಿಮರು ಒಗ್ಗಟ್ಟಾಗಿರಬೇಕು.
ಮುಸ್ಲಿಮರಿಂದು ಹಲವು ಪಂಗಡಗಳಾಗಿ ಹಂಚಿ ಹೋಗಿರುವುದು ಒಂದು ವಾಸ್ತವಿಕ ದುರಂತವಾಗಿದೆ. ಆದರೆ ಇಂತಹ ಪಂಗಡಗಳನ್ನು ಇಸ್ಲಾಮ್ ಅನುಮತಿಸಿಯೇ ಇಲ್ಲ. ಮುಸ್ಲಿಮರು ಒಗ್ಗಟ್ಟನ್ನು ಬೆಳೆಸಲು ಇಸ್ಲಾಮ್ ಪ್ರೋತ್ಸಾಹಿಸುತ್ತದೆ. ಆದರೆ ಹೇಗೆ !? ಇಸ್ಲಾಮಿನ ಮೂಲತತ್ವಗಳನ್ನು ಮೂಲೆಗೆ ತಳ್ಳಿ ಇಸ್ಲಾಮಿನ ಹೆಸರಿನಲ್ಲಿ ನೀವು ಒಗ್ಗಟ್ಟಾಗಿರಿ ಎಂದೋ ಅದು ಹೇಳುವುದು!? ಖಂಡಿತಾ ಅಲ್ಲ. ಒಗ್ಗಟ್ಡಾಗುವ ಮೂಲಮಂತ್ರವನ್ನು ಕೂಡಾ ಇಸ್ಲಾಮ್ ಅತ್ಯಂತ ಸ್ಪಷ್ಟವಾಗಿ ಕಲಿಸಿಕೊಡುತ್ತದೆ.
“ಮತ್ತು ನೀವೆಲ್ಲಾ ಒಟ್ಟಾಗಿ ಅಲ್ಲಾಹನ ಪಾಶವನ್ನು ಬಿಗಿ ಹಿಡಿಯಿರಿ ಮತ್ತು ಭಿನ್ನಭಿನ್ನರಾಗದಿರಿ" ( ಕುರ್ಆನ್ 3 : 103)
ಕುರ್ಆನ್ ಬಿಗಿ ಹಿಡಿಯಲು ಹೇಳಿದ ಅಲ್ಲಾಹನ ಪಾಶ ಯಾವುದು ? ಅದು ಕುರ್ಆನ್. ಮುಸ್ಲಿಮರೆಲ್ಲರೂ ಒಗ್ಗಟ್ಟಾಗಿ ಕುರ್ಆನನ್ನು ಅನುಸರಿಸಲು ಹೇಳಿದ ಈ ಸೂಕ್ತಯಲ್ಲಿ ಎರಡು ವಿಷಯಗಳಿಗೆ ಪ್ರಾಧಾನ್ಯತೆ ನೀಡಲಾಗಿದೆ - ‘ ಒಟ್ಟಾಗಿ ಬಿಗಿಹಿಡಿಯಿರಿ' ಮಾತ್ರವಲ್ಲದೆ ‘ ಭಿನ್ನಭಿನ್ನರಾಗದಿರಿ' ಎಂದೂ ಹೇಳಲಾಗಿದೆ. ಕುರ್ಆನ್ ಇನ್ನೊಂದು ಸ್ಥಳದಲ್ಲಿ ಹೇಳುತ್ತದೆ:
“ ಅಲ್ಲಾಹನನ್ನು ಅನುಸರಿಸಿರಿ ಮತ್ತು ಸಂದೇಶವಾಹಕರನ್ನು ಅನುಸರಿಸಿರಿ...." ( ಕುರ್ಆನ್ 4 : 59)
ಮಾತ್ರವಲ್ಲದೆ ಭಿನ್ನಾಭಿಪ್ರಾಯ ಉಂಟಾದಲ್ಲಿ ಸುವ್ಯಕ್ತ ಪರಿಹಾರ ಮಾರ್ಗವನ್ನೂ ಕುರ್ಆನ್ ಸೂಚಿಸುತ್ತದೆ.
“ ನಿಮ್ಮಲ್ಲಿ ಭಿನ್ನಾಭಿಪ್ರಾಯ ಉಂಟಾದಲ್ಲಿ, ನೀವು ಖಂಡಿತವಾಗಿಯೂ ಅಲ್ಲಾಹ್ ಮತ್ತು ಅಂತಿಮ ದಿನದಲ್ಲಿ ವಿಶ್ವಾಸವಿರಿಸಿದವರಾಗಿದ್ದರೆ ಅದನ್ನು ಅಲ್ಲಾಹ್ ಮತ್ತು ಸಂದೇಶವಾಹಕರ ಕಡೆಗೆ ತಿರುಗಿಸಿರಿ;" ( ಕುರ್ಆನ್ 4 : 59)
ಆದುದರಿಂದ ಮುಸ್ಲಿಮರು ಕುರ್ಆನ್ ಮತ್ತು ಪ್ರವಾದಿ(ಸ) ಚರ್ಯೆಯನ್ನು ಅನುಸರಿಸಿ ಒಗ್ಗಟ್ಟಾಗಿರಬೇಕಾಗಿದೆ. ಭಿನ್ನತೆಯು ಸರ್ವಥಾ ಸಲ್ಲ.
2. ಇಸ್ಲಾಮಿನಲ್ಲಿ ಗುಂಪುಗಾರಿಕೆ ನಿಷೇಧ
ಇಸ್ಲಾಮಿನೊಳಗೆ ವಿಭಿನ್ನ ಪಂಗಡಗಳನ್ನು ರಚಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ.
“ ತಮ್ಮ ಧರ್ಮವನ್ನು ಛಿನ್ನವಿಚ್ಛಿನ್ನಗೊಳಿಸಿ ವಿವಿಧ ಗುಂಪುಗಳಾಗಿ ಬಿಟ್ಟವರ ಜೊತೆ ನಿಮಗೆ ಯಾವ ಸಂಬಂಧವೂ ಇಲ್ಲ. ಅವರ ಪ್ರಕರಣವು ಅಲ್ಲಾಹನ ಬಳಿ ಇದೆ. ಅವರು ಮಾಡಿದುದರ ನೈಜತೆಯನ್ನು ಕೊನೆಯಲ್ಲಿ ಅವನು ಅವರಿಗೆ ತಿಳಿಸುವನು" ( ಕುರ್ಆನ್ 6 : 159)
ಧರ್ಮವನ್ನು ಒಡೆದು ವಿವಿಧ ಗುಂಪುಗಳಾದವರೊಂದಿಗೆ ಯಾವ ಸಂಬಂಧವನ್ನೂ ಇಟ್ಟುಕೊಳ್ಳಬಾರದೆಂದು ಅಲ್ಲಾಹನು ಈ ಸೂಕ್ತಿಯಲ್ಲಿ ತಾಕೀತು ಮಾಡಿರುವನು. ಆದರೆ ಮುಸ್ಲಿಮರಲ್ಲಿ ಹೆಚ್ಚಿನವರು ತಮ್ಮನ್ನು ಪರಿಚಯಿಸಿಕೊಳ್ಳುವುದು ನಾನೊಬ್ಬ ಶಾಫಿ, ಅಥವಾ ಹನಫಿ ಇದಲ್ಲದಿದ್ದಲ್ಲಿ ನಾನೊಬ್ಬ ಶಿಯಾ ಎಂದೇ ಆಗಿದೆ. ಇನ್ನೂ ಕೆಲವರು ಮಾಲಿಕಿ, ಹಂಬಲಿ, ಬರೇಲ್ವಿ, ದಿಯೋಬಂದಿ ಮುಂತಾದ ಪರಿಚಯಿಸಿಕೊಳ್ಳುವುದೂ ಇದೆ.
3. ನಮ್ಮ ನೆಚ್ಚಿನ ಪ್ರವಾದಿ (ಸ) ಒಬ್ಬ ಮುಸ್ಲಿಮ್
ನಿಮ್ಮೆಲ್ಲರ ಮೆಚ್ಚಿನ ಪ್ರವಾದಿ (ಸ) ಏನಾಗಿದ್ದರು ? ಶಾಫಿಯೋ ಹನಿಫಿಯೊ ಹಂಬಲಿಯೊ? ಇಲ್ಲ ; ಅವರಿಗಿಂತ ಮುಂಚಿನ ಪ್ರವಾದಿಗಳೆಲ್ಲರೂ ಮುಸ್ಲಿಮರಾಗಿದ್ದಂತೆ ಅವರು(ಸ) ಕೂಡಾ ಮುಸ್ಲಿಮರಾಗಿದ್ದರು. ಕುರ್ಆನಿನ 3ನೆ ಅಧ್ಯಾಯದ 52ನೆ ಸೂಕ್ತಿಯಲ್ಲಿದ್ದಂತೆ ಯೇಸುಕ್ರಿಸ್ತರು ಒಬ್ಬ ಮುಸ್ಲಿಮರಾಗಿದ್ದರು.
ಕುರ್ಆನಿನ 3ನೆ ಅಧ್ಯಾಯದ 67ನೆ ಸೂಕ್ತಿಯ ಪ್ರಕಾರ ಅಬ್ರಹಾಮ್ ಯಹೂದಿಯೋ, ಕ್ರೈಸ್ತನೋ ಆಗಿರಲಿಲ್ಲ ಬದಲಾಗಿ ಅವರೊಬ್ಬ ಏಕನಿಷ್ಠ ಮುಸ್ಲಿಮರಾಗಿದ್ದರು.
