ಏಕ ದೇವನ ನಾಮದಿಂದ,
ಒಂದು ಉತ್ತಮ ಅದ್ಭುತ ಸಾಹಿತ್ಯ ಅದು! ಪ್ರಪಂಚವೆಲ್ಲಾ ಇರುವ ಕೋಟ್ಯಾಂತರ ಜನರಿಗೆ 1430 ವರ್ಷಗಳಾದರೂ ದಾರಿ ತೋರಿಸುತ್ತಿರುವ ಜ್ಯೋತಿಯಾಗಿದೆ ಅದು! ಮನುಷ್ಯ ಕುಲವನ್ನು ಬೇರೆ ಮಾಡುವ ಧರ್ಮ, ಭಾಷೆ, ಬಣ್ಣ, ದೇಹ, ದೇಶ, ಕುಲ, ಗೋತ್ರ, ಜಾತಿ ಮುಂತಾದ ತಡೆಗಳನ್ನು ಒಡೆದು ಹಾಕಿ ಅವರನ್ನು ಒಂದಾಗಿ ಸೇರಿಸುವ ಕ್ರಾಂತಿ ಸಾಹಿತ್ಯವಿದು. ಪ್ರಪಂಚದಲ್ಲಿ ಬೇರೆ ಯಾವ ಸಾಹಿತ್ಯವೂ ವಾದಿಸದ ವಿಶೇಷಗಳನ್ನು ತನ್ನಲ್ಲಿ ಕೊಂಡಿರುವುದಾಗಿ ವಾದಿಸುತ್ತದೆ ಅದು! ನೋಡಿರಿ!
ತುಂಬಾ ಹಿರಿಯನು ತನ್ನ ಗುರು ಎಂದು ವಾದಿಸುತ್ತದೆ ಅದು!
ಖುರ್’ಆನ್ 45:2 ಇದು, ಮಹಾ ಪ್ರಬಲನೂ ಯುಕ್ತಿವಂತನೂ ಆಗಿರುವಾತನ ಕಡೆಯಿಂದ ಇಳಿಸಿಕೊಡಲಾಗಿರುವ ಗ್ರಂಥ.
ಈ ವೇದ ಎಲ್ಲಾರಿಗಿಂತ ಮಿಗಿಲಾದವನು ಜ್ಞಾನ ತುಂಬಿದವನೂ ಆದ ದೇವರಿಂದಲೇ ಪಡೆದು ಕರುಣಿಸಲಾಗಿದೆ. ಶೇಕಡ ನೂರರಷ್ಟು ಸಂಶಯಗಳಿಂದ ದೂರವಾದದ್ದು ಎಂದು ವಾದಿಸುತ್ತದೆ ಅದು.
ಖುರ್’ಆನ್ 2:2 ಇದು, ಮಹಾ ಪ್ರಬಲನೂ ಯುಕ್ತಿವಂತನೂ ಆಗಿರುವಾತನ ಕಡೆಯಿಂದ ಇಳಿಸಿಕೊಡಲಾಗಿರುವ ಗ್ರಂಥ.
ಎಲ್ಲಾ ತದ್ವಿರುದ್ದಗಳಿಗೆ ಹೊರತಾಗಿದೆ ಎಂದು ವಾದಿಸುತ್ತದೆ ಅದು
ಖುರ್’ಆನ್ 4:82 ಅವರೇನು, ಕುರ್‌ಆನ್‌ನ ಕುರಿತು ಚಿಂತನೆ ನಡೆಸುವುದಿಲ್ಲವೆ? ಒಂದು ವೇಳೆ ಇದು ಅಲ್ಲಾಹನ ಹೊರತು ಬೇರೆ ಯಾರ ಕಡೆಯಿಂದ ಬಂದಿದ್ದರೂ, ಅವರು ಇದರಲ್ಲಿ ಹಲವು ವಿರೋಧಾಭಾಸಗಳನ್ನು ಕಾಣುತ್ತಿದ್ದರು.
ಮನುಷ್ಯ ಕುಲ ಎಲ್ಲವನ್ನೂ ಕರೆದು ಉಪದೇಶ ನೀಡುತ್ತದೆ ಅದು.
ಖುರ್’ಆನ್ 10:57 ಮಾನವರೇ, ಇದೋ ಬಂದಿದೆ ನಿಮ್ಮೆಡೆಗೆ, ನಿಮ್ಮ ಒಡೆಯನ ಕಡೆಯಿಂದ ಒಂದು ಉಪದೇಶ (ಕುರ್‌ಆನ್). ನಿಮ್ಮ ಮನಸ್ಸುಗಳಲ್ಲಿರುವ ಎಲ್ಲದಕ್ಕೂ ಇದು ಪರಿಹಾರವಾಗಿದೆ. ಹಾಗೆಯೇ, ಇದು ನಂಬುವವರ ಪಾಲಿಗೆ ಮಾರ್ಗದರ್ಶಿ ಹಾಗೂ ಅನುಗ್ರಹವಾಗಿದೆ.
ಬುದ್ಧಿಯಿಂದ ಯೋಚಿಸಿ ಸ್ವೀಕರಿಸಲು ಹೇಳುತ್ತದೆ ಅದು
ಖುರ್’ಆನ್ 38:29, ನಾವು ನಿಮ್ಮೆಡೆಗೆ ಒಂದು ಸಮೃದ್ಧ ಗ್ರಂಥವನ್ನು ಇಳಿಸಿರುವೆವು, ಜನರು ಅದರ ವಚನಗಳ ಕುರಿತು ಚಿಂತನೆ ನಡೆಸಲೆಂದು ಮತ್ತು ಬುದ್ಧಿ ಉಳ್ಳವರು ಪಾಠ ಕಲಿಯಲೆಂದು.
ಖುರ್’ಆನ್ 45:20 ಇದು (ಕುರ್‌ಆನ್) ಮಾನವರ ಕಣ್ಣು ತೆರಸುವ ಸಾಧನವಾಗಿದೆ ಮತ್ತು ಅಚಲ ನಂಬಿಕೆ ಉಳ್ಳವರ ಪಾಲಿಗೆ ಮಾರ್ಗದರ್ಶಿ ಹಾಗೂ ಕೃಪೆಯಾಗಿದೆ.
ಸ್ವೀಕರಿಸಿದವರಿಗೆ ಎಚ್ಚರಿಕೆಯನ್ನು ನೀಡುತ್ತದೆ!
ಖುರ್’ಆನ್ 2:23-24 ನಾವು ನಮ್ಮ ದಾಸನಿಗೆ ಇಳಿಸಿ ಕೊಟ್ಟಿರುವುದರ (ಕುರ್‌ಆನಿನ) ಕುರಿತು ನಿಮಗೆ ಸಂಶಯವಿದ್ದರೆ, ಅಂತಹ ಒಂದು ಅಧ್ಯಾಯವನ್ನಾದರೂ ನೀವು ರಚಿಸಿ ತನ್ನಿರಿ ಮತ್ತು ಅದಕ್ಕಾಗಿ ಅಲ್ಲಾಹನ ಹೊರತು ನಿಮ್ಮೆಲ್ಲ ಸಹಾಯಕರನ್ನೂ ಕರೆಯಿರಿ – ನೀವು ಸತ್ಯವಂತರಾಗಿದ್ದರೆ (ಇಷ್ಟನ್ನು ಮಾಡಿರಿ). ನಿಮಗೆ ಅದನ್ನು ಮಾಡಲಾಗದಿದ್ದರೆ – ಮತ್ತು ಖಂಡಿತ ನಿಮಗೆ ಅದನ್ನು ಮಾಡಲಾಗುವುದಿಲ್ಲ – ಮನುಷ್ಯರು ಮತ್ತು ಕಲ್ಲುಗಳೇ ಇಂಧನವಾಗಿರುವ (ನರಕದ) ಬೆಂಕಿಗೆ ಅಂಜಿರಿ – ಸತ್ಯ ಧಿಕ್ಕಾರಿಗಳಿಗಾಗಿ ಅದನ್ನು ಸಿದ್ಧ ಪಡಿಸಲಾಗಿದೆ.
ಹೌದು, ಪ್ರಿಯವಾದವರೇ! ಬುದ್ಧಿಗೆ ಸವಾಲು ಹಾಕಿ ತನ್ನನ್ನು ಸಂಶೋಧಿಸಿ ಸ್ವೀಕರಿಸುವಂತೆ ಹೇಳುವ ಈ ಗ್ರಂಥ ಬೇರೆ ಯಾವುದೂ ಅಲ್ಲ. ಇಡೀ ಪ್ರಪಂಚವನ್ನೇ ಸೃಷ್ಟಿಸಿ ಕಾಪಾಡುತ್ತಿರುವ ಏಕದೇವರು ನಮ್ಮೆಲ್ಲರಿಗೂ ಕಳಿಸಿರುವ ಖುರ್’ಆನೇ ಅದು! ಈ ಗ್ರಂಥವನ್ನು ನಮ್ಮಿಂದ ಅಲಕ್ಷ್ಯ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಖಂಡಿತವಾಗಿಯೂ ಓದಲೇಬೇಕು.
ಖಂಡಿತವಾಗಿಯೂ ಓದಲೇ ಬೇಕಾ? ಏಕೆ?
ಹೌದು. ಏಕೆಂದರೆ ಇದು ನಮ್ಮನ್ನು ಸೃಷ್ಟಿಸಿ ಕಾಪಾಡುತ್ತಿರುವ ದೇವರಿಂದ ನಮಗೆ ಕಳಿಸಲ್ಪಟ್ಟ ಪತ್ರ! ನಮ್ಮನ್ನು ಏತಕ್ಕಾಗಿ ಸೃಷ್ಟಿಸಿದೆ? ನಾವು ಯಾವ ರೀತಿ ಇಲ್ಲಿ ಬದುಕ ಬೇಕು? ಆ ರೀತಿ ಬದುಕಿದರೆ ಅವರ ಫಲವೇನು? ಬದುಕದಿದ್ದರೆ ಅದರಿಂದ ಉಂಟಾಗುವುದೇನು? ಎಂಬುದರ ಬಗೆಯಲ್ಲ. ಗಟ್ಟಿಯಾದ ಮಾತಿನಲ್ಲಿ ಸಂಷಯಕ್ಕೆ ಸ್ಥಳ ಕೊಡದೆ ನಮ್ಮ ದೇವರೆ ಹೇಳುವ ಗ್ರಂಥವಿದು!
ಮತ್ತು ನಾವಿಲ್ಲಿ ಬದುಕುವ ಜೀವನ ತಾತ್ಕಾಲಿಕವಾದದ್ದು ಎಂದೂ ಇಲ್ಲಿ ದೇವರಿಗೆ ಭಯಪಟ್ಟು ಬದುಕಿದರೆ ಅವರಿಗೆ ಬಹುಮಾನವಾಗಿ ಮರುಜನ್ಮದಲ್ಲಿ ಸ್ವರ್ಗ ಸಿಗುವುದೆಂದೂ, ಭಯಪಡದೆ ತನ್ನ ಇಷ್ಟಕ್ಕೆ ಬದುಕುವವರಿಗೆ ಶಿಕ್ಷೆಯಾಗಿ ನರಕ ಜೀವನ ಉಂಟೆಂದು ಎಚ್ಚರಿಕೆ ನೀಡುತ್ತದೆ ಖುರ್’ಆನ್.
ಪ್ರತಿದಿನ ಜೀವನದಲ್ಲಿ ನಾವು ಮಾಡುವ ಕೆಲಸಗಳು ಒಂದೊಂದು ದೇವರಿಗೆ ತಕ್ಕಂತೆ ಇದ್ದರೆ ಅವು ಪುಣ್ಯಗಳಾಗಿಯೂ ಆತ ತಡೆದವುಗಳಾಗಿದ್ದರೆ ಅವು ಪಾಪಗಳಾಗಿಯೂ ದಾಖಲಾಗುತ್ತದೆ.
ಕೊನೆಯ ತೀರ್ಪಿನ ದಿನದಂದು ಪುಣ್ಯವಂತರಿಗೆ ಸ್ವರ್ಗವೂ, ಪಾಪಿಗಳಿಗೆ ನರಕವೂ ವಿಧಿಸಲಾಗಿದೆ. ಆದುದರಿಂದ ಪುಣ್ಯ ಯಾವುದು ಪಾಪ ಯಾವುದು ಎಂಬುದನ್ನು ಬಿಡಿಸಿ ಹೇಳುವ ಗ್ರಂಥವಾಗಿ ಬಂದಿದೆ ಖುರ್’ಆನ್.
ಈ ಕಾರಣಗಳಿಂದ ಇಂದು ಈ ಪ್ರಪಂಚದ ಮೇಲ್ಭಾಗದಲ್ಲಿ ಜೀವಿಸುವ ಪ್ರತಿಯೊಬ್ಬ ಮನುಷ್ಯನು ಇದನ್ನು ಖಂಡಿತ ಓದಿದರೆ ಮಾತ್ರ ಸಾಲದು. ಜೀವನದಲ್ಲಿ ಪಾಲಿಸಲು ಹೊಣೆಯಾಗಿದೆ!
ನಮಗೂ ವೇದಗಳಿವೆ. ಅವುಗಳನ್ನು ಪಾಲಿಸಿದರೆ ಸಾಕಾಗದೆ?
ನನ್ನ ವೇದ ನಿಮ್ಮ ವೇದವೆಂದು ಯಾವುದೂ ಇಲ್ಲಾ! ಎಲ್ಲವೂ ನಮ್ಮ ವೇದಗಳೇ! ಏಕೆಂದರೆ, ನಾವೆಲ್ಲರೂ ಒಂದು ಗಂಡು, ಒಂದು ಹೆಣ್ಣಿನಿಂದ ಸೃಷ್ಟಿಸಲ್ಪಟ್ಟು ಪ್ರಪಂಚದ ಎಲ್ಲೆಡೆ ಹರಡಿರುವವರು. ವೇದಗಳನ್ನು ಮೊದಲು ಬಂದದ್ದು, ನಂತರ ಬಂದದ್ದು ಎಂದು ಮಾತ್ರ ವಿಂಗಡಿಸಬಹುದು. ಏಕೆಂದರೆ ಎಲ್ಲವೂ ಒಂದೇ ದೇವರಿಂದ ನೀಡಲ್ಪಟ್ಟದ್ದು! ಇಂದು ನಾವು ಈ ವೇದಗಳಲ್ಲಿ ಯಾವುದು ಕೊನೆಯದಾಗಿ ಬಂದಿತೋ ಅದನ್ನು ಅರಿತು ನಾವೆಲ್ಲರೂ ಪಾಲಿಸಬೇಕು.ಇಂದಿನ ವೇದಗಳು ಆ ಕಾಲದ ಜನರಿಗಾಗಿ ಹೇಳಲ್ಪಟ್ಟುದುದರಿಂದ ಅವು ಹಳೆಯದಾಗಿವೆ. ಅದು ಮಾತ್ರವಲ್ಲ ಆ ವೇದಗಳು ಆದೇವದೂತರ ಜೀವನದ ನಂತರ ಜನರಿಂದ ಬದಲಾವಣೆಗೊಂಡಿತು.
ಖುರ್’ಆನ್ ಬದಲಾಯಿಸಲು ಸಾಧ್ಯವಾಗಿಲ್ಲವೇ?
ಇಲ್ಲಾ! ಸುಮಾರು 1430 ವರ್ಷಗಳ ಹಿಂದೆ ಅರೇಬಿಯಾದ ಮೆಕ್ಕಾ ನಗರದಲ್ಲಿ ಬದುಕಿದ ಕೊನೆಯ ಪ್ರವಾದಿ ಮೊಹಮ್ಮದ್‍ರವರು ತಮ್ಮ 40ವಯಸ್ಸಿನಿಂದ ಅವರು ಮರಣಿಸಿದ 63ನೇ ವಯಸ್ಸಿನವರೆಗೂ ‘ಜಿಬ್ರೀಲ್’ ಎಂಬ ದೇವದೂತರ ಮೂಲಕ ಸ್ವಲ್ಪ ಸ್ವಲ್ಪವಾಗಿ ನೀಡಲ್ಪಟ್ಟ ದೇವರ ವಚನಗಳ ಸಂಗ್ರಹಣವೇ ಖುರ್’ಆನ್ ಎಂಬುದು. ಪದ್ಯ ಮತ್ತು ಗದ್ಯ ಸೇರಿದ ಒಂದು ಸುಂದರ ರೀತಿಯಲ್ಲಿ ಖುರ್’ಆನ್ ನೀಡಲ್ಪಟ್ಟ ಕಾಲದಿಂದಲೇ ಜನರ ಮನಸ್ಸನ್ನು ಸೆಳೆಯಿತು. ದೇವರ ವಿಶ್ವಾಸಿಗಳಿಂದ ಅದು ಆಗಾಗ ಓದಲ್ಪಟ್ಟಿತು.
ಖುರ್’ಆನಿನ ವಚನಗಳು ಮೂಲ ಭಾಷೆಯಲ್ಲಿಯೇ ಪ್ರಪಂಚವಿಡೀ ಇರುವ ಮುಸ್ಲೀಂಗಳಿಂದ ಅವರ ಪ್ರಾರ್ಥನೆಯಲ್ಲೂ, ಪ್ರಾರ್ಥನೆಯ ನಂತರವೂ ಬಿಡದೆ ಹೇಳಲ್ಪಡುವುದನ್ನು ನೀವು ಕಾಣಬಹುದು. ವಿಶೇಷವಾಗಿ ರಮ್ಝಾನ್ ತಿಂಗಳಲ್ಲಿಅನೇಕರು ಇಡೀ ಖುರ್’ಆನ್ ಅನ್ನೇ ಓದಿ ಮುಗಿಸುವರು. ಖುರ್’ಆನ್ ಎಂಬ ಪದದ ಅರ್ಥವೇ ‘ಓದಲ್ಪಡುವ ಬಂಧು’ ಎಂಬುದೇ.
ಪಕ್ವವಾಗಿ ಕಾಪಾಡಲ್ಪಡುವ ವೇದ
ಬರೆದ ಕಾಲದಿಂದ ಇಂದಿನವರೆಗೂ ಪ್ರಪಂಚವೆಲ್ಲಾ ಲೆಕ್ಕವಿಲ್ಲದೆ ಜನಗಳಿಂದ ಗಟ್ಟುಮಾಡಲು ಪಡುವುದು. ಈ ರೀತಿ ಖುರ್’ಆನಿನ ಮೂಲ ವಚನಗಳು ಶಬ್ದರೂಪದಲ್ಲಿ ಪ್ರಪಂಚವೆಲ್ಲಾ ಜನರ ಹೃದಯಗಳಲ್ಲೂ ಖುರ್’ಆನ್ ಪುಸ್ತಕಗಳಲ್ಲೂ ಕಾಪಾಡಲ್ಪಡುತ್ತಿದೆ. ಪ್ರಪಂಚದಲ್ಲಿ ಯಾವ ಮೂಲೆಯಲ್ಲಿ ಯಾವ ಭಾಷೆಯಲ್ಲಿ ನೀವು ಖುರ್’ಆನ್ ಅನುವಾದ ಪುಸ್ತಕಗಳನ್ನು ನೋಡಿದರು ಅದರಲ್ಲಿ ಅರಬ್ಬಿ ಭಾಷೆಯನ್ನು ನೋಡಬಹುದು.ಪ್ರಪಂಚ ಅಳಿಯುವವರೆಗೂ ಜನರಿಗೆ ಇದೇ ವೇದ ಎಂಬುದರಿಂದ ದೇವರೆ ಇದರ ರಕ್ಷಣೆಗೂ ಹೊಣೆಯಾಗಿದ್ದಾನೆ.
ಖುರ್’ಆನ್ 15:9 ಖಂಡಿತವಾಗಿಯೂ ನಾವೇ ಈ ದಿವ್ಯ ಬೋಧನೆಯನ್ನು ಇಳಿಸಿ ಕೊಟ್ಟವರು ಮತ್ತು ಖಂಡಿತವಾಗಿಯೂ ನಾವೇ ಇದರ ಸಂರಕ್ಷಕರಾಗಿದ್ದೇವೆ.
ಇಂದು ದೊರಕುವ ಅನೇಕ ಹಳೆಯ ವೇದಗಳ ಅಚ್ಚನ್ನು ನೋಡಿದರೆ ಬರಿಯ ಅನುವಾದಗಳನ್ನೋ ಅಥವಾ ಕಾಪಿಯಾದ ಪ್ರತಿಗಳಲ್ಲೋ ನೋಡಲು ಸಾಧ್ಯ. ಮೂಲವನ್ನು ನೋಡಲು ಸಾಧ್ಯವಿಲ್ಲಾ. ಮೂಲಪ್ರತಿಗಳನ್ನು ಕಾಪಾಡಲ್ಪಡಲಿಲ್ಲವೆಂದು ಕೆಲವು ಮೂಲ ಭಾಷೆಗಳೇ ಇಂದು ಮರಣಿಸಿವೆ.
ಖುರ್’ಆನ್ ಪ್ರವಾದಿ ಮೊಹಮ್ಮದ್‍ರವರಿಂದ ರಚಿಸಲ್ಪಟ್ಟದ್ದೇ?
ಇಲ್ಲಾ! ಪ್ರವಾದಿ ಮೊಹಮ್ಮದ್‍ರವರು ಓದಲು ಬರೆಯಲು ಅರಿಯದವರಾಗಿದ್ದರು, ಆತನಿಗೆ ದೇವದೂತರಾದ ‘ಜಿಬ್ರೀಲ್’ ಮೂಲಕ ಕರುಣಿಸಲ್ಪಟ್ಟ ದೇವರ ವಚನಗಳ ಸಂಗ್ರಹಣವೇ ಖುರ್’ಆನ್ ಎಂಬುದು ಈ ವೇದದಲ್ಲಿ ಪ್ರವಾದಿ ಮೊಹಮ್ಮದ್‍ರವರನ್ನೂ ಒಳಪಟ್ಟು ಯಾವುದೇ ಮನುಷ್ಯರ ಮಾತುಗಳು ಸ್ವಲ್ಪವೂ ಸೇರಿಸದೆ ಇಂದಿನವರೆಗೂ ಕಾಪಾಡಲ್ಪಡುತ್ತದೆ. ಪ್ರವಾದಿ ಮೊಹಮ್ಮದ್‍ರವರ ಹೇಳಿಕೆಗಳು ಮತ್ತು ಅವರ ಬಗ್ಗೆ ಸುದ್ದಿಗಳು ಅವರ ಸ್ನೇಹಿತರಿಂದ ದಾಖಲಿಸಲ್ಪಟ್ಟು, ‘ಹದೀಸ್’ಗಳು ಎಂಬ ಗ್ರಂಥವಾಗಿ ಬಿಡುಗಡೆಯಾಗಿದೆ.
ಖುರ್’ಆನಿನ ಮುಕ್ಯ ಬೋಧನೆಗಳು ಯಾವುವು?
ದೇವರ ಧರ್ಮ: ಈ ಪ್ರಪಂಚವನ್ನು ಸೃಷ್ಟಿಸಿ ಕಾಪಾಡುತ್ತಿರುವ ದೇವರು ಒಬ್ಬನೆ. ಆತನನ್ನು ಮಾತ್ರ ನಾವು ನಮಸ್ಕರಿಸಬೇಕು. ಆತನ ಸೃಷ್ಟಿಗಳು ಎಂತಹ ಶ್ರೇಷ್ಟವಾಗಿದ್ದರೂ ಅವುಗಳನ್ನು ಪೂಜಿಸುವುದೋ ಅಥವಾ ಪ್ರಾರ್ಥಿಸುವುದೋ ಪಾಪಕಾರ್ಯವಾಗಿದೆ. ದೇವರ ಗುಣಗಳ ಬಗ್ಗೆ ಖುರ್’ಆನ್ ಹೇಳುತ್ತದೆ:
ಖುರ್’ಆನಿನ 112ನೇ ಅಧ್ಯಾಯ (ಸುರಾಃ ಅಲ್ )
ಬಿಸ್ಮಿಲ್ಲಾಹ್ ಹಿರ್ ರಹ್ಮಾನ್ ನಿರ್ ರಹೀಮ್
ಕುಲ್ ಹು ಅಲ್ಲಾಹು ಅಹದ್
ಅಲ್ಲಾಹು ಸಮದ್
ಲಂ ಯಲಿದು ವ ಲಮ್ ಯೂಲದ್
ವಲಂ ಯಕುನ್ ಲಹೂ ಕುಫುವನ್ ಅಹದ್
ಅರ್ಥಾತ್, ಹೇಳಿರಿ; ಅವನು ಅಲ್ಲಾಹು ಏಕಮಾತ್ರನು (ಅದ್ವಿತೀಯನು), ಅಲ್ಲಾಹನು ಎಲ್ಲ ಅಗತ್ಯಗಳಿಂದ ಮುಕ್ತನು. ಅವನಿಗೆ ಯಾರೂ ಜನಿಸಿಲ್ಲ ಅವನು ಯಾರಿಗೂ ಜನಿಸಿದವನಲ್ಲ. ಯಾರೂ ಅವನಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲ.
(ಅಲ್ಲಾಹ್ ಎಂದರೆ ಅರಬ್ಬಿ ದೇಶದ ದೇವರೆಂದೋ ‘ಮುಸ್ಲೀಂ’ರ ಕುಲದೇವರೆಂದೋ ತಿಳಿಯಬೇಡಿ. ಅರಬ್ಬೀ ಭಾಷೆಯಲ್ಲಿ ‘ನಮಸ್ಕರಿಸಲ್ಪಡತಕ್ಕ ಒಂದೇ ದೇವರೆಂಬುದು’ ಈ ಮಾತಿನ ಅರ್ಥ. ಖುರ್’ಆನ್ ದೇವರನ್ನು ಸೂಚಿಸಲು ಆ ಮಾತನ್ನೇ ಹೇಳುತ್ತದೆ.) ಅಂತಹ ದೇವರನ್ನು ನೇರವಾಗಿ ಮಧ್ಯಸ್ಥರಿಲ್ಲದೆ ಬರಿ ಆಡಂಬರಗಳಿಲ್ಲದೆ, ಖರ್ಚು ಮಾಡದೆ ಪೂಜಿಸುವಂತೆ ಹೇಳುತ್ತದೆ ಖುರ್’ಆನ್.
ಜೀವನದ ಗುರಿಯು ಮರುಜನ್ಮವು: ಇಂದುನಾವು ನೋಡುತ್ತಿರುವ ಪ್ರಪಂಚ ಪೂರ್ತಿಯಾಗಿ ಅಳಿಯುವುದು. ನಂತರ ಮತ್ತೆ ದೇವರ ಆಜ್ಞೆ ಬರುವಾಗ ಎಲ್ಲಾ ಮನುಷ್ಯರಿಗೂ ಮತ್ತೆ ಜೀವ ಕೊಟ್ಟು ಎಬ್ಬಿಸುವರು. ದೇವರ ಮುಂದೆ ಕೊನೆಯ ವಿಚಾರಣೆಗಾಗಿ ನಿಲ್ಲಿಸಲ್ಪಡುವ ಒಂದೊಂದು ಮನುಷ್ಯನಿಗೂ ಆತ ಮಾಡಿದ ಪಾಪ ಪುಣ್ಯಗಳನ್ನು ತೋರಿಸಲಾಗುವುದು. ಅದರಂತೆ ಆತನ ನಿರಂತರ ಸ್ಥಳ ತೀರ್ಮಾನಿಸಲ್ಪಡುವುದು. ಸ್ವರ್ಗ ಅಥವಾ ನರಕ ಈ ಎರಡರಲ್ಲಿ ಒಂದೇ ಮನುಷ್ಯನ ನೆಲೆ ಅದನ್ನು ತೀರ್ಮಾನಿಸುವ ಪರೀಕ್ಷಾರಂಗವೇ ಈ ಪ್ರಪಂಚ!
ಖುರ್’ಆನ್ ಹೇಳುವುದು
ಖುರ್’ಆನ್ 67:2 ನಿಮ್ಮಲ್ಲಿ ಯಾರು ಸತ್ಕರ್ಮಗಳನ್ನು ಮಾಡುವರೆಂದು ಪರೀಕ್ಷಿಸಲು, ಅವನು ಮರಣ ಮತ್ತು ಜೀವನವನ್ನು ಸೃಷ್ಟಿಸಿರುವನು. ಅವನು ಬಹಳ ಪ್ರಬಲನೂ ಕ್ಷಮಾಶೀಲನೂ ಆಗಿರುವನು.
ಖುರ್’ಆನ್ 3:185 ಪ್ರತಿಯೊಂದು ಜೀವವೂ ಮರಣವನ್ನು ಸವಿಯಲೇ ಬೇಕು. ಪುನರುತ್ಥಾನ ದಿನ ನಿಮಗೆ ನಿಮ್ಮ (ಕರ್ಮಗಳ) ಪೂರ್ಣ ಪ್ರತಿಫಲವು ಸಿಗಲಿದೆ. (ಅಂದು) ನರಕದಿಂದ ರಕ್ಷಿತನಾದವನು ಮತ್ತು ಸ್ವರ್ಗವನ್ನು ಪ್ರವೇಶಿಸಿದವನು ವಿಜಯಿಯಾದನು. ಇಹಲೋಕದ ಜೀವನವಂತೂ ಕೇವಲ ಒಂದು ಮೋಸದ ವ್ಯವಹಾರವೇ ಹೊರತು ಬೇರೇನೂ ಅಲ್ಲ.
ದೇವರ ನುಡಿ:
ಮನುಷ್ಯರಿಗೆ ಒಳ್ಳೆಯ ದಾರಿ ತೋರಿಸುವುದಕ್ಕಾಗಿ ಅವರಲ್ಲಿ ಉತ್ತಮವಾದವರನ್ನು ಆರಿಸಿ ಅವರ ಮೂಲಕ ದೇವರು ತನ್ನ ಭೋದನೆಗಳನ್ನು ಆಗಾಗ ತಿಳಿಸುತ್ತಾನೆ. ಇದುವರೆಗೂ 1,24,000 ದೇವದೂತರು ಈ ಪ್ರಪಂಚಕ್ಕೆ ಕಳಿಸಲ್ಪಟ್ಟಿದ್ದಾರೆ. ಇವರೆಲ್ಲರೂ ದೇವರಿಗೆ ಭಯಪಟ್ಟು ಬದುಕಿರಿ. ಆತನನ್ನು ಮಾತ್ರ ನಮಸ್ಕರಿಸಿ ಎಂಬ ಒಂದೇ ವಿಷಯವನ್ನು ಭೋದಿಸಿದ್ದಾರೆ. ಈ ದೂತರಲ್ಲಿ ಕೊನೆಯಾಗಿ ಬಂದವರೇ ಪ್ರವಾದಿ ಮೊಹಮ್ಮದ್‍ರವರು. ಅವರಿಗೆ ಹಿಂದೆ ಬಂದವರೇ ಏಸು. ಅವರ್ಗೂ ಹಿಂದೆ ಭಾರತ ಒಳಗೊಂಡ ಹಲವು ದೇಶಗಳಿಗೆ, ಹಲವು ಊರುಗಳಿಗೂ ಬೇರೆ ಬೇರೆ ಕಾಲದಲ್ಲಿ ದೇವರ ದೂತರು ಕಳಿಸಲ್ಪಟ್ಟಿದ್ದಾರೆ. (ಅವರೆಲ್ಲಾರಿಗೂ ದೇವರ ಶಾಂತಿ ದೊರಕಲಿ.) ಇವರುಗಳೆಲ್ಲರೂ ಒಂದೇ ದೇವರಿಂದ ಒಂದೇ ನಿಯಮವನ್ನು ಭೋದಿಸಲು ಕಳುಹಿಸಲ್ಪಟ್ಟವರು ಎಂಬುವ ಮಾತಿಗೆ ಇವರುಗಳಲ್ಲಿ ಯಾರೊಬ್ಬರೂ ನಿರಾಕರಿಸುವುದಾಗಲಿ ಅಥವಾ ಕೀಳಾಗಿ ಭಾವಿಸುವುದು ಪಾಪ. ಅದೇ ಸಮಯ ಇವರಿಗೆ ಮರ್ಯಾದೆ ಸಲ್ಲಿಸಲು, ನೆನಪಿಸಿಕೊಳ್ಳಲು ಎಂಬ ಹೆಸರಿನಲ್ಲಿ ರೂಪಗಳನ್ನು ಸೃಷ್ಟಿಸುವುದು ಅಥವಾ ಪೂಜಿಸುವುದು ದೊಡ್ಡ ಪಾಪ.
ಮನುಷ್ಯ ಕುಲದ ಒಗ್ಗಟ್ಟು:
ಖುರ್’ಆನ್ 4:1 ಮಾನವರೇ, ನಿಮ್ಮನ್ನು ಒಂದೇ ಜೀವದಿಂದ ಸೃಷ್ಟಿಸಿದ ನಿಮ್ಮ ಒಡೆಯನಿಗೆ ನಿಷ್ಠರಾಗಿರಿ. ಅವನು ಅದೇ ಜೀವದಿಂದ ಅದರ ಜೊತೆಯನ್ನೂ ಸೃಷ್ಟಿಸಿದನು ಮತ್ತು ಅವರಿಬ್ಬರ ಮೂಲಕ ಅನೇಕಾರು ಪುರುಷರನ್ನೂ ಸ್ತ್ರೀಯರನ್ನೂ (ಲೋಕದಲ್ಲಿ) ಹಬ್ಬಿದನು. ಯಾವ ಅಲ್ಲಾಹನ ಹೆಸರಲ್ಲಿ ನೀವು ಹಕ್ಕುಗಳನ್ನು ಕೇಳುತ್ತೀರೋ ಅವನಿಗೆ ಸದಾ ಅಂಜಿರಿ ಮತ್ತು ಬಾಂಧವ್ಯಗಳನ್ನು ಕಾಪಾಡಿರಿ. ಖಂಡಿತವಾಗಿಯೂ ಅಲ್ಲಾಹನು ನಿಮ್ಮ ಮೇಲೆ ಸದಾ ಕಣ್ಣಿಟ್ಟಿರುತ್ತಾನೆ.
ಮನುಷ್ಯರೆಲ್ಲರೂ ಒಂದು ಗಂಡು ಒಂದು ಹೆಣ್ಣಿನಿಂದಲೇ ಉಂಟಾಗಿ ಪ್ರಪಂಚವೆಲ್ಲಾ ಹರಡಿದರು. ಒಂದೇ ಕುಲ ಒಬ್ಬನೇ ದೇವರು ಎಂಬುದು ಖುರ್’ಆನಿನ ಮುಖ್ಯ ಭೋದನೆಗಳಲ್ಲಿ ಒಂದು. ಕುಲ, ಬಣ್ಣ, ದೇಶ, ಭಾಷೆ ಇತ್ಯಾದಿಗಳಿಂದ ಮನುಷ್ಯ ಕುಲ ಒಡೆದು ಹೋಗದೆ ಇರಲು ಒಂದೇ ದಾರಿ. ಎಲ್ಲರೂ ಸೃಷ್ಟಿಸಿದ ದೇವರನ್ನು ಮಾತ್ರ ಪೂಜಿಸುವುದರಲ್ಲೂ, ಪ್ರಾರ್ಥನೆ ಮಾಡುವುದರಲ್ಲೂ ಇದೆ.
ದೇವರಲ್ಲದವನನ್ನು ಪೂಜಿಸಲೇಬಾರದು: ಇಂದು ಮನುಷ್ಯಕುಲ ಒಡೆದಿರಲು ಮುಖ್ಯವಾದ ಕಾರಣವೆಂದರೆ, ಅವರವರದೇ ಆದ ದೈವ ನಂಬಿಕೆಗಳು. ದೇವರಿಗೆ ಬದಲಾಗಿ ಜೀವವಿಲ್ಲದ ಪ್ರಜ್ಞೆಯಿಲ್ಲದ ವಸ್ತುಗಳನ್ನು, ಅಥವಾ ಮನುಷ್ಯರನ್ನೋ ಬೇರೆ ಜೀವರಾಶಿಗಳನ್ನೋ ಪೂಜಿಸುವುದು, ದೇವರನ್ನು ಕಲ್ಪಿಸುವ ರೂಪಗಳನ್ನು ಸೃಷ್ಟಿಸುವುದು ಮುಂತಾದವು ದೇವರಿಂದ ಕ್ಷಮಿಸಲಿಚ್ಚಿಸದಂತಹ ಪಾಪಗಳು. ಅವು ನರಕಕ್ಕೆ ಕರೆದೊಯ್ಯುವುದು ಎಂದು ಖುರ್’ಆನ್ ಎಚ್ಚರಿಕೆ ನೀಡುತ್ತದೆ.
ಮನುಷ್ಯ ಪಾಪ ಮಾಡದೆ ಇರಬೇಕಾದರೆ, ಅವನಲ್ಲಿ ದೇವರ ಬಗ್ಗೆ ಭಯ ಆತ ತಪ್ಪನ್ನು ಕಂಡುಹಿಡಿಯುವವನು ಎಂಬ ಪ್ರಜ್ಞೆಯೂ ಇರಬೇಕು, ಆದರೆ ಜೀವವಿಲ್ಲದ ವಸ್ತುಗಳನ್ನು ತೋರಿಸಿ, ಅವುಗಳನ್ನು ದೇವರೆಂದು ಹೇಳಿದರೆ ಮನುಷ್ಯನಲ್ಲಿ ನಿಜವಾದ ಭಯ ದೂರವಾಗುವುದು. ಆದ್ದರಿಂದ ಆತ ಯಾವ ಪಾಪವನ್ನು ಮಾಡಲು ಹಿಂಜರಿಯುವುದಿಲ್ಲ. ಅದೇ ಪ್ರಪಂಚದಲ್ಲಿ ಪಾಪ ಹೆಚ್ಚಾಗಲು ಒಂದು ಮುಖ್ಯ ಕಾರಣವಾಗುತ್ತದೆ.
ಈ ಒಂದು ಪಾಪದಿಂದ ಮನುಷ್ಯ ಹೊರಗೆ ಬಂದರೆ, ದೇವರ ಹೆಸರಿನಲ್ಲಿ ಭೇದ ಭಾವಗಳನ್ನು ಕಲ್ಪಿಸುವುದು ಜನರನ್ನು ದೋಚುವುದನ್ನು ತಡೆಯಲು ಸಾಧ್ಯ! ಪ್ರಪಂಚದಲ್ಲಿ ಒಗ್ಗಟ್ಟು, ಮಾನವ ಸಮಾಜದಲ್ಲಿ ಸಮಾಧಾನ ಬರುವುದು.
ಇಲ್ಲಿ ಸೂಚಿಸಿದ ಭೋದನೆಗಳಲ್ಲದೆ, ಕುರಾನ್ ಮನುಷ್ಯ ಜೀವನದಲ್ಲಿ ಉಂಟಾಗುವ ಎಲ್ಲಾ ಸಮಸ್ಯೆಗಳಿಗು ಪರಿಹಾರ ನೀಡುತ್ತದೆ. ಸಂಸಾರ, ಮದುವೆ ಗಂಡು-ಹೆಣ್ಣು ಸಮಸ್ಯೆಗಳು, ಮಕ್ಕಳನ್ನು ಸಾಕುವುದು, ಸ್ವಚ್ಛತೆ, ದೇಹಾರೋಗ್ಯದಿಂದ ವ್ಯಾಪಾರ ಹಣ-ಕಾಸು ಲೇವಾದೇವಿ, ಆಸ್ತಿ ಹಂಚುವಿಕೆ, ಅಪರಾಧ, ನ್ಯಾಯ ಇಲಾಖೆ, ರಾಜಕೀಯ ಮುಂತಾದ ಮನುಷ್ಯನ ಒಂಟಿ ಜೀವನಕ್ಕೂ ಸಮಾಜ ಜೀವನಕ್ಕೂ ಸುಂದರವಾದ ತೀರ್ಮಾನಗಳನ್ನು ಖುರ್’ಆನ್ ನೀಡುತ್ತದೆ.
ಅವುಗಳನ್ನು ಸ್ವೀಕರಿಸಿ ಅದರಂತೆ ಜೀವನವನ್ನು ರೂಪಿಸಿಕೊಳ್ಳುವವರಿಗೆ ಈ ಜನ್ಮದಲ್ಲಿ ಸಮಾಧಾನ ಸಿಗುವುದು. ಮರುಜನ್ಮದಲ್ಲಿ ಸ್ವರ್ಗಜೀವನ ದೊರಕುವುದು. ನಿರ್ಲಕ್ಷ್ಯ ಮಾಡುವವರಿಗೆ ಈ ಜನ್ಮದಲ್ಲೂ ಸಮಾಧಾನವಿಲ್ಲಾ ಮತ್ತು ಮುಂದಿನ ಹಾಗೂ ಕೊನೆಯ ಜನ್ಮದಲ್ಲೂ ನರಕವೇ ಕಾದಿದೆ!