ಇಸ್ಲಾಮ್ ಪುರುಷರಿಗೆ ಒಂದಕ್ಕಿಂತ ಹೆಚ್ಚಿನ ಪತ್ನಿಯರನ್ನು ಹೊಂದಲು, ಮಹಿಳೆಯರಿಗೇಕೆ ಒಂದಕ್ಕಿಂತ ಹೆಚ್ಚಿನ ಪತಿಯರನ್ನು ಹೊಂದುವ ಆ ಸ್ವಾತಂತ್ರ್ಯವಿಲ್ಲ?
ಕೆಲವು ಮುಸ್ಲೀಮರನ್ನು ಒಳಗೂಡಿ, ಅನೇಕರು ಈ ತಾರ್ಕಿಕವಾದ ಪುರುಷರಿಗೆ ಸಮಾನವಾದ ಮಹಿಳೆಯ ಸ್ಥಾನಮಾನದ ಕುರಿತಾದ ಪ್ರಶ್ನೆಯನ್ನು ಕೇಳುತ್ತಾರೆ. ಅದು ಮಹಿಳೆಯರ ಹಕ್ಕು ಎಂದು ಅವರ ಭಾವನೆ.
ಮೊದಲಿಗೆ ಕಡಾಖಂಡಿತವಾಗಿ ತಿಳಿಸ ಬಯಸುವುದೇನೆಂದರೆ, ಇಸ್ಲಾಮಿನ ಸಮಾಜವು ನ್ಯಾಯಬದ್ಧವಾಗಿಯೂ ಮತ್ತು ಸಮಾನತೆಯೂ ಆಗಿದೆ. ಅಲ್ಲಾಹನು ಪುರುಷ ಹಾಗೂ ಸ್ತ್ರೀಯರನ್ನು ಸಮಾನವಾಗಿ ಸೃಷ್ಟಿಸಿದ್ದಾನಾದರೂ, ವಿಭಿನ್ನ ಸಾಮರ್ಥ್ಯಗಳನ್ನೂ ಹಾಗೂ ಜವಾಬ್ದಾರಿಗಳನ್ನೂ ದಯಪಾಲಿಸಿದ್ದಾನೆ. ಶಾರೀರಿಕವಾಗಿಯೂ ಮತ್ತು ಮಾನಸಿಕವಾಗಿಯೂ ಸ್ತ್ರೀಪುರುಷರು ವಿಭಿನ್ನತೆ ಹೊಂದಿದ್ದಾರೆ. ಅವರ ಪಾತ್ರವೂ ಹಾಗೂ ಹೊಣೆಗಾರಿಕೆಯೂ ಭಿನ್ನವಾಗಿದೆ. ಪುರುಷ ಮತ್ತು ಮಹಿಳೆಯು ಇಸ್ಲಾಮಿನಲ್ಲಿ ಸಮಾನವಾದರೂ ಹೋಲಿಕೆಯಲ್ಲಲ್ಲ.
ಸೂರಃ ಅನ್ನಿಸಾ’ ೪:೨೨-೨೪ರ ವರೆಗಿನ ಆಯಾತ್‌ಗಳು ವಿವಾಹ ಅನುಮತಿಯಿರದ ಮಹಿಳೆಯರ ಕುರಿತಾಗಿದ್ದೂ ೨೪ನೇ ಆಯಾತ್‌ನಲ್ಲಿ ವಿವಾಹಿತರಾದ ಮಹಿಳೆಯರನ್ನು (ವಿವಾಹವಾಗುವುದನ್ನು ನಿಷೇಧಿಸಲಾಗಿದೆ).
ಅಧ್ಯಾಯ 4: ಅನ್ನಿಸಾ, ಸೂಕ್ತ 22- 24
وَلَا تَنْكِحُوا مَا نَكَحَ آبَاؤُكُمْ مِنَ النِّسَاءِ إِلَّا مَا قَدْ سَلَفَ ۚ إِنَّهُ كَانَ فَاحِشَةً وَمَقْتًا وَسَاءَ سَبِيلًا
ನಿಮ್ಮ ಪಿತರು ವಿವಾಹ ಮಾಡಿಕೊಂಡಿದ್ದ ಸ್ತ್ರೀಯರನ್ನು ನೀವು ಎಂದೆಂದಿಗೂ ವಿವಾಹವಾಗಬೇಡಿರಿ. ಆದರೆ ಹಿಂದೆ ಆದುದು ಆಗಿ ಹೋಯಿತು. ವಾಸ್ತವದಲ್ಲಿ ಇದೊಂದು ಅಶ್ಲೀಲ ಕಾರ್ಯ, ಅಪ್ರಿಯ ಕಾರ್ಯ ಮತ್ತು ದುಷ್ಟ ಸಂಪ್ರದಾಯವಾಗಿದೆ.
حُرِّمَتْ عَلَيْكُمْ أُمَّهَاتُكُمْ وَبَنَاتُكُمْ وَأَخَوَاتُكُمْ وَعَمَّاتُكُمْ وَخَالَاتُكُمْ وَبَنَاتُ الْأَخِ وَبَنَاتُ الْأُخْتِ وَأُمَّهَاتُكُمُ اللَّاتِي أَرْضَعْنَكُمْ وَأَخَوَاتُكُمْ مِنَ الرَّضَاعَةِ وَأُمَّهَاتُ نِسَائِكُمْ وَرَبَائِبُكُمُ اللَّاتِي فِي حُجُورِكُمْ مِنْ نِسَائِكُمُ اللَّاتِي دَخَلْتُمْ بِهِنَّ فَإِنْ لَمْ تَكُونُوا دَخَلْتُمْ بِهِنَّ فَلَا جُنَاحَ عَلَيْكُمْ وَحَلَائِلُ أَبْنَائِكُمُ الَّذِينَ مِنْ أَصْلَابِكُمْ وَأَنْ تَجْمَعُوا بَيْنَ الْأُخْتَيْنِ إِلَّا مَا قَدْ سَلَفَ ۗ إِنَّ اللَّهَ كَانَ غَفُورًا رَحِيمًا
ನಿಮಗೆ ಈ ಸ್ತ್ರೀಯರು ವಿವಾಹಕ್ಕೆ ನಿಷಿದ್ಧರು:- ನಿಮ್ಮ ಮಾತೆಯರು, ಪುತ್ರಿಯರು, ಸಹೋದರಿಯರು, ಸೋದರತ್ತೆಯರು, ತಾಯಿಯ ಸೋದರಿಯರು, ಸೋದರ ಪುತ್ರಿಯರು, ಸೋದರಿ ಪುತ್ರಿಯರು, ನಿಮಗೆ ಮೊಲೆ ಹಾಲುಣಿಸಿದ ಸಾಕು ತಾಯಂದಿರು, ನಿಮ್ಮೊಂದಿಗೆ ಸ್ತನಪಾನ ಸಂಬಂಧವಿರುವ ಸೋದರಿಯರು, ನಿಮ್ಮ ಪತ್ನಿಯರ ತಾಯಂದಿರು ನಿಮ್ಮ ಮಡಿಲಲ್ಲಿ ಪೋಷಣೆ ಪಡೆದಿರುವ ನಿಮ್ಮ ಪತ್ನಿಯ ಪುತ್ರಿಯರು, ಯಾವ ಪತ್ನಿಯರೊಂದಿಗೆ ನೀವು ದೈಹಿಕ ಸಂಪರ್ಕ ಮಾಡಿರುವಿರೋ ಅವರ ಪುತ್ರಿಯರು, ಆದರೆ (ಕೇವಲ ನಿಕಾಹ್ ಆಗಿದ್ದು) ನೀವು ದೈಹಿಕ ಸಂಪರ್ಕ ಮಾಡಿರದಿದ್ದರೆ (ಅವರನ್ನು ಬಿಟ್ಟು ಅವರ ಪುತ್ರಿಯರನ್ನು ವಿವಾಹ ಮಾಡಿಕೊಳ್ಳುವುದರಲ್ಲಿ) ದೋಷವಿಲ್ಲ. -ನಿಮ್ಮ ಸ್ವಂತ ಪುತ್ರರ ಪತ್ನಿಯರೂ ನಿಮಗೆ ನಿಷಿದ್ಧ. ಒಂದು ವಿವಾಹ ಬಂಧನದಲ್ಲಿ ಇಬ್ಬರು ಸಹೋದರಿಯನ್ನಿರಿಸಿಕೊಳ್ಳುವುದೂ ನಿಷಿದ್ಧವಾಗಿದೆ. ಆದರೆ ಹಿಂದೆ ಆದುದು ಆಗಿ ಹೋಯಿತು. ನಿಶ್ಚಯವಾಗಿಯೂ ಅಲ್ಲಾಹ್ ಕ್ಷಮಿಸುವವನೂ, ಕೃಪೆದೋರುವವನೂ ಆಗಿರುತ್ತಾನೆ.
وَالْمُحْصَنَاتُ مِنَ النِّسَاءِ إِلَّا مَا مَلَكَتْ أَيْمَانُكُمْ ۖ كِتَابَ اللَّهِ عَلَيْكُمْ ۚ وَأُحِلَّ لَكُمْ مَا وَرَاءَ ذَٰلِكُمْ أَنْ تَبْتَغُوا بِأَمْوَالِكُمْ مُحْصِنِينَ غَيْرَ مُسَافِحِينَ ۚ فَمَا اسْتَمْتَعْتُمْ بِهِ مِنْهُنَّ فَآتُوهُنَّ أُجُورَهُنَّ فَرِيضَةً ۚ وَلَا جُنَاحَ عَلَيْكُمْ فِيمَا تَرَاضَيْتُمْ بِهِ مِنْ بَعْدِ الْفَرِيضَةِ ۚ إِنَّ اللَّهَ كَانَ عَلِيمًا حَكِيمًا
ಇತರರ ವಿವಾಹ ಬಂಧನದಲ್ಲಿರುವ ಸ್ತ್ರೀಯರೂ (ಮುಹ್ಸನಾತ್) ನಿಮಗೆ ನಿಷಿದ್ಧರಾಗಿದ್ದಾರೆ. ಆದರೆ (ಯುದ್ಧದಲ್ಲಿ) ನಿಮ್ಮ ವಶಕ್ಕೆ ಬಂದ ಸ್ತ್ರೀಯರು ಇದಕ್ಕೆ ಹೊರತಾಗಿರುತ್ತಾರೆ. ಇದು ನಿಮ್ಮ ಮೇಲೆ ಅಲ್ಲಾಹನು ವಿಧಿಸಿರುವ ಕಾನೂನು. ಇವರ ಹೊರತಾಗಿರುವ ಸ್ತ್ರೀಯರನ್ನು ನೀವು ನಿಮ್ಮ ಸಂಪತ್ತಿನ ಮೂಲಕಗಳಿಸುವುದನ್ನು ಧರ್ಮಬದ್ಧಗೊಳಿಸಲಾಗಿದೆ. ಆದರೆ ಅವರನ್ನು ವಿವಾಹ ಬಂಧನದಲ್ಲಿಡಬೇಕು. ಸ್ವಚ್ಛಂದ ಲೈಂಗಿಕತೆ ಸಲ್ಲದು. ಇನ್ನು ನೀವು ಅವರೊಂದಿಗೆ ದಾಂಪತ್ಯ ಜೀವನದ ಸವಿಯನ್ನುಣ್ಣುವುದರ ಪ್ರತಿಫಲವಾಗಿ ಅವರ ವಿವಾಹ ಧನವನ್ನು ಕಡ್ಡಾಯವಾಗಿ ಅವರಿಗೆ ಕೊಡಿರಿ. ಆದರೆ, ವಿವಾಹಧನ ನಿಶ್ಚಯಿಸಿ ಕೊಂಡ ಅನಂತರ ಪರಸ್ಪರ ಒಮ್ಮತದ ಒಪ್ಪಂದವೇನಾದರೂ ಆಗಿದ್ದರೆ, ಅದರಲ್ಲೇನೂ ದೋಷವಿಲ್ಲ. ನಿಶ್ಚಯವಾಗಿಯೂ ಅಲ್ಲಾಹ್ ಸರ್ವಜ್ಞನೂ, ಮಹಾ ಧೀಮಂತನೂ ಆಗಿರುತ್ತಾನೆ.
ಈ ಕೆಳಗಿನ ವಿವರಣೆಗಳು ಇಸ್ಲಾಮ್ ಏಕೆ ’ಬಹುಪತಿತ್ವ’ವನ್ನು ನಿಷೇಧಿಸಿದೆ ಎಂಬುದನ್ನು ವಿವರಿಸುತ್ತದೆ:
ಒಂದು ವೇಳೆ ಪುರುಷನೋರ್ವನಿಗೆ ಒಂದಕ್ಕಿಂತ ಹೆಚ್ಚಿನ ಪತ್ನಿಯರಿದ್ದಲ್ಲಿ, ಅಂತಹ ವಿವಾಹ ನಂತರ ಹುಟ್ಟುವ ಮಕ್ಕಳನ್ನು ಗುರುತಿಸುವುದು ಸುಲಭ. ಅಂದರೆ ಮಗುವಿನ ತಾಯಿ ತಂದೆಯನ್ನು ಗುರುತಿಸುವುದು ಸುಲಭ. ಹಾಗೇನಾದರೂ ಮಹಿಳೆಯೋರ್ವಳು ಒಂದಕ್ಕಿಂತ ಹೆಚ್ಚಿನ ಪುರುಷರನ್ನು ಪತಿಯಾಗಿ ಹೊಂದಿದ್ದಲ್ಲಿ, ಅಂತಹ ವಿವಾಹ ನಂತರ ಹುಟ್ಟುವ ಮಕ್ಕಳನ್ನು ಗುರುತಿಸುವುದು ಕಷ್ಟಕರ. ಅಂದರೆ, ಮಗುವಿನ ತಾಯಿ ಗುರುತಿಸುವುದು ಸುಲಭವೇ ಹೊರತು ತಂದೆಯನ್ನಲ್ಲ. ಇಸ್ಲಾಮ್ ಪೋಷಕರೀರ್ವರನ್ನೂ ಅಂದರೆ, ತಂದೆ ಮತ್ತು ತಾಯಿಯಿಬ್ಬರನ್ನೂ ಗುರುತಿಸುವುದಕ್ಕೆ ಅತ್ಯುನ್ನತ ಮಹತ್ವವನ್ನು ನೀಡುತ್ತದೆ. ಮನಶ್ಶಾಸ್ತ್ರವು ಪೋಷಕರನ್ನರಿದ ಅದರಲ್ಲೂ ತಂದೆಯನ್ನರಿಯದ ಮಕ್ಕಳು ತೀವ್ರವಾದ ಮಾನಸಿಕ ಆಘಾತ ಹಾಗೂ ಗೊಂದಲವನ್ನು ಅನುಭವಿಸುತ್ತಾರೆ ಎಂದು ತಿಳಿಸುತ್ತದೆ. ಅನೇಕ ಬಾರಿ ಅವರು ಅತೃಪ್ತಿಕರ ಬಾಲ್ಯವನ್ನು ಅವರು ಅನುಭವಿಸುತ್ತಾರೆ. ಇದರಿಂದಲೇ ವೇಶ್ಯೆಯರ ಮಕ್ಕಳು ಆರೋಗ್ಯಕರ ಬಾಲ್ಯವನ್ನು ಅನುಭವಿಸುವುದಿಲ್ಲ. ಅಂತಹ ವಿವಾಹದಲ್ಲಿ ಜನಿಸಿದ ಮಕ್ಕಳನ್ನು ಶಾಲೆಗೆ ಸೇರಿಸುವಾಗ, ತಂದೆಯ ಹೆಸರಿನ ಸ್ಥಳವು ೩-೪ ಹೆಸರಿನಿಂದ ತುಂಬಿಬಿಡಬಹುದು. ಹೌದು! ಇತ್ತೀಚೆಗೆ ವಿಜ್ಞಾನವು ಬಹಳ ಮುಂದುವರೆದಿದ್ದೂ, ಜೆನೆಟಿಕ್ ಪರೀಕ್ಷೆಯ ಮೂಲಕ ತಂದೆ – ತಾಯಿಯರನ್ನು ಕಂಡುಕೊಳ್ಳುವುದು ಸುಲಭ. ಆದರೂ ಇದು ಭೂತಕಾಲಕ್ಕೆ ಅನ್ವಯಿಸುತ್ತದೆಯೇ ಹೊರತು ವರ್ತಮಾನಕಾಲಕ್ಕಲ್ಲ.
ನೈಸರ್ಗಿಕವಾಗಿ ಮಹಿಳೆಗೆ ಹೋಲಿಸುವುದಾದರೆ ಪುರುಷನು ಹೆಚ್ಚಿನ ಬಹುಪತ್ನಿತ್ವ ಗುಣಕ್ಕೆ ಹೊಂದುವಂತವನಾಗಿದ್ದಾನೆ.
ಬಹುಪತ್ನಿಯರನ್ನು ಹೊಂದಿದಾಗ್ಯೂ ಪುರುಷನು ಪತಿಯಾಗಿ, ಆತನ ಕರ್ತವ್ಯಗಳನ್ನು ನಿರ್ವಹಿಸುವುದು ಜೈವಿಕವಾಗಿ ಸುಲಭ-ಸಾಧ್ಯ. ಓರ್ವ ಮಹಿಳೆ, ಬಹುಪತಿಯರನ್ನು ಹೊಂದಿಕೊಂದು ಆಕೆಯ ಪತ್ನಿತ್ವದ ಕರ್ತವ್ಯಗಳನ್ನು ನಿರ್ವಹಿಸುವುದು ಅಸಾಧ್ಯ. ಮಹಿಳೆಯು ತನ್ನ ಮುಟ್ಟಿನ ಸರಣಿಯ ವಿವಿಧ ಹಂತಗಳ ಕಾರಣದಿಂದ, ಅನೇಕ ಮಾನಸಿಕ ಮತ್ತು ಸ್ವಾಭಾವಿಕ ಬದಲಾವಣೆಗಳಿಗೆ ಒಳಗಾಗುತ್ತಾಳೆ.
ಮಹಿಳೆಗೆ ಒಂದಕ್ಕಿಂತ ಹೆಚ್ಚಿನ ಪತಿಯರನ್ನು ಹೊಂದಿದ್ದೇ ಆದಲ್ಲಿ, ಆಕೆಗೆ ಒಂದೇ ಸಮಯದಲ್ಲಿ ಅನೇಕ ಲೈಂಗಿಕ ಸಂಗಾತಿಗಳ ಲೈಂಗಿಕ ಸಂಪರ್ಕ ಹೊಂದಬಹುದಾದ ಸಾಧ್ಯತೆಗಳಿದ್ದು ಇದರಿಂದ ಆಕೆ ಗುಹ್ಯ ರೋಗಗಳಿಂದ ಅಥವಾ ಲೈಂಗಿಕವಾಗಿ ಹರಡುವ ರೋಗಗಳಿಂದ ಬಳಲುವ ಸಾಧ್ಯತೆಗಳು ಹೆಚ್ಚಾಗಿದ್ದು, ಇದು ಆಕೆಯ ಗಂಡಂದರಿಗೂ, ಅವರು ಇತರ ಲೈಂಗಿಕ ಸಂಬಂಧಗಳನ್ನು ಹೊಂದಿಲ್ಲದಾಗ್ಯೂ ಹರಡುತ್ತದೆ. ಆದರೆ ಅದೇ ಸನ್ನಿವೇಶವು, ಓರ್ವ ಪುರುಷನು ಬಹುಪತ್ನಿತ್ವವನ್ನು ಹೊಂದಿದ್ದೂ, ಆತನ ಪತ್ನಿಯರು ಯಾವುದೇ ರೀತಿಯಲ್ಲಿ ಇತರ ಲೈಂಗಿಕ ಸಂಬಂಧಗಳನ್ನು ಹೊಂದಿಲ್ಲವಾದರೆ ಯಾವುದೇ ಲೈಂಗಿಕ ಸೋಂಕುಗಳ ತೊಂದರೆಗಳಿಗೆ ಒಳಪಡುವುದಿಲ್ಲ.
ಈ ಮೇಲಿನ ಎಲ್ಲಾ ಕಾರಣಗಳನ್ನು ಗಮನಿಸುವುದಾದಲ್ಲಿ ಏಕೆ ಅಲ್ಲಾಹನು ಬಹುಪತಿತ್ವವನ್ನು ನಿರ್ಬಂಧಿಸಿದ್ದಾನೆ ಎಂಬುದನ್ನು ಸರಳವಾಗಿ ಅರ್ಥೈಸಿಕೊಳ್ಳಬಹುದು.