‘ಪರಮದಯಾಮಯನು ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ’
ಇಸ್ಲಾಮಿ ಶಿಕ್ಷಣದ ಬುನಾದಿಯೇ ಸಂಪೂರ್ಣ ಏಕದೇವತ್ವ, ಉಳಿದೆಲ್ಲಾ ವಿಶ್ವಾಸಗಳೂ, ಆಚಾರ, ವಿಚಾರ ಹಾಗೂ ವಿಧಿವಿಧಾನಗಳು ಈ ಬುನಾದಿಯ ಮೇಲೆಯೇ ನಿರ್ಮಿತಗೊಂಡಿವೆ.
ದೇವರ ಹೆಸರು ಅನನ್ಯವಾಗಿದೆ :
ಅಲ್ಲಾಹ್ ಎಂಬುದು ಆ ಏಕೈಕ ನೈಜ ಆರಾಧ್ಯನ ವೈಯುಕ್ತಿಕ ಹಾಗೂ ಅವನಿಗೆ ತಕ್ಕುದಾದ ಹೆಸರು. ಇನ್ನಾರೂ ಆ ಹೆಸರಿನಿಂದ ಕರೆಸಿಕೊಳ್ಳಲು ಅರ್ಹರಲ್ಲ. ಈ ಪದಕ್ಕೆ ಲಿಂಗ ಬದಲಾವಣೆಯಾಗಲಿ ಅಥವಾ ಬಹುವಚನಗಳಾಗಲಿ, ಅನ್ಯ ಭಾಷೆಗಳಲ್ಲಿ ಹೆಸರಿಸುವಚಿತೆ ಇಲ್ಲ, ಉದಾಹರಣೆಗೆ, ಕನ್ನಡದಲ್ಲಿ ದೇವ ಎಂಬುದು ಏಕವಚನ. ದೇವ ಎಂಬ ಪದಕ್ಕೆ ‘ರುಗಳು’ ಸೇರಿಸಿದರೆ ಆಗುತ್ತದೆ ‘ದೇವರುಗಳು’ ಮತ್ತು ಇದಕ್ಕೆ ‘ತೆ’ ಸೇರಿಸಿದರೆ ‘ದೇವತೆ’ ಸ್ತ್ರೀಲಿಂಗವಾಗುತ್ತದೆ.
ಆದರೆ ದೇವರ ವೈಯುಕ್ತಿಕ ಹೆಸರು ‘ಅಲ್ಲಾಹ್’ ನ ಬಳಕೆಯು ಏಕದೇವತ್ವದ ವಿಷಯದಲ್ಲಿ ಪರಿಶುದ್ಧ ವಿಶ್ವಾಸವಿರಿಸುವುದಕ್ಕೆ ಇಸ್ಲಾಂ ಎಷ್ಟು ಮಹತ್ವ ನೀಡಿದೆ ಎಂಬುದನ್ನು ಬಿಂಬಿಸುತ್ತದೆ.
ಏಕದೇವತ್ವದ ಕುರಿತು ಇಸ್ಲಾಮ್ ಸರಳ ಶಿಕ್ಷಣವನ್ನು ನೀಡುತ್ತದೆ. ಈ ಕೆಳಗಿನ ಅಲ್ಲಾಹನ ಕೆಲವು ಗುಣವಿಶೇಷಗಳು ಏಕದೇವತ್ವವನ್ನು ಇನ್ನೂ ಉತ್ತಮ ರೀತಿಯಲ್ಲಿ ಅರ್ಥ ಮಾಡಿಕೊಳ್ಳುಬಹುದೆಂದು ಆಶಿಸುತ್ತೇವೆ.
ಅಲ್ಲಾಹನಿಗೆ ಸಹಭಾಗಿಗಳಾಗಲಿ, ಸರಿ ಹೋಲುವವರಾಗಲಿ ಅಥವ ಪ್ರತಿಸ್ಪರ್ಧಿಗಳಾಗಲೀ ಇರುವುದಿಲ್ಲ.