4. ನಿಮ್ಮನ್ನು ಮುಸ್ಲಿಮರೆಂದು ಪರಿಚಯಿಸಿಕೊಳ್ಳಿರಿ
a. ಯಾರಾದರೂ ನಿಮ್ಮ ಪರಿಚಯ ಕೇಳಿದಲ್ಲಿ ನಿಮ್ಮ ಹೆಮ್ಮೆಯ ಉತ್ತರವು ‘ನಾನೊಬ್ಬ ಮುಸ್ಲಿಮ್' ಎಂದೇ ಆಗಿರಬೇಕು. ಕುರ್ಆನಿನ 41ನೆ ಅಧ್ಯಾಯ ಫುಸ್ಸಿಲತ್ ನ 33ನೆ ಸೂಕ್ತಿಯಲ್ಲಿ ಹೀಗಿದೆ:
“(ಜನರನ್ನು) ಅಲ್ಲಾಹನೆಡೆಗೆ ಆಹ್ವಾನಿಸುವ, ಸತ್ಕರ್ಮ ಕೈಗೊಳ್ಳುವ ಮತ್ತು ಖಂಡಿತವಾಗಿಯೂ ನಾನು ಮುಸ್ಲಿಮರಲ್ಲಾಗಿದ್ದೇನೆಂದು ಘೋಷಿಸಿಕೊಳ್ಳುವವನಿಗಿಂತ ಉತ್ತಮ ಮಾತು ಇನ್ನಾರದಾಗಿರಲು ಸಾಧ್ಯ "
ಆದುದರಿಂದ ಮುಸ್ಲಿಮರು ಶಾಫೀ, ಹನಫಿ, ಹಂಬಲಿಗಳೆಂಬ ಪಂಗಡಗಳನ್ನು ಬದಿಗಿಟ್ಟು ಮುಸ್ಲಿಮನೆಂದು ಸ್ವಯಂ ಪರಿಚಯಿಸಿಕೊಳ್ಳಬೇಕು. ಕುರ್ಆನ್ ಮತ್ತು ಪ್ರವಾದಿ (ಸ) ಚರ್ಯೆಗಳನ್ನು ಅನುಸರಿಸಬೇಕು;
b. ಪ್ರವಾದಿ (ಸ) ಅನೇಕ ಮುಸ್ಲಿಮೇತರ ರಾಜರಿಗೆ ಇಸ್ಲಾಮ್ ಧರ್ಮ ಸ್ವೀಕಾರದ ಆಹ್ವಾನವನ್ನು ನೀಡಿ ಪತ್ರಗಳನ್ನು ಬರೆದಿದ್ದರು. ಕುರ್ಆನಿನ 3ನೆ ಅಧ್ಯಾಯ ಆಲಿ ಇಮ್ರಾನಿನ ಒಂದು ಸೂಕ್ತಿಯನ್ನು ಅವರು(ಸ) ಅದರಲ್ಲಿ ನಮೂದಿಸುತ್ತಿದ್ದರು. ಅದರ ಕನ್ನಡಾನುವಾದವು ಹೀಗಿದೆ.
“ ಹೇಳಿರಿ: ‘ ಓ ಗ್ರಂಥದವರೇ, ನಮ್ಮ ಮತ್ತು ನಿಮ್ಮ ನಡುವೆ ಸಮಾನವಾಗಿರುವ ಒಂದು ವಚನದೆಡೆಗೆ ನೀವು ಬನ್ನಿರಿ. ಅದೆಂದರೆ, ಅಲ್ಲಾಹನ ಹೊರತು ಇನ್ನಾರನ್ನೂ ನಾವು ಆರಾಧಿಸದಿರೋಣ ಮತ್ತು ಅವನೊಂದಿಗೆ ಯಾರನ್ನೂ, ಯಾವುದನ್ನೂ ಸಹಭಾಗಿಯನ್ನಾಗಿಸದಿರೋಣ ಮತ್ತು ನಮ್ಮ ಪೈಕಿ ಕೆಲವರು ರಕ್ಷಾಧಿಕಾರಿಗಳನ್ನಾಗಿಸದಿರೋಣ; ಅಲ್ಲಾಹನ ಹೊರತು (ಎಂಬ ತತ್ವದೆಡೆಗೆ). ಇನ್ನು ಅವರು ವಿಮುಖರಾಗುವುದಾದರೆ ನಿವು ಹೇಳಿರಿ ನಾವು ಮುಸ್ಲಿಮ (ಆಜ್ಞಾನುಸಾರಿಗಳು)ರಾಗಿದ್ದೇವೆ ಎಂಬುದಕ್ಕೆ ನಿವು ಸಾಕ್ಷಿಗಳಾಗಿರಿ". (ಕುರ್ಆನ್ 3 : 64 )
5. ಇಸ್ಲಾಮಿನ ವಿದ್ವಾಂಸರನ್ನು ಗೌರವಿಸುವುದು ಕಡ್ಡಾಯ; ಆದರೆ
ಮದ್ಹಬ್ಗಳ ನಾಲ್ವರು ಇಮಾಮರೂ ಸೇರಿದಂತೆ ಇಸ್ಲಾಮಿನ ಎಲ್ಲಾ ವಿದ್ವಾಂಸರನ್ನೂ ಮುಸ್ಲಿಮರು ಗೌರವಿಸಬೇಕು. ಇಮಾಮ್ ಅಬು ಹನೀಫ, ಇಮಾಮ್ ಶಾಫೀ, ಇಮಾಮ್ ಹಂಬಲಿ, ಇಮಾಮ್ ಮಾಲಿಕ್(ರ.ಅ) ಮುಂತಾದವರೆಲ್ಲಾ ಇಸ್ಲಾಮಿನ ಘನವಿದ್ವಾಂಸರು. ಅವರ ಕಠಿಣ ಪರಿಶ್ರಮ ಮತ್ತು ಸಂಶೋಧನೆಗಳಿಗೆ ಅಲ್ಲಾಹನು ತಕ್ಕ ಪ್ರತಿಫಲವನ್ನು ನೀಡಲಿ. ಇಮಾಮ್ ಅಬು ಹನೀಫ ಅಥವಾ ಇಮಾಮ್ ಶಾಫೀಯವರ ಯಾವುದಾದರೊಂದು ವೀಕ್ಷಣೆಯನ್ನು ಸರಿಯೆಂದು ಯಾರಾದರೂ ಸ್ವೀಕರಿಸಿಕೊಂಡಲ್ಲಿ ಆಕ್ಷೇಪಿಸಲಾಗದು. ಆದರೆ ನೀನು ಯಾರು ಎಂಬ ಪ್ರಶ್ನೆಗೆ ಉತ್ತರ ಮಾತ್ರ ‘ನಾನೊಬ್ಬ ಮುಸ್ಲಿಮ್' ಎಂದೇ ಆಗಿರಬೇಕು.
