بسم الله الرحمن الرحيم
ಪರಮದಯಾಮಯನು ಕರುಣಾನಿಧಿಯು ಆದ ದೇವನಾಮದಿಂದ
ಇಸ್ಲಾಮಿಗೆ ಯಾಕಿಷ್ಟು ವಿರೊಧ..?
ಆತ್ಮೀಯ ಸಹೋದರ ಸಹೋದರಿಯರೆ ……….
-
- “ನೀವು ಭೂಮಿಯ ಮೇಲಿರುವವರನ್ನು ಪ್ರೀತಿಸಿದರೆ ಆಕಾಶದಲ್ಲಿರುವವನು ನಿಮ್ಮನ್ನು ಪ್ರೀತಿಸುತ್ತಾನೆ”
-
- “ಇತರ ಮನುಷ್ಯರ ಮೇಲೆ ಕರುಣೆ ತೋರಿಸದಿದ್ದರೆ ದೇವನು ಅವರ ಮೇಲೆ ಕರುಣೆ ತೋರುವುದಿಲ್ಲ” ಸಂದೇಶವಾಹಕ ಮುಹಮ್ಮದ ಸ.
ಇಸ್ಲಾಮ್ ಧರ್ಮವು ಸಂದೇಶವಾಹಕರಾದ ಮುಹಮ್ಮದ ಸ. ರವರ ಕಾಲದಿಂದ ಇಂದಿನವರೆಗೂ ತುಂಬಾ ವೇಗವಾಗಿ ಹರಡುತ್ತಿದೆ. ಇಂದು ಪ್ರಪಂಚದಲ್ಲಿರುವ ಒಟ್ಟು ಜನ ಸಂಖ್ಯೆಯಲ್ಲಿ 1/4 ಭಾಗಕ್ಕಿಂತ ಹೆಚ್ಚು ಜನರು ಇಸ್ಲಾಮ್ ಅನ್ನು ಅನುಸರಿಸುವವರಿದ್ದಾರೆ ಎಂಬುದನ್ನು ತಿಳಿಯುತ್ತದೆ. ಇಸ್ಲಾಮ್ ಧರ್ಮವು ಪ್ರಪಂಚದಲ್ಲೇ 2ನೇ ಸ್ಥಾನದಲ್ಲಿದ್ದರೂ ಆಚರಣೆಯ ಅನುಸರಣೆಯಲ್ಲಿ ಮೊದಲನೇ ಸ್ಥಾನವನ್ನು ಪಡೆದಿದೆ. (ಅಮೆರಿಕನ್ ಸೊಸಿಯಲೊಜಿಕಲ್ ರೆವ್ಯೂ ಸರ್ವೆ)
ಇಸ್ಲಾಮ್ ವಿರೋಧಿಗಳ ಅಪಪ್ರಚಾರ, ವಿರೋಧವಿದ್ದರೂ ಇದು ಅತ್ಯಂತ ವೇಗವಾಗಿ ಬೆಳೆಯಲು ಕಾರಣ ಇಸ್ಲಾಂ ತಿಳಿಸುವ ಸಮಾಧಾನ, ಸ್ನೇಹ, ಪ್ರೀತಿ, ಕಾರುಣ್ಯ ಮತ್ತು ಮಾನವ ಸಹೋದರತ್ವ. ಇಸ್ಲಾಮ್ ಎಂಬ ಪದಕ್ಕೆ ಶಾಂತಿ ಎಂಬ ಹೆಸರಿರುವುದು.
-
- ಮುಸ್ಲಿಮರು ಯಾವುದೇ ಕೆಲಸವನ್ನು ಆರಂಭಿಸುವ ಮೊದಲು “ಬಿಸ್ಮಿಲ್ಲಾ ಹಿರ್ರಹಮಾ ನಿರ್ರಹೀಮ್” ಎಂದು ಆರಂಭಿಸುತ್ತಾರೆ ಇದರ ಅರ್ಥ, ‘ಪರಮ ದಯಾಮಯನು ಕರುಣಾನಿಧಿಯೂ ಆದ ದೇವ ನಾಮದಿಂದ ಆರಂಭಿಸುತ್ತೇನೆ ಎಂದಾಗಿದೆ.
-
- ಆದೇ ರೀತಿ ಒಬ್ಬ ಮುಸ್ಲಿಂ ಇನ್ನೊಬ್ಬರನ್ನು ಭೇಟಿ ಮಾಡುವಾಗ ಮೊಟ್ಟ ಮೊದಲು “ಅಸ್ಸಲಾಮುವಾಲೈಕುಂ” ಎಂದು ಶುಭ ಕೋರುವುದು ಸಾಮಾನ್ಯವಾಗಿದ್ದು ಅದರ ಅರ್ಥ ‘ನಿಮ್ಮ ಮೇಲೆ ಶಾಂತಿಯಿರಲಿ’ ಎಂಬುದಾಗಿದೆ.
-
- “ಓ ಮನುಷ್ಯರೆ ನಿಮ್ಮೆಲ್ಲರನ್ನು ಒಂದು ಹೆಣ್ಣು ಮತ್ತು ಒಂದು ಗಂಡಿನಿಂದ ಸೃಷ್ಟಿಸಲಾಗಿದೆ” (ಖುರ್‍ಆನ್49:30) ಎಂದೂ ಹೇಳುತ್ತಿರುವುದು ಕುಲ, ಭಾಷೆ, ಧರ್ಮಗಳ ಭೇದ ಭಾವದಿಂದಲ್ಲ. ಪ್ರಪಂಚದಾದ್ಯಂತ ಇರುವ ಎಲ್ಲಾ ಮಾನವರನ್ನು ಕುರಿತು ಸಹೋದರತೆಯ ಸಂದೇಶವನ್ನು ಸಾರುತ್ತಿದೆ.
-
- ಅಂತಿಮ ಸಂದೇಶವಾಹಕರ ಬಗ್ಗೆ ಪವಿತ್ರ ಖುರ್‍ಆನಿನಲ್ಲಿ “ಓ ಸಂದೇಶವಾಹಕರೇ ನಿಮ್ಮನ್ನು ನಾವು ಈ ಲೋಕದ ಜನರಿಗೆ ನನ್ನ ವತಿಯಿಂದ ಕರುಣೆಯಾಗಿಯೇ ನಿಮ್ಮನ್ನು ನಿಯೋಗಿಸಿರುತ್ತೇನೆ” (ಖುರ್‍ಆನ್ 21:107) ಎಂದು ದೇವನು ತನ್ನ ಗ್ರಂಥದಲ್ಲಿ ಇಡೀ ಮನುಕುಲಕ್ಕೆ ಅನುಗ್ರಹವೆಂದು ಹೇಳುತ್ತಾನೆ.
-
- “ಯಾರು ಒಬ್ಬ ಮನುಷ್ಯನನ್ನು ಅನ್ಯಾಯವಾಗಿ ಕೊಂದರೆ ಅವನು ಇಡೀ ಮಾನವ ಕುಲವನ್ನೇ ಕೊಂದಂತೆ” (ಖುರ್‍ಆನ್ 5:32) ಎಂದು ಮುಗ್ಧ ಜನರನ್ನು ಕೊಲ್ಲುವ ಪ್ರವೃತ್ತಿಯನ್ನು ಖುರ್‍ಆನ್ ಖಡಾಖಂಡಿತವಾಗಿ ಖಂಡನೆ ಮಾಡುತ್ತದೆ ಮತ್ತು ಈ ರೀತಿಯ ಪಾಪ ಕೃತ್ಯಗಳಿಗೆ ಅಂತಿಮ ದಿನದಲ್ಲಿ ಅಥವ ಪರಲೋದಲ್ಲಿ ನರಕದ ಶಿಕ್ಷೆಯಿದೆ ಎಂಬುದಾಗಿ ಖುರ್‍ಆನ ಮತ್ತು ಸಂದೇಶವಾಹಕರ ವಚನಗಳಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ರೀತಿಯಾಗಿ ಮನುಕುಲದ ಸಹೋದರತ್ವ ಹಾಗೂ ಮನುಷ್ಯನ ಜೀವನದ ಪ್ರತಿ ಹೆಜ್ಜೆಯಲ್ಲೂ ಶಾಂತಿ ಸಮಾಧಾನವನ್ನು ಪಾಲಿಸಬೇಕೆಂದು ತಿಳಿಸಿಕೊಡುವ ಧರ್ಮದಲ್ಲಿ ಅತಿಕ್ರಮ ಮತ್ತು ಭಯೋತ್ಪಾದನೆ ಹೇಗೆ ಸಾಧ್ಯ?
ಬನ್ನಿ ಸತ್ಯವನ್ನು ಅರಿಯೋಣ:
ಒಬ್ಬ ಹಿಂದೂ ಅಥವ ಕ್ರೈಸ್ತವ ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿಕೊಂಡರೆ ಹಿಂದೂ ಭಯೋತ್ಪಾದಕ ಅಥವ ಕ್ರೈಸ್ತ ಭಯೋತ್ಪಾದಕನೆಂದು ಮಾಧ್ಯಮಗಳು ಪ್ರಚಾರ ಮಾಡುವುದಿಲ್ಲ. ಹಿರೋಶಿಮ ಮತ್ತು ನಾಗಸಾಕಿ ಮಹಾನಗರಗಳ ಮೇಲೆ ವಿನಾಶಕಾರಿ ಬಾಂಬ್ (ಆಟಂಬಾಂಬ್) ದಾಳಿ ಮಾಡಿ, ತಲೆಮಾರುಗಳನ್ನೆ ನಾಶ ಮಾಡಿರುವ ಅಮೇರಿಕನ್ನರಿಗೆ ಯಾರೂ ಕೂಡ ಕ್ರೈಸ್ತ ಭಯೋತ್ಪಾದಕರೆಂದು ಕರೆಯಲಿಲ್ಲ. ಹಾಗೂ ಶ್ರೀಲಂಕಾದಲ್ಲಿ ಸಾವಿರಾರು ತಮಿಳುಗರಿಗೆ ಕೊಂದ ಬೌದ್ಧರಿಗೆ ಬೌದ್ಧ ಭಯೋತ್ಪಾದಕರೆಂದು ಕರೆಯಲಿಲ್ಲ. ಆದರೆ ತಮ್ಮ ಸ್ವಂತ ದೇಶದ ಹಕ್ಕಿಗಾಗಿ ಅಮೇರಿಕದ ವಿರುದ್ಧ ಹೋರಾಡುತ್ತಿರುವ ಆಫಘನ ಹಾಗೂ ಇರಾಖ್ ಜನರಿಗೆ ಇಸ್ಲಾಮಿ ಭಯೋತ್ಪಾದಕರೆಂದು ಮಾಧ್ಯಮಗಳು ಬಿಂಬಿಸುತ್ತಿರುವುದು ಸತ್ಯದ ಮಾತಾಗಿದ್ದು ಅದು ತಮಗೆಲ್ಲರಿಗೂ ಗೊತ್ತಿರುವ ವಿಷಯ ಆಗಿದೆ. (ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಬ್ರಿಟೀಷರು ಭಯೋತ್ಪಾಕರೆಂದು ಕರೆದಿರುವುದು ತಮಗೆಲ್ಲರಿಗೂ ತಿಳಿದಿರುವ ವಿಷಯವಾಗಿದೆ) ಈ ಅಪಪ್ರಚಾರಕ್ಕೆ ಕಾರಣವೇನು? ಇಸ್ಲಾಮಿನ ವಿರುದ್ಧವೇ ದೋಷಾರೋಪಣೆ ಏಕೆ? ಎಂಬುದನ್ನು ತಿಳಿಯುವ ಮುಂಚಿತವಾಗಿ …..
ಇಸ್ಲಾಮ್ ಎಂದರೇನು?
ಇಸ್ಲಾಮ್ ಎಂಬ ಅರಬೀ ಪದಕ್ಕೆ ಅರ್ಥ ಅನುಸರಿಸುವುದು ಅಥವಾ ಅನುಕರಣೆ ಎಂದಾಗಿದೆ. ಮತ್ತೊಂದು ಅರ್ಥದಲ್ಲಿ ಶಾಂತಿ ಎಂಬುದೇ ಆಗಿದೆ. ಅಂದರೆ ದೇವನಿಗೆ ವಿಧೇಯನಾಗಿ ಜೀವಿಸಿದರೆ ಈ ಲೋಕದಲ್ಲೂ ಪರಲೋಕದಲ್ಲಿಯೂ ಶಾಂತಿ ಸಿಗುತ್ತದೆ ಎಂಬುದಾಗಿದ್ದು ಇಸ್ಲಾಮ್ ಧರ್ಮ ತಿಳಿಸುವ ತತ್ವ ಆಗಿದೆ. ಅಂದರೆ ಈ ಧರ್ಮದ ಪ್ರಕಾರ ಪ್ರಪಂಚದ ಒಡೆಯನಾದ ದೇವನು ಯಾವುದನ್ನು ಮಾಡಬೇಕೆಂದು ಆಜ್ಞೆ ಮಾಡುತ್ತಾನೋ ಅದನ್ನು ಮಾಡಬೇಕಾಗಿದೆ. ಅದರ ಹೆಸರೇ ಒಳಿತು ಅಥವಾ ಪುಣ್ಯ ಅಥವಾ ಧರ್ಮ ಎಂದಾಗಿದೆ. ಅವನು ಯಾವುದೆಲ್ಲಾ ಮಾಡಬಾರದೆಂದು ತಡೆಯಾಜ್ಞೆ ಮಾಡಿದ್ದಾನೆಯೋ ಆ ಎಲ್ಲಾ ವಿಷಯಗಳಿಂದ ದೂರವಿರಬೇಕು. ಅದೇ ಪಾಪ ಅಥವಾ ಕೆಡುಕು ಅಥವಾ ಅಧರ್ಮ ಎಂದಾಗಿದೆ, ಯಾರು ಈ ತತ್ವವನ್ನು ಒಪ್ಪಿಕೊಂಡು ಅದರ ಪ್ರಕಾರ ಜೀವಿಸುವರೋ ಅವರನ್ನು ಅರಬಿ ಭಾಷೆಯಲ್ಲಿ ಮುಸ್ಲಿಂ (ಅನುಸರಿಸುವವನು) ಎಂದು ಹೇಳುವರು.
-
- ಈ ತತ್ವವನ್ನು ಯಾರು ಬೇಕಾದರು ಒಪ್ಪಿಕೊಂಡು ಅನುಸರಿಸಬಹುದು. ಇದು ಯಾವುದೇ ಒಂದು ಪ್ರತ್ಯೇಕ ಕುಲಕ್ಕೆ, ದೇಶಕ್ಕೆ ಹಾಗೂ ವಂಶಕ್ಕೆ ಸೀಮಿತವಾದುದ್ದಲ್ಲ ಹಾಗೂ ಇದೊಂದು ಹೊಸಧರ್ಮವೂ ಅಲ್ಲ. ಎಲ್ಲಾ ಕಾಲದಲ್ಲಿಯೂ ಈ ಭೂಮಿಯ ವಿವಿಧ ಭಾಗಗಳಿಗೆ ಕಳುಹಿಸಲ್ಪಟ್ಟಿರುವ ದೇವನ ಸಂದೇಶವಾಹಕರು ಈ ತತ್ವವನ್ನೇ ಅವರವರ ಜನಾಂಗಕ್ಕೆ ಭೋಧಿಸಿದರು. ಇದೇ ತತ್ವವನ್ನೇ ಕೊನೆಯದಾಗಿ ಬಂದ ಸಂದೇಶವಾಹಕರಾದ ಮುಹಮ್ಮದ್ {ಸ} ಮೂಲಕ ಇಸ್ಲಾಮ್ ಎಂಬ ಹೆಸರಿನಲ್ಲಿ ಪುನಃ ಪರಿಚಯವಾಗಿದೆ.
-
- ಯಾರೆಲ್ಲಾ ಈ ತತ್ವವನ್ನು ಒಪ್ಪಿಕೊಂಡು – ಅಂದರೆ ಒಳಿತನ್ನು ಮಾಡಿ ಕೆಡುಕಿನಿಂದ ಮುಕ್ತರಾಗಿ ಜೀವಿಸುತ್ತಾರೋ ಅವರು ಪರಲೋಕದ ಜೀವನದಲ್ಲಿ ಸ್ವರ್ಗಕ್ಕೆ ಹೋಗುವರು. ಯಾರೂ ದೇವನನ್ನು ಮತ್ತು ಅವನು ಅನುಗ್ರಹಿಸಿರುವ ಮಾರ್ಗವನ್ನು ಅಲಕ್ಷಿಸಿ ತನ್ನಿಚ್ಚೆಯಂತೆ ಜೀವಿಸುತ್ತಾರೆಯೋ ಅವರು ನರಕ ಪ್ರವೇಶಿಸುವರು.
-
- ಈ ತತ್ವದ ಮುಖ್ಯವಾದ ಮೂಲ ಅಂಶವೇನೆಂದರೆ ಈ ಪ್ರಪಂಚವನ್ನು ಸೃಷ್ಟಿಸಿ ಪರಿಪಾಲಿಸುತ್ತಿರುವ ದೇವನೇ ಅರಾಧನೆಗೆ ಅರ್ಹನು. ಅವನಲ್ಲದೆ ಇತರ ಯಾರೇ ಆಗಿರಲಿ ಅವರು ಎಷ್ಟು ದೊಡ್ಡ ವ್ಯಕ್ತಿಗಳೇ ಆಗಿರಲಿ ರಾಜನೇ ಆಗಿರಲಿ, ಅಧ್ಯಾತ್ಮಿಕ ನಾಯಕರೇ ಆಗಿರಲಿ, ಅವರನ್ನು ದೇವರು ಎಂದು ಹೇಳುವುದು, ಅವರನ್ನು ಆರಾಧಿಸುವುದಾಗಲೀ ಖಂಡಿತ ಮಾಡಬಾರದು. ದೇವನನ್ನೇ ನೇರವಾಗಿ ಯಾವುದೇ ಮಧ್ಯವರ್ತಿಗಳಿಗಲ್ಲದೆ ಆರಾಧಿಸಬೇಕು.
-
- ಈ ತತ್ವದ ಮತ್ತೊಂದು ಮುಖ್ಯ ಅಂಶವೇನೆಂದರೆ ಮನುಷ್ಯರೆಲ್ಲರೂ ಒಂದು ಗಂಡು ಒಂದು ಹೆಣ್ಣಿನಿಂದ ಜನಿಸಿ ಪ್ರಪಂಚದಾದ್ಯಂತ ವ್ಯಾಪಿಸಿದ್ದಾರೆ. ಮನುಷ್ಯರೆಲ್ಲರೂ ಅವರು ಯಾವುದೇ ದೇಶದವರಾಗಲೀ ಯಾವುದೇ ಭಾಷೆ ಮಾತನಾಡಲಿ ಯಾವುದೇ ಬಣ್ಣದವರಾಗಲೀ ಒಂದೇ ಕುಟುಂಬಕ್ಕೆ ಸೇರಿರುವ ಪರಸ್ಪರ ಸಹೋದರ ಸಹೋದರಿಯರಾಗಿದ್ದಾರೆ. ಹಾಗಾಗಿ ಎಲ್ಲರೂ ಸಮಾನರು ಅವರ ಮಧ್ಯದಲ್ಲಿ ದೇಶ, ವಂಶ, ಭಾಷೆ, ಕುಲ, ಜಾತಿ, ಎಂಬ ಅಡಿಯಲ್ಲಿ ಭೇದ-ಭಾವ ಸಲ್ಲದು ಹಾಗೂ ಮಾಡಬಾರದು. ದೇವನ ಭಯ ಭಕ್ತಿಯಿಂದ ಮಾತ್ರವೇ ಅವರ ಸ್ಥಾನ ಉನ್ನತವಾಗಲಿದೆ ಎಂದು ಇಸ್ಲಾಮ್ ಹೇಳುತ್ತದೆ. ಈ ತತ್ವವನ್ನು ಒಪ್ಪಿಕೊಂಡಿರುವವರು ದೇವನಲ್ಲಿ ವಿಶ್ವಾಸವಿಡುವುದಲ್ಲದೆ ಒಳಿತನ್ನು ಮಾಡುವುದರೊಂದಿಗೆ ಒಳಿತನ್ನೆ ಬೋಧಿಸಬೇಕು. ಕೆಡುಕುಗಳಿಂದ ದೂರವಿರಬೇಕು ಹಾಗೂ ಕೆಡುಕನ್ನು ಕಂಡಲ್ಲಿ ಎಷ್ಟು ಸಾಧ್ಯವೋ ಅಷ್ಟು ಅದನ್ನು ತಡೆಯುವಲ್ಲಿ ಶ್ರಮಿಸಬೇಕು.
ಈಗ ನಿಮಗೇ ಅರ್ಥವಾಗಿರಬೇಕು ಇಸ್ಲಾಮ್ ಎಂಬ ತತ್ವಕ್ಕೆ ವಿರೋಧ ಏಕೆ ಎಂದು.
-
- ಧರ್ಮವು ಪ್ರಚಲಿತವಾಗುವಾಗ, ಅಧರ್ಮವನ್ನೇ ತಮ್ಮ ಜೀವನಾಧಾರವನ್ನಾಗಿ ಮಾಡಿಕೊಂಡವರು ಕೋಪಾವೇಶವಾಗಿ ಇದನ್ನು ಎದುರಿಸುತ್ತಾರೆ.
-
- ದೇವನನ್ನು ನೇರವಾಗಿ ಪ್ರಾರ್ಥಿಸ ಹೋಗಬಹುದೆಂಬ ವಿಷಯ ಸಾಮಾನ್ಯರು ತಿಳಿಯುವಾಗ, ಮಧ್ಯವರ್ತಿಗಳಿಗೆ ಅದು ಸಹಿಸಲಾಗುವುದಿಲ್ಲ. ಅವರು ಜನರಲ್ಲಿ ಮೂಢನಂಬಿಕೆಗಳನ್ನು ಸಾರಿ ಜನರ ಸಂಪತ್ತನ್ನು ಲೂಟಿ ಮಾಡುವವರಿಗೆ ಈ ಧರ್ಮ ಪ್ರಚಾರವಾಗುವುದು ಅವರಿಗೆ ಸಹಿಸಲಾಗುವುದಿಲ್ಲ.
-
- ಬಣ್ಣದ, ವಂಶದ, ಭಾಷೆಯ, ಜಾತಿಯ, ವಿಶೇಷತೆಗಳನ್ನು ಹೇಳಿ ಇನ್ನುಳಿದ ಅಥವ ಮಿಕ್ಕ ಜನರ ಮೇಲೆ ಆಧಿಪತ್ಯ ಸಾಧಿಸುವವರಿಗೆ ಈ ಧರ್ಮ ಕಂಡರೆ ಆಗದು.
-
- ಮನುಷ್ಯನನ್ನು ಈ ಧರ್ಮ ಸ್ವಾಭಿಮಾನದೊಂದಿಗೆ ಜೀವಿಸಲು ಪ್ರೇರೇಪಿಸುವ ಕಾರಣದಿಂದ ಜನರಲ್ಲಿ ಜಾಗೃತಿ ಮೂಡುತ್ತದೆ. ಆಗ ಜನರು ಇವರ ಅಧಿಪತ್ಯದ ವಿರುದ್ಧವಾಗಿ, ಹಾಗೂ ತಮ್ಮ ದೇಶವನ್ನು ಮತ್ತು ದೇಶದ ಸಂಪತ್ತನ್ನು ಪೆÇೀಲಾಗುವುದರಿಂದ ತಡೆಯಲು ಹೋರಾಡುತ್ತಾರೆ. ಇದು ಅಧರ್ಮಗಳಿಗೆ ಸಹಿಸಲಾಗದು.
-
- ಈ ರೀತಿಯಾಗಿ ಪ್ರಪಂಚದಾದ್ಯಂತ ಇರುವ ಅಧರ್ಮಿಗಳ ಹೊಟ್ಟೆ ಪಾಡಿಗೆ ಧಕ್ಕೆ ಉಂಟಾಗುತ್ತದೆ. ಇಸ್ಲಾಮಿನ ಪ್ರಸಾರವು ಅವರಿಗೆ ಭಯವನ್ನು ಹುಟ್ಟಿಸುತ್ತಿದೆ. ಹಾಗಾಗಿ ಅವರು ಇಸ್ಲಾಮಿನ ಪ್ರಸಾರವನ್ನು ತಡೆಯಲು ಒಟ್ಟಾಗಿ ಪಣ ತೊಟ್ಟಿದ್ದಾರೆ. ಅದು ತಮ್ಮ ಹತೋಟಿಯಲ್ಲಿರುವ ಮಾಧ್ಯಮಗಳ ಶಕ್ತಿಗಳ ಮೂಲಕ ಮುಗ್ಧ ಜನರನ್ನು ಒಲಿಸಿಕೊಳ್ಳುವುದರ ಮೂಲಕ ಬಲವಂತವಾಗಿ ಅಪ ಪ್ರಚಾರವನ್ನು ಕೈಗೊಳ್ಳುತ್ತಾರೆ. ಆದರೆ ಪ್ರಪಂಚದ ಒಡೆಯನು ಇಡೀ ಪ್ರಪಂಚದ ಜನರಿಗಾಗಿ ಅನುಗ್ರಹವಾಗಿ ಕೊಟ್ಟ ಈ ಮಾರ್ಗವು ಪ್ರಸಾರವಾಗುವುದರಿಂದ ತಡೆಯಲು ಯಾರಿಂದಲೂ ಸಾಧ್ಯವಿಲ್ಲವೆಂದು ತನ್ನ ಗ್ರಂಥದಲ್ಲಿ ಹೇಳಿಕೊಂಡಿದ್ದಾನೆ.
“ಅವರು ದೇವನ ಪ್ರಕಾಶವನ್ನು ತಮ್ಮ ಬಾಯಿಯಿಂದ ಊದಿ ನಂದಿಸಬಯಸುತ್ತಾರೆ. ದೇವನು ಮಾತ್ರ ತನ್ನ ಪ್ರಕಾಶವನ್ನು ಪರಿಪೂರ್ಣವಾಗಿ ವ್ಯಾಪಿಸದೆ ಬಿಡಲಾರನು – ಧಿಕ್ಕಾರಿಗಳಿಗೆ ಅದು ಎಷ್ಟೇ ಅಪ್ರಿಯವಾಗಿದ್ದರೂ ಸರಿಯೇ” (ಖುರ್‍ಆನ್ 9:32)
ಆದರೆ ಈ ಧರ್ಮದ ಬೆಳವಣಿಗೆಯನ್ನು ನೋಡಿ ಯಾರೂ ಚಿಂತಿಸುವ ಅವಶ್ಯಕತೆಯಿಲ್ಲ , ಇದು ಒಂದು ಪ್ರತ್ಯೇಕ ದೇಶವನ್ನೋ ವಂಶವನ್ನೋ ವಿನಾಶ ಮಾಡಲಾಗಲೀ, ಬೆಳಸಲಾಗಲೀ ಬಂದಿರುವುದಿಲ್ಲ, ಆದರೆ ಪ್ರಪಂಚದಾದ್ಯಂತ ಧರ್ಮವನ್ನು ನೀತಿಯನ್ನು ಸ್ಥಾಪಿಸಿ ಶಾಂತಿಯನ್ನು ಸಂಸ್ಥಾಪಿಸಲು ಬಂದಿದೆ ಎಂಬುದನ್ನು ಮನಗಂಡರೆ, ಇದರ ಕುರಿತು ಇರುವ ದೋಷ ಹೋಗುತ್ತದೆ. ಇಂದಿನ ವಿರೋಧಿಗಳೇ ನಾಳೆ ಇದನ್ನು ತಿಳಿದ ನಂತರ ಇದರ ಸಂರಕ್ಷಕರಾಗಿ ಬದಲಾಗುತ್ತಾರೆ. ಇದನ್ನೇ ಅಮೇರಿಕಾ ಮತ್ತು ಯೂರೋಪ್ ರಾಷ್ಟ್ರಗಳಲ್ಲಿನ ಬೆಳವಣಿಗೆ ಎತ್ತಿ ತೋರಿಸುತ್ತಿದೆ.
ಆತ್ಮೀಯ ಸಹೋದರ ಸಹೋದರಿಯರೆ ಈಗ ನಾವು ಹೇಳಿರುವ ವಿಷಯವನ್ನು ನೀವೇ ಪರಿಶೀಲಿಸಿ ನೋಡಬಹುದಲ್ಲ ಅದು ಪವಿತ್ರ ಖುರಆನಿನ ಕನ್ನಡ ಅನುವಾದವನ್ನು ಅಥವಾ ನಿಮಗೆ ತಿಳಿದಿರುವ ಭಾಷೆಯಲ್ಲಿ ಓದಿ ತಿಳಿಯ ಬಹುದಲ್ಲವೇ…
ಇಸ್ಲಾಮನ್ನು ಅನ್ವೇಷಿಸಿ





ಅಲ್ಲಾಹ್
ನಂಬಿಕೆ




ಪವಿತ್ರೀಕರಣ
ಅಹದೀತ್ ಹೇಳಿಕೆಗಳು
ಇಸ್ಲಾಮ್ ಮತ್ತು ಶಾಸ್ತ್ರಗಳು





ಪ್ರವಾದಿಗಳು


ಜೀವನ ಚರಿತ್ರೆಗಳು








ಇಸ್ಲಾಮಿನ ಇತಿಹಾಸ
ಇಸ್ಲಾಮಿನ ಕಾನೂನು






ಇಸ್ಲಾಮ್ ಜೀವನಶೈಲಿ-ಸಂಸ್ಕೃತಿ


ಇಸ್ಲಾಮಿನಲ್ಲಿ ಮೂಲಭೂತ ಹಕ್ಕುಗಳು
ಪ್ರಚಲಿತ ವಿದ್ಯಮಾನ
ಮಾಸ ಪತ್ರಿಕೆಗಳು
ಅರೇಬಿಕ್