ಅಲ್ಲಾಹನಿಗೆ ಮಾತಪಿತರಾಗಲಿ, ಹೆಂಡತಿ, ಮಕ್ಕಳಾಗಲಿ ಇರುವುದಿಲ್ಲ.
ಅಲ್ಲಾಹನು ಯಾರ ಸಹಾಯವನ್ನು ಪಡೆಯದೆ, ಪ್ರತಿಯೊಂದನ್ನು ಸೃಷ್ಟಿಸಿರುವನು.
ಅಲ್ಲಾಹನನ್ನು ಮೀರುವ ಅಥವಾ ಸರಿಹೋಲುವಂತಹದು ಯಾವುದೂ ಇಲ್ಲ.
ಕೇವಲ ಅಲ್ಲಾಹನೇ ಲಾಭ ಅಥವಾ ನಷ್ಟವನ್ನುಂಟು ಮಾಡಬಲ್ಲನು.
ಅಲ್ಲಾಹನಿಗೆ ಸರಿಹೋಲುವವರು ಯಾರೂ ಇಲ್ಲ :
ಪರಸ್ಪರ ಭಿನ್ನಾಭಿಪ್ರಾಯ ತಾಳುವ ಹಲವು ಪ್ರಭುಗಳು ಲೇಸೋ ಅಥವಾ ಸರ್ವ ಸಮರ್ಥನಾದ ಅಲ್ಲಾಹನೋ (ಪವಿತ್ರ ಖುರ್‍ಆನ್ 12:39)
ಮುಸ್ಲಿಮರ ವಿಶ್ವಾಸ, ಏಕೈಕ ನೈಜ, ಅನನ್ಯ, ಸರ್ವಶ್ರೇಷ್ಟ, ಸರ್ವಶಕ್ತ ಆರಾಧ್ಯನ ಅಸ್ತಿತ್ವವೇ ದೇವರ ಕುರಿತು ತರ್ಕಬದ್ಧ ಕಲ್ಪನೆಯಾಗಿದೆ. ಉದಾಹರಣೆಗೆ, ಇಬ್ಬರು ಪ್ರಭಾವಶಾಲಿ, ಬಲಿಷ್ಠ ಸೃಷ್ಠಿಕರ್ತರಿರಲು ಎಷ್ಟು ಮಾತ್ರಕ್ಕೂ ಸಾಧ್ಯವಿಲ್ಲ ಮತ್ತು ಈ ಕುರಿತು ಒಂದು ಕ್ಷಣ ಯೋಚಿಸಿದಲ್ಲಿ ಇದು ಅಸಂಭವನೀಯ ಎಂಬುದು ಮನದಟ್ಟಾಗುತ್ತದೆ.
ಒಂದು ವೇಳೆ ಅನೇಕ ದೇವರುಗಳು ಇದ್ದಿದ್ದೇ ಹೌದೆಂಬುದಾದಲ್ಲಿ, ಇಡೀ ವಿಶ್ವದಾದ್ಯಂತ ಅಕ್ರಮ, ಅವ್ಯವಸ್ಥೆ, ಗೊಂದಲ ಹಾಗೂ ವಿನಾಶಕ್ಕೆ ಕಾರಣವಾಗುತ್ತಿತ್ತು. ಆದರೆ ನಮ್ಮ ಜಗತ್ತು ಸಂಪೂರ್ಣ ಸಾಮರಸ್ಯವನ್ನು ಕಾಪಾಡಿಕೊಂಡಿದೆ. ಪವಿತ್ರ-ಖುರ್‍ಆನ್ ಈ ಕುರಿತು ಹೇಳುತ್ತದೆ.