6. ಎಪ್ಪತ್ತಮೂರು ಪಂಗಡಗಳು ಎಂಬುದು ಒಂದು ಭವಿಷ್ಯವಾಣಿಯೇ ಹೊರತು ಗುಂಪುಗಾರಿಕೆಗೆ ಪರವಾನಗಿ ಅಲ್ಲ
“......ನನ್ನ ಸಮುದಾಯವು 73 ಪಂಗಡಗಳಾಗಿ ಒಡೆಯಲಿದೆ ....." ಎಂಬ ಹದೀಸನ್ನು ಕೆಲವು ಜನರು ಗುಂಪುಗಾರಿಕೆಗೆ ಇಸ್ಲಾಮಿನ ಪರವಾನಗಿ ಎಂಬ ರೀತಿಯಲ್ಲೂ ವ್ಯಾಖ್ಯಾನಿಸುವುದಿದೆ. ಆದರೆ ಇದು ಸಮುದಾಯಕ್ಕೆ ಸಂಭವಿಸಬಹುದಾದ ವಿಪತ್ತಿನ ಕುರಿತಾದ ಒಂದು ಭವಿಷ್ಯವಾಣಿಯೇ ಹೊರತು ಮುಸ್ಲಿಮರು ಗಂಪುಗಾರಿಕೆಯಲ್ಲಿ ನಿರತರಾಗಬೇಕು ಎಂದು ಖಂಡಿತಾ ಅಲ್ಲ. ಏಕೆಂದರೆ ಕುರ್ಆನ್ ಪ್ರತೇಕ ಪಂಗಡಗಳಾಗದಂತೆ ತಾಕೀತು ಮಾಡುತ್ತದೆ. ಪ್ರತ್ಯೇಕ ಪಂಗಡಗಳನ್ನು ಮಾಡಿಕೊಳ್ಳದೆ ಕುರ್ಆನ್ ಹಾಗೂ ಅಧಿಕೃತ ಪ್ರವಾದಿ ವಚನಗಳನ್ನು ಅನುಸರಿಸುವವರೇ ನೇರ ಮಾರ್ಗದಲ್ಲಿರುವವರು. ಈ ಬಗ್ಗೆ ಇರುವ ಪ್ರವಾದ(ಸ) ವಚನದ ಪೂರ್ಣ ರೂಪವು ಹೀಗಿದೆ:
“ ಪ್ರವಾದಿ(ಸ) ಹೇಳಿದರು : ‘ ...ನನ್ನ ಸಮುದಾಯವು ಎಪ್ಪತ್ತಮೂರು ಪಂಗಡಗಳಾಗಿ ಒಡೆಯಲಿದೆ. ಒಂದರ ಹೊರತು ಉಳಿದೆಲ್ಲಾ ಪಂಗಡಗಳೂ ನರಕದಲ್ಲಾಗಲಿದೆ'. ಅವರ ಸಂಗಾತಿಗಳು ಆ ಒಂದು ಪಂಗಡ ಯಾವುದೆಂದು ಕೇಳಿದಾಗ ಪ್ರವಾದಿ (ಸ) ಹೇಳಿದರು :‘ ಮಾ ಅನ ಅಲೈಹಿ ವ ಅಸ್ಹಾಬೀ ಅರ್ಥಾತ್ ನಾನು ಮತ್ತು ನನ್ನ ಸಂಗಾತಿಗಳು ಯಾವುದರ ಮೇಲೆ ನೆಲೆಗೊಂಡಿದ್ದೇವೆಯೋ ಅದರಲ್ಲಿ ನಿಲ್ಲುವವರು' (ತಿರ್ಮಿದಿ 171)
“ ಅಲ್ಲಾಹನನ್ನು ಅನುಸರಿಸಿರಿ ಮತ್ತು ಸಂದೇಶವಾಹಕರನ್ನು ಅನುಸರಿಸಿರಿ" ಇದು ಕುರ್ಆನ್ ಹಲವು ಬಾರಿ ಉಲ್ಲೇಖಿಸಿರುವ ಸೂಕ್ತಿಯಾಗಿದೆ. ನೈಜ ಮುಸ್ಲಿಮನಾಗಬೇಕಾದಲ್ಲಿ ಕುರ್ಆನ್ ಮತ್ತು ಪ್ರವಾದಿ(ಸ) ಚರ್ಯೆಗಳಿಗೇ ಆದ್ಯತೆ ನೀಡಬೇಕಾಗಿದೆ . ಪ್ರವಾದಿ (ಸ) ಚರ್ಯೆಗಳಿಗೆ ಪೂರಕವಾಗಿರುವ ಅಭಿಪ್ರಾಯಗಳು ; ಅದು ಯಾವುದೇ ಇಮಾಮರದಾಗಿರಲಿ ಸ್ವೀಕರಿಸಿಕೊಳ್ಳುವುದರಲ್ಲಿ ಅಭ್ಯಂತರವಿಲ್ಲ. ಆದರೆ ಅವರ ವೀಕ್ಷಣೆ - ಅಭಿಪ್ರಾಯಗಳು ಕುರ್ಆನ್ ಮತ್ತು ಪ್ರವಾದಿ (ಸ) ಚರ್ಯೆಗಳಿಗೆ ವಿರುದ್ದವೆಂದಾದಲ್ಲಿ ಸರ್ವಥಾ ಸ್ವೀಕಾರಾರ್ಹವಲ್ಲ. ಇಲ್ಲಿ ಇಮಾಮರ ಸ್ಥಾನ- ಮಾನಗಳ ಆಧಾರದ ಮೇಲೆ ಪ್ರವಾದಿ (ಸ) ಚರ್ಯೆಗಳನ್ನು ತಳ್ಳಿಬಿಡಲಾಗದು. ಮಾತ್ರವಲ್ಲದೆ ‘ಕುರ್ಆನ್ ಮತ್ತು ಸುನ್ನತ್ಗಳಿಗೆ ಪ್ರಪ್ರಥಮ ಪ್ರಾಶಸ್ತ್ಯ' ಎಂಬುದು ಇಮಾಮರುಗಳ ಫತ್ವಾ ಕೂಡಾ ಆಗಿದೆ.
ಮುಸ್ಲಿಮ್ ಸಮುದಾಯವು ಕುರ್ಆನ್ ಸುನ್ನತ್ಗಳನ್ನು ಕಲಿತು ತಮ್ಮ ಸ್ವಂತಿಕೆಗಳನ್ನು ಅವುಗಳಿಗೆ ವಿಧೇಯಗೊಳಿಸಿದಲ್ಲಿ ಇನ್ಶಾ ಅಲ್ಲಾಹ್ ಭಿನ್ನಾಭಿಪ್ರಾಯಗಳು ಮರೆಯಾಗಿ ಒಗ್ಗಟ್ಟು ಕಾಣಿಸಿಕೊಳ್ಳಬಹುದು.
ಉತ್ತರ:
1. ಇಸ್ಲಾಮ್ ಮತ್ತು ಇತರ ಧರ್ಮಗಳಿಗಿರುವ ಪ್ರಮುಖ ವ್ಯತ್ಯಾಸ
ಮೂಲದಲ್ಲಿ ಎಲ್ಲಾ ಧರ್ಮಗಳೂ ಕೆಡಕುಗಳನ್ನು ತ್ಯಜಿಸಿ ಸದಾಚಾರಿಗಳಾಗಲು ಕಲ್ಪಿಸುತ್ತವೆ. ಆದರೆ ಇಸ್ಲಾಮ್ ಇನ್ನೂ ಒಂದು ಹೆಜ್ಜೆ ಮುಂದೆ. ಅದು ಇವುಗಳ ಜೊತೆಗೇ ಕೆಡಕುಗಳನ್ನು ವರ್ಜಿಸಿ ಒಳಿತನ್ನು ಮೈಗೂಡಿಸಿಕೊಳ್ಳುವ ವಿಧಾನವನ್ನೂ ಕಲಿಸಿಕೊಡುತ್ತದೆ; ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ. ಮನುಷ್ಯನು ಸೃಷ್ಟಿಸಲ್ಪಟ್ಟ ಪ್ರಕೃತಿ ಮತ್ತು ಸಮಾಜದೊಳಗಿರುವ ಕ್ಲಿಷ್ಟತೆಯನ್ನು ಪರಿಗಣಿಯೇ ಇಸ್ಲಾಮ್ ಸಮಸ್ಯೆಗಳಿಗೆ ತಕ್ಕ ಪರಿಹಾರವನ್ನು ಸೂಚಿಸಿದೆ. ಇಸ್ಲಾಮ್ ಸೃಷ್ಟಿಕರ್ತನಿಂದಲೇ ಬಂದಂತಹ ಒಂದು ಜೀವನ ಪದ್ಧತಿ ಮತ್ತು ಮಾರ್ಗದರ್ಶನ. ಆದುದರಿಂದಲೇ ಅದನ್ನು ‘ ದೀನುಲ್ ಫಿತ್ರಃ' ಅರ್ಥಾತ್ ‘ ಪ್ರಕೃತಿ ಧರ್ಮ' ಎಂದೂ ಕರೆಯಲಾಗಿದೆ.
2. ಉದಾಹರಣೆಗಳು - ಕೆಡಕನ್ನು ತೊರೆಯುವ ಆದೇಶದ ಜೊತೆಗೇ ತೊರೆಯುವ ರೀತಿಯ ಬಗ್ಗೆ ಮಾರ್ಗದರ್ಶನ
a. ಕಳ್ಳತನ ತಡೆಯಲು ಕ್ರಮ
ಕಳ್ಳತನ ಒಂದು ಕೆಟ್ಟ ಕಾರ್ಯ ಎಂಬುದರಲ್ಲಿ ಇಸ್ಲಾಮ್ ಸೇರಿದಂತೆ ಯಾವ ಧರ್ಮಕ್ಕೂ ಭಿನ್ನಾಭಿಪ್ರಾಯವಿಲ್ಲ. ಹಾಗಿರುವಾಗ ಧರ್ಮಗಳ ಮಧ್ಯೆ ವ್ಯತ್ಯಾಸವಿರುವುದೆಲ್ಲಿಯೆಂದರೆ ; ಇಸ್ಲಾಮ್ ಕಳ್ಳತನ ಕೆಟ್ಟದು ಎನ್ನುವುದರ ಜೊತೆಗೇ ಕಳ್ಳತನಮುಕ್ತವಾದ ನಿರ್ಮಲ ಸಮಾಜವೊಂದನ್ನು ನಿರ್ಮಿಸುವುದು ಹೇಗೆ ಎಂಬುದನ್ನು ಕೂಡಾ ಕಲಿಸಿಕೊಡುತ್ತದೆ. ಕಳ್ಳತನ ಮಾಡುವ ಜನರಿರುವ ಒಂದು ಸಮಾಜವನ್ನು ಹೇಗೆ ನಿರ್ಮಿಸಬಹುದು ಎಂಬುದನ್ನು ತಿಳಿಸುತ್ತದೆ.
b. ಝಕಾತ್ (ಕಡ್ಡಾಯ ದಾನ)
ಇಸ್ಲಾಮ್ ಧರ್ಮದಲ್ಲಿ ಝಕಾತ್ ಕಡ್ಡಯ. ವಾರ್ಷಿಕ 85 ಗ್ರಾಂ ಗಳಿಗಿಂತ ಅಧಿಕ ಉಳಿತಾಯವುಳ್ಳ ಪ್ರತಿಯೊಬ್ಬನೂ 2.5% ದಷ್ಟನ್ನು ಕಡ್ಡಾಯವಾಗಿ ದಾನ ಮಾಡುವ ಪದ್ದತಿಯನ್ನು ಝಕಾತ್ ಎನ್ನುವರು. ಜಗತ್ತಿನ ಪ್ರತಿಯೊಬ್ಬ ಶ್ರೀಮಂತನು ಪ್ರಾಮಾಣಿಕವಾಗಿ ಝಕಾತ್ ನೀಡಿದಲ್ಲಿ ಖಂಡಿತವಾಗಿಯೂ ಬಡತನವು ತೊಲಗಬಹುದು ಮತ್ತು ಹಸಿವಿನಿಂದ ಸಾವು ಎಂಬ ಒಂದೇ ಒಂದು ಘಟನೆಯೂ ನಡೆಯಲಾರದು. ಕಳ್ಳತನಗಳಿಗೆ ಕಾರಣವಾಗುವ ಹತ್ತು ಹಲವು ಅಂಶಗಳಲ್ಲಿ ಮಾನವನ ಮೂಲಭೂತ ಅವಶ್ಯಕತೆಗಳ ಕೊರತೆಯೂ ಒಂದು.
c. ಕಳ್ಳತನಕ್ಕೆ ಕೈ ಕಡಿಯುವ ಶಿಕ್ಷೆ
ಇಸ್ಲಾಮೀ ರಾಷ್ಟ್ರದಲ್ಲಿ ಪೌರರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿದ ಬಳಿಕ ಯಾರಾದರೂ ಕಳ್ಳತನ ನಡೆಸಿದ್ದು ರುಜುವಾತಾದಲ್ಲಿ ಅವನ ಕೈಗಳನ್ನು ಕಡಿಯಲಾಗುತ್ತದೆ.
“ಕದ್ದವನು ; ಪುರುಷನಾಗಿರಲ್ಲಿ ಅಥವಾ ಸ್ತ್ರೀಯಾಗಿರಲಿ ಅವನ ಅಥವಾ ಅವಳ ಕೈಗಳನ್ನು ಕಡಿಯಿರಿ. ಇದು ಅವರ ಕುಕೃತ್ಯದ ಫಲ ಹಾಗು ಅಲ್ಲಾಹನ ಕಡೆಯಿಂದ ಮಾದರಿ ದಂಡನೆ. ಅಲ್ಲಾಹನು ಅತ್ಯಂತ ಬಲಾಢ್ಯನೂ, ಸುಜ್ಞಾನಿಯೂ ಆಗಿರುವನು" ( ಕುರ್ಆನ್ 5 : 38)
d. ಇಸ್ಲಾಮೀ ಶರಿಯಃ ಜಾರಿಯಿಂದ ಉತ್ತಮ ಫಲಿತಾಂಶ
ಅಮೆರಿಕವು ಅತ್ಯಂತ ಮುಂದುವರಿದ ದೇಶ ಎನ್ನಲಾಗುತ್ತದೆ. ಆದರೆ ದುರದೃಷ್ಟವಶಾತ್ ದರೋಡೆ, ಕಳ್ಳತನ, ಅತ್ಯಾಚಾರಗಳಲ್ಲೂ ಅದು ಅತ್ಯಂತ ಮುಂದುವರಿದಿದೆ. ಒಂದು ವೇಳೆ ಅಮೆರಿಕದಲ್ಲಿ ಇಸ್ಲಾಮಿಕ್ ಶರಿಯಃ ವನ್ನು ಜಾರಿಗೊಳಿಸಿದಲ್ಲಿ (ಅರ್ಥಾತ್ ಶ್ರೀಮಂತರು ಝಕಾತ್ ನೀಡುವುದು, ಕಳ್ಳರ ಕೈಗಳನ್ನು ಕಡಿಯುವುದು, ಅತ್ಯಾಚಾರಿಗೆ ಮರಣದಂಡನೆ...ಇತ್ಯಾದಿ) ಏನಾಗಬಹುದು? ಅಪರಾಧಗಳು ಕಡಿಮೆಯಾಗಲಾರದೇ ? ಖಂಡಿತಾ ಕಡಿಮೆಯಾಗಬಹುದು. ಬಿಗಿ ಕಾನೂನುಗಳು ವೃತ್ತಿಪರ ಅಪರಾಧಿಗಳನ್ನು ಖಂಡಿತಾ ಎದೆಗುಂದಿಸಬಹುದು.
ಇಲ್ಲಿ ಕಳ್ಳತನಗಳ ಪ್ರಮಾಣ ಎಷ್ಟಿದೆಯೆಂದರೆ ಕದ್ದವರ ಕೈಗಳನ್ನೆಲ್ಲಾ ಕಡಿಯುತ್ತಾ ಹೋದಲ್ಲಿ ಹಲವು ಸಾವಿರ ಅಂಗವಿಕರನ್ನು ಕಾಣಬೇಕಾಗಿ ಬರಬಹುದು ಎಂಬುದು ಒಪ್ಪತಕ್ಕದ್ದೇ. ಆದರೆ ವಾಸ್ತವದಲ್ಲಿ ಇಂತಹದೊಂದು ಕಠಿಣ ಕಾನೂನಿನ ಭಯವೇ ಅಪರಾಧಿಗಳನ್ನು ಎದೆಗುಂದಿಸಬಹುದು. ತನ್ನೆರಡು ಕೈಗಳಿಗೆ ಒದಗಿಲರುವ ಅವಸ್ಥೆಯನ್ನು ನೆನೆದೇ ವೃತ್ತಿಪರ ಕಳ್ಳರಲ್ಲಿ ಹೆಚ್ಚಿನವರು ಕಳ್ಳತನವನ್ನು ತೊರೆಯಬಹುದು. ಕೆಟ್ಟ ಧೈರ್ಯ ಮಾಡಿ ಸೆರೆಸಿಕ್ಕಿದ ಕೇಲವೇ ಕೆಲವು ಕಳ್ಳರ ಕೈಗಳನ್ನು ಮಾತ್ರವೇ ಕಡಿಯಬೇಕಾಗಬಹುದು. ಇದೇ ಸಮಯದಲ್ಲಿ ಕಳ್ಳರ ಭಯದಿಂದ ಮುಕ್ತರಾದ ಹಲವು ಸಾವಿರ ನಾಗರಿಕರು ಶಾಂತಿಯಿಂದ ನಿರಾಳರಾಗಬಹುದು.
ಆದುದರಿಂದ ಇಸ್ಲಾಮೀ ಶಾಸನವು ಪ್ರಾಯೋಗಿಕವೂ, ಉತ್ತಮ ಫಲಿತಾಂಶವನ್ನು ತರುವಂಥಾದ್ದೂ ಆಗಿದೆ.
3. ಸ್ತ್ರೀ ಪೀಡನೆ ಮತ್ತು ಅತ್ಯಾಚಾರ ತಡೆಗೆ ಕ್ರಮ
a. ಅತ್ಯಾಚಾರ ಮಾಡಿ ಸ್ತ್ರೀ ಪೀಡನೆಯನ್ನು ಎಲ್ಲಾ ಧರ್ಮಗಳೂ ಕೆಡಕೆನ್ನುತ್ತವೆ.
ಇದೇ ರೀತಿ ಇಸ್ಲಾಮ್ ಕೂಡಾ. ವ್ಯತ್ಯಾಸವೆಂದರೆ ಇಸ್ಲಾಮ್ ಇತರ ಧರ್ಮಗಳಿಗಿಂತ ಭಿನ್ನವಾಗಿ ಅತ್ಯಾಚಾರಗಳು, ಸ್ತ್ರೀ ಪೀಡನೆಗಳು ಇಲ್ಲದಂತಹ ಒಂದು ಸಮಾಜವನ್ನು ರೂಪಿಸುವ ಸೂಕ್ತ ಮಾರ್ಗದರ್ಶನ ನೀಡುತ್ತದೆ.
b. ಪುರುಷರಿಗೆ ಹಿಜಾಬ್:
ಇಸ್ಲಾಮಿನಲ್ಲಿ ಬುರ್ಖಾ(ಹಿಜಾಬ್) ಪದ್ದತಿಯಿದೆ. ಕುರ್ಆನ್ ಮೊತ್ತಮೊದಲು ಹಿಜಾಬಿನ ಆದೇಶ ನೀಡುವುದು ಪುರುಷರಿಗೆ.
“ಸತ್ಯವಿಶ್ವಾಸಿ ಪುರುಷರೊಡನೆ ತಮ್ಮ ದೃಷ್ಟಿಗಳನ್ನು ತಗ್ಗಿಸಿಕೊಳ್ಳಲೂ, ತಮ್ಮ ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳಲೂ ಹೇಳಿರಿ. ಇದು ಅವರ ಪಾಲಿಗೆ ಅತ್ಯಂತ ಹೆಚ್ಚು ಪರಿಶುದ್ಧವಾದ ಕ್ರಮಾಗಿದೆ." ಕುರ್ಆನ್ (24 : 30)
ಪುರುಷ ದೃಷ್ಟಿಯು ಸ್ತ್ರೀಯ ದೃಷ್ಟಿಯೊಂದಿಗೆ ಬೆರೆತರೆ ಪುರುಷನು ತನ್ನ ಮನದಲ್ಲಿ ಯಾವುದೇ ಕೆಟ್ಟ ಚಿಂತನೆಗಳು ಮೂಡದಂತೆ ದೃಷ್ಟಿಯನ್ನು ತಗ್ಗಿಸಬೇಕು. ಹೀಗೆ ಕುರ್ಆನ್ ಮೊತ್ತಮೊದಲು ಪುರುಷನಿಗೆ ಬುರ್ಖಾವನ್ನು ತೊಡಿಸಿದ ಬಳಿಕವಷ್ಟೇ ಸ್ತ್ರೀಯರಿಗೂ ಅದರ ಆದೇಶವನ್ನು ನೀಡುತ್ತದೆ.
c. ಸ್ತ್ರೀಯರಿಗೆ ಹಿಜಾಬ್
ಕುರ್ಆನಿನ 24ನೆ ಅಧ್ಯಾಯದ ತದನಂತರ ಅಂದರೆ 31ನೆ ಸೂಕ್ತಿಯು ಸ್ತ್ರೀಯರಿಗೆ ಹೀಗೆಂದು ಆದೇಶ ನೀಡುತ್ತದೆ.:
“ ಮತ್ತು ಸತ್ಯವಿಶ್ವಾಸಿ ಸ್ತ್ರೀಯರೊಡನೆ ಅವರು ತಮ್ಮ ದೃಷ್ಟಿಗಳನ್ನು ತಗ್ಗಿಸಿಕೊಳ್ಳಲೂ, ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳಲೂ ಹೇಳಿರಿ. ಅವರು ತಮ್ಮ ಶೃಂಗಾರಗಳನ್ನು ತೋರಿಸದಿರಲಿ; ಸ್ವಯಂ ಪ್ರಕಟವಾಗುವಂತಹವುಗಳನ್ನು ಹೊರತುಪಡಿಸಿ; ಮತ್ತು ತಮ್ಮ ಎದೆಯ ಮೇಲೆ ತಮ್ಮ ಮೇಲು ಹೊದಿಕೆಯ ಸೆರಗನ್ನು ಹಾಕಿಕೊಂಡಿರಲಿ. ಅವರು ತಮ್ಮ ಶೃಂಗಾರವನ್ನು ತಮ್ಮ ಪತಿಯರು, ತಂದೆಯರು, ಪತಿಯ ತಂದೆಯರು, ಪುತ್ರರು, ಪತಿಯ ಪುತ್ರರು, ಸಹೋದರರು, ಸಹೋದರ ಪುತ್ರರು, ಆಪ್ತ ಸ್ತ್ರೀಯರು.... ಇವರ ಹೊರತು ಇನ್ನಾರಿಗೂ ತೋರಿಸದಿರಲಿ......" (ಕುರ್ಆನ್ 24 : 31)
d. ಹಿಜಾಬಿನಿಂದ ಸ್ತ್ರೀ ಪೀಡನೆಗೆ ತಡೆ
ಸ್ತ್ರೀಯರಿಗೆ ಹಿಜಾಬನ್ನು ಶಿಫಾರಸು ಮಾಡಲು ಮುಖ್ಯ ಕಾರಣವೇನೆಂದು ಕುರ್ಆನ್ ವಿವರಿಸಿ ಕೊಡುತ್ತದೆ:
‘ ಓ ಪ್ರವಾದಿ, ನಿನ್ನ ಪತ್ನಿಯರೊಡನೆ, ಪುತ್ರಿಯರೊಡನೆ, ಸತ್ಯವಿಶ್ವಾಸಿನಿಯರೊಡನೆ ಅವರು ತಮ್ಮ ಮೇಲೆ ತಮ್ಮ ಚಾದರಗಳ ಸೆರಗನ್ನು ಇಳಿಸಿಕೊಳ್ಳಲು ಹೇಳು. ಇದು ಅವರು ಗುರುತಿಸಲ್ಪಡುವಂತಾಗಲೂ, ಪೀಡನೆಗಳಿಗೆ ಈಡಾಗದಿರಲೂ (ಅವರಿಗೆ) ಉತ್ತಮವಾಗಿದೆ. ಅಲ್ಲಾಹನು ಅತ್ಯಂತ ಕ್ಷಮಾಶೀಲನೂ, ಕರುಣಾಮಯಿಯೂ ಆಗಿರುವನು.' (ಕುರ್ಆನ್ 33 : 59)
ಹಿಜಾಬ್ ಪಾಲಿಸುವ ಸ್ತ್ರೀಯರು ಕುಲೀನ ಸ್ತ್ರೀಯರೆಂದು ಗುರುತಿಸಲ್ಪಡುವುದರಿಂದ ಮತ್ತು ಇದು ಅವರನ್ನು ಪೀಡನೆಗಳಿಂದ ಮುಕ್ತಗೊಳಿಸಲೂಬಹುದು ಎನ್ನುವ ಕುರ್ಆನ್ ಸ್ತ್ರೀಯರಿಗೆ ಹಿಜಾಬನ್ನು ಒಂದು ಗುರಾಣಿಯಾಗಿ ಶಿಫಾರಸು ಮಾಡುತ್ತದೆ.
e. ಅವಳಿ ಸೋದರಿಯರ ಉದಾಹರಣೆ.
ಅದೊಂದು ರಸ್ತೆ ಸುಂದರಿಯರಾದ ಇಬ್ಬರು ಅವಳಿ ಸೋದರಿಯರು ನಡೆದುಕೊಂಡು ಬರುತ್ತಿರುವರು. ಒಬ್ಬಳು ಸಂಪೂರ್ಣ ಹಿಜಾಬಿನಲ್ಲಿದ್ದರೆ ಮತ್ತೊಬ್ಬಳು ಧರಿಸಿರುವುದು ಪಾಶ್ಚಾತ್ಯ ಶೈಲಿಯ, ಅಂಗಸೌಷ್ಠವಗಳನ್ನು ಪ್ರದರ್ಶಿಸುವ ‘ ಮಿಡಿ' ಯನ್ನಾಗಿದೆ. ಅದೇ ರಸ್ತೆಯ ಇನ್ನೊಂದು ಅಂಚಿನಲ್ಲಿ ಮಿಕವನ್ನರಸುತ್ತಿರುವ ಪುಂಡ. ಇಕ ಪುಂಡನು ತನ್ನ ಬಲೆಯನ್ನು ಯಾರ ಮೇಲೆ ಬೀಸಬಹುದೆಂದು ಊಹಿಸಬಲ್ಲಿರಾ? ಬಹುಷಃ ನಿಮ್ಮ ಊಹೆ ಸರಿಯಾಗಿಯೇ ಇರಬಹುದು.
ಪಾಶ್ಚಾತ್ಯರ ಶಿಫಾರಸು ಮೇರೆಗೆ ಅಂಗಸೌಷ್ಠವವನ್ನು ಹೊರಚೆಲ್ಲಿ ಪೀಡಿಸಲ್ಪಡಲು ಪರೋಕ್ಷ ಆಹ್ವಾನವನ್ನು ನೀಡುವ ‘ ಮಿಡಿಧಾರಿಣಿ'ಯನ್ನೇ ಆ ಪುಂಡನು ಆಯ್ಕೆ ಮಾಡಬಹುದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ಕುರ್ಆನ್ ಸರಿಯಾಗಿಯೇ ಹೇಳಿದೆ: ‘ ಹಿಜಾಬ್ ಸ್ತ್ರೀ- ಪೀಡನೆಗಳನ್ನು ತಡೆಯುತ್ತದೆ'
f. ಅತ್ಯಾಚಾರಿಗೆ ಮರಣದಂಡನೆ.
ಇಸ್ಲಾಮೀ ಕಾನೂನಿನಲ್ಲಿ ಅತ್ಯಾಚಾರವೆಸಗಿದ ಅಪರಾಧಿಗೆ ಶಿಕ್ಷೆ ಮರಣದಂಡನೆಯಾಗಿದೆ. ಇದು ಅತಿಯಾಯಿತೆಂದು ಹಲವರು ಆಕ್ಷೇಪಿಸುತ್ತಾರೆ. ಇಸ್ಲಾಮ್ ಅತ್ಯಂತ ಕ್ರೂರ ಧರ್ಮವೆಂದು ಇನ್ನು ಕೆಲವರು ಆಕ್ಷೇಪ. ಈ ಬಗ್ಗೆ ನಾನು ಹಲವು ಮುಸ್ಲಿಮೇತರರಲ್ಲಿ ಚರ್ಚಿಸಿದ್ದೇನೆ. ಒಂದು ವೇಳೆ ನಿಮ್ಮ ಸ್ವಂತ ಸೋದರಿಯರೋ, ತಾಯಿಯೋ, ಪತ್ನಿಯೋ ಅತ್ಯಾಚಾರಕ್ಕೀಡಾಗಿ(ಅಲ್ಲಾಹನು ರಕ್ಷಿಸಲಿ) ಅಪರಾಧಿಯನ್ನು ನಿಮ್ಮ ಮುಂದೆ ಹಾಜರು ಪಡಿಸಿ ತೀರ್ಪುಕೇಳಿದಲ್ಲಿ ನಿಮ್ಮ ತೀರ್ಮಾನವೇನಾಗಿರಬಹುದು? ಎಲ್ಲರ ತೀರ್ಪು ಕೂಡಾ ಅಪರಾಧಿಗೆ ಮರಣವೇ ಸೂಕ್ತ ದಂಡನೆ ಎಂದಾಗಿತ್ತು. ಇನ್ನು ಕೆಲವರು ಅವನಿಗೆ ಚಿತ್ರಹಿಂಸೆ ಕೊಟ್ಟು ಕೊಲ್ಲಬೇಕು ಎಂದಿದ್ದರು. ಓಹೋ ! ಬಲಿಪಶು ನಿಮ್ಮ ಸ್ವಂತ ತಂಗಿಯೋ, ತಾಯಿಯೋ, ಆಗಿದ್ದರೆ ಮರಣದಂಡನೆ, ಅನ್ಯರಾಗಿದ್ದರೆ ಮಾಫಿ!! ಇದೆಂತಹಾ ದ್ವಂದ್ವ ನೀತಿ !?
g. ಅತ್ಯಾಚಾರ ಪ್ರಕರಣ ದಾಖಲಾತಿಯಲ್ಲಿ ಅಮೆರಿಕಕ್ಕೆ ಪ್ರಥಮ ಸ್ಥಾನ
‘ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ' ಅತ್ಯಂತ ಮುಂದುವರಿದ ದೇಶವೆಂದು ನಂಬಲಾಗಿದೆ. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (F.B.I) ಹೊರಗೆಡಹಿದ ಒಂದು ವರದಿಯಂತೆ 1990 ರಲ್ಲಿ ಅಮೆರಿಕದಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳ ಸಂಖ್ಯೆ 1,02,555. ಆದರೆ ಇದು ವಾಸ್ತವದಲ್ಲಿ ನಡೆದ ಒಟ್ಟು ಪ್ರಕರಣದ ಕೇವಲ 16% ಮಾತ್ರ ಎಂದು ಕೂಡಾ ಅದು ವರದಿ ಮಾಡುತ್ತದೆ. ಆದುದರಿಂದ ಪ್ರಕರಣಗಳ ನೈಜ ಸಂಖ್ಯೆಗಳ ಬಗ್ಗೆ ಅರಿಯಬೇಕಾದಲ್ಲಿ ಪ್ರಸ್ತುತ ಸಂಖ್ಯೆಗೆ 6.25 ರಿಂದ ಗುಣಿಸಬೇಕಾಗುತ್ತದೆ. ಹೀಗೆ 1990 ರಲ್ಲಿ ನಡೆದ ಅತ್ಯಾಚಾರಗಳ ನೈಜ ಸಂಖ್ಯೆ 6,40,968. ಅರ್ಥಾತ್ ಅಮೆರಿಕದಲ್ಲಿ ಪ್ರತಿನಿತ್ಯ ನಡೆಯುವ ಅತ್ಯಾಚಾರಗಳ ಸಂಖ್ಯೆ 1756.
ಆ ಬಳಿಕದ ಇನ್ನೊಂದು ವರದಿಯಂತೆ ಅಮೆರಿಕಾದಲ್ಲಿ ನಿತ್ಯ ನಡೆಯುವ ಅತ್ಯಾಚಾರಗಳ ಸಂಖ್ಯೆ 1900. ನ್ಯಾಷನಲ್ ಕ್ರೈಮ್ ವಿಕ್ಟಿಮೈಸೇಷನ್ ಸರ್ವೇ ಬ್ಯೂರೋ ಆಫ್ ಜಸ್ಟಿಸ್ (ಯು. ಎಸ್. ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್) ಮಾಡಿದ ವರದಿಯಂತೆ ಕೇವಲ 1996ರಲ್ಲಿ ಒಂದು ವರ್ಷದಲ್ಲೇ ದಾಖಲಾದ ಅತ್ಯಾಚಾರಗಳ ಅಧಿಕೃತ ಸಂಖ್ಯೆ 3,07,000. ಮಾತ್ರವಲ್ಲದೇ ಇದು ನಡೆದ ಒಟ್ಟು ಪ್ರಕರಣಗಳ ಕೇವಲ 31% ಮಾತ್ರ. ಆದುದರಿಂದ ಅಮೆರಿಕದಲ್ಲಿ 1996ನೆ ಇಸವಿಯಲ್ಲಿ ನಡೆದ ಒಟ್ಟು ಅತ್ಯಾಚಾರ ಪ್ರಕರಣಗಳ ಸಂಖ್ಯೆ 3,07,000 x 3.226 =9,90,332. ಅಂದರೆ ಪ್ರತಿನಿತ್ಯ 2,713 ಅತ್ಯಾಚಾರಗಳು !! ಹೌದು : ಈ ದೇಶ ಬಹಳಷ್ಟು ಮುಂದುವರಿದಿದೆ. ಪ್ರತೀ 32 ಸೆಕಂಡ್ಗಳಿಗೆ ಒಂದು ರೇಪ್. ಬಹುಷಃ ಆ ವರ್ಷದಲ್ಲಿ ಅಮೆರಿಕದ ಅತ್ಯಾಚಾರಿಗಳ ಭಂಡತನವು ಬಹಳ ಹೆಚ್ಚಾಗಿರಬೇಕು.
ಇನ್ನು 1990ರ ಎಫ್. ಬಿ. ಐ. ರಿಪೋರ್ಟಿನ ಮುಂದುವರಿದ ಭಾಗವು ಹೀಗನ್ನುತ್ತದೆ : ಅತ್ಯಾಚಾರ ದೂರು ದಾಖಲಾದ ಪ್ರಕರಣಗಳ ಪೈಕಿ ಬಂಧಿಸಲ್ಪಟ್ಟ ಆರೋಪಿಗಳು ಕೇವಲ 10% ಮಾತ್ರ ಪ್ರಕರಣಗಳ ಒಟ್ಟು ಸಂಖ್ಯೆಯನ್ನು ಪರಿಗಣಿಸಿದಲ್ಲಿ ಇದು ಕೇವಲ 1.6 ಶೇಕಡಾ. ಇನ್ನು ಬಂಧನಕ್ಕೊಳಗಾದ ಹತ್ತು ಶೇಕಡಾ ಆರೋಪಿಗಳ ಪೈಕಿ ಅರ್ಧದಷ್ಟು ಮಂದಿಯನ್ನು ವಿಚಾರಣೆಗೆ ಮುನ್ನವೇ ಬಿಡುಗಡೆಗೊಳಿಸಲಾಗುತ್ತದೆ. ಅರ್ಥಾತ್ ಒಟ್ಟು ಪ್ರಕರಣಗಳ ಪೈಕಿ ವಿಚಾರಣೆಯನ್ನು ಎದುರಿಸಿದವರು ಕೇವಲ 0.8% ಸರಳವಾಗಿ ಹೇಳುವುದಾದರೆ ಒಬ್ಬ ವ್ಯಕ್ತಿಯು 125 ಬಾರಿ ಅತ್ಯಾಚ್ಯಾರವನ್ನೆಸಗಿದರೆ ಶಿಕ್ಷೆಗೊಳಗಾಗುವ ಸಾಧ್ಯತೆ ಕೇವಲ ಒಂದು ಬಾರಿ ಮಾತ್ರ ಅಮೆರಿಕನ್ನರ ಪೈಕಿ ಹೆಚ್ಚಿನವರು ಇದನ್ನೊಂದು ಉತ್ತಮ ಜೂಜಾಟವೆಂದೇ ಪರಿಗಣಿಸಿರುವರು. ಇನ್ನೊಂದು ತಮಾಷೆಯೆಂದರೆ ಅಲ್ಲಿನ ಕಾನೂನಿನಂತೆ ಅತ್ಯಾಚಾರಕ್ಕೆ ಏಳು ವರ್ಷಗಳ ಸಜೆ ಎಂದಿರುವಾಗಲೂ, ವಿಚಾರಣೆಯಿಂದ ಶಿಕ್ಷೆಗೊಳಗಾದವರ ಪೈಕಿ ಅರ್ಧದಷ್ಟು ಅಪರಾಧಿಗಳಿಗೆ ದೊರಕಿರುವುದು ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯ ಸಜೆಯಾಗಿದೆ. ಇದಕ್ಕೆ ಅವರು ನೀಡುವ ಸಮಜಾಯಿಷಿಗಳು ಇನ್ನಷ್ಟು ವಿಚಿತ್ರವಾಗಿದೆ - ‘ ಆರೋಪಿಯದು ಪ್ರಪ್ರಥಮ ಅಪರಾಧ'. ಆದುದರಿಂದ ಶಿಕ್ಷೆಯಲ್ಲಿ ರಿಯಾಯಿತಿ(ಸಬ್ಸಿಡಿ).
h. ಇಸ್ಲಾಮಿಕ್ ಷರಿಯಃ ಜಾರಿಯಿಂದ ಉತ್ತಮ ಫಲಿತಾಂಶ
ನಾವೀಗ ಅಮೆರಿಕವು ಇಸ್ಲಾಮೀ ಶರಿಯಃವನ್ನು(ಹಿಜಾಬ್) ಅಳವಡಿಸಿಕೊಂಡಿರುವ ದೃಶ್ಯವನ್ನು ಊಹಿಸಿಕೊಳ್ಳೋಣ.
ಪುರುಷನ ನೋಟ ಮಹಿಳೆಯತ್ತ ಸಾಗಿದಾಗ ಅವನು ತನ್ನ ಮನದಲ್ಲಿ ಕೆಟ್ಟ ಭಾವನೆಗಳು ಮೂಡದಂತೆ ದೃಷ್ಟಿಯನ್ನು ತಗ್ಗಿಸಿಕೊಳ್ಳುವನು. ಎಲ್ಲಾ ಮಹಿಳೆಯರಿಗೆ ಸಂಪೂರ್ಣ ಹಿಜಾಬ್. ಅರ್ಥಾತ್ ಮುಖ - ಮುಂಗೈಯನ್ನುಳಿದು ಶರೀರದ ಭಾಗಗಳೆಲ್ಲವೂ ಬಂದ್. ಇದರ ಬಳಿಕವೂ ಅಕಸ್ಮಾತ್ ಯಾರಾದರೂ ಅತ್ಯಾಚಾರವೆಸಗಿದಲ್ಲಿ ಮರಣದಂಡನೆ.
ಇಂತಹ ಸನ್ನಿವೇಶದಲ್ಲಿ ನಿಮ್ಮಲ್ಲಿ ನನ್ನದೊಂದು ಚಿಕ್ಕ ಪ್ರಶ್ನೆ ! ಅಮೆರಿಕಾದ ಅತ್ಯಾಚಾರ ಪ್ರಕರಣಗಳು ಇನ್ನಷ್ಟು ಹೆಚ್ಚಬಹುದೋ, ಮಾಮೂಲಿಯಾಗಿರಬಹುದೋ ಅಥವಾ ಕಡಿಮೆಯಾಗಬಹುದೋ ? ಖಂಡಿತವಾಗಿಯೂ ಕಡಿಮೆಯಾಗಬಹುದು.
4. ಮಾನವ ಸಮಸ್ಯೆಗಳಿಗೆ ಸರಳ ಹಾಗೂ ಪ್ರಾಯೋಗಿಕ ಪರಿಹಾರಗಳು
ಇಸ್ಲಾಮ್ ಒಂದು ಅತ್ಯುತ್ತಮ ಜೀವನ ಪದ್ದತಿಯಾಗಿದೆ. ಇದರ ಬೋಧನೆಗಳು, ಇದು ಮನುಷ್ಯರ ಸಮಸ್ಯೆಗಳಿಗೆ ಸೂಚಿಸುವ ಪರಿಹಾರ ಮಾರ್ಗಗಳು ಅಲಂಕಾರಿಕ ಭಾಷಣವಾವಿರದೆ ಪ್ರಾಯೋಗಿಕವಾಗಿದೆ. ಇದು ಸೃಷ್ಟಿಕರ್ತನಿಂದಲೇ ಬಂದ ಜಾಗತಿಕ ಧರ್ಮವಾಗಿದ್ದು ಯಾವುದೇ ಒಂದು ನಿರ್ಧಿಷ್ಠ ವರ್ಗಕ್ಕೋ, ರಾಷ್ಟ್ರಕ್ಕೋ ಮಾತ್ರ ಸೀಮಿತವಲ್ಲ..
ಉತ್ತರ:
1. ಮಾಧ್ಯಮಗಳ ಪಾತ್ರ
a. ಇಸ್ಲಾಮ್ ಖಂಡಿತವಾಗಿಯೂ ಅತ್ಯುತ್ತಮ ಧರ್ಮವಾಗಿದೆ. ಒಬ್ಬ ಸತ್ಯಾನ್ವೇಷಿಗೆ ಸತ್ಯ - ಮಿಥ್ಯಗಳನ್ನು ಅತ್ಯಂತ ಸ್ಪಷ್ಟವಾಗಿ ವಿವರಿಸಿಕೊಡುತ್ತದೆ. ವಾಸ್ತವದಲ್ಲಿ ‘ಇಸ್ಲಾಮ್' ಎಂದ ಕೂಡಲೇ ಪಾಶ್ಚಾತ್ಯರು ಬೆಚ್ಚಿಬೀಳಲು ಕಾರಣ ಇದೇ ಆಗಿದೆ. ಮಾಧ್ಯಮಗಳನ್ನು ಕೈವಶ ಮಾಡಿಕೊಂಡಿರುವ ಪಾಶ್ಚಾತ್ಯರು ಇಸ್ಲಾಮಿಗೆ ಹಾನಿಕಾರಕವಾದ ಸುದ್ದಿಗಳನ್ನು ಪ್ರಸಾರ ಮಾಡಲು ಪ್ರೇರೇಪಿಸುವರು. ‘ ಬಲ್ಲ ಮೂಲಗಳಿಂದ' ಎಂಬ ತಳಹದಿಯಲ್ಲಿ ಇವರು ಇಸ್ಲಾಮಿನ ವಿರುದ್ಧ ಪ್ರಸಾರ ಮಾಡುವ ಕೆಲವು ಸುದ್ದಿಗಳ ಮೂಲವನ್ನರಸಿದಲ್ಲಿ ಅದು ಅಡಿಪಾಯವಿಲ್ಲದ ದುರ್ಬಲ ಕಟ್ಟಡವಾಗಿರುವುದನ್ನು ಕಾಣುತ್ತೇವೆ.
b. ಯಾವುದೇ ಬಾಂಬ್ ಸ್ಪೋಟದ ಪ್ರಕರಣವಾಗಿರಲಿ ಇವರು ಶಂಕೆ ವ್ಯಕ್ತ ಪಡಿಸುವುದು ಮುಸ್ಲಿಮರ ಮೇಲೆ. ಆಧಾರ ರಹಿತವಾದ ‘ಶಂಕಿತ ಮುಸ್ಲಿಮ್ ಆರೋಪಿಗಳ' ಚಿತ್ರಗಳು ಇವರ ಪತ್ರಿಕೆಗಳ ಮುಖಪುಟದಲ್ಲೇ ಸ್ಪಷ್ಟವಾಗಿ ಮೂಡಿರುತ್ತವೆ. ತದನಂತರ ತನಿಖೆಯಲ್ಲಿ ನೈಜ ಅಪರಾಧಿಗಳು ಪತ್ತೆಯಾದ ಸುದ್ದಿಗಳು ಈ ಪೀತ ಪತ್ರಿಕೆಗಳ ಒಳಪುಟಗಳಲ್ಲಿ ಮುದ್ರಣಗೊಂಡಿರುತ್ತವೆ. ಅದೇನೂ ಅಷ್ಟೊಂದು ಪ್ರಾಮುಖ್ಯವಾದ ಸುದ್ದಿಯಲ್ಲವಲ್ಲ !
c. ಐವತ್ತು ವರ್ಷದ ಮುಸ್ಲಿಮ್ ಹದಿನೈದು ವರ್ಷದ ಯುವತಿಯನ್ನು ಆಕೆಯ ಮತ್ತು ಪೋಷಕರ ಅನುಮತಿಯೊಂದಿಗೆ ವಿವಾಹವಾದ ಸುದ್ದಿಯು ಮುಕಮಪುಟದಲ್ಲಿದ್ದರೆ, ಐವತ್ತು ವರ್ಷದ ಅಮುಸ್ಲಿಮ್ ಆರು ವರ್ಷದ ಬಾಲೆಯನ್ನು ಅತ್ಯಾಚಾರಗೈದ ಸುದ್ದಿಯು ಒಳಪುಟದಲ್ಲಿರುತ್ತವೆ. ಅಮೆರಿಕದಲ್ಲಿ ನಿತ್ಯ ನಡೆಯುವ 2,713 ಅತ್ಯಾಚಾರಗಳು ಪತ್ರಿಕೆಗಳಲ್ಲಿ ಕಂಡು ಬರುವುದಿಲ್ಲ. ಏಕೆಂದರೆ ಅದು ಅವರ ‘ಜೀವನಶೈಲಿ' ಅಲ್ಲವೇ ?
2. ಎಲ್ಲಾ ಸಮುದಾಯಗಳಲ್ಲೂ ಕಪ್ಪು ಚುಕ್ಕೆಗಳು
ಮುಸ್ಲಿಮರಲ್ಲಿ ಕೂಡಾ ಕೆಲವರು ಮೋಸಗಾರರೂ, ದುಷ್ಟರೂ ಇರುವುದನ್ನು ಅಲ್ಲಗೆಳೆಯಲಾಗದು. ಇವರು ತಮ್ಮನ್ನು ಕಳ್ಳತನಗಳಲ್ಲಿಯೂ, ಮಾದಕವಸ್ತು ಸಾಗಾಟಗಳಲ್ಲಿಯೂ ತೊಡಗಿಸಿಕೊಂಡಿರುವರು ಎಂಬುದು ನಿಜ ಆದರೆ ಮಾಧ್ಯಮಗಳು ಮುಸ್ಲಿಮರು ಮಾತ್ರ ಈ ದಂಧೆಗಳಲ್ಲಿ ತೊಡಗಿರುವವರು ಎಂಬಂತಹ ಚಿತ್ರಣವನ್ನು ಮೂಡಿಸುತ್ತವೆ. ಆದರೆ ವಾಸ್ತವದಲ್ಲಿ ದುಷ್ಟ ವ್ಯಕ್ತಿಗಳು ಎಲ್ಲಾ ಸಮುದಾಯದಲ್ಲೂ ಇರುವರು. ಇತ್ತೀಚೆಗೆ ಈ ಮಾಧ್ಯಮಗಳ ಒಂದು ನವೀನ ರೀತಿಯ ಘೋಷಣೆ ‘ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ; ಆದರೆ ಭಯೋದ್ಪಾದಕರೆಲ್ಲರೂ ಮುಸ್ಲಿಮರು'. ವಾಸ್ತವದಲ್ಲಿ ಇದೊಂದು ಶುದ್ಧ ವಂಚನೆಯಾಗಿದೆ. ಇಂದು ಮುಸ್ಲಿಮ್ ಭಯೋತ್ಪಾದನೆ ಎಂಬ ಹೆಸರಿನಲ್ಲಿ ಪ್ರಸಾರಗೊಳ್ಳುತ್ತಿರುವ ಬಾಂಬ್ ಸ್ಪೋಟಗಳ ಹತ್ತು ಹಲವು ಪಟ್ಟು ಅಧಿಕ ಪ್ರಮಾಣದಲ್ಲಿ ಅಮುಸ್ಲಿಮ್ ಭಯೋತ್ಪಾದನಾ ಕೃತ್ಯಗಳೂ, ಬಾಂಬ್ ಸ್ಪೋಟಗಳೂ, ಹತ್ಯಾಕಾಂಡಗಳೂ ನಡೆದಿವೆ, ನಡೆಯುತ್ತಲೂ ಇವೆ. ಮುಸ್ಲಿಮೇತರ ಭಯೋತ್ಪಾದಕರು ನಡೆಸಿದ ನರಮೇಧಗಳ ಪಟ್ಟಿಯನ್ನು ನೋಡಿದಲ್ಲಿ ಮುಸ್ಲಿಮ್ ಭಯೋತ್ಪಾದಕರು ಕೂಡಾ ಮುಖ ಮುಚ್ಚಿಕೊಂಡಾರು !
3. ಅಖಂಡ ಮುಸ್ಲಿಮ್ ಸಮುದಾಯವು ಉತ್ತಮ ಸಮುದಾಯವಾಗಿದೆ.
ಸಮುದಾಯದ ಕೆಲವು ಕಪ್ಪು ಚುಕ್ಕೆಗಳ ಹೊರತಾಗಿಯೂ, ಅಖಂಡ ಮುಸ್ಲಿಮ್ ಸಮುದಾಯವು ಜಗತ್ತಿನ ಅತ್ಯುತ್ತಮ ಸಮುದಾಯವಾಗಿದೆ. ಅತ್ಯಂತ ದೊಡ್ಡ ಮದ್ಯಪಾನ ವರ್ಜಿತ ಸಮುದಾಯವೊಂದು ಜಗತ್ತಿನಲ್ಲಿದ್ದರೆ ಅದು ಮುಸ್ಲಿಮ್ ಸಮುದಾಯವಾಗಿದೆ. ಜಗತ್ತಿನಲ್ಲೇ ಅತ್ಯಂತ ಹೆಚ್ಚು ದಾನ ನೀಡುವ ಏಕಸಮುದಾಯವು ಮುಸ್ಲಿಮ್ ಆಗುದೆ. ವಿನಮ್ರತೆ, ಮನೋದಾರ್ಡ್ಯತೆ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಇವರ ನೀತಿಶಾಸ್ತ್ರದ ಬಗ್ಗೆ ಬೆರಳು ತೋರಿ ಆಕ್ಷೇಪಿಸಲು ಜಗತ್ತಿನ ಯಾವೊಬ್ಬ ವ್ಯಕ್ತಿಗೂ ಸಾಧ್ಯವಿಲ್ಲ.
4. ಚಾಲಕನನ್ನು ನೋಡಿ ಕಾರಿನ ಬಗ್ಗೆ ತೀರ್ಮಾನಿಸುವುದು ಸರಿಯಲ್ಲ
ನೂತನ ಮಾದರಿಯ ಒಂದು ಮರ್ಸಿಡಿಸ್ ಕಾರು. ಚಾಲನೆಯನ್ನು ಅರ್ಧಂಬರ್ಧ ಕಲಿತವನೊಬ್ಬ ಅದನ್ನು ಓಡಿಸುತ್ತಿದ್ದಾನೆ. ಅಡ್ಡಾದಿಡ್ಡಿ ಓಡಿದ ಕಾರು ದೊಡ್ಡದೊಂದು ಬಂಡೆಗೆ ಢಿಕ್ಕಿ ಹೊಡೆದು ನಿಂತಿದೆ. ಮೂತಿ ಸೊಟ್ಟಗಾಗಿ, ಮುರಿದ ಸ್ಟಿಯರಿಂಗ್ ವ್ಹೀಲ್ನ ಮೇಲೆ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದ ಚಾಲಕ. ನೆತ್ತರು ಹರಿಯುತ್ತಿದೆ. ಕಾರು ಸರಿಯಿಲ್ಲವೆಂದು ನಿಮ್ಮ ತೀರ್ಮಾನವೊ? ಒಂದು ಕಾರನ್ನು ಪರೀಕ್ಷಿಸಬೇಕಿದ್ದಲ್ಲಿ ಆ ಕಾರಿನ ಸಾಮಾರ್ಥ್ಯ, ವೇಗ, ಇಂಧನ ಬಳಕೆಯ ಮಿತವ್ಯತೆ, ಸುರಕ್ಷಾ ವ್ಯವಸ್ಥೆ ಮುಂತಾದವುಗಳನ್ನು ಮೊತ್ತಮೊದಲು ನೋಡಲಾಗುತ್ತದೆಯೇ ಹೊರತು ಆ ಕಾರಿನ ಚಾಲಕನನ್ನು ನೋಡಿ ಕಾರಿನ ಬಗ್ಗೆ ಯಾರೂ ತೀರ್ಮಾನಿಸಲಾರರು. ಒಂದು ವೇಳೆ ಮುಸಲ್ಮಾನರೆಲ್ಲರೂ ಕೆಟ್ಟವರೆಂದು ಸದ್ಯಕ್ಕೆ ಒಪ್ಪಿಕೊಂಡರೂ ಇಸ್ಲಾಮ್ ಧರ್ಮವನ್ನು ದೂರುವುದು ಆತ್ಮವಂಚನೆಯಾಗುತ್ತದೆ. ಅನುಯಾಯಿಗಳನ್ನು ನೋಡಿ ಧರ್ಮವನ್ನೇ ಕೆಟ್ಟದೆಂದು ತೀರ್ಮಾನಿಸುವ ತೀರ್ಪುಗಾರನು ಉತ್ತಮನಲ್ಲ. ಇಸ್ಲಾಮಿನ ಬಗ್ಗೆ ತಿಳಿಯಲಿಚ್ಛಿಸುವವರು ಅದರ ಅಧಿಕೃತ ಮೂಲಗಳಾದ ಕುರ್ಆನ್ ಮತ್ತು ಹದೀಸ್(ಪ್ರವಾದಿ ಚರ್ಯೆ)ಗಳನ್ನು ನೋಡಬೇಕಾಗಿದೆ.
5. ಇಸ್ಲಾಮಿನ ಅತ್ಯುತ್ತಮ ಅನುಯಾಯಿ ಪ್ರವಾದಿ ಮಹಮ್ಮದ್ (ಸ)
ನೀವು ನಿಜವಾಗಿಯೂ ಒಂದು ಕಾರನ್ನು ಅದೆಷ್ಟು ಉತ್ತಮವಾಗಿದೆಯೆಂದು ತಿಳಿಯಲು ಇಚ್ಛಿಸುತ್ತಿರುವಿರೋ ? ಸರಿ ; ಅತ್ಯಂತ ದಕ್ಷ ಚಾಲಕನೊಬ್ಬನನ್ನು ನೇಮಿಸಿ ಕಾರನ್ನು ಚಲಾಯಿಸಲು ಹೇಳಿರಿ. ಇದೇ ರೀತಿ ಇಸ್ಲಾಮ್ ಧರ್ಮವನ್ನು ಪರೀಕ್ಷಿಸಲು ಇಸ್ಲಾಮಿನ ಅತ್ಯುತ್ತಮ, ಮಾದರಿಯೋಗ್ಯ ಅನುಯಾಯಿಯನ್ನು ನೋಡಬೇಕಾಗಿದೆ. ಅವರು ಅಲ್ಲಾಹನ ಅಂತಿಮ ಪ್ರವಾದಿ ಮುಹಮ್ಮದ್ (ಸ). ಮುಸ್ಲಿಮರು ಮಾತ್ರವಲ್ಲದೇ ಇನ್ನಿತರ ಅನೇಕ ಅಮುಸ್ಲಿಮ್ ಚರಿತ್ರೆಕಾರರು, ಇತಿಹಾಸ ತಜ್ಞರು ಪ್ರವಾದಿ ಮುಹಮಮ್ಮದ್(ಸ) ರನ್ನು ಮಾನವ ಇತಿಹಾಸದಲ್ಲಿ ಮೂಡಿ ಬಂದ ಅತ್ಯಂತ ಶ್ರೇಷ್ಠ ವ್ಯಕ್ತಿ ಎಂದಿರುವರು. ‘ಮಾನವ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲೀ ವ್ಯಕ್ತಿಗಳು' (The Hundred most influential men history) ಎಂಬ ಬಗ್ಗೆ ಮೈಕಲ್ ಹಾರ್ಟ್ ಬರೆದ ಪುಸ್ತಕದಲ್ಲಿ ಪ್ರಪ್ರಥಮ ಸ್ಥಾನವನ್ನು ಪ್ರವಾದಿ ಮುಹಮ್ಮದ್ (ಸ) ರಿಗೆ ನೀಡಲಾಗಿದೆ. ಪ್ರವಾದಿ ಮುಹಮ್ಮದ್ (ಸ) ರನ್ನು ಪ್ರಶಂಸಿಸಿದ ಅಮುಸ್ಲಿಮ್ ಪೈಕಿ ಥಾಮಸ್ ಕಾರ್ಲೈಲ್, ಲಾ -ಮಾರ್ಟಿನ್ ಮುಂತಾದವರು ಕೆಲವು ಉದಾಹರಣೆಗಳಾಗಿರುವರು.
ಉತ್ತರ : ‘ಕಾಫಿರ್' ಎಂಬ ಪದದ ಮೂಲವು ‘ಕುಫ್ರ್' ಆಗಿದೆ. ಅರ್ಥಾತ್ ‘ಅಡಗಿಸಿಡು' ಅಥವಾ ‘ನಿರಾಕರಿಸು' ಎಂದಾಗಿದೆ. ಇದು ಅರಬೀ ಪದವಾಗಿದೆ. ಇಸ್ಲಾಮೀ ಪಾರಿಭಾಷಿಕದಲ್ಲಿ ‘ಕಾಫಿರ' ನೆಂದರೆ ಇಸ್ಲಾಮ್ ಎಂಬ ಸತ್ಯವನ್ನು ಅಡಗಿಸಿಡುವ ಅಥವಾ ನಿರಾಕರಿಸುವ ವ್ಯಕ್ತಿ. ಇದನ್ನೇ ಆಂಗ್ಲ ಭಾಷೆಯಲ್ಲಿ ‘non - Muslim' ಎಂದೂ, ಕನ್ನಡದಲ್ಲಿ ‘ಅಮುಸ್ಲಿಮ್' ಎಂದೂ ಅನುವಾದಿಸಬಹುದು. ತನ್ನನ್ನು ‘ಅಮುಸ್ಲಿಮ್' ಎಂದು ಕರೆಸಿಕೊಳ್ಳಲು ಇಚ್ಛಿಸದವನು ಇಸ್ಲಾಮನ್ನು ಸ್ವೀಕರಿಸಿಕೊಂಡರೆ ಸಮಸ್ಯೆ ಪರಿಹಾರವಾಗಲೂ ಬಹುದು.