ಅಲ್ಲಾಹನು ತನಗಾಗಿ ಯಾವುದೇ ಪುತ್ರನನ್ನೂ ಅಥವ ಮಕ್ಕಳನ್ನಾಗಿ ಮಾಡಿಕೊಂಡಿಲ್ಲ. ಹಾಗೂ ಅವನ ಜೊತೆ ಇನ್ನೊಬ್ಬ ದೇವನೂ ಇಲ್ಲ. ಹಾಗಿರುತ್ತಿದ್ದರೆ ಪ್ರತಿಯೊಬ್ಬ ದೇವನೂ ತನ್ನ ಸೃಷ್ಠಿಯನ್ನು ತೆಗೆದುಕೊಂಡು ಬೇರೆ ಹೋಗಿ ಬಿಡುತ್ತಿದ್ದನು. ಆ ಬಳಿಕ ಅವರು ಒಬ್ಬರ ಮೇಲೆ ಇನ್ನೊಬ್ಬರು ಆಕ್ರಮಣ ನಡೆಸುತ್ತಿದ್ದರು. ಇವರು ಆಡುವ ಮಾತುಗಳಿಂದೆಲ್ಲಾ ಅಲ್ಲಾಹ್ ಪರಿಶುದ್ಧನಾಗಿರುತ್ತಾನೆ (ಪವಿತ್ರ ಖುರ್‍ಆನ್ 23:91)
ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲ :
ನಿಮ್ಮ ಆರಾಧ್ಯನು ಏಕೈಕ ಆರಾಧ್ಯನು ಅವನ ಹೊರತು ಇನ್ನಾವ ಆರಾಧ್ಯರೂ ಇರುವುದಿಲ್ಲ. (ಪವಿತ್ರ ಖುರ್‍ಆನ್ 2:163)
ಅಲ್ಲಾಹನನ್ನು ಆರಾಧಿಸಿರಿ ಮತ್ತು ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿಸದಿರಿ (ಪವಿತ್ರ ಖುರ್‍ಆನ್ 4:36)
ಅಲ್ಲಾಹನ ಹೊರತು ಇನ್ನಾರೂ ಪ್ರಾರ್ಥಿಸಲ್ಪಡಲು ಅಥವಾ ಮೊರೆಯಿಡಲು ಅಥವಾ ಪ್ರತಿಜ್ಞಾಬದ್ಧನಾಗಿರಲು ಸಾಧ್ಯವಿಲ್ಲ ನಕ್ಷತ್ರಗಳು, ಪ್ರಾಣಿ-ಪಕ್ಷಿಗಳು, ಸಂತ-ಮಹಾತ್ಮರು, ಸಂದೇಶವಾಹಕರು, ಪಾದ್ರಿಗಳು ಅಥವಾ ಧಾರ್ಮಿಕ ವಿದ್ವಾಂಸರು, ಇವರಾರೂ ಆರಾಧನೆಗೆ ಅರ್ಹರಲ್ಲ. ಇವೆಲ್ಲವೂ ಸ್ವತಃ ಸೃಷ್ಟಿಯಾಗಿದ್ದು ನಿರ್ದಿಷ್ಟ ಪರಿಮಿತಿಯೊಳಗಿರುವವು. ಅಂತೆಯೇ ಅಪೂರ್ಣವಾಗಿರುವುವು. ಇಸ್ಲಾಮಿನಲ್ಲಿ ಇವರೂ ಆರಾಧನೆಗೆ ಅರ್ಹರಲ್ಲ. ಕೇವಲ ಅಲ್ಲಾಹನೇ ಪರಿಪೂರ್ಣನು. ದೇವರೆಂದು ಕರೆಯಿಸಿಕೊಳ್ಳುವ ಎಲ್ಲವುಗಳ ಕುರಿತು ಖುರ್‍ಆನ್ ಎಚ್ಚರಿಸುತ್ತದೆ.
ಇವರು ಅಲ್ಲಾಹನನ್ನು ಬಿಟ್ಟು ಇತರ ಯಾರನ್ನು ಕೂಗಿ ಪ್ರಾರ್ಥಿಸುತ್ತಿರುವರೋ ಅವರು ಯಾವುದೇ ವಸ್ತುವಿನ ಸೃಷ್ಟಿಕರ್ತರಲ್ಲ. ನಿಜವಾಗಿ ಅವರು ಸ್ವತಃ ಸೃಷ್ಠಿಗಳು, ಅವರು ನಿರ್ಜೀವಿಗಳು, ಸಜೀವಿಗಳಲ್ಲ. ಅವರನ್ನು ಯಾವಾಗ ಪುನಃ ಜೀವಂತಗೊಳಿಸಿ ಎಬ್ಬಿಸಲಾಗುವುದೆಂದು ಅವರಿಗೆ ತಿಳಿದಿರುವುದಿಲ್ಲ. (ಪವಿತ್ರ ಖುರ್‍ಆನ್ 16:20.21)
ಅಲ್ಲಾಹನ ಪರಿಪೂರ್ಣ ವೈಶಿಷ್ಟ್ಯಗಳಲ್ಲಿ ಸೃಷ್ಠಿಯ ಪಾತ್ರವೇನೂ ಇಲ್ಲ :
ಅಲ್ಲಾಹನಿಗೆ ಸರಿಹೋಲುವವರು ಯಾರೂ ಇಲ್ಲ (ಪವಿತ್ರ ಖುರ್‍ಆನ್ 112:4)
ಯಾರಲ್ಲೂ ಅಥವಾ ಯಾವುದರಲ್ಲೂ ಅಲ್ಲಾಹನ ಯಾವೊಂದು ಅಂಶವೂ ಉಪಸ್ಥಿತವಿಲ್ಲ ಎಂಬುದು ಇಸ್ಲಾಮಿನ ಶಿಕ್ಷಣ (ಆದರೆ ಅವನ ಜ್ಞಾನವು ಎಲ್ಲವನ್ನೂ ಆವರಿಸಿದೆ) ಅಲ್ಲಾಹನ ಪರಿಪಕ್ವ ಗುಣವಿಶೇಷಗಳನ್ನು ಯಾವುದಾದರೂ ಸೃಷ್ಟಿಯೂ ಪಡೆದಿರುವುದು ಎಂಬ ವಿಚಾರವನ್ನು ಇಸ್ಲಾಂ ಖಡಾಖಂಡಿತವಾಗಿ ತಳ್ಳಿಹಾಕುತ್ತದೆ.
ಕೇವಲ ಅಲ್ಲಾಹನೇ ಸಂಪೂರ್ಣ ಸಾಮಥ್ರ್ಯವುಳ್ಳವನು. ಅಂತೆಯೇ ಅವನು ಮಾತ್ರ ಲಾಭ ಅಥವಾ ನಷ್ಟಗಳ ಮಾಲೀಕನು.
ಅಲ್ಲಾಹನು ಅವನ ಸೃಷ್ಠಿಯಂತಲ್ಲ :
ಇಸ್ಲಾಂ ಅಲ್ಲಾಹನ ಸಾಮಥ್ರ್ಯವನ್ನು ಮಾನವನಿಗೆ ಹೋಲಿಸುವುದಕ್ಕೆ ಯಾವ ರೀತಿ ವಿರೋಧ ವ್ಯಕ್ತಪಡಿಸುತ್ತದೆಯೋ, ಅದೇ ರೀತಿ ಮಾನವನ ಗುಣಲಕ್ಷಣಗಳು ಹಾಗೂ ನ್ಯೂನ್ಯತೆಗಳನ್ನು ಅಲ್ಲಾಹನಿಗೆ ಹೋಲಿಸುವುದಕ್ಕೂ ಪ್ರತಿರೋಧ ವ್ಯಕ್ತಪಡಿಸುತ್ತದೆ.
ಸೃಷ್ಠಿಯ ನ್ಯೂನ್ಯತೆಗಳು ಹಾಗೂ ಅಲ್ಲಾಹನ ಪ್ರಾಬಲ್ಯತೆಯನ್ನು ಇಸ್ಲಾಂ ಸಂಪೂರ್ಣ ಬೇರ್ಪಡಿಸಿ ವರ್ಣಿಸುತ್ತದೆ. ಅವನ ಸೃಷ್ಠಿಯಿಂದ ಅವನನ್ನು ವರ್ಣಿಸಿರುವ ಎಲ್ಲಾ ದೌರ್ಬಲ್ಯತೆಗಳಿಂದ ಅಲ್ಲಾಹನು ಸಂಪೂರ್ಣ ಮುಕ್ತನು.
ಆದಾಗ್ಯೂ ಕೆಲವು ಧರ್ಮಗಳು, ಅಲ್ಲಾಹನು ತನ್ನನ್ನು ಮಾನವ ರೂಪದಲ್ಲಿ ಪ್ರಕಟಪಡಿಸಿರುವನು ಎಂದು ಹೇಳುವುವು ಮತ್ತು ಆ ಕಾರಣದಿಂದ, ಅವನು ಏಕಕಾಲದಲ್ಲಿ ಸಂಪೂರ್ಣ ಮಾನವನನ್ನು ಅರಿತಿರುವನು. ಅಂತೆಯೇ ಸಂಪೂರ್ಣ ದೇವನೂ ಅರಿತಿರುವನು ಎಂದು ವಿಶ್ವಾಸವಿರಿಸುತ್ತವೆ. ಆದರೆ, ಮಾನವನ ಗುಣಲಕ್ಷಣಗಳು ನ್ಯೂನ್ಯತೆಗಳಿಂದ ತುಂಬಿಕೊಂಡಿದೆ ಅವನ ಜ್ಞಾನವೂ, ಪ್ರಾಬಲ್ಯತೆಯೂ ಮಿತಿಯೊಳಗಿರುವುದು ಮತ್ತು ಅವನು ಅಂತ್ಯವುಳ್ಳವನೂ ಆಗಿದ್ದಾನೆ . ಅಲ್ಲಾಹನು, ಉದಾಹರಣೆಗೆ ಎಲ್ಲವನ್ನೂ ಅರಿತವನು. ಸಂಪೂರ್ಣ ಪ್ರಬಲನು, ಅನಂತನು ಇತ್ಯಾದಿಯಾಗಿರುವ ತನ್ನ ಗುಣಲಕ್ಷಣಗಳಲ್ಲಿ ಪರಿಶುದ್ಧನೂ ಮತ್ತು ನ್ಯೂನ್ಯತೆಗಳಿಂದ ಮುಕ್ತನು ಆಗಿದ್ದಾನೆ.
ಅಲ್ಲಾಹನ ಕುರಿತು ಇಸ್ಲಾಮಿನ ಸರಳ ಹಾಗೂ ಪರಿಶುದ್ಧ ಶಿಕ್ಷಣಗಳಿಂದಾಗಿ, ಮುಸ್ಲಿಮರು, ಇಂತಹ ಅರ್ಥರಹಿತ ಯೋಚನೆ (ದೇವರು ಮಾನವನೋ ಅಥವಾ ಇನ್ನಾವುದಾದರೂ ಸೃಷ್ಠಿಯೋ ಆಗಿರುವನು ಎಂಬ ಕಲ್ಪನೆಗಳನ್ನು) ಸ್ವೀಕರಿಸುವುದರಿಂದ ಸಂಪೂರ್ಣ ಮುಕ್ತರಾಗಿರುವರು.
ಅಲ್ಲಾಹನನ್ನು ನೇರವಾಗಿ ಪ್ರಾರ್ಥಿಸುವುದು :
ಎಚ್ಚರಿಕೆ ! ಧರ್ಮವು ನಿಷ್ಕಳಂಕವಾಗಿ ಕೇವಲ ಅಲ್ಲಾಹನ ಹಕ್ಕಾಗಿದೆ. ಇನ್ನು ಅವನ ಹೊರತು ಇತರರನ್ನು ರಕ್ಷಕ ಮಿತ್ರರಾಗಿ ಮಾಡಿಕೊಂಡವರ ವಿಷಯ. ಅವರು ನಮ್ಮನ್ನು ಅಲ್ಲಾಹನಿಗೆ ನಿಕಟಗೊಳಿಸಲಿಕ್ಕಾಗಿ ಮಾತ್ರ ನಾವು ಅವರ ಆರಾಧನೆ ಮಾಡುತ್ತೇವೆ. (ಎಂದು ಅವರು ವಾದಿಸುತ್ತಾರೆ)
ಖಂಡಿತವಾಗಿಯೂ ಅಲ್ಲಾಹನು ಅವರು ಭಿನ್ನತೆ ತೋರಿದ ಎಲ್ಲಾ ವಿಷಯಗಳ ತೀರ್ಮಾನ ಮಾಡಿ ಬಿಡುವನು. ಸುಳ್ಳುಗಾರನೂ, ಸತ್ಯನಿಷೇಧಿಯೂ ಆಗಿರುವಂಥವನಿಗೆ ಅಲ್ಲಾಹನು ಸನ್ಮಾರ್ಗ ದರ್ಶನವೀಯುವುದಿಲ್ಲ.
ಅಲ್ಲಾಹನನ್ನು ನೇರವಾಗಿ ಕೂಗಿ ಕರೆಯುವುದಾಗಲಿ ಅಥವಾ ಅವನಿಂದ ಸಹಾಯ ಇಲ್ಲವೇ ಕ್ಷಮೆ ಯಾಚಿಸುವುದಾಗಲಿ ಇವುಗಳಿಂದ ತಡೆಯುವಂತಹ ಯಾವೊಂದು ಕಾರ್ಯವೂ/ವಸ್ತುವೂ ಇರಬಾರದು.
ತನ್ನನ್ನು ಸ್ತುತಿಸುವ ಮತ್ತು ಕೂಗುವರೆಲ್ಲರನ್ನೂ ಅಲ್ಲಾಹನು ಆಲಿಸುವನು. ಇಸ್ಲಾಮಿನಲ್ಲಿ ಯಾವೊಂದು ಮಧ್ಯವರ್ತಿಗಳು ಇರುವುದಿಲ್ಲ. ಎಲ್ಲರಿಗೂ ನೇರ ಹಾಗೂ ತಡೆರಹಿತ ಅವಕಾಶವನ್ನು ಕಲ್ಪಿಸಲಾಗಿದೆ.
ಅಲ್ಲಾಹನೊಂದಿಗೆ ನೇರ ಸಂಪರ್ಕವನ್ನಿಟ್ಟುಕೊಳ್ಳುವಂತೆ ಮುಸ್ಲಿಮರಿಗೆ ಆದೇಶಿಸಲಾಗಿದೆ. ಅಲ್ಲಾಹನನ್ನು ಪರೋಕ್ಷವಾಗಿ ಆರಾಧಿಸುವುದು (ಉದಾ: ವಿಗ್ರಹಗಳು ಅಥವಾ ಇನ್ನಾವುದಾದರೂ ಮಧ್ಯವರ್ತಿಗಳ ಮೂಲಕ) ಏಕದೇವತ್ವದಲ್ಲಿ ಸಡಿಲತೆಯನ್ನು ಕಲ್ಪಿಸಿದಂತೆ ಮತ್ತು ಅಲ್ಲಾಹನಿಗೇ ಅರ್ಹವಾದ ಪರಿಶುದ್ಧ ಆರಾಧನೆಯನ್ನು ಕಲುಷಿತಗೊಳಿಸಿದಂತೆಯೇ ಸರಿ